SEARCH HERE

Sunday 28 March 2021

ಕಾಲ ಭಾರತೀಯರ ಕಾಲ ಜ್ಞಾನ time calculation brahmin calender samvatsara



ನಮ್ಮ ವಿಜ್ಞಾನದ ಪ್ರಕಾರ ಭೂಮಿ ಸೂರ್ಯನನ್ನು ಸುತ್ತಲೂ  ತೆಗೆದುಕೊಳ್ಳುವ ಸಮಯ  365 ದಿನಗಳು, 5 ಗಂಟೆ, 56 ನಿಮಿಷಗಳು, 45 ಸೆಕುಂಡು ,51 ಮಿಲಿ ಸೆಕೆಂಡು  .

 ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ  ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್  ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).

ಭಾರತೀಯರ ಕಾಲ ಜ್ಞಾನ/ ನಮ್ಮ ಜೋತ್ಯಿಷ ಶಾಸ್ತ್ರ ಹೀಗೆ ತಿಳಿಸಿದೆ
ಕಾಲ ಜ್ಞಾನ

* ಒಂದು ದಿನ = 24 ಘಂಟೆ. 
* ಒಂದು ಘಂಟೆ = 60 ನಿಮಿಷ. 
* ಒಂದು ನಿಮಿಷ = 60 ಸೆಕುಂಡ್. 
* ಒಂದು ಘಂಟೆ = 2 ವರೆ ಘಟಿ. 
* ಒಂದು ನಿಮಿಷ = 2 ವರೆ ವಿಘಟಿ.  
* ಒಂದು ದಿನ = 60 ಘಟಿ 
* ಒಂದು ಘಟಿ = 60 ವಿಘಟಿ 
* ಒಂದು ಘಟಿ = 24 ನಿಮಿಷ. 
* ಒಂದು ವಿಘಟಿ =24 ಸೆಕುಂಡ್.
1 ಮುಹೂರ್ತ= 48 ನಿಮಿಷಗಳು

15 ನಿಮೇಷ (ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.) = 1 ಕಾಷ್ಠಾ 
30 ಕಾಷ್ಠಾ =  1ಕಲ
30 ಕಲ = 1 ಕ್ಷಣ 
12 ಕ್ಷಣ. =  1 ಮುಹೂರ್ತ (48 ನಿಮಿಷಗಳು).

30 ಮುಹೂರ್ತ =  1ದಿನ = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ,  = 1 ಮಾಸ ( ತಿಂಗಳು)
2ಮಾಸ =  1ಋತು.
6 ಋತು =  12 ಮಾಸ = 1ಸಂವತ್ಸರ 
1 ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು,  ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.

4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ. 
8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ

71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ
360 ಬ್ರಹ್ಮದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.
100ವರ್ಷ(864 ಕೋಟಿ×360×100) ಬ್ರಹ್ಮನ ಆಯುಷ್ಯ. ಇದಕ್ಕೆ ಪರ ಕಾಲ ಅನ್ನುವರು.
ಹೀಗೆ ಈ ಬ್ರಹ್ಮದೇವರ 100 ವರ್ಷ ಆಯುಷ್ಯ ' ಪರ' ಕಾಲ  ಪರಮಾತ್ಮನಿಗೆ ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.

 ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.  ಇದು ಬ್ರಹ್ಮದೇವರ ಸೃಷ್ಟಿ ಕಾಲ.

ನಂತರ  ರಾತ್ರಿ ಅಂದರೆ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ).

ಪ್ರಳಯಗಳಲ್ಲಿ ಮೂರು ವಿಧ.
1. ಮನ್ವಂತರ ಪ್ರಳಯ; 
2. ದಿನಪ್ರಳಯ; 
3.ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ. ಯುಗ ಗಳಿಗೊಮ್ಮೆ ಚತುರ್ಯುಗಗಳಿಗೆ ಒಮ್ಮೆ, ಮನ್ವಂತರ ಗಳಿಗೆ ಒಮ್ಮೆ.....

ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ. 

ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ.

ನಂತರ ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ ಸರ್ವ ಸ್ಥಾವರ; ಜಂಗಮ ಗಳು ಜೀವ ಜಲ ಚೈತನ್ಯಗಳು ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಭಗವಂತನಲ್ಲಿ ಲೀನವಾಗುತ್ತವೆ. ( ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ...)

ನಿಜವಾಗಿ ಕಾಲ ಆತನನ್ನು ಅಳೆಯಲು ಸಾ‌ಧ್ಯವಿಲ್ಲ. ಆತ ಕಾಲಾತೀತ. ಕಾಲದ ವಿಕಾರ ಆತನಿಗಿಲ್ಲ. ಕಾಲ ನಿಯಾಮಕ. ಕಾಲ ಪ್ರವರ್ತಕ. ಕಾಲಾಂತರ್ಯಾಮಿ. 'ಮಹಾಕಾಲ' ನಾಮಕ ಮಹಾಸ್ವಾಮಿ ಆತ.
ಬ್ರಹ್ಮನ 100 ವರ್ಷ ದಲ್ಲಿ  ಎರಡು ಅರ್ಧ. ಮೊದಲು ಐವತ್ತು ಪ್ರಥಮ, ನಂತರದ ಐವತ್ತು  ದ್ವಿತೀಯ ಪರಾರ್ಧ. ಈಗ ನಾವಿರುವದು ದ್ವಿತೀಯ ಪರಾರ್ಧ .ಬ್ರಹ್ಮನ 51ನೇ ವರ್ಷದ ಪ್ರಥಮ ಹಗಲು. ಇದೇ ಶ್ವೇತವರಾಹಕಲ್ಪ.
ಒಂದು ಹಗಲಿನ 12ಗಂಟೆಗಳಲ್ಲಿ 14 ಮನ್ವಂತರಗಳು.
ಅಂದರೆ ಈಗ ಆರು ಮುಗಿದು ಏಳನೆಯದು ವೈವಸ್ವತ ಮನ್ವಂತರ .ಬೆಳಗ್ಗಿನಿಂದ 5ಗಂಟೆ 28 ನಿಮಿಷ 45ಸೆಕೆಂಡು ಮುಗಿದಿವೆ. ಸುಮಾರು ಅಲ್ಲಿ  ಈಗ ಬೆಳಗಿನ 11 ಗಂಟೆ 28 ನಿಮಿಷ 48 ಸೆಕೆಂಡು.

ಹೀಗೆ ಮುಂದುವರಿಯುತ್ತದೆ  ನಮ್ಮ ಸನಾತನ ಕಾಲಜ್ಞಾನ

ಮುಂದಿನ 49ನೇ ಸೆಕೆಂಡಿಗೆ ಈ ದೇಹದಿಂದ ನಾವು ಇರುವುದಿಲ್ಲ ಇದು ನಿಶ್ಚಿತ. ಯಾಕೆಂದರೆ ಬ್ರಹ್ಮನ ಒಂದು ಸೆಕೆಂಡಿಗೆ ನಮ್ಮ ಒಂದು ಲಕ್ಷ  ವರ್ಷ.  ೧೦೦ವರ್ಷ ನಮ್ಮ ಆಯುಷ್ಯ ಎಂದರೆ ಬ್ರಹ್ಮನ ಒಂದು ಸೆಕೆಂಡು ಕಳೆಯುವುದರೊಳಗೆ ನಾವು ಸಾವಿರಗಳಲ್ಲಿ ಹುಟ್ಟಿ ಸಾಯಬೇಕು. 
ಅಂದಮೇಲೆ, ಎಲ್ಲಿಯ ಬ್ರಹ್ಮದೇವರು, ,ಎಲ್ಲಿಯ ಹುಲುಮನುಜರು ನಾವು!  ನಮ್ಮೆದುರಿಗೇನೇ ಹುಟ್ಟಿ ಸಾಯುವ ದೀಪದ ಹುಳುಗಳಿದ್ದಂತೆ ನಾವು. ಕ್ಷಣಕಾಲ ಜೀವಿಸುವ ಕ್ರಿಮಿಗಳಿದ್ದಂತೆ ನಾವು  ಬ್ರಹ್ಮನೆದುರು! 
ಇನ್ನು ಪರಮಾತ್ಮನಿಗೆ
ಆತ ರೆಪ್ಪೆ ಬಡಿಯುವದರೊಳಗೆ, ಇಂಥ ಬ್ರಹ್ಮ ಬಂದು ಹೋಗುತ್ತಾನೆ.ಆತನ ಆಯುಷ್ಯ ಮುಗಿದಿರುತ್ತದೆ. ಪರ ಕಾಲ ಆತನೆದುರು ಶೂನ್ಯ. ಇಂಥ ಅನಂತ ಬ್ರಹ್ಮರು ಅವನ ಒಳಗಿದ್ದಾರೆ.ಇನ್ನು  ಅನಂತ ಬ್ರಹ್ಮರು ಬರಲಿದ್ದಾರೆ.
ಅಂದಮೇಲೆ ಯಾವ ಲೆಕ್ಕ ಪರಮಾತ್ಮನಿಗೆ ನಾವು!!!!

ಅದಕ್ಕೆ ದಾಸರನ್ನುತ್ತಾರೆ- 

ಯಾತರವನಯ್ಯಾ ನಾನು ಇಂದಿರೇಶ,
ಮತ್ತೆ ನಂದೇನಿದೆಯೋ ಸ್ವಾಮಿ, ಏಲ್ಲವೂ ನಿಂದೆ.
ನೋಡಿ,ಇಷ್ಟಾದರೂ ಪರಮರಲ್ಲಿ ಪರಮನಾದ ಪರಮಾತ್ಮ,  ಕ್ಷಣಕಾಲ ಜೀವಿಸುವ ನಮ್ಮನ್ನು ಕಡೆಗಾಣಿಸು
ವುದಿಲ್ಲ. ನಮ್ಮ ಮೇಲೆ ಅಪಾರ ದಯೆಮಾಡಿ ನಮ್ಮನ್ನು ಎತ್ತಿ ಹಿಡಿಯುತ್ತಾನೆ.  ಉದ್ಧರಿಸುತ್ತಾನೆ.ಕರುಣೆಯ ಪಾರವಿಲ್ಲದ ಸಾಗರನಲ್ಲವೇ ಆತ!
*****

another version

15ನಿಮೇಷ = 1 ಕಾಷ್ಠಾ 
30 ಕಾಷ್ಠಾ =  1ಕಾಲ
30 ಕಾಲ = 1 ಕ್ಷಣ 
12 ಕ್ಷಣ. =  1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ =  1ದಿನ ( ಅಹೋರಾತ್ರಿ) = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ,  = 1 ಮಾಸ 
( ತಿಂಗಳು)
2ಮಾಸ =  1ಋತು.
6 ಋತು =  12 ಮಾಸ = 1ವರ್ಷ ( ಮನುಷ್ಯ ವರ್ಷ)  =  1 ಸಂವತ್ಸರ.
1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು,  ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
1,200 ದೇವ ವರ್ಷ =  4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ. 
2,400 ದೇವ ವರ್ಷಗಳು =   8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
3,600 ದೇವ ವರ್ಷಗಳು =  12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
4,800 ದೇವ ವರ್ಷ =  17,28,000 ಮನುಷ್ಯ ವರ್ಷ = ಕೃತಯುಗ ಅವಧಿ.
ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.
360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.

ಹೀಗೆ ಮುಂದುವರಿಯುತ್ತದೆ  ನಮ್ಮ ಹಿರಿಯರ ಜ್ಞಾನ.

ಇದರಿಂದ ನಮಗೆ ಸ್ಪಷ್ಟವಾಗುತ್ತೆ ಈ ಅವ್ಯಜ್ಞಾನಿಕ  ಗ್ರೆಗೋರಿಯನ್ ಕ್ಯಾಲೆಂಡರ್ ಎಷ್ಟೇ ತಿಣುಕಾಡಿದರು ಸಮಯವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುವುದಿಲ್ಲವೆಂದು. ಆದರೆ ನಮ್ಮ ಜೋತಿಷ್ಯ ವಿಜ್ಞಾನ ಸ್ಪಷ್ಟವಾಗಿ ನಿಖರವಾಗಿ ಕಾಲವನ್ನು ಸೂಚಿಸುತ್ತದೆ.
****

ಕಲ್ಪ 

ಕಲ್ಪ ಎಂದರೆ ಬ್ರಹ್ಮದೇವರ 100 ವರ್ಷಗಳ ಆಯುಷ್ಯ. ಕಾಲಗಣನೆಯ ಪದ್ಧತಿಯು ಲೋಕದಿಂದ ಲೋಕಕ್ಕೆ ವಿಭಿನ್ನವಾಗಿರುತ್ತದೆ. ಅನೇಕ ಪುರಾಣಗಳಲ್ಲಿ ಭಾರತೀಯ ಕಾಲಗಣನಾ ಪದ್ಧತಿಯನ್ನು ವಿವರಿಸಿದ್ದಾರೆ. ಒಂದು ಬ್ರಹ್ಮಕಲ್ಪ ಎಂದರೆ ಬ್ರಹ್ಮದೇವರ 100 ವರ್ಷಗಳು ಎಂದು ಗೊತ್ತಾಯ್ತು. ಹಾಗಾದ್ರೆ ಒಂದು ಬ್ರಹ್ಮದೇವರ ವರ್ಷಕ್ಕೆ ಎಷ್ಟು ಮಾನವ ವರ್ಷಗಳು ಎಂಬ ವಿಷಯವನ್ನು ಕೆಳಗೆ ವಿವರಿಸಲಾಗಿದೆ...

೪೩೨೦೦೦೦ (43,20,000) ವರ್ಷಗಳೆಂದರೆ ಒಂದು ಮಹಾಯುಗ. ಇಂತಹ ಮಹಾಯುಗಗಳು ೭೧ (71) ಸಾರಿ ಕಳೆದರೆ ಬ್ರಹ್ಮನಿಗೆ ಒಂದು ಹಗಲು. ಈ ರೀತಿ 71 ಸಾರಿ ಒಂದು ಮಹಾಯುಗವು ಕಳೆಯುವುದನ್ನು ಒಂದು ಮನ್ವಂತರವೆಂದು ಕರೆಯುತ್ತಾರೆ. 

೪೩,೨೦,೦೦೦
×     ೭೧
--------------------
೩೦,೬೭,೨೦,೦೦೦ (30,67,20,000) ಮಾನವವರ್ಷಗಳಿಗೆ  ಹಗಲಾಯಿತು. 

ಒಂದು ದಿನದ ಲೆಕ್ಕ ನೋಡಿದರೆ....

೩೦,೬೭,೨೦,೦೦೦ × ೨ = ೬೧,೩೪,೪೦,೦೦೦ (61,4,40,000) ವರ್ಷಗಳಿಗೆ ಒಂದು ದಿನವಾಯಿತು. 

ಎಂದರೆ ಎರಡು ಮನ್ವಂತರಗಳು ಕಳೆದರೆ ಬ್ರಹ್ಮನಿಗೆ ಒಂದು ದಿನವಾಗುತ್ತದೆ ಎಂದಾಯಿತು.

ಬ್ರಹ್ಮದೇವರ ಒಂದು ವಾರದ ಕಾಲಗಣನೆ ನೋಡೋಣ...

೬೧,೩೪,೪೦,೦೦೦ ಮಾನವ ವರ್ಷಗಳು
×    ೭ ದಿನಗಳು
---------------------------
೪೨೯,೪೦,೮೦,೦೦೦ (429,40,80,000) ಮಾನವ ವರ್ಷಗಳು.

ಒಂದು ಮಾಸದ (ತಿಂಗಳಿನ) ಲೆಕ್ಕ ಹೀಗಿದೆ...
೬೧,೩೪,೪೦,೦೦೦ ಮಾನವ ವರ್ಷಗಳು
×    ೩೦ ದಿನಗಳು
----------------------------
೧೮೪೦,೩೨,೦೦,೦೦೦ (1840,32,00,000) ಮಾನವ ವರ್ಷಗಳು 

ಬ್ರಹ್ಮದೇವರ ಒಂದು ವರ್ಷದ ಎಂದರೆ 365 ದಿನಗಳನ್ನು ಮಾನವವರ್ಷಗಳಲ್ಲಿ ಎಷ್ಟಾಗುತ್ತದೆ ಎಂಬುದನ್ನು ನೋಡೋಣ...

೬೧,೩೪,೪೦೦೦೦ ಮಾನವ ವರ್ಷಗಳು
×   ೩೬೫ ದಿನಗಳು 
--------------------------
೨೨,೩೯೦,೫೬,೦೦,೦೦೦ (22,390,56,00,000) ಮಾನವ ವರ್ಷಗಳು.

ಅಂತಹ ೧೦೦ ವರ್ಷಗಳಿಗೆ ಎಷ್ಟು ಮಾನವ ವರ್ಷಗಳಾಗಬಹುದೆಂಬುದನ್ನು ಹೀಗೆ ಲೆಕ್ಕ ಹಾಕಬಹುದು...

೨೨,೩೯೦,೫೬,೦೦,೦೦೦ ಮಾನವ ವರ್ಷಗಳು
×                            ೧೦೦ ವರ್ಷಗಳು
-----------------------------------------
೨೨,೩೯,೦೫೬,೦೦,೦೦,೦೦೦ ಮಾನವ ವರ್ಷಗಳು....!!! 

ಇಂತಹ ೧೦೦ ವರ್ಷಗಳ ಆಯುಷ್ಯವುಳ್ಳ ಬ್ರಹ್ಮದೇವರ ಅವಧಿಯು ಮುಗಿದ ಮೇಲೆ 10,000 ಮಾನವವರ್ಷಗಳಷ್ಟು ಪ್ರಮಾಣದ ಕಾಲಾವಧಿಯಲ್ಲಿ ಪರಮಾತ್ಮನು ಇಡೀ ಬ್ರಹ್ಮಾಂಡವನ್ನು ಪ್ರಳಯದ ಜಲದಲ್ಲಿ ಮುಣುಗಿಸಿ ತಾನು ತನ್ನ ಪತ್ನಿಯಾದ ಮಹಾಲಕ್ಷ್ಮೀದೇವಿಯನ್ನು ಅಶ್ವತ್ಥವೃಕ್ಷದ ಎಲೆಯನ್ನಾಗಿ ಮಾಡಿ ಅದರ ಮೇಲೆ ಚಿಕ್ಕ ಮಗುವಾಗಿ ೧೦,೦೦೦ ವರ್ಷಗಳ ವರೆಗೂ ಪ್ರಳಯಜಲದಲ್ಲಿ ತೇಲುತ್ತಿರುತ್ತಾನೆ. ನಂತರ ಮತ್ತೆ ಸೃಷ್ಟಿ, ಬ್ರಹ್ಮದೇವರ ಸೃಷ್ಟಿ, ಸೂರ್ಯಾದಿ ನಕ್ಷತ್ರಗಳು, ಗ್ರಹಗಳು ಮುಂತಾದವುಗಳ ಸೃಷ್ಟಿಯನ್ನು ಮಾಡುತ್ತಾನೆ.

ಈ ರೀತಿ ಸೂರ್ಯನ ಪ್ರಭಾವಕ್ಕೆ ಒಳಪಟ್ಟು ಆಕರ್ಷಿತವಾಗುವ ಗ್ರಹ, ಉಲ್ಕೆ, ಧೂಮಕೇತು ಮುಂತಾದವುಗಳ ಸಮೂಹಕ್ಕೆ ನಾವು ಬ್ರಹ್ಮಾಂಡ ಎಂದು ಕರೆಯುತ್ತೇವೆ, ಅದಕ್ಕೆ ಈ ಬ್ರಹ್ಮದೇವರೇ ಅಧಿಪತಿಗಳು. ಅವರ ಅವಧಿ ಮುಗಿದ ನಂತರ ಮತ್ತೆ ಭಗವಂತನು ಪ್ರಳಯವನ್ನು ಮಾಡಿ ಮತ್ತೆ ಸೃಷ್ಟಿಕಾರ್ಯವನ್ನು ಕೈಗೊಳ್ಳುತ್ತಾನೆ.

********

ಕಾಲದ ಗಣನೆಗೆ ಯುಗ ಚಕ್ರ 

ಕಾಲ ಅನಂತ, ಆದರೂ ಭಗವಂತನಿಂದ ಸೃಷ್ಟವಾದ ಈ ಜಗತ್ತಿಗೊಂದು ಕಾಲದ ಪರಿಧಿ ಇದೆ. ಅದರ ಗಣನೆಗೆಗಾಗಿ ರೂಪತಾಳಿದ್ದೇ ಚತುರ್ಯುಗ. ಇರುವುದು ನಾಲ್ಕೇ ಯುಗ. ಅದೇ ಕೃತ, ತ್ರೇತಾ, ದ್ವಾಪರ ಮತ್ತು ಕಲಿ.

ಭಗವಾನ್ ವೇದ ವ್ಯಾಸರು  ಈ ಯುಗಗಳ ಕಾಲಮಾನವನ್ನು ಕರಾರುವಾಕ್ಕಾಗಿ, ಗಣಿತಬದ್ಧವಾಗಿ ಭಾಗವತದ ಮೂಲಕ ನಮಗೆ ಕೊಟ್ಟಿದ್ದಾರೆ. ಅದರ ಲೆಕ್ಕಾಚಾರ ಹೀಗಿದೆ :

ನಾವು ವಾಸಿಸುತ್ತಿರುವ ಈ ಭೂಮಿಯ ಮೇಲಿನ ವರ್ಷದ ಗಣನೆಯಂತೆ, ಚತುರ್ಯುಗಗಳಲ್ಲಿ ಅತ್ಯಂತ ಕಿರಿದಾದ ಯುಗ, ಕಲಿಯುಗದ ಕಾಲಮಾನ 4,32,000 ವರ್ಷಗಳು. ನಂತರದ ಯುಗ ಅಂದರೆ ಕಲಿಯುಗದ ಎರಡು ಪಟ್ಟಿನದು ದ್ವಾಪರಯುಗ  8,64,000 ವರ್ಷಗಳು, ಕಲಿಯುಗದ ಮೂರು ಪಟ್ಟಿನದು ತ್ರೇತಾಯುಗ, 12,96,000 ವರ್ಷಗಳು. ಕಾಲಮಾನದಲ್ಲಿ ಅತ್ಯಂತ ದೊಡ್ಡದು, ಅಂದರೆ ಕಲಿಯುಗದ ನಾಲ್ಕು ಪಟ್ಟಿನದು ಸತ್ಯಯುಗ ಅಥವಾ ಕೃತಯುಗ, 17,28,000 ವರ್ಷಗಳು.

ಹೀಗೆ ಈ ನಾಲ್ಕು ಯುಗಗಳು ಕಲಿಯುಗದ 1:2:3:4 ಅನುಪಾತ (ರೇಶಿಯೋ)ದಲ್ಲಿವೆ.

ಒಂದು ಯುಗಚಕ್ರ ಉರುಳಿದಾಗ ಆಗುವ ಒಟ್ಟು ಕಾಲ ಅಂದರೆ, ಒಂದು ಚತುರ್ಯುಗದ ಕಾಲಮಾನ ಕಲಿಯುಗದ ಹತ್ತು ಪಟ್ಟು 
(1+2+3+4=10x432000) ಅಂದರೆ,

43,20,000 ವರ್ಷಗಳು. ಈ ರೀತಿಯಾಗಿ 71 ಬಾರಿ ಚತುರ್ಯುಗಗಳು ಸುತ್ತಿದಾಗ ಆಗುವ ಕಾಲವೇ, ಒಂದು ಮನ್ವಂತರಕಾಲ.
ಹಾಗಾದರೆ ಒಂದು ಮನ್ವಂತರ ಅಂದರೆ ಎಷ್ಟು ವರ್ಷಗಳಾದವು?

4320000 x 71 = 30,67,20,000 ವರ್ಷಗಳಾದವು... 

ಇದಕ್ಕೆ  ಯುಗಾಂತರಗಳ ಅವಧಿ 18,50,000 ವರ್ಷಗಳನ್ನು ಸೇರಿಸಿದರೆ (ಇದು ಕೇವಲ ಆಚಾರ್ಯ ಮಧ್ವರು ಮಾತ್ರ ಕೊಟ್ಟ ಲೆಕ್ಕಾಚಾರ ಅಂತ ನಮ್ಮ ಆಚಾರ್ಯರಾದ ಶ್ರೀ ಬನ್ನಂಜೆಯವರು ನಮಗೆಲ್ಲ ತಿಳಿಸಿಕೊಟ್ಟ ಲೆಕ್ಕಾಚಾರದಂತೆ) 30,85,70,000 ವರ್ಷಗಳಾದವು. ಇದು ಒಂದು ಮನ್ವಂತರದ ಕಾಲಮಾನ...

ಒಟ್ಟು  ಮನ್ವಂತರಗಳು ಹದಿನಾಕು... ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಪಸ, ರೈವತ, ಚಾಕ್ಷುಷ, ವೈವಸ್ವತ -ಈಗ ನಡೆಯುತ್ತಿರುವ ಮನ್ವಂತರ, ಮುಂದೆ ಬರಲಿರುವ ಮನ್ವಂತರಗಳು ಸೂರ್ಯಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ ಮತ್ತು ಇಂದ್ರಸಾವರ್ಣಿ...

ಹೀಗೆ ಈ ಹದಿನಾಕು ಮನ್ವಂತರಗಳು ಕಳೆದಾಗ ಆಗುವ ಒಟ್ಟು  ಕಾಲವೇ ಬ್ರಹ್ಮದೇವರ ಒಂದು ಹಗಲು (ದಿನಕಲ್ಪ) ಅಂದರೆ, ಬ್ರಹ್ಮದೇವರಿಗಿದು ಒಂದು ದಿನದ ಹಗಲಿನ 12 ಗಂಟೆ ಕಳೆದ ಸಮಯವಷ್ಟೆ...

ಅದರ ಗಣಿತ ಹೀಗಿದೆ :-

30,85,70,000 x 14 = 431,99,80,000 ವರ್ಷಗಳಾದವು. ಇದಕ್ಕೆ  ಪ್ರತಿ ಮನ್ವಂತರದ ಅಂತ್ಯದಲ್ಲಿ ಆಗುವ ಪ್ರಳಯಕಾಲದ ಅವಧಿಯನ್ನು ಸೇರಿಸಬೇಕು.  ಅಂದರೆ, ಹದಿನಾಕು ಮನ್ವಂತರಗಳ ನಡುವೆ ‌‌ಆಗುವ ಒಟ್ಟು ಪ್ರಳಯದ ಅವಧಿ 20,000 ವರ್ಷಗಳು. ಈ ಪ್ರಳಯಕಾಲವನ್ನು ಮೇಲಿನ ದಿನಕಲ್ಪದ ಅವಧಿಗೆ ಸೇರಿಸಿದಾಗ ಸರಿಯಾಗಿ 432 ಕೋಟಿ ವರ್ಷಗಳಾಗುತ್ತವೆ.

ಈ ಗಣಿತವನ್ನು , ಅಂದರೆ 20000 ವರ್ಷಗಳನ್ನು 14 ಮನ್ವಂತರಗಳಿಗೆ  ಸಮನ್ವಯ ಮಾಡುವ ರೀತಿಯನ್ನು ಅನ್ಯಾದೃಶವಾಗಿ  ತೋರಿಸಿಕೊಟ್ಟವರು ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮಾತ್ರ. ಅವರು ಹೇಳುವಂತೆ, 14 ಮನ್ವಂತರಗಳ ನಡುವೆ ಆಗುವುದು 13 ಪ್ರಳಯಗಳು ಮಾತ್ರ... ಮೊದಲನೆಯ ಸ್ವಾಯಂಭುವ ಮನ್ವಂತರ ಮುಗಿದಾಗ ಆಗುವ ಪ್ರಳಯಕಾಲ ಹೆಚ್ಚಿನದ್ದಾಗಿದ್ದು 2000 ವರ್ಷಗಳ ಅವಧಿಯದ್ದಾಗಿರುತ್ತದೆ. ಉಳಿದ 18000 ವರ್ಷಗಳನ್ನು ,  ಉಳಿದ 12 ಮನ್ವಂತರಗಳಿಗೆ ಸಮ ವಿಭಾಗ ಮಾಡಿದಾಗ ಸರಿಯಾಗಿ 1500 ವರ್ಷಗಳಾಗುತ್ತವೆ. ಈ ತನಕ ಅನೇಕ ವಿದ್ವಾಂಸರು ಈ ಮನ್ವಂತರ ಪ್ರಳಯದ ವಿಭಾಗ ಮಾಡುವಲ್ಲಿ ಲೆಕ್ಕ ತಪ್ಪಿದಾಗ,  ನಮ್ಮ ಆಚಾರ್ಯರು ನೀಡಿದ ಕೊಡುಗೆ ಅತ್ಯಂತ ಅಪೂರ್ವ ಸಂಗತಿಯಾಗಿದೆ...
ಹೀಗೆ 432 ಕೋಟಿ ವರ್ಷಗಳಿಗೊಮ್ಮೆ

ಭೂಮಿಯ ಸೃಷ್ಟಿ  ಮತ್ತೆ 432 ಕೋಟಿ ವರ್ಷಗಳಿಗೊಮ್ಮೆ  ಭೂಮಿಯ ನಾಶ (ದಿನಕಲ್ಪದ ಪ್ರಳಯಕಾಲ). ಇದು ಚತುರ್ಮುಖ ಬ್ರಹ್ಮನಿಗೆ ಕೇವಲ ಒಂದು ದಿನದ ಹಗಲು ಮತ್ತು ರಾತ್ರಿಯಷ್ಟೇ.

ಚತುರ್ಮುಖನಿಗೆ ಒಂದು ದಿವಸ ಕಳೆದರೆ (24 ಗಂಟೆಯಾದರೆ) ಭೂಮಿಯ ಮೇಲಿನ ಗಣಿತದಂತೆ 864 ಕೋಟಿ ವರ್ಷಗಳು ಸಂದಂತಾಗುತ್ತದೆ ಎನ್ನುತ್ತದೆ ಭಾಗವತ.

ಹಾಗಾದರೆ, ಚತುರ್ಮುಖ ಬ್ರಹ್ಮನ ಆಯುಷ್ಯ ಎಷ್ಟು? "ಶತಮಾನಂ ಭವತಿ ಶತಾಯುಃ ಪುರುಷೇಂದ್ರಿಯೇ ಪ್ರತಿತಿಷ್ಠತಿ" ಎಂಬಂತೆ ... ಬ್ರಹ್ಮನ ದೇಹಕ್ಕೂ ಆಯುಷ್ಯ ನೂರೇ ವರ್ಷ. ಅದು ಅವನ ನೂರು ವರ್ಷ.. ಅದನ್ನು ನಮ್ಮ ಗಣನೆಯಂತೆ ಲೆಕ್ಕಹಾಕಿದಾಗ ಎಷ್ಟಾಯಿತು?... ಅದರ ಲೆಕ್ಕ ಹೀಗಿದೆ:

ಬ್ರಹ್ಮನ ಒಂದು ದಿನ ಅಂದರೆ ನಮ್ಮ (ಭೂಮಿಯ ಮೇಲಿನ) ವರ್ಷದ ಕಾಲಮಾನದಲ್ಲಿ 864 ಕೋಟಿ ವರ್ಷಗಳು.
ಅವನ ಒಂದು  ವರ್ಷ ಅಂದರೆ 864x360=3,11,040 ಕೋಟಿ ವರ್ಷಗಳು....

ಅಂಥಹ ನೂರು ವರ್ಷಗಳು ಚತುರ್ಮುಖನಿಗೆ ತುಂಬುವುದೇ ಬ್ರಹ್ಮನ ನೂರು ವರ್ಷ... ಅದೇ ಇಡೀ ಬ್ರಹ್ಮಾಂಡದ ಆಯುಷ್ಯ ಕೂಡ.....
3,11,040 x 100 = 31,104,000 ಕೋಟಿ ವರ್ಷಗಳು (ಮೂವತ್ತೊಂದು ಸಾವಿರದ ನೂರ ನಾಕು ಸಾವಿರ ಕೋಟಿ ವರ್ಷಗಳು)
ಅಥವಾ 31,104,00,00,00,00,00
ವರ್ಷಗಳು. 

ಇದು ಭಗವಂತನ ಮೊದಲ ಮಗ, ಆದಿ ಜೀವ, ಚತುರ್ಮುಖ ಬ್ರಹ್ಮನ ಜೀವಿತಾವಧಿ.ಇದೇ ಮಹಾಕಲ್ಪ...

ಒಮ್ಮೆ ಇಷ್ಟು ಅವಧಿ ಮುಗಿದ ಮೇಲೆ ಮಹಾಪ್ರಳಯವಾಗುತ್ತದೆ. ತದನಂತರ ಮತ್ತೆ ಇಡೀ ಬ್ರಹ್ಮಾಂಡದ ಸೃಷ್ಟಿಕ್ರಿಯೆ ಪ್ರಾರಂಭಗೊಳ್ಳಲು ತೆಗೆದುಕೊಳ್ಳುವ ಸಮಯ ಮತ್ತೆ ಅಷ್ಟೇ ಕಾಲ (31,104 ಸಾವಿರ ಕೋಟಿ ವರ್ಷಗಳು)....

ಇದು ಭಗವಂತನಿಗೆ ಒಂದು ಕ್ಷಣದ ಅವಧಿಯೂ ಅಲ್ಲ. ಇದೆಲ್ಲಾ ಮನುಷ್ಯರು ಊಹಿಸಲೂ ಅಸಾಧ್ಯವಾದ ಸತ್ಯ ಸಂಗತಿಗಳನ್ನು  ವೇದವ್ಯಾಸರು ಭಾಗವತದ ಮೂಲಕ ನಮ್ಮ ಮುಂದೆ ತೆರೆದು ತೋರಿದ್ದಾರೆ ಎಂಬುದನ್ನು ಪೂಜ್ಯ ಗೋವಿಂದಾಚಾರ್ಯರಿಂದ ತಿಳಿದಾಗ ವಿಸ್ಮಯವೋ ವಿಸ್ಮಯ...
ನಮ್ಮ ನಿತ್ಯಾನುಷ್ಠಾನದ ಸಂಕಲ್ಪ ಮಂತ್ರ ಕೂಡ ಇದನ್ನೇ ಹೇಳುತ್ತದೆ... ನಾವು ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ಆದಿ ಜೀವನ ನೆನಪು ಇದ್ದಾಗ ಮಾತ್ರ ಆ ಕಾಲಕ್ಕೊಂದು ಸಮನ್ವಯ ದೊರಕುವುದು...

ಶುಭೇ ಶೋಭನೇ ಮಹೂರ್ತೇ, ಆದ್ಯಬ್ರಹ್ಮಣಃ, ದ್ವಿತೀಯಾ ಪರಾರ್ಧೇ ಹೀಗೆ ಮುಂದುವರೆಯುತ್ತದೆ ನಮ್ಮ ಸಂಕಲ್ಪ ಮಂತ್ರ... ನಾವಿಂದು ಮಾಡುತ್ತಿರುವ ಸಂಕಲ್ಪ ಬ್ರಹ್ಮನನ್ನು ಆದಿಯಲ್ಲಿ ಇಟ್ಟುಕೊಂಡು, ಅಂದರೆ ಈ ಬ್ರಹ್ಮಾಂಡ ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಭಗವಂತನ ನಾಭಿಯಿಂದ ಹೊರಬಂದ ಕ್ಷಣದಿಂದಲೇ ಅನಂತವಾಗಿದ್ದ ಕಾಲಕ್ಕೊಂದು ಗಣನೆ ಶುರುವಾಯಿತು ಎಂಬುದೇ ಇಲ್ಲಿಯ ಪ್ರಮುಖ ವಿಷಯ.. ಶಾಸ್ತ್ರದ ಪ್ರಕಾರ ನಾವೀಗ ಚತುರ್ಮುಖ ಬ್ರಹ್ಮನ ಅಥವಾ ಪರಕಾಲದ ಎರಡನೇ ಅರ್ಧದಲ್ಲಿದ್ದೇವೆ.(ಪೂರ್ವಾರ್ಧ ಕಳೆದು ಉತ್ತರಾರ್ಧಕ್ಕೆ ಕಾಲಿಟ್ಟಾಗಿದೆ) ಅದರಲ್ಲಿ ದಿನಕಲ್ಪದ, 
ವೈವಸ್ವತ ಮನ್ವಂತರದ, 28ನೇ ಚತುರ್ಯುಗದ 28 ಕಲಿಯುಗದಲ್ಲಿದ್ದೇವೆ ಎಂಬುದು ಶಾಸ್ತ್ರಕಾರರ ಲೆಕ್ಕಾಚಾರ... ನಾವಿರುವ ಈ ವೈವಸ್ವತ ಮನ್ವಂತರದ 28ನೇ ಕಲಿಯುಗದಲ್ಲಿ ಕಳೆದಿರುವ ವರ್ಷಗಳು ಕೇವಲ 5117 ಇನ್ನೂ  ಬಾಕಿಯಿರುವ ವರ್ಷಗಳು, 432000-5117= 4,26,883 

ಇನ್ನೂ ಕಲಿಯುಗ ಸರಿಯಾಗಿ ಪ್ರಾರಂಭವೇ ಆಗಿಲ್ಲಾ...ಆಗಲೇ ತಲೆ ಕೆಟ್ಟ ಜನ ಪ್ರಳಯದ ಬಗೆಗೆ ಮಾತನಾಡುತ್ತಾರೆ, ಪುಸ್ತಕ ಬರೆಯುತ್ತಾರೆ,  ಕಲ್ಕಿಯ ಅವತಾರವಾಗಿದೆ ಅಂತೆಲ್ಲಾ ಸುದ್ದಿ ಹಬ್ಬಿಸುತ್ತಿದ್ದಾರೆ....

ಕೇವಲ 5100 ವರ್ಷಗಳ ಹಿಂದೆ ಇದೇ ಭೂಮಿಯ ಮೇಲೆ ಕೃಷ್ಣ , ದ್ರೌಪದಿ, ಪಾಂಡವರು ಮುಂತಾದ ದೇವಾಂಶ ಸಂಭೂತರೆಲ್ಲ ಓಡಾಡಿದ್ದಾರೆ. ಈ ಕಲಿಯುಗ ಪ್ರಾರಂಭವಾದ ಮೇಲೆ ಕೂಡ 36 ವರ್ಷಗಳ ಕಾಲ ಪಾಂಡವರು ಈ ನೆಲವನ್ನು ಆಳಿದ್ದಾರೆ. ನಂತರ ಪಾಂಡವರ ತಳಿ ಪರೀಕ್ಷಿತರಾಜನೇ ಪಟ್ಟಕ್ಕೆ ಬಂದ. ಮಹಾಭಾರತ ಯುದ್ಧದಲ್ಲಿ ದುರ್ಯೋಧನ ಭೀಮನ ಗದೆ ಪೆಟ್ಟಿಗೆ ತೊಡೆಮುರಿದು ಬಿದ್ದು ಕೊನೆಯುಸಿರುಳಿದ ಕ್ಷಣದಿಂದಲೇ ಕಲಿಯುಗ ಪ್ರಾರಂಭವಾಯಿತು ಎಂದು ಮಹಾಭಾರತ ಹೇಳುತ್ತದೆ.
******

ಋತು
ವಿದ್ಯಾಮಾನದಲ್ಲಿರುವ ತಿಂಗಳುಗಳಿಗಿಂತ ಇವು ಭಿನ್ನ.
ಚೈತ್ರ
ವೈಶಾಖ
ಜೇಷ್ಠ
ಆಷಾಢ
ಶ್ರಾವಣ
ಭಾದ್ರಪದ
ಆಶ್ವೀಜ
ಕಾರ್ತೀಕ
ಮಾರ್ಗಶಿರ
ಪುಷ್ಯ
ಮಾಘ
ಪಾಲ್ಗುಣ

ಇವೆಲ್ಲ ಈ ಸದ್ಯ ಚಂದ್ರನ ಗತಿಯು ಯಾವ ನಕ್ಷತ್ರದಲ್ಲಿದೆ ಅನ್ನುವುದರ ಆಧಾರದ ಮೇಲೆ ಮಾಸಗಳನ್ನಾಗಿ ಹೆಸರಿಸಿರುವವುಗಳು... ಉದಾಹರಣೆಗೆ.. ಚೈತ್ರಮಾಸದಲ್ಲಿ ಚಂದ್ರನ ಗತಿಯು ಚಿತ್ತಾ ನಕ್ಷತ್ರದಲ್ಲಿ, ವೈಶಾಖಮಾಸವು ವಿಶಾಖ ನಕ್ಷತ್ರದಲ್ಲಿ, ಜೇಷ್ಠಮಾಸವು ಜೇಷ್ಠಾ ನಕ್ಷತ್ರದಲ್ಲಿ.... ಹೀಗೆ ಪ್ರತಿ ಮಾಸವು ಪ್ರತ್ಯೇಕ ನಕ್ಷತ್ರದಲ್ಲಿ ಚಂದ್ರನ ವಾಸ ಅಥವಾ ಗತಿಯನ್ನು ತೋರಿಸುವುದಾಗಿದೆ.

ಇನ್ನು ಪ್ರತಿ ಎರಡು ಮಾಸಗಳಿಗೆ ಒಂದು ಋತು.
ಚೈತ್ರ - ವೈಶಾಖವು ವಸಂತ ಋತು
ಜೇಷ್ಠ- ಆಷಾಢವು ಗ್ರೀಷ್ಮ ಋತು
ಶ್ರಾವಣ- ಭಾದ್ರಪದವು ವರ್ಷಾ ಋತು
ಆಶ್ವೀಜ - ಕಾರ್ತೀಕವು ಶರದ್ ಋತು
ಮಾರ್ಗಶಿರ- ಪುಷ್ಯವು ಹೇಮಂತ ಋತು
ಮಾಘ- ಫಾಲ್ಗುಣವು ಶಿಶಿರ ಋತು.

ವಸಂತೃತು- ಬೇಸಿಗೆ
ಗ್ರೀಷ್ಮ ಋತು-  ಕಡುಬೇಸಿಗೆ
ವರ್ಷಾ ಋತು-  ಮುಂಗಾರು ಮಳೆ
ಶರದ್ ಋತು -  ಹಿಂಗಾರು ಮಳೆ
ಹೇಮಂತೃತು - ಚಳಿಗಾಲದ 
ಶಿಶಿರ ಋತು- ಕಡು ಚಳಿಗಾಲ.
***




ಏಸು ಕ್ರಿಸ್ತನನ್ನು ಮೂಲವಾಗಿ ಇಟ್ಟುಕೊಂಡು ಅವನ ಜೀವಿತಾವಧಿಯ ಪೂರ್ವ ಕಾಲ (B.C.) ಮತ್ತು ಉತ್ತರ ಕಾಲವನ್ನು (A.D.) ಪರಿಗಣಿಸುವ ಕ್ಯಾಲೆಂಡರ್ ಪಾಶ್ಚಾತ್ಯರು ಮಾಡಿಕೊಂಡ ಕಾಲಗಣನೆಯ ಪದ್ಧತಿ ಅಷ್ಟೇ... ಇದನ್ನು ಪಾಶ್ಚಾತ್ಯರೇ ಇಟ್ಟುಕೊಳ್ಳಲಿ ಬಿಡಿ... ಇದಕ್ಕೂ ಪ್ರಪಂಚದ ಕಾಲ ಗಣನೆಗೂ ಯಾವುದೇ ಸಂಬಂಧವಿಲ್ಲ....

ಆದರೆ ಯಾವುದು ಸನಾತನ ಧರ್ಮವೋ ಅಲ್ಲಿನ ಕಾಲಗಣನೆಯ ಲೆಕ್ಕಾಚಾರವೇ ಬೇರೆ ರೀತಿಯದ್ದು...‌

ನಮ್ಮ ಪ್ರಾಚೀನರು ಪರಿಗಣಿಸುವ ಕಾಲಗಣನೆ ಪ್ರಕೃತಿಯ ಬದಲಾವಣೆಗೆ ಹೊಂದಿಕೆಯಾದದ್ದು... ಅಯನಗಳು, ಋತುಗಳು, ಮಾಸಗಳು... ಇಲ್ಲಿ ಒಂದು ಕ್ರಮ ಇದೆ... ಅದು ಸೂರ್ಯ ಚಂದ್ರರ ಗತಿಯನ್ನು ಅನುಸರಿಸಿಕೊಂಡು ಇದೆ... ಅಂದರೆ ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಅನುಸರಿಸಿಕೊಂಡು ಇದೆ... ಅದು ಹೇಗೆ ಅಂತೀರಾ ... ?

ಈಗ ಪಾಶ್ಚಾತ್ಯ ಕ್ಯಾಲೆಂಡರ್ ನಲ್ಲಿ ಇರುವ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್...‌ ಹೀಗೆ ಹನ್ನೆರಡು ತಿಂಗಳಿಗೂ ಒಂದೊಂದು ಹೆಸರು ಇದೆ.. ಈ ಹೆಸರನ್ನು ಅವರು ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ? ಇದನ್ನು ಅವರೇ ಹೇಳಬೇಕು... ಆದರೆ ನಮ್ಮ ಕ್ಯಾಲೆಂಡರ್ ಹಾಗಲ್ಲ... ನಮ್ಮ ಕ್ಯಾಲೆಂಡರ್ ನಲ್ಲಿರುವ ಹನ್ನೆರಡು ತಿಂಗಳುಗಳಿಗೂ ಇರುವ ಹೆಸರಿನಲ್ಲಿ ಒಂದು ವೈಶಿಷ್ಟ್ಯತೆ ಇದೆ... ನಮ್ಮ ಮಾಸಗಳ ಹೆಸರು ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ.... ಹೀಗಿವೆ.

ಇಲ್ಲಿ ವರ್ಷದ ಮೊದಲ ತಿಂಗಳನ್ನು ಅಂದರೆ ಯುಗಾದಿಯಿಂದ ಪ್ರಾರಂಭವಾಗುವ ಮಾಸವನ್ನು "ಚೈತ್ರಮಾಸ" ಎಂದು ಕರೆಯುತ್ತಾರೆ... 

ಹಿಂದೂ ಕ್ಯಾಲೆಂಡರ್ ನಲ್ಲಿ ಒಂದು ತಿಂಗಳನ್ನು ಹದಿನೈದು ದಿನಗಳ ಎರಡು ವಿಭಾಗ ಮಾಡುತ್ತಾರೆ, ಪಾಡ್ಯದಿಂದ-ಹುಣ್ಣಿಮೆ ವರೆಗಿನ ಹದಿನೈದು ದಿನಗಳನ್ನು "ಶುಕ್ಲಪಕ್ಷ" ಎಂತಲೂ ಮತ್ತೆ ಪಾಡ್ಯದಿಂದ-ಅಮಾವಾಸ್ಯೆಯ ತನಕದ ಹದಿನೈದು ದಿನಗಳನ್ನು "ಕೃಷ್ಣಪಕ್ಷ" ಅಂತಲೂ ಆಕಾಶದಲ್ಲಿ ಚಂದ್ರನ ಗತಿಗನುಗುಣವಾಗಿ ಹೆಸರಿಸಿದ್ದಾರೆ...‌ ಚಂದ್ರನ ಪತ್ನಿಯರೆಂದೇ ಕರೆಯಲ್ಪಡುವ ಆಕಾಶದಲ್ಲಿ ಗುರುತಿಸಬಹುದಾದ 27 ನಕ್ಷತ್ರಗಳನ್ನು ಇಟ್ಟುಕೊಂಡು ಅವುಗಳ ಇರುವಿಕೆಯಿಂದ (Positioning​ of stars) ಅಂದರೆ, ಒಂದು ನಿರ್ದಿಷ್ಟವಾದ ದಿನದಂದು, ಹುಣ್ಣಿಮೆಯಂದು ಇರುವ ನಕ್ಷತ್ರದಿಂದ ಆ ಮಾಸದ ಹೆಸರನ್ನು ನಮ್ಮ ಪ್ರಾಚೀನರು ಕೊಟ್ಟಿದ್ದಾರೆ...

ಚಂದ್ರನ ಗತಿಯಂತೆ (Movement) ಪ್ರತಿ ತಿಂಗಳಲ್ಲೂ ಒಂದು ಹುಣ್ಣಿಮೆ ಮತ್ತು ಒಂದು ಅಮಾವಾಸ್ಯೆ ಬರುತ್ತದೆ... ಹಾಗೆ ಒಂದು ವರ್ಷದಲ್ಲಿ ಬರುವ ಹನ್ನೆರಡು ಹುಣ್ಣಿಮೆಗಳಲ್ಲಿ, ಆಯಾ ಹುಣ್ಣಿಮೆ ದಿನ ಯಾವ ನಕ್ಷತ್ರ ಇರುತ್ತೋ ಅದೇ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಹೆಸರಿಸಿದ್ದಾರೆ ನಮ್ಮ ಪ್ರಾಚೀನರು... 

ಅಂದರೆ ಯಾವ ಹುಣ್ಣಿಮೆ ದಿನ "ಚಿತ್ತಾನಕ್ಷತ್ರ" ಬಂತೋ ಆ ಮಾಸದ ಹೆಸರು "ಚೈತ್ರಮಾಸ"... ಯಾವ ಹುಣ್ಣಿಮೆ ದಿನ "ವಿಶಾಖಾ ನಕ್ಷತ್ರ" ಬಂತೋ ಆ ಮಾಸ "ವೈಶಾಖ ಮಾಸ"... ಯಾವ ಹುಣ್ಣಿಮೆ ದಿನ "ಜ್ಯೇಷ್ಠ ನಕ್ಷತ್ರ" ಬಂತೋ ಆ ತಿಂಗಳ ಹೆಸರು "ಜ್ಯೇಷ್ಠಮಾಸ"... ಹೀಗೇ ಮುಂದುವರೆದು ಹನ್ನೆರಡು ತಿಂಗಳಿಗೂ ಹನ್ನೆರಡು ಹೆಸರಾಯಿತು...

ಹೀಗೆ ಹುಣ್ಣಿಮೆ ದಿನ ಇರುವ ನಕ್ಷತ್ರವನ್ನಾಧರಿಸಿ ನಮ್ಮಲ್ಲಿ ಆಯಾ ತಿಂಗಳ ಹೆಸರು ಬಂದಿದೆ...

ನಾವು ಯಾವತ್ತಿಗಾದರೂ ಕೂಡ ಆಕಾಶದಲ್ಲಿ ಸೂರ್ಯಚಂದ್ರರ ಗತಿಗನುಗುಣವಾಗಿ, ನಕ್ಷತ್ರಗಳ ಇರುವಿಕೆಗನುಗುಣವಾಗಿ ಆಕಾಶ ಇನೋಡಿಕೊಂಡೇ ಒಂದು ತಿಂಗಳು ಅಥವಾ ಒಂದು ದಿನವನ್ನು ಗುರುತಿಸಬಹುದಾದ most scientific methodology ಯನ್ನ ತೋರಿಸಿಕೊಟ್ಟ ನಮ್ಮ ಪ್ರಾಚೀನರ ಆಚರಣೆಗಳನ್ನು ಮರೆತು, ಯಾರೋ ಪಾಶ್ಚಾತ್ಯರು ತೋರಿಸಿಕೊಟ್ಟ ಹೊಸವರ್ಷವನ್ನು ಆಚರಿಸುವುದರಲ್ಲಿ ಏನು ಅರ್ಥವಿದೆ... ?

ಭಾರತೀಯರು ಎಂದೂ ಸ್ವಂತಿಕೆಯನ್ನು ಕಳೆದುಕೊಂಡ ಜನಾಂಗ ಆಗಬಾರದು ಅಂತಿದ್ದರೆ ಈ ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳನ್ನು ತಿರಸ್ಕರಿಸಬೇಕು...

ನಮ್ಮ ಪ್ರಾಚೀನರು ಹಾಕಿಕೊಟ್ಟ ಪ್ರತಿಯೊಂದು ಆಚರಣೆಗೂ ಗಾಢವಾದ ಅರ್ಥ ಇದೆ ಮತ್ತು ಅಂತಹ ಆಚರಣೆಯಲ್ಲಿ ಮೂಲಭೂತ ಸತ್ಯ ಇದೆ.. ಅವುಗಳನ್ನೆಲ್ಲ ತಿಳಿಯುವ ಪ್ರಯತ್ನ ಮಾಡಿದಾಗಷ್ಟೇ ನಾವು ಭಾರತೀಯರಾದದ್ದಕ್ಕೆ ಸಾರ್ಥಕ !
*******

ತಿಥಿ ಅಂದರೆ ಏನು ? ರವಿ ಚಂದ್ರರೇ ಎಲ್ಲ ಗ್ರಹಗಳಿಗಿಂತಲೂ ಮುಖ್ಯವಾದ ಗ್ರಹಗಳು. ಚಂದ್ರನು ಒಂದು ತಿಂಗಳಿಗೆ ಒಂದು ರಾಶಿ ಚಕ್ರವನ್ನು ಸಂಚರಿಸುತ್ತಾನೆ. ಈ 12 ರಾಶಿಗಳ ಸಂಚಾರ ಕಾಲದಲ್ಲಿ ತಿಂಗಳಿಗೆ ಒಮ್ಮೆ ಸೂರ್ಯನನ್ನು ಕಲಿಯುತ್ತಾನೆ. ಆ ದಿನ ಆತನ ಪ್ರಕಾಶವು ಭೂಮಿಯ ಮೇಲೆ ಇರುವುದಿಲ್ಲ. ಆ ದಿನಕ್ಕೆ ಅಮಾವಾಸ್ಸೆವೆಂದು, ನಂತರ ಕ್ರಮವಾಗಿ ಸೂರ್ಯನನ್ನು ಬಿಟ್ಟು ಮುಂದಕ್ಕೆ ಹೋಗುವನು. ಸೂರ್ಯ ಚಂದ್ರ ಇಬ್ಬರ ಚಲನದಿಂದ ಅವರ ಮದ್ಯೆ ಕಿರಣಗಳು ಒಂದೊಕ್ಕೊಂದು ಕಲಿಯುವುದರಿಂದ ಪ್ರತಿ ದಿನ ಒಂದೊಂದು ರೂಪದಂತೆ 30 ಆಕಾರಗಳು ಆಗುವುದರಿಂದ 30 ತಿಥಿಗಳೆಂದು ಏರ್ಪಡಿಸಿದರು. ಈ ತಿಥಿಗಳಲ್ಲಿ  ಚಂದ್ರನು ವೃದ್ಧಿ ಹೊಂದುತ್ತಾ ಹೋಗುವ ಕಾರಣ ಅದಕ್ಕೆ ಶುಕ್ಲ ಪಕ್ಷವೆಂತಲೂ,, 15 ತಿಥಿಗಳಲ್ಲಿ ಚಂದ್ರನು ಕ್ಷೀಣವಾಗುತ್ತಾ ಹೋಗುವ ಕಾರಣ ಕೃಷ್ಣ ಪಕ್ಷವೆಂತಲೂ ಹೆಸರನ್ನಿಟ್ಟರು.

ಇಂಥಿಂಥ ತಿಥಿಗಳಲ್ಲೇ ಶುಭಕಾರ್ಯಗಳನ್ನು ಮಾಡಬೇಕೆಂದು ಏಕೆ ಹೇಳಿದರು? 

ರವಿ  ಚಂದ್ರರ ಕಿರಣಗಳು ಸೇರಿ ಒಂದೊಂದು  ರೂಪ ಆಕಾರವಾಗುತ್ತದೆ , ಯಾವ ತಿಥಿಯಲ್ಲಿ ಯಾವ ಯಾವ ದೇವತೆಗಳ ಪ್ರೀತಿಕರವಾದ ಚಿನ್ಹೆಗಳಿರುತ್ತವೆಯೋ ಆಯಾ ದೇವತೆಗಳು ಆಯಾ ತಿಥಿಗಳಿಗೆ ಅಧಿಪತಿಗಳಾಗುವರು. ಶುಭ ದೇವತೆಗಳು ಅಧಿಪತಿಯಾದ ತಿಥಿಗಳಲ್ಲಿ ಶುಭಕಾರ್ಯಗಳನ್ನು  ಮಾಡಬಹುದೆಂತಲೂ, ಪಾಪಾದೇವತೆಗಳ ಅಧಿಪತಿಗಳಾದ ತಿಥಿಗಳಲ್ಲಿ ಶುಭಕಾರ್ಯಗಳನ್ನು ಮಾಡಬಾರದು. 

ಶುಕ್ಲ ಪಕ್ಷ, ಕೃಷ್ಣ ಪಕ್ಷ ಎರಡರಲ್ಲಿಯೂ 

ಪ್ರತಿಪತ್ - ಅಗ್ನಿ ದೇವತಾ ಪ್ರೀತಿಕರ ಚಿನ್ಹೆ 
ಬಿದಿಗೆಯಲ್ಲಿ - ಬ್ರಹ್ಮ 
ತದಿಗೆ - ಹರಿ 
ಚೌತಿ -ಯಮ 
ಪಂಚಮಿ - ಶಶಾಂಕ 
ಷಷ್ಠಿ -ಷಡಾಸನ ದೇವತಾ 
ಸಪ್ತಮಿ - ಇಂದ್ರ ದೇವತಾ 
ಅಷ್ಟಮಿ -ವಸು 
ನವಮಿ - ದುರ್ಗಾದೇವತಾ 
ದಶಮಿ - ಧರ್ಮದೇವತಾ 
ಏಕಾದಶಿ - ಈಶ 
ದ್ವಾದಶಿ - ಹರಿ 
ತ್ರಯೋದಶಿ - ಮನ್ಮತ 
ಚತುರ್ದಶಿ - ಕಲಿಪುರುಷ 
ಪೌರ್ಣಮಿ - ಚಂದ್ರ 
ಅಮಾವಾಸ್ಸೆ - ಪಿತೃದೇವತಾ ಪ್ರೀತಿಕರ  ಚಿನ್ಹೆಗಳಿರುವುದರಿಂದ ಆಯಾ ತಿಥಿಗಳಿಗೆ ಆಯಾ ದೇವತೆಗಳು ಅಧಿಪತಿಗಳಾದರು. ಯಾವ ತಿಥಿಗಳಿಗೆ ಶುಭ ದೇವತೆಗಳು ಅಧಿಪತಿಗಳಾಗಿರುವರೋ ಆಯಾ ತಿಥಿಗಳಲ್ಲಿ ಶುಭ ಕಾರ್ಯ ಮಾಡಬೇಕು.
***

cದಕ್ಷಿಣಾಯಣ ಪುಣ್ಯಕಾಲದ ವಿಚಾರ ಧಾರೆ॥

ನಮ್ಮ ಪಂಚಾಂಗಗಳ ಪ್ರಕಾರ ಸಂವತ್ಸರವನ್ನು ಎರಡು ಭಾಗವಾಗಿ ಗುರುತಿಸಲಾಗಿದೆ. ಅದೆಂದರೆ,
ಉತ್ತರಾಯಣ ಮತ್ತು ದಕ್ಷಿಣಾಯಣ.
ರವಿ ಗ್ರಹ ಮಕರ ರಾಶಿಗೆ ಪ್ರವೇಶಿಸಿದ ಆರು ತಿಂಗಳ ಕಾಲ ಅಂದರೆ ಕುಂಭ, ಮೀನ, ಮೇಷ, ವೃಷಭ, ಮಿಥನ ರಾಶಿಯಲ್ಲಿದ್ದು ಸಾಮಾನ್ಯವಾಗಿ 13 ಅಥವಾ 17ರ ಜುಲೈ ತಿಂಗಳಲ್ಲಿ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಕಾಲವನ್ನು ದಕ್ಷಿಣಾಯಣ ಪುಣ್ಯಕಾಲ ಎನ್ನುತ್ತಾರೆ.

ಬಹುತೇಕರಲ್ಲಿ ಒಂದು ತಪ್ಪು ಅಭಿಪ್ರಾಯವಿದೆ.
ಉತ್ತರಾಯಣ ಸ್ವರ್ಗದ ಬಾಗಿಲು ತೆರೆಯುವ ಕಾಲವಾದರೆ ದಕ್ಷಿಣಾಯನ ಆ ಬಾಗಿಲನ್ನು ಮುಚ್ಚುವ ಕಾಲ ಎನ್ನುತ್ತಾರೆ.
"ಅದು ಸರಿಯಲ್ಲ"

ನಮ್ಮ ಶಾಸ್ತ್ರಗಳು ದಕ್ಷಿಣಾಯನ ಕಾಲವನ್ನು ನಮ್ಮ ಶಾಸ್ತ್ರಗಳು ಪರಮಪುಣ್ಯ ಸಂಚಯನ ಕಾಲ ಎಂದು ಅಭಿಪ್ರಾಯಿಸುತ್ತವೆ.
ಕಾರಣ ಈ ಸಮಯದಲ್ಲಿ ಸಾಕಷ್ಟು ಮಹತ್ತರ ಘಟನೆಗಳು ಸಂಭವಿಸಿವೆ.

॥ಮಹಾಗಣೇಶ - ದಕ್ಷಿಣಾಯಣ ಪುಣ್ಯಕಾಲದ ಮಹತ್ವ॥

೧ ದಾಕ್ಷಾಯಿಣಿ ಪುನರ್‌ಜನ್ಮ ಪಡೆದು ಪರ್ವತರಾಜನ
ಮಗಳಾಗಿ ಜನಿಸಿ ಪಾರ್ವತಿಯಾದದ್ದು.
೨ ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಅವನನ್ನು ವಿವಾಹವಾದ ಸಮಯವಿದು.
೩ ಗಣಪತಿಯ ಜನನವಾದದ್ದು ದಕ್ಷಿಣಾಯಣದ ಭಾದ್ರಪದ ಮಾಸದಲ್ಲಿ.
೪ ದ್ವಾಪರಯುಗದಲ್ಲಿ ಶ್ರೀಕೃಷ್ಣ ಜನಿಸಿದ್ದು ಶ್ರಾವಣ ಮಾಸದಲ್ಲಿ.
೫ ಭೂದೇವಿಯ ಮಗನಾದ ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ್ದು ಕಾರ್ತಿಕಮಾಸದಲ್ಲಿ.
೬ ಮಹಾವಿಷ್ಣು ವರಾಹ ಅವತಾರವನ್ನು ತಾಳಿದ್ದು ದಕ್ಷಿಣಾಯನದಲ್ಲಿ.
೭ ಬಲಿಪಾಢ್ಯಮಿ ಸಹ ಈ ಸಂವತ್ಸರದಲ್ಲೇ ಬರುತ್ತದೆ.
೮ ಆಂಜನೇಯನ ಅವತಾರವೂ ದಕ್ಷಿಣಾಯನದಲ್ಲೇ ಆಯಿತು.
॥ಲೋಕಾ ಸಮಸ್ತಾ ಸುಖಿನೋ ಭವಂತು॥

****


ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ . ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.ಯಾರೋ ಪುಣ್ಯಾತ್ಮರು ತಯಾರಿಸಿ ಕೊಟ್ಟಿರುವ ಈ ಮಾಹಿತಿ ರಕ್ಷಿಸಿಡಿ.

( 1867, 1927,1987,): ಪ್ರಭವ
(1868,1928,1988): ವಿಭವ 
(1869,1929,1989): ಶುಕ್ಲ 
(1870,1930,1990): ಪ್ರಮೋದೂತ
(1871,1931, 1991): ಪ್ರಜೋತ್ಪತ್ತಿ 
(1872,1932,1992): ಅಂಗೀರಸ
(1873,1933,1993): ಶ್ರೀಮುಖ 
(1874,1934,1994): ಭಾವ 
(1875,1935,1995):ಯುವ 
(1876,1936,1996): ధాత
(1877,1937,1997):  ಈಶ್ವರ 
(1878,1938,1998): ಬಹುಧಾನ್ಯ
(1879,1939,1999): ಪ್ರಮಾದಿ 
(1880,1940,2000): ವಿಕ್ರಮ
(1881,1941,2001): ವೃಷ
(1882,1942,2002): ಚಿತ್ರಭಾನು 
(1883,1943,2003): ಸ್ವಭಾನು 
(1884,1944,2004): ತಾರಣ 
(1885,1945,2005): ಪಾರ್ಥಿವ 
(1886,1946,2006): ವ್ಯಯ 
(1887,1947,2007): ಸರ್ವಜಿತ್
(1888,1948,2008): ಸರ್ವಧಾರಿ 
(1889,1949,2009): ವಿರೋಧಿ 
(1890,1950,2010): ವಿಕೃತಿ 
(1891,1951,2011): ಖರ
(1892,1952,2012):  ನಂದನ 
(1893,1953,2013): ವಿಜಯ
(1894,1954,2014): ಜಯ
(1895,1955,2015): ಮನ್ಮಥ
(1896,1956,2016): ದುರ್ಮುಖಿ
(1897,1957,2017): ಹೇವಿಳಂಬಿ
(1898,1958,2018): ವಿಳಂಬಿ 
(1899,1959,2019): ವಿಕಾರಿ
(1900,1960,2020): ಶಾರ್ವರಿ 
(1901,1961,2021): ಪ್ಲವ 
(1902,1962,2022): ಶುಭಕೃತ 
(1903,1963,2023): ಶೋಭಕೃತ 
(1904,1964,2024): ಕ್ರೋಧಿ 
(1905,1965,2025): ವಿಶ್ವಾವಸು 
(1906,1966,2026): ಪರಾಭವ
(1907,1967,2027): ಪ್ಲವಂಗ 
(1908,1968,2028): ಕೀಲಕ 
(1909,1969,2029): ಸೌಮ್ಯ 
(1910,1970,2030):  ಸಾಧಾರಣ 
(1911,1971,2031): ವಿರೋಧಿಕೃತ 
(1912,1972,2032): ಪರಿಧಾವಿ
(1913,1973,2033): ಪ್ರಮಾದ
(1914,1974,2034): ಆನಂದ
(1915,1975,2035): ರಾಕ್ಷಸ
(1916,1976,2036): ನಳ
(1917,1977,2037): ಪಿಂಗಳ
(1918,1978,2038): ಕಾಳಯುಕ್ತಿ
(1919,1979,2039): ಸಿದ್ಧಾರ್ಥಿ
(1920,1980,2040): ರೌದ್ರಿ 
(1921,1981,2041): ದುರ್ಮತಿ 
(1922,1982,2042): ದುಂದುಭಿ
(1923,1983,2043): ರುಧಿರೋದ್ಗಾರಿ 
(1924,1984,2044): ರಕ್ತಾಕ್ಷಿ 
(1925,1985,2045): ಕ್ರೋಧನ
(1926,1986,2046): ಅಕ್ಷಯ
*******


Adhyatmic way


ಅನಿಮಿಷ:  अनिमिष:  animishah ॐ श्री ಅನಿಮಿಷಾಯ ನಮ: अनिमिषाय नम: animishAya namah


(ಸಂಸ್ಕೃತದ ನಿಮೇಷಕ್ಕೂ English ನ Minute ಗೂ ವ್ಯತ್ಯಾಸವಿದೆ. 
ನಿಮೇಷ ಎಂದರೆ ಒಂದು ಸಲ ಕಣ್ಣು ಮುಚ್ಚಿ ತೆರೆಯುವ ಕಾಲ. 

English ನ  1 Second = 2.38 ನಿಮೇಷ.)
2.38 nimesha x 15 = 1 kaashta 
1 kashta         x 30 = 1 kale
1 kale            x 30 = 1 muhoortha
1 mohoortha x 30 = 1 day


1 day =  2.38 x 15 x 30 x 30 x 30
          = 142.8 x 30 x 30 x 30
          = 4284 x 30 x 30
          = 128520 x 30
          = 3855600 nimesha

1 day = 24 hours
          = 1440 minutes 
          = 86400 seconds
          = 205632 nimesha

****

ಶ್ರೀ ವಿಷ್ಣುಸಹಸ್ರ ನಾಮ श्री विष्णुसहस्र नाम VishNu sahasra nAma|| ಚಿಂತನೆ ॐ भावनम् नामन् ನಾಮ-214 and 215

ಅನಿಮಿಷ: = ದೇವತೆ, ಮೀನು, ಕಣ್ಣಿನ ರೆಪ್ಪೆಯು ಚಲಿಸದಿರುವ, ನೇತ್ರಸ್ಪಂದನವಿಲ್ಲದ, ಕಣ್ಣು ಪಿಳುಕಿಸದ, ಜಾಗರೂಕ, ತೆರೆದ, ಭಗವಂತ, ಇತ್ಯಾದಿ.,

ಅ + ನಿಮಿಷ = ಅನಿಮಿಷ:.
ಅ = "ಅಲ್ಲ", "ಇಲ್ಲ", "ಬೇಡ" ಎಂಬ ಅರ್ಥಗಳಿಗೆ ನಾಮ, ವಿಶೇಷಣ, ಧಾತುಗಳ ಹಿಂದೆ ಹಚ್ಚುವ ಅವ್ಯಯ.
ನಿಮಿಷ: = ಕಣ್ಣು ಮುಚ್ಚುವುದು, ಕಣ್ಣು ಮುಚ್ಚಿ ತೆರೆಯುವಷ್ಟು ಕಾಲ,  ಕಣ್ಣುರಪ್ಪೆಯಾಡುವುದು, ಕಣ್ಣು ಮಿಟುಕಿಸುವುದು, ಕ್ಷಣಕಾಲ, ಕಣ್ಮುಚ್ಚಿ ನಿದ್ರಿಸುವವ, ಇತ್ಯಾದಿ.,

ಭಗವಂತನು ಮತ್ಸ್ಯರೂಪದಿಂದ ಅಥವಾ ಆತ್ಮರೂಪದಿಂದ ಯಾವಾಗಲೂ ಜಾಗ್ರತನಾಗಿರುತ್ತಾನೆ. ಆದುದರಿಂದ ಅವನಿಗೆ "ಅನಿಮಿಷ:" ಎಂದು ಕರೆಯುತ್ತಾರೆ.

ಭಗವಂತನು ಸತ್ಪುರುಷರ ವಿಷಯದಲ್ಲಿ ಯಾವಾಗಲೂ ಕಣ್ಣುಗಳನ್ನು ತೆರೆದುಕೊಂಡೇ ಇರುವವನು. ಆದುದರಿಂದ ಅವನಿಗೆ "ಅನಿಮಿಷ:" ಎಂದು ಹೆಸರು.

ಮನಸ್ಸು-ಬುದ್ಧಿ ಮಾಡುವ ಕಾರ್ಯವನ್ನು ಹಾಗೂ ಅವುಗಳು ಮಲಗಿರುವುದನ್ನು ಸದಾ ನೋಡುತ್ತಿರುವ ಶುದ್ಧ ಪ್ರಜ್ಞೆಗೆ ನಿದ್ರೆ ಎಂಬುದಿಲ್ಲ. ಹೀಗೆ ಶುದ್ಧ ಚೈತನ್ಯವು ಸದಾಕಾಲವು ಎಲ್ಲವನ್ನೂ ಬೆಳಗುತ್ತಿರುತ್ತದೆ. ಆದುದರಿಂದ ಭಗವಂತ "ಅನಿಮಿಷ:" ಎಂದು ಕರೆಯಲ್ಪಡುತ್ತಾನೆ.

ಹಿಂದಿನ "ನಿಮಿಷ:" ಎನ್ನುವ ನಾಮದ ತದ್ವಿರುದ್ಧ ನಾಮ "ಅನಿಮಿಷ:" ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ ಅಂದರೆ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗನಿದ್ರೆ.‌ ಆದುದರಿಂದ ಭಗವಂತನಿಗೆ "ಅನಿಮಿಷ:" ಎಂದು ಹೆಸರು.

ನಿತ್ಯಪ್ರಬುದ್ಧಸ್ವರೂಪನು;
ಕಣ್ಣುರಪ್ಪೆಗಳನ್ನು ಮುಚ್ಚದೇ ಇರುವವನು;
ಮತ್ಸ್ಯಮೂರ್ತಿಯು;
ಯಾವಾಗಲೂ ಎಚ್ಚೆತ್ತಿರುವ ಸ್ವರೂಪವುಳ್ಳವನು;
ದಿವ್ಯವಾದ ಮೀನಿನ ಶರೀರವುಳ್ಳವನು;
ಮತ್ಸ್ಯನಾಗಿ ಅವತರಿಸಿದವನು;
ವಾಯುಭಕ್ತರೊಡನೆ ಸೇರಿರುವವನು;
ದಯಾಪರನಾಗಿ ಯಾವಾಗಲೂ ಮುಕ್ತರನ್ನು ನೋಡುತ್ತಲೇ ಇರುವವನು;
ಸತ್ಪುರುಷರ ರಕ್ಷಣೆಯಲ್ಲಿ ಸದಾಕಾಲ ಜಾಗೃತನಾಗಿರುವವನು;
ಆದುದರಿಂದ ಭಗವಂತನಿಗೆ "ಅನಿಮಿಷ:" ಎಂದು ಹೆಸರು.

"ಸದ್ರಕ್ಷಣೇ ಜಾಗರೂಕ: ಸ್ಮೃತೋ ಹ್ಯನಿಮಿಷಶ್ಚ ಸ:||".

animishah = Not Winking, Looking Steadily, Vigilant, Open, God, Fish, etc.,

a + nimishah = animishah.
a = A Prefix "UN", "NON" added to a word to give the meaning of "NO", "NOT" etc.,
nimishah = Shutting the eye, Twinkling, Twinkling of the eye, Moment, Blink of an eye, In a Moment, etc.,

This name refers to BhagavAn's matsya incarnation. (Fish do not have eylids, and so never close their eyes.) In HIS celestial Fish incarnation, HE never closes eyes and is ever watchful of HIS devotees. So HE is called "animishah".

One Who remains unwinking. Whenever we wink both the eyelids close together an what we are seeing is at least technically veiled from the seer in the eye. BhagavAn is indicated here by the term "Unwinking" in the sense that BhagavAn is Ever-Knowing. So HE is called "animishah".

*******


ನಿಮಿಷ: = ಕಣ್ಣು ಮುಚ್ಚುವುದು, ಕಣ್ಣು ಮುಚ್ಚಿ ತೆರೆಯುವಷ್ಟು ಕಾಲ, ಕಣ್ಣು ರಪ್ಪೆಯಾಡುವುದು, ಕಣ್ಣು ಮಿಟುಕಿಸುವುದು, ಕ್ಷಣಕಾಲ, ಕಣ್ಮುಚ್ಚಿ ನಿದ್ರಿಸುವವ, ಇತ್ಯಾದಿ.,

ನಿಮಿ + ಷ = ನಿಮಿಷ:.

ನಿಮಿ = ಕಣ್ಣು ಪಿಳುಕಿಸುವುದು, ಕಣ್ಣಿನ ರಪ್ಪೆ ಬಡಿಯುವುದು, ಸೂರ್ಯವಂಶದ ಇಕ್ಷ್ವಾಕು ಮಹಾರಾಜನ ಒಬ್ಬ ಮಗ, ದತ್ತಾತ್ರೇಯನ ಪುತ್ರ, ಇತ್ಯಾದಿ.,

ಷ = ಸ್ವರ್ಗ, ದೇಶ, ಗರ್ಭ, ಮೋಕ್ಷ, ಶ್ರೇಷ್ಠ, ಕೇಶ, ಪ್ರಳಯ, ಇತ್ಯಾದಿ.,

ಸತ್ಪುರುಷರ ವಿರೋಧಿಗಳ ವಿಷಯದಲ್ಲಿ ಭಗವಂತ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತಾನೆ, ಅಂದರೆ ಕಟಾಕ್ಷವೀಕ್ಷಣದಿಂದ ಅವರನ್ನು ಅನುಗ್ರಹಿಸದೇ ಇರುತ್ತಾನೆ. ಆದುದರಿಂದ ಅವನಿಗೆ "ನಿಮಿಷ:" ಎಂದು ಹೆಸರು.

ಯೋಗನಿದ್ರಾರತನಾದ ಭಗವಂತನ ಕಣ್ಣುಗಳು ಮುಚ್ಚಿಕೊಂಡು ಇರುವುದಾದ್ದರಿಂದ ಅವನಿಗೆ "ನಿಮಿಷ:" ಎಂದು ಹೆಸರು.

ಮನಸ್ಸಿನ ಅಂತರ್ಮುಖತೆಯನ್ನು ಕಣ್ಣು ಮುಚ್ಚಿಕೊಂಡಿರುವಿಕೆಯು ಸೂಚಿಸುತ್ತದೆ.‌ಯಾರಾದರೂ ಗಾಢವಾಗಿ ವಿಚಾರ ಮಾಡುವಾಗ, ಸ್ಮರಿಸುವಾಗ ಅಥವಾ ಧ್ಯಾನಿಸುವಾಗ ಕಣ್ಣು ಮುಚ್ಚಿಕೊಳ್ಳುವುದು ಸಾಮಾನ್ಯ. ಗಾಢ ಧ್ಯಾನದಲ್ಲಿ ಮಗ್ನನಾಗಿ ಅಂತ:ಕರಣವು ವಿಷಯಗಳಿಂದ ಹಿಂದೆ ಸರಿದಾಗ ಒಳಗೆ, ಹೊರಗೆ ಎಲ್ಲೆಲ್ಲೂ ಆ ದಿವ್ಯತೆಯೇ ತುಂಬಿಕೊಂಡಿರುವುದು ಅನುಭವಕ್ಕೆ ಬರುತ್ತದೆ. ಪರಮಾತ್ಮಾನುಭವದಲ್ಲಿ ನಿಂತಾಗ ಪ್ರಪಂಚದ ಅಸ್ತಿತ್ವವು ಮಾಯವಾಗಿ ಬಿಡುತ್ತದೆ ಎಂಬುದನ್ನು ತೋರಿಸಲು ಭಗವಂತನಿಗೆ "ನಿಮಿಷ:" ಎಂದು ಹೆಸರು.

ಕಾಲಸ್ವರೂಪನು;
ಕಣ್ಣು ಮುಚ್ಚಿಯೂ ಸಮಸ್ತವನ್ನೂ ನೋಡುತ್ತಿರುವ ಮಹಾಸಾಕ್ಷಿ;
ಧ್ಯಾನಯೋಗದಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡಿರುವವನು;
ಯೋಗನಿದ್ರಾರತನಾಗಿ ಕಣ್ಣುಗಳನ್ನು ಮುಚ್ಚಿಕೊಂಡಿರುವವನು;
ಕಾಲನಿಯಾಮಕನು;
ದೈತ್ಯರೊಡನೆ ವಿಶೇಷವಾಗಿ ಸ್ಪರ್ಧಿಸುವವನು;
ನಿಮಿಷನು;
ಕಣ್ಣುರೆಪ್ಪೆಗಳನ್ನು ಮುಚ್ಚಿಕೊಂಡಿರುವವನು;
ಪ್ರಳಯಕಾಲದ ಯೋಗನಿದ್ರೆಯನ್ನು ಮಾಡುವವನು;
ಆದುದರಿಂದ ಭಗವಂತನಿಗೆ "ನಿಮಿಷ:" ಎಂದು ಹೆಸರು.

'ನಿಮಿ' ಎಂಬ ರಾಜನಿಗೆ "ಷಂ" ಎಂದರೆ "ಬಲ"ವು ಯಾವನಿಂದ ಪ್ರಾಪ್ತವಾಯಿತೋ ಅವನಿಗೆ " ನಿಮಿಷ:" ಎಂದು ಹೆಸರು.

"ವಿರೋಧಿನ: ಸತಾಂ ಯೋಸೌ ನೇಕ್ಷತೇ ನಿಮಿಷಶ್ಚ ಸ:||".

nimishah = Shutting the eye, Twingling, Twinkling of the eye, Moment, Blink of an eye, In a moment, etc.,

In a state intense contemplation, when the ವintellect is turned away from the objects-of-experiences, the bosom experiences the One Divine " Subject" both within and without. The Lord is described here as "with eyes closed" (nimishah), only to indicate that HE is ever rooted in Himself; from Him viewed, there exists nothing other than Himself to constitute the worlds off objects.

BhagavAn of closed eyes is seeing all because HE is everywhere, in everyone of us, all the time, and is watching all that happens everywhere even without eyes. So HE is called "nimishah".

******


ಶ್ರೀವಿಷ್ಣುಪುರಾಣ - ಸಂಚಿಕೆ - 364  ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
****
ದ್ವಿತೀಯಾಂಶ: ಅಷ್ಟಮೋಧ್ಯಾಯ:

ವೈಷ್ಣವೋಂಶ: ಪರ: ಸೂರ್ಯೋ ಯೋಂತರ್ಜ್ಯೋತಿರಸಂಪ್ಲವಮ್|
ಅಭಿಧಾಯಕ ಓಂಕಾರಸ್ತಸ್ಯ ತತ್ಪ್ರೇರಕ: ಪರ:||56||

ತೇನ ಸಂಪ್ರೇರಿತಂ ಜ್ಯೋತಿರೋಂಕಾರೇಣಾಥ ದೀಪ್ತಿಮತ್|
ದಹತ್ಯಶೇಷರಕ್ಷಾಂಸಿ ಮಂದೇಹಾಖ್ಯಾನ್ಯಘಾನಿ ವೈ||57||

ತಸ್ಮಾನ್ನೋಲ್ಲಂಘನಂ ಕಾರ್ಯಂ ಸಂಧ್ಯೋಪಾಸನಕರ್ಮಣ:|
ಸ ಹಂತಿ ಸೂರ್ಯಂ ಸಂಧ್ಯಾಯಾ ನೋಪಾಸ್ತಿಂ ಕುರುತೇ ತು ಯ:||58||

ತತ: ಪ್ರಯಾತಿ ಭಗವಾನ್ ಬ್ರಾಹ್ಮಣೈರಭಿರಕ್ಷಿತ:|
ವಾಲಖಿಲ್ಯಾದಿಭಿಶ್ಚೈವ ಜಗತ: ಪಾಲನೋದ್ಯತ:||59||

ಕಾಷ್ಠಾ ನಿಮೇಷಾ ದಶ ಪಂಚ ಚೈವ ತ್ರಿಂಶಚ್ಚ ಕಾಷ್ಠಾ ಗಣಯೇತ್ ಕಲಾಂ ಚ|
ತ್ರಿಂಶತ್ಕಲಶ್ಚೈವ ಭವೇನ್ಮುಹೂರ್ತಸ್ತೈಸ್ತ್ರೀಂಶತಾ ರಾತ್ರ್ಯಹನೀ ಸಮೇತೇ||60||

ಸೂರ್ಯನು ವಿಷ್ಣುಭಗವಂತನ ಶ್ರೇಷ್ಠವಾದ ಅಂಶ. ವಿಕಾರರಹಿತವಾದ ಅಂತರ್ಜ್ಯೋತಿಯೇ ಅವನು. ಅವನ ವಾಚಕಶಬ್ದ ಓಂಕಾರ. ಅದು ರಾಕ್ಷಸವಧೆಗೆ ಸೂರ್ಯನ ಶ್ರೇಷ್ಠವಾದ ಪ್ರೇರಕ. 

ಅದರಿಂದ ಪ್ರೇರಿತವಾದ ದೀಪ್ತಿಶಾಲಿಯಾದ ಸೂರ್ಯಜ್ಯೋತಿಯು ಮಂದೇಹರೆಂಬ ಪಾಪಿರಾಕ್ಷಸರನ್ನು ನಾಶಪಡಿಸುತ್ತವೆ. 

ಆದ್ದರಿಂದ ಸಂಧ್ಯೋಪಾಸನೆಯನ್ನು ಉಲ್ಲಂಘಿಸಬಾರದು. ಯಾವನು ಉಲ್ಲಂಘಿಸುತ್ತಾನೋ ಅವನು ಸೂರ್ಯನ ವಧೆ ಮಾಡಿದಂತೆ. 

ಹೀಗೆ ಬ್ರಾಹ್ಮಣರಿಂದಲೂ ವಾಲಖಿಲ್ಯಾದಿ ಮುನಿಗಳಿಂದಲೂ (ಅರ್ಘ್ಯಪ್ರದಾನದ ಮೂಲಕ) ರಕ್ಷಿತನಾಗಿ ಭಗವಾನ್ ಸೂರ್ಯನು ಜಗತ್ತಿನ ಪರಿಪಾಲನೆಗಾಗಿ ಮುಂದೆ ಸಂಚರಿಸುವನು. 

ಹದಿನೈದು ನಿಮೇಷಗಳಿಗೆ ಒಂದು ಕಾಷ್ಠಾ. 
ಮೂವತ್ತು ಕಾಷ್ಠಗಳಿಗೆ ಒಂದು ಕಲೆ.
ಮೂವತ್ತು ಕಲೆಗಳಿಗೆ ಒಂದು ಮುಹೂರ್ತ.
ಮೂವತ್ತು ಮುಹೂರ್ತಗಳಿಗೆ ಹಗಲು ರಾತ್ರಿಗಳು ಸೇರಿ ಒಂದು ದಿನ. 

(ಸಂಸ್ಕೃತದ ನಿಮೇಷಕ್ಕೂ English ನ Minute ಗೂ ವ್ಯತ್ಯಾಸವಿದೆ. 
ನಿಮೇಷ ಎಂದರೆ ಒಂದು ಸಲ ಕಣ್ಣು ಮುಚ್ಚಿ ತೆರೆಯುವ ಕಾಲ. 
English ನ  1 Second = 2.38 ನಿಮೇಷ.)


**

ಹ್ರಾಸವೃದ್ಧೀ ತ್ವಹರ್ಭಾಗೈರ್ದಿವಸಾನಾಂ ಯಥಾಕ್ರಮಮ್|
ಸಂಧ್ಯಾ ಮುಹೂರ್ತಮಾತ್ರಾ ವೈ ಹ್ರಾಸವೃದ್ಧ್ಯೋ: ಸಮಾ ಸ್ಮೃತಾ||61||

ರೇಖಾಪ್ರಭೃತ್ಯಥಾದಿತ್ಯೇ ತ್ರಿಮುಹೂರ್ತಗತೇ ರವೌ|
ಪ್ರಾತ: ಸ್ಮೃತಸ್ತತ: ಕಾಲೋ ಭಾಗಶ್ಚಾನ್ನ ಸ ಪಂಚಮ:||62||

ತಸ್ಮಾತ್ ಪ್ರಾತಸ್ತನಾತ್ಕಾಲಾತ್ ತ್ರಿಮುಹೂರ್ತಸ್ತು ಸಂಗವ:|
ಮಧ್ಯಾಹ್ನಸ್ತ್ರಿಮುಹೂರ್ತಸ್ತು ತಸ್ಮಾತ್ ಕಾಲಾತ್ತು ಸಂಗವಾತ್||63||

ತಸ್ಮಾನ್ನಾಧ್ಯಾಹ್ನಿಕಾತ್ ಕಾಲಾದಪರಾಹ್ಣ ಇತಿ ಸ್ಮೃತ:|
ತ್ರಯ ಏವ ಮುಹೂರ್ತಾಸ್ತು ಕಾಲಭಾಗ: ಸ್ಮೃತೋ ಬುಧೈ:||64||

ಅಪರಾಹ್ಣೇ ವ್ಯತೀತೇ ತು ಕಾಲ: ಸಾಯಹ್ನ ಏವ ಚ|
ದಶಪಂಚಮುಹೂರ್ತಾ ವೈ ಮುಹೂರ್ತಾಸ್ತ್ರಯ ಏವ ಚ||65||

ಪ್ರಾತ:ಕಾಲ, ಮಧ್ಯಾಹ್ನಕಾಲ, ಮುಂತಾದ ದಿನ ಭಾಗಗಳ ಕಾಲಗಣನೆಯಲ್ಲಿ ಯಥಾಕ್ರಮವಾಗಿ ಹ್ರಾಸ, ವೃದ್ಧಿಗಳು ಆಗುತ್ತವೆ. ಹಗಲಿನ ಪ್ರಮಾಣದಲ್ಲಿ ಹ್ರಾಸವೃದ್ಧಿಗಳಾದರೂ ಸಂಧ್ಯೆಯು ಮಾತ್ರ ಯಾವಾಗಲೂ ಒಂದು ಮುಹೂರ್ತ ಕಾಲವುಳ್ಳದ್ದು. 

ಸೂರ್ಯರೇಖಾದರ್ಶನದಿಂದ ಹಿಡಿದು ಮೂರು ಮುಹೂರ್ತಗಳವರೆಗೆ ಸೂರ್ಯನು ಪ್ರಯಾಣ ಮಾಡುವವರೆಗೆ ಪ್ರಾತ:ಕಾಲ ಎಂದು ಹೆಸರು. 

ಅನಂತರ ಬರತಕ್ಕದ್ದೂ ಹಗಲಿನ ಐದನೆಯ ಒಂದು ಭಾಗ ಪ್ರಮಾಣವುಳ್ಳದ್ದೂ ಆದ ಮೂರು ಮುಹೂರ್ತಗಳ ಕಾಲಕ್ಕೆ ಸಂಗವ ಎಂದು ಹೆಸರು. 

ಸಂಗವ ಕಾಲದಿಂದ ಮುಂದಕ್ಕೆ ಮೂರು ಮುಹೂರ್ತಗಳ ಕಾಲ ಮಧ್ಯಾಹ್ನವೆನಿಸುತ್ತದೆ. 

ಮಧ್ಯಾಹ್ನವಾದಮೇಲೆ ಮುಂದಿನ ಮೂರು ಮುಹೂರ್ತಗಳ ಕಾಲಕ್ಕೆ ಅಪರಾಹ್ಣವೆಂದು ಹೆಸರು. ಅಪರಾಹ್ಣ ಕಳೆದಮೇಲೆ ಮುಂದಿನ ಮೂರು ಮುಹೂರ್ತಗಳ ಕಾಲಕ್ಕೆ ಸಾಯಹ್ನವೆಂದು ಹೆಸರು. 

ಹೀಗೆ ಒಟ್ಟು ಹದಿನೈದು ಮುಹೂರ್ತಗಳು ದಿನದಲ್ಲಿ ಸಲ್ಲುತ್ತವೆ. ಒಂದೊಂದು ಕಾಲವಿಭಾಗಕ್ಕೆ ಮೂರು ಮುಹೂರ್ತಗಳು. 

****

ದಶಪಂಚಮುಹೂರ್ತಂ ವೈ ಅಹರ್ವೈಷುವತಂ ಸ್ಮೃತಮ್|
ವರ್ದ್ಧತೇ ಹ್ರಸತೇ ಚೈವಾಪ್ಯಯನೇ ದಕ್ಷಿಣೋತ್ತರೇ||66||

ಅಹಸ್ತು ಗ್ರಸತೇ ರಾತ್ರಿಂ ರಾತ್ರಿರ್ಗ್ರಸತಿ ವಾಸರಮ್|
ಶರದ್ವಸಂತಯೋರ್ಮಧ್ಯೇ ವಿಷುವಂ ತು ವಿಭಾವ್ಯತೇ||67||

ತುಲಾಮೇಷಗತೇ ಭಾನೌ ಸಮರಾತ್ರಿದಿನಂ ತು ತತ್|
ಕರ್ಕಟಾವಸ್ಥಿತೇ ಭಾನೌ ದಕ್ಷ್ಣಾಯನಮುಚ್ಯತೇ||68||

ಉತ್ತರಾಯಣಮಪ್ಯುಕ್ತಂ ಮಕರಸ್ಥೇ ದಿವಾಕರೇ|
ತ್ರಿಂಶನ್ಮುಹೂರ್ತಂ ಕಥಿತಮಹೋರಾತ್ರಂ ತು ಯನ್ಮಯಾ||69||

ತಾನಿ ಪಂಚದಶ ಬ್ರಹ್ಮನ್ ಪಕ್ಷ ಇತ್ಯಭಿಧೀಯತೇ|
ಮಾಸ: ಪಕ್ಷದ್ವಯೇನೋಕ್ತೋ ದ್ವೌ ಮಾಸೌ ಚಾರ್ಕಜಾವೃತು:||70||

ಋತುತ್ರಯಂ ಚಾಪ್ಯಯನಂ ದ್ವೇಯನೇ ವರ್ಷಸಂಜ್ಞಿತೇ|
ಸಂವತ್ಸರಾದಾಯ: ಪಂಚ ಚತುರ್ಮಾಸವಿಕಲ್ಪಿತಾ:||71||

ಹಗಲು ರಾತ್ರಿಗಳು ಸಮಪ್ರಮಾಣವಿದ್ದಾಗ ಹದಿನೈದು ಮುಹೂರ್ತಗಳಿರುವ ಹಗಲಿಗೆ ವೈಷುವತ ದಿನವೆಂದು ಹೆಸರು. ಉತ್ತರಾಯಣ ದಕ್ಷಿಣಾಯನಗಳಲ್ಲಿ ಹಗಲಿನ ಪ್ರಮಾಣ ಕ್ರಮವಾಗಿ ಹೆಚ್ಚುತ್ತದೆ, ಇಳಿಯುತ್ತದೆ. 

ಹಗಲು ರಾತ್ರಿಯನ್ನೂ ರಾತ್ರಿ ಹಗಲನ್ನೂ ಸ್ವಲ್ಪ ಮಟ್ಟಿಗೆ ನುಂಗುತ್ತದೆ. ಶರದೃತು ಮತ್ತು ವಸಂತ ಋತುಗಳ ನಡುವೆ ಎಂದರೆ ಸೂರ್ಯನು ತುಲಾರಾಶಿಯಲ್ಲಿ ಮತ್ತು ಮೇಷರಾಶಿಯಲ್ಲಿ ಇದ್ದಾಗ ದಿನಪ್ರಮಾಣ ಸಮವಾಗಿರುವ ವಿಷುವದಿನ ಅನುಭವಕ್ಕೆ ಬರುತ್ತದೆ. 

ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದಾಗ ದಕ್ಷಿಣಾಯನ. ಸೂರ್ಯನು ಮಕರ ರಾಶಿಗೆ ಬಂದಾಗ ಉತ್ತರಾಯಣವೆಂದು ಹೇಳಿದ್ದಾಗಿದೆ. 

ಮೈತ್ರೇಯ, ಅಹೋರಾತ್ರಗಳು ಸೇರಿ ಮುವತ್ತು ಮುಹೂರ್ತಗಳಿಗೆ ಒಂದು ದಿನವೆಂದು ಹೇಳಿದೆನಷ್ಟೇ, ಅಂತಹ ಹದಿನೈದು ದಿನಗಳಿಗೆ ಪಕ್ಷವೆಂದೂ ಎರಡು ಪಕ್ಷಗಳಿಗೆ ಮಾಸವೆಂದೂ ಎರಡು ಮಾಸಗಳಿಗೆ ಋತುವೆಂದೂ ಹೆಸರು. 

(ಮೇಷ, ವೃಷಭ ಮಾಸಗಳು ವಸಂತಋತು - ಎಂದು ಸೌರಋತು;
ಚೈತ್ರ, ವೈಶಾಖ ಮಾಸಗಳು ವಸಂತಋತು - ಚಾಂದ್ರಋತು.)

ಮೂರು ಋತುಗಳಿಗೆ ಒಂದು ಅಯನ. ಎರಡು ಅಯನಗಳಿಗೆ ಒಂದು ವರ್ಷ. ನಾಲ್ಕು ಪ್ರಕಾರದ ಮಾಸಗಳ ಲೆಕ್ಕದಿಂದ ಐದು ಬಗೆಯ ಸಂವತ್ಸರಾದಿ ವರ್ಷಗಳು ಆಗುತ್ತವೆ. 

****

ನಿಶ್ಚಯ: ಸರ್ವಕಾಲಸ್ಯ ಯುಗಮಿತ್ಯಭಿಧೀಯತೇ|
ಸಂವತ್ಸರಸ್ತು ಪ್ರಥಮೋ ದ್ವಿತೀಯ: ಪರಿವತ್ಸರ:||72||

ಇದ್ವತ್ಸರಸ್ತೃತೀಯಸ್ತು ಚತುರ್ಥಾಶ್ಚಾನುವತ್ಸರ:|
ವತ್ಸರ: ಪಂಚಮಶ್ಚಾತ್ರ ಕಾಲೋಯಂ ಯುಗಸಂಜ್ಞಿತ:||73||

ಯ: ಶ್ವೇತಸ್ಯೋತ್ತರ: ಶೈಲ: ಶ್ರಂಗವಾನಿತಿ ವಿಶ್ರುತ:|
ತ್ರೀಣಿ ತಸ್ಯ ತು ಶೃಂಗಾಣಿ ಯೈರಯಂ ಶೃಂಗವಾನ್ ಸ್ಮೃತ:||74||

ದಕ್ಷಿಣಂ ಚೋತ್ತರಂ ಚೈವ ಮಧ್ಯಂ ವೈಷುವತಂ ತಥಾ|
ಶರದ್ವಸಂತಯೋರ್ಮಧ್ಯೇ ತದ್ಭಾನು: ಪ್ರತಿಪದ್ಯತೇ||75||

ಈ ಸರ್ವಪ್ರಕಾರದ ವರ್ಷಗಳ ಸಮುದಾಯಕ್ಕೆ 'ಯುಗ' ಎಂಬ ಹೆಸರಿದೆ. 
ಒಂದನೆಯದು ಸಂವತ್ಸರ;
ಎರಡನೆಯದು ಪರಿವತ್ಸರ;
ಮೂರನೆಯದು ಇದ್ವತ್ಸರ;
ನಾಲ್ಕನೆಯದು ಅನುವತ್ಸರ;
ಐದನೆಯದು ವತ್ಸರ;
ಈ ಸಮುದಿತ ಕಾಲಕ್ಕೆ 'ಯುಗ' ಎಂದು ಹೆಸರು. 

ಶ್ವೇತವರ್ಷದ ಉತ್ತರಕ್ಕೆ ಶೃಂಗವಾನ್ ಎಂಬ ಪರ್ವತವಿದೆಯಷ್ಟೆ. ಅದಕ್ಕೆ ಮೂರು ಶೃಂಗಗಳಿರುವುದರಿಂದ 'ಶೃಂಗವಾನ್' ಎಂದು ಹೆಸರಿಸಲಾಗಿದೆ. 

ಒಂದು ದಕ್ಷಿಣ ದಿಕ್ಕಿನಲ್ಲಿ ಇನ್ನೊಂದು ಉತ್ತರ ದಿಕ್ಕಿನಲ್ಲಿ ಇವೆ. ಮಧ್ಯದಲ್ಲಿ ಇರುವ ಶೃಂಗಕ್ಕೆ ವೈಷುವತ ಎಂದು ಹೆಸರು. ಶರತ್ ಮತ್ತು ವಸಂತ ಋತುಗಳ ಮದ್ಯದಲ್ಲಿ ಸೂರ್ಯನು ಈ ವೈಷುವತ ಶೃಂಗಕ್ಕೆ ಬರುತ್ತಾನೆ.

***

ಮೇಷಾದೌ ಚ ತುಲಾದೌ ಚ ಮೈತ್ರೇಯ ವಿಷುವತ್ಸ್ಥಿತ:|
ತದಾ ತುಲ್ಯಮಹೋರಾತ್ರಂ ಕರೋತಿ ತಿಮಿರಾಪಹ:||76||

ದಶಪಂಚಮುಹೂರ್ತಂ ವೈ ತದೇತದುಭಯಂ ಸ್ಮೃತಮ್|
ಪ್ರಥಮೇ ಕೃತ್ತಿಕಾಭಾಗೇ ಯದಾ ಭಾಸ್ವಾಂಸ್ತದಾ ಶಶೀ||77||

ವಿಶಾಖಾನಾಂ ಚತುರ್ಥೇಂಶೇ ಮುನೇ ತಿಷ್ಠತ್ಯಸಂಶಯಮ್|
ವಿಶಾಖಾನಾಂ ಯದಾ ಸೂರ್ಯಶ್ಚರತ್ಯಂಶಂ ತೃತೀಯಕಮ್||78||

ತದಾ ಚಂದ್ರಂ ವಿಜಾನೀಯಾತ್ ಕೃತ್ತಿಕಾಶಿರಸಿ ಸ್ಥಿತಮ್|
ತದೈವ ವಿಷುವಾಖ್ಯೋಯಂ ಕಾಲ: ಪುಣ್ಯೋಭಿಧೀಯತೇ||79||

ತದಾ ದಾನಾನಿ ದೇಯಾನಿ ದೇವೇಭ್ಯ: ಪ್ರಯತಾತ್ಮಭಿ:|
ಬ್ರಾಹ್ಮಣೇಭ್ಯ: ಪಿತೃಭ್ಯಶ್ಚ ಸುಖಮೇತತ್ತು ದಾನಜಮ್||80||

ಮೇಷ ಮತ್ತು ತುಲಾರಾಶಿಗಳ ಆದಿಯಲ್ಲಿ ಸೂರ್ಯನು ವೈಷುವತದಲ್ಲಿದ್ದಾಗ ಆತನು ಅಹೋರಾತ್ರಗಳನ್ನು ಸಮಪ್ರಮಾಣವಾಗಿ ಮಾಡುತ್ತಾನೆ. 

ಆಗ ಹಗಲು ರಾತ್ರಿಗಳೆರಡೂ ಹದಿನೈದು ಮುಹೂರ್ತಗಳಾಗಿರುತ್ತವೆ. ಮೈತ್ರೇಯ, ಯಾವಾಗ ಸೂರ್ಯನು ಕೃತ್ತಿಕೆಯ ಪ್ರಥಮ ಭಾಗದಲ್ಲಿ (ಮೇಷರಾಶಿಯ ಅಂತ್ಯದಲ್ಲಿ) ಇರುತ್ತಾನೋ ಆಗ ಚಂದ್ರನು ನಿಶ್ಚಯವಾಗಿ ವಿಶಾಖೆಯ ನಾಲ್ಕನೆಯ ಅಂಶದಲ್ಲಿ (ವೃಶ್ಚಿಕದ ಆದಿಯಲ್ಲಿ) ಇರುತ್ತಾನೆ. 

ಅಥವಾ ಯಾವಾಗ ಸೂರ್ಯನು ವಿಶಾಖೆಯ ಮೂರನೆಯ ಅಂಶದಲ್ಲಿ (ತುಲಾರಾಶಿಯ ಅಂತ್ಯದಲ್ಲಿ) ಇರುತ್ತಾನೋ ಆಗ ಚಂದ್ರನು ಕೃತ್ತಿಕೆಯ ಆದಿಯಲ್ಲಿ (ಮೇಷರಾಶಿಯ ಅಂತ್ಯದಲ್ಲಿ) ಇರುತ್ತಾನೆಂದು ತಿಳಿಯಬೇಕು. 

ಈ ಎರಡು ಕಾಲವೂ ವಿಷುವ ಪುಣ್ಯಕಾಲ ಎಂದು ಹೇಳಲ್ಪಡುತ್ತದೆ. 
ಆಗ ಜನರು ಪರಿಶುದ್ಧರಾಗಿ ದೇವತೆಗಳಿಗೂ ಬ್ರಾಹ್ಮಣರಿಗೂ ಪಿತೃಗಳಿಗೂ ದಾನಾದಿಗಳನ್ನು ಕೊಡಬೇಕು. ಈ ದಾನವು ಅತ್ಯಂತ ಸುಖಕರವಾದದ್ದು. 


****
ದತ್ತದಾನಸ್ತು ವಿಷುವೇ ಕೃತಕೃತ್ಯೋಭಿ ಜಾಯತೇ|
ಅಹೋರಾತ್ರಾರ್ದ್ಧಮಾಸಾಸ್ತು ಕಲಾ: ಕಾಷ್ಠಾ: ಕ್ಷಣಾಸ್ತಥಾ||81||

ಪೌರ್ಣಮಾಸೀ ತಥಾ ಜ್ಞೇಯಾ ಅಮಾವಾಸ್ಯಾ ತಥೈವ ಚ|
ಸಿನೀವಾಲೀ ಕುಹೂಶ್ಚೈವ ರಾಕಾ ಚಾನುಮತಿಸ್ತಥಾ||82||

ತಪಸ್ತಪಸ್ಯೌ ಮಧುಮಾಧವೌ ಚ ಶುಕ್ರ: ಶುಚಿಶ್ಚಾಯನಮುತ್ತರಂ ಸ್ಯಾತ್|
ನಭೋನಭಸ್ಯೌ ಚ ಇಷಸ್ತಥೋರ್ಜಸ್ಸಹ: ಸಹಸ್ಯಾಮಿತಿ ದಕ್ಷಿಣಂ ತತ್||83||

ಲೋಕಾಲೋಕಶ್ಚ ಯಶ್ಯೈಲ: ಪ್ರಾಗುಕ್ರೋ ಭವತೋ ಮಯಾ|
ಲೋಕಪಾಲಾಸ್ತು ಚತ್ವಾರಸ್ತತ್ರ ತಿಷ್ಠಂತಿ ಸುವ್ರತಾ:||84||

ಸುಧಾಮಾ ಶಂಖಪಾಶ್ಚೈವ ಕರ್ದಮಸ್ಯಾತ್ಮಜೋ ದ್ವಿಜ|
ಹಿರಣ್ಯರೋಮಾ ಚೈವಾನ್ಯಶ್ಚತುರ್ಥ: ಕೇತುಮಾನಪಿ||85||

ವಿಷುವತ್ ಪುಣ್ಯಕಾಲದಲ್ಲಿ ದಾನ ಮಾಡಿದವನು ಕೃತಕೃತ್ಯನಾಗುತ್ತಾನೆ. 
ಅಹೋರಾತ್ರಾತ್ಮಕವಾದ ದಿವಸ, ಪಕ್ಷ, ಕಲಾ, ಕಾಷ್ಠಾ, ಕ್ಷಣ, ರಾಕಾ (ಪೂರ್ಣಚಂದ್ರನಿರುವ ಹುಣ್ಣಿಮೆ), ಅನುಮತಿ (ಒಂದು ಕಲೆ ಕಡಿಮೆಯಾದ ಚಂದ್ರನಿರುವ ಹುಣ್ಣಿಮೆ), ಅಮಾವಾಸ್ಯೆ, ಸಿನೀವಾಲೀ (ಚಂದ್ರಕಲೆ ಕಾಣಿಸುವ ಅಮಾವಾಸ್ಯೆ), ಕುಹೂ (ಚಂದ್ರಕಲೆ ಕಾಣಿಸದ ಅಮಾವಾಸ್ಯೆ) - ಇವು. 

ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ - ಈ ಆರು ತಿಂಗಳು ಉತ್ತರಾಯಣ. 
ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯಾ - ಇವು ಆರು ತಿಂಗಳು ದಕ್ಷಿಣಾಯಣ. 
(ಪ್ರಕ್ರತದಲ್ಲಿ ಈ ಗಣನೆ ಭಿನ್ನವಾಗಿದೆ. ಈ ಕಾಲಮಾನವು ಕ್ರಿ.ಪೂ. 1400 ರಲ್ಲಿ ಇತ್ತು ಎಂದು ಹೇಳುತ್ತಾರೆ.)

ಹಿಂದೆ ನಾನು ಲೋಕಾಲೋಕವೆಂಬ ಪರ್ವತವನ್ನು ಹೇಳಿದೆನಷ್ಟೆ: ಅಲ್ಲಿ ವ್ರತಶೀಲರಾದ ನಾಲ್ವರು ಲೋಕಪಾಲರಾಗಿದ್ದಾರೆ. 

ಸುಧಾಮ, ಕರ್ದಮಪುತ್ರನಾದ ಶಂಖಪಾಲ, ಹಿರಣ್ಯರೋಮ, ನಾಲ್ಕನೆಯವನಾದ ಕೇತುಮಾನ್ - ಎಂಬವರೇ ಆ ಲೋಕಪಾಲರು. 

****

ಏವಮಾವರ್ತಮಾನಾಸ್ತೇ ತಿಷ್ಠಂತಿ ನಿಯತವ್ರತಾ:|
ಸವಿತುರ್ದಕ್ಷಿಣಂ ಮಾರ್ಗಂ ಶ್ರಿತಾ ಹ್ಯಾಚಂದ್ರತಾರಕಮ್||91||

ನಾಗವೀಥ್ಯುತ್ತರಂ ಯಚ್ಚ ಸಪ್ತರ್ಷಿಭ್ಯಶ್ಚ ದಕ್ಷಿಣಮ್|
ಉತ್ತರ: ಸವಿತು: ಪಂಥಾ ದೇವಯಾನಶ್ಚ ಸ ಸ್ಮೃತ:||92||

ತತ್ರ ತೇ ವಶಿನ: ಸಿದ್ಧಾ ವಿಮಲಾ ಬ್ರಹ್ಮಚಾರಿಣ:|
ಸಂತತಿಂ ತೇ ಜುಗುಪ್ಸಂತಿ ತಸ್ಮಾನ್ಮೃತ್ಯುರ್ಜಿತಶ್ಚ ತೈ:||93||

ಅಷ್ಟಾಶೀತಿಸಹಸ್ರಾಣಿ ಮುನಿನಾಮೂರ್ಧ್ವರೇತಸಾಮ್|
ಉದಕ್ವಂಥಾನಮರ್ಯಮ್ಣ: ಸ್ಥಿತಾನ್ಯಭೂತಸಂಪ್ಲವಮ್||94||

ತೇಸಂಪ್ರಯೋಗಾಲ್ಲೋಭಸ್ಯ ಮೈಥುನಸ್ಯ ಚವರ್ಜನಾತ್|
ಇಚ್ಛಾದ್ವೇಷಾಪ್ರವೃತ್ತ್ವಾ ಚ ಭೂತಾರಂಭವಿವರ್ಜನಾತ್||95||

ಪುನಶ್ಚ ಕಾಮಾಸಂಯೋದಾತ್ ಶಬ್ದಾದೇರ್ದೋಷದರ್ಶನಾತ್|
ಇತ್ಯೇಭಿ:ಕಾರಣೈ:ಶುದ್ಧಾಸ್ತೇಮೃತತ್ವಂ ಹಿ ಭೇಜಿರೇ||96||

ನಿಯಮ ಪೂರ್ವಕವಾಗಿ ವ್ರತವನ್ನು ಆಚರಿಸತಕ್ಕ ಅವರು ಹೀಗೆ ಆವೃತ್ತಿಗೊಳ್ಳುತ್ತ ಚಂದ್ರ ನಕ್ಷತ್ರಗಳಿರುವವರೆಗೆ ಸೂರ್ಯನ ದಕ್ಷಿಣ ಮಾರ್ಗದಲ್ಲಿಯೇ ಇರುತ್ತಾರೆ. 

ನಾಗವೀಥಿಗೆ ಉತ್ತರದಲ್ಲಿ ಸಪ್ತರ್ಷಿಗಳ ದಕ್ಷಿಣದಲ್ಲಿ ಸೂರ್ಯನ ಉತ್ತರ ಮಾರ್ಗವಿದೆ. ಅದಕ್ಕೆ ದೇವಯಾನವೆಂದು ಹೆಸರು. 

ಇಲ್ಲಿ ವಶಿಗಳೂ ಸಿದ್ಧರೂ ನಿರ್ಮಲರೂ ಬ್ರಹ್ಮಚರ್ಯ ವ್ರತಧಾರಿಗಳೂ ಆದವರಿದ್ದಾರೆ. ಅವರು ಸಂತತಿಯನ್ನು ಬಯಸತಕ್ಕವರಲ್ಲ. ಆದ್ದರಿಂದ ಮೃತ್ಯುವನ್ನು ಅವರು ಜಯಿಸಿದ್ದಾರೆ. 

ಸೂರ್ಯನ ಉತ್ತರ ಭಾಗದಲ್ಲಿ ಊರ್ಧ್ವರೇತಸ್ಕರಾದ ಎಂಬತ್ತೆಂಟು ಸಾವಿರ ಮುನಿಗಳು ಇದ್ದಾರೆ. ಪ್ರಳಯಪರ್ಯಂತ ಅವರು ಅಲ್ಲಿರುತ್ತಾರೆ. 

ಲೋಭತ್ಯಾಗ, ಮೈಥುನತ್ಯಾಗ, ಇಚ್ಛಾದ್ವೇಷಗಳ ದೂರಿಕರಣ, ಸಂತತಿ ನಿರ್ಮಾಣದ ವರ್ಜನೆ, ಕಾಮನೆಗಳ ವರ್ಜನೆ, ಶಬ್ದಾದಿ ವಿಷಯಗಳಲ್ಲಿ ದೋಷದರ್ಶನದಿಂದ ಅವುಗಳ ತ್ಯಾಗ - ಈ ಕಾರಣಗಳಿಂದ ಅವರು ಶುದ್ಧರಾಗಿ ಅಮೃತತ್ವವನ್ನು ಪಡೆದಿದ್ದಾರೆ. 
****

ಅಭೂತಸಂಪ್ಲವಂ ಸ್ಥಾನಮಮೃತತ್ವಂ ವಿಭಾವ್ಯತೇ|
ತ್ರೈಲೋಕ್ಯಸ್ಥಿತಿಕಾಲೋಯಮಪುನರ್ಮಾರ ಉಚ್ಯತೇ||97||

ಬ್ರಹ್ಮಹತ್ಯಾಶ್ಚಮೇಧಾಭ್ಯಾಂ ಪಾಪಪುಣ್ಯಕೃತೋ ವಿಧಿ:|
ಅಭೂತಸಂಪ್ಲವಾಂತಂತು ಫಲಮುಕ್ತಂ ತಯೋರ್ದ್ವಿಜ||98||

ಯಾವನಮಾತ್ರೇ ಪ್ರದೇಶೇ ತು ಮೈತ್ರೇಯಾವಸ್ಥಿತೋ ಧ್ರುವ:|
ಕ್ಷಯಮಾಯಾತಿ ತಾವತ್ತು ಭೂಮೆರಾಭೂತಸಂಪ್ಲವಾನ್||99||

ಊರ್ಧ್ವೋತ್ತ ಮೃಷಿಭ್ಯಸ್ತು ಧ್ರುವೋ ಯತ್ರ ವ್ಯವಸ್ಥಿತ:|
ಏತದ್ವಿಷ್ಣುಪದಂ ದಿವ್ಯಂ ತೃತೀಯಂ ವ್ಯೋಮ್ನಿ ಭಾಸುರಮ್||100||

ಭೂತಗಳ ಪ್ರಳಯ ಪರ್ಯಂತವಾಗಿ ಸ್ಥಿರವಾಗಿರುವುದಕ್ಕೆ ಅಮೃತತ್ವವೆಂದು ಹೆಸರು. ಮೂರು ಲೋಕಗಳ ಸ್ಥಿತಿಪರ್ಯಂತವಾದ ಈ ಕಾಲವು ಅಪುನರ್ಮಾರ (ಪುನರ್ಮರಣರಹಿತ) ಎಂದು ಉಕ್ತವಾಗಿದೆ. 

ಮೈತ್ರೇಯ! ಬ್ರಹ್ಮಹತ್ಯೆಯಿಂದಾದ ಪಾಪ, ಅಶ್ವಮೇಧದಿಂದಾದ ಪುಣ್ಯ - ಇವುಗಳ ಫಲವು ಪ್ರಳಯ ಪರ್ಯಂತನಾಗಿ ಇರುವುದು ಎಂದು ಉಕ್ತವಾಗಿದೆ‌. 

ಭೂಮಿಯಿಂದ ಧ್ರುವನವರೆಗೆ ಯಾವ ಪ್ರದೇಶವಿದೆಯೋ ಅದು ಪ್ರಳಯಕಾಲದಲ್ಲಿ ನಾಶವಾಗುತ್ತದೆ.

ಸಪ್ತರ್ಷಿಗಳಿಗಿಂತ ಮೇಲೆ ಉತ್ತರದಲ್ಲಿ ಧ್ರುವ ಪರ್ಯಂತವಾದ ಯಾವ ಪ್ರದೇಶವಿದೆಯೋ ಅದು ದಿವ್ಯವೂ ಭಾಸುರವೂ ಆದ ವಿಷ್ಣುವಿನ ತೃತೀಯ ಧಾಮವೆನಿಸಿದೆ.‌

****
: ೧೭:೫೦
ಚಂದ್ರೋದಯ : ೦೯:೩೮
ಚಂದ್ರಾಸ್ಥ : ೨೧:೨೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಚೌತಿ - ೨೦:೨೧ ವರೆಗೆ
ನಕ್ಷತ್ರ : ಉತ್ತರ ಆಷಾಢ - ೧೩:೩೦ ವರೆಗೆ
ಯೋಗ : ಧ್ರುವ - ೨೨:೪೧ ವರೆಗೆ
ಪ್ರಥಮ ಕರಣ : ವಣಿಜ - ೦೭:೦೩ ವರೆಗೆ
ದ್ವಿತೀಯ ಕರಣ : ವಿಷ್ಟಿ - ೨೦:೨೧ ವರೆಗೆ
ಸೂರ್ಯ ರಾಶಿ : ವೃಶ್ಚಿಕ
ಚಂದ್ರ ರಾಶಿ : ಮಕರ
ಅಭಿಜಿತ್ ಮುಹುರ್ತ : ೧೧:೫೦ - ೧೨:೩೫
ದುರ್ಮುಹೂರ್ತ : ೦೮:೫೦ - ೦೯:೩೫
ದುರ್ಮುಹೂರ್ತ : ೨೨:೫೬ - ೨೩:೪೭
ಅಮೃತಕಾಲ : ೨೮:೫೨+ - ೩೦:೪೦+
ವರ್ಜ್ಯಂ : ೧೮:೦೧ - ೧೯:೪೯
ರಾಹು ಕಾಲ : 15:02 to 16:26
---------------------------------
Nitya Panchangam. By. Kaup Laxmikantha Tantry
swasthi sri jayabhyudaya shalivahana shakha 1940 Vilambhi nama samvathasara Dakshinaayana hemantartu
SOURA maargashira maasa Dina 24
Tuesday, December 11, .....
Sunrise 06:35
Sunset 17:51
Moonrise 09:38
Moonset 21:23
Paksha Shukla Paksha
Tithi Chouti upto 20:22
Nakshatra Uttara Ashadha upto 13:30
Yoga Dhruva upto 22:41
Karana Vanija upto 07:04
Karana Vishti upto 20:22
Sunsign Vrishchika
Moonsign Makara
Rahu Kalam 15:02 to 16:26
Varjyam 18:02 to 19:50
*****
ಸಂವತ್ಸರ : ವಿಳಂಬಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಆಶ್ವಯುಜ ಮಾಸ
ಋತು : ಶರದೃತು
ಕಾಲ : ಮಳೆಗಾಲ
ವಾರ : ಸೋಮವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಪಂಚಮಿ
(ನಿನ್ನೆ ಸಂಜೆ 4 ಗಂ॥ 54 ನಿ।। ರಿಂದ ಇಂದು ಸಂಜೆ 3 ಗಂ॥ 3 ನಿ।। ತನಕ)
ನಕ್ಷತ್ರ : ಮೃಗಶಿರ
(ನಿನ್ನೆ ಬೆಳಿಗ್ಗೆ 7 ಗಂ॥ 24 ನಿ।। ರಿಂದ ಇಂದು ಬೆಳಿಗ್ಗೆ 6 ಗಂ॥ 18 ನಿ।। ತನಕ)
ಯೋಗ : ಶಿವ
ಕರಣ : ತೈತಿಲ
ವರ್ಜ್ಯಂ :
ಇಂದು ಯಾವುದೇ ವರ್ಜ್ಯಂ ಇಲ್ಲ.
ಅಮೃತಕಾಲ :
ಇಂದು ಯಾವುದೇ ಅಮೃತಕಾಲ ಇಲ್ಲ.
ದುರ್ಮುಹೂರ್ತ :
(ಬೆಳಿಗ್ಗೆ 12 ಗಂ॥ 22 ನಿ।। ರಿಂದ ಮಧ್ಯಾಹ್ನ 1 ಗಂ॥ 8 ನಿ।। ತನಕ)(ಮಧ್ಯಾಹ್ನ 2 ಗಂ॥ 41 ನಿ।। ರಿಂದ ಸಂಜೆ 3 ಗಂ॥ 27 ನಿ।। ತನಕ)
ರಾಹುಕಾಲ :
(ಬೆಳಿಗ್ಗೆ 7 ಗಂ॥ 39 ನಿ।। ರಿಂದ ಬೆಳಿಗ್ಗೆ 9 ಗಂ॥ 5 ನಿ।। ತನಕ)
ಗುಳಿಕ :
(ಮಧ್ಯಾಹ್ನ 1 ಗಂ॥ 26 ನಿ।। ರಿಂದ ಮಧ್ಯಾಹ್ನ 2 ಗಂ॥ 52 ನಿ।। ತನಕ)
ಯಮಗಂಡ :
(ಬೆಳಿಗ್ಗೆ 10 ಗಂ॥ 32 ನಿ।। ರಿಂದ ಬೆಳಿಗ್ಗೆ 11 ಗಂ॥ 58 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 13 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 46 ನಿ।। ಗೆ
ರವಿರಾಶಿ : ತುಲಾ
ಚಂದ್ರರಾಶಿ : ಮಿಥುನ
*****

श्री गणेशाय नम:🚩 

ದಿನನಿತ್ಯ ಪಂಚಾಂಗ 
New Delhi, India

☀ ಪಂಚಾಂಗ    

🔅 ತಿಥಿ  ಪಂಚಮಿ  15:05:43
🔅 ನಕ್ಷತ್ರ  ಆರ್ದ್ರ  29:06:25
🔅 ಕರಣ :
           ತೈತುಲ  15:05:43
           ಗರಜ  26:08:24
🔅 ಪಕ್ಷ  ಕೃಷ್ಣ  
🔅 ಯೋಗ  ಶಿವ  19:58:49
🔅 ದಿನ  ಸೋಮವಾರ  

☀ ಸೂರ್ಯ/ರವಿ ಮತ್ತು ಚಂದ್ರ ಲೆಕ್ಕಾಚಾರ    

🔅 ಸೂರ್ಯ ಉದಯ  06:30:37  
🔅 ಚಂದ್ರೋದಯ  21:41:59  
🔅 ಚಂದ್ರ ರಾಶಿ  ಮಿಥುನ  
🔅 ಸೂರ್ಯ ಅಸ್ತಮ  17:38:52  
🔅 ಚಂದ್ರಾಸ್ತ  10:52:59  
🔅 ಋತು  ಹೇಮಂತ  

☀ ಹಿಂದು ಮಾಸಿಕ ಮತ್ತು ವರ್ಷ    

🔅 ±Àಖ ಸಂವತ್ಸರ  1940  ವಿಲಂಬಿ
🔅 ಕಲಿ ಸಂವತ್ಸರ  5120  
🔅 ದಿನದ ಅವಧಿ  11:08:14  
🔅 ವಿಕ್ರಮ ಸಂವತ್ಸರ  2075  
🔅 ಅಮವಾಸ್ಯೆ  ಆಶ್ವೀಜ  
🔅 ಪೌರ್ಣಮಿ / ಹುಣ್ಣಿಮೆ  ಕಾರ್ತಿಕ  

☀ ಶುಭ ಸಮಯ    

☀ ಶುಭ ಸಮಯ    
🔅 ಅಭಿಜಿತ್  11:42:28 - 12:27:01
☀ ಅಶುಭದ ಸಮಯ    
🔅 ದುಷ್ಟ ಮೂಹುರ್ತ : 
                     12:27:01 - 13:11:34
                     14:40:40 - 15:25:13
🔅 ಕಂಟಕ / ಮೃತ್ಯು  08:44:16 - 09:28:49
🔅 ಯಮಗಂಡಕಾಲ  11:42:28 - 12:27:01
🔅 ರಾಹು ಕಾಲ  07:54:09 - 09:17:41
🔅 ಗುಳಿಕ  14:40:40 - 15:25:13
🔅 ಕಾಲ ವೇಳೆ  10:13:22 - 10:57:55
🔅 ಯಮಗಂಡ  10:41:13 - 12:04:45
🔅 ಗುಳಿಕ ಕಾಲ  13:28:17 - 14:51:49
☀ ದಿಶ ಶೂಲ    
🔅 ದಿಶ ಶೂಲ  ಪೂರ್ವ   

☀ ಚಂದ್ರಾಬಲ ಮತ್ತು ತಾರಾಬಲ    

☀ ತಾರಾಬಲ  
🔅 ಅಶ್ವಿನಿ, ಕೃತ್ತಿಕಾ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ಸ್ವಾತಿ, ವಿಶಾಖ, ಅನುರಾಧ, ಮೂಲ, ಉತ್ತರಾಷಾಡ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ  
☀ ಚಂದ್ರಾಬಲ  
🔅 ಮೇಷ, ಮಿಥುನ, ಸಿಂಹ, ಕನ್ಯಾ, ಧನು, ಮಕರ
*******



ಮೃತ ಪಿಂಡ ರೂಪೀ ಸೂರ್ಯನಲ್ಲಿ ಇರುವ ಅಮೃತ ಪ್ರಾಣವನ್ನೇ ಇಂದ್ರನೆಂದು ಕರೆಯಲಾಗಿದೆ. ಇದೇ ಕಾರಣದಿಂದ ಒಮ್ಮೊಮ್ಮೆ ಸೂರ್ಯನನ್ನೂ ಇಂದ್ರನೆಂದು ಸಂಬೋಧಿಸಿದ್ದು ಕಂಡುಬರುತ್ತದೆ -


ಏಷ ವೈ ಶುಕ್ರಃ ಯ ಏಷ ತಪತಿ, ಏಷ ಉ ಇಂದ್ರಃ || ಶತಪಥ ಬ್ರಾಹ್ಮಣ ೪-೫-೫-೭.

ಮೊದಲೇ ಹೇಳಿದಂತೆ ಗತಿಯು ಎರಡು ರೀತಿಯಲ್ಲಿರುತ್ತದೆ - ಒಂದು ಪ್ರಾಗ್ ಗತಿ, ಇದು ವಸ್ತುವಿನಿಂದ ವಿಮುಖವಾಗುತ್ತದೆ. ಇನ್ನೊಂದು ಪ್ರತ್ಯಗ್ ಗತಿ, ಇದು ವಸ್ತುವಿನ ಸಮ್ಮುಖವಾಗಿರುತ್ತದೆ. ಇವೆರಡೂ ಗತಿಗಳನ್ನು ಗತಿ ಎಂಬ ಇಂದ್ರ ಪ್ರಕಾರದಲ್ಲಿ ಗುರುತಿಸಲಾಗಿದೆ. ಯಜುವಿನಲ್ಲಿ ಯತ್ ಭಾಗವು ಗತಿಯಾದರೆ, ಜು ಭಾಗವು ಸ್ಥಿತಿ ಆಗಿದೆ. ಈ ಗತಿಭಾಗವು ಪ್ರಾಣಾತ್ಮಕ ವಾಯುವಾಗಿದೆ. ಈ ವಾಯುವನ್ನು ಇಂದ್ರವೆಂದು ಕರೆಯುತ್ತಾರೆ -

ಅಯಂ ವಾವ ಇಂದ್ರೋ ಯೋಽಯಂ ಪವತೇ || ಶತಪಥ ಬ್ರಾಹ್ಮಣ ೧೪-೨-೧-೬.

ಪ್ರಾಗ್ ಗತಿಯನ್ನು ಇಂದ್ರವೆಂದರೆ, ಪ್ರತ್ಯಗ್ ಗತಿಯನ್ನು ಉಪೇಂದ್ರ ಎನ್ನಲಾಗಿದೆ. ಉಪೇಂದ್ರದ ಮತ್ತೊಂದು ಹೆಸರೇ ವಿಷ್ಣು. ವಸ್ತುವಿನ ಮಂಡಲವನ್ನು ಸಾಮ ಎಂದು ಕರೆಯಲಾಗಿದೆ. ಈ ಸಾಮದಿಂದ ವಸ್ತುವಿನ ಕೇಂದ್ರದತ್ತ ಬರುವ ಗತಿಯು ವಿಷ್ಣುವಾದರೆ (ಉಪೇಂದ್ರವಾದರೆ), ಕೇಂದ್ರದಿಂದ ಪರಿಧಿಯತ್ತ ಹೋಗುವ ಗತಿಯು ಇಂದ್ರವಾಗಿದೆ. ಅಶನಾಯಾದ (ಇಚ್ಛಾ/ಕರ್ಮ/ ಹಸಿವೆಯ) ಕಾರಣ ವಿಷ್ಣುವು ಹೊರಗಿನಿಂದ ಪದಾರ್ಥವನ್ನು ಕೇಂದ್ರದಲ್ಲಿ ಪ್ರತಿಷ್ಠಿತಗೊಳಿಸುತ್ತದೆ. ಆದ್ದರಿಂದ ವಿಷ್ಣುವನ್ನು ಸಂಸಾರದ ಪಾಲನಕರ್ತನೆಂದು ಹೇಳಲಾಗಿದೆ. ವಿಕ್ಷೇಪಣೆಯಿಂದ ಇಂದ್ರವು ಪದಾರ್ಥವನ್ನು ಕೇಂದ್ರದಿಂದ ಪರಿಧಿಯತ್ತ ಎಸೆಯುತ್ತದೆ, ಹಾಗಾಗಿ ಇಂದ್ರನು ಪುರಾಣಗಳ ಭಾಷೆಯಲ್ಲಿ ಮಹಾದೇವನೆಂದು, ಸಂಹಾರದ ದೇವತೆಯಂದು ಬಣ್ಣಿಸಲಾಗಿದೆ. ಮೂರನೆಯ ದೇವತೆಯಾದ ಬ್ರಹ್ಮವು ಸ್ಥಿತ ರೂಪವಾಗಿದೆ. ಇದು ಪದಾರ್ಥದ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಅಧ್ಯಾತ್ಮ ಸಂಸ್ಥಾದಲ್ಲಿ ಬಾಲ್ಯ ಅವಸ್ಥೆಯು ಪ್ರಾತಃ ಸವನ, ಯುವಾವಸ್ಥೆಯು ಮಾಧ್ಯಂದಿನ ಸವನ ಹಾಗೂ ವೃದ್ಧಾವಸ್ಥೆಯು ಸಾಯಂ ಸವನಗಳಾಗಿವೆ. ಪ್ರಾತಃ ಸವನದಲ್ಲಿ ವಿಷ್ಣುವು ಬಲವಂತನಾಗಿರಲು, ಇಂದ್ರವು ನಿರ್ಬಲವಾಗಿರುತ್ತದೆ. ಈ ಅವಸ್ಥೆಯಲ್ಲಿ ಆಯವು ಅಧಿಕವಾಗಿರುತ್ತದೆ, ವ್ಯಯವು ಕಡಿಮೆಯಾಗಿರುತ್ತದೆ. ಮಾಧ್ಯಂದಿನದಲ್ಲಿ ಇಂದ್ರ ಹಾಗೂ ವಿಷ್ಣುಗಳೆರಡೂ ಸಮಾನ ಬಲವುಳ್ಳವಾಗಿರುತ್ತವೆ -

ಉಭಾ ಜಿಗ್ಯಥುರ್ನ ಪರಾಜಯೇಥೇ ನ ಪರಾಜಿಗ್ಯೇ ಕತರಶ್ಚನೈನೋಃ |
ಇಂದ್ರಶ್ಚ ವಿಷ್ಣೋ ಯದಪಸ್ಪೃಧೇಥಾಂ ತ್ರೇಧಾ ಸಹಸ್ರಂ ವಿ ತದೈರಯೇಥಾಮ್ || ಋಕ್ಸಂಹಿತಾ ೬-೬೯-೮ ||
(ಸಶೇಷ..)
****

about saptarshi mandal  sapta rishi  dhruva nakshatra or north star and swastik swasthik








**

No comments:

Post a Comment