SEARCH HERE

Monday, 29 March 2021

ದೇವಸ್ಥಾನದಲ್ಲಿ ದಶ೯ನ ಮತ್ತು ನಮಸ್ಕಾರ ಏಕೆ ಹೇಗೆ temple visit why darshana namaskara where and how to do





ದೇವರ ದರ್ಶನ ಕ್ರಮ...
ಪ್ರಾಚೀನ ಪರಂಪರೆಯ ಕಲ್ಯಾಣಿಗಳು ಕೇವಲ ಧಾರ್ಮಿಕ ಗುರತ್ತಷ್ಟೆಯಲ್ಲ; ಅಂತರ್ಜಲದ ಬಟ್ಟಲುಗಳು, ಪ್ರಶಾಂತತೆ, ಪವಿತ್ರತೆಯ ಸಂಕೇತಗಳು!!

ದೇವಸ್ಥಾನದಲ್ಲಿ ದೇವರ ದರ್ಶನ ಮಾಡುವ ಕ್ರಮ   ದೇವರ ಧೂಳಿದರ್ಶನ

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು? ಅನ್ನುವುದಕ್ಕೆ ನಮ್ಮ ಪೂರ್ವಜರು  ಸರಿಯಾದ ಕ್ರಮವನ್ನು  ತಿಳಿಸಿರುತ್ತಾರೆ . ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ...‌‌

ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು’ ಎಂದು ಪ್ರಾರ್ಥಿಸಿ ನಂತರ ಹೊರಗಿ ನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿದರ್ಶನ ಅಂತಾರೆ ಧೂಳಿ ದರ್ಶನಂ ಪಾಪ ನಾಶನಂ. ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ. ನಂತರ ತಲೆಯಲ್ಲಿರುವ ಚಿಂತೆಗಳನ್ನೇಲ್ಲ ಬಿಟ್ಟು ಶಿಖರ ದರ್ಶನ ಮಾಡಿ ಶಿಖರ ದರ್ಶನಂ ಚಿಂತಾ ನಾಶನಂ ನಂತರ ದೇವಸ್ಥಾನ ಒಳಗೆ ಹೋಗು ವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶ ಮಾಡಿ ತಕ್ಷಣ ದೇವರ ವಿಗ್ರಹ ವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ.

ದೇವರ ದರ್ಶನ ಮಾಡುವ ಕ್ರಮ

ಮೊದಲು ಪಾದ ದರ್ಶನ ಮಾಡಿ ಪಾದ ದರ್ಶನಂ ಪಾಪನಾಶನಂ
ನಂತರ ಕಟಿ ದರ್ಶನ ಮಾಡಿ ಕಟಿ ದರ್ಶನಂ ಕಾಮನಾಶನಂ (कमर -waist) 
ನಂತರ ನಾಭಿ ದರ್ಶನ ಮಾಡಿ ನಾಭಿ ದರ್ಶನಂ ನರಕ ನಾಶನಂ 
ನಂತರ ಕಂಠ ದರ್ಶನ ಮಾಡಿ ಕಂಠ ದರ್ಶನಂ ವೈಕುಂಠ ಸಾಧನಂ 
ನಂತರ ಮುಖ ದರ್ಶನ ಮಾಡಿ ಮುಖ ದರ್ಶನಂ ಮುಕ್ತಿ ಸಾಧನಂ 
ನಂತರ ಕಿರೀಟ ದರ್ಶನ ಮಾಡಿ ಕೀರಿಟ ದರ್ಶನಂ ಪುನರ್ಜನ್ಮ ನಾಶನಂ 
ನಂತರ ಸರ್ವ ದರ್ಶನ ಮಾಡಿ ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ. ಸರ್ವಾಂಗ ದರ್ಶನ ಮಾಡ ಬೇಕು. ಈ ರೀತಿ ಕ್ರಮಬದ್ಧವಾಗಿ ದೇವರ ದರ್ಶನ ಮಾಡುವುದ ರಿಂದ ದರ್ಶನದ ಫಲ ಸಿಗುತ್ತೆ ಎಂದು ಪೂರ್ವಜರು ತಿಳಿಸಿದ್ದಾರೆ.

ಧೂಳಿದರ್ಶನ ಸ್ತೋತ್ರ : 

ಜಯವಿಜಯರೇ ಸನಕ ಸನಂದಾದಿಗಳೇ ವೈಕುಂಠ ದಲ್ಲಿದ್ದಂತಹ ನಾರಾಯಣ ಮೂರ್ತಿ ಅಲ್ಲಿದ್ದಂತಹ ವಾಸುದೇವ ಮೂರ್ತಿಯ ದರ್ಶನಕ್ಕೆ ಹೋಗತೀನಿ ಹಾದೀ ಬಿಡಿರಿ. 

ಧೂಳಿದರ್ಶನಂ ದುಃಖನಾಶನಂ | ಪಾದದರ್ಶನಂ ಪಾಪನಾಶನಂ | ಕಟಿ- ದರ್ಶನಂ ಕಾಮನಾಶನಂ |! ನಾಭಿದರ್ಶನಂ ನರಕನಾಶನಂ | ಹೃದಯದರ್ಶನಂ ಹೃದ್ರೋಗ ನಾಶನಂ | ಕಂಠದರ್ಶನಂ ವೈಕುಂಠ ಸಾಧನಂ | ಮುಖದ ರ್ಶನಂ ಮೋಕ್ಷ ಸಾಧನಂ | ಶಿರೋ ದರ್ಶನಂ ಅಮೃತ ಪ್ರಾಶನಂ । ಕಿರೀಟ ದರ್ಶನಂ ಪುನರ್ಜನ್ಮ ನಾಶನಂ | ಸರ್ವಾಂಗದರ್ಶನಂ ಪರಲೋಕಸಾಧನಂ ॥ 

ಮಾತಾ ಚ ಕಮಲಾದೇವೀ ಪಿತಾ ದೇವೋ ಜನಾರ್ದನಃ ! 
ಬಾಂಧವಾಃ ವಿಷ್ಣುಭಕ್ತಾಶ್ಚ ಸ್ವದೇಶೋ ಭುವನತ್ರಯಮ್‌ ॥ 

ಭಾಗೀರಥೀ ಪಡೆದಂಥ ಪಾದಪದ್ಮವ ಕಂಡೆ । ಬ್ರಹ್ಮಾಂಡ ಧರಿಸಿದಂಥಾ ನಾಭಿಕಮಲವ ಕಂಡೆ | ಉಟ್ಟ ಪೀತಾಂಬರವ ಕಂಡೆ | ತೊಟ್ಟ ತೊಡಿಗೆಯ ಕಂಡೆ! ಶಂಖಚಕ್ರವ ಕಂಡೆ । ಗದಾಪದ್ಮವ ಕಂಡೆ |! ಮುತ್ತಿನ ಹಾರವ ಕಂಡೆ | ಮುತ್ತಿನ ಗದ್ದುಗೆಯ ಮೇಲೆ ರುಕ್ಮಿಣಿ ಸತ್ಯಭಾಮೆಯರ ಸಹಿತ ಶ್ರೀಕೃಷ್ಣದೇವರು ಕೂತದ್ದು ಕಂಡೆ | ಶ್ರೀದೇವಿ ಭೂದೇವಿ ಯರು ಪಾದ ಒತ್ತುವದ ಕಂಡೆ । ಭಾರತೀ ಸರಸ್ವತೀ ದೇವಿಯರು ಚಾಮರ ಹಾಕುವದ ಕಂಡೆ । ಅಷ್ಟಮಹಿಷಿ ಯರು ಗೀತಾ ಪಠಿಸುವದ ಕಂಡೆ । ತುಂಬುರು ನಾರದರರು ವೀಣಾ ಮೀಟುವುದ ಕಂಡೆ | ಗಂಧರ್ವರು ಗಾಯನ ಮಾಡುವದ ಕಂಡೆ ! ಮುನಿಗಳು ಸ್ತೋತ್ರ ಮಾಡುವುದ 
ಕಂಡೆ! ಶ್ರೀಮಧ್ವರಾಯರು ಪೂಜೆ ಮಾಡುವುದ ಕಂಡೆ | ಕಂಡೆ ನಾ ಕರುಣಾಕರನ ಕಂಡು ನಾ ಧನ್ಮಳಾದೆ ॥ ಇತಿ ಶ್ರೀಧೂಳಿದರ್ಶನಸ್ತೋತ್ರಂ ಸಂಪೂರ್ಣಂ ಶ್ರೀಕೃಷ್ಣಾರ್ಪಣ ಮಸ್ತು ॥ 

ಈ ರೀತಿ ಧೂಳಿದರ್ಶನ ಮಾಡಿಕೊಂಡು ದೇವರಿಗೆ ನಮಸ್ಕರಿಸಬೇಕು. ದಾಸರು ಮತ್ತೆ ಮತ್ತೆ ಹೇಳುತ್ತಾರೆ. ಧೂಳಿ ದರ್ಶನ ಕ್ರಮ ಮಾಡದಿದ್ದರೆ ಯಾವ ಫಲವೂ ದೊರಕುವು ದಿಲ್ಲ. ಪ್ರತಿಯೊಬ್ಬರೂ ವಿಶೇಷ ವಾಗಿ ಮಹಿಳೆಯರುಮುಂಜಾನೆ ಮಾಡಲೇ ಬೇಕಾದ ಕರ್ತವ್ಯ.
ದರ್ಶನ ಮಾಡಿ ದೇವರಲ್ಲಿ ನಿಮ್ಮ ಬೇಡಿಕೆಗಳನ್ನು ಮಂಡಿಸಿ.
ಶ್ರೀ ಮಧ್ವಾಚಾರ್ಯರು ತಮ್ಮ ಧ್ವಾದಶ ಸ್ತೋತ್ರದಲ್ಲಿ ಕೃಷ್ಣನನ್ನು ಪಾದದಿಂದ
ಪ್ರಾರಂಭಿಸಿ ಕಠಿ,ಹೊಟ್ಟೆ, ಕೈಗಳು,ಎದೆ ಮತ್ತು ಮುಖವನ್ನು ವರ್ಣಿಸಿದ್ದಾರೆ
ಎಂಬುದು ಗಮನಾರ್ಹ.
***
ದೇವರ ಧೂಳಿದರ್ಶನ : 

ಮುಂಜಾನೆ ಎದ್ದ ತಕ್ಷಣ ವಿಶೇಷವಾಗಿ ಮಹಿಳೆಯರು ದೇವರ ಧೂಳಿ ದರ್ಶನ ಮಾಡಲೇ ಬೇಕಾದ ಕರ್ತವ್ಯ. ನಂತರ ದಂತ ಧಾವನ ಇತ್ಯಾದಿ. ಅಂದು ಬರುವ ಎಲ್ಲ ತಾಪತ್ರಯ , ಅಶಾಂತಿ ಎಲ್ಲವೂ ಪರಿಹಾರ .

ದೀಪವನ್ನು ಹಚ್ಚಿದ ಮೇಲೆ ಧೂಳಿದರ್ಶನಸ್ತೋತ್ರವನ್ನು ಪಠಿಸುತ್ತ ದೇವರ ಧೂಳಿದರ್ಶನ ವನ್ನು ಮಾಡಿಕೊಳ್ಳ ಬೇಕು. ದೇವರ ಪ್ರತಿಮೆ ಅಥವಾ ಫೋಟೋ ದಲ್ಲಿ ದೇವರ ಪಾದ ಗಳಿಂದ ಶಿರದವರೆಗಿನ ಸರ್ವಾಂಗಗಳನ್ನು ನೋಡುತ್ತ ನಮಿಸಬೇಕು. 

ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು’ ಎಂದು ಪ್ರಾರ್ಥಿಸಿ ನಂತರ ಹೊರಗಿ ನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿದರ್ಶನ ಅಂತಾರೆ ಧೂಳಿ ದರ್ಶನಂ ಪಾಪ ನಾಶನಂ. ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ. ನಂತರ ತಲೆಯಲ್ಲಿರುವ ಚಿಂತೆಗಳನ್ನೇಲ್ಲ ಬಿಟ್ಟು ಶಿಖರ ದರ್ಶನ ಮಾಡಿ ಶಿಖರ ದರ್ಶನಂ ಚಿಂತಾ ನಾಶನಂ ನಂತರ ದೇವಸ್ಥಾನ ಒಳಗೆ ಹೋಗು ವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶ ಮಾಡಿ ತಕ್ಷಣ ದೇವರ ವಿಗ್ರಹ ವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ.

ದೇವರ ದರ್ಶನ ಮಾಡುವ ಕ್ರಮಮೊದಲು ಪಾದ ದರ್ಶನ ಮಾಡಿ ಪಾದ ದರ್ಶನಂ ಪಾಪನಾಶನಂ.ನಂತರ ಕಟಿ ದರ್ಶನ ಮಾಡಿ ಕಟಿ ದರ್ಶನಂ ಕಾಮನಾಶನಂ ನಂತರ ನಾಭಿ ದರ್ಶನ ಮಾಡಿ ನಾಭಿ ದರ್ಶನಂ ನರಕ ನಾಶನಂ ನಂತರ ಕಂಠ ದರ್ಶನ ಮಾಡಿ ಕಂಠ ದರ್ಶನಂ ವೈಕುಂಠ ಸಾಧನಂ ನಂತರ ಮುಖ ದರ್ಶನ ಮಾಡಿ ಮುಖ ದರ್ಶನಂ ಮುಕ್ತಿ ಸಾಧನಂ ನಂತರ ಕಿರೀಟ ದರ್ಶನ ಮಾಡಿ ಕೀರಿಟ ದರ್ಶನಂ ಪುನರ್ಜನ್ಮ ನಾಶನಂ ನಂತರ ಸರ್ವ ದರ್ಶನ ಮಾಡಿ ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ. ಸರ್ವಾಂಗ ದರ್ಶನ ಮಾಡ ಬೇಕು. ಈ ರೀತಿ ಕ್ರಮಬದ್ಧವಾಗಿ ದೇವರ ದರ್ಶನ ಮಾಡುವುದ ರಿಂದ ದರ್ಶನದ ಫಲ ಸಿಗುತ್ತೆ ಎಂದು ಪೂರ್ವಜರು ತಿಳಿಸಿದ್ದಾರೆ.

ಧೂಳಿದರ್ಶನ ಸ್ತೋತ್ರ : 

ಜಯವಿಜಯರೇ ಸನಕ ಸನಂದಾದಿಗಳೇ ವೈಕುಂಠ ದಲ್ಲಿದ್ದಂತಹ ನಾರಾಯಣ ಮೂರ್ತಿ ಅಲ್ಲಿದ್ದಂತಹ ವಾಸುದೇವ ಮೂರ್ತಿಯ ದರ್ಶನಕ್ಕೆ ಹೋಗತೀನಿ ಹಾದೀ ಬಿಡಿರಿ. 

ಧೂಳಿದರ್ಶನಂ ದುಃಖನಾಶನಂ | ಪಾದದರ್ಶನಂ ಪಾಪನಾಶನಂ | ಕಟಿ- ದರ್ಶನಂ ಕಾಮನಾಶನಂ |! ನಾಭಿದರ್ಶನಂ ನರಕನಾಶನಂ | ಹೃದಯದರ್ಶನಂ ಹೃದ್ರೋಗ ನಾಶನಂ | ಕಂಠದರ್ಶನಂ ವೈಕುಂಠ ಸಾಧನಂ | ಮುಖದ ರ್ಶನಂ ಮೋಕ್ಷ ಸಾಧನಂ | ಶಿರೋ ದರ್ಶನಂ ಅಮೃತ ಪ್ರಾಶನಂ । ಕಿರೀಟ ದರ್ಶನಂ ಪುನರ್ಜನ್ಮ ನಾಶನಂ | ಸರ್ವಾಂಗದರ್ಶನಂ ಪರಲೋಕಸಾಧನಂ ॥ 

ಮಾತಾ ಚ ಕಮಲಾದೇವೀ ಪಿತಾ ದೇವೋ ಜನಾರ್ದನಃ ! 
ಬಾಂಧವಾಃ ವಿಷ್ಣುಭಕ್ತಾಶ್ಚ ಸ್ವದೇಶೋ ಭುವನತ್ರಯಮ್‌ ॥ 

ಭಾಗೀರಥೀ ಪಡೆದಂಥ ಪಾದಪದ್ಮವ ಕಂಡೆ । ಬ್ರಹ್ಮಾಂಡ ಧರಿಸಿದಂಥಾ ನಾಭಿಕಮಲವ ಕಂಡೆ | ಉಟ್ಟ ಪೀತಾಂಬರವ ಕಂಡೆ | ತೊಟ್ಟ ತೊಡಿಗೆಯ ಕಂಡೆ! ಶಂಖಚಕ್ರವ ಕಂಡೆ । ಗದಾಪದ್ಮವ ಕಂಡೆ |! ಮುತ್ತಿನ ಹಾರವ ಕಂಡೆ | ಮುತ್ತಿನ ಗದ್ದುಗೆಯ ಮೇಲೆ ರುಕ್ಮಿಣಿ ಸತ್ಯಭಾಮೆಯರ ಸಹಿತ ಶ್ರೀಕೃಷ್ಣದೇವರು ಕೂತದ್ದು ಕಂಡೆ | ಶ್ರೀದೇವಿ ಭೂದೇವಿ ಯರು ಪಾದ ಒತ್ತುವದ ಕಂಡೆ । ಭಾರತೀ ಸರಸ್ವತೀ ದೇವಿಯರು ಚಾಮರ ಹಾಕುವದ ಕಂಡೆ । ಅಷ್ಟಮಹಿಷಿ ಯರು ಗೀತಾ ಪಠಿಸುವದ ಕಂಡೆ । ತುಂಬುರು ನಾರದರರು ವೀಣಾ ಮೀಟುವುದ ಕಂಡೆ | ಗಂಧರ್ವರು ಗಾಯನ ಮಾಡುವದ ಕಂಡೆ ! ಮುನಿಗಳು ಸ್ತೋತ್ರ ಮಾಡುವುದ 
ಕಂಡೆ! ಶ್ರೀಮಧ್ವರಾಯರು ಪೂಜೆ ಮಾಡುವುದ ಕಂಡೆ | ಕಂಡೆ ನಾ ಕರುಣಾಕರನ ಕಂಡು ನಾ ಧನ್ಮಳಾದೆ ॥ ಇತಿ ಶ್ರೀಧೂಳಿದರ್ಶನಸ್ತೋತ್ರಂ ಸಂಪೂರ್ಣಂ ಶ್ರೀಕೃಷ್ಣಾರ್ಪಣ ಮಸ್ತು ॥ 

ಈ ರೀತಿ ಧೂಳಿದರ್ಶನ ಮಾಡಿಕೊಂಡು ದೇವರಿಗೆ ನಮಸ್ಕರಿಸಬೇಕು. ದಾಸರು ಮತ್ತೆ ಮತ್ತೆ ಹೇಳುತ್ತಾರೆ. ಧೂಳಿ ದರ್ಶನ ಕ್ರಮ ಮಾಡದಿದ್ದರೆ ಯಾವ ಫಲವೂ ದೊರಕುವು ದಿಲ್ಲ. ಪ್ರತಿಯೊಬ್ಬರೂ ವಿಶೇಷ ವಾಗಿ ಮಹಿಳೆಯರುಮುಂಜಾನೆ ಮಾಡಲೇ ಬೇಕಾದ ಕರ್ತವ್ಯ.
- ಪ್ರಯತ್ನ ಮಾಡಿ. ಎಸ್ ದಾಸ್.
***


*ಸಾಷ್ಟಾಂಗ ನಮಸ್ಕಾರ* - by narahari sumadhwa

ಆಚಾರ್ಯ ಮಧ್ವರು ಬಾಲಕ ವಾಸುದೇವನಾಗಿದ್ದಾಗ ರಜತಪೀಠದ ಅನಂತಾಸನನನ್ನು ನಮಸ್ಕರಿಸುತ್ತಿದ್ದ ರೀತಿಯನ್ನು ಸುಕೃತಾ ಹರಿನಮಸ್ಕೃತಯ ಎಂದಿದ್ದಾರೆ (ಸುಮಧ್ವವಿಜಯ 3.6)

*ಸುಕೃತಾ ಹರಿನಮಸ್ಕೃತಯ:* - ಇಲ್ಲಿ ನಮಸ್ಕಾರ ಚೆನ್ನಾಗಿ ಮಾಡುವುದು ಅಂದರೆ ಏನು ?

 *ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ* |
*ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋSಷ್ಟಾಂಗ ಈರಿತ :* ||

ನಮಸ್ಕಾರ ಮಾಡುವಾಗ ದೇವರ ಪ್ರತೀಕದ ಎದುರು ಬಲಭಾಗದಲ್ಲಿ ನಿಂತು ಶೇಷಶಾಯಿಯನ್ನು ಸ್ಮರಿಸುತ್ತಾ , ಮನಸ್ಸಿನಿಂದ ಏಕಾಗ್ರತೆಯಿಂದ ಪರಮಾತ್ಮನ ಮೂಲರೂಪಕ್ಕೂ ಅದರ ಪ್ರತೀಕಕ್ಕೂ , ನಮ್ಮ ಹೃದಯದಲ್ಲಿ ಇರತಕ್ಕಂತಹ ದೇವರಿಗೂ ಐಕ್ಯ ಚಿಂತನೆ ಮಾಡಿ, ಮಂತ್ರೋಚ್ಛಾರಣೆ ಸಹಿತ, ಕೈಗಳನ್ನು ಮೇಲೆತ್ತಿ, ಬಲಗಾಲು ಮುಂದಿಟ್ಟು, ಎಡಗಾಲು ಮಂಡಿಯೂರಿ, ನಂತರ ಬಲಮಂಡಿಯೂರಿ ಕಾಲುಗಳನ್ನು ಹಿಂದಕ್ಕೂ, ಕೈಗಳನ್ನು ಮುಂದಕ್ಕೂ ಚಾಚಿ ಪ್ರತೀಕವನ್ನು ನೋಡುತ್ತಾ, ಗುಹ್ಯಪ್ರದೇಶವು ಭೂಸ್ಪರ್ಶ ಆಗದ ಹಾಗೆ , ಎರಡು ಕೈಗಳು, ಕಾಲ್ಗಳು, ಶಿರಸ್ಸು, ಉರಸ್ಸೆಂಬ ಎದೆ, ಎರಡೂ ತೋಳುಗಳನ್ನೂ ಭೂಸ್ಪರ್ಶ ಮಾಡಿ ಅನಂತರ ಕೈಗಳನ್ನು ಹಿಂದಕ್ಕೆ ತೆಗೆದು, ಬಲಮಂಡಿಯನ್ನು ಮೊದಲು ಭೂಸ್ಪರ್ಶವಿಲ್ಲದಂತೆ ಮಾಡಿ, ಮೇಲಕ್ಕೆದ್ದು ಬಲಗಾಲನ್ನು ಹಿಂದಕ್ಕೆ ತೆಗೆದು, ಉರಕ್ಕೆ ಎದುರಾಗಿ ಕೈಮುಗಿದು ಶಿರದ ಮೇಲೆ ಮತ್ತೆ ಕೈಜೋಡಿಸಿ ಮಾಡಿದ ನಮಸ್ಕಾರ.

ಈ ರೀತಿ ಬಾಲಕ ವಾಸುದೇವನು, ನಮಸ್ಕಾರ ಮಾಡುತ್ತಿದ್ದನು.

ಇಲ್ಲಿ ವ್ಯಾಖ್ಯಾನ ಮಾಡುತ್ತಾ ಪ್ರಾತ: ಸ್ಮರಣೀಯ ಶ್ರೀ ವಿಶ್ವನಂದನ ತೀರ್ಥರು ನಮಸ್ಕಾರವನ್ನು ಹೇಗೆ ಮಾಡಿದರೆ ಅದು ಅಶ್ವಮೇಧ ಯಾಗದ ಫಲಕ್ಕಿಂತಲೂ ಶ್ರೇಷ್ಠ ಎಂದು ವಿವರಿಸಿದ್ದಾರೆ.

ಸಂಗ್ರಹ : ನರಹರಿ ಸುಮಧ್ವ
***



ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು ವೈಜ್ಞಾನಿಕ ಕಾರಣ

ವಾಸ್ತು ಶಾಸ್ತ್ರ ಹಾಗು ಪುರಾಣದ ಪ್ರಕಾರ :
ದೇವಾಲಯಗಳು ದೇವರ ಪವಿತ್ರ ಸ್ಥಾನವೇ ಆಗಿದೆ ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯನ ದೇಹಕ್ಕೆ ಹೋಲಿಸಲಾಗುತ್ತದೆ.

ಅಗ್ನಿ ಪುರಾಣದ ಪ್ರಕಾರ

“ಶಿಖರಂ ಶಿರ ಇತ್ಯಾಹುರಿಗರ್ಭಗೆಹಂ ಗಳಸ್ತಥಾ ಮಂಡಪಂ ಕುಕ್ಷಿರಿತ್ಯಾಹುಹ್ ಪ್ರಕಾರಂ ಜನುಜಂಘಾಕಂ ಗೋಪುರಮ್ ಪಾದ ಇತ್ಯಾಹುರ್ಧ್ವಜೋ ಜೀವನಮುಚ್ಯತೇ “

ಅಂದರೆ ಶಿಖರ ತಲೆ ಭಾಗ , ಗರ್ಭ ಗುಡಿ ಕುತ್ತಿಗೆ, ಮಂಟಪದ ಸೊಂಟದ ಭಾಗ , ಗೋಪುರ ಕಾಲುಗಳು ಮತ್ತು ಧ್ವಜ ದೇವಾಲಯದ ಜೀವ ಇದನ್ನು ಕೆಳಮುಖವಾಗಿ ಹೇಳುತ್ತಾರೆ .

ಅದೇ ಮೇಲ್ಮುಖವಾಗಿ ಹೇಳಬೇಕೆಂದರೆ
ಕಳಸ – ತಲೆ
ಶಿಖರ – ಮೇಲ್ಭಾಗ
ಗೋಡೆ – ದೇಹ
ಕಂಬದ ಪೀಠ – ಕಾಲುಗಳು
ಮೆಟ್ಟಿಲುಗಳು – ಪಾದ

ದೇವಾಲಯದ ಪ್ರವೇಶಕ್ಕೆ ಮೊದಲು ಮೆಟ್ಟಿಲುಗಳನ್ನು ಸ್ಪರ್ಶ ಮಾಡಿ ನಮಸ್ಕರಿಸಿ ಹೋಗುವುದು ಏಕೆ ?

ನಮಗಿಂತ ದೊಡ್ಡವರ ಪಾದಗಳನ್ನು ನಮಸ್ಕರಿಸಿ ಹೋಗುವುದರಿಂದ ಶ್ರೇಯಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ .
ನನ್ನ ಅಹಂ ಅನ್ನು ದೇವಾಲಯದ ಹೊರಗಡೆ ಬಿಟ್ಟು ಒಳಗೆ ಬರುತ್ತೇನೆ ಎಂಬ ಸಂಕೇತವು ಆಗಿದೆ .
ನಾನು ನಿನ್ನ ಮೆಟ್ಟಿಲುಗಳನ್ನು (ಪಾದಗಳನ್ನು ) ನಮಸ್ಕರಿಸುತ್ತೇನೆ ನನ್ನ ಪಾಪಗಳನ್ನು ಪರಿಹರಿಸು ಎಂಬುದು ಇದರ ಅರ್ಥ.

ಕೆಲವು ದೇವಾಲಯಗಳ ಮುಂದೆ ಆಮೆಗಳ ಪ್ರತಿಕೃತಿಗಳನ್ನು ಕೆತ್ತಲಾಗಿರುತ್ತದೆ ಇದರ ಅರ್ಥ ಆಮೆಯು ಗಾತ್ರದಲ್ಲಿ ಎಷ್ಟೇ ದೊಡ್ಡದಿದ್ದರೂ ತನ್ನ ಕಾಲುಗಳನ್ನು ಒಳಗೆ ಬಚ್ಚಿಟ್ಟುಕೊಂಡಿರುತ್ತದೆ ಮನುಷ್ಯನು ಸಹ ಅಹಂಕಾರವನ್ನು ಬಿಟ್ಟು ಬದುಕಬೇಕು ಎಂಬುದಾಗಿದೆ.

ವೈಜ್ಞಾನಿಕ ಕಾರಣ :

ವಿವಿಧ ಗಾತ್ರದ, ಆಕಾರದ ಮತ್ತು ವಿವಿಧ ಸ್ಥಳಗಳಲ್ಲಿ ಭಾರತದಾದ್ಯಂತ ಸಾವಿರಾರು ದೇವಾಲಯಗಳಿವೆ ಆದರೆ ಎಲ್ಲವನ್ನೂ ವೈದಿಕ ಮಾರ್ಗವಾಗಿ ನಿರ್ಮಿಸಲಾಗಿಲ್ಲ. ಸಾಮಾನ್ಯವಾಗಿ, ಭೂಮಿಯ ಆಯಸ್ಕಾಂತೀಯ ತರಂಗ ಮಾರ್ಗವು ದಟ್ಟವಾಗಿ ಹಾದುಹೋಗುವ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಬೇಕು ಎಂಬುದು ಪ್ರತೀತಿ .

ಪಟ್ಟಣ / ಗ್ರಾಮ ಅಥವಾ ನಗರ ಹೊರವಲಯದಲ್ಲಿ ಅಥವಾ ವಾಸಸ್ಥಳದ ಮಧ್ಯದಲ್ಲಿ ಅಥವಾ ಬೆಟ್ಟದ ಮೇಲೆ ಹಿಂದಿನ ಕಾಲದಲ್ಲಿ ಕಟ್ಟಲಾಗುತ್ತಿತ್ತು. ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಭೂತ ಕಾರಣವನ್ನು ಇಲ್ಲಿ ಚರ್ಚಿಸಲಾಗಿದೆ.

ಗರ್ಭಾಗೃಹ :

ದೇವಾಲಯಗಳು ಆಯಕಟ್ಟಿನ ಸ್ಥಳದಲ್ಲಿ ಉತ್ತರ / ದಕ್ಷಿಣ ಧ್ರುವದ ಒತ್ತಡದ ಕಾಂತೀಯ ಮತ್ತು ವಿದ್ಯುತ್ ತರಂಗ (magnetic and Electrical waves) ವಿತರಣೆಗಳಿಂದ ಕೂಡಿರುವ ಸ್ಥಳವಾಗಿದೆ. ಮುಖ್ಯ ವಿಗ್ರಹವನ್ನು ದೇವಾಲಯದ ಮುಖ್ಯ ಕೇಂದ್ರದಲ್ಲಿ ಇರಿಸಲಾಗುತ್ತದೆ ಇದನ್ನು ” ಗರ್ಭಾಗೃಹ ” ಅಥವಾ ” ಮೂಲಾಸ್ಥಾನ” ಎಂದು ಕರೆಯಲಾಗುತ್ತದೆ.

ವಾಸ್ತವವಾಗಿ, ವಿಗ್ರಹವನ್ನು ಇರಿಸಿದ ನಂತರ ದೇವಸ್ಥಾನದ ರಚನೆಯನ್ನು ನಿರ್ಮಿಸಲಾಗುತ್ತದೆ. ಈ ” ಗರ್ಭಾಗೃಹ ” ಅಥವಾ “ಮೂಲಾಸ್ಥಾನ” ದಲ್ಲಿ ಭೂಮಿಯ ಅಯಸ್ಕಾಂತೀಯ ತರಂಗಗಳು ಗರಿಷ್ಠ ಮಟ್ಟದಲ್ಲಿ ಕಂಡುಬರುತ್ತವೆ.

ಪ್ರದಕ್ಷಿಣಾ :
ದೇವಸ್ಥಾನದ ಸುತ್ತಮುತ್ತ ತಾಮ್ರದ ಎಳೆಗಳಿಂದ ಸುತ್ತಿರುತ್ತಾರೆ , ಈ ತಾಮ್ರದ ತಟ್ಟೆಯು ಭೂಮಿಯ ಕಾಂತದ ಅಲೆಗಳನ್ನು ಹೀರಿಕೊಳ್ಳುತ್ತದೆ ಮತ್ತು ಸುತ್ತಮುತ್ತಲಿನ ಕಡೆಗೆ ಹೊರಹೊಮ್ಮುತ್ತದೆ. ಹೀಗಾಗಿ ವ್ಯಕ್ತಿಯು ನಿಯಮಿತವಾಗಿ ದೇವಸ್ಥಾನವನ್ನು ಭೇಟಿ ಮಾಡುತ್ತಾ ಪ್ರದಕ್ಷಿಣಾ ಮಾಡಿದರೆ ಈ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ , ವೈಜ್ಞಾನಿಕವಾಗಿ, ಧನಾತ್ಮಕ ಶಕ do್ತಿ ಆರೋಗ್ಯಕರ ಜೀವನವನ್ನು ನಡೆಸಲು ಸಹಕಾರಿ.

ತೀರ್ಥ:
ತೀರ್ಥವು ಏಲಕ್ಕಿ, ಕರ್ಪುರ (ಬೆಂಜೊಯಿನ್), ಜಾಫ್ರಾನ್ / ಕೇಸರಿ,ತುಳಸಿ (ಹೋಲಿ ಬೆಸಿಲ್), ಲವಂಗ ಇವುಗಳ ಸಮಾಗಮವಾಗಿದೆ.
ತೀರ್ಥದ ನೀರು ಮುಖ್ಯವಾಗಿ ಮ್ಯಾಗ್ನೆಟೋ-ಚಿಕಿತ್ಸೆಯ ಮೂಲವಾಗಿದೆ ಜೊತೆಗೆ, ಲವಂಗ ವು ಹಲ್ಲಿನ ಕೊಳೆತದಿಂದ ರಕ್ಷಿಸುತ್ತದೆ, ಕೇಸರಿ ಮತ್ತು ತುಳಸಿ ಎಲೆಗಳು ಸಾಮಾನ್ಯ ಶೀತ ಮತ್ತು ಕೆಮ್ಮು ಗೆ ಪರಿಹಾರ , ಏಲಕ್ಕಿ ಮತ್ತು ಪಚ್ಚ ಕರ್ಪುರ (ಬೆಂಜೊಯಿನ್) ಬಾಯಿಯ ಖಾಯಿಲೆಗಳನ್ನು ರಕ್ಷಿಸುತ್ತದೆ.

ದೀಪ ಹಚ್ಚುವುದು :
ದೀಪವು ಹಚ್ಚುವುದರಿಂದ ಧನಾತ್ಮಕ ತರಂಗಗಳನ್ನು ಹರಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ದಿನನಿತ್ಯ ನಾವು ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. (ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಶ್ರೇಷ್ಠವೆಂದಿದ್ದಾರೆ).

ಅಂತೆಯೇ ನಂದಾದೀಪವನ್ನು ಹಚ್ಚುವುದೇಕೆಂದರೆ, ಹಿಂದಿನಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚುಕಲ್ಲುಗಳ ಸಂಘರ್ಷಣೆಯಿಂದ ಅಥವ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಠಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ಧೀರ್ಘಕಾಲದವರೆಗೆ ಉಪಯೋಗಿಸುವ ಉದ್ದೇಶ ವಿಟ್ಟುಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿಕೊಂಡಿರಬೇಕು.

ಕುಂಕುಮ ಹಾಗು ಅರಿಶಿನ :
ಕುಂಕುಮ ನಮ್ಮ ಮೂರನೇ ಕಣ್ಣಿನ ಭಾಗಕ್ಕೆ ಇಡುತ್ತೇವೆ ಇದರಿಂದ ನಮ್ಮ ಸುಪ್ತ ಮನಸು ಜಾಗೃತಿಯಾಗುತ್ತದೆ ಅಲ್ಲದೆ ಜ್ಞಾಪಕ ಶಕ್ತಿ ಕೂಡ ವೃದ್ಧಿಯಾಗುತ್ತದೆ ,
ಅರಿಶಿನ ಹಚ್ಚಿದರೆ ಆಂಟಿಬಯೋಟಿಕ್ ರೀತಿ ವರ್ತಿಸುತ್ತದೆ , ಮುಖದ ಮೇಲೆ ಕೂದಲು ಬೆಳೆಯದಂತೆ , ಯಾವುದೇ ಸೋಂಕು ಬಾರದಂತೆ ನಮ್ಮನ್ನು ರಕ್ಷಿಸುತ್ತದೆ , ಆದ್ದರಿಂದಲೇ ಅರಿಶಿನ ಸ್ನಾನ ಮಾಡಿಸಲಾಗುತ್ತದೆ .

ಘಂಟೆ

ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಘಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ. ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿ ಭಾವ ಮೂಡುತ್ತದೆ. ಜೊತೆಗೆ ಆರತಿ ವೇಳೆ ನಿರಂತರವಾಗಿ ಘಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತದೆ ಎಂಬ ಕಾರಣಕ್ಕೆ ಘಂಟೆ ಮೊಳಗಿಸಲಾಗುತ್ತದೆ ಎನ್ನಲಾಗಿದೆ.

ಆನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಘಂಟಾನಾದ ಮೊಳಗುತ್ತಿದ್ದು. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.
(ಸಂಗ್ರಹ)
****


ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ

  ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ | 
  ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು

ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು.

ಏಕೆಂದರೆ `ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು. 

ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯ (ಸೋಲು) ವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು. 

ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು.

ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ.

`ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. 
*****

ಪ್ರದಕ್ಷಿಣೆ ಹಿಂದಿರುವ ದೃಷ್ಟಿಕೋನ!

🌼🌼🌼🌼🌼🌼🌼🌼🌼🌼

'ದೇವಸ್ಥಾನದʼ ಪ್ರಾಂಗಣದಲ್ಲಿ ಕೈಮುಗಿಯುತ್ತಾ, ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಾ, ಪ್ರದಕ್ಷಿಣೆ ಗಡಿಯಾರದ ಮುಳ್ಳಿನ ಆಕಾರದಲ್ಲಿ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ.

ದೇವಸ್ಥಾನ ವಿಶಾಲವಾದ ಸ್ಥಳದಲ್ಲಿರುತ್ತದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಮಾಡಲು ಸ್ಥಳಾವಕಾಶವಿರುತ್ತದೆ. ಬರಿಗಾಲಿನಲ್ಲಿ ಗರ್ಭಗುಡಿಗೆ ಸುತ್ತು ಬರುವುದು, ದೇವರ ಮುಂದೆ ಸಾಷ್ಟಾಂಗ ಪ್ರಣಾಮ ಮಾಡುವುದು ಅಥವಾ ಮಂಡಿಯೂರಿ ನಮಸ್ಕರಿಸುವುದು ಒಂದು ದೈಹಿಕ ವ್ಯಾಯಾಮವೂ ಆಗಿದೆ. ಸಾಮಾನ್ಯವಾಗಿ, ದೇವಸ್ಥಾನಗಳಿಗೆ ಭೇಟಿ ಕೊಡುವುದು ಬೆಳಿಗ್ಗೆ ಅಥವಾ ಸಂಜೆ. 

ಉದಯಿಸುತ್ತಿರುವ ಅಥವಾ ಅಸ್ತಂಗತನಾಗುತ್ತಿರುವ ಸೂರ್ಯನ ಕಿರಣಗಳು ನಮ್ಮ ಚರ್ಮದ ಆರೋಗ್ಯಕ್ಕೆ-ಕಾಂತಿಗೆ ಪೂರಕವಾದ ʼಡಿʼ ವಿಟಮಿನಗ ಅನ್ನು ಹೇರಳವಾಗಿ ಒದಗಿಸುತ್ತದೆ. ದೇವರ ಬಲದಿಂದ ಎಡಕ್ಕೆ ಪ್ರದಕ್ಷಿಣೆ ಬರುವುದು, ಮೆದುಳಿನ ವ್ಯವಸ್ಥೆಯ ಜೊತೆ ಸರಿಯಾಗಿ ಹೊಂದಿಕೆಯಾಗುತ್ತದೆ. ಅಪ್ರದಕ್ಷಿಣೆ (ಎಡದಿಂದ ಬಲಕ್ಕೆ) ಮಾಡಿದರೆ, ಅದರಿಂದ ಭಕ್ತನಿಗೆ ಅಸುಖ ಎನಿಸೀತು. ಪ್ರದಕ್ಷಿಣೆ ಭಕ್ತನನ್ನು ಭಗವಂತನ ಸನಿಹಕ್ಕೆ ಒಯ್ಯಬಲ್ಲದು. ಈ ಜನ್ಮದ, ಅಷ್ಟೇ ಏಕೆ, ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮಗಳೂ ಕಳೆದು ಮನುಷ್ಯ ಪರಿಶುದ್ಧನಾಗುತ್ತಾನೆ. 

ಪ್ರದಕ್ಷಿಣೆಗೆ ಅಂಥಹ ಶಕ್ತಿಯಿದೆ. ಆದರೆ, ಎತ್ತು ಗಾಣ ಸುತ್ತಿದಂತೆ ಪ್ರದಕ್ಷಿಣೆ ಮಾಡಿದರೆ ಪ್ರಯೋಜನವಿಲ್ಲ, ಚಿತ್ತಶುದ್ಧಿಯಿಂದ ದೇವರನ್ನು ಧ್ಯಾನಿಸುತ್ತಾ ಪ್ರದಕ್ಷಿಣೆ ಮಾಡಿದರೆ ಅದಕ್ಕೆ ಕೋಟಿಯಾಗಗಳ ಫಲವಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ದೇವಸ್ಥಾನದ ಹೊರ ಆವರಣದಲ್ಲಿ ಪ್ರದಕ್ಷಿಣೆ ಮಾಡಿದರೆ ಅದರ ಫಲ ೆನ್ನಷ್ಟು ಹೆಚ್ಚು. ಪ್ರದಕ್ಷಿಣೆ ವೇಳೆ ತಾವರೆಯ ಮೊಗ್ಗಿನಂತೆ ಎರಡೂ ಕೈಗಳನ್ನೂ ಜೋಡಿಸಿ, ಮುಗಿದು, ನಿಧಾನವಾಗಿ ಸುತ್ತು ಬರಬೇಕು. ನಿರ್ಮಲ ಮನಸ್ಸಿನಿಂದ ದೇವರನ್ನು ಧ್ಯಾನಿಸಬೇಕು. 

ಮೊದಲ ಸುತ್ತು ಮುಗಿದಾಗ ನಮ್ಮ ಪಾಪಗಳು ಪರಿಹಾರವಾಗುತ್ತವೆ, ಎರಡನೇ ಸುತ್ತಿಗೆ ದೇವರು ಸಂಪ್ರೀತಗೊಳ್ಳುತ್ತಾನೆ, ಮೂರನೇ ಸುತ್ತಿಗೆ ಆಶೀರ್ವದಿಸಿ, ಸಕಲ ಸೌಭಾಗ್ಯ ಕರುಣಿಸುತ್ತಾನೆ. ಗಣೇಶನಿಗೆ ಒಂದು, ಸೂರ್ಯನಿಗೆ ಎರಡು, ಶಿವನಿಗೆ ಮೂರು, ದೇವಿ ಮತ್ತು ವಿಷ್ಣುವಿಗೆ ನಾಲ್ಕು ಹಾಗೂ ಅಶ್ವತ್ಥವೃಕ್ಷಕ್ಕಾದರೆ ಏಳು ಪ್ರದಕ್ಷಿಣೆ ಹಾಕುವುದು ವಾಡಿಕೆ. ಬೆಳಗಿನ ಪ್ರದಕ್ಷಿಣೆ ಖಾಯಿಲೆ ನಿವಾರಣೆಗೆ, ಮಧ್ಯಾಹ್ನ ಇಷ್ಟಾರ್ಥಪ್ರಾಪ್ತಿಗೆ, ಸಂಜೆಯದಾದರೆ ಪಾಪನಾಶಕ್ಕೆ, ರಾತ್ರಿಯದಾದರೆ ಮೋಕ್ಷಸಾಧನೆಗೆ; 

ಪ್ರದಕ್ಷಿಣೆ ಪೂರ್ಣಗೊಳಿಸಿದ ಬಳಿಕ ದೇವರ ಮುಂದೆ ಬಂದು ಕೈ ಮುಗಿದು ಪ್ರಾರ್ಥಿಸಬೇಕು.
ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ?
ಸ್ತ್ರೀಯರು ದೇವಸ್ಥಾನ ಅಥವಾ ಮನೆಯಲ್ಲಿ ದೇವರ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ. 

ಸಾಷ್ಟಾಂಗ ಎಂದರೆ, ಎಂಟು ಅಂಗಗಳನ್ನು ಬಳಸಿ ಮಾಡುವ ವಂದನೆ. ಹಾಗೆ ನಮಸ್ಕರ ಮಾಡುವಾಗ ಎರಡೂ ಕಾಲುಗಳ ಹೆಬ್ಬೆರಳುಗಳು, ಮೊಣಗಂಟು, ಎದೆ ಮತ್ತು ಹಣೆ ಇವುಗಳನ್ನು ನೆಲಕ್ಕೆ ಮುಟ್ಟಿಸಬೇಕು. ಈ ಭಂಗಿಯಲ್ಲಿ ಎರಡೂ ಕೈಗಳನ್ನು ತಲೆಯ ಮುಂಭಾಗಕ್ಕೆ ಚಾಚಿ, ಒಂದಕ್ಕೊಂದು ಜೋಡಿಸಿ ಭಕ್ತಿಯಿಂದ ನಮಸ್ಕರಿಸುತ್ತಾ ಪ್ರಾರ್ಥಿಸಬೇಕು. 

ಸ್ತೋತ್ರಗಳನ್ನು ಪಠಿಸಲು ಶಬ್ದಗಳನ್ನು ಬಳಸಿ, ದೇವರನ್ನು ಕಣ್ತುಂಬಾ ನೋಡಿ, ಮನಸ್ಸಿನಲ್ಲೇ ಧ್ಯಾನಿಸಬೇಕು. ಇಲ್ಲಿಗೆ ಸಾಷ್ಟಾಂಗ ನಮಸ್ಕಾರ ಪೂರ್ಣವಾಗುತ್ತದೆ. ಈ ಬಗೆಯ ನಮಸ್ಕಾರ ಸ್ತ್ರೀಯರ ಶರೀರಕ್ಕೆ ಹೊಂದಿಕೊಳ್ಳುವುದಿಲ್ಲ. 

ಪುರುಷರಿಗೂ ಸರಿಯಾದ ಕ್ರಮದಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವುದು ತುಸು ಕಷ್ಟವೇ. ಈ ಭಂಗಿಯಿಂದಾಗಿ ಗರ್ಭಕೋಶದ ಮೇಲೆ ಒತ್ತಡ ಉಂಟಾಗಿ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಇರುವುದರಿಂದ, ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡದಿರುವುದು ಒಳಿತು. ಅವರು ಕೆಳಮುಖವಾಗಿ ಬೋರಲು ಮಲಗುವುದಕ್ಕೂ ಆಕ್ಷೇಪವಿರುವುದು. 

ಇದೇ ಕಾರಣಕ್ಕಾಗಿ ದೇವರ ಮುಂದೆ ಮೊಣಕಾಲೂರಿ, ನೆಲಮಟ್ಟಕ್ಕೆ ಬಾಗಿ ನಮಸ್ಕರಿಸಿದರೆ, ಅವರ ದೇಹಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಹಾಗೆ ನಮಸ್ಕಾರ ಮಾಡುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ಇದುವೇ ನಮ್ಮ ಸಂಸ್ಕೃತಿ
***

ಪುರಾತನ ದೇವಸ್ಥಾನಗಳ ದಶ೯ನ ಮಾಡುವ ಉದ್ಧೇಶ 

ಅತಿ ಹೆಚ್ಚು ಧನಾತ್ಮಕ ಶಕ್ತಿ (Positive Energy) ಇರುವ ಸ್ಥಳಗಳನ್ನು ಆಯ್ದು ಅಂತಾ ಸ್ಥಳಗಳಲ್ಲಿ ಪುರಾತನ ದೇವಸ್ಥಾನಗಳನ್ನು ನಿಮಿ೯ಸಿರುತ್ತದೆ.  
ಈ ಸ್ಥಳಗಳು ಪ್ರಚಂಡ ಪಂಚ ಮಹಾಭೂತಗಳ (ಪ್ರಥ್ವಿ, ಜಲ, ತೇಜ, ಆಕಾಶ, ವಾಯು) ಕೇಂದ್ರೀಕ್ರತ ಸ್ಥಾನಗಳಾಗಿರುತ್ತವೆ. 
ತಾಮ್ರವು ವಿಧ್ಯುತ್ ವಾಹಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.  
ಸವ೯ಸಾಧಾರಣವಾಗಿ ಅಧಿಕ ಪ್ರಮಾಣದಲ್ಲಿ ಧನಾತ್ಮಕ ಶಕ್ತಿ (Positive Energy) ಇರುವ ಸ್ಥಳವನ್ನು ಗುರುತಿಸಿ, ಅಲ್ಲಿ ಬಾವಿಯನ್ನುತೋಡಿ ಅದರೊಳಗೆ ಒಂದು ತಾಮ್ರದ ಕಳಸ ಅಥವಾ ತಾಮ್ರದ ತುಂಡೊಂದನ್ನು ಹಾಕಿ ಅದಕ್ಕೊಂದು ತಾಮ್ರದ ತಂತಿಯನ್ನು connect ಮಾಡಿ ಆ ತಂತಿಯನ್ನು ದೇವರ ಪಾಣಿಪೀಠಕ್ಕೆ (ದೇವರ ಮೂತಿ೯ಯ ಕೆಳಗೆ) ಸಂದಿಸಿರುವದು. 
ಬಳಿಕ ವಿಧಿಪೂವ೯ಕವಾಗಿ ಮೂತಿ೯ ಪ್ರತಿಷ್ಠಾಪನೆ ಮಾಡಲಾಗುವದು. ಇದು ಪುರಾತನ ಕಾಲದಲ್ಲಿ ದೇವಾಲಯಗಳನ್ನು ಕಟ್ಟುತ್ತಲಿದ್ದ ವಿಧಿವತ್ತಾದ ಕ್ರಮ ನಿಯಮವಾಗಿದೆ. 
ಈಗ, ದೇವಸ್ಥಾನವನ್ನು ಪ್ರವೇಶ ಮಾಡುವಾಗ ಏನು ಮಾಡಬೇಕು, ಯಾವರೀತಿಯಲ್ಲಿ ದೇವರ ದರುಶನ ಪಡೆಯಬೇಕು ಎಂಬ ನಿಯಮ ಪಾಲನೆಯನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳೋಣ. 
1) ದೇವಸ್ಥಾನ ಪ್ರವೇಶ ಮಾಡುವ ಮೊದಲು ನಾವು ಪಾದರಕ್ಷೆ (ಚಪ್ಪಲಿ/ಶೂ) ತೆಗೆದು  ಕೈ, ಕಾಲುಗಳನ್ನು ತೊಳೆದುಕೊಂಡ ಬಳಿಕವೇ ದೇವಸ್ಥಾನವನ್ನು ಪ್ರವೇಶ ಮಾಡುವದು. ಇದರಲ್ಲಿ ಸ್ವಚ್ಛತೆಯ ಕಾರಣವಿದೆ. ನಾವು ಪಾದರಕ್ಷೆಯನ್ನು ಧರಿಸಿ ಎಲ್ಲೋ ತಿರುಗುತ್ತೇವೆ. ದೇವಸ್ಥಾನದಲ್ಲಿ ಶುಭ್ರವಾದ ಪವಿತ್ರ ಕಂಪನ positive and pure vibrations ಹಾಳಾಗಬಾರದು, ಧೂಶಿತವಾಗಬಾರದು ಎಂಬುದೂ ಒಂದು ಉದ್ದೇಶ. ಇದರ ಹಿಂದೆ ಒಂದು ಮಹತ್ತರವಾದ ವೈಜ್ಞಾನಿಕ ಸತ್ಯ ಅಡಗಿದೆ. ದೇವಸ್ಥಾನದ ಒಳಗಡೆ positive energy ಉತ್ತಮವಾಗಿದ್ದು ನಾವು ಬರಿಕಾಲಲ್ಲಿ ನಡೆಯುವಾಗ ನಮ್ಮ ಪಾದದ ಹಸ್ತ (ಪಾದದ ತಳಬಾಗ) ಮೂಲಕವಾಗಿ positive energy ನಮ್ಮ ದೇಹವನ್ನು ಪ್ರವೇಶವಾಗುವುದು. ಅಲ್ಲದೆ, ದೇವಸ್ಥಾನ ಪ್ರವೇಶ ಮಾಡುವಾಗ ಮೇಲುಡುಪು (shirt, baniyan) ಗಳನ್ನು ತೆಗೆದು ದೇವಸ್ಥಾನದ ಒಳ ಪ್ರವೇಶ ಮಾಡಬೇಕೆಂಬ ನಿಯಮವಿದೆ. ಕಾರಣ, ದೇವಾಲಯದ ಪರಿಸರದಲ್ಲಿನ positive energy ನಮ್ಮ ದೇಹವನ್ನು ಪ್ರವೇಶಿಸಬೇಕೆಂಬ ಉದ್ದೇಶ. ನಮ್ಮ ಪಂಚೇಂದ್ರಿಯ ಗಳಲ್ಲಿ ಶುಭ positive energy ಸ್ವೀಕರಿಸುವಲ್ಲಿ ಅಡಚಣೆ ಆಗಬಾರದೆಂಬ ಉದ್ದೇಶ. 
2) ಮಂದಿರವನ್ನು ಪ್ರವೇಶಿಸುವ ಮುನ್ನ ಗಂಟೆ ಬಾರಿಸುವುದು. ಇದರ ಉದ್ದೇಶಗಳು. 
ಈ ಗಂಟೆಗಳು ವಿಶಷ್ಟ ಸಪ್ತ ಧಾತುಗಳನ್ನು ಯೋಗ್ಯ ಪ್ರಮಾಣದಲ್ಲಿ ಉಪಯೋಗಿಸಿ ತಯಾರಿಸಲಾಗುತ್ತದೆ. ಗಂಟೆ ಬಾರಿಸಿದ ಬಳಿಕ ಅದರ ತೀವ್ರತೆ ಸುಮಾರು ಏಳು ಸೆಕೆಂಡುಗಳ ಕಾಲ ಪ್ರತಿಧ್ವನಿತ ನಾದ ನಿಮಾ೯ಣಮಾಡುವ ರೀತಿಯಲ್ಲಿ ನಿಮಾ೯ಣ ಮಾಡಿರುತ್ತದೆ. ಗಂಟೆ ಬಾರಿಸಿದ ಕೂಡಲೆ ಮುಂದೆ ಹೋಗದೆ ಅದರ ಕೆಳಗೆ ನಿಂತು ಅದರ ನಾದ ಕಂಪನ (Vibration) ನಮ್ಮೊಳಗೆ ಸಮಾವೇಶಿಸುವಂತಾಗ ಬೇಕು. ಇದರಿಂದ ನಮ್ಮ ದೇಹದಲ್ಲಿನ ಸಪ್ತ ಚಕ್ರಗಳ ಜಾಗರಣೆ ಆಗುತ್ತದೆ. ಇದರೊಂದಿಗೆ ನಮ್ಮ ಬಲ ಮತ್ತು ಎಡ ಮೆದುಳು ಏಕತ್ರಿಕವಾಗಿ (in coordination) ಕಾಯ೯ನಿರತ  ವಾಗುತ್ತದೆ. ಅದೇರೀತಿ ನಮ್ಮ ಮನಸ್ಸಿನ ನಕಾರಾತ್ಮಕ (Negative) ವಿಚಾರಗಳು ದೂರವಾಗಿ ಹೋಗುತ್ತವೆ. ಗಭ೯ಗ್ರಹದಲ್ಲಿನ ಮೂತಿ೯ಯಲ್ಲೂ ಈ vibration ಪ್ರತಿಬಿಂಬಿಸುತ್ತದೆ. 
3) ನಮ್ಮ ಪಂಚೇಂದ್ರಿಯಗಳು (five senses) ಅಂದರೆ ಶಬ್ಧ, ಸ್ಪಷ೯, ರೂಪ, ರಸ, ಗಂಧ ಇವು ಚೇತರಿಸಿಕೊಳ್ಳುವದು. 
a) ಕಪೂ೯ರ ಉರಿಸುವದು - ಧ್ರಷ್ಠಿ. 
b) ಕಪೂ೯ರಾರತಿ ಮೇಲಿಂದ ಕೈ ತಿರುಗಿಸಿ ಕಣ್ಣಿಗೆ ಮುಟ್ಟಿಸಿಕೊಳ್ಳುವದು - ಸ್ಪಷ೯. 
c) ಮೂತಿ೯ ಮೇಲೆ ಹೂವು ಮತ್ತು ಹೂವಿನ ಹಾರ ಹಾಕುವುದು; ಹೂವಿನ ಆರೋಮಾದಿಂದ - ಸುವಾಸನೆ. (ಗಂದ).
d) ಕಪೂ೯ರ  ಮತ್ತು ತುಳಸಿ ಪತ್ರೆಗಳನ್ನು ಹಾಕಿದ ತೀಥ೯ ಪ್ರಾಶನ. ಈ ತೀಥ೯ವನ್ನು ತಾಮ್ರದ ತಂಬಿಗೆ ಅಥವಾ ಬೆಳ್ಳಿಯ ತಂಬಿಗೆಯಲ್ಲಿ ಸುಮಾರು 8 ಗಂಟೆಗಳಕಾಲ ಇಟ್ಟಿರುವುದರಿಂದ ನಮ್ಮ ದೇಹದಲ್ಲಿನ ಶೀತ, ಕಫ, ಜ್ವರ ಇತ್ಯಾದಿಗಳು ದೂರಾಗುತ್ತವೆ. 
e) ಗಂಟಾನಾದ ಮತ್ತು ಮಂತ್ರೋಚ್ಛಾರಣೆ ಕೇಳುವುದು. 
ಈ ರೀತಿಯಲ್ಲಿ ಉದ್ಧೀಪಿತಾವಸ್ಥೆಯಲ್ಲಿ ಸ್ವೀಕರಿಸುವ (receiving mode) ಗಭ೯ಗ್ರಹದಲ್ಲಿ positive energy ಸ್ವೀಕರಿಸುವುದು. 
ಮೂತಿ೯ಯ ಹಿಂಬಾಗದಲ್ಲಿ, ಅದಿ-ಬದಿಯಲ್ಲಿನ positive energy ಪಡೆಯಲು ಪ್ರದಕ್ಷಿಣೆ ಮಾಡುವುದು. 
ಇದೆಲ್ಲದರ ಬಳಿಕ ಗಡಿಬಿಡಿಯಿಂದ ಕೂಡಲೆ ಹೊರಟು ಹೋಗಬಾರದು. ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತಿರಬೇಕು. ಶರೀರದಲ್ಲಿ positive energy settle ಆಗಲು ಸಮಯ ಬೇಕಾಗುತ್ತದೆ. ಶಾಂತತೆಯಿಂದ, ಆನಂದದಿಂದ, ಉಲ್ಲಾಸದಂದ, energy ಯಿಂದ ಸ್ವಲ್ಪ ಸಮಯ ಕಳೆದು ಬಳಿಕ ಹೊರಡಿರಿ. 
ನಮ್ಮ ಮುಂದಿನ ಪೀಳಿಗೆಯವರಿಗೆ ದೇವಸ್ಥಾನಕ್ಕೆ ಯಾಕೆ ಹೋಗಬೇಕೆಂಬ ಆತಂಕದ ಪ್ರಶ್ನೆ ಇರುತ್ತದೆ. ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವ ಉದ್ದೇಶವನ್ನು ದ್ಯಾನದಲ್ಲಿಟ್ಟು ದೇವಸ್ಥಾನಕ್ಕೆ ಹೋಗಿ. ಮುಂದಿನ ಪೀಳಿಗೆಯವರಿಗೆ ಈ ಜ್ಞಾನವನ್ನು ತಲುಪಿಸಲು ಸಹಕರಿಸಿರಿ. 
ಮೂಲತ: ಹಿಂದೂ ಧಮ೯ವು ಏಕಮೇವ ಧಮ೯. 
ಇದರ ಬುನಾದಿಯಲ್ಲಿ ವಿಜ್ಞಾನ ನಿಂತಿದೆ.
*********

ದೇವಸ್ಥಾನಕ್ಕೆ ಹೋಗ ಬೇಕೆ ?  

ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದ ರಿಂದ ಆರೋಗ್ಯವರ್ಧಿಸುತ್ತದೆ...!!! ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..  ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ...  ದೇವರ ಮೂಲಸ್ಥಾನ ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು... ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ.


ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ
(Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!!

ಇನ್ನು ತೀರ್ಥಸೇವನೆ... 

ತೀರ್ಥವನ್ನು ಮಾಡುವುದು ಹೇಗೆ...??? ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ... ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ... ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ..

ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ...ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು... ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ... ಆ ಕಾರಣದಿಂದಲೇ ಪುರುಷರ ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ.

ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭ ಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.

ಹಿಂದೂಗಳು ಯಾಕೆ ದೇವಸ್ಥಾನದಲ್ಲಿ ಪೂಜೆ ಮಾಡ್ತಾರೆ ಗೊತ್ತಾ

ಭಾರತ ದೇಶವನ್ನು ತನ್ನ ಪರಂಪರೆ ಹಾಗೂ ಸಂಸ್ಕೃತಿಗಾಗಿ ಹೆಸರಾದಂತಹ ದೇಶ. 

ಹಿಂದೂಗಳು ಮಂದಿರಗಳಲ್ಲಿ ಪೂಜೆ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.


ಪ್ರತಿಷ್ಠಾಪನ ಸ್ಥಾನ : ಯಾವುದೇ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾದರೆ ಅಲ್ಲಿ ಸಕಾರಾತ್ಮಕ ಗುಣಗಳಿರುವ ದಿಕ್ಕನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಉತ್ತರದ ಕಡೆ ದೇವರ ಮೂರ್ತಿ, ದಕ್ಷಿಣದ ಕಡೆ ದೇವರ ಮಂದಿರವಿದ್ದರೆ ಒಳ್ಳೆಯದು. ಇದರಿಂದ ಸಕಾರಾತ್ಮಕ ಗುಣಗಳ ಫೀಲ್‌ ಆಗುತ್ತದೆ.

ಚಪ್ಪಲಿ ಹೊರಗಿಡುವುದು :ಹಿಂದಿನ ಕಾಲದಲ್ಲಿ ದೇವಸ್ಥಾನದ ನೆಲವನ್ನು ಪಾಸಿಟಿವಿಟಿಯನ್ನು ಜನರ ಒಳಗೆ ಸಂಚರಿಸುವಂತೆ ನಿರ್ಮಿಸಲಾಗುತ್ತಿತ್ತು. ಹಾಗಾಗಿ ಚಪ್ಪಲಿ ಹಾಕಿ ಹೋಗುವಂತಿರಲಿಲ್ಲ.  ನಂತರ ದೇವಸ್ಥಾನದಲ್ಲಿ ಬರೀ ಕಾಲಿನಲ್ಲಿ ಹೋಗುವುದು ಪದ್ಧತಿಯಾಗಿಬಿಟ್ಟಿದೆ.
ಗಂಟೆ ಬಾರಿಸುವುದು : ಮಂದಿರದ ಗಂಟೆ ಬಾರಿಸಿದಾಗ ಮೆದುಳಿನ ಎಡ ಹಾಗೂ ಬಲ ಭಾಗದಲ್ಲಿ ಒಂದು ರೀತಿಯ ಬೆಳಕು ಉತ್ಪನ್ನವಾಗುವ ರೀತಿಯಲ್ಲಿ ಮಂದಿರದ ಗಂಟೆಯನ್ನು ನಿರ್ಮಿಸಲಾಗುತ್ತಿತ್ತು. ಗಂಟೆ ಬಾರಿಸುತ್ತಿದ್ದಂತೆ ಅದು ಏಳು ಸೆಕೆಂಡ್‌ ವರೆಗೆ ಗಂಟೆ ಶಬ್ಧ ನಿಮ್ಮ ಮೆದುಳಿನಲ್ಲಿ ಏಕೋ ಆಗುತ್ತಿರುತ್ತದೆ.  ಇದರ ಮೂಲಕ ನಿಮ್ಮ ಶರೀರದ ಏಳು ಹೀಲಿಂಗ್‌ ಸೆಂಟರ್‌ ಆಕ್ಟಿವ್ ಆಗುತ್ತದೆ.
ತಿಲಕ ಹಚ್ಚಿಕೊಳ್ಳುವುದು :ತಿಲಕವನ್ನು ಎರಡು ಹುಬ್ಬುಗಳ ನಡುವೆ ಹಚ್ಚಿಕೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರ ತಾಂತ್ರಿಕ ಬಿಂದುವಾಗಿರುತ್ತದೆ. ತಿಲಕ ಹಚ್ಚಿಕೊಳ್ಳುವುದರಿಂದ ಶರೀರದಲ್ಲಿ ಶಕ್ತಿ ಸಂಚಾರ ಸರಿಯಾಗುತ್ತದೆ. ಜೊತೆಗೆ ನಿಮ್ಮ ಏಕಾಗ್ರತೆಯ ಕ್ಷಮತೆ ಕೂಡಾ ಹೆಚ್ಚುತ್ತದೆ.
ಕರ್ಪೂರ ಉರಿಸುವುದು :ಸಾಮಾನ್ಯವಾಗಿ ಮಂದಿರದಲ್ಲಿ ದೇವರ ಮೂರ್ತಿಯನ್ನು ಸ್ಥಾಪಿಸಿರುವಲ್ಲಿ ಕತ್ತಲೆ ಇರುತ್ತದೆ. ನೀವು ಕರ್ಪೂರ ಹಚ್ಚಿರುವುದನ್ನು ನೋಡಿದರೆ ನಿಮ್ಮ ಕಣ್ಣಿಗೆ ಉತ್ತಮ.

ಆರತಿ ತೆಗೆದುಕೊಳ್ಳುವುದು : ನೀವು ಆರತಿ ತೆಗೆದುಕೊಳ್ಳಲು ಬೆಂಕಿಯತ್ತಕೈ ಚಾಚಿದಾಗ  ನಿಮ್ಮ ಕೈಯನ್ನು ಬಿಸಿಯಾಗಿಸುತ್ತದೆ. ಅದೇ ಕೈಯಿಂದ ನೀವು ನಿಮ್ಮ ಕಣ್ಣಿಗೆ ಒತ್ತಿಕೊಂಡಾಗ ಅದು ನಿಮ್ಮ ಸೆನ್ಸ್‌ನ್ನು ಆಕ್ಟಿವ್‌ ಮಾಡಿಸುತ್ತದೆ.
*****

ಪ್ರಶ್ನೆ : ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
ಉತ್ತರ : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ. ಈ ಜಗತ್ತನ್ನು ಆಲೋಚಿಸಿ ಮತ್ತು ಮುಂದಿನ ಪೀಳಿಗೆಯೊಂದಿಗೆ ಹಂಚಿಕೊಳ್ಳಿ.  
ಶ್ಲೋಕ ಹೀಗಿದೆ :
* ಅನಾಯಾಸೇನ್ ಮರಣಂ,
ವಿನಾ ದೈನೇನ ಜೀವನಂ |
ದೇಹಾಂತ ತವ ಸಾನಿಧ್ಯಮ್
ದೇಹಿಮೇ ಪರಮೇಶ್ವರ ||* 
ಈ ಷ್ಲೇಕದ ಅರ್ಥ
ಅನಾಯಾಸೇನ್ ಮರಣಂ* ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ  ಜೀವನದ ಅಂತ್ಯ ಆಗಬೇಕು.
ವಿನಾ ದೈನೇನ ಜೀವನಂ ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ,  ಅಥವಾ ಅಸಹಾಯಕನಾಗಿರಬಾರದು.  ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
ದೇಹಾಂತ ತವ ಸಾನಿಧ್ಯಮ್ ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು.  ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು.  ಅವನನ್ನು ನೋಡಿ ಪ್ರಾಣ ಬಿಟ್ಟರು
 ದೇಹಿಮೇ ಪರಮೇಶ್ವರ
ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು. 

* ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ. * ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ.  ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು.  ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ.  ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ.  ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.

      'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ. *
           ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು.  ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ. ನಿಮ್ಮ ಕಣ್ಣುಗಳನ್ನು ದೇವರ ನ್ವರೂಪದಿಂದ ತುಂಬಿಸಿ. 
       * ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ ದೇವರು ಧ್ಯಾನದಲ್ಲಿ ಬರದಿದ್ದರೆ, ಮತ್ತೆ ದೇವಾಲಯಕ್ಕೆ ಹೋಗಿ ಮತ್ತೆ ನೋಡಿ.
****
ನಮಸ್ಕಾರ - ಚಮತ್ಕಾರ

ಗುರುಹಿರಿಯರಿಗಾಲಿ, ದೇವರಿಗಾಗಲಿ
ಸಾಷ್ಟಾಂಗವಾಗಲಿ, ಹಾಗೇ ಆಗಲಿ 
ಶಿರ ಬಾಗಿ,  ಎರಡೂ ಕೈ ಜೋಡಿಸಿಯೇ ನಮಸ್ಕರಿಸುತ್ತೇವೆ. ವಿದೇಶಿ ಸಂಸ್ಕ್ರತಿ
ಯಂತೆ ಕೈ ಎತ್ತಿಯೋ ,ಬೀಸಿಯೋ ಅಲ್ಲ. ಇದು ನಮ್ಮ ಅಮೂಲ್ಯ ಸಂಸ್ಕ್ರತಿ.
ಗುರು ಹಿರಿಯರಿಗಾಗಲಿ ಯಾರಿಗೇ ಆಗಲಿ ನಮಸ್ಕಾರ ಮಾಡಿದರೂ ಅದು
'ಗುಹಾಶಯೈವ'  ಅವರ ಅಂತರ್ಯಾಮಿ ಪರಮಾತ್ಮನಿಗೇ ಎಂಬುದು ಅನುಸಂಧಾನ. 
ಸರ್ವ ನಮಸ್ಕಾರ ಕೇಶವಂ ಪ್ರತಿ ಗಚ್ಛತಿ.
ಎರಡೂ ಕೈ ಜೋಡಿಸುವದ್ಯಾತಕೆ ? ಎಂಬ  ಚಿಂತನೆ.
- ಕೈ ಎರಡೂ ಜೋಡಿಸುತ್ತೇವೆ.
 - ಕಾಯಾ
ಶಿರ ಬಾಗುತ್ತೇವೆ. - ಮನಸಾ
ಕೃಷ್ಣಾ ನಿನಗೆ ನಮಸ್ಕಾರ ಎನ್ನುತ್ತೇವೆ.
-ವಾಚಾ.
ಕಾಯಾ, ವಾಚಾ, ಮನಸಾ ನಾನು ನಿನ್ನ ಅಧೀನ. ನಿನ್ನಲ್ಲಿ ಶರಣಾಗತಿ.
ಎನ್ನ ಉದ್ಧಾರ ನಿನ್ನ ಹೊಣೆ - ಎಂಬ ಭಾವ.

- ಎರಡು ಕೈ ಎದುರು ಬದಿರು. 
ದೇವರು ಮತ್ತು  ಜೀವ.
ಆತ ಬಿಂಬ ನಾವು ಪ್ರತಿ ಬಿಂಬರು.
ಪ್ರತಿ ಬಿಂಬ ಎಂದಿಗೂ ಬಿಂಬನ ಅಧೀನ. 
ಹೆಬ್ಬೆರಳುಗಳು ನಮ್ಮೆಡೆ.  ಉಳಿದೆಲ್ಲ ಬೆರಳುಗಳು ಅವನೆಡೆ.
ಸ್ವಾಮಿ ನಾನು ನಿನ್ನ ಅಧೀನ.
ನೀನು ಈಶ.ನಾನು ದಾಸಎಂಬ ಭಾವ.

-  ಎರಡೂ ಕೈ - ಐದೈದು ಬೆರಳು ಜೋಡಿಸಿರುತ್ತೇವೆ.
ಪ್ರಾಣಾದಿ ಪಂಚರೂಪದಿಂದ 
ಮುಖ್ಯ ಪ್ರಾಣ ನಮ್ಮಲ್ಲಿ
ಇದ್ದು ಉಸಿರಾಟಾದಿ ಪ್ರಕ್ರಿಯೆ ಮಾಡಿ ನಮ್ಮ ಅಸ್ತಿತ್ವಕ್ಕೆ ಕಾರಣ.
ನಾರಾಯಣಾದಿ ಐದು ರೂಪಗಳಿಂದ
ಪರಮಾತ್ಮ ಅಲ್ಲಿದ್ದು ನಿಯಮನ ಮಾಡುತ್ತಾನೆ. 
ಹೀಗೆ ನಮ್ಮ ಪ್ರಾಣ ಮುಖ್ಯ ಪ್ರಾಣ. ಅವನಿಗೂ ಪ್ರಾಣ ಪರಮಾತ್ಮ. 
ಈ ಅನುಸಂಧಾನ ಇಲ್ಲುಂಟು.

-  ಒಂದು ಕೈಯ ಐದು ಬೆರಳುಗಳು - ಕಣ್ಣು ಕಿವಿ ಮೊದಲಾದ ಪಂಚ ಜ್ಞಾನೇಂದ್ರಿಯದ ಪ್ರತೀಕ.
ಇನ್ನೈದು ಬೆರಳುಗಳು, 
ಕೈ ಕಾಲು ಮೊದಲಾದ ಪಂಚ ಕರ್ಮೇಂದ್ರಿಯಗಳ ಪ್ರತೀಕ.
ಬಾಗಿದ ಶಿರ ಅಲ್ಲಿರುವ ಮನಸ್ಸಿನ ಪ್ರತೀಕ.
ಈ ಏಕಾದಶ ಇಂದ್ರಿಯಗಳು ನೀನು
ಪ್ರೇರಿಸಿದರೆ ಉಂಟು. ಇಲ್ಲದಿರೆ ಇಲ್ಲ.
ಸತ್ ಪಥದಲ್ಲಿ ಸದಾ ಅವುಗಳನ್ನು ಸಾಗಿಸು ಸ್ವಾಮಿ ಎಂಬ ಪ್ರಾರ್ಥನೆ ಹುದುಗಿದೆ ಈ ನಮಸ್ಕಾರದಲ್ಲಿ.
ಮತ್ತೆ ಈ ಏಕಾದಶ ಇಂದ್ರಿಯಗಳ ನಿನಗೆ ಸಮರ್ಪಿಸುವೆ. ನಿನ್ನ ಧ್ಯಾನದಲ್ಲಿಡುವೆ. ಎನಗೆ ಅನುಗ್ರಹಿಸು
ಪ್ರಭು.
ದಶ ಇಂದ್ರಿಯಗಳ ಮೇಲೆ ಮನಸಿನ ನಿಯಂತ್ರಣ.
ಮತ್ತೆ 'ತೈಲ ಧಾರೆಯಂದದಿ ನಿನ್ನಲ್ಲಿ ಮನವ ಕೊಡು ಹರಿಯೇ' ಎಂಬ ಪ್ರಾರ್ಥನೆ ನಮನದಲ್ಲಿದೆ.

- ಭೂಮಿ,ನೀರು,ಅಗ್ನಿ,ವಾಯು,ಆಕಾಶ
ಇವು ಪಂಚಭೂತಗಳು.
ಗಂಧ,ರಸ,ರೂಪ, ಸ್ಪರ್ಶ,ಶಬ್ದ ಇವು ಪಂಚ ತನ್ಮಾತ್ರಾಗಳು. 
ಇವೆಲ್ಲ ನಿನ್ನ ಸೃಷ್ಟಿ.  ನಮಗೆ ಕೊಟ್ಟಿ.
ನಿನ್ನ ಕರುಣೆ.
ಸತ್ ಸಾಧನೆಗೆ ಹಚ್ಚು. ನಿನಗೆ ನಾನು ಚಿರಋಣಿ. ಎಂಬ ಕೃತಾರ್ಥ ಭಾವವೂ ಅಡಗಿದೆ ನಮ್ಮ ನಮಸ್ಕಾರದಲ್ಲಿ.

'ದ್ವಾ ಸುಪರ್ಣಾ -' ಶಾಸ್ತ್ರದ ಮಾತು.
'ಹಕ್ಕಿಗಳೆರಡು ಐದಾವಪ್ಪಾ --' ಪುರುಂದರ ದಾಸರ ಮಾತು.
ಈ ದೇಹದಲ್ಲಿ ಎರಡು ಹಕ್ಕಿಗಳಿವೆ
'ಆತ್ಮ', 'ಪರಮಾತ್ಮ'. 
ಎರಡೂ ಜೊತೆಯೆ ಇರುತ್ತವೆ.
ನಮಸ್ಕಾರದಲ್ಲಿ ಎರಡೂ ಕೈ ಜೋಡಿಸಿವೆ. 
ಒಂದು ಆತ್ಮ ಇನ್ನೊಂದು ಪರಮಾತ್ಮ.
ಇಂಥ ಅನವರತ ಅಗಲದ ಸಖ ನೀನಾಗಿರು 
ಎಂಬ ಬಯಕೆ ನಮ್ಮ ಮನದಲ್ಲಿ 
ಮತ್ತೆ ನಮನದಲ್ಲಿ.
ಒಂದು ಕೈ ಅಂತರಂಗ.
ಇನ್ನೊಂದು ಬಹಿರಂಗದ ಪ್ರತೀಕ.
ಎರಡೂ ಒಂದಾಗ ಬೇಕು.
ಇಲ್ಲವಾದರೆ ಡಂಭಾಚಾರವಾದೀತು.
ಅದು ಪರಮಾತ್ಮನಿಗೆ ಸೇರದು.
ಅದಕ್ಕಾಗಿ ಎರಡೂ ಕೈ ಜೋಡಣೆ.
ಎರಡನ್ನು ಒಂದು ಮಾಡೆಂಬ ಪ್ರಾರ್ಥನೆ.

ಒಂದು ಕೈ - ಮನ. ಇನ್ನೊಂದು ಬುದ್ಧಿ.
ಎರಡೂ ನಿನ್ನ ಚರಣದಲ್ಲಿ.
ಒಂದು ಕೈ - ಜ್ಞಾನ. ಇನ್ನೊಂದು ಭಕ್ತಿ.
ನಿನ್ನ ಮಹಿಮೆಯ ಜ್ಞಾನ ಕೊಡು.
ನಿನ್ನಲ್ಲಿ ಅಚಲ ಭಕ್ತಿ ಕೊಡು.
ಅದಕ್ಕಾಗಿಯೇ ಎರಡೂ ಕೈ ಜೋಡಣೆ.

ಧನ ಕನಕಾದಿ ಏನು ತುಂಬಿ ಕೊಟ್ಟರೂ
ಒಲಿಯದ ಭಗವಂತನನ್ನು
ಭಕ್ತಿ ತುಂಬಿದ ನಮಸ್ಕಾರ ಸೆಳೆದು ತಂದು ಕೊಡುವದೇ ಚಮತ್ಕಾರ.
ಇಂಥ ಮುಖ್ಯ ಪ್ರಾಣಾಂತರ್ಗತ ಲಕ್ಮೀನರಸಿಂಹ ದೇವರಿಗೆ ಶಿ ಸಾ ನಮಸ್ಕಾರ ಮಾಡೋಣ.
ಡಾ.ವಿಜಯೇಂದ್ರ ದೇಸಾಯಿ.
      ಶ್ರೀ ಕೃಷ್ಣಾರ್ಪಣಮಸ್ತು
***
ಶ್ರೀದೇವೇಂದ್ರತೀರ್ಥರ ನುಡಿ ಮುತ್ತುಗಳು 

ಸಾಷ್ಟಾಂಗ ನಮಸ್ಕಾರ ಮಾಡುವಾಗ ಸಂಪುಟಾಕಾರವಾಗಿ ಪಂಚಾಂಗ ನಮಸ್ಕಾರ ಮಾಡಬೇಕು. ಎರಡುಕರ, ಎರಡು ಪಾದ ಶಿರಸ್ಸಿನಿಂದ ಮಾಡುವ ನಮಸ್ಕಾರವು ಪಂಚಾಂಗ ನಮಸ್ಕಾರ.
***

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು? ಅನ್ನುವುದಕ್ಕೆ ನಮ್ಮ ಪೂರ್ವಜರು  ಸರಿಯಾದ ಕ್ರಮವನ್ನು  ತಿಳಿಸಿರುತ್ತಾರೆ . ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ...‌‌
ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ  ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು  ಹೀಗೆ ಹೇಳಬೇಕು..
ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ  ತತ್ವ ಉಪದೇಶ ಮಾಡಿಸು, ವೈಕುಂಠಕ್ಕೆ ಕರೆದೋಯ್ದು  ನಿನ್ನ ದರುಶನ ಮಾಡಿಸು ""  ಎಂದು ಪ್ರಾರ್ಥಿಸಿ
ನಂತರ ಹೊರಗಿನಿಂದಲೇ  ದೇವರ ದರ್ಶನ ಮಾಡಬೇಕು..ಅದಕ್ಕೆ ಧೂಳಿದರ್ಶನ  ಅಂತಾರೆ  
ಧೂಳಿ ದರ್ಶನಂ ಪಾಪ ನಾಶನಂ  
ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ . 
ನಂತರ 

ತಲೆಯಲ್ಲಿರುವ ಚಿಂತೆಗಳನ್ನೆಲ್ಲ ಬಿಟ್ಟು  ಶಿಖರ ದರ್ಶನ ಮಾಡಿ 
ಶಿಖರ ದರ್ಶನಂ  ಚಿಂತಾ ನಾಶನಂ
ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು  ತೊಳೆದು  ದೇವಸ್ಥಾನ ಒಳಗಡೆ ಪ್ರವೇಶಮಾಡಿ  ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ  ಅದಕ್ಕೂ ಒಂದು ಕ್ರಮವಿದೆ .

ಮೊದಲು ಪಾದ ದರ್ಶನ ಮಾಡಿ 
ಪಾದ ದರ್ಶನಂ ಪಾಪನಾಶನಂ ...‌

ನಂತರ 

ಕಟಿ ದರ್ಶನ 
ಕಟಿ ದರ್ಶನಂ  ಕಾಮನಾಶನಂ 

ನಂತರ 
ನಾಭಿ ದರ್ಶನ 
ನಾಭಿ ದರ್ಶನಂ ನರಕ ನಾಶನಂ 

ನಂತರ 
ಕಂಠ ದರ್ಶನ 
ಕಂಠ ದರ್ಶನಂ  ವೈಕುಂಠ ಸಾಧನಂ 

ನಂತರ 
ಮುಖ ದರ್ಶನ 
ಮುಖ ದರ್ಶನಂ ಮುಕ್ತಿ ಸಾಧನಂ 

ನಂತರ 
ಕಿರೀಟ ದರ್ಶನ
ಕೀರಿಟ ದರ್ಶನಂ ಪುನರ್ಜನ್ಮ ನಾಶನಂ

ನಂತರ 
 ಸರ್ವ ದರ್ಶನ
ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ .‌‌‌ 
ಸರ್ವಾಂಗ ದರ್ಶನ ಮಾಡಬೇಕು.. 
ಇದು ಕ್ರಮ....
               
Ilಶ್ರೀ ಕೃಷ್ಣಾರ್ಪಣಮಸ್ತುll
***


ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ
ವರ್ಧಿಸುತ್ತದೆ...!!!
ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..
ಗೆಳೆಯರೇ..
ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ
ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ..
ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ
ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ..
ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ
ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ
ಇರುತ್ತವೆ... ಹೇಗೆ ಗೊತ್ತೇ...?? ದೇವರ ಮೂಲಸ್ಥಾನ
ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ
ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು
ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ
ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ
ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ
ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ
ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು
ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ
ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು...
ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ
ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ
ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.
ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ
ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ
ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ
ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ
ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ
ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ
ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ... ಹೇಗಿದೆ
ನೋಡಿ..!!
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy),
ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ
(Sound Energy), ಹೂಗಳ ಪರಿಮಳದಿಂದ, ಕರ್ಪೂರದ
ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy),
ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ
ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ,
ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ
ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ
ಶಕ್ತಿ..!!
ಇನ್ನು ತೀರ್ಥಸೇವನೆ...
ತೀರ್ಥವನ್ನು ಮಾಡುವುದು ಹೇಗೆ...???
ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ...
ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ
ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ...
ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ
ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ
ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ,
ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ
ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ
ಅನೇಕ ಔಷದೀಯ ಗುಣಗಳು ಇವೆ.
***









2021

2021


***

No comments:

Post a Comment