SEARCH HERE

Tuesday 1 January 2019

ನವಗ್ರಹ ಪತ್ರೆಗಳು navagraha patre leaves



If you want to know navagraha stotra for all respective days, then please go through the following article-> https://raocollections.blogspot.com/2019/01/navagraha-and-plants-use-and-offer-and.html



ನವಗ್ರಹ ಪತ್ರೆಗಳು











ನವಗ್ರಹ ಪೂಜೆಯಿಂದಾಗುವ ಪ್ರಯೋಜನಗಳು

ನವಗ್ರಹದಾನ: ನವಗ್ರಹಗಳನ್ನು ಸುಪ್ರೀತಗೊಳಿಸುವುದಕ್ಕಾಗಿ ಮಾಡುವ ನವಧಾನ್ಯಗಳ ದಾನ. ಸೂರ್ಯನ ಪ್ರೀತ್ಯರ್ಥ ಗೋದಿ, ಚಂದ್ರನಿಗೆ ಬತ್ತ, ಕುಜನಿಗೆ ತೊಗರಿ, ಬುಧನಿಗೆ ಹೆಸರು, ಗುರುವಿಗೆ ಕಡಲೆ, ಶುಕ್ರನಿಗೆ ಅವರೆ, ಶನಿಗೆ ಎಳ್ಳು, ರಾಹುವಿಗೆ ಉದ್ದು, ಕೇತುವಿಗೆ ಹುರುಳಿ ಇವನ್ನು ದಾನ ಮಾಡಬೇಕೆಂಬ ವಿಧಿಯಿದೆ. ಅದಕ್ಕೆ ನವಗ್ರಹ ದಾನ ಎನ್ನುವರು.

ನವಗ್ರಹಶಾಂತಿ: ಜಪ, ದಾನ, ಹೋಮಗಳಿಂದ ನವಗ್ರಹಗಳನ್ನು ಪ್ರಸನ್ನಗೊಳಿಸುವ ಪುಣ್ಯಕರ್ಮ.

ನವಗ್ರಹ ಹೋಮ: ನವಗ್ರಹಗಳ ಸಂಪ್ರೀತಿಗಾಗಿ ಸೂರ್ಯನಿಗೆ ಅರ್ಕ, ಚಂದ್ರನಿಗೆ ಪಲಾಶ, ಅಂಗಾರಕ(ಕುಜ)ನಿಗೆ ಖದಿರ, ಬುಧನಿಗೆ ಅಪಾಮಾರ್ಗ, ಗುರುವಿಗೆ ಅಶ್ವತ್ಥ, ಶುಕ್ರನಿಗೆ ಉದುಂಬರ, ಶನಿಗೆ ಶಮಿ, ರಾಹುವಿಗೆ ದೂರ್ವಾ, ಕೇತುವಿಗೆ ಕುಶ ಈ ಸಮಿತ್ತುಗಳನ್ನು ಚರು ಮತ್ತು ತುಪ್ಪವನ್ನು ಪ್ರತ್ಯೇಕವಾಗಿ ೮ ಅಥವಾ ೨೮ ಇಲ್ಲವೇ ೧೦೮ ಬಾರಿ ಅಗ್ನಿಯಲ್ಲಿ ಹಾಕುತ್ತ ಆಯಾಯ ಗ್ರಹ ಮಂತ್ರೋಚ್ಚಾರಣ ಪೂರ್ವಕ ಹೋಮ ಮಾಡಬೇಕು. ಅಂತೆಯೇ ಅಧಿದೇವತೆ, ಪ್ರತ್ಯಧಿ ದೇವತೆಗಳಿಗೆ ಪ್ರಧಾನ ದೇವತೆಯ ದಶಮಾಂಶ ಸಂಖ್ಯೆಯಲ್ಲಿಯೂ ಕ್ರತು ಸಂರಕ್ಷಣ ದೇವತೆಗಳಿಗೆ ಇಪ್ಪತ್ತನೆಯ ಒಂದು ಅಂಶ ಸಂಖ್ಯೆಯಲ್ಲಿಯೂ ಹೋಮ ಮಾಡಬೇಕು. ಈ ಕ್ರಮದಲ್ಲಿ ಮಾಡುವ ನವಗ್ರಹ ಹೋಮದಿಂದ ಗ್ರಹಜನ್ಯ ದೋಷಗಳು ಹೋಗುತ್ತವೆ.


ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ

ಬುದಾಯಚ

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ

ನಮಃ

ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು

ಹಚ್ಚುವುದರಿಂದ ನವಗ್ರಹ ಶಾಂತಿಯ

ಫಲಪ್ರಾಪ್ತಿಯಾಗುತ್ತದೆ.
******

ನವಗ್ರಗಳ ಪದ ನಿಷ್ಪತ್ತಿ

ಆದಿತ್ಯ : ಇದು ಅಕಾರಾಂತ ಪುಲ್ಲಿಂಗ ಶಬ್ಧ. ಆದಿತೇ ಅಪತ್ಯಂ ಪುಮಾನ್ ಇತಿ ಆದಿತ್ಯಃ ಎಂದರೆ ಆದಿತಿ (ಕಶ್ಯಪ ಮಹರ್ಷಿಗಳ ಪತ್ನಿ) ಯ ಪುತ್ರನಾಗಿರುವುದರಿಂದ ಆದಿತ್ಯ

ಚಂದ್ರ : ಚಂದಯತೀತಿ ಚಂದ್ರಃ ಚದಿ- ಆಹ್ಲಾದನೇ ಎಂದರೆ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುವುದರಿಂದ ಚಂದ್ರ

ಅಂಗಾರಕ: ಅಂಗಾನಿ ಅರಯತಿ ಪೀಡಯತೀತಿ ಅಂಗಾರಕಃ. ಅರ ಮೂಲಧಾತು. ಅಂಗಾಂಗಳನ್ನು ಪೀಡಿಸುವುದರಿಂದ ಅಂಗಾರಕ

ಬುಧ : ಬುಧ್ಯತೇ ಸರ್ವಂ ಅನೇನ ಇತಿ ಬುಧಃ, ಬುಧ-ಅವಗಮನೇ. ಯಾರಿಂದ ಸರ್ವವೂ ತಿಳಿಯಲ್ಪಡುತ್ತದೆಯೋ ಅವನೇ ಬುಧ

ಬೃಹಸ್ಪತಿ : ಬೃಹತಾಂ ದೇವಾನಾಂ ವಾ ವೇದ ಮಂತ್ರಾಣಾಂ ಪತಿಃ ದೇವತೆಗಳೆಲ್ಲರಿಗೂ ಮಂತ್ರಗಳಿಗೂ ಅಧಿಪತಿಯಾಗಿದ್ದರಿಂದ ಬೃಹಸ್ಪತಿ

ಭೃಗು(ಶುಕ್ರ) : ರುದ್ರಸ್ಯ ಶುಕ್ರ ದ್ವಾರೇಣ ನಿರ್ಯಾತತ್ವಾನ್ ವಾ ಶುಕ್ಲ ವರ್ಣತ್ವಾತ್ ಇತಿ ಶುಕ್ರಃ ರುದ್ರ ರೇತಸ್ಸಿನ ಜೊತೆಯಲ್ಲಿಯೇ ಹುಟ್ಟಿದವನಾಗಿದ್ದರಿಂದ ಶುಕ್ರ

ಶನೈಃ ಮಂದಂ ಚರತಿ ಇತಿ ಶನೈಶ್ಛರಃ ಚರ ಗತಿ ಭಕ್ಷಣಯೋ ಎಂದರೆ ಮೆಲ್ಲಗೆ ಸಂಚರಿವವನು ಎಂದರ್ಥ

ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ?

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.

ರವಿಯ ಅನುಗ್ರಹ  : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ. 

ಚಂದ್ರನ ಅನುಗ್ರಹ  : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.

ಕುಜನ ಅನುಗ್ರಹ  : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು. 

ಬುಧನ ಅನುಗ್ರಹ  : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು. 

ಗುರುವಿನ ಅನುಗ್ರಹ  : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. 

ಶುಕ್ರನ ಅನುಗ್ರಹ  : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು. 

ಶನಿಯ ಅನುಗ್ರಹ    : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. 

ರಾಹುವಿನ ಅನುಗ್ರಹ  : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. 


ಕೇತುವಿನ ಅನುಗ್ರಹ  : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
******
ಮಾನವರ ದೇಹದಲ್ಲಿ ನವಗ್ರಹಗಳ ಪಾತ್ರ
ಮಾನವನ ಆಯುಸ್ಸು 120 ವರ್ಷ.ಇದನ್ನು

ಕೇತು 7 ವರ್ಷ,
ಶುಕ್ರ 20 ವರ್ಷ,.
ರವಿ 6 ವರ್ಷ,
ಚಂದ್ರ 10 ವರ್ಷ,
ಕುಜ 7 ವರ್ಷ,
ರಾಹು 18 ವರ್ಷ,
ಗುರು 16 ವರ್ಷ,
ಶನಿ 19 ವರ್ಷ,
ಬುಧ 17ವರ್ಷ, ಅಂದರೆ-

7+20+6+10+7+18+16+19+17

= 120 ವರ್ಷಗಳಾಗಿ ವಿಂಗಡನೆ ಮಾಡಲಾಗಿದೆ.

ಇಲ್ಲಿ ತೋರಿಸಿದ ಗ್ರಹಗಳ ಬದಲಾವಣೆಯ ಆಧಾರದಲ್ಲಿ ಮಾನವನ ಬೆಳವಣಿಗೆಗಳು ವೆತ್ಯಾಸವಾಗುತ್ತದೆ. ಆದಿತ್ಯಾದಿ ನವಗ್ರಹರ ರಷ್ಮಿ ಶಕ್ತಿಗಳೇ ಮಾನವಾದಿ ಜೀವರಾಶಿಗಳ ಒಳಗಿರುವುದು. 

ರವಿಯು ಶರೀರವನ್ನು ಸೂಚಿಸುತ್ತಾನೆ. 

ಪರಾಕ್ರಮಾದಿ ಗುಣಗಳನ್ನು ರವಿ ಕುಜರು ಶರೀರದೊಳಗೆ ಸೃಷ್ಟಿಸುತ್ತಾರೆ. 

ತಾಳ್ಮೆ,ಸೌಂದರ್ಯಗಳಿಗೆ ಚಂದ್ರ ಶುಕ್ರರು ಕಾರಣರು. 

ಮನೋಬಲಕ್ಕೆ ಚಂದ್ರನೇ ಕಾರಣ. ಜ್ಞಾನವನ್ನು ನೀಡುವವನು ಗುರುವಾದರೆ, ಬುದ್ಧಿ ಚತುರತೆಗಳಿಗೆ ಕಾರಣನು ಬುಧ.ಶನಿಯು ದೇಹದ ಎಲುಬು (ಕಾಂಕ್ರಿಟ್ ಕಂಬದೊಳಗಿನ ಕಬ್ಬಿಣದ ಸರಳುಗಳಂತೆ) ಕಾರಕನು.ಯಾವಾಗ ಎಲುಬುಗಳು ಕಳಚುತ್ತದೋ ಆಗ ಮೃತ್ಯುವಾಗುತ್ತದೆ. 

ಅಂದರೆ ಶನಿಯು ಮರಣ ಕಾರಕನೂ ಆಗುತ್ತಾನೆ. 

ಅಲ್ಲದೆ ಪೂರ್ವಾಪರಗಳ ಮುತ್ಸದಿತನವನ್ನೂ ನೀಡುವವನು ಶನಿ. ಇನ್ನು ರಾಹು ಕೇತುಗಳು ಸಂಕರ್ಷಣಾ ಶಕ್ತಿಗಳು. ಅಂದರೆ ಉತ್ಸಾಹ ಮತ್ತು ನಿರುತ್ಸಾಹಗಳನ್ನು ನೀಡುವವರು. ಉದಾ: ಜಾತಕದಲ್ಲಿ ರವಿ ಕುಜರು ನಿರ್ಬಲರಾಗಿದ್ದು ರಾಹು ಪರಾಕ್ರಮ ಭಾಗದಲ್ಲಿ ಬಲಿಷ್ಟನಾಗಿದ್ದರೆ ಅತಿಯಾದ ಪರಾಕ್ರಮದ ಉತ್ಸಾಹ ಉಂಟಾಗುತ್ತದೆ. ಆದರೆ ಸಾಧಿಸಲು ಅಸಾಧ್ಯವಾದಾಗ ತಕ್ಷಣ ಸಂಪೂರ್ಣ ನಿರುತ್ಸಾಹಿಯಾಗುತ್ತಾನೆ. 

ಇಲ್ಲಿ ಮುತ್ಸದಿ ಶನಿಯೂ ದುರ್ಬಲನಾಗಿದ್ದರೆ ಪರಾಕ್ರಮ ಮಾಡಲು ಹೋಗಿ ಕೈಕಾಲು ಮುರಿದುಕೊಳ್ಳುವುದೋ ಅಥವಾ ಇನ್ನಾವುದೋ ಅನಾಹುತ ವಾಗಬಹುದು.

ಅದಕ್ಕಾಗಿ ಜ್ಯೋತಿಷ್ಯರಿಂದ ಸಲಹೆ ಪಡೆಯಬೇಕು ಎನ್ನುವುದು. ಜ್ಯೋತಿಷ್ಯರಾದವರಿಗೆ ಈ ಪರಿಜ್ಞಾನ ಇರಲೇ ಬೇಕು. 

ಹೀಗೇ ಒಂದೊಂದು ಗ್ರಹಗಳು ಒಂದೊಂದು ಬಲವನ್ನು ನೀಡುತ್ತಾರೆ. ಈ ಗ್ರಹರ ಸಂಧಿಕಾಲದಲ್ಲಿ ಆಸಕ್ತಿಗಳ ಬದಲಾವಣೆಯೂ ಆಗುತ್ತದೆ. ಇಲ್ಲಿ ಶುಕ್ರಾದಿತ್ಯ, ಕುಜ ರಾಹು, ರಾಹು ಬೃಹಸ್ಪತಿ ಸಂಧಿಗಳ ಕಾಲ ಅಪಾಯಕಾರಿ.ಇದು ಮನುಷ್ಯನ mentality ಬದಲಾಗುವ ಕಾಲವಿದು. ಬೇರೆ ಗ್ರಹರಲ್ಲೂ ಇದೇರೀತಿ ಇದ್ದರೂ ಅದು ಅಪಾಯ ಕಾರಿಯಾಗುವುದಿಲ್ಲ. ಹಾಗಾಗಿ ಇದಕ್ಕೆ ಪುರಾತನರು ಸಂಧಿ ಶಾಂತಿ ಹೋಮ ಪರಿಹಾರಗಳನ್ನು ತಿಳಿಸಿದ್ದಾರೆ. ಇನ್ನು ಆಹಾರ ನಿಯಮಗಳಿಂದಲೂ ಸಾಧ್ಯವಿದ್ದರೆ ನಿಯಂತ್ರಿಸಬಹುದು. ಯಾಕೆಂದರೆ ಗ್ರಹರ ರಷ್ಮಿಗಳು vitamin, protein ಗಳಿಗೂ ಕಾರಕವಾಗುತ್ತದೆ. ಯಾವಾಗ ಈ ಪೋಷಕಾಂಶಗಳ ಕೊರತೆಗಳುಂಟಾಗುತ್ತದೋ ಆಗ ರೋಗೋತ್ಪತ್ತಿ, ಮರಣಾದಿಗಳು ಸಂಭವಿಸುತ್ತದೆ. ಜಗತ್ತಿನ ಪ್ರತಿಯೊಂದು ನಾವು ತಿನ್ನುವ ಆಹಾರಗಳಿಗೆ ಗ್ರಹರ ಕಾರಕತ್ವ ಇರುತ್ತದೆ. ಉದಾ: ಕೆಲವರು ಹೇಳುವ ಮಾತುಗಳನ್ನು ನೀವು ಕೇಳಿರಬಹುದು. ' ಮೊದಲು ನನಗೆ ಸಿಹಿ ಎಂದರೆ ಪಂಚಪ್ರಾಣ.ಈಗ ಸಿಹಿಯೇ ಇಷ್ಟವಿಲ್ಲ. ಈಗ ಖಾರವೇ ಇಷ್ಟ, ಆ ತರಕಾರಿ ನನಗೆ ತುಂಬಾ ಇಷ್ಟವಿತ್ತು ಈಗ ಅದರ ವಾಸನೆ ಬಂದರೂ ಇಷ್ಟವಾಗದು ಎಂಬಿತ್ಯಾದಿ ವಿಚಾರಗಳನ್ನು ಹೇಳುತ್ತಾರೆ.ಇದೆಲ್ಲಾ ದೇಹದ ಬೆಳವಣಿಗೆಯ ಫಲಗಳು.ಅಂದರೆ ದಶಾ ಕಾಲಗಳ ಫಲ. ಹಾಗಾಗಿ ದೇಹದ ಆಯುಸ್ಸು 120 ವರ್ಷಗಳನ್ನು ನವಗ್ರಹರು ಸೂಚಿಸುತ್ತಾರೆ.ಇದನ್ನು ಈ ರೀತಿ ವಿಂಗಡಿಸಲಾಗಿದೆ. ಒಟ್ಟಿನಲ್ಲಿ 'ಶರೀರ ಮಾಧ್ಯಂ ಖಲು ಧರ್ಮ ಸಾಧನಂ' ಎಂಬಂತೆ ಸಕಲ ಕರ್ಮಗಳಿಗೂ ಶರೀರದ ಸೌಖ್ಯವೇ ಅಗತ್ಯ.ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ.
ದೇಹದ ರಕ್ಷಣೆಯಿಂದ ದೇಶವನ್ನು ಕಟ್ಟಬಹುದು.
ದೇಶದ ಸ್ವಾಸ್ಥ್ಯವು ದೇಹದ ಸ್ವಾಸ್ಥ್ಯದ ಆಧಾರದಲ್ಲಿದೆ.
*******
ಈ ಅಭ್ಯಾಸಗಳು ನವಗ್ರಹಗಳ ಅನುಗ್ರಹಕ್ಕೆ ಕಾರಣ

ನಿಮ್ಮ ಈ ಒಂಭತ್ತು ಅಭ್ಯಾಸಗಳಿಂದ, ನವಗ್ರಹಗಳು ನಿಮ್ಮ ಜೀವನ ಮತ್ತು ನಿಮ್ಮ ಮನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತವೆ.

ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುತ್ತೇವೆ.ಅವುಗಳಿಗೆ ಪರಿಹಾರವೆಂದರೆ:--

೧. ನಮ್ಮ ಮನೆಗಳಿಗೆ ಯಾರಾದರೂ ಅತಿಥಿಗಳು-ಅಭ್ಯಾಗತರು ಬಂದಾಗ, ಅವರು ಅತಿಥಿಗಳಿರಲಿ ಅಥವಾ ಕೆಲಸದ ನೌಕರರು/ಆಳುಗಳಿರಲಿ ಅವರಿಗೆ ಕುಡಿಯಲು ಲೋಟದಲ್ಲಿ ಶುಧ್ಧ ನೀರನ್ನು/ಹಾಲನ್ನು ಕೊಡಬೇಕು.

ಹೀಗೆ ಶುಧ್ಧ ನೀರನ್ನು ಕುಡಿಯಲು ಕೊಟ್ಟರೆ ರಾಹುಗ್ರಹದಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಜೀವನದಲ್ಲಿ ಯಾವುದೇ ತೊಂದರೆಗಳು/ಅಘಾತಕರ ಘಟನೆಗಳು ಸಂಭವಿಸುವುದಿಲ್ಲ.

೨. ನಿಮಗೆ ಎಲ್ಲಂದರೆ ಅಲ್ಲಿ ಉಗುಳುವ ಅಭ್ಯಾಸವಿದ್ದರೆ, ನಿಮಗೆ ಅಕಸ್ಮಾತ್ ಹೆಸರು ಮತ್ತು ಗೌರವ ಬಂದಲ್ಲಿ, ಅದು ಬಹಳ ದಿನ ಇರಲಾರದು. ಎಲ್ಲಂದರೆ ಅಲ್ಲಿ ಉಗುಳಿದರೆ ಬುಧಗ್ರಹದ ಅವಕೃಪೆ.

ಉಗುಳುವುದನ್ನು ಕೈ ತೊಳೆಯುವ ಬಚ್ಚಲಿನಲ್ಲಿ(wash basin) ಮಾತ್ರ ಉಗಳಬೇಕು. ಆಗ ಮಾತ್ರ ನಿಮ್ಮ ಹೆಸರು ಮತ್ತು ಗೌರವ ವೃಧ್ಧಿಯಾಗುತ್ತವೆ.

೩. ಕೆಲವರಿಗೆ ತಿಂಡಿ, ತಿನಿಸು, ಊಟ ಮಾಡಿದ ತಟ್ಟೆಗಳನ್ನು /ಪಾತ್ರೆಗಳನ್ನು ಹಾಗೆ ಇಡುವ ಅಭ್ಯಾಸ ಇರುತ್ತದೆ. ಅಂತಹವರಿಗೆ ಜೀವನದಲ್ಲಿ ಗೆಲವು ಖಾಯಂ ಆಗಿ ಸಿಗುವುದಿಲ್ಲ. ಅಂಥಹವರು ನಿರಂತರ ಹೋರಾಟ ಮಾಡುತ್ತಿರಬೇಕು ಹಾಗೂ ಆದರೂ ಅವರಿಗೆ ಒಳ್ಳೆಯ ಹೆಸರು ಸಿಗುವುದಿಲ್ಲ.

ನೀವು ಉಪಯೋಗಿಸಿದ ತಟ್ಟೆ/ಲೋಟ/ಪಾತ್ರೆಗಳನ್ನು (ಸಾಧ್ಯವಾದಷ್ಟು) ಬೇಗ ತೊಳೆದು ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.

ಹೀಗೆ ಮಾಡುವುದರಿಂದ ಚಂದ್ರ ಮತ್ತು ಶನಿ ಗ್ರಹಗಳನ್ನು ಗೌರವಿಸಿದಂತಾಗಿ ಅವರುಗಳು ಸಂತೃಪ್ತರಾಗುತ್ತಾರೆ. 

ಇದರಿಂದ ನಿಮಗೆ ಮನಃಶಾಂತಿ ಸಿಗುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆ-ತಡೆಗಳಿರುವುದಿಲ್ಲ.

೪. ನಮ್ಮ ಮನೆಗಳಲ್ಲಿ ಇರುವ ಗಿಡಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. 

ಅವುಗಳಿಗೆ ನಮ್ಮ ಪ್ರೀತಿ ಮತ್ತು ಆರೈಕೆ ಅವಶ್ಯವಿದೆ.

ನಿತ್ಯ ಮುಂಜಾನೆ ಮತ್ತು ಸಂಜೆ ಅವುಗಳಿಗೆ ನೀರು ಉಣಿಸಿದ್ದಲ್ಲಿ, ಗುರು, ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಆರಾಧಿಸಿ ಅವುಗಳ ಅನುಗ್ರಹ ಪಡೆದಂತೆ ಆಗುತ್ತದೆ.

ಇದರಿಂದ ನಮಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿ ಬರುತ್ದದೆ.

ದಿನ ನಿತ್ಯ ಮರಗಿಡಗಳಿಗೆ ನೀರು ಉಣಿಸುವವರಿಗೆ ಮಾನಸಿಕ ಸಮಸ್ಯೆ/ಖಿನ್ನತೆ, ಮಾನಸಿಕ ಒತ್ತಡಗಳು ಎಂದೆಂದಿಗೂ ಆಗುವುದಿಲ್ಲ..!.

೫. ಯಾರು ತಮ್ಮ ಪಾದರಕ್ಷೆ /ಚಪ್ಪಲಿ, ಕಾಲ ಕವಚ (shoes), ಕೈ ಕವಚಗಳು ಮತ್ತು ಕಾಲು ಚೀಲಗಳನ್ನು ಮನೆಗೆ ಬಂದಾಗ ಎಲ್ಲೆಂದರೆ ಅಲ್ಲಿ ಬಿಟ್ಟಿರುತ್ತಾರೆಯೋ/ಎಸೆದಿರುತ್ತಾರೆಯೋ ಅವರಿಗೆ ಅವರ ಶತ್ರುಗಳು ಹೆಚ್ಚಿನ ತೊಂದರೆ ಕೊಡುತ್ತಾರೆ‌. ಅವುಗಳನ್ನು ಮನೆಗೆ ಬಂದಾಗ ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇಟ್ಟಲ್ಲಿ ಗುರುವು ಪ್ರಸನ್ನನಾಗಿ ಶತ್ರುಗಳು ದೂರವಾಗಿ ಸಮಾಜದಲ್ಲಿ ನಿಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆ.

೬. ಹಾಸಿಗೆಯಿಂದ ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆ ಸ್ವಚ್ಚವಾಗಿ ಇಟ್ಟು ಕೊಳ್ಳ ಬೇಕು, ಹಾಗೆ ಇಡದೇ, ನೀವು ಎದ್ದ ನಂತರ ಹಾಸಿಗೆಯ ಹೊದಿಕೆ, ನಿಮ್ಮ ಹೊದಿಕೆ, ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮನ್ನು ಶನಿ ಮತ್ತು ರಾಹುಗಳು ಕಾಡುತ್ತವೆ. ನೀವು ನಿತ್ಯ ಧರಿಸುವ ಬಟ್ಟೆಗಳು ಸ್ವಚ್ಚ ಇಲ್ಲದಿದ್ದರೆ ನಿಮ್ಮ ನಿತ್ಯದ ಕೆಲಸ ಕಾರ್ಯಗಳು ಎಂದೆಂದಿಗೂ ಸುಗಮವಾಗಿ ನಡೆನಯುವುದಿಲ್ಲ..!

ನೀವೂ ಮತ್ತು ನಿಮ್ಮ ಸುತ್ತಲಿನವರೂ ಸಂತೋಷವಾಗಿರುವುದಿಲ್ಲ.

ಇದನ್ನು ತಡೆಯಲು ನೀವು ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆಯನ್ನು ಸ್ವಚ್ಚವಾಗಿ ಇಟ್ಟುಕೊಂಡರೆ ನಿಮ್ಮ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ.

೭. ನಾವು ಯಾವಾಗಲೂ ನಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸತ್ಯ ಸಂಗತಿಯೆಂದರೆ ನಾವುಗಳು ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಕೈ ಕಾಲುಗಳನ್ನು ಮತ್ತು ಪಾದಗಳನ್ನು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಗೆ ಹೊರಗಿನಿಂದ ಬಂದಾಗ ಮುಖ, ಕೈ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ( ಸಾಧ್ಯವಾದರೆ ತೊಳೆದುಕೊಂಡೆ ಮನೆಯ ಒಳಗೆ ಪ್ರವೇಶಿಸಿದರೆ ಉತ್ತಮ )

ಇದರಿಂದ ನಿಮಗೆ ಮನಃಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಹಾಗೂ ಅನವಶ್ಯಕ ಸಿಟ್ಟು ಹಾಗೂ ಮನಸ್ಸಿಗೆ ಕಿರಿ-ಕಿರಿ ಆಗುವುದಿಲ್ಲ ಹಾಗೂ ದಿನಃ ಪೂರ್ತಿ ಸಂತೋಷವಾಗಿರುತ್ತೀರ.

ಇನ್ನಾದರೂ ಈ ಬಗ್ಗೆ ವ್ಯವಸ್ಥೆ ಮಾಡಿಕೊಂಡು, ಅದನ್ನು ಪಾಲಿಸಿ ಜೀವನದಲ್ಲಿ ಆಗುವ ಆಧ್ಬುತ ಬದಲಾವಣೆಗಳನ್ನು ಗಮನಿಸಿರಿ..!

೮. ನೀವು ಪ್ರತಿದಿನ ಮನೆಗೆ ಬರುವಾಗ ಮನೆಯಲ್ಲಿ ಉಪಯೋಗಿಸುವ ಯಾವುದಾದರೂ ವಸ್ತುವನ್ನು ಹೂವು/ಹಣ್ಣು/ತರಕಾರಿ ಕೈಯಲ್ಲಿ ಹಿಡಿದು ಮನೆಗೆ ತರಬೇಕು. 

ಹಾಗೆ ಮಾಡಿದರೆ ಅಂತಹ ಮನೆಯಲ್ಲಿ, ಮನೆಯ ಲಕ್ಷ್ಮಿಯು (ಸಂಪತ್ತಿನ ಅಧಿಪತಿ) ಮತ್ತು ಶುಕ್ರನು ಮನೆಯಲ್ಲಿ ಖಾಯಂ ಆಗಿ ನೆಲಸುತ್ತಾರೆ.

೯. ನೀವು ಉಪಹಾರ/ಊಟ ಮಾಡಿದ ತಟ್ಟೆಯಲ್ಲಿ ಯಾವತ್ತೂ ಆಹಾರವನ್ನು ಉಳಿಸಬೇಡಿರಿ.


ಹಾಗೆ ಉಳಿಸಿದರೆ ನವಗ್ರಹಗಳೆಲ್ಲವೂ ನಿಮಗೆ ವಿರೋಧವಾಗಿ ನೀವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
********







No comments:

Post a Comment