SEARCH HERE

Sunday, 28 March 2021

ಪೂಜೆಯಲ್ಲಿ ಗಂಟೆ ಬಾರಿಸುವುದರ ಪ್ರಯೋಜನ

 ಪೂಜೆಯಲ್ಲಿ ಗಂಟೆ ಬಾರಿಸಿದರೆ ಪುಣ್ಯ ಪ್ರಾಪ್ತಿ..! ಗಂಟೆ ಬಾರಿಸುವುದರ ಪ್ರಯೋಜನವೇನು..?


ನಿತ್ಯ ನಾವು ದೇವರನ್ನು ಪೂಜಿಸುವಾಗ ಗಂಟೆಯನ್ನು ಉಪಯೋಗಿಸುತ್ತೇವೆ. ಆದರೆ ಗಂಟೆಯನ್ನು ಪೂಜೆಯಲ್ಲಿ ಯಾಕೆ ಉಪಯೋಗಿಸಬೇಕು..? ಗಂಟೆಯನ್ನು ಪೂಜೆಯಲ್ಲಿ ಬಾರಿಸುವುದರಿಂದಾಗುವ ಪ್ರಯೋಜನವೇನು..?

    

ನಮ್ಮ ದೈನಂದಿನ ಪೂಜೆಯಲ್ಲಿ ನಾವು ದೇವರನ್ನು ಮೆಚ್ಚಿಸಲು ಅನೇಕ ವಸ್ತುಗಳನ್ನು ಪೂಜೆಯಲ್ಲಿ ಬಳಸುತ್ತೇವೆ. ಈ ಪೂಜಾ ಸಾಮಾಗ್ರಿಗಳನ್ನು ನಾವು ನಿಯಮಿತವಾಗಿ ದೇವರ ಪೂಜೆಯಲ್ಲಿ ಉಪಯೋಗಿಸುತ್ತೇವೆ. ಆದರೆ ನಾವು ಪೂಜೆಯಲ್ಲಿ ಬಳಸುವ ಸಾಮಾಗ್ರಿಗಳನ್ನು ಸರಿಯಾದ ವಿಧಿ - ವಿಧಾನಗಳಿಂದ, ನಿಯಮಗಳಿಂದ ಬಳಸಬೇಕಾಗುತ್ತದೆ. ನಾವು ಪೂಜೆಯಲ್ಲಿ ಬಳಸುವ ವಸ್ತುಗಳಿಂದ ಸ್ವಲ್ಪ ಏರುಪೇರಾದರೂ ಪೂಜೆಯ ಫಲ ನಮಗೆ ದೊರಕದು. 


ಪೂಜೆಯಲ್ಲಿ ಗಂಟೆ ಬಾರಿಸುವುದರ ಪ್ರಯೋಜನ


ಧರ್ಮಗ್ರಂಥಗಳಲ್ಲಿ ಪೂಜೆಯಲ್ಲಿ ಬಳಸುವ ವಸ್ತುಗಳನ್ನು ಹೇಗೆ ಬಳಸಬೇಕೆನ್ನುವುದರ ಕುರಿತು ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ಅವುಗಳಲ್ಲಿ ಗಂಟೆ ಕೂಡ ಒಂದು. ನಾವು ದಿನನಿತ್ಯದ ಪೂಜೆಯಲ್ಲಿ ಬಳಸುವ ವಸ್ತುಗಳಲ್ಲಿ ಗಂಟೆಯನ್ನು ಕೂಡ ಬಳಸಲಾಗುತ್ತದೆ. ದಿನನಿತ್ಯ ನಾವು ದೇವರನ್ನು ಪೂಜಿಸುವಾಗ ಗಂಟೆಯನ್ನು ಬಳಸುತ್ತೇವೆ. ಆದರೆ ನಿಮಗೆ ಗಂಟೆಯನ್ನು ಹೇಗೆ ಬಳಸಬೇಕು ಗೊತ್ತಾ..? 


ದೈನಂದಿನ ಪೂಜೆಯಲ್ಲಿ ಗಂಟೆಯನ್ನು ಹೇಗೆ ಉಪಯೋಗಿಸಬೇಕು..? ಪೂಜೆ ಕೋಣೆಯಲ್ಲಿ ಗಂಟೆಯನ್ನು ಸರಿಯಾದ ರೀತಿಯಲ್ಲಿ ಇಡುವುದು ಅತ್ಯಂತ ಅವಶ್ಯಕವಾಗಿದೆ. ಪೂಜಾ ಸಮಯದಲ್ಲಿ ಯಾವಾಗ ಗಂಟೆ ಬಾರಿಸಬೇಕು..? ನಾವು ಉಪಯೋಗಿಸುವ ಗಂಟೆಯ ಮೇಲೆ ಯಾವ ದೇವರ ಚಿಹ್ನೆ ಇರಬೇಕು..? ಗಂಟೆ ಬಾರಿಸುವುದರಿಂದಾಗುವ ಪ್ರಯೋಜನವೇನು..? 


ಯಾವಾಗ ಗಂಟೆ ಬಾರಿಸಬೇಕು..?

ಸ್ನಾನೇ ಧೂಪೇ ಚ ನೈವೇದೇ ದೀಪೇ ವಸ್ತ್ರೇ ಚ ಭೂಷಣೇ |

ಗಂಟನಾದಂ ಪ್ರಕುರ್ವಿತ ತತಾ ನಿರಾಜನೇಪಿ ಚ ||


ಅರ್ಥ: ಭಗವಂತನಿಗ ಸ್ನಾನ ಅಥವಾ ಅಭಿಷೇಕವನ್ನು ಮಾಡುವಾಗ ಗಂಟೆ ಬಾರಿಸಬೇಕು. ಧೂಪ ಮತ್ತು ನೈವೇದ್ಯವನ್ನು ದೇವರಿಗೆ ಅರ್ಪಿಸುವಾಗ ಗಂಟೆ ಬಾರಿಸಬೇಕು. ದೀಪವನ್ನು ಬೆಳಗುವಾಗ ಗಂಟೆ ಬಾರಿಸಬೇಕು. ಬಟ್ಟೆ, ಆಭರಣಗಳನ್ನು ಧರಿಸುವಾಗ ಭಗವಂತನಿಗೆ ಗಂಟೆ ಶಬ್ಧವನ್ನು ಮಾಡಬೇಕು. ಹಾಗೂ ದೇವರಿಗೆ ಆರತಿಯನ್ನು ಬೆಳಗುವಾಗ ಗಂಟೆಯನ್ನು ಬಾರಿಸಬೇಕು. 


ಪೂಜೆಯಲ್ಲಿ ಗಂಟೆ ಯಾಕೆ ಬಾರಿಸಬೇಕು


ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಾಕ್ಷಸಾಂ |

ಕುರು ಗಂಟೇ ವರಂ ನಾದಂ ದೇವತಾಸ್ಥಾನಸನ್ನಿಧೋ ||



ದೇವರುಗಳ ಆಗಮನಕ್ಕಾಗಿ, ರಾಕ್ಷಸರ ಗಮನಕ್ಕಾಗಿ, ಪೂಜೆಯಲ್ಲಿ ಯಾವುದೇ ಅಡೆತಡೆಗಳು ಇರಬಾರದೆನ್ನುವ ಉದ್ದೇಶದಿಂದ ದಿನನಿತ್ಯದ ಪೂಜೆಯಲ್ಲಿ ಗಂಟೆಯನ್ನು ಬಾರಿಸಲಾಗುತ್ತದೆ. 


ಗಂಟೆ ಬಾರಿಸುವುದರಿಂದಗುವ ಪ್ರಯೋಜನವೇನು..? 

ಸ್ಕಂದ ಪುರಾಣದ ಪ್ರಕಾರ, ಭಗವಾನ್‌ ವಿಷ್ಣು ಗಂಟೆ ನನಗೆ ಎಂದೆಂದಿಗೂ ಪ್ರಿಯವಾದ ವಸ್ತು ಎಂದು ಹೇಳಿದ್ದಾನೆ. ನನ್ನ ಪೂಜೆಯಲ್ಲಿ ಗಂಟೆ ಬಾರಿಸುವುದರಿಂದ 100 ತ್ಯಾಗ ಮಾಡಿದಷ್ಟು ಪುಣ್ಯ ಪ್ರಾಪ್ತವಾಗುತ್ತದೆ. ನನ್ನ ಪೂಜೆಯ ಸಮಯದಲ್ಲಿ ಗಂಟೆಯನ್ನು ಬಾರಿಸಿದರೆ ಆ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಆ ವ್ಯಕ್ತಿಯ ಎಲ್ಲಾ ಪಾಪಗಳು ದೂರಾಗುತ್ತದೆ ಎಂದು ವಿಷ್ಣು ಹೇಳಿದ್ದಾನೆ. 


ಪೂಜೆಯಲ್ಲಿ ಯಾವ ಗಂಟೆ ಬಾರಿಸಬೇಕು


ಗರುಡ ಚಿಹ್ನೆಯಿರುವ ಗಂಟೆಯನ್ನು ಪೂಜೆಯಲ್ಲಿ ಬಳಸಬೇಕೆಂದು ಭಗವಾನ್‌ ವಿಷ್ಣು ಹೇಳಿದ್ದಾನೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಗಂಟೆಗಳು ಲಭ್ಯವಿದೆ. ಆದರೆ ದೈನಂದಿನ ಪೂಜೆಯಲ್ಲಿ ನಾವು ಗರುಡ ಚಿಹ್ನೆಯಿರುವ ಗಂಟೆಯನ್ನೇ ಬಾರಿಸಬೇಕು. ಭಗವಾನ್ ವಿಷ್ಣು ಹೇಳಿರುವಂತೆ ಗಂಟೆಯೊಂದಿಗೆ ಧೂಪ ಮತ್ತು ದೀಪವನ್ನು ಬೆಳಗಿ ಆರತಿ ಮಾಡುವುದರಿಂದ ಆ ವ್ಯಕ್ತಿಯು 100 -100 ಚಂದ್ರಯಾನದ ಫಲಿತಾಂಶವನ್ನು ಪಡೆಯುತ್ತಾನೆ ಹಾಗೂ ಆ ವ್ಯಕ್ತಿಯ ಅನೇಕ ಜನ್ಮಗಳ ಪಾಪವು ತೊಳೆದುಹೋಗುವುದು.

******


No comments:

Post a Comment