ಮಧುಮೇಹ ರೋಗಿಗಳಿಗೆ ದೊಡ್ಡ ಸಮಸ್ಯೆ ಎಂದರೆ ಏನು ತಿನ್ನಬೇಕು ಯಾವುದನ್ನು ತಿನ್ನಾರದು ಎಂದು ನಿರ್ಧರಿಸುವುದು. ಯಾಕೆಂದರೆ ಮಧುಮೇಹವಿದ್ದಾಗ ಆಹಾರ ತಿಂಡಿಗಳ ಮೇಲೆ ಅತಿಯಾದ ಹಿಡಿತ ಇಟ್ಟುಕೊಂಡಿರಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಭಾರತವನ್ನು ಮಧುಮೇಹದ ರಾಜಧಾನಿ ಎಂದೂ ಕರೆಯಲಾಗುತ್ತದೆ.
ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ನು ಭಾರತವನ್ನು ಮಧುಮೇಹದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಮಧುಮೇಹ ರೋಗಕ್ಕೆ ಗುರಿಯಾದವರ ಸಂಖ್ಯೆ ಕೋಟಿಗಳಲ್ಲಿದೆ. ಇದೊಂದು ವಿಚಿತ್ರ ಕಾಯಿಲೆ. ಈ ಕಾಯಿಲೆ ಯಾರಿಗಾದರೂ ಒಮ್ಮೆ ಬಂದರೆ, ನಂತರ ಜೀವನ ಪೂರ್ತಿ ಇದರಿಂದ ಬಳಲಬೇಕಾಗುತ್ತದೆ. ತಾವು ಏನು ತಿನುತ್ತೇವೆ, ಏನು ಕುಡಿಯುತ್ತೇವೆ ಎನ್ನುವುದರ ಸಂಪೂರ್ಣ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅನೇಕ ರೋಗಗಳು ಎದುರಾಗುವ ಅಪಾಯವಿರುತ್ತದೆ.
ಮಧುಮೇಹ ರೋಗಿಗಳಿಗೆ ಸಿಹಿ ಆಹಾರಗಳನ್ನು ತ್ಯಜಿಸುವಂತೆ ಸೂಚಿಸಲಾಗುತ್ತದೆ. ಇಲ್ಲಿಯವರೆಗೆ ಈ ರೋಗಕ್ಕೆ ಯಾವುದೇ ಒಂದು ರೀತಿಯ ನಿರ್ದಿಷ್ಟ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ಇದರಿಂದ ಎದುರಾಗುವ ಅಪಾಯವನ್ನು ತಪ್ಪಿಸಬಹುದು.
ಇಲ್ಲಿ ನಾವು ಮೆಂತ್ಯ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ. ಈ ಸೊಪ್ಪು ಮಧುಮೇಹ ರೋಗಿಗಳಿಗೆ ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಮೆಂತ್ಯೆ ಸೊಪ್ಪು ಇದರಲ್ಲಿ ಪ್ರೋಟೀನ್, ನೈಸರ್ಗಿಕ ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್, ವಿಟಮಿನ್-ಬಿ 6, ವಿಟಮಿನ್ ಎ, ವಿಟಮಿನ್ ಕೆ, ಫೋಲೇಟ್, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
1.ಮೆಂತ್ಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
2. ಮೆಂತ್ಯದಲ್ಲಿ ಕಂಡುಬರುತ್ತದೆ. ಇದು ಸಕ್ಕರೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
3. ಕೇವಲ ಮೆಂತ್ಯಯನ್ನು ಮಾತ್ರ ಮಸಾಲೆಯಾಗಿ ಬಳಸಬೇಕಿಲ್ಲ. ಅದರ ಸೊಪ್ಪನ್ನು ಲುದಾ ತಿನ್ನಬೇಕು.
4. ಮೆಂತತ್ಯೆ ಮತ್ತು ಅದರ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
5. ಮೆಂತ್ಯೆ ಸೊಪ್ಪು ಹೃದಯದ ಆರೋಗ್ಯಕ್ಕೆ ಕೂಡಾ ಭಾರೀ ಉತ್ತಮವಾದುದು, ಒಂದರ್ಥದಲ್ಲಿ ಆಯುರ್ವೇದ ಔಷಧಕ್ಕಿಂತ ಇದು ಕಡಿಮೆಯೇನಲ್ಲ.
6. ಪ್ರತಿದಿನ ಬೆಳಿಗ್ಗೆ ಮೆಂತ್ಯ ನೀರನ್ನು ಕುಡಿದರೆ, ಹೆಚ್ಚುತ್ತಿರುವ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.
ಶುಗರ್ ಇರುವವರು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.. ಮರೆಯದಿರಿ ಉತ್ತಮ ಆಹಾರ ಮತ್ತು ವ್ಯಾಯಾಮ ಆರೋಗ್ಯಕರ ಜೀವನಶೈಲಿಗೆ ದಾರಿ ಮಾಡಿಕೊಡುತ್ತವೆ. ಜಡ ಜೀವನ ಶೈಲಿಯ ಜೊತೆಗೆ, ನಾವು ಕಳಪೆ ಆಹಾರ ಕ್ರಮವನ್ನು ಅನುಸರಿಸಿದರೆ, ಟೈಪ್ 2 ಮಧುಮೇಹದ ಅಪಾಯ ಗಮನಾರ್ಹವಾಗಿ ಹೆಚ್ಚುವ ಸಾಧ್ಯತೆ ಇರುತ್ತದೆ. ಕರಿದ ಆಹಾರ ಪದಾರ್ಥಗಳು, ಅತ್ಯಧಿಕ ಕಾರ್ಬ್ ಮತ್ತು ಸಕ್ಕರೆಯುಕ್ತ ತಿಸಿಸುಗಳು ನಾಲಗೆಗೆ ರುಚಿ ಎನಿಸಬಹುದು, ಆದರೆ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತವೆ. ಈಗಿನ ನಮ್ಮ ಜೀವನಶೈಲಿ , ನಮಗೆ ಮಧುಮೇಹದ ಅಪಾಯವನ್ನು ತರಬಲ್ಲದು, ಹಾಗಾಗಿ ಅಧಿಕ ಫೈಬರ್, ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅವು ಮಧುಮೇಹ, ಬೊಜ್ಜು ಮತ್ತಿತರ ಅನೇಕ ಕಾಯಿಲೆಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತವೆ.
ಅಮೆರಿಕನ್ ಡಯಾಬಿಟೀಸ್ ಅಸೋಸಿಯೇಶನ್ ಪ್ರಕಾರ ಬೀನ್ಸ್, ನಟ್ಸ್, ಒಣ ಬೀಜಗಳು, ತೋಫು ಮುಂತಾದ ಸಸ್ಯ ಆಧಾರಿತ ಪ್ರೋಟೀನ್‍ಗಳು, ಮೀನು, ಕೋಳಿ , ಮಾಂಸ, ಮೊಟ್ಟೆಗಳು ಹಾಗೂ ಕಡಿಮೆ ಕೊಬ್ಬಿನ ಡೈರಿ ಆಹಾರಗಳು ಮಧುಮೇಹ ಹೊಂದಿರುವ ಜನರಿಗೆ ಉತ್ತಮ ಆಹಾರಗಳಾಗಿವೆ. ಪೌಷ್ಟಿಕಾಂಶ ತಜ್ಞೆ ಹಾಗೂ ಬೀಟ್‍ಓ ನ ಮಧುಮೇಹ ಆರೈಕೆ ತರಬೇತುದಾರರಾದ ಸುಜಾತಾ ಶರ್ಮಾ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಆಹಾರಗಳ ಪಟ್ಟಿಯನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ.
1. ಧಾನ್ಯಗಳು: ಅತ್ಯಧಿಕ ವಿಟಮಿನ್ ಮತ್ತು ಮಿನರಲ್‍ಗಳನ್ನು ಹೊಂದಿರುವ ಧಾನ್ಯಗಳು ಹೇರಳ ಫೈಬರ್ ಅನ್ನು ಹೊಂದಿವೆ. ಅವು ಸಂಕೀರ್ಣ ಕಾರ್ಬ್‍ಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯಲ್ಲಿ ಸಮಯ ತೆಗೆದುಕೊಂಡು ಸಕ್ಕರೆ ಸ್ಪೈಕ್‍ಗಳಿಗೆ ಕಾರಣವಾಗುತ್ತವೆ. ಗೋಧಿ, ಬಾರ್ಲಿ, ಓಟ್ಸ್ , ಕಿನೋವಾ, ರಾಗಿ ಮುಂತಾದವುಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು.
2. ಹಸಿರು ಸೊಪ್ಪು ತರಕಾರಿಗಳು: ಇವುಗಳು ಅತ್ಯಧಿಕ ವಿಟಮಿನ್, ಮಿನರಲ್ ಮತ್ತು ಫೈಬರ್ ಅನ್ನು ಹೊಂದಿವೆ. ಪಾಲಕ್, ಲೆಟ್ಯೂಸ್, ಹರಿವೆ ಸೊಪ್ಪು ಇತ್ಯಾದಿಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೋರಿಗಳು ಇರುತ್ತವೆ. ನೀವು ಊಟಕ್ಕೂ ಮುನ್ನ ಸಲಾಡ್ ಮತ್ತು ಸೂಪ್‍ಗಳಲ್ಲಿ ಬಳಸಬಹುದು.
3. ಒಣ ಬೀಜಗಳು : ಒಣ ಬೀಜಗಳು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿವೆ. ಒಣ ಬೀಜಗಳಾದ ಬಾದಾಮಿ ಮತ್ತು ವಾಲ್‍ನಟ್‍ಗಳಲ್ಲಿ ಓಮೆಗಾ -3 ಮತ್ತು ಒಮೆಗಾ -6 ಫ್ಯಾಟಿ ಆಮ್ಲಗಳು ಹೇರಳವಾಗಿವೆ. ಹುರಿದ ಫಾಕ್ಸ್ ಬೀಜಗಳು ಅಥವಾ ಒಂದು ಮುಷ್ಟಿ ಹುರಿದ ಒಣ ಬೀಜಗಳು ಉಪಹಾರದ ಉತ್ತಮ ಆಯ್ಕೆಗಳೆನಿಸುತ್ತವೆ.
4. ಮೀನು, ಕೋಳಿ, ಮೊಟ್ಟೆ : ಮೀನುಗಳು ಒಮೆಗಾ -3 ಕೊಬ್ಬಿನ ಆಮ್ಲಗಳ ಮತ್ತು ಅತ್ಯಾವಶ್ಯಕ ತೈಲಗಳ ಉತ್ತಮ ಮೂಲಗಳು. ಕೋಳಿ ಮಾಂಸ, ಮೊಟ್ಟೆ ಮತ್ತು ಮೀನಿನ ಮಾಂಸದಲ್ಲಿ ಅತ್ಯಧಿಕ ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬ್‍ಗಳು ಇರುತ್ತವೆ. ಹೆಚ್ಚುವರಿ ಕ್ಯಾಲೋರಿಗಳನ್ನು ತಡೆಯಲು, ಬೇಕ್ ಅಥವಾ ಗ್ರಿಲ್ ಮಾಡಿ ಸೇವಿಸಿ. ಪ್ರೋಟೀನ್ ಸೇವನೆಯಿಂದ ಬೇಗನೆ ಹಸಿವಾಗುವುದಿಲ್ಲ, ಹಲವು ಗಂಟೆಗಳವರೆಗೆ ಹೊಟ್ಟೆ ತುಂಬಿದಂತಿರುತ್ತದೆ.
5. ಮೊಸರು ಮತ್ತು ಪನ್ನೀರ್ : ಇವುಗಳಲ್ಲಿ ಅತಿ ಹೆಚ್ಚಿನ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಡಿ ಇದೆ. ಕಡಿಮೆ ಕೊಬ್ಬು ಮತ್ತು ಕಾರ್ಬೊಹೈಡ್ರೇಟ್‍ಗಳನ್ನು ಆರಿಸಿಕೊಳ್ಳಲು ಪ್ರಯತ್ನಸಿ. ಪುದೀನಾ ಮಜ್ಜಿಗೆ ಮತ್ತು ಬೆರ್ರಿಗಳ ಜೊತೆಗೆ ಕಡಿಮೆ ಕೊಬ್ಬುಳ್ಳ ಮೊಸರನ್ನು ಸೇವಿಸುವುದು ಉತ್ತಮ ಆಯ್ಕೆ.
6. ಬೆರ್ರಿಗಳಂತಹ ತಾಜಾ ಹಣ್ಣುಗಳು : ಬೆರ್ರಿಗಳು ಮಧುಮೇಹ ಉಳ್ಳವರಿಗೆ ಸೂಪರ್ ಫುಡ್ ಎಂದು ಪರಿಗಣಿಸಲ್ಪಟ್ಟಿವೆ. ಅವುಗಳಲ್ಲಿ ಹೇರಳ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳು ಇವೆ. ಸೇಬು, ಬೆರ್ರಿಗಳು ಮತ್ತು ಮರ ಸೇಬಿನಂತಹ ಹಣ್ಣುಗಳು ಹೆಚ್ಚಿನ ಫೈಬರ್ ಹೊಂದಿವೆ ಮತ್ತು ಸಕ್ಕರೆ ಮಟ್ಟವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತವೆ. ಅವುಗಳನ್ನು ನೀವು ಸಲಾಡ್‍ಗಳು , ಸ್ಮೂಥಿಗಳು ಅಥವಾ ಮೊಸರಿನಲ್ಲಿ ಹಾಕಿ ಸೇವಿಸಬಹುದು.
ಮಧುಮೇಹ ರೋಗಿಗಳು ಯಾವ ಆಹಾರ ಕ್ರಮ ಅನುಸರಿಸಬೇಕು? ಇಲ್ಲಿದೆ ವೈದ್ಯರ ಸಲಹೆ
ಮಧುಮೇಹ ರೋಗಿಗಳು ವಿಶೇಷವಾಗಿ ಬೇಕರಿ ಆಹಾರವನ್ನು ಸೇವಿಸಬಾರದು, ಹಾಗೆಯೇ ಪ್ರೋಟೀನ್ ಅಂಶವಿರುವ ನಾನ್ ವೆಜ್ ಆಹಾರ ಕೆಲವರಿಗೆ ಖಂಡಿತ ಅಗತ್ಯವಿದೆ.
ಮಧುಮೇಹ ರೋಗಿಗಳಿಗೆ “ನಾವು ಯಾವ ರೀತಿಯ ಆಹಾರ ಸೇವಿಸಿದರೆ ಒಳ್ಳೆಯದು”? ಎಂಬ ಗೊಂದಲವಿರುವುದು ಸಾಮಾನ್ಯ. ಆದ್ದರಿಂದ ಮಧುಮೇಹ ತಜ್ಞರಾದ ಡಾ.ವಿಕ್ರಂ ಅವರು ಮಧುಮೇಹ ರೋಗಿಗಳು ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?, ಮಾಂಸಾಹಾರವನ್ನು ಸೇವಿಸುವವರು ಯಾವ ರೀತಿಯ
ಮಾಂಸವನ್ನು ಎಷ್ಟು ಸೇವಿಸಬಹುದು?, ನಿಜಕ್ಕೂ ಮಧುಮೇಹ ರೋಗಿಗಳು ಯಾವ ಯಾವ ಆಹಾರ ಸೇವಿಸಬಹುದು, ಯಾವುದನ್ನು ಸೇವಿಸಬಾರದು ಹೀಗೆ ನಿಮಗೆ ಕಾಡುತ್ತಿರುವ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಿದ್ದಾರೆ ನೋಡಿ…
ಬೇರೆಯವರ ಸಲಹೆ ಬೇಡ
ಡಾ.ವಿಕ್ರಂ ಅವರ ಪ್ರಕಾರ, ಮೊಟ್ಟಮೊದಲನೆಯದಾಗಿ ಪದೇ ಪದೇ ವೈದ್ಯರು ಮಧುಮೇಹ ರೋಗಿಗಳಿಗೆ ಹೇಳಲು ಬಯಸುವ ಅಂಶವೆಂದರೆ ಮಧುಮೇಹಿಗಳು . ಭೂಮಿಯ ಕೆಳಗೆ ಬೆಳೆಯುವಂತಹ ತರಕಾರಿಗಳನ್ನು ಹೊರತುಪಡಿಸಿ, ಎಲ್ಲಾ ರೀತಿಯ ತರಕಾರಿಗಳನ್ನು ಸೇವಿಸಬಹುದು.
ಸಾಮಾನ್ಯವಾಗಿ ನಿಮಗೆ ಸಕ್ಕರೆ ಕಾಯಿಲೆ ಬಂದಿದೆ ಎಂದು ತಿಳಿದರೆ ಹಲವರು ಹಲವು ರೀತಿಯ ಸಲಹೆಗಳನ್ನು ಕೊಡುತ್ತಾರೆ. ನಿಮಗೆ ಸಾವಿರ ಟಿಪ್ಸ್ ಕೊಡುತ್ತಾರೆ. ಆದರೆ ಅದನ್ನೆಲ್ಲಾ ನಾವು ತೆಗೆದುಕೊಳ್ಳಬಾರದು. ವೈದ್ಯರ ಸಲಹೆ ಸೂಚನೆಯಂತೆ ಮಾತ್ರ ಮುಂದುವರೆಯಬೇಕು.
ವೈದ್ಯರು ಹೇಳುವಂತೆ, ನಿಮಗೆಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ತರಕಾರಿಯಲ್ಲಿ ಹೆಚ್ಚಿನ ಫೈಬರ್, ವಿಟಮಿನ್, ಖನಿಜಗಳು ಇರುತ್ತದೆ. ಇವೆಲ್ಲವೂ ನಿಮಗೆ ಬಹಳ ಅಗತ್ಯ ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ಈ ತರಕಾರಿಗಳನ್ನು ಧಾರಾಳವಾಗಿ ಸೇವಿಸಿ
ಆಲೂಗಡ್ಡೆ, ಗೆಣಸು, ಮರಗೆಣಸು, ಕ್ಯಾರೆಟ್, ಬೀಟ್ ರೂಟ್, ಮೂಲಂಗಿ ಇವುಗಳನ್ನ ಮಧುಮೇಹಿಗಳು ಸೇವಿಸಬಹುದಾದರೂ ಸ್ವಲ್ಪ ಮಿತಿಯಲ್ಲಿರಲಿ. ಕಾರಣವಿಷ್ಟೇ ಇವುಗಳಲ್ಲಿ ಪಿಷ್ಟದ ಅಂಶ ಹೆಚ್ಚು ಇರುತ್ತದೆ.
ಇದು ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ. ಉಳಿದಂತೆ ಬಾಕಿ ತರಕಾರಿಗಳನ್ನು ಧಾರಳವಾಗಿ ಸೇವಿಸಿ. ಹಣ್ಣುಗಳನ್ನು ಸ್ವೀಟ್ ತರಹ ಮಿತವಾಗಿ ಸೇವಿಸಿದರೆ ಇನ್ನು ಒಳ್ಳೆಯದು. ಅಂದರೆ ನಿಮಗೆ ಸ್ವೀಟ್ ಸೇವಿಸಬೇಕು ಎಂದು ಆಸೆಯಾದಾಗ ಹಣ್ಣು ಸೇವಿಸಿ. ಏಕೆಂದರೆ ಇದು ಸ್ವೀಟ್ ಗಿಂತ ವಾಸಿ.
ಯಾವಾಗಲೂ ಸೇವಿಸಬಹುದಾದ ಹಣ್ಣು ಯಾವುದು?
ಸೇಬುಹಣ್ಣನ್ನು ಅರ್ಧ ಸೇವಿಸಬಹುದು, ಇನ್ನು ಕಿವಿ ಹಣ್ಣನ್ನು ಕೂಡ ಒಂದು ಸೇವಿಸಬಹುದು. ಹಾಗೆಯೇ ಮಾರುಕಟ್ಟೆಯಲ್ಲಿ ನಿಮಗೆ ಸುಲಭವಾಗಿ ದೊರೆಯುವ ಪಪ್ಪಾಯ, ಕಲ್ಲಂಗಡಿ ಹಣ್ಣನ್ನು 4-5 ಸಣ್ಣ ಸಣ್ಣ ಕ್ಯೂಬ್ಸ್ ನಷ್ಟು ಪ್ರಮಾಣದಲ್ಲಿ ಸೇವಿಸಬಹುದು. ಒಟ್ಟಾರೆಯಾಗಿ ಎಲ್ಲಾ ಹಣ್ಣುಗಳನ್ನು ಅರ್ಧ ಸೇಬುಹಣ್ಣು ಎಷ್ಟಿರುತ್ತದೆಯೋ ಅಷ್ಟು ಹಣ್ಣು ಬಳಸಿದರೆ ಸಾಕು.
ಬೇಕರಿ ಫುಡ್ ಸೇವಿಸಬಾರದೇ?
ಬೇಕರಿ ಫುಡ್ ವಿಚಾರ ಬಂದಾಗ ಬೇಕರಿ ಫ್ರೂಟ್ಸ್ ಸೇವಿಸಬಾರದು. ಅದರಲ್ಲೂ ಬ್ರೆಡ್, ಕೇಕ್, ರಸ್ಕ್, ಪಪ್ಸ್ ಇವೆಲ್ಲಾ ಖಂಡಿತ ಸೇವಿಸಬಾರದು. ಏಕೆಂದರೆ ಇದನ್ನು ಮೈದಾ ಹಿಟ್ಟಿನಲ್ಲಿ ಮಾಡುತ್ತಾರೆ.
ಮೈದಾ ಹಿಟ್ಟು ಸಕ್ಕರೆ ಅಂಶ ಹೆಚ್ಚು ಮಾಡುತ್ತದೆ. ಆದರೆ ಸೂಜಿ ರಸ್ಕ್ ಅಂತ ಬರುತ್ತದೆ. ಅದನ್ನು ಬೇಕಾದರೆ ನೀವು ಸೇವಿಸಬಹುದು.ಒಂದು ಅಥವಾ ಎರಡು ರಸ್ಕ್ ಅನ್ನು ನಿಮ್ಮ ನೆಚ್ಚಿನ ಟೀ ಅಥವಾ ಕಾಫಿ ಜೊತೆ ತೆಗೆದುಕೊಳ್ಳಬಹುದು. ಇನ್ನು ಪ್ಯಾಕೆಟ್ ನಲ್ಲಿ ಬರುವ ಆಹಾರವನ್ನು ಸೇವಿಸಲೇಬೇಡಿ.
ಇದರಲ್ಲಿ ನಾನಾ ರಾಸಯನಿಕಗಳು, ಸಂರಕ್ಷಕಗಳನ್ನು ಸೇರಿಸಿರುತ್ತಾರೆ. ಜೊತೆಗೆ ಇದರಲ್ಲಿ ನಮ್ಮ ದೇಹದ ಜೀರ್ಣ ಕ್ರಿಯೆ ಕಡಿಮೆ ಮಾಡುವಂತಹ ಅಪಾಯಕಾರಿ ಅಂಶಗಳನ್ನು ಸೇರಿಸಿರುತ್ತಾರೆ.
ಆದ್ದರಿಂದ ಪ್ಯಾಕೆಟ್ ಆಹಾರವನ್ನು ಸೇವಿಸುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಸಾಧ್ಯವಾದಷ್ಟು ನೈಸರ್ಗಿಕ ಆಹಾರಕ್ಕೆ ಆದ್ಯತೆ ಕೊಡಿ. ಮನೆಯಲ್ಲಿ ತಯಾರು ಮಾಡಿರುವ ಹೋಂ ಮೇಡ್ ಫುಡ್ ಬೆಸ್ಟ್.
ಮಾಂಸ ಮತ್ತು ಸಸ್ಯಹಾರಿ ಆಹಾರ
ಮಧುಮೇಹವು ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳು, ಚಿಕ್ಕವರು-ದೊಡ್ಡವರು, ಶ್ರೀಮಂತರು-ಬಡವರು ಎಂದು ಬೇಧ ಭಾವ ಮಾಡದೆ ಬರುತ್ತದೆ. ಹಾಗಾಗಿ ನಾನ್ ವೆಜ್ ಸೇವನೆ ಮಾಡುವವರು ಒಂದು ಹೊತ್ತು ಅಥವಾ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆ, ಚಿಕನ್ ಫಿಶ್ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಅಂದರೆ ಮೂರು-ನಾಲ್ಕು ಪೀಸ್ ತೆಗೆದುಕೊಳ್ಳಬಹುದು. ಮತ್ತೆ ಸಸ್ಯಹಾರಿಗಳು ಯಾವ ರೀತಿ ಆಹಾರ ಸೇವಿಸಬೇಕೆಂದರೆ ದಾಲ್, ಸೋಯಾ ಬೀನ್ಸ್, ಸೋಯಾ ಚಾಪ್, ಪನ್ನೀರು, ಟೋಫು, ಬಟಾಣಿ, ಕಾಬೂಲ್ ಕಡಲೆ, ರಾಜ್ ಮಾ ಅಥವಾ ಇತರ ಕಾಳುಗಳನ್ನು ಪ್ರೋಟೀನ್ ಅಗತ್ಯವಾಗಿ ಬೇಕಾದವರು ಸೇವಿಸಬಹುದು.
ಇನ್ನು ಮಧುಮೇಹಿಗಳು ಸೇವಿಸುವ ಆಹಾರದಲ್ಲಿ ಏನೆಲ್ಲಾ ಇರಬೇಕು ಎಂದು ನೋಡುವುದಾದರೆ ಊಟದ ತಟ್ಟೆಯಲ್ಲಿ ನಿಮಗೆ ಶೇ 25 ರಷ್ಟು ಭಾಗ ಪ್ರೋಟೀನ್ ಆಹಾರ ಇರಬೇಕು.
ಹಸಿ ತರಕಾರಿಗಳಿಂದ ಸಿಗುವ ಫೈಬರ್ ಬಹಳ ಮುಖ್ಯ. ಒಟ್ಟಾರೆಯಾಗಿ ತಟ್ಟೆಯನ್ನು ನಾಲ್ಕು ಭಾಗ ಮಾಡಿದರೆ, ನೀವು ಕಾಲು ಭಾಗದಷ್ಟು ಮಾತ್ರ ಅನ್ನ, ಚಪಾತಿ ಸೇವಿಸಬೇಕು.
***
Diabetes:ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಲಾದ ಈ ಚೂರ್ಣ ಒಮ್ಮೆ ಟ್ರೈ ಮಾಡಿ
ಸಾಮಾನ್ಯವಾಗಿ ಭಾರತದಲ್ಲಿ ಎಲ್ಲೆಡೆ ಕಂಡುಬರುತ್ತದೆ.ಗುಲಾಬಿ, ಕೆಂಪು, ಬಿಳಿ ಬಣ್ಣದ ಹೂವುಗಳು ಮತ್ತು ಸಣ್ಣ ಸಸ್ಯಗಳು ಎಲ್ಲೆಡೆ ಕಂಡುಬರುತ್ತವೆ. ಇದರ ಎಲೆಗಳು ಟೈಪ್-2 ಮಧುಮೇಹಕ್ಕೆ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ನೀವು ಕೆಲವು ತಾಜಾ ಎಲೆಗಳನ್ನು ಅಗಿಯಬೇಕು, ಪ್ರತಿದಿನ ಬೆಳಗ್ಗೆ ಅದನ್ನು ಅಗಿಯಬೇಕು ಅಥವಾ ಅದರ ಬೇರನ್ನು ಪುಡಿಮಾಡಿ ನೀರಿನೊಂದಿಗೆ ಕುಡಿಯಬೇಕು.
ಮಧುನಾಶಿನಿ
ಮಧುನಾಶಿನಿ ಅಥವಾ ಗುಡ್ಮಾರ್‌ನ ವೈದ್ಯಕೀಯ ಹೆಸರು ಜಿಮ್ನೆಮಾ ಸಿಲ್ವೆಸ್ಟ್ರೆ, ಇದು ಹನ್ನೆರಡು ತಿಂಗಳ ಎಲೆಗಳನ್ನು ನೀಡುವ ಗಿದವಾಗಿದೆ, ಇದರ ಮರವು ಭಾರತ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತದೆ. ಇದರ ಎಲೆಗಳು ಮತ್ತು ಬೇರಿನ ಪುಡಿ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿವೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದ ಅರ್ಧ ಗಂಟೆಯ ನಂತರ, ಒಂದು ಚಮಚ ಬೆಲ್ಲದ ಜೊತೆಗೆ ಈ ಎಲೆಗಳ ಪುಡಿಯನ್ನು ನೀರಿನೊಂದಿಗೆ ತೆಗೆದುಕೊಳ್ಳಿ, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿತ್ಯ ಕಣಿಗಿಲೆ ಅಥವಾ ಸದಾ ಪುಷ್ಪ
ನಿತ್ಯ ಕಣಿಗಿಲೆ ಅಥವಾ ಸದಾಪುಷ್ಪ ಅಥವಾ ಸದಾಬಹಾರ್ ಹೂವನ್ನು ಪೆರಿವಿಂಕಲ್ ಎಂದು ಕರೆಯಲಾಗುತ್ತದೆ, ಇದು ಸಾಮಾನ್ಯವಾಗಿ ಭಾರತದಲ್ಲಿ ಎಲ್ಲೆಡೆ ಕಂಡುಬರುತ್ತದೆ.ಗುಲಾಬಿ, ಕೆಂಪು, ಬಿಳಿ ಬಣ್ಣದ ಹೂವುಗಳು ಮತ್ತು ಸಣ್ಣ ಸಸ್ಯಗಳು ಎಲ್ಲೆಡೆ ಕಂಡುಬರುತ್ತವೆ. ಇದರ ಎಲೆಗಳು ಟೈಪ್-2 ಮಧುಮೇಹಕ್ಕೆ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ನೀವು ಕೆಲವು ತಾಜಾ ಎಲೆಗಳನ್ನು ಅಗಿಯಬೇಕು, ಪ್ರತಿದಿನ ಬೆಳಗ್ಗೆ ಅದನ್ನು ಅಗಿಯಬೇಕು ಅಥವಾ ಅದರ ಬೇರನ್ನು ಪುಡಿಮಾಡಿ ನೀರಿನೊಂದಿಗೆ ಕುಡಿಯಬೇಕು.
ಅಮೃತ ಬಳ್ಳಿ
ಅಮೃತ ಬಳ್ಳಿ ಅಥವಾ ಗಿಲೋಯ್‌ನ ವೈಜ್ಞಾನಿಕ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ ಮತ್ತು ಇದನ್ನು ಅಮರತ್ವದ ಮೂಲ ಎಂದು ಕರೆಯಲಾಗುತ್ತದೆ. ಅಮ್ರುತಬಲ್ಲಿಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ, ಇದು ಅನೇಕ ಗುಣಗಳನ್ನು ಹೊಂದಿದೆ, ಸಸ್ಯದ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದೊಂದು ಉತ್ತಮ ಮೂಲಿಕೆಯಾಗಿದೆ, ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹಾನಿಕಾರಕ ಫ್ರೀ ರಾಡಿಕಲ್ಗಳೊಂದಿಗೆ ಹೋರಾಡುತ್ತವೆ. ಇದು ಸಕ್ಕರೆಯ ಹಂಬಲವನ್ನು ಗುಣಪಡಿಸುವ ನೈಸರ್ಗಿಕ ಮಧುಮೇಹ ವಿರೋಧಿ ಔಷಧವಾಗಿದೆ. ಇದು ರಕ್ತದಲ್ಲಿನ ಇನ್ಸುಲಿನ್ ಮತ್ತು ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ, ಗಿಲೋಯ್ ವಾಟರ್ ಅಥವಾ ಪೌಡರ್ ಸಕ್ಕರೆಯ ಮಟ್ಟವನ್ನು ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ.
ವಿಜಯಸಾರ
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಿ, ಮಧುಮೇಹವನ್ನು ಚೆನ್ನಾಗಿ ನಿಯಂತ್ರಿಸಲು ವಿಜಯಸಾರವನ್ನು ಬಳಸಲಾಗುತ್ತದೆ. ಇದು ಬಹುತೇಕರಿಗೆ ತಿಳಿದಿಲ್ಲದ ಗಿದವಾಗಿದೆ, ಈ ಮೂಲಿಕೆಯು ಆಂಟಿ-ಹೈಪರ್ಲಿಪಿಡೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ, ಇದು ದೇಹದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಕಡಿಮೆ ಸಾಂದ್ರತೆಯ ಲಿಪೊ-ಪ್ರೋಟೀನ್ ಮತ್ತು ಸೀರಮ್ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿಯಿಡೀ ಬಿಡಿ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆ ಆ ನೀರನ್ನು ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದರ ಪುಡಿಯನ್ನು ಸಹ ತೆಗೆದುಕೊಳ್ಳಬಹುದು. ಇದಲ್ಲದೆ, ಓರೆಗಾನೊ, ಅಲೋವೆರಾ ಮತ್ತು ಆಮ್ಲಾ ಮುಂತಾದ ಅನೇಕ ಗಿಡಮೂಲಿಕೆಗಳನ್ನು ಸಹ ತೆಗೆದುಕೊಳ್ಳಬಹುದು. ಅವು ಕೂಡ ಮಧುಮೇಹವನ್ನು ನಿಯಂತ್ರಿಸುತ್ತವೆ.
ನೈಸರ್ಗಿಕ ಮಧುಮೇಹ ವಿರೋಧಿ ಔಷಧವಾಗಿದೆ. ಇದು ರಕ್ತದಲ್ಲಿನ ಇನ್ಸುಲಿನ್ ಮತ್ತು ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ, ಗಿಲೋಯ್ ವಾಟರ್ ಅಥವಾ ಪೌಡರ್ ಸಕ್ಕರೆಯ ಮಟ್ಟವನ್ನು ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ.
ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ
ಜೀ ಕನ್ನಡ ನ್ಯೂಸ್.
***
Cholesterol: ನಿತ್ಯ ಈ ಗಿಡದ ಎಲೆಗಳನ್ನು ಅಗೆದು ತಿಂದರೆ ನರಗಳಲ್ಲಿನ ಜಿಡ್ಡು ಬೆಣ್ಣೆಯಂತೆ ಕರಗುತ್ತದೆ
Fat in Blood : ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ನರಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಆಂಟಿಕೊಳ್ಳುತ್ತದೆ ಮತ್ತು ಸುಲಭವಾಗಿ ಅಲ್ಲಿಂದ ತೊಲಗುವುದಿಲ್ಲ. ಆದರೆ, ಈ ಚಿಕ್ಕ ಎಲೆಗಳು ಅದನ್ನು ನೀರಿನ ಹಾಗೆ ಕರಗುವಂತೆ ಮಾಡುತ್ತವೆ.
Bad Cholesterol In Blood: ಒಂದು ವೇಳೆ ನಿಮ್ಮ ನರಗಳಲ್ಲಿಯೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದರೆ, ನೀವು ನಿಮ್ಮ ಆಹಾರದ ಕಡೆಗೆ ವಿಶೇಷ ಗಮನಹರಿಸುವ ಅವಶ್ಯಕತೆ ಇದೆ. ಈ ಕೆಟ್ಟ ಕೊಲೆಸ್ಟ್ರಾಲ್ ನರಗಳಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ ಮತ್ತು ಇದರಿಂದ ಹೃದಯಾಘಾತದ ಅಪಾಯ ಅತ್ಯಧಿಕವಾಗುತ್ತದೆ.
ಉಬ್ಬಿಕೊಂಡಿರುವ ಕಠಿಣ ನರಗಳಿಂದ ಕೊಲೆಸ್ಟ್ರಾಲ್ ನ ನಿರ್ಮೂಲನೆಗೆ ಆಯುರ್ವೇದ ತುಂಬಾ ಪರಿಣಾಮಕಾರಿಗ್ಯಾಗಿದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ರಾಮಬಾಣ ಉಪಾಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉಪಾಯದಲ್ಲಿ ಸೂಚಿಸಲಾಗಿರುವ ಹಸಿರು ಎಲೆಗಳನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ರಕ್ತನಾಳಗಳಲ್ಲಿ ಸಂಗ್ರಹಗೊಂಡ ಕೆಟ್ಟ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿ ಹೋಗುತ್ತದೆ.
ನುಗ್ಗೆ ಸೊಪ್ಪನ್ನು ಅಗೆಯಿರಿ
ಆಯುರ್ವೇದದಲ್ಲಿ ನುಗ್ಗೆಯನ್ನು ಒಂದಲ್ಲ ಹಲವಾರು ಕಾಯಿಲೆಗಳಿಗೆ ಒಂದು ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿದೆ. ಈ ಗಿಡದ ಎಲೆಗಳಿಂದ ಹಿಡಿದು ಕಾಂಡದವರೆಗೆ ಔಷಧೀಯ ಗುಣಗಳನ್ನು ಹೊಂದಿವೆ. ಇದು ಕೂದಲುದುರುವಿಕೆ, ಬಿಪಿ, ಅರ್ಥರೈಟಿಸ್, ಎನಿಮಿಯಾ, ಥೈರಾಯಿಡ್, ಡಯಾಬಿಟಿಸ್, ಅಸ್ತಮಾ. ಶ್ವಾಸಕೋಶದ ಕಾಯಿಲೆ, ಮೂತ್ರಪಿಂಡಗಳ ವ್ಯಾಧಿ, ತೂಕ ಇಳಿಕೆ ಹಾಗೂ ರೋಗ ನಿರೋಧಕ ಶಕ್ತಿ ಕುಗ್ಗುವಿಕೆಯಂತಹ ಕಾಯಿಲೆಗಳಲ್ಲಿ ಒಂದು ಪರಿಣಾಮಕಾರಿ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.
ನುಗ್ಗೆಕಾಯಿ ಗಿಡ ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ2, ಬಿ3, ವಿಟಮಿನ್ ಬಿ6, ಫೋಲೆಟ್, ಅಸ್ಕಾರ್ಬಿಕ್ ಆಸಿಡ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಐರನ್, ಮೆಗ್ನೆಸಿಯಂ, ಫೋಸ್ಪೋರೇಟ್ ಹಾಗೂ ಜಿಂಕ್ ಗಳಂತಹ ದೇಹಕ್ಕೆ ಬೇಕಾಗುವ ಅತ್ಯಾವಶ್ಯಕ ಪೋಷಕಾಂಶಗಳಿವೆ. ಇದೇ ಕಾರಣದಿಂದ ಇದು ಆಂಟಿಬಯೋಟಿಕ್, ಅನಾಲ್ಜೆಸಿಕ್, ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲೇಮೆಟರಿ, ಆಂಟಿಕ್ಯಾನ್ಸರ್, ಆಂಟಿಡಯಾಬಿಟಿಕ್, ಆಂಟಿಫಂಗಲ್ ಹಾಗೂ ಆಶ್ಚರ್ಯಕಾರಕ ರೀತಿಯಲ್ಲಿ ಆಂಟಿಏಜಿಂಗ್ ನಂತೆ ಕಾರ್ಯನಿರ್ವಹಿಸುತ್ತದೆ.
ನರಗಳಲ್ಲಿ ಶೇಖರಣೆಗೊಂಡ ಜಿಡ್ಡು ತೊಲಗಿಸಲು ಏನು ಮಾಡಬೇಕು?
ನುಗ್ಗೆಗಿಡದ ತಾಜಾ ಮತ್ತು ಎಳೆ ಎಲೆಗಳನ್ನು ನೀವು ಬರಿ ಬಾಯಿಯಿಂದ ಅಗೆದು ತಿನ್ನಬಹುದು. ಇಲ್ಲದಿದ್ದರೆ, ಇವುಗಳನ್ನು ನೀವು ಸ್ಪ್ರೌಟ್ಸ್ ಅಥವಾ ಸಲಾಡ್ ಗಳಲ್ಲಿಯೂ ಕೂಡ ಬೆರೆಸಿ ತಿನ್ನಬಹುದು. ಇದರ ಸಾಗು, ಪರಾಠ ಕೂಡ ತಯಾರಿಸಿ ತಿನ್ನಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಆನೀರನ್ನು ಸಹ ನೀವು ಕುಗಿಯಬಹುದು. ಪೌಡರ್ ರೂಪದಲ್ಲಿಯೂ ಕೂಡ ನೀವು ಇದನ್ನು ಸೇವಿಸಬಹುದು. ನಿತ್ಯ ಕನಿಷ್ಠ 5 ಚಮಚೆಗಳಷ್ಟು ಇದನ್ನು ಸೇವಿಸಿ.
ನುಗ್ಗೆಗಿಡ ಇನ್ನೂ ಹಲವು ಲಾಭಗಳನ್ನು ಹೊಂದಿದೆ
>> ದೇಹದಲ್ಲಿ ಹಿಮೊಗ್ಲೋಬಿನ್ ಮಟ್ಟವನ್ನು ಉತ್ತಮಗೊಳಿಸುತ್ತದೆ.
>> ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸುತ್ತದೆ.
>> ಲೀವರ್ ಹಾಗೂ ಕಿಡ್ನಿಯಿಂದ ವಿಷಕಾರಿ ಪದಾರ್ಥಗಳನ್ನು ಇದು ಹೊರಹಾಕುತ್ತದೆ.
>> ರಕ್ತವನ್ನು ಶುದ್ಧೀಕರಿಸುವುದರ ಮೂಲಕ ಚರ್ಮದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
>> ಇದು ತೂಕ ಇಳಿಕೆಗೆ ಒಂದು ರಾಮಬಾಣ ಮನೆಮದ್ದಾಗಿದೆ.
Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ
ಜೀ ನ್ಯೂಸ್.
****
No comments:
Post a Comment