SEARCH HERE

Tuesday 1 January 2019

ಬನ್ನಿ ಶಮೀ ಅನೇಕ ರೋಗಕ್ಕೆ ಪರಿಹಾರ banni or shami remedy for diseases


ಬನ್ನಿ ಮರ 
ವೈಜ್ಞಾನಿಕ ನಾಮ:- Acacia farnesiana (L.) WILLD. ಪರ್ಯಾಯನಾಮ:- ಶಮೀ ಕುಟುಂಬ:- MIMOSACEAE

(ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ವೃಕ)
ಇತರೆ ಹೆಸರು:-
ಸಂಸ್ಕೃತ- ಅರಿಮೇದ, 
ತಮಿಳು- ಕಸ್ತೂರಿ ವೇಲಂ, ಮಲಿಯಾಲಂ-ಕರಿವೇಲಂ,
ಹಿಂದಿ-ಬಬೂಲ, 
ತೆಲಗು-ಅರಿಮಿದಮು, 
ಮರಾಠಿ-ದೇವ್ಬಾಬ್ಬುಲ,
ಇಂಗ್ಲಿಷ್-Cassie tree

ಯಾವ ಪದ್ದತಿಯಲ್ಲಿ ಉಪಯೋಗ:-

ಆಯುರ್ವೇದ, ಸಿದ್ದಾ, ಚೈನಾ, ಜಾನಪದ

ಭಾರತ, ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಭಾರತದಲ್ಲಿ ಕೊಂಕಣ, ಕರ್ನಾಟಕದ ಮೈದಾನ ಪ್ರದೇಶ, ಪಶ್ಚಿಮ ಘಟ್ಟದ ಪೂರ್ವ ಇಳಿಜಾರು ಭಾಗಗಳಲ್ಲಿ ಕಾಣದೊರೆಯುತ್ತದೆ. ಇದು ಮಧ್ಯಮಗಾತ್ರದ ಮುಳ್ಳು ಮರ. ಭಾರತ ದೇಶದಲ್ಲಿ ಪೂಜಾರ್ಹವೆನಿಸಿದೆ. ಹಿಂದೆ ಪಾಂಡವರು ಅಜ್ಞಾತವಾಸಕ್ಕಾಗಿ, ಕಾಡಿಗೆ ಹೋದಾಗ ಅರ್ಜುನ ತನ್ನ ಗಾಂಡೀವಾಸ್ತ್ರವನ್ನು ಹೆಣದ ರೂಪದಲ್ಲಿ ಬನ್ನಿಮರಕ್ಕೆ ನೇತುಹಾಕಿದನಂತೆ, ಹೀಗೆ ಇದಕ್ಕೆ ಪುರಾಣೇತಿಹಾಸ ಇರುವುದರಿಂದಲೇ ಇದು ಪೂಜಾರ್ಹತೆ ಪಡೆದಿರಬಹುದು.

ಮರ ನೋಡಲು ಅಂದವಾಗಿದೆ. ಸುಮಾರು 3-5 ಮೀ ಎತ್ತರಕ್ಕೆ ಬೆಳೆಯುತ್ತದೆ ತೊಗಟೆ ಕಂದು ಬಣ್ಣದ್ದು. ಚಳಿಗಾಲದಲ್ಲಿ ಎಲೆಗಳು ಉದುರಿ ಹೋಗುವುವು ಎಲೆಗಳ ಬುಡದಲ್ಲಿ ಬೆಳೆಯುವ ವೃಂತಪರ್ಣಗಳು ಮುಳ್ಳುಗಳ ರೂಪದಲ್ಲಿವೆ ಏಪ್ರಿಲಿನಲ್ಲಿ ಹೂ ಬಿಟ್ಟು ಜುಲೈ ತಿಂಗಳಲ್ಲಿ ಬೀಜ ಕಟ್ಟುತ್ತದೆ. ಮರದ ಹೊರಪದರ ಹಳದಿ ಮಿಶ್ರಿತ ಬಿಳಿ, ಒಳಭಾಗ ಆಲಿವ್ ಕಂದು ಬಣ್ಣದವು. ವಯಸ್ಸಾದಂತೆ ಒಳಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೊರಭಾಗ ಬೇಗನೆ ಕೆಟ್ಟು ಹೋರ ಚೇಗುಭಾಗ ಗಾಳಿ ಬೆಳಕಿಗೆ ಮೈಯೊಡ್ಡುವಂತಿದ್ದರೂ ಬಹುಕಾಲ ಬಾಳಿಕೆಬರುತ್ತದೆ. ಗಟ್ಟಿಮರವಾದ್ದರಿಂದ ಗಾಡಿಯ ಗಾಲಿ, ಕಂಬ, ದಿಮ್ಮಿಗಳ ಹಾಗೂ ಕೃಷಿ ಉಪಕರಣಗಳ ತಯಾರಿಕೆಗೆ ಉಪಯುಕ್ತ. ತೊಗಟೆ ಮತ್ತು ಕಾಯಿಯಿಂದ ತಯಾರಿಸಿದ ತೈಲ ಗಾಯದಿಂದ ಸೋರುವ ರಕ್ತಸ್ರಾವವನ್ನು ತಡೆಯುತ್ತದೆ. ಬನ್ನಿಯಿಂದ ಸಹ ಗಮ್ ಅರ್ಯಾಬಿಕಾ ರೀತಿಯ ಗೋಂದನ್ನು ಪಡೆಯಬಹುದು.

ಅತ್ಯಂತ ಹೆಚ್ಚು ಉಷ್ಣತೆ, ಹಾಗು ಕಡಿಮೆ ನೀರಿರುವ ಕಡೆ ಬೆಳೆಯುತ್ತಂತೆ... ರಾಜಸ್ಥಾನ್ ಸಂಪೂರ್ಣವಾಗಿ ಈ ಮರದ ಮೇಲೆ ಅವಲಂಬಿಸಿದೆ.. ನೆರಳು, ಜಾನುವಾರುಗಳಿಗೆ ಮೇವು, ಸೌದೆ, ಫರ್ನಿಚರ್, ಅಷ್ಟೇ ಅಲ್ಲದೆ ಅದರ ಒಣಗಿದ ಕಾಯಿಗಳು ಅಲ್ಲಿನ ಪ್ರಮುಖ ಖಾದ್ಯ... ಕಿಲೋಗೆ 300 - 400 ರುಪಾಯಿವರೆಗೂ ಇದೆಯಂತೆ... ಇದರ ಕಾಯಿ ಪಲ್ಯದಿಂದ ಹಿಡಿದು ಉಪ್ಪಿನಕಾಯಿವರೆಗೂ ಉಪಯೋಗಿಸಲಾಗುತ್ತೆ..

ಸಾರಜನಕವನ್ನು ಮಣ್ಣಿಗೆ ಒದಗಿಸುವ ಮೂಲಕ ಪಲವತ್ತತೆಯೂ ಹೆಚ್ಚುತ್ತದೆಯಂತೆ... ಜಮೀನುಗಳ ಬದಿಗಳಲ್ಲಿ ಈ ಸಸಿಗಳನ್ನು ನೆಡುವುದರಿಂದ ನೈಸರ್ಗಿಕ ಗೊಬ್ಬರವೂ ಸಿಗುತ್ತೆ.. 

ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ.ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ. 

ಈ ವೃಕ್ಷ ದೈವಸ್ವರೂಪಿ. ವಿಜಯದಶಮಿ ಬಂತೆಂದರೆ 'ಬನ್ನಿ' ಯನ್ನು ನೆನೆಯದವರಿಲ್ಲ. ಸಂಭ್ರಮದ ದಸರಾಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ.

ಹೋಮ ಹವನ ಯಜ್ಞ ಮಾಡುವ ವೇಳೆಯಲ್ಲಿ ಇದರ ಒಣಗಿದ ಟೊಂಗೆ ಅರ್ಪಿಸುವರು. ಆದ್ದರಿಂದ ಇದಕ್ಕೆ ಹವನೀಯ ವೃಕ್ಷವೆಂದೂ ಹೆಸರು.

ಯಜ್ಞಕ್ಕೆ ಬೇಕಾಗುವ ಅಗ್ನಿಯನ್ನು ಪಡೆಯಬೇಕಾದರೆ ಇದೇ ವೃಕ್ಷದ ಕೊಂಬೆಗಳನ್ನು ಕಡೆದು (ಉಜ್ಜಿ) ಪಡೆಯುವರು.

ಈ ವೃಕ್ಷದಲ್ಲಿ ಕೇಶಮಧಿನಿ, ತಪತನಯಾ, ಅಗ್ನಿಗರ್ಭಾ, ಹವಿರ್ಗಂಧಾ ಗುಣಧರ್ಮಗಳಿವೆ.

ಶಮೀವೃಕ್ಷದ ಉಪಯೋಗ

* ಸಂತತಿ ಸೌಭಾಗ್ಯ

ಅಥರ್ವಣ ವೇದದಲ್ಲಿ ಶಮೀವೃಕ್ಷ ಸಂತತಿ ಸೌಖ್ಯವನ್ನು ನೀಡುವುದಾಗಿ ಹೇಳಿದೆ.

* ಮೂಲವ್ಯಾಧಿ ಯಿಂದ ಬಳಲುವವರು ಬನ್ನಿಯ ಎಲೆಯ ಕಷಾಯವನ್ನು ತಣ್ಣೀರಿನ ಟಬ್ಬಿನಲ್ಲಿ ಹಾಕಿ ಅದರಲ್ಲಿ ಕುಳಿತುಕೋಳ್ಳಬೇಕು

* ಮುಖದ ಮೇಲಿನ ಅನಗತ್ಯ ರೋಮ ವು ಬೇಳೆಯುತ್ತಿದ್ದರೆ ಬನ್ನಿ ಕಾಯಿಯನ್ನು ನೀರಿನಲ್ಲಿ ತೇಯ್ದು ಲೇಪಿಸುತ್ತಿದ್ಧಲ್ಲಿ ಬೆಳವಣಿಗೆ ತಗ್ಗುತ್ತದೆ

* ಬನ್ನಿ ತೋಗಟೆಯ ಕಷಾಯವು ಬೇದಿ, ಕೆಮ್ಮು, ತಲೆಸುತ್ತು, ಚರ್ಮ ರೋಗ, ರಕ್ತಸ್ರಾವ, ಜಂತುಹುಳುಗಳ ತೊಂದರೆ ಗೆ ಉಪಯುಕ್ತ

* ಬನ್ನಿಯ ಕಾಯಿ ಪಿತ್ತ ವೃದ್ಧಿ ಮಾಡುವುದಲ್ಲದೆ ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ

* ಬನ್ನಿ ಮರದ ತೊಗಟೆ ಕಷಾಯ ರುಮಾಡಿಸಂ ಇಂದ ಬಳಲುತ್ತಿರುವವರಿಗೆ ಉತ್ತಮ

* ಬನ್ನಿ ಮರದ ಹೂವುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತ ವನ್ನು ತಡೆಗಟ್ಟಬಹುದು

* ತೊಗಟೆಯನ್ನು ಪುಡಿ ಮಾಡಿ ಪೇಸ್ಟನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ವಿಷ ಪ್ರಭಾವ ಕಡಿಮೆ ಆಗುತ್ತದೆ

* ತೊಗಟೆಯ ಪುಡಿಯನ್ನು ಅರಿಷಣ ಮತ್ತು ಹಾಲಿನೊಂದಿಗೆ ಕಳಿಸಿ ಹಚ್ಚಿದರೆ ಚರ್ಮ ಕಾಂತಿ ಯುತವಾಗುತ್ತದೆ.

* ತೊಗಟೆಯ ಕಷಾಯವು ಆ‌ಮಶಂಕೆ, ಬೇದಿಗೆ ಉತ್ತಮ ಔಷಧಿ

* ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದ್ದಲ್ಲಿ ಗಂಟಲು ನೋವು, ಹಲ್ಲು ನೋವು ಪರಿಹಾರವಾಗುತ್ತದೆ

* ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.

ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.

* ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಿಹಿ ನೀರು ಸಿಗುತ್ತದೆ. ( ಗ್ರಾಮಿಣ ಹಿರಿಯರ ನಂಬಿಕೆ/ ಅನುಭವ & ಯಶಸ್ವಿ ಪ್ರಯೋಗ)

ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.

ಸಂತಾನಭಾಗ್ಯ ಇಲ್ಲದವರು ಈ ಶಮೀವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.

( ನಂಬಿಕೆ & ನಾಟಿ ವೈದ್ಯರ ಪ್ರಯೋಗದ ಮಾಹಿತಿ ಆಧರಿಸಿ)

ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.

ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು. ( ನಂಬಿಕೆ )

ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು. 
( ನಂಬಿಕೆ )

********


No comments:

Post a Comment