i
108 ಉಪನಿಷತ್ತು - ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ.
ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ ಸಿದ್ಧಾಂತ” ಎಂಬ ಅರ್ಥಗಳನ್ನು ಕೊಟ್ಟಿವೆ.
ಬಹುತೇಕವಾಗಿ ಉಪನಿಷತ್ತುಗಳ ಸಂಖ್ಯೆ 108 ಎಂದು ಹೇಳಲಾಗುತ್ತದೆ. ಅವುಗಳಲ್ಲಿ; ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ – ಇವು 13 ಪ್ರಧಾನ ಉಪನಿಷತ್ತುಗಳು.
ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಯಾವ ಉಪನಿಷತ್ತು ಯಾವ ವೇದದ ಭಾಗವಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
info from wikipedia---> ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) ಎಂಬುದು ಪದದ ಮೂಲಾರ್ಥ. ಏಕಾಂತದಲ್ಲಿ ನೀಡಿದ ರಹಸ್ಯವಾದ ಉಪದೇಶ ಎಂದೂ ಅರ್ಥವಿದೆ.
ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಉಪನಿಷತ್‌ಗಳು (ದೇವನಾಗರಿ: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) ಎಂದು ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ. ಇವುಗಳು ವೇದಾಂತದ ಮೂಲ ಉಪದೇಶಗಳನ್ನು ಹೊಂದಿರುವ ಹಿಂದು ಧರ್ಮಗ್ರಂಥಗಳಾಗಿವೆ .[೧]ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು ಶೃತಿ ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು ಸಂಸ್ಕೃತ ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ ಬೃಹದಾರಣ್ಯಕ ಮತ್ತು ಛಾಂದೊಗ್ಯ ಉಪನಿಷತ್‌ಗಳು, ಬ್ರಾಹ್ಮಣಗಳ ಮತ್ತು ಅರಣ್ಯಕಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು ಹಿಂದು ತತ್ವಶಾಸ್ತ್ರದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ತತ್ವಶಾಸ್ತ್ರಜ್ಞ ಹಾಗೂ ಭಾಷ್ಯಕಾರರಾದ ಶಂಕರಾಚಾರ್ಯರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹು ಹಿಂದಿನ ಕಾಲದಲ್ಲಿ ಅಂದರೆ ವೇದಗಳ ನಂತರದ ಕಾಲದಿಂದ ಮೌರ್ಯರ ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. ಮುಕ್ತಿಕಾ ಉಪನಿಷದ್‌ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,[೨] ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುಗಳಲ್ಲಿ ಉದಾತ್ತವಾದ ಏಕಾತ್ಮವಾದವೇ ಪ್ರಮುಖವಾದದ್ದೆಂಬ ಶಂಕರಾಚಾರ್ಯರ ನಿಲುವನ್ನು ಅವರ ನಂತರದ ಭಾಷ್ಯಕಾರರು ಅನುಸರಿಸಿದರು.[೩][೪][೫][೬][೭] ಮೊಘಲ್ ಚಕ್ರವರ್ತಿಶಹಜಹಾನನ ಮಗ ದಾರಾ ಶಿಕೊಹ್ (ಮ. ೧೬೫೯) ಐವತ್ತು ಉಪನಿಷದ್‌ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದನು. ಮ್ಯಾಕ್ಸ್ ಮುಲ್ಲರ್‌ಗೆ (೧೮೭೯) ೧೭೦ ಉಪನಿಷದ್‌ಗಳ ಅರಿವಿತ್ತು. ಸದಾಲೆಯು ತನ್ನ ಬೃಹತ್ ಕಾವ್ಯಗಳ ಪಟ್ಟಿಯಲ್ಲಿUpaniṣad-vākya-mahā-kośa ಉಪಲಬ್ಧವಿರುವ ಬೇರೆ ಬೇರೆ 223 ಇದೇ ಹೆಸರಿನಿಂದ ಕರೆಯಲ್ಪಡುವ ಗ್ರಂಥಗಳನ್ನು ಸೂಚಿಸಿದ್ದಾನೆ.[೮] ಇದರ ಜೊತೆಗೆ, ಉಪನಿಷದ್‌ಗಳ ಸಮಯಕ್ಕೂ ಮುಂಚೆ ರಚಿತವಾದ ಬ್ರಾಹ್ಮಣಗಳ ಮತ್ತು ವೇದಗಳ ಭಾಗಗಳನ್ನೂ ಕೆಲವು ಬಾರಿ ಉಪನಿಷದ್‌ಗಳೆಂದು ಭಾವಿಸಲಾಗಿದೆ.[
108 ಉಪನಿಷತ್ತು… ನಿಮಗೆಷ್ಟು ಗೊತ್ತು?
ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ…
ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ ಸಿದ್ಧಾಂತ” ಎಂಬ ಅರ್ಥಗಳನ್ನು ಕೊಟ್ಟಿವೆ.
ಬಹುತೇಕವಾಗಿ ಉಪನಿಷತ್ತುಗಳ ಸಂಖ್ಯೆ 108 ಎಂದು ಹೇಳಲಾಗುತ್ತದೆ. ಅವುಗಳಲ್ಲಿ; ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ – ಇವು 13 ಪ್ರಧಾನ ಉಪನಿಷತ್ತುಗಳು.
ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಯಾವ ಉಪನಿಷತ್ತು ಯಾವ ವೇದದ ಭಾಗವಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ :
೧೦೮ ಉಪನಿಷತ್‌ಗಳು
- ಈಶಾವಾಸ್ಯೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
- ಕೇನೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್
- ಕಠೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
- ಪ್ರಶ್ನೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
- ಮುಂಡಕೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
- ಮಾಂಡೂಕ್ಯೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
- ತೈತ್ತಿರೀಯೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
- ಐತರೇಯೋಪನಿಷತ್ = ಋಗ್ವೇದಃ, ಮುಖ್ಯ ಉಪನಿಷತ್
- ಛಾಂದೋಗ್ಯೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್
- ಬೃಹದಾರಣ್ಯಕೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
- ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
- ಕೈವಲ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
- ಜಾಬಾಲ ಉಪನಿಷತ್ (ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ಶ್ವೇತಾಶ್ವತರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
- ಆರುಣೇಯ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
- ಗರ್ಭ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ನಾರಾಯಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್
- ಪರಮಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ಅಮೃತ ಬಿನ್ದೂಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಅಮೃತ ನಾದೋಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಅಥರ್ವ ಶಿರೋಪನಿಷತ್ = ಅಥರ್ವವೇದಃ, ಶೈವ ಉಪನಿಷತ್
- ಅಥರ್ವ ಶಿಖೋಪನಿಷತ್ =ಅಥರ್ವವೇದಃ, ಶೈವ ಉಪನಿಷತ್
- ಮೈತ್ರಾಯಣಿ ಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
- ಕೌಷೀತಕಿ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
- ಬೃಹಜ್ಜಾಬಾಲ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
- ನೃಸಿಂಹತಾಪನೀ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಕಾಲಾಗ್ನಿರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
- ಮೈತ್ರೇಯಿ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
- ಸುಬಾಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
- ಕ್ಷುರಿಕ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಮಾನ್ತ್ರಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
- ಸರ್ವ ಸಾರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ನಿರಾಲಮ್ಬ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
- ಶುಕ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ವಜ್ರಸೂಚಿ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
- ತೇಜೋ ಬಿನ್ದು ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
- ನಾದ ಬಿನ್ದು ಉಪನಿಷತ್ = ಋಗ್ವೇದಃ, ಯೋಗ ಉಪನಿಷತ್
- ಧ್ಯಾನಬಿನ್ದು ಉ ಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಬ್ರಹ್ಮವಿದ್ಯಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಯೋಗತತ್ತ್ವ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಆತ್ಮಬೋಧ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
- ಪರಿವ್ರಾತ್ ಉಪನಿಷತ್ (ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್
- ತ್ರಿಷಿಖಿ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
- ಸೀತಾ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
- ಯೋಗಚೂಡಾಮಣಿ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್
- ನಿರ್ವಾಣ ಉಪನಿಷತ್ = ಋಗ್ವೇದಃ, ಸಂನ್ಯಾಸ ಉಪನಿಷತ್
- ಮಣ್ಡಲಬ್ರಾಹ್ಮಣ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
- ದಕ್ಷಿಣಾಮೂರ್ತಿ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
- ಶರಭ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
- ಸ್ಕನ್ದ ಉಪನಿಷತ್ (ತ್ರಿಪಾಡ್ವಿಭೂಟಿ) = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಮಹಾನಾರಾಯಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಅದ್ವಯತಾರಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ರಾಮರಹಸ್ಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ರಾಮತಾಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ವಾಸುದೇವ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್
- ಮುದ್ಗಲ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
- ಶಾಣ್ಡಿಲ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
- ಪೈಂಗಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
- ಭಿಕ್ಷುಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ಮಹತ್ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
- ಶಾರೀರಕ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಯೋಗಶಿಖಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ತುರೀಯಾತೀತ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ಸಂನ್ಯಾಸ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
- ಪರಮಹಂಸ ಪರಿವ್ರಾಜಕ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್
- ಅಕ್ಷಮಾಲಿಕ ಉಪನಿಷತ್ = ಋಗ್ವೇದಃ, ಶೈವ ಉಪನಿಷತ್
- ಅವ್ಯಕ್ತ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್
- ಏಕಾಕ್ಷರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಅನ್ನಪೂರ್ಣ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
- ಸೂರ್ಯ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್
- ಅಕ್ಷಿ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಅಧ್ಯಾತ್ಮಾ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
- ಕುಣ್ಡಿಕ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
- ಸಾವಿತ್ರೀ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
- ಆತ್ಮಾ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್
- ಪಾಶುಪತ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
- ಪರಬ್ರಹ್ಮ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್
- ಅವಧೂತ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
- ತ್ರಿಪುರಾತಪನಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
- ದೇವಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
- ತ್ರಿಪುರ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
- ಕಠರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
- ಭಾವನ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
- ರುದ್ರ ಹೃದಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
- ಯೋಗ ಕುಣ್ಡಲಿನಿ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
- ಭಸ್ಮ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
- ರುದ್ರಾಕ್ಷ ಉಪನಿಷತ್ = ಸಾಮವೇದಃ, ಶೈವ ಉಪನಿಷತ್
- ಗಣಪತಿ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
- ದರ್ಶನ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್
- ತಾರಸಾರ ಉಪನಿಷತ್ = ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್
- ಮಹಾವಾಕ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
- ಪಞ್ಚ ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
- ಪ್ರಾಣಾಗ್ನಿ ಹೋತ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
- ಗೋಪಾಲ ತಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಕೃಷ್ಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಯಾಜ್ಞವಲ್ಕ್ಯ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ವರಾಹ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
- ಶಾತ್ಯಾಯನಿ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
- ಹಯಗ್ರೀವ ಉಪನಿಷತ್ (೧೦೦) = ಅಥರ್ವವೇದಃ, ವೈಷ್ಣವ ಉಪನಿಷತ್
- ದತ್ತಾತ್ರೇಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಗಾರುಡ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
- ಕಲಿ ಸಣ್ಟಾರಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್
- ಜಾಬಾಲ ಉಪನಿಷತ್ (ಸಾಮವೇದ) = ಸಾಮವೇದಃ, ಶೈವ ಉಪನಿಷತ್
- ಸೌಭಾಗ್ಯ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
- ಸರಸ್ವತೀ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್
- ಬಹ್ವೃಚ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
- ಮುಕ್ತಿಕ ಉಪನಿಷತ್ (೧೦೮) = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
"ಪ್ರಧಾನ" ಉಪನಿಷತ್‌ಗಳು
ಶೃತಿ (ವೇದಗಳ ಸಮ) ಎಂದು ಬಹಳಷ್ಟು ಹಿಂದುಗಳು ಮಾನ್ಯಮಾಡಿರುವ ಮತ್ತು ಶಂಕರರು ಭಾಷ್ಯ ಬರೆದಿರುವ [೩] "ಪ್ರಧಾನ" ಉಪನಿಷತ್‌ಗಳ ಒಳಗೊಂಡ ಪಟ್ಟಿ ಈ ಕೆಳಕಂಡಂತಿದೆ. ಪ್ರತಿಯೊಂದು ನಾಲ್ಕು ವೇದಗಳಿಗೆ ಸಂಬಂಧಿಸಿವೆ (ಋಗ್ವೇದ (ṚV), ಸಾಮವೇದ (SV), ಶುಕ್ಲ ಯಜುರ್ವೇದ (ŚYV), ಕೃಷ್ಣ ಯಜುರ್ವೇದ (KYV), ಅಥರ್ವವೇದ (AV));
- ಐತರೇಯೋಪನಿಷತ್
- ಬೃಹದಾರಣ್ಯಕ ಉಪನಿಷತ್
- ತೈತ್ತಿರೀಯೋಪನಿಷತ್
- ಛಾಂದೋಗ್ಯೋಪನಿಷತ್
- ಕೇನೋಪನಿಷತ್
- ಈಶಾವಾಸ್ಯೋಪನಿಷತ್
- ಶ್ವೇತಾಶ್ವತರೋಪನಿಷತ್
- ಕಠೋಪನಿಷತ್
- ಮುಂಡಕೋಪನಿಷತ್
- ಮಾಂಡೂಕ್ಯೋಪನಿಷತ್
- ಪ್ರಶ್ನೋಪನಿಷತ್.
ಮುಕ್ತಿಕೋಪನಿಷತ್ ನ ಪ್ರಕಾರ ೧೦೮ ಉಪನಿಷತ್ತುಗಳಿವೆ. ಅವುಗಳಲ್ಲಿ ಈ ೧೪ ಶೈವೋಪನಿಷತ್ತುಗಳೆಂದು ಪ್ರಸಿದ್ಧ— ಕೈವಲ್ಯ, ಅಥರ್ವಶಿಖಾ, ಜಾಬಾಲ, ಬೃಹಜ್ಜಾಬಾಲ, ಪಂಚಬ್ರಹ್ಮ, ಗಣಪತಿ, ಭಸ್ಮಜಾಬಾಲ, ರುದ್ರಹೃದಯ, ಶ್ವೇತಾಶ್ವತರ, ರುದ್ರಾಕ್ಷಜಾಬಾಲ, ಅಕ್ಷಮಾಲಿಕಾ, ಶರಭ, ದಕ್ಷಿಣಾಮೂರ್ತಿ, ಕಾಲಾಗ್ನಿ ಹಾಗೂ ಅಥರ್ವಶಿರಸ್. ಇವುಗಳಲ್ಲಿ ಶ್ವೇತಾಶ್ವತರೋಪನಿಷತ್ತು , ಸಮಸ್ತ ಉಪನಿಷತ್ತುಗಳಲ್ಲೇ ಪ್ರಧಾನವಾದ ೧೩ ಉಪನಿಷತ್ತುಗಳಲ್ಲಿ ಒಂದು. ಇದರಲ್ಲಿ, ದೇವದೇವನನ್ನು ಹರ, ರುದ್ರ, ಶಿವ ಎಂದು ಕರೆಯಲಾಗಿದೆ. ಜನರ ಮನೋಭಾವವು ತ್ರಿಮೂರ್ತಿತತ್ತ್ವ ಹಾಗೂ ಬಹುದೇವತಾರಾಧನೆಯನ್ನು ಸ್ವೀಕರಿಸಿದೆ. ಹೀಗಾಗಿ, ನಾನಾ ದೇವತೆಗಳಿಗೆ ಸಂಬಂಧಿಸಿದ ಪುರಾಣಸಾಹಿತ್ಯ ಹಾಗೂ ರೂಪಕಾದಿಗಳಲ್ಲಿ ಆಯಾ ಪ್ರಾಸಂಗಿಕ ದೇವರ ಮಹತ್ತ್ವವನ್ನು ಪ್ರತಿಪಾದಿಸುವಾಗ, ಅದಕ್ಕಾಗಿ ಮಾತ್ರ ಉಳಿದ ದೇವರುಗಳನ್ನು ಕೆಳಗೆಂದು ಹೇಳುವುದರಿಂದ ಜನತೆ ಅಸಮಾಧಾನಪಡುವುದಿಲ್ಲ, ಅಸಹನೆತಾಳುವುದಿಲ್ಲ, “ನಮ್ಮ ಧರ್ಮಕ್ಕೆ ಅಪಮಾನವಾಯಿತು” ಎನ್ನುವುದಿಲ್ಲ. “ತತ್ ತತ್ ಅರ್ಥಪ್ರಶಂಸಾ” ಎಂಬ ನ್ಯಾಯದಂತೆ “ಅದರಲ್ಲಿ ಅದೇ ಮುಖ್ಯ” ಎಂಬ ಉದಾರಭಾವದಿಂದ ಸಹಜವಾಗಿ ಸ್ವೀಕರಿಸುತ್ತಾರೆ. ಇದೇ ಶಿವಾನುಸಂಧಾನ, ಅದೇ ಭಾರತೀಯತೆ, ಇದೇ ವಿಶಾಲ ಹಿಂದುತ್ವವೂ ಆಗಿದೆ.
********
*********
No comments:
Post a Comment