ಬೂತರಾಜರ ಯಂತ್ರ, ಬೇಕಾದವರು ಪ್ರಿಂಟ್ ಹಾಕಿಸಿಕೊಳ್ಳಿ, ಮೂಲ ಪ್ರತಿಯಿಂದ ಸ್ಕ್ಯಾನ್ ಮಾಡಲಾಗಿದೆ. ಭಾನುವಾರ ಶುಕ್ರವಾರ ಮಂಗಳವಾರ ಪೂಜೆ ಮಾಡಿ ದ್ವಾರ ಬಾಗಿಲಿಗೆ ಹಾಕಿ ಸಮಸ್ತ ದುಷ್ಟ ಬಾಧೆ ನಿವಾರಣೆಗೆ ತುಂಬಾ ಒಳ್ಳೆಯದು.
ಭೂತರಾಜರು
ಭೂತರಾಜರು ಯಾರು ? ಆವರ ಪರಿಚಯ ಏನು ? ದಕ್ಷಿಣ ಕನ್ನಡ ಜಿಲ್ಲೆಯ ನಾರಳ ಗ್ರಾಮದಲ್ಲಿ ಜನಿಸಿದ ನಾರಾಯಣಾಚಾರ್ಯ ಎಂಬುವರು ಶ್ರೀವಾದಿರಾಜರ ಜೊತೆಗೆ ಆವರ ಮಠದಲ್ಲಿ ಇದ್ದರು. ಒಮ್ಮೆ ಪ್ರಸಂಗವಶಾತ್ ಆಚಾರದ ವಿಷಯದಲ್ಲಿ ಗುರುಗಳನ್ನು ಹಿಂಬಾಲಿಸಿ ಪರೀಕ್ಷಿಸಲು ಹೋರಟ ನಾರಾಯನಾಚಾರ್ಯರ ಜಿಜ್ಞಾಸೆ , ಗುರುಗಳಾದ ಶ್ರೀ ವಾದಿರಾಜರಿಗೆ ಗೊತ್ತಾಯಿತು. ಆ ಪ್ರಸಂಗ ಯಾವುದು ಅಂದರೆ. ಒಮ್ಮೆ ಸಾಧನ ದ್ವಾದಸಿ ದಿವಸ ವ್ಯಾಸರಾಜರು ಮತ್ತು ಇತರರು ವಾದಿರಾಜರಿಗಾಗಿ ಕಾದಿದ್ದರೆ. ಅಂದು ರಾಜರು ಧ್ಯಾನಾಸಕ್ತರಾಗಿ ಇರುವದರಿಂದ ಸ್ವಲ್ಪ ತಡವಾಯಿತು. ಅವರು ಮರುಕ್ಷಣದಲ್ಲಿ ಸ್ನಾನಮಾಡಿ ಪೂಜೆಯನ್ನು ಮಾಡಲು ಕಾಲಾವಕಾಶ ಇಲ್ಲಿದ್ದರಿಂದ ಪಾರಣಿ ಮುಗಿಸಿದರು. ಆದಮೇಲೆ, ಅವರು ಕಾಡಿನಲ್ಲಿ ದೂರ ಯಾರು ಇಲ್ಲದ ಪ್ರದೇಶದಲ್ಲಿ ಹೋಗಿ ತಮ್ಮ ಯೋಗಶಕ್ತಿಯಿನ್ದ ಎಲ್ಲ ಆಹಾರವನ್ನು ಹೊರಗೆ ತೆಗೆದು, ಬಾಲೆದೆಲೆಯ ಮೇಲೆ ಇಟ್ಟರು. ಆದಮೇಲೆ ಸ್ನಾನ ದೇವರಪೂಜೆ ನದಿಯಲ್ಲಿ ಆಚರಿಸಿದರು. ಇದನ್ನು ದೂರದಿಂದ ನಾರಾಯಣಾಚಾರ್ಯರು ಗಿಡದ ಹಿಂದಿನಿಂದ ನೋಡುತ್ತಿದ್ದರು. ಪರೀಕ್ಷಾರ್ಥವಾಗಿ ಬಂದ ನಾರಾಯಣಾಚರ್ಯರಿಗೆ ಬ್ರಹ್ಮರಾಕ್ಷಸ ಆಗಬೇಕೆಂದು ಶಾಪಪ್ರದಾನ ಮಾಡಿದರು. ತಮ್ಮ ಅಕೃತ್ಯಕ್ಕಾಗಿ ಪರಿತಪಿಸಿ ಪ್ರಾರ್ಥಿಸಿದಾಗ ಯಾರು "ಆ ಕಾ ಮ ವೈ ಕೋ ನ ಸ್ನಾಥಹ" ಎನ್ನುವ ಪ್ರಶ್ನಕ್ಕೆ ಉತ್ತರ ಹೇಳುತ್ತಾರೋ ಅವರೇ ಶಾಪವಿಮೋಚನ ಮಾಡುತ್ತಾರೆಂದು ಹೇಳಿದರು.
ಕೆಲ ಸಮಯ ಬ್ರಹ್ಮರಾಕ್ಷಸ ಜನ್ಮದಲ್ಲಿದ್ದ ನಾರಾಯಣಾಚಾರ್ಯರಿಗೆ, ಒಂದು ದಿನ ತಾನು ಇದ್ದ ಅರಣ್ಯದಲ್ಲಿಯೇ ರಾಜರು ಹಾದಿ ಹೋಗುತ್ತಿದ್ದರು. ಆಗ ಅವರನ್ನು ತಡೆದು ಯಥಾ ಪ್ರಕಾರ ಆ ಪ್ರಶ್ನೆಯನ್ನು ಕೇಳಿತು. ರಾಜರಿಗೆ ಈ ರಾಕ್ಷಸ ವಿಷಯ ಸ್ಮರಣೆಗೆ ಬಂತು. ಆಗ ರಾಜರು ಮುಗುಳ್ನಗೆಯಿಂದ 'ಯಾರು ಆಷಾಡ ಕಾರ್ತೀಕ ಮಾಘ ಮತ್ತು ವೈಶಾಖ ಮಾಸಗಳಲ್ಲಿ ಉದಯಕಾಲದಲ್ಲಿ ಸ್ನಾನ ಮಾಡುತ್ತಾನೆಯೋ ಅವನಿಗೆ ಬ್ರಹ್ಮರಾಕ್ಷಸ ಜನ್ಮ ಬರುವುದಿಲ್ಲ' ಎಂದು ಹೇಳಿದ ತಕ್ಷಣ ಗುರುಗಳಿಂದಲೇ ಶಾಪವಿಮೋಚನ ಆಯಿತು. ಅವರು ಶಾಪ ವಿಮೋಚನ ಆದೊಡನೆ ದಿವ್ಯ ರೂಪ ಧರಿಸಿ ಮುಂದೆ ನಿಂತರು. ಆವರ ಸ್ವರೂಪದ ಬಗ್ಗೆ ಶ್ರೀ ವಾದಿರಾಜರಿಗೆ ಪೂರ್ಣ ಅರಿವಿತ್ತು. ಶ್ರೀವಾದಿರಾಜರು ದಿವ್ಯರೂಪದಲ್ಲಿದ್ದ ನಾರಾಯಣಾಚರ್ಯರಿಗೆ ಹೀಗೆ ನುಡಿದರು. ಮುಂದಿನ ಕಲ್ಪದಲ್ಲಿ ರುದ್ರದೇವರ ಪದವಿಗೆ ಹೋಗುವವರೆಗೂ ಭೂತರಾಜ ಎಂಬ ಹೆಸರಿನಿಂದ ಗುರುಗಳ ಸೇವೆಯನ್ನು ಅದೃಶ್ಯರಾಗಿ ಮಾಡಬೇಕೆಂದು ಆಜ್ಞ ಮಾಡಿದರು. ಮುಂದೆ ಶ್ರೀರಾಜರು ಬೃಂದಾವನ ಪ್ರವೇಶ ಮಾಡುವವರೆಗೂ ಅದೃಶ್ಯರಾಗಿ ಸೇವೆ ಮಾಡಿದರು. ತದನಂತರ ಕ್ಷೇತ್ರ ಪಾಲಕರಾಗಿ ಶ್ರೀಸೋದಾಕ್ಷೆತ್ರದಲ್ಲಿ ಇದ್ದು, ಇಂದಿಗೂ ಅದೃಶ್ಯರಾಗಿ ಗುರುಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂದ ಭಕ್ತರ ಭೂತಪ್ರೇತಗಳ ಭಾಧೆಯನ್ನು ನಿವಾರಿಸುತ್ತ ವಿರಾಜಮಾನರಾಗಿದ್ದಾರೆ.
ಭೂತಪ್ರೇತಗಳು ತಾವಾಗಿಯೇ ವಿದಾಯ ಹೇಳುವ ಕ್ಷೇತ್ರ ಶ್ರೀಸೋದಕ್ಷೇತ್ರ.
ತೀರ್ಥಪ್ರಬಂಧ ಸಂಗ್ರಹ :
ಸೋದೆಯಲ್ಲಿ ಇರುವ ತ್ರಿವಿಕ್ರಮ ದೇವರು ತಂತ್ರ ಸಾರೋಕ್ತ ಲಕ್ಷಣಉಳ್ಳ ಸುಂದರ ವಿಗ್ರಹ. ಇದು ಗಂಗಾತೀರದ ಕಾಶಿ ಇಂದ ಬಂದ ವಿಗ್ರಹ ಎಂದು ಶಿಲಾ ಶಾಶನ ಇದೆ ಮತ್ತು ರಥಾ ರೂಢವಾಗಿರುವುದು ಮತ್ತೊಂದು ವೈಶಿಷ್ಟ. ಇದನ್ನು ವಾದಿರಾಜರು ತಮ್ಮ ಶಿಷ್ಯರಾದ ಭೂತರಾಜರಿಂದ ತರಿಸಿದರೆಂದು ಇತಿಹ್ಯಇದೆ.
ರಥಾ ಸಮೇತರಾಗಿ ವಿಗ್ರಹವನ್ನು ಭೂತರಾಜರು ತರುವ ಕಾಲದಲ್ಲಿ ಒಬ್ಬ ದೈತ್ಯಬಂದು ಅಡ್ಡಿಮಾಡಿದನೆಂದು , ಪ್ರತಿಷ್ಠಾಪನೆಯ ಮುಹೂರ್ತವು ಅತಿಕ್ರಮೆಸಿತೆಂಬ ಯೋಚನಇಂದ ಭೂತರಾಜರು ಅ ರಥದ ಒಂದು ಗಾಲಿಯಿಂದ ಆ ದೈತ್ಯನನ್ನು ಸಂಹರಿಸಿದರೆಂದು , ಆದಕಾರಣ ಈ ರಥಕ್ಕೆ ಮೂರು ಚಕ್ರಗಳು ಇರುವು ದೇoದು ಹೇಳುತ್ತಾರೆ.
ಗುರ್ವನ್ತರ್ಗತ ಕೃಷ್ಣಾರ್ಪಣಮಸ್ತು
**********
No comments:
Post a Comment