SEARCH HERE

Tuesday, 1 January 2019

ನಾಗ ಪಂಚಮಿ naga panchami shravana shukla panchami



Significance of Nagara Chathurthi& Panchmi

Many people celebrate Nagara chauthi &Panchmi without knowing the significance of this festival. There a somSre myths and facts behind the celebration, worship and offerings that are given to the snake God. It is  festival celebrated all over India with same vigour and devotion. Read on to learn why Hindus celebrate Nag chauithi& Panchmi and what are the reasons behind celebrating this festival.

》》Nagara Chauthi is the fourth day of the Shravana masa. On this day married women take head bath and wearing wet clothes (or washed clothes separately) which makes it very pure, either do the pooje to the snake hootha or place a silver idol of Nagappa and continue. Unboiled milk or raw milk, haldi,  soaked kadale, gejjevastra and flowers are offered to the idol of Nagappa. Women who do the pooje on this day fast as well. This is how we do the pooje in Madhwa houses. No fried items are prepared during this day. Women also prepare thambittu and do aarathi to Nagappa using the same. All this needs to be done in madi.

》》No Kumkum is applied to Nagappa on Chauthi. The gejjevastra is prepared by applying Haldi. No deep fired items as well. Kumkum is applied to Nagappa on Panchami. The gejjevastra is prepared by applying Kumkum. No deep fired items as well.

It is also customary to draw images of Nagappa on the front door, hosthilu and also near the place you worship using rice paste. Haldi, kumkum, gejje vastra and flowers are applied to these as well.

》》Nag Panchmi is a Hindu festival on which snakes are worshipped. Hinduism is a religion of faith and is surrounded by common search of truth. For Hindus all this means a way of life and worshipping forces of nature has been a part of Hinduism from ancient times. Nag Panchmi is celebrated throughout India and falls on the fifth day of the moonlit fortnight of the month of Sravana, which falls in the month of July or August.

》》The main reason of celebrating this day must be that snakes are a great threat to mankind during these months. They usually come out of their holes as rainwater seeps in and while looking for shelter they might harm humans. However, this is why they are worshipped this day and fed with milk.

》》Reason behind celebrating Nag Panchmi

It is believed that Krishna, a Hindu God had saved the lives of people from the harassment of Kaliya, the snake. It is believed that one day, when Krishna was still quite young, was playing by the side of river Yamuna and his ball got stuck in the branches of a tree that was just by the side of the river. While trying to get that ball, Krishna fell into the river. When Kaliya, the snake attacked him, he fought and after some time the snake understood that he was not an ordinary child. This was when he pleaded Krishna not to kill him and Krishna spared him by taking a promise that he will not harass the people anymore. Nag Panchmi is celebrated as the victory of Krishna on Kaliya, the most dangerous snake.

》》Ways of worshipping in various states of India

People do not dig the earth this day and offer cow's milk, fried paddy, rice's breed and durva (tip of a special grass) in front of the pictures of Nag or make its idol of mud and sand and worship it. This festival is celebrated all over India and more or less the way of worshipping is same.

》》People believe that Lord Shiva, a Hindu God, loves and blesses snakes and so by worshipping the snakes they also try to please him. Lord Shiva is believed to be one of the most short-tempered Gods and can even ruin your life if he gets angry. Some people even worship live cobras on the Nag Panchmi day and offer them milk and other offerings as feed.

》》India is a country with different cultures and so the celebration varies from one state to state. In Maharashtra, a group of people asks alms and clothing by taking a dormant cobra in a plate and visiting as many houses as possible. In kerela, people prefer visiting the snake temples.

********
SIGNIFICANCE by Sri Bhargava Sarma

Naga Chaturthi falling on the 4th day during the bright fortnight of auspicious Sravana Maasa followed by Naga Panchami on the next day is celebrated as Naga Devatha festival.

Serpent God Aadi Sesha is the presiding Deity for Panchami thithi.

It is a festival celebrated every year in honour of Snakes. It is considered as highly auspicious and sacred to worship the Serpent God on these days.

It is said to be the day Lord Brahma gave a boon to Serpents that they would get adored by human beings on the Earth.

It was on this day of Naga Panchami, King Janamejaya stopped his Sarpa Yaga and a new lease of life was given to the Serpents.

Generally we find people getting scared at the sight of a snake, but in reality serpents have become a part and parcel of our Hindu religion and culture. They have acquired a prominent place in Hindu Puranas.

Among the snakes, Cobra is considered as Serpent God (Naga Devatha) and Nagaaradhana (Snake worship) is one of the accepted sattsampradaya in Hindu religion since yore. There is a separate world for snakes known as Naaga Loka among the nether worlds.

Among the serpent Gods, Anantha (Aadi Sesha) and Vasuki are in the forefront. We find many pauranic legends associated with Serpents and their worship.

Symbolism of several Deities is associated with Serpents. For example...

the seat on which Lord Vishnu rests (Anantha Sayana) in his abode Sri Vaikunta is nothing but Aadi Sesha the serpent God.

Lord Shiva’s neck is adored by a serpent.

Lord Ganesha is depicted as wearing Naga Yagnopaveetham.

At Kukukke Subramanya Kshethra Lord Subramanya is worshiped along with Vaasuki.

We find Lord Venkateshwara at Tirumala wearing Naagabharana on his shoulders.

Tirumala the abode of Lord Venkateshwara is also known as Seshachala named after the Serpent God Aadi Sesha. From a distance the seven hills appears in a serpentine form.

During Ksheera Sagara Madhanam,Vasuki the Serpent God was used as a rope for churning the ocean.

Lord Sri Krishna says in Sri Bhagawad Geeta, Vibhooti Yoga (sloka 28 & 29) that He is Anantha among the Naga Sect and Vasuki among the Serpents.

In Tretha Yuga during Sri Ramaavathara, Aadi Sesha took the form of Lakshmana, Lord Sri Rama’s younger brother and

In Dwapara Yuga during Sri Krishnaavathara he took the form of Balarama (Nara) the elder brother of Lord Sri Krishna.

Arjuna of Mahabharatha fame married a Naga Kanya called Uloochi.

Naga Devatha is one of the nine presiding Deities of Yagnopaveetham who is also offered prayer before wearing it.

Prominent Madhva Saints, Sri JayaTheertharu (TeekaRayaru) is considered as the Aavesha of Aadi Sesha.

In the life history of Saint Sri Raghavendra Swamy we find him having worshiped Naga Devatha by offering daily milk during his 13 years of stay in the house of Sri Appanacharya at Bichhali near Mantralayam.

As per legend, in the backyard of Sri Appanacharya’s house there was a snake bill where a king Cobra used to reside in it. Sri Raghavendra Swamy during his stay at Bhikshalaya was regularly offering milk to the serpent (Aadi Sesha) after his daily pooja/rituals and the serpent used come and drink the milk.

When Sri Rayaru decided to move to Manchali he had taken a decision to dismantle the snake bill. Accordingly when it was dismantled an idol of snake appeared in its place which is being worshiped currently.

A snake-bill is considered as a temple of Serpent God and in some places snake idols are installed under the shade of Banyan Tree.

At some other places we find exclusive temples erected for Naga Devatha worship.

In some families especially in South India, we find exclusive private temples of Naga Devatha are erected by the family members and they conduct annual festival in its honour.

Naga is also a household name among Hindus and we find people calling their children with the name of Nagadevatha.

People perform Nagaaradhana and worship Naga Devatha for the welfare and well-being of their family and children and for taking forward their family lineage.

It is strongly believed and said that for those who are childless, Naga Devatha Pratishta and Nagaaradhana with proper Anusandhana bestows them with progeny.

> Famous Naga Kshethras...

There are several pilgrim centers considered as Naga Kshethras; some of the famous and ancient Naga Kshethras associated with pouranic legends are...

Sri Kukke Subramanya (Karnataka State),

Sri Kshethra Kudupu (near Mangalore),

Ghaati Subramanya (near Doddabalapur in Karnataka),

Thirunageswaram (near Kumbhakonam) &
Nagerkoil (in Tamil Nadu),

Manasa Devi temple (in Hardwar in Uttar Pradesh), and

Nageshwar Jyothirlinga Kshetra (near Dwaraka)

are some of the famous Naga Kshethras.

Time and again through its medium of festivals, Hindu philosophy put across the human race to live in tandem and harmony with the nature and its species.

Perhaps this is the message the festival of Naga Panchami conveys.

ಅನಂತಶಯನಂ ದೇವಂ ಸರ್ವಶೋಕವಿನಾಶನಮ್ ।
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಮ್ ।।
ಶೇಷ ದೇವಾ ವಾರುಣಿ ಪತಿ ಪಾಹಿ || ಪ ||
ಶೇಷದೇವ ತ್ರಯಿಘೋಷನ ಮುಖಪರಿ | ಪೋಷಿಸು ಎಮ್ಮಭಿಲಾಷೆಯ ಸಲಿಸಿ
... ಶ್ರೀ ಜಗನ್ನಾಥ ದಾಸರು

There could be sampradaya bheda but, in general Naga Devatha should be worshiped on this day with Shodasa Upachaara Pooja with Sankarshana Roopi ParamaAtma (Lord Vishnu) as Antharyaami;

Depending on availability and sampradaya, Naga Shila or Silver Naga Pratima or Snake Bill will be used. We also find people symbolically drawing the picture of a snake (naAga) on both sides of the outer wall of their houses.

There is also a custom to observe fast on the day of Naga Chaturthi and break the same on the next day after offering prayers to Naga Devatha once again.

On the day of Naga Chaturthi/Panchami digging of soil, ploughing of the field, cutting of trees, fried/roasted foods are forbidden.

Preparations made with Thila, Jaggery, and Rice are offered as Naivedya;

For observing Naga-Chaturthi Vratha, Chaturthi thithi should be MadhyaAnna Vyaapini and

for Naga-Panchami, Panchami should be PoovaViddha, that means Panchami mixed with Chaturthi to be preferred.

On the day of Garuda Panchami, Lord Garuda also to be worshiped along with Sesha Devaru/Naaga Devatha.

अनंतं वासुकिं शेषं पद्मकंबलकौ तथा ।
तथा कार्कोटकं नागं भुजंगश्वतरौ तथा ॥
धृतराष्ट्रं शंखपालं कालीयं तक्षकं तथा ।
पिंगलं च महानागं सपत्नीकान् प्रपूजयेत् ॥

ಅನಂತಂ ವಾಸುಕಿಂ ಶೇಷಂ ಪದ್ಮಕಂಬಲಕೌ ತಥಾ |
ತಥಾ ಕಾರ್ಕೋಟಕಂ ನಾಗಂ ಭುಜಂಗಶ್ವತರೌ ತಥಾ ||
ಧೃತರಾಷ್ಟ್ರಂ ಶಂಖಪಾಲಂ ಕಾಲೀಯಂ ತಕ್ಷಕಂ ತಥಾ |
ಪಿಂಗಲಂ ಚ ಮಹಾನಾಗಂ ಸಪತ್ನೀಕಾನ್ ಪ್ರಪೂಜಯೇತ್ ||

anantam vaasukim shESham padmakambalakou tathaa |
tathaa kaarkOTakam naagam bhujamgashvatarou tathaa ||
dhRutaraaShTram shanKapaalam kaalIyam takShakam tathaa |
pingalam cha mahaanaagam sapatnIkaan prapoojayEt ||

> NaAga Stuthi (Kannada)

ಸರ್ಪಾಪಸರ್ಪ ಭದ್ರಂ ತೇ ದೂರಂ ಗಚ್ಚ ಮಹವಿಷ
ಜನಮೇಜಯ ಯಾಗಾಂತೇ ಆಸ್ತೀಕ ವಚನಂ ಸ್ಮರ

ಅನಂತಾಯ ನಮಸ್ತುಭ್ಯಂ ಸಹಸ್ರಶಿರಸೇ ನಮಃ
ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ

ಅನಂತೋ ವಾಸುಕಿಃ ಶೇಷಃ ಪದ್ಮನಾಭಶ್ಚ ಕಂಬಳಃ
ಶಂಖಪಾಲೋ ಧಾರ್ತರಾಷ್ಟ್ರಃ ತಕ್ಷಕಃ ಕಾಳಿಯ ಸ್ತಥಾ

ಏತೇಷಾಂ ನವ ನಾಮಾನಿ ನಾಗಾನಾಂಚ ಮಹತ್ಮನಾಮ್
ಸಾಯಂಕಾಲೇ ಪಠೇ ನ್ನಿತ್ಯಂ ಪ್ರಾತಃಕಾಲೇ ವಿಶೇಷತಃ

ವಿಷಾತ್ತಸ್ಯ ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್

ಅನಂತಾನಂತದೇವೇಶ
ಅನಂತಫಲದಾಯಕ
ಅನಂತರೂಪಿ ವಿశ్వాತ್ಮಾನ್
ಅನಂತಾಯ ನಮೋನಮ:

Ananthananthadevesha Anantha Phaladayaka!
Anantharoopi Viswathman Ananthaaya Namo Namaha!!

Sri Krishnaarpanamasthu
******

naaga Stuthi

ಸರ್ಪಾಪಸರ್ಪ ಭದ್ರಂ ತೇ ದೂರಂ ಗಚ್ಚ ಮಹವಿಷ
ಜನಮೇಜಯ ಯಾಗಾಂತೇ ಆಸ್ತೀಕ ವಚನಂ ಸ್ಮರ

sarpAvararpa bhadraM tE dUraM gajja mahaviSha
janamEjaya yAgAMtE astIka vachanaM smara

ಅನಂತಾಯ ನಮಸ್ತುಭ್ಯಂ ಸಹಸ್ರಶಿರಸೇ ನಮಃ
ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ

anaMtAya namastubhyaM sahasrashirasE namaH
namOstu padmanAbhAya nAgAnAM patayE namaH

ಅನಂತೋ ವಾಸುಕಿಃ ಶೇಷಃ ಪದ್ಮನಾಭಶ್ಚ ಕಂಬಳಃ
ಶಂಖಪಾಲೋ ಧಾರ್ತರಾಷ್ಟ್ರಃ ತಕ್ಷಕಃ ಕಾಳಿಯ ಸ್ತಥಾ

anaMtO vAsukiH shEshaH padmanAbhashcha kaMbaLaH
shaMkhapAlO dArtarAShtraH takShakaH kALiya stathA

ಏತೇಷಾಂ ನವ ನಾಮಾನಿ ನಾಗಾನಾಂಚ ಮಹತ್ಮನಾಮ್
ಸಾಯಂಕಾಲೇ ಪಠೇ ನ್ನಿತ್ಯಂ ಪ್ರಾತಃಕಾಲೇ ವಿಶೇಷತಃ

EtEShAM nava nAmAni nAgAnAMcha mahatmanam
sAyaMkAlE pharE nityaM prAtaHkAlE viShEShataH

ವಿಷಾತ್ತಸ್ಯ ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್
viShAttasya bhayaM nAsti sarvatra vijayi bhavEt

ಅನಂತಾನಂತದೇವೇಶ
ಅನಂತಫಲದಾಯಕ
ಅನಂತರೂಪಿ ವಿశ్వాತ್ಮಾನ್
ಅನಂತಾಯ ನಮೋನಮ:

anaMtAnaMtadEvEsha
anaMtaphaladAyaka
anantarUpi vishvAtmAn
anaMtAyA namOnama

*******

Naga Panchami Story 
Human beings soon after stabilizing from nomadic venture started the ritual of worshipping the nature and everything that was helpful to them in one or another way. It helped them construct a system that was derived from the beliefs in social organizations, local cults and deities. Humans thus started exploring nature and started sorting a culture to abide by. Things like sun, river, mountain and snake have been thought of as important element of simultaneous existence since then. Snake worship has also been a part of the culture of India ever since then. Nag Panchami is one of the most important festivals in India celebrated to commemorate the existence of the snake god.
Celebrated on the fifth day of the moonlit-fortnight in the month of Shravan according to the Hindu calendar, this festival falls in the month of July /August according to the Gregorian calendar. It is celebrated in various parts of the country amongst the community where it has been prevalent for long. The grandest celebrations can be seen in the southern India and in the states of Bengal and Maharashtra. The festival has religious significance too. It is believed that Snakes have been the savior of human race from the wrath of demons and also, that the earth is balanced on the head of on Shesh Naag. There are also several legends and stories associated with the festival, one of the most important one is given below.


Nag Panchami is a festival that brings siblings together to celebrate their family's well-being. This festival is observed on the fifth day of Shravana month of the Hindu lunar calendar after the amavasya of Aashaadha month.

On this day, married women and girls wake up early in the morning to bathe, arrange for puja, and go to the nearest ant hill (snake's home). They perform puja to the snake's home and pray to the Snake God (Indian Cobra - Murugan's incarnation) for the wellness of their families. If there is no ant hill nearby, they offer puja to snake statues erected in nearby temples. A portion of milk used for puja is taken back home and offered to everyone as prasad.

Sweets like kuchida Kadubu (Kannada ) and Nuchununde are prepared, offered to Lord Krishna , Sheshanag and then distributed among guests.

Stories & Legends Of Nag Panchami It is said that long before Aryans arrived in India, a clan named Nagas lived in India. It was a highly developed clan. It is said that the snake-worship amongst the Nagas, was extremely popular and it can be proved according to the evidences derived from the Indus Valley civilization of 3000 B.C. After the Naga culture gradually got incorporated into Hinduism, the Indo-Aryans also gradually accepted many of the snake deities as their God too. The prominent Cobra snakes mentioned in the Puranas that are to be worshipped are Ananta, Vasuki, Shesha, Padmanabha, Kambala, Shankhapala , Dhartarashtra ,Takshaka,and kaliya . However, some of the historians claim that they were not snakes but Naaga Kings of various kingdoms which were worshipped as Gods.


According to the scriptures, Lord Krishna conquered Naga Kāliya and put an end to the evil deeds on this day (Nāga Panchamī). Tradition says that Kathmandu valley used to be a vast lake. When human beings started to drain the lake to make space for settlements, Nagas became enraged. To protect themselves against the wrath of Nagas, people gave the latter certain areas as pilgrimage destinations, thus restoring harmony in nature.[
According to other scriptures a king used his Tantric powers to force Nagas to return to the land and control the rains. The Nagas complied, but in recognition of their power to control the rains, the king established the Naga Panchami festival.


There is also a popular belief amongst people in Hindu religion that thousand-headed Shesh Nag who symbolizes Eternity holds the entire spherical earth on it head. Also, that it is the resting couch of Lord Vishnu, one of three most important gods of Hindu religion. In Jainism and Buddhism snake is regarded as sacred creature with divine qualities. It is because some ancient texts say that a Cobra snake saved the life of Buddha and the Jain Muni Parshwanath.  Stories of snakes association with Hindu gods also enhance the stature of these reptiles in Hindu culture. A popular legend says that the elder brother of Lord Krishna, Balaram was the incarnation of Sheshnag on earth. Snake is also given due importance because it is considered to be the ornament of Lord Shiva around his neck. The celebration of Nag Panchami in the month of Shraavan (considered as the month of Lord Shiva in Hindu religion) also explains the deep association of Shiva and commemoration of snake as his companion. It is believed that even the ancient architecture exhibit the evidence of the importance of snakes in the Indian culture. On the caves of Ajanta, the images of the rituals of snake worship have been found. Even Indian literature is full of stories of the virtue of snake. The famous author Kautilya, in his "Arthashastra" has given detailed description of the cobra snakes. It is said that it was also the wide belief of people in ancient India that if they worship snake, they won't cause harm to them and their family. So, there is no one specific legend to why the Naga Panchami started in India, it is being for too long due to the religious significance and social importance of this unique reptile.
*********

Nagara Panchami  is celebrated on Shukla Paksha Panchami Tithi in Shraavan Masa. Usually Nagara Panchami falls  four days  after Ashada Jyothir Bheemeshwara Vrat. This time Nagara Panchami  falls in the month of July
27th 2017.On this day all of them worship Naga Devta for the well being ; especially girls, married women pray for the longevity of brothers and their well being.

               Nagara Panchami is the traditional  Hindu festival worshipped to the serpent God Nagaraja and his family.Especially 12 serpent Gods are important among them:

Ananta
Vasuki
Shesha
Padmanabham
Kambala
Karkotaka
Ashvatara
Dhritarashtra
Shankhapala
Kaliya
Takshaka
Pingala

Usually 9 serpent gods are worshiped everyday by chanting the below mantra.If this mantra is chanted everyday regularly for 11 times  they will be protected from all evils and the individual will overcome from  the fear of poisonous snakes and in all their deeds they will obtain victory.

अनन्तं वासुकिम्  शेषं  पद्मनाभं  च कम्बलम् |
शङ्ख पालं  धृतराष्ट्रं  तक्षकं कालियं तथा ||
एतानि नव नामानि  नागानां च महात्मानाम् |
सायड्काले पठेन्नित्यं  प्रातः काले विशेषतः |
तस्य विषभयं नास्ति  सर्वत्र विजयी भवेत् || 

WORSHIP OF SERPENTS STARTED?

After the death of King Parikshit by a snake bite; who was cursed by a sage.The next descendent who became Kuru King was Janmejay .He performed Sarpayagna in order to take revenge on his father's death. But a learned sage Astika appeased him. The King Janmejay told Sage Astika to ask a boon.Soon he asked to stop sarpayagna as by doing this yagna will not bring his father alive.Soon Takshak was released free by Sage Astika. The day King Janmejay performed sarpayagna was shuklapaksha shraavan masa panchami tithi.

         Another story, Sri Krishna forced Serpent Kaliya to leave holy Yamuna river which is on shukla paksha shraavan masa panchami day.


Mantra:

सर्वे नागाः  प्रीयन्तां मे ये केचित् पृथिवीतले |
ये च हेलिमरीचिस्था  येsन्तरे दिवि  संस्तिताः |
ये नदीषु महानागा ये सरस्वतिगामिनः |
ये च  वापीतडागेषु   तेषु सर्वेषु वै नमः ||

may the snakes who are staying in this world,sky,heaven,sun-rays,lakes,wells,ponds,etc,bless us and we all salute them.


Procedure:

Place a wooden plank ; draw rangoli   in straight lines.No designs and twisted designs should be drawn on chaturthi and panchami days.

In a Silver/Brass  plate place  Ganesha moorti and Nagdevta moorti  and pour milk with ghee and  puffed flattened rice(Battada Aralu).

Prepare rice flour(hasi tambittu)  cradle (Tottillu) and baby five of them and keep all of them on betel leaves and pour same milk and ghee.(To prepare tambittu soak rice for 1 hr and grind with jaggery , coconut and cardamom powder).After preparing tottilu and koosu five of them with ghee; keep  some tambittu for naivedyam and later serve as prasadam to all the family members.

Don't use haldi and kumkum after pouring milk and ghee mixture.

Use flowers, flower garland,gejje vastra,ghee lamps,dhoop,etc.,

For naivedyam we should not offer  fried items or green leafy veggies or turmeric .

So traditional recipes like kuchchida kadubu,white ghee rice,curd rice, nuchchinunde, payasam, panaka, kosambari,vegetable palya etc., are prepared on this day.

After naivedyam do Mangalarathi and distribute prasadam.


Next girls and married women can do tani eriyodu to their brothers.
************



"ಸಮಸ್ತ ಬಂಧುಗಳಿಗೂ ನಾಗರ ಚೌತಿ ಹಬ್ಬದ ಶುಭಾಷಯಗಳು...
(GENERAL ಆಗಿ ಹಾಕಿರೋದು, ನಿಮ್ಮ ಮನೆ ಪದ್ಧತಿ ಅನುಸರಿಸಿ)
ನಾಗರ ಚೌತಿ" ಅಥವಾ ಪಂಚಮಿ ಕಲ್ಲಿನ ನಾಗರ ವಿಗ್ರಹಕ್ಕೆ ಅಥವಾ ಮನೆಯಲ್ಲಿನ ನಾಗರ ವಿಗ್ರಹಕ್ಕೆ ತನಿ ಎರೆಯುವ ಕೆಲವು ಸಲಹೆಗಳು..

ಮೊದಲು ಸ್ನಾನ ಮಾಡೋ ನೀರಿಗೆ ಅರಿಸಿನ, ಎರಡು ಹನಿ ಗೋವು ಮೂತ್ರ, ಪಚ್ಚಕರ್ಪೂರ, ದರ್ಬೆ ಹಾಕಿ ಸಚೇಲ ಸ್ನಾನ ಮಾಡಿ..
ಕಲ್ಯಾಣಿ ಅಥವಾ ಬಾವಿಯಲ್ಲಿ ಸ್ನಾನ ಮಾಡುವುದಾದರೆ ಬೇಡ..

೧..ಮೊದಲು ನಾಗರ ಕಲ್ಲು ಅಥವಾ ವಿಗ್ರಹವನ್ನು "ಶುದ್ಧವಾದ ನೀರಿನಿಂದ ಶುದ್ಧ ಮಾಡಿ.

೨. ನಂತರ ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಇದರಿಂದ ವಿಗ್ರಹಕ್ಕೆ ಕಳೆ ಬರುವುದು..

೩. ಹಾಲು, ಜೇನುತುಪ್ಪ ತುಂಬಾ ಇಷ್ಟ ನಾಗದೇವರಿಗೆ ಹಾಕಿ ಅಭಿಷೇಕ ಮಾಡಿ..
ಹಾಲು, ಜೇನುತುಪ್ಪ, ಸಕ್ಕರೆ, ಎಳನೀರು, ಹಣ್ಣು , ತುಪ್ಪ ಹಾಕಿ ಅಭಿಷೇಕ ಮಾಡಿ..

೪. ನಂತರ ಪಚ್ಚಕರ್ಪೂರ ಹಾಕಿದ ನೀರಿನಿಂದ ಶುದ್ಧ ಮಾಡಿ,

೫. ನೀರಿನಿಂದ ಶುದ್ಧ ಮಾಡಿ

೫. ಅರಿಸಿನ ಹಾಕಿದ ನೀರು, ಕುಂಕುಮ ಹಾಕಿದ ನೀರಿನಿಂದ ಅಭಿಷೇಕ ಮಾಡಿ (ದೈವ ಕಳೆ ಬಂದು ದೃಷ್ಟಿದೋಷ ಹೋಗುವುದ)

೬. ಗೆಜ್ಜೆವಸ್ತ್ರ, ಇಡಿ, ಅರಿಸಿನ ಕುಂಕುಮ ಹೂವು ಇಟ್ಟು ಪೂಜೆ ಮಾಡಿ,
ಸುಬ್ರಹ್ಮಣ್ಯ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರ ಹೇಳಿಕೊಳ್ಳಿ..

೭. ಊದುಕಡಢಿ, ಏಕಾರ್ತಿ ಮಾಡಿ ನೈವೇದ್ಯ ಮಾಡಿ , (ಮಡಿಯಲ್ಲಿ‌ ಮಾಡಿದ್ದು ಚಿಗಳಿ....ಇತ್ಯಾದಿ) ಮಡಿಯಲ್ಲಿ ಮಾಡಿರಬೇಕು..

೮. ನಂತರ ಮಂಗಳಾರತಿ ಮಾಡಿ, 9 ನಮಸ್ಕಾರ ಮಾಡಿ..

(ಒಬ್ಬೊಬ್ಬರ ಮನೆ ಪದ್ಧತಿ ಒನ್ನೊಂದು ತರಹ, ತಿಳಿದು ಮಾಡಿ)

*******
ಶ್ರಾವಣ ಶುಕ್ಲ ಪಂಚಮಿ ದಿನದಂದು ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ನಾಗನ ಕಟ್ಟೆಗೆ ಹೋಗಿ ನಾಗನಿಗೆ #ಹಾಲು ಹಾಗೂ #ಎಳೆನೀರಿನ #ಅಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ. ಈ ದಿನ #ಅನಂತ, #ವಾಸುಕೀ,#ಶೇಷ, #ಪದ್ಮನಾಭ, #ಕಂಬಲ, #ಶಂಖಪಾಲ, #ಧೃತರಾಷ್ಟ್ರ, #ತಕ್ಷಕಮತ್ತು #ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯದಿಂದ ಮುಕ್ತಿ ಹಾಗೂ ವಂಶಕ್ಕೆ ಒಳಿತಾಗುವುದೆಂಬ ನಂಬಿಕೆ ಭಕ್ತರದು. ಇಂದು#ಅಣ್ಣ -#ತಂಗಿಯರಿಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂಬ ಪ್ರತೀತಿಯೂ ಇದೆ.

ಪುರಾಣದಲ್ಲಿ ನಾಗನ ಪೂಜಾ ವಿಧಿಯನ್ನು ಹೀಗೆ ಹೇಳಲಾಗಿದೆ;
ಶ್ರಾವಣೇ ಮಾಸಿ ಪಂಚಮ್ಯಾಂ ಶುಕ್ಲಪಕ್ಷೇ ವಿಶೇಷತಃ |
ಸ್ನಾಪಯೇನ್ನವನಾಗಾಂಶ್ಚ ಗಂಧತೋಯೈಃ ಸುಗಂಧಿಭಿಃ ||
ಶ್ರಾವಣಶುದ್ಧ ಪಂಚಮಿಯಲ್ಲಿ ಒಂಭತ್ತುಮಂದಿ ಮಹಾನಾಗರನ್ನುದ್ದೇಶಿಸಿ ನಾಗಪ್ರಥಿಮೆಗೆ ಸುಗಂಧೋದಕದಿಂದ ಅಭಿಷೇಕಮಾಡ ಬೇಕು.

ತೇಷಾಂ ಕುಲೆಃ ಪ್ರಯಚ್ಛಂತಿ ಅಭಯಂ ಪ್ರಾಣರಕ್ಷಣಂ ||
ಹೀಗೆ ಪೂಜಿಸಿದವರಿಗೂ ಆ ವಂಶೀಯರಿಗೂ ಆ ನಾಗಾಧಿಪರು ಸರ್ಪಗಳಿಂದ ಭಯವಿಲ್ಲದಂತೆ ಮಾಡಿ ಪ್ರಾಣರಕ್ಷಣೆ ಮಾಡುತ್ತಾರೆ.

  || ಓಂ ಶ್ರೀ ನಾಗರಾಜಾಯ ನಮಃ ||
ಅನನ್ತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಮ್ಬಲಮ್
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ॥
ಏತಾನಿ ನವನಾಮಾನಿ ನಾಗಾನಾಂ ಚ ಮಹಾತ್ಮನಾಮ್ ।
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ ॥
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ॥

॥ ಇತಿ ಶ್ರೀನವನಾಗನಾಮಸ್ತೋತ್ರಮ್ ಸಂಪೂರ್ಣಮ್ ॥

*****

ನಾಗಚತುರ್ಥಿಯಂದು ಶೇಷದೇವರನ್ನು ಪೂಜಿಸಿ ಅವರ ಅನುಗ್ರಹ ಪಡೆದು ಧನ್ಯರಾಗೋಣ.

ಶ್ರೀ ಶೇಷದೇವರು —(ಕಕ್ಷಾ -5)

ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕವಿನುತನ ಪರಮನು /ರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ।

ಭೂ ಗಗನ ಪಾತಾಳ ವ್ಯಾಪ್ತನ ।
ಯೋಗನಿದ್ರಾಸ್ಪದನೆನಿಪ ಗುರು।
ನಾಗರಾಜನ ಪದಕೆ ನಮಿಸುವೆ ಮನದೊಳನವರತ।।
ಶೇಷದೇವಾ ವಾರುಣಿ ಪತಿ ಪಾಹಿ ।।
ಶೇಷದೇವ ತ್ರಯಿಘೋಷನ ಮುಖಪರಿ।
ಪೋಷಿಸು ಎಮ್ಮಭಿಲಾಷೆಯ ಸಲಿಸಿ //
ಭಜಿಸುವೆ ಸರ್ವದಾ ಸುಜನಾಭೀಷ್ಟದ।
ತ್ರಿಜಗಧಾರಕ ಭುಜಗೋತ್ತಂಸಾ।।1//
ಪುಣ್ಯಚರಿತ ಸುಶರಣ್ಯನೆ ಸುಬ್ರ/ಹ್ಮಣ್ಯದೇವ ಕಾರುಣ್ಯಮೂರ್ತಿ।।
ಅಸಿತ ವಸನ ಹಲ ಮುಸಲಾಯುಧ ಧರ।
ದ್ವಿಸಹಸ್ರೇಕ್ಷಣ ಸುಶರಣರ ಪಾಲಾ//3//
ವಾರುಣಿಸುಮುಖ ಸರೋರುಹ ದಿನಕರ ತೋರು ತವಾಂಘ್ರಿ
ಮಹೋರಗರಾಜಾ//4//
ಪಾತಾಳ ಪುರುಹೂತ ಜಗನ್ವಾಥವಿಠಲನ ಪ್ರೀತಿ ವಿಷಯನೆ।।
ಗ್ರೂಪಿನ ಎಲ್ಲಾ ಸದಸ್ಯರಿಗೂ ನಾಗಚತುರ್ಥಿ ಮತ್ತು ನಾಗ ಪಂಚಮಿ ಹಬ್ಬದ ಶುಭಾಶಯಗಳು.

ಪ್ರಾದಾಂ ತೃತೀಯಾಂ ಪಾರ್ವತ್ಯೈ
ಗಣೇಶಾಯ ಚತುರ್ಥಿಕಾಮ್
ಪಂಚಮಿ ಸರ್ವನಾಗಾನಾಂ
ಶೇಷಾಣಾಂ ಪತಯೇ ತತಃ//
********

ಆಚರಣೆ: 
ನಾಗಪಂಚಮಿಯ ದಿನ ಬೆಳಗ್ಗೆ ಉಷಾಕಾಲದಲ್ಲಿ ಎಲ್ಲರೂ ಎದ್ದು, ಹೆಂಗಳೆಯರು ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಇಡಬೇಕು. ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ಮಾಡಿ ಮಡಿವಸ್ತ್ರವನ್ನು ಧರಿಸುತ್ತಾರೆ. ಹುರಿಗಡಲೆ, ಎಳ್ಳುಂಡೆ, ತಂಬಿಟ್ಟು, ಹೂವು, ಗೆಜ್ಜೆವಸ್ತ್ರ, ನಾಗರ ಬೋಟು, ನೀರು ತೆಗೆದುಕೊಂಡು ನಾಗಪ್ಪನ ಗುಡಿಗೆ ಹೋಗುತ್ತಾರೆ. ಬೆಲ್ಲದ ಹಾಲು ಹಾಕಿ ಅರಳು ಏರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಕೈಮುಗಿಯುತ್ತಾರೆ. ಮರುದಿನ (ಪಂಚಮಿ) ಮಣ್ಣಿನ ನಾಗಪ್ಪನನ್ನು ತರುತ್ತಾರೆ. ಚೌತಿ ದಿನ ರಂಗೋಲಿಯನ್ನು ನಾಗಪ್ಪ ಮನೆ ಒಳಗೆ ಬರುವಂತೆ ಹಾಕಿದರೆ, ಪಂಚಮಿ ದಿನ ನಾಗಪ್ಪ ಹೊರಹೋಗುವ ಹಾಗೆ ಚಿತ್ರಿಸುತ್ತಾರೆ. ಕೆಲವು ಕಡೆ ಜೀವಂತ ನಾಗಗಳಿಗೆ ಹಾಲೆರೆಯುವ ಪದ್ಧತಿ ಇದೆ. ಆ ನಾಗನನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಊರ ಹೊರಗೆ ದಿಗ್ಬಂಧನ ಮಾಡಿ ಬಿಟ್ಟು ಬರುತ್ತಾರೆ. ಇನ್ನು ಕೆಲವರು ಹುತ್ತದ ಬಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಹೋದರ-ಸಹೋದರಿಯ ಹಬ್ಬ ಆಗಿರುವುದರಿಂದ ಸಹೋದರನ ಬೆನ್ನಿಗೆ  ತತ್ವ ಹೊಟ್ಟೆಗೆ ಹಾಲಿನಿಂದ ತನಿ ಎರೆಯುತ್ತಾರೆ. ಇದರಿಂದ ಬೆನ್ನು ಗಟ್ಟಿಯಾಗಲಿ, ಹೊಟ್ಟೆ ತಂಪಾಗಲಿ ಎಂದು ಹಾರೈಸಲಾಗುತ್ತದೆ. ಅವರಿಬ್ಬರ ಸಂಬಂಧ ಶಾಶ್ವತವಾಗಿರಲಿ ಎಂಬುದು ಇದರ ಒಳ ಅರ್ಥ.

 ಉಪವಾಸದ ಮಹತ್ವ

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.

*****

Nagapanchami details -by ನರಹರಿ ಸುಮಧ್ವ

On the Nagarachouti day, the pooja of  Nagantargata Sankarshanaroopi paramathma will be done. 

ಶ್ರಾವಣ ಶುದ್ಧ ಚತುರ್ಥಿಯಂದು ತಾಯಂದಿರು ಅಭ್ಯಂಜನ ಮಾಡಿ ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡುತ್ತಾರೆ.   ಈ ದಿನ ಉಪವಾಸವಿದ್ದು ಮಾರನೇ ದಿನ ಮತ್ತೆ ಕ್ಷೀರಾಭಿಷೇಕ ಮಾಡಿ ನಂತರ ಭೋಜನ ಮಾಡುತ್ತಾರೆ.    ಇಲ್ಲಿ ಕೆಲವರು ಉಪವಾಸವನ್ನೂ, ಕೆಲವರು ಉಪ್ಪು ಖಾರವಿಲ್ಲದ ಆಹಾರವನ್ನೂ, ಕೆಲವರು ಫಲಾಹಾರವನ್ನೂ ಮಾಡುವ ಸಂಪ್ರದಾಯ ಭೇದವಿದೆ.  ನಿಮ್ಮ ನಿಮ್ಮ ಸಂಪ್ರದಾಯ ಪಾಲಿಸಿ.    ಇಂದು ಸ್ತ್ರೀಯರು ನಾಗಪ್ಪನಿಗೆ ತನಿ ಎರೆದು  ಹಸಿಯಾದ ಕಡ್ಲೇಕಾಳು, ನುಚ್ಚಿನ ಉಂಡೆ ಮುಂತಾದವನ್ನು ನೈವೇದ್ಯ ಮಾಡುತ್ತಾರೆ.


 

ನಾಗರ ಪಂಚಮಿ ವಿಶೇಷತೆ ಏನು  ?
ಸರ್ಪಗಳು ಒಮ್ಮೆ ಲೋಕಹಿಂಸಕವಾಗಿದ್ದಾಗ ಚತುರ್ಮುಖ ಬ್ರಹ್ಮ ದೇವರು ನೀವೆಲ್ಲ ಸಾಯಿರೆಂದು ಶಪಿಸಿದರು.  ಆಗ ಸರ್ಪಗಳೆಲ್ಲ ತಮ್ಮ ತಪ್ಪಿನ ಅರಿವಾಗಿ ಬ್ರಹ್ಮದೇವರಲ್ಲಿ ಕ್ಷಮೆಯಾಚಿಸಿದಾಗ ಬ್ರಹ್ಮನು ಅವುಗಳಿಗೆ ಸಂರಕ್ಷಿತರಾಗಿರೆಂದು ಅನುಗ್ರಹಿಸಲ್ಪಟ್ಟ ದಿನವೇ ನಾಗರಪಂಚಮಿ.

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ತಕ್ಷಕನೆಂಬ  ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪ ಕುಲವನ್ನೇ ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಮನವೊಲಿಸಿ ಸರ್ಪಯಾಗ  ನಿಲ್ಲಿಸಿದನು.. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.
ನಾಗರ ಚೌತಿಯಂದು ಸ್ತ್ರೀಯರು ಮಾತ್ರ ತನಿ ಎರೆದರೆ ನಾಗರ ಪಂಚಮಿ ಎಲ್ಲರೂ ತನಿ ಎರೆಯುತ್ತಾರೆ.  ಕರಿದ ಪದಾರ್ಥಗಳನ್ನು ಈ ದಿನ ಮಾಡುವಂತಿಲ್ಲ.
ಗರುಡ ಪಂಚಮಿ :. ಈ ದಿನ ಗರುಡ ದೇವರು ದೇವಲೋಕದಿಂದ ಅಮೃತವನ್ನು ತಂದು ಅದನ್ನು ಸರ್ಪಗಳಿಗೆ ಕೊಟ್ಟು ತನ್ನನ್ನೂ ಮತ್ತು ತನ್ನ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮುಕ್ತಿ ಗೊಳಿಸಿದ ದಿನ.

अनंतं वासुकिं शेषं पद्मकंबलकौ तथा ।
तथा कार्कोटकं नागं भुजंगश्वतरौ तथा ॥
धृतराष्ट्रं शंखपालं कालीयं तक्षकं तथा ।
पिंगलं च महानागं सपत्नीकान् प्रपूजयेत् ॥
ಅನಂತಂ ವಾಸುಕಿಂ ಶೇಷಂ ಪದ್ಮಕಂಬಲಕೌ ತಥಾ |
ತಥಾ ಕಾರ್ಕೋಟಕಂ ನಾಗಂ ಭುಜಂಗಶ್ವತರೌ ತಥಾ ||
ಧೃತರಾಷ್ಟ್ರಂ ಶಂಖಪಾಲಂ ಕಾಲೀಯಂ ತಕ್ಷಕಂ ತಥಾ |
ಪಿಂಗಲಂ ಚ ಮಹಾನಾಗಂ ಸಪತ್ನೀಕಾನ್ ಪ್ರಪೂಜಯೇತ್ ||
 
ಪೂಜಾ ಸಂದರ್ಭದಲ್ಲಿ ಹಾಲು ತುಪ್ಪ ಎರೆಯುವಾಗ ಹೇಳಬೇಕಾದ ಶ್ಲೋಕ :
ಅನಂತಶಯನಂ ದೇವಂ ಸರ್ವಶೋಕವಿನಾಶನಂ !
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಂ !!
 
 ಅನಾದಿಕಾಲದಿಂದಲೂ ಸರ್ವೋತ್ತಮನಾದ  ಶ್ರೀ ಹರಿಗೆ ಶಯನನಾದ,  ದೇವಶ್ರೇಷ್ಟನಾದ,  ಸರ್ವಶೋಕವನ್ನೂ ನಿವಾರಿಸುವ ವಾರುಣೀಪತಿಯಾದ ಶೇಷದೇವರಿಗೆ ಭಕ್ತಿಯಿಂದ ನಮಿಸುವೆನು. 

ಬೆನ್ನು ತೊಳೆಯುವುದು – ನಾಗರಪಂಚಮಿ ದಿನದಂದು ಅಕ್ಕತಂಗಿಯರು ಅಣ್ಣತಮ್ಮಂದಿರ ಬೆನ್ನು ತೊಳೆಯುವುದು ಸಂಪ್ರದಾಯ.   ಹಿಂದೆ ಸರ್ಪಗಳು ವರ ನೀಡಿದ್ದವು.  ” ಈದಿನ ಸರ್ಪದಂತಿರುವ ಯಾವುದೇ ವಸ್ತುಗಳಿಗೆ ಹಾಲೆರೆದರೂ ನಾವು ಸಂತುಷ್ಟರಾಗುವೆವು” ಎಂದು.  ಅದರಂತೆ ಬೆಳಿಗ್ಗೆ ನಾಗಪ್ಪನಿಗೆ  ಅಭಿಷೇಕ ಮಾಡಿದ ಹಾಲನ್ನು ತೆಗೆದುಕೊಂಡು ಅಣ್ಣ ತಮ್ಮಂದಿರ ಸರ್ಪಾಕಾರದಲ್ಲಿರುವ ಬೆನ್ನಿನ ಹುರಿಗೆ ಹಚ್ಚಿ ತೊಳೆಯುವುದರಿಂದ , ಸರ್ಪಗಳು ಸಂತುಷ್ಟರಾಗಿ ಹಚ್ಚಿದವರಿಗೂ, ಹಚ್ಚಿಸಿಕೊಂಡವರಿಗೂ ಅನುಗ್ರಹ ಮಾಡುವುವು.  ಅದಕ್ಕೇ ಈ ಸಂಪ್ರದಾಯ.    ಹೀಗೆ ಸಹೋದರಿಯಿಂದ ಬೆನ್ನು ತೊಳೆಸಿಕೊಂಡ ಸಹೋದರ, ಸಹೋದರಿಗೆ ಉಡುಗೊರೆ / ಕಾಣಿಕೆ ನೀಡುವುದು ವಾಡಿಕೆ.
 
 
ಗರುಡ ಪಂಚಾಕ್ಷರ ಮಂತ್ರ
ಅಸ್ಯಶ್ರೀ ಗರುಡ ಮಂತ್ರಸ್ಯ ಕಾಶ್ಯಪ ಋಷಿ: ! ಪಂಕ್ತಿಶ್ಚಂಧ: ! ಶ್ರೀ ಗರುಡೋ ದೇವತಾ !
ನ್ಯಾಸ : ಓಂ ಕ್ಷಿಂ ಹೃದಯಾಯ ನಮಃ: ! ಓಂ ಪಂ ಶಿರಸೇ ಸ್ವಾಹಾ ! ಓಂ  ಶಿಖಾಯೈ ವೌಷಟ್! ಸ್ವಾಂ ಕವಚಾಯ ಹುಂ ! ಹಾಂ ಅಸ್ತ್ರಾಯ ಫಟ್!

ಧ್ಯಾನ :
ಗರುಡ: ಸರ್ವದಾ ಧ್ಯೇಯ ; ಸುಧಾಪೂರ್ಣಂ ಹಿರಣ್ಮಯಂ!
ದಧಾನ: ಕುಂಭಮಭಯಂ ಪೀತಶುಕ್ಲಾರುಣೋ ಹರಿ: !!
ಮಂತ್ರ :
ಓಂ ಕ್ಷಿಪ ಓಂ ಸ್ವಾಹಾ ಓಂ !!
*********

ಶೇಷ ಷಡಕ್ಷರ ಮಂತ್ರ
ಅಸ್ಯ ಶ್ರೀ ಶೇಷ ಮಂತ್ರಸ್ಯ ಸನತ್ಕುಮಾರ ಋಷಿ; ! ಯಾಜುಷೀ ಗಾಯತ್ರೀ ಛಂದ: ! ಶ್ರೀ ಶೇಷೋ ದೇವತಾ !
ನ್ಯಾಸ :
ಓಂ ಶೇಂ ಹೃದಯಾಯ ನಮಃ ! ಓಂ ಶೇಂ ಶಿರಸೇ ಸ್ವಾಹಾ ! ಓಂ ಷಾಂ ಶಿಖಾಯೈ ವೌಷಟ್ ! ಓಂ ಯಂ ಕವಚಾಯ ಹುಂ !  ಓಂ ಪಂ ನೇತ್ರಾಭ್ಯಾಂ ವೌಷಟ್ ! ಮಂ ಅಸ್ತ್ರಾಯ ಫಟ್ !
ಧ್ಯಾನ ;
ದಧಾನೋ ಹಾಲು ಸೌನಂದೋ ಶ್ವೇತವರ್ಣಾ ಕೃತಾಂಜಲಿ !
ಸಹಸ್ರಮೂರ್ಧಾsದ್ವಿತೀಯ ಕರ್ಣ ಭೂಷ: ಪ್ರಿಯಾಯುತ: !
ವನಮಾಲೀ ನೀಲವಾಸಾ ಧ್ಯೇಯೋ ವಿಷ್ಣೋಸ್ತು ಪೃಷ್ಟತ: !!
ಮಂತ್ರ :. !! ಓಂ ಶೇಷಾಯ ನಮಃ: ಓಂ !!

-ನರಹರಿ ಸುಮಧ್ವ
******

naaga Stuthi

ಸರ್ಪಾಪಸರ್ಪ ಭದ್ರಂ ತೇ ದೂರಂ ಗಚ್ಚ ಮಹವಿಷ
ಜನಮೇಜಯ ಯಾಗಾಂತೇ ಆಸ್ತೀಕ ವಚನಂ ಸ್ಮರ

ಅನಂತಾಯ ನಮಸ್ತುಭ್ಯಂ ಸಹಸ್ರಶಿರಸೇ ನಮ
ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ

ಅನಂತೋ ವಾಸುಕಿಃ ಶೇಷಃ ಪದ್ಮನಾಭಶ್ಚ ಕಂಬಳಃ
ಶಂಖಪಾಲೋ ಧಾರ್ತರಾಷ್ಟ್ರಃ ತಕ್ಷಕಃ ಕಾಳಿಯ ಸ್ತಥಾ

ಏತೇಷಾಂ ನವ ನಾಮಾನಿ ನಾಗಾನಾಂಚ ಮಹತ್ಮನಾಮ್
ಸಾಯಂಕಾಲೇ ಪಠೇ ನ್ನಿತ್ಯಂ ಪ್ರಾತಃಕಾಲೇ ವಿಶೇಷತಃ
ವಿಷಾತ್ತಸ್ಯ ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ
ಅನಂತಾನಂತದೇವೇಶ
ಅನಂತಫಲದಾಯಕ
ಅನಂತರೂಪಿ ವಿశ్వాತ್ಮಾನ್
ಅನಂತಾಯ ನಮೋನಮ:
************


ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ನಾಗ ಪಂಚಮಿ ಕಥೆ

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ - ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಪುರಾಣ

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

ನಾಗ ಪಂಚಮಿಯ ವೈಶಿಷ್ಟ್ಯ

ನಾಗರಪಂಚಮಿ - ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು - ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ಉಪವಾಸದ ಮಹತ್ವ

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.

ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ನಾಗನ ಮಹಾತ್ಮೆ

೧. ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸಿರುತ್ತಾನೆ.

ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ಎತ್ತಿದಾಗ, ಶೇಷನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.

೨. ‘ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.

೩. ‘ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

"ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ"|| ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯ ಇರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’

ಪೂಜೆ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀಕಣಗಳು (ಚೈತನ್ಯ ಕಣಗಳು).

ಭಾವಾರ್ಥ: ‘ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಕಲಿಯುವುದಿರುತ್ತದೆ.’ - ಪ.ಪೂ. ಪರಶುರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ನಿಷೇಧ: ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.

ನಾಗರಪಂಚಮಿ. ನಾಡಿಗೂ, ನಾರಿಯರಿಗೂ ದೊಡ್ಡ ಹಬ್ಬವಾದ
ನಾಗರಪಂಚಮಿಯ ಅಚರಣೆಯ ಬಗ್ಗೆ ವಿಚಾರಪೂರ್ಣ ಲೇಖನ...
*ಲೇಖಕ- ಟಿ.ಎಂ.ಸತೀಶ್, ಸಂಪಾದಕ, ಕನ್ನಡರತ್ನ.ಕಾಂ

ನಾಗರ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ದೊಡ್ಡ ಹಬ್ಬ. ಇದು ತನಿ ಎರೆಯುವ ಹಬ್ಬ. ಪಂಚಮಿಯ ದಿನ ನಾಗರಕಲ್ಲಿಗೆ, ಹಾವಿನ ಹುತ್ತಕ್ಕೆ ಅಥವಾ ಮನೆಗೇ ತಂದ ಹುತ್ತದ ಮಣ್ಣಿಗೆ ಇಲ್ಲವೆ ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ ಹಾಗೂ ಮಡಿಯಿಂದ ಹಾಲೆರೆಯುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ಈ ಸಂಪ್ರದಾಯ ದ್ವಾಪರಯುಗದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ.

ಶ್ರಾವಣ ಮಾಸದಲ್ಲಿ ಅದೂ ಐದನೇ ದಿನವೇ ಏಕೆ ಹಾಲೆಯರಬೇಕು? ಇದನ್ನು ಸಹೋದರ, ಸಹೋದರಿಯರ ಹಬ್ಬ ಎಂದು ಏಕೆ ಕರೆಯುತ್ತಾರೆ? ಅಂದು ತುಪ್ಪ ಅಥವಾ ಎಣ್ಣೆಯಿಂದ ಕರಿದ ತಿಂಡಿ-ತಿನಿಸು ಏಕೆ ಮಾಡುವುದಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.

ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿ ಇರುವ ಮಾಸವೇ ಶ್ರಾವಣ. ಚಂದ್ರ ಮನಃಕಾರಕ. ಶ್ರಾವಣದಲ್ಲಿ ಚಂದ್ರನ ಪ್ರಭಾವ ಹೆಚ್ಚು. ಚಂದ್ರನು ಶ್ರಾವಣ ತಿಂಗಳ ಮೊದಲ ದಿನವಾದ ಪಾಡ್ಯದಿಂದ ಪ್ರತಿ ದಿನವೂ ೧೨ ಡಿಗ್ರಿಯಂತೆ ಸಂಚರಿಸುತ್ತಾನೆ. ಪಂಚಮಿಯ ದಿನದ ಹೊತ್ತಿಗೆ ೬೦ ಡಿಗ್ರಿಗೆ ಬರುತ್ತಾನೆ. ಅಂದರೆ ಚಂದ್ರ ಆ ಹೊತ್ತಿಗೆ ಒಂದು ಕೋನದಲ್ಲಿರುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಭೂವರ್ಗ ಹಾಗೂ ಜಲವರ್ಗದ ಮೇಲೆ ಅವನ ಪ್ರಭಾವ ಹೆಚ್ಚಾಗಿರುತ್ತದೆ ಎನ್ನುವುದು ಪಂಚಾಂಗಕರ್ತರ ಲೆಕ್ಕಾಚಾರ. ಚಂದ್ರ ಪ್ರಭಾವ ಹೆಚ್ಚಿರುವ ಕಾಲದಲ್ಲಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದು ಅನುಭವದ ಮಾತು.

ಶ್ರಾವಣ ಶುದ್ಧ ಪಂಚಮಿಯ ದಿನ ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಾತ್ವಿಕ ಆಹಾರಗಳನ್ನು ಮಾಡುತ್ತಾರೆ. ಅಂದು ಸಾತ್ವಿಕ ಆಹಾರ ಸೇವಿಸಿ ಪಾರಮಾರ್ಥಿಕ ಚಿಂತನೆ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ದೊರಕುತ್ತದೆ.

ಹುತ್ತಕ್ಕೆ ಅಥವಾ ಹುತ್ತದ ಮಣ್ಣಿಗೆ ಹಾಲೆರೆಯುವುದೇಕೆ?

ಶ್ರಾವಣ ಮಾಸದ ಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವ ಬಗ್ಗೆ ಎರಡು ಪ್ರಮುಖ ಕಾರಣಗಳನ್ನು ನಮ್ಮ ಹಿರಿಯರು ನೀಡುತ್ತಾರೆ. ಹುತ್ತಕ್ಕೆ ಹಾಲೆರೆಯುವುದು ಕೃತಜ್ಞತೆಯ ಸಂಕೇತವೆಂಬುದು ಮೊದಲ ಕಾರಣವಾದರೆ,ಹುತ್ತಕ್ಕೆ ಹಾಲೆರೆಯುವುದರಿಂದ ಸಂತಾನೋತ್ಪತ್ತಿಗೆ ನೆರವಾಗುತ್ತದಂತೆ.

ಕೃತಜ್ಞತೆಯ ಸಂಕೇತ: ಸಾಮಾನ್ಯವಾಗಿ ಜ್ಯೇಷ್ಠ - ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ರೈತನ ಶತ್ರುಗಳ ಪಟ್ಟಿಯಲ್ಲಿ ಸೇರಿರುವ ಇಲಿಗಳು ತಿಂದು, ಅವನಿಗೆ ಅಪಾರ ಹಾನಿ ಉಂಟು ಮಾಡುತ್ತವೆ.

ಇಲಿಗಳನ್ನು ಹಿಡಿಯುವುದು ರೈತರಿಗೆ ಅಸಾಧ್ಯವಾದ ಕೆಲಸ. ಈ ಕಾರ್ಯದಲ್ಲಿ ಹಾವುಗಳು ರೈತನಿಗೆ ನೆರವಾಗುತ್ತವೆ. ಹೀಗಾಗೆ ಹಾವುಗಳನ್ನು ರೈತ ಮಿತ್ರ ಎನ್ನುತ್ತಾರೆ. ಇಲಿಗಳನ್ನು ತಿನ್ನುವ ಮೂಲಕ ಹಾವು ರೈತನ ಮಿತ್ರನಾಗಿದೆ. ಈ ಋಣವನ್ನು ರೈತ ಹುತ್ತಕ್ಕೆ ಹಾಲು ಎರೆಯುವ ಮೂಲಕ ತೀರಿಸುತ್ತಾನೆ ಎನ್ನಲಾಗುತ್ತದೆ. ಆದರೆ ಮತ್ತೆ ಕೆಲವರು ಹೇಳುವುದೇಬೇರೆ. ಹಾವುಗಳಿಗೆ ಹಸುವಿನ ಹಾಲು ವಿಷವಂತೆ. ಹಾಲು ಕುಡಿದ ಹಾವು ಸಾಯುತ್ತದೆ. ಬೇಸಿಗೆಯಲ್ಲಿ ಹೊರಬರುವ ಹಾವುಗಳು, ಶ್ರಾವಣದ ಚಳಿಗೆ ಮುದುಡಿ ಹುತ್ತ ಸೇರುತ್ತವೆ. ಹೀಗೆ ಹುತ್ತಕ್ಕೆ ಹಾಲು ಹಾಕುವುದರಿಂದ ಆ ಹಾಲು ಕುಡಿಯುವ ಹಾವುಗಳು ಸಾಯುತ್ತವೆ. ಇಲ್ಲವೇ ಸುಶುಪ್ತಾವಸ್ಥೆಯಲ್ಲಿರುವ ಹಾವುಗಳ ಮೇಲೆ ಬೀಳುವ ಹಾಲಿನ ವಾಸನಗೆಗೆ ಹುತ್ತದ ಒಳ ಬರುವ ಇರುವೆಗಳು ಹಾವುಗಳನ್ನು ಕಚ್ಚಿ ಕೊಲ್ಲುತ್ತವೆ. ಹೀಗಾಗಿ ಹಾವುಗಳನ್ನು ಸಾಯಿಸಲೆಂದೇ ಹಾಲು ಎರೆಯುತ್ತಾರೆ ಎನ್ನುತ್ತಾರೆ.

ಸಂತಾನೋತ್ಪತ್ತಿಗೆ ಸಹಕಾರಿ : ಶ್ರಾವಣದಲ್ಲಿ ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವುದು ಹಿಂದಿನಿಂದ ನಡೆದ ಬಂದ ಪದ್ಧತಿ. ಹುತ್ತಕ್ಕೆ ಹಾಲೆರೆಯುವ ಬಗ್ಗೆ ಕೆಲವು ಪಂಡಿತರು ನೀಡುವ ವೈಜ್ಞಾನಿಕ ಎನ್ನುವ ಕಾರಣ ಇಂತಿದೆ. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.

ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹಾವು ವಾಸಿಸುತ್ತದೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ನಿರ್ಮಿಸುತ್ತವೆ. ಬಹು ನವಿರಾದ, ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತ, ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಇದನ್ನು ಎಲ್ಲಾದರೂ ಹುತ್ತ ಅಗೆದಾಗ ನೀವೂ ಕಾಣಬಹುದು. ಹುತ್ತದೊಳಗೆ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ. ಅಲ್ಲಿ ಒಂದು ಚಿಕ್ಕ ಕಲ್ಲು ಕೂಡ ಇರುವುದಿಲ್ಲ.

ಇಂತಹ ನವಿರಾದ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರಮನ ರಶ್ಮಿಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ಈ ಕಾಲದಲ್ಲೇ ಅಂತೆ. ಹಾವುಗಳು ಲೈಂಗಿಕ ಕ್ರಿಯೆಗೆ ಕೂಡುವ ಸಮಯಕ್ಕೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ. ಈ ಸಮಯದಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬರುವಾಗ ಇಲ್ಲವೆ ಹುತ್ತ ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ.

ಅದೇ ರೀತಿ ಈ ಸಮಯದಲ್ಲಿ ಸ್ಖಲನವಾಗುವ ಗಂಡು ಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದೆ. ಈ ರೀತಿಯಾಗಿ ವೀರ್ಯ ಮತ್ತು ರಜಸ್ಸು ಲೇಪಿತ ಹುತ್ತದ ಮಣ್ಣಿಗೆ ನೀರಾಗಲಿ ಹಾಲಾಗಲಿ ಬಿದ್ದಾಗ ಒಂದು ಸುಮಧುರವಾದ ವಾಯು ಉತ್ಪತ್ತಿಯಾಗುತ್ತದೆ. ಹೆಂಗಸರು ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದಾಗ ಅಂದರೆ ತನಿ ಎರೆದಾಗಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಸುಗಂಧಯುಕ್ತವಾದ ವಾಯು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರಿಪ್ರೊಡಕ್ಟಿವ್ ಆರ್ಗನ್ಸ್‌ಗಳ ಮೇಲೂ ನೇರ ಪರಿಣಾಮ ಉಂಟು ಮಾಡುತ್ತವಂತೆ. ಈ ಮಾಸದಲ್ಲಿ ಚಂದ್ರ ಪ್ರಭಾವವೂ ಇರುವ ಕಾರಣ, ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ನಮ್ಮಲ್ಲಿ ಸಾಮಾನ್ಯವಾಗಿ ನಾಗರ ಎಂಬ ಒಂದು ಚರ್ಮವ್ಯಾಧಿ ಬಂದಾಗ, ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ, ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ ಎಂಬುದು ಪಂಡಿತರು ತಮ್ಮ ವಾದಕ್ಕೆ ನೀಡುವ ಪುಷ್ಟಿ. (ಮಡ್ ಥೆರಪಿ)

ಅಣ್ಣತಮ್ಮಂದಿರ ಹಬ್ಬ : ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬ. ಅಂದು ಸೋದರ - ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.

ಅಶ್ವತ್ಥಕಟ್ಟೆಗಳ ಕೆಳಗೆ ಪ್ರತಿಷ್ಠಾಪಿಸಿದ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ. ಸುಬ್ರಹ್ಮಣ್ಯೇಶ್ವನ ದೇವಾಲಯಗಳಲ್ಲೂ ನಾಗರ ಪಂಚಮಿಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಶುದ್ಧ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ದಿಟ ನಾಗರನಿಗೇ ಹಾಲೆರೆವ ರೂಢಿಯೂ ಇದೆ.

ಅಣ್ಣತಮ್ಮಂದಿರ ಹಬ್ಬ ಎನ್ನುವುದೇಕೆ. ಹಿಂದೆಲ್ಲ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಈಗಿನಂತೆ ವಾಹನ ಸೌಕರ್ಯ ಇರುತ್ತಿರಲಿಲ್ಲ. ಆಗ ಆಣ್ಣ ತಮ್ಮಂದಿರು, ಅಕ್ಕತಂಗಿಯರು ಒಬ್ಬರನ್ನೊಬ್ಬರು ನೋಡುವುದೇ ಕಷ್ಟವಾಗಿತ್ತು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಣ್ಣ -ತಂಗಿ, ಅಕ್ಕ -ತಮ್ಮಂದಿರು ಸಂಸಲಿ ಬಾಂಧವ್ಯ ಹಾಗೇ ಚಿರವಾಗಿರಲಿ ಎಂದು ಹಿರಿಯರು ಈ ಹಬ್ಬವನ್ನು ಸಹೋದರ - ಸಹೋದರಿಯರ ಹಬ್ಬ ಎಂದು ಕರೆದರು.

ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನೀರಿಕ್ಷೆಯಲ್ಲಿರುವ ಸೋದರರು, ಸಹೋದರಿಯರನ್ನು ಕರೆಸಿ,ಉಡಿತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ. ಮನುಷ್ಯನ ಚಿಂತನೆಯ ಕೇಂದ್ರವೇ ಮೆದುಳು. ಮೆದುಳು ಕೂಡ ಸರ್ಪದ ಆಕಾರದಲ್ಲೇ ಇದೆ. ಹೀಗಾಗಿ ಇದಕ್ಕೆ ಕುಂಡಲಿನಿ ಎನ್ನುವುದು. ಮನಃಕಾರಕನಾದ ಚಂದ್ರನ ಪ್ರಭಾವವಿರುವ ಮಾಸದಲ್ಲಿ ಕುಂಡಲಿಯನ್ನು ಸಾತ್ವಿಕ ರೀತಿಯಲ್ಲಿ ಉದ್ರೇಕಿಸುವುದೇ ಈ ಸರ್ಪಪೂಜೆಯ ಪರಮಾರ್ಥವಾಗಿದೆ.
******


ನಾಗಾವಲೋಕನ
🌸🌸🌸🌸🌸🌸
ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ನಾಗಪಂಚಮಿ ನಿಮಿತ್ತ ನಾಗಾರಾಧನೆ ಕುರಿತ ಲೇಖನ ಇದಾಗಿದೆ...

ಋಷಿಮುನಿಗಳ ಕಾಲದಲ್ಲಿ ದೇವತೆ -ಗಂಧರ್ವ- ಯಕ್ಷ - ಕಿನ್ನರ -ಕಿಂಪುರುಷ- ನಾಗರಾದಿಯಾಗಿ ಎಲ್ಲರೊಳಗೂ ನಿಕಟ ಸಂಪರ್ಕವಿತ್ತು, ಮನುಷ್ಯನ ಮನಸ್ಸು ಕಿರಿದಾಗತೊಡಗಿದಾಗ ಸಂಪರ್ಕದ ಕೊಂಡಿಕಳಚಿ ಬಿತ್ತು, ಎಲ್ಲವೂ ಅಲೌಕಿಕಕ್ಕೆ ಸೇರಿಹೋಯಿತು. ಮನುಷ್ಯ ಬೇರೆಯಾಗಿ ಉಳಿದ, ಬೆಳೆದ. ಬಳಿಕ ಪ್ರಕೃತಿಯ ಶಕ್ತಿಗಳನ್ನೇ ಸಾಂಕೇತಿಕವಾಗಿ ಆರಾಧಿಸತೊಡಗಿದ.

ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ?

ಪುನರ್ಜನ್ಮದ ಸಂಕೇತ

ಹಾವು ಎಂಬುದು ಹುಟ್ಟು , ಸಾವು - ಪುನರ್ಜನ್ಮದ ಸಂಕೇತ. ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ.

ನಾಗಾರಾಧನೆ ಸಮಾನವಾಗಿ ಬಳಕೆ*

ಶಿವನು ನಾಗಾಭರಣನಾದರೆ, ನಾರಾಯಣನು ಶೇಷಶಯನ. ಗಣಪತಿಯು ನಾಗನನ್ನು ಜನಿವಾರವಾಗಿ ಧರಿಸುತ್ತಾನೆ,ಸುಬ್ರಹ್ಮಣ್ಯನು ಕೆಲಕಾಲ ಶಾಪದಿಂದಾಗಿ ಸರ್ಪರೂಪ ಧರಿಸಿದ್ದನು. ಶ್ರೀದೇವಿಯು ನಾಗಗಳನ್ನು ಆರಾಧಿಸಿ ಮಗನನ್ನು ಮರಳಿ ಮೂಲರೂಪದಲ್ಲಿ ಪಡೆದಳು. ಇದರಿಂದ ಶೈವರಾಗಲಿ, ವೈಷ್ಣವರಾಗಲಿ, ಶಾಕ್ತರಾಗಲಿ ನಾಗಾರಾಧನೆ ಸಮಾನವಾಗಿ ಬಳಕೆಯಲ್ಲಿದೆ.

ನಾಗಕುಲದವರು

ಇಂದ್ರಾದಿ ದೇವತೆಗಳಂತೆ ನಾಗಕುಲದವರು ಕಶ್ಯಪ ಮುನಿಗಳಿಂದ ಕದ್ರೂ ಎಂಬ ನಾಗಮಾತೆಯಿಂದ ಜನಿಸಿದೆ. ಹೀಗಾಗಿ ಜ್ಞಾನಿಗಳು ದೇವತೆಗಳನ್ನು ಗೌರವಿಸಿದಂತೆ ನಾಗಗಳನ್ನು ಗೌರವಿಸುತ್ತಾರೆ. ಗೀತೆಯಲ್ಲಿ ಹೇಳಿದಂತೆ ನಮಗೆ ತಿಳಿಯದಿದ್ದರೂ ಈ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಿಳಿದು ಪೂಜಿಸಿದರಂತೂ ಅದು ಅತ್ಯಂತ ವಿಶೇಷ.

ಜ್ಯೋತಿಷ್ಯದಲ್ಲಿ ರಾಹುವಿಗೂ ನಾಗನಿಗೂ ಅನ್ಯೋನ್ಯ ಸಂಬಂಧವಿರುವುದರಿಂದ ಅನೇಕ ರೀತಿಯಾಗಿ ನಾಗಾನುಗ್ರಹ ಹಾಗೂ ನಾಗ ದೋಷಗಳ ಬಗ್ಗೆ ಪರಿಕಲ್ಪನೆಯಿದೆ. ದೋಷಗಳನ್ನು ಅತಿಶಯೋಕ್ತಿ ಮಾಡದೆ ಸಣ್ಣ - ಪುಟ್ಟ ಪ್ರಾಯಶ್ಚಿತ್ತದಿಂದಲೇ ನಿವೃತ್ತಿ ಮಾಡಿಸಿ, ನಿರ್ಭೀತಿಯಿಂದಲೇ ಜೀವನ ಮಾಡುವುದಕ್ಕೆ ಜ್ಯೋತಿಷಿಗಳೇ ಮಾರ್ಗದರ್ಶಕರಾಗಬೇಕು.

ಸಂಬಂಧವನ್ನು ಬೆಳಸಲಿಕ್ಕೆ

ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ , ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ . ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ.
********

ಧರ್ಮ  ಲಹರಿ

ನಾಗ ಪರಿಕಲ್ಪನೆ ಎನ್ನುವುದು ಲಿಖಿತ ದಾಖಲೆಗಳ ಆಧಾರದಲ್ಲಿ ಸುಮಾರು ೧೪,೦೦೦ ವರ್ಷಗಳಿಂದ ಪ್ರಚಲಿತದಲ್ಲಿದೆ. ಈ ಕಲ್ಪನೆ ಅಷ್ಟು ವರ್ಷಗಳ ಹಿಂದೆಯೇ ಅಸ್ಪಷ್ಟವಾಗಿತ್ತು. ಪ್ರಪಂಚದ ಯಾವುದೇ ಧರ್ಮವನ್ನು ಗಮನಿಸಿದರೆ ಅಲ್ಲಿ ನಾಗಾರಾಧನೆ ವಿಭಿನ್ನ ಸ್ವರೂಪದಲ್ಲಿ ಕಂಡು ಬರುತ್ತದೆ.


ಮುಖ್ಯವಾಗಿ ನಾಗ ಅಂದರೆ ಏನು ಎನ್ನುವುದನ್ನು ಗಮನಿಸಬೇಕು. ಪ್ರಾಚೀನ ಕಲದಲ್ಲಿ ಪ್ರಧಾನವಾಗಿ ಗುರುತಿಸಿದ್ದು ಜೀವಿಯಲ್ಲಿರುವ ಮನಸ್ಸು ಎಂಬ ಪ್ರವೃತ್ತಿಯನ್ನು. ಮನಸ್ಸು ಎನ್ನುವ ಪ್ರವೃತ್ತಿಯೇ ಜೀವನಕ್ಕೆ ಕಾರಣ ಎನ್ನುವುದನ್ನು ಆ ಕಾಲದಲ್ಲಿಯೇ ಕಂಡುಹಿಡಿದರು. ಆ ಕಾಲದಿಂದಲೇ; ಅಂದರೆ ವೇದಕಾಲದಿಂದಲೇ ಮನಸ್ಸಿಗೆ ಸಂಬಂಧಿಸಿದ ಅಧ್ಯಯನಗಳು ನಡೆದು ಬಂದಿರುವುದನ್ನು ಕಾಣಬಹುದು. ಮನಶ್ಶಾಸ್ತ್ರಕ್ಕೆ ಸಂಬಂಧಿಸಿದಂತೆ ಆ ಕಾಲದಲ್ಲೇ ವಿಶೇಷ ಅಧ್ಯಯನ ನಡೆದಿದೆ. ಈ ವಿಚಾರವಾಗಿ ಋಗ್ವೇದ, ಯಜರ್ವೇದ, ಸಾಮವೇದ ಮತ್ತು ಅಥರ್ವ ವೇದಗಳಲ್ಲಿ ಪೂರಕ ಮಾಹಿತಿ ದೊರದುತ್ತದೆ. 

ಅಲ್ಲೆಲ್ಲ ನಾಗ ಎನ್ನುವ ಅರ್ಥದಲ್ಲೇ ಈ ಅಧ್ಯಯನ ನಡೆದಿರುವುದು ಕಂಡುಬರುತ್ತದೆ.

ಒಂದು ಕಾಲದಲ್ಲಿ ಸಾರ್ವತ್ರಿಕವಾಗಿ ನಾಗ ಅಂದರೆ ಪ್ರಕೃತಿಯ ಪೂಜೆಯಿತ್ತು. ಪ್ರಕೃತಿಯ ಸಮಗ್ರ ಜ್ಞಾನವನ್ನು ನಾಗನ ಪೂಜೆಯಿಂದ ಜನರು ಪಡೆಯುತ್ತಿದರು. ಹಾಗಾಗಿ ಪ್ರಕೃತಿಯ ಪೂಜೆಗಾಗಿ ನಾಗನ ಪೂಜೆಯಿತ್ತು. ಪ್ರಕೃತಿಯಲ್ಲಿ ಮೃತ್‍ಸ್ವರೂಪ ಅಂದರೆ ಚೇತನವಿಲ್ಲದ ಸ್ವರೂಪ ಬಿಟ್ಟರೆ ಚೇತನವಿರುವ ಸ್ವರೂಪ ನಾಲ್ಕು. ಯಾವುದು ಜೀವಾಂಶವಿದೆ ಅದು ಪ್ರಕೃತಿ. ಜೀವಚೈತನ್ಯ ಸ್ವರೂಪದಲ್ಲಿ ೪ ಭಾಗ ಪ್ರಕೃತಿಯಲ್ಲಿ ಸಿಗುತ್ತದೆ. ಅವು ನೀರು, ಅಗ್ನಿ, ವಾಯು, ಆಕಾಶ. ಈ ೪ ಭಾಗವನ್ನು ಸೂಚಿಸುವುದು ಚತುರ್ಥಿ. ಮನಸ್ಸು ವ್ಯವಹರಿಸುವುದು ಚಂದ್ರನ ಕಲೆಗಳ ಆಧಾರದಲ್ಲಿ. ದೈನದಿಂದ ತಿಥಿ ನಿರ್ಣಯವೂ ಚಾಂದ್ರಮಾನದಂತೆಯೇ ಆಗುತ್ತದೆ.

ಚಂದ್ರ ಎಂದರೆ ಷೋಡಶ ಕಲೆಯುಕ್ತವಾದದ್ದು. ಅವುಗಳು ಇಂತಿವೆ:-
“ ಅಮೃತಾ, ಮಾನದಾ, ಪೂಷಾ, ತುಷ್ಟಿ, ಪುಷ್ಟಿ, ರತಿ, ಧೃತಿ,
ಶಶಿನಿ, ಚಂದ್ರಿಕಾ, ಕಾಂತಿ, ಜ್ಯೋತ್ಸ್ನಾ, ಶ್ರೀ, ಪ್ರೀತಿ, ಅಂಗದ,
ಪೂರ್ಣ, ಪೂರ್ಣಾಮೃತ (ಭದ್ರದಾಯಿನಿ)”

ಚತುರ್ಥಿ ಎಂದಾಗ ಅಮೃತಾ, ಮಾನದಾ, ಪೂಷಾ ಎಂಬ ೩ ಕಲೆಗಳು ದಾಟಿ ತುಷ್ಟಿ ಕಲೆಯು ಬಂದಿರುತ್ತದೆ. ತುಷ್ಟಿ ಎಂದರೆ ತೃಪ್ತಿ,ಸಂತೃಪ್ತಿ ಎಂದರ್ಥ. ಈ ಕಲಾಂಶವನ್ನು ಬಿಂಬಿಸುವುದಕ್ಕೆ ಅಥವಾ ಅದನ್ನು ಪಡೆಯುವುದಕ್ಕೆ ನಾವು ಪ್ರಕೃತಿಯನ್ನು ನಾಗಚೌತಿ ಆಚರಣೆ ಮುಖೇನ ಪೂಜೆ ಮಾಡುತ್ತೇವೆ ಎನ್ನುವುದು ಮೂಲ ನಾಗಾರಾಧನೆಯ ಉದ್ದೇಶ. ಅದೇ ರೀತಿ ನೀರು, ಅಗ್ನಿ, ವಾಯು, ಆಕಾಶ ಎಂಬ ಪ್ರಕೃತಿಯ ೪ ಚೇತನಗಳ ಮುಖೇನ ಸಂತೃಪ್ತಿಯನ್ನು ಪಡೆಯುವ ಉದ್ದೇಶವೇ ನಾಗಚೌತಿ. ಪ್ರತಿಯೊಂದು ಜೀವಿಯೂ ಸಂತೃಪ್ತಿಯನ್ನು ಅಪೇಕ್ಷಿಸುತ್ತದೆ. ಇದನ್ನು ಅಪೇಕ್ಷಿಸಿ ಪೂಜಿಸುವ ಉದ್ದೇಶದಿಂದ ನಾಗಚೌತಿ ಪೂಜೆ ಬಳಕೆಗೆ ಬಂದಿತು.

ಸಂತೃಪ್ತಿಯು ಯಾವುದರಿಂದ ಉತ್ಪನ್ನವಾಯಿತು? ಒಬ್ಬನಿಗೆ ಹೊಡದುದರಿಂದ ಸಂತೋಷವಾಯಿತು, ಇನ್ನೊಬ್ಬನಿಗೆ ನೋವುಂಟಾಯಿತು, ಮತ್ತೊಬ್ಬನಿಗೆ ಪಾಪ ಅನ್ನಿಸಿತು. ಹೀಗೆ ಹೊಡೆದುದರ ಪರಿಣಾಮವಾಗಿ ಹಲವು ಪ್ರತಿಕ್ರಿಯೆಗಳು ಹೊರಹೊಮ್ಮಿದವು. ಹಾಗಾಗಿ ಅದರ ಮಾಪನ ಯಾವುದು? ಅದು ಮನಸ್ಸು. ಈ ಮನಸ್ಸು ಪರಿಣಾಮವನ್ನು ವಿಶ್ಲೇಷಿಸುತ್ತದೆ. ಒಂದೇ ಪರಿಣಾಮವು ಬೇರೆ ಬೇರೆ ಜನರಲ್ಲಿ ವಿಭಿನ್ನವಾಗಿ ವ್ಯಕ್ತವಾಗುತ್ತದೆ. ಆ ಬೇರೆ ಬೇರೆ ರೀತಿ ಯಾವುದು? ಅಂದರೆ ಅದು ಮನಸ್ಸು. ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುವಂತೆ ಮಾಡುವುದು ಮನಸ್ಸು. ಮನಸ್ಸನ್ನು ಬಿಂಬಿಸುವ ಯಾವ ಕಲೆಯಿದೆ, ಆ ಕಲೆಯನ್ನು ನಾವು ಆರಾಧಿಸಿದರೆ ಮನಸ್ಸು ಪ್ರಕೃತಿಯೊಂದಿಗೆ ವ್ಯವಹರಿಸಿ ನಮಗೆ ಪರಿಪೂರ್ಣತೆಯನ್ನು ಕೊಡುತ್ತದೆ.

ಪಂಚಮಿಯ ದಿನದಂದು ಅಮೃತಾ, ಮಾನದಾ, ಪೂಷಾ, ತುಷ್ಟಿ ಕಲೆಗಳು ಕಳೆದು ಪುಷ್ಟಿ ಕಲೆಯ ಪ್ರಭಾವಕ್ಕೆ ಜನಮಾನಸವು ಸಿಗುತ್ತದೆ. ಪುಷ್ಟಿ ಎಂದರೆ ದೃಢತೆ. ಸಂತೃಪ್ತಿಗೆ ದೃಢತೆಯನ್ನು ಕೊಡುವುದು ಮನಸ್ಸು. ಹಾಗಾಗಿ ಚತುರ್ಥಿಯ ತುಷ್ಟಿಕಲೆಯಿಂದ ಸಂತೃಪ್ತಿ ಹೊಂದಿದ ಮನಸ್ಸಿಗೆ ದೃಢತೆಯನ್ನು ಕೊಡುವ ಕಲಾತತ್ತ್ವ ಯಾವುದೋ ಅದೇ ಪುಷ್ಟಿ ಕಲೆ. ಆಗ ಹಿಂದೆ ಹೇಳಿದ ಪೆಟ್ಟು ತಿಂದ ಉದಾಹರಣೆಯಲ್ಲಿ ಮನಸ್ಸಿಗೆ ದೃಢತೆ ಬಂದಿರುವುದರಿಂದ ಪೆಟ್ಟು ತಿಂದವನು ಯಾರೋ ಪುಣ್ಯಾತ್ಮ ಹೊಡೆದಿರುವುದು ಎಂದು ತಿಳದು ಸಂತೋಷ ಪಟ್ಟುಕೊಳ್ಳುತ್ತಾನೆ. ಈ ಪರಿಣಾಮಗಳು ಮನೋಭೂಮಿಕೆಯಲ್ಲಿ ಸಿದ್ಧವಾಗುವ ಪ್ರವೃತ್ತಿಗಳು. ಈ ಮನೋಭೂಮಿಕೆಯ ಆಧಾರದಲ್ಲಿ ಐದನೇ ವಿಶೇಷ ಕಲೆಗೆ ಪೂಜೆ ಆರಂಭವಾಯಿತು. ಈ ಕಲೆಯನ್ನು ಆರಾಧಿಸುವ ಪರಿಯೇನಾಗಪಂಚಮಿ ಪೂಜೆ.

ಮುಂದೆ ಈ ಮನೋಭೂಮಿಕೆಯನ್ನು ವಿಶ್ಲೇಷಿಸುತ್ತಾ ಹೋಗಿ ಬಹು ವಿಸ್ತೃತವಾಯಿತು. ಮನೋಭೂಮಿಕೆಯ ಹಿಡತವನ್ನು ಸಾಧಿಸಿ ಪ್ರಪಂಚದ ಎಲ್ಲಾ ಜೀವಿಗಳನ್ನು ಆಳುವಂತಹ ಸೂತ್ರವು ಕೂಡ ನಾಗಾರಾಧನೆಯಿಂದ ಬಳಕೆಗೆ ಬಂದಿತು. ತುಷ್ಟಿ ಕಲೆಯ ಪೂಜೆಯುಳ್ಳ ಚೌತಿ ಇರುವಾಗ ಸಮಸ್ಯೆಯು ಇರಲಿಲ್ಲ. ಚೌತಿಯು ಸಾತ್ವಿಕ ಗುಣವುಳ್ಳದ್ದು. ಅದು ಯಾವಾಗ ಪುಷ್ಟಿಕಲೆಯ ಪಂಚಮಿಯಾಗಿ ಎರಡನೆಯ ಹಂತಕ್ಕೆ ಬಂದಿತೋ ಆಗ ರಾಜಸಿಕ ಗುಣಕ್ಕೆ ಪರಿವರ್ತನೆಯಾಯಿತು. ಹಾಗಾಗಿ ಪುಷ್ಟಿಕಲೆಯ ಹಿನ್ನಲೆಯಲ್ಲಿ ರಾಜಸಿಕ ಗುಣವಿದೆ. ಅದು ಸದ್ಬಳಕೆಯೂ ಹಾಗೇ ದುರ್ಬಳಕೆಯೂ ಆಯಿತು. 

ಈ ರೀತಿಯಲ್ಲಿ ಮನಃಶಾಸ್ತ್ರಜ್ಞರು ಜೀವಿಗಳನ್ನು ಪೀಡಿಸುವುದಕ್ಕೆ ಆರಂಭಿಸಿದಾಗ, ಮನೋಭೂಮಿಕೆಯ ಮೇಲೆ ಹಿಡಿತ ಸಾಧಿಸಿ ಸಮಾಜಕ್ಕೆ ಕಂಟಕಪ್ರಾಯರಾದಾಗ ಈ ಷಷ್ಠೀ ಎಂದು ಹೇಳತಕ್ಕಂತಹಾ ಆರನೆಯ ಕಲೆಯ ಮುಖೇನ ಅವರನ್ನು ಹಿಡಿತಕ್ಕೆ ತರುವುದು. ಅದು ಸುಬ್ರಹ್ಮಣ್ಯ. ಅದಕ್ಕೆ ಷಡಕ್ಷರಸೂತ್ರ ಬಳಕೆಗೆ ಬಂದಿತು. ಷಷ್ಠಿಗೆ ಅಮೃತಾ, ಮಾನದಾ, ಪೂಷಾ, ತುಷ್ಟಿ, ಪುಷ್ಟಿ ದಾಟಿ ರತಿ ಕಲೆ ಬರುತ್ತದೆ. ಈ ರತಿ ಕಲೆಯಿಂದ ಸಮ್ಮೋಹಿಸಿ, ಆ ಮನಸ್ಸಿನ ಶಕ್ತಿಯನ್ನು ಹಿಡಿತಕ್ಕೆ ತಂದು ಮನಃಶಾಸ್ತ್ರಜ್ಞರನ್ನು ದಮನ ಮಾಡಿದರು. ಅದು ಇಡೀ ಪ್ರಪಂಚವ್ಯಾಪಿಯಾಯಿತು. ಪ್ರಪಂಚದ ಎಲ್ಲಾ ಕಡೆ ಇದ್ದ ನಾಗಾರಾಧನೆಯು ಮೂಲೋತ್ಪಾಟನೆಯಾಗಿ ನಿರ್ಮೂಲವಯಿತು. 
*******

ನಾಗರ ಪಂಚಮಿ ಆ ಪ್ರಯುಕ್ತ ಈ ಮಾಹಿತಿ

ಶ್ರೀ ನಾಗರಾಜ ದೇವರ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರದ ಮಹತ್ತ್ವಗಳು

ಶ್ರೀ ಸರ್ಪರಾಜ ಅಷ್ಟೋತ್ತರ ಬಲು ಅಪರೂಪ ಮತ್ತು ವಿಶೇಷವಾದದ್ದು, ಪವಿತ್ರವಾದದ್ದು, ತುಂಬಾ ಶಕ್ತಿಯುತವಾದದ್ದು..

ಪರಮ ಪವಿತ್ರವಾದ ಶ್ರೀ ಸರ್ಪರಾಜ ದೇವರ ಅಷ್ಟೋತ್ತರದಲ್ಲಿ ಮಹಾವಿಶೇಷವಾದ ಸರ್ಪರಾಜರುಗಳ ನಾಮಗಳಿವೆ..

ಅನೇಕ ಚರಿತ್ರೆಗಳಲ್ಲಿ, ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪರಾಜರ ಬಗ್ಗೆ ಮಾಹಿತಿ ಸಿಕ್ಕುತ್ತವೆ..

ಅವುಗಳಲ್ಲಿ ಮುಖ್ಯವಾಗಿ ನವನಾಗೇಂದ್ರರ ಹೆಸರುಗಳು ತುಂಬಾ ವಿಶೇಷ..

ಶ್ರೀ ಅನಂತ ವಾಸುಕಿ, ಶ್ರೀ ತಕ್ಷಕ, ಶ್ರೀ ವಿಶ್ವತೋಮುಖ, ಶ್ರೀ ಕರ್ಕೋಟಕ, ಶ್ರೀ ಮಹಾಪದ್ಮ, ಶ್ರೀ ಪದ್ಮ, ಶ್ರೀ ಶಂಖ, ಶ್ರೀ ದೃತರಾಷ್ಟ್ರ

ಶ್ರೀ ಸರ್ಪರಾಜರ ಹೆಸರುಗಳು ಹೇಗೆ ವಿಶೇಷವೋ ಅದೇ ರೀತಿ 16 ಜನ ನಾಗಮಾತೆಯರು ಬಲು ವಿಶೇಷ..

ಶ್ರೀನಾಗಮಾತೆ, ಶ್ರೀ ನಾಗಭಗಿನಿ, ಶ್ರೀ ವಿಷಹರೆ, ಶ್ರೀ ಮೃತಸಂಜೀವಿನಿ, ಶ್ರೀ ಸಿದ್ಧಯೋಗಿನಿ, ಶ್ರೀ ಯೋಗಿನಿ, ಶ್ರೀ ಪ್ರಿಯಾ, ಶ್ರೀ ಜರತ್ಕಾರು, ಶ್ರೀ ಜಗದ್ಗೌರಿ, ಶ್ರೀ ಮಾನಸಾ, ಶ್ರೀ ವೈಷ್ಣವೀ, ಶ್ರೀ ಶೈವೀ, ಶ್ರೀ ನಾಗೇಶ್ವರೀ, ಶ್ರೀ ಆಸ್ತಿಕ, ಶ್ರೀ ಮಾತಾ, ಶ್ರೀ ವಿಷಹರಾ ದೇವಿ..

ಸ್ತ್ರೀಯರು ಪ್ರತಿದಿವಸ ಈ ದೇವಿಯರ ಸ್ಮರಣೆ ಮಾಡುತ್ತಾರೋ ಅವರು ಧೀರ್ಘ ಸುಮಂಗಲಿಯಾಗಿರುತ್ತಾರೆ.., ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿರುತ್ತಾರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ..

ಅಷ್ಟೋತ್ತರ ಓದಿದರೆ ಫಲ..

೧. ಯಾರು ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..

೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ..ಎಲ್ಲರೂ ಆರೋಗ್ಯವಾಗಿರುತ್ತಾರೆ..

೩. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ ,ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..

೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಹೇಳಿ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..

೫. ಯಾರಿಗೆ ಫಿಟ್ಸ್ ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..

೬. ಕಾಳಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪಯೋಗವಾಗಿ ಉತ್ತಮ ಫಲ ಕೊಡುತ್ತದೆ.

೭. ಯಾವುದೇ ತರಹ ಪಂಚಮರಾಹು, ಸಪ್ತಮ ರಾಹು, ಅಷ್ಟಮರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ ..

೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ..

೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ ..
ಆರೋಗ್ಯ ಭಾಗ್ಯಸಿಗುತ್ತದೆ..

೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು , ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ ..

೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ .., ದಾಂಪತ್ಯ ಚೆನ್ನಾಗಿರುತ್ತದೆ..
***


|| ಭಾಗ-4 ||

        🌹ನಾಗಚತುರ್ಥಿ ವ್ರತ🌹

ಶ್ರಾವಣಮಾಸದ ಶುಕ್ಲಪಕ್ಷದ ಚತುರ್ಥಿಯದಿನ ನಾಗಚತುರ್ಥಿ ವ್ರತವನ್ನು ಆಚರಿಸಬೇಕು.
ಈ ದಿನ .ಸ್ತ್ರೀಯರು ತಾಯಂದಿರು ಉಪವಾಸವಿರಬೇಕು .ಆಂದು ಎಣ್ಣೆ ನೀರು(ಅಭ್ಯಂಜನ) ಮಾಡಿ ಕೂಂಡು  ಬೆಳ್ಳಿಯ ನಾಗನ ಆಂತರ್ಯಾಮಿಯಾದ  ಸಂಕರ್ಷಣರೂಪಿ  ಪರಮಾತ್ಮನನ್ನು ಪೂಜಿಸಬೇಕು ಹಾಲು ಎರೆಯ ಬೇಕು .

ಕ್ಷೀರೇಣಾಪ್ಯಾಯನಂ ಕುರ್ಯಾದ್ ಏತನ್ನಾಗವ್ರತಂ ಸ್ಮೃತಮ್ |

ಮನೆಯ ಬಾಗಿಲಿನ ಎರಡೂ ಬದಿಗಳಲ್ಲಿ ಕೆಮ್ಮಣ್ಣಿನಿಂದಾಗಲೀ ಗೋಮಯದಿಂದಾಗಲಿ ಭಗವಂತನನ್ನು ಆವಾಹಿಸಿ ಮೊಸರು ,ಗರಿಕೆ ,ಗಂಧ ,ಗೆಜ್ಜೇವಸ್ತ್ರಗಳಿಂದ(ಹಳದಿ ಗೆಜ್ಜೆ ವಸ್ತ್ರ) ಪೂಜಿಸಬೇಕು .

ಇಂದು ಸ್ತ್ರೀಯರು ಬೆಳ್ಳಿಯ ನಾಗನಿಗೆ ಅಭೀಷೇಕಮಾಡಿ ತನಿ ಎರೆದು ಹಸಿಯಾದ ಕಡಲೆಕಾಳು.. ಆವಿಯಲ್ಲಿ ಬೇಯಿಸಿದ ನುಚ್ಚುನುಂಡೆ ಮುಂತಾದುವುಗಳನ್ನು ನೈವೇದ್ಯಕ್ಕಾಗಿ ಇಡಬೇಕು .  ಪೂಜಾದಿಗಳು ಮುಗಿದ ನಂತರ ಫಲಾಹಾರವನ್ನು ಮಾಡುವ ಸಂಪ್ರದಾಯವಿದೆ .

ನಾಗರಚೌತಿಯಂದು ಮನೆಯ ಹೂರಗೆ ಇರುವ ಕಲ್ಲಿನ ನಾಗರವನ್ನು ಪೂಜಿಸಬೇಕು . ಹಾಲಿನ ಬದಲು  ಬೆಲ್ಲದ ಹಾಲನ್ನು ಹಾಕಬೇಕು ನಾಗಪ್ಪನಿಗೆ ಹಳದಿ ಗೆಜ್ಜೆ ವಸ್ತ್ರವನ್ನು ಹಾಕಬೇಕು . ನೈವೇದ್ಯಕ್ಕಾಗಿ ಹಸೀ ಚಿಗಳಿ ಉಂಡೆ, ತಂಬಿಟ್ಟು (ಅಕ್ಕಿ ಹಿಟ್ಟಿನಿಂದ ಮಾಡಿದ್ದು ಹಸಿಯ ಕಡಲೆಕಾಳನ್ನು ಏರಿಸಿ ಪೂಜಿಸಬೇಕು .  ಚರ್ಮರೋಗ ಪರಿಹಾರಕ್ಕಾಗಿ ಕಡಲೆಗೆ ಉಪ್ಪನ್ನು ಸೇರಿಸಿ ಏರಿಸುವ ಪದ್ದತಿಯಿದೆ . ಈ  ದಿನದಂದು ಎಲ್ಲವೂ ಹಸಿಯ ಪದಾರ್ಥಗಳನ್ನು‌ ಸಮರ್ಪಿಸುವುದು ರೂಢಿಯಲ್ಲಿದೆ .

       *********
ನಾಗಚತುರ್ಥಿಯಂದು ಮಾಡಾಬೇಕಾದ ಪ್ರಾರ್ಥನೆ

**********
ಅನಂತಶಯನಂ ದೇವಂ ಸರ್ವಶೋಕವಿನಾಶನಮ್ |
ಲೋಕಧಾರಂ ವಾರಃಣೇಶಂ ನಾಗೇಂದ್ರ ಸನ್ನಮಾಮ್ಯಹಂ ||

ನಾಗರಾಜನೇ ! ನೀನು ಅನಂತನಾಮಕ ಭಗವಂತನ ಹಾಸಿಗೆಯಾಗಿರುವಿ .ದೇವಶ್ರೇಷ್ಠನಾಗಿರುವಿ ಎಲ್ಲರ ದುಃಖಪರಿಹಾರ ಮಾಡುವಿ ಬ್ರಹ್ಮಾಂಡವನ್ನು ಧಾರಣೆ ಮಾಡಿರುವಿ ,ವಾರುಣಿಪತಿಯಾಗಿರುವಿ .ಎಲ್ಲ ನಾಗಗಳಿಗೆ ಒಡೆಯನಾಗಿರುವಿ ನಿನಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತೇನೆ .

ಧೃತಲೋಕ ಧ್ವಸ್ತಲೋಕ ಫಣಾಜಾಲ ಪ್ರಭೋಜ್ವಲ
ವಿಶಂಕ ಹರಿಪರ್ಯಂಕ ಸುಶಾಂತಾನಂತ ತೇ ನಮಃ
ಉಜ್ವಲ ಬೆಳಕಿನಿಂದ ಬೆಳಗುವ ಹೆಡೆಗಳುಳ್ಳ ಶೇಷದೇವನೆ !  ಲೋಕಧಾರಕನೆ ! ಶೋಕನಾಶಕನೇ ,ಸಂಶಯವಿಲ್ಲ ದವನೇ ಶ್ರೀಹರಿಯ  ಹಾಸಿಗೆ ಯಾದ ಶಾಂತ ಸ್ವರೂಪಿಯೇ ಅನಂತನೆ ನಿನಗೆ ನಮನ.

         || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*******

ನಾಗಾರಾಧನೆ !

ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ., ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.

ನಾಗನಿಗೇಕೀ ಮಹತ್ವ?

ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಆದುದರಿಂದ ಸರ್ಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.

ಸರ್ಪಗಳ ಜನ್ಮ, ಸರ್ಪ ಸಂಕುಲ !

ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ.

ಸರ್ಪ ಶಾಪ ಬರುವುದು ಹೇಗೆ?

ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಮಾಡಲಾಗುತ್ತದೆ.

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

***

#ನಾಗರ #ಪಂಚಮಿ

🌺🌺🌺🌺🌺🌺

ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ.  ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.

ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಂದರ್ಥದಲ್ಲಿ ಪ್ರಕೃತಿಯ ಆರಾಧನೆ.

ನಾಗಾರಾಧನೆ ಇದೊಂದು ಪ್ರಾಚೀನ ಆರಾಧನೆ . ವೇದದ ಸೊಲ್ಲುಗಳು ನಾಗಪೂಜೆಯ ಪ್ರಾಚೀನತೆಯನ್ನು ತಿಳಿಯ ಪಡಿಸುತ್ತವೆ . ನಾಗ ದೇವರು ಅಗಣಿತ ಮಹಿಮೆಯ ಶಕ್ತಿಯೆಂದು ಸರ್ಪ ಸೂಕ್ತಗಳ ವರ್ಣನೆಯಿದೆ.

' "ಅನಂತಶ್ಚಾಸ್ಮಿ ನಾಗಾನಾಂ ” – ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದ ಈ ಮಾತು ಸದಾ ಸ್ಮರಣೀಯವಾದುದು . ನಮ್ಮ ಭಾರತದ ಹರಪ್ಪ - ಮೊಹೆಂಜೊದಾರೋಗಳಲ್ಲಿ ಲಭ್ಯವಾದ ನಾಗ ಮುದ್ರೆಗಳು , ಗೋಕರ್ಣದ ನಾಗ ಬಂಧ ಚಿತ್ರ , ಬನವಾಸಿಯಲ್ಲಿರುವ ಕ್ರಿ . ಶ . ಮೂರನೆಯ ಶತಮಾನದ ನಾಗ ಪ್ರತೀಕಗಳು , ಶಿಲಾ ಶಾಸನಗಳಲ್ಲಿ ಕಾಣ ಸಿಗುವ ಹಾವಿನ ಚಿತ್ರಗಳು ಭಾರತದಲ್ಲಿ ಅನಾದಿಯಿಂದಲೂ ನಾಗ ದೇವರ ಬಗ್ಗೆ ಭಯ ಭಕ್ತಿಯಿತ್ತು ಎಂಬುದನ್ನು ಸಾರುತ್ತಲಿವೆ . ಪ್ರಾಚೀನ ಕಾಲದ ಕಾಷ್ಠ ಶಿಲ್ಪಗಳಲ್ಲಿರುವ ನಾಗ ಬಂಧದ ಸುಂದರ ದೃಶ್ಯ ಮನ ಮೋಹಕ . ದೇವರ ಪ್ರಭಾವಳಿ , ಆರತಿ ತಟ್ಟೆ , ಉದ್ಧರಣೆ ( ಸೌಟು ) , ಗರ್ಭ ಗೃಹದ ಮಾಡಿನ ಆಧಾರದ ಲೋಹದ ಆಕೃತಿಗಳು, ದೇವರ ವಿಗ್ರಹದ ಶಿರೋಭಾಗ ಇವೆಲ್ಲವುಗಳಲ್ಲಿ ನಾಗ ಸಂಕೇತಗಳನ್ನು ಗುರುತಿಸಬಹುದಾಗಿದೆ . 

ವಿಧಿಯ ಆಟದಂತೆ ನಾಗಗಳು ಭೂಮಿಯಿಂದ ತಮ್ಮ ವಾಸ್ತವ್ಯದ ಸ್ಥಾನ ಬದಲಾಯಿಸಿಕೊಂಡು ಅನುಗ್ರಹ ಪಡೆದ ಅರ್ಥಾತ್ ಬದುಕು ರೂಪಿಸಿಕೊಂಡ ದಿನವೇ ಪಂಚಮಿ . ಹೀಗಾಗಿ ಪ್ರತಿ ತಿಂಗಳ ಶುಕ್ಲ ಪಂಚಮಿಗಳೂ ನಾಗರ ಪೂಜೆಗೆ ಹೇಳಿಸಿದ ತಿಥಿಗಳು , ಅದರಲ್ಲಿಯೂ ನಾಗರ ಪಂಚಮಿ ( ಶ್ರಾವಣ ಶುಕ್ಲ ಪಂಚಮಿ ) ಹಾಗೂ ಮಾರ್ಗಶಿರ ಶುಕ್ಲ ಪಂಚಮಿ ನಾಗಾರಾಧನೆಗೆ ಪುಣ್ಯಪ್ರದವೆಂಬ ಹೇಳಿಕೆ ಸ್ಕಾಂದ ಪುರಾಣದಲ್ಲಿದೆ .


ವಾಡಿಕೆಯಂತೆ ಶ್ರಾವಣ ಶುಕ್ಲ ಪಂಚಮಿಯೇ ನಾಗರ ಪಂಚಮಿಯೆಂದು ಖ್ಯಾತಿ ಪ್ರಖ್ಯಾತಿಗಳಿಸಿದೆ . ನಾಗದೇವರಿಗೆ ತನು ಹಾಕುವುದು ( ನಾಗ ದೇವರಿಗೆ ತಂಪೆರೆಯುವುದು ) ಈ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ. ಪಂಚಾಮೃತಾಭಿಷೇಕ , ಶೀಯಾಳದ ಅಭಿಷೇಕ; ಹಾಲಿನ ಅಭಿಷೇಕ ನಾಗ ದೇವರಿಗೆ ವಿಶೇಷ ಪ್ರೀತಿಯನ್ನುಂಟು ಮಾಡುವುದು. ಅರಸಿನ ಹುಡಿ ನಾಗದೇವರಿಗೆ ಪ್ರೀತಿ ಕರ.

ಅರಶಿನ ಬಣ್ಣದ- ಸುಗಂಧ ಭರಿತ ಕೇದಗೆ , ಹಿಂಗಾರ ( ಪೂಗ ಪುಷ್ಪ ) ಸಂಪಿಗೆ ಇಂತಹ ಹೂಗಳು ಪೂಜಾರ್ಹ , ಅರಶಿನ ಎಲೆಯಲ್ಲಿ ಮಾಡಿದ ಭಕ್ಷವನ್ನು ತಯಾರಿಸಿ ಸ್ವೀಕರಿಸುವುದೂ ಈ ದಿನದ ವಿಶೇಷ . ಅಂತೂ ಮೂಲ ನಾಗಬನದಲ್ಲಿ ಅಥವಾ ಯಥಾ ಸಾಧ್ಯ ನಾಗ ಸನ್ನಿಧಿಯಲ್ಲಿ ಫಲ - ಪುಷ್ಪ - ಅಭಿಷೇಕ ದ್ರವ್ಯ - ಲಾವಂಚ ಧೂಪ ಇತ್ಯಾದಿ ಯಥಾ ಲಭ್ಯ ವಸ್ತುಗಳನ್ನು ಅರ್ಪಿಸಿ , ಪ್ರಾರ್ಥನಾ ಪೂರ್ವಕ ಪ್ರಸಾದ ಸ್ವೀಕರಿಸಿ , ಕೃತ ಕೃತ್ಯರಾಗುವುದೇ ಈ ದಿನದ ಧನ್ಯತೆಯ ಕಾರ್ಯಕ್ರಮ .ನಾಗಾಂತರ್ಗತ ಸಂಕರ್ಷಣ ರೂಪಿ ಪರಮಾತ್ಮನ ಪ್ರಸನ್ನತೆಯು ಸತ್ ಸಂತಾನವನ್ನು; ದೈವಿಕ ಸಂಪತ್ತನ್ನು ನೀಡುವುದರಲ್ಲಿ ಅನುಮಾನವಿಲ್ಲ.


ನಾವು ವಾಸವಾಗಿರುವ ಈ ಭೂಮಿಯನ್ನು ಹೊತ್ತ ದಿವ್ಯ ಶಕ್ತಿಯೇ ಆದಿ ಶೇಷ . ಹೀಗಾಗಿ ಈ ದಿನ ಮಣ್ಣನ್ನು ಅಗೆಯುವ , ಕಡಿಯುವ ಕೆಲಸ ವರ್ಜ್ಯ. ಸಾಸಿವೆ , ಪಡುವಲ ಕಾಯಿ ಈ ದಿನ ಬಳಸುವ ರೂಢಿಯಿಲ್ಲ . ಶ್ಯಾವಿಗೆ ಮಾಡುವಂತಿಲ್ಲ . ವಿಶೇಷ ಭಕ್ಷಗಳಾದ ಮೋದಕ , ಕಡುಬು , ತುಂಬಿಟ್ಟು ಮುಂತಾದವುಗಳನ್ನು ಹಬೆಯಲ್ಲಿಯೇ ಬೇಯಿಸುತ್ತಾರೆ. . ದೋಸೆ . ಹೊಯ್ಯುವ , ಒಗ್ಗರಣೆ ಹಾಕುವ ಹಾಗೂ ಕರಿಯುವ ಕ್ರಿಯೆಗಳಿಗೂ ಈ ದಿನ ವಿರಾಮ ನೀಡುತ್ತಾರೆ . ಇವೆಲ್ಲ ಜನಮನದ ನಂಬುಗೆಗಳು . ನಾವು ನಾಗ ದೇವರ ಕುರಿತು ಮೊದಲು ಅರಿತುಕೊಳ್ಳಬೇಕು . ಆಗ ಭಕ್ತಿ ಪ್ರೀತಿ ಹೆಚ್ಚಾಗುತ್ತದೆ . ಈ ತಿಳಿದು ಮಾಡುವ ಪೂಜೆಯಿಂದ ಆರೋಗ್ಯ , ಸತ್ಸಂತಾನ , ಸೌಭಾಗ್ಯ ಲಭಿಸುತ್ತದೆ . ನಾಗಬನ , ನಾಗ ಬೀದಿ , ಹುತ್ತ , ನಾಗ ಪರಿಸರ ಭಕ್ತಿ ಪ್ರಧಾನವಾದ ಈ ನಂಬುಗೆಯಿಂದಲೂ ನಮ್ಮ ಪರಿಸರ ಭಾಗಶಃ ಶುದ್ಧವಾಗಿ ಉಳಿದು ಬರಲು ಸಹಾಯಕವಾಗಿದೆ . ಲೌಕಿಕವಾಗಿಯೂ ಇದು ನಾವು ಪಡೆದು ಬಂದ ಭಾಗ್ಯವೆನ್ನಬಹುದು . ವರ್ಷಕ್ಕೊಮ್ಮೆಯಾದರೂ ನಾಗಾರಾಧನೆಯ ನೆಪದಿಂದ ಕುಟುಂಬೀಯರು , ಊರವರು ಸಾಮೂಹಿಕವಾಗಿ ನಾಗಬನಗಳಲ್ಲಿ ನಾಗ ಕ್ಷೇತ್ರಗಳಲ್ಲಿ ಒಟ್ಟುಗೂಡಿ , ಸತ್ ಚಿಂತನೆಗಳಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಶ್ರೇಯಸ್ಕರ . ಮುಖ್ಯವಾಗಿ ಮುಂದಿನ ಜನಾಂಗ ಈ ಪೂಜಾ ಸಂಸ್ಕೃತಿಯಲ್ಲಿ ಪಾಲ್ಗೊಳ್ಳಬೇಕು . ಪರಿಸರ ಪ್ರಜ್ಞೆ ಅವರಲ್ಲಿ ಬೆಳೆಯಬೇಕು . ಜ್ಞಾನ , ಭಕ್ತಿ , ವೈರಾಗ್ಯ ಅವರಲ್ಲಿಯೂ ಅಂಕುರಿಸಬೇಕು . ಇದರಿಂದಲೇ ನಮ್ಮ ಸಂಸ್ಕೃತಿಯ ಸೌರಭ ಉಳಿಯಲು ಸಾಧ್ಯ . ಅನಂತ ಫಲದಾಯಕನೆಂಬ ಕೀರ್ತಿಯ ಅನಂತನೆಂಬ ನಾಮದ ಪರಮಾತ್ಮನು ನಮ್ಮ ಮನದಂತರಂಗದಾಳದಲ್ಲಿ ವಾಸಿಸಲಿಕ್ಕೂ ಇದೊಂದು ಸದವಕಾಶ .


ನಾಗನಿಗೇಕೀ ಮಹತ್ವ? 

ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ನಿಧಿ ಸಂರಕ್ಷಕನು ಹೌದು.... 

ಸರ್ಪಗಳಿಗೆ ಸರಿಸೃಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ. 


ಸರ್ಪಗಳ ಜನ್ಮ


, ಸರ್ಪ ಸಂಕುಲ 

ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ.... ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ಪಂಚಮಿ, ಆಶ್ಲೇಷ ನಕ್ಷತ್ರ, ಷಷ್ಠಿಯದಿನ ನಾಗದೇವರ ಸಂಬಂಧಿ ನಕ್ಷತ್ರಗಳು

ಇಂತಹ ಪ್ರಶಸ್ತ ದಿನಗಳಲ್ಲಿ ನಾಗಾರಾಧನೆಯು ಉತ್ತಮ

ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಸರ್ಪ ಸಂಸ್ಕಾರವನ್ನು ಮಾಡಲಾಗುತ್ತದೆ. 


ಯಾರು ಯಾವ ಸಂದರ್ಭದಲ್ಲಿ ಯಾಕೆ ಸರ್ಪ ಸಂಸ್ಕಾರ ಮಾಡಬೇಕು


ಕೆಲ ಜ್ಯೋತಿಷ್ಯರು ಜಾತಕ ನೋಡಿ ಸಾಮಾನ್ಯವಾಗಿ ದುಸ್ಥಾನ ಗಳಲ್ಲಿ (೬,೮,೧೨)ರಲ್ಲಿ ರಾಹು ಇದ್ದಾಗ ನಿಮಗೆ ಸರ್ಪ ದೋಷವಿದೆ.ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುವುದು ವಾಡಿಕೆ ಯಾಗಿದೆ. ಇಂತಹ ಸಲಹೆಗಳು ಬರುತ್ತದೆ. ಆದರೆ ಒಂದು ವೇಳೆ ಸರ್ಪ ಸಾಯದೇ ಇದ್ದಲ್ಲಿ ಸರ್ಪ ಸಂಸ್ಕಾರ ಮಾಡುವುದು ಉಚಿತವೇ ಎಂಬುದು ಪ್ರಶ್ನೆಯಾಗುತ್ತದೆ. ಸಾಯದ ಜಂತುವಿಗೆ ಮರಣೋತ್ತರ ಕ್ರಿಯೆ ಮಾಡಿ ಅದನ್ನು ಎಲ್ಲಿಗೆ ಕಳುಹಿಸುತ್ತಾರೆ.? ಒಬ್ಬ ವ್ಯಕ್ತಿ ಸಾಯದೆ ಇದ್ದಾಗ ಉತ್ತರ ಕ್ರಿಯೆ ಮಾಡು ವುದು ಸರಿಯೇ?

ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡ ಬೇಕು?

1.ಸರ್ಪನ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೆ ಇರಬೇಕು.

2. ಸ್ಥಳ ಭಾದಿತ ಸರ್ಪ ದೋಷಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.

3. ಹೊಸದಾಗಿ ನಾಗಬನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗ ಶಿಲಾ ಪ್ರತಿಷ್ಟೆಯಾಗಬೇಕು. ಭೂಮಿ ಎಂದ ಮೇಲೆ ಜೀವಿಗಳು ಪ್ರತೀ ಇಂಚು ಇಂಚಿಗೂ ಸತ್ತಿರುತ್ತದೆ.ಭೂಮಿಯು ಸ್ಮಶಾನವೆ ಆಗಿರುತ್ತದೆ. ಅದಕ್ಕಾಗಿ ಮರ್ತ್ಯಲೋಕ ಎಂದು ಕರೆದರು.ಇಂತಹ ಉದ್ಧಿಶ್ಯದಲ್ಲಿ ಸರ್ಪಸಂಸ್ಕಾರ ಮಾಡಿ ಭೂಮಿಯಲ್ಲಿ ನಿಧಿಸ್ಥಾಪಿಸಿ ನಾಗ ಪ್ರತಿಷ್ಟೆ ಮಾಡಬಹುದು.

4. ವಾಹನಗಳ ಗಾಲಿಗಳಿಗೆ ನಾಗನು ಬಿದ್ದು ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಲೇ ಬೇಕು.

5.ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ.ಆಗ ಇದರ ಉದ್ದಿಶ್ಯವಾಗಿ ಸಂಸ್ಕಾರ ಮಾಡಬಹುದು.

6. ನಾಗ ವನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿ ಅಗೋಚರವಾಗಿ ಸರ್ಪ ಸಂತತಿ ನಾಶವಾ ಗಿರಬಹುದು.ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.


ನಾಗ ದೇವರನ್ನು ಸ್ತೋತ್ರಗಳ ಮೂಲಕ ಆರಾಧನೆ ಮಾಡಿದರೆ ನಾಗಗಳಿಂದ ಅನುಗ್ರಹವನ್ನು ಪಡೆಯಬಹುದು


‘ ಓಂ ನಮೋ ಭಗವತೇ ಕಾಮರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ಸ್ವಾಹಾ’ 


ನಮೋ ಅಸ್ತು ಸರ್ಪೇಭ್ಯೋ ಯೇ ಕೇ ಚ ಪೃಥಿವೀಮನು ।

ಯೇ ಅಂತರಿಕ್ಷೇ ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ ॥


ಭೂಮಂಡಲದಲ್ಲಿರುವ ಸರ್ಪಗಳಿಗೆ , ವಾಯುಮಂಡಲದಲ್ಲಿರುವ ಸರ್ಪಗಳಿಗೆ , ನಭೋಮಂಡಲದಲ್ಲಿರುವ ಸರ್ಪಗಳಿಗೆ ನಮಸ್ಕಾರ..


ಯೇSದೋರೋಚನೇ ದಿವೋ ಯೇ ವಾ ಸೂರ್ಯಸ್ಯ ರಶ್ಮಿಷು ।

ಯೇಷಾಮಪ್ಸು ಸದಸ್ಕೃತಂ ತೇಭ್ಯಃ ಸರ್ಪೇಭ್ಯೋ ನಮಃ ॥


ಆಕಾಶದ ಬೆಳಕಿನಲ್ಲಿ , ಸೂರ್ಯನ ಪ್ರಕಾಶದಲ್ಲಿ ಹಾಗೂ ನೀರಿನಲ್ಲಿರುವ ಸಮಸ್ತ ಸರ್ಪಗಣಗಳಿಗೆ ನಮಸ್ಕಾರ.


ಯಾ ಇಷವೋ ಯಾತುಧಾನಾನಾಂ ಯೇ ವಾ ವನಸ್ಪತೀರನು ।

ಯೇ ವಾ ವಟೇಷು ಶೇರತೇ ತೇಭ್ಯಃ ಸರ್ಪೇಭ್ಯಃ ನಮಃ ॥


ಆಯುಧವನ್ನಾಗಿ ಉಪಯೋಗಿಸುವ ಸರ್ಪಗಳಿಗೆ (ಹಿಂದೆ ಯುದ್ಧಗಳಲ್ಲಿ ಸರ್ಪಾಸ್ತ್ರವನ್ನು ಉಪಯೋಗಿಸಲಾಗುತ್ತಿತ್ತು)

ಹೂ ಬಿಡದೇ ಕೇವಲ ಹಣ್ಣನ್ನಷ್ಟೇ ನೀಡುವ ವೃಕ್ಷಗಳಲ್ಲಿ ವಾಸಿಸುತ್ತಿರುವ ಸರ್ಪಗಳಿಗೆ ,

ಬಿಲಗಳಲ್ಲಿ ಮಲಗಿರುವ ಸರ್ಪಗಳಿಗೆ ನಮಸ್ಕರಿಸೋಣ..


ಸರ್ಪೋ ಅನಂತೋ ತಥಾ ಶೇಷೋ ಕಪಿಲೋ ನಾಗ ಏವಚ|

ಕಳಿಂಗ ಶಂಖ ಪಾಲಾಶ್ಚ ಭೂಧರಾಶ್ಚ ಪ್ರಕೀರ್ತಿತಾಃ||

*** 


ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್ 

 

ವಂದೇ ಸರ್ಪ ಕುಲಾಧಿಪಂ ತ್ರಿನಯನಂ ಪೀತಾಂಬರಾಲಂಕೃತಮ್ |

ಹೇಮಾಂಗಂ ಯುಗಲಾಛನಂ ಸುಫಲಕಂ ಖಡ್ಗಂ ದಧಾನಂ ವಿಭುಮ್ ನಾನಾರತ್ನ ಸಮನ್ವಿತಂ ಭಯಹರಂ ಶ್ವೇತಾಬ್ಜ ಮಧ್ಯಸ್ಥಿತಮ್ |ಶ್ರೀಗಂಧಾದಿ ಸುಪುಷ್ಪಧಾರಿಣಮಥ ಕ್ಷೀರಾಜ್ಯ ಹವ್ಯ ಪ್ರಿಯಮ್  ||1||


ಮೂರು ಕಣ್ಣುಗಳನ್ನು ಹೊಂದಿದ,ಹಳದಿಯ ವಸ್ತ್ರಗಳಿಂದ ಅಲಂಕರಿಸಲ್ಪಟ್ಟ, ಹೊಂಬಣ್ಣದ ದೇಹವನ್ನು ಹೊಂದಿರುವ,ನೊಗವನ್ನು ತನ್ನ ಗುರುತನ್ನಾಗಿ ಹೊಂದಿದ,ಖಡ್ಗ ಗುರಾಣಿಗಳನ್ನು ಹಿಡಿದಿರುವ,ಸರ್ವ ವ್ಯಾಪಕನಾದ,ವಿಧ ವಿಧವಾದ ರತ್ನಮಣಿಗಳನ್ನು ಧರಿಸಿರುವ,ಭಯನಾಶಕನಾದ,ಬಿಳಿಯಕಮಲಗಳ ನಡುವೆ ನಿಂತಿರುವ,ಶ್ರೀಗಂಧಹಾಗೂ ನಾನಾ ವಿಧದ ಪರಿಮಳ ಪುಷ್ಪಗಳನ್ನು ಧರಿಸಿರುವ ಹಾಲು ಮತ್ತು ತುಪ್ಪಗಳನ್ನು ಮೆಚ್ಚಿಕೊಳ್ಳುವ ಸರ್ಪಕುಲಾಧಿಪತಿಗೆ ನನ್ನ ಪ್ರಣಾಮಗಳು.


ನಾಗೇಂದ್ರಂ ಶಂಖಪಾಲಂ ಕಪಿಲಮಜಗರಂ ವಾಸುಕಿಂ ಪದ್ಮನಾಗಮ್ |ಕಾಳಿಂಗಂ ಕದ್ರುಪುತ್ರಂ ಸುವಿಷಧರಂ ಮಹಾಕಾಲೀಯಂ ಧಾರ್ತರಾಷ್ಟ್ರಮ್ ||ಸೌರಾಷ್ಟ್ರಂ ಬ್ರಹ್ಮಪುತ್ರಂ ಸುತಲಗತಮಧ:ಸ್ವರ್ಗಗಂ ವ್ಯೋಮಸಂಸ್ಥಮ್ |ಭೂಮಿಸ್ಥಂ ತಕ್ಷಕಾಖ್ಯಂ ಹರಿವರಶಯನಂ ಶೇಷರಾಜಂ ನಮಾಮಿ

 ||2||


ನಾಗಗಳ ಒಡೆಯನಿಗೂ,ಶಂಖಪಾಲನಿಗೂ,ಕಪಿಲನಿಗೂ, ಅಜಗರನಿಗೂ, ವಾಸುಕಿಗೂ, ಪದ್ಮವೆಂಬ ಹೆಸರಿನ ನಾಗನಿಗೂ,ಕದ್ರುತನಯನಾದ ಕಾಳಿಂಗನಿಗೂ,ವಿಷವನ್ನು ಧರಿಸಿರುವ ಕಾಲಿಯನಿಗೂ, ಧಾರ್ತರಾಷ್ಟ್ರನಿಗೂ,ಬ್ರಹ್ಮಪುತ್ರನಾದ ಸೌರಾಷ್ಟ್ರನಿಗೂ, ಪಾತಾಳ,ಸ್ವರ್ಗ,ಅಂತರಿಕ್ಷ ಮತ್ತು ಭೂಮಿಯಲ್ಲಿರುವ ನಾಗಾದಿಗಳಿಗೂ,ತಕ್ಷಕನಿಗೂ,ಹಾಗೆಯೇ ಹರಿಯ ಹಾಸಿಗೆಯಾಗಿರುವ ಶೇಷನನಿಗೂ ನನ್ನ ಪ್ರಣಾಮಗಳು.


ಧ್ಯಾಯೇಛ್ರೀ ನಾಗರಾಜಂ ನತದುರಿತ ಹರಂ ಮೃತ್ಯುದಾರಿದ್ರ್ಯನಾಶಮ್ |ಸಂಪೂರ್ಣಾನಂದರೂಪಂ ಸುಮಧುರ ವಚನಂ ಸರ್ವ ಸೌಭಾಗ್ಯದಂ ತಮ್  ||

ಭಕ್ತೈ: ಸಂಸೇವ್ಯಮಾನಂ ಸಕಲ ಸುಖಕರಂ ಆಯುರಾರೋಗ್ಯಭಾಗ್ಯಮ್ |ದತ್ವಾ ಸಂಪತ್ಸಮೃದ್ಧಿಮಮಿತ ಫಲಮಿಹಾನಂತ ರೂಪಂ ನಮಾಮಿ  ||3||


ಧ್ಯಾನಿಸಿದವರ ದುರಿತಗಳನ್ನು ಪರಿಹರಿಸುವ, ದಾರಿದ್ರ್ಯ ಹಾಗೂ ಮೃತ್ಯುವನ್ನು ನಿವಾರಿಸುವ,ಪರಿಪೂರ್ಣಾನಂದದಾಯಕನಾಗಿರುವ, ಮಧುರ ಮಾತುಗಳುಳ್ಳ, ಸರ್ವಸೌಭಾಗ್ಯದಾಯಕನಾಗಿರುವ, ಭಕ್ತರ ಸೇವೆಯನ್ನು ಸ್ವೀಕರಿಸುವ,ಸಮಸ್ತ ಸುಖದಾಯಕನಾದ,ಆಯುರಾರೋಗ್ಯಾದಿಭಾಗ್ಯದಾಯಕನಾಗಿ ಸಂಪತ್ಸಮೃದ್ಧಿಯನ್ನು ಕರುಣಿಸುವ,ಅಪರಿಮಿತ ಫಲದಾಯಕನಾದ ಅನಂತ ಸ್ವರೂಪನಾದ ಶ್ರೀನಾಗರಾಜನಿಗೆ ನನ್ನ ಪ್ರಣಾಮಗಳು.


ಫಣಾಷ್ಟಶತ ಶೇಖರಂ ಧೃತಸುವರ್ಣ ಪುಂಜಪ್ರಭಮ್ |ಸವಜ್ರ ವರಭೂಷಣಂ ನವಸರೋಜ ರಕ್ತೇಕ್ಷಣಮ್  ಸುವರ್ಣ ಮುಕುಟೋಜ್ವಲಂ ವಾಂಛಿತಾರ್ಥಪ್ರದಮ್ |ನಮಾಮಿ ಶಿರಸಾ ಸುರಾಸುರ ನಮಸ್ಕೃತಂ ವಾಸುಕಿಮ್ ||4||


ಎಂಟುನೂರು ಹೆಡೆಗಳನ್ನು ಹೊಂದಿರುವ,ಬಂಗಾರದ ತುಂಡಿನಂತೆ ಶೋಭಿಸುತ್ತಿರುವ, ವಜ್ರಾಭರಣಗಳಿಂದ ಭೂಷಿತನಾಗಿರುವ,ಅರಳಿದ ತಾವರೆಯಂತೆ ವಿಶಾಲವಾದ ಕೆಂಗಣ್ಣುಗಳನ್ನು ಹೊಂದಿರುವ,ಹೊನ್ನಿನ ಕಿರೀಟದಿಂದ ಬೆಳಗುತ್ತಿರುವ,ಸಮಸ್ತ ವಾಂಛಿತಾರ್ಥಗಳನ್ನು ಕರುಣಿಸುವ,ದೇವತೆಗಳಿಂದಲೂ ದಾನವರಿಂದಲೂ ವಂದಿಸಲ್ಪಡುವ ವಾಸುಕಿಗೆ ನನ್ನ ಪ್ರಣಾಮಗಳು.


ಅನಂತ ಶೀರ್ಷಂ ಜಗದೇಕ ಕುಂಡಲಮ್ |ಪೀತಾಂಬರಂ ಧೂಮ್ರ ಸಹಸ್ರ ಲೋಚನಮ್ ||

ಉದಾರವೀರ್ಯಂ ವಿಷದಂಷ್ಟ್ರ ಕಾನನಮ್  |ನಮಾಮ್ಯನಂತಂ ಭುವನೈಕ ನಾಥಮ್  ||5||


ನಾಶವಿಲ್ಲಂತಹಾ ಶಿರಸ್ಸುಗಳನ್ನು ಹೊಂದಿರುವ,ಬ್ರಹ್ಮಾಂದವನ್ನು ಕುಂಡಲವನ್ನಾಗಿ ಧರಿಸಿರುವ,ಹಳದಿ ವಸನವನ್ನು ಧರಿಸಿದ,ಕಂದುಬಣ್ಣದ ಸಾವಿರಾರು ಕಣ್ಣುಗಳನ್ನು ಹೊಂದಿದ,ಬಹು ಶಕ್ತಿಯುತನಾಗಿರುವ,ಲೋಕದೊಡೆಯನಾದ ಅನಂತನಿಗೆ ನನ್ನ ಪ್ರಣಾಮಗಳು.


ಸಹಸ್ರ ವಕ್ತ್ರಂ ದ್ವಿ ಸಹಸ್ರ ಜಿಹ್ವಮ್ |ಪಿಶಂಗನೇತ್ರಂ ಕಪಿಲಾಂಶುಕಾಢ್ಯಮ್ ||

ವಿಷಾಯುಧಂ ಪ್ರೋಜ್ವಲ ದಂಷ್ಟ್ರಬಾಹುಮ್ |ತಂ ನಾಗರಾಜಂ ಪ್ರಣತೋsಸ್ಮಿ ನಿತ್ಯಮ್  ||6||


ಸಾವಿರ ಮೊಗಗಳಿಂದ ಕೂಡಿ,ಎರಡು ಸಾವಿರ ನಾಲಿಗೆಗಳನ್ನು ಹೊಂದಿ,ಕಂದುಗೆಂಪು ವರ್ಣದ ಕಣ್ಣುಗಳುಳ್ಳವನಾದ,ಕೆಂಪು ಹಾಗೂ ಹೊಂಬಣ್ಣ ವಸನವಧಾರಿಯಾದ,ಹೊಳೆಯುವ ದಂತಗಳನ್ನೇ ತನ್ನ ಬಾಹುಗಳನ್ನಾಗಿಸಿಕೊಂಡ ಆ ನಾಗರಾಜನಿಗೆ ನನ್ನ ಪ್ರಣಾಮಗಳು.


ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ||

ಏತಾನಿ ನವ ನಾಗಾನಿ ನಾಗಾನಾಂ ಚ ಮಹಾತ್ಮನಾಮ್ |ಸಾಯಂಕಾಲೇ ಪಠೇನ್ನಿತ್ಯಂ ಪ್ರಾತ:ಕಾಲೇ ವಿಶೇಷತ: ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್  ||7||


ಅನಂತ,ವಾಸುಕಿ,ಶೇಷ, ಪದ್ಮ,ಕಂಬಲ,ಶಂಖಪಾಲ,ದೃತರಾಷ್ಟ್ರ,ತಕ್ಷಕ,ಹಾಗೂ ಕಾಲಿಯ ಎಂಬೀ ಒಂಭತ್ತು ಹೆಸರುಗಳು ಮಹಾತ್ಮೆಯುಳ್ಳವುಗಳಾಗಿದ್ದು ಇವುಗಳನ್ನು ಸಂಜೆ ಮತ್ತು ಬೆಳಿಗ್ಗೆ ಅನುದಿನವೂ ವಿಶೇಷವಾಗಿ ಪಠನೆ ಮಾಡುವವರಿಗೆ ಯಾವುದೇ ವಿಷಭಯವಿರುವುದಿಲ್ಲ.ಅಲ್ಲದೆ ಅಂತಹವರು ಎಲ್ಲೆಡೆಗಳಲ್ಲೂ ಜಯಶಾಲಿಗಳಾಗುವರು.


ಶೇಷೋ ನಿ:ಶೇಷಕರ್ತಾ ಸ್ಯಾಜ್ಜಾಡ್ಯ ದಾರಿದ್ರ್ಯ ಹೃದ್ರುಜಾಮ್ |ತಕ್ಷಕೋ ವಿಘ್ನಹರ್ತಾಸ್ಯಾದನಂತೋsಭೀಷ್ಟದಾಯಕ: ||

ವಾಸುಕಿರ್ವಸುದಾಯೀ ಸ್ಯಾಚ್ಛಂಖಪಾಲ: ಸುಕೀರ್ತಿದ: |ಮಹಾಪದ್ಮ: ಶಾಂತಿ ಕಾಂತಿ ತುಷ್ಟಿ ಪುಷ್ಟಿ ದೃತಿಪ್ರದ:  ||8||


ಮಹಾಶೇಷನು ಜಡತ್ವವನ್ನೂ,ಬಡತನವನ್ನೂ,ಹೃದ್ರೋಗವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.ತಕ್ಷಕನು ಅಡ್ಡಿ ಆತಂಕಗಳನ್ನು ದೂರೀಕರಿಸುವನು.ಅನಂತನು ಅಭೀಷ್ಟಗಳನ್ನು ನೆರವೇರಿಸುವನು.ವಾಸುಕಿಯು ಸಂಪತ್ತನ್ನು ಕರುಣಿಸುವನು.ಶಂಖಪಾಲನು ಸತ್ಕೀರ್ತಿಯನ್ನು ಒದಗಿಸುವನು.ಮಹಾಪದ್ಮನೆಂಬ ನಾಗನು ಮನಸ್ಸಿಗೆ ಶಾಂತಿಯನ್ನೂ ಸಂತೋಷವನ್ನೂ ದೈರ್ಯವನ್ನೂ ಕರುಣಿಸುವನು.


ಕಂಬಲಂ ಕಷ್ಟಹಾರೀಸ್ಯಾತ್ ಕರ್ಕೋಟಂ ಕ್ಷುದ್ರರೋಗ ಹೃತ್ |ಆರೋಗ್ಯಂ ಚ ಚಿರಾಯುಶ್ಚ ಚಿತ್ತ ಶುದ್ಧಿಂ ಗುರುಷ್ವಪಿ ||

ದೈವೇ ಧರ್ಮೇ ಸದಾಚಾರೇ ಸತ್ಯೇ ವೈ ಪುಣ್ಯಕರ್ಮಣಿ |ಪ್ರಯಚ್ಛ ನಿರ್ಮಲಾಂ ಶ್ರದ್ಧಾಂ ದಯಯಾ ಪನ್ನಗಾಧಿಪ

||9||


ಕಂಬಲನೆಂಬ ಸರ್ಪನು ಕಷ್ಟವನ್ನು ಪಹರಿಸುವನು. ಕರ್ಕೋಟಕನು ಕೆಟ್ಟ ಕಾಯಿಲೆಗಳನ್ನು ಗುಣಪಡಿಸಿ ಆರೋಗ್ಯವನ್ನು ಕರುಣಿಸುವನು. ಹೇ ನಾಗರಾಜನೇ; ನನ್ನಲ್ಲಿ ಕರುಣೆಯುಳ್ಳವನಾಗಿ  ಆರೋಗ್ಯವನ್ನೂ,ಅಧಿಕ ಆಯುಸ್ಸನ್ನೂ,ಪರಿಶುದ್ಧವಾದ ಮನವನ್ನೂ ದೇವರಲ್ಲಿ ಧರ್ಮದಲ್ಲಿ ಸದಾಚಾರದಲ್ಲಿ ಗುರುಹಿರಿಯರಲ್ಲಿ,ಸತ್ಯದಲ್ಲಿ ಮತ್ತು ಪುಣ್ಯಕರವೆನಿಸುವ ಸತ್ಕರ್ಮಗಳ ಆಚರಣೆಯಲ್ಲಿ ಸ್ವಚ್ಚವಾಗಿರುವಂತಹಾ ಶ್ರದ್ಧೆಯನ್ನು ನನಗೆ ದಯಪಾಲಿಸು ಸ್ವಾಮಿಯೇ.

ಇತಿ ಶ್ರೀ ನಾಗದೇವತಾ ಸ್ತುತಿ ಸ್ತೋತ್ರ

***

ನಾಗ ಸ್ತೋತ್ರಮ್


ಬ್ರಹ್ಮ ಲೋಕೇ ಚ ಯೇ ಸರ್ಪಾಃ

 ಶೇಷನಾಗಃ ಪುರೋಗಮಾಃ ।

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೧॥


ವಿಷ್ಣು ಲೋಕೇ ಚ ಯೇ ಸರ್ಪಾಃ

 ವಾಸುಕೀ ಪ್ರಮುಖಾಶ್ಚ ಯೇ ।

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೨॥


ರುದ್ರ ಲೋಕೇ ಚ ಯೇ ಸರ್ಪಾಃ 

ತಕ್ಷಕ: ಪ್ರಮುಖಸ್ತಥಾ ।

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೩॥


ಖಾಂಡವಾಸ್ಯ ತಥಾ ದಾಹೇ 

ಸ್ವರ್ಗೇ ಚ  ಸಮಾಶ್ರಿತಾಃ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೪॥


ಸರ್ಪ ಸತ್ರೇ ಚ ಯೇ ಸರ್ಪಾಃ

 ಆಸ್ತಿಕೇನಾಭಿ ರಕ್ಷಿತಃ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥5॥


ಪ್ರಲಯೇ ಚೈವ್ ಯೇ ಸರ್ಪಾಃ

 ಕಾರ್ಕೋಟಕ ಪ್ರಮುಖಶ್ಚಯೇ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥6॥


ಧರ್ಮ ಲೋಕೇ ಚ ಯೇ ಸರ್ಪಾಃ

 ವೈತರಣ್ಯಾಂ ಸಮಾಶ್ರಿತಾಃ ।

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೭॥


ಯೇ ಸರ್ಪಾಃ ಪರ್ವತೇ ಯೇಷು 

ಧಾರಿ ಸಂಧಿಷು ಸಂಸ್ಥಿತಾಃ ।

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೮॥


ಗ್ರಾಮೇ ವಾ ಯದಿ ವಾರಣ್ಯೇ 

ಯೇ ಸರ್ಪಾಃ ಪ್ರಚಾರಂತಿ ಚ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೯॥


ಪೃಥಿವ್ಯಾಂ ಚೈವ್ ಯೇ ಸರ್ಪಾಃ 

ಯೇ ಸರ್ಪಾಃ ಬಿಲ ಸಂಸ್ಥಿತಾಃ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೧೦॥


ರಸಾತಲೇ ಚ ಯೇ ಸರ್ಪಾಃ 

ಅನಂತಾದಿ ಮಹಾಬಲಾಃ | 

ನಮೋಸ್ತು ತೇಭ್ಯಃ ಸುಪ್ರೀತಾಃ 

 ಪ್ರಸನ್ನಾಃ ಸಂತು ಮೇ  ಸದಾ ॥೧೧॥


ಮಹಾಭರಾತದಲ್ಲಿಯ ಒಂದು ಉತ್ತಮ ಸ್ತೋತ್ರ. ನಿತ್ಯವೂ ಒಂದು ಬಾರಿಯಾದರೂ ಜಪಿಸಲೇಬೇಕು. ನಾಳೆಯ ದಿನ ಕನಿಷ್ಟ ಹನ್ನೊಂದುಬಾರಿಯಾದರೂ ಪಠಿಸೋಣ. 

***

ಸರ್ಪರಾಜ ಅಷ್ಟೋತ್ತರ..

ಓಂ ಅನಂತಾಯ ನಮಃ

ಓಂ ವಾಸುದೇವಾಯ ನಮಃ

ಓಂ ತಕ್ಷಕಾಯ ನಮಃ

ಓಂ ವಿಶ್ವತೋಮುಖಾಯ ನಮಃ

ಓಂ ಕರ್ಕೋಟಕಾಯ ನಮಃ

ಓಂ ಮಹಾಪದ್ಮಾಯ ನಮಃ

ಓಂ ಪದ್ಮಾಯ ನಮಃ

ಓಂ ಶಂಖಾಯ ನಮಃ

ಓಂ ಶಿವಪ್ರಿಯಾಯ ನಮಃ

ಓಂ ಧೃತರಾಷ್ಟ್ರಾಯ ನಮಃ ||೧೦||

ಓಂ ಶಂಖಪಾಲಾಯ ನಮಃ

ಓಂ ಕುಳಿಕಾಯ ನಮಃ

ಓಂ ಸರ್ಪನಾಥಾಯ ನಮಃ

ಓಂ ಇಷ್ಠದಾಯಿನೇ ನಮಃ

ಓಂ ನಾಗರಾಜಾಯ ನಮಃ

ಓಂ ಪುರಾಣಾಯ ನಮಃ

ಓಂ ಪುರುಷಾಯ ನಮಃ

ಓಂ ಅನಘಾಯ ನಮಃ

ಓಂ ವಿಶ್ವರೂಪಾಯ ನಮಃ

ಓಂ ಮಹೀಧಾರಿಣೇ ನಮಃ

||೨೦||

ಓಂ ಕಾಮದಾಯಿನೇ ನಮಃ

ಓಂ ಸುರಾರ್ಚಿತಾಯ ನಮಃ

ಓಂ ಕುಂಡಪ್ರಭಾಯ ನಮಃ

ಓಂ ಬಹುಶಿರಸೇ ನಮಃ

ಓಂ ದಕ್ಷಾಯ ನಮಃ

ಓಂ ದಾಮೋದರಾಯ ನಮಃ

ಓಂ ಅಕ್ಷರಾಯ ನಮಃ

ಓಂ ಗಣಾಧಿಪಾಯ ನಮಃ

ಓಂ ಮಹಾಸೇನಾಯ ನಮಃ

ಓಂ ಪುಣ್ಯಮೂರ್ತಯೇ ನಮಃ

ಓಂ ಗಣಪ್ರಿಯಾಯ ನಮಃ

||೩೦||

ಓಂ ವರಪ್ರದಾಯ ನಮಃ

ಓಂ ವಾಯುಭಕ್ಷಕಾಯ ನಮಃ

ಓಂ ವಿಶ್ವಧಾರಿಣೇ ನಮಃ

ಓಂ ವಿಹಂಗಮಾಯ ನಮಃ

ಓಂ ಪುತ್ರಪ್ರದಾಯ ನಮಃ

ಓಂ ಪುಣ್ಯರೂಪಾಯ ನಮಃ

ಓಂ ಬಿಲೇಶಾಯ ನಮಃ

ಓಂ ಪರಮೇಷ್ಠಿನೇ ನಮಃ

ಓಂ ಪಶುಪತಯೇ ನಮಃ

ಓಂ ಪವನಾಶಿನೇ ನಮಃ

||40||

ಓಂ ಬಲಪ್ರದಾಯ ನಮಃ

ಓಂ ದಾಮೋದರಾಯ ನಮಃ

ಓಂ ದೈತ್ಯಹಂತ್ರೇ ನಮಃ

ಓಂ ದಯಾರೂಪಾಯ ನಮಃ

ಓಂ ಧನಪ್ರದಾಯ ನಮಃ

ಓಂ ಮತಿದಾಯಿನೇ ನಮಃ

ಓಂ ಮಹಾಮಾಯನೇ ನಮಃ

ಓಂ ಮಧುವೈರಿಣೇ ನಮಃ

ಓಂ ಮಹೋರಗಾಯ ನಮಃ

ಓಂ ಭುಜಗೇಶಾಯ ನಮಃ

ಓಂ ಭೂಮರೂಪಾಯ ನಮಃ ||೫೦||

ಓಂ ಭೀಮಕಾಮಾಯ ನಮಃ

ಓಂ ಭಯಾಪಹತೇ ನಮಃ

ಓಂ ಸಕಲರೂಪಾಯ ನಮಃ

ಓಂ ಶುದ್ಧದೇಹಾಯ ನಮಃ

ಓಂ ಶೋಕಹಾರಿಣೇ ನಮಃ

ಓಂ ಶುಭಪ್ರದಾಯ ನಮಃ

ಓಂ ಸಂತಾನದಾಯನೇ ನಮಃ

ಓಂ ಸರ್ಪೇಶಾಯ ನಮಃ

ಓಂ ಸವದಾಯನೇ ನಮಃ

ಓಂ ಸರೀಸೃಪಾಯ ನಮಃ

||೬೦||

ಓಂ ಲಕ್ಷ್ಮೀಕರಾಯ ನಮಃ

ಓಂ ಲಾಭದಾಯಿನೇ ನಮಃ

ಓಂ ಲಲಿತಾಯ ನಮಃ

ಓಂ ಲಕ್ಷ್ಮಣಾಕೃತಯೇ ನಮಃ

ಓಂ ದಯಾರಾಶಯೇ ನಮಃ

ಓಂ ದಾಶರಥಾಯ ನಮಃ

ಓಂ ದಾಶರಥಾಯ ನಮಃ

ಓಂ ದೈತ್ಯಹಂತ್ರೇ ನಮಃ

ಓಂ ದಮಾಶ್ರಮಾಯ ನಮಃ

ಓಂ ರಮ್ಯರೂಪಾಯ ನಮಃ

ಓಂ ರಾಮಭಕ್ತಾಯ ನಮಃ

ಓಂ ರಾಮಭಕ್ತಾಯ ನಮಃ

||೭೦||

ಓಂ ರಣಧೀರಾಯ ನಮಃ

ಓಂ ರತಿಪ್ರದಾಯ ನಮಃ

ಓಂ ಸೌಮಿತ್ರಿಯೇ ನಮಃ

ಓಂ ಸೋಮಸಂಕಾಶಾಯ ನಮಃ

ಓಂ ಸರ್ಪರಾಜಾಯ ನಮಃ

ಓಂ ಸತಾಂಪ್ರಿಯಾಯ ನಮಃ

ಓಂ ಕರ್ಬುರಾಯ ನಮಃ

ಓಂ ಕಾಮಫಲಪ್ರದಾಯ ನಮಃ

ಓಂ ಕಿರೀಟಿನೇ ನಮಃ

ಓಂ ಕಿನ್ನರಾರ್ಚಿತಾಯ ನಮಃ

||೮೦||

ಓಂ ಪಾತಾಳವಾಸಿನೇ ನಮಃ

ಓಂ ಪರಾಯ ನಮಃ

ಓಂ ಫಣಿಮಂಡಲಮಂಡಿತಾಯ ನಮಃ

ಓಂ ಆಶೀವಿಷಾಯ ನಮಃ

ಓಂ ವಿಷಧರಾಯ ನಮಃ

ಓಂ ಭಕ್ತನಿಧಯೇ ನಮಃ

ಓಂ ಭೂಮಿಧಾರಿಣೇ ನಮಃ

ಓಂ ಭವಪ್ರಿಯಾಯ ನಮಃ

ಓಂ ನಾರಾಯಣಾಯ ನಮಃ

ಓಂ ನಾಗರಾಜಾಯ ನಮಃ

ಓಂ ನಾನಾರೂಪಾಯ ನಮಃ

||೯೦||

ಓಂ ಜನಪ್ರಿಯಾಯ ನಮಃ

ಓಂ ಕಾಕೋದರಾಯ ನಮಃ

ಓಂ ಕಾವ್ಯರೂಪಾಯ ನಮಃ

ಓಂ ಕಲ್ಯಾಣಾಯ ನಮಃ

ಓಂ ಕಾಮಿತಾರ್ಥದಾಯಿನೇ ನಮಃ

ಓಂ ಹತಾಸುರಾಯ ನಮಃ

ಓಂ ಹಲ್ಯಹೀನಾಯ ನಮಃ

ಓಂ ಹರ್ಷದಾಯನೇ ನಮಃ

ಓಂ ಹರಭೂಷಣಾಯ ನಮಃ

ಓಂಜಗದಾಧಾರಯೇ ನಮಃ

ಓಂ ಜರಾಹೀನಾಯ ನಮಃ

ಓಂ ಜಾತಿಶೂನ್ಯಾಯ ನಮಃ

ಓಂ ಜಗನ್ಮಯಾಯ ನಮಃ

ಓಂ ವಂಧ್ಯಾತ್ವದೋಷ ಶಮನಾಯ ನಮಃ

ಓಂ ವರಪುತ್ರಫಲಪ್ರದಾಯ ನಮಃ

ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ ||108||

ಇತಿ ಶ್ರೀ ನಾಗರಾಜ ಅಷ್ಟೋತ್ತರ ಸಂಪೂರ್ಣಂ ..

***

ನಾಗರಪಂಚಮಿಹಾಡು


ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |

ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||


ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |

ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾ‌ಎಲ್ಳು || 


ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |

ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು || 


ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |

ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು || 


ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |

ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು || 


ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |

ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ || 


ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|

ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||


ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |

ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ|| 


ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |

ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು || 


ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |

ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ ||

***



1 comment: