SEARCH HERE

Tuesday 1 January 2019

saligrama shila shile kallu stone ಸಾಲಿಗ್ರಾಮ ಶಿಲಾ shaligrama ಶಾಲಿಗ್ರಾಮ



Why do Hindu worship Original Shaligram Stone?

There are many ancient holy books written by hand in Hinduism. Such as 4 Vedas, 18 Purans, 108 Upanishads and so on. The importance of original Shalagrama has been quoted in different Puranas and Hindus do respect those script and try to follow it practically. It is said that it holds high worth than any other expensive material like gold, silver and so on. In addition, the water having just stroked the genuine Shaligram Shila will transform into “Amrit” (an immortal making liquid) and that fluid has the ability to bypass any kind of illness and negative aspect from consumer’s physique. Some of the Puranic tells are specified below.

Few quotes of Skanda Purana:

Those people who consume the holy nectar of Genuine Saligram will get rid of all Sin committed by him.

As per sagar shrimali ji  .. A person who drinks a scared Salagrama soaked water, he/she will get moksha and even breastfeed is not necessary for the child.

Anyone who sees, heartily pay respect, bathe and worship this stone will be blessed by the lord and achieve the outcomes of giving 10 million cows in donations.

Padma Puranas

Rivers like the Godavari, Ganga, and others do have the quality to remove sin and reward with moksha because they are the charanamrita of Lordshalagrama naturally.

Baraha Puranam

Even the broken piece of original Sila in Shaligramkshetra do have the same power as of unbroken do have.

However, Skanda-Purana points out that a silky and glowing genuine Shaligram stone should be worshipped by a person who wants to achieve siddhi quickly by chanting mantras.

Briefly, In Accordance to Skanada, Padma, and other Puranas, the worshipper of Shaligram Bhagawan realizes no fear and will be blessed to attain every aspect of desire. Likewise, peaceful environment overcomes in his surroundings, will have good health and no psychological panic remains on the mind, able to get a respectable wife or husband, decent descendants, immense wealth, attains strong shield against all evil forces and live prosperous life standard. Worshipping of Shaligram is useful for meditation process and activate kundalini to achieve spiritual liberation plus many more.
****


.#ಸಾಲಿಗ್ರಾಮ 

 ಸಾಲಿಗ್ರಾಮ ಅಂದರೇನು ? ಸಾಲಿಗ್ರಾಮಕ್ಕೆ ಯಾಕಿಷ್ಟು ಮಹತ್ವ...‌‌‌

ದೇವಿ ಭಾಗವತ ಪುರಾಣದ ಪ್ರಕಾರ: ದೇವಿ ಭಾಗವತ ಪುರಾಣದ ಪ್ರಕಾರ ಜಲಂಧರನನ್ನು ಕೊಲ್ಲಲು ವಿಷ್ಣುವು ಆತನ ಸತಿ ಬೃಂದಾಳ ಪಾತಿವ್ರತ್ಯ ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ಆಕೆ ವಿಷ್ಣುವಿಗೆ ನಾಲ್ಕು ಅವತಾರವನ್ನು ಎತ್ತು ಎಂದು ಶಾಪ ಕೊಡುತ್ತಾಳೆ. ಶಾಪ ಮುಕ್ತಿಗಾಗಿ ವಿಷ್ಣುವು ಕಲ್ಲು ಸಾಲಿ ಗ್ರಾಮ, ಹುಲ್ಲು ದರ್ಬೆ , ಮರ ಅಶ್ವತ್ಥ ಮತ್ತು ಗಿಡವಾಗಿ ತುಳಸಿ ಅವತಾರ ಎತ್ತುತ್ತಾನೆ. 

ಇತಿಹಾಸದ ಪ್ರಕಾರ ಗಂಡಕಿ ಎಂಬ ಭಕ್ತೆ ಹಲವು ವರ್ಷ ತಪಸ್ಸು ಮಾಡಿ ವರವನ್ನು ಪಡೆದ ಫಲವಾಗಿ ವಿಷ್ಣುವು ಆಕೆಯ ಗರ್ಭವನ್ನು ಪ್ರವೇಶಿಸುತ್ತಾನೆ. ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ.  ಗಂಡಕಿ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ.

ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ....

ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ-ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳ ಇದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದಂತೆ. ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾ ಎಂದು ಕರೆಯಲಾಗುತ್ತದೆ. 

ಪಾಲಿಷ್ ಮಾಡಿದ, ನಕಲಿ ರೇಖೆ ಸೃಷ್ಟಿಸಿದ ಸಾಲಿಗ್ರಾಮಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುತ್ತವೆ. ಆದರೆ ಅಸಲಿ ಸಾಲಿಗ್ರಾಮವನ್ನು ಪೂಜಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ ಎಂಬ ನಂಬಿಕೆ ಇದೆ.

ಅಸಲಿ ಸಾಲಿಗ್ರಾಮಗಳು  ಹೇಗೆ  ತಯಾರಾಗುತ್ತದೆ... 'ವಜ್ರ ಕೀಟ' ಎಂಬ ಹುಳುವಿಗೆ ಆಶ್ರಯ ತಾಣ ಕಪ್ಪು ಕಲ್ಲು.. ವಜ್ರದಷ್ಟೇ ಗಟ್ಟಿ  ಹಲ್ಲು ಹೊಂದಿರುವ ಈ ಕೀಟ ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ಒಳಗೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ. ಇದು ವಿವಿದ ಆಕಾರದಲ್ಲಿ  ಕೊರೆದಿರುತ್ತದೆ...

ಸಾಲಿಗ್ರಾಮ ಎಂಬುವುದು ಒಂದು ಶಿಲೆ ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗಗಳ ದರ್ಶನ ಹಾಗೂ ಪೂಜೆಗೆ ಸಮಾನ ಎಂಬ ನಂಬಿಕೆ ಇದೆ.

ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಪತ್ನಿ, ಮಕ್ಕಳು, ಆರೋಗ್ಯ, ಐಶ್ವರ್ಯ, ಶಾಂತಿ ದೊರೆಯುತ್ತದೆ. ಇದರ ನೀರಿನ ಸ್ಪರ್ಶದಿಂದ ಚಿಂತೆ, ಒತ್ತಡ, ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳೂ ಪೂರೈಸುತ್ತವೆ. ಸಾಲಿಗ್ರಾಮದಲ್ಲಿ ದಿವ್ಯ ಶಕ್ತಿ ಇದ್ದು, ಇದಕ್ಕೆ ಅಭಿಷೇಕ ಮಾಡಿದ ಪದಾರ್ಥ ಸೇವಿಸಿದರೆ (ಹಾಲು, ಮೊಸರು, ನೀರು ಇತ್ಯಾದಿ) ಆರೋಗ್ಯ ವೃದ್ಧಿಯಾಗುತ್ತದೆ....ಪ್ರತಿ ಮನೆಯಲ್ಲೂ ಸಾಲಿಗ್ರಾಮ ಇರಲೇ ಬೇಕು.  ಸಾಲಿಗ್ರಾಮಕ್ಕೆ ದಿನಾ ಪೂಜೆ ನಡೆಯುತ್ತಿರುವ ಮನೆಗಳಲ್ಲಿ ಶಾಂತಿ ನೆಮ್ಮದಿ ಸಮಾಧಾನ , ಮತ್ತು ಆರ್ಥಿಕ ತೊಂದರೆ ಅಷ್ಟಾಗಿ ಇರುವದಿಲ್ಲ...

 ವಿಷ್ಣುವಿನ ದಶಾವತಾರದ ಸಾಲಿಗ್ರಾಮಗಳು , ಶಿವಲಿಂಗದ ಸಾಲಿಗ್ರಾಮ , ಶ್ರೀ ಚಕ್ರ ಸಾಲಿಗ್ರಾಮ  ಇನ್ನೂ ಅನೇಕ ರೀತಿಯಲ್ಲಿ ಸಾಲಿಗ್ರಾಮ ಪೂಜೆ ನಾನಾ ಫಲಗಳಿಗೆ ಅನ್ವಯಿಸಿವೆ...


ಆದರೆ ಹೆಣ್ಣುಮಕ್ಕಳು ಸಾಲಿಗ್ರಾಮ ವನ್ನು ಮುಟ್ಟುವ ಮತ್ತು ಪೂಜಿಸಲು ಅಧಿಕಾರವಿಲ್ಲ...

ನ ಮಂತ್ರ ಪೂಜನಂ ನೈವ ಸಾಲಿಗ್ರಾಮ ಶಿಲಾರ್ಚನೇ l
ನ ಸ್ತುತಿರ್ನೋಪಚಾರಶ್ಚ ನ ತೀರ್ಥಂ ನ ಚ ಭಾವನಾ ll

ಸಾಲಿಗ್ರಾಮಶಿಲಾಯಾಂತು ನಾssವಾಹನ ವಿಸರ್ಜನೇ l

ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಪದ್ಮಪುರಾಣದಲ್ಲಿ ಸಾಲಿಗ್ರಾಮ ಶಿಲೆಯ ಬಗ್ಗೆ ಶಿವನು ಈ ರೀತಿ ಹೇಳಿದ್ದಾನೆ.


ಮಹಾಲಿಂಗ ಕೋಟಿಭಿಃ ದೃಷ್ಟಿ ಯದ್ ಫಲಂ ಪೂಜತಿ ಸಾಲಿಗ್ರಾಮ ಶಿಲಾಯಂತು ಏಕಸ್ಯಂ ಇವ ತದ್ಭವೇದ್ (ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ನೋಡುವುದು ಮತ್ತು ಪೂಜಿಸಿದಕ್ಕೆ ಸಮಾನ) ದೇವಿ ಭಾಗವತ ಪುರಾಣದ ಪ್ರಕಾರ; ಜಲಂಧರನನ್ನು ಕೊಲ್ಲಲು ವಿಷ್ಣುವು ಆತನ ಸತಿ ಬೃಂದಾಳ ಪಾತಿವ್ರತ್ಯ ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ಆಕೆ ವಿಷ್ಣುವಿಗೆ ನಾಲ್ಕು ಅವತಾರವನ್ನು ಎತ್ತು ಎಂದು ಶಾಪ ಕೊಡುತ್ತಾಳೆ. ಶಾಪ ಮುಕ್ತಿಗಾಗಿ ವಿಷ್ಣುವು ಕಲ್ಲು (ಸಾಲಿಗ್ರಾಮ), ಹುಲ್ಲು (ದರ್ಬೆ), ಮರ (ಅಶ್ವತ್ಥ) ಮತ್ತು ಗಿಡವಾಗಿ (ತುಳಸಿ) ಅವತಾರ ಎತ್ತಿದ. ಇತಿಹಾಸದ ಪ್ರಕಾರ ಗಂಡಕಿ ಎಂಬ ಭಕ್ತೆ ಹಲವು ವರ್ಷ ತಪಸ್ಸು ಮಾಡಿ ವರವನ್ನು ಪಡೆದ ಫಲವಾಗಿ ವಿಷ್ಣುವು ಆಕೆಯ ಗರ್ಭವನ್ನು ಪ್ರವೇಶಿಸುತ್ತಾನೆ. ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ.
ಎಲ್ಲಿ ಸಿಗುತ್ತದೆ?

ನೇಪಾಳ ದೇಶದ ಮಸ್ತಾಂಗ್ ಪ್ರದೇಶದಲ್ಲಿ, ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ-ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳ ಇದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದೆ. ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾ ಎಂದು ಕರೆಯಲಾಗುತ್ತದೆ. ಗಂಡಕಿ ನದಿಯ ಪಾತ್ರದಲ್ಲಿರುವ ಮುಕ್ತಿನಾಥ, ದಾಮೋದರ ಕುಂಡಗಳನ್ನು ಸಾಲಿಗ್ರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ.

ಹಿಂದುಗಳ ಸಂಪ್ರದಾಯದಂತೆ ಈ ಕಲ್ಲು 'ವಜ್ರ ಕೀಟ' ಎಂಬ ಹುಳುವಿಗೆ ಆಶ್ರಯ ತಾಣ. ವಜ್ರದ ಹಲ್ಲು ಹೊಂದಿರುವ ಈ ಕೀಟ, ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ಒಳಕ್ಕೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ. ಹಾಗೆಯೇ ಗಂಡಕಿ ನದಿಯ ಆಳವಾದ ಗರ್ಭದಲ್ಲಿ ಅಡಗಿರುವ ಸಾಲಿಗ್ರಾಮವೇ ಅಸಲಿ ಎಂಬ ನಂಬುಗೆಯೂ ಇದೆ.
ಪಾಲಿಷ್ ಮಾಡಿದ, ನಕಲಿ ರೇಖೆ ಸೃಷ್ಟಿಸಿದ ಸಾಲಿಗ್ರಾಮಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುತ್ತವೆ. ಅಸಲಿ ಎಂಬುದನ್ನು ತಜ್ಞರಿಂದಲಷ್ಟೇ ಪತ್ತೆ ಹಚ್ಚಲು ಸಾಧ್ಯ. ಭಕ್ತರು ಈ ಬಗ್ಗೆ ಎಚ್ಚರ ವಹಿಸಿಬೇಕು. ಅಂಗಡಿಯಲ್ಲಿ ದೇವರ ಆರಾಧನೆ ಮಾಡಿಯೇ ಇದನ್ನು ವ್ಯಾಪಾರಕ್ಕೆ ಇಡುತ್ತಾರೆ. ಹೀಗಾಗಿ ತೊಂದರೆ ಕಾಣಿಸುವುದಿಲ್ಲ. ಅಸಲಿ ಸಾಲಿಗ್ರಾಮವನ್ನು ಪೂಜಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.
ಯಾವ್ಯಾವ ಬಣ್ಣದಲ್ಲಿವೆ?

ನಾಲ್ಕಾಣೆ ಅಗಲದಿಂದ ಹಿಡಿದು ಮುಷ್ಟಿಯಷ್ಟು ಗಾತ್ರದ ದೊಡ್ಡ ಸಾಲಿಗ್ರಾಮವೂ ಇದೆ. ಈ ಕಲ್ಲು ಕೆಂಪು, ನೀಲಿ, ಹಳದಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ದೊರೆಯುತ್ತವೆ. ಹಳದಿ ಮತ್ತು ಚಿನ್ನದ ಬಣ್ಣದ ಸಾಲಿಗ್ರಾಮವು ಶುಭಕಾರಕ. ಇದನ್ನು ಪೂಜಿಸಿದರೆ ಆರ್ಥಿಕ ಸುಧಾರಣೆಯಾಗಿ ಅಭ್ಯುದಯವಾಗುತ್ತದೆ. ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ. ಆದರೆ ಕಪ್ಪುಬಣ್ಣದ ಸಾಲಿಗ್ರಾಮವನ್ನು ಪೂಜಿಸುವುದೇ ಜಾಸ್ತಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಣ್ಣ ಬದಲಾಗುತ್ತಿರುತ್ತದೆ. ಸ್ಕಂದ ಮತ್ತು ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಪತ್ನಿ, ಮಕ್ಕಳು, ಆರೋಗ್ಯ, ಐಶ್ವರ್ಯ, ಶಾಂತಿ ದೊರೆಯುತ್ತದೆ. ಇದರ ನೀರಿನ ಸ್ಪರ್ಶದಿಂದ ಚಿಂತೆ, ಒತ್ತಡ, ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳೂ ಪೂರೈಸುತ್ತವೆ. ಸಾಲಿಗ್ರಾಮದಲ್ಲಿ ದಿವ್ಯಶಕ್ತಿ ಇದ್ದು, ಇದಕ್ಕೆ ಅಭಿಷೇಕ ಮಾಡಿದ ಪದಾರ್ಥ ಸೇವಿಸಿದರೆ (ಹಾಲು, ಮೊಸರು, ನೀರು ಇತ್ಯಾದಿ) ಆರೋಗ್ಯ ವೃದ್ಧಿಯಾಗುತ್ತದೆ. ಸಾಮಾನ್ಯಾವಾಗಿ ಗುಂಡಗೆ ಇರುವ ಈ ಶಿಲೆ, ನಾನಾ ಆಕಾರದಲ್ಲೂ ಸಿಗುತ್ತದೆ.

ಪೂಜೆ ಹೇಗೆ?

ಪಂಚಾಯತನ ಪೂಜೆ ಮಾಡುವಾಗ ವಿಷ್ಣುವಿನ ವಿಗ್ರಹದ ಬದಲಿಗೆ ಸಾಲಿಗ್ರಾಮವನ್ನು ಇಡುವುದು ಸಾಮಾನ್ಯ. ಇದನ್ನು ಪೂಜಿಸಬೇಕಾದರೆ ಯಾವುದೇ ದೀಕ್ಷೆಯನ್ನೂ ತೆಗೆದುಕೊಳ್ಳಬೇಕಾಗಿಲ್ಲ. ವಿಶೇಷವಾದ ಶಾಸ್ತ್ರವಿಧಿ ಹಾಗೂ ನಿಶ್ಚಿತವಾದ ಕಾರ್‍ಯ ವಿಧಾನ ಬೇಡ. ಅರ್ಹತೆ ಪಡೆದ ಪೂಜಾರಿಯೂ ಬೇಕಾಗಿಲ್ಲ. ಪ್ರತಿನಿತ್ಯ ಸ್ನಾನ ಮಾಡಿ ಸಾಲಿಗ್ರಾಮಕ್ಕೆ ಮೊಸರು, ತುಪ್ಪ, ಹಾಲು, ಅಥವಾ ನೀರಿನಲ್ಲಿ ಅಭಿಷೇಕ ಮಾಡಬೇಕು. ಒಂದು ಬಾರಿ ಅಭಿಷೇಕ ಮಾಡಲು ಆರಂಭಿಸಿದರೆ ಪ್ರತಿನಿತ್ಯ ಮಾಡಲೇಬೇಕು. ಅಭಿಷೇಕ ಮಾಡಲು ಸಾಧ್ಯವಿಲ್ಲ ಎಂದಾದರೆ ಅಕ್ಕಿಯಲ್ಲಿ ಹಾಕಿಡಬೇಕು. ಆ ಅಕ್ಕಿ ಮುಗ್ಗಲು ಬರುತ್ತಿದೆಯಾ ಎಂಬುದನ್ನು ಗಮನಿಸುತ್ತಿರಬೇಕು. ಸ್ನಾನ ಮಾಡದೆ, ದುರಭ್ಯಾಸ ಮತ್ತು ಮೈಲಿಗೆಯಾದವರು ಇದನ್ನು ಮುಟ್ಟಬಾರದು. ನೆಲದ ಮೇಲೆ ಹಾಗೆಯೇ ಇಡಬಾರದು ಹಾಗೂ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಕರಂಡಿಕೆಯಲ್ಲಿ ಹಾಕಿ ಇಡಬೇಕು. ಇದರ ಮೇಲೆ ಜನರ ಕೆಟ್ಟ ದೃಷ್ಟಿ ಬಿದ್ದರೆ ಶಕ್ತಿ ವ್ಯಯವಾಗುತ್ತದೆ. ದೇವಾಲಯಗಳಲ್ಲಿ ಅವರವರ ಧರ್ಮಾಚರಣೆಗೆ ಅನುಗುಣವಾಗಿ ಯಾವುದೇ ಸಾಲಿಗ್ರಾಮವನ್ನು ಇಟ್ಟು ಪೂಜಿಸಬಹುದು.

ಸಾಲಿಗ್ರಾಮವನ್ನು ಮನೆಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಇಟ್ಟು ಪೂಜಿಸಬಹುದು. ಆದರೆ ಎರಡು ಅಥವಾ ಬೆಸ ಸಂಖ್ಯೆಯಲ್ಲಿ ಪೂಜಿಸಬಾರದು. ಒಂದೇ ಒಂದು ಕಲ್ಲನ್ನು ಪೂಜಿಸುವುದು ತುಂಬಾ ಒಳ್ಳೆಯದು. ಪ್ರತಿನಿತ್ಯ ೧೨ ಸಾಲಿಗ್ರಾಮಗಳನ್ನು ಪೂಜಿಸಿದರೆ ವ್ಯಕ್ತಿಯ ಶ್ರೇಷ್ಠತೆಯು ವೃದ್ಧಿಸುತ್ತದೆ ಮತ್ತು ಅಪರಾಧದಿಂದ ಮುಕ್ತಿ ಹೊಂದುತ್ತಾನೆ ಎಂಬ ನಂಬುಗೆಯೂ ಇದೆ. ಯಾವುದಾದರೂ ಕಾರಣದಿಂದ ಈ ಕಲ್ಲಿಗೆ ಹಾನಿಯಾದರೆ ಅಥವಾ ಒಡೆದರೂ ಪೂಜಿಸಬಹುದು.
ಪೂರ್ವಜರ ಕಾಲದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಸಾಲಿಗ್ರಾಮಕ್ಕೆ ಕಾರಣಾಂತರಗಳಿಂದ ಪೂಜೆ ಮುಂದುವರಿಸಲು ಸಾಧ್ಯವಾಗದಿದ್ದರೆ ದೇವಸ್ಥಾನ ಅಥವಾ ಮಠಕ್ಕೆ ಕೊಡಬಹುದು. ದೇವಸ್ಥಾನಗಳಲ್ಲೂ ಇವು ಅಧಿಕ ಸಂಖ್ಯೆಯಾದಾಗ ಪೂಜಿಸಲು ಸಾಧ್ಯವಾಗದಿದ್ದರೆ ಪ್ರಧಾನ ಶಕ್ತಿಯ ಆರಾಧನೆ ಮಾಡಿ ಕೆರೆ ಅಥವಾ ಬಾವಿಯಲ್ಲಿ ವಿಸರ್ಜಿಸುತ್ತಾರೆ

ಗಂಡಕೀ ನದಿಯಲ್ಲಿ ಸಿಗುವ ಸಾಲಿಗ್ರಾಮ ವಿಷ್ಣು ಸಾನಿಧ್ಯವುಳ್ಳದ್ದೆಂದೂ, ನರ್ಮದೆಯಲ್ಲಿ ಲಭಿಸುವ ಲಿಂಗವು ಶಿವಶಕ್ತಿಯುಳ್ಳದ್ದಾಗಿಯೂ , ಶೋಣಭದ್ರಾನದಿಯ ಶೋಣಶಿಲೆಯು ಗಣಪತಿಯ ಸಾನಿಧ್ಯವನ್ನೂ...ಭಾನುಮತೀ ನದಿಯ ಸ್ಪಟಿಕಶಿಲೆಯೂ ಸೂರ್ಯ ದೇವನನ್ನೂ...ಕುಮುದ್ವತಿಯ ಅಂಬಿಕಾ ಶಿಲೆಯೂ ದುರ್ಗಾದೇವೀ ಸ್ವರೂಪದ್ದೆಂದು ಪ್ರತಿನಿಧೀಕರಿಸುತ್ತದೆ.

ಸಾಲಿಗ್ರಾಮಗಳ ನಾನಾ ಬಗೆಯ ಬಣ್ಣ, ಆಕಾರಗಳ ಫಲವನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ👇🏽
ನೀಲಿ     -  ಅನ್ನ,  ಸರ್ವಸಿದ್ದಿ,  ಶಾಂತಿ, ಕೀರ್ತಿ, ಸಂಪತ್ತು

(whatsapp info)
******

ಸಾಲಿಗ್ರಾಮದ ವಿಚಾರ.

ಸಾಲಿಗ್ರಾಮದಲ್ಲಿ ಕಲಿಯೂ ಇರುತ್ತಾನೆಯೇ.......

ಸಾಲಿಗ್ರಾಮದ ಮೇಲೆ ಇರ್ತಾನೆ. ಕಲಿ ನಿವಾರಣೆ ಅಭಿಷೇಖ ಮಾಡೋ ಪದ್ಧತಿ ಇದೆ. (ನಿರ್ಮಾಲ್ಯಕ್ಕಿಂತ ಮೊದಲಿನ ಅಭಿಷೇಖ). 

ಶ್ರೀಮತ್ ಟೀಕಾಕೃತ್ಪಾದರು ಒಂದು ಕಡೆ ಹೇಳಿದ ವಿಷಯವನ್ನು,  ಅದೇ ಉದಾಹರಣೆ ಮೂಲಕ ಸ್ವಾಮಿಗಳು ಹೇಳಿದ್ದರು ಈ ಪ್ರಸಂಗದಲ್ಲಿ. 

ಒಂದು ಮಣಿ ಇರ್ತದ,  ಅದಕ್ಕೆ ಸಹಜವಾಗಿ ತನ್ನದೇ ಆದ ಪ್ರಕಾಶ ಇರ್ತದೆ. ಆದರೆ ಅದರ ಮೇಲೆ ಧೂಳು ಕೂತಾಗ, ಅದರ ಪ್ರಕಾಶದ ಲಾಭವನ್ನು ಪಡೆಯಬೇಕಾದ ನಮಗೆ ನಷ್ಟ,  ನಮ್ಮ ಕರ್ಮ. ನಮಗೆ ಆ ಮಣಿಯ ಪ್ರಕಾಶ ಆಗಲಿಕ್ಕೆ ಪ್ರತಿಬಂಧಕವೇ ಹೊರತೂ,  ಆ ಧೂಳಿನ ದೆಸೆಯಿಂದ ಮಣಿಯ ಪ್ರಕಾಶಕ್ಕೆ ಯಾವ ಕುಂದು ಕೊರತೆ ಬಂದಿಲ್ಲ. ದೋಷ ಬಂದಿಲ್ಲ. 
ಅದೇ ರೀತಿ ಇಲ್ಲಿಯೂ ತಿಳಿಯಬೇಕು ಅಂತ ಪರಮಪೂಜ್ಯ ಸ್ವಾಮಿಗಳು ಹೇಳಿದ್ದರು. 

ಧೂಳು ಅನ್ನೋದೆ ಕಲಿ 
ಆ ಧೂಳಿನಿಂದ ‌ಶಾಲಿಗ್ರಾಮಕ್ಕೆನೂ ನಷ್ಟವಿಲ್ಲ 
ಆದ್ರೇ ಅದರಿಂದ ನಮಗಾಗೋ ಅನರ್ಥವಾಗಲಿ ಅಪಚಾರ ವಾಗಲಿ ತಪ್ಪಿದ್ದಲ್ಲ .....
ಅದಕ್ಕೇ ನಿತ್ಯ ಪೂಜೆ ಅತ್ಯಂತ ವಿಹಿತ ಅಂತ ಹೇಳೋದು ಪುರುಷರಿಗೆ ನಿತ್ಯದಲ್ಲಿ ಶಾಲಿಗ್ರಾಮ ಸ್ಪರ್ಶವಾಗ್ತಾ ಇದ್ದರೇ ಭಗವಂತ ಹಸ್ತಲಾಘವ ನೀಡ್ತಾನಂತೆ ಎಂದು ಕೃಷ್ಣಾಮೃತ ಮಹಾರ್ಣವದಲ್ಲಿ ಶ್ರೀ ಮದಾಚಾರ್ಯರು ಹೇಳಿದ್ದಾರೆ ಎಂದು ಪ್ರವಚನದಲ್ಲಿ ಕೇಳಿದ ಸ್ಮರಣೆ ಅಷ್ಟೇ ಆಚಾರ್ಯರೇ...
ಧನ್ಯವಾದಗಳೊಂದಿಗೆ🙏🙇‍♀🙏

*******

ಸಾಲಿಗ್ರಾಮದಲ್ಲಿ ದೇವರ ನಿತ್ಯ ಸನ್ನಿಧಾನ , ವಿಶೇಷ ಆಹ್ವಾನಾದಿ ದೇವಪೂಜಾ ಕ್ರಿಯೆಗಳು ಬೇಕಿಲ್ಲ ಅಂತಾರೆ , ಆದರೆ ಸಾಲಿಗ್ರಾಮದಲ್ಲಿ ನಿತ್ಯ ಕಲಿ ಸನ್ನಿಧಾನ ಕೂಡ - ಇದನ್ನು ಹೇಗೆ ಬಗಿ ಹರಿಸೋದು ? 
" ಸಾಲಿಗ್ರಾಮ ಶಿಲಾಯಾಂತು ನಿತ್ಯಂ ಸನ್ನಿಹಿತ: ಕಲಿ: ಭೀಮಸೇನ ಮಹಾಬಾಹೋ ಗದಯಾ ತನ್ನಿವಾರಯ " 
 ಇದರ ಕುರಿತಾಗಿ ಹಿಂದೆ ಚರ್ಚೆ ಆಗಿದೆ actually.
ಭಗವಂತನ ಸನ್ನಿಧಾನ ಜಡಕ್ಕಿಂತ ಹೆಚ್ಚು ವಿಶೇಷವಾಗಿ ಇರುವ ಚೇತನರಲ್ಲಿ ಇದ್ದರೂ ಚೇತನರಲ್ಲಿ ಕಲಿ ಪ್ರವೇಶ ಇದ್ದೇ ಇದೆ.
ಭಾಗವತ etc ಹೇಳಬೇಕಾದರೆ ಕಲಿಕೃತ ದೋಷ ನಾಶಕ್ಕಾಗಿ, ಕಲಿಯ ನಿವಾರಣೆಗಾಗಿ ಕೂಡಾ ಶ್ರವಣ ಅಂತ ಮೊದಲಿಗೆನೇ ಸಂಕಲ್ಪದಲ್ಲಿ ಹೇಳ್ತಾರೆ ಉಪನ್ಯಾಸಕರು.
ಜಡಕ್ಕಿಂತಲೂ ಹೆಚ್ಚಿನ /ವಿಶೇಷವಾಗಿ ಭಗವಂತನ ಸನ್ನಿಧಾನ ಉಳ್ಳ ಜೀವ -ಚೇತನರಲ್ಲಿಯೇ ಕಲಿ ಪ್ರವೇಶ ಇದೆ ಅಂದ ಮೇಲೆ 
ಜಡ ಪದಾರ್ಥದಲ್ಲಿ ಕಲಿ ಪ್ರವೇಶ ಇದೆ ಅಂತ ಕೈಮುತ್ತಿ ನ್ಯಾಯದಿಂದ ಸಿದ್ಧ.
ಇಲ್ಲಿ ಸಾಲಿಗ್ರಾಮ ಶಿಲಾಯಾಮ್ ತು... ಸಾಲಿಗ್ರಾಮ ಶಿಲೆಯಲ್ಲಿ ಅರ್ಥಾತ್ ಭಗವಂತನಲ್ಲಿ ಕಲಿ ಪ್ರವೇಶ ಅಂತ ಅರ್ಥ ಅಲ್ಲ.
ಇಲ್ಲಿ ಹೇಳೋ ತಾತ್ಪರ್ಯ ಎನು ಅನ್ನೋದಕ್ಕೆ ಪರಮ ಪೂಜ್ಯ ಶ್ರೀ ಸತ್ಯಾತ್ಮ ತೀರ್ಥರು ಒಂದು ಸುಂದರ ದೃಷ್ಟಾಂತವನ್ನು ಕೊಟ್ಟು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಂದು ಅನರ್ಘ್ಯ ಮಣಿ /ರತ್ನ ಇದೆ. ಬಹಳ ಪ್ರಕಾಶಮಾನವಾದದ್ದು.
ಆದರೆ ಆ ಮಣಿಯ ಮೇಲೇ ಧೂಳು ಕೂತಿದ್ರೆ ಮಣಿಯ ಪ್ರಕಾಶ ನಮಗೆ ಆಗೋದಿಲ್ಲ.
ಅರ್ಥಾತ್ ಆ ಧೂಳು ನಮಗೆ ಮಣಿಯ ಪ್ರಕಾಶ ಆಗಲಿಕ್ಕೆ ಪ್ರತಿಬಂಧಕ.
ಹೇಳೋ ತಾತ್ಪರ್ಯ -ಆ ಧೂಳು 
ಮಣಿಯ ಪ್ರಕಾಶತ್ವ ಅನ್ನೋ ಗುಣಕ್ಕೆ ಯಾವ ಚ್ಯುತಿಯನ್ನೂ ತಂದಿಲ್ಲ. ಆ ಪ್ರಕಾಶದ ಉಪಯೋಗ ಪಡೆಯುವ ನಮಗೆ ಪ್ರತಿಬಂಧಕ.
ಆ ಧೂಳಿನಿಂದ ಮಣಿಯ ಸ್ವಾಭಾವಿಕ ಪ್ರಕಾಶಕ್ಕೆ ಯಾವ ಕುಂದು ಕೊರತೆಯೂ ಬಂದಿಲ್ಲ.
ಆದನ್ನು ವ್ಯಕ್ತಗೊಳಿಸಿಕೊಳ್ಳುವ ನಮಗೆ ಪ್ರತಿಬಂಧಕ ಅಷ್ಟೇ ಅದು.
ದೇವ ಪೂಜಾ ಕಾರ್ಯದಲ್ಲಿ ಅಡ್ಡಿ ತರೋದೇ ಕಲಿಯ ಮುಖ್ಯ ಕೆಲಸ /ಉದ್ದೇಶ.
ಸಾಲಿಗ್ರಾಮದಲ್ಲಿ ನಿತ್ಯ ಭಗವಂತನ ಸನ್ನಿಧಾನ. ಆಹ್ವಾನ, ಅಂಗನ್ಯಾಸ ಯಾವುದೂ ಬೇಕಾಗಿಲ್ಲ. ಆದರೆ ಅಲ್ಲಿಯ ಸನ್ನಿಧಾನ ವ್ಯಕ್ತ ಆಗಲಿಕ್ಕೆ ಕಲಿ ಪ್ರತಿಬಂಧಕನಾಗಿ ಕೂತಿರ್ತಾನೆ. ಆದರ ನಿವಾರಣಕ್ಕಾಗಿ ತಾವು ಉದಾಹರಿಸಿದ ಶ್ಲೋಕ.
ಜೊತೆಗೆ ದೇವಪೂಜಾ ಕಾರ್ಯದಲ್ಲಿ ಅಥವಾ ನಿರ್ಮಾಲ್ಯ ವಿಸರ್ಜನೆ ಸಮಯದಲ್ಲಿ ನಾವು ಮೊದಲಿಗೆ ಒಂದು ಅಭಿಷೇಕ ಮಾಡಿ, ಆ ಅಭಿಷೇಕ ನೀರನ್ನು ಪ್ರೊಕ್ಷಣೆ ಮಾಡದೆ ಹಾಗೇ ಪಾತ್ರೆಯಲ್ಲಿ ಹಾಕಿಬಿಡ್ತೀವಿ.
ಕಲಿ ಮೊದಲಾದ ಪ್ರತಿಬಂಧಕಗಳ ಪರಿಹಾರಕ್ಕೆ ಅದು.
*****

ಶ್ರೀವೇದವ್ಯಾಸ ಪ್ರಣೀತ-ಬ್ರಹ್ಮಕಾಂಡ ಗರುಡಮಹಾಪುರಾಣಮ್-ಸಪ್ತವಿಂಶೋsಧ್ಯಾಯಃ
ತತಃ ಪರಂ ಮಹಾಭಾಗೇ ವಾರುಣಂ ತೀರ್ಥಮುತ್ತಮಮ್ ||೧೩೦||  ತತ್ರಾಸ್ತೇ ವರುಣೋ ದೇವಃ ಪೂಜಾಂ ಕರ್ತುಂ ಹರೇಃ ಸದಾ |ತತ್ರ ಸ್ನಾನಂ ಪ್ರಕರ್ತವ್ಯಂ ದಾತವ್ಯಂ ದಾನಮುತ್ತಮಮ್ ||೧೩೧|| ಶಿಂಶುಮಾರಂ ಚ ಮತ್ಸ್ಯಂ ಚ ತ್ರಿವಿಕ್ರಮಮಥಾಪಿ ವಾ |ದಾತವ್ಯಂ ಭೂತಿಕಾಮೇನ ತೀರ್ಥೇಸ್ಮೀನ್ವರವರ್ಣಿನಿ||೧೩೨||ಜಂಬೂ ಫಲಸಮಾಕಾರಾ ಪುಚ್ಛೇ ಸೂಕ್ಷ್ಮಾ ಸಬಿಂದುಕಾ |ಚಕ್ರತ್ರಯಾ ಚ ವದನೇ ಪುಚ್ಛೋಪರಿ ಸ ಚಕ್ರಕಾ ||೧೩೩||ಶ್ರೀವತ್ಸಬಿಂದುಮಾಲಾಢ್ಯಾ ಮತ್ಸ್ಯಮೂರ್ತಿರುದಾಹೃತಾ|ಪುಚ್ಛಾದಧಶ್ಚಕ್ರಯುತಂ ಶಿಂಶುಮಾರಮುದಾಹೃತಮ್||೧೩೪||
      ಹೇ ಮಹಾನುಭಾವಳಾದ ಜಾಂಬವತಿಯೇ ! ಸ್ವಾಮಿಪುಷ್ಕರಣಿಯ ಪಶ್ಚಿಮಕ್ಕೆ ವರುಣತೀರ್ಥ ವಿದೆ . ಇದು ಅತ್ಯಂತ ಉತ್ತಮೋತ್ತಮವಾದ ತೀರ್ಥ ಎನಿಸಿಕೊಂಡಿದೆ . ಇಲ್ಲಿ ವರಣನು ಯಾವಾಗಲೂ ಶ್ರೀಹರಿಯ ಪೂಜೆಗಾಗಿ ಸಿದ್ಧನಾಗಿರುತ್ತಾನೆ. ಇಲ್ಲಿ ಮಾಡುವ  ಸ್ನಾನ ಜಪ ತಪ ದಾನ ಎಲ್ಲವೂ ಅನಂತಪಟ್ಟು ಫಲದಾಯಕವಾಗಿವೆ . ಹೇ ಸುಂದರಾಂಗಿಯೇ ! ಇಲ್ಲಿ ಶಿಂಶುಮಾರ , ಮತ್ಸ್ಯ , ಮತ್ತು ತ್ರಿವಿಕ್ರಮ ಶಾಲಗ್ರಾಮಗಳನ್ನು ದಾನ ಕೊಡಬೇಕು . ನೇರಳೆ ಹಣ್ಣಿನ ಆಕಾರ, ಬಾಲದ ಭಾಗದಲ್ಲಿ ಒಂದು ಬಿಂದು , ವದನದಲ್ಲಿ ಮೂರು ಚಕ್ರಗಳು ಮತ್ತು ಬಾಲದ ಮೇಲೆ ಚಕ್ರವಿದ್ದು , ಶ್ರೀವತ್ಸದ ಬಿಂದುಗಳಿಂದ ಯುಕ್ತವಾಗಿದ್ದರೆ ಅದು ಮತ್ಯ್ಯ ಶಾಲಗ್ರಾಮ ವೆಂದು ಕರೆಸಿಕೊಳ್ಳುವದು , ಬಾಲಭಾಗದ ಕೆಳಗಡೆ ಚಕ್ರವಿದ್ದರೆ ಅದನ್ನು ಶಿಂಶುಮಾರ ಶಾಲಗ್ರಾಮ  ವೆಂದು ಕರೆಯುವರು . 
ವಕ್ರಚಕ್ರಯುತಶ್ಚೇತ್ ಸ್ಯಾತ್ ತ್ರಿವಿಕ್ರಮ ಉದಾಹೃತಃ|ಏತೇಷಾಂ ಲಕ್ಷಣಂ ಶ್ರುತ್ವಾ ವಾರುಣೇ ತೀರ್ಥೇ ಉತ್ತಮೇ ||೧೩೫|| ಏತದ್ದಾನ ಫಲಂ ಪ್ರಾಪ್ಯ ಮೋದತೇ ವಿಷ್ಣುಮಂದಿರೇ | ಪೂರ್ವೋಕ್ತಾ ಮೂರ್ತಯೋ ಯಸ್ಮಿನ್ ಗೃಹೇ ತಿಷ್ಠಂತಿ ಭಾಮಿನಿ ||೧೩೬|| ಭಾಗೀರಥೀ ತೀರ್ಥವರಾ ಸನ್ನಿಧತ್ತೇ  ನ ಸಂಶಯಃ |ಸ್ವಾಮಿಪುಷ್ಕರಣೀಸ್ನಾನಂ ದುರ್ಘಟಂ ತು ಕಲೌ ನೃಣಾಮ್ ||೧೩೭||  ತತ್ರ ಸ್ಥಿತಾನಾಂ ತೀರ್ಥಾನಾಂ ಸ್ನಾನಂ ಚಾಪ್ಯತಿದುರ್ಘಟಮ್ |ಶಾಲಗ್ರಾಮಶಿಲಾದಾನಂ ದುರ್ಘಟಂ ಚ ತಥಾ ಸ್ಮೃತಮ್ ||೧೩೮|| ಸ್ವಾಮಿಪುಷ್ಕರಣೀತೀರೇ ಕನ್ಯಾದಾನಂ ಸುದುರ್ಘಟಮ್ |ದುರ್ಘಟಂ ಕಪಿಲಾದಾನಂ ಭಕ್ಷ್ಯದಾನಂ ಸುದುರ್ಘಟಮ್ ||೧೩೯|| ಸ್ವಾಮಿಪುಷ್ಕರಿಣೀ ತೀರ್ಥೇ ತೀರ್ಥೇವನ್ಯೇಷು ಭಾಮಿನಿ |ಸ್ನಾನಂ ಕುರು ಯಥಾನ್ಯಾಯಂ ಶಯ್ಯಾದಾನಂ ತಥಾ ಕುರು||೧೪೦|| 
    ಅಸಮ ಸಂಖ್ಯೆಯ ಚಕ್ರಗಳಿದ್ದರೆ ಅದು ತ್ರಿವಿಕ್ರಮ ಶಾಲಗ್ರಾಮ ವೆನಿಸಿಕೊಳ್ಳುವದು . ಇವೆಲ್ಲವುಗಳ ಲಕ್ಷಣಗಳನ್ನು ಆಲಿಸಿ ಉತ್ತಮವಾದ ವರುಣತೀರ್ಥದಲ್ಲಿ ಸ್ನಾನ ಮಾಡಿ ದಾನ ಮಾಡಿದರೆ  ಆ ದಾನದ ಫಲದಿಂದಾಗಿ ವೈಕುಂಠದಲ್ಲಿ ಮೋದಬಡುತ್ತಾರೆ . ಇಲ್ಲಿಯವರೆಗೆ ಹೇಳಿದ ಶಾಲಗ್ರಾಮ ಮೂರ್ತಿಗಳು ಯಾರ ಮನೆಯಲ್ಲಿ ಇವೆಯೋ ಅಲ್ಲಿ ಎಲ್ಲತೀರ್ಥಗಳು ಹಾಗೂ ತೀರ್ಥಗಳಲ್ಲೇ ಶ್ರೇಷ್ಠವಾದ ಭಾಗೀರಥೀ ತೀರ್ಥವೇ ಅಲ್ಲಿ ಸನ್ನಿಹಿತವಾಗಿರುತ್ತದೆ . ಇದರಲ್ಲಿ ಯಾವುದೇ ಸಂಶಯವಿಲ್ಲ . ಮಾನವರಿಗೆ ಕಲಿಕಾಲದಲ್ಲಿ ಈ ಸ್ವಾಮಿಪುಷ್ಕರಣಿಯ ಸ್ನಾನ , ಅದರಲ್ಲಿರುವ ಈ ತೀರ್ಥಗಳ ಸ್ನಾನ , ಶಾಲಿಗ್ರಾಮಗಳ ದಾನ , ಕನ್ಯಾದಾನ , ಕಪಿಲ ಗೋದಾನ , ಭಕ್ಷ್ಯಗಳ ದಾನ , ಶಯ್ಯಾದಾನ , ಇವೆಲ್ಲವೂ ದುರ್ಘಟವೇ ಆಗಿವೆ . 
ಜೈಗೀಷವ್ಯೇನ ಮುನಿನಾತ್ವೇವಮುಕ್ತಾ ಚ ಕನ್ಯಕಾ |ಸ್ವಾಮಿ ಪುಷ್ಕರಿಣೀ ಸ್ನಾನಂ ಸಾ ಚಕಾರ ಧೃತವೃತಾ ||೧೪೧|| ತೀರ್ಥೇಷ್ವನ್ನೇಷು ಸುಸ್ನಾತಾ ದಾನಂ ಚಕ್ರೇ ಸುಭಾಮಿನೀ|ಉವಾಸ ತತ್ರ ಸಾ ದೇವೀ ತ್ರಿಸಪ್ತಕದಿನಾನಿ ಚ ||೧೪೨|| ಸ್ವಾಮಿ ಪುಷ್ಕರಿಣೀ ತೀರ್ಥಮಹಿಮಾನಂ ಶ್ರುಣೋತಿ ಯಃ| ಸ ಯಾತಿ ಪರಮಾಂ ಭಕ್ತಿಂ ಶ್ರೀನಿವಾಸ ಜಗನ್ಮಯೇ ||೧೪೩|| 
     ಜೈಗಿಷವ್ಯ ಮುನಿಗಳು ಹೀಗೆ ಹೇಳಲಾಗಿ , ಜಾಂಬವತಿಯು ವ್ರತಧಾರಣ ಮಾಡಿ  ಸ್ವಾಮಿಪುಷ್ಕರಣಿಯಲ್ಲಿ ಸನ್ನಿಹಿತವಾಗಿರುವ ಆ ಎಲ್ಲ ತೀರ್ಥಗಳ ಸ್ನಾನಗಳನ್ನು ಸಂಕಲ್ಪ ಪೂರ್ವಕವಾಗಿ ಮಾಡಿ ದಾನ ಮಾಡಿ , ಮೂರು ವಾರಗಳ ಕಾಲ ಅಲ್ಲಿಯೇ ವಾಸ ಮಾಡಿದಳು . ಈ ರೀತಿಯಾಗಿರುವ ಅಗಾಧಮಹಿಮೆಯುಳ್ಳ ಸ್ವಾಮಿಪುಷ್ಕರಿಣೀ ತೀರ್ಥದ ಮಹಿಮೆಯನ್ನು ಯಾರು ಶ್ರದ್ಧಾಭಕ್ತಿಗಳಿಂದ ಶ್ರವಣ ಮಾಡುತ್ತಾರೋ ಅವರು ಜಗನ್ಮಯನಾದ ಶ್ರೀನಿವಾಸನ ಪಾದಾರವಿಂದಗಳಲ್ಲಿ ಅತಿಶಯವಾದ ಧೃಢಭಕ್ತಿಯನ್ನು ಹೊಂದುತ್ತಾರೆ . 
|| ಇತಿ ಶ್ರೀಗರುಡಮಹಾಪುರಾಣೇ ಬ್ರಹ್ಮಕಾಂಡೇ ವೇಂಕಟಗಿರಿ ಮಹಾತ್ಮ್ಯೇ ಸ್ವಾಮಿಪುಷ್ಕರಿಣ್ಯಾದಿ ತೀರ್ಥ-ತತ್ರತ್ಯದೇವ-ತದೀಯ ಶಾಲಗ್ರಾಮ ಲಕ್ಷಣ ತದ್ದಾನಾದಿವರ್ಣನಂ ನಾಮ ಸಪ್ತವಿಂಶೋsಧ್ಯಾಯಃ || 
****
ಶಾಲಿಗ್ರಾಮದ ಮಹತ್ವ
ಬ್ರಹ್ಮದೇವರು ಹೇಳುತ್ತಾನೆ  - ಹೇ ನಾರದ ಮುನಿಯೇ ಎಲ್ಲ ದಾನಗಳಲ್ಲಿ ಭೂ ದಾನವು ಶ್ರೇಷ್ಟವೆಂದು ಪ್ರಸಿದ್ದವಾಗಿದೆ. ಇದಕ್ಕಿಂತಲೂ ಶಾಲಿಗ್ರಾಮದ ದಾನವು ಇನ್ನೂ ಹೆಚ್ಚಿನದಾಗಿದೆ. ಕಾರ್ತಿಕದಲ್ಲಿ ಶಾಲಿಗ್ರಾಮಶಿಲೆಯನ್ನು ದಾನ ಮಾಡಿದವನ ಪುಣ್ಯದ ಮಿತಿಯು ಇಷ್ಟೇ ಎಂದು ವಿಷ್ಣುವಿನಂದಿಲೂ ಕೂಡಾ ನಿರೂಪಿಸಲ್ಪಟ್ಟಿಲ್ಲಾ. ನಾರದಾ, ಶಾಲಿಗ್ರಾಮವನ್ನು ಭಕ್ತಿಯಿಂದ ಪೂಜಿಸಿ ಯೋಗ್ಯನಾದ ಬ್ರಾಹ್ಮಣನಿಗೆ ದಾನ ಮಾಡಿದವನ ಪುಣ್ಯಫಲವನ್ನು ನನಗೆ ತಿಳಿದಷ್ಟು ಹೇಳುವೆನು ಕೇಳು. ಶಾಲಿಗ್ರಾಮವನ್ನು ದಾನಮಾಡುವವನು, ಸಪ್ತಸಾಗರ ಪರ್ಯಂತವಾದ ಭೂಮಿಯನ್ನು ದಾನ ಮಾಡುವದರಿಂದ ಬರುವಷ್ಟು ಫಲವನ್ನು ಹೊಂದುವನು. ಬ್ರಾಹ್ಮಣರಿಂದ ಕೇಳಲ್ಪಟ್ಟಾಗಲೂ ಕ್ಷುದ್ರ ಮನಸ್ಸಿನಿಂದ ಶಾಲಿಗ್ರಾಮವನ್ನು ದಾನಮಾಡದಿದ್ದರೆ ಆ ಮನುಷ್ಯನು ನೀಚ ಯೋನಿಯಲ್ಲಿ ಜನ್ಮತಾಳುವನು. ಈ ವಿಷಯದಲ್ಲಿ ನಿನಗೊಂದು ಪುರಾತನ ಇತಿಹಾಸವನ್ನು ಹೆಳುವೆನು . ಇದನ್ನು ಕೇಳುವವರ ಸಕಲ ಪಾಪಗಳೂ ನಾಶವಾಗುತ್ತವೆ. ಆದ್ದರಿಂದ ಶಾಂತಚಿತ್ತನಾಗಿ ಕೇಳು. ಶುಭಕರವಾದ ಗೋದಾವರೀ ನದಿಯ ದಂಡೆಯಲ್ಲಿ ದುರಾಚಾರಿಯಾದ ಒಬ್ಬ ವೈಶ್ಯನು ತನ್ನ ಹೆಂಡಿರು ಮಕ್ಕಳಿಂದ ಕೂಡಿಕೊಂಡಿದ್ದನು. ಅವನು ಬಹು ಧನವುಳ್ಳವನಾಗಿದ್ದರೂ, ನಿರ್ದಯಿಯಾಗಿದ್ದನು. ಅವನ ಹೆಂಡಿರು ಮಕ್ಕಳು ಮೊದಲಾದವರು ಹಸಿವೆ ನೀರಡಿಕೆಗಳಿಂದ ಬಹು ಪೀಡಿತರಾಗಿರುತ್ತಿದ್ದರು. ಆ ವೈಶ್ಯನು ತಾನೂ ಕೂಡಾ ಚನ್ನಾಗಿ ಊಟಮಾಡುತ್ತಿರಲಿಲ್ಲಾ. ಅವನಿಂದ ಒಂದು ಅಣುಮಾತ್ರ ದಾನವಾಗಲಿ, ಯಾರಿಗಾದರೂ ಉಪಕಾರವಾಗಲಿ ಎಂದೂ ಮಾಡಲ್ಪಟ್ಟಿರಲಿಲ್ಲ. ನಿತ್ಯದಲ್ಲೂ ಇತರರನ್ನು ದೂಷಿಸುವವನೂ, ಪರರ ದ್ರವ್ಯ ಹರಣದಲ್ಲಿ ಮನಸ್ಸುಳ್ಳವನೂ ಆಗಿದ್ದನು. ಒಮ್ಮೆ ಆವೈಶ್ಯನು ಒಬ್ಬ ದ್ವಿಜಶ್ರೇಷ್ಠನಿಗೆ ಸಾಲವನ್ನು ಕೊಟ್ಟು ಅಲ್ಪ ಕಾಲದಲ್ಲಿಯೇ ಸಾಲವನ್ನು ತಿರುಗಿಸಲು ಕೇಳಲು ಹೋದನು. ನಾರದಾ, ಆ ಬ್ರಾಹ್ಮಣನು ತನ್ನ ಸಾಲ ಕೇಳಲು ಬಂದಿರುವ ವೈಶ್ಯನನ್ನು ಕಂಡು ಆಲೋಚಿಸಿ, ಅಯ್ಯಾ ವೈಶ್ಯನೇ, ಏನಾದರೊಂದು ಉಪಾಯಮಾಡಿ ಈ ತಿಂಗಳ ಕೊನೆಯಲ್ಲಿ ನಿನ್ನ ದ್ರವ್ಯಸಾಲವನ್ನು ಮುಟ್ಟಿಸುವೆನು. ಇಲ್ಲಿದ್ದುಕೊಂಡು,ಕೊಟ್ಟ ಸಾಲವನ್ನೆಲ್ಲ ತೆಗೆದುಕೊಂಡು ಹೊಗಬಹುದು. ಸಾಲಗಾರನಾಗಿ ಯಾವನು ಜೀವಿಸುವನೋ ಅವನು ಮರಣಾನಂತರ ಒಂದು ಕಲ್ಪಪರ್ಯಂತ ನಿತ್ಯ ನಿರಯವನ್ನು ಹೊಂದುವನು. ಕೊನೆಗೆ ಸಾಲಕೊಟ್ಟವನ ಮಗನಾಗಿ ಹುಟ್ಟಿ ತೆಗೆದುಕೊಂಡ ಸಾಲವನ್ನೆಲ್ಲಾ ತಿರುಗಿ ಮುಟ್ಟಿಸುವನು. ......... ಆದ್ದರಿಂದ ಹೇ ವೈಶ್ಯನೇ ನಿನ್ನ ಸಾಲವನ್ನು ಸ್ವಲ್ಪೇ ದಿನಗಳಲ್ಲಿ ಮುಟ್ಟಿಸುವೆನು. ಎಂದು ಹೇಳಲು, ವೈಶ್ಯನು ಕೋಪದಿಂದ ಕೆಂಪು ಕಣ್ಣುಗಳುಳ್ಳವನಾಗಿ, ಹೇ ಮೂರ್ಖನೆ, ಇವತ್ತೇ ನನ್ನ ದ್ರವ್ಯವನ್ನು ತಿರುಗಿ ಕೊಡು. ಇಲ್ಲದಿದ್ದರೆ ಈ ಖಡ್ಗದಿಂದ ನಿನ್ನನ್ನು ಕೊಂದು ಬಿಡುವೆನು. ಎಂದು ಹೇಳಿದವನೇ ಪಾಪಬುದ್ದಿಯ ವೈಶ್ಯನು ಆ ಬ್ರಾಹ್ಮಣನನ್ನು  ತನ್ನ ಕೈಯಿಂದ ಜಗ್ಗಿ ಎಳೆದು ನೆಲದ ಮೇಲೆ ಕೆಡವಿ ಕಾಲುಗಳಿಂದ ಒದೆದನು. ಅತೀ ಕ್ರುದ್ದನಾದ ಆ ವೈಶ್ಯನು, ಯುದ್ಧದಲ್ಲಿ ವೀರಪುರುಷನು ಶತ್ರುವನ್ನು ಹೊಡೆಯುವಂತೆ, ತನ್ನ ಖಡ್ಗದಿಂದ ಬ್ರಾಹ್ಮಣನನ್ನು ಹೊಡೆದನು. ಆ ಹೊಡೆತದಿಂದ ವೇದಪಾರಾಯಣನಾದ ಬ್ರಾಹ್ಮಣನು ಮೃತನಾದನು. ನಾರದಾ ಇದನ್ನು ಕಂಡ ವೈಶ್ಯನು ರಾಜನ ಭಯದಿಂದ ಕೂಡಲೇ ಅಲ್ಲಿಂದ ಪಲಾಯನ ಮಾಡಿದನು. ಬ್ರಹ್ಮಘಾತಕನಾದ ಅವನು ಕೆಲದಿನಗಳ ನಂತರ ತನ್ನ ಮನೆಗೆ ತಿರುಗಿ ಬಂದನು.  ಬ್ರಹ್ಮಹತ್ತೆಯ ಪಾಪನಿಮಿತ್ತದಿಂದ ಅವನು ಅಲ್ಪಾಯುಷಿಯಾಗಿ ಅಲ್ಪಕಾಲದಲ್ಲಿ ಮೃತನಾದನು. ಆಗ ಭಯಂಕರರಾದ ಯಮದೂತರು ಕೈಯಲ್ಲಿ ಪಾಶಗಳನ್ನು ಹಿಡಿದುಕೊಂಡವರಾಗಿ ಆಸ್ಥಳಕ್ಕೆ ಬಂದೇಬಿಟ್ಟರು. ಅವರು ಕೃಷ್ಣಪಕ್ಷದ ರಾತ್ರಿಯಂತೆ ಕಪ್ಪಾಗಿದ್ದರು. ಭಯಂಕರವಾದ ಮುಖುಳ್ಳವರಾಗಿದ್ದರು. ಇಂಥ ಯಮದೂತರು ಪಾಶಗಳಿಂದ ಕಟ್ಟಿ ಆ ವೈಶ್ಯನನ್ನು ಯಮಸದನಕ್ಕೆ ಸೆಳೆದೊಯ್ದರು. ಮತ್ತು ಮುಂದೆ ಯಮಧರ್ಮನ ಆಜ್ಞಾನುಸಾರವಾಗಿ ಅಲ್ಲಿ ಘೋರವಾದ ರೌರವ ನರಕದಲ್ಲಿ ಅವನನ್ನು ಒಗೆದರು. 
ಆ ವೈಶ್ಯನಿಗೆ ಧರ್ಮಚಾರನೆಂಬ ಹೆಸರಿನ ಧರ್ಮಜ್ಞನಾದ ಒಬ್ಬ ಮಗನಿದ್ದನು. ಹರಿಭಕ್ತಪರಾಯಣನಾದ ಅವನು ತನ್ನ ತಂದೆಯು ಸಂಪಾದಿಸಿದ ಬಹಳವಾದ ಧನವನ್ನು ದಾನವಾಗಿ ಕೊಟ್ಟನು. ಧರ್ಮಕಾರ್ಯಗಳಲ್ಲಿ, ಬಾವಿ, ಉದ್ಯಾನ, ಕೆರೆಗಳನ್ನು ಕಟ್ಟಿಸುವದರಲ್ಲಿ ವಿನಿಯೋಗಿಸಿದನು. ಯಾಜ್ಞಿಕರಲ್ಲಿ ಬಹುಶ್ರದ್ಧೆಯುಳ್ಳ ಅವನು ಅನೇಕ ವಿವಾಹ ಉಪನಯನಗಳನ್ನು ಮಾಡಿಸಿದನು. ಆತುರರಾದ ಬ್ರಾಹ್ಮಣರಿಗೆ ನಿತ್ಯವೂ ಅನ್ನದಾನ ಮಾಡುತ್ತಲಿದ್ದನು. ತೀರ್ಥಯಾತ್ರಾರ್ಥಿಗಳಿಗೆ ಅತೀ ಭಕ್ತಿಯಿಂದ ನಿತ್ಯವೂ ದ್ರವ್ಯವನ್ನು ಕೊಟ್ಟು ಅವರಿಂದ ಆಶೀರ್ವಾದ ರೂಪವಾದ ಫಲವನ್ನು ಸ್ವೀಕರಿಸಿ ಸಂತೋಷದಿಂದ ಜೀವಿಸಿದನು. ಧರ್ಮಚಾರನಿಂದ ಅಸಂಖ್ಯವಾದ ದಾನಗಳು ಕೊಡಲ್ಪಟ್ಟವು. ಅನೇಕ ಗೋದಾನಗಳನ್ನು ಅನೇಕ ಸಲ ಕನ್ಯಾದಾನಗಳೂ ಮಾಡಲ್ಪಟ್ಟವು. ಈ ರೀತಿಯಾಗಿ ಜೀವನವನ್ನು ನಡೆಸುತ್ತಿದ್ದ ಅವನ ಮನೆಯು ಪುಣ್ಯತಮವೂ ಮಂಗಳಕರವೂ ಆಗಿದ್ದಿತು. ಒಂದು ಸಲ ಮಹಾತ್ಮನಾದ ಲೋಮಶ ಮುನಿಯು ಸಂಚರಿಸುತ್ತಾ ಯಮಧರ್ಮರಾಜನ ಮನೆಯಿಂದ ಧರ್ಮಚಾರನಲ್ಲಿಗೆ ಬಂದನು. ಬರುವಾಗ ಹೇ ಗೋವಿಂದ, ದಾಮೋದರ, ಕೃಷ್ಣ, ವಿಷ್ಣೋ, ಅನಂತ, ವೈಕುಂಠನಿಧಾನಮೂರ್ತೇ, ಶ್ರೀವಲ್ಲಭಾನಂತ, ಜನಾರ್ದನ, ಸಮಸ್ತಲೋಕೇಶ ನಿನಗೆ ಅನಂತ ನಮಸ್ಕಾರವು. ಎಂದು ಸರ್ವದಾ ಪರಮಾತ್ಮನ ನಾಮಸ್ಮರಣೆ ಮಾಡುತ್ತಾ ಮನೆಗೆ ಬಂದ ಮುನಿಯನ್ನು ಕಂಡು ಬಹುಸಂತೋಷ ಸಾಗರದಲ್ಲಿ ಮುಳುಗಿದ ಆ ವಣಿಕ ಪುತ್ರನು ಆನಂದ ಬಾಷ್ಪಗಳನ್ನು ಸುರಿಸುತ್ತಾ ಮಹಾತ್ಮನಾದ ಮುನಿಗೆ ಭಕ್ತಿಯಿಂದ ದಂಡಾವತ್ ಪ್ರಣಾಮ ಮಾಡಿದನು. ತನ್ನ ಪಾದಕಮಲಗಳಲ್ಲಿ ಬಿದ್ದಿರುವ ಅವನನ್ನು ದಯಾಳುವಾದ ಮುನಿಯು ಆಶೀರ್ವದಿಸಿದನು. ಆಗ ವೈಶ್ಯನು ಅರ್ಘ್ಯಪಾದ್ಯಾಸನಾದಿಗಳಿಂದ ಮುನಿಯನ್ನು ಪೂಜಿಸಿ ಕೈ ಜೋಡಿಸಿ ಹೇಳಿದನು. ಏನೆಂದರೆ ಸ್ವಾಮಿನ್, ತಮ್ಮಂಥವರ ಆಗಮನವು ನನಗೂ, ಮುನಿಗಳಿಗೂ ಕೂಡಾ ದುರ್ಲಭವಾದುದು. ಈ ಪೂರ್ವದಲ್ಲಿ ನನ್ನಿಂದ ಸಂಪಾದಿಸಲ್ಪಟ್ಟ ಧರ್ಮವು ಪಕ್ವವಾಗಿದೆ. ನನ್ನಿಂದ ಆಚರಿಸಲ್ಪಟ್ಟ ಕರ್ಮವು ಇಂದು ತಮ್ಮ ದರ್ಶನದಿಂದ ಫಲಿತವಾಗಿದೆ. ಹೇ ವಿಪ್ರೇಂದ್ರ, ಯಾವ ಕಾರಣಕ್ಕಾಗಿ ನೀವು ಇಲ್ಲಿಗೆ ಬಂದಿರುವಿರಿ? ಆಜ್ಞಾಪಿಸುವವರಾಗಿರಿ. ಹೀಗೆ ಪ್ರಾರ್ಥಿಸಲ್ಪಟ್ಟ ಲೋಮಶನು ಮಂದಸ್ಮಿತನಾಗಿ ಹೇಳುತ್ತಾನೆ. ಹೇ ಧರ್ಮಾಚರನೆ, ಇಂದು ನಾನು ಹೇಳುವದನ್ನು ಶಾಂತಚಿತ್ತನಾಗಿ ಕೇಳು. ಅನೇಕ ಲೋಕಗಳಲ್ಲಿ ಸಂಚರಿಸುತ್ತಿರುವ ನಾನು ಕೆಲ ದಿನಗಳ ಹಿಂದೆ ಯಮಲೋಕಕ್ಕೆ ಹೋಗಿದ್ದೆನು. ಅಲ್ಲಿ ಭಯಂಕರವಾದ ನರಕದಲ್ಲಿ ಬಿದ್ದಿರುವ ನಿನ್ನ ತಂದೆಯನ್ನು ಕಂಡು ಆ ವಿಷಯವನ್ನು ನಿನಗೆ ತಿಳಿಸುವದಕ್ಕಾಗಿ ಇಲ್ಲಿಗೆ ಬಂದಿರುವೆನು. ಹೇ ಧರ್ಮಚಾರನೆ ಕೇಳು, ಕಾರ್ತಿಕ ಮಾಸದಲ್ಲಿ ಶ್ರೋತ್ರೀಯನಾದ, ಅಪರೋಕ್ಷ ಜ್ಞಾನಿಗಳಾದ ಒಬ್ಬ ಬ್ರಾಹ್ಮಣನಿಗೆ ಭಕ್ತಿಯುತನಾಗಿ ಶಾಲಿಗ್ರಾಮ ಶಿಲೆಯನ್ನು ದಾನವಾಗಿ ಕೊಡು. ಇದರಿಂದ ನರಕದಲ್ಲಿ ತೊಳಲಾಡುತ್ತಿದ್ದರೂ ನಿನ್ನ ತಂದೆಯು ಮುಕ್ತನಾಗುವನು. ಮುನಿಯ ಈ ಮಾತನ್ನು ಕೇಳಿ ವೈಶ್ಯನು ಅವನಿಗೆ ಹೇಳುತ್ತಾನೆ. ..............ಸಶೇಷ
- ಗುರುರಾಜಾಚಾರ್ಯ ಕೃ. ಪುಣ್ಯವಂತ.
***

Types of Saligrama
नेपाल मुक्तिक्षेत्र की गण्डकी नदी में पाए जाने वाले प्रमुख 6 प्रकार के शिला / प्रस्तर / Stone


1 - पूरा नदी का पत्थर ऐसे ही होतें हैं .. 99.999% ... इसी प्रकार के पत्थरों से भरा हुआ हैं...

2 - उन्हीं पत्थरों में कुछेक में ऐसे दिव्य चिन्ह पाए जातें हैं ...उनकी आकृति व अलग अलग चिन्ह के कारण उनमें भी विष्णु सान्निध्य होने की बात कहा गया शास्त्र में ..!
3 - यह सर्पकुण्डल जैसा गोल घुमावदार होता हैं ... कोई वदन या चक्र नहीं होता ... किन्तु फिर भी इन्हें ही सुदर्शन शिला माना गया हैं ....
4 - यह शालीग्रामों का ही टूटा हुआ खण्डित अंश हैं ... जो कि सुदर्शन या शालिग्राम माना जाता हैं.. निर्भर करता हैं की कैसे टूटा कितना टूटा .. कौनसा भाग टूटा ... उसी पर निर्धारित होता हैं इसे शालीग्राम माने या सुदर्शन ...
5 - यह एक चक्र वाले शालीग्रामों में एक हैं ... इनका वदन हो या ऐसे ही ... बस एक ही चक्र होतें हैं ... इन्हें शालिग्राम ही माना जाता हैं ...
6 - वदन / मुँह / छिद्र युक्त शालिग्राम जिनके भीतर ऊपर नीचे एक एक चक्र होतें हैं ... ऐसे शिला ऊपर वर्णित सभी प्रकारों से श्रेष्ठ माने जाते हैं....
7 - एकाधिक वदन युक्त शालिग्राम भी पाए जातें हैं... एक से लेकर अनगिनत चक्र युक्त शालिग्राम होते हैं ... जो कि दुर्लभ प्रजाति के माने जाते हैं....
आप सभी एक एक फ़ोटो में नम्बर के साथ लिखा हुआ देख सकते हैं...
दूसरी बात
गण्डकी नदी एक नहीं 

बल्कि 

दो दो हैं मुक्तिनाथ में ...

एक का नाम स्वेत गण्डकी 

दूसरा हैं काली गण्डकी ...

काली गण्डकी में ही शालिग्राम प्राप्त होतें हैं जो सर्वोत्तम माने गए हैं ....
नारायण ....सागर श्रीमाली का नमस्कार आप सभी मित्रों को ...
***

        or

ನಮಸ್ಕಾರ ಆಚಾರ್ಯರೇ...ಶಾಲಗ್ರಾಮದ ಕುರಿತಾಗಿ ಕೆಲವು ಮಾಹಿತಿ ಅಗತ್ಯವಿದ್ದು...ತಮಗೆ ಈ ಮೂಲಕವಾಗಿ...ಪ್ರಾರ್ಥನಾ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ...
೧)ಸಾಮಾನ್ಯವಾಗಿ ಮನೆಯಲ್ಲಿ ಸಾಲಿಗ್ರಾಮಗಳ ಸಂಖ್ಯೆ ಎಷ್ಟು ಇದ್ದರೆ ಉತ್ತಮ?
೨)ಹೆಚ್ಚು ಸಾಲಿಗ್ರಾಮಗಳು ಇದ್ದರೆ ಹೆಚ್ಚು ನೈವೇದ್ಯ ಮಾಡಬೇಕೆ?
೩)ಅನಿವಾರ್ಯ ಸಂದರ್ಭಗಳಲ್ಲಿ ಕೇವಲ ಹಣ್ಣು ಅಥವಾ ಒಣಹಣ್ಣುಗಳ ನೈವೇದ್ಯ ಮಾಡಬಹುದೇ?
೪)ಸಾಲಿಗ್ರಾಮಗಳ ದಾನ ವಿದಿ ತಿಳಿಸಿ...

( as per Vishwanandini website-vishnudasa nagendracharya, Hemmige Village near Talakadu)
vyasaraja mutt follower - this verson needs clarification from Uttaradi Mutt

(from WhatsApp)

Best Answer
ಉತ್ತರ -ಒಂದೊಂದು ಕಡೆ ಒಂದೊಂದು ಪದ್ದತಿ ಇದೆ, ಹಾಗಾಗಿ ಈ video ಒಂದು. ತಪ್ಪರಿಲೂ ಬಹುದು. ನಿಮ್ಮ ಕುಲ ಪುರೋಹಿತರು ಹೇಳಿದ ಹಾಗೆ ಕೇಳಿರಿ.
***

No comments:

Post a Comment