ಪುಷ್ಕರ ಎಂದರೇನು?
ಗಂಗೆಯೇ ಮೊದಲಾದ ೧೨ ನದಿಗಳಲ್ಲಿ ಸಾರ್ಧತ್ರಿಕೋಟಿ
ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ"ಪುಷ್ಕರ" ಎಂದು ಹೆಸರು.
ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.
ಗಂಗೆಯೇ ಮೊದಲಾದ ೧೨ ನದಿಗಳಲ್ಲಿ ಸಾರ್ಧತ್ರಿಕೋಟಿ
ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ"ಪುಷ್ಕರ" ಎಂದು ಹೆಸರು.
ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.
ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.
ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ
ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು.
ಆದಕಾರಣ ಪ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ ಎಂದೂ, ಕೊನೆಯ *೧೨ ದಿನಗಳು-ಅಂತ್ಯ ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.*
ಈ ದಿನಗಳಲ್ಲಿ ನದೀ ತೀರಗಳಲ್ಲಿಮಾಡುವ ಕ್ಷೇತ್ರೋವಾಸ-ತೀರ್ಥ ಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಪೂಜಾದಿಗಳೆಲ್ಲವೂ
ಅನಂತ ಫಲಪ್ರದವಾಗಿದೆ. *೬೦ ಸಾವಿರ ವರ್ಷ ಗಂಗೆಯಲ್ಲಿ ಮಿಂದ ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು.
೧) ಮೇಷ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗಂಗಾ ನದಿಗೆ ಪುಷ್ಕರ
೨) ವೃಷಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ ನದಿಗೆ ಪುಷ್ಕರ
೩) ಮಿಥುನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ
೪) ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ
೫) ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿಗೆ ಪುಷ್ಕರ
೬) ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ
೭) ತುಲಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ
೮) ವೃಶ್ಚಿಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಭ್ಹೀಮರಥಿ ನದಿಗೆ ಪುಷ್ಕರ
೯) ಧನು ರಾಶಿಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರ ನದಿಗೆ ಪುಷ್ಕರ
೧೦) ಮಕರರಾಶಿಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ
೧೧) ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿಗೆ ಪುಷ್ಕರ
೧೨) ಮೀನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿಗೆ ಪುಷ್ಕರ
ಮೇಷೇ ಗಂಗಾ ವೃಷೇ ರೇವಾ ಗತೇ ಯುಗ್ಮೇ ಸರಸ್ವತಿ
ಯಮುನಾ ಕರ್ಕಟೇ ಚೈವ ಗೋದಾವರ್ಯಪಿ ಸಿಂಹಗೇ!!
ಕನ್ಯಾಯಾಂ ಕೃಷ್ಣವೇಣೀ ಚ ಕಾವೇರಿ ಚ ತುಲಾಗತೇ
ವೃಶ್ಚಿಕೇ ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ ತಟಿನೀ ಝುಷೇ
ಮೇಷೇಗುರೌ ಪ್ರವಿಷ್ಟೇ ಗಂಗಾ ಪುಷ್ಕರಯುತಾ ಭವತೀತಿವತ್
ಸರ್ವತ್ರಾನ್ವಯಃ!!
ಜನ್ಮ ಪ್ರಭೃತಿ ಯತ್ಪಾಪಂ ಸ್ತ್ರೀಯಾ ವಾ ಪುರುಷೇಣ ವೆ
ಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ!!
ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು
*ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲ ಪ್ರಾಪ್ತವಾಗುತ್ತದೆ*
ಸಂಗ್ರಹ - ಶ್ರೀ ಕೃಷ್ಣ ಮೂರ್ತಿ ಊರ್ಡಿಗೆರೆ
********
********
another version
"ಪುಷ್ಕರ ಎಂದರೇನು?"
ಗಂಗೆಯೇ ಮೊದಲಾದ ೧೨ ನದಿಗಳಲ್ಲಿ ಸಾರ್ಧತ್ರಿಕೋಟಿ
ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ
"ಪುಷ್ಕರ" ಎಂದು ಹೆಸರು.
ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ
ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.
ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.
ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು.
ಆದಕಾರಣ ಪ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ ಎಂದೂ,
ಕೊನೆಯ ೧೨ ದಿನಗಳು-ಅಂತ್ಯ ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.
ಈ ದಿನಗಳಲ್ಲಿ ನದೀ ತೀರಗಳಲ್ಲಿ ಮಾಡುವ ಕ್ಷೇತ್ರೋವಾಸ-ತೀರ್ಥ
ಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಪೂಜಾದಿಗಳೆಲ್ಲವೂ
ಅನಂತ ಫಲಪ್ರದವಾಗಿದೆ. ೬೦ ಸಾವಿರ ವರ್ಷ ಗಂಗೆಯಲ್ಲಿ ಮಿಂದ
ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು.
೧) ಮೇಷ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಗಂಗಾ ನದಿ ಗೆ ಪುಷ್ಕರ
೨) ವೃಷಭ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ ನದಿ ಗೆ ಪುಷ್ಕರ
೩) ಮಿಥುನ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿ ಗೆ ಪುಷ್ಕರ
೪) ಕರ್ಕಾಟಕ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿ ಗೆ ಪುಷ್ಕರ
೫) ಸಿಂಹ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿ ಗೆ ಪುಷ್ಕರ
೬) ಕನ್ಯಾ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿ ಗೆ ಪುಷ್ಕರ
೭) ತುಲಾ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿ ಗೆ ಪುಷ್ಕರ
೮) ವೃಷಿಕ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಭೀಮರಥಿ ನದಿ ಗೆ ಪುಷ್ಕರ
೯) ಧನಸ್ಸು ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರ ನದಿ ಗೆ ಪುಷ್ಕರ
೧೦) ಮಕರ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿ ಗೆ ಪುಷ್ಕರ
೧೧) ಕುಂಭ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿ ಗೆ ಪುಷ್ಕರ
೧೨) ಮೀನ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿ ಗೆ ಪುಷ್ಕರ
ಮೇಷೇ ಗಂಗಾ ವೃಷೇ ರೇವಾ ಗತೇ ಯುಗ್ಮೇ ಸ್ರಸ್ವತಿ
ಯಮುನಾ ಕರ್ಕಟೇ ಚೈವ ಗೊದಾವರ್ಯಪಿ ಸಿಂಹಗೇ!!
ಕನ್ಯಾಯಾಂ ಕೃಷ್ಣವೇಣೀ ಚ ಕಾವೇರಿ ಚ ತುಲಾಗತೇ
ವೃಸ್ಚಿಕೇ ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ ತಟಿನೀ ಝುಷೇ
ಮೇಷೇಗುರೌ ಪ್ರವಿಷ್ಟೇ ಗಂಗಾ ಪುಷ್ಕರಯುತಾ ಭವತೀತಿವತ್
ಸರ್ವತ್ರಾನ್ವಯಃ!!
ಜನ್ಮ ಪ್ರಭೃತಿ ಯತ್ಪಾಪಂ ಸ್ತ್ರೀಯಾ ವಾ ಪುರುಷೇಣ ವೆ
ಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ!!
ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು
ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲ ಪ್ರಾಪ್ತವಾಗುತ್ತದೆ... ಗುರು ಗೋಚಾರ ಈ ವರ್ಷ ಗುರುವು 29-11-2020 ಶುಕ್ರವಾರ ಹಗಲು 02-23 ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಅವಧಿಯಲ್ಲಿ ದಕ್ಷಿಣ ಭಾರತದ ಪುಣ್ಯ ನದಿ ಎಂದೇ ಕರೆಸಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಮಹಾ ಪುಷ್ಕರ ಆಗಲಿದೆ.
ಪೌರಾಣಿಕ ಹಿನ್ನೆಲೆ ಏನು?
ತುಂದಿಲನೆಂಬ ಋಷಿಯು ಶಿವನ ತಪಸ್ಸು ಮಾಡಿ ಶಿವನ ಅಂಶಗಳಲ್ಲಿ ಸೇರಿ ನೀರೇ ಆಗಿ ಪುಷ್ಕರ (ಜಲದೇವತೆ) ಆಗಿ ಬಿಟ್ಟನು. ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸಿದಾಗ ಜಲದೇವತೆ ಹಾಗೂ ಬೃಹಸ್ಪತಿ ದೇವತೆಗಳ ಸಹಾಯ ಪಡೆದಿದ್ದ ಎನ್ನುವುದನ್ನು ಪುರಾಣ ಕೋಶಗಳು ಹೇಳುತ್ತವೆ.
ಪುಷ್ಕರದಿಂದಾಗಿ ತುಂಗಭದ್ರಾ ನದಿಗೆ ಈ ವರ್ಷ ವಿಶೇಷ ಶಕ್ತಿ ದೊರಕುತ್ತದೆ ಎನ್ನುವ ನಂಬಿಕೆ ಇದೆ.
64 ಕೋಟಿ ತೀರ್ಥಗಳು ಭೂಲೋಕಕ್ಕೆ ಪುಷ್ಕರದ ವೇಳೆ ಇಳಿದು ಬಂದು ತುಂಗಭದ್ರಾ ನದಿಗೆ ವಿಶೇಷ ಶಕ್ತಿ ಸಿಗುತ್ತದೆ. ಈ ವೇಳೆ ದೇವಾನುದೇವತೆಗಳು, ಸಪ್ತ ಋಷಿಗಳು, ನವಕಾಂಡ ಋಷಿಗಳು, ಎಲ್ಲ ಮಹರ್ಷಿಗಳು ನದಿಯಲ್ಲಿ ಸ್ನಾನ ಮಾಡಲು ಭೂಲೋಕಕ್ಕೆ ಇಳಿದು ಬರುತ್ತಾರೆ ಹೀಗಾಗಿ ಪುಷ್ಕರವಾದಿ ನದಿ ಹನ್ನೆರಡು ದಿನಗಳವರೆಗೆ ದೈವೀಶಕ್ತಿ ಹೊಂದಿರುತ್ತದೆ ಎನ್ನುವ ನಂಬಿಕೆ ಇದೆ.
ಪುಷ್ಕರದ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವ ಎಲ್ಲಾ ಜೀವಿಗಳನ್ನು ಮನುಷ್ಯರನ್ನು ತುಂಗಭದ್ರಾ ಪವಿತ್ರಗೊಳಿಸುತ್ತಾಳೆ. ಈ ವೇಳೆ ದಾನ ಧರ್ಮ ಮಾಡಿದವರಿಗೂ ವಿಶೇಷ ಪುಣ್ಯ ಲಭಿಸುತ್ತದೆ. ಗುರು ಬಲ ಇಲ್ಲದವರು ಪುಷ್ಕರ ಸ್ನಾನ ಮಾಡಿದರೆ ಗುರುಬಲ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ.
ತುಂಗಭದ್ರಾ ಪುಷ್ಕರ ಈ ವರ್ಷ ತುಂಗಭದ್ರಾ ನದಿಯ ಪುಷ್ಕರ 20-11-2020 ರಿಂದ 01-12-2020 ರವರೆಗೆ ನಡೆಯಲಿದೆ.
ಪುಷ್ಕರ ಸ್ನಾನದ ನಂಬಿಕೆಗಳು :
- ಈ ಅವಧಿಯಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳಿಂದ ಮುಕ್ತಿ ಲಭಿಸುತ್ತದೆ.
- ಗಂಗಾನದಿ ಸೇರಿದಂತೆ ಭಾರತದ ಅಷ್ಟೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ಪುಣ್ಯಫಲ ಈ ಅವಧಿಯಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದರಿಂದ ಲಭಿಸುತ್ತದೆ.
- ಈ ವರ್ಷ ಗುರುಬಲ ಇಲ್ಲದ ರಾಶಿಗಳವರು (ಮೇಷ, ಮಿಥುನ, ಸಿಂಹ, ತುಲಾ, ವೃಶ್ಚಿಕ, ಮಕರ, ಕುಂಭ) ಪುಷ್ಕರ ಸ್ನಾನ ಮಾಡಿದರೆ ಅವರಿಗೆ ಗುರುಕೃಪೆ ಉಂಟಾಗಿ ಯಾವುದೇ ದೋಷಗಳು ಬಾಧಿಸುವುದಿಲ್ಲ.
- ಪುಷ್ಕರ ಸ್ನಾನವನ್ನು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಸ್ನಾನ ಮಾಡಬೇಕು.
- ಸ್ನಾನದ ನಂತರ ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ ತಮ್ಮ ತಮ್ಮ ಶಕ್ತಿಯ ಅನುಸಾರ ವಿಶೇಷ ದಾನಗಳನ್ನು ನೀಡಿದರೆ ಮತ್ತೂ ಹೆಚ್ಚಿನ ಫಲವಿದೆ ಎಂಬ ನಂಬಿಕೆ ಇದೆ.
- ನದೀತಟದಲ್ಲಿ ಶ್ರಾದ್ಧ ಮಾಡುವುದರಿಂದ ಪಿತೃ ದೇವತೆಗಳು ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುವುದು.
******
year 2020
ತುಂಗಭದ್ರಾ ಮಹಾಪುಷ್ಕರ :
20.11.2020 to 01.12.2020 (Karnataka,Andhra Pradesh and Telangana )
*******
No comments:
Post a Comment