ಕಷ್ಟ ಪರಿಹಾರಕ್ಕೆ ತನ್ನ ಪ್ರಯತ್ನ ಸಾಲದು. ದೇವರ ಸಹಾಯವೂಬೇಕು. ದೇವರೇ ತಾನು ಸ್ವತಃ ಸಹಾಯ ಮಾಡಿದ ಅನೇಕ ನಿದರ್ಶನಗಳನ್ನೂ ಕಾಣುತ್ತೇವೆ. ವರ್ಷ ವರ್ಷಗಳಿಂದ ಸಂತತಿ ಆಗಿರುವದಿಲ್ಲ. ಕೃಷ್ಣ ಯಾವುದೋ (ಗುರುಗಳ ಅನುಗ್ರಹ, ಸ್ವಾಮಿಗಳ ಕರುಣೆ, ಸೇವೆ, ದಾನ, ಜಪ, ಪಾರಾಯಣ, ಪ್ರಯಿಮೆ, ಹೋಮ ಹವನ, ಇತ್ಯಾದಿ) ಒಂದು ರೂಪದಿಂದ ಕೃಷ್ಣನೇ ಸಹಾಯಕ್ಜೆ ಬರುತ್ತಾನೆ. ಬಂದು ವರ್ಷದಲ್ಲಿಯೇ ಸಂತತಿ ಆಗಿರುಥತದೆ. ಇದು ಕೇವಲ ಒಂದು ಉದಾಹರಣೆ ಮಾತ್ರ. ಹೀಗೆ ಪ್ರತಿಯೊಂದು ಅಡಚಣೆಯಲ್ಲಿಯೂ ದೇವರು ಇಂದಿಗೂ ಸಹಾಯಕ್ಕಿರುತ್ತಾನೆ.
ದೇವ ತಾನಾಗಿ ಸಹಾಯಕ್ಕೆ ಬರುವದು ಒಂದು ಮಾರ್ಗವಾದರೆ, ಮತ್ತೊಂದು ಮಾರ್ಗ ಹರಕೆಗಳನ್ನು ಹೊತ್ತು ದೇವರನ್ಬು ಒತ್ತಾಯಪೂರ್ವಕ ಸಹಾಯಕ್ಕೆ ಕರೆತರುವದು.
*ಹೇ ಭಗವನ್ !! ನನ್ನ ಈ ಕಷ್ಟ ಬಗೆ ಹರಿಸು. ನಾನು ನಿನಗೆ ಇದು ಮಾಡುವೆ.* ಎಂಬ ಹರಕೆಗಳನ್ನು ಎಲ್ಲಡೆ ಕೇಳುತ್ತೇವೆ. ಹರಕೆಗಳನ್ನು ಕೆಲೊಮ್ಮೆ ಪೂರ್ಣ ಗೊಳಿಸುತ್ತಾನೆ. ಇನ್ನು ಕೆಲವೊಮ್ಮೆ ಪೂರ್ಣಗೊಳಿಸಲು ವಿಫಲನಾಗುತ್ತಾನೆ.
ವಿಚಿತ್ರ ಎಂದರೆ ಹರಕೆಹೊತ್ತುವಾಗ ಎಲ್ಲವನ್ನೂ ದಯಪಾಲಿಸುವ ನಿನ್ನ ಪ್ರೀತಿಗೋಸ್ಕರ ಈ ಹರಕೆ ಎಂದು ಎಂದಿಗೂ ಭಾವಿಸಲಾರ. ನನ್ನ ಈ ಉದ್ದೇಶ್ಯ ಈಡೇರುವದಕ್ಕೋಸ್ಕರ ಹರಕೆ ಎಂದೇ ಆಗಿರುತ್ತದೆ.
ಫಲ ಸಿಕ್ಕರೆ ಹರಕೆ ಪೂರ್ಣಗೊಂಡಿರುತ್ತದೆ. ಫಲಸಿಗದಿದ್ದರೆ ಹರಕೆ ಹರಕೆಯಾಗಿಯೇ ಉಳಿಯುತ್ತದೆ. ಮತ್ತೊಬ್ಬ ದೇವತೆಯನ್ನು ಕುರಿತು ಇನ್ನೊಂದು ಹರಕೆ ಎತ್ತಿರುತ್ತಾನೆ. ಇದರಿಂದ ತಾನು ಒಬ್ಬ ದೇವನ ಮೇಲೆ ಭರವಸೆ ಇಲ್ಲ. ಇವನು ಅನುಗ್ರಹಿಸದಿರೆ ಇನ್ನೊಬ್ಬ ದೇವತೆಯಡೆ ಪಲಾಯನ ನಾಡುವೆ ಎಂದು ಸಿದ್ಧನಾಗಿರುತ್ತಾನೆ.
ರೋಗ ಗುಣಮಾಡಲಿ ಬಿಡಲಿ ವೈದ್ಯರಿಗೆ ಹಣಕೊಡುವ ಹಾಗೆ, ವ್ಯವಹಾರದಲ್ಲಿ ಗೆಲವು ಸಿಗಲಿ ಸಿಗದಿರಲಿ ವಕೀಲರಿಗೆ ದುಡ್ಡು ತೆತ್ತುವ ಹಾಗೆ, ಫಲ ಕೊಡಲಿ ಬಿಡಲಿ ದೇವರಿಗೆ ಹರಕೆ ತೀರಿಸಿಯೇ ಬಿಡುತ್ತೇನೆ ಎಂಬ ಗತ್ತು ಅಂತೂ ಬರಲಾರದು. ರೋಗ ಗುಣವಾಗಲಿ, ಜಯ ಸಿಗಲಿ ನಂತರ ಹಣ ಕೊಡುವೆ ಎಂದು ಯಾರೂ ಸಿದ್ಧರಾಗುವದಿಲ್ಲ. ದೇವರಲ್ಲಿ ಮಾತ್ರ ಈ ತರಹದ ವ್ಯವಹಾರ ಯಾಕೆ.... ತಿಳಿಯದು. ಅದಕ್ಜೆ ದೇವನೂ ಏನೂ ಕೊಡದೆ ಬಾಯಿಬಿಡಿಸಿ ಕೂಡಿಸಿರುತ್ತಾನೆ.
ಹರಕೆ ಹೊತ್ತುವವರಿಗೆ ಒಂದು ದೃಢವಾದ ಬರವಸೆ ಇರಬೇಕು. ಒಂದು ಸಲ ದೇವರು ಸಹಾಯಕ್ಕೆ ಬಂದರೆ ಇಷ್ಟಾರ್ಥ ಈಡೇರಿತು ಎಂದೇ ಅರ್ಥ. ವೈದ್ಯರು, ವಕೀಲರು, ಮುಂತಾದವರು ವಿಫಲರಾಗಬಹುದು. ಆದರೆ ದೇವನ ವಿಷಯದಲ್ಕಿ ವಿಫಲತೆ ಎಂಬ ಪದವೇ ಇಲ್ಲ.
ಕೇವಲ ವಿಷ್ಣುಪ್ರೀತಿಗೋಸ್ಕರ ಹರಕೆ. ಅತ್ಯಂತ ದೃಢ ನಂಬಿಕೆಯಿಂದ ಪಾಲನೆ. ತೃಪ್ತನಾದ ದೇವ ಫಲಕೊಟ್ಟಿಯೇ ತೀರುವ.
*ನ ದೇವ ತೋಷಣಂ ವೃಥಾ*
ಇಂದು ಫಲ ಸಿಗದಿದ್ದರೆ, ನಿರಾಸೆ ಬೇಡ. ಪಕ್ಷಾಂತರ ಸರ್ವಥಾ ಬೇಡ. ಒಬ್ಬನೇ ಸ್ವತಂತ್ರ ದೇವ. ಸೃವಾಭೀಷ್ಟಫಲಪ್ರದನೂ ಅವನೆ. ವೈದ್ಯರೂ ವಕೀಲರೂ ಸಹ ಇಂದು ಆರೋಗ್ಯವನ್ನೋ ಜಯವನ್ನೋ ಇಂದು ಕೊಡದಿದ್ದರೂ ಮುಂದೊಮ್ಮೆ ತಂದು ಕೊಡಬಹುದು. ಆದರೆ ಮುಂದುನ ಆರೋಗ್ಯ ಜಯಗಳಿಗೆ ಪ್ರತ್ಯೇಕ ಹಣ ನಿಶ್ಚಿತ. ಆದರೆ ದೇವನ ವಿಷಯಕೆ ಹಾಗಲ್ಲ ಇಂದು ಕೊಡದಿರೆ ಮುಂದೆ ಕೊಟ್ಟಿಯೇ ತೀರುವ. ಇಂದನ ಸಾಧನೆ ವ್ಯರ್ಥ ಅಂತೂ ಆಗಲಾರದು. ಆದ್ದರಿಂದ ದೇವನ ಸಹಾಯ ನಮಗೆ ಅನಿವಾರ್ಯ. ದೇವರಲ್ಲಿ ಹರಿಕೆಗಳನ್ನು ಹೊತ್ತುವಾಗ ತರಹದ ದೃಢ, ಭರವಸೆಯುಕ್ತ , ಮನಸ್ಸು ಇರಲಿ. ದೇವನ ಕರುಣೆಯಾಗುವದರಲ್ಕಿ ಸಂಶಯವೇ ಇರಲಾರದು.
********
********
No comments:
Post a Comment