SEARCH HERE

Tuesday, 1 January 2019

ಮಂತ್ರಾಕ್ಷತೆ mantrakshate


*ಫಲಮಂತ್ರಾಕ್ಷತೆ ಮಹಿಮೆ ಮತ್ತು ಪಡೆಯುವ ಅನುಸಂಧಾನ*

1. ಮಂತ್ರಾಕ್ಷತೆ ಎಂದರೇನು?

ಮಂತ್ರ + ಅಕ್ಷತೆ = ಮಂತ್ರದಿಂದ ಸಂಸ್ಕಾರಗೊಂಡ ಅಕ್ಷತೆ. ಗುರುಗಳು/ಯತಿಗಳು ಮೂಲದೇವರಿಗೆ, ರಾಯರಿಗೆ ಪೂಜೆ ಮಾಡಿ, ಮಂತ್ರಶಕ್ತಿ ತುಂಬಿ ಅನುಗ್ರಹರೂಪವಾಗಿ ನೀಡುವ ಅಕ್ಕಿಕಾಳುಗಳೇ *ಸುವರ್ಣ ಮಂತ್ರಾಕ್ಷತೆ* ಅಥವಾ *ಫಲಮಂತ್ರಾಕ್ಷತೆ*. ಇದು ದೇಹ, ಮನಸ್ಸು, ಆತ್ಮಕ್ಕೆ ಕವಚದಂತೆ ಕೆಲಸ ಮಾಡುತ್ತದೆ ಮತ್ತು ಗುರು-ಶಿಷ್ಯ ಬಾಂಧವ್ಯದ ಸಂಕೇತ. 

2. ವೇದೋಪನಿಷತ್ ದೃಷ್ಟಿಯಲ್ಲಿ ಅಕ್ಷತೆಯ ಮಹತ್ವ

1. *ಅಕ್ಷತ = ಅ+ಕ್ಷತ* ಅಂದರೆ ನಾಶವಿಲ್ಲದ್ದು. ತೈತ್ತಿರೀಯ ಉಪನಿಷತ್ ಹೇಳುವ "ಅನ್ನಂ ಬ್ರಹ್ಮೇತಿ ವ್ಯಜಾನಾತ್" ಎಂಬಂತೆ ಅನ್ನ/ಅಕ್ಕಿ ಬ್ರಹ್ಮಸ್ವರೂಪ. ಅದಕ್ಕೆ ಮಂತ್ರಸಂಸ್ಕಾರವಾದಾಗ ಅದು 'ಅಮೃತತ್ವ' ಪಡೆಯುತ್ತದೆ.

2. *ಮಂತ್ರಶಕ್ತಿ*: ಋಗ್ವೇದದ "ವಾಚಂ ಅಷ್ಟಾಪದೀಂ" ಸೂಕ್ತದ ಪ್ರಕಾರ ಮಂತ್ರಯುಕ್ತ ವಾಕ್ಯ ಶಕ್ತಿಸ್ವರೂಪ. ಗುರುಮುಖದಿಂದ ಹೊರಟ ಮಂತ್ರ ಅಕ್ಷತೆಯಲ್ಲಿ ನೆಲೆಸಿ ರಕ್ಷಾಕವಚವಾಗುತ್ತದೆ.

3. *ಗುರುಪ್ರಸಾದ*: ಕಠೋಪನಿಷತ್ "ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್" ಎನ್ನುತ್ತದೆ. ಗುರುವಿನಿಂದ ಬಂದದ್ದು ಫಲದಾಯಕ. ಅದಕ್ಕೆ ಮಂತ್ರಾಕ್ಷತೆಯನ್ನು 'ಜೀವಾಮೃತ' ಎನ್ನುತ್ತಾರೆ. 

3. ಫಲಪ್ರದವಾಗಿ ಪಡೆಯುವ ಅನುಸಂಧಾನ - ಹೇಗೆ ಸ್ವೀಕರಿಸಬೇಕು?

*ಶಾಸ್ತ್ರೋಕ್ತ ವಿಧಾನ*:

* *ಪುರುಷರು*: ಶಲ್ಯ/ವಸ್ತ್ರದ ತುದಿಯಿಂದ ಸ್ವೀಕರಿಸಬೇಕು.

* *ಸ್ತ್ರೀಯರು*: ಸೀರೆಯ ಸೆರಗಿನಿಂದ ಸ್ವೀಕರಿಸಬೇಕು. ಸೆರಗಿನಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ.

* *ಭಾವ*: "ಇದು ಗುರು-ಹರಿಯ ಅನುಗ್ರಹ, ನನ್ನ ಯೋಗ್ಯತೆಯಿಂದಲ್ಲ" ಎಂಬ ದೈನ್ಯ-ಭಕ್ತಿಯಿಂದ ಪಡೆಯಬೇಕು. 

*ನಿತ್ಯ ಉಪಯೋಗ*:

1. ಸ್ನಾನದ ನಂತರ 2 ಕಾಳು ತಲೆಯ ಮೇಲೆ ಇಟ್ಟುಕೊಳ್ಳಿ. ಇದರಿಂದ ರಾಯರ ಶ್ರೀರಕ್ಷೆ ಸದಾ ಇರುತ್ತದೆ.

2. ನಗದು ಪೆಟ್ಟಿಗೆ, ಪೂಜಾ ಮಂದಿರದಲ್ಲಿ ಇಟ್ಟು ಗುರುಪ್ರಾರ್ಥನೆ ಮಾಡಿದರೆ ದಾರಿದ್ರ್ಯ ನಿವಾರಣೆ, ಲಕ್ಷ್ಮೀ ಅನುಗ್ರಹ.

3. ವ್ಯಾಪಾರ ಸ್ಥಳದಲ್ಲಿ ಇಟ್ಟರೆ ಅಭಿವೃದ್ಧಿ.

4. ಗುರುಚರಿತ್ರೆ ಪಾರಾಯಣದೊಂದಿಗೆ ಪೂಜಿಸಿದರೆ ಗುರುಗ್ರಹ ದೋಷ, ಗುರುಶಾಪ ನಿವಾರಣೆ. 

*ಭಾವದ ಮಹತ್ವ*: ಮಂತ್ರಾಕ್ಷತೆ ಸರಿಯಾದ ಭಾವ/ಶ್ರದ್ಧೆಯಿಂದ ಬಳಸಿದಾಗ ಮಾತ್ರ ಎಲ್ಲಾ ಕೆಲಸಗಳಲ್ಲಿ ಜಯ. ಅಹಂಕಾರ, ಪರೀಕ್ಷಾ ಬುದ್ಧಿಯಿಂದ ತೆಗೆದುಕೊಂಡರೆ ಫಲವಿಲ್ಲ. 

4. ದಾಸರ ಪದಗಳಲ್ಲಿ ಮಂತ್ರಾಕ್ಷತೆಯ ಮಹಿಮೆ:

*ವಿಜಯದಾಸರ ಚರಿತ್ರೆ*:

ಒಮ್ಮೆ ವಿಜಯದಾಸರು ಪಾಚಕನಂತೆ ಇದ್ದ ಒಬ್ಬ ನಿರಕ್ಷರನ ತಲೆಯ ಮೇಲೆ ಮಂತ್ರಾಕ್ಷತೆ ಇಟ್ಟು "ಸುಧಾ ಅನುವಾದ ಮಾಡು" ಎಂದಾಗ ಅವನು ನಿರರ್ಗಳವಾಗಿ ನ್ಯಾಯಸುಧಾ ವಾಕ್ಯಗಳನ್ನು ಅನುವಾದ ಮಾಡಿದನು. ಗುರು-ಹರಿಯ ಅನುಗ್ರಹವಿದ್ದರೆ ಅಸಾಧ್ಯವೂ ಸಾಧ್ಯ ಎಂಬುದಕ್ಕೆ ಇದೇ ನಿದರ್ಶನ. 

*ಜಗನ್ನಾಥ ದಾಸರ 'ಫಲವಿದು ಬಾಳ್ದುದಕೆ'*:
ಫಲವಿದು ಬಾಳ್ದುದಕೆ ಸಿರಿ-
ನಿಲಯನ ಗುಣಗಳ ತಿಳಿದು ಭಜಿಸುವುದೆ 

ಇದರ ತಾತ್ಪರ್ಯ: ಗುರುಮುಖದಿಂದ ಬಂದ ಮಂತ್ರಾಕ್ಷತೆ ಸ್ವೀಕರಿಸುವುದು ಶ್ರೀಹರಿಯ ಗುಣಗಳನ್ನು ತಿಳಿದು ಭಜಿಸಿದಂತೆ. "ಸ್ವೋಚಿತ ಕರ್ಮಗಳಾಚರಿಸುತ" ಗುರುಕೃಪೆಯನ್ನು ನೆನೆಯುವುದೇ ಬದುಕಿನ ಫಲ. 

*ಪುರಂದರದಾಸರು*: 
"ರಾಮ ಎಂಬೊ ಎರಡಕ್ಷರದ ಮಹಿಮೆಯನು" ಎಂದಂತೆ, ಗುರು ಕೊಟ್ಟ ಮಂತ್ರಾಕ್ಷತೆಯಲ್ಲೂ ನಾಮ-ಮಂತ್ರದ ಶಕ್ತಿ ಅಡಗಿದೆ. 

5. ಸಾರಾಂಶ - ಯಾವ ಅನುಸಂಧಾನದಿಂದ ಫಲಪ್ರದ?

1. *ದೈನ್ಯಭಾವ*: "ನಾನು ಯೋಗ್ಯನಲ್ಲ, ಇದು ಗುರುಗಳ ಕರುಣೆ" ಎಂದು ತಿಳಿದು ಪಡೆಯಿರಿ.

2. *ಶರಣಾಗತಿ*: 
ವಿಜಯದಾಸರ ಕಥೆಯಂತೆ, ಗುರು ಕೊಟ್ಟದ್ದನ್ನು ಪೂರ್ಣ ವಿಶ್ವಾಸದಿಂದ ಸ್ವೀಕರಿಸಿ.

3. *ನಿತ್ಯ ಸ್ಮರಣೆ*: 

ಶ್ರೀರಾಯರ ಮಂತ್ರಾಕ್ಷತೆಯಾದರೆ ಪ್ರತಿದಿನ ತಲೆಯ ಮೇಲಿಟ್ಟು "ಶ್ರೀ ಗುರು ರಾಘವೇಂದ್ರಾಯ ನಮಃ" ಎಂದು ಸ್ಮರಿಸಿ. ಯಾವ ಗುರುಗಳಿಂದ ಪಡೆದಿರುತ್ತೀರೋ ಅವರ ಸ್ಮರಣೆಯೊಂದಿಗೆ ತಲೆಯ‌ಮೇಲಿಟ್ಟುಕೊಳ್ಳುವುದು.

4. *ಸದಾಚಾರ*: ಜಗನ್ನಾಥ ದಾಸರು ಹೇಳಿದಂತೆ ಸ್ವಧರ್ಮ ಆಚರಿಸಿ, ಹರಿಯನ್ನೇ ಕರ್ತೃ ಎಂದು ತಿಳಿದು ಬದುಕಿ. ಆಗ ಮಂತ್ರಾಕ್ಷತೆ 'ಫಲಮಂತ್ರಾಕ್ಷತೆ' ಆಗುತ್ತದೆ. 

*ಗುರುಗಳ ಮಾತು*: ಮಂತ್ರಾಕ್ಷತೆ ಗುರು-ಶಿಷ್ಯರ ಬಂಧ. ಅದಿಲ್ಲದೆ ಮಠದಿಂದ ಹೊರಗೆ ಹೋಗಲು ಭಕ್ತರು ಬಯಸುವುದಿಲ್ಲ. 

ಮಂತ್ರಾಕ್ಷತೆ ಹಾಳುಮಾಡಬಾರದು:

1. ಮಂತ್ರಾಕ್ಷತೆಯನ್ನು ತಿನ್ನಬಹುದೇ? ತಲೆಗೆ ಹಾಕಿಕೊಳ್ಳುವುದೇ ಶ್ರೇಷ್ಠವೇ?

*ಎರಡೂ ಕ್ರಮವೂ ಸರಿ, ಭಾವವೇ ಮುಖ್ಯ.*

*ತಲೆಗೆ ಹಾಕಿಕೊಳ್ಳುವ ಸಂಪ್ರದಾಯ*:

ಮಂತ್ರಾಕ್ಷತೆಯನ್ನು ತಲೆಯ ಮೇಲೆ ಧರಿಸುವುದು ಗುರುಗಳ ಅನುಗ್ರಹವನ್ನು 'ಶಿರಸಾ ವಹಿಸುವುದು' ಎಂದರ್ಥ. "ಗುರುಚರಣಾಂಬುಜಂ ಶಿರಸಾ ಧಾರಯಾಮಿ" ಎಂಬ ಭಾವ. ರಾಯರ ಮಠದಲ್ಲಿ ಪ್ರತಿನಿತ್ಯ ಸ್ನಾನದ ನಂತರ 2 ಕಾಳು ತಲೆಯ ಮೇಲೆ ಇಟ್ಟುಕೊಳ್ಳುವ ಕ್ರಮವಿದೆ. ಇದರಿಂದ ರಾಯರ ಶ್ರೀರಕ್ಷೆ ಸದಾ ಇರುತ್ತದೆ.

*ತಿನ್ನುವ ಸಂಪ್ರದಾಯ*:

1. *ಪಾದಕ್ಕೆ ಬಿದ್ದು ಅಪಚಾರವಾಗಬಾರದು*: ಮಂತ್ರಾಕ್ಷತೆ ಆಕಸ್ಮಿಕವಾಗಿ ಕೆಳಗೆ ಬಿದ್ದರೆ ಕಾಲಿಗೆ ತಾಗುವ ಭಯದಿಂದ ಅನೇಕ ಹಿರಿಯರು ಅದನ್ನು ತೀರ್ಥದಂತೆ ಸ್ವೀಕರಿಸುತ್ತಾರೆ. 'ಅನ್ನಂ ಬ್ರಹ್ಮೇತಿ' ಎಂಬಂತೆ ಅದು ಪ್ರಸಾದ.

2. *ಆಂತರಿಕ ಶುದ್ಧಿ*: ವಿಜಯದಾಸರು ನಿರಕ್ಷರನ ತಲೆಗೆ ಮಂತ್ರಾಕ್ಷತೆ ಇಟ್ಟು ಜ್ಞಾನ ನೀಡಿದರು. ಅದೇ ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿ ಸೇವಿಸಿದರೆ ಅದು ಒಳಗಿನಿಂದಲೇ ರಕ್ಷಿಸುತ್ತದೆ. "ದೇಹ, ಮನಸ್ಸು ಮತ್ತು ಆತ್ಮಕ್ಕೆ ಕವಚದಂತೆ ಕೆಲಸ ಮಾಡುತ್ತದೆ".

3. *ದಾಸರ ನಿಲುವು*: ಪುರಂದರದಾಸರು "ಎಂಜಲು ಕಾಸಿನಾಸೆ ಬಿಟ್ಟು" ಎಂದಂತೆ, ಪ್ರಸಾದವನ್ನು ಭಾವದಿಂದ ಸ್ವೀಕರಿಸುವುದೇ ಮುಖ್ಯ. ಹಾಕಿಕೊಳ್ಳಲಿ, ತಿನ್ನಲಿ - ಅಹಂಕಾರವಿಲ್ಲದೆ ಗುರುಸ್ಮರಣೆ ಮಾಡುವುದೇ ಪ್ರಧಾನ.

*ಯಾವುದು ಉತ್ತಮ?*

* ಶಕ್ತರಿದ್ದರೆ: 1-2 ಕಾಳು ತಲೆಗೆ, ಉಳಿದದ್ದನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಪೂಜಾ ಸ್ಥಳ/ನಗದು ಪೆಟ್ಟಿಗೆಯಲ್ಲಿ ಇಡಿ.

* ಕೆಳಗೆ ಬೀಳುವ ಭಯವಿದ್ದರೆ: ಗುರುಸ್ಮರಣೆ ಮಾಡಿ ಭಕ್ತಿಯಿಂದ ಸ್ವೀಕರಿಸಿ. ಅಪಚಾರ ಮಾಡುವ ಉದ್ದೇಶವಿಲ್ಲದಿದ್ದರೆ ದೋಷವಿಲ್ಲ. "ಭಾವೋ ಹಿ ಕಾರಣಂ".

2. ಫಲ ಪರಿಪಕ್ವವಾಗಲು ಸ್ವೀಕರಿಸುವವರ ನಿಷ್ಠೆ ಬೇಕೇ?

* ಗುರುಕೃಪೆ ಕಾರಣವಾದರೂ, ಶಿಷ್ಯನ ಪಾತ್ರೆಯೂ ಶುದ್ಧವಾಗಿರಬೇಕು.

*ವೇದೋಪನಿಷತ್ ಆಧಾರ*:

ಮುಂಡಕೋಪನಿಷತ್ ಹೇಳುತ್ತದೆ: 

"ಪರೀಕ್ಷ್ಯ ಲೋಕಾನ್ಕರ್ಮಚಿತಾನ್ ಬ್ರಾಹ್ಮಣೋ ನಿರ್ವೇದಮಾಯಾತ್... ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್"

ಅಂದರೆ ವೈರಾಗ್ಯ, ಶ್ರದ್ಧೆ, ಸಮಿತ್ಪಾಣಿಯಾಗಿ ಗುರುಗಳ ಬಳಿ ಹೋಗಬೇಕು. ಖಾಲಿ ಪಾತ್ರೆಯಲ್ಲೇ ಅಮೃತ ತುಂಬಲು ಸಾಧ್ಯ.

*ದಾಸರ ವಾಣಿ*:

1. *ಜಗನ್ನಾಥ ದಾಸರು*: "ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿಗೆ ಪೋಗಿ ಯಾಚಿಸದೆ" - ಮೊದಲು ಸ್ವಧರ್ಮ ನಿಷ್ಠೆ, ನಂತರ ಗುರುಕೃಪೆ.

2. *ವಿಜಯದಾಸರ ಚರಿತ್ರೆ*: 
ಕಲ್ಲೂರು ಸುಬ್ಬಣ್ಣಾಚಾರ್ಯರಲ್ಲಿ 'ನಿಜವಾದ ವೈರಾಗ್ಯವನ್ನು ಕಂಡು' ವಿಜಯರಾಯರು ಉಪದೇಶ ಮಾಡಿದರು. ಗುರುಗಳು ಪಾತ್ರೆ ನೋಡಿಯೇ ಕೃಪೆ ಮಾಡುತ್ತಾರೆ.

3. *ಪುರಂದರದಾಸರು*:

"ಸಕಲವನು ಕೊಟ್ಟು ನೋಡು ಗುರುವರನು ಕರುಣಿಪನೇ" - ಮೊದಲು ನಮ್ಮ ಅಹಂಕಾರ ಕೊಡಬೇಕು.

*ಫಲ ಸಿಗದಿರಲು 3 ಕಾರಣಗಳು*:

1. *ಅಶ್ರದ್ಧೆ*: ಪರೀಕ್ಷಾ ಬುದ್ಧಿಯಿಂದ ಪಡೆದರೆ ಫಲವಿಲ್ಲ. ಮಂತ್ರಾಕ್ಷತೆಯನ್ನು 'ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಜಯ'.

2. *ದುರಾಚಾರ*: 

ಗುರುಕೊಟ್ಟ ಕವಚವನ್ನು ಧರಿಸಿ ಅಸತ್ಯ, ಅನ್ಯಾಯ ಮಾಡಿದರೆ ರಕ್ಷೆ ದೂರವಾಗುತ್ತದೆ.

3. *ಅನ್ಯದೈವ ಭಜನೆ*: "ಅನನ್ಯಾಶ್ಚಿಂತಯಂತೋ ಮಾಂ" ಎಂಬಂತೆ ಗುರು-ಹರಿಯಲ್ಲಿ ಅನನ್ಯ ಭಕ್ತಿ ಬೇಕು.

*ಸಾರಾಂಶ*:

ಮಂತ್ರಾಕ್ಷತೆ 'ಬೀಜ' ಇದ್ದಂತೆ. ಗುರುಗಳು ಬೀಜ ಕೊಡುತ್ತಾರೆ. ನಿಷ್ಠೆ, ಶ್ರದ್ಧೆ, ಸದಾಚಾರ ಎಂಬ 'ನೀರು-ಗೊಬ್ಬರ' ಹಾಕಿದರೆ ಮಾತ್ರ ಅದು ಫಲ ನೀಡುತ್ತದೆ. ಬೀಜ ಒಳ್ಳೆಯದಾದರೂ ಬರಡು ಭೂಮಿಯಲ್ಲಿ ಮೊಳಕೆಯೊಡೆಯುವುದಿಲ್ಲ.

ಆದ್ದರಿಂದ,  ಮೊದಲು ಪಾತ್ರೆ ಶುದ್ಧಿ, ನಂತರ ಪ್ರಸಾದ ಸ್ವೀಕಾರ. ಆಗಲೇ 'ಸುವರ್ಣ ಮಂತ್ರಾಕ್ಷತೆ' ನಿಜವಾಗಿಯೂ ಸುವರ್ಣ ಫಲ ಕೊಡುತ್ತದೆ.
(whatsapp)
***

ಗುರುಗಳು ಆಶಿರ್ವದಿಸಿ ನೀಡಿದ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸ ಬೇಕು

 “ಅಕ್ಷತೆಯಲ್ಲಿ” ನಾಲ್ಕು ತರಹ ಇದೆ..
೧. ಅಕ್ಕಿಯಲ್ಲಿನ ಅಕ್ಷತೆ : ಪ್ರತಿದಿನ ಪೂಜೆಯಲ್ಲಿ, ವ್ರತಗಳಲ್ಲಿ, ಶುಭ ಕಾರ್ಯಗಳಲ್ಲಿ “ಅಕ್ಕಿಯಲ್ಲಿ ಮಾಡಿದ ಅರಿಸಿನದ ಅಕ್ಷತೆ ಮತ್ತು ಕುಂಕುಮದ ಅಕ್ಷತೆ ಉಪಯೋಗಿಸುತ್ತೇವೆ..!

೨.” ತಿಲಾಕ್ಷತೆ” : ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರೀ ಎಳ್ಳು ಮತ್ತು ಯುವ ಅಕ್ಷತೆಗೆ “ತಿಲಾಕ್ಷತೆ” ಎಂದು ಹೆಸರು..!

೩. ಮಂತ್ರಾಕ್ಷತೆ : ಮಂತ್ರಿಸಿದ ಅಕ್ಷತೆಗೆ “ಮಂತ್ರಾಕ್ಷತೆ ” ಎಂದು ಹೆಸರು..!
ಉದಾಹರಣೆಗೆ : ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಕೊಡುವುದು “ಮಂತ್ರಾಕ್ಷತೆ” , ಇಲ್ಲಿ ಮೂಲರಾಮರಿಗೆ , ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡಿ ಪ್ರಸಾದವಾಗಿ ಕೊಡುತ್ತಾರೆ..!

ಈ ಮಂತ್ರಾಕ್ಷತೆಯಿಂದ
ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ , ವಿದ್ಯಾಭಿವೃದ್ದಿ ಆಗುತ್ತದೆ..! 
ಸಕಲ ವ್ಯಾಧಿಗಳು ರೋಗಗಳು ನಿವಾರಣೆಯಾಗುತ್ತದೆ..
ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ.
ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ..

“ಅಕ್ಷತೆ” ಇಲ್ಲದೆ ಆಶೀರ್ವಾದ ಮಾಡಬಾರದು..!


“ಸುವರ್ಣ ಮಂತ್ರಾಕ್ಷತೆ” ಮತ್ತು ಮಹತ್ವಗಳು..!
ಸಾಧು ಸನ್ಯಾಸಿಗಳ ಹಾಗೂ ಮಠಗಳಿಗೆ ಹೋದಾಗ, “ಗುರುಗಳು” ನಿಮ್ಮನ್ನು ಮಾತನಾಡಿಸಿ, ವಿಚಾರಿಸಿ, “ನಿಮಗೆ ” “ಫಲಮಂತ್ರಾಕ್ಷತೆ” ಯನ್ನು ಕೊಡುತ್ತಾರೆ..!
ಹೀಗೆ ಗುರುಗಳು ಕೊಡುವ “ಮಂತ್ರಾಕ್ಷತೆಗೆ ” “ಸುವರ್ಣಮಂತ್ರಾಕ್ಷತೆ” ಎಂದು ಹೆಸರು..!!!

ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು , ಆದರೆ “ಸುವರ್ಣ ಮಂತ್ರಾಕ್ಷತೆ” ಏನು ಮಾಡಬೇಕು..?
ಇಲ್ಲಿದೆ ನೋಡಿ ಮಾಹಿತಿ..
“ಸುವರ್ಣ ಮಂತ್ರಾಕ್ಷತೆ” ಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು..!
ತೆಗೆದುಕೊಳ್ಳುವವರು ಪುರುಷರಾದರೆ “ಶಲ್ಯ” ದ ತುದಿಯಿಂದ ತೆಗೆದುಕೊಳ್ಳಬೇಕು..!
“ಹೆಂಗಸರಾದರೆ” “ಸೀರೆಯ” “ಸೆರಗಿನ ತುದಿ” ಯಿಂದ ತೆಗೆದುಕೊಳ್ಳಬೇಕು..!
ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ..!
ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು..!

೧. ಸುವರ್ಣ ಮಂತ್ರಾಕ್ಷತೆಯನ್ನು “ನಗದು” ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ..!

೨. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ..

೩. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ..!

೪. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ “ಗುರುಚರಿತ್ರೆ” ಪಾರಾಯಣ ಮಾಡಿದರೆ,
ಜಾತಕದಲ್ಲಿನ “ಗುರು” ಗ್ರಹದ ನೀಚತ್ವ ದೋಷ , ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ , “ಜಾತಕಸ್ಥರು ಜೀವನದಲ್ಲಿ ಇತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ..!

೬. ಪ್ರತಿದಿನ ಪೂಜೆ ಮಾಡುವಾಗ ” ಸುವರ್ಣಮಂತ್ರಾಕ್ಷತೆಗೆ” ಪೂಜೆ ಮಾಡಿದರೆ “ಲಕ್ಷ್ಮೀ” ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದಭಾಧೆ ನಿವಾರಣೆಯಾಗುತ್ತದೆ..!

೭. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು , ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ , ಮನೋಸಂಕಲ್ಪ ನೆರವೇರುತ್ತದೆ..!

೮. ಮನೆ ಕಟ್ಟುವಾಗ, ಬಾವಿ ತೋಡಿಸುವಾಗ, ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ.. ಬಾವಿಯಲ್ಲಿ ಸಿಹಿಯಾದ ನೀರು ಬರುತ್ತದೆ..
By-Sushilendra Acharya  +918867888889
********

ರಾಯರ ಮಂತ್ರಾಕ್ಷತೆಯನ್ನು ಶ್ರದ್ದೆ ಭಕ್ತಿಯಿಂದ ಏನು ಮಾಡಬೇಕು,ಯಾವ ರೀತಿ ಬಳಸಿದರೆ ಗುರುರಾಯರ ಅನುಗ್ರಹ ಪಡೆಯಬಹುದು ತಿಳಿದುಕೊಳ್ಳೊಣ ಬನ್ನಿ.ಗುರುರಾಯರನ್ನು ಭಕ್ತಿಯಿಂದ ನೆನೆಯುತ್ತಾ ಓದುತ್ತಾ ಸಾಗೋಣ ಬನ್ನಿ.ಹಲವಾರು ಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಮಂತ್ರಾಕ್ಷತೆಗೆ ಇರುವ ಪ್ರಾಮುಖ್ಯತೆ ನಮ್ಮ ಯುವ ಪೀಳಿಗೆಗೆ ತಿಳಿದಿರುವುದಿಲ್ಲ.ಮಂತ್ರಾಕ್ಷತೆಯನ್ನು ಬೇಕಾ ಬಿಟ್ಟಿ ಬಳಸುತ್ತಾರೆ.ಕೊಟ್ಟ ಮಂತ್ರಾಕ್ಷತೆಯನ್ನು ತಲೆಗೂ ಸರಿಯಾಗಿ ಹಾಕಿಕೊಳ್ಳದೆ ಜೇಬಿನಲ್ಲೂ ಸರಿಯಾಗಿ ಇಡದೆ ನೆಲೆದ ಮೇಲೆ ಅರ್ಧಕ್ಕೆ ಅರ್ಧ ಮಂತ್ರಾಕ್ಷತೆ ಚೆಲ್ಲುತ್ತಾರೆ.ಗುರುಗಳಿಂದ ಸಿಕ್ಕಿತು ಮಂತ್ರಾಕ್ಷತೆ ಬಹಳ ಶಕ್ತಿಯುತವಾದದ್ದಾಗಿದೆ.ಗುರುಗಳ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಎಲ್ಲಾ ಕಾರ್ಯಕ್ಷೇತ್ರದಲ್ಲೂ ಯಶಸ್ಸು ಖಚಿತ.ಮದುವೆ ಶುಭ ಸಮರಾಂಭಗಳಲ್ಲಿಯೂ ಶುಭ ಸಂಕೇತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿಗೆ ಹಾಕುವ ಆರತಕ್ಷೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ.
ರಾಯರ ಮಠದಲ್ಲಿ ನೀಡುವ ನೀಡುವ ಮಂತ್ರಾಕ್ಷೆತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತೀರಾ ಮತ್ತು ಅದು ಕೆಲ ನಿಮಿಷಗಳಲ್ಲಿ ಕೆಳಗೆ ಬೀಳುತ್ತದೆ.ಮಂತ್ರಾಕ್ಷತೆಗೆ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಖಚಿತ.ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿಹೊಂದಲು ಮಂತ್ರಾಕ್ಷತೆ ಬಳಸಬಹುದು.
ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲಾಭಾಗದಲ್ಲಿ ಇಟ್ಟುಕೊಳ್ಖಬೇಕು ಅಂದರೆ ಬಲಭಾಗದ ಜೇಬಿನಲ್ಲಿ.ನಂತರ ಮನೆಗೆ ತೆರಳಿದಾಗ ಅದಕ್ಕೆ ಶ್ರೀ ಗಂಧವನ್ನು ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ಹಾಕಿ ತಲೆಗೆ ಪ್ರೋಕ್ಷಣೆಯನ್ನು ಮಾಡಿಕೊಂಡು ಗುರುರಾಯರನ್ನು ನೆನೆಯುತ್ತಾ ಯಾವುದೇ ಕಾರ್ಯ ಮಾಡಿದರು ಯಶಸ್ಸು ಸಿಗುವುದು ಖಚಿತ.ಬಟ್ಟೆಯಲ್ಲಿ ಇದ್ದ ಅಕ್ಷೆತೆಯನ್ನು ತಲೆಗೆ ನಿತ್ಯ ಎರಡು ಕಾಳುಗಳನ್ನು ಹಾಕಿಕೊಳ್ಳಿ.ಮಂತ್ರಾಕ್ಷತೆಯನ್ನು ಶೇಕರಣೆ ಮಾಡಿಟ್ಟುಕೊಳ್ಳಿ.ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆ ನಿಮ್ಮ ತಲೆ ಮೇಲಿರಲಿ ರಾಯರ ಶ್ರೀ ರಕ್ಷೆ ನಿಮಗಿರುತ್ತದೆ ದೇಗುಲ ದರ್ಶನ ಕರ್ನಾಟಕ.
ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆ ಬಳಸಿ ರಾಯರ ಪವಾಡ ನೇರವಾಗಿ ನೋಡಿ.
*********


ಗುರುಗಳು ಆಶಿರ್ವದಿಸಿ ನೀಡಿದ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸ ಬೇಕು.


 “ಅಕ್ಷತೆಯಲ್ಲಿ” ನಾಲ್ಕು ತರಹ ಇದೆ..

೧. ಅಕ್ಕಿಯಲ್ಲಿನ ಅಕ್ಷತೆ : ಪ್ರತಿದಿನ ಪೂಜೆಯಲ್ಲಿ, ವ್ರತಗಳಲ್ಲಿ, ಶುಭ ಕಾರ್ಯಗಳಲ್ಲಿ “ಅಕ್ಕಿಯಲ್ಲಿ ಮಾಡಿದ ಅರಿಸಿನದ ಅಕ್ಷತೆ ಮತ್ತು ಕುಂಕುಮದ ಅಕ್ಷತೆ ಉಪಯೋಗಿಸುತ್ತೇವೆ..!


೨.” ತಿಲಾಕ್ಷತೆ” : ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರೀ ಎಳ್ಳು ಮತ್ತು ಯುವ ಅಕ್ಷತೆಗೆ “ತಿಲಾಕ್ಷತೆ” ಎಂದು ಹೆಸರು..!


೩. ಮಂತ್ರಾಕ್ಷತೆ : ಮಂತ್ರಿಸಿದ ಅಕ್ಷತೆಗೆ “ಮಂತ್ರಾಕ್ಷತೆ ” ಎಂದು ಹೆಸರು..!

ಉದಾಹರಣೆಗೆ : ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಕೊಡುವುದು “ಮಂತ್ರಾಕ್ಷತೆ” , ಇಲ್ಲಿ ಮೂಲರಾಮರಿಗೆ , ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡಿ ಪ್ರಸಾದವಾಗಿ ಕೊಡುತ್ತಾರೆ..!


ಈ ಮಂತ್ರಾಕ್ಷತೆಯಿಂದ

* ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ , ವಿದ್ಯಾಭಿವೃದ್ದಿ ಆಗುತ್ತದೆ..!


* ಸಕಲ ವ್ಯಾಧಿಗಳು ರೋಗಗಳು ನಿವಾರಣೆಯಾಗುತ್ತದೆ..


* ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ..


* ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ..


“ಅಕ್ಷತೆ” ಇಲ್ಲದೆ ಆಶೀರ್ವಾದ ಮಾಡಬಾರದು..!

**


“ಸುವರ್ಣ ಮಂತ್ರಾಕ್ಷತೆ” ಮತ್ತು ಮಹತ್ವಗಳು..!


ಸಾಧು ಸನ್ಯಾಸಿಗಳ ಹಾಗೂ ಮಠಗಳಿಗೆ ಹೋದಾಗ, “ಗುರುಗಳು” ನಿಮ್ಮನ್ನು ಮಾತನಾಡಿಸಿ, ವಿಚಾರಿಸಿ, “ನಿಮಗೆ ” “ಫಲಮಂತ್ರಾಕ್ಷತೆ” ಯನ್ನು ಕೊಡುತ್ತಾರೆ..!

ಹೀಗೆ ಗುರುಗಳು ಕೊಡುವ “ಮಂತ್ರಾಕ್ಷತೆಗೆ ” “ಸುವರ್ಣಮಂತ್ರಾಕ್ಷತೆ” ಎಂದು ಹೆಸರು..!!!


ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು , ಆದರೆ “ಸುವರ್ಣ ಮಂತ್ರಾಕ್ಷತೆ” ಏನು ಮಾಡಬೇಕು..?

ಇಲ್ಲಿದೆ ನೋಡಿ ಮಾಹಿತಿ..


“ಸುವರ್ಣ ಮಂತ್ರಾಕ್ಷತೆ” ಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು..!

ತೆಗೆದುಕೊಳ್ಳುವವರು ಪುರುಷರಾದರೆ “ಶಲ್ಯ” ದ ತುದಿಯಿಂದ ತೆಗೆದುಕೊಳ್ಳಬೇಕು..!

“ಹೆಂಗಸರಾದರೆ” “ಸೀರೆಯ” “ಸೆರಗಿನ ತುದಿ” ಯಿಂದ ತೆಗೆದುಕೊಳ್ಳಬೇಕು..!


ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ..!

ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು..!


೧. ಸುವರ್ಣ ಮಂತ್ರಾಕ್ಷತೆಯನ್ನು “ನಗದು” ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ..!

೨. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ..

೩. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ..!

೪. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ “ಗುರುಚರಿತ್ರೆ” ಪಾರಾಯಣ ಮಾಡಿದರೆ,

ಜಾತಕದಲ್ಲಿನ “ಗುರು” ಗ್ರಹದ ನೀಚತ್ವ ದೋಷ , ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ , “ಜಾತಕಸ್ಥರು ಜೀವನದಲ್ಲಿ ಇತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ..!

೬. ಪ್ರತಿದಿನ ಪೂಜೆ ಮಾಡುವಾಗ ” ಸುವರ್ಣಮಂತ್ರಾಕ್ಷತೆಗೆ” ಪೂಜೆ ಮಾಡಿದರೆ “ಲಕ್ಷ್ಮೀ” ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದಭಾಧೆ ನಿವಾರಣೆಯಾಗುತ್ತದೆ..!

೭. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು , ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ , ಮನೋಸಂಕಲ್ಪ ನೆರವೇರುತ್ತದೆ..!

೮. ಮನೆ ಕಟ್ಟುವಾಗ, ಬಾವಿ ತೋಡಿಸುವಾಗ, ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ.. ಬಾವಿಯಲ್ಲಿ ಸಿಹಿಯಾದ ನೀರು ಬರುತ್ತದೆ..

ರಾಯರ ಮಂತ್ರಾಕ್ಷತೆಯನ್ನು ಶ್ರದ್ದೆ ಭಕ್ತಿಯಿಂದ ಏನು ಮಾಡಬೇಕು,ಯಾವ ರೀತಿ ಬಳಸಿದರೆ ಗುರುರಾಯರ ಅನುಗ್ರಹ ಪಡೆಯಬಹುದು ತಿಳಿದುಕೊಳ್ಳೊಣ ಬನ್ನಿ

.ಗುರುರಾಯರನ್ನು ಭಕ್ತಿಯಿಂದ ನೆನೆಯುತ್ತಾ ಓದುತ್ತಾ ಸಾಗೋಣ ಬನ್ನಿ.ಹಲವಾರು ಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಮಂತ್ರಾಕ್ಷತೆಗೆ ಇರುವ ಪ್ರಾಮುಖ್ಯತೆ ನಮ್ಮ ಯುವ ಪೀಳಿಗೆಗೆ ತಿಳಿದಿರುವುದಿಲ್ಲ.

ಮಂತ್ರಾಕ್ಷತೆಯನ್ನು ಬೇಕಾ ಬಿಟ್ಟಿ ಬಳಸುತ್ತಾರೆ.ಕೊಟ್ಟ ಮಂತ್ರಾಕ್ಷತೆಯನ್ನು ತಲೆಗೂ ಸರಿಯಾಗಿ ಹಾಕಿಕೊಳ್ಳದೆ ಜೇಬಿನಲ್ಲೂ ಸರಿಯಾಗಿ ಇಡದೆ ನೆಲೆದ ಮೇಲೆ ಅರ್ಧಕ್ಕೆ ಅರ್ಧ ಮಂತ್ರಾಕ್ಷತೆ ಚೆಲ್ಲುತ್ತಾರೆ.ಗುರುಗಳಿಂದ ಸಿಕ್ಕಿತು ಮಂತ್ರಾಕ್ಷತೆ ಬಹಳ ಶಕ್ತಿಯುತವಾದದ್ದಾಗಿದೆ.

ಗುರುಗಳ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಎಲ್ಲಾ ಕಾರ್ಯಕ್ಷೇತ್ರದಲ್ಲೂ ಯಶಸ್ಸು ಖಚಿತ.ಮದುವೆ ಶುಭ ಸಮರಾಂಭಗಳಲ್ಲಿಯೂ ಶುಭ ಸಂಕೇತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿಗೆ ಹಾಕುವ ಆರತಕ್ಷೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ.

ರಾಯರ ಮಠದಲ್ಲಿ ನೀಡುವ ನೀಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತೀರಾ ಮತ್ತು ಅದು ಕೆಲ ನಿಮಿಷಗಳಲ್ಲಿ ಕೆಳಗೆ ಬೀಳುತ್ತದೆ.ಮಂತ್ರಾಕ್ಷತೆಗೆ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಖಚಿತ.ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿಹೊಂದಲು ಮಂತ್ರಾಕ್ಷತೆ ಬಳಸಬಹುದು.

ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲಾಭಾಗದಲ್ಲಿ ಇಟ್ಟುಕೊಳ್ಖಬೇಕು ಅಂದರೆ ಬಲಭಾಗದ ಜೇಬಿನಲ್ಲಿ.ನಂತರ ಮನೆಗೆ ತೆರಳಿದಾಗ ಅದಕ್ಕೆ ಶ್ರೀ ಗಂಧವನ್ನು ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ಹಾಕಿ ತಲೆಗೆ ಪ್ರೋಕ್ಷಣೆಯನ್ನು ಮಾಡಿಕೊಂಡು ಗುರುರಾಯರನ್ನು ನೆನೆಯುತ್ತಾ ಯಾವುದೇ ಕಾರ್ಯ ಮಾಡಿದರು ಯಶಸ್ಸು ಸಿಗುವುದು ಖಚಿತ.ಬಟ್ಟೆಯಲ್ಲಿ ಇದ್ದ ಅಕ್ಷತೆಯನ್ನು ತಲೆಗೆ ನಿತ್ಯ ಎರಡು ಕಾಳುಗಳನ್ನು ಹಾಕಿಕೊಳ್ಳಿ.

ಮಂತ್ರಾಕ್ಷತೆಯನ್ನು ಶೇಕರಣೆ ಮಾಡಿಟ್ಟುಕೊಳ್ಳಿ.

ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆ ನಿಮ್ಮ ತಲೆ ಮೇಲಿರಲಿ ರಾಯರ ಶ್ರೀ ರಕ್ಷೆ ನಿಮಗಿರುತ್ತದೆ.ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆ ಬಳಸಿ ರಾಯರ ಪವಾಡ ನೇರವಾಗಿ ನೋಡಿ.


ಮಂತ್ರಾಕ್ಷತೆ 

🌹🕉🌹

ಮಂತ್ರಾಕ್ಷತೆಗೆ ಅಪಾರವಾದ ಶಕ್ತಿಯಿದ್ದು ಸರಿಯಾದ ಪದ್ಧತಿಯಲ್ಲಿ ಬಳಸಿದರೆ ಪ್ರತಿ ಕೆಲಸದಲ್ಲೂ ಜಯ ನಿಶ್ಚಿತ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ. 

ಮಂತ್ರಾಕ್ಷತೆಗೆ "ಜೀವನಾಮೃತ" ಎಂದೂ ಹೇಳುವರು. 

ಮಂತ್ರಾಕ್ಷತೆ ಎಂದರೆ ಮಂತ್ರಿಸಿದ/ಮಂತ್ರಪೂತವಾದ  ಅಕ್ಷತೆ. 

ಗುರುಗಳು ಕೊಡುವ ಮಂತ್ರಾಕ್ಷತೆಯನ್ನು ಸುವರ್ಣ ಮಂತ್ರಾಕ್ಷತೆ ಎನ್ನುವರು. 

ಮಂತ್ರಾಕ್ಷತೆಯು:

ದೇಹ, ಪ್ರಾಣ ಹಾಗೂ ಆತ್ಮಗಳಿಗೆ ಪೋಷಕ; 

ಇಷ್ಟಪ್ರಾಪ್ತಿ, ಅನಿಷ್ಟನಿವೃತ್ತಿ, ದೌರ್ಭಾಗ್ಯದ ನಾಶ, ದಿವ್ಯತ್ವದ ಉದಯ. 

ಅರ್ಪಣೆ ಮತ್ತು ಅನುಗ್ರಹಗಳ ದ್ವಿಮುಖ ಸಂವಹನವನ್ನು ಅಕ್ಷತೆ ನಿಭಾಯಿಸುತ್ತದೆ. 

ಆಧ್ಯಾತ್ಮಿಕವಾಗಿ ಹೇಳುವುದಾದರೆ ಅಕ್ಷತೆ ಫಲಾಪೇಕ್ಷೇಯೂ ಹೌದು; ಬೀಜ ಮೊಳೆತು ಪಕ್ವವಾಗಿ ಸಿಗುವ ಫಲವೂ ಹೌದು. 

ಮಂಗಳದ್ರವ್ಯತ್ರಯಗಳಾದ ಅಕ್ಕಿ, ಅರಸಿನ/ಕುಂಕುಮ, ತುಪ್ಪ/ಸುಣ್ಣ ಸಂಗಮವೇ ಅಕ್ಷತೆ. 

ಈ ಅಕ್ಷತೆಯಲ್ಲಿ  ವೇದಮಂತ್ರಗಳೊಂದಿಗೆ ಭಗವದ್ರೂಪಗಳ ವಿಶಿಷ್ಟ ಸನ್ನಿಧಾನ ಪ್ರಾಪ್ತವಾಗಿದ್ದು, ಭಗವಂತನಿಗೆ ಸಮರ್ಪಿತ ನಿರ್ಮಾಲ್ಯದಂತೆ ಅತ್ಯಂತ ಪವಿತ್ರವೆನಿಸಿದೆ. 

ಮಂತ್ರಾಕ್ಷತೆಯ ಧಾರಣೆಯಿಂದ ದೇಹ ಮನಸ್ಸುಗಳು ಮಾಲಿನ್ಯವನ್ನು ಕಳೆದುಕೊಂಡು ಪಾವಿತ್ರ್ಯವನ್ನು ಪಡೆಯುತ್ತವೆ. 

ಈ ಹಿನ್ನಲೆಯಲ್ಲಿ ವೇದಮಂತ್ರಗಳನ್ನು ಪಠಿಸಿ, ಮಂತ್ರಾಕ್ಷತೆಯನ್ನು ಭಗವಂತನಿಗೆ ಅರ್ಪಿಸಿ, ಭಗವದ್ಭಕ್ತರು ಸ್ವೀಕರಿಸುತ್ತಾರೆ. 

ಜೀವನದಲ್ಲಿ ಸೋಲದಿರಲು ಮಂತ್ರಾಕ್ಷತೆ ಹಾಗೂ ಅದರ ಕುರಿತು ಅಚಲ ವಿಶ್ವಾಸ ಮುಖ್ಯ. 

'ಕ್ಷತ' ಎಂದರೆ ಘಾತ, ಪೆಟ್ಟು, ಆಘಾತ .... ಇವೆಲ್ಲ ಜೀವನದಲ್ಲಿ ಬಂದಾಗ ಅಕ್ಷತೆ ರಕ್ಷಿಸುತ್ತದೆ.

ನಮ್ಮಲ್ಲಿ ಭಾವ ಎಷ್ಟಿದೆಯೋ ಅಷ್ಟು ಫಲವನ್ನು ಮಂತ್ರಾಕ್ಷತೆ ಕೊಡುತ್ತದೆ. 

ಮಂತ್ರಾಕ್ಷತೆ ನೆಚ್ಚಿದವರಿಗೆ ಸೋಲಿಲ್ಲ. 

ಮಂತ್ರಾಕ್ಷತೆ ಎಲ್ಲ ಕ್ಲೇಶಗಳನ್ನೂ, ಪ್ರಶ್ನೆಗಳನ್ನೂ ಉತ್ತರಿಸುತ್ತದೆ ಮತ್ತು ಭವಸಾಗರವನ್ನು ದಾಟಿಸುತ್ತದೆ. 

******










No comments:

Post a Comment