SEARCH HERE

Tuesday 1 January 2019

ಪಾಂಚಜನ್ಯ ಶಂಖ panchajanya shankha




ಪ್ರಾಚೀನಕಾಲದಿಂದಲೂಹಿಂದೂಗಳಿಗೆಅತ್ಯಂತಪೂಜನೀಯವಸ್ತುಶಂಖಮಹಾತ್ಮರುರಾಜರುದೇವದೇವತೆಗಳಜನನವನ್ನುಹಿಂದೆಶಂಖನಾದದಮೂಲಕವೇ ಷೋಷಿಸುತ್ತಿದ್ದರು
#ಶಂಖ 
 #ಪ್ರಾಚೀನಕಾಲದಿಂದಲೂಹಿಂದೂಗಳಿಗೆಅತ್ಯಂತಪೂಜನೀಯವಸ್ತುಶಂಖಮಹಾತ್ಮರುರಾಜರುದೇವದೇವತೆಗಳಜನನವನ್ನುಹಿಂದೆಶಂಖನಾದದಮೂಲಕವೇ ಷೋಷಿಸುತ್ತಿದ್ದರು 

#ಮಹರ್ಷಿಗಳುಹಾಗೂಚಕ್ರವರ್ತಿಗಳಆಗಮವನ್ನುಸೂಚಿಸಲೂಶಂಖವನ್ನುಬಳಸಲಾಗುತ್ತಿತ್ತು #ಭಾರತದಕೆಲವುಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು. 
 #ತಂತಿವಾದ್ಯ, #ಶಂಖ, #ನಾದಸ್ವರ, #ಕೊಂಬುಹಾಗೂತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು #ಪಂಚಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು #ಚಕ್ರವರ್ತಿಗಳುಪಂಚಮಹಾಶಬ್ದಎಂಬಬಿರುದುಗಳನ್ನುಗಳಿಸುತ್ತಿದ್ದರು ಕೆಲವು ರಾಜ್ರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ 

#ಹಿಂದೂಪುರಾಣಗಳಪ್ರಕಾರಹದಿನೆಂಟುವಾದ್ಯಗಳಲ್ಲಿಶಂಖವಾದ್ಯವೂಒಂದು ಆದ್ದರಿಮದಲೇ # ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿದೇವರಅಭಿಷೇಕಕ್ಕೆಇದರಮೂಲಕವೇನೀರನ್ನುಸುರಿಯಲಾಗುತ್ತದೆ. 
#ಶಂಖಂ ಚಂದ್ರಾರ್ಕ ದೈವತ್ವಂ 
ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ 
ಏತತ್ ಶಂಖಂ ವ್ರವೂಜಯೇತ್ 
ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ #ಶಂಖದಮಹತ್ವವನ್ನುಸಾರುತ್ತದೆ.
 ವಿಧಗಳು
#ಶಂಖಗಳಲ್ಲಿವಾಲಂಪುರಿ, #ಇದಾಂಪುರಿ, #ಚಾಲಂಕಾಲಮ್ ಹಾಗೂ #ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ.

#ತಮಿಳುನಾಡಿದನಕೆಲವು ದೇವಸ್ಥಾನಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು #ವಿಶೇಷಸಂಧರ್ಭಗಳಲ್ಲಿಈಎಲ್ಲಶಂಖಗಳಲ್ಲೂ ಪವಿತ್ರಗಂಗೆಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ. 
 #ರಾಮಾಯಣ, #ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು #ಶ್ರೀಕೃಷ್ಣನಶಂಖದಹೆಸರುಪಾಂಚಜನ್ಯ, ಅರ್ಜುನನದು ದೇವದತ್ತ, ಭೀಮನದು ಪೌಂಢ್ರ, ಯುಧಿಷ್ಠಿರನದು ಅನಂತವಿಜಯ, ನಕುಲನದು ಸುಘೋಶ, ಸಹದೇವನದು ಮಣೀಪುಷ್ಪಕ - ಹೀಗೆ
 #ಮಹಾವಿಷ್ಣುವಿನಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ #ಶ್ರವಿಷ್ಣುವನ್ನುಶಂಖಚಕ್ರಗದಾಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ #ಕುಬೇರನಬಳಿಯಿದ್ದನವನಿಧಿಗಳಲ್ಲಿಅಕ್ಷಯವಾಗುತ್ತಿದ್ದನಿಧಿಯನ್ನುಶಂಖನಿಧಿಎಂದೆನ್ನುತ್ತಾರೆ. 
 #ಕೆಲವುಪ್ರಮುಖದೇವಾಯಲಗಳಲ್ಲಿ ಅವರದ್ದೇ ಪ್ರತ್ಯೇಕವಾದ ವಾದ್ಯ ವೃಂದವಿದ್ದು #ಅವರಲ್ಲಿಶಂಖವಾದ್ಯಕ್ಕೆ ಪ್ರಮುಖ ಸ್ಥಾನವಿರುತ್ತದೆ ಅಂತಹ ಶಂಖಗಳನ್ನು ವಿಶೇಷರೀತಿಯಲ್ಲಿ ಅಲಂಕರಿಸುತ್ತಾರೆ #ಊದುವಭಾಗಕ್ಕೆಸಾಮಾನ್ಯವಾಗಿಬೆಳ್ಳಿಯತಗಡಿನನವಿಲುಗರಿರೂಪದಕೆತ್ತನೆಕೆಲಸವಿರುತ್ತದೆ ಶಂಖವನ್ನು ಎರಡೂ ಕಡೆಯಿಂದ ಊದಬಹುದು. ಇದು ಬಹಳ ಪುರಾತನ ವಾದ್ಯವೇ ಆದರೂ ಕಲಿಯುವುದು ಬಹಳ ಕಷ್ಟ ಹಾಗೂ #ಕಲಿಯಲುಬಹಳಬಲವಿರಬೇಕೆಂಬಕಾರಣದಿಂದಲೋಏನೋಇದುಜನಪ್ರಿಯವಾಗಿಲ್ಲ. 
 ಇನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಶಂಖ ವಿಜ್ಞಾನಿಗಳ ಗಮನವನ್ನು ಬಹಳವಾಗಿ ಸೆಳೆದಿದೆ   ## #ಶಂಖವನ್ನುಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರವೇಗವುಳ್ಳದ್ದೂ #ಹೆಚ್ಚುಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ಸಿದ್ಧವಾಗಿದೆ ##ಹೀಗೆ ಶಂಖದಿಂದ ಹೊರಬರುವ ಗಾಳಿಯ ಉಷ್ಣಾಂಶವು ನೂರಕ್ಕೆ ಎಂಟ್ರಷ್ಟಿದ್ದರೆ ಅದರ ಪ್ರಭಾವದಿಂದ ಹೊರಗಿನ ಗಾಳಿಯು ಒಂದು ಸೆಕೆಂಡಿಗೆ 8708ಅಡಿ ವೇಗದಿಂದ ಚಲಿಸುವುದೆಂದು ಪ್ರಯೋಗ ಫಲಿತಾಂಶಗಳು ತಿಳಿಸುತ್ತವೆ ತತ್ಪರಿಣಾಮವಾಗಿ ವಾತಾವರಣದಲ್ಲಿನ ರೋಗಜನಕ ಕೀಟಾಣಿಗಳು ನಾಶವಾಗುವುದಲ್ಲದೆ ವಾತಾವರಣದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು ಇಂತಹ ವಾತಾವರಣದಲ್ಲಿನ ವಾಯುವನ್ನು ಉಸಿರಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ  
##ಧನ್ವಂತರೀ ನಿಘಂಟಿನಲ್ಲೂ ಶಂಖದ ಗುಣವರ್ಣನೆ ಹೀಗಿದೆ. 
ಶಂಖ ನಾದು ಕಟು ವಾಕೇ 
ವಿಯೋಷ್ಣ ವ್ರಕೀರ್ತಿತ
ಪರಿಣಾಮ ಜಯೇತ್ ಶೂಲಂ 
ಚಕ್ಷುಷಂ ರಕ್ತಪಿತ್ತಜಿತ 
 ಶಂಖವು ರುಚಿಗೆ ಕಾರವೆನಿಸಿದರೂ ಜೀರ್ಣವಾದ ಮೇಲೆ ಮಧುರವಾಗಿರುವುದು ##ಅದು ಸಮುದ್ರದಲ್ಲಿ ಹುಟ್ಟಿದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ವಿಷ್ಣುವೀರ್ಯವೆಂದು ಹೇಳುತ್ತಾರೆ ಅದು ಹೊಟ್ಟೆ ನೋವು ಕಣ್ಣಿನ ರೋಗ ಹಾಗೂ ರಕ್ತಸ್ರಾವದ ಬೇನೆಯನ್ನು ಗುಣಪಡಿಸುತ್ತದೆ. 
 ##ಶಂಖವನ್ನು ನೀರು ಜೇನುತುಪ್ಪ, ನಿಂಬೇರಸದಲ್ಲಿ ತೇಯ್ದು ತಿಂದರೆ ಅಮ್ಲಪಿತ್ತ ತಲೆತಿರುಗುವಿಕೆ ಮೊಡವೆ ಕುರು ಮುಂತಾದ ದೋಷಗಳ ನಿವಾರಣೆಯಾಗುವುದೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. 
## ವೇಗ ಮಾತುಬಾರದ ಮಕ್ಕಳಿಗೆ ಶಂಖದಲ್ಲಿಟ್ಟ ನೀರನ್ನು ಕುಡುಸುವುದುಂಟು, ##ಸ್ವರಮಂತ್ರ ದೋಷದಿಂದುಂಟಾದ ಮೂಕತನಕ್ಕೆ ರೋಗಿಯು ದಿನಾಲೂ ಕೆಲವು ಸಮಯದವರೆವಿಗೆ ಶಂಖವನ್ನು ಊದಬೇಕು ಇದರಿಂದ ಕಿವಿಡುತನವನ್ನು ಸಹ ನಿವಾರಿಸಬಹುದು ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಮಾತು ಸರಿಯಾಗಿ ಬಾರದ ಮಕ್ಕಳಿಗೆ ಚಿಕ್ಕ ಶಂಖದ ಮಾಲೆಯನ್ನು ತೊಡಿಸುತ್ತಾರೆ. 
 ಹೀಗೆ, ಶಂಖ ಪುರಾಣಗಳ ಕಾಲದಿಂದ ಇಂದಿನ ಕಾಲದವರೆವಿಗೂ ###ಪ್ರಸಿದ್ದವೂ ಉಪಯುಕ್ತವೂ ಪೂಜನೀಯವೂ ಆಗಿರುವ ಕೆಲವೇ ವಸ್ತುಗಳಲ್ಲೊಂದಾಗಿದೆ.,  
##ಕೃಪೆ ವೇದ ದರ್ಮ ಪರಿಷತ್.
********

ಪಾಂಚಜನ್ಯ ಎಂದರೇನು ?

ಬಲರಾಮ, ಕೃಷ್ಣ ಕುಚೇಲರ, ವಿದ್ಯಾಗುರುಗಳು..ಸಾಂದೀಪನಿಅವಂತಿ ಎಂಬುವುದು ಈ ಗುರುಗಳ.ನಿವಾಸ .ಸ್ಥಾನ. ಗಗನ ಋಷಯ ಸಲಹೆಯಂತೆ ವಸುದೇವನು, ಬಲರಾಮ, ಕೃಷ್ಣರನ್ನು ಆಶ್ರಮಕ್ಕೆ ಕರೆತಂದು,ಸಾಂದೀಪನಿ ಗುರುಗಳಿಗೆ ಒಪ್ಪಿಸಿದನು. ಕೆಲವು ಕಾಲದ ನಂತರ ಸಕಲ ವಿದ್ಯಾಪಾರಂಗತರಾದರು.... ಗುರುಗಳೆ.. ನಿಮಗೆ ಗುರುದಕ್ಷಿಣೆಯಾಗಿ ಏನು ಬೇಕೆಂದು ಕೇಳಲು. ಆಗ ಗುರುಗಳು ತಮ್ಮ ಜೀವನದಲ್ಲಿ ನಡೆದ ದುರಂತ ಘಟನೆಯನ್ನು ವಿವರಿಸಿದರು.

ತಮಗೆ ಒಬ್ಬ ಮಗನಿದ್ದ ಅವನು ಪ್ರಭಾಸ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದಾಗ ಒಬ್ಬ ರಾಕ್ಷಸ ನೀರಿನೊಳಗೆ ಎಳೆದುಕೊಂಡು ಹೋದ ಅವನು ನನ್ನ ಮಗನನ್ನು ಕೊಂದು ಹಾಕಿರ ಬಹುದು ಎಂದು ಘಟನೆ ವಿವರಿಸಿದ್ದರು ನಂತರ.ಸಾಂದೀಪನಿ ಗುರುಗಳು ಹೇಳಿದರು ಮಗನನ್ನು ಬದುಕಿಸಿ ಕರದುಕೊಂಡು ಬಂದರೆ ಅದೇ ನೀವು ನನಗೆ ಕೊಡುವ ಗುರುದಕ್ಷಿಣೆ ಎಂದು ಹೇಳಿದರು. ಬಲರಾಮ, ಕೃಷರು ಗುರುಗಳ ಮಗನನ್ನು ಬದುಕಿಸಿ ತರುವ ಪ್ರತಿಜ್ಞೆ ಮಾಡಿ. ಇಬ್ಬರೂ ವರುಣನ ಬಳಿಗೆ ಹೋದರು. ವರುಣನು ಹೇಳಿದ ಪಂಚಜನ, ಎಂಬ ರಾಕ್ಷಸನು ಶಂಖದಾಕಾರದಲ್ಲಿ ನೀರಿನಲ್ಲಿ ಓಡಾಡುತ್ತಿದ್ದಾನೆಂದು ಅವನೆ ಈ ಕೆಲಸ ಮಾಡಿದ್ದಾನೆಂದು ಹೇಳಿದನು. ಕೊಡಲೇ ಈ  ಇಬ್ಬರು ನೀರನ್ನು ಹೊಕ್ಕು ಆ ಪಂಚಜನ, ಶಂಖದಾಕಾರದ ರಾಕ್ಷಸನನ್ನು ಹಿಡಿದು ಅವನ ದೇಹವನ್ನೆಲ್ಲ ಶೋಧಿಸಿದರು. ಚಿಪ್ಪು ಮಾತ್ರ ಉಳಿಯಿತು, ದೇಹ ಸಿಕ್ಕಲಿಲ್ಲ...

ಆಗ ಕೃಷ್ಣನು ಶಂಖವನ್ನೇ ಜೋರಾಗಿ ಊದುತ್ತ ಯಮನ, ಬಳಿಗೆ ಹೋದರು ತಾವು ಬಂದಿರುವ ಉದ್ದೇಶವನ್ನು ತಿಳಿಸಿದರು. ಯಮನು ಆಹುಡುಗನನ್ನು ಹುಡುಕಿ ಕೊಟ್ಟ ಬಲರಾಮ, ಕೃಷ್ಣರು ಗುರುಗಳಗೆ ಅವರ ಮಗನನ್ನು ಗುರುದಕ್ಷಿಣೆಯಾಗಿ ಕೊಟ್ಟು ತಾವು ಮಧುರೆಗೆ ಹಿಂದಿರುಗಿದರು.. ಆ ಶಂಖ, ಪಾಂಚಜನ್ಯ ಎಂಬ ಹೆಸರಿಂದ ಪ್ರಸಿದ್ಧ ಶಂಖವಾಗಿ ಕೃಷ್ಣನ ಬಳಿಯೆ ಉಳಿಯಿತು.

ಇದುವೆ ,ಪಾಂಚಜನ್ಯದ ಕಥೆ.
*************


ಶಂಖ ನಾದ 

ಮನೆಯಲ್ಲಿ ಶಂಖ ಇದ್ದರೆ ಸಮೃದ್ಧಿ ,ಸಂತೋಷ ನೆಲೆಸುತ್ತದೆ 
ಎನ್ನುವ ನಂಬಿಕೆ ಇದೆ. ಸಮುದ್ರದ ಯಾವುದಾದರೊಂದು ವಸ್ತುವನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ .

ಶಂಖದೊಯು ಚಂದ್ರದೈವತ್ಯಂ ಕುಕ್ಷೌ ವರುಣದೇವತಾ ಪೃಷ್ಠೆ ಪ್ರಜಾಪತಿಶ್ಚೈವ ಅಗ್ರೇ ಗಂಗಾ ಸರಸ್ವತಿ  
ತ್ವಂ ಪುರ ಸಾಗರೋತ್ಪನ್ನ ವಿಷ್ಷುನಾ ವಿಧುತಃ ಕರೆ  
ಅಗ್ರತಃ ಸರ್ವದೇವನಂ ಪಾಂಚಜನ್ಯ ನಮೋಸ್ತುತೇ 

ಚಂದ್ರ ಶಂಖದ ತಳದಲ್ಲಿ , ವರುಣ ಕುಕ್ಷಿಯಲ್ಲಿ ,ಪ್ರಜಾಪತಿ ಶಂಖದ ಹಿಂದೆ, ಗಂಗಾ ಸರಸ್ವತಿ ಶಂಖದ ಬಾಯಿಯ ಬಳಿ,
ವಿಷ್ಣುವಿನ ಕೈಯಲ್ಲಿ ನಲಿಯುವ ನೀನು  ಸಮುದ್ರದಿಂದ ಹುಟ್ಟಿಕೊಂಡೆ ಅದ್ದರಿಂದ ನಿನ್ನನ್ನು ಆರಾಧಿಸುವೆ ಎನ್ನುವ ಅರ್ಥ ಹೊಂದಿದೆ.  

ಶಂಖನಾದ ಮಾಡುದರಿಂದ ದುಷ್ಟ ಶಕ್ತಿಗಳು ದೂರವಾಗುತ್ತದೆ ಹಾಗೆಯೇ ಸಕರಾತ್ಮಕ ಭಾವನೆಗಳು ಮೂಡುತ್ತದೆ, ಯುದ್ದರಂಗದಲ್ಲಿ ಶಂಖನಾದವನ್ನು ಮಾಡಲಾಗುತ್ತಿತ್ತು.. ಮನೆಯಲ್ಲಿ ಅಷ್ಟ ದಿಕ್ಕುಗಳಿಗೆ ಕೇಳುವಂತೆ ಶಂಖನಾದ ಮಾಡಬೇಕು ದುಷ್ಟ ಶಕ್ತಿಗಳ ಎದೆಯೊಡೆಯುವ ಶಕ್ತಿ ಈ ನಾದಕ್ಕೆ ಇದೆ ಎಂದು ನಂಬಲಾಗಿದೆ. 

ವೈದಿಕ ಶಾಸ್ತಗಳ ಪ್ರಕಾರ ಶಂಖದಲ್ಲಿ ಎರಡು ವಿಧ 
೧) ಊದಲು ಬಳಸುವಂತದ್ದು ೨)ಪೂಜೆಗೆ ಬಳಸುವಂತದ್ದು 
ಯಾರು ನಿತ್ಯ ಶಂಖ ಊದುತ್ತಾರೋ ಅವರಿಗೆ ಹೃದ್ರೋಗಗಳು ಹತ್ತಿರ ಸುಳಿಯುವುದಿಲ್ಲ, ಅರೋಗ್ಯದ ದೃಷ್ಟಿಯಿಂದ ಒಳ್ಳೆಯನ್ನು ಮಾಡುತ್ತದೆ . 

ಪೂಜಿಸುವ ಶಂಖಕ್ಕೆ ಪೂಜೆಗೆ ಮೊದಲು ಪವಿತ್ರ ನದಿ ನೀರಿನಿಂದ ಶುದ್ಧೀಕರಿಸಿ ಪೂಜೆ ಮಾಡಬೇಕು. ಹಾಗೆಯೇ
ಊದುವ ಶಂಖ ಇದನ್ನು ಹಳದಿ ಬಟ್ಟೆಯ ಮೇಲಿಟ್ಟುಕೊಂಡರೆ ಉತ್ತಮ.   

ಸುತ್ತುವಿಕೆಯ ದಿಕ್ಕನ್ನು ಆಧರಿಸಿ ಎರಡು ಬಗೆಯ ಶಂಖಗಳಿವೆ: ದಕ್ಷಿಣಾವರ್ತಿ ಶಂಖ ಮತ್ತು ವಾಮಾವರ್ತಿ ಶಂಖ. ದಕ್ಷಿಣಾವರ್ತಿ ಶಂಖವು ಈ ಪ್ರಜಾತಿಯ ಬಹಳ ಅಪರೂಪವಾದ ಎಡಚ ರೂಪವಾಗಿದೆ. ಚಿಪ್ಪಿನ ಸುತ್ತುಗಳು ಅಥವಾ ಸುರುಳಿಗಳು ಅಪ್ರದಕ್ಷಿಣವಾಗಿ ವಿಸ್ತರಿಸುತ್ತವೆ. ದಕ್ಷಿಣಾವರ್ತ ಶಂಖವು ವಿಷ್ಣುವನ್ನು ಸಂಕೇತಿಸುತ್ತದೆ.

ಶಂಖದಿಂದ ಹೊರಬರುವ ಇಂಪಾದ ನಾದಕ್ಕೆ ಹಾಗೂ ಮಂಗಳಕಲ ಧ್ವನಿಗೆ ಶಂಖನಾದ ಎಂದು ಹೆಸರು 
ಶಂಖದಲ್ಲಿ ಬಲಮುರಿ ಹಾಗೂ ಎಡಮುರಿ ಎಂಬ ಎರಡು ವಿಧಗಳಿದ್ದರೂ  ಇನ್ನಷ್ಟು ವಿಭಿನ್ನ ರೀತಿಯ ಶಂಖಗಳಿವೆ 
ಅವುಗಳೆಂದರೆ 
ಗಣೇಶ ಶಂಖ 
ದಕ್ಷಿಣಾವರ್ತಿ ಶಂಖ/ಬಲಮುರಿ ಶಂಖ
ವಾಮಾವರ್ತಿ ಶಂಖ 
ಕವಡೆ ಶಂಖ 
ಗೋಮುಖ ಶಂಖ 
ಶಂಖಿನಿ ಶಂಖ 
ಹೀರಾ ಶಂಖ 

ಮನೆಯಲ್ಲಿ ಕನಿಷ್ಟ ಎರಡು ಶಂಖಗಳಿರಬೇಕು 
ಹಾಗೂ ಎರಡೂ ಶಂಖಗಳನ್ನು ಬೇರೆ ಬೇರೆಯಾಗಿ ಇಡಬೇಕು 
ಶಂಖವನ್ನು ಲಕ್ಷ್ಮೀಗೆ ಹೋಲಿಸುತ್ತಾರೆ ಅದ್ದರಿಂದ ಉಳಿದ ದೇವರಿಗೆ ಮಾಡುವಂತೆ ಶಂಖಕ್ಕೂ ಪೂಜೆ ಮಾಡಬೇಕು 
ಶಂಖವನ್ನು ಭೂಮಿಯ ಮೇಲೆ ಇಡಬಾರದು. ಶಂಖವನ್ನೂ ಯಾವಾಗಲೂ ನೀರಿನಲ್ಲಿ ಇಡಬಾರದು , 
ಊದಲು ಬಳಸುವ ಶಂಖವನ್ನು ತೀರ್ಥಕ್ಕೆ ಬಳಸುವಂತಿಲ್ಲ 
ಅದೇ ರೀತಿ ಯಾವುದೇ ಧಾರ್ಮಿಕ ಮಂತ್ರ ಪಠಿಸುವಲ್ಲಿ ಬಳಸುವಂತಿಲ್ಲ. ಶಂಖವನ್ನು ಹಳದಿ ವಸ್ತ್ರದ ಮೇಲಿಡಬೇಕು. 


ಶಂಖವನ್ನು ಬೆಳಿಗ್ಗೆ ಹಾಗೂ ಸಂಜೆ ಎರಡು ಹೊತ್ತು ಪೂಜೆಯಲ್ಲಿ ಊದುವುದರಿಂದ ಮನೆಯಲ್ಲಿ ಸಕರಾತ್ಮಕ ವಾತಾವರಣ ವೃದ್ಧಿಯಾಗುತ್ತದೆ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಒಳಿತು ಉಂಟಾಗುತ್ತದೆ.
***

ಶಂಖದ ನೀರನ್ನು ಸಿಂಪಡಿಸುವುದೇಕೆ..? ಶಂಖವನ್ನು ಮನೆಯಲ್ಲಿಟ್ಟರೆ ಏನಾಗುತ್ತೆ..?

ಧಾರ್ಮಿಕ ಶುಭ ಸಮಾರಂಭಗಳಲ್ಲಿ ತಪ್ಪದೇ ಬಳಸುವ ಶಂಖದ ಮಹತ್ವವೇನು..? ಇದರ ನೀರನ್ನು ಸಿಂಪಡಿಸುವುದರಿಂದಾಗುವ ಪ್ರಯೋಜನವೇನು..? ಇಲ್ಲಿದೆ ಶಂಖದ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ.

ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಸ್ಥಾನ - ಮಾನವನ್ನು ನೀಡಲಾಗಿದೆ. ಪೂಜೆಯಲ್ಲಿ, ಧಾರ್ಮಿಕ ಆಚರಣೆಯಲ್ಲಿ, ಹೋಮ - ಹವನಗಳಲ್ಲಿ, ತಾಂತ್ರಿಕ ಚಟುವಟಿಕೆಗಳಲ್ಲಿ ಮತ್ತು ವಿಜಯದಂತಹ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲೂ ಶಂಖವನ್ನು ಬಳಸಲಾಗುತ್ತದೆ. ಶಂಖವನ್ನು ಹಿಂದೂ ಧರ್ಮದಲ್ಲಿ ಭಗವಾನ್‌ ವಿಷ್ಣು ಮತ್ತು ದೇವಿ ಲಕ್ಷ್ಮಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಂಖವು ಅತ್ಯಂತ ಪವಿತ್ರವಾದ ವಸ್ತುವಾಗಿದೆ.

ಧಾರ್ಮಿಕ ಕಾರ್ಯಗಳಲ್ಲಿ ಶಂಖವನ್ನು ಊದುವುದು ಅಥವಾ ನುಡಿಸುವುದು ಒಂದು ಸಂಪ್ರದಾಯವಾಗಿದೆ. ದೇವಾಲಯಗಳಲ್ಲಿ ಆರತಿಯ ನಂತರ ಶಂಖದಿಂದ ನೀರನ್ನು ಭಕ್ತರ ಮೇಲೆ ಚಿಮುಕಿಸಲಾಗುತ್ತದೆ. ಶಂಖದಿಂದ ನೀರನ್ನು ಏಕೆ ಚಿಮುಕಿಸಲಾಗುತ್ತದೆ..? ದೇವಾಲಯಗಳಲ್ಲಿ ಶಂಖದಿಂದ ನೀರನ್ನು ಚಿಮುಕಿಸುವಾಗ ಎಂದಾದರೂ ನೀವು ಅದರ ಕಾರಣವನ್ನು ತಿಳಿಯಲು ಇಚ್ಛಿಸಿದ್ದೀರಾ..?

1) ಶಂಖದ ನೀರನ್ನು ಚಿಮುಕಿಸುವುದರ ಪ್ರಯೋಜನವೇನು..?

ಬ್ರಹ್ಮವೈವರ್ತ ಪುರಾಣದ ಪ್ರಕಾರ, ಶಂಖದಲ್ಲಿ ನೀರನ್ನು ತುಂಬಿಸಿ ಅದಕ್ಕೆ ಶ್ರೀಗಂಧವನ್ನು ಸೇರಿಸಿ ಸಿಂಪಡಿಸುವುದರಿಂದ ನಮ್ಮ ಸುತ್ತಲಿನ ವಾತಾವರಣವು ಶುದ್ಧ ಮತ್ತು ಪಾವಿತ್ರತೆಯಿಂದ ತುಂಬಿರುತ್ತದೆ. ಯಾವಾಗಲೂ ಪೂಜಾ ಸ್ಥಳದಲ್ಲಿ ಶಂಖದಲ್ಲಿ ನೀರನ್ನು ಇಡಬೇಕು ಇದರಿಂದ ಪೂಜಾ ಸ್ಥಳವು ಪವಿತ್ರವಾಗಿರುತ್ತದೆ. ಶಂಖದ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯು ದೂರಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಯಾಗುತ್ತದೆ. ಭಗವಾನ್‌ ವಿಷ್ಣು ಇದನ್ನು ಕೈಯಲ್ಲಿ ಹಿಡಿದಿರುವುದರಿಂದ ಇದು ಶುಭಸೂಚಕವೆಂಬ ನಂಬಿಕೆಯಿದೆ.

2) ಶಂಖದಿಂದ ಹೊರಹೊಮ್ಮುವ ಶಬ್ಧದ ಪ್ರಯೋಜನವೇನು..?

ನೀರಿನೊಂದಿಗೆ ಶಂಖದಲ್ಲಿದ್ದ ಸಾತ್ವಿಕ ಶಕ್ತಿಯು ಶಂಖವನ್ನು ಊದಿದಾಗ ಅದರ ಶಬ್ಧದಿಂದ ಹೊರಹೊಮ್ಮುತ್ತದೆ. ಯಾವ ಮನೆಯಲ್ಲಿ ಶಂಖವನ್ನು ಊದಲಾಗುತ್ತದೆಯೋ ಆ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲವೆನ್ನುವ ನಂಬಿಕೆಯಿದೆ. ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆಗಳು ದೂರಾಗುತ್ತದೆ. ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ.

3) ಶಂಖದಿಂದಾಗುವ ವಾಸ್ತು ಪ್ರಯೋಜನವೇನು..?

ವಾಸ್ತುಶಾಸ್ತ್ರ ಮತ್ತು ಫೆಂಗ್‌ಶೂಯಿ ಕೂಡ ಮನೆಯಲ್ಲಿ ಶಂಖ ಇಡುವುದರಿಂದಾಗುವ ಪ್ರಯೋಜನವನ್ನು ವಿವರಿಸುತ್ತದೆ. ಶಂಖವನ್ನು ಮನೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಇಡುವುದರಿಂದ ಎಲ್ಲಾ ಕಾರ್ಯದಲ್ಲಿ, ಜೀವನದಲ್ಲಿ, ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಒಂದು ವೇಳೆ ನೀವು ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಇಚ್ಛಿಸಿದರೆ ಮನೆಯ ದಕ್ಷಿಣ ದಿಕ್ಕಿನತ್ತ ಶಂಖ ಚಿಪ್ಪನ್ನು ಇಡಿ. ಶಂಖವನ್ನು ಮನೆಯಲ್ಲಿರಿಸುವುದರಿಂದ ಆರ್ಥಿಕ ಲಾಭವಾಗುತ್ತದೆಯೆಂದು ಮನಬಂದತೆ ಶಂಖವನ್ನು ಇಡಬಾರದು. ಮನೆಯಲ್ಲಿ ಶಂಖವನ್ನು ಕೇವಲ ಪೂಜಾ ಸ್ಥಳದಲ್ಲಿ ಅಥವಾ ಮುಖ್ಯ ಜಗುಲಿಯಲ್ಲಿ ಇಡಬೇಕು. ಮಕ್ಕಳ ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಯಶಸ್ಸಿಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಶಂಖವನ್ನು ಇಡಬೇಕು.

4) ಶಂಖ ಲಕ್ಷ್ಮಿ ದೇವಿಯ ಸಹೋದರ:

ಸಮುದ್ರ ಮಂಥನ ಸಮಯದಲ್ಲಿ ಹೊರಹೊಮ್ಮಿದ 14 ವಿವಿಧ ರತ್ನಗಳಲ್ಲಿ ಶಂಖವೂ ಕೂಡ ಒಂದು. ಶಂಖವನ್ನು ತಾಯಿ ಲಕ್ಷ್ಮಿಯ ಸಹೋದರನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವ ಸ್ಥಳದಲ್ಲಿ ಶಂಖವನ್ನು ಇಡಲಾಗುತ್ತದೆಯೋ ಆ ಸ್ಥಳದಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆನ್ನುವ ನಂಬಿಕೆಯಿದೆ. ಶಂಖವು ಸ್ವರ್ಗದಲ್ಲಿನ ಅಷ್ಟಸಿದ್ಧಿ ಮತ್ತು ನವನಿಧಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

5) ಶಂಖ ಮತ್ತು ವಿಜ್ಞಾನ:

ವಿಜ್ಞಾನವು ಹೇಳುವ ಪ್ರಕಾರ, ಶಂಖದಲ್ಲಿ ನೀರನ್ನು ಎಷ್ಟೇ ದಿನಗಳವರೆಗೆ ಶೇಖರಿಸಿಟ್ಟರು ಅದು ಹಾಳಾಗುವುದಿಲ್ಲ ಮತ್ತು ಅಶುದ್ಧವಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಶಂಖದಲ್ಲಿ ಶೇಖರಣೆಗೊಂಡ ನೀರನ್ನು ಅಂದರೆ ಶಂಖದಲ್ಲಿಟ್ಟ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಬ್ಯಾಕ್ಟೇರಿಯಾ ಸೇರಿದಂತೆ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತದೆ. ಶಂಖದಲ್ಲಿನ ಗಂಧಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶವು ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಶಂಖದ ನೀರನ್ನು ಸಿಂಪಡಿಸುವುದರಿಂದ ಮತ್ತು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಶಂಖದ ನೀರನ್ನು ಎಂದಿಗೂ ಎಸೆಯಬೇಡಿ. ಒಂದು ವೇಳೆ ನೀವು ಶಂಖದಲ್ಲಿ ನೀರನ್ನು ಶೇಖರಿಸಿದ್ದರೆ ಅದನ್ನು ಮನೆಗೆ ಸಿಂಪಡಿಸಿ, ಮನೆಯ ಸದಸ್ಯರಿಗೆ ಸಂಪಡಿಸಿ. ಇಲ್ಲವೇ, ನಿಮ್ಮ ಮನೆಯಲ್ಲಿ ಶಂಖವಿದ್ದು ಅದನ್ನು ಖಾಲಿಯಿಟ್ಟಿದ್ದರೆ ಆ ಶಂಖಕ್ಕೆ ಇಂದಿನಿಂದಲೇ ನೀರನ್ನು ಹಾಕಿಡುವ ರೂಢಿ ಬೆಳೆಸಿಕೊಳ್ಳಿ.
****
*ಪ್ರತಿನಿತ್ಯ ಶಂಖ ಪೂಜೆ ಮಾಡಿದರೆ ಯಶಸ್ಸು ಖಂಡಿತ..! ಗ್ರಹ ದೋಷವೂ ಬಾರದು*

ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಧರ್ಮದ ಪ್ರತಿ ಮನೆ ಪೂಜಾ ಸ್ಥಳದಲ್ಲೂ ಶಂಖವನ್ನು ಇಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಶಂಖವನ್ನು ಭಗವಾನ್‌ ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಂಖ ಚಿಪ್ಪಿಗೂ ವಿಶೇಷ ಪ್ರಾಮುಖ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶಂಖವನ್ನು ಇಟ್ಟುಕೊಂಡು ಅದನ್ನು ಪ್ರತಿದಿನ ಊದುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂವಹನ ಹೆಚ್ಚಾಗುತ್ತದೆ. ವಿಜ್ಞಾನದಲ್ಲಿ, ಶಂಖದ ಧ್ವನಿಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ದೈನಂದಿನ ಪೂಜೆಯ ನಂತರ ಶಂಖವನ್ನು ಊದುವುದರಿಂದ ಸುತ್ತಮುತ್ತಲಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಮತ್ತು ನಿಮ್ಮ ಗಂಟಲಿಗೆ ವ್ಯಾಯಾಮ ಸಿಗುತ್ತದೆ ಎನ್ನಲಾಗಿದೆ.       ‌                                                                                                                                                                                              ಮನೆಯಲ್ಲಿ ಶಂಖದ ಕೆಲವು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಗ್ರಹಗಳನ್ನು ಶಾಂತವಾಗಿಡಬಹುದು. ಗ್ರಹಗಳ ಶಾಂತಿಗೆ ಶಂಖವನ್ನು ಹೇಗೆ ಉಪಯೋಗಿಸಬೇಕು..?
                                                         *ಸೋಮವಾರ ಶಂಖದ ಪ್ರಯೋಜನ*

ಸೋಮವಾರವೆಂದರೆ ಶಿವನಿಗೆ ಬಹಳ ಪ್ರೀತಿ. ಸೋಮವಾರವು ಈಶ್ವರನ ದಿನ. ಸೋಮವಾರದ ದಿನದಂದು ನಾವು ಶಿವನ ಆರಾಧನೆಗೆ ಸಂಬಂಧಿಸಿದ ಪ್ರಮುಖ ಕ್ರಮಗಳನ್ನು ಹೇಳಲಿದ್ದೇವೆ. ಸೋಮವಾರ ಶಂಖದಲ್ಲಿ ಹಾಲನ್ನು ತುಂಬಿಸಿ ಅದನ್ನು ಶಿವನಿಗೆ ಅರ್ಪಿಸುವ ಮೂಲಕ, ಚಂದ್ರನು ಬಲಶಾಲಿಯಾಗುತ್ತಾನೆ ಮತ್ತು ನೀವು ಅದರ ಅನುಕೂಲಕರ ಫಲಗಳನ್ನು ಪಡೆಯುತ್ತೀರಿ. ಶಿವನ ಕೃಪೆಯನ್ನು ಸಹ ನೀವು ಪಡೆದುಕೊಳ್ಳುವಿರಿ.

​ *ಮಂಗಳವಾರ ಶಂಖದ ಪ್ರಯೋಜನ*

ಮಂಗಳವಾರ ಶಂಖ ಪರಿಹಾರವನ್ನು ತೆಗೆದುಕೊಳ್ಳುವ ಮೂಲಕ, ಮಂಗಳನ ದುಷ್ಟ ಪರಿಣಾಮಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ನೀವು ಭಗವಾನ್‌ ಹನುಮಂತನ ಆಶೀರ್ವಾದವನ್ನು ಕೂಡ ಪಡೆಯುತ್ತೀರಿ. ಮಂಗಳವಾರದಂದು ಸುಂದರಕಾಂಡವನ್ನು ಪಠಿಸಿ, ಶಂಖವನ್ನು ಊದುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯುವುದರೊಂದಿಗೆ ಮಂಗಳ ಗ್ರಹವನ್ನು ಕುಂಡಲಿಯಲ್ಲಿ ಬಲಪಡಿಸಿಕೊಳ್ಳಬಹುದು.

 *ಬುಧವಾರ ಶಂಖದ ಪ್ರಯೋಜನ*

ಬುಧವಾರದಂದು ಶಂಖವನ್ನು ಪೂಜಿಸುವುದು ಬುಧ ಗ್ರಹವನ್ನು ಸಮಾಧಾನಪಡಿಸಲು ಉಪಯುಕ್ತವೆಂದು ಪರಿಗಣಿಸಲಾಗಿದೆ. ಬುಧವಾರದಂದು ಶಂಖದಿಂದ ಶಾಲಿಗ್ರಾಮವನ್ನು ಪವಿತ್ರೀಕರಣಗೊಳಿಸುವುದರಿಂದ ಅವರ ಆಶೀರ್ವಾದ ಸಿಗುತ್ತದೆ. ಇದಕ್ಕಾಗಿ, ಶಂಖದಲ್ಲಿ ನೀರು ಮತ್ತು ತುಳಸಿಯನ್ನು ಹಾಕಿ ಆ ನೀರಿನಿಂದ ಶಾಲಿಗ್ರಾಮವನ್ನು ಅಭಿಷೇಕ ಮಾಡಬೇಕು. ಬುಧ ಗ್ರಹದ ಶುಭ ಪರಿಣಾಮಗಳಿಂದಾಗಿ, ಜನರು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬುಧವಾರ ದಿನವನ್ನು ಗಣೇಶನಿಗೂ ಸಮರ್ಪಿಸಲಾಗಿದೆ. ಗಣಪತಿ ಕೂಡ ಮನೆಯಲ್ಲಿ ಶಂಖ ಶಬ್ಧವನ್ನು ಕೇಳಿ ಸಂತೋಷಪಡುತ್ತಾನೆ.

​ *ಗುರುವಾರ ಶಂಖದ ಪ್ರಯೋಜನ*

ಗುರುವಾರದಂದು ಮಾಡುವ ಪೂಜೆಯಲ್ಲಿ ಶಂಖವನ್ನು ಬಳಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಗುರುವಾರದಂದು ಶಂಖದಲ್ಲಿ ನೀರನ್ನು ತುಂಬಿ, ಆ ನೀರಿನಿಂದ ಭಗವಾನ್‌ ವಿಷ್ಣುವಿಗೆ ಅಭಿಷೇಕ ಮಾಡಿದರೆ ನೀವು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತೀರಿ ಮತ್ತು ಗುರು ಬೃಹಸ್ಪತಿ ಕೂಡ ನಿಮ್ಮ ಜೀವನದಲ್ಲಿ ಬಲವಾಗಿರುತ್ತಾನೆ. ಗುರುವಾರ, ಶಂಖಕ್ಕೆ ಕೇಸರಿ ತಿಲಕವನ್ನಿಟ್ಟು ಪೂಜಿಸಿ. ಇದನ್ನು ಮಾಡುವುದರಿಂದ ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

​ *ಶುಕ್ರವಾರ ಶಂಖದ ಪ್ರಯೋಜನ*

ಶಂಖವನ್ನು ಲಕ್ಷ್ಮೀ ದೇವಿಯ ಪ್ರಿಯವಾದ ವಸ್ತುವೆಂದು ಪರಿಗಣಿಸಲಾಗುತ್ತದೆ ಮತ್ತು ಶುಕ್ರವಾರವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಶಂಖವನ್ನು ಲಕ್ಷ್ಮೀ ದೇವಿಯ ಸಹಜಾತ ಎಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಸಂಜೆ ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ತಪ್ಪದೇ ಶಂಖವನ್ನು ಊದಬೇಕು. ಇದರೊಂದಿಗೆ ಶುಕ್ರವಾರದಂದು ಶಂಖವನ್ನು ಬಿಳಿ ಬಣ್ಣದ ಬಟ್ಟೆಯಿಂದ ಸುತ್ತಿಟ್ಟರೆ ಶುಕ್ರ ಗ್ರಹವು ಬಲಗೊಳ್ಳುತ್ತದೆ.

 *ಶನಿವಾರ ಶಂಖದ ಪ್ರಯೋಜನ*

ಶನಿವಾರದ ದಿನ ಪೂಜೆಯಲ್ಲಿ ಶಂಖವನ್ನು ಬಳಸುವುದರ ಮೂಲಕ ಶನೈಶ್ವರ ಸ್ವಾಮಿಯನ್ನು ಕೂಡ ಸಂತೋಷಪಡಿಸಬಹುದು. ಶನಿವಾರದಂದು ಶಂಖದಲ್ಲಿ ನೀರು ಮತ್ತು ತುಳಸಿ ತುಂಬಿಸಿ ಶ್ರೀನಿವಾಸ ದೇವರಿಗೆ ಅಭಿಷೇಕ  ಮಾಡುವುದರಿಂದ ಶ್ರೀ ವೆಂಕಟೇಶ್ವರ ದೇವನು ನಿಮ್ಮ ಮೇಲೆ ಸಂತುಷ್ಟಗೊಳ್ಳುತ್ತಾನೆ. ಇದು ನಿಮ್ಮ ದಾರಿದ್ರ್ಯ ನಿವಾರಣೆ ಮಾಡುತ್ತದೆ. ಶನಿವಾರದ ದಿನ ಸ್ವಾಮಿ ಅಯ್ಯಪ್ಪ ಮತ್ತು ಪವಮಾನ ದೇವರ ಪೂಜೆಯಲ್ಲಿ ಸಹ ಶಂಖವನ್ನು ಬಳಸಬಹುದಾಗಿದೆ.

​ *ಭಾನುವಾರ ಶಂಖದ ಪ್ರಯೋಜನ*

ಶಂಖವನ್ನು ಬಳಸುವುದರ ಮೂಲಕ ಸೂರ್ಯದೇವನನ್ನು ಕೂಡ ಸಂತೋಷಪಡಿಸಬಹುದು. ಭಾನುವಾರದಂದು ಶಂಖದ ಚಿಪ್ಪಿನಲ್ಲಿ ನೀರನ್ನು ತುಂಬಿಸಿ ಸೂರ್ಯದೇವನಿಗೆ ಮುಂಜಾನೆ ಆರ್ಘ್ಯವನ್ನು ಅರ್ಪಿಸಿ. ಇದನ್ನು ಮಾಡುವುದರಿಂದ ಸೂರ್ಯದೇವನು ನಿಮ್ಮ ಮೇಲೆ ಸಂತೋಷಗೊಳ್ಳುತ್ತಾನೆ ಮತ್ತು ನೀವು ಆರೋಗ್ಯಕರ ದೇಹವನ್ನು ಪಡೆಯುತ್ತೀರಿ.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
***



No comments:

Post a Comment