SEARCH HERE

Tuesday, 1 January 2019

ಅಮೃತಬಳ್ಳಿಯ 10 ಆರೋಗ್ಯಕಾರಿ ಪ್ರಯೋಜನಗಳು amruta balli uses for good health


please check and verify before you follow these

ನಾಟಿ ಮದ್ದು: ಅಮೃತಬಳ್ಳಿಯ 10 ಆರೋಗ್ಯಕಾರಿ ಪ್ರಯೋಜನಗಳು

ಆಯುರ್ವೇದ ಗಿಡಮೂಲಿಕೆಗಳಲ್ಲಿ ವಿಶೇಷವಾದ ಔಷಧೀಯ ಗುಣಗಳಿರುತ್ತವೆ. ಇವುಗಳ ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಅಂತಹ ಒಂದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಗಿಡಮೂಲಿಕೆಗಳಲ್ಲಿ ಅಮೃತ ಬಳ್ಳಿಯೂ ಒಂದು. ಇದನ್ನು ಗುಡುಚಿ ಎಂತಲೂ ಕರೆಯುತ್ತಾರೆ.

ಇದನ್ನು ನಾವು ವಿವಿಧ ರೂಪದಲ್ಲಿ ಪಡೆದುಕೊಳ್ಳಬಹುದು. ವಿಶಿಷ್ಟವಾದ ಪೊದೆಯ ರೂಪದಲ್ಲಿ ಹಾಗೂ ಮರಕ್ಕೆ ಹಬ್ಬುವುದರ ಮೂಲಕ ಬೆಳೆಯುತ್ತದೆ. ಇದು ಬೂದಿ ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ. ಹಾಲು ಮಿಶ್ರಿತ ಹಳದಿ ಬಣ್ಣದ ಹೂವನ್ನು ಬಿಡುವುದು. ಇದರ ಕಾಯಿ ಹಣ್ಣಾದಾಗ ಗಾಢವಾದ ಕೆಂಪು ಬಣ್ಣವನ್ನು ಹೋಲುವುದು. ಇದರ ಕಾಂಡ, ಎಲೆ ಹಾಗೂ ಬೇರುಗಳಿಂದ ಔಷಧಿಯನ್ನು ತಯಾರಿಸಲಾಗುವುದು.

ಅಮೃತ ಬಳ್ಳಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ. ನಂತರ ನೀರನ್ನು ಸೋಸಿ ಕುಡಿಯುವುದರಿಂದ ಶರೀರದಲ್ಲಿ ಬಲವನ್ನು ಪಡೆದುಕೊಳ್ಳಬಹುದು. ಚೈತನ್ಯ ದೊರೆಯುವುದು. ಹೃದಯಕ್ಕೆ ಹಿತಕರವಾದದ್ದು. ತ್ರಿದೋಷಗಳನ್ನು ಶಮನ ಮಾಡುವಂತಹದ್ದು. ಪಿತ್ತಕೋಶ, ಯಕೃತ್, ದೃಷ್ಟಿದೋಷ, ಮಧುಮೇಹ, ರಕ್ತ ಸಮಸ್ಯೆ ಹಾಗೂ ಶುದ್ಧೀಕರಣಕ್ಕೆ ಸಹಾಯ ಮಾಡುವುದು.

1.ಯಕೃತ್ ಸಮಸ್ಯೆ

ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.

ಸಲಕರಣೆ:

ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಸ್ವಲ್ಪ ಹಿಪ್ಪಲಿ.

ವಿಧಾನ:

- ಈ ಮೂರು ಸಲಕರಣೆಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ.

- ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.

- ಮುಂಜಾನೆ ಸಾಮಾಗ್ರಿಗಳನ್ನು ನೀರಿನಿಂದ ಕಿವುಚಿ ತೆಗೆಯಿರಿ/ ಸೋಸಿ.

- ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.

- ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸ ಬೇಕು.

- 10 ರಿಂದ 15 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿದೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳು ನಿವಾರಣೆಯಾಗುವವು.

2.ದೃಷ್ಟಿ ದೋಷ

ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು.

ಸಲಕರಣೆಗಳು:

ಅಮೃತ ಬಳ್ಳಿ ಮತ್ತು ಜೇನು ತುಪ್ಪ.

ವಿಧಾನ:

- ಅಮೃತ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.

- ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಸೇರಿಸಿ.

- ನೀರಿನ ಪಾತ್ರೆಗೆ ಅಮೃತ ಬಳ್ಳಿಯ ತುಂಡನ್ನು ಸೇರಿಸಿ, ಚೆನ್ನಾಗಿ ಕುದಿಸಿ.

- ನಂತರ ದ್ರಾವಣವನ್ನು ಸೋಸಿ, ಸ್ವಲ್ಪ ತ್ರಿಫಲ ಚೂರ್ಣ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

- ಇದನ್ನು 45 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ದೃಷ್ಟಿ ದೋಷಗಳನ್ನು ನಿವಾರಿಸಬಹುದು.

- ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.

3. ವಾಕರಿಕೆ/ವಾಂತಿ

ವಾಂತಿಯನ್ನು ಬಲು ಸುಲಭವಾಗಿ ನಿಯಂತ್ರಿಸುವುದು ಅಮೃತ ಬಳ್ಳಿ.

ಸಲಕರಣೆ:

ಅಮೃತ ಬಳ್ಳಿ.

ವಿಧಾನ:

- ಸ್ವಲ್ಪ ಅಮೃತ ಬಳ್ಳಿ ತುಂಡುಗಳನ್ನು ತೆಗೆದುಕೊಂಡು, ಚೆನ್ನಾಗಿ ಜಜ್ಜಿ.

- ಬಳಿಕ ನೀರಲ್ಲಿ ಹಾಕಿ, ಸ್ವಲ್ಪ ಸಮಯ ನೆನೆಯಿಡಿ.

- ಅಮೃತ ಬಳ್ಳಿಯನ್ನು ಕಿವುಚಿ ತೆಗೆದು, ನೀರನ್ನು ಸೋಸಿ.

- ಬಳಿಕ ಆ ದ್ರಾವಣವನ್ನು ಸೇವಿಸಿ.

4. ಕೂದಲು ಸೊಂಪಾಗಿ ಬೆಳೆಯುವುದು:

ಅಮೃತ ಬಳ್ಳಿ ಈ ಮೊದಲೆ ಹೇಳಿದಂತೆ ದಿವ್ಯ ಔಷಧಿಯ ಗುಣವನ್ನು ಒಳಗೊಂಡಿದೆ. ಮನೆಯಲ್ಲಿ ಜಾಗವಿದ್ದರೆ ಅಲ್ಲಿ ಅಮೃತ ಬಳ್ಳಿಯನ್ನು ಬೆಳೆಸಿ. ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಇದನ್ನು ಬಳ್ಳಿಯಂತೆ ಹಬ್ಬಿಸಬಹುದು ಅಥವಾ ಚಪ್ಪರದಂತೆ ಮಾಡಿಕೊಳ್ಳಬಹುದು. ಇದರ ಗಾಳಿ ಸೇವನೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಸಾಮಾಗ್ರಿ:

ಅಮೃತ ಬಳ್ಳಿ, ಎಳ್ಳೆಣ್ಣೆ, ಪಚ್ಚಕರ್ಪೂರ.

ವಿಧಾನ:

-ಅಮೃತ ಬಳ್ಳಿಯನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿ.

- ಕಷಾಯವು ಸಾಕಷ್ಟು ಇಂಗಿದ ಮೇಲೆ, ಸಮಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ.

- ಪುನಃ ಕುದಿಯಲು ಇಡಿ. ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಪಚ್ಚ ಕರ್ಪೂರವನ್ನು ಸೇರಿಸಿ.

- ನೀರಿನಂಶ ಹೋಗುವವರೆಗೆ ಕುದಿಸಬೇಕು.

- ಸ್ವಲ್ಪ ಸಮಯ ಆರಲು ಬಿಟ್ಟು, ಸೋಸಿಕೊಳ್ಳಿ.

- ಸೋಸಿದ ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು. ಕಣ್ಣಿಗೆ ತಂಪನ್ನು ನೀಡುವುದು ಹಾಗೂ ಮಿದುಳಿಗೆ ಉತ್ತಮ ಆರೈಕೆ ನೀಡುವುದು.

5. ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್

ಸೂಕ್ತ ಆಹಾರ ಸೇವನೆ ಇಲ್ಲದೆ ಅಥವಾ ಅನುಚಿತ ಆಹಾರ ಪದ್ಧತಿಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಸಹಜ. ಅತಿಯಾದ ಹುಳಿ ತೇಗು, ಗಂಟಲು ಉರಿ, ಎದೆ ಉರಿ ಅನುಭವಿಸುವವರಿಗೆ ಈ ಸಮಸ್ಯೆಗೆ ಅಮೃತ ಬಳ್ಳಿ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

ಸಲಕರಣೆ:

ಒಂದು ತುಂಡು ಅಮೃತ ಬಳ್ಳಿ ಮತ್ತು ತ್ರಿಫಲ ಚೂರ್ಣ

ವಿಧಾನ:

- ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.

- ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.

- ಕುದಿಸಿಕೊಂಡ ಕಷಾಯವನ್ನು ಸೋಸಿ ತೆಗೆದಿಟ್ಟುಕೊಳ್ಳಿ.

- ಗಣನೀಯವಾಗಿ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಹಿಳಿತೇಗು ಅಥವಾ ಗ್ಯಾಸ್ಟ್ರಿಕ್ ಅಂತಹ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

6. ಅಧಿಕ ತೂಕ ಹೊಂದಿದವರಿಗೆ:

ತೂಕ ಇಳಿಸಲು ಸಾಕಷ್ಟು ಮಂದಿ ವಿವಿಧ ರೀತಿಯ ಔಷಧ ಹಾಗೂ ದೇಹ ದಂಡನೆಯನ್ನು ಮಾಡುತ್ತಾರೆ. ಇಂತಹವರು ಅಮೃತ ಬಳ್ಳಿಯನ್ನು ಬಳಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಬೊಜ್ಜನ್ನು ಕರಗಿಸುವ ದಿವ್ಯ ಗುಣವಿದೆ.

ಸಲಕರಣೆ:

ಒಂದು ತುಂಡು ಅಮೃತ ಬಳ್ಳಿ, ತ್ರಿಫಲ ಚೂರ್ಣ, ಲೋಹ ಬಸ್ಮ ಮತ್ತು ಜೇನುತುಪ್ಪ.

ವಿಧಾನ:

- ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.

- ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.

- ಕುದಿಸಿ ಸೋಸಿಕೊಂಡ ಕಷಾಯಕ್ಕೆ ಲೋಹ ಬಸ್ಮ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

- 45 ದಿನಗಳ ಕಾಲ ಗಣನೀಯವಾಗಿ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುವುದು.

7.ಹೃದಯ ಆರೋಗ್ಯಕ್ಕೆ

ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.

ಸಲಕರಣೆಗಳು:

ಅಮೃತ ಬಳ್ಳಿ

ವಿಧಾನ:

- ಅಮೃತ ಬಳ್ಳಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ.

- ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.

- ಮುಂಜಾನೆ ಚೆನ್ನಾಗಿ ಕಿವುಚಿ ತೆಗೆಯಿರಿ/ ಸೋಸಿ.

- ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.

- ನಿತ್ಯವು ಇದನ್ನು ಗಣನೀಯವಾಗಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದು.

8.ಮಧುಮೇಹ ಸಮಸ್ಯೆ:

ಮಧುಮೇಹ ಇತ್ತೀಚೆಗೆ ಸಾಮಾನ್ಯವಾದ ಕಾಯಿಲೆಯಾಗಿದೆ. ಕೆಲವರು ನಿತ್ಯ ಒಂದು ಅಮೃತ ಬಳ್ಳಿಯ ಎಲೆಯನ್ನು ಸೇವಿಸುವುದರ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಅಮೃತ ಸತ್ಯವವನ್ನು ಬಳಸುವುದರ ಮೂಲಕವು ನಿಯಂತ್ರಿಸಬಹುದು.

ಸಲಕರಣೆ:

ಅಮೃತ ಬಳ್ಳಿಯ ಸತ್ವ, ನೇರಳೆ ಬೀಜದ ಪುಡಿ, ಬಿಲ್ವ ಪತ್ರೆಯ ರಸ.

ವಿಧಾನ:

- ಬಿಲ್ವ ಪತ್ರೆಯನ್ನು ರುಬ್ಬಿ ರಸವನ್ನಾಗಿ ಮಾಡಿಕೊಳ್ಳಿ.

- ಬಿಲ್ವಪತ್ರೆಯ ರಸಕ್ಕೆ ಅಮೃತ ಬಳ್ಳಿಯ ಸತ್ವ ಮತ್ತು ನೇರಳೆ ಬೀಜದ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಮಿಶ್ರಗೊಳಿಸಿ.

- ನಿತ್ಯವೂ ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡುವುದು.

9. ಕಿವಿ ನೋವು

ಕೆಲವರಿಗೆ ಆಗಾಗ ಕಿವಿ ನೋವು ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಬಹುಬೇಗ ಉಪಶಮನ ನೀಡುವುದು ಅಮೃತ ಬಳ್ಳಿ.

ಸಲಕರಣೆ:

ಅಮೃತ ಬಳ್ಳಿ.

ವಿಧಾನ:

- ಅಮೃತ ಬಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ.

- ಸೋಸಿಕೊಂಡ ರಸದ ಒಂದೊಂದು ಹನಿಯನ್ನು ಎರಡು ಕಿವಿಗೆ ಬಿಡಿ.

- ಇದರಿಂದ ಕಿವಿ ನೋವು ಬಹುಬೇಗ ನಿವಾರಣೆಯಾಗುವುದು.

10.ಕುರ/ಕೀವು ತುಂಬಿದ ಗಾಯ:

ಅಲರ್ಜಿ ಹಾಗೂ ರಕ್ತ ಸಮಸ್ಯೆಯಿಂದ ಕುರ ಹಾಗೂ ಕೀವು ತುಂಬಿದಂತಹ ಗಾಯಗಳಿಗೆ ಅಮೃತ ಬಳ್ಳಿ ಉತ್ತಮ ಆರೈಕೆ ಮಾಡುವುದು.

ಸಲಕರಣೆಗಳು:

ಅಮೃತ ಬಳ್ಳಿ ಮತ್ತು ಸೊಗದೆ ಬೇರು.

ವಿಧಾನ:

- ಅಮೃತ ಬಳ್ಳಿ ಮತ್ತು ಸೊಗದೆ ಬೇರನ್ನು ತೆಗೆದುಕೊಂಡು ಜಜ್ಜಿಕೊಳ್ಳಿ.

- ನಂತರ ನೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ.

- ಸೋಸಿಕೊಂಡ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಸೇವಿಸಿ.

- ಗಣನೀಯವಾಗಿ ಈ ಕಷಾಯವನ್ನು ಸೇವಿಸುವುದರಿಂದ ಗಾಯ ಗುಣವಾಗುವುದು. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು.
*****

ಅಮೃತಬಳ್ಳಿ ಯ ಉಪಯೋಗ

1. ನಿಮಗೇನಾದರೂ ಜ್ವರ ಬಂದಿದ್ದರೆ ಅಮೃತಬಳ್ಳಿಯನ್ನು ಬಳಕೆ ಮಾಡಿಕೊಂಡು ಜ್ವರದ ಚಿಕಿತ್ಸೆ ಏನು ಕೂಡ ಕೊಡಬಹುದು,  ಕೆಲ ಆಯುರ್ವೇದಿಕ್ ತಜ್ಞರು ಮಧುಮೇಹ ರೋಗವನ್ ವಾಸಿಮಾಡಲು ಈ ಅಮೃತ ಬಳ್ಳಿಯ ಕಾಂಡವನ್ನು ಬಳಕೆ ಮಾಡುತ್ತಾರೆ.


2. ನೀವೇನಾದರೂ ಅಮೃತಬಳ್ಳಿಯ ಕಾಂಡ ವನ್ನು ಜಜ್ಜಿ, ಅದರ ರಸವನ್ನು ತೆಗೆದು 2 ಚಮಚ ಜೇನಿನ ತು ಜೊತೆಗೆ ಮಿಶ್ರ ಮಾಡಿ ಕುಡಿದರೆ ನಿಮಗೆ ಇರುವಂತಹ ಮಧುಮೇಹದಂತಹ ರೋಗವನ್ನು ಕಡಿಮೆ ಮಾಡಬಹುದು.


3. ಅಮೃತಬಳ್ಳಿಯ ಕಾಂಡ ವನ್ನು ಅಥವಾ ಎಳೆಯ ಮಿಷ ಅವರ ಜೊತೆಗೆ ಸ್ವಲ್ಪ ಮೆಣಸಿನ ಕಾಳಿನ ಪುಡಿಯನ್ನು ಬೆರಿಕೆ ಮಾಡಿ ಕುಡಿಯುವುದರಿಂದ ನಿಮಗೆ ಇರುವಂತ ಎದೆಯ ನೋವನ್ನು ಕಡಿಮೆ ಮಾಡಬಹುದು.


4. ಬಾಣತಿ ಏನಾದರೂ ಶುಂಠಿ ಜೊತೆಗೆ ಅಮೃತಬಳ್ಳಿಯನ್ನು ಬೆರೆಸಿ ಕುಡಿಯುವುದರಿಂದ ಅವರು ಹಾಗೂ ಅವರ ಸ್ತನವು ಕೂಡ ತುಂಬಾ ಶುದ್ಧವಾಗುತ್ತದೆ


5. ನಿಮಗೇನಾದರೂ ಪದೇ ಪದೇ ವಾಂತಿ ಆಗುತ್ತಿದ್ ಅಮೃತ ಬಳ್ಳಿಯ ರಸದ ಜೊತೆ ಜೇನುತುಪ್ಪ ಸೇರಿಸಿರುವುದರಿಂದ ತಡೆಗಟ್ಟಬಹುದು.


6. ನಿಮಗೇನಾದರೂ ಕಣ್ಣು ದೃಷ್ಟಿ ಯಾ ಪ್ರಾಬ್ಲ ಏನಾದರೂ ಇದ್ದರೆ ಅಮೃತ ಬಳ್ಳಿಯ ರಸವನ್ನು ಜೇ ತುಪ್ಪದ ಜೊತೆಗೆ ಮಿಶ್ರಣ ನಿರಂತರ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ತುಂಬ ಚೆನ್ನಾಗಿ ಆಗುತ್ತದೆ.


7. ಹಾಗೆಯೇ ನಿಮ್ಮ ಮೂತ್ರಪಿಂಡದಲ್ಲಿ ಏನಾದರೂ ಕಲ್ಲುಗಳು ಇದ್ದರೆ ಇದನ್ನು ಕಡಿಮೆಮಾಡಲು ಅಮೃತಬಳ್ಳಿ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತದೆ, ಅಮೃತ ಬಳ್ಳಿಯ ರಸವನ್ನು ತೆಗೆದುಕೊಂಡು ಅದಕ್ಕೆ ಶುಂಠಿಯನ್ನು ಬೆರೆಸಿ ಕಷಾಯವನ್ನು ಮಾಡಿ ಕುಡಿಯುವುದರಿಂದ ನಿಮ್ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳನ್ನು ದ ಮಾಡಬಹುದು.


8. ಅಮೃತ ಬಳ್ಳಿಯ ರಸದ ಜೊತೆಗೆ ಓಂ ಪುಡಿಯನ್ನು ಸ್ವಲ್ಪ ಸೇರಿಸಿ ಕುಡಿಯುವುದರಿಂದ ಹೊಟ್ಟೆ ಉರಿ ತವನ್ನು ಕೂಡ ಕಡಿಮೆ ಮಾಡಬಹುದು,


9. ನಿಮಗೇನಾದರೂ ಹೆಚ್ಚಿನ ಬೊಜ್ಜಿನ ಸಮಸ್ಯೆ ಇದ್ ಈ ರೀತಿಯ ಅಮೃತಬಳ್ಳಿ ಕಷಾಯವನ್ನು ಮಾಡಿ ನಿರುತ್ತರವಾಗಿ ಕುಡಿಯುವುದರಿಂದ ತೂಕವನ್ನು ಹಾಕುವ ನಿಮಗೆ ಇರುವಂತಹ ಬೊಜ್ಜು ಹಾಗೂ ಕೊಬ್ಬನ್ನು ಕೂಡ ಕಡಿಮೆ ಮಾಡಬಹುದು.


10. ಸುಮಾರು ನೀವೇನಾದರೂ 40 ದಿನಗಳ ಕಾಲ ಈ ರೀತಿ ಅಮೃತಬಳ್ಳಿಯನ್ನು ಜಜ್ಜಿ ಅದರ ಕಾಂಡ ರಸ ಜೊತೆಗೆ ಜೇನು ತುಪ್ಪದ ಜೊತೆಗೆ ಮಿಶ್ರಣ ಮಾಡಿ ಕುಡಿಯುವುದರಿಂದ ನಿಮಗೆ ಬರುವಂತಹ ರೋಗಗಳಿಂದ ಕಾಪಾಡುತ್ತದೆ. ಅಲ್ಲದೆ ಎಲ್ಲಾತರ ಜ್ವರ ಗಳಿಂದಲೂ ಹಾಗೂ ಮಧುಮೇಹದಂತಹ ಕೆ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ಸರಳ ಉಪಾಯ ಶ್ರೀ ಸುಧಾಕರ
*****

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ 36 ಔಷಧಿ ದ್ರವ್ಯಗಳ ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ. 

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ವಿಜ್ಞಾನದಲ್ಲಿ ಅಡಗಿದ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾದಲ್ಲಿ ಯಾರೂ ಬಳಸಬೇಡಿ.
*

ಕಷಾಯದಲ್ಲಿನ ಘಟಕ ದ್ರವ್ಯ:
4) ಗುಡೂಚಿ/ಅಮೃತಬಳ್ಳಿ (tinospora cardifolia):
ಅತ್ಯಂತ ಪ್ರಭಾವಿ ದ್ರವ್ಯವಾದ "ಅಮೃತ ಬಳ್ಳಿ"ಯು ತನ್ನ ಪರ್ಯಾಯ ನಾಮದಲ್ಲೇ ತನ್ನೆಲ್ಲಾ ಗುಣಗಳನ್ನು ಹೇಳಿಕೊಳ್ಳುತ್ತದೆ.

ಅಮೃತ ಬಳ್ಳಿಯ ಪರ್ಯಾಯ ನಾಮಗಳು: 
ಜ್ವರ ನಾಶಿನಿ
ಜ್ವರಾರಿ
ತಂತ್ರಿಕ
ದೇವನಿರ್ಮಿತ
ಕುಮಾರಿಕ
ಭೀಷಕ್ ಪ್ರಿಯ(ವೈದ್ಯಪ್ರಿಯ)
ವಯಸ್ಥಾ
ವರಾ
ವಿಶಾಲ್ಯಾ
ಶ್ಯಾಮ
ಸುರಕೃತ
ಸೋಮ
ಅಮೃತ
ಕುಂಡಲಿ
ಗರುಡ
ಚಕ್ರಾಗ್ನಿ
ಚಂದ್ರಹಾಸ

ಇವು ಕೇವಲ ಅಮೃತಬಳ್ಳಿಯ ರೂಢಿ 
ನಾಮಗಳಾಗಿರದೇ ಅದರ ಕಾರ್ಮುಕತೆಯನ್ನು ಹೇಳುತ್ತವೆ.

ಅತ್ಯಂತ ಹೆಚ್ಚು ಮತ್ತು ಆಳವಾದ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಗಳನ್ನು ಹೊಂದಿರುವ ಅಮೃತ ಬಳ್ಳಿಯ ಎರಡು ಪ್ರಧಾನ ಕರ್ಮಗಳನ್ನು ಮಾತ್ರ ಇಲ್ಲಿ ಅಂದರೆ, ವೈರಾಣು ಸೋಂಕಿನ ಈ ಸಂದರ್ಭದಲ್ಲಿ ವ್ಯಕ್ತ ಪಡಿಸುತ್ತೇವೆ.

ಅವುಗಳೆಂದರೆ, "ಜ್ವರನಾಶಕ ಗುಣ"
                            ಮತ್ತು 
ಸರ್ವಧಾತು ರಕ್ಷಕ ಮತ್ತು ಪೋಷಕ ಸಾಮರ್ಥ್ಯವಾದ "ರಸಾಯನ ಗುಣ." 

ಅಮೃತ ಬಳ್ಳಿಯು ಗುರು-ಸ್ನಿಗ್ಧ ಗುಣವನ್ನು ಹೊಂದಿದ್ದು ತೀವ್ರ ಶಕ್ತಿಯನ್ನು ತನ್ನೊಳಗಿಟ್ಟುಕೊಂಡಿದ್ದರೂ ಪಚನವಾಗುವಾಗ ವಿಶೇಷವಾಗಿ "ಮಧುರ ಅಥವಾ ಸಿಹಿ ಭಾವವನ್ನು ತಾಳುತ್ತದೆ. ಇದೇ ಈ ದ್ರವ್ಯದ ವಿಶೇಷ. ಈ ಕಾರಣದಿಂದ ಇದು ಜ್ವರನಾಶಕವೂ ಹೌದು ಅದರೊಟ್ಟಿಗೆ ಸರ್ವಧಾತು ಪೋಷಕವೂ ಹೌದು. 
ಇದಲ್ಲದೆ, ಅಜೀರ್ಣವನ್ನು, IBS ಅನ್ನು, ಆಮ್ಲಪಿತ್ತವನ್ನು, ಯಕೃತ್ ವಿಕಾರವನ್ನು ಹೋಗಲಾಡಿಸುತ್ತದೆ ಮತ್ತು ಮೆದುಳಿನ ನರಗಳಿಗೆ ಬಲವನ್ನು ಕೊಡುವ ಕಾರಣ ಮೇಧ್ಯ(ಬುದ್ಧಿಶಕ್ತಿ ವರ್ಧಕ)ವಾಗಿದೆ.


ಇರಲಿ,
ಪ್ರಸ್ತುತ ಜ್ವರ ನಿವಾರಕವಾಗಿ ಅಮೃತಬಳ್ಳಿಯು ಹೇಗೆ ಕೆಲಸ ಮಾಡುತ್ತದೆ ನೋಡೋಣ.
"ಜ್ವರ ಎಂಬುದು ಕೇವಲ ಶರೀರದ ತಪಾನದ ವೃದ್ಧಿಯಲ್ಲ." ಅದು ಸರ್ವ ಶರೀರವನ್ನು ಸಂಚಾರ ಮಾಡುವ ರಸಧಾತುವಿನಲ್ಲಿ ಉಂಟಾಗುವ ತೀವ್ರತರ ಕ್ಷೋಭೆಯ ಲಕ್ಷಣ. ಆದ್ದರಿಂದಲೇ ಜ್ವರದಲ್ಲಿ ಸಂತಾಪ(temerature), ಅರತಿ(ಇಚ್ಛೆ ಇಲ್ಲದಿರುವಿಕೆ) ಮತ್ತು ಗ್ಲಾನಿ(ತೀರ್ವ ದುರ್ಬಲತೆ) ಈ ಮೂರೂ ಲಕ್ಷಣಗಳು ಇರುತ್ತವೆ ಎಂಬುದು ಆಚಾರ್ಯರ ಮತ. ಕೇವಲ ದೇಹದ ತಾಪಮಾನ ವೃದ್ಧಿಗೊಂಡಲ್ಲಿ ಅದು ಜ್ವರವಲ್ಲ.

ಅಮೃತ ಬಳ್ಳಿಯಲ್ಲಿರುವ ಕಹಿ ರಸವು ರಸಧಾತುವಿನಲ್ಲಿರುವ ಉಷ್ಣಕಾರಕ ಅಂಶವನ್ನು ತುಂಡರಿಸುತ್ತದೆ ಮತ್ತು ಮಧುರ ವಿಪಾಕವು ಬಲವನ್ನು ಕೊಡುತ್ತದೆ. ಹೀಗಾಗಿ, ಗುಡೂಚಿಯು ಜ್ವರದ ಮೂರೂ ಲಕ್ಷಣಗಳನ್ನು ಕೇವಲ 24 ರಿಂದ 48 ನಿಮಿಷಗಳಲ್ಲಿ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. 
ಸ್ಪಷ್ಟ ಕಾರಣಗಳು ಗೊತ್ತಾಗದ ಯಾವುದೇ ಜ್ವರದಲ್ಲಿ ಅಮೃತಬಳ್ಳಿಯನ್ನು ಸತ್ವದ ರೂಪದಲ್ಲಿ ಕೊಡಲಾಗುತ್ತದೆ.

ಸರ್ವ ಧಾತು ಪೋಷಕ "ರಸಾಯನ" ಗುಣವನ್ನು ನೋಡೋಣ-
ಅಮೃತ ಬಳ್ಳಿಯು ರಸ, ರಕ್ತಾದಿ ಸಪ್ತ ಧಾತುಗಳ ಉತ್ಪತ್ತಿಯ ಮಾರ್ಗದಲ್ಲಿ ಇರಬಹುದಾದ ಸಣ್ಣ ಸಣ್ಣ ತಡೆಗಳನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ತೊಡೆದು ಹಾಕುತ್ತದೆ. ಇದರಿಂದ ಶರೀರದ ಸರ್ವ ಜೀವಕೋಶಗಳೂ ತಮ್ಮ ತಮ್ಮ ಆಹಾರವನ್ನು ತಡೆ ಇಲ್ಲದೆ ಸಮರ್ಥವಾಗಿ ಹೀರಿಕೊಳ್ಳುತ್ತವೆ.
ಮಾನವನ ಇಂದಿನ ಬಹುದೊಡ್ಡ ಆರೋಗ್ಯದ ಸಮಸ್ಯೆಯೇ ಇದು!! ಉತ್ತಮೋತ್ತಮ ಆಹಾರವನ್ನು ಸೇವಿಸಿಯೂ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವುದಕ್ಕೆ ಮತ್ತು ಆ ಕಾರಣದಿಂದ ಸಣ್ಣ ಸಣ್ಣ ವೈರಸ್ ಗಳ ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಹೊಂದಿರುವುದಕ್ಕೆ ಜೀವಕೋಶಗಳ ಈ ಅಸಾಮರ್ಥ್ಯವೇ (ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಇರುವ ದುರ್ಬಲತೆ) ಕಾರಣ.  

ಹೀಗೆ ಗುಡೂಚಿಗೆ ಇರುವ  "ಅಮೃತ" ಎಂಬ ಹೆಸರು ಅನ್ವರ್ಥವಾಗಿದೆ.


ಇದರ ಇನ್ನೂ ಅನೇಕಾನೇಕ ಮಹತ್ವಗಳನ್ನು ಹೇಳಲು ಪದಗಳ ಮಿತಿ ನಮ್ಮನ್ನಿಲ್ಲಿ ಕಟ್ಟಿಹಾಕುತ್ತಿದೆ.
********



No comments:

Post a Comment