SEARCH HERE

Tuesday 1 January 2019

ಅಶ್ವಿನಿ ಕುಮಾರರು ashwini Kumararu



ಅಶ್ವಿನಿ ಕುಮಾರರು ಎಂದೊಡನೆ ನಮ್ಮ ಮನಸ್ಸಿನಲ್ಲಿ ಥಟ್ ಅಂತ ಮೂಡುವ ಚಿತ್ರ ಪಾಂಡವರ ಕಿರಿಯ ಸಹೋದರು, ಮಾದ್ರಿಯ ಅವಳಿ ಮಕ್ಕಳಾದ "ನಕುಲ" ಮತ್ತು "ಸಹದೇವರು"


|ಅಶ್ವಿನಿ ದೇವತೆಗಳು ಯಾರು?|

ಸೂರ್ಯದೇವ ಹಾಗೂ ಪತ್ನಿ ಸರಣ್ಯುವಿನ (ಸಂಜ್ಞ್ಯಾ) ಅವಳಿ ಪುತ್ರರು ಅಶ್ವಿನಿ ಕುಮಾರರು.

ಮಾನವನ ದೇಹ ಮತ್ತು ಅಶ್ವದ(ಕುದುರೆ)ಮುಖ ಹೊಂದಿದ್ದವರು ಈ ಅಶ್ವಿನಿ ಕುಮಾರರು.

|ಅಶ್ವದ ಮುಖ ಬಂದದ್ದು ಏಕೆ?|


ಪತಿಯಾದ ಸೂರ್ಯನ ಶಾಖವನ್ನು ಸಹಿಸಲಾರದ ಸರಣ್ಯು ಹಿಮಾಲಯದ ಪರ್ವತಗಳತ್ತ ತೆರಳುತ್ತಾಳೆ. ಅಲ್ಲಿ ಯಾರಿಗೂ ಗುರುತು ಸಿಗದಹಾಗೆ ಕುದುರೆಯ ಆಕಾರ ಹೊಂದುತ್ತಾಳೆ.

ಕೆಲವು ದಿನಗಳಾದರೂ ಪತ್ನಿಯು ಕಾಣಿಸದಿರಲು, ಅವಳನ್ನು ಹುಡುಕಲು ತಾನೇ ಹೊರಟ. ಹಿಮಾಲಯದ ಕಾಡಿನಲ್ಲಿ ಕುದುರೆಯ ರೂಪದಲ್ಲಿದ್ದ ಪತ್ನಿಯನ್ನು ಗುರುತಿಸಿ, ತಾನೂ ಕುದುರೆಯ ರೂಪ ಪಡೆದುಕೊಳ್ಳುತ್ತಾನೆ. ನಂತರ, ಅವರಿಬ್ಬರ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ಕುಮಾರರು.
ಈ ಅವಳಿ ಮಕ್ಕಳಲ್ಲಿ ಮೊದಲು ಜನಿಸಿದವನು "ನಸತ್ಯ" ನಂತರ ಜನಿಸಿದವನು "ದರ್ಸ".
'ನಸತ್ಯ' ಆಯುರ್ವೇದ ನಿಪುಣನಾದರೆ, 'ದರ್ಸ' ಔಷಧೀಯ ಪಂಡಿತ.
ಮನುಕುಲಕ್ಕೆ ಆರೋಗ್ಯದ ತೊಂದರೆಗಳು ಬಂದಾಗ ಕುದುರೆ ಓಡುವಂತೆ ನಾಗಾಲೋಟದಲ್ಲಿ ಜೊತೆಯಾಗಿ ತೆರಳಿ, ತೊಂದರೆಗಳನ್ನು ಪರಿಹರಿಸುತ್ತಿದ್ದರು.

|ನಕುಲ ಸಹದೇವರು ಹೇಗೆ ಅಶ್ವಿನಿ ಕುಮಾರರು ಆದರು?|
ಅವಿವಾಹಿತಳಾದ ಕುಂತಿಗೆ ದೂರ್ವಾಸ ಮುನಿಗಳು ಮಂತ್ರ ಶಕ್ತಿಯನ್ನು ನೀಡುತ್ತಾರೆ. ಆ ಮಂತ್ರ ಶಕ್ತಿಯಿಂದ ನೀನು ಯಾವ ದೇವತೆಯನ್ನು ಕುರಿತು ಆವಾನೆ ಮಾಡುತ್ತೀಯೋ ಆಯಾ ದೇವತೆಗಳು ಪ್ರಸನ್ನವಾಗಿ ಒಬ್ಬ ಪುತ್ರನ ಜನನವಾಗುವುದಾಗಿ ಅನುಗ್ರಹಿಸುತ್ತಾರೆ.
ಅವಿವಾಹಿತಳಾ ಕುಂತಿ ಆ ಮಂತ್ರದ ಶಕ್ತಿಯನ್ನು ಪರೀಕ್ಷಿಸಲು ಮೊದಲು...
»»ಸೂರ್ಯದೇವನನ್ನು ಆಹ್ವಾನಿಸಿದಾಗ ಜನಿಸಿದವನು ಕರ್ಣ.
»»ವಿವಾಹದ ನಂತರ ಮಂತ್ರ ಪ್ರಯೋಗದಿಂದ ಯಮನನ್ನು ಆಹ್ವಾನಿಸಿದಾಗ ಜನಿಸಿದವನು 'ಯುಧಿಷ್ಟಿರ' (ಧರ್ಮರಾಯ).
»»ವಾಯುವನ್ನು ಆಹ್ವಾನಿಸಿದಾಗ ಜನಿಸಿದವನು 'ಭೀಮ'.
»»ಇಂದ್ರನನ್ನು ಆಹ್ವಾನಿಸಿದಾಗ ಜನಿಸಿದವನು 'ಅರ್ಜುನ'.
»»ಮಾದ್ರಿಯ ಬೇಡಿಕೆಯಂತೆ, ಕುಂತಿಯು ಅಶ್ವಿನಿ ದೇವತೆಗಳನ್ನು ಆಹ್ವಾನಿಸಿದಾಗ ಜನಿಸಿದವರು ನಕುಲ, ಸಹದೇವರು. 
ಹಾಗಾಗಿ ನಕುಲ ಸಹದೇವರು ಅಶ್ವಿನಿ ಕುಮರರಾದರು.

ಇಲ್ಲಿ ಮಾದ್ರಿಯ ಚುರುಕು ಬುದ್ದಿವಂತಿಕೆಯನ್ನು ಮೆಚ್ಚಬೇಕು.! ದೂರ್ವಾಸರ ಮಂತ್ರಶಕ್ತಿಯು ಕೇವಲ ಐದುಬಾರಿ ಮಾತ್ರ ಬಳಸಲು ಸಾಧ್ಯ. ಈಗಾಗಲೇ ಕುಂತಿಯು, ಕರ್ಣ, ಯುಧಿಷ್ಟಿರ, ಭೀಮ, ಮತ್ತು ಅರ್ಜುನರನ್ನು ಪಡೆಯಲು ನಾಲ್ಕು ಬಾರಿ ಮಂತ್ರ ಶಕ್ತಿಯನ್ನು ಪ್ರಯೋಗಿಸಿದ್ದಾಗಿತ್ತು. ಉಳಿದದ್ದು‌ ಒಂದುಬಾರಿ ಮಾತ್ರ. ಹಾಗಾಗಿ ಮಾದ್ರಿಯು ಅಶ್ವಿನಿ ದೇವತೆಗಳನ್ನು ಆಹ್ವಾನಿಸಲು ಕುಂತಿಯಲ್ಲಿ ಬೇಡುತ್ತಾಳೆ. ಒಂದೇ ಕಲ್ಲಿಂದ ಎರಡು ಹಕ್ಕಿಗಳನ್ನು ಹೊಡೆದ ಹಾಗೆ, ಇಬ್ಬರು ಪುತ್ರರನ್ನು ಪಡೆದಳು ಎಂಬುದು ಗಮನಾರ್ಹ.
ಸಂಜೆ ಹೊತ್ತಲ್ಲಿ ಮನೇಲಿ ದೀಪ ಹಚ್ಚಿದ ಮೇಲೆ ಕೆಟ್ಟ ವಿಚಾರಗಳು, ಕೆಟ್ಟ ಮಾತುಗಳು ಆಲೋಚನೆಗಳು, ಮಾಡ್ಬಾರ್ದಂತೆ.
ಅಶ್ವಿನಿ ದೇವತೆಗಳು "ತಥಾಸ್ತು" ಅಂತಾ ಇರ್ತಾರಂತೆ, ಹಾಗಂತ ಹಿರಿಯರು ಹೇಳಿದ್ದು.
ಇವರನ್ನು ‌"ತಥಾಸ್ತು ದೇವತೆಗಳು" ಅಂತಲೂ ಕರೆಯುತ್ತಾರೆ.
*********


No comments:

Post a Comment