SEARCH HERE

Tuesday, 1 January 2019

ಮಾಘ ಮಾಸ ಸ್ನಾನ ಮಹತ್ವ ನಿಯಮ magha masa maagha snana niyama importance


(ಪುಷ್ಯ ಮಾಸದ ಹುಣ್ಣಿಮೆಯಿಂದ ಮಾಘ ಹುಣ್ಣಿಮೆ ತನಕ ಮಾಘ ಸ್ನಾನ)

ಮಾಘಮಾಸದ ಮಹತ್ವ  
ಮಾಘ ಸ್ನಾನದ ಮಹತ್ವ:

ಪುಷ್ಯ ಮಾಸದ ಪೂರ್ಣಿಮಾದಂದು ಮಾಘಸ್ನಾನವು ಪ್ರಾರಂಭವಾಗುತ್ತದೆ ಮಾಘ ಶುದ್ಧ ಹುಣ್ಣಿಮೆಯವರೆಗೂ ಒಂದು ತಿoಗಳು ಪೂರ್ಣವಾಗಿ ಅರುಣೋದಯ ಕಾಲ ಅಥವ ಪ್ರಾತಃ ಕಾಲದಲ್ಲಿ  ನದ್ಯಾದಿಗಳಲ್ಲಿ ಸ್ನಾನವನ್ನು  ಮಾಡಬೇಕು  ಸೂರ್ಯನು ಸ್ವಲ್ಪ ಉದಿತನಾದಾಗ ಸ್ನಾನ  ಮಾಡುವ ಯಾವ ಬ್ರಹ್ಮಘ್ನನನ್ನು ಸುರಾಪಾನಿಯನ್ನು ಪವಿತ್ರ ಮಾಡೋಣವೇoದು ನೀರಿನ  ಅಭಿಮಾನಿದೇವತೆಗಳು ಕೂಗುತ್ತೀರುತ್ತಾರೆ.

ಮಾಘಮಾಸೇ ರಟoತ್ಯಾಪಃ  ಕಿoಚಿದಭ್ಯುದಿತೆ  ರವೌ |
ಬ್ರಹ್ಮಘ್ನಂ ವಾ  ಸುರಾಪಂ ವಾ ಕಂ ಪತಂತಂ ಪುನೀಮಹೇ ||

ಸ್ನಾನ ಕಾಲ - ನಕ್ಷತ್ರವಿರುವಾಗಲೇ ಮಾಡುವ ಮಾಘಸ್ನಾನವು ಉತ್ತಮವಾದದ್ದು ನಕ್ಷತ್ರಗಳು ಕಾಣಿಸದಿರುವಾಗ ಮಾಡುವ ಸ್ನಾನವು ಮಧ್ಯಮ ಸೂರ್ಯನುದಿಸುತ್ತಿರುವಾಗ  ಮಾಡುವಸ್ನಾನ  ಅಧಮ ಸೂರ್ಯೋದಯ ನಂತರದಲ್ಲಿ ಮಾಡುವ ಸ್ನಾನ ಕನಿಷ್ಠವೆನಿಸಿದೆ. 

ಉತ್ತಮo ತು ಸನಕ್ಷತ್ರಂ ಲುಪ್ತತಾರಂತು  ಮಧ್ಯಮಂ |
ಸವಿತರ್ಯುದಿತೇ ಭೂಪ ತತೋ ಹೀನಂ ಪ್ರಕೀರ್ತಿತಮ್ ||

ಕಾರ್ತಿಕ ಮಾಸವು  ಸರ್ವಮಾಸಗಳಲ್ಲಿ ಶ್ರೇಷ್ಠವೆನಿಸಿದ್ದು ಕಾರ್ತೀಕ ಮಾಸಕ್ಕಿoತಲೂ ಮಾಘಮಾಸವು ಲಕ್ಷಪಟ್ಟು ಶ್ರೇಷ್ಠವೆನಿಸಿದೆ ಬ್ರಹ್ಮಹತ್ಯಾದಿ ಸಮಸ್ತಪಾಪಗಳನ್ನು    ಮಾಘ ಸ್ನಾನವು ಪರಿಹರಿಸುತ್ತದೆ. 
      
ಪ್ರಾತಃ ಸ್ನಾನoಪುನಾತೀತಿ  ಮಾಘೋ ಗರ್ಜತಿ ಗರ್ಜತಿ  |
ಅತ್ಯುಗ್ರಪಾಪಿನo ವಾsಪಿ ಪ್ರಾತಃ ಸ್ನಾನತ್ ಪುನೀಮಹೇ ||

ಮಾಘ ಸ್ನಾನವನ್ನು  ಮಾಡಿದವನ  ಪಾಪಗಳನ್ನು  ಚಿತ್ರಗುಪ್ತನು,ತನ್ನ ಪುಸ್ತಕದಲ್ಲಿ ದಾಖಲಾಗಿರುವ ಪಾಪಗಳನ್ನು  ಆಳಿಸಿಹಾಕುವನು. ಇದು  ಯಮನ ಆಜ್ಞೆಯಾಗಿದೆ. 

ಲಿಖಿತಾನಿ ಚ ಪಾಪಾನಿ ಬಹೂನಿ ಯಮಶಾಸನೆ |
ಪರಿಮಾರ್ಜಯತಿ ಕ್ಷಿಪ್ರo ಚಿತ್ರಗುಪ್ತೋ ಯಮಾಜ್ಞಯ ||
ಸಂಕಲ್ಪವಿಲ್ಲದೆ ಮಾಡಿದ ಸ್ನಾನದಾನದಿಗಳಿಗೆ ಅಲ್ಪ ಫಲವು ಹಾಗೆಯೇ ಬoದ  ಪುಣ್ಯದಲ್ಲಿ ಅರ್ಧವು ನಶಿಸುತ್ತದೆ.
ಸಂಕಲ್ಪೇನ ವಿನ ಕರ್ಮ ಯತ್ಕಿoಚಿತ್ ಕುರುತೇ ನರಃ |
ಫಲo ಚಾಪ್ಯಲ್ಪಕo ತಸ್ಯ ಧರ್ಮಸ್ಯಾರ್ಧಕ್ಷಯೋ ಭವೇತ್ ||
  
ಮಾಘ ಸ್ನಾನದ ಫಲ:

ಮಾಘದಲ್ಲಿ  ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6 ವರ್ಷ ಸ್ನಾನಮಾಡಿದ ಫಲ ಮನೆಯಿoದ ಹೊರಗೆಹೋಗಿ  ಭಾವಿಯಲ್ಲಿ ಸ್ನಾನಮಾಡಿದರೆ 12ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ. ಕೆರೆ ಮೊದಲಾದ  ಮಾನವನಿರ್ಮಿತ ತಟಾಕಗಳಲ್ಲಿ  ಸ್ನಾನಮಾಡಿದರೆ  ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ. ನದಿಯಲ್ಲಿ ಸ್ನಾನ  ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ 

ಉದಾ:ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ) ಸ್ನಾನವನ್ನುಮಾಡಿದರೇ  ಹತ್ತು ಪಟ್ಟು (120 ವರ್ಷ ಸ್ನಾನಫಲ)ವು, ಗಂಗಾ, ಯಮುನ, ಸರಸ್ವತೀ ಮುoತಾದ ಸಮುದ್ರವನ್ನು  ನೇರವಾಗಿ ಸೇರುವ ಮಹನದಿಗಳಲ್ಲಿ ಸ್ನಾನ ಮಾಡಿದರೆ  100ಪಟ್ಟು  ಪುಣ್ಯಫಲ (1200 ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ  (ಪ್ರಯಾಗದಿಗಳಲ್ಲಿ)  ಸ್ನಾನ ಮಾಡಿದರೆ  ನಾನೂರು ಪಟ್ಟು (4800ವರ್ಷ ಸ್ನಾನಫಲ)  ಪುಣ್ಯವು ಲಭಿಸುವುದು ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರ ಪಟ್ಟು ಪುಣ್ಯಫಲವು  ಲಭಿಸುತ್ತದೆ ಎಂದು ಮಾಘಮಾಸ ಮಹಾತ್ಮೆಯಲ್ಲಿ ಹೇಳಿದೆ.
      
(ಸೂಚನೆ-ಮಾಘಸ್ನಾನವಿಧಿಯನ್ನು ಪ್ರತ್ಯೇಕ ಕಳಿಸುತ್ತೇನೆ ಧನ್ಯವಾದಗಳು)

                    || ನಾಹಂ ಕರ್ತಾ ಹರಿಃ ಕರ್ತಾ ||
                       || ಕೃಷ್ಣಾರ್ಪಣಮಸ್ತು ||

    ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ಮಾಘ ಸ್ನಾನ ಸಂಕಲ್ಪ 

ಆಚಮ್ಯ......, ಪ್ರಾಣಾಯಾಮ್ಯ....., ಏವಂಗುಣ ವಿಶಿಷ್ಠಾಯಾಂ, ಶುಭತಿಥೌ ಶ್ರೀ ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಮಾಸ ನಿಯಾಮಕ ಮಾಧವ ಪ್ರೇರಣಯಾ ಶ್ರೀ ಮಾಧವ ಪ್ರಿತ್ಯರ್ಥಂ, ಹರೌ ಜ್ನಾನ ಭಕ್ತ್ಯಾದಿ ಸಿಧ್ಯರ್ಥಂ ಮಾಘಸ್ನಾನಮಹಂ ಕರಿಷ್ಯ.

                                      ಪ್ರಾರ್ಥನ

                 ಮಕರಸ್ತೇ ರವೌ ಮಾಘೇ ಗೋವಿಂದಾಚ್ಯುತಮಾಧವ |
                 ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋ ಭವ ||
                 ಕೃಷ್ಣಾಚ್ಯುತ ನಿಮಜ್ಯಾಮಿ ಪ್ರಭಾತೇಸ್ಮಿನ್ ಶುಭೋದಕೇ |
                 ಆನೇನ ಮಾಘಸ್ನಾನೇನ ಸುಪ್ರೀತೋ ಮಾಂ ಸಮುದ್ಧರ ||

ಜಲದಲ್ಲಿ ಮುಳುಗಿ ಸ್ನಾನ ಮಾಡಿ ಮೃತ್ತಿಕೆಯನ್ನು ಧರಿಸಿ ಫುನ ಮುಳುಗಿ ನಂತರ ಅರ್ಘ್ಯವನ್ನು ಕೊಡಬೇಕು.

ಮಾಧವನಿಗೆ ಅರ್ಘ್ಯ_ ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೊರ್ವಕಂ |
                    ಮಾಧವಾಯ ದದಾಮೀದಮರ್ಘ್ಯಂ ಸಮ್ಯಕ್ ಪ್ರಸೀದತು ||
                    ಮಾಧವಾಯ ನಮ: ಇದಮರ್ಘ್ಯಂ |

ಸೂರ್ಯನಿಗೆ ಅರ್ಘ್ಯ_ ಸವಿತ್ರೇ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೇ |
                    ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ || 
                    ಸವಿತ್ರೇ ನಮ: ಇದಮರ್ಘ್ಯಂ 

                    ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ |
                    ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾ ಕೃತಂ ||
****

ವಿಷ್ಣು ಪುರಾಣ ದಲ್ಲಿ ಉಲ್ಲೇಖವಿದೆ , ಯಾರು ಮಾಘಸ್ನಾನ ವೃತವನ್ನು ಮಾಡಿ ಶಂಖ ಚಕ್ರ ರಂಗವಲ್ಲಿ ಹಾಕಿ ವಿಷ್ಣು ವಿಗೆ ಅರ್ಘ್ಯ ವನ್ನು ಕೊಡುತ್ತಾರೋ ಅವರಿಗೆ ಯಾವ ಜನ್ಮದಲ್ಲೂ ದಾರಿದ್ರ್ಯ ಬರುವದಿಲ್ಲ.


ಬನದ ಹುಣ್ಣಿಮೆ ಯಿಂದ ಮಾಘಸ್ನಾನ ಪ್ರಾರಂಭ ವಾಗುತ್ತದೆ . ವೃತ ಹಿಡಿಯುವವರ ಆ ದಿನ ಬ್ರಾಹ್ಮಿ ಮೂಹುರ್ತದಲ್ಲಿ ಎದ್ದು ನಿತ್ಯಕರ್ಮವನ್ನು ಮುಗಿಸಿ ದೇವರ ಮುಂದೆ ನಿಂತು ಸಂಕಲ್ಪ ಮಾಡಿಕೊಳ್ಳಬೇಕು.




ಸಂಕಲ್ಪ




ಬಲಗೈಯಲ್ಲಿ ಅಕ್ಷತೆ ಹಿಡಿದು ಕೊಂಡು ಹೇಳಿ
ಮಮ ಸರ್ವ ಪಾಪಕ್ಷಯ - ದಾರಿದ್ರ್ಯ ದುಃಖ ವಿನಾಶ ಪೂರ್ವಕ ಶ್ರೀ ಮಹಾ ವಿಷ್ಣು ಪ್ರೀತ್ಯರ್ಥಂ ಮಾಘ ಪೂರ್ಣಿಮಾ ಪರ್ಯಂತಂ ಮಾಘಸ್ನಾನಂ ಕರಿಷ್ಯೇ ....‌‌‌ಅಂತ ಸಂಕಲ್ಪಮಾಡಿ ..
ಸ್ನಾನ ದ ನೀರು ಸ್ಪರ್ಶ ಮಾಡಿ 
ಮಾಘಮಾಸ ಮಿದಂ ಪೂರ್ಣಂ ಸ್ನಾಸ್ಯೇಹಂ ದೇವ ಮಾಧವ 
ತೀರ್ಥಸ್ಯಾಸ್ಯ ಜಲೇನಿತ್ಯಮಿತಿ ಸಂಕಲ್ಪ್ಯ ಚೇತಸಿ ll

ಸ್ನಾನಮಾಡುತ್ತಾ ಹೇಳುವ ಶ್ಲೋಕ.

ದುಃಖ ದಾರಿದ್ರ್ಯ ನಾಶಾಯ ಶ್ರೀವಿಷ್ಣೋ ಸ್ತೋಷಣಾಯ ಚ l
ಪ್ರಾತಃಸ್ನಾನಂ ಕರೋಮ್ಯದ್ಯ ಮಾಘೇ ಪಾಪವಿನಾಶನಂ l
ಮಕರಸ್ಥೇ ರವೌ ಮಾಘೇ ಗೋವಿಂದಾಚ್ಯುತ ಮಾಧವ l
ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋ ಭವ ll ಅಂತ ಹೇಳಿ ನಂತರ ಸ್ನಾನವಾದ ಮೇಲೆ
ಹದಿಮೂರು ಶಂಖ 
ಹದಿಮೂರು ಚಕ್ರ , ಪದ್ಮ ಆಕಳು ಪಾದ ಹಾಕಿ 
ವಿಷ್ಣುವಿಗೆ ಅರ್ಘ್ಯ ಕೊಡಬೇಕು

ಅರ್ಘ್ಯ ಕೊಡುವ ಮಂತ್ರ

ಸವಿತ್ರೇ ಪ್ರಸವಿತ್ರೇಚ ಪರಂಧಾಮ ಜಲೇ ಮಮl
ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ll
ನಂತರ ತುಳಸಿ ಪೂಜೆ ಮಾಡಿ ಹಾಲುಸಕ್ಕರೆ ನೈವೇದ್ಯ ತೋರಿಸಬೇಕು.
********

ಬಲವಂತದ ಮಾಘ ಸ್ನಾನ:
ಮಾಘ ಸ್ನಾನ ಒಂದು ತಿಂಗಳು (ಪುಷ್ಯ ಮಾಸದ ಹುಣ್ಣಿಮೆಯಿಂದ ಮಾಘ ಹುಣ್ಣಿಮೆ ತನಕ).

ಯಾರು ಮಾಘ ಸ್ನಾನ ಮಾಡಬೇಕು?
ಪಾಪಗಳನ್ನು ಕಳೆದುಕೊಳ್ಳೋ ಆಸೆ ಇರುವವರು, ಆ ಮೂಲಕ ಮೋಕ್ಷ ಸಾಧನೆ ಮಾಡಬಯಸುವವರು. ಹರಿಯ ಅನುಗ್ರಹ ಅಪೇಕ್ಷಿಸುವವರು.

ಮಾಘ ಸ್ನಾನದಿಂದೇನು ಲಾಭ?
೧. ಯಮ ದೇವರ ಆದೇಶವಿದೆ ಚಿತ್ರಗುಪ್ತರಿಗೆ. ಯಾರು ಮಾಘ ಸ್ನಾನವನ್ನು ಸೂರ್ಯೋದಯದ ಒಳಗೆ ಮಾಡುವರೋ ಅವರ ಪಾಪಗಳನ್ನೆಲ್ಲ ಅಳಿಸಿ ಹಾಕಿ ಎಂದು. ಆದ್ದರಿಂದ ಇದಕ್ಕೆ ಮಾಘ ಎಂದು ಹೆಸರು. ಅಘ ಎಂದರೆ ಪಾಪ, ಮಾ ಎಂದರೆ ಇಲ್ಲದಂತೆ ಮಾಡುವುದು
೨. ಇನ್ನು ಸ್ಥೂಲವಾಗಿ ಹೇಳೋದಾದರೆ, ಬ್ರಹ್ಮ ಹತ್ಯ, ಸುರಾಪಾನ, ಕಳ್ಳತನವೇ ಮೊದಲಾದ ಪಂಚಪಾತಕ ಉಪಪಾತಕಗಳೇ ಹೋಗುವುವು.
೩. ಸಾವಿರ ಕೋಟಿ ಜನ್ನಗಳಲ್ಲಿ ಗಳಿಸಿದ ಪಾಪಗಳನ್ನು ಕಳೆದುಕೊಳ್ಳುವರು.

ಮಾಘ ಸ್ನಾನ ಮಾಡದೆ ಬಿಟ್ಟರೆ ಏನು?
೧. ನದಿ ಭಾವಿ ಸರೋವರದ ಹತ್ತಿರ ಪಿಶಾಚಿಗಳಾಗಿ ತಿರುಗಬೇಕಾಗುವುದು.
೨. ದಾರಿದ್ರ್ಯ ಒದಗುವುದು
೩. ನರಕ ಪ್ರಾಪ್ತಿ

ನಿಯಮ
೧. ಸೂರ್ಯೋದಯದ ಒಳಗೆ ಸ್ನಾನ ಮಾಡಬೇಕು. ಸರಿಯಾದ ಸಂಕಲ್ಪ ಮಂತ್ರ ಹಾಗು ಇನ್ನಿತರ ವಿಧಿ ತಿಳಿದಿಲ್ಲದಿದ್ರೂ  ಕೊನೆ ಪಕ್ಷ  ಅಸ್ಮದ್ ಗುರುಗಳ ಅಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಕಮಲಾ ಮಾಧವನ ಪ್ರೀತ್ಯರ್ಥವಾಗಿ ಸ್ನಾನ ಮಾಡುವೆ ಅಂಥ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಸ್ನಾನ ಮಾಡಿ ಮಾಧವನಿಗೆ ಅದನ್ನು ಸಮರ್ಪಣೆ ಮಾಡತಕ್ಕದ್ದು.
೨. ದಾನಗಳನ್ನು ವಿಶೇಷವಾಗಿ ಮಾಡಬೇಕು, ಅದರಲ್ಲೂ ತಿಲದಾನ (ಎಳ್ಳು - ಕರಿ, ಬಿಳಿ, ಕಂದು) ಶ್ರೇಷ್ಠ, ಕಂಬಳಿ (Rug), ಸಾಲಿಗ್ರಾಮ, etc
೩. ತಾನು ಮಾಡಿ ತಮ್ಮವರಿಂದಲೂ ಈ ಸ್ನಾನ ಮಾಡುವಂತೆ ಹೇಳಬೇಕು

👆👆👆 ಇಷ್ಟೆಲ್ಲ ವಿಷಯಗಳನ್ನು ಒಳಗೊಂಡ ಕಾರಣ ಬಾಕಿ ಸ್ನಾನಗಳಂತೆ (ಕಾರ್ತೀಕ, ವೈಶಾಖ, ಆಷಾಡ) ಈ ಮಾಘ ಸ್ನಾನವನ್ನು ನೋಡುವುದಲ್ಲ ಎಂದೇ ಬಲವಂತದ ಮಾಘ ಸ್ನಾನ ಎಂಬುದಾಗಿ ರೂಢಿಯಲ್ಲಿ ಬಂದಿದೆ.


ತನ್ನ ಹಾಗು ತನ್ನವರ ಉದ್ಧಾರ ಬಯಸುವ ಯಾವ ವ್ಯಕ್ತಿ ತಾನೇ ಇಂಥಾ ಪವಿತ್ರವಾದ ಮಾಘ ಸ್ನಾನವನ್ನು ಮಾಡಬಯಸುವುದಿಲ್ಲ.....?!!!
*******

ಮಾಘಮಾಸ ಮಾಘಸ್ನಾನ ನಿಯಮಗಳು - 

ಭಾರತೀಯ ಸಂಸ್ಕೃತಿಯಲ್ಲಿ ಕೆಲವು ಮಾಸಗಳಿಗೆ ತುಂಬಾ ವಿಶೇಷ ಮಹತ್ವವಿದೆ, ಅದರಲ್ಲಿ "ಮಾಘ" ಮಾಸದ ಮಹಿಮೆಯೂ ಅಪಾರವಾದದ್ದು ..


ಮಾಘಮಾಸದ ಮಹತ್ವ ||

|| ಭಾಗ-1 ||
****

ಪುಷ್ಯ ಮಾಸದ ಪೂರ್ಣಿಮಾದoದು ಮಾಘಸ್ನಾನವು ಪ್ರಾರಂಭವಾಗುತ್ತದೆ ಮಾಘಶುದ್ಧಹುಣ್ಣಿಮೆಯವರೆಗೂ ಒಂದು ತಿoಗಳು ಪೂರ್ಣವಾಗಿ ಅರುಣೋದಯ ಕಾಲ ಅಥವ ಪ್ರಾತಃ ಕಾಲದಲ್ಲಿ ನದ್ಯಾದಿಗಳಲ್ಲಿ ಸ್ನಾನವನ್ನು ಮಾಡಬೇಕು ಸೂರ್ಯನು ಸ್ವಲ್ಪ ಉದಿತನಾದಾಗ ಸ್ನಾನ ಮಾಡುವ ಯಾವ ಬ್ರಹ್ಮಜ್ಞನನ್ನು ಸುರಾಪಾನಿಯನ್ನು ಪವಿತ್ರ ಮಾಡೋಣವೇoದು ನೀರಿನ ಅಭಿಮಾನಿದೇವತೆಗಳು ಕೂಗುತ್ತೀರುತ್ತಾರೆ.

“ಮಾಘಮಾಸೇ ರಟoತ್ಯಾಪಃ ಕಿoಚಿದಭ್ಯುದಿತೆ ರವೌ
ಬ್ರಹ್ಮಜ್ಞಂ ವಾ ಸುರಾಪಂ ವಾ ಕಪತಂತಂ ಪುನೀಮಹೇ”

ಸ್ನಾನ ಕಾಲ -ನಕ್ಷತ್ರವಿರುವಾಗಲೇ ಮಾಡುವ ಮಾಘಸ್ನಾನವು ಉತ್ತಮವಾದದ್ದು ನಕ್ಷೆಗಳು ಕಾಣಿಸದಿರುವಾಗ ಮಾಡುವ ಸ್ನಾನವು ಮಧ್ಯಮ ಸೂರ್ಯನುದಿಸುತ್ತಿರುವಾಗ ಮಾಡುವಸ್ನಾನ ಅಧಮ ಸೂರ್ಯೋದಯ ನಂತರದಲ್ಲಿ ಮಾಡುವ ಸ್ನಾನ ಕನಿಷ್ಠವೆನಿಸಿದೆ.

“ಉತ್ತಮಂ ತು ಸನಕ್ಷತ್ರಂ ಲುಪ್ತತಾರಂ ತು ಮಧ್ಯಮಂ
ಸವಿತರ್ಯುದಿತೇ ಭೂಪ ತತೋ ಹೀನಂ ಪ್ರಕೀರ್ತಿತಮ್”

|| ಭಾಗ-2 ||
****
ಕಾರ್ತಿಕ ಮಾಸವು ಸರ್ವಮಾಸಗಳಲ್ಲಿ ಶ್ರೇಷ್ಠವೆನಿಸಿದ್ದು
ಕಾರ್ತೀಕಮಾಸಕ್ಕಿಂತಲೂ ಮಾಘಮಾಸವು ಲಕ್ಷಪಟ್ಟು ಶ್ರೇಷ್ಠವೆನಿಸಿದೆ ಬ್ರಹ್ಮಹತ್ಯಾದಿ ಸಮಸ್ತಪಾಪಗಳನ್ನು ಮಾಘ ಸ್ನಾನವು ಪರಿಹರಿಸುತ್ತದೆ.

“ಪ್ರಾತಃ ಸ್ನಾನಂ ಪುನಾತೀತಿ ಮಾಘೋ ಗರ್ಜತಿ ಗರ್ಜತಿ
ಅತ್ಯುಗ್ರಪಾಪಿನಂ ವಾsಪಿ ಪ್ರಾತಃ ಸ್ನಾನತ್ ಪುನೀಮಹೇ”

ಮಾಘ ಸ್ನಾನವನ್ನು ಮಾಡಿದವನ ಪಾಪಗಳನ್ನು ಚಿತ್ರಗುಪ್ತನು,ತನ್ನ ಪುಸ್ತಕದಲ್ಲಿ ದಾಖಲಾಗಿರುವ ಪಾಪಗಳನ್ನು ಆಳಿಸಿಹಾಕುವನು.ಇದು ಯಮನ ಆಜ್ಞೆಯಾಗಿದೆ.

“ಲಿಖಿತಾನಿ ಚ ಪಾಪಾನಿ ಬಹೂನಿ ಯಮಶಾಸನೆ
ಪರಿಮಾರ್ಜಯತಿ ಕ್ಷಿಪ್ರಂ ಚಿತ್ರಗುಪ್ತೋ ಯಮಾಜ್ಞಯ”

ಸಂಕಲ್ಪವಿಲ್ಲದೆ ಮಾಡಿದ ಸ್ನಾನದಾನದಿಗಳಿಗೆ
ಅಲ್ಪ ಫಲವು ಹಾಗೆಯೇ ಬಂದ ಪುಣ್ಯದಲ್ಲಿ ಅರ್ಧವು ನಶಿಸುತ್ತದೆ.

“ಸಂಕಲ್ಪೇನ ವಿನ ಕರ್ಮ ಯತ್ಕಿಂಚಿತ್ ಕುರುತೇ ನರಃ
ಫಲo ಚಾಪ್ಯಲ್ಪಕಂ ತಸ್ಯ ಧರ್ಮಸ್ಯಾರ್ಧಕ್ಷಯೋ ಭವೇತ್”.

|| ಭಾಗ-3 ||
****

| ಮಾಘಸ್ನಾನದ ಫಲ |

ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6 ವರ್ಷಸ್ನಾನ ಮಾಡಿದ ಫಲ ಮನೆಯಿಂದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12 ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ . ಕೆರೆ ಮೊದಲಾದ ಮಾನವ ನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ. ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ
ಉದಾಹರಣೆ -:ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ )ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120ವರ್ಷ ಸ್ನಾನಫಲ)ವು ,
ಗಂಗಾ ,ಯಮುನ ,ಸರಸ್ವತೀ ಮುಂತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ (1200ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ ( ಪ್ರಯಾಗಾದಿಗಳಲ್ಲಿ ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರಪಟ್ಟು ಪುಣ್ಯಫಲವು ಲಭಿಸುತ್ತದೆ.

|| ಭಾಗ-4 ||
****

      🌷🌺ಮಾಘಸ್ನಾನ ವಿಧಿ🌺🌷

ಮಾಘಮಾಸದಲ್ಲಿ ಮಾಧವರೂಪಿ ಪರಮಾತ್ಮನ ಪ್ರೀತ್ಯರ್ಥವಾಗಿ
ಪ್ರತಿನಿತ್ಯ ನದಿಸ್ನಾನವನ್ನು ಅರುಣೋದಯ ಕಾಲದಲ್ಲಿ ಮಾಡಬೇಕು .

 ಪುಷ್ಯಶುದ್ಧ ಹುಣ್ಣಿಮೆಯಿಂದ ಆರಂಭಿಸಿ  ಮಾಘಶುದ್ಧಹುಣ್ಣಿಮೆಯವರೆಗೆ ಒಂದು ತಿಂಗಳು ಪೂರ್ಣವಾಗಿ  ಅರುಣೋದಯಕಾಲ ಅಥವಾ ಪ್ರಾತಃಕಾಲದಲ್ಲಿ ಮಾಘಸ್ನಾನವನ್ನು  ಮಾಡಬೇಕು .

ಆಚಮನ ಪ್ರಾಣಾಯಾಮಗಳನ್ನು ಮಾಡಿ ಸ್ನಾನ ಸಂಕಲ್ಪವನ್ನು ಮಾಡುವುದು.
ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ, ಬೌದ್ಧಾವತಾರೆ -ಶ್ರೀರಾಮಕ್ಷೆತ್ರೇ- ಅಸ್ಮಿನ್ ವರ್ತಮಾನೆ - ಸಂವತ್ಸರೇ -ಆಯಣೇ -ಋತೌ-ಮಾಸೇ-ಪಕ್ಷೇ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾಂ-ಶುಭ ತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ  ಸನ್ನಿಧೌ, ಸಾಲಿಗ್ರಾಮ ,ಚಕ್ರಾಂಕಿತ -ಶ್ರೀವಿಷ್ಣು-ವೈಷ್ಣವ-ಗೊ-ತುಳಸಿ - ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಾಧವಪ್ರೀತ್ಯರ್ಥಂ ಮಾಘಸ್ನಾನಮಹo ಕರಿಷ್ಯೇ”  ಎಂದು ಸಂಕಲ್ಪಿಸಿ
 ನಂತರ ಮಾಧವನನ್ನು ಪ್ರಾರ್ಥಿಸಬೇಕು .ಹೀಗೆ ಸಂಕಲ್ಪಿಸಿ ನಂತರ ಮಾಧವನನ್ನು ಪ್ರಾರ್ಥಿಸಿ  ಮೌನಿಯಾಗಿ ಸ್ನಾನವನ್ನು ಮಾಡಬೇಕು

ಮಾಘಸ್ನಾನಮಿದಂ ಪೂರ್ಣಂ ನ್ನಾಸ್ಯೇಹಂ ದೇವ ಮಾಧವ |
ತೀರ್ಥಸ್ಯಾಸ್ಯ ಜಲೆನಿತ್ಯಮಿತಿ ಸಂಕಲ್ಪ್ಯ ಚೇತಸಿ ||

ಎಂದು ಯಾವುದಾದರೂ ತೀರ್ಥದಲ್ಲಿ ಒಂದು ತಿಂಗಳವರೆಗೂ ಸ್ನಾನಮಾಡುವುದಾಗಿ ಸಂಕಲ್ಪಮಾಡಬೇಕು .

🌷ಸ್ನಾನಮಂತ್ರ 🌷

ಮಾಘಮಾಸೇ ರಟಂತ್ಯಾಪಃ ಕಿಂಚಿಬ್ಯುದಿತೇ ರವೌ |
ಬ್ರಹಘ್ನಂ ವಾ ಸುರಾಪಾಂ ವಾ ಕಂ ಪತಂತಂ ಪುನೀಮಹೇ ||

ದುಃಖದಾರಿದ್ರ್ಯನಾಶಾಯ ಶ್ರೀವಿಷ್ಣೋಸ್ತೋಷಣಾಯ ಚ |
ಪ್ರಾತಃಸ್ನಾನಂ ಕರೋಮ್ಯದ್ಯ ಮಾಘೇಪಾಪವಿನಾಶನಮ್ ||

ಮಕರಸ್ಥೆರವೌ ಮಾಘೇ ಗೋವಿಂದಾಚ್ಯುತ ಮಾಧವ |
 ಸ್ನಾನೇನಾನೇನ ಮೇ ದೇವ ಯಥೋಕ್ತ ಫಲದೋ ಭವ ||

ಕೃಷ್ಣಾಚ್ಯುತ ನಿಮಜ್ಜಾಮಿ ಪ್ರಭಾತೇಸ್ಮಿನ್ ಶುಭೋದಕೇ |
ಅನೇನ ಮಾಘಸ್ನಾನೇನ ಸುಪ್ರಿತೋ ಮಾಂ ಸಮುದ್ಧರ ||

ಮಾಘಸ್ನಾನಂ ಕರಿಷ್ಯಾಮಿ ಮಕರಸ್ಥೇ ದಿವಾಕರೇ |
ಅಸಮಾಪ್ತಿ ಮಹಾದೇವ ನಿರ್ವಿಘ್ನಂ ಕುರು ಮಾಧವ  ||

ಈ ಮಂತ್ರಗಳನ್ನು ಹೇಳಿ ಸ್ನಾನಮಾಡಬೇಕು .

ಸ್ನಾನಾ ನಂತರ ಮಾಧವರೂಪಿ ಪರಮಾತ್ಮನಿಗೆ ಮತ್ತು ಸೂರ್ಯನಿಗೆ ವಿಶೇಷವಾಗಿ  ಅರ್ಘ್ಯವನ್ನು  ಕೊಡಬೇಕು .

🌷ಅರ್ಘ್ಯಮಂತ್ರ 🌷

 || ಶ್ರೀಮಾಧವಾರ್ಘ್ಯ ಮಂತ್ರ ||

ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೂರ್ವಕಮ್ |
ಮಾಧವಾಯ ದದಾಮಿದಂ ಅರ್ಘ್ಯಂ ಸಮ್ಯಕ್ ಪ್ರಸಿದತು ||

ಮಾಧವಾಯನಮಃ ಇದಂ ಅರ್ಘ್ಯಂ ಸಮರ್ಪಯಾಮಿ

🌺ಸೂರ್ಯಾರ್ಘ್ಯ ಮಂತ್ರ🌺

ಸವಿತ್ರೆ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೆ |
ತ್ವತ್ತೇಜಸಾ ಪರಿಭೃಷ್ಟಂ ಪಾಪಂ ಯಾತು ಸಹಸ್ರಧಾ ||

ಸವಿತ್ರೇನಮಃ ಇದಮರ್ಘ್ಯಂ ಸಮರ್ಪಯಾಮಿ

ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ |
ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾಕೃತಮ್
ಎಂದು ಅರ್ಘ್ಯವನ್ನು ಕೊಟ್ಟು ಸೂರ್ಯನನ್ನು ಪ್ರಾರ್ಥಿಸಬೇಕು .

************

 ಭಾಗ- 5 ::

************

ಮಾಘಮಾಸದ ಕರ್ತವ್ಯಗಳು ಮತ್ತು ಮಾಘಮಾಸದಲ್ಲಿ ಕೊಡಬೇಕಾದ ದಾನಗಳು -

ತ್ರಿಕಾಲಂ ಚಾರ್ಚಯೇದ್ವಿಷ್ಣುಂ ವಾಸುದೇವಂ ಸನಾತನಂ ||
ದಾತವ್ಯೋ ದೀಪಕೋಖಂಡೋ ದೇವ ಮುದ್ಧಿಶ್ಯ ಮಾಧವಂ |
ಇಂಧನಂ ಕಂಬಲಂ ವಸ್ತ್ರಮುಫಾತ್ಕುಂಕುಮಂ ಘೃತಮ್ ||
ತೈಲಂ ಕಾರ್ಪಸಕೋಷ್ಠಂ ಚ ಉಷ್ಣೀಂ ತೂಲವತೀಂ ಪಟೀಮ್ |
ಅನ್ನo ಚೈವ ಯಥಾಶಕ್ತಿ ದೇಯ ಮಾಘೇ ನರಾದಿಪ ||

ಮಾಘಮಾಸದಲ್ಲಿ ತ್ರಿಕಾಲಗಳಲ್ಲೂ ವಾಸುದೇವನನ್ನು ಪೂಜಿಸುವುದು,ತೀಲಾಜ್ಯ (ಎಳ್ಳು ಮತ್ತು ತುಪ್ಪ )ದಿoದ ಹೋಮಿಸುವುದು ,ನೆಲದ ಮೇಲೆ ಮಲಗುವುದು ,ಶ್ರೀಹರಿ ಮಾಧವನನ್ನು ಉದ್ದೇಶಿಸಿ ಅಖಂಡ ದೀಪಗಳನ್ನು :ದಾನವನ್ನು ಕೊಡಬೇಕು .ಕಂಬಳಿ ,ಧಾವಳಿ ,ಶಾಲು, ವಸ್ತ್ರ,ದಾನ ,ಪಾದರಕ್ಷೆ ,ತುಪ್ಪ *ಕುಂಕುಮ ,ಎಣ್ಣೆ ,ಹತ್ತಿ ,ಬಟ್ಟೆ ಯಥಾಶಕ್ತಿ ಅನ್ನದಾನ ,ಸುವರ್ಣದಾನ ಮಾಡುವುದು ವಿಹಿತವಾಗಿದೆ .
ಶಾಲಿಗ್ರಾಮದಾನ ,,ಶಾಲು ದಪ್ಪ ನೂಲಿನವಸ್ತ್ರ, ಮತ್ತು ಬೆಚ್ಚಗಿನ ಅಗ್ನಿತಾಪನ ,ಸಾಧನಗಳನ್ನು ದಾನ ಮಾಡಬೇಕು ಎಂದು ಮಾಘಮಾಸ ಮಹಾತ್ಮೆಯಲ್ಲಿ ತಿಳಿಸಿದ್ದಾರೆ.

ಮಾಘಮಾಸದಲ್ಲಿ ಪ್ರತಿದಿವಸ ದಂಪತಿಗಳಿಗೆ ಭೋಜನ ಮಾಡಿಸಿ ವಸ್ತ್ರ ದಾನ ಮಾಡಬೇಕು

ಮಾಘೇ ಮಾಸ್ಯುಷಸಿ ಸ್ನಾನಂ ಕೃತ್ವಾ ದಂಪತ್ಯಮರ್ಚಯೇತ್ |
ಭೋಜಯಿತ್ವಾ ಯಥಾಶಕ್ತಿ | ಮಾಲ್ಯವಸ್ತ್ರವಿಭೂಷಣೈಃ ||

**************

:: ಮಾಘಮಾಸದಲ್ಲಿ ತಿಲ(ಎಳ್ಳು )ಪಾತ್ರದಾನದ ಮಹತ್ವ ::

***************

ಮಾಘಮಾಸದಲ್ಲಿ ತಿಲ(ಎಳ್ಳು )ದಾನವು ಅತ್ಯoತ ಶ್ರೇಷ್ಠವಾಗಿದ್ದು ಎಳ್ಳಿನ (ತಿಲ)ದಾನವು ಮಾಧವನಿಗೆ ಪ್ರೀತಿಯನ್ನುoಟು ಮಾಡುತ್ತದೆ ಎಳ್ಳನ್ನು ತಾಮ್ರ,ಕಂಚು ಮುಂತಾದ ಲೋಹದ ಪಾತ್ರೆಗಳಲ್ಲಿ ಹಾಕಿ ವಿಪ್ರನಿಗೆ ದಾನ ಮಾಡಿದರೆ ಮಾತು-ಮನಸ್ಸು -ದೇಹ ಇವುಗಳಿಂದ ಮಾಡಿದ ಪಾಪಗಳು ನಾಶವಾಗುತ್ತದೆ.

“ತಾಮ್ರ ಪಾತ್ರೆ ತಿಲಾನ್ ಕೃತ್ವಾ ಸಹಿರಣ್ಯಂ ಸ್ವಶಕ್ತಿತಃ” |
“ನಾಶಯೇತ್ ತ್ರಿವಿದಂ ಪಾಪಂ ವಾಙ್ಮನಃಕಾಯ ಸಂಭವಮ್” ||

ಪ್ರಾತಃಕಾಲದಲ್ಲಿ ತಿಲ ದಾನವನ್ನು ಮಾಡಿದರೆ ದುಃಸ್ವಪ್ನಗಳು ಫಲವನ್ನು ನೀಡಲಾರವು.

|| ತಿಲದಾನಮಂತ್ರ ||

ದೇವ ದೇವ ಜಗನ್ನಾಥ ವಾoಚಿತಾರ್ಥ ಫಲಪ್ರದ |
ತಿಲ ಪಾತ್ರಂ ಪ್ರಾದಸ್ಯಾಮಿ ತವಾಂಗೇ ಸಂಸಸ್ಥಿತೋ ಹ್ಯಹಮ್ ||
ಇದಂ ತಿಲಪಾತ್ರಂ ಯಮ ದೈವತ್ಯಂ
ಬ್ರಹ್ಮಲೋಕಪ್ರಾಪ್ತಿಕಾಮಃ ಸಂಪ್ರದದೆ ದತ್ತಂ ನ ಮಮ |
ಆನೇನ ತಿಲ ಪಾತ್ರದಾನೇನ ಮಾಧವಃ ಪ್ರೀಣಾತು ||
- ಈ ಮಂತ್ರದಿಂದ ಬ್ರಾಹ್ಮಣನಿಗೆ ತಿಲ ಪಾತ್ರೆಯನ್ನು ದಾನ ಕೊಡುವುದು.

ಮಾಘಮಾಸದಲ್ಲಿ ಎಳ್ಳಿನಿಂದ ಸ್ನಾನ ,ಎಳ್ಳು ದಾನ, ಎಳ್ಳೆಣ್ಣೆ ದೀಪದಾನ ,ತಿಲದಿಂದ ಹೋಮಾದಿಗಳು ವಿಶೇಷವಾಗಿದ್ದು ಪಾಪ ಪರಿಹಾರಕವಾಗಿವೆ.

***********
ತಿಲ ಶರ್ಕರದಾನದ ಮಹತ್ವ :
***********

ಮಾಘಮಾಸದಲ್ಲಿ ಪೂರ್ತಿ ಮೂರುಭಾಗ ಎಳ್ಳು ,ಒಂದು ಭಾಗ ಸಕ್ಕರೆಯನ್ನು ಮಿಶ್ರ ಮಾಡಿ ದೊಡ್ಡ ಮೊತ್ತದ ದಕ್ಷಿಣೆಯೊoದಿಗೆ ಬ್ರಾಹ್ಮಣರಿಗೆ ದಾನ ಮಾಡಬೇಕು ಇದರರ್ಥ ಎಳ್ಳು ಮತ್ತು ಸಕ್ಕರೆಯಿoದ ತಯಾರಿಸಿದ ಎಳ್ಳುಂಡೆಗಳನ್ನು ಮಾಡಿ ಭಗವಂತನಿಗೆ ನೀವೇದಿಸಿ ದಾನ ಮಾಡಿದರೆ ಮಾಸ- ನಿಯಾಮಕನಾದ ಮಾಧವ ರೂಪಿ ಪರಮಾತ್ಮನು ಪ್ರೀತನಾಗುವನು. ಪ್ರತಿದಿವಸದಲ್ಲಿ ದಾನವು ಅಶಕ್ಯವಾದಾಗ ‘ರಥಸಪ್ತಮಿ’ ಪೌರ್ಣಿಮೆ ಮುಂತಾದ ದಿವಸಗಳಲ್ಲಾದರು ದಾನವನ್ನು ಮಾಡಬೇಕು .

      || ಶ್ರೀಕೃಷ್ಣಾರ್ಪಣಮಸ್ತು ||


|| ಶ್ರೀ ದಶಪ್ರಮತಿ ವ್ರತಾನುಷ್ಠಾನ ಚಿಂತನ ||
****************


ಮಾಘ ಸ್ನಾನವು ತುಂಬಾ ಪುಣ್ಯಕರವಾದದ್ದು, ಮಾಘಮಾಸದಲ್ಲಿ ನದೀಸ್ನಾನ ತುಂಬಾ ಮಹತ್ವ ಪಡೆದಿರುತ್ತದೆ..
ಈ ಮಾಸದಲ್ಲಿ ಎಷ್ಟು ದಾನ ಮಾಡುತ್ತೀರೋ, ಅಷ್ಟೂ ಶ್ರೇಯೋಭಿವೃದ್ಧಿಗಳು ದೊರೆಯುತ್ತವೆ..
"ಈ ಮಾಸದಲ್ಲಿ ಸೂರ್ಯನಾರಾಯಣ ದೇವರ ಪೂಜೆ, ಸ್ತೋತ್ರ ಪಠನೆಯಿಂದ , ಸರ್ವ ಸಮಸ್ಯೆಗಳೂ ನಿವಾರಣೆಯಾಗಿ ಆರೋಗ್ಯವಂತರಾಗಿ, ಸುಖ ಜೀವನ ಅನುಭವಿಸುವಿರಿ..

ನಿಯಮಗಳು.

ಮಾಘಸ್ನಾನವನ್ನು ಬೆಳಗಿನ ಜಾಗವೇ ಮಾಡಬೇಕು..

೨. ಸ್ನಾನ ಮಾಡುವವರು ಸ್ನಾನದ ನೀರಿಗೆ ಚಿಟಿಕೆ ಅರಿಸಿನ, ಹಸುವಿನ ಗಂಜು, ಒಂದು ದರ್ಭೆ ಹಾಕಿ ಪ್ರತಿದಿನ ಸ್ನಾನ ಮಾಡಬೇಕು..

೩. ಮಾಘಸ್ನಾನ ಮಾಡುವವರು ಮೊದಲ ದಿನ "ಪ್ರಾಯಶ್ಚಿತ್ತ ಸಂಕಲ್ಪ " ಮಾಡಿಕೊಂಡಿರಬೇಕು..

೪. ಪ್ರತಿದಿನವೂ ಕಥೆ ಓದಿದ ಮೇಲೆ..
"ಸಾವಿತ್ರೇ ಪ ಸಮಿತ್ತೇ ಚ ಪರಂಧಾಮ ಜಲೇ ಮಮ |
ತ್ವತ್ರೇಜ ಸಾಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ||"

ಎಂದು ನಿಂಬೆಹಣ್ಣು, ತುಳಸೀದಳ, ಗರಿಕೆ, ಬಿಳಿಸಾಸುವೆ, ದರ್ಭೆಗಳನ್ನು ಹಿಡಿದು ಹಾಲಿನಲ್ಲಿ ಮೂರುಸಲ ಅರ್ಘ್ಯ ಕೊಡಬೇಕು.
ಆ ಹಾಲನ್ನು ತೀರ್ಥವಾಗಿ ಸೇವಿಸಬೇಕು ..

೫. ಮಾಘಮಾಸದಲ್ಲಿ ಎಳ್ಳು, ನೆಲ್ಲಿಕಾಯಿ, ಸಕ್ಕರೆ , ಬಿಳಿ ಕಲ್ಲುಸಕ್ಕರೆ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಶ್ರೇಯಸ್ಸಾಗುತ್ತದೆ..

೬. ಮಾಘಸ್ನಾನ ಮಾಡುವವರು ರಾತ್ರಿ ಕಾಲದಲ್ಲಿ ಉಪವಾಸ ಇರಬೇಕು..
(ಅಶಕ್ತರು ಹಾಲು ಹಣ್ಣು ರವೆಯ ಪದಾರ್ಥ ಸೇವಿಸಬಹುದು)

೭. ಏನೇ ದಾನ ಮಾಡಿದರೂ ಬೆಳಗಿನ ಸಮಯದಲ್ಲೇ ದಾನ ಮಾಡಬೇಕು..

೮. ಪ್ರತಿದಿನವೂ ಕಥೆ ಓದುವ ಮೊದಲು "ಸೂರ್ಯಹೃದಯ ಮತ್ತು ಸೂರ್ಯಕವಚ ಓದಬೇಕು..
ಆಯಾದಿನದ ಕಥೆ ಓದಿದ ಮೇಲೆ ತಾಂಬೂಲ ದಾನ ಮಾಡುವುದು ತುಂಬಾ ಶ್ರೇಷ್ಠ..

೯. ಮಾಘಮಾಸದ ಕಥೆ ಪಾರಾಯಣದ ಮುಂಚೆ ಅಧ್ಯಾಯದ ಕೊನೆಯಲ್ಲಿ ಬರುವ ಮಂತ್ರಗಳನ್ನು ತಿಳಿದು ಜಪಿಸಬೇಕು..

೧೦. ಮಾಘಸ್ನಾನವನ್ನು ಬೆಳಗಿನ ಜಾವ ೪ ಘಂಟೆಯ ನಂತರ ೫.೪೫ ರ ಒಳಗೆ ಮಾಡುವುದು ಉತ್ತಮ..

🌷ಮಾಘಸ್ನಾನದ ಫಲ🌷

ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6ವರ್ಷಸ್ನಾನಮಾಡಿದ ಫಲ .

ಮನೆಯಿoದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ

ಕೆರೆ ಮೊದಲಾದ ಮಾನವನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ

ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು .

ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ 
ಉದಾ:ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ )ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120ವರ್ಷ ಸ್ನಾನಫಲ)ವು ,

ಗಂಗಾ ,ಯಮುನ ,ಸರಸ್ವತೀ ಮುoತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿ ಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ

(1200ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ (ಪ್ರಯಾಗದಿಗಳಲ್ಲಿ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು

ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರ ಪಟ್ಟು ಪುಣ್ಯಫಲವು ಲಭಿಸುತ್ತದೆ ಎಂದು ಮಾಘಮಾಸ ಮಹಾತ್ಮೆಯಲ್ಲಿ ಹೇಳಿದೆ.
********
ಮಾಘಸ್ನಾನದ ಮಹತ್ವ ದಿನಾಂಕ 28/01/2021ರಿಂದ ಮಾಘಸ್ನಾನ ಪ್ರಾರಂಭ.
 ಪಂ.ಜಯತೀರ್ಥಾಚಾರ್ಯ ಹಾವನೂರ  


ಪೌಷಮಾಸದ ಶುಕ್ಲಪಕ್ಷ ಪೌರ್ಣಿಮಾ ದಿನದಂದು ಪ್ರಾರಂಭಿಸಲ್ಪಟ್ಟ ಮಾಘಸ್ನಾನ ಮಾಘಮಾಸದ ಶುಕ್ಲಪಕ್ಷ ಪೌರ್ಣಿಮಾ ಸಮಾಪ್ತಿ ಗೊಳಿಸಬೇಕು.
ಅಥವಾ ಮಕರಸಂಕ್ರಮಣದಿಂದ ಪ್ರಾರಂಭಿಸಿ ಕುಂಭಸಂಕ್ರಮಣದವರೆಗೆ ಮಾಘಸ್ನಾನ ಮಾಡಬೇಕು.

ಬ್ರಹ್ಮಚಾರಿ , ಗೃಹಸ್ಥ, ವಾನಪ್ರಸ್ಥ, ಸಂನ್ಯಾಸಿ, ಮಕ್ಕಳು, ವೃದ್ಧರು, ಸ್ತ್ರೀಯರು –ಹೀಗೆ ಪ್ರತಿಯೊಬ್ಬರೂ ಮಾಘಸ್ನಾನಕ್ಕೆ ಅಧಿಕಾರಿಗಳು.

ಮಕರ ಸಂಕ್ರಮಣದಂದು ಮನೆಯಲ್ಲಿ ಬಿಸಿನೀರಿನಿಂದ ಸ್ನಾನ ಮಾಡಿದರೂ ಆರುವರ್ಷ ಸ್ನಾನಮಾಡಿದ ಪುಣ್ಯ ದೊರಕುವುದು.

ಬಾವಿ ಇತ್ಯಾದಿಗಳಲ್ಲಿ ಮಿಂದರೆ ಹನ್ನೆರಡುವರ್ಷ ಸ್ನಾನದ ಫಲ;

ಕೆರೆಯಲ್ಲಿ ಮಿಂದರೆ ಅದಕ್ಕಿಂತ ಎರಡುಪಟ್ಟು ಫಲ;

ನದಿಯಲ್ಲಿ ಮಿಂದರೆ ನಾಲ್ಕುಪಟ್ಟು ಫಲ;

ಮಹಾನದಿಯಲ್ಲಿ ಮಿಂದರೆ ನೂರುಪಟ್ಟು ಪುಣ್ಯ;

ಮಹಾನದಿ ಸಂಗಮದಲ್ಲಿ ಮಿಂದರೆ ಇನ್ನೂ ನಾಲ್ಕುಪಟ್ಟು ಹೆಚ್ಚು ಫಲ;

ಗಂಗೆಯಲ್ಲಿ ಮಿಂದರೆ ಸಾವಿರಪಟ್ಟು ಪುಣ್ಯ;

ಗಂಗಾಯಮುನ ಸಂಗಮದಲ್ಲಿ ಮಿಂದರೆ ಅದಕ್ಕಿಂತ ನಾಲ್ಕುಪಟ್ಟು ಹೆಚ್ಚು ಪುಣ್ಯ;

ಮಕರಸಂಕ್ರಮಣದಂದು ಸಮುದ್ರಸ್ನಾನವೂ
ಅತಿ ಪ್ರಶಸ್ತವಾದದ್ದು.

ಮಾಘಮಾಸದಲ್ಲಿ ಯಾವುದೇ ತೀರ್ಥದಲ್ಲಿ ಸ್ನಾನ ಮಾಡುವಾಗ ಪ್ರಯಾಗಸ್ಮರಣೆ ಮಾಡುತ್ತಿದ್ದರೆ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದಷ್ಟು ಪುಣ್ಯ ಬರುವುದು.

ನಕ್ಷತ್ರಗಳು ಇನ್ನೂ ಮಿನುಗುತ್ತಿರುವಾಗಲೇ ಅರುಣೋದಯಕಾಲದಲ್ಲಿ ಸ್ನಾನ ಮಾಡುವುದು ಉತ್ತಮ.
ನಕ್ಷತ್ರಗಳು ಕಾಣಿಸದಾಗ ಸ್ನಾನ ಮಾಡುವುದು ಮಧ್ಯಮ.
ಸೂರ್ಯೋದಯ ಆದಮೇಲೆ ಮಾಡುವ ಸ್ನಾನ ಅಧಮ.

ಮಾಘಸ್ನಾನ ಸಂಕಲ್ಪ:
ಮಾಘಮಾಸಮಿಮಂ ಪುಣ್ಯಂ ಸ್ನಾಸ್ಯೇಹಂ ದೇವ ಮಾಧವ|
ತೀರ್ಥಸ್ಯಾಸ್ಯ ಜಲೇ ನಿತ್ಯಂ ಇತಿ ಸಂಕಲ್ಪ್ಯ ಚೇತಸಿ.

ಹೀಗೆ ಸಂಕಲ್ಪಿಸಿ ಮುಂದಿನ ಎರಡು ಮಂತ್ರಗಳನ್ನು ಹೇಳುತ್ತಾ ಮೌನದಿಂದ ಸ್ನಾನ ಮಾಡಬೇಕು.

1)ದು:ಖದಾರಿದ್ರ್ಯನಾಶಾಯ ಶ್ರೀವಿಷ್ಣೋಸ್ತೋಷಣಾಯ ಚ|
ಪ್ರಾತಃ ಸ್ನಾನಂ ಕರೋಮ್ಯದ್ಯ 
ಮಾಘೇ ಪಾಪವಿನಾಶಮ್ ||

2)ಮಕರಸ್ಥೇ ರವೌ ಮಾಘೇ
ಗೋವಿಂದಾಚ್ಯುತ ಮಾಧವ |
ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋಭವ||

ಮಾಘಸ್ನಾನ ಉದ್ಯಾಪನ
‘ಅತ್ರ ಕೃತಸ್ಯ ಮಾಘಸ್ನಾನಸ್ಯ ಸಾಂಗತಾಸಿಧ್ಯರ್ಥಂ ಉದ್ಯಾಪನಂ ಕರಿಷ್ಯೇ’ ಎಂದು ಸಂಕಲ್ಪಿಸಿ ಸಂಕಲ್ಪಕ್ಕಾಗಿ ಮುಂದಿನ ಎರಡು ಮಂತ್ರಗಳನ್ನು ಹೇಳಬೇಕು.

1ಸವಿತ್ರೇ ಪ್ರಸವಿತ್ರೇ ಚ ಪರಂಧಾಮ ಜಲೇ ಮಮ|
ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ|

2)ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತು ತೇ |ಪರಿಪೂರ್ಣಂ ಕರಿಷ್ಯೇಹಂ ಮಾಘಸ್ನಾನಂ ತವಾಜ್ಞಯಾ||

ಮಾಘಸ್ನಾನಾಂಗ ವಾಯನದಾನ ಕೊಡುವಾಗ ಈ ಎರಡು ಮಂತ್ರಗಳನ್ನು ಹೇಳಬೇಕು.

1)ಸವಿತ:ಪ್ರಸವಸ್ತ್ವಂ ಹಿ 
ಪರಂಧಾಮ ಜಲೇ ಮಮ |
ತ್ವತ್ತೇಜಸಾ ಪರಿಭ್ರಷ್ಟಂ 
ಪಾಪಂ ಯಾತು ಸಹಸ್ರಧಾ||

2) ದಿವಾಕರ ಜಗನ್ನಾಥ 
ಪ್ರಭಾಕರ ನಮೋಸ್ತು ತೇ| ಪರಿಪೂರ್ಣಂ ಕುರುಷ್ವೇಹ ಮಾಘಸ್ನಾನಮುಷ:ಪತೇ||

ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಂಡು ಈ ವೃತದಿಂದ ಪರಮಾತ್ಮ ನಮ್ಮ ಕುಲದೇವರು ಪ್ರೀತರಾಗಿ ಇನ್ನೂ ಹೆಚ್ಚಿನ ಸಾಧನೆ ನಮ್ಮಿಂದ ನಿಮ್ಮಿಂದ ಮಾಡಿಸಲಿ ಎಂದು ಪ್ರಾರ್ಥಿಸುತ್ತಾ ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು.

ಪಂ.ಜಯತೀರ್ಥಾಚಾರ್ಯ ಹಾವನೂರ
*******

No comments:

Post a Comment