SEARCH HERE

Tuesday, 1 January 2019

ಹೆಂಗಸರಿಗೆ ಧರ್ಮಶಾಸ್ತ್ರ dharmashastra for women


ಶ್ರೀ ಸೂಕ್ತಿ:  -ಹೆಂಗಸರಿಗೆ  ಧರ್ಮಶಾಸ್ತ್ರ -


೧] ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು.

೨] ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು,

೩] ಯಾವುದೇ ಕಾರಣಕ್ಕೂ  ಕಣ್ಣಲ್ಲಿ ನೀರು ಹಾಕಬಾರದು.

೪] ಮನೆಗೆ ಬಂದ ಹೆಂಗಸರಿಗೆ ಹರಿಶಿನ, ಕುಂಕುಮ, ತಾಂಬೂಲಗಳನ್ನು ಕೊಟ್ಟೆ ಕಳಿಸಬೇಕು.

೫] ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ  ಹೊಡೆಯಕೂಡದು ಮತ್ತು ಹೊಡೆವ ಜಾಗದಲ್ಲೂ  ಇರಕೂಡದು.

೬]  ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ದೀಪ ಹಚ್ಚಬಾರದು.

೭]  ಸೂರ್ಯೋದಯಕ್ಕೆ ಮುಂಚೆ ಬೀದೀ ಬಾಗಲಿಗೆ  ನೀರು ಹಾಕಿ ರಂಗೋಲಿ ಇಡಬೇಕು. ಇದನ್ನು ಮನೆಯವರೇ ಮಾಡಬೇಕು. ಲಕ್ಷ್ಮಿಯಿ ಒಳಗೆ ಬರಲು ಇದು  ಚಿಹ್ನೆ. 

೮]  ಕೈಯಲ್ಲಿ ಯಾವಾಗಲೂ ಉಪ್ಪು,ಪಲ್ಯಗಳನ್ನು ಬಡಿಸಬಾರದು. 

೯]  ಮನೆಯಲ್ಲಿ  ಏನಾದರೂ ಇಲ್ಲದಿದ್ದಲ್ಲಿ, ತುಂಬಿದೆ ಎಂದು ಹೇಳಬೇಕು. ಇಲ್ಲ ಎಂದು ಹೇಳಬಾರದು. 

೧೦) ದಿಂಬಿನ ಮೇಲೆ ಕೂರಬಾರದು. 

೧೧)  ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು ಅದೇ ರೀತಿ ಅವರು ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಎಂದು ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಕಾಫಿ ಕೊಟ್ಟು ತುಂಬಾ ಅತಿಥಿ ಮರ್ಯಾದೆಗಳನ್ನು ಮಾಡುತ್ತಿದ್ದಾರೆ. ಪರೋಕ್ಷವಾಗಿ ನಾವು ಅಶುಭವನ್ನು ಕೋರಿಕೊಳ್ಳಲು ಇದು ನಾಂದಿ ಆಗುತ್ತದೆ.

೧೨) ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು.

೧೩)  ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.

೧೪) ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ.

೧೫] ಉಪ್ಪು, ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ.

೧೬) ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಕಾಗೆಗೆ ದನಗಳಿಗೆ ನಾವು ಊಟ ಮಾಡುವ ಮುನ್ನ, ನಾಯಿ, ಬೆಕ್ಕಿಗೆ ಊಟ ಮಾಡಿದ ಬಳಿಕ ಅನ್ನ ಇಡಿ. 

೧೭)  ಒಡೆದ ತೆಂಗಿನ ಕಾಯಿ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು.

೧೮) ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿಕಾಲಿನಲ್ಲಿ ನಿಲ್ಲುವುದು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ.

೧೯)  ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು.

೨೦) ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.

೨೧)  ಯಾವಾಗಲೂ ನಮ್ಮ ಬಾಯಲ್ಲಿ ಪೀಡೆ, ದರಿದ್ರ, ಶನಿ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು.

೨೨]  ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ. ಹತ್ತು ದಿನಗಳಿಗೆ ಒಮ್ಮೆ ಮಂಗಳ ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು

೨೩)  ಶ್ರಾದ್ಧ ದಿನಗದಂದು ಮನೆಯ ಮುಂದೆ ರಂಗೋಲಿ ಹಾಕಬಾರದು.

೨೪)  ದಿಂಬಿನ ಕವರ್, ಬೆಡ್ ಶೀಟ್‌ಗಳನ್ನು ಆಗಾಗ ಹೊಗೆಯುತ್ತಿರಬೇಕು. ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮಿ ಕ್ರಿಮಿಗಳು ಸಾಕಷ್ಟು ಇರುತ್ತವೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ.

೨೫) ಒಳ್ಳೆಯ ಕೆಲಸಗಳನ್ನು ಶುಕ್ಲಪಕ್ಷದಿಂದ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು.

೨೬) ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು.

೨೭) ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ.

- ಧರ್ಮಶಾಸ್ತ್ರ
********

ದೇವರು ಹೆಣ್ಣನ್ನು ಸೃಷ್ಟಿಸಿದ್ದು ಹೀಗೆ
                                                                        ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರು ದಿನ ಸರಿ ರಾತ್ರಿಯವರೆಗೂ ಸತತ ಕೆಲಸ ಮಾಡುತ್ತಿದ್ದ... 

ಆಗೊಬ್ಬ ದೇವತೆ ಬಂದು ಕೇಳಿದಳು, " ದೇವದೇವಾ, ಏಕೆ ಇವಳಿಗಾಗಿ ಅಷ್ಟೊಂದು ಸಮಯ  ವ್ಯಯಿಸುತ್ತಿರುವೆ?"  

ದೇವದೇವ ಉತ್ತರಿಸಿದ, "ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಒಳಗೊಳಿಸಬೇಕು ಎಂದು ನೋಡಿದೆಯಾ,, ಇವಳು ಎಲ್ಲ ತರಹದ ಪಾಕಗಳನ್ನೂ ಬಲ್ಲವಳಾಗಬೇಕು,, ಹತ್ತಾರು ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿ ಸಮಾಧಾನ ಗೊಳಿಸಲು ಸಮರ್ಥಳಾಗಿರಬೇಕು,, ಅವು ಬಿದ್ದು ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಬೆಳೆದು ಘಾಸಿಗೊಂಡ ಹೃದಯದವರಾದಾಗಲೂ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು,,, ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು,,, ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ಅವಳೇ ಮದ್ದು ಮಾಡಿಕೊಂಡು ಗಂಟೆಗಳ ಲೆಕ್ಕ ಇಡದೆ  ಕೆಲಸ ಮಾಡ ಬಲ್ಲವಳಾಗಬೇಕು,,, "

ದೇವತೆಗೆ ಅಚ್ಚರಿಯೂ ಸಂತಸವೂ ಆಯಿತು  " ಏನೂ! ಈಕೆಗೆ ಕೇವಲ ಎರಡೇ ಕೈಗಳಾ? ಅಸಾಧ್ಯ"ಎಂದಳು. ಮತ್ತು ಇದೇನಾ ನಿನ್ನ ತಯಾರಿಕೆಯ ಅತ್ಯುತ್ತಮ ಮಾದರಿ ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು. 
"ಓ ದೇವದೇವಾ  ...  ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ" ಎಂದು ಉದ್ಘಾರ ತೆಗೆದಳು. 

ದೇವದೇವ ಹೇಳಿದ "ಹೌದು ಇವಳು ಮೃದು,,,, ಆದರೆ ಬಹಳ ಶಕ್ತಿವಂತಳು,,,ಅವಳು ಏನೇನೆಲ್ಲ ತಡೆದುಕೊಳ್ಳಬಲ್ಲಳು,  ಎಷ್ಟೆಷ್ಟು ಕ್ರಮಿಸಬಲ್ಲಳು ಎಂದು ನೀನು ಊಹಿಸಲೂ ಆರೆ"

ದೇವತೆ ಕೇಳಿದಳು "ಇವಳು ಆಲೋಚನೆ ಮಾಡಬಲ್ಲಳಾ? "

ದೇವದೇವ ನಗುತ್ತ ಹೇಳಿದ "ಆಲೋಚನೆ ಮಾಡುವುದಷ್ಟೇ ಅಲ್ಲ... ತರ್ಕಬದ್ಧವಾಗಿ, ಸಕಾರಣವಾಗಿ ಆಲೋಚಿಸುವಳು,, ಸಕಾರಣ ಮಾತಾಡಬಲ್ಲಳು,,, ಮತ್ತು ಸಂಪೂರ್ಣ ಒಳಹೊರಗ  ತಿಳಿಯಬಲ್ಲಳು"

ದೇವತೆ ಹತ್ತಿರ ಬಂದು ಅವಳ ಕೆನ್ನೆಗಳನ್ನು ಮುಟ್ಟಿ ಮೆಲ್ಲಗೆ ಕಿರುಚಿದಳು " ದೇವದೇವಾ, ಈ ನಿನ್ನ  ಸೃಷ್ಟಿ ಕರಗಿ ಸೋರುತ್ತಿದೆ,, ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು,,, ಭಾರ ತಡೆಯದೆ ಇವಳು ಕರಗಿ ಸೋರುತ್ತಿದ್ದಾಳೆ"  

"ಅದು ಸೋರುವಿಕೆ ಅಲ್ಲ. ಕಣ್ಣೀರು " ದೇವತೆಯ ಮಾತನ್ನು ತಿದ್ದಿದ ದೇವದೇವ. 

 "ಈ ಕಣ್ಣೀರು ಯಾಕೆ? "

"ಕಣ್ಣೀರು ಅವಳ ಅಭಿವ್ಯಕ್ತಿ,, ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ"

ದೇವತೆ ಬಹಳ ಆನಂದದಿಂದ ಹೇಳಿದಳು "ದೇವದೇವಾ... ನೀನು ಎಲ್ಲವನ್ನೂ ಆಲೋಚಿಸಿರುವೆ ,, ಈ ಹೆಣ್ಣು ಒಂದು ಅದ್ಭುತ  ಸೃಷ್ಟಿ" 

 ದೇವದೇವ ಉಲ್ಲಾಸದಿಂದ ನಗುತ್ತಾ ಹೇಳಿದ "ಹೌದು,, ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ,,, ಕಷ್ಟಗಳ ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು,,, ಪ್ರತಿ ವಿಷಯದ ಮೇಲೂ ಅವಳದೇ ಆದ ಸ್ವಅಭಿಪ್ರಾಯ ಹೊಂದಿರಬಲ್ಲಳು,,, ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು,,,, ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು ಇವಳು,, ಅಳಬೇಕೆನ್ನಿಸಿದಾಗ ಹಾಡಬಲ್ಲಳು,,,ಸಂತಸವಾದಾಗ ಅಳಬಲ್ಲಳು,,, ತನಗೆ ಹೆದರಿಕೆ ಆದಾಗ ನಗಬಲ್ಲಳು,,, ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು,,,ಬೇಷರತ್ತಿನ ಪ್ರೀತಿ ಅವಳದು,,, ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ,,, ಆದರೆ ಅದೇ ಜೀವನದಲ್ಲಿಯೇ ಅವಳು ಮತ್ತೆ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ"

ದೇವತೆ ಕೇಳಿದಳು "ಇವಳು ಪರಿಪೂರ್ಣಳಾ?"

"ಉಹೂಂ ಇಲ್ಲ,,,ಇವಳಲ್ಲಿ ಒಂದು ಲೋಪ ಇದೆ,,, ಅವಳಿಗೇ ಅವಳ ಮೌಲ್ಯ ಎಷ್ಟು ಎಂಬುದು ಬಹಳ ಸಲ ಮರೆತು ಹೋಗುತ್ತದೆ,,"
ಎಂದ ದೇವದೇವ. 


ಓ ಹೆಣ್ಣೇ ನೀನೊಂದು ಸದಾಕಾಲದ ವಿಸ್ಮಯ,ಅದ್ಭುತ
***********


ಹೆಣ್ಣು ಮಕ್ಕಳ ಕೂದಲು ಅತ್ಯಂತ ಪವಿತ್ರ

 ಮುತ್ತೈದೆಯರ ಕೂದಲು ಅಮೃತ ಸ್ವರೂಪ. 
ಆದ್ದರಿಂದ ಮುತ್ತೈದೆಯರು ಯಾವತ್ತೂ ಕೂದಲು ತೆಗೆಯಬಾರದು. 

ಸ್ತ್ರೀಯರ ಕೇಶ ಮಾಂಗಲ್ಯದ್ಯೋತಕವಾದ್ದರಿಂದ ಅದರ ಕರ್ತನ ಗಂಡನಿರುವಷ್ಟು ಸಮಯ ಮಾಡಲೇಬಾರದು. 
ಮುತ್ತೈದೆಯರ ತಲೆಯಲ್ಲಿ ಅಮೃತವಿದೆ ಎಂಬುದಕ್ಕೆ ನಾರದಪುರಾಣದಲ್ಲಿ ಒಂದು ಕಥೆಯಿದೆ. 

ಒಮ್ಮೆ ದೇವತೆಗಳಿಗೆ ಅಮೃತವು ಸಿಗುವುದಿಲ್ಲ. ಆಗ ದೇವತೆಗಳು ಇಂದ್ರನಲ್ಲಿ ಪ್ರಾರ್ಥಿಸಿದರು. 
ಇಂದ್ರನು ಭೂಲೋಕದಲ್ಲಿ ಯಜ್ಞವನ್ನು ಆಚರಿಸುವಾಗ ಬ್ರಾಹ್ಮಣರಿಗೆ ಅವರ ಪತ್ನಿಯರು ಅಗ್ನಿಯನ್ನು ತಂದು ಕೊಡಲಿ. ಆ ಸಂದರ್ಭದಲ್ಲಿ ಅವರ ತಲೆಯಲ್ಲಿ ಅಮೃತವು ಉತ್ಪತ್ತಿಯಾಗಲಿ. ಆ ಅಮೃತವನ್ನು ನೀವು ಸ್ವೀಕರಿಸಿ ಎಂದು ಇಂದ್ರನು ಹೇಳಿದನು. 
ಅಂದಿನಿಂದ ಮುತ್ತೈದೆಯರ ತಲೆಯಲ್ಲಿ ಅಮೃತವು ನೆಲೆಯಾಯಿತು.

ಹೆಣ್ಣು ಮಕ್ಕಳ ಕೂದಲಿನಲ್ಲಿ ಗಂಗಾ, ಯಮುನಾ, ಸರಸ್ವತಿ, ಲಕ್ಷ್ಮೀದೇವಿಯರ ಸನ್ನಿಧಾನವಿದೆ. ಕೂದಲನ್ನು ಮೂರುಭಾಗಮಾಡಿ ಜಡೆ ಹೆಣೆಯಬೇಕು. ಆ ಮೂರು ಭಾಗಗಳಲ್ಲಿ ಗಂಗಾ, ಯಮುನಾ, ಸರಸ್ವತಿರು ಇರುತ್ತಾರೆ. ಮಧ್ಯೆ ಬೈತಲೆಯಲ್ಲಿ ಲಕ್ಷ್ಮೀದೇವಿಯ ಸನ್ನಿಧಾನ. 
ಆದ್ದರಿಂದ ಸ್ತ್ರೀಯರು ಪ್ರತಿನಿತ್ಯ ತಲೆಗೆ ಸ್ನಾನ ಮಾಡಬಾರದು. 

ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನ ದಂದು, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ.
 ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ.
*******




No comments:

Post a Comment