SEARCH HERE

Tuesday 1 January 2019

ಕರಿಮಣಿ ಮಾಂಗಲ್ಯ ತಾಳಿ karimani mangalya tali


ಕರಿಮಣಿ 
ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?
ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ.
ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ.
ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ - ಅದರಲ್ಲಿ ಮಾಂಗಲ್ಯ ಯಾವುದು?
ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು?
ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ?
ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.

ಆದಿಶಂಕರ ರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.
ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.
ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.
ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿಗಳನ್ನು
ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.

ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.
🙏ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.
ಮಂಗಲ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ.
ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/
ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ,
ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ - ಹೀಗೆ ವೈವಿಧ್ಯಗಳು.
ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ.
ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ
ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ.
😡ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ. 
ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.
ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.
ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:
ಮೇಷ ರಾಶಿಗೆ- 21 ಮಣಿಗಳು.
ವೃಷಭ ರಾಶಿಗೆ- 40 ಮಣಿಗಳು.
ಮಿಥುನ ರಾಶಿಗೆ- 34 ಮಣಿಗಳು.
ಕಟಕ ರಾಶಿಗೆ- 20 ಮಣಿಗಳು.
ಸಿಂಹ ರಾಶಿಗೆ- 18 ಮಣಿಗಳು.
ಕನ್ಯಾ ರಾಶಿಗೆ- 34 ಮಣಿಗಳು.
ತುಲಾ ರಾಶಿಗೆ- 40 ಮಣಿಗಳು.
ವೃಶ್ಚಿಕ ರಾಶಿಗೆ- 21 ಮಣಿಗಳು.
ಧನುಸ್ಸು ರಾಶಿಗೆ- 32 ಮಣಿಗಳು.
ಮಕರ ರಾಶಿಗೆ- 38 ಮಣಿಗಳು.
ಕುಂಭ ರಾಶಿಗೆ- 38 ಮಣಿಗಳು.
ಮೀನ ರಾಶಿಗೆ- 32 ಮಣಿಗಳು.
****

ಮಂಗಳಸೂತ್ರಕ್ಕಿರುವ ಬೆಲೆ ಇನ್ಯಾವುದಕ್ಕೂ ಇಲ್ಲ.


ಅದೇ ರೀತಿ ಅವರವರ ಜಾತಿಯಪಗಡ ಧರಿಸುವುದನ್ನು ನಮ್ಮ ಮಹರ್ಷಿಗಳು ಹೇಳಿರುವುದಲ್ಲಿ ಗೂಡಾರ್ಥ ಇತ್ತು.


 ಅದೇನೆಂದರೆ ಮುತ್ತು, ಪಗಡ ಧರಿಸುವುದು ಹಳೆ ಕಾಲದ ಮಹಿಳೆಯರಿಗೆ ಆಪರೇಷನ್ ಎಂಬುದೇನು ಇರಲಿಲ್ಲ. ಆದರೆ ಇಂದಿನ ಮಹಿಳೆಯರಿಗೆ ಹೆರಿಗೆ ಆಪರೇಷನ್ ಎಂಬುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಮುತ್ತು, ಪಗಡ ಸೂರ್ಯನಿಂದ ಬರುವ ಕಿರಣಗಳಿಂದ ಕೆಂಪು (ಕುಜ) ಬಿಳಿ (ಚಂದ್ರ) ಸ್ವೀಕರಿಸಿ ಮಹಿಳೆಯ ಎಲ್ಲಾ ನಾಡಿ ಕೇಂದ್ರಗಳನ್ನು ಉತ್ತೇಜನಗೊಳಿಸಿ ದೈಹಿಕವಾಗಿ, ಬೌತಿಕವಾಗಿ ಆ ಜೋಡಿ ಗ್ರಹಗಳು ಮಹಿಳೆಗೆ ಆಗುವ ನಷ್ಟಗಳು, ದೋಷಗಳನ್ನು ತೊಲಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.


ಆದಕಾರಣ ಚಂದ್ರ ಕುಜಗಳು ಪ್ರತಿ ಮಹಿಳೆಯರಲ್ಲೂ ತುಂಬಾ ಪ್ರಾಮುಖ್ಯತೆ ವಹಿಸುತ್ತವೆ. ಪಗಡ, ಮುತ್ಯ ಎರಡನ್ನೂ ಧರಿಸಿದ ಮಂಗಳಸೂತ್ರ ಮಹಿಳೆಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಇನ್ನೊಂದು ವಿಷಯ ಏನೆಂದರೆ ಶುಕ್ರನು ವಿವಾಹಕಾರ ಮಾತ್ರ, ಆದರೆ ಸಾಂಸಾರಿಕ ಜೀವನ ನಡೆಸುವವನು ಕುಜ ಎಂಬುದು ಮರೆಯಬಾರದು. 


ಹಾಗಾಗಿ ಮೊದಲು ಕುಜ ದೋಷ ಇದೆಯೇ ಇಲ್ಲವೇ ಎಂದು ನೋಡುತ್ತಾರೆ. ಪ್ರತಿ ಮಹಿಳೆ ಜೀವನದಲ್ಲಿ ಮೇಲೆ ತಿಳಿಸಿದ ಮೂರು ಗ್ರಹಗಳು ಅವುಗಳ ಸ್ಥಿತಿಗತಿಗಳು ಚೆನ್ನಾಗಿದ್ದರೆ ಜೀವನ ಆನಂದಕರವಾಗಿರುತ್ತದೆ.


*****

ಮಾಂಗಲ್ಯಧಾರಣೆ  ವಿವಾಹವಾದ ಮಹಿಳೆಯರಿಗೆ  ಏಕೆ ಮುಖ್ಯ?
 ‌                                                                                    
ಸ್ತ್ರೀಯರು ಮಾಂಗಲ್ಯದಲ್ಲಿ ಕರಿಮಣಿ ಮತ್ತು ಹವಳ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು:
ಸ್ತ್ರೀಯರು ಮಾಂಗಲ್ಯ ಸರದಲ್ಲಿ ಕರಿಮಣಿ ಮತ್ತು ಹವಳವನ್ನು ಧರಿಸುವ ಸಂಪ್ರದಾಯ ನಮ್ಮ ಹಿಂದೂ ಧರ್ಮದಲ್ಲಿದೆ. ಅದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ  ಅದೆಷ್ಟೋ ಒಳ್ಳೆಯದನ್ನು ಮಾಡುತ್ತದೆ. ಮಾಂಗಲ್ಯ ಸರ ಸ್ತ್ರೀಯರಿಗೆ ಅರಿಶಿನ ಕುಂಕುಮದ ರೀತಿಯಲ್ಲಿಯೇ ಆರೋಗ್ಯವನ್ನು ಕಾಪಾಡುತ್ತದೆ.

ಹವಳ ಕುಜನಿಗೆ ಪ್ರೀತಿಕಾರಕ ಮತ್ತು ಕರಿ ಮಣಿ ಚಂದ್ರನಿಗೆ ಪ್ರೀತಿಕಾರಕ. ಇವೆರಡು ಸೂರ್ಯ-ಚಂದ್ರರ ತೇಜಸ್ಸು. ಸ್ತ್ರೀಯರಲ್ಲಿ ಲೀನವಾಗಿ ಇರುತ್ತವೆ.

ಹವಳ :- ಸ್ತ್ರೀಯರ ಶರೀರಕ್ಕೆ ಬೇಕಾದ ಉತ್ತೇಜನವನ್ನು ಹವಳ ನೀಡುತ್ತದೆ. ನಾಡಿ ಮಂಡಲವನ್ನು ಚುರುಕಾಗಿ ಇಡುತ್ತದೆ.

ಕರಿ ಮಣಿ:- ಶರೀರದ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ.  ಮನಸ್ಸಿಗೆ ಪ್ರಶಾಂತತೆ ಮತ್ತು ಸಹನೆಯನ್ನು ನೀಡುತ್ತದೆ. ಮುತ್ತು ಚಂದ್ರ ಗ್ರಹದ ಪ್ರತೀಕ. ದೇಹ ಸುಖ, ಸೌಂದರ್ಯ, ಅನಂದಕ್ಕೆ, ಅನ್ಯೋನ್ಯ ದಾಂಪತ್ಯ ಜೀವನಕ್ಕೆ ಕಾರಣಕರ್ತ. ಶಾರೀರಿಕವಾಗಿ ಕಣ್ಣು, ಕೊಬ್ಬು, ಗ್ರಂಥಿಗಳು, ಸ್ತ್ರೀಯರ ನರ ನಾಡಿಗಳು, ಇಂದ್ರಿಯಗಳು, ಗರ್ಭಧಾರಣೆ, ಮತ್ತು ಪ್ರಸವಕ್ಕೆ ಕಾರಣನು.

ಇನ್ನು ಮೂರ್ಖತನ, ಅತಿಯಾದ ಕೋಪ, ಕಲಹ, ಸೋಮಾರಿತನ, ರೋಗ- ರುಜಿನಗಳು, ಸಾಲಭಾದೆ, ರಕ್ತಸ್ರಾವ ಮತ್ತು ಋತುಚಕ್ರದ ದೋಷಕ್ಕೆ ಈ ಗ್ರಹಗಳೇ ಕಾರಣರು. ಆದುದರಿಂದ ಚಂದ್ರ ಮತ್ತು ಕುಜ ಗ್ರಹಗಳು ಸ್ತ್ರೀಯರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಈ ಗ್ರಹಗಳು ಅದೆಷ್ಟು ಪಾತ್ರ ವಹಿಸುತ್ತವೆ ಎಂದು ನೋಡೋಣ ಬನ್ನಿ….
ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಶ್ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮುಖ್ಯವಾಗಿ 27 ನಕ್ಷತ್ರಗಳಿವೆ. ಈ ನಕ್ಷತ್ರಗಳಲ್ಲಿ ಚಂದ್ರನು 27 ದಿವಸವೂ ಸಂಚರಿಸುತ್ತಾನೆ 28 ನೇ ದಿವಸ  ಕುಜನನ್ನು ಸೇರುವ ದಿನವೇ ಸ್ತ್ರೀಯರಿಗೆ ಋತುಸಮಯ (menustruation or menses). ಭಾರತೀಯ ಸಂಪ್ರದಾಯದಲ್ಲಿ  ಸ್ತ್ರೀಯರಿಗೆ ಮಾಂಗಲ್ಯ ಸರದಲ್ಲಿ ಇರುವ ಪ್ರಾಮುಖ್ಯತೆ ಬೇರೆ ಯಾವುದಕ್ಕೂ ಇಲ್ಲ.
ಅಸಲಿಯಾದಂತಹ ಹವಳ ಧರಿಸುವುದರ ಹಿಂದೆ ನಮ್ಮ ಋಷಿಮುನಿಗಳು ವಿಶೇಷವಾದ ರಹಸ್ಯ ಅಡಗಿದೆ ಎಂದು ಹೇಳಿದ್ದಾರೆ. ಆ ರಹಸ್ಯವೇನೆಂದರೆ ಕರಿಮಣಿ,  ಹವಳವನ್ನು ಧರಿಸಿದ್ದರಿಂದಲೇ ಹಿಂದಿನ ಕಾಲದ ಸ್ತ್ರೀಯರಿಗೆ ಶಸ್ತ್ರಚಿಕಿತ್ಸೆಗೆ (operation)  ಒಳಪಟ್ಟಿರುವುದು ಬಹಳ ವಿರಳ. ಆದರೆ, ಈಗ ಶಸ್ತ್ರಚಿಕಿತ್ಸೆ ಇಲ್ಲದೇ ಪ್ರಸವವು ಸಹ ನಡೆಯುವುದೇ ಇಲ್ಲ ಎಂಬಂತೆ ಆಗಿದೆ.

ಸೂರ್ಯನಿಂದ ಬರುವ ಕೆಂಪು ಮತ್ತು ಬಿಳುಪು ಕಿರಣಗಳನ್ನು ಸ್ವೀಕರಿಸಿ ಸ್ತ್ರೀಯರ ಶರೀರದಲ್ಲಿರುವ  ಪ್ರತಿಯೊಂದು ನಾಡಿ ಮಂಡಲವನ್ನು ಉತ್ತೇಜಿಸುತ್ತದೆ.
ಶಾರೀರಿಕವಾಗಿ ಮತ್ತು ಭೌತಿಕವಾಗಿ ಈ ಎರಡೂ ಗ್ರಹಗಳು ಸ್ತ್ರೀಯರಲ್ಲಿ ಬರುವ ಕಷ್ಟ ಮತ್ತು ಗ್ರಹ  ದೋಷವನ್ನು ನಿವಾರಿಸುತ್ತದೆ. ಆದ್ದರಿಂದ ಚಂದ್ರ-ಕುಜ ಸಂಯೋಗ ಪ್ರತಿ ಸ್ತ್ರೀಯರ ಜೀವನದಲ್ಲೂ ಅನೇಕ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ  ಮಾಂಗಲ್ಯದಲ್ಲಿ ಕರಿಮಣಿ ಮತ್ತು ಹವಳ ಧರಿಸುವುದು ಸ್ತ್ರೀಯರ ಜೀವನದಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ.

ಮತ್ತೊಂದು ವಿಷಯವೇನೆಂದರೆ ಶುಕ್ರನು ವಿವಾಹಕಾರಕನು ಮಾತ್ರ,  ಆದರೆ ಸಂಸಾರ ಜೀವನವನ್ನು ನಡೆಸುವಾತ ಕುಜನೇ ಎನ್ನುವುದನ್ನು ಮಾತ್ರ ಮರೆಯಬಾರದು. ಆದುದರಿಂದ ಮೊದಲೇ ಕುಜದೋಷ ಇದೆಯೋ ಇಲ್ಲವೋ ಎಂದು ವಿವಾಹಕ್ಕೆ ಮುಂಚೆ ನೋಡುತ್ತಾರೆ.

ಪ್ರತಿಯೊಬ್ಬ ಗೃಹಿಣಿಯು ಜೀವನದಲ್ಲಿ ಮೇಲೆ ತಿಳಿಸಿದ ಈ ಗ್ರಹಗಳ ಸ್ಥಿತಿಗಳು ಚೆನ್ನಾಗಿದ್ದರೆ ಅವರಿಗೆ ಆನಂದವಾದ ಜೀವನ ಲಭಿಸುತ್ತದೆ. ಆದ್ದರಿಂದ ಸ್ತ್ರೀಯರು ಧರಿಸುವ ಮಾಂಗಲ್ಯ ಸರದಲ್ಲಿ  ಕರಿ ಮಣಿ, ಹವಳ ಕೇವಲ ಸಂಪ್ರದಾಯ ಮಾತ್ರವಲ್ಲ, ಸ್ತ್ರೀಯರ ಆರೋಗ್ಯದ  ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ತಿಳಿಸಿದ ಆಚಾರ ವಿಚಾರಗಳಿವು.
ಈಗಿನ ಆಧುನಿಕತೆ ಯ ಹೆಸರಿನಲ್ಲಿಕೆಲವರು ಮಾಂಗಲ್ಯವನ್ನು ಕೇವಲ ಚಿನ್ನ ದ ಸರವನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ, ಅದು ತೋರಿಕೆಗಾಗಿ. ಇನ್ನೂ ಕೆಲವರು ಮುಖ್ಯವಾಗಿ ನಟಿಮಣಿಯರು, ವಿ.ಐ.ಪಿ. ಎನಿಸಿಕೊಳ್ಳುವವರು  ಮಾಂಗಲ್ಯವನ್ನು ಇತರೆ ಆಭರಣ ಸರದಂತೆ ಬೇಕಾದಾಗ ಮಾತ್ರ ಧರಿಸುತ್ತಿದ್ದಾರೆ.
ಕರಿಮಣಿ ಮಾಂಗಲ್ಯವನ್ನು ಧಾರಣೆ ಮಾಡಿ ಆರೋಗ್ಯವನ್ನು  ಕಾಪಾಡಿಕೊಳ್ಳಿ.
****





No comments:

Post a Comment