SEARCH HERE

Monday, 29 March 2021

ಕಲಶ ಪೂಜೆ kalasha pooja


ಕಲಶ ಪೂಜೆ
ಕಲಶ ಪೂಜೆಗೆ ಬಳಸಲಾಗುವ ಸಾಮಗ್ರಿಗಳ ಹಿಂದಿನ ವೈಜ್ಞಾನಿಕ ಕಾರಣ 
ಕಲಶಗಳ ಕೆಳಗೆ ಅಕ್ಕಿಯನ್ನು ಹಾಕಬೇಕು.
ಅಕ್ಕಿಯುಶಾಂತಿಯ ಸಂಕೇತ. ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ ಮತ್ತು ಏಕದಳಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, . ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

ಕಲಶಕ್ಕೆ ತಾಮ್ರದ ಕಳಸವನ್ನು ಉಪಯೋಗಿಸುತ್ತೇವೆ.

ತಾಮ್ರವು ಲೋಹಗಳಲ್ಲೆಲ್ಲ ಅತುತ್ತಮವಾದದ್ದು. ಇದಕ್ಕೆ ವಿಷೇಶವಾದ ಗುಣಗಳಿರುವುದರಿಂದಲೇ ಇದಕ್ಕೆ ವಿಷೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ. ಈ ದ್ರಾವಣದಿಂದ ಅನೇಕ ತರಹದ ಚರ್ಮರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ. ಅಂತಹ ಉಪಯುಕ್ತವಾದ ಮತ್ತು ಮಹತ್ವದ್ದಾದ ಕಳಸವನ್ನು ಹೀಗಳೆಯುವುದು ಸಾಧುವಲ್ಲವೆಂಬುದು ನನ್ನ ಅಭಿಪ್ರಾಯ.

ಕಲಶದೊಳಗೆ ಧರ್ಬೆಯ ಕೂರ್ಚವನ್ನು ಹಾಕುತ್ತೇವೆ.

ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳನ್ನು ಗಮನಿಸಿರುತೇವೆ. ಈ ಏರು ಪೇರುಗಳನ್ನು ಸ್ವರಗಳೆನ್ನುತ್ತಾರೆ. ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು {ಎಲೆಕ್ಟ್ರೋಮ್ಯಾಗ್ನೆಟೀಕ್ಪಾವರ್} ಸಂಯೋಜಿಸುತ್ತವೆ. ಈ ರೀತಿ ಸಂಯೋಜಿಸಲ್ಪಟ್ಟ ಶಕ್ತಿಯು ಕಲಶದೊಳಗಿಟ್ಟಿರುವ ಧರ್ಭೆಯಿಂದ ಆಕರ್ಶಿತಗೊಂಡು ಕಲಶದೊಳಗೆಸೇರುತ್ತದೆ. ಇದನ್ನೇ ಹಿಂದಿನ್ಕಾಲದವರು ದೈವಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

ಕಲಶದೊಳಗೆ ಮಾವಿನ ಸೊಪ್ಪನ್ನು ಹಾಕುತ್ತೇವೆ

ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳ ಜನ ಸೇರಿದಾಗ ಅಷ್ಠೂಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.

ಕಲಶದ ಮೇಲೆ ತೆಂಗಿನಕಾಯಿ ಇಡಬೇಕು


ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನಕಾಯಿ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ಆದ್ದರಿಂದಲೇ ಅದಕ್ಕೂ ದೈವಸ್ಥಾನವನ್ನು ಕೊಟ್ಟು ಕಲ್ಪ ವೃಕ್ಷವೆಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಿಸುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟುಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಕಲಶದ ಮೇಲೆ ಇಡುತ್ತೇವೆ

*******


ಕಲಶ 

 ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ
ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ
ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ
ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||
ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:
ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:
ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ

ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು..


"ಕಲಶದ ವೀಳ್ಯದೆಲೆ"ಯನ್ನು, ಪೂಜೆಯ ನಂತರ ಏನು ಮಾಡಬೇಕು..?


ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು..

(ಹಿರಿಯರು ಯಾರು ಯಾರು ಎಂದು ತಿಳಿದು ಮಾಡಿ)
ಬೇರೆಯವರು ಹಾಕಿಕೊಳ್ಳಬಾರದು..
ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು ..

ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ , ಅಥವಾ ಕಸದಲ್ಲಿ ಗುಡಿಸಿದರೆ..

ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ..
ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ..
ಸಾಲದಭಾದೆ ಇಂದ ನರಳುವಿರಿ..
ಶತೃಭಾಧೆ ಜಾಸ್ತಿಯಾಗುತ್ತದೆ ..

ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ,

ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ ..
ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ..
ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ..
(ಯಾವ ಸಮಯದಲ್ಲಿ ಹಾಕಬೇಕು, ಯಾರು ಹಾಕಬೇಕು ತಿಳಿದು ಮಾಡಿ)

ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ , ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ ,

ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ..
(ಪೂರ್ವವಾಹಿನಿ, ಉತ್ತರವಾಹಿನಿ ನದಿಗಳಲ್ಲಿ ಮಾತ್ರ ಬಿಡಬೇಕು)
ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ..
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ..

ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ..

ದಟ್ಟದಾರಿದ್ಯ ಅನುಭವಿಸುತ್ತಿರಿ .

ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು..

ಎಳೆಯ ವೀಳ್ಯದೆಲೆ ಆಗಿರಬೇಕು..
ಹಸ್ತದ ಆಕಾರ ಇರಬೇಕು..

ಭಿನ್ನವಾಗಿರಬಾರದು..

********


೧. ಬ್ರಹ್ಮಧ್ವಜದ ಮೇಲಿನ ಕಲಶವನ್ನು ಏಕೆ ಮಗುಚಿಡುತ್ತಾರೆ ?
ಕಲಶದ ಮುಖವನ್ನು ಭೂಮಿಯ ಕಡೆಗೆ ಇಡುವುದರಿಂದ ತಾಮ್ರದ ಕಲಶದ ಟೊಳ್ಳಿನಿಂದ ಪ್ರಕ್ಷೇಪಿತಗೊಳ್ಳುವ ಲಹರಿಗಳಿಂದಾಗಿ ಕಲಶದಲ್ಲಿರುವ ಬೇವಿನ ಎಲೆ ಮತ್ತು ರೇಷ್ಮೆವಸ್ತ್ರ (ಬ್ರಹ್ಮಧ್ವಜದ ಮೇಲಿನ ರೇಷ್ಮೆವಸ್ತ್ರ) ಗಳು ಸಾತ್ತ್ವಿಕ ಲಹರಿಗಳಿಂದ ಭರಿತಗೊಳ್ಳುತ್ತವೆ. ಭೂಮಿಯ ಆಕರ್ಷಣಾಶಕ್ತಿಯಿಂದಾಗಿ ಈ ಪರಿವರ್ತನೆಯಾದ ಸಗುಣ ಶಕ್ತಿಯ ಪ್ರವಾಹವು ಭೂಮಿಯ ದಿಶೆಯತ್ತ ಸಂಕ್ರಮಿತಗೊಳ್ಳಲು ಮತ್ತು ಅದರಿಂದ ಭೂಮಿಯ ಮೇಲೆ ಸೂಕ್ಷ್ಮ-ಆಚ್ಛಾದನೆಯಾಗಲು ಸಹಾಯವಾಗುತ್ತದೆ. ಕಲಶವನ್ನು ಮಗುಚಿಡದೇ ನೆಟ್ಟಗೆ ಇಟ್ಟರೆ, ಸಂಪೂರ್ಣವಾಗಿ ಊರ್ಧ್ವ ದಿಕ್ಕಿನತ್ತ ಲಹರಿಗಳು ಪ್ರಕ್ಷೇಪಿತಗೊಳ್ಳುವುದರಿಂದ ಭೂಮಿಯ ಸಮೀಪದಲ್ಲಿನ ಕನಿಷ್ಠ ಹಾಗೂ ಮಧ್ಯಮ ಸ್ತರದ ಶುದ್ಧೀಕರಣವಾಗದಿರುವುದರಿಂದ ವಾಯುಮಂಡಲದಲ್ಲಿನ ಕೇವಲ ನಿರ್ದಿಷ್ಠ ಊರ್ಧ್ವ ಪಟ್ಟಿಯ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ತದ್ವಿರುದ್ಧ ತಾಮ್ರದ ಕಲಶದ ಮುಖವನ್ನು ಭೂಮಿಯ ಕಡೆಗೆ ಮಗುಚಿಟ್ಟರೆ ಅದರಿಂದ ಭೂಮಿಯ ಸಮೀಪದ ಮತ್ತು ಮಧ್ಯಮ ಪಟ್ಟಿಯ ವಾಯುಮಂಡಲಕ್ಕೆ, ಅದರ ಜೊತೆಗೆ ಊರ್ಧ್ವಮಂಡಲಕ್ಕೆ ಈ ಲಹರಿಗಳ ಲಾಭವಾಗಲು ಸಹಾಯವಾಗುತ್ತದೆ.

೨. ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದು !
ಬ್ರಹ್ಮಧ್ವಜದ ಮೇಲಿರುವ ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಉಚ್ಚತತ್ತ್ವಗಳಿಗೆ ಸಂಬಂಧಿಸಿರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದರಿಂದ ಈ ಕಲಶದಿಂದ ಪ್ರಕ್ಷೇಪಿತಗೊಳ್ಳುವ ಸಾತ್ತ್ವಿಕ ಲಹರಿಗಳಿಂದಾಗಿ ಕಹಿಬೇವಿನ ಎಲೆಗಳಲ್ಲಿನ ಬಣ್ಣದ ಕಣಗಳು ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಎಲೆಗಳ ಬಣ್ಣದ ಕಣಗಳ ಮೂಲಕ ರಜೋಗುಣವಿರುವ ಶಿವ ಮತ್ತು ಶಕ್ತಿ ಲಹರಿಗಳು ವಾಯು ಮಂಡಲದಲ್ಲಿ ಪರಿಣಾಮಕಾರಿಯಾಗಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ.

೩. ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಲಹರಿಗಳಿಂದಾಗಿ ಕಹಿಬೇವಿನ ಎಲೆ ಮತ್ತು ರೇಷ್ಮೆ ವಸ್ತ್ರ ಇವುಗಳಿಂದ ಪರಿಣಾಮಕಾರಿಯಾಗಿ ಗ್ರಹಣ ಮತ್ತು ಪ್ರಕ್ಷೇಪಣೆಯಾಗುವುದು
ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಕಾರ್ಯನಿರತ ಲಹರಿಗಳು ಕಹಿಬೇವಿನ ಎಲೆಗಳ ಮಟ್ಟಕ್ಕೆ ಸಗುಣ ಲಹರಿಗಳಾಗಿ ಪರಿವರ್ತನೆಯಾಗುತ್ತವೆ. ಅನಂತರ ಈ ಲಹರಿಗಳು ರೇಷ್ಮೆವಸ್ತ್ರದ ಮೂಲಕ ಪರಿಣಾಮಕಾರಿ ಆಕರ್ಷಣೆಯಾಗಿ ಅವುಗಳು ಆವಶ್ಯಕತೆಯಂತೆ ಅಧೋದಿಕ್ಕಿನಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ.

೪. ಕಹಿಬೇವಿನ ಎಲೆ, ಕಲಶ ಮತ್ತು ರೇಷ್ಮೆವಸ್ತ್ರ ಈ ಮೂರರಿಂದ ನಿರ್ಮಾಣವಾಗುವ ಲಹರಿಗಳಿಂದ ವಾಯುಮಂಡಲವು ಶುದ್ಧವಾಗುವುದು
ಕಹಿ ಬೇವಿನ ಎಲೆಗಳಿಂದ ಪ್ರಕ್ಷೇಪಿತವಾಗುವ ಶಿವ-ಶಕ್ತಿಗಳಿಗೆ ಸಂಬಂಧಿಸಿದ ಕಾರ್ಯನಿರತ ರಜೋಗುಣಿ ಲಹರಿಗಳಿಂದಾಗಿ ಅಷ್ಟದಿಕ್ಕುಗಳ ವಾಯುಮಂಡಲ ಮತ್ತು ತಾಮ್ರದ ಕಲಶದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದಾಗಿ ಊರ್ಧ್ವದಿಶೆಯ ವಾಯುಮಂಡಲ ಮತ್ತು ರೇಷ್ಮೆ ವಸ್ತ್ರದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಅಧೋದಿಕ್ಕಿನ ವಾಯುಮಂಡಲ ಶುದ್ಧ ಮತ್ತು ಚೈತನ್ಯಮಯವಾಗಲು ಸಹಾಯವಾಗುತ್ತದೆ.

೫. ಕಲಶದ ಮುಖವು ಭೂಮಿಯ ಕಡೆಗೆ ಇದ್ದೂ ಊರ್ಧ್ವ ದಿಕ್ಕಿನ ವಾಯುಮಂಡಲವು ಶುದ್ಧವಾಗುವುದು
ಬ್ರಹ್ಮಧ್ವಜದೊಳಗಿನ ಘಟಕಗಳಿಗೆ ದೇವತ್ವವು ಪ್ರಾಪ್ತಿಯಾಗಿದ್ದರಿಂದ ತಾಮ್ರದ ಕಲಶದ ಟೊಳ್ಳಿನಲ್ಲಿ ಘನೀಕೃತವಾದ ನಾದಲಹರಿಗಳು ಕಾರ್ಯನಿರತವಾಗುತ್ತವೆ. ಈ ನಾದಲಹರಿಯಲ್ಲಿ ವಾಯು ಮತ್ತು ಆಕಾಶ ಈ ಎರಡು ಉಚ್ಚ ತತ್ತ್ವಗಳು ಸಮಾವೇಶಗೊಂಡಿದ್ದರಿಂದ ಲಹರಿಗಳ ಪ್ರಕ್ಷೇಪಣೆಯಿಂದಾಗಿ ಊರ್ಧ್ವ ದಿಶೆಯ ವಾಯುಮಂಡಲವು ಶುದ್ಧವಾಗುತ್ತದೆ.
***

ಶಾರದೀಯ ನವರಾತ್ರಿ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ಕಲಶವನ್ನು ಸ್ಥಾಪಿಸಲಾಗುತ್ತದೆ. ಗ್ರಂಥಗಳಲ್ಲಿ, ಕಲಶವನ್ನು ಸಂತೋಷ, ಸಮೃದ್ಧಿ ಮತ್ತು ಶುಭ ಹಾರೈಕೆಗಳ ಸಂಕೇತವೆಂದು ವಿವರಿಸಲಾಗಿದೆ. ಕಲಶವನ್ನು ಪ್ರತಿಷ್ಠಾಪಿಸುವ ಮೂಲಕ, ಎಲ್ಲಾ ದೇವತೆಗಳನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯಂದು ನಾವು ಕಲಶವನ್ನು ಏಕೆ ಸ್ಥಾಪಿಸಬೇಕು..? ನವರಾತ್ರಿ ಕಲಶದ ಮಹಿಮೆಯೇನು ನೋಡೋಣ..

ಶಾರದೀಯ ನವರಾತ್ರಿ ಸೆಪ್ಟೆಂಬರ್ 26 ಸೋಮವಾರದಿಂದ ಪ್ರಾರಂಭವಾಗಿ ಅಕ್ಟೋಬರ್ 5 ಬುಧವಾರದಂದು ಮುಕ್ತಾಯವಾಗಲಿದೆ. ನವರಾತ್ರಿಯ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ಕಲಶ ಸ್ಥಾಪನೆ ಅಥವಾ ಘಟ ಸ್ಥಾಪನೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮೊದಲು ಕಲಶವನ್ನು ಸ್ಥಾಪಿಸುವ ಸಂಪ್ರದಾಯವಿದೆ. ಗ್ರಂಥಗಳಲ್ಲಿ, ಕಲಶವನ್ನು ಗಣೇಶನ ಸಂಕೇತವೆಂದು ವಿವರಿಸಲಾಗಿದೆ ಮತ್ತು ಕಲಶವನ್ನು ಸ್ಥಾಪಿಸುವುದು ಪೂಜೆಯ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಕಲಶದ ಸ್ಥಾಪನೆಯಿಲ್ಲದೆ ಯಾವುದೇ ಧಾರ್ಮಿಕ ವಿಧಿಯು ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಪ್ರತಿ ವರ್ಷ ಕಲಶದ ಸ್ಥಾಪನೆಯನ್ನು ಶಾರದೀಯ ನವರಾತ್ರಿಯ ಮೊದಲ ದಿನದಂದು ಮಾಡಲಾಗುತ್ತದೆ.

​ಕಲಶವನ್ನು ಸ್ಥಾಪಿಸುವ ಕಾರಣ

ನವರಾತ್ರಿಯ ಹೊರತಾಗಿ, ಗೃಹ ಪ್ರವೇಶ, ಮದುವೆ, ಹೊಸ ವ್ಯಾಪಾರ, ದೀಪಾವಳಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಮುಂತಾದ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳ ಮೊದಲು ಕಲಶವನ್ನು ಸ್ಥಾಪಿಸಲಾಗುತ್ತದೆ. ಕಲಶವನ್ನು ಸ್ಥಾಪಿಸುವ ಮೊದಲು, ಸ್ಥಳವನ್ನು ಗಂಗಾಜಲದಿಂದ ಪವಿತ್ರಗೊಳಿಸಲಾಗುತ್ತದೆ ಮತ್ತು ಇದರ ನಂತರ ಕಲಶವನ್ನು ಸ್ಥಾಪಿಸಲಾಗುತ್ತದೆ. ಇದರ ಬಳಿಕ ಎಲ್ಲಾ ದೇವತೆಗಳನ್ನು ಪೂಜಾ ಸ್ಥಳಕ್ಕೆ ಬರಲು ಆಹ್ವಾನಿಸಲಾಗುತ್ತದೆ. ನವರಾತ್ರಿಯಲ್ಲಿ ತಾಯಿಯನ್ನು ಪೂಜಿಸುವಾಗ, ಕಲಶವನ್ನು ತಾಯಿಯ ವಿಗ್ರಹ ಅಥವಾ ಚಿತ್ರದ ಮುಂದೆ ಇಡಲಾಗುತ್ತದೆ. ಕಲಶದ ಸ್ಥಾಪನೆಯು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ಸಂತೋಷ ಮತ್ತು ಶಾಂತಿ ಉಳಿಯುವುದರ ಜೊತೆಗೆ ಸಮೃದ್ಧಿಯನ್ನು ತರುತ್ತದೆ.

​ಈ ರೀತಿ ಕಲಶವನ್ನು ಸ್ಥಾಪಿಸಿ

ಶಾರದೀಯ ನವರಾತ್ರಿಯಲ್ಲಿ ಕಲಶವನ್ನು ಸ್ಥಾಪಿಸುವ ಮೊದಲು ಕಲಶದ ಸುತ್ತಲೂ ಅಶೋಕ ಎಲೆಗಳನ್ನು ಇಟ್ಟು ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿದ ತೆಂಗಿನಕಾಯಿಯನ್ನು ಇಟ್ಟು ಕಲವನ್ನು ಕಟ್ಟಲಾಗುತ್ತದೆ. ಇದಾದ ನಂತರ ಅದರಲ್ಲಿ ಅರಿಶಿನ, ನಾಣ್ಯ, ಲವಂಗ, ವೀಳ್ಯದೆಲೆ, ದುರ್ವಾ, ಅಕ್ಷತೆ ಮುಂತಾದ ವಸ್ತುಗಳನ್ನು ಇಡುತ್ತಾರೆ. ಇದರ ನಂತರ, ಸ್ವಸ್ತಿಕ ಚಿಹ್ನೆಯನ್ನು ಕಲಶದ ಮೇಲೆ ಮಾಡಲಾಗುತ್ತದೆ.

ಕಲಶವನ್ನು ಸ್ಥಾಪಿಸುವ ಮೊದಲು, ಬಾರ್ಲಿಯನ್ನು ಹರಡಿದ ಪೀಠವನ್ನು ಸಿದ್ಧಗೊಳಿಸಲಾಗುತ್ತದೆ. ಸಂಪತ್ತು ಮತ್ತು ಆಹಾರದ ದೇವತೆ ಅನ್ನಪೂರ್ಣನನ್ನು ಮೆಚ್ಚಿಸಲು ಬಾರ್ಲಿಯನ್ನು ಬಿತ್ತಲಾಗುತ್ತದೆ. ಅವರ ಕೃಪೆಯಿಂದ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆಯಾಗಬಾರದು ಎಂದು ಪ್ರಾರ್ಥಿಸಲಾಗುತ್ತದೆ. ಕಲಶದಲ್ಲಿರುವ ನೀರಿನಂತೆ ನಮ್ಮ ಮನಸ್ಸು ತಂಪಾಗಿ ಮತ್ತು ಪರಿಶುದ್ಧವಾಗಿ ಉಳಿಯಬೇಕು ಎಂಬುದರ ಸಂಕೇತವಾಗಿದೆ. ಕಲಶದ ಮೇಲೆ ಇರಿಸಲಾಗಿರುವ ಸ್ವಸ್ತಿಕವನ್ನು ನಾಲ್ಕು ಯುಗಗಳ ಸಂಕೇತವೆಂದು ಪರಿಗಣಿಸಲಾಗಿದೆ. ಇದರ ನಂತರ, ಕಲಶವನ್ನು ದೀಪ ಬೆಳಗಿಸಿ ಪೂಜಿಸಲಾಗುತ್ತದೆ ಮತ್ತು ಮಾತೆ ದುರ್ಗೆಯನ್ನು ಆವಾಹನೆ ಮಾಡುವ ಮೂಲಕ ಪೂಜೆಯನ್ನು ಪ್ರಾರಂಭಿಸಲಾಗುತ್ತದೆ.

​ಕಲಶ ಸ್ಥಾಪನೆಯ ಪ್ರಾಮುಖ್ಯತೆ

ಕಲಶವನ್ನು ಇಡೀ ವಿಶ್ವ, ಭೂಮಿಯ ದೇಹ ಮತ್ತು ಸಂಪೂರ್ಣ ಸೃಷ್ಟಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಲಶದಲ್ಲಿ ಸಂಪೂರ್ಣ ದೇವತೆಗಳು ನೆಲೆಸಿದ್ದಾರೆಂದು ನಂಬಲಾಗಿದೆ. ನವರಾತ್ರಿಯ ಯಾವುದೇ ಧಾರ್ಮಿಕ ಕಾರ್ಯಕ್ರಮ ಅಥವಾ ಪೂಜೆಯಲ್ಲಿ, ಕಲಶವನ್ನು ಎಲ್ಲಾ ಯಾತ್ರಾ ಸ್ಥಳಗಳ ಸಂಕೇತವಾಗಿ ಸ್ಥಾಪಿಸಲಾಗುತ್ತದೆ. ದೇವರು ಮತ್ತು ದೇವತೆಗಳ ವಾಸಸ್ಥಾನ ಇತ್ಯಾದಿಯಾಗಿದೆ. ಕಲಶದ ಬಾಯಿಯಲ್ಲಿ ವಿಷ್ಣು, ಕಂಠದಲ್ಲಿ ಶಿವ ಮತ್ತು ಮೂಲದಲ್ಲಿ ಬ್ರಹ್ಮ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಅಲ್ಲದೆ, ಕಲಶದ ಮಧ್ಯದಲ್ಲಿ, ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಕಲಶದ ಸ್ಥಾಪನೆಯು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಇರಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಕಲಶವನ್ನು ವಿವಿಧ ಪೂಜೆಗಳಲ್ಲಿ ವಿವಿಧ ರೀತಿಯಲ್ಲಿ ಸ್ಥಾಪಿಸಲಾಗುತ್ತದೆ. ನವರಾತ್ರಿಯಲ್ಲಿ ಕಲಶ ಸ್ಥಾಪನೆ ಮಾಡುವುದಕ್ಕೆ ಶಾಸ್ತ್ರಗಳಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಕಲಶವನ್ನು ಸ್ಥಾಪಿಸಿ ಮಾಡುವ ಪೂಜೆಯನ್ನು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ.

​ಕಲಶ ಸ್ಥಾಪಿಸುವ ಪ್ರಯೋಜನಗಳು

ಶಾರದೀಯ ನವರಾತ್ರಿಯಲ್ಲಿ ಕಲಶ ಸ್ಥಾಪನೆಗೆ ವಿಶೇಷ ಮಹತ್ವವಿದೆ. ಕಲಶ ಸ್ಥಾಪನೆಯಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ ಹಾಗೂ ಧನ-ಆಹಾರ ಧಾನ್ಯಗಳಿಗೆ ಯಾವುದೇ ಕೊರತೆಯಾಗುವುದಿಲ್ಲ. ಕಲಶದಲ್ಲಿ ಇಡುವ ತೆಂಗಿನಕಾಯಿಯಿಂದ ಮನೆಯ ಸದಸ್ಯರು ಆರೋಗ್ಯ ಪಡೆಯುತ್ತಾರೆ. ಕಲಶವನ್ನು ಇಟ್ಟುಕೊಳ್ಳುವುದರಿಂದ ದುರ್ಗೆಯ ಆಶೀರ್ವಾದ ದೊರೆಯುತ್ತದೆ ಮತ್ತು ಯಾವುದೇ ಅಡೆತಡೆಯಿಲ್ಲದೆ ಪೂಜೆ ಪೂರ್ಣಗೊಳ್ಳುತ್ತದೆ. ಪೂಜೆಯಲ್ಲಿ ಇಡುವ ಕಲಶವು ಜೀವನದಲ್ಲಿ ಅದೃಷ್ಟವನ್ನು ತರುತ್ತದೆ ಮತ್ತು ಎಲ್ಲಾ ತೊಂದರೆಗಳನ್ನು ನಿವಾರಿಸಿ ಜೀವನದಲ್ಲಿ ಯಶಸ್ಸನ್ನು ತರುತ್ತದೆ. ದುರ್ಗಾ ದೇವಿಯನ್ನು ಪೂಜಿಸುವ ಮೊದಲು ಕಲಶವನ್ನು ಸ್ಥಾಪಿಸಬೇಕು ಎಂದು ಭಾಗವತ ಪುರಾಣದಲ್ಲಿ ಹೇಳಲಾಗಿದೆ.

​ಕಲಶ ಹೊಂದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಕಲಶವನ್ನು ಸ್ಥಾಪಿಸುವ ಮೊದಲು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಕಲಶದ ಸ್ಥಾಪನೆಗೆ ಕಬ್ಬಿಣದ ಕಲಶ ಅಥವಾ ಇತರ ಯಾವುದೇ ಅಶುದ್ಧ ಲೋಹದ ಕಲಶವನ್ನು ಬಳಸಬಾರದು. ಕಲಶಕ್ಕಾಗಿ ಚಿನ್ನ, ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಲೋಹವನ್ನು ಯಾವಾಗಲೂ ಬಳಸಬಹುದು, ಆದರೆ ಮಣ್ಣಿನ ಕಲಶವನ್ನು ಸ್ಥಾಪಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮಾವು ಅಥವಾ ಅಶೋಕ ಎಲೆಗಳನ್ನು ಕಲಶದ ಮೇಲೆ ಇಡಬೇಕು. ಧರ್ಮಗ್ರಂಥಗಳಲ್ಲಿ, ಕಲಶವನ್ನು ಸಮೃದ್ಧಿ, ಐಶ್ವರ್ಯ, ಸಂತೋಷ, ಶಾಂತಿ ಮತ್ತು ಶುಭ ಹಾರೈಕೆಗಳ ಸಂಕೇತವೆಂದು ವಿವರಿಸಲಾಗಿದೆ.
***







No comments:

Post a Comment