SEARCH HERE

Tuesday, 1 January 2019

ಬಿಲ್ವ ಪತ್ರೆಯಿಂದ ವಾಸ್ತು ದೋಷ ನಿವಾರಣೆ bilva patre parihara


ಬಿಲ್ವ ಪತ್ರೆಯಿಂದ:ವಾಸ್ತು ದೋಷ ನಿವಾರಣೆ

ಬಿಲ್ವಪತ್ರೆಯಲ್ಲಿ ಮೂರು ದಳಗಳಿವೆ. ಎಡದಲ್ಲಿ ಬ್ರಹ್ಮ, ಬಲದಲ್ಲಿ ವಿಷ್ಣು ಮತ್ತು ಮಧ್ಯದಲ್ಲಿ ಸದಾಶಿವ ನೆಲೆಸಿದ್ದಾನೆ ಎಂದು ಪುರಾಣದಿಂದ ತಿಳಿದು ಬರುತ್ತದೆ. ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಈ ಬಿಲ್ವಪತ್ರೆಯ ಮರವು ಕಾಶಿ ಕ್ಷೇತ್ರಕ್ಕೆ ಸರಿಸಮಾನ. ಈ ಗಿಡ ಎಲ್ಲಿ ಇರುವುದೋ ಅಲ್ಲಿ ಶಿವನು ಲಿಂಗಾಕಾರದಲ್ಲಿ ನೆಲೆಸಿರುತ್ತಾನೆ ಎಂಬ ಪ್ರತೀತಿ ಇದೆ. 

*ಬಿಲ್ವ ಮರವು ಮನೆಯ ಈಶಾನ್ಯ ಭಾಗದಲ್ಲಿದ್ದರೆ ತೊಂದರೆಗಳು ಪರಿಹಾರವಾಗುತ್ತದೆ ಮತ್ತು ಐಶ್ವರ್ಯ ಉಂಟಾಗುತ್ತದೆ.

 *ಮನೆಯ ಪಶ್ಚಿಮ ಭಾಗದಲ್ಲಿದ್ದರೆ ಸಂತಾನ ಲಾಭವಾಗುತ್ತದೆ. ದಕ್ಷಿಣದಲ್ಲಿದ್ದರೆ ಯಮ ಭಾದೆ ಇರುವುದಿಲ್ಲ. 

*ಬಿಲ್ವಪತ್ರೆಗಳಿಂದ ತೋರಣ ಕಟ್ಟಿದರೆ ಯಾವ ದುಷ್ಟಶಕ್ತಿಗಳೂ ಒಳಬರುವುದಿಲ್ಲ.

 *ಶಿವನಿಗೆ ಪೂಜೆ ಮಾಡಿದ ಬಿಲ್ವಪತ್ರೆಯನ್ನು ಪ್ರತಿದಿನ ನೀರಿಗೆ ಹಾಕಿ ಮೂರು ಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯವೂ ಉತ್ತಮ ಇರುತ್ತದೆ. 

*ಬಿಲ್ವಪತ್ರೆಯ ಕಾಯಿಯನ್ನು ದೇವರ ಕೋಣೆ ಮತ್ತು ಹಾಲ್ನಲ್ಲಿ ಈಶಾನ್ಯ ಮೂಲೆಯ್ಲಿ ಕಟ್ಟಿದರೆ ವಾಸ್ತುದೋಷ ಇದ್ದರೆ ನಿವಾರಣೆ ಆಗುವುದು. 

*ಪ್ರತಿದಿನ ಬೆಳಗ್ಗೆ ಎದ್ದು ನಂತರ ಬಿಲ್ವಪತ್ರೆಯ ಮರವನ್ನು ನೋಡಿದರೆ ಆ ದಿನಪೂರ್ತಿ ಸಂತೋಷದಿಂದ ಇರಬಹುದು. 
ಸರಳ ಪರಿಹಾರ ಶ್ರೀ ಸುಧಾಕರ
*******

No comments:

Post a Comment