SEARCH HERE

Tuesday, 1 January 2019

ಬಾಳೆ ಎಲೆ ಊಟ bale ele oota food on banana leaf







daily say this one line of shloka once you prepare food and before you eat
ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |
and you can add
ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಪರಮೇಶ್ವರ ||


***

ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? 

ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.

ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.

ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.

ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.

ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ,

1.ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ.

ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.

2.ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.

ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

3.ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.

4.ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು.

ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.

5.ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.

6.ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.

ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.

ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.

7.ಮಕ್ಕಳ ತ್ವಚೆಗೆ ಪರಿಹಾರ

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

8.ಸುಟ್ಟ ಗಾಯಗಳಿಗೆ

ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.

ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

1 ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2 ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3 ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4 ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)
5 ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6 ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7 ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8 ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9 ಹೋಳಿಗೆ (ಕಮಲಾಲಯ ಮಧುಸೂದನ)
10 ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)
11 ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13 ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14 ತೊವ್ವೆ (ಧಾನ್ಯ ಸಹಿತ ಶ್ರೀಧರ)
15 ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16 ಅನ್ನ (ಶ್ರೀಕೇಶವ)
17 ತುಪ್ಪ (ಪದ್ಮಾ ಸಹಿತ ಗೋವಿಂದ)
18 ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19 ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20 ಮೊಸರು (ವೃಕ್ಷಾಕಪಿ ಸಹಿತ ವಾಮನ)
21 ಕುಡಿಯುವ ನೀರು (ಶ್ರೀಕೃಷ್ಣ)
22 ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23 ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 ವೀಳ್ಯದೆಲೆ (ಶ್ರೀಹರಿ)
25 ಪಾನಕ - ನಿಂಬೆ (ವಿಶ್ವ)

ವಿಷಯಸೂಚಿ : 
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

ಗ್ರಂಥಋಣ:
1. ಜಗನ್ನಾಥದಾಸರ ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿಯಿಂದ ಆಯ್ದು, ಶ್ರೀ ಸಂಜೀವ ಮೂರ್ತಿದಾಸರು ಪ್ರಸ್ತುತ ಪಡಿಸಿದ ಪ್ರವಚನ.
2. ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಟಿಟಿಡಿ ಪ್ರಕಾಶಿಸಿದ “ಹರಿ ಭಜನೆ ಮಾಡೋ ನಿತಂತರ” ಪುಸ್ತಕ.
3. ಎಂ.ಕೃಷ್ಣರಾಯ “ಶ್ರೀ ಹರಿಕಥಾಮೃತಸಾರ ಸೌರಭ”.
4. ಶ್ರೀ ಮುರುಗೋಡು ದಾಸರ “ಭಜನ ಚಂದ್ರಿಕಾ”.



**********

ಊಟ ಮಾಡುವಾಗ ನಾವು ತಿನ್ನುವ ಪ್ರತಿಯೊಂದು ತುತ್ತುಗಳು ಮುಖ್ಯಪ್ರಾಣದೇವರ ಐದು ರೂಪಗಳ ಮೂಲಕ ಭಗವಂತನ ಐದು ರೂಪಗಳಲ್ಲಿ ಸಮರ್ಪಿತ ವಾಗುತ್ತದೆ ಎಂದು ತಿಳಿಯಬೇಕು.

ಮುಖದಲ್ಲಿ ಪ್ರಾಣನು,ಕಂಠದಲ್ಲಿ ಅಪಾನನು, ಹೃದಯದಲ್ಲಿ ವ್ಯಾನನು,ಉದರದಲ್ಲಿ ವ್ಯಾನನು,ಉದರದ ಎಡಭಾಗದಲ್ಲಿ ಉದಾನನು,ಬಲಭಾಗದಲ್ಲಿ ಸಮಾನನು,ವಾಸುದೇವ, ಪ್ರದ್ಯುಮ್ನ,ಸಂಕರ್ಷಣ, ಅನಿರುದ್ಧ,ನಾರಾಯಣ ರೂಪಗಳಲ್ಲಿ ಸಮರ್ಪಣೆ ಮಾಡುತ್ತಾರೆ.

ಐದು ಸ್ಥಳದಲ್ಲಿ ಅವಹನೀಯ, ಗಾರ್ಹಪತ್ಯ,ದಕ್ಷಿಣಾತ್ಯ,ಸಭ್ಯ, ಅವಸಭ್ಯ, ಎಂಬುದಾಗಿ ಐದು ಅಗ್ನಿಗಳಿವೆ.ಅದ್ದರಿಂದ ನಾವು ತಿನ್ನುವ ಪ್ರತಿಯೊಂದು ತುತ್ತುಗಳು ಐದು ಸ್ಥಳದಲ್ಲಿ ಭಗವಂತನ ಐದು ಸ್ಥಳಗಳಲ್ಲಿ ಹುತವಾಗುತ್ತದೆ. ಇದನ್ನು ಮುಖ್ಯ ಪ್ರಾಣದೇವರೇ ನಿಂತು ನಡೆಸುತ್ತಾರೆಂದು ಅನುಸಂಧಾನ ಮಾಡಬೇಕು.

ತನ್ನದ್ದೇ ಆದದ್ದನ್ನು ಸ್ವೀಕರಿಸುವ ಸ್ವಾಹಾ

ಶ್ರೀಮದ್ವಚಾರ್ಯರು ತಿಳಿಸುತ್ತಾರೆ :- ಭಗವಂತನಿಗೆ "ಸ್ವಾಹಾ" ಎಂದು ಹೆಸರು ಹೋಮ ಮಾಡುವಾಗ ' ಆಗ್ನೇಯ ಸ್ವಾಹಾ' ' ವಾಯುವೇ ಸ್ವಾಹಾ' 'ವಿಷ್ಣುವೇ ಸ್ವಾಹಾ ' ಎಂದು ಹೇಳುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಆಹುತಿಗಳನ್ನು ಹಾಕುವಾಗ ಸ್ವಾಹಾ ಎಂಬ ಶಬ್ದವನ್ನು ಪ್ರಯೋಗಿಸುತ್ತಾರೆ. ಸ್ವಾಹಾ ಶಬ್ದವೇ ನಮಗೆ ತಿಳಿಸುತ್ತದೆ " ಸಮರ್ಪಿಸಲ್ಪಡುವ ವಸ್ತು ನನ್ನದಲ್ಲ ಭಗವಂತನ " ವಸ್ತು " ಎಂದು

ಸರ್ವೆಜನಾಃ ಸುಜನೋ ಭವಂತು ಸರ್ವೆ ಸುಜನಾ 

ಸುಖಿನೋಭವಂತು ಕೃಷ್ಣಾರ್ಪಣಮಸ್ತು
*********


ಭೋಜನ ಎಂಬುದು ವೈಶ್ವಾನರ ಯಜ್ಞ.    ಭಾಗ ೧

ಭೋಜನದ ಮೊದಲು ಕೈಕಾಲು, ತೊಳೆದುಕೊಂಡು ಶುದ್ಧ ಬಟ್ಟೆಯನ್ನು ಧರಿಸಿ ಮಾಡಬೇಕು.  

ಹಾಸಿಗೆಯ ಮೇಲೆ ಕುಳಿತು ಭೋಜನ ಮಾಡಬೇಡಿ.

ನೆಲದ ಮೇಲೆ ಕುಳಿತು ಮಾಡಿ. 
ಹೋಮ, ಶ್ರಾದ್ಧ, ದೇವತಾರ್ಚನೆಗೆ ಮೊದಲು ಭೂಮಿ ಶುದ್ಧ ಮಾಡುವಂತೆ   ಮೊದಲು ಊಟ ಮಾಡುವ ಜಾಗ ಶುದ್ಧ ಮಾಡಿಕೊಳ್ಳಿ. ಅರ್ಥಾತ್ ಮಂಡಲ ಮಾಡಿಕೊಳ್ಳಿ.    ಮಂಡಲವನ್ನು ಮಾಡಿದರೆ ದೇವತೆಗಳು, ಋಷಿಗಳು, ವಸ್ತುಗಳು, ಆದಿತ್ಯರು, ಇವರುಗಳ ಸಾನ್ನಿಧ್ಯ ಇರುತ್ತೆ.
ಮಂಡಲ ಮಾಡದಿದ್ದರೆ ರಾಕ್ಷಸರು, ಪಿಶಾಚಿಗಳ ಸಾನ್ನಿಧ್ಯ ಇರುತ್ತೆ.  ಇದರಿಂದ ಆಹಾರದ ಶಕ್ತಿ ಹಾಳಾಗುತ್ತದೆ.

ತನ್ನ ಎಲೆಗೇ ತಾನೇ ಮಂಡಲ ಮಾಡಿಕೊಳ್ಳಬಾರದು.  ಬೇರೆಯವರು ಮಾಡಬೇಕು.  ಅಥವಾ ಎಡಗೈಯಿಂದ ಮಂಡಲ ತಾನೇ ಮಾಡಿಕೊಳ್ಳಬೇಕು.  ಎಡಗೈಯು ಪರಹಸ್ತವೆಂದೇ ಪ್ರಸಿದ್ಧ.  ಮಂಡಲ ಚತುರಸ್ರಾಕಾರವಾಗಿ ಮಾಡಬೇಕು.
ಭೋಜನ ವಿಧಿ - ಭಾಗ 2

ಪರಿಷೇಚನಕ್ಕೆ ಮೊದಲು ಅಭಿಗಾರ (ತುಪ್ಪವನ್ನು) ಅನ್ನದ ಮೇಲೆ ಹಾಕಬೇಕು.  ನಂತರ ತೀರ್ಥವನ್ನು ಎಲೆಗೆ ಬಡಿಸಿದ ಅನ್ನ ಪದಾರ್ಥದ  ಮೇಲೆ ಹಾಕಬೇಕು.

ನಂತರ ಎಲೆಯಲ್ಲಿ ಬಡಿಸಿದ ಪದಾರ್ಥಗಳಿಗೆ ಗಾಯತ್ರಿ ಮಂತ್ರದಿಂದ ಪ್ರೋಕ್ಷಿಸಬೇಕು.

ಪ್ರೋಕ್ಷಣೆ. : 
ಓಂ ಭೂರ್ಭುವಃ ಸ್ವಃ |  ತತ್ಸವಿತುರ್ವರೇಣ್ಯಂ|
ಭರ್ಗೋ ದೇವಸ್ಯ ಧೀಮಹಿ 
ಧಿಯೋ ಯೋನಃ ಪ್ರಚೋದಯಾತ್ ||
    ಇತಿ ಪ್ರೋಕ್ಷ್ಯ|| (ಅನ್ನಕ್ಕೆ ನೀರನ್ನು ಚಿಮುಕಿಸುವುದು)

ಪರಿಷೇಚನ
ನಂತರ ಬಲಗೈಯ ಮಧ್ಯಭಾಗದಲ್ಲಿ  (ಬಲಗೈ  ಮಧ್ಯದಲ್ಲಿ ದೇವತೆಗಳಿರುತ್ತಾರೆ) ನೀರನ್ನು ಹಾಕಿಕೊಂಡು ಎಲೆಯ/ ತಟ್ಟೆಯ ಬಲಭಾಗದಿಂದ ಪ್ರಾರಂಭಿಸಿ ಸುತ್ತುಗಟ್ಟಬೇಕು. 

ಸತ್ಯಂ ತ್ವರ್ತೇನ ಪರಿಷಿಂಚಾಮಿ (ಹಗಲಿನಲ್ಲಿ) |
"ಸತ್ಯ" ಎಂಬ "ಅನಿರುದ್ಧ" ರೂಪವು "ಋತ"ವೆಂಬ "ನಾರಾಯಣ" ರೂಪದಿಂದ ವ್ಯಾಪ್ತವಾಗಿದೆ ಎಂದು ಚಿಂತಿಸಬೇಕು.

ಋತಂ ತ್ವಾ ಸತ್ಯೇನ ಪರಿಷಿಂಚಾಮಿ (ರಾತ್ರಿ) !
"ಋತ" ಎಂಬ "ನಾರಾಯಣ" ರೂಪವು "ಸತ್ಯ"ವೆಂಬ "ಅನಿರುದ್ಧ" ರೂಪದಿಂದ ವ್ಯಾಪ್ತವಾಗಿದೆ ಎಂದು ಚಿಂತಿಸಬೇಕು.


ಚಿತ್ರಾಹುತಿ.......
ಪರಿಷೇಚನ ........
*********

ಬ್ರಾಹ್ಮಣರಲ್ಲಿ ಊಟಕ್ಕೆ ಕುಳಿತಾಗ 
ಚಿತ್ರಾಹುತಿ ನೀಡುವ ಕ್ರಮ ------
ಚಿತ್ರಾಹುತಿ ನೀಡುವ ಕಾರಣ-----

ಭೋಜನವೆಂಬುದು ಒಂದು ಯಜ್ಞರೂಪ

ಸನಾತನ ಕಾಲದಿಂದಲೂ ಬ್ರಾಹ್ಮಣರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಬ್ರಾಹ್ಮಣ (ಗೃಹಸ್ತರಾದಿ) 
ಮೊದಲಾಗಿ ಎಲ್ಲರೂ ಭೋಜನವನ್ನು ಯಜ್ಞದಂತೆ ಆಚರಿಸಿದರೆ ದೇಹದ ಮತ್ತು ಮನಸ್ಸಿನ ಆರೋಗ್ಯ ಭಾಗ್ಯ ರೂಪದಲ್ಲಿ ನಮ್ಮನ್ನು ರಕ್ಷಿಸುತ್ತದೆ

ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ. 

ಈ ಕಾರಣದಿಂದಲೇ ಅದು 'ಪ್ರಾಣಾಗ್ನಿಹೋತ್ರ'ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ. 
ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು 'ಪಾಚಕಾಗ್ನಿ' . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ ವಿವರಿಸಿದಂತೆ 'ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.

ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು 'ಬ್ರಹ್ಮಾರ್ಪಣ'ವೆಂಬ ಪರಿಕಲ್ಪನೆ.

ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.

ಶುಚಿತ್ವ
ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬಾಳೆಎಲೆಯಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.

ಭೋಜನ ಸ್ವೀಕಾರಕ್ಕೂ ಮೊದಲು

1. ಪರಿಷಿಂಚನೆ
ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ಓಂ ಭೂರ್ಭುವಃ ಸ್ವಃ |
ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)
ವಿಷ್ಣೋರನ್ನಂ ರಕ್ಷಸ್ವ

ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಪರಿಸಿಂಚನ ಎಂದರೆ
ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಬಾಳೆಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ ಅಭಿಮಂತ್ರಿತ ಜಲವನ್ನು 'ಸತ್ಯಂತ್ವರ್ತೇನ ಪರಿಷಿಂಚಾಮಿ' ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು. ಇದರರ್ಥ 'ಸತ್ಯ' (ಭಗವಂತ) ಮತ್ತು 'ಋತ' (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.

2) ಚಿತ್ರಾಹುತಿ ಹವಿಸ್ಸು ಸಮರ್ಪಣೆ 
ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ: 
ಚಿತ್ರಗುಪ್ತಾಯ ನಮ: 
ಯಮಾಯ ನಮ: 
ಯಮಧರ್ಮಾಯ ನಮ: 

ಈ ನಾಲ್ಕು ಮಂತ್ರದಿಂದ
ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು
ಚಿತ್ರಾಹುತಿ ಎಂದರೆ
ಎಲೆಯ ಬಲತುದಿಯಲ್ಲಿ ನೀರಿನಿಂದ ಗೆರೆಯೆಳೆದು ನಾಲ್ಕು ಅನ್ನದ ಸಣ್ಣ ತುತ್ತುಗಳನ್ನಿರಿಸುವುದೇ ಚಿತ್ರಾಹುತಿ. ಈ ಚಿತ್ರಾಹುತಿಯನ್ನು ನೀಡುವಾಗ ಭೋಜನವೂ ಒಂದು ಯಜ್ಞವಿಧಿಯಂತೆ ಇದ್ದು, ಯಜ್ಞಕರ್ಮದಲ್ಲಿ ಪ್ರಧಾನಹೋಮ ಅಥವಾ ಪೂರ್ಣಾಹುತಿಗೆ ಮೊದಲು ಉಪದೇವತೆಗಳಿಗೆ ನೀಡುವ ಬಲಿಯ ಪ್ರತೀಕದಂತೆ ಈ ಚಿತ್ರಾಹುತಿ.

3)'ಆಪೋಷನ'ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ. ನೀರು ನಮಗೆ ಬದುಕನ್ನು ನೀಡುವಂತಹದು. ಅದು ಅಮೃತ ಸಮಾನ. ಹಾಗಾಗಿ ನಾವು ತಿನ್ನುವ ಈ ಅನ್ನಕ್ಕೆ ಅಮೃತದ ಸವಿಯಿರಲಿ ಎಂಬ ಸಂಕಲ್ಪದೊಂದಿಗೆ ಅಮೃತೋಪರಣಮಸೀ ಸ್ವಾಹಾಃ' ಎಂದು ಆಪೋಷನಗೈಯ್ಯಬೇಕು.
4)ಅಭಿಘಾರ :
ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ. ಯಜ್ಞದಲ್ಲಿ ಹವಿಸ್ಸಿನ ಮೇಲೆ ತುಪ್ಪವನ್ನು ಹನಿಸುವಂತೆ ಈ ಭೋಜನ ಯಜ್ಞದಲ್ಲಿ ಈ ಅಭಿಘಾರ.

5) ಪ್ರಾರ್ಥನೆ
ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ(ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ '
ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ,
ಅಮೃತೋಪಸ್ತರಣಮಸಿ ಸ್ವಾಹಾ ||

6) ಅನ್ನಪ್ರಾಶನ (ಸ್ವಾಹಾಕಾರ)

ಓಂ ಪ್ರಾಣಾಯ ಸ್ವಾಹಾ || 
ಓಂ ಅಪಾನಾಯ ಸ್ವಾಹಾ || 
ಓಂ ವ್ಯಾನಾಯ ಸ್ವಾಹಾ || 
ಓಂ ಉದಾನಾಯ ಸ್ವಾಹಾ || 
ಓಂ ಸಮಾನಾಯ ಸ್ವಾಹಾ || 
(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

ಸ್ವಾಹಾಕಾರ ಎಂದರೆ ಯಜ್ಞಯಾಗಾದಿಗಳಲ್ಲಿ ಪೂರ್ಣಾಹುತಿಗೆ ಮೊದಲು ಅಗ್ನಿಗೆ ಚರುವನ್ನು ಸಮರ್ಪಿಸಿದಂತೆ ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮನಿಗೂ ಎಲೆಯಲ್ಲಿ ಬಡಿಸಿದ ಖಾರ, ಉಪ್ಪು, ಹುಳಿಗಳನ್ನು ಸೇರಿಸದ ಅನ್ನವನ್ನು (ಸಣ್ಣ ತುತ್ತು) ಸ್ವಾಹಾಕಾರಕ್ಕಾಗಿ ಭುಂಜಿಸಬೇಕು.ಈ ಸ್ವಾಹಾಕಾರವೆಂದರೆ ಜಗಿಯದೆ ನುಂಗುವ ಪ್ರಕ್ರಿಯೆ. ಈ ಪ್ರಾಣಾದಿ ಸ್ವಾಹಾಕಾರ ಪ್ರಕ್ರಿಯೆಯಲ್ಲಿ 

*ಪ್ರಾಣಾಯ ಸ್ವಾಹಾಕ್ಕೆ ತೊರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು,
*ಅಪಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು, 
*ವ್ಯಾನಾಯ ಸ್ವಾಹಾಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು, 
*ಉದಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು, 
*ಸಮಾನ ಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ. 

ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಇಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬಿರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.

7). ಉತ್ತರ ಆಪೋಶನ :
ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಕೊಂಡು ಈ ಮಂತ್ರ ಹೇಳಿ ಕುಡಿಯುವುದು.
ಅಮೃತಾಪಿಧಾನಮಸಿ ಸ್ವಾಹಾ ||
ಉತ್ತರಾಪೋಶನ :
ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು. ಯಜ್ಞದಲ್ಲಿ ಪೂರ್ಣಾಹುತಿ ನಂತರ ವಸೋರ್ಧಾರ ಎಂಬ ಹೆಸರಿನಲ್ಲಿ ಹವಿಸ್ಸಿನ ಮೇಲೆ ಆವರಣವಾಗುವ ಹಾಗೆ ತುಪ್ಪದ ಧಾರೆಯನ್ನು ಹರಿಸುತ್ತಾರೆ. ಅದೇ ರೀತಿ ಈ ಭೋಜನ ಯಜ್ಞದ ನಂತರ ಈ ಉತ್ತರಾಪೋಶನವು ನಾವು ಭುಂಜಿಸಿದ ಭೋಜನವನ್ನು ಅಮೃತವನ್ನಾಗಿಸಲಿ ಎಂಬ ಆಶಯದೊಂದಿಗೆ 'ಅಮೃತಾ ಪಿಧಾನಮಸಿ ಸ್ವಾಹಾ' ಎನ್ನುತ್ತ ಆಪೋಷನವನ್ನು ಮಾಡಬೇಕು. ಪಿಧಾನವೆಂದರೆ ಮುಚ್ಚಳವೆಂತಲೂ ಅಮೃತ ಪಿಧಾನವೆಂದರೆ ಅಮೃತದ ಆವರಣವೆಂತಲೂ ಅರ್ಥ. ಈ ಆಪೋಶನದಲ್ಲಿ ಭೋಜನದ ಮೇಲೆ ಅಮೃತದ ಅವರಣವಾಗಲಿ ಎಂಬ ಆಶಯವಿದೆ. ಪೂರ್ವಾಪೋಶನವು ಭೋಜನಕ್ಕೆ ಅಮೃತದ ವೇದಿಕೆಯಾದರೆ ಉತ್ತರಾಪೋಶನವು ಭೋಜನಕ್ಕೆ ಇರಿಸುವ ಅಮೃತದ ಮುಚ್ಚಳವಾಗಿದೆ. ಹೀಗೆ ಪೂರ್ವಾಪೋಶನ ಮತ್ತು ಉತ್ತರಾಪೋಶನವೆಂಬ ಎರಡು ಅಮೃತಸ್ತರಗಳ ನಡುವೆ ನಾವು ಭುಂಜಿಸಿದ ಭೋಜನ ಅಮೃತಮಯವಾಗಲಿ ಎಂಬ ಹಾರೈಕೆ ಇಲ್ಲಿಯದು. 
ವಸೋರ್ಧಾರೆಯು ಹವಿಸ್ಸನ್ನು ಪೂರ್ಣವಾಗಿ ಪಚನ ಮಾಡಲು ಯಜ್ಞಾಗ್ನಿಗೆ ಸಹಾಯಕವಾಗುವಂತೆ ಉತ್ತರಾಪೋಶನವು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ


ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೋಸಬೇಕಿತ್ತೆ ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು.
**********

ಊಟದ ಪ್ರಭಾವ ಜೀವನದ ಮೇಲೆ..

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ, both
Physical and mental change.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ. so ಅಡಿಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ common ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ
Negative vibrations ಹೊಗುವದು common. ನೆನಪಿಡಿ  ನಾವು ಅದನ್ನೇ ಉಣ್ಣುವದು.
ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ   ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ  ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವ ದುಂಟು.

ಅಡಿಗೆ , ಊಟ ೩ ತರಹ
1. ಹೋಟೆಲ್ ಪಾರ್ಟಿ ಗಳಲ್ಲಿಯ ಊಟ
2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ
3.ಮಂದಿರ, ಮಠ ಗಳಲ್ಲಿ ಮಾಡುವ ಅಡಿಗೆ, ಊಟ.

ಈ ಮೂರು ಪ್ರಕಾರದ ಊಟದಲ್ಲಿ  ಬೇರೆ ಬೇರೆ ತರಹದ ಸ್ಪಂದನಗಳು ಇರುವವೂ.

ಹೋಟೆಲ್ ಊಟ..
ಇಲ್ಲಿ ಯಾವುದೇ ಪಾಸಿಟಿವ್ vibrations ಇರುವದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುವವು.

ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...

ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ
ಅಂದರೆ ಪಾಸಿಟಿವ್ ಸ್ಪಂದನೆ ಗಳು ಇರುವ ಅಡಿಗೆ.
ಆದರೆ ಇತ್ತೀಚಿಗೆ ಮನೆಯಲ್ಲಿ 
ಅಡಿಗೆ ಯವಳು ಅಡಿಗೆ ಮಾಡುವ fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ  ಇದ್ದರೂ
ಅಡಿಗೆ ಮಾಡುವದು ಅಡಿಗೆಯವಳೆ, ಅವಳ ಮನಸ್ಸು ಯಾವ ತರಹ ಇದೆ, ಅವಳೂ ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು so ಅಲ್ಲಿಯೂ
ನೆಗೆಟಿವ್ vibration ಇರುವದು 
So ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ
ಸ್ವಲ್ಪ ವಿಚಾರ ಮಾಡಿ ನೋಡಿ
ನಿಮ್ಮ ಮನೆಯ ಅಜ್ಜಿ, ತಾಯಿ ಮಾಡಿದ ಅಡಿಗೆ ಮತ್ತು ಅಡಿಗೆ ಮಾಡುವಳ ಅಡಿಗೆ ಎಷ್ಟು ‌ವ್ಯತ್ಯಾಸ? ತಾಯಿ  ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ, ಅಥವಾ ಚಪಾತಿ ಹೆಚ್ಚು ಬೇಡಿದರೆ ಅವಳಿಗೆ ಇನ್ನೂ ಹೆಚ್ಚು ಆನಂದ ಆಗುವದು ಸಹಜ, ಅದೇ ಅಡುಗೆ ಅವಳಿಗೆ ಒಂದ, ಎರಡು ಹೆಚ್ಚು ರೊಟ್ಟಿ ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.

ಮಂದಿರ ಮಠಗಳಲ್ಲಿಯ ಅಡಿಗೆ....ಅದು ದೇವರಿಗೆ ನೈವೇದ್ಯ ಅರ್ಪಿಸಿ, ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು  ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ,
ಅದರ ಸ್ವಲ್ಪ ಭಾಗ ಬಡ ಬಗ್ಗರಿಗೆ
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿಯ ಇತ್ತು, ಈಗಲೂ ಕೆಲವು ಹಳ್ಳಿಯಲ್ಲಿ ಈ ಪದ್ಧತಿಯ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋ ಗ್ರಾಸ  ಎಂದು ಕೊಡುವುದನ್ನು ನಾನು ಸಣ್ಣವ ಇದ್ದಾಗ ನೋಡಿದ ನೆನಪಿದೆ.

ಅನ್ನದಲ್ಲಿ ಜಾದು ಇದೆ. ಅಡಿಗೆ ಮಾಡುವಲ್ಲಿ ಒಳ್ಳೆಯ ಸಂಸ್ಕಾರವಿದೆ ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ  ಊಟ ಮಾಡಿ ನೋಡಿ
3 ತಿಂಗಳು ಇದನ್ನು ಮಾಡಿ ನೋಡಿ. ನಿಮ್ಮಲ್ಲಿ ಆಗುವ change feel ಮಾಡಿ

ಕೃಷ್ಣಾರ್ಪಣಮಸ್ತು
****

ಹಿರಿಯರು ಹೇಳಿಕೊಟ್ಟ ಊಟದ ಕಲೆಯ ನಿಯಮಗಳು :
****************

1)  ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. ....
2)  ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…..
3)  ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು.... 
4)  ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.....
5)  ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ  ಇರಬಾರದು….
6) ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು……
6)  ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
7) ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
8) ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು…. 
9) ಯಾರೊಬ್ಬರೂ ಅತ್ತಿಂದಿತ್ತ ಅಡ್ಡಕಸುಬಿ ಓಡಾಡಬಾರದು…..
10) ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
11) ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
12) ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು..... 
13)  ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು... 
14)  ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು….. 
15)  ಅಂಗೈ ಮುಂಗೈ ಮೂತಿಗಳಿಗೆ ಅನ್ನ - ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು…... 
16)  ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು....  
17)  ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
18)  ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು.... ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು... 
19)  ಉಣ್ಣುವ ತುತ್ತು ಎಣಿಸಬಾರದು.....ಮುದ್ದೆ - ರೊಟ್ಟಿ ಎಣಿಸಬಾರದು.... ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು 
20) ಇಷ್ಟು ತಿಂದ - ಅಷ್ಟು ತಿಂದ ಎಂದು ಮಾತನಾಡಬಾರದು.... 
21) ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು.... (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
22)  ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು…..
23) ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು….
24) ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು…. 
25)  ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ - ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು. 
26)  ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು...... ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
27)  ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು….. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು…..
28) ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು….. 
29) ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
30) ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
31) ಬಾಡೂಟದೊಂದಿಗೆ ಪ್ರತ್ಯೇಕ ಸಸ್ಯಾಹಾರದ ಸಾರು ಸೇವಿಸಬಾರದು…..
32) ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು…..
33) ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು….  ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು…..
34)  ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು... 
35) ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು... 
36) ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು.... 
37) ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು...
38) ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು....
39) ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು....
40) ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು.... ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು...

ಸದ್ಯಕ್ಕಿಷ್ಟು ನಿಯಮಗಳು….. 
ನಿಮ್ಮ ನಿಮ್ಮ ನಿಯಮಗಳಿದ್ದರೆ ಸೇರಿಸಿಕೊಳ್ಳಿರಿ...

ಕೃಪೆ ವಾಟ್ಸಪ್
***
ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಇತ್ತೀಚೆಗೆ ಒಂದು ರೀತಿಯ ಫ್ಯಾಷನ್ ಆಗಿ ಹೋಗಿದೆ. ಈ ಟ್ರೆಂಡನ್ನು ಅನೇಕ ದರ್ಶಿನಿಗಳು, ಹೋಟೆಲ್ಗಳು ತಮ್ಮ ವ್ಯಾಪಾರಿ ಉಪಯೋಗಕ್ಕೆ ಬಳಸಿಕೊಂಡು ಹಣ ಮಾಡುವತ್ತ ಹೆಜ್ಜೆ ಹಾಕಿದ್ದಾರೆ. 

              ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ಸಿಂಗಾಪುರ್, ಮಲೇಷಿಯಾ, ಫಿಲಿಫೈನ್ಸ್, ಮೆಕ್ಸಿಕೋ, ಮಧ್ಯ ಅಮೇರಿಕಾ ಮುಂತಾದ ಅನೇಕ ದೇಶಗಳಲ್ಲೂ ವ್ಯಾಪಕವಾಗಿ ಹರಡಿದೆ. 

               ಹಾಗಾದರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಏನಾದರೂ ಉಪಯೋಗವಿದೆಯೇ? ಖಂಡಿತ ಹೌದು ಎನ್ನುತ್ತಾರೆ ವಿಜ್ಞಾನಿಗಳು. ಅವರುಗಳ ಸಂಶೋಧನೆಯಿಂದ ಸಾಬೀತಾಗಿರುವ ವಿಷಯವನ್ನು ಅರಿಯೋಣ. 

                ಮೂಲವಾಗಿ ಬಾಳೆ ಎಲೆಯಲ್ಲಿ ಊಟ ಮಾಡುವಾಗ, ಬಿಸಿ ಬಿಸಿ ಪದಾರ್ಥ ಅದರ ಮೇಲೆ ಹಾಕಿದಾಗ ಅದರಿಂದ ಸ್ರವಿಸುವ ಜಿಗುಟಾದ ವಸ್ತು ಆಹಾರದೊಂದಿಗೆ ದೇಹವನ್ನು ಸೇರುತ್ತದೆ. ಈ ಜಿಗುಟಾದ ವಸ್ತುವಿಗೆ ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಗಳನ್ನು ನಿಷ್ಕ್ರಿಯೆಗೊಳಿಸುವ ಶಕ್ತಿಯಿದೆ. ಹಾಗಾಗಿ ದೇಹ ಕ್ರಾನ್ಸರ್ಗೆ ತುತ್ತಾಗುವ ಸಂಭವವನ್ನು ತಡೆಯುತ್ತದೆ. 

             ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಬಡಿಸಿದಾಗ, ಬಾಳೆ ಎಲೆಯಲ್ಲಿನ ಆರೋಗ್ಯಕರ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು, ದೇಹವನ್ನು ಸೇರುತ್ತದೆ. ಇದರಿಂದ ಸಾಮಾನ್ಯವಾಗಿ ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ, ಕುರು ಮುಂತಾದ ಸಣ್ಣ ಪುಟ್ಟ ದೈಹಿಕ ಕಾಯಿಲೆಗಳು ದೂರವಾಗುತ್ತವೆ. 

               ಬಾಳೆ ಎಲೆಗಳಲ್ಲಿ ಪಾಲಿಫಿನಾಲ್ ನಂತಹ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಈ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಅತ್ಯಂತ ಉಪಯುಕ್ತವಾದ ಎಪಿಗಲ್ಲೋಕಾಟೆಚಿನ್ ಗಾಲೆಟ್ (ಇಜಿಸಿಜಿ). ಊತ, ತೂಕ ಕಡಿತಗೊಳಿಸಲು ಹಾಗೂ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಮಾನವನ ದೇಹವು ಇದನ್ನು ಸ್ವೀಕರಿಸುವುದರಿಂದ ದೇಹದ ಮೇಲಿನ ಚರ್ಮ ದೀರ್ಘಕಾಲದವರೆವಿಗೂ ಸುಕ್ಕಾಗುವುದನ್ನು ತಡೆಯಲು ಸಹ ಸಹಾಯ ಮಾಡುತ್ತದೆ. 

              ಬಾಳೇ ಎಲೆಯಲ್ಲಿನ ಕೆಲವು ಪೋಷಕಾಂಶಗಳು ದದ್ದು, ತುರಿಕೆ ಮತ್ತು ಹುಣ್ಣನ್ನು ದೂರಮಾಡುತ್ತದೆ ಎಂದು ಈಗಾಗಲೇ ತಿಳಿದಿದ್ದೇವೆ. ಅಕಸ್ಮಾತ್ ದದ್ದು, ಮೊಡವೆ, ಕುರು ಮುಂತಾದವುಗಳೇನಾದರೂ ಚರ್ಮದ ಮೇಲೆ ಕಾಣಸಿಕೊಂಡಲ್ಲಿ, ಬಾಳೆ ಎಲೆ ಮೇಲೆ ತೆಂಗಿನ ಎಣ್ಣೆ ಹಚ್ಚಿ ಬಾಧಿತ ಚರ್ಮದ ಭಾಗಕ್ಕೆ ಕಟ್ಟುವುದರಿಂದ ಶೀಘ್ರ ಗುಣಮುಖವಾಗಲು ಪ್ರೇರೇಪಿಸುತ್ತದೆ. 

              ಬಾಳೆ ಎಲೆಯನ್ನು ಊಟಕ್ಕೆ ಬಳಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿದೆ. ಅದರಿಂದ ಮಾನವನ ದೇಹಕ್ಕಾಗುವ ಅನುಕೂಲಗಳನ್ನು ಈಗ ವಿಜ್ಞಾನ ಸಾಬೀತು ಮಾಡಿದೆ. 

              ಕೆಲವೊಂದು ಅಡುಗೆಯ ತಯಾರಿಕೆಯಲ್ಲಿ ಪದಾರ್ಥವನ್ನು ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸುವುದು ಉಂಟು. ಈ ರೀತಿಯಲ್ಲಿ ತಯಾರಿಸಿದ ಅಡುಗೆಗೆ, ಅದರದೇ ಆದ ವಿಶಿಷ್ಟ ಸುವಾಸನಾ ಪರಿಮಳ ಬಂದಿರುತ್ತದೆ. ದಕ್ಷಿಣ ಭಾರತದ ಅತ್ಯಂತ ಉತ್ಕೃಷ್ಟ ಸಿಹಿ ಭಕ್ಷ್ಯ ಹೋಳಿಗೆ ಮಾಡುವಾಗಲೂ ಬಾಳೆ ಎಲೆಯ ಮೇಲೆ ತಟ್ಟಿ ನಂತರ ಬೇಯಿಸುವುದುಂಟು.  ಬಾಳೆ ಎಲೆ ಉಪಯೋಗಿಸಿ ತಯಾರಿಸಿದ ಹೋಳಿಗೆಗೂ, ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ತಯಾರಿಸಿದ ಹೋಳಿಗೆಗೂ ರುಚಿಯಲ್ಲಿ ವ್ಯಾತ್ಯಾಸ ಕಂಡು ಬರುವುದನ್ನು ಗಮನಿಸಿರಬಹುದು. ಬಾಳೆ ಎಲೆಯ ಮೇಲೆ ತಟ್ಟಿ ಮಾಡಿದ ಹೋಳಿಗೆಯ ಸ್ವಾಧವೇ ಬೇರೆ!!! 

              ಊಟಕ್ಕೆ ಬಾಳೆ ಎಲೆಯನ್ನು ಬಳಸಿದ ನಂತರ ಅದನ್ನು ದನಕರುಗಳಿಗೆ ಮೇವಾಗಿ ನೀಡಬಹುದು. ಇದರಿಂದ ಅವುಗಳಿಗೂ ಆಹಾರ ದೊರಕಿದಂತಾಗುತ್ತದೆ ಮತ್ತು ಪ್ಲೇಟುಗಳನ್ನು ತೊಳೆಯಲು ಉಪಯೋಗಿಸುವ ನೀರೂ ಸಹ ಉಳಿತಾಯವಾಗುತ್ತದೆ. ದನಕರುಗಳು ಇಲ್ಲವಾದಲ್ಲಿ ಭೂಮಿಯಲ್ಲಿ ಎಸೆದರೂ ಅದು ಪರಿಸರ ಸ್ನೇಹಿಯಾದ ಕಾರಣ ಉತ್ತಮ ಗೊಬ್ಬರವಾಗುತ್ತದೆ. 

           ಆಧುನಿಕ ಜಗತ್ತಿನಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಪ್ಲೇಟುಗಳಾಗಲಿ, ಥರ್ಮೋಕೋಲ್ ಪ್ಲೇಟುಗಳಾಗಲಿ ಉಪಯೋಗಿಸಿದ ನಂತರ ಅದರ ತ್ಯಾಜ್ಯ ವಿಲೇವಾರಿ ಅತ್ಯಂತ ಗಂಭೀರ ಹಾಗೂ ಕಷ್ಟಕರ ಸಮಸ್ಯೆ. ದನಕರುಗಳು ಈ ತ್ಯಾಜ್ಯವನ್ನು ತಿಂದು ಪ್ರಾಣ ಕಳೆದುಕೊಂಡ ಉದಾಹರಣೆ ಸಹ ನಮ್ಮ ಮುಂದಿದೆ. ಹಾಗಾಗಿ ಬಾಳೆ ಎಲೆ ಇದಕ್ಕೆ ಅತ್ಯಂತ ಪರಿಣಾಮಕಾರಿ ಪರ್ಯಾಯ. 

               ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಆಹಾರ ಬಡಿಸಲು ಮತ್ತು ಆಹಾರವನ್ನು ಪ್ಯಾಕ್ ಮಾಡಲು ಸಹ ಬಾಳೆ ಎಲೆಗಳನ್ನು ಬಳಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದನ್ನೇ ಇತರರೂ ಅನುಸರಿಸಿದರೆ, ಎಲ್ಲಾ ರೀತಿಯಲ್ಲೂ ಮಾನವನ ಆರೋಗ್ಯ ವೃದ್ದಿಸಲು ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯಕಾರಿ. 

               ಕೊನೆ ಹನಿ: ಊಟಕ್ಕೆ ಬಾಳೆ ಎಲೆಯನ್ನು ಹಾಕುವಾಗ ಕೆಲವೊಂದು ಪದ್ಧತಿಯನ್ನು ಹಿಂದಿನ ಕಾಲದಿಂದ ರೂಢಿಸಿಕೊಂಡು ಬರಲಾಗಿದೆ. ಅದೇನೆಂದರೆ, ಅಗ್ರವು (ಬಾಳೆ ಎಲೆಯ ತುದಿ) ಬಡಿಸುವವರ ಬಲಕ್ಕೆ, ಊಟಕ್ಕೆ ಕುಳಿತವರ ಎಡಕ್ಕೆ, ಬರುವಂತೆ ಹಾಕಬೇಕೆಂಬುದು. ‘ಈ ಪದ್ದತಿಯ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ???’ ಎಂದು ಹುಡುಕುವ ಪ್ರಯತ್ನ ಬೇಡ. ಊಟ ಮಾಡುವವರ ಎಡಕ್ಕೆ ಎಲೆಯ ಸಣ್ಣ ಭಾಗ ಇದ್ದಲ್ಲಿ, ಎಲೆ ಕೊನೆಗೆ ಹಾಕುವಂತಹ ಪದಾರ್ಥ, ಉಪ್ಪು, ಉಪ್ಪಿನಕಾಯಿ, ಚಟ್ನಿ, ಬಡಿಸಲು ಸುಗಮ. ಹೆಚ್ಚು ಭುಂಜಿಸುವ ಪದಾರ್ಥಗಳನ್ನು, ಹೆಚ್ಚು ಸ್ಥಳಾವಕಾಶವಿರುವ ಬಲಗಡೆ ಬಡಿಸಿದಲ್ಲಿ, ಬಲದ ಕೈಯಲ್ಲಿ ಊಟ ಮಾಡುವವರಿಗೆ ಅನುಕೂಲವಷ್ಟೇ. ಹೆಚ್ಚು ಜಾಗವಿರುವ ಕಾರಣ ಬಡಿಸಿದ ಪದಾರ್ಥ ನೆಲ ಸೇರುವುದಿಲ್ಲ ಎಂಬುದು ಅಷ್ಟೇ ಸತ್ಯ. 

             ಆದಷ್ಟು ಬಾಳೆ ಎಲೆಯ ಮೇಲೆ ಬಡಿಸುವ ಆಹಾರವನ್ನು ಸೇವಿಸಿ. ‘ಬಿಸಿ ಬಿಸಿ ಸಾರು ಹರಿದು ಹೋಗಿ ನೆಲ ಸೇರುತ್ತದೆ’ ಎಂಬ ಕಾರಣಕ್ಕೆ ಬಾಳೆ ಎಲೆಯಲ್ಲಿ ತಿನ್ನುವುದನ್ನು ತ್ಯಜಿಸಬೇಡಿ. ಆರೋಗ್ಯ ವೃದ್ಧಿಸಿಕೊಳ್ಳಲು, ಸಣ್ಣ ಪುಟ್ಟ ಕಾಯಿಲೆಯಿಂದ ದೂರವಿರಲು ಇದೊಂದು ಸುಲುಭೋಪಾಯ. ಈ ಸಣ್ಣ ಪದ್ಧತಿಯನ್ನು ಆದಷ್ಟೂ ರೂಢಿಸಿಕೊಳ್ಳಿ.  ಆರೋಗ್ಯ ವೃದ್ದಿಸಿಕೊಳ್ಳಿ. 

ಧನ್ಯವಾದಗಳು

✍️ಸೌಮ್ಯಾ ವಿ ಕುಮಾರ್🦚🙏
***

ಊಟದ ಪ್ರಭಾವ ಜೀವನದ ಮೇಲೆ..

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ ,both
Physical and mental change.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ.so ಅಡಿಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ common ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆ ಗೆ
Negative vibrations ಹೊಗುವದು common. ನೆನಪಿಡಿ  ನಾವು ಅದನ್ನೇ ಉಣ್ಣುವ ದು.
ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ   ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ  ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವ ದುಂಟು.

ಅಡಿಗೆ , ಊಟಾ ೩ ತರಹ
1. ಹೋಟೆಲ್ ಪಾರ್ಟಿಗಳಲ್ಲಿನ ಊಟ

2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.

3.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.

ಈ ಮೂರು ಪ್ರಕಾರದ ಊಟದಲ್ಲಿ  ಬೇರೆ ಬೇರೆ ತರಹದ ಸ್ಪಂದನೆಗಳು ಇರುವವೂ.

ಹೋಟೆಲ್ ಊಟ..
ಇಲ್ಲಿ ಯಾವುದೇ ಪಾಸಿಟಿವ್ vibrations ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುವವು.

ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...

ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಪಾಸಿಟಿವ್ ಸ್ಪಂದನೆಗಳು ಇರುವ ಅಡಿಗೆ.

ಆದರೆ ಇತ್ತೀಚಿಗೆ ಮನೆಯಲ್ಲಿ 
ಅಡಿಗೆ ಕೆಲಸದವಳು ಅಡಿಗೆ ಮಾಡುವ fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ  ಇದ್ದರೂ
ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು so ಅಲ್ಲಿಯೂ
ನೆಗೆಟಿವ್ vibration ಇರುವುದು 
So ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ
ಸ್ವಲ್ಪ ವಿಚಾರ ಮಾಡಿ ನೋಡಿ.
ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ‌ವ್ಯತ್ಯಾಸ ?
ತಾಯಿ  ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.

ಮಂದಿರ ಮಠಗಳಲ್ಲಿನ ಅಡಿಗೆ....

ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು  ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ ,  .
ಅದರ ಸ್ವಲ್ಪ ಭಾಗ ಬಡವರಿಗೆ
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಂದಿರ,  ಬಡಬಗ್ಗರು , ನಿರ್ಗತಿಕರು, ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ  ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.

ಅನ್ನದಲ್ಲಿ ಜಾದು ಇದೆ,.  ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ  ಊಟ ಮಾಡಿ ನೋಡಿ.
3 ತಿಂಗಳು ಇದನ್ನು ಮಾಡಿ ನೋಡಿ.
ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.
***












***

2 comments:

  1. ಬ್ರಾಹ್ಮಣರು ಬಾಳೆ ಎಲೆಯ ಊಟದ ಮುನ್ನ ಅನುಸರಿಸುವ ವಿಧಾನ ಮತ್ತು ಮಂತ್ರ

    ReplyDelete
    Replies
    1. ಮಾನ್ಯರೇ, ಕೆಳಗಿನ ಲೇಖನ ಬಗ್ಗೆ ಗಮನ ಹರಿಸಿರಿ.
      https://raocollections.blogspot.com/2019/04/not-chitraahuti-not-chitravati-process.html

      Delete