೧.ಏಳು ಬಗೆಯ ಮೂಲ ವಸ್ತುಗಳು- ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.
೨.ಏಳು ನಾಡಿಗಳು- ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.
೩.ಏಳು ಜನ ಚಿರಂಜೀವಿಗಳು- ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ಕೃಪ, ಪರಶುರಾಮ, ವಿಭೀಷಣ.
೪.ಏಳು ಜೀವನದ ಅವಸ್ಥೆಗಳು- ಅಜ್ಞಾನ, ಆವರಣ, ವಿಕ್ಷೇಪ, ಪರೋಕ್ಷಜ್ಞಾನ, ಅಪರೋಕ್ಷಜ್ಞಾನ, ಅನರ್ಥ, ನಿವೃತ್ತಿ ಮತ್ತು ಆನಂದ ಪ್ರಾಪ್ತಿ.
೫.ಏಳು ಪಾತಾಳಗಳು- ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ ಮತ್ತು ಮಹಾತಳ.
೬.ಏಳು ಬಣ್ಣಗಳು- ಕಪ್ಪು, ಬಿಳಿ, ಕೆಂಪು, ಹಸಿರು, ಹಳದಿ, ನೀಲ ಮತ್ತು ನೇರಳೆ.
೭.ಏಳು ವರ್ಗಗಳು- ರಾಜ, ಮಂತ್ರಿ, ರಾಜ್ಯ, ಕೋಟೆ, ಖಜಾನೆ, ಸೈನ್ಯ ಮತ್ತು ಬಂಧುಮಿತ್ರರ ಸಾಮರ್ಥ್ಯ.
೮.ಏಳು ಕಾಡುಗಳು- ಅದಿತಿ, ಕಾಮ್ಯಕ, ವ್ಯಾಸ, ಫಲ್ಕೀ, ಸೂರ್ಯ, ಚಂದ್ರ ಮತ್ತು ಸೀತಾ.
೯.ಏಳು ಪರ್ವತಗಳು- ಹಿಮವಂತ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರ, ಗಂಧಮಾಧನ ಮತ್ತು ಹೇಮಕೂಟ.
೧೦.ಏಳು ನದಿಗಳು- ಕಾವೇರಿ, ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಮತ್ತು ಸಿಂಧು.
೧೧.ಏಳು ಸಮುದ್ರಗಳು- ಲವಣ, ಇಕ್ಷು, ಸುರಾ, ಸರ್ಪಿಸ್, ದಧಿ, ಕ್ಷೀರ ಮತ್ತು ಶುದ್ದೋದಕ.
೧೨.ಏಳು ಸ್ವರಗಳು- ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ ಮತ್ತು ನಿಷಾದ.
೧೩.ಏಳು ದ್ವೀಪಗಳು- ಜಂಬೂ, ಪ್ಲಕ್ಷ, ಪುಷ್ಕರ, ಕ್ರೌಂಚ, ಶಾಕ, ಶಾಲ್ಮಲ ಮತ್ತು ಕುಶದ್ವೀಪ.
೧೪.ಏಳು ಬಗೆಯ ಗುಣಗಳು - ಧೈರ್ಯ, ಸೈರಣೆ, ಮನೋನಿಗ್ರಹ, ಶುಭ್ರತೆ, ಅನುಕಂಪ, ಮೃದುಮಾತು ಮತ್ತು ಅಹಿಂಸೆ.
೧೫.ಏಳು ನಿರ್ವಹಣ ಕೆಲಸಗಳು- ಕಲಿತನ, ಚತುರತೆ, ಧೈರ್ಯ, ವ್ಯವಹಾರ ಕುಶಲತೆ, ಧೀಮಂತಿಕೆ, ಉದಾರ ಮನ ಮತ್ತು ಅಧಿಕಾರ ನಿರ್ವಹಣೆ.
೧೬. ಏಳು ವಿಧದ ವಿಕಾರಗಳು- ಹಗಲಿನಚಂದ್ರ, ಪ್ರಾಯವಿಲ್ಲದಹೆಣ್ಣು,ತಾವರೆಯಿಲ್ಲದಕೊಳ,ವಿದ್ಯೆಯಿಲ್ಲದವರು,ದುರಾಸೆಯರಾಜ,ಧರ್ಮಿಷ್ಠನಾದಬಡವ ಮತ್ತು ಕ್ರೂರಸೇವಕ.
೧೭.ಏಳು ದೋಷಗಳು- ಸೋಮಾರಿತನ, ದುರಹಂಕಾರ, ಅಜ್ಞಾನ, ಸ್ವೇಚ್ಚಾಚಾರ, ಗರ್ವ,ದುರಭಿಮಾನ ಮತ್ತು ಸ್ವಾರ್ಥಪರತೆ.
೧೮.ಏಳು ದುರಾಚಾರಗಳು- ಶಿಕಾರಿ, ಜೂಜು, ಲಂಪಟತನ, ಕುಡಿತ, ದುಂದುವೆಚ್ಚ, ಒರಟುನುಡಿ ಮತ್ತು ಕಠೋರತನ/ಕ್ರೂರತೆ.
೧೯.ಏಳು ವಿಶ್ವದ ಅದ್ಭುತಗಳು- ಚೀನಾದ ಗೋಡೆ, ತಾಜ್ಮಹಲ್, ಗೀಜಾದ ಪಿರಮಿಡ್, ಪೀಸಾದ ವಾಲುಗೋಪುರ, ನ್ಯೂಯಾರ್ಕನ ಲಿಬರ್ಟಿಪ್ರತಿಮೆ, ರೋಂನ ಬಯಲುಸಭಾಂಗಣ ಮತ್ತು ಬ್ರೆಜಿಲ್ ಡಿ ಜನೈರೊದ ಏಸುಕ್ರಿಸ್ತ ಪ್ರತಿಮೆ.
20.ಸಪ್ತ ಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡ.
21.ಸಪ್ತ ಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್.
22. ಸಪ್ತ ಋಷಿಗಳು: ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ , ಅತ್ರಿ, ವಸಿಷ್ಠ, ಕಶ್ಯಪ.
23. ಸಪ್ತಪುರಿಗಳು:
ಅಯೋಧ್ಯಾ, ಮಥುರಾ, ಕಾಶಿ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ).
24. ಸಪ್ತಪದಿ: 1.|| ಇಷ ಏಕಪದೀ ಭವಃ ಸಾ ಮಾಮನುವ್ರತಾಭವ ||
ಅನ್ನ, ಇಚ್ಚಾಶಕ್ತಿ-ಗಳಿಗಾಗಿ ಮೊದಲನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
2.|| ಊರ್ಜೇ ದ್ವಿಪದೀ ಭವಃ ಸಾ ಮಾಮನುವ್ರತಾಭವ ||
ಬಲವೃದ್ದಿ, ಆರೋಗ್ಯ-ಗಳಿಗಾಗಿ ಎರಡನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
3.|| ರಾಯಸ್ಪೋಷಾಯ ತ್ರಿಪದೀ ಭವಃ, ಸಾ ಮಾಮನುವ್ರತಾಭವ ||
ಸಂಪತ್ತಿನ ಅಭಿವೃದ್ಧಿ, ಸಂಗ್ರಹಣೆ, ಸದುಪಯೋಗ-ಗಳಿಗಾಗಿ ಮೂರನೇ ಹೆಜ್ಜೆ ಇಡು, ಇದರಲ್ಲಿ ನನ್ನನು ಅನುಸರಿಸು.
4.|| ವಾಯೋಭವ್ಯಾಯ ಚತುಷ್ಪದೀ ಭವಃ ಸಾ ಮಾಮನುವ್ರತಾಭವ ||
ಮಮತೆ, ಸುಖ, ಆನಂದ-ಗಳು ಉಂಟಾಗುವುದಕ್ಕಾಗಿ ನಾಲ್ಕನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
5.|| ಪ್ರಜಾಭ್ಯಃ ಪಂಚಪದೀ ಭವಃ, ಸಾ ಮಾಮನುವ್ರತಾಭವ ||
ಉತ್ತಮ ಸಂತಾನ ಪಡೆಯಲು ಐದನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
6.|| ಋತುಭ್ಯಃ ಷಟ್ಪದೀ ಭವಃ, ಸಾ ಮಾಮನುವ್ರತಾಭವ ||
ಒಳ್ಳೆಯ ಕಾಲಕ್ಕಾಗಿ (ನಿಯಮಿತ ಜೀವನ) ಆರನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
7.|| ಸಖಾ ಸಪ್ತಪದೀ ಭವಃ, ಸಾ ಮಾಮನುವ್ರತಾಭವ ||
ಪರಸ್ಪರ ಸ್ನೇಹಕ್ಕಾಗಿ ಏಳನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
25.ಸಪ್ತಸ್ವರ:
ಸ,ರಿ,ಗ,ಮ,ಪ,ದ,ನಿ
*****
*****
No comments:
Post a Comment