SEARCH HERE

Tuesday, 1 January 2019

ಸ್ನಾನ ನಿಯಮ ಪ್ರಾರ್ಥನೆ ದೋಷ ಪರಿಹಾರ snana bath rules prayer dosha parihara



ಶ್ರೀರಂಗ ಕ್ಷೇತ್ರ ರಂಗೋಲಿ 
ಶ್ರೀರಂಗ ಕ್ಷೇತ್ರ ಸಪ್ತ ಪ್ರಾಕಾರ ರಂಗೋಲಿ 
ತಮಿಳು ಶ್ರೀ ಸುಧಾ ಮಾಸ ಪತ್ರಿಕೆಯಲ್ಲಿ ಇದರ ಬಗ್ಗೆ ಉಲ್ಲೇಖವಿರುವದನ್ನು ಚಿತ್ರದಲ್ಲಿ ತಿಳಿಸಲಾಗಿದೆ.

ತುಲಾ ಮಾಸ (october/november) ದಲ್ಲಿ ಪ್ರತಿ ವರ್ಷ ಶ್ರೀರಂಗ ಕ್ಷೇತ್ರದಲ್ಲಿ ಕಾವೇರಿ ಸ್ನಾನ ಮತ್ತು ಸಪ್ತ ಪ್ರಾಕಾರ ಸೇವೆಯಿಂದ ವಿಶೇಷ ಫಲ ಪ್ರಾಪ್ತಿ. ಅಲ್ಲಿ ಹೋಗಲು ಸಾಧ್ಯವಾಗದವರು ಈ ರಂಗೋಲಿಯನ್ನು ಮನೆಯಲ್ಲೇ ಹಾಕಿ ಪ್ರದಕ್ಷಿಣಾ ನಮಸ್ಕಾರ ಮಾಡಬಹುದು.
***
ಸ್ನಾನ 
SNANA VIDHI  – A VEDIC KARMA

As per Dharmashastras there are 6 karmas which are recommended for every human being on a daily basis 

Snanam, Sandhya Japo, Homa, Devatanamcha poojanam Athityam, Vaiswadevam cha Shat Karmani dine dine

This means Snanam (having a bath - daily), Sandhyavandanam and Japam, Homa or fire sacrifice, doing pooja (propriation) of Gods, treating guests well and feeding other living beings like crows, cows, dogs and ants, these are the 6 karmas which have to be performed daily

As you can see, Snana here is a Karma (duty) and only Snana (bath) offers you the platform to perform the rest of the karmas. Two purposes of the Snana are cleanliness of the body and cleanliness of the mind (chitta shuddhi). The body has 9 holes and various waste products are being produced by these 9 holes, which make the body further impure. Snana cleans us of the dirt, both external and internal.

There are 3 classes of Snana:

Nitya Snana – Daily bath

Naimittaka Snana – Special occasional bath like death of relative, hair cut etc

Kamya Snana – Bath for special vows undertaken, like in a temple tank etc.

Apart from this, there are some more types of Snana which have been described in Dharma Shastras

Agneyam : Application of Bhasma (Ash) all over the body
Vaarunam : Bath at river, lake, home well, with mantras
Brahmam: Bath chanting “apohistha mantra” and sprinkling on chest
Vayavya: Bath with dust from the hooves of cows during dusk
Divya: Bath during uttarayana when Sun is shining and it rains
Kapilam: Bath by wiping onself with wet cloth
Gayatram: Reciting Gayatri mantra 10 times and sprinkling water on self
Manasam: Meditating on Lord Vishnu with 4 arms
Parthiva/mrittika: Bath with earth/soil (mud bath)

We should understand that water is a “Devata” (God) called “Varuna”. If we propitiate this Devata he will bless us with happiness, good rains, crops etc. And if we pollute it and disregard Varuna, he will play havoc like floods, tsunami etc. 

Having a bath in a holy river/or any river is not a joke or a casual process. Some people jump in the water, swim, wash up themselves, splash, play and leave, all for entertainment. But beware, Shastras completely forbid this type of behaviour. The water in the river is a Vedic God Varuna and during a bath, we are interacting with a Devata. We have to keep that in mind. 

We should go for having a bath in the river at “Brahmamuhurtha” (time of Brahma) which is 96 minutes before sunrise. We should wear 2 pieces of clothes (dhoti and upper cloth to cover upper body). Only these two clothes are allowed as clothing, for river bath (for ladies, saree). Here we would like to raise a question. Would you go to your club’s swimming pool without a proper swimming costume or would you swim with your shirt and pant on, in your club pool? Why can’t we respect a holy river? We probably don’t know the rules. This article is aimed at creating awareness of the same

Before you even enter the river for a bath, you need to have a bath at the bank to clean yourself before entering the river, as you cannot pollute the river with your dirt, as per Vedic texts. Now you can find exactly the same rule at a swimming pool, where we need to have a shower before, so that we are clean before entering the pool. Ironically, in Kali Yuga, swimming pools get more respect than a holy river! 

The rules for bathing in a river are described below:

1. Achamanam (sipping of water)

2. Pranayamam (controlled breathing)

3.Maha Sankalpam – Here you have to declare which location you are taking a bath, who you are (Gotra-lineage), which day it is etc as per astrological calendar and that you are going to take a bath for purity of the body and soul thereby relieving yourself of the sins you have committed till date. Sankalpam simply means “resolve”

4.Chanting praises of the River : If you are at a holy  river like Ganga then chant Ganga Strotram, if at Godavari, chant Godavari Stuti etc. You sing praises of the river before entering the water and pray that the water should be auspicious to you always.

5.Marjanam (Sprinkling of water on oneself) : With chant of 'Apohishta' mantras which are purificatory mantras, you sprinkle yourself with water to clean yourself. This will purify your mind of bad thoughts

6. Agamarshana Sooktam : Enter the water by chanting  'Agamarshana Sookta' which mentioned in the Vedas for destroying the sins you have committed. 'Aga' means dirt and 'Marshana' means to wipe away/cleansing the sins.

7. The holy dip : While chanting this sooktam (hymn-vedic verse), you take a dip with your head totally submerged into the water 3 times in quick succession. This can be repeated 1-2 times more during the chanting of Agamarshana sookta and your bath is complete. You cannot use soap, detergent, shampoo etc to clean yourself, it is totally prohibited as per Shastras. Remember, you cannot pollute the river.

8. Offering tarpana to Devas(Gods), Rishi(Sages) and Pitrus(Manes) : Offer arghya or oblation with water to Devas, Rishis and the Pitrus to satisfy their thirsty souls. They flock to the river and look forward to our oblations as soon as we do the sankalpam (point number 3 above). Once we tell them in the sankalpa, who we are and where we are, they come to accept our offerings. 

9. Vasodhakam: This is squeezing your upper cloth to satisfy the Pitrus (manes) who are trapped in the earth plane and not yet passed to the Pitru loka (the abode of ancestors). There are specific mantras for the same. You come out, on the bank and squeeze only your upper cloth or Uttareeya.

10. Yaksha Tarpana : Each river, lake, pond is guarded by a semi-divine being called 'Yaksha' and they can cause harm, if you do not thank them for allowing you to have a bath in their property. This is similar to the way we say thank you to our swimming coach. You should offer water oblation to them before leaving the river.

11. Change of clothes: Change to dry clothes and do Sandhya vandana and Gayatri Japa at the river bank and then leave for your house after the sunrise.

This process completes the Vedic bath which ancient Hindus used to practise daily (nithya snana). Nowadays it has become occasional (naimittaka snana) but still a few people staying near rivers practise the same. This type of bath only helps you attain purity and destruction of the sins committed, not the bath we take in the bathroom. Unfortunately in Kali yuga we have time to go for a movie, dining outside, playing games outdoor and indoor, watching TV but we don’t have time to learn or atleast practise, even occasionally, such Karmas which have been in practice since earlier than 5000 BC.  This is the reason for negative karmic overload and our current suffering in Kaliyuga, in terms of no mental peace or health, despite having money. We should be proud of our heritage and need to do everything to preserve it in its entirety, which is what Veda Ghosham aims at. 

All Veda Ghosham Vidhyarthis (who are students and working professionals across all ages) were trained for 1 month on this 'Snana Vidhi' as per Dharma Shastra with mantras. All Veda Ghosham Shishyas took a holy dip in the River Godavari in Nashik on the occasion of Mahakumbh which comes only once in 144 years. We also performed the same at River Kaveri at Srirangam last year

Om Varunaaya Namaha!

🕉️
***

ಸ್ನಾನ ಮಾಡುವುದಕ್ಕಿಂತ ಮೊದಲು ಮಾಡಬೇಕಾದ ಪ್ರಾರ್ಥನೆ
ಜಲದೇವತೆಗೆ ಮಾಡಬೇಕಾದ ಪ್ರಾರ್ಥನೆ
ಹೇ ಜಲದೇವತೆಯೇ, ನಿನ್ನ ಪವಿತ್ರ ಜಲದಿಂದ ನನ್ನ ಸ್ಥೂಲದೇಹದ ಸುತ್ತಲೂ ಬಂದಿರುವ ರಜ-ತಮದ ತ್ರಾಸದಾಯಕ ಆವರಣವು ನಾಶವಾಗಲಿ. ಬಾಹ್ಯ ಶುದ್ಧಿಯಂತೆ ನನ್ನ ಅಂತರ್ಮನವೂ ಸ್ವಚ್ಛ ಮತ್ತು ನಿರ್ಮಲವಾಗಲಿ.
ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡುವುದರ ಮಹತ್ವ
ಶಾಸ್ತ್ರ : ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ದೇವತ್ವವು ಪ್ರಾಪ್ತವಾಗಿ ದಿನವಿಡೀ ಮಾಡುವ ಕೃತಿಗಳನ್ನು ಚೈತನ್ಯದ ಸ್ತರದಲ್ಲಿ ಮಾಡಲು ದೇಹವು ಸಕ್ಷಮವಾಗುತ್ತದೆ.

ಸ್ನಾನವನ್ನು ಮಾಡುವಾಗ ಹೇಳಬೇಕಾದ ಶ್ಲೋಕಗಳು

*ಗಂಗೇ ಚ ಯಮುನೆ ಚೈವ ಗೋದಾವರೀ ಸರಸ್ವತೀ *
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ನಾರದಪುರಾಣ, ಪೂರ್ವಭಾಗ, ಪಾದ ೧, ಅಧ್ಯಾಯ ೨೭, ಶ್ಲೋಕ ೩೩

ಅರ್ಥ : ಹೇ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ನದಿಗಳೇ ನೀವೆಲ್ಲರೂ ನನ್ನ ಸ್ನಾನದ ನೀರಿನಲ್ಲಿ ಅವತರಿಸಿ.

ಗಂಗಾ ಸಿಂಧು ಸರಸ್ವತಿ ಚ ಯಮುನಾ ಗೋದಾವರಿ ನರ್ಮದಾ ಕಾವೇರಿ ಶರಯೂ ಮಹೇಂದ್ರತನಯಾ ಚರ್ಮಣ್ವತಿ ವೇದಿಕಾ ಕ್ಷಿಪ್ರಾ ವೇತ್ರವತಿ ಮಹಾಸುರನದೀ ಖ್ಯಾತಾ ಜಯಾ ಗಂಡಕೀ ಪೂರ್ಣಾಃ ಪೂರ್ಣಜಲೈಃ ಸಮುದ್ರಸಹಿತಾಃ ಕುರ್ವಂತು ಮೇ ಮಂಗಲಮ್

ಅರ್ಥ : ಗಂಗಾ, ಸಿಂಧು, ಸರಸ್ವತಿ, ಯಮುನಾ, ನರ್ಮದಾ, ಗೋದಾವರಿ, ಕಾವೇರಿ, ಶರಯೂ, ಮಹೇಂದ್ರತನಯಾ, ಚಂಬಳಾ, ವೇದಿಕಾ, ಕ್ಷಿಪ್ರಾ, ವೇತ್ರವತಿ (ಬೆತವಾ ನದಿ) ಪ್ರಖ್ಯಾತ ಮಹಾಸುರನದಿ, ಜಯಾ ಮತ್ತು ಗಂಡಕಿ ನದಿಗಳು ಪವಿತ್ರ ಮತ್ತು ಪರಿಪೂರ್ಣರಾಗಿ ಸಮುದ್ರ ಸಹಿತ ನನ್ನ ಕಲ್ಯಾಣವನ್ನು ಮಾಡಲಿ.

ನಮಾಮಿ ಗಂಗೇ ತವ ಪಾದ ಪಂಕಜಂ
ಸುರಾಸುರೈರ್ವಂದಿತ ದಿವ್ಯರೂಪಮ್
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವಾನುಸಾರೇಣ ಸದಾ ನರಾಣಾಮ್

ಅರ್ಥ : ಎಲ್ಲ ಐಹಿಕ ಸುಖ, ಭೋಗ ಮತ್ತು ಮೋಕ್ಷವನ್ನು ನೀಡುವಂತಹ ಹೇ ಗಂಗಾ ಮಾತೆಯೇ, ಪ್ರತಿಯೊಬ್ಬರ ಭಾವಕ್ಕನುಸಾರ ನಿನ್ನ ಯಾವ ಚರಣಕಮಲಗಳು ಎಲ್ಲ ದೇವರು ಮತ್ತು ದೈತ್ಯರಿಗೆ ವಂದನೀಯವಾಗಿವೆಯೋ, ಇಂತಹ ನಿನ್ನ ಚರಣಗಳಿಗೆ ನಾನು ವಂದಿಸುತ್ತೇನೆ.

ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ಮುಚ್ಯತೆ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ತೀರ್ಥರಾಜಾಯ ನಮಃ

ಅರ್ಥ : ಸಾವಿರಾರು ಮೈಲು (ಯೋಜನಗಳು) ದೂರದಿಂದ ಯಾರು ‘ಗಂಗಾ, ಗಂಗಾ, ಗಂಗಾ’, ಎಂದು ಗಂಗೆಯನ್ನು ಸ್ಮರಿಸುತ್ತಾರೆಯೋ, ಅವರು ಎಲ್ಲ ಪಾಪಗಳಿಂದ ಮುಕ್ತರಾಗಿ ವಿಷ್ಣುಲೋಕ ಸೇರುತ್ತಾರೆ.

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪ ಸಂಭವಃ 
ತ್ರಾಹಿ ಮಾಂ ಕೃಪಯಾ ಗಂಗೆ ಸರ್ವಪಾಪಹರಾ ಭವ

ಅರ್ಥ : ನಾನು ಕುಕರ್ಮಿಯಾಗಿದ್ದೇನೆ. ನಾನು ಸಾಕ್ಷಾತ್ ಪಾಪ ಅಂದರೆ ಪಾಪಿಯೇ ಆಗಿದ್ದೇನೆ. ನಾನು ಕೆಟ್ಟದರಿಂದಲೇ ನಿರ್ಮಾಣ ವಾಗಿದ್ದೇನೆ. ಹೇ ಗಂಗಾ ಮಾತೆಯೇ, ನೀನು ನನ್ನ ಪಾಪಗಳನ್ನು ಪರಿಹರಿಸಿ ನನ್ನ ರಕ್ಷಣೆಯನ್ನು ಮಾಡು.

ಸರಳ ಪರಿಹಾರ ಶ್ರೀ ಸುಧಾಕರ
*******

ನದಿ ಮತ್ತು ಜಲಾಶಯಗಳಲ್ಲಿನ ನೀರು ಹರಿಯುತ್ತಿರುತ್ತದೆ. ಈ ನೀರಿನಲ್ಲಿ, ಹರಿಯುವ ನೀರಿನ ನಾದದಿಂದ ಸುಪ್ತ ಸ್ತರದಲ್ಲಿ ತೇಜ ದಾಯಕ ಇಂಧನವನ್ನು ನಿರ್ಮಾಣ ಮಾಡುವ, ಹಾಗೆಯೇ ಅದನ್ನು ಘನೀಕೃತಗೊಳಿಸುವ ಕ್ಷಮತೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಸ್ನಾನ ಮಾಡುವುದರಿಂದ ನೀರಿನ ತೇಜ ದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.

ಹೆಣ್ಣು ಮಕ್ಕಳಿಗೆ ತಲೆ ಸ್ನಾನ ವಿಚಾರ .......

ನನಗೆ ತುಂಬಾ ಜನ ಹೆಣ್ಣುಮಕ್ಕಳು ಕೇಳುತ್ತಿರುತ್ತೀರಾ ತಲೆ ಸ್ನಾನ ಯಾವ ದಿನ ಮಾಡಬೇಕು ,ಯಾವದಿನಾ ಮಾಡಬಾರದು ಅಂತ ಅದಕ್ಕೆ ಶಾಸ್ತ್ರ ದಲ್ಲಿ ಎನು ಹೇಳಿದೆಯೊ ಅದನ್ನ ತಿಳಿಸಿ ಕೊಡುತ್ತೇನೆ....

ಮೊದಲನೆಯದಾಗಿ ಹೆಣ್ಣು ಮಕ್ಕಳು ತಲೆ ಸ್ನಾನಮಾಡುವಾಗ ಎಣ್ಣೆ ಹಚ್ಚಿಕೊಳ್ಳದೆ ಮಾಡಬಾರದು .ಅದು ಅಶುಭ ಅಶೌಚ ಬಂದಾಗ ಮಾತ್ರ ಹಾಗೆ ಮಾಡಬೇಕು..

ವ್ಯತಿಪಾತ ,ವೈದೃತಿ ಯೋಗ ವಿದ್ದಾಗ ಕಾರಣ ವಿಲ್ಲದೆ ತಲೆ ಸ್ನಾನವನ್ನು ಮಾಡಬಾರದು..

ಶ್ರಾದ್ಧದ ದಿನ ಹೆಣ್ಣುಮಕ್ಕಳು ತಲೆ ಸ್ನಾನ ಮಾಡಬಾರದು

ಬುಧವಾರ ,ಶತಬಿಷ ನಕ್ಷತ್ರವಿದ್ದಾಗ , ಮಘಾ ನಕ್ಷತ್ರ ವಿದ್ದಾಗ ಅಭ್ಯಂಗ ಮಾಡುವ ಸ್ತ್ರೀಯು ಪತಿ ಘಾತುಕಳಾಗುವಳು..

ಮನೆಯಲ್ಲಿ ಮಂಗಲಕಾರ್ಯ , ವಿಜಯೋತ್ಸವ, ವಿಜಯದಶಮಿ , ದಿಪಾವಳಿ , ಸೌಭಾಗ್ಯವ್ರತ ಗಳಿದ್ದಾಗ ಯಾವದೇ ದಿನವನ್ನು ತಿಥಿ ನೋಡಬೇಡಿ ಆ ದಿನ ಅಭ್ಯಂಗ ಸ್ನಾನ ( ತಲೆ ಸ್ನಾನ) ಮಾಡಬಹುದು ....

ಇನ್ನು ಕೆಲವು ದಿನ ತಲೆ ಸ್ನಾನ ಅವಶ್ಯವಿದ್ದಾಗ ಹೀಗಿದೆ ಪರಿಹಾರ 

ರವಿವಾರ ಮಾಡುವದಿದ್ದಲ್ಲಿ ಎಣ್ಣೆಯಲ್ಲಿ ಪುಷ್ಪವನ್ನು ಹಾಕಿ ಮಾಡಬೇಕು..

ಕುಜವಾರ ಮಾಡಬೇಕಾದಲ್ಲಿ... ತುಳಸಿಕಟ್ಟೆಯಲ್ಲಿರುವ ಮೃತ್ತಿಕೆಯನ್ನು ಚಿಟಿಕೆ ಎಣ್ಣೆಯಲ್ಲಿ ಹಾಕಿ ಮಾಡಿದರೆ ದೋಷವಿಲ್ಲ 

ಶುಕ್ರವಾರ ತಲೆ ಸ್ನಾನ ಮಾಡಬೇಕಾದಲ್ಲಿ ಎಣ್ಣೆಯಲ್ಲಿ ಗೋಮಯ ( ಸೆಗಣಿ) ಹಾಕಿ ಮಾಡಿದಲ್ಲಿ ದೋಷವಿಲ್ಲ...‌

ದ್ವಾದಶಿ ದಿನ , ಮತ್ತು ಅಮವಾಸ್ಯೆ ಮುತ್ತೈದೆಯರು ಅಭ್ಯಂಗ ಸ್ನಾನ ಮಾಡಬಾರದು..‌

ಕೆಲವರು ಪ್ರತಿದಿನ ತಲೆ ಸ್ನಾನದ ನೇಮವನ್ನು ಹಿಡಿದವರಿಗೆ ಯಾವದೇ ದೋಷವಿಲ್ಲ...

ಹಬ್ಬ ಸೌಭಾಗ್ಯ ವ್ರತಗಳಲ್ಲಿ ಅಭ್ಯಂಗ ಸ್ನಾನ ( ತಲೆ ಸ್ನಾನ) ಮಾಡುವಾಗ ಹೆಣ್ಣು ತಲೆಗೆ ಎಣ್ಣೆ ಹಾಕಿ ನಂತರ ಚಿಟಿಗೆ ಅರಿಷಿಣ ಎಣ್ಣೆಯಲ್ಲಿ ಹಚ್ಚಿಕೊಂಡು ಸ್ನಾನಮಾಡಬೇಕು
-ವೀಣಾ ಜೋಶಿ

*********




ಸ್ನಾನದ ಸಾಮಾನ್ಯ ನಿಯಮಗಳು:

೧. ಎರಡು ವಸ್ತ್ರಗಳನ್ನು ಬಳಸಬೇಕು
೨. ಸ್ನಾನದ ಪೂವದಲ್ಲೇ ಅವುಗಳನ್ನು ತೋಯಿಸಿ ಹಿಂಡಿ ಉಟ್ಟುಕೊಳ್ಳಬೇಕು.
೩. ಶೌಚ ದಂತ ಧಾವನ ಮುಂಚೆಯೇ ಆಗಿರಬೇಕು
೪. ಸಂಕಲ್ಪ ಮಾಡಿ ಸ್ನಾನ ಮಾಡಬೇಕು, ಸ್ನಾನಕ್ಕೆ ಆಜ್ಞೆ ಕೇಳಬೇಕು ಸಮಸ್ತ ಜಗದಾಧಾರ.. ಶ್ಲೋಕದಿಂದ
೫. ಮೊದಲ ಮಲ ಸ್ನಾನ ಮಾಡುವುದು (using soap etc) ನಂತರ ಮೃತ್ತಿಕೆ, ಆಕಳ ಸಗಣಿಯಿಂದ ಸ್ನಾನ ಮಾಡಬೇಕು. ಗಂಗಾ ದ್ವಾದಶ ನಾಮ ಹೇಳಬೇಕು. ನೀರಿನಲ್ಲಿ ಗಂಗಾದಿ ನದಿಗಳನ್ನು, ಪುಷ್ಕರಾದಿ ತೀರ್ಥಗಳನ್ನು ಆವಾಹನೆ ಮಾಡಬೇಕು. ಅದರಲ್ಲಿ ಯೋSಸೌ ಸರ್ವಗತೋ ದೇವಃ... ಹೇಳಬೇಕು.  ನಮ್ಮಲ್ಲಿ ತತ್ವಾಭಿಮಾನಿಗಳು, ವಾಯುದೇವರು ಹಾಗು ಲಕ್ಷ್ಮಿ ಸಹಿತ ಬಿಂಬ ರೂಪಿಯನ್ನು ಚಿಂತನೆ ಮಾಡಿ ಸ್ನಾನ ಮಾಡಬೇಕು. ಅವಾಗ ಜೀವಾಕಾರ ರೂಪದ ಚಿಂತನೆ ಮಾಡಬೇಕು
೬. ನಂತರದಲ್ಲಿ ಆಚಮನ ಮಾಡಿ ನೀರನಿಂದ ನಾಮ ಹಚ್ಚಿಕೊಳ್ಳಬೇಕು (ಈ ಹಿಂದೆ ಸ್ನಾನದ ಪೂರ್ವದಲ್ಲೇ ಲಲಾಟ ಯಸ್ಯ ದೃಶ್ಯತೆ.. ಮಂತ್ರ ಹೇಳಿಕೊಂಡು ತುಳಸಿ ಮೃತ್ತಿಕೆ ಧಾರಣೆ ಮಾಡಿರಬೇಕು).
ನಂತರದಲ್ಲಿ ದೇವರಿಗೆ ಮೂರು ಸಲ ಅರ್ಘ್ಯ, ಸೂರ್ಯ, ಗಂಗಾ, ಕೃಷ್ಣ ಹಾಗು ಕಾವೇರಿಗೆ ಒಂದೊಂದು ಬಾರಿ ಅರ್ಘ್ಯ ಕೊಡಬೇಕು.
೭. ನಂತರದಲ್ಲಿ ಪುರುಷ ಸೂಕ್ತ ಹೇಳಿಕೊಂಡು (ಒಂದು ಋಕ್ಕಾದರು) ಬಿಂಬನಿಗೆ ಇದು ಅಭಿಷೇಕವೆಂದು ತಿಳಿದು ಶಂಖ ಮುದ್ರೆಯಿಂದ ತಲೆಯ ಮೇಲೆ ನೀರನ್ನು ಹಾಕಿಕೊಳ್ಳಬೇಕು.

ಆಗ ಮಾಡುವ ಚಿಂತನೆ ದೇವರ ನಾಡಿಗಳಿಂದ ಹುಟ್ಟಿದ್ದು ಈ ನದಿಗಳು, ಅವನ ಪಾದೋದಕವು ಬ್ರಹ್ಮ ದೇವರು ರುದ್ರ ದೇವರು ಸ್ವೀಕರಿಸಿ ಆದಮೇಲೆ ನಮ್ಮ ಸುಷುಮ್ನಾ ನಾಡಿ ಮುಖಾಂತರ ನಮ್ಮ ದೇಹವನ್ನು ಪವಿತ್ರಗೊಳಿಸುತ್ತದೆ ಎಂದು ಚಿಂತಿಸಬೇಕು.
೮. ಇದೇ ಸಂದರ್ಭದಲ್ಲಿ ಕೃಷ್ಣದ್ವಾದಶದಲ್ಲಿ ಹೇಳಿರುವ ೧೨ ನಾಮಗಳ ಸ್ಮರಣೆ ತುಂಬಾ ವಿಶೇಷ  (ವಾಮನ, ವೇದ ಗರ್ಭ, ದಾಮೋದರ, ...)
೯. ನಿಷಿದ್ಧವಲ್ಲದ ದಿನಗಳಲ್ಲಿ ಆಮಲಕ ಸ್ನಾನ ವಿಶೇಷ
೧೦. ನಂತರ ಒರೆಸಿಕೊಂಡು ಹಿಂಡಿಕೊಂಡು ಆದ ಮೇಲೆ, ದೇವರ ವಸ್ತ್ರದಿಂದ ನೀರನ್ನು ಶೋಧಿಸಿ ಪೂಜೆಗೆ ಹಿಡಿದಿಟ್ಟುಕೊಳ್ಳೋದು

ಇನ್ನೂ ಏನಾದ್ರು ಇದ್ರೆ add ಮಾಡಿಕೊಳ್ಳಿ 
*****

this is at your risk
ಕೆಳಗೆ ಸೂಚಿಸಿರುವ ಕೆಲವು ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದು

1. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಏಲಕ್ ಹಾಗೂ ಕೇಸರಿಯನ್ನು ಬೆರೆಸಿದರೆ ಮಾಡಿದರೆ ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ದೂರವಾಗು ಸಾಧ್ಯತೆ ಇರುತ್ತದೆ. ನಿಧಾನವಾಗಿ ನಿಮ್ಮ ಜೀವನದ ಬದಲಾವಣೆ ಕಂಡುಬರುತ್ತದೆ ಹಾಗೂ ನೀವು ಸಂತೋಷಕರ ವಾಗಿರಬಹುದು.

2. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಅ ಒಂದು ಚಮಚ ಅಥವಾ ಎರಡು ಚಮಚ ಹಾಲನ್ನು ಸೇರಿಸಿ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ ಹಾಗೆ ನೀವು ಚೆನ್ನಾಗಿ ಕಾಣುತ್ತೀರಿ. ಹಾಲನ್ನು ಸೇರಿಸಿ ದಾನ ಮಾಡುವುದರಿಂದ ನಿಮ್ಮ ಆಯುಷ್ಯ ವೃದ್ಧಿಯಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ ರ ಮಹಾರಾಜ ಕಾಲದಲ್ಲಿ ರಾಣಿಯರು ಮಾಡುವಾಗ ಸ್ವಲ್ಪ ಹಾಲಿನ ಅಂಶವನ್ನು ಹಾಕಿ ಜಳಕ ಮಾಡುತ್ತಿದ್ದರು.

3. ಹಾಗೆ ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ ಎಳ್ಳು ಮಿಕ್ಸ್ ಮಾಡಿ ಸ್ನಾನ ಮಾಡಿದರೆ, ದೇವಿ ಮಹ ಲಕ್ಷ್ಮಿಯ ಕೃಪೆ ಆಗುತ್ತದೆ , ನಿಮ್ಮ ಮನೆಯಲ್ಲಿ ಆಯ ಆರೋಗ್ಯ ಹಾಗೆ ಧನವು ಪ್ರಾಪ್ತಿಯಾಗುತ್ತದೆ.

4. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ತು ಅಂಶವನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ದೇಹ ಕಾಂತಿಯಿಂದ ಹೊಳೆಯುತ್ತದೆ, ಹಾಗೆ ನಿಮ್ಮ ದೇ ಆರೋಗ್ಯಕರವಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೇನೆಂದರೆ ನಿಮ್ಮ ಚರ್ಮವನ್ನು ಯಾವಾಗಲೂ ತುಪ್ಪವು ಮೃಧುವಾಗಿ ಇರುವ ಹ ನೋಡಿಕೊಳ್ಳುತ್ತದೆ ಇದರಿಂದ ನಿಮ್ಮ ಚರ್ಮ ಬಿರು ಬಿಡಲು ಬರುವುದಿಲ್ಲ.

5. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಶ್ರೀಗಂಧವನ್ನು ಮಿಕ್ಸ್ ಮಾಡಿ ಸ್ನಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂ ಕಷ್ಟ ದುಃಖಗಳು ನಿವಾರಣೆಯಾಗುತ್ತವೆ.

ಸರಳ ಉಪಾಯ
ಶ್ರೀ ಸುಧಾಕರ
******

"ಸ್ನಾನದ ಮಹತ್ವ"

ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ.

ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ.

ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

"ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ".

ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು "ಮುನಿ ಸ್ನಾನ" ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ.

ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ  ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ. ಇದನ್ನು "ದೇವಿ ಸ್ನಾನ" ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.

ಮೂರನೇ ಸ್ನಾನವನ್ನು "ಮನುಷ್ಯ ಸ್ನಾನ" ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ಕೊನೆಯ ಸ್ನಾನ "ರಾಕ್ಷಸಿ ಸ್ನಾನ" ಇದೀಗ ಸಾಮಾನ್ಯವಾಗಿದೆ. 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ. ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ...

🙏 #ಶ್ರೀಕೃಷ್ಣಾರ್ಪಣಮಸ್ತು. 🙏

       #ಸದ್ವಿಚಾರ ಸಂಗ್ರಹ
***

ಕಾರ್ತಿಕ ಸ್ನಾನ

ಅಶ್ವೀನ ಶುಕ್ಲ ದಶಮೀ, ಅಥವಾ ಏಕಾದಶೀ, ಇಲ್ಲವೇ
ಹುಣ್ಣಿವೆಯಿಂದಾರಂಭಸಿ ಪ್ರತಿದಿನ ತೀರ್ಥಾದಿಗಳಲ್ಲಿ ಒಂದು ತಿಂಗಳ
ವರೆಗೆ ಸ್ನಾನಮಾಡತಕ್ಕದ್ದು. 

ಸೂರ್ಯೋದಯಕ್ಕಿಂತ ಮುಂಚೆ ಎರಡು
ಘಟಿ ಇರುವಾಗ ಸ್ನಾನಮಾಡತಕ್ಕದ್ದು. ಇದಕ್ಕೆ “ಕಾರ್ತಿಕ
ಸ್ನಾನ”ವೆನ್ನುವರು.

ಇದರ ಕ್ರಮ ಹೇಗೆಂದರೆ ವಿಷ್ಟು ಸ್ಮರಣೆ ಮಾಡಿ ದೇಶ
ಕಾಲಗಳನ್ನುಚ್ಚರಿಸಿ “ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ!
ನಮುಸ್ತೇಸ್ತು ಹೃಷಿಕೇಶ ಗ್ರಹಾಣಾರ್ಥುಂ೦ ನಮೋಸ್ತುತೇ” ಹೀಗೆ
ಉಚ್ಚರಿಸಿ ಅರ್ಘವನ್ನು ಕೊಟ್ಟು “ಕಾರ್ತಿಕೇಇಹಂ ಕರಿಷ್ಠಾಮಿ
ಪ್ರಾತ:ಸ್ನಾಸಂ ಜನಾರ್ದನ ಓಪ್ರೀತೃರ್ಥಂತವ ದೇವೇಶ
ದಾಮೋದರವಿನಷ್ಯತು! ಧ್ಯಾತ್ರಾಹಂ ತ್ವಾಂಚ ದೇವೇಶ ಜಲೇಸ್ಮಿನ್‌
ಸ್ನಾತುಮುದ್ಯತಃಚೆತವಪ್ರಸಾದಾತ್ರಾಪಂಮೇ
ದಾಮೋದರ ಎನಶೃತು॥” ಈ ಮಂತ್ರಗಳಿಂದ ಸ್ನಾನಮಾಡಿ ಪುನ:
ಎರಡಾವರ್ತಿ ಅರ್ಘವನ್ನು ಕೊಡತಕ್ಕದ್ದು. 

“ನಿತ್ನೇನೈಮಿತ್ತಾಕೇ ಕೃಷ್ಣ
ಕಾರ್ಷಿಕೇ ಪಾಪನಾಶನೇ। ಗೃಹಾಣಾರ್ಘಂ ಮಯಾದತ್ತಂ ರಾಧಮಾ
ಸಹಿತೋಷಹರೇ॥! ವ್ರತಿನ: ಕಾರ್ತಿಕೇಮಾಪಿ ಸ್ನಾತಸ್ಮ ವಿಧಿವನ್ಮ್ನಮ।
ಗೃಹಣಾರ್ಘಂ ಮಯಾದತ್ತಂ ರಾಧಯಾ ಸಹಿತೋಹರೇ” ಇವೇ ಅರ್ಘ
ಮಂತ್ರಗಳು. ಕುರುಕ್ಷೇತ್ರ, ಗಂಗಾ, ಪುಷ್ಕರ ಮೊದಲಾದ
ತೀರ್ಥವಿಶೇಷಗಳಲ್ಲಿ ಪುಣ್ಮವೂ ವಿಶೇಷವೆಂದರಿಯುವದು. ಇಡೀ
ಕಾರ್ತಿಕ ಮಾಸದಲ್ಲಿ ನಿತ್ಯದಲ್ಲೂ ಸ್ನಾನಮಾಡುವದು,
ಜಿತೇಂದ್ರಿಯನಾಗಿರುವದು, ಜಪದಲ್ಲಾಸಕ್ತನಾಗಿರುವದು,
ಹವಿಷ್ಕಾನ್ನವನ್ನು ಭುಂಜಿಸುವದು. ಹೀಗೆ ವ್ರತಸ್ತನಾದರೆ ಸಮಸ್ತ
ಪಾಪಗಳಿಂದ ಮುಕ್ತನಾಗುತ್ತಾನೆ. ಹೀಗೆ ವಿಶೇಷವಿದೆ.

ಭಾಗೀರಥೀ. ವಿಷ್ಣು, ಸೂರ್ಯ ಇವರನ್ನು ಸ್ಮರಿಸಿ ಜಲವನ್ನು
ಪ್ರವೇಶಿಸತಕ್ಕದ್ದು. ವ್ರತಸ್ತನಾದವನು ನಾಭಿಮಾತ್ರದ ಜಲದಲ್ಲಿ
ಯಥಾವಿಧಿಯಾಗಿ ಸ್ನಾನಮಾಡತಕ್ಕದ್ದು. ನಿತ್ಯದ ಪ್ರಾತಃಸ್ನಾನ ಹಾಗೂ
ಸಂಧ್ಯಾವಂದನಗಳ ನಂತರ ಕಾರ್ತಿಕ ಸ್ನಾನವನ್ನು ಮಾಡತಕ್ಕದ್ದು.
ಯಾಕೆಂದರೆ ಅವುಗಳ ಹೊರತು ಕರ್ಮಾಧಿಕಾರ ಪ್ರ್ರಾಪ್ತವಾಗುವದಿಲ್ಲ.
ಪ್ರಾತಃ ಸಂದ್ಯೆಯು ಸೂರ್ಯೋದಯಕ್ಕೆ ಸಮಾಪ್ತವಾಗುವುದಾದರೂ
ಇಲ್ಲಿ ವಚನ ಬಲದಿಂದ ಉದಯಕ್ಕಿಂತ ಮೊದಲು ಸಂಧ್ಯೆಯನ್ನು
ಮುಗಿಸಿ ಕಾರ್ತೀಕ ಸ್ನಾನವನ್ನುಮಾಡತಕ್ಕದೆಂದು “ನಿರ್ಣಯ
ಸಿಂಧು”ವಿನಲ್ಲಿ ಹೇಳಿದೆ. 

ಆದರೆ ಅನ್ಯ ಗ್ರಂಥಗಳಲ್ಲಿ ಹೀಗೆ
ಹೇಳಿರುವುದು ಕಾಣ ಬರುವುದಿಲ್ಲ. ಇಡೀ ಮಾಸದಲ್ಲಿ ಸ್ನಾನ
ಮಾಡಲಸಮರ್ಥರಾದವರು ಕನಿಷ್ಟ ಮೂರು ದಿನವಾದರೂ ಸ್ನಾನ
ಮಾಡತಕ್ಕದ್ದು…

*ಕಾರ್ತಿಕ ಸ್ನಾನ ಮಂತ್ರ: ಕಾರ್ತಿಕೇಯಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ಧ್ಯಾತ್ವಾಹಂ ತ್ವಾಂ ದೇವೇಶ ಜಲೇಸ್ಮಿನ್ ಸ್ನಾತು ಮುದ್ಯತಃ ತವ ಪ್ರಸಾದಾತ್ ಪಾಪಂ ಮೇ  ದಾಮೋದರ ವಿನಶ್ಯತು.

 *ಆರ್ಘ್ಯ ಮಂತ್ರ: ನಮಃ ಕಮಲನಾಭಾಯ ನಮಸ್ತೆ ಜಲಾಶಾಯಿನೇ ನಮಸ್ತೆಸ್ತು ಋಷಿಕೇಷ ಗೃಹಾಣರ್ಘಂ ನಮೋಸ್ತುತೆ!
ವ್ರತಿನೇ ಕಾರ್ತಿಕ ಮಾಸೇ ಸ್ನಾತಸ್ಯ ವಿಧಿವನ್ಮಮ  ಗ್ರಹಣಾರ್ಘಂ  ಮಯಾದತ್ತಂ ಧನುಜೇಂದ್ರ ನಿಷೂಧನ !! ನಿತ್ಯ ನೈಮಿತ್ತಿಕೇ  ಕೃಷ್ಣ ಕಾರ್ತಿಕೇ ಪಾಪನಾಶನೇ ಗೃಹಾಣರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ!!*

 ಸಂಕಲ್ಪ: ಅದ್ಯದಿನ ಮಾರಭ್ಯ  ಮಾಸ ಪರ್ಯಂತಂ ಕಾರ್ತಿಕ ಸ್ನಾನಂ  ಜ್ಞಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ  ಭಾರತೀರಮಣ ಮುಖ್ಯಪ್ರಾಣ ಅಂತರ್ಗತ ಕಾರ್ತಿಕ ರಾಧಾ ದಾಮೋದರ ಅಭಿನ್ನ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಅಹಂ ಆಚರಿಷ್ಯೇ!!

* ದಾಮೋದರ ಸ್ತೋತ್ರವನ್ನು  ಹೇಳಿ ಮಂಗಳಾರತಿಯನ್ನು ಮಾಡಿ ನಂತರ ಸ್ನಾನವನ್ನು ಮಾಡಬೇಕು.

* ಶ್ರೀತುಳಸಿ ವೃಂದಾವನದ ಮುಂದೆ ನಕ್ಷತ್ರ ದೀಪಾರಾಧನೆ ಮಾಡುವುದು.

 * ಸಾಧಕರ ಸಾಧನೆಗೆ ಪಂಚರಾತ್ರ ಸಂಹಿತೆಯಿಂದ  ಒಂದು ಸ್ತೋತ್ರ ಬೆಳಗ್ಗೆ ಎದ್ದ ಕೂಡಲೇ ಹೇಳಲು
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಭಗವನ್ನಾಮಕೀರ್ತನಂ! ಸ್ತೋತ್ರೇಣ ತೋಷಯೇದ್ ವಿದ್ವಾನ್ ಗುರುಮ್ ಸಂಸ್ಮತ್ಯ ಸಾಧಕಃ ! ವಾಸುದೇವಾಯ ದೇವಾಯ ಸಮಗ್ರ ಗುಣ ಮೂರ್ತಯೇ ಸಂಕರ್ಷಣ ನಮಸ್ತೆಸ್ತು ವಿಶ್ವ ಪಾವನ ಮೂರ್ತಯೇ ಅನಿರುದ್ಧ ನಮಸ್ತೆಸ್ತು ಜಗತ್ಕಾರಣ ಮೂರ್ತಯೇ ಕೇಶವಾಯ ನಮಸ್ತೆಸ್ತು ತತೋ ನಾರಾಯಣಾಯ ತೇ ಮಾಧವಾಯ ನಮಸ್ತೆಸ್ತು ಗೋವಿಂದಾಯ ನಮೋ ನಮಃ ವಿಶ್ವಾತ್ಮನ ನಮಸ್ತುಭ್ಯಂ ನಮೋಸ್ತು ಮಧುಸೂದನ ತ್ರಿವಿಕ್ರಮ ನಮಸ್ತೆಸ್ತು ಹೃಷಿಕೇಶಾಯ ತೇ ನಮಃ ನಮಸ್ತೆ ಪದ್ಮನಾಭಯ್ಯ ನಮೋ ದಾಮೋದರ ನಮಸ್ತೆ ಮತ್ಸ ರೂಪಾಯ ನಮಸ್ತೆ ಮೂರ್ತಯೇ ವಾರಾಹಯ ನಮಸ್ತೆಸ್ತು ನಾರಸಿಂಹಾಯ ತೇ ನಮಃ ವಾಮನ ನಮಸ್ತೆಸ್ತು ನಮೋ ರಾಮ ತ್ರಯಾಯ ಚ ಗೋವಿಂದಾಯ ನಮಸ್ತೆಸ್ತು ಹಯಗ್ರೀವಾಯ ತೇ ನಮಃ ಏವಂಸ್ತುತ್ವಾ ವಿಧಾನೇನ ತೀರದೇಶಂ ಸಮಾಸ್ರಯೇತ್ !
9:00 PM
**

No comments:

Post a Comment