SEARCH HERE

Tuesday, 1 January 2019

ಶೀಘ್ರ ವಿವಾಹ ಸಿದ್ದಿ siddhi to get marry early sheegra vivaha


ಶೀಘ್ರ ವಿವಾಹ ಸಿದ್ದಿಗಾಗಿ ಇಂದ್ರಾಣಿ (ಶಚಿ) ಮತ್ತು ಕಾತ್ಯಾಯಿನಿ (ಗೌರಿ) ಪೂಜ:

ಇಂದ್ರಾಣಿ ಪೂಜೆ:
ಒಂದು ತಟ್ಟೆಯಲ್ಲಿ ಅಕ್ಕಿಯನ್ನಿಟ್ಟು ಇಂದ್ರಾಣಿ(ಶಚಿ)ಯನ್ನು ಆವಾಹನೆ ಮಾಡುವುದು, ಸಂಕಲ್ಪ ಮಾಡುವುದು.
ಮಂತ್ರ:
ತ್ರೈಲೋಕ್ಯವಲ್ಲಭಾಂ ದಿವ್ಯಗನ್ಧಮಾಲ್ಯಾಮ್ಭರಾನ್ವಿತಾಂ|
ಸರ್ವಲಕ್ಷಣ ಸಂಯುಕ್ತಾಂ ಸರ್ವಾಭರಣಭೂಷಿತಾಂ||

ಅನಘ್ಯ್ರಮಣಿ ಮಾಲಾಭಿಭ್ರಾಸಯನ್ತೀಂ ದಿಗನ್ತರಂ|
ವಿಲಾಸಿನೀ ಸಹಸ್ರೌಘೈಸ್ಸೇವ್ಯಮಾನಮಹನ್ರೀಶಂ||

ಈ ವಿಧಾನದಿಂದ ಇಂದ್ರಾಣಿದೇವಿಯನ್ನು ಷೋಡಶೋಪಚಾರದಿಂದ ಪೂಜಿಸಿ, ವಿವಾಹ ಅಪೇಕ್ಷೇ ಇರುವ ಹುಡುಗ/ಹುಡುಗಿಯರು ಈ ರೀತಿ ಪ್ರಾರ್ಥನೆಮಾಡಬೇಕು.

ಮಂತ್ರ:

|| ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರೀಯ ಭಾಮಿನಿ|
ವಿವಾಹ ಭಾಗ್ಯಮಾರೋಗ್ಯಂ ಪುತ್ರಲಾಭಂಚ ದೇಹಿಮೆ ||

ಕಾತ್ಯಾಯಿನಿ(ಗೌರಿ) ಪೂಜೇ

ತಟ್ಟೆಯಲ್ಲಿ ಅಕ್ಕಿಯನ್ನಿಟ್ಟುಕೊಂಡು ಅದರಲ್ಲಿ ನಂದಾದೀಪ ಹಚ್ಚಿಟ್ಟು, ಆ ದೀಪದ ಬಲಭಾಗದಲ್ಲಿ ಅರಿಶಿನ ಹಚ್ಚಿದ ತೆಂಗಿನಕಾಯಿ ಇಟ್ಟು, ಕಾತ್ಯಾಯಿನಿದೇವಿಯನ್ನು ಆವಾಹನೆಮಾಡಿ ಷೋಡಶೋಪಚಾರದಿಂದ ಪೂಜಿಸಿ ಈ ಕೆಳಗಿನ ಮಂತ್ರ 21 ಬಾರಿ ಜಪಿಸಬೇಕು.

ಕಾತ್ಯಾಯಿನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರೀ|
ನಂದಗೋಪಸುತಂದೇವಿ ಪತಿಂ(ಪತ್ನೀಂ) ಮೇ ಕುರುತೇ ಸ್ವಾಹ||

ತುಳಸಿ ಮುಂದೆ ತುಪ್ಪದ ದೀಪ 45 ದಿನಗಳು ಹರಿಶಿನಕುಂಕುಮ ಹಚ್ಚಿ ಶ್ರದ್ಧೆಯಿಂದ ವಿವಾಹ ಅಪೇಕ್ಷಿತರು ಪ್ರಾರ್ಥನೆಮಾಡುವುದು.

ಸರಳ ಪರಿಹಾರ ಶ್ರೀ ಸುಧಾಕರ
**********


No comments:

Post a Comment