SEARCH HERE

Tuesday 1 January 2019

ಮರದ ಮೊರದ ಬಾಗಿನ marada bagina


Krishnamurthy Puram Mysore September 7, 2019


Read also

Know contents of Bagina
click-->   ಮೊರದ ಬಾಗಿನದಲ್ಲಿಡುವ ಪದಾರ್ಥ 
or
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು.
  1. Haldi Packet
  2. Kumkum Packet
  3. Gejje vastra
  4. Hoovu Bathi
  5. Adike – Betel Nuts
  6. Jaggery
  7. Sugar 
  8. Rice
  9. All dals
  10. Salt
  11. Silk or any other texture Saree 
  12. Blouse Piece
  13. Bangles
  14. Small Mirror, Comb
  15. Kobbari Battilu
  16. Rava 
  17. Tamarind 
**
೧.ಅರಿಸಿನ: ಗೌರಿದೇವೀ 
೨. ಕುಂಕುಮ:ಮಹಾಲಕ್ಷ್ಮೀ 
೩. ಸಿಂಧೂರ: ಸರಸ್ವತೀ
೪. ಕನ್ನಡಿ: ರೂಪಲಕ್ಷ್ಮೀ.
೫. ಬಾಚಣಿಗೆ:ಶೃಂಗಾರಲಕ್ಷ್ಮೀ.
೬. ಕಾಡಿಗೆ:ಲಜ್ಜಾಲಕ್ಷ್ಮೀ.
೭. ಅಕ್ಕಿ:ಶ್ರೀ ಲಕ್ಷ್ಮೀ.
೮. ತೊಗರಿಬೇಳೆ :ವರಲಕ್ಷ್ಮೀ
೯. ಉದ್ದಿನಬೇಳೆ:ಸಿದ್ದಲಕ್ಷ್ಮೀ
೧೦ ತೆಂಗಿನಕಾಯಿ:ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ:ಧನಲಕ್ಷ್ಮೀ 
೧೨. ಅಡಿಕೆ:ಇಷ್ಟಲಕ್ಷ್ಮೀ 
೧೩. ಫಲ(ಹಣ್ಣು): ಜ್ಞಾನಲಕ್ಷ್ಮೀ 
೧೪. ಬೆಲ್ಲ:ರಸಲಕ್ಷ್ಮೀ 
೧೫. ವಸ್ತ್ರ:ವಸ್ತ್ರಲಕ್ಷ್ಮೀ 
೧೬. ಹೆಸರುಬೇಳೆ: ವಿದ್ಯಾಲಕ್ಷ್ಮೀ 
***

#ಮರದ_ಬಾಗಿಣ
ಮರದ ಬಾಗಿಣಕ್ಕೆ ಯಾಕಷ್ಟು ಮಹತ್ವ  ಹೇಳುವೆ ಕೇಳಿ...
ಗೌರಿ ಹಬ್ಬಕ್ಕೆ  ಹರಿಸಿ ಮರದ ಬಾಗಿನ ಕೊಡುವುದು ಅಂದರೆ ಸುಮ್ಮನೆ ಅಲ್ಲ, ಅಂದರೆ ಮಹತ್ವ ಬಹಳವಿದೆ. ಫಲ ಕೂಡ ಅನಂತ ಅಷ್ಟೇ ಅಲ್ಲ ನಾವು ಕೊಡುವ ಮರದ ಬಾಗಿನ‌ ಯೋಗ್ಯರಾದವರಿಗೆ ಕೊಟ್ಟರೆ ಮಾತ್ರ ಫಲವಿದೆ .
ಬಡ ಬ್ರಾಹ್ಮಣನ ಹೆಂಡತಿ , ನಿಷ್ಠೆ ಯಲ್ಲಿ ಇರುವವಳು , ಮುಟ್ಟು ಮೈಲಿಗೆ ಆಚರಿಸುವವರು  ದಾನಧರ್ಮ ದ ಮಹತ್ವವನ್ನು ಅರಿತಿರುವವರು , ದೇವತಾ ಪೂಜೆ ಪುನಸ್ಕಾರ ಮಾಡುವವರಿಗೆ  ಕೊಟ್ಟಾಗ ಅವರ ಮಾಡುವ ಆಶಿರ್ವಾದ ದಿಂದ  ನಿಮ್ಮೇಲ್ಲ ಕಷ್ಟ ಪರಿಹಾರವಾಗಿ ಮನೆ ಅಭಿವೃದ್ಧಿ ಆಗುತ್ತದೆ , ಯಾಕೆಂದರೆ
ಮೊರದಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರ ತರಹ ಜೊತೆಯಲ್ಲಿ, ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ. ಇನ್ನು ಕೆಲವು ಬಾಗಿಣವನ್ನು ಮನೆಯಲ್ಲಿ ಅತ್ತಿಗೆ , ನಾದಿನಿಯರಿಗೆ ಕೊಡುವುದು ಇರುತ್ತದೆ ಅದು ಅವರಿಗೆ ಕೊಡಬೇಕು ಕಾರಣ ಅವರು ಮನೆ ಮಗಳು ,ಅತ್ತಿಗೆ ತಾಯಿಗೆ ಸಮಾನ...

ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ. "

ಕೊಡುವವರು ಹೀಗೆ ಹೇಳಬೇಕು 

ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l 
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌

ತೆಗೆದು ಕೊಳ್ಳುವವರು 
 ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ಮಯಾ 
ಅಂತ ಹೇಳಿ ತೆಗೆದುಕೊಳ್ಳಬೇಕು...

#ಅರ್ಥ

ಬಾಗಿನ ಕೊಡುವರು ಸೀತಾದೇವಿ ಯಂತಿರುವ ನಿಮ್ಮಿಂದ ಈ ಭಾಗಿಣವು  ಸ್ವೀಕರಿಸಲ್ಪಟ್ಟಿತು ಎಂದು 
ಬಾಗಿನ ತೆಗೆದುಕೊಳ್ಳುವವರು ಸೀತಾದೇವಿ ಯಂತಿರುವ ತಮ್ಮಿಂದ ಮರದ  ಕೊಡಲ್ಪಟ್ಟಿತು ಎಂದು ಹೇಳಿ

#ದಾನಕೊಡುವಾಗಸರಿಯಾದದಿಕ್ಕಿನಲ್ಲಿಕೊಡಬೇಕು
ದಾನ ಕೊಡುವುದಕ್ಕೆ ಮತ್ತು ತೆಗೆದು ಕೊಳ್ಳುವುದಕ್ಕೆ ದಿಕ್ಕುಗಳ ಸೂಚನೆ.
ದಾನ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಕೊಡುವವರು ಮತ್ತು ತೆಗೆದು
ಕೊಳ್ಳುವವರು ಯಾವ ದಿಕ್ಕಿನಲ್ಲಿ ಕುಳಿರುತ್ತಾರೆ ಎಂಬುದು ಮುಖ್ಯ.  ಅವರ
ಆಯುಷ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ.
ದಾನ ಕೊಡುವವರು ಪೂರ್ವಾಭಿಮುಖವಾಗಿಯೂ ತೆಗೆದು ಕೊಳ್ಳುವವರು
ಉತ್ತಾರಾಭಿಮುಖವಾಗಿರಬೇಕು.
ಇದರಿಂದ ಕೊಡುವವರಿಗೆ ದೀರ್ಘಾಯುಸ್ಸು ಮತ್ತು ತೆಗೆದುಕೊಳ್ಳುವವರಿಗೆ
ಪೂರ್ಣಾಯುಸ್ಸು ಲಬ್ಯವಾಗುತ್ತದೆ.
ಈ ಬಾಗಿಣ ಪದ್ಧತಿಗಳಲ್ಲಿ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿದೆ ಕೆಲವರು ತರಕಾರಿ ಕೊಡುತ್ತಾರೆ ಇನ್ನೂ ಕೆಲವು ಕಡೆ ಬರೀ ಧಾನ್ಯ ಮಾತ್ರ ಹಾಕುತ್ತಾರೆ ನಮ್ಮ ಉತ್ತರ ಕರ್ನಾಟಕದ ಕಡೆಗೆ ನಾವು ಎರಡು ತರಹದ ಬಾಗಿಣ ಕೊಡುತ್ತೇವೆ . 1 ಮಕರ ಸಂಕ್ರಾಂತಿ ಭೋಗಿ ಮತ್ತು ವ್ರತವನ್ನು ಪೂರ್ಣ ಮಾಡಿದಾಗ ಮರದ ಬಾಗಿಣ

ಸಂಕ್ರಾಂತಿ ಬೋಗಿಯಲ್ಲಿ ಎಲ್ಲ ತರದ  ತುಪ್ಪ  ಬೆಣ್ಣೆ ಅಕ್ಕಿ ಬೇಳೆ ಭೋಗದ ವಸ್ತುಗಳನ್ನು ಕೊಡುತ್ತೇವೆ  ಆದರೆ ವ್ರತದ ಸಂಕಲ್ಪದ ಮರದ ಬಾಗಿಣದಲ್ಲಿ ಬೆಳ್ಳಿ ಕಾಲುಂಗುರ  ಪಿಲ್ಲೆ , ಮಂಗಳಸೂತ್ರ ಅಂದರೆ ಕರಿಮಣಿ ಬಂಗಾರದ ತಾಳಿ ಕನ್ನಡಿ ಹಣಿಗೆ, ಕಾಡಿಗೆ ,ಬಳೆ ಕಾಯಿ ಸೀರೆ ಖಣ ಮತ್ತು ತೆಂಗಿನಕಾಯಿ ಅಕ್ಕಿ ತಾಂಬೂಲ ದಕ್ಷಿಣೆ ಇಷ್ಟು ಮಾತ್ರ ಹಾಕುತ್ತೇವೆ...ಗೌರಿ ಗಣೇಶನ ಹಬ್ಬದಲ್ಲಿ ಬಾಗಿಣ ಪದ್ಧತಿ ನಮ್ಮ ಉತ್ತರ ಕರ್ನಾಟಕದಲ್ಲಿ ಇಲ್ಲ ...ಅಲ್ಲದೆ  ನಾವು ಐದು, ಹನ್ನೊಂದು ದಿನ ಗಣಪತಿ ಇಟ್ಟು  ಪೂಜಿಸುತ್ತೇವೆ  ....ಆದರೆ ಮರದ ಬಾಗಿನಕ್ಕೆ ಬಹಳ ಮಹತ್ವವಿದೆ... ಒಂದು ಮರದ ಬಾಗಿನ ಬ್ರಹ್ಮಾಂಡ ದಾನ ಮಾಡಿದಷ್ಟು ಪುಣ್ಯವಿದೆ
***


ದಾನಗಳು ಮತ್ತು ಫಲಗಳು

೧.
ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ :
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ :
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ :
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ :
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ :
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ :
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) :
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. "ವಸ್ತ್ರಲಕ್ಷ್ಮೀ" :
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ.
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ.. 
***

Baagina / Marada jothe / ಬಾಗಿನ / ಮೊರದ ಜೊತೆ /

ನಾವು ಮಾಡುವ ಪೂಜೆ, ವ್ರತಗಳಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುತ್ತಾರೆ.


ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:


1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ

ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ
ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು
ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ
ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ ಕಡ್ಡಿ, ಇತ್ಯಾದಿ ಇಡುತ್ತಾರೆ. ಸ್ವರ್ಣ ಗೌರಿ ವ್ರತ, ಮಂಗಳ ಗೌರಿ ವ್ರತ, ಮಾರ್ಗಶಿರಮಹಾಲಕ್ಷ್ಮಿ ವ್ರತ, ಸಿರಿಯಾಳ ಷಷ್ಠಿ ಮುಂತಾದ ಪೂಜೆಗಳಲ್ಲಿ ಬಾಗಿನ ಕೊಡುತ್ತಾರೆ. ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.

ಸರಳ ಪರಿಹಾರ
***

ಮರದ ಬಾಗಿನದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳ ಬಗ್ಗೆ ಕಿರು ಪರಿಚಯ.
- by Sri Guru Raghavendra Swamy Jyothishya Mandira
93412 53161/90366 61744

೧. *ಅರಿಸಿನ:* _ಗೌರಿದೇವೀ._
೨. *ಕುಂಕುಮ:*_ಮಹಾಲಕ್ಷ್ಮೀ_
೩. *ಸಿಂಧೂರ:* _ಸರಸ್ವತೀ_
೪. *ಕನ್ನಡಿ:* _ರೂಪಲಕ್ಷ್ಮೀ._
೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._
೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
೭. *ಅಕ್ಕಿ:*_ಶ್ರೀ ಲಕ್ಷ್ಮೀ._
೮. *ತೊಗರಿಬೇಳೆ :*_ವರಲಕ್ಷ್ಮೀ_
೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_
೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
೧೨. *ಅಡಿಕೆ:*_ಇಷ್ಟಲಕ್ಷ್ಮೀ_
೧೩. *ಫಲ(ಹಣ್ಣು):* _ಜ್ಞಾನಲಕ್ಷ್ಮೀ_
೧೪. *ಬೆಲ್ಲ:*_ರಸಲಕ್ಷ್ಮೀ_
೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_
÷÷÷÷÷÷÷÷÷÷÷÷÷÷÷÷÷÷÷÷÷÷÷
ಮುತೈದೆ ದೇವತೆಯರು *೧೬* ಜನರು.
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
*ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*
_ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುತ್ತಾರೆ..
ಮರದ ಬಾಗಿನಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..
ಮರದಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ..
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ..
ಈ *೧೬* ದೇವತೆಗಳು ನಿತ್ಯಸುಮಂಗಲಿಯರು..
ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿನ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
೧೬ ಅರಿಸಿನ ದಾರ,
೧೬ ಗಂಟುಗಳು,
೧೬ ಬಾಗಿನ,
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..
***





No comments:

Post a Comment