SEARCH HERE

Tuesday, 1 January 2019

ಜಪ ವಿಧಗಳು ಪರಿಣಾಮ japa types effects





ಜಪ ಮತ್ತು ಜಪ ಮಾಲೆಯ ವಿಧಗಳು ಅನುಸರಿಸಿ ಜಪ ಮಾಡುವುದರಿಂದ ಆಗುವ ಪರಿಣಾಮಗಳು

"ಜಪ"
ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.
★ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.
★ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.
★ "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.
“ "ಜ" ಕಾರೋ ಜನ್ಮ ವಿಚ್ಚೇಧನ
"ಪ" ಕಾರೋ ಪಾಪನಾಶಕ
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕ “
"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆಂದಾಗುತ್ತದೆ.
★"ಜಪ" ಅಂದರೇನು?
ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ "ಜಪ",
ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೋರಕುತ್ತದೆ.
★ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.
★ಜಪದಲ್ಲಿ ಮೂರು ವಿಧಾನಗಳಿವೆ.
"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.
"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು
"ಮಾನಸಿಕ - ಮನಸ್ಸಿನಲ್ಲಿ ಧ್ಯಾನಿಸುವುದು.
★ "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.
★★★ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ★★★
*★★★ಗುರು ಎಂಬ ಶಬ್ದಕ್ಕೆ ಅರ್ಥ ★★★
"ಗು" ಎಂದರೆ ಕತ್ತಲು ಅಥವ ಅಜ್ನಾನ
"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ.ಗುರುಉಪದೇಶ ಮಾಡುವುದರ ಜೊತೆಗೆಆಶಿರ್ವಾದವನ್ನೂ ಮಾಡುತ್ತಾನೆ.
ಜಪಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.
ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.
ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.
ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು.
ಜಪದಲ್ಲಿ ವಿಧಗಳಿವೆ★★★
ನಿತ್ಯಜಪ
ವೈಯಕ್ತಿಕ ಜಪ
ಪ್ರಾಯಶ್ಚಿತ ಜಪ
ಅಚಲ ಜಪ
ಜಲ ಜಪ
ಅಖಂಡ ಜಪ
ಪ್ರದಕ್ಷಿಣ ಜಪ
ಲಿಖಿತ ಜಪ
ಕಾಮ್ಯ ಜಪ
ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.
ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.★★★
ಅವುಗಳೆಂದರೆ,
★ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.
★ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.
ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.
★ ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
★ ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.
★ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.
★ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.★
★★ಪ್ರತಿನಿತ್ಯವೂ ಜಪ ಮಡುವುದರಿಂದ ★★
★ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.
★ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡು ತ್ತದೆ.
★ ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.
★ ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.
★ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.
★ ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.
★ ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
★ ಆದರೆ ತೋರಾಣಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.
★ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.★
★ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

*****


ಜಪ
ಹೆಚ್ಚು ಹೆಚ್ಚು ನಾಮಜಪವನ್ನು ಮಾಡುವುದರಿಂದ ಆಗುವ ಪ್ರಯೋಜನಗಳು
ಒಂದು ಸಂಸ್ಕ್ರತ ಶ್ಲೋಕ ದಿಂದ ಇದನ್ನು ಸಂಪೂರ್ಣ ಅನ್ವಯ ಮಾಡುವ ಪ್ರಯತ್ನ. ಸತ್ಯ.ಪಿ.ಎ......

"ಜ" ಕಾರೋ ಜನ್ಮ ವಿಚ್ಛೇದಃ "ಪ" ಕಾರೋ ಪಾಪನಾಶಕಃ|

 ತಸ್ಮಾಜ್ಜಪ ಇತಿಪ್ರೋಕ್ತೋ ಜನ್ಮ ಪಾಪವಿನಾಶಕಃ||

"ಜ" ಎನ್ನುವ ಅಕ್ಷರವು ಜನ್ಮಗಳನ್ನು ನಾಶಮಾಡುತ್ತದೆ ಎಂದು ತಿಳಿಸುತ್ತದೆ.

"ಪ" ಎನ್ನುವ ಅಕ್ಷರವು ಪಾಪಗಳನ್ನು ನಾಶ ಮಾಡುತ್ತದೆ ಎಂದು ಹೇಳುತ್ತದೆ.

ಜನ್ಮಗಳು ಇಲ್ಲದೆ ಮಾಡಿ ಇರುವ ಪಾಪಗಳನ್ನು ನಾಶ ಮಾಡಿ ಮೋಕ್ಷ ಜ್ಞಾನವನ್ನು ನೀಡುವ ದಾರಿ ಜಪ ಎಂದು ತಿಳಿಯಬಹುದು


ಯಾರು ನಿತ್ಯ ಭಗವಂತನ ನಾಮವನ್ನು ಜಪಿಸುತ್ತಾರೋ ಅವನ ಜವಾಬ್ದಾರಿ ಭಗವಂತನದ್ದು ಆಗಿರುತ್ತದೆ.


ಅಂದರೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿಯನ್ನು ಪ್ರಚೋದನೆ ಮಾಡಿತ್ತಾನೆ.


ಎಲ್ಲರೂ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಭಗವಂತನ ನಾಮವನ್ನು ಜಪ ಮಾಡಿ


ಶ್ರೀರಾಮ ಜಯ ರಾಮ ಜಯ ಜಯ ರಾಮ

👆🏻 ಈ ನಾಮ ಜಪವನ್ನು ಮಾಡಿ ಮೃತದಿಂದ ಅಮೃತದ ಕಡೆಗೆ ಕೊಂಡೊಯ್ಯುವ ಮಹಾ ಮಂತ್ರ...

ಅಜ್ಞಾನವನ್ನು ನಾಶ ಮಾಡುವ

ಜ್ಞಾನವನ್ನು ನೀಡುವ ಮಂತ್ರ ಶ್ರೀರಾಮ ಮಂತ್ರ...

ಮರಣ ಭಯವನ್ನು ನೀಗಿಸುವಂತಹ ಮಂತ್ರ

ಆನಂದವನ್ನು ಬ್ರಹ್ಮಾನಂದವನ್ನು ನೀಡುವ ಮಂತ್ರ

ಎಲ್ಲರೂ ಯಥೇಚ್ಛವಾಗಿ ಮಾಡಿ ಶ್ರೀರಾಮ ಜಯ ರಾಮ ಜಯ ಜಯ ರಾಮ ಮಂತ್ರವನ್ನು...


ನಾನು ಹೇಳುವೆ ಎಂದು ಅಲ್ಲ...

ಜನ್ಮವನ್ನು ಸಾರ್ಥಕ ಮಾಡಿಕೊಳ್ಳಿರಿಗೆ...

ಯಾರಿಗೆ ಗೊತ್ತು ಮುಂದಿನ ಜನ್ಮವು ಮಾನವ ಜನ್ಮವೇ ಎಂದು


ಶ್ರೀರಾಮ ಜಪಕ್ಕೆ ಯಾವುದೇ ನಿಯಮವಿಲ್ಲ....
ಇರುವ ನಿಯಮ ಒಂದೇ ನಾಮವನ್ನು ಯಥೇಚ್ಛವಾಗಿ ತೆಗೆದುಕೊಳ್ಳುವುದು.

ಶ್ರೀರಾಮ ಜಯ ರಾಮ ಜಯ ಜಯ ರಾಮ

***

#ಅಚಿಂತ್ಯ_ಅಚ್ಯುತ

#ಜಪ

ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. "ಜಪ" ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ. "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ. "ಜ" ಕಾರೋ ಜನ್ಮ ವಿಚ್ಛೇದಃ "ಪ" ಕಾರೋ ಪಾಪನಾಶಕಃ| ತಸ್ಮಾಜ್ಜಪ ಇತಿಪ್ರೋಕ್ತೋ ಜನ್ಮ ಪಾಪವಿನಾಶಕಃ||

"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ "ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಮನುಷ್ಯ(ಮಾನುಷ) ಜನ್ಮ ಪವಿತ್ರ(ಸಾರ್ಥಕ)ವಾಗಬೇಕಾದರೆ "ಜಪ" ಅತ್ಯವಶ್ಯಕ.

"ಜಪ" ಎಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮಂತ್ರವನ್ನಾಗಲೀ, "ತಾರಕ" ಮಂತ್ರವನ್ನಾಗಲೀ ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.

"ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆ೦ದರೆ "ವಾಚಕ" "ಉಪಾಂಶು" ಮತ್ತು "ಮಾನಸಿಕ ಜಪ".

"ವಾಚಕ" - ಬೇರೆಯವರ ಕಿವಿಗೆ ಬೀಳುವ೦ತೆ ಪಠಿಸುವುದು.
"ಉಪಾಂಶು" - ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದ೦ತಿರುವುದು
"ಮಾನಸಿಕ ಜಪ" - ಮನಸ್ಸಿನಲ್ಲಿ ಧ್ಯಾನಿಸುವುದು.
"ವಾಚಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ". ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

#ತಪಅಥವಾತಪಸ್ಸು
ತಪಸ್ಸು ಅಂದರೆ ಆಳವಾದ ಧ್ಯಾನ, ಆತ್ಮ ಸಾಕ್ಷಾತ್ಕಾರ ಸಾಧಿಸುವ ಪ್ರಯತ್ನ, ಕೆಲವೊಮ್ಮೆ ಏಕಾಂತತೆ, ವಿರಕ್ತತೆ ಅಥವಾ ವೈರಾಗ್ಯವನ್ನು ಒಳಗೊಂಡಿರುತ್ತದೆ; ಯೋಗಿಕ ಸಂಪ್ರದಾಯದಲ್ಲಿ ಅದು ಜ್ಞಾನೋದಯದ ಬಹಳ ಕಠಿಣ ಗುರಿಯನ್ನು ಸಾಧಿಸಲು, ಆತ್ಮ ನಿಯಂತ್ರಣ, ಏಕಚಿತ್ತತೆ ಹಾಗು ಕೇಂದ್ರೀಕರಣ, ಸರಳತೆ, ವಿವೇಕ, ಸಮಗ್ರತೆಯನ್ನು ಪೋಷಿಸಲು, ಸಂನ್ಯಾಸಿಗೆ ಅಗತ್ಯವಿರುವ ಒಳಗೆ ಸುಡುವ ಬೆಂಕಿಯಿದ್ದಂತೆ ಈ ತಪಸ್ಸು. ತಪಸ್ಸನ್ನು ಶರೀರ, ಮನಸ್ಸು ಹಾಗು ನಡತೆಯನ್ನು ಬೆಳೆಸಲು ಹಾಗು ಹಿಡಿತದಲ್ಲಿಡಲು ಬಳಸಲಾಗುತ್ತದೆ.

ತಪಸ್ಸಿನಲ್ಲಿ ಮೂರು ವಿಧ. ಶಾರೀರಿಕ, ವಾಚಿಕ, ಮಾನಸಿಕ.

ಪರಮ ಪ್ರಭುವಿನ ಸೇವೆ, ಗುರುವಿನ ಸೇವೆ, ಪೂಜೆ, ಶುಚಿತ್ವ, ಸರಳತೆ, ಬ್ರಹ್ಮಚರ್ಯ ಮತ್ತು ಅಹಿಂಸೆ - ಇವೆಲ್ಲವೂ ದೇಹದ ತಪಸ್ಸು ಎಂದು ಹೇಳಲಾಗುತ್ತದೆ.

ಉದ್ವೇಗಗೊಳಿಸದ, ಸತ್ಯವಾದ, ಪ್ರಿಯವಾದ, ಹಿತಕರವಾದ ಮಾತುಗಳು, ವೇದಗಳ ಅಭ್ಯಾಸ ಮತ್ತು ಅಧ್ಯಯನ-ಯಾವುದಾದರೊಂದು ಲೋಕೋಪಯೋಗವಾದ ವಿಷಯದ ಅಧ್ಯಯನ ಇವೆಲ್ಲವೂ ಮಾತಿನ ತಪಸ್ಸು ಎಂದು ಕರೆಯಲಾಗುತ್ತದೆ.

ಮನಃಶಾಂತಿ, ತಾಳ್ಮೆ, ಮೌನ, ಆತ್ಮಸಂಯಮ‌ ಮತ್ತು ಅಂತಃಕರಣ ಶುದ್ಧಿ- ಇವೆಲ್ಲವೂ ಮನಸ್ಸಿನ ತಪಸ್ಸೆಂದು ಹೇಳಲಾಗಿದೆ.

ಬಂದ ನೋವನ್ನು ತಾಳಿಕೊಳ್ಳುವುದು, ಇತರ ಪ್ರಾಣಿಗಳಿಗೆ ದುಃಖವುಂಟು ಮಾಡದಿರುವುದು, ಇವೇ ತಪಸ್ಸಿನ ಲಕ್ಷಣವೆನಿಸಿಕೊಳ್ಳುವುದು.

ತಪಸ್ಸು ಎನ್ನುವುದು ಅದನ್ನು ಪೂರ್ವಜನ್ಮದಲ್ಲಿ ಸಾಧಿಸಿದವರಿಗೆ ಮಾತ್ರ ಲಭ್ಯವಾಗುವುದು. ಪೂರ್ವಸಿದ್ದಿ ಇಲ್ಲದವರು ಅದನ್ನು
ಕೈಗೊಂಡರೆ ಅದು ನಿಷ್ಫಲವಾಗುವುದು.

ಒಲ್ಲದವರನ್ನು ಅಡಗಿಸುವುದಾಗಲೀ. ಒಲಿದವರನ್ನು ಮೇಲೆತ್ತುವುದಾಗಲೀ, ನೆನೆದ ಮಾತ್ರಕ್ಕೆ ತಪೋಬಲದಿಂದ ಸಾಧ್ಯವಾಗುವುದು.

ತಪಸ್ಸಿನಿಂದ ಬೇಡಿದ ಫಲಗಳನ್ನು ಬೇಡಿದಂತೆಯೇ ಪಡೆಯಲು ಸಾಧ್ಯವಾಗುವುದರಿಂದ, ಆ ತಪಸ್ಸಿನ ಜೊತೆಗೆ ಬುದ್ಧಿ, ವಿವೇಕಗಳು ಅಗತ್ಯವಾಗಿ ಇರಬೇಕು.

ತಪಸ್ಸು ಮಾಡುವವರು ತಮ್ಮ ಕರ್ಮಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾರೆ. ಮತ್ತಲ್ಲದವರು ಅತಿಯಾಶೆಗೊಳಗಾಗಿ ಹೀನ
ಕೆಲಸಗಳನ್ನು ಮಾಡುತ್ತಾರೆ.

ಪುಟವಿಟ್ಟಂತೆಲ್ಲ ಚಿನ್ನವು ಹೆಚ್ಚು ಹೊಳೆಯುವುದು; ಅದರಂತೆ ತಪಸ್ವಿಗಳು ಹೆಚ್ಚು ಕಷ್ಟಕ್ಕೀಡಾದಂತೆಲ್ಲ ಆತ್ಮಬಲ ವರ್ಧಿಸುತ್ತದೆ

ತಪೋಬಲದಿಂದ ಮೋಹವನ್ನು ಕತ್ತರಿಸಿಕೊಂಡು, ತನ್ನ ಪ್ರಾಣವನ್ನು (ಆತ್ಮ ಬಲವನ್ನು) ಸಂಪೂರ್ಣವಾಗಿ ಹತೋಟೆಯಲ್ಲಿಟ್ಟುಕೊಂಡವನನ್ನು ಲೋಕದಲ್ಲಿರುವ ಜೀವಿಗಳೆಲ್ಲ ತಲೆಬಾಗಿ ವಂದಿಸುವುವು.

ತಪಸ್ಸಿನ ಬಲವನ್ನು ಸಾಧಿಸಿಕೊಂಡವರಿಗೆ ಮೃತ್ಯುವನ್ನು ಮೆಟ್ಟಿ ಗೆಲ್ಲುವುದೂ ಸಾಧ್ಯವಾಗುತ್ತದೆ.

ಈ ಲೋಕದಲ್ಲಿ ಇಲ್ಲದವರೇ ಹೆಚ್ಚು ಮಂದಿ, ಉಳ್ಳವರು ಕೆಲವೇ ಮಂದಿ; ಇದಕ್ಕೆ ಕಾರಣ ತಪಸ್ಸನ್ನಾಚರಿಸುವವರು ಕೆಲವೇ
ಮಂದಿಯಾಗಿ ಬಹುಪಾಲು ಜನ ತಪಸ್ಸಿನಿಂದ ದೂರವಾಗಿರುವುದೇ.

#Sundaresh_C
ನಾನು ನನ್ನ ಕ್ವಾಂಟಮ್ ಫಿಸಿಕ್ಸ್ ನ ಸ್ನೇಹಿತರೊಬ್ಬರು ಹಿಂದೆ ಹೇಳಿದ್ದ ವಿಚಾರವನ್ನು ಈಗ ತಿಳುಸುತ್ತಿದ್ದೇನೆ.
ಈ ಜಪ, ತಪ, ಪೂಜೆ  ಇವೆಲ್ಲ ನಮ್ಮನ್ನು ನಾವೇ ಶುದ್ಧ ಮಾಡಿಕೊಳ್ಳುವಂತ ಸಾಧನಗಳು.   
ಶುದ್ಧವಾದ ತಾಮ್ರದ ತಂತಿ ಮಾತ್ರ ಒಳ್ಳೆಯ ವಿದ್ಯುತ್ ವಾಹಕವಾಗಿ ಕೆಲಸಮಾಡುವಂತೆ,
 ಈ ಜಪ, ತಪ, ಇತ್ಯಾದಿ  ಸಹ ನಮ್ಮ ಅಂತರಂಗವನ್ನ ಶುದ್ಧ ಗೊಳಿಸಿ ಸೂಪರ್ ಪವರ್ ಜೊತೆಗೆ  ನಮ್ಮಸಂಪರ್ಕ ಸುಲಲಿತವಾಗಿ ಆಗಲು ಸಹಾಯ ಮಾಡುತ್ತದೆ.

#ವಿನಾಯಕ_ಹೆಗಡೆ
ಒಂದೇ ನಾಮವನ್ನು ಹಲವು ಬಾರಿ ಉಚ್ಚರಿಸುವುದೇ ಜಪ. ಏಕಾಗ್ರತೆಯನ್ನು ಹೆಚ್ಚಿಸಿ ಆ ಜಪವೇ ತೀವ್ರತರವಾದರೆ ತಪ..
"ತಾಮಗ್ನಿವರ್ಣಾಂ ತಪಸಾ ಜ್ವಲಂತೀಂ" ಜಪದ ಅಗ್ನಿಯಕಾಂತಿಯ ತಾಪದಲಿ ಜ್ವಲಿಸುವವನೇ ತಪಸ್ವಿ..
(ಸಂಗ್ರಹಿಸಿದ್ದು:- ನಿತ್ಯ ಸತ್ಯ)
***

ಜಪ - ಸಾಧನೆ - ಮಾಹಿತಿ  🔱

ಪೂರ್ವ ಸತ್ಯ ಯುಗದಲ್ಲಿ ಎಲ್ಲ ಸಕಲ ಕೋಟಿ ದೇವತೆಗಳು ಭೂಲೋಕದಲ್ಲಿ ಮನುಷ್ಯರ ನಡುವೆಯೇ ಎಲ್ಲರ ಜೊತೆಯಲ್ಲಿಯೇ ಜೀವನ ಮಾಡುತಿದ್ದರು. ಹಾಗೂ ಆಗ ಸೃಷ್ಟಿಕರ್ತ ಬ್ರಹ್ಮನಿಗೆ
ಮಾತ್ರ ಪೂಜೆ ಆರಾಧನೆ ಆಗಿತ್ತು. ಹಾಗೆಂದು ಬ್ರಹ್ಮಾಂಡಪುರಾಣದಲ್ಲಿ ಉಲ್ಲೇಖವಿದೆ.ಹಾಗೂ ತ್ರೆತಾಯುಗದಲ್ಲಿ ಸೂರ್ಯನ ಆರಾಧನೆ ಇತ್ತು. ಹಾಗೂ ದ್ವಾಪರ ಯುಗದಲ್ಲಿ ವಿಷ್ಣುವಿನ ಆರಾಧನೆಯಾಗಿತ್ತು.. ಹಾಗೆ ಈ ಕಲಿಯುಗದಲ್ಲಿ ಶಿವನ ಹಾಗೂ ಶಿವ ಸಂಬಂದಿತ ಜಪ ತಪ ಆರಾಧನೆ ಮಾಡಿದರೆ ಶೀಘ್ರ ಸಿದ್ದಿಯಾಗುವುದು.. ಉದಾಹರಣೆಗೆ ಭೈರವ, ವೀರಭದ್ರ, ಮೃತ್ಯುಂಜಯ, ಮೃತ್ಯು ಸಂಜೀವಿನಿ ಇತ್ಯಾದಿ ಯಂತ್ರ, ಮಂತ್ರ, ತಂತ್ರ ಸಾಧನೆ ಬೇಗ ಸಿದ್ದಿಸುವುದು.

* ಪೆಯ್ತಕಾರಿಣಿ ತಂತ್ರ ದಲ್ಲಿ 4 ರಸ್ತೆ ಕೂಡುವ ಸಂಗಮದಲ್ಲಿ ಮದ್ಯಸ್ಥಾನದಲ್ಲಿ ಕುಳಿತು ಜಪ ಮಾಡಿದರೆ ಅದು ವಿಶೇಷ ದಿನದಲ್ಲಿ ಹುಟ್ಟಿದ ದಿನ, ನಕ್ಷತ್ರ, ತಿಥಿ ಹಾಗೂ ಗ್ರಹಣ ಮತ್ತು ಪ್ರದೋಷ ಕಾಲದಲ್ಲಿ ಜಪ ಮಾಡಿದರೆ 10 ರಷ್ಟು ಫಲವಿದೆ.
ಅದರಲ್ಲೂ ರಾತ್ರಿ ಸಮಯದಲ್ಲಿ ಜಪ ಮಾಡಿದರೆ
ವಿಶೇಷ ಶಕ್ತಿ ಹೊಂದಿದೆ.. ಅದರಲ್ಲೂ ಶಿವನ ಹಾಗೂ ಶಿವನ ವಿಭಿನ್ನ ಶಕ್ತಿಯ ಜಪ 4 ರಸ್ತೆ ಸೇರುವ ಸಂಗಮದ ಮಧ್ಯ ಮಾಡಿದರೆ ಶೀಘ್ರ ಸಿದ್ದಿ ಹಾಗೂ ಶೀಘ್ರ ಫಲ ಪ್ರಾಪ್ತಿ ಹಾಗೆಂದು ಶಿವ ರಹಸ್ಯದಲ್ಲಿದೆ..

* ಪೂರ್ವ ದಿಕ್ಕು ಜಪಕ್ಕೆ ಶ್ರೇಷ್ಠ ಹಾಗೂ ಉತ್ತರ ಕೂಡ ಅತ್ಯುತ್ತಮ.ದಕ್ಷಿಣ ಮಾತ್ರ ನಿಷಿದ್ಧ ದಿಕ್ಕು ಎಂದು ಪೆಯ್ತಕಾರಿಣಿ ತಂತ್ರದಲ್ಲಿ ಉಲ್ಲೇಖವಿದೆ.
ಯಾಕೆಂದರೆ ಇದು ಯಮನ ದಿಕ್ಕು ಇದರಿಂದ 
ಪಿತೃರ ಕಾಟ ಹೆಚ್ಚಾಗಬಹುದು ಮನಸ್ಸು ಚಂಚಲವಾಗುವುದು..

* ಎಲ್ಲ ವರ್ಣ ದವರಿಗೂ ಒಂದು ದಿಕ್ಕು ಜಪಕ್ಕೆ ಉತ್ತಮ ಎಂದರೆ ಅದು ಉತ್ತರ ದಿಕ್ಕು.. ಹಾಗೂ ಜಿವಂತ ಗುರುಗಳು ಓಡಾಡುತ್ತಿರುವ ಸ್ಥಳ, ಗುರು ಸ್ಥಾನ, ಶಿವ ಲಿಂಗ ಇರುವ ಜಾಗ ಹಾಗೂ ಶಿವ ದೇವಾಲಯ ನದಿ ದಡ ಇವೆಲ್ಲ ಜಪ ಸಾಧನೆಗೆ ಶ್ರೇಷ್ಠ ವೆಂದು ನಾರದಿಯ ತಂತ್ರಸಾರದಲ್ಲಿ ಹೇಳಲಾಗಿದೆ..ಪರ್ವತ, ಬೆಟ್ಟ, ಜಲಾಶಯ ಹಾಗೂ ಗೋ ಶಾಲೆ ಮತ್ತು ದಟ್ಟ ಕಾಡಿನಲ್ಲಿ ಜಪ ಮಾಡಿದರೆ ಮನೆಯಲ್ಲಿ ಜಪ ಮಾಡುವುದಕ್ಕಿಂತ ಲಕ್ಷ ಪಟ್ಟು ಫಲ.. ನದಿ ದಡ ಅದರಲ್ಲೂ ಶಿವನ ದೇವಸ್ಥಾನ
ಹತ್ತಿರ ಇರುವ ನದಿ ದಡದ ಹತ್ತಿರ ಜಪ ಮಾಡಿದರೆ
ಕೋಟಿ ಫಲ ಇರುವುದು.... ಮನೆಯಲ್ಲಿ ಜಪ ಮಾಡಿದರೆ ನೂರರಷ್ಟು ಫಲ..

* ಮಾರ್ಕೆಂಡೇಯ ಋಷಿಗಳ ಪ್ರಕಾರ ಮನೆಯಲ್ಲಿರೋ ತಂದೆ - ತಾಯಿಯ ಮುಂದೆ ಅವರ ಜೊತೆಯಲ್ಲಿ ಅವರು ಓಡಾಡಿದ ಜಾಗದಲ್ಲಿ ಜಪ ಮಾಡಿದರೆ ಅನಂತ ಫಲ ಪ್ರಾಪ್ತಿಯಾಗುವುದು..

* ಗುರುಗಳ ಮುಂದೆಯೇ ಕುಳಿತು ಜಪ ಮಾಡಿದರೆ ಗುರುವಿನ ವಿಶೇಷ ಶಕ್ತಿಯ ಅಲೆಯಿಂದ ನೇರವಾಗಿ ಅವರಲ್ಲಿಯೇ ಸಂಪರ್ಕ ಹೊಂದಿ ವಿಶೇಷ ಶಕ್ತಿಯೊಂದಿಗೆ ಅದರಿಂದ ಸಿಗುವ ಫಲ ಹೇಳತೀರದು..

* ಮನೆಯಲ್ಲಿ ಕುಳಿತು ಜಪ ಮಾಡಿದರೆ ಆ ಜಪದ
  ಶಕ್ತಿ 3 ಕಿ. ಮೀ ವರೆಗೆ ವ್ಯಾಪೀಸುವುದು. ನದಿಯ ದಡದಲ್ಲಿ ಕುಳಿತು ಮಾಡಿದ ಜಪದ ಶಕ್ತಿ 10 ಕಿ. ಮೀ ವರೆಗೂ ಹಾಗೂ ನದಿ ದಡದ ಹತ್ತಿರವಿರುವ ಶಿವನ ಸಾನಿಧ್ಯದಲ್ಲಿ ಜಪ ಮಾಡಿದರೆ 16 ಕಿಲೋಮೀಟರ್ ವರೆಗೂ ಅದರ ಶಕ್ತಿ ವ್ಯಾಪಿಸುತ್ತದೆ ಇದರಿಂದ ಆ ವ್ಯಾಪ್ತಿಯಲ್ಲಿ ಬರುವ ಜನರ ರಕ್ಷಣೆಯು ಆಗತ್ತೆ.. ಹಿಗೆ ಮನೆಗೊಬ್ಬ ಸಾಧಕರು ಇದ್ದರೆ ಸುನಾಮಿ, ಭೂಕಂಪಗಳಂತ ಪ್ರಕೃತಿ ವಿಕೋಪಗಳನ್ನು ತಡೆಯಬಹುದು.. ಇದು ಸಮಾಜ ಸೇವೆಯೂ ಆಗುತ್ತದೆ..

* ಅಧರ್ಮ ಕಾಮ, ವಂಚನೆ, ಮೋಸ, ದುಶ್ಚಟ, ದುರಹಂಕಾರ ಇದ್ದವರಿಗೆ ಮಂತ್ರ ಜಪ ಸಿದ್ದಿಯಾಗುವುದಿಲ್ಲ...

ಸಂಗ್ರಹ - ಗುರುವಾಣಿ
***

ಜಪಮಾಲೆ ಧರಿಸುವುದರ ಪ್ರಯೋಜನವೇನು..? 🥰


💠 ಸಾಕಷ್ಟು ಜನರು ಜಪಮಾಲೆಯ ಪ್ರಯೋಜನವನ್ನು, ಮಹತ್ವವನ್ನು ತಿಳಿಯದೇ ಜಪಮಾಲೆಯನ್ನು ಧರಿಸುತ್ತಾರೆ. ಯಾವೆಲ್ಲಾ ರೀತಿಯ ಜಪಮಾಲೆಯನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? ಇಲ್ಲಿದೆ ಜಪಮಾಲೆಯ ಪ್ರಯೋಜನ.

💠 ಹಲವರಿಗೆ ಜಪಮಾಲೆ ಹಿಡಿದು ಮಂತ್ರ ಪಠಿಸುವುದರ ಪ್ರಯೋಜನವೇನೆನ್ನುವುದು ತಿಳಿದಿರುವುದಿಲ್ಲ. ಆದರೂ ಕೂಡ ಅವರು ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದು ಕೊಂಡಿರುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲ, ಸಾಕಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೂ ಕೂಡ ಇದೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಸ್ಥಿರತೆಯನ್ನು ಕಳೆದುಕೊಳ್ಳುವುದಿಲ್ಲ. ಅ ಸಮಯದಲ್ಲಿ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ.

🔯 ತುಳಸಿ ಜಪಮಾಲೆ

💠 ತುಳಸಿ ಜಪಮಾಲೆಯು ಓರ್ವ ವ್ಯಕ್ತಿಯ ಮನಸ್ಸಿನಲ್ಲಿ ಶಾಂತ ಭಾವನೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಮನೆಯಲ್ಲಿ ಜನರು ತುಳಸಿ ಜಪಮಾಲೆಯನ್ನು ಹಿಡಿದು ಮಂತ್ರ ಪಠಿಸಬಾರದು. ದೈವಿಕ ಶಕ್ತಿ ಇರುವ ಸ್ಥಳಗಳಲ್ಲಿ ಜಪಿಸಬಹುದು. ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿ ಆಹಾರವನ್ನು ಸೇವಿಸುವುದರಿಂದ ಅಶ್ವಮೇಧ ಯಾಗದ ಫಲ ದೊರೆಯುತ್ತದೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಕುತ್ತಿಗೆಯಲ್ಲಿ ತುಳಸಿ ಹಾರವನ್ನು ಧರಿಸಿ ಸ್ನಾನ ಮಾಡುವುದರಿಂದ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸ್ನಾನ ಮಾಡಿದ ಫಲ ಆ ವ್ಯಕ್ತಿಯದ್ದಾಗುತ್ತದೆ. ಸಾವಿನ ಸಂದರ್ಭದಲ್ಲಿ ಆ ವ್ಯಕ್ತಿಯು ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿದ್ದರೆ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

🔯 ರುದ್ರಾಕ್ಷಿ ಮಾಲೆ

💠 ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಶಿವನನ್ನು ಆರಾಧಿಸುವುದು ಶಿವಾರಾಧನೆಯ ವಿಧಾನವಾಗಿದೆ. ಇದರಿಂದ ರುದ್ರಾಕ್ಷ ಧಾರ ಪರಶಿವನು ಪ್ರಸನ್ನನಾಗುತ್ತಾನೆ. ರುದ್ರಾಕ್ಷಿಯನ್ನು ಶಿವನ ಒಂದು ಅಂಶವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರವಲ್ಲ, ರುದ್ರಾಕ್ಷಿಯ ಸೃಷ್ಟಿಗೂ ಕೂಡ ಆ ಪರಶಿವನೇ ಕಾರಣೀಭೂತನೆಂದು ಹೇಳಲಾಗುತ್ತದೆ. ಆದ್ದರಿಂದ ಶಿವನಿಗೆ ರುದ್ರಾಕ್ಷಿ ಹಾರವನ್ನು ಹಾಕಿ ಹೆಚ್ಚಾಗಿ ಪೂಜಿಸಲಾಗುತ್ತದೆ.

🔯 ಕೆಂಪು ಚಂದನ ಮತ್ತು ಕಮಲ ಬೀಜದ ಮಾಲೆ

💠 ಕೆಂಪು ಚಂದನದ ಹಾರವನ್ನು ಮತ್ತು ಕಮಲ ಬೀಜದ ಮಾಲೆಯನ್ನು ಲಕ್ಷ್ಮೀ ಪೂಜೆ ಮತ್ತು ದುರ್ಗಾ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಹಾಗೂ ದುರ್ಗಾ ದೇವಿಯನ್ನು ಒಲಿಸಿಕೊಳ್ಳಲು ಕೆಂಪು ಚಂದನದ ಹಾರವನ್ನು ಬಳಸಬೇಕು. ಕೆಂಪು ಚಂದನದ ಮಾಲೆಯಿಂದ ಮತ್ತು ಕಮಲ ಬೀಜದ ಮಾಲೆಯಿಂದ ದುರ್ಗೆಯನ್ನು ಮತ್ತು ಲಕ್ಷ್ಮಿಯನ್ನು ಜಪಿಸಿದರೆ ಸಿರಿ, ಸಂಪತ್ತು, ಸಂತೋಷ, ಸೌಭಾಗ್ಯ ಮನೆಯಲ್ಲಿ ನೆಲೆಯಾಗುತ್ತದೆ.

🔯 ಸ್ಪಟಿಕ ಮಾಲೆ

💠 ಸ್ಪಟಿಕ ಮಾಲೆಯನ್ನು ತಾಂತ್ರಿಕ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ. ಸ್ಪಟಿಕ ಮಾಲೆಯು ಧರಿಸುವುದರಿಂದ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ವಿಶೇಷ ಮಂತ್ರ ಅಥವಾ ಸ್ತೋತ್ರದ ಮೂಲಕ ಈ ಮಾಲೆಯನ್ನು ಧರಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಸ್ಪಟಿಕ ಮಾಲೆಯು ಅತ್ಯಂತ ಶಕ್ತಿಯುತ ಮಾಲೆಯಾಗಿದ್ದು, ಈ ಮಾಲೆಯನ್ನು ಲಕ್ಷ್ಮೀ ದೇವಿಯೆಂದು ಪರಿಗಣಿಸಲಾಗುತ್ತದೆ. 108 ಸ್ಪಟಿಕ ಮಣಿಯಿರುವ ಮಾಲೆಯು ಶುಕ್ರವಾರದ ಶುಭ ದಿನವನ್ನು ಪ್ರತಿನಿಧಿಸುತ್ತದೆ. ಸ್ಪಟಿಕ ಮಾಲೆಯು ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರಾಗಿಸಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಾಲೆಯನ್ನು ಧರಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಸ್ಪಟಿಕ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ನಮ್ಮ ಏಕಾಗ್ರತೆಯು ಹೆಚ್ಚಾಗುತ್ತದೆ ಹಾಗೂ ಕೋಪ ನಿಯಂತ್ರಣಕ್ಕೆ ಬರುತ್ತದೆ.

💠 ಪ್ರತಿನಿತ್ಯ ಒಂದಿಷ್ಟು ಸಮಯವನ್ನು ಮಂತ್ರವನ್ನು ಜಪಮಾಲೆಯಿಂದ ಮಂತ್ರವನ್ನು ಪಠಿಸಲು ಸೀಮಿತಗೊಳಿಸಬೇಕು. ಇದರಿಂದ ಆ ವ್ಯಕ್ತಿಯು ಏಕಾಗ್ರತೆಯು ಹೆಚ್ಚಾಗುತ್ತದೆ. ಅದರಲ್ಲೂ ಈ ಮೇಲಿನ ಜಪ ಮಾಲೆಯನ್ನು ಹಿಡಿದು, ದೇವರನ್ನು ಆರಾಧಿಸುವುದರಿಂದ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ.
***


No comments:

Post a Comment