SEARCH HERE

Tuesday 1 January 2019

ಅರಳಿ ಮರ ಅಥವಾ ಅಶ್ವತ್ಥ ಮರ ashwatha tree


Pipal  ಅರಳಿ ,  peepul ಅಶ್ವತ್ಥ = ಅರಳಿ  bodhi tree, pippala tree, peepul tree, peepal tree or ashwattha tree 

Banyan Tree  ಆಲ 


ಅಶ್ವತ್ಥ

ಅಶ್ವತ್ಥ ಅನ್ನುವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡಾ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.

“ವೇದಕಾಲದ ಋಷಿಗಳು ಈ ಪ್ರಪಂಚ ಒಂದು  ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. “ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಂತಹದ್ದು” ಎಂದು ಹೇಳಿ, ತಕ್ಷಣ ಕೃಷ್ಣ ಹೇಳುತ್ತಾನೆ-
“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! 

ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡಾ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲಾ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. 


ಆದ್ದರಿಂದ ಪ್ರಪಂಚ ಅವ್ಯಯ; ಜೀವ ಅನಾದಿ ಅನಂತ; ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ; ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ.

***
ಅಶ್ವತ್ಥಮರ


🍃 ಅಶ್ವತ್ಥಮರದಲ್ಲಿ ಭಗವಂತನು ಹಯಗ್ರೀಯ ರೂಪದಿಂದ ವಿಶೇಷವಾಗಿ ಅಭಿವ್ಯಕ್ತನಾಗಿ ಈ ಮರವು ಉಳಿದೆಲ್ಲಾ ಮರಗಳಿಗಿಂತ ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ.
ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವರು.

🍃 ಅಶ್ವತ್ಥಮರದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ , ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳುತ್ತದೆ.

🍃 ಪ್ರತಿದಿನ ಈ ವೃಕ್ಷದ ಸ್ಪರ್ಶ ನಿಷಿದ್ಧ ಶನಿವಾರದಂದು ಮಾತ್ರ ಸ್ಪರ್ಶಿಸಬೇಕೆಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ.

🍃ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ ಮಾಡಬಾರದು ಎಂದು ಪದ್ಮಪುರಾಣ ಹೇಳುತ್ತದೆ

🍃ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಬೇರೆ ಯಾವ ವೃಕ್ಷವು ಇಷ್ಟು ಪುಣ್ಯಪ್ರದವಲ್ಲ.

🍃 ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆ ಮತ್ತು ಎಕ್ಕೆಗಿಡ, ಏಳು ಆಲದಮರ , ಎಂಟು ಬಿಲ್ವಪತ್ರೆಗಿಡ , ಮತ್ತು ನಿಂಬೆಮರ ನೆಟ್ಟಷ್ಟು ಫಲ.

🍃 ಜಲಾಶಯ , ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ನೆಟ್ಟರೆ ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ. ಅದರ ಎಲೆಗಳು ಪರ್ವಕಾಲದಲ್ಲಿ ನೀರಿನಲ್ಲಿ ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ ಪಿತೃಗಳಿಗೆ ಅಕ್ಷಯಲೋಕಗಳನ್ನು ಕೊಡುತ್ತದೆ.
***

ಅಶ್ವಥಃ  ಸರ್ವ ವೃಕ್ಷಾಣಾಂ  ಅಂತ ಭಗವಧ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ ಅಂದರೆ ಸರ್ವ ವೃಕ್ಷಗಳಲ್ಲಿ ಶ್ರೇಷ್ಟ ಅಶ್ವತ್ಥಮರ ......

ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ ಅಲ್ಲವೇ ,??  ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು. ಏಕೆ  ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ. ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- “ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆ” ಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ].   ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ. 

ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ. 

ಇಲ್ಲಿ ಬಂದಿರುವ ಭಗವಂತನ ನಾಮ ‘ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ.
***

ಅಶ್ವತ್ಥ 🌳

🌳ಅಶ್ವತ್ಥ ಅನ್ನುವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. 

🌳ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. 

🌳ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. 

🌳ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡಾ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.

🌳“ವೇದಕಾಲದ ಋಷಿಗಳು ಈ ಪ್ರಪಂಚ ಒಂದು  ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. “ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಂತಹದ್ದು” ಎಂದು ಹೇಳಿ, ತಕ್ಷಣ ಕೃಷ್ಣ ಹೇಳುತ್ತಾನೆ-
“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! 

🌳ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡಾ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲಾ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. 

🌳ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. 


🌳ಆದ್ದರಿಂದ ಪ್ರಪಂಚ ಅವ್ಯಯ; ಜೀವ ಅನಾದಿ ಅನಂತ; ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ; ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ.

*****

following is author's thoughts ಇದು ಲೇಖಕರ ಅಭಿಪ್ರಾಯ

ಅರಳಿ ಮರಕ್ಕೆ ಅಶ್ವತ್ಥ ವೃಕ್ಷ ಅಂತಾರೆ. ಅರಳಿ ಮರದ ಮೂಲದಲ್ಲಿ ಬ್ರಹ್ಮನೂ, ಮಧ್ಯದಲ್ಲಿ ವಿಷ್ಣುವೂ, ತುದಿ ಭಾಗದಲ್ಲಿ ಶಿವ ನೆಲೆಸಿದ್ದಾರೆ ಅಂತ ವೈದೀಕ ವಾಣಿಯಿದೆ. ಹಾಗಾಗಿ ಅರಳಿ ಮರವನ್ನ ತ್ರಿಮೂರ್ತಿ ಸ್ವರೂಪ ಅಂತಾರೆ. ಅರಳಿ ಮರದ ಬಗ್ಗೆ ಪದ್ಮಪುರಾಣದಲ್ಲಿ ವಿವರವಾದ ಮಾಹಿತಿ ಲಭ್ಯವಿದೆ. ಜ್ಯೋತಿಷ ಶಾಸ್ತ್ರದಲ್ಲೂ ಅರಳಿ ಮರಕ್ಕೆ ವೈಶಿಷ್ಠ್ಯವಿದೆ. ಶನಿ ದೋಷ ಇದ್ದವರು ಅರಳಿಮರವನ್ನ ಪ್ರದಕ್ಷಿಣೆ ಮಾಡ್ತಾರೆ. ಸಂತಾನ ಇಲ್ಲದವರೂ ಈ ಮರಕ್ಕೆ ಪ್ರದಕ್ಷಿಣೆ ಮಾಡಿದರೆ ಉಳ್ಳೇದು ಅಂತಾರೆ. ಮಹಾಭಾರತದ ಉಲ್ಲೇಖದಂತೆ ಪುರೂವರ ಮಹಾ ಶಕ್ತ ರಾಜ. ಅವನ ಪರಾಕ್ರಮಕ್ಕೆ4 ದೇವತೆಗಳೇ ನಿಬ್ಬೆರಗಾಗಿ ಸಹಾಯ ಯಾಚಿಸುತ್ತಿದ್ದರು. ದೇವಲೋಕಕ್ಕೆ ಆಗಾಗ ಹೋಗಿ ಬರ್ತಿದ್ದ ಪುರೂರವನಿಗೆ ಒಮ್ಮೆ ಊರ್ವಶಿಯ ದರ್ಶನವಾಗತ್ತೆ. ಆ ರೂಪಸಿಯ ಅನುರೂಪಕ್ಕೆ ಮರುಳಾಗಿ ಪುರೂರವ ಅವಳನ್ನ ತಕ್ಷಣವೇ ಇಷ್ಟ ಪಡ್ತಾನೆ. ಕಾರಣ ಆಕೆ ಅಂಥಾ ಸ್ಫುರದ್ರೂಪಿ. ಊರ್ವಶಿ ಅಂದ್ರೆ ಊರು ವಶಿನಿ ಅಂತ. ಅವಳ ತೊಡೆಗಳನ್ನ ನೋಡಿದರೆ ಎಂಥವರೂ ಅವಳಿಗೆ ವಶವಾಗಿಬಿಡುತ್ತಿದ್ದರಂತೆ. ಹಾಗಾಗೇ ಅವಳು ಊರು ವಶಿನಿ. ಅಂಥವಳನ್ನ ಕಂಡು ಪುರೂರವನ ಮನಸ್ಸು ಪ್ರೀತಿಯ ಸರೋವರದಲ್ಲಿ ಮಿಂದೆದ್ದಿತ್ತು. ಅವಳನ್ನ ಮದುವೆ ಮಾಡಿಕೊಳ್ಳಬೇಕೆಂಬ ಮನಸ್ಸು ಮಾಡಿ ಆಕೆಯನ್ನ ಭೂಮಿಗೆ ಕರೆತರುವ ಪ್ರಯತ್ನ ಮಾಡಿದ್ದ. ಅವನ ಗೋಳಾಟ ನೋಡೋಕಾಗದೆ 3 ಶರತ್ತುಗಳನ್ವಯ ಊರ್ವಶಿ ಹೆಂಡತಿಯಾಗಲಿಕ್ಕೆ ಒಪ್ತಾಳೆ.
ನಾನು ನೀನು ಕೂಡುವಾಗ ನಿನ್ನ ಶರೀರ ನನ್ನ ಕಣ್ಣಿಗೆ ಕಾಣಿಸಬಾರದು. ಮಿಲನದ ಸಂದರ್ಭ ಕತ್ತಲಿರಬೇಕು
ನನ್ನ ಊಟಕ್ಕೆ ಪ್ರತಿನಿತ್ಯ ತುಪ್ಪ ಭರಿಸಬೇಕು
ನನ್ನ ಜೊತೆ ಆಡುಗಳು ಬರ್ತಾವೆ ಅವನ್ನ ಚನ್ನಾಗಿ ಸಾಕಬೇಕು

ಊರ್ವಶಿ ಹೇಳಿದ ಈ ಶರತ್ತುಗಳನ್ನ ಕೇಳಿ ಪುರೂರವ ಖುಷಿಯಾಗಿದ್ದ. ಊರ್ವಶಿ ಬಂದಳು ಅವನ ಜೊತೆ ಸಮ್ಮಿಲನವೂ ಆಯ್ತು. ಹೀಗೇ ದಿನಗಳು ಸಾಗ್ತಿದ್ವು. ಇಂದ್ರಾದಿ ದೇವತೆಗಳಿಗೆ ಊರ್ವಶಿ ಇಲ್ಲದೆ ತಳಮಳ ಶುರುವಾಗಿತ್ತು. ಹಾಗಾಗಿ ಊರ್ವಶಿಯನ್ನ ಮರಳಿ ದೇವ ಲೋಕಕ್ಕೆ ತರಲಿಕ್ಕೆ ಉಪಾಯ ಹೂಡಿದ್ದರು. ಅದರಂತೆ ಪುರೂರವ ಊರ್ವಶಿ ಜೊತೆ ಮಲಗಿದ್ದಾಗ ಮಿಂಚಾಯ್ತು, ಬೆತ್ತಲೆ ದೇಹ ಕಾಣೀಸಿತು, ಅವಳ ಜೊತೆ ಬಂದಿದ್ದ ಆಡುಗಳು ಓಡಿಹೋದವು ಹಾಗಾಗಿ ಮರುಕ್ಷಣವೇ ಊರ್ವಶಿ ಹೊರಟು ಹೋದಳು. ಪಾಪ ಪುರೂರವ ಅವಳ ವಿರಹದಲ್ಲಿ ಬೆಂದು ಹೋದ. ಅವಳಿಗಾಗಿ ಊರೂರು ಅಲೆದು ಬಸವಳಿದಿದ್ದ. ಒಂದು ದಿನ ಊರ್ವಶಿ ನದೀ ತೀರವೊಂದರಲ್ಲಿ ಸಖಿಯರೊಂದಿಗೆ

ಜಲಕ್ರೀಡೆಯಲ್ಲಿದ್ದಳು. ಪರೂರವ ಆಕೆಯಲ್ಲಿ ಪ್ರೀತಿಯ ಭಿಕ್ಷೆ ಬೇಡಿದ. ಆಕೆ ಪರಿಹಾರವೊಂದನ್ನ ಹೇಳಿದಳು. ಗಂಧರ್ವರ ಕುರಿತು ತಪಸ್ಸು ಮಾಡು ಅವರು ನನ್ನನ್ನ ಹೊಂದುವ ಮಾರ್ಗ ಹೇಳ್ತಾರೆ ಅಂದ್ಲು. ಗಂಧರ್ವರು ಬಂದು ಪುರೂರವನಿಗೆ ಅಗ್ನಿಸ್ಥಾಲಿಯೊಂದನ್ನ ಕೊಟ್ಟು ಅದರಲ್ಲಿ ಯಜ್ಞಮಾಡಿ ದೇವಲೋಕಕ್ಕೆ ಹೋಗುವ ಮಾರ್ಗ ತಿಳಿಸಿದ್ದರು. ಆ ಸ್ಥಾಲಿಯನ್ನ ಪುರೂರವ ಕಾಡಿನ ಒಂದು ಭಾಗದಲ್ಲಿಟ್ಟು, ದೇಶ ರಕ್ಷಣೆಗೆ ಮಗನನ್ನ ತಯಾರಿ ಮಾಡಿ ಬರಲು ರಾಜ್ಯಕ್ಕೆ ಹೋದ. ಕೆಲ ವರ್ಷಗಳ ನಂತರ ಊರ್ವಶಿಯನ್ನ ಹೊಂದಲು ಯಾಗ ಮಾಡುವ ಸಲುವಾಗಿ ಅಗ್ನಿ ಸ್ಥಾಲಿಯನ್ನ ಹುಡಿಕಿಕೊಂಡು ಬಂದ. ಆದರೆ ಅಗ್ನಿಸ್ಥಾಲಿ ಇಟ್ಟಿದ್ದ ಜಾಗದಲ್ಲಿ ಅರಳೀ ವೃಕ್ಷ ಬೆಳೆದಿತ್ತು. ಆನಂತರ ಪುರೂರವನಿಗೆ ಅದನ್ನ ಹುಡುಕಲಾಗಲೇ ಇಲ್ಲ. ಹಾಗಾಹಿ ಗಂಧರ್ವರು ಕೊಟ್ಟ ಅಗ್ನಿಸ್ಥಾಲಿಯಮೇಲೆ ಅರಳಿ ಬೆಳೆದು ಮಹಾ ಮಾನ್ಯತೆ ಪಡೆಯಿತು. ಮುಂದೆ ಪುರೂರವನ ಕಥೆ ಇಲ್ಲಿ ಗೌಣ. ಅಂದಿನಿಂದ ಅರಳಿ ಮರಕ್ಕೆ ವಿಶೇಷ ಮಾನ್ಯತೆ ಬಂತು. ಇವತ್ತಿಗೂ ಹೋಮ, ಯಜ್ಞ, ಹವನಗಳಲ್ಲಿ ಅರಳಿಗೇ ಮಹತ್ವದ ಸ್ಥಾನ ಇದೆ. ಅಗ್ನಿ ಸ್ಪರ್ಶವಾದ್ದರಿಂದಲೇ ಅರಳೀ ಸಮಿತ್ತುಗಳಲ್ಲಿ ಅಗ್ನಿ ಸೃಷ್ಟಿಸಬಹುದು. ಇದು ವೈದಿಕ ಕಾರಣವಾದರೆ ವೈಜ್ಞಾನಿಕವಾಗಿ ಅರಳಿ ಮರದಲ್ಲಿ ಹೆಚ್ಚಿನ ಆಮ್ಲಜನಕದ ನಿಕ್ಷೇಪ ಇದೆ. ಹಾಗಾಗಿ ಅರಳಿ ವೃಕ್ಷ ಸುತ್ತಿದರೆ ಬ್ಲಡ್ ಪ್ರಷರ್ ಕಮ್ಮಿ ಆಗತ್ತೆ. ಉಸಿರಾಟದ ಸಮಸ್ಯೆ ನಿವಾರಣೆಯಾಗತ್ತೆ.
ಇಷ್ಟೆಲ್ಲ ಔಷಧೀ ಗುಣವಿರುವ ಕಾರಣಕ್ಕೇ ದೈವೀ ಮಾನ್ಯತೆ ಪಡೆದಿದೆ ಅರಳೀ ವೃಕ್ಷ. ಹಾಗಾಗಿ ಗಂಡು ಹೆಣ್ಣೆಂಬ ಬೇಧವಿಲ್ಲದೆ ಪ್ರತಿದಿನ ಎಲ್ಲರೂ ಅರಳೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಬಹುದು.
***

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ ಪಾತ್ರರಾಗಬಹುದು. ಅರಳಿ ಮರಕ್ಕೆ ನಿಯಮಿತವಾಗಿ ದೀಪ ಹಚ್ಚುವುದರಿಂದ ದೇವಾನುದೇವತೆಗಳ ಆಶೀರ್ವಾದ ಸಿಗಲಿದೆ.

ಶ್ರದ್ಧೆಯಿಂದ ಅರಳಿ ಮರಕ್ಕೆ ನಮಸ್ಕರಿಸಿದ್ರೆ ದೇವಾನುದೇವತೆಗಳು ಪ್ರಸನ್ನರಾಗ್ತಾರೆ. ಋಷಿ-ಮುನಿಗಳು ಅರಳಿ ಮರದ ಕೆಳಗೆ ಕುಳಿತು ಜಪ, ಅನುಷ್ಟಾನ ಮಾಡ್ತಾ ಇದ್ದರು.

ಶಾಸ್ತ್ರದಲ್ಲಿ ಅರಳಿ ಮರದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಅಶ್ವತ್ಥ ಮರದ ಕೆಳಗೆ ಶಿವಲಿಂಗವನ್ನು ಸ್ಥಾಪನೆ ಮಾಡಿ ಪೂಜೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ. ಇದ್ರ ಜೊತೆಗೆ ಆರ್ಥಿಕ ಸಮಸ್ಯೆಗೆ ಬಹುಬೇಗ ಪರಿಹಾರ ಸಿಗುತ್ತದೆ.

ಅಶ್ವತ್ಥ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸ್ ಓದುವುದು ಲಾಭಕರ.

ನಿಯಮಿತವಾಗಿ ಅಶ್ವತ್ಥ ಮರಕ್ಕೆ ನೀರು ಹಾಕುವುದರಿಂದ ಜೀವನದಲ್ಲಿ ಖುಷಿ ತುಂಬಿರುತ್ತದೆ. ಭೌತಿಕ ಸುಖ ಪ್ರಾಪ್ತಿಯಾಗುತ್ತದೆ. ಹಾಗೆ ಜಾತಕದಲ್ಲಿರುವ ಅಶುಭ ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ.

11 ಅಶ್ವತ್ಥದ ಎಲೆಗಳನ್ನು ತೆಗೆದು ಚಂದನದಲ್ಲಿ ಶ್ರೀರಾಮ ಎಂದು ಬರೆದು ಅದನ್ನು ಮಾಲೆ ಮಾಡಿ ಹನುಮಂತನಿಗೆ ಅರ್ಪಣೆ ಮಾಡುವುದರಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತವೆ.

ಸಾಡೇ ಸಾಥ್ ಶನಿ ದೋಷವನ್ನು ಅಶ್ವತ್ಥ ಮರ ದೂರ ಮಾಡುತ್ತದೆ. ಪ್ರತಿ ಶನಿವಾರ ಬೆಳಿಗ್ಗೆ ಅರಳಿ ಮರದ ಕೆಳಗೆ ಬೆಲ್ಲ ಹಾಗೂ ಸಕ್ಕರೆ ಮಿಶ್ರಿತ ನೀರನ್ನು ಅರ್ಪಿಸಿ. ಧೂಪ ಹಚ್ಚಿ ಅದ್ರ ಜೊತೆಗೆ ಧ್ಯಾನ ಮಾಡಿ. ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಅರಳಿ ಮರದ ಕೆಳಗೆ ಹಚ್ಚಿ.

ದಿನದ 24 ಗಂಟೆ ಆಮ್ಲಜನಕವನ್ನು ಹೊರಬಿಡುವ ಏಕೈಕ ಮರ ಅರಳಿ ಮರ ಎನ್ನಲಾಗಿದೆ. ಇದಕ್ಕೆ ದೇವ ವೃಕ್ಷ ಎಂದೇ ಕರೆಯಲಾಗುತ್ತದೆ.
***

🌳 

ಅಶ್ವತ್ಥ ವೃಕ್ಷವನ್ನು ನಿತ್ಯ ಪೂಜಿಸಿದರೆ ಸಿಗುವ ಲಾಭಗಳು ಹಲವಾರು..!

ಹಿಂದೂ ಧರ್ಮದಲ್ಲಿ ಪೂಜನೀಯವೆಂದು ಕರೆಯಲ್ಪಡುವ ಪ್ರಮುಖ ವೃಕ್ಷವೆಂದರೆ ಅಶ್ವತ್ಥ ಮರ. ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿರುವ ಈ ಮರವನ್ನು ಪೂಜಿಸಿದರೆ ಹಲವು ಸಕಾರಾತ್ಮಕ ಪರಿಣಾಮಗಳು ಉಂಟಾಗುವುದಲ್ಲದೇ, ಕೆಲವೊಂದು ದೋಷಗಳೂ ನಿವಾರಣೆಯಾಗುವುದು
ಹಿಂದೂ ಧರ್ಮದಲ್ಲಿ ಕೆಲವು ಗಿಡ ಮರಗಳನ್ನು ದೇವತೆಗಳ ಪ್ರತಿರೂಪ ಎಂದು ಪೂಜಿಸಲಾಗುವುದು. ಅಂತಹ ಒಂದು ಪವಿತ್ರವಾದ ಮರ ಎಂದರೆ ಅಶ್ವತ್ಥ ಮರ. ಈ ಮರದಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ. ಅಶ್ವತ್ಥ ಮರವು ಸಾಕಷ್ಟು ರೋಗಗಳಿಗೆ ಔಷಧಿ ನೀಡುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ದೈವ ಸ್ವರೂಪದ ಮರ ಎಂದು ಪೂಜಿಸಲಾಗುತ್ತಿತ್ತು ಎಂದು ಸಹ ಹೇಳಲಾಗುವುದು. ಜೀವನದಲ್ಲಿ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಮರಕ್ಕೆ ನಿತ್ಯವೂ ಪೂಜೆ ಸಲ್ಲಿಸಬೇಕು. ಆಗ ಸಮಸ್ಯೆಯು ಬಹು ಬೇಗ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಿಂದಿನ ಕಾಲದಲ್ಲಿ ಅಶ್ವತ್ಥ ಮರವು ಯಮ ದೇವರೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ ಎಂದು ನಂಬಿದ್ದರು. ಇದರ ಗಿಡವನ್ನು ಹಳ್ಳಿಯ ಹೊರ ವಲಯದಲ್ಲಿ ಹಾಗೂ ಸ್ಮಶಾನದ ಬಳಿ ಇಡಲಾಗುತ್ತಿತ್ತು. ಈ ಮರದ ಕೆಳಗೆ ಹುಲ್ಲು ಅಥವಾ ಕಳೆಯಂತಹ ಸಸ್ಯಗಳು ಬೆಳೆಯುವುದಿಲ್ಲ. ಹೀಗಾಗಿ ಅಶ್ವತ್ಥ ಮರವು ಪುನರ್ ಜನ್ಮ ಮತ್ತು ನವೀಕರಣಕ್ಕೆ ಅವಕಾಶ ನೀಡುವುದಿಲ್ಲ. ಈ ಮರವು ಸೂರ್ಯನ ಕಿರಣವನ್ನು ಪಡೆದರೂ ಯಾವುದೇ ಆಹಾರವನ್ನು ತಯಾರಿಸುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ಹಾಗಾಗಿಯೇ ಇದರ ಎಲೆ, ಹಣ್ಣುಗಳನ್ನು ಯಾವುದೇ ಶುಭ ಕಾರ್ಯಗಳಿಗೆ ಬಳಸುವುದಿಲ್ಲ ಎನ್ನುತ್ತಾರೆ.

ಭಾರತೀಯ ಸಂಸ್ಕೃತಿಯ ಪ್ರಕಾರ ಎರಡು ರೀತಿಯ ಪವಿತ್ರತೆಯ ಗುಣಗಳಿವೆ. ಒಂದು ಸಂಗತಿ ಅಶಾಶ್ವತ ಮತ್ತು ವಾಸ್ತವದೊಂದಿಗೆ ಸಂಬಂಧ ಹೊಂದಿರುತ್ತದೆ. ಇನ್ನೊಂದು ಶಾಶ್ವತವಾದ ಆಧ್ಯಾತ್ಮಿಕ ಚಿಂತನೆಯೊಂದಿಗೆ ಸಂಬಂಧ ಪಡೆದುಕೊಂಡಿರುತ್ತದೆ. ಬಾಳೆ ಹಣ್ಣು ಮತ್ತು ತೆಂಗಿನ ಕಾಯಿಯು ಮೊದಲನೇ ಸಂಗತಿಯ ಪವಿತ್ರತೆಗೆ ಸೇರುತ್ತದೆ. ಅಶ್ವತ್ಥ ಮರವು ಎರಡನೇ ವಿದಧ ಪವಿತ್ರತೆಯ ಗುಣವನ್ನು ಪಡೆದುಕೊಂಡಿದೆ. ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಎನ್ನುವುದು ಮಾಂಸದ ಸಂಕೇತ. ಅದು ನಿರಂತರವಾಗಿ ಸಾಯುತ್ತವೆ. ಅಂತೆಯೇ ಸ್ವಯಂ ನವೀಕರಿಸುತ್ತವೆ. ಅಶ್ವತ್ಥ ಮರವು ಆತ್ಮವನ್ನು ಪ್ರತಿಬಿಂಬಿಸುತ್ತದೆ. ಅದು ಎಂದಿಗೂ ಸಾಯುವುದಿಲ್ಲ. ಹಾಗೆಯೇ ಎಂದಿಗೂ ತನ್ನನ್ನು ತಾನು ನವೀಕರಿಸಿಕೊಳ್ಳುವುದಿಲ್ಲ.

ಪುರಾಣ ಕಥೆ
ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಅಶ್ವತ್ಥ ಮರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಕಾಣಬಹುದು. ಅವುಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಸಾವಿತ್ರಿಯು ವಿವಾಹವಾಗಿ ಒಂದು ವರ್ಷದಲ್ಲಿಯೇ ಅಶ್ವತ್ಥ ಮರದ ಹತ್ತಿರ ಬಳಿ ಸಾವಿತ್ರಿಯ ಪತಿ ಸತ್ಯವಾನನು ಸಾಯುತ್ತಾನೆ. ಆಗ ತನ್ನ ಬುದ್ಧಿವಂತಿಕೆ ಹಾಗೂ ದೃಢವಾದ ದೈವ ಭಕ್ತಿಯ ಮೂಲಕ ಗಂಡನಿಗೆ ಜೀವ ಬರುವಂತೆ ಮಾಡುತ್ತಾಳೆ ಸಾವಿತ್ರಿ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಮಹಿಳೆಯರು ತಮ್ಮ ಸೌಭಾಗ್ಯವನ್ನು ಗಟ್ಟಿಗೊಳಿಸಲು, ಪತಿಯ ಆಯುಷ್ಯದ ವೃದ್ಧಿಗೆ, ಕುಟುಂಬದ ಏಳಿಗೆಗೆ, ಅವಿವಾಹಿತರು ವಿವಾಹ ಆಗಲು, ಕೆಲಸವನ್ನು ಪಡೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಣೆ ಹೀಗೆ ಅನೇಕ ವಿಷಯಗಳಿಗಾಗಿ ಅಶ್ವತ್ಥ ಮರದ ಪ್ರದಕ್ಷಿಣೆ, ದೀಪ ಬೆಳಗುವುದು, ಪವಿತ್ರ ಧಾರ ಸುತ್ತುವುದು, ವ್ರತ ಕೈಗೊಳ್ಳುವುದು ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ಅಶ್ವತ್ಥ ಮರದ ಕೆಳಗೆ ಅನೇಕ ಋಷಿ ಮುನಿಗಳು ಜಪ-ತಪಗಳನ್ನು ನಡೆಸಿದ್ದಾರೆ. ಅಂತೆಯೇ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಈ ಮರವನ್ನು ಪೂಜಿಸುವುದರ ಮೂಲಕ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು. ಈ ಸಂಗತಿಯ ಬಗ್ಗೆ ಅನೇಕ ಮಂದಿಗೆ ಜ್ಞಾನವಿಲ್ಲದೆ ಇರಬಹುದು. ದೈವ ಶಕ್ತಿ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಈ ಮರದ ಪೂಜೆ ಮಾಡುವುದರ ಮೂಲಕ ಸಾಕಷ್ಟು ಪುಣ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೆ ನಾವು ಜೀವನದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಹಾಗಾದರೆ ಆ ವಿಧಾನಗಳು ಯಾವುವು? ಏಕೆ ಪೂಜೆ ಸಲ್ಲಿಸಬೇಕು? ಎನ್ನುವ ಕುರಿತು ಇಲ್ಲಿ ವಿವರಿಸಲಾಗಿದೆ.

ಅಶ್ವತ್ಥ ಮರವನ್ನು ಏಕೆ ಪೂಜಿಸಬೇಕು ?
                                                                                                                    ಪುರಾತನ ಕಾಲದಿಂದಲೂ ಅಶ್ವತ್ಥ ಮರವನ್ನು ವಿವಿಧ ಕಾರಣಗಳಿಗೆ ಪೂಜಿಸಿಕೊಂಡು ಬರುತ್ತಿದ್ದಾರೆ. ನಿತ್ಯವೂ ನೀರೆರೆಯುವುದು, ದೀಪ ಬೆಳಗುವುದು ಹಾಗೂ ವ್ರತ ಕೈಗೊಳ್ಳುವುದು ಅತ್ಯಂತ ಪುಣ್ಯದ ಸಂಗತಿ. ವಿವಿಧ ಗ್ರಹ ದೋಷಗಳು, ಅನಾರೋಗ್ಯ ಹಾಗೂ ಸಮಸ್ಯೆಗಳು ಜೀವನದಲ್ಲಿ ನಿರಂತರವಾಗಿ ಬರುತ್ತಿದ್ದರೆ ಅಶ್ವತ್ಥ ಮರವನ್ನು ಪೂಜಿಸಬೇಕು ಎಂದು ಹೇಳಲಾಗುವುದು. ಆಗ ವ್ಯಕ್ತಿಯ ಜೀವನವು ಅತ್ಯಂತ ಸಮೃದ್ಧಿಯಿಂದ ಕೂಡಿರುತ್ತದೆ. ಹಾಗೆಯೇ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುವುದು.

1. ಏಕಾಗ್ರತೆ ಮತ್ತು ನಿರ್ಧಾರದ ಶಕ್ತಿಯನ್ನು ಹೆಚ್ಚಿಸುತ್ತದೆ
ಸಾಕಷ್ಟು ಜನರಿಗೆ ಏಕಾಗ್ರತೆ ಕೊರತೆ ಇರುತ್ತದೆ. ಯಾರಲ್ಲಿ ಉತ್ತಮ ಚಿಂತನಾ ಶಕ್ತಿ ಹಾಗೂ ಏಕಾಗ್ರತೆಯ ಗುಣ ಇರುತ್ತದೆಯೋ ಅಂತಹವರು ಜೀವನದಲ್ಲಿ ಮುಂದೆ ಸಾಗುತ್ತಾರೆ. ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಯಾರಲ್ಲಿ ಕ್ರಿಯಾತ್ಮಕ ಯೋಜನೆ ಹಾಗೂ ಕಾರ್ಯತಂತ್ರದ ಗುಣ ಇರುವುದಿಲ್ಲವೋ ಅಂತಹವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆ ಇರುವವರು ನಿತ್ಯವೂ ಅಶ್ವತ್ಥ ಮರಕ್ಕೆ ನೀರನ್ನು ಎರೆಯಬೇಕು. ಆಗ ಅವರ ಏಕಾಗ್ರತೆ ಹೆಚ್ಚುವುದು.

2. ತಾರ್ಕಿಕ ಚಿಂತನೆಯ ಸುಧಾರಣೆ
ವಿಭಿನ್ನ ಜನರು ವಿವಿಧ ಬಗೆಯ ತಾರ್ಕಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನೀವು ಅಧಿಕವಾದ ತಾರ್ಕಿಕ ಸಾಮರ್ಥ್ಯ ಹೊಂದಿದ್ದೀರಿ ಎಂದಾದರೆ ನೀವು ವೃತ್ತಿ ಅಥವಾ ಉದ್ಯೋಗ ಕ್ಷೇತ್ರದಲ್ಲಿ ಬಹುಬೇಗ ಯಶಸ್ವಿಯಾಗುತ್ತೀರಿ. ನಿಮಗೆ ತಾರ್ಕಿಕ ಸಮಸ್ಯೆ ಇದ್ದರೆ ಮೊದಲು ಅದರ ಸುಧಾರಣೆಗೆ ಪ್ರಯತ್ನಿಸಬೇಕು. ಪವಿತ್ರವಾದ ದೈವ ಶಕ್ತಿಯನ್ನು ಹೊಂದಿರುವ ಅಶ್ವತ್ಥ ಮರವನ್ನು ನಿತ್ಯವೂ ಪೂಜಿಸಬೇಕು. ಆಗ ನಿಮಗೆ ಉತ್ತಮ ತಾರ್ಕಿಕ ಅಥವಾ ಸಂಭಾಷಣೆ ನಡೆಸುವ ಕೌಶಲ್ಯವು ವೃದ್ಧಿಯಾಗುವುದು.

3. ವೈವಾಹಿಕ ಸಂತೋಷ ಪ್ರಾಪ್ತಿ
ವೈವಾಹಿಕ ಅಪಶ್ರುತಿಯು ನಿಮ್ಮ ಜೀವನದಲ್ಲಿ ಬೇಸರ ಹಾಗೂ ಒತ್ತಡವನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ವಿವಾಹದ ನಂತರದ ಜೀವನ ಉತ್ತಮವಾಗಿ ಇರಬೇಕು ಎಂದು ಬಯಸುತ್ತಾರೆ. ಆದರೆ ಕೆಲವು ಸನ್ನಿವೇಶ, ಭಿನ್ನಾಭಿಪ್ರಾಯಗಳು, ಹವ್ಯಾಸಗಳು ದಂಪತಿಗಳ ನಡುವೆ ಘರ್ಷಣೆ ಹಾಗೂ ಹೊಂದಾಣಿಕೆಯ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಅವು ದಾಂಪತ್ಯದಲ್ಲಿ ವಿರಸ ಹಾಗೂ ಬೇಸರವನ್ನು ಸೃಷ್ಟಿಸುತ್ತವೆ. ಅಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದವರಿಗೆ ಸುಲಭ ಪರಿಹಾರ ಎಂದರೆ ನಿತ್ಯವೂ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು. ವಿವಾಹ ಜೀವನಕ್ಕೆ ಅನುಕೂಲವನ್ನು ತಂದುಕೊಡುವ ಶನಿ, ರಾಹು, ಮಂಗಳ ಕೇತು ಮತ್ತು ಸೂರ್ಯರು ಉತ್ತಮ ಫಲವನ್ನು ನೀಡುವರು. ದಾಂಪತ್ಯದಲ್ಲಿ ಸಂತೋಷ ಮರುಕಳಿಸುವುದು.

4. ಸಂತಾನ ಭಾಗ್ಯ
ಯಾರ ಕುಂಡಲಿಯಲ್ಲಿ ಶನಿ, ಮಂಗಳ, ಸೂರ್ಯ, ರಾಹು ಮತ್ತು ಕೇತುವು ಉತ್ತಮ ಪ್ರಭಾವ ನೀಡುತ್ತಿರುವುದಿಲ್ಲ ಹಾಗೂ ಇವರು ಸಂತಾನದ ಮನೆಯಾದ ಐದನೇ ಮನೆಯಲ್ಲಿ ಅನುಕೂಲಕರ ಸ್ಥಿತಿಯಲ್ಲಿ ಇರುವುದಿಲ್ಲವೋ ಆಗ ಸಂತಾನ ಹೀನತೆ ಅಥವಾ ಕೊರತೆ ಉಂಟಾಗುವುದು. ಯಾರು ಮಕ್ಕಳ ಭಾಗ್ಯವನ್ನು ಹೊಂದಿಲ್ಲ ಅಂತಹವರು ನಿತ್ಯ ಅಶ್ವತ್ಥ ಮರಕ್ಕೆ ಪೂಜೆ ಸಲ್ಲಿಸಬೇಕು. ಜೊತೆಗೆ ನಿತ್ಯ ನೀರನ್ನು ಎರೆಯುವುದರಿಂದ ಪೂಜನೀಯ ವೃಕ್ಷದಿಂದ ಆಶೀರ್ವಾದ ಪಡೆದುಕೊಳ್ಳುವಿರಿ. ಜೊತೆಗೆ ಸಂತಾನ ಭಾಗ್ಯ ಅಥವಾ ಮಕ್ಕಳನ್ನು ಪಡೆಯುವ ಯೋಗ ಬರುವುದು. ಕುಂಡಲಿಯಲ್ಲಿ ಇದ್ದ ದೋಷಗಳು ಸಹ ನಿವಾರಣೆಯಾಗುತ್ತವೆ.

5. ಆಧ್ಯಾತ್ಮಿಕ ಪ್ರಗತಿ
ಅಶ್ವತ್ಥ ಮರವು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಎಲ್ಲಾ ರೀತಿಯಲ್ಲೂ ಧನಾತ್ಮಕ ಹಾಗೂ ದೈವ ಶಕ್ತಿಯನ್ನು ಪಡೆದುಕೊಂಡ ಮರ ಎಂದು ಹೇಳಬಹುದು. ನಿತ್ಯವೂ ನೀವು ಅಶ್ವತ್ಥ ಮರಕ್ಕೆ ನೀರೆರೆಯುವುದರಿಂದ ಆಧ್ಯಾತ್ಮಿಕ ಶಕ್ತಿ ಹಾಗೂ ಪ್ರಗತಿಯನ್ನು ಪಡೆದುಕೊಳ್ಳುವಿರಿ. ಎಲ್ಲಾ ದೇವರ ಆಶೀರ್ವಾದ ಪಡೆದುಕೊಳ್ಳುವಿರಿ.

6. ಆರ್ಥಿಕ ಸ್ಥಿತಿಯ ಸುಧಾರಣೆಗೆ
ಹಣ ಮತ್ತು ಸಂಪತ್ತು ಎನ್ನುವುದು ಜೀವನದ ಒಂದು ಭಾಗ. ಹಣವಿಲ್ಲದೆ ಈ ಪ್ರಪಂಚದಲ್ಲಿ ಬದುಕುವುದು ಅಸಾಧ್ಯ. ಆರ್ಥಿಕ ಸುಧಾರಣೆ ಹಾಗೂ ಉತ್ತಮ ಹಣದ ಹರಿವನ್ನು ಪಡೆದುಕೊಳ್ಳಲು ನಿತ್ಯವೂ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು. ಆಗ ನೀವು ಬಯಸಿದ ಉದ್ಯೋಗ ಮತ್ತು ವ್ಯವಹಾರಗಳು ಕೈಗೂಡಿ ಬರುತ್ತವೆ. ಅವುಗಳೊಂದಿಗೆ ನಿರೀಕ್ಷಿತ ಹಣವನ್ನು ಸಹ ಪಡೆದುಕೊಳ್ಳುವಿರಿ.

7. ಭಗವಾನ್ ಶಿವ ಮತ್ತು ಅಶ್ವತ್ಥ ಮರ
ಶಿವ ಮತ್ತು ಅಶ್ವತ್ಥ ಮರದ ಸಂಬಂಧ ಅಥವಾ ಸಂಪರ್ಕಗಳ ಬಗ್ಗೆ ಸಾಕಷ್ಟು ಕಥೆಗಳು ಇರುವುದನ್ನು ಕಾಣಬಹುದು. ನಿತ್ಯವೂ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಅರ್ಪಿಸುವುದರಿಂದ ಅಪಾರವಾದ ಜ್ಞಾನ, ಸಂಪತ್ತು, ಶಕ್ತಿ, ಸ್ಥಾನ ಮತ್ತು ಅಧಿಕಾರವನ್ನು ಪಡೆದುಕೊಳ್ಳಬಹುದು. ಶಿವನು ಸದಾ ನಮ್ಮನ್ನು ಆಶೀರ್ವದಿಸುವನು ಎಂದು ಸಹ ಹೇಳಲಾಗುವುದು.

8. ಜ್ಞಾನವನ್ನು ಪಡೆಯಬಹುದು
ಆಧ್ಯಾತ್ಮಿಕ ಜ್ಞಾನವು ಪ್ರತಿಯೊಬ್ಬರ ಜೀವನವನ್ನು ಕಲ್ಯಾಣಗೊಳಿಸುತ್ತದೆ. ಈ ಹಿಂದೆ ಬುದ್ಧನು ಅಶ್ವತ್ಥ ಮರದ ಕೆಳಗೆ ಜ್ಞಾನವನ್ನು ಪಡೆದುಕೊಂಡನು ಎಂದು ತಿಳಿಸುತ್ತದೆ. ಅಂತೆಯೇ ಅನೇಕ ಋಷಿ ಮುನಿಗಳು ಅಶ್ವತ್ಥ ಮರದ ಕೆಳಗೆ ಧ್ಯಾನವನ್ನು ಕೈಗೊಂಡಿದ್ದರು ಎಂದು ಸಹ ಹೇಳಲಾಗುವುದು. ಉತ್ತಮ ಜ್ಞಾನ ಹಾಗೂ ಬುದ್ಧಿ ಶಕ್ತಿಯನ್ನು ಪಡೆದುಕೊಳ್ಳಲು ಗಣನೀಯವಾಗಿ ಅಶ್ವತ್ಥ ಮರಕ್ಕೆ ಏಳು ಪ್ರದಕ್ಷಿಣೆ, ಪೂಜೆ, ನೀರನ್ನು ಎರೆಯುವುದು, ಮರದ ಕೆಳಗೆ ಸ್ವಲ್ಪ ಸಮಯ ಕುಳಿತು ಧ್ಯಾನ ಮಾಡುವುದು ಮಾಡಿದರೆ ಉತ್ತಮ ಜ್ಞಾನವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
***



🕉️🌳 #ಅಶ್ವತ್ಥಮರದಮಹತ್ವ 🌳🕉️

ನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ ಇರುವುದನ್ನು ಸಹ ನಾವು ಕಾಣಬಹುದು. ಅಂತಹವುಗಳಲ್ಲಿ #ಅಶ್ವತ್ಥ ಮರವೂ ಒಂದು. ಈ ಮರದಲ್ಲಿ #ದೇವತೆಗಳು #ವಾಸಿಸುತ್ತಾರೆ. ಹಾಗಾಗಿ ಎಲ್ಲಾ ಸಮಯದಲ್ಲೂ ಈ ಮರದ ಬಳಿ ಇರಬಾರದು ಎನ್ನುವ ಪ್ರತೀತಿ ಇದೆ.

ಹಿಂದೂ ಧರ್ಮಿಯರಿಗೆ ಅಶ್ವತ್ಥ(#ಅರಳಿ) ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ #ಪೂಜೆ ಹಾಗೂ #ಹವನಗಳಿಗೂ ಬಳಸಲಾಗುತ್ತದೆ. #ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ #ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

#ಬ್ರಹ್ಮ_ಪುರಾಣದ ಪ್ರಕಾರ, ದುಷ್ಟ ಶಕ್ತಿಗಳು ಆಗಾಗ ದೇವತೆಗಳ ವಿರುದ್ಧ ದಂಗೆ ಏಳುತ್ತಿದ್ದವು. ದುಷ್ಟ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ, ಭಗವಂತನಾದ #ವಿಷ್ಣುವು ಎಲ್ಲಾ ದೇವತೆಗಳಿಗೆ ಅಶ್ವತ್ಥ ಮರದ ಹಿಂದೆ ಅಡಗಿ ಕೊಳ್ಳಲು ಹೇಳಿದನು. ವಿಷ್ಣುವಿನ ಮಾತಿನಂತೆ ಎಲ್ಲಾ ದೇವತೆಗಳು ಮರದ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತೆ ಅವಿತು ಕುಳಿತರು.

ಆದರೆ #ಲಕ್ಷ್ಮಿ ಮಾತ್ರ ಮರದ ಬುಡದಲ್ಲಿ ಕುಳಿತಳು. ಹಾಗಾಗಿಯೇ ಈ ಮರದ ಆರಾಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತದೆ. ಶಾಸ್ತ್ರವು ಅಶ್ವತ್ಥ ಮರದ ಬಳಿ ಹೋಗುವುದು ಮತ್ತು ಅದರ ಪೂಜೆ ಮಾಡುವುದಕ್ಕೆ ನಿಗದಿತ ಸಮಯವನ್ನು ಹೇಳುತ್ತದೆ.

#ಪದ್ಮ_ಪುರಾಣದ ಪ್ರಕಾರ ಸೂರ್ಯೋದಯಕ್ಕಿಂತ ಮುಂಚೆ ಅಶ್ವತ್ಥ ಮರದ ಬಳಿ ಹೋಗಬಾರದು. ಹಾಗೊಮ್ಮೆ ಹೋದರೆ ಜೀವನದಲ್ಲಿ ಬಡತನ ಎದುರಾಗುವುದು. ಈ ಮರದ ಪೂಜೆಗೆ ಸೂಕ್ತ ಕಾಲವೆಂದರೆ #ಸೂರ್ಯೋದಯದ #ನಂತರದ ಕಾಲ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಇಲ್ಲಿಯೇ ನೆಲೆಸುತ್ತಾಳೆ. ಆ ವೇಳೆ ಪೂಜಿಸಿದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

ಋಷಿ ಮುನಿಗಳ ನಡುವೆ ನಾರದ ಮಹರ್ಷಿಗಳು ಇರುವಂತೆ, #ಶ್ರೀಕೃಷ್ಣನು ಅಶ್ವತ್ಥಮರದಲ್ಲಿ ನೆಲೆಸಿದ್ದಾನೆ. ಹಾಗಾಗಿ ಈ ಮರವನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.

ಈ ಮರದ ಆರಾಧನೆ ಕೇವಲ ಕಲ್ಪನೆ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಇದರ ಆರಾಧನೆಯಿಂದ #ಆರೋಗ್ಯ ಮತ್ತು ಇತರ ಒಳ್ಳೆಯ ಪ್ರಯೋಜನಗಳು ಉಂಟಾಗುವುದು ಎನ್ನಲಾಗುತ್ತದೆ.

|| ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||

🙏🙏 ॐ #ಶ್ರೀವಿಷ್ಣುವೇನಮಃ 🙏🙏🚩
***********

20 May 2021- ಪ್ರತಿ ಹಳ್ಳಿ ಹಳ್ಳಿಗೂ ಅರಳಿಕಟ್ಟೆ ಏಕೆ ಇರುತ್ತದೆ ನಿಮಗೆ ಗೊತ್ತೇ ? ಅದರ  ವೈಜ್ಞಾನಿಕ ಹಿನ್ನೆಲೆ ಏನು ? ಪೂಜ್ಯ ಭಾವನೆ ಬರಲು ಕಾರಣವೇನು ? ಇಲ್ಲಿ ಸ್ವಲ್ಪ ಮಾಹಿತಿ ಕಲೆಹಾಕಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಸ್ವಲ್ಪ ಬಿಡುವು ಮಾಡಿಕೊಂಡು ಓದಿ. 

 ರಚ್ಚೆ ಕಟ್ಟೆ, ಜಗುಲಿಕಟ್ಟೆ , ನಾಗರಕಟ್ಟೆ , ಪಂಚಾಯಿತಿ ಕಟ್ಟೆ, ಅಶ್ವತ್ತಮರ, ಅಶ್ವತ್ತಕಟ್ಟೆ, ಈಗೆ ನಾನಾ ಹೆಸರಿನಿಂದಲೂ ಕರೆಯುತ್ತಾರೆ. ನಮ್ಮ ಪೂರ್ವಜರು ಇವುಗಳನ್ನು ಏಕೆ  ಪ್ರತಿಷ್ಠಾಪಿಸಿದರು ಎಂದರೆ ? 

 ಈಗಿನ ಕೊರೋನ ಎರಡನೇ ಅಲೆಯಲ್ಲಿ  ಕೇಳಿಬರುತ್ತಿರುವ ಹೆಸರು ಆಮ್ಲಜನಕ , ಆಕ್ಸಿಜನ್ O2 ಕೊರತೆ ? 
ನಿಮಗಿದು ಗೊತ್ತೇ ? ಅರಳಿಮರ ಅಥವಾ Ficus religiosa ಇತರ ಮರಗಳಿಗಿಂತಲೂ ಅತಿ ಹೆಚ್ಚು ಆಮ್ಲಜನಕವನ್ನು ಸರಬರಾಜು ಮಾಡುತ್ತದೆ ಮತ್ತು ಗ್ರಾಮದ ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸಿ ಮತ್ತು ಗಾಳಿಯಲ್ಲಿರುವ ಸೂಕ್ಷ್ಮ ಕ್ರಿಮಿ ಕೀಟಗಳನ್ನು ಕೂಡ ನಾಶಪಡಿಸುತ್ತದೆ ಹಾಗೂ ಅತಿಹೆಚ್ಚು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯ ಈ ಪಿಪ್ಪಲ ಮರಕ್ಕೆ ಇದೆ. ಆದುದರಿಂದಲೇ ನಮ್ಮ ಪೂರ್ವಜರು ಪ್ರತಿ ಹಳ್ಳಿಯ ಹಾಗೂ ಊರಿನ ಆರಂಭದಲ್ಲಿಯೇ ಇವುಗಳನ್ನು ನೆಡುತ್ತಿದ್ದರು. 

ಅವುಗಳ ಸಂರಕ್ಷಣೆ ಹಾಗೂ ಸುಸ್ಥಿರತೆ ಹೇಗೆ ? 
ಈಗಿನ ಕಾರ್ಪೊರೇಟ್ ಸಂಸ್ಥೆಗಳ ಭಾಷೆಯಲ್ಲಿ ಹೇಳಬೇಕಾದರೆ Sustainability Plan ಅಥವಾ ಸುಸ್ಥಿರತೆ ಯ ಯೋಜನೆ ಏನಪ್ಪಾ ಅಂದ್ರೆ ?

ನಮ್ಮ ಬುದ್ದಿಜೀವಿಗಳಿಗೆ ಇದು ಮೂಡನಂಬಿಕೆ ಅನ್ನಿಸಬಹುದು, ಆದರೆ ಅವರ ಯೋಜನೆಗಳ ಪರಿಸರ ಪೂರಕ ಮತ್ತು ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿವಂತಹದ್ದು. 
ಆಗಿನ ಕಾಲದಲ್ಲಿ ದೇವರಿಗೆ ಮತ್ತು ಪೂಜೆ ಪುನಸ್ಕಾರಗಳಿಗೆ ಹೆಚ್ಚು ಪ್ರಾಧಾನ್ಯ ಕೊಡುತ್ತಿದ್ದರು ಹಾಗೆಯೇ ಭಯ ಭಕ್ತಿಗಳಿಂದ ಆಚರಿಸುತ್ತಿದ್ದರು. ಇವನ್ನೂ ಕಡಿಯಬಾರದು ಹಾಗೂ ಸಂರಕ್ಷಿಸಲು ದೈವತ್ವವನ್ನು ಆರೋಪಿಸಿದರು. 
ಅದಕ್ಕಾಗಿಯೇ ಅಲ್ಲಿ ನಿರಂತರ ಪೂಜೆಗಳು, ನಾಗ ಪ್ರತಿಷ್ಠೆ  , ಉಪನಯನ , ಮದುವೆ ಈಗೆ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡತೊಡಗಿದರು. ಹಾಗೆಯೇ ಹೋಮ ಹವನಗಳಿಗೆ ಉಪಯೋಗಿಸುತ್ತಿದ್ದರು ಅದರ ಹಿಂದಿರುವ ಅದರ ವೈಜ್ಞಾನಿಕ ಕಾರಣ ಮನೆ ಮತ್ತು ಮಸಸ್ಸು ಶುದ್ಧೀಕರಣ ವೇ. 

ಸಂತಾನಭಾಗ್ಯ ವಿಲ್ಲದವರಿಗೆ  ಯಾರು ನೋಡದ ಹೋತ್ತಿನಲ್ಲಿ ಹೋಗಿ ಪ್ರದಕ್ಷಿಣೆ ಹಾಕಿ ಎಂದು ಸಹ ಹೇಳುತ್ತಾರೆ , ಅದರ ಹಿಂದಿನ ರಹಸ್ಯ ಬೆಳಿಗ್ಗೆ ಸಮಯದಲ್ಲಿ ಅತಿ ಹೆಚ್ಚು ಪ್ರಾಣವಾಯು ದೊರೆತು ಮತ್ತು ಪ್ರದಕ್ಷಿಣೆ ಯಿಂದ ವ್ಯಾಯಾಮವಾಗಿ, ಭೂಜ್ಜುಕರಗಿ ಸಂತಾನೋ ತ್ಪತ್ತಿ ಅಂಗಗಳು ಚುರುಕಾಗುತ್ತದೆ   ಹಾಗೂ ಮನಸ್ಸಿಗೂ ಹಿತಕರವೇನಿಸುತ್ತದೆ. ಹಾಗೆಯೇ ರಾತ್ರಿ ಹೊತ್ತು ದೀಪ ಹಚ್ಚುತ್ತಾರೆ , ಅಲ್ಲಿ ದಿಪವಿದ್ದರೆ ಇದು ದೇವರಕಟ್ಟೆ ಎಂದು ಮಲಗುತ್ತಿರಲಿಲ್ಲ, ಏಕೆಂದರೆ ಹಿಂದಿನಕಾಲದಲ್ಲಿ ಹೆಚ್ಚು ಜನ ನಡೆದೇ ಅಥವಾ ಬಂಡಿಗಳಲ್ಲಿ ಸಾಗುತ್ತಿದ್ದರು ಆಗ ಅಲ್ಲಿ ಜನ ಮಲಗಬಾರದು ಎಂದು ಏಕೆಂದರೆ ರಾತ್ರಿ ಇವು ಹೆಚ್ಚು ಇಂಗಾಲವನ್ನು ಉತ್ಪಾದಿಸುತ್ತದೆ.  ಇದು ಉಸಿರಾಟ ಸಮಸ್ಯೆ ಉಂಟಾಗಬಾರದು ಎಂಬುದೇ ಇದರ ಹಿನ್ನೆಲೆ. 

 ಪ್ರತಿಯೊಂದು ಆಚರಣೆ ಹಿಂದೆ ಯಾವುದೋ ಒಂದು ಕಾರಣ ಇದ್ದೆ ಇರುತ್ತದೆ , ಒಂದು ಬಹು ಮುಖ್ಯ ಸಲಹೆ ಯಾರಾದರೂ ಯಾವುದೇ ಆಚರಣೆ ಮಾಡುತ್ತಿದ್ದಾರೆ ಅದು ಯಾವುದೇ ಧರ್ಮದವರು ಆಗಲಿ , ಅವರ ಆಚರಣೆ ಇನ್ನೊಬ್ಬರಿಗೆ ಮತ್ತು ಪರಿಸರಕ್ಕೆ ತೊಂದರೆ ಆಗುತ್ತಿಲ್ಲ ಎಂದರೆ ಅದರ ಬಗ್ಗೆ ಮಾತನಾಡುವುದು ಬೇಡ ಬದಲಾಗಿ ಅವುಗಳನ್ನು ಗೌರವಿಸಿ ಕಳೆದುಕೊಳ್ಳುವುದು ಏನೂ ಇಲ್ಲ. 

ಒಟ್ಟಾರೆ ನಮ್ಮ ಪೂರ್ವಜರು ನಮ್ಮ ಹಾಗೇ ಡಿಗ್ರಿಗಳು, ಪಿಚ್ ಡಿ ಗಳು ಹೊಂದಿರಲಿಲ್ಲ ಅವರಿಗೆಲ್ಲ ಇದ್ದದ್ದು ಸಾಮಾನ್ಯ ಜ್ಞಾನ ಮತ್ತು ಪ್ರಜ್ಞೆ ಮತ್ತು ಅವರು ಅನುಭವಗಳಿಂದ ಅತಿ ಹೆಚ್ಚು ಕಲಿಯುತ್ತಿದ್ದರು ಬಹು ಮುಖ್ಯವಾಗಿ ಅವರೆಲ್ಲರೂ ಪರಿಸರದ ಜ್ಞಾನ ಮತ್ತು ಪ್ರಾಮುಖ್ಯತೆಯನ್ನು ತಿಳಿದಿದ್ದರೂ   ಹಾಗೆಯೇ ಅವನ್ನು ಮುಂದಿನ ಪೀಳಿಗೆಗೆ ಒಂದೊಳ್ಳೆ ಜೀವನವನ್ನು ಕೊಟ್ಟು ಹೋಗುತ್ತಿದ್ದರು. ಆದರೆ ನಾವು ಅವರ ತದ್ವಿರುದ್ದ ನಾವು ಪರಿಸರದ ಜೊತೆ ಸಾಗುತ್ತಿಲ್ಲ ಬದಲಾಗಿ ಅದರ ವಿರುದ್ದ ಸಾಗುತ್ತಿದ್ದೇವೆ , ಇದರ ಪರಿಣಾಮವೇ ಇಂದು ಕೊರೊನ ಗೆ ಇನ್ನಿಲ್ಲದಂತೆ ನಲುಗಿದ್ದೇವೆ. ಇನ್ನಾದರೂ ನಾವು ನಮ್ಮ ಆಚರಣೆಗೆ ಹಾಗೂ ಪರಿಸರಕ್ಕೆ ಬೆಲೇಕೊಡದಿದ್ದಲ್ಲಿ ನಮ್ಮ ಅಳಿವು ಶತಸಿದ್ಧ. 
ಸಂಗ್ರಹ ಮತ್ತು ಲೇಖನ : ರಘು ರಾಮಾನುಜಂ
***
"ಅರಳಿ ಮರವೇಕೆ ಬಾಡುವುದಿಲ್ಲ"🕉

ರಾಮಲಕ್ಷ್ಮಣರು ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ಸೀತಾದೇವಿಯನ್ನು ಫಲ್ಗುಣಿ ನದಿಯ ದಂಡೆಯಲ್ಲಿ ಕೂಡಿಸಿ ಅವರಿಬ್ಬರೂ ಕಾಡಿಗೆ ಹೋಗುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ನದಿಯ ಒಳಗಿನಿಂದ ಕೈಯೊಂದು ಹೊರಗೆ ಬರುತ್ತದೆ. ಸೀತಾದೇವಿ ನನಗೆ ಹಸಿವೆಯಾಗುತ್ತಿದೆ ಎಂದಂತಾಗುತ್ತದೆ. ಪದೇ ಪದೇ ಆ ಧ್ವನಿ ಮರುಕಳಿಸುತ್ತದೆ. ಆ ಧ್ವನಿ ಮಹಾರಾಜರಂತೆ ಇರುತ್ತದೆ. ಸೀತೆಗೆ ಏನು ಮಾಡುವುದೆಂದೇ ತೋಚುವುದಿಲ್ಲ. ಬೇರೆ ದಾರಿ ಇಲ್ಲದೆ ಮರಳಿನ ಉಂಡೆಯನ್ನು ಮಾಡಿ ಅದರಲ್ಲಿ ಅನ್ನವನ್ನು ಆವಾಹನೆ ಮಾಡಿ ನದಿಯಿಂದ ಮೇಲೆ ಬಂದ ಕೈಯೊಳಗೆ ಇಡುತ್ತಾಳೆ. ನಂತರ ತನ್ನ ಕರ್ತವ್ಯಕ್ಕೆ ಐದು ಸಾಕ್ಷಿಗಳನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾಳೆ. 

ಸೀತೆ ನೀಡಿದ ಆಹಾರದಿಂದ ದಶರಥ ಸಂತುಷ್ಟನಾಗುತ್ತಾನೆ. ಹರಸಿ ಮರೆಯಾಗುತ್ತಾನೆ. ಇತ್ತ ರಾಮ ಲಕ್ಷ್ಮಣರು ಮರಳಿದಾಗ ಸೀತೆ ಅವರಿಗೆ ನಡೆದ ಸಂಗತಿಯೆಲ್ಲವನ್ನೂ ವಿವರಿಸುತ್ತಾಳೆ. ರಾಮ ಲಕ್ಷ್ಮಣರಿಗೆ ಮೊದಲಿಗೆ ಸೀತೆಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆಗ ಸೀತೆ ತನ್ನ ಕೃತ್ಯಕ್ಕೆ ಫಲ್ಗುಣಿ ನದಿ, ತುಳಸಿ ಗಿಡ, ಹಸು ಬ್ರಾಹ್ಮಣ ಮತ್ತು ಅರಳಿಮರವೇ ಸಾಕ್ಷಿ ಎನ್ನುತ್ತಾಳೆ. ಆದರೆ, ಸೀತೆಯ ಸಹಾಯಕ್ಕೆ ಅರಳಿ ಮರದ ಹೊರತಾಗಿ ಮತ್ಯಾರು ಬರುವುದಿಲ್ಲ. ಅರಳಿ ಮರ ಸಾಕ್ಷ್ಯ ನುಡಿಯುತ್ತದೆ. ರಾಮ, ಲಕ್ಷ್ಮಣರು ಸೀತೆಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸುತ್ತಾರೆ.

ಆದರೆ, ಸೀತೆ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಫಾಲುಣಿ ನದಿ, ಹಸು, ಬ್ರಾಹ್ಮಣ ಮತ್ತು ತುಳಸಿ ಗಿಡಕ್ಕೆ ಶಾಪ ಕೊಡುತ್ತಾಳೆ. ಫಾಲುಣಿ ನದಿಗೆ ಮಳೆಗಾಲದಲ್ಲೂ ಸಹ ನಿನ್ನ ಪಾತ್ರಕ್ಕೆ ಎಷ್ಟೇ ನೀರು ಬಂದರೂ ಬರಿದಾಗಲಿ. ನೀರು ನೆಲದ ಒಳಗೇ ಉಳಿದುಕೊಳ್ಳಲಿ.

ಹೇ ವಿಪ್ರೋತ್ತಮ ನೀನು ಸತ್ಯ ಹೇಳದೇ ನನಗೆ ಮೋಸ ಮಾಡಿದೆ. ಹೀಗಾಗಿ ನೀನು ಈ ಕ್ಷೇತ್ರದಲ್ಲೇ ಇದ್ದು ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ನಡೆಸು.

ಗೋಮಾತೆ ನೀನು ಜಗವ ಬೆಳಗಬೇಕಾದವಳು. ಆದರೆ, ನೀನು ನನ್ನ ಮಾತು ಮೀರಿ ಲೋಭತನ ಮೆರೆದೆ. ಹಾಗಾಗಿ ಗಯಾ ಕ್ಷೇತ್ರದಲ್ಲೇ ಎದ್ದುಕೊಂಡು ಅವರಿವರು ಪಿಂಡವನ್ನು ತಿನ್ನುತ್ತಾ ಜೀವನ ಸಾಗಿಸು. ಎಷ್ಟು ತಿಂದರೂ ನಿನ್ನ ಹೊಟ್ಟೆ ತುಂಬದಿರಲಿ.

ತುಳಸಿ ಮಾತೆ ನೀನು ಪವಿತ್ರಳಾದವಳು. ನೀನು ಸಹ ನನ್ನ ಮಾತು ಮೀರುವಿ ಎಂದುಕೊಂಡಿರಲಿಲ್ಲ. ಹಾಗಾಗಿ ನೀನು ಎಲ್ಲೆಂದರಲ್ಲಿ ಬೆಳೆಯುವಂತಾಗಲಿ. ಸೀತೆಯ ಶಾಪದಂತೆ ಫಲ್ಗುಣಿ ನದಿ ಬತ್ತಿಹೋಗಿದೆ. ನದಿಯೊಳಗಿನ ಮರಳನ್ನು ಅಗೆದಾಗಳಷ್ಟೆ ಇಂದಿಗೂ ನೀರು ಬರುತ್ತದೆ. ಫಾಲುಣಿ ನದಿ ತೀರದಲ್ಲಿರುವ ಹಸುಗಳಿಗೆ ಪಿಂಡಗಳೇ ಆಹಾರ. ಅವು ಎಷ್ಟು ಹಸಿದಿರುತ್ತವೆ ಎಂದರೆ ಕೆಲವೊಮ್ಮೆ ಪಿಂಡ ವಿಸರ್ಜನೆಗೂ ಅವಕಾಶ ಕೊಡದೆ ಬಾಯಿ ಹಾಕುತ್ತದೆ. ನಂತರ ಸೀತೆಯ ದೃಷ್ಟಿ ಅರಳೀ ಮರದತ್ತ ಬೀಳುತ್ತದೆ. ಆಕೆ ಪರಮ ಸಂತೋಷದಿಂದ ಆಶೀರ್ವಾರ್ದಿಸುತ್ತಾಳೆ. ಅಂದಿನಿಂದ ಅರಳಿಮರ ಬಾಡದೆ ಕಂಗೊಳಿಸುತ್ತದೆ.

ಆಧಾರ : ಬೋಧಿವೃಕ್ಷ
****

***


ನಾವೇಕೆ ಅರಳಿ ಮರವನ್ನು ಪೂಜಿಸುತ್ತೇವೆ - 
ಅರಳಿ ಮರ" ಅಥವಾ *ಅಶ್ವತ್ಥ ವೃಕ್ಷ* ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ? ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.

ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ । ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ 

– ಎಲ್ಲ ಮರಗಳಲ್ಲಿ ಅರಳಿಮರ ನಾನು.[ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥ’ ಎನಿಸಿ ಅರಳಿಮರದಲ್ಲಿದ್ದೇನೆ.] ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ‘ನಾರದ’ ಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ‘ಚಿತ್ರರಥ’ ಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ[ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.

ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನು” ಎಂದು. ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ. ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು. ಏಕೆ  ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯ ಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ. ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- “ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆ” ಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ]. ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ. 

ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ. 

ಇಲ್ಲಿ ಬಂದಿರುವ ಭಗವಂತನ ನಾಮ ‘ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ. 

ಮುಂದುವರಿದು ಕೃಷ್ಣ ಹೇಳುತ್ತಾನೆ “ದೇವರ್ಷೀಣಾಂ ಚ ನಾರದಃ” ಎಂದು. ನಾರದ ಗಂಧರ್ವರಲ್ಲಿ ಒಬ್ಬ. ಆದರೆ ಭಗವಂತನ ವಿಶೇಷ ಸನ್ನಿಧಾನದಿಂದ ಆತ ತುಂಬಾ ಎತ್ತರಕ್ಕೇರಿ ದೇವರ್ಷಿಯಾದ. ನಾರದ ಭಗವಂತನನ್ನು ಪಡೆದದ್ದು ಮಹಾ ಸಾಧನೆಯಿಂದ. ಹಿಂದಿನ ಬ್ರಹ್ಮಕಲ್ಪದಲ್ಲಿ ನಾರದ ಒಂದು ಬಡ ಕುಟುಂಬದಲ್ಲಿ ಹುಟ್ಟಿದ್ದ. ಆತನ ತಾಯಿ ಋಷಿ-ಮುನಿಗಳ ಆಶ್ರಮದಲ್ಲಿ ಕೆಲಸ ಮಾಡಿಕೊಂಡು ಬದುಕುತಿದ್ದಳು. ಪುಟ್ಟ ಮಗುವಾಗಿದ್ದ ಈತ ಋಷಿಗಳ ಅಧ್ಯಾತ್ಮ ಸಂಭಾಷಣೆಯನ್ನು ಕೇಳುತ್ತ ಬೆಳೆದ. ಈತ ಐದು ವರ್ಷದವನಿದ್ದಾಗ ಆತನ ತಾಯಿ ಹಾವು ಕಚ್ಚಿ ಸಾಯುತ್ತಾಳೆ. ತಿಳಿದವರು ಹೇಳುವಂತೆ- “ನಮಗೆ ದೇವರೇ ‘ನಾಥ’ ಎಂದು ಗೊತ್ತು ಮಾಡಿಸಲು ಭಗವಂತ ನಮ್ಮನ್ನು ಮೊದಲು ‘ಅನಾಥ’ ಮಾಡುತ್ತಾನೆ”. ಹಾಗೆ ಅನಾಥನಾದ ಈತ ತನ್ನ ಐದನೇ ವರ್ಷದಿಂದಲೇ, ಋಷಿಗಳಿಂದ ತಿಳಿದ ಜ್ಞಾನದಿಂದ ಸಾಧನೆ ಆರಂಭಿಸುತ್ತಾನೆ. ಆದರೆ ಆತನಿಗೆ ಆ ಜನ್ಮದಲ್ಲಿ ಭಗವಂತನ ದರ್ಶನವಾಗುವುದಿಲ್ಲ. ಆದರೆ ಆತ ಭಗವಂತನ ವಾಣಿಯನ್ನು ‘ಕೇಳಿದ’. “ಈ ಜನ್ಮದಲ್ಲಿ ನನ್ನನ್ನು ಕಾಣುವ ಪ್ರಯತ್ನ ಮಾಡಬೇಡ. ನೀನು ಮುಂದಿನ ಕಲ್ಪದಲ್ಲಿ ಸದಾ ನನ್ನನ್ನು ಕಾಣುವೆ” ಎಂದು. ನಂತರ ಈತ ಈ ಬ್ರಹ್ಮಕಲ್ಪದಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ. 

ನಾರದರು ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ. ಹಿಂದಿನ ಕಾಲದ ಕಥೆಗಳಲ್ಲಿ ಕಾಣುವಂತೆ ಯಾವುದಾದರು ಒಳ್ಳೆಯ ಕೆಲಸವಾಗಬೇಕಾದರೆ ಅಲ್ಲಿ ನಾರದರು ಬಂದು ಹೇಳಿ ಹೋಗುತ್ತಿದ್ದರು. ಉದಾಹರಣೆಗೆ ವಾಲ್ಮೀಕಿ ರಾಮಾಯಣ ಬರೆಯುವಂತೆ ಹೇಳಿ ಹೋದವರು ನಾರದರು. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಈಗ ಏಕೆ ನಾರದರು ಬರುವುದಿಲ್ಲ, ಏಕೆ ನಮಗೆ ಮಾರ್ಗದರ್ಶನ ಸಿಗುವುದಿಲ್ಲ ಎಂದು. ನಾರದರನ್ನು ನಾವು ಕರೆದರೆ ಖಂಡಿತ ಇವತ್ತಿಗೂ ಬರುತ್ತಾರೆ ‘ನಾರದ’ ಅಂದರೆ ನಮ್ಮ ಅಂತರಂಗದ ಧ್ವನಿ.

***
 ಮಹಾಶಿವ  ಮಹಾವಿಷ್ಣುವಿನ ಪುಣ್ಯ ಶ್ರವಣ  ಮತ್ತು 
                  ಅರಳಿ ಮರಕ್ಕೆ ಶನಿವಾರ ಮಾತ್ರ  ಪೂಜೆ ಏಕೆ ? 

ಒಮ್ಮೆ ಕಾರ್ತಿವೀರ್ಯಾರ್ಜುನ,  ಶಿವ ಮಹಿಮೆಯನ್ನು ಕುರಿತು ಹೇಳುತ್ತಾ,ಹಿಂದೆ ಶ್ರೀ ರಾಮನು ರಾವಣನನ್ನು ಸಂಹರಿಸುವುದಕ್ಕಾಗಿ ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿದ ಸ್ಥಳದಲ್ಲಿ ಶಿವಲಿಂಗವನ್ನು  ಪ್ರತಿಷ್ಠಾಪನೆ ಮಾಡಿ
ಶಿವನನ್ನು ಭಕ್ತಿಯಿಂದ ಆರಾಧಿಸಿ ಧ್ಯಾನಿಸಿ ಸಮುದ್ರವನ್ನು ದಾಟಿ ರಾವಣನನ್ನು ಸಂಹರಿಸಿದನು. ಇದೇ ರೀತಿ ಹನುಮಂತನು ಸಮುದ್ರ ಲಂಘನ ಮಾಡುವಾಗ ಶಿವನನ್ನು ಭಕ್ತಿಯಿಂದ ಧ್ಯಾನಿಸಿ, ಶ್ರೀ ರಾಮನಿಗೆ ನಮಸ್ಕರಿಸಿ ಮಹಾಬಲವನ್ನು ಸಂಪಾದಿಸಿ  ಸಮುದ್ರವನ್ನು ದಾಟಿದನು.  ಅರ್ಜುನನು ಯುದ್ಧದ  ರಣರಂಗಕ್ಕೆ
ಪ್ರವೇಶ ಮಾಡುವ ಮೊದಲು ಕೃಷ್ಣನ ಸಲಹೆಯಂತೆ, ಶಿವನನ್ನು  ಶ್ರದ್ಧಾ ಭಕ್ತಿ ಯಿಂದ ಪೂಜಿಸಿ ಧ್ಯಾನಿಸಿ  ಯುದ್ಧ ರಂಗ ಪ್ರವೇಶ ಮಾಡಿದನು. ಈ ರೀತಿ ಎಂಥೆಂಥಾ ಮಹಾಮಹಿಮಾನ್ವಿತರು ಪುಣ್ಯ ಪುರುಷರೆಲ್ಲರೂ ಮಹಾಶಿವನನ್ನು ಅನವರತ  ಪೂಜಿಸಿ, ಧ್ಯಾನಿಸಿ, ಜಯವನ್ನು ಸಂಪಾದಿಸಿಕೊಂಡರು. ಅಂತ ಮಹಾಮಹಿಮನಾದ  ಪರಮೇಶ್ವರನನ್ನು  ಸ್ತ್ರೀಯರು ಆರಾಧಿಸಿ ತಮ್ಮ ತಮ್ಮ ಮನದಿಷ್ಟಾರ್ಥಗಳನ್ನೆಲ್ಲ  ಪೂರೈಸಿಕೊಂಡರು. ಆದುದರಿಂದ ಪೂಜೆಗಳಲೆಲ್ಲಾ
'ಮಹಾಶಿವನ' ಪೂಜೆ  ಪರಮ ಪವಿತ್ರವಾದದ್ದು, ಪುಣ್ಯ ಪ್ರಧವಾದದ್ದು ಆಗಿದೆ. 

ಹಾಗೆ, ಗಂಗಾ ನದಿಯು ಪವಿತ್ರವಾದದ್ದು. ಹೇಗೆಂದರೆ ವಿಷ್ಣುವಿನ ಪಾದದಿಂದ ಜನಿಸಿ, ಶಿವನ ಶಿರಸ್ಸಿನಿಂದ ಪ್ರಹರಿಸುತ್ತಾಳೆ. ಆದ್ದರಿಂದ ಗಂಗೆಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ನಶಿಸಿ ಹೋಗುತ್ತವೆ.  ಒಂದು ವೇಳೆ ಗಂಗಾನದಿ ಅಲ್ಲದಿದ್ದರೂ, ಯಾವುದೇ ನೀರನ್ನು ಗಂಗಾ, ಗಂಗಾ, ಗಂಗಾ, ಎಂದು ಮೂರು ಬಾರಿ ಹೇಳಿ  ಪ್ರೋಕ್ಷಿಸಿಕೊಂಡರೆ  ಗಂಗಾಜಲಕ್ಕೆ  ಸಮಾನವಾಗುತ್ತದೆ. ಗಂಗಾ ಜಲದಲ್ಲಿ ಸಾಕ್ಷಾತ್ ವಿಷ್ಣು ಸಾನಿಧ್ಯ ಇರುತ್ತದೆ.  ಕಾರ್ತಿಕ, ಮಾಘ, ಮಾರ್ಗಶಿರ  ಯಾವುದೇ ಪುಣ್ಯ ಮಾಸಗಳಲ್ಲಿ ಶಿವ ಮತ್ತು ವಿಷ್ಣುವಿನ ಆರಾಧನೆಯನ್ನು ಭಕ್ತಿಯಿಂದ ಮಾಡಿದರೆ ಸಕಲ ಪಾಪಗಳು ಪರಿಹಾರ ಆಗುವುದರೊಂದಿಗೆ ಸಾಕಷ್ಟು ಪುಣ್ಯವನ್ನು ಸಂಪಾದಿಸಬಹುದು. 

ಅರಳಿ ಮರದ ಕುರಿತು ಕಾರ್ತಿಕ ಮಾಸದ ಕಥೆ ಹೀಗಿದೆ.  ಸಮುದ್ರಮಂಥನ ಕಾಲದಲ್ಲಿ ದೊರಕಿದ ಅನೇಕ ಅನರ್ಘ್ಯ ವಸ್ತುಗಳಲ್ಲಿ ಲಕ್ಷ್ಮೀ ಮತ್ತು ಕೌಸ್ತುಭ ಗಳನ್ನು ಶ್ರೀಹರಿಗೆ ಅರ್ಪಿಸಲಾಯಿತು. ಉಳಿದ ಸಂಪತ್ತುಗಳನ್ನೆಲ್ಲ ದೇವತೆಗಳು ಹಂಚಿಕೊಂಡರು. ಮಹಾವಿಷ್ಣು ಲಕ್ಷ್ಮಿಯನ್ನು ವಿವಾಹವಾದ  ಸಮಯದಲ್ಲಿ ಲಕ್ಷ್ಮಿಯು, ನಾರಾಯಣನಿಗೆ ಹೇಳಿದಳು,  'ಸ್ವಾಮಿ ನನಗಿಂತ ಹಿರಿಯಳಾದ ನಮ್ಮ ಅಕ್ಕ ಜೇಷ್ಠಾದೇವಿ ಇದ್ದಾಳೆ. ಹಿರಿಯಳಾದ ಅವಳಿಗೆ ಮದುವೆಯಾಗುವ ಮೊದಲೇ ಕಿರಿಯಳಾದ ನನಗೆ ಮದುವೆಯಾಯಿತು. ಆದ್ದರಿಂದ ಅವಳಿಗೂ  ಬೇಗ ಮದುವೆ ಮಾಡಬೇಕು.' ಎಂದಳು. ಆಗ ನಾರಾಯಣನು, ಉದ್ಧಾಲಕ ಎಂಬ ಮಹರ್ಷಿಗೆ ಜೇಷ್ಠಾದೇವಿಯ ಜೊತೆ ಮದುವೆ ಮಾಡಿ ಅವನಿಗೆ  ಒಪ್ಪಿಸಿದನು. ಜೇಷ್ಠಾದೇವಿಯು ನೋಡಲು ಸ್ಥೂಲ ಕಾಯ, ಕೆಂಪು ಕಣ್ಣುಗಳು, ಒರಟು ಮುಖ,  ಮೊನಚು ಮಾತು, ಈ ರೀತಿ ಇರುವ ಜೇಷ್ಠಾ ಲಕ್ಷ್ಮಿಯನ್ನು ಮುನಿಯು ತನ್ನ ಆಶ್ರಮಕ್ಕೆ ಕರೆದೊಯ್ದುನು. 

ಉದ್ದಾಲಕ  ಋಷಿಯ ಆಶ್ರಮವು , ಜೇಷ್ಠಾ ದೇವಿಗೆ ಇಷ್ಟ ಆಗಲಿಲ್ಲ, ಅಲ್ಲಿ ನಡೆಯುವ ಹೋಮ, ಹೊಗೆ, ವೇದ ಘೋಷಣೆ ಮಂತ್ರ ಪಠಣಗಳು, ನೋಡೋದಕ್ಕೂ, ಕೇಳುವುದಕ್ಕೂ ಅವಳಿಗೆ ಆಗಲಿಲ್ಲ. ಆಗವಳು, ಹೇ ಮುನಿ, ಈ ಹೋಮ, ಹೊಗೆ, ಮಂತ್ರ, ಅತಿಥಿ  ಸತ್ಕಾರ, ವೇದಗಳನ್ನು  ಸ್ತುತಿಸುತ್ತಿರುವ ಬ್ರಾಹ್ಮಣರು, ಅನ್ಯೋನ್ಯರಾದ  ದಂಪತಿಗಳು, ಪಿತೃಕಾರ್ಯ ನಡೆಯುವ  ಸ್ಥಳ, ದಾನ ಧರ್ಮ ಮಾಡುವ ಜಾಗ, ಗುರು ಪೂಜೆಮಾಡುವ ಸ್ಥಳ, ಮಕ್ಕಳಿಗೆ ಲಾಲಿ ಹಾಡು ತೂಗುವ ಜಾಗ, ನಲಿಯುವ ಮಕ್ಕಳು, ಇರುವಂತಹ ಕಡೆಯಲ್ಲಿ ನನಗೆ ಉಸಿರು ಕಟ್ಟಿ ಹೋಗಿದೆ. ಇನ್ನು ಅರ್ಧ ಕ್ಷಣವು ನಾನು ಇಲ್ಲಿ ಇರಲಾರೆ.ಎಂದಳು.  ಉದ್ದಾಲಕನು ಹಾಗಾದರೆ ನಿನಗೆ ಯಾವ ಸ್ಥಳ ಬೇಕು ಎಂದು ಕೇಳಿದನು. 

ಜೇಷ್ಟಾದೇವಿ ಹೇಳಿದಳು,. ಎಲ್ಲಿ ಹಗಲು ರಾತ್ರಿ ಗಂಡ -ಹೆಂಡತಿ ಜಗಳ ಮಾಡುತ್ತಾರೋ, ಎಲ್ಲಿ ಅತಿಥಿಗಳಿಗೆ ನಿರಾಸೆಯಾಗುವುದೋ, ಯಾವ ಜಾಗದಲ್ಲಿ ವೃದ್ಧರು, ಸ್ನೇಹಿತರು, ಸಜ್ಜನರಿಗೆ ಅವಮಾನ ಆಗುವುದೋ,
ಎಲ್ಲಿ ಬೈಗುಳ, ಅಶ್ಲೀಲ ಶಬ್ದ, ದುರಾಚಾರ ,ದುರ್ನಡತೆ, ಪರಸ್ತ್ರೀ ಅಪಹರಣ,
ಕಿರುಕುಳ, ಪರರ ದ್ರವ್ಯದ ಅಪಹರಣ, ಬ್ರಹ್ಮ ಹತ್ಯೆ, ಬ್ರಾಹ್ಮಣರ ನಿಂದನೆ,ಇರುತ್ತದೆಯೋ ಅವೆಲ್ಲವೂ ನನಗೆ ದಯವಾದ ಸ್ಥಳ ಎಂದಳು. ಇಂತಹ ಹೊಲಸು  ಮಾತುಗಳನ್ನು  ಕೇಳಿದ ಉದ್ಧಾಲಕನು,  ನೊಂದುಕೊಂಡನು.
ಒಂದು ಕ್ಷಣವು  ತನ್ನ ಆಶ್ರಮದಲ್ಲಿ ಇರಿಸಿಕೊಳ್ಳಲು ಅವನ ಮನಸ್ಸು ಒಪ್ಪಲಿಲ್ಲ.
ಕುಟೀರ ದಿಂದ ಆಕೆಯನ್ನು ಕರೆದುಕೊಂಡು ಬೇರೆ ಸ್ಥಳ ಹುಡುಕುತ್ತಾ ಹೊರಟನು. ಎಷ್ಟು ಅಲೆದರು ಅಂಥ ಸ್ಥಳ ಸಿಗಲಿಲ್ಲ. ಹೋಗುತ್ತಿದ್ದ  ರಸ್ತೆ ಬದಿಯಲ್ಲಿದ್ದ ಒಂದು ಅರಳಿ ಮರ ತೋರಿಸಿ, ನೀನು ಸ್ವಲ್ಪ ಹೊತ್ತು ಇಲ್ಲಿ ಕುಳಿತಿರು ನಾನು ಸ್ಥಳವನ್ನು ಹುಡುಕಿ ಬಂದು ಕರೆದೊಯ್ಯುತ್ತೇನೆ ಎಂದು ಹೇಳಿ ಹೊರಟನು. ಗಂಡನ  ಆಜ್ಞೆಯಂತೆ ಜೇಷ್ಠಾ ದೇವಿಯು ಅಲ್ಲೇ ನಿಂತಿದ್ದಳು. ಎಷ್ಟು ದಿನಗಳಾದರೂ ಪತಿ ಉದ್ಧಾನಕ ವಾಪಸ್ಸು ಬರಲಿಲ್ಲ. ಗಂಡ ಬರದೇ ಇದ್ದ ಕಾರಣ ಆಕೆ ಜೋರಾಗಿ ಅಳತೊಡಗಿದಳು. ಅವಳ ದುಃಖವನ್ನರಿತ  ಲಕ್ಷ್ಮೀ-ನಾರಾಯಣರು ಅಲ್ಲಿಗೆ ಬಂದರು. 

ಶ್ರೀಹರಿಯು, ಅಳುತ್ತಿರುವ  ಜೇಷ್ಟಾ ದೇವಿಯನ್ನು ಸಮಾಧಾನಪಡಿಸಿ, ಜೇಷ್ಟಾ ನೋಡು ಈ ಅರಳಿ ಮರದಲ್ಲಿ ನನ್ನ ಸನ್ನಿಧಿ ಇರುತ್ತದೆ. ಆದ್ದರಿಂದ ನೀನು ಈ ವೃಕ್ಷದ ಮೂಲದಲ್ಲಿ ನೆಲೆಸು. ನಿನ್ನನ್ನು ಪ್ರತಿ ವರ್ಷ ಯಾರು ಪೂಜಿಸುತ್ತಾರೋ,
ಅವರಿಗೆ ಲಕ್ಷ್ಮಿ ಒಲಿಯುತ್ತಾಳೆ ಎಂದನು.   ಹೀಗೆ ಶನಿವಾರ ಅರಳೀವೃಕ್ಷವನ್ನು ಯಾರು ಶ್ರದ್ಧಾ ಭಕ್ತಿಗಳಿಂದ ಪೂಜಿಸಿದರೆ ಹೇಗೆ ಲಕ್ಷ್ಮಿ ಕಟಾಕ್ಷವಾಗುತ್ತದೆ ಎಂಬುದು ಭಗವಂತನ ಮಾತು. ಇಂಥ ಪುಣ್ಯಪ್ರದವಾದ ಕಥೆಗಳನ್ನು ಯಾರು ಹೇಳಿ ಕೇಳುತ್ತಾರೋ ಅವರು ಸಕಲ ಪಾಪಗಳನ್ನು ಕಳೆದುಕೊಂಡು  ವಿಷ್ಣು ಸಾಯುವ್ಯ  ಪದವಿಯನ್ನು ಪಡೆಯುವರು ಎಂಬುದು ಮಹಾಮಹಿಮರ ಅಭಿಪ್ರಾಯವಾಗಿದೆ. 

ಪ್ರಾಥ: ಸ್ಮರಾಮಿ ಪರಮೇಶ್ವರ ವಕ್ತ್ರ ಪದ್ಮಂ
ಫಾಲಾಕ್ಷ ಕಿಲ  ಪರಿಶೋಣಿತ  ಪಂಚಬಾಣಂ
ಭಸ್ಮ ತ್ರಿಪುಂಡ ರಚಿತಂ ಪಣಿಕುಂಡಲಾಡ್ಯಂ
ಕುಂದೇಂದು ಚಂದನ ಸುಧಾರಸ ಮಂದಹಾಸಂ! 

ಪ್ರಾಥಸ್ಮರಾಮಿ ಪರಮೇಶ್ವರ ಪುಣ್ಯನಾಮಂ
ಶ್ರೇಯ: ಪ್ರದಂ ಸಕಲ ದುಃಖ ವಿನಾಶ ಹೇತುಂ
ಸಂಸಾರ ತಾಪಶಮನಂ ಕಲಿ  ಕಲ್ಮಷಘ್ನಂ
ಗೋ ಕೋಟಿ ದಾನ ಫಲದಂ ಸ್ಮರೇ ನಿತ್ಯಂ!! 
*** 

No comments:

Post a Comment