SEARCH HERE

Monday, 1 April 2019

ವಿಭೂತಿ ಭಸ್ಮ ಮಹತ್ವ ಮಹಿಮೆ ತಯಾರಿಕೆ vibhuti vibhooti bhasma mahima importance preparattion





how to prepare vibhuti--->
Importance of Vibhuti: ಮೂರು ಗೆರೆಗಳಾಗಿ ಹಣೆ, ಎದೆ, ತೋಳುಗಳಿಗೆ ಹಚ್ಚಿಕೊಳ್ಳುವ ಬಸ್ಮದ ಹಿಂದಿರುವ ಶಕ್ತಿ.

ಬಸ್ಮಕ್ಕೆ ಇನ್ನೊಂದು ಹೆಸರೇ ವಿಭೂತಿ; ಇದನ್ನು ಎಲ್ಲೇ ಹಚ್ಚಿದರು ಯಾಕೆ ಮೂರು ಲೈನ್ ಹಚ್ಚಿಕೊಳ್ಳುತ್ತಾರೆ, ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತೆ, ಅದಕ್ಕೆ ಸರಿಯಾದ ಉತ್ತರ ಮಾತ್ರ ಹುಡುಕುವುದು ಸ್ವಲ್ಪ ಕಷ್ಟವೆ. ಹಾಗಾದ್ರೆ ಯಾಕೆ ಈ ಬಸ್ಮಕ್ಕೆ ಇಷ್ಟೊಂದು ಮಹತ್ವ ಅಂತ.
ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ, ಜ್ಞಾನ ಶಕ್ತಿಗಳ ಸಂಕೇತ. ಹಾಗೆಯೇ ಪರಬ್ರಹ್ಮನ ಪ್ರತೀಕವಾಗಿರುವ ‘ಓಂ’ ನ ಸಂಕೇತ ಕೂಡ. ಈ ಲಾಂಛನ ಮೂರು ವೇದಗಳಾದ ಋಗ್, ಯಜುರ್, ಸಾಮವೇದಗಳನ್ನು ಪ್ರತಿನಿಧಿಸುತ್ತದೆ. ಆದರಿಂದ ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ ಶಿವನು ಸಂಪ್ರೀತನಾಗುತ್ತಾನೆ, ಮತ್ತು ಮಹಾ ಪಾಪಗಳಿಂದ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎಂದು ಪುರಾಣದಲ್ಲಿದೆ.

ಪುರಾಣದಲ್ಲಿ ಪರಶಿವನ ವಿಭೂತಿ ಮಹಿಮೆ ಕುರಿತಾಗಿ ಒಂದು ಕಥೆ ಬರುತ್ತದೆ, ಸರಸ್ವತಿ ಲಕ್ಷ್ಮಿ ಎಲ್ಲರೂ ಬಂಗಾರ ಹಾಕಿಕೊಂಡಿದ್ದಾರೆ. ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಶಿವನನ್ನು ಕೇಳಿದಳು. “ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ, ನನಗೆ ಅನುಗ್ರಹಿಸು ಎಂದು” ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ, “ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ…!!” ಈಶ್ವರ ನನ್ನಲ್ಲಿರುವುದು ಇದೇ ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ’ ಎಂದ ಶಿವ.
ನಂತರ ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಹೋಗಿ ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು. ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ…!!??ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. ಇಲ್ಲ ನನಗೆ ಇದರ ತೂಕವೇ ಬೇಕು ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ ಅಣತಿಯಂತೆ, ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ…!!

ಕುಬೇರ ಎಷ್ಟು ಬಂಗಾರ ಹಾಕಿದರೂ ತೂಕವದು ಮೇಲೇಳಲೇ ಇಲ್ಲ, ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ. “ಕುಬೇರನಿಗೂ ನಾನೆಂಬ ಆಹಂಭಾವವಿತ್ತು” ಅದಕ್ಕೆ ಹೀಗಾಯಿತು. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು. ಆಗ ಕುಬೇರನು, ತಾಯಿ ನಾನು ಆಹಂಕಾರದಿಂದ ನುಡಿದೆ ಕ್ಷಮಿಸಿ, ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ ಹಾಕಿದರೂ ಸರಿದೂಗಲಾರದು ಎಂದು ಕೈ ಮುಗಿದ. ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ “ಶಿವ ಕೊಟ್ಟ ಭಸ್ಮವೇ ಬಂಗಾರ” ಎಂದು ಧರಿಸಿಕೊಂಡಳು.


ಈ ಎಲ್ಲ ವಿಚಾರಗಳು ಮತ್ತು ಕಥೆಗಳನ್ನು ಕೇಳಿದರೆ. ಹಿಂದಿನಿಂದ ಬಂದ ಪ್ರತಿಯೊಂದು ಸಂಪ್ರದಾಯ ನಿಯಮಕ್ಕೆ ಅದರದೇ ಮಹತ್ವವಿದೆ ಈಗೀಗ ವೈಜ್ಞಾನಿಕ ಕಾಲಕ್ಕೆ ಬಂದಿರುವ ತಂತ್ರಜ್ಞಾನವು ಮೊದಲೇ ಹುಟ್ಟಿದು ಅಂತ.



-ವೇದಾಂತ್*ಶಾಸ್ತ್ರೀ
*****

ಆಕಳ ಸಗಣಿಯಿಂದ ಮನೆಯಲ್ಲೇ ವಿಭೂತಿ ತಯಾರಿಸುವ ವಿಧಾನ 
ವಿಭೂತಿಯನ್ನು ಭಸ್ಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವಿಭೂತಿಯಿಲ್ಲದೆ ಮನೆಯಿಂದ ಹೊರಗೆ ಕಾಲಿಡಬಾರದು ಆಯುರ್ವೇದದಲ್ಲಿ ವಿಭೂತಿ ಅಥ್ವಾ ಭಸ್ಮಕ್ಕೆ ವಿಶೇಷ ಮಹತ್ವವಿದೆ. ಮುಂಚೆ ವಿಭೂತಿಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ನಮಗೆ ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ವಿಭೂತಿ ಸಿಗುತ್ತಿಲ್ಲ.

ವಿಭೂತಿಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ದೇಸಿ ಹಸುವಿನ ಸಗಣಿ 2 ಕಿಲೋ, ಸುಮಾರು ಒಂದು ಲೀಟರ ನಷ್ಟು ಗೋಮೂತ್ರ , ಗೋಮಯ(ಸಗಣಿ) ಒಂದೆರಡು ಕಿಲೋದಷ್ಟು. ಹತ್ತಿ ನೂಲಿನ ಬಿಳಿ ವಸ್ತ್ರ.

ಮಾಡುವ ವಿಧಾನ
ವಿಭೂತಿಯನ್ನು ತಯಾರಿಸಲು ಹಸುವಿನ ಸಗಣಿ ಬೇಗಾಗುತ್ತದೆ, ಮಣ್ಣು ಹಾಗು ಕಸವಿಲ್ಲದ ಹಸುವಿನ ಸಗಣಿಯ ಸಹಾಯದಿಂದ ಬೆರಣಿ ತಟ್ಟಿ, ಅದು ಸಂಪೂರ್ಣ ಚೆನ್ನಾಗಿ ಒಣಗುವರೆಗೂ ಬಿಸಿಲಿಗೆ ಇಡೀ . ಒಣಗಿದ ಬೆರಣಿಯನ್ನು ಶಿವರಾತ್ರಿ ದಿನದಂದು ಹೊತ್ತಿಸಿ ಬೂದಿ ಮಾಡಿಕೊಳ್ಳಿ. ಆ ಬೂದಿ ಆರಿಸಿ ನಂತರ ಅದನ್ನು ನೀರಿನಲ್ಲಿ ಕಲಸಿ; ಹತ್ತಿ ನೂಲಿನ ಬಟ್ಟೆಯಿಂದ ಸೋಸಿಕೊಳ್ಳಿ. ಈಗ ಬೂದಿ ತಳದಲ್ಲಿ ನಿಂತಮೇಲೆ, ವಾಪಾಸು ಬೇರೆ ನೀರನ್ನು ಹಾಕಿ ಕಲಸಿ ,ಬಟ್ಟೆಯಿಂದ ಸೋಸುವುದು. ಹೀಗೆ ನೀರು ಬದಲಿಸಿ ಬದಲಿಸಿ ಸೋಸುವುದು ಏಳುಬಾರಿ! ಕೊನೆಗೆ ತಳದಲ್ಲಿ ಕುಳಿತ ಬೂದಿಯನ್ನು ಸ್ವಚ್ಛವಾದ ಜಾಗದಲ್ಲಿ ಒಣಗಿಸಿ ಇಡಬೇಕು.
ಇನ್ನು ಅಕಾಲ ಮೂತ್ರವನ್ನು ಏಳುಬಾರಿ ಸೋಸಿಕೊಳ್ಳಬೇಕು. ಆ ಸೋಸಿದ ಗೋಮೂತ್ರದಲ್ಲಿ; ಗೋಮಯದ ಬೂದಿಯನ್ನು ಗಟ್ಟಿಯಾಗಿ ಕಲೆಸಿ, ಸಾಮಾನ್ಯವಾಗಿ ಚಿಕ್ಕಗಾತ್ರದ ಉಂಡೆಗಳನ್ನು ಮಾಡಿಕೊಳ್ಳುವುದು. ಈ ಉಂಡೆಗಳನ್ನು ಸರಿಯಾದ ಶುಭ್ರಜಾಗದಲ್ಲಿ ಒಣಗಿಸುವುದು. ನಂತರ ಆ ಉಂಡೆಗಳನ್ನು ಹುಡಿಮಾಡದೆ, ಗೋವಿನ ಬೆರಣಿಯ ಬೆಂಕಿಯಲ್ಲೇ ಹೊತ್ತಿಸುವುದು.ಅದು ಹೊತ್ತಿ ಕೆಂಪು ಬಣ್ಣಕ್ಕೆ ಬಂದಮೇಲೆ ;ಅದನ್ನು ಬೇರೆ ಬೇರೆಯಾಗಿ ಹರವಿ ತಂಪು ಮಾಡಿ. ಇದೀಗ ಬಿಳಿಯಾದ, ಗಟ್ಟಿಯಾದ ಬೇಗನೆ ಸುಲಭದಲ್ಲಿ ಹುಡಿಯಾಗದ, ಹೀಗೆ ತಯಾರು ಮಡಿದ ವಿಭೂತಿ ಉಂಡೆಗಳು ಬಹಳ ದಿನಗಳ ವರೆಗೂ ಬಾಳಿಕೆ ಬರುತ್ತವೆ.
*********

ಹೋಮದ ಭಸ್ಮಧಾರಣೆ ಮತ್ತು ಮಹತ್ವ...

ಇದು ಎಲ್ಲಾ ರೀತಿಯ ಭಸ್ಮಗಳಿಗಿಂತಲೂ ತುಂಬಾ ಶ್ರೇಷ್ಟವಾದದ್ದು ಮತ್ತು ಶಕ್ತಿಶಾಲಿಯಾದದ್ದು..

೧. ಹೋಮದ ಭಸ್ಮದ ಧಾರಣೆಯಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
ದೇವರ ಅನುಗ್ರಹ ಇದ್ದು, ಸಕಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ..

೩.ಭಸ್ಮಧಾರಣೆಯಿಂದ ಸಕಲ ವಿಧವಾದ ಗೋಚರ ಅಗೋಚರ ದೃಶ್ಯ ಅದೃಶ್ಯ ರೋಗಗಳು ನಿವಾರಣೆಯಾಗುತ್ತದೆ ..

೪. ಶ್ರೀ ಮಹಾಗಣಪತಿ ಹೋಮದ ಭಸ್ಮ ಧರಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ..

೫. ಶ್ರೀ ಸುಬ್ರಹ್ಮಣ್ಯ ಹೋಮದ ಭಸ್ಮ ಉಪಯೋಗಿಸಿದರೆ ಮನೆಯಲ್ಲಿ ಗೃಹಕಲಹ ನಿಂತು ಎಲ್ಲರಿಗೂ ಶಾಂತಿ ಸಿಕ್ಕುತ್ತದೆ..

೬. ಶ್ರೀ ದುರ್ಗಾ ಹೋಮದ ಭಸ್ಮಧಾರಣೆಯಿಂದ ಸಕಲ ಶತೃಗಳೂ ನಾಶವಾಗಿ ನೆಮ್ಮದಿಯ ಸಂಸಾರವನ್ನು ಮಾಡುತ್ತಾರೆ..

೭. ಶ್ರೀ ನವಗ್ರಹ ಹೋಮದ ಭಸ್ಮಧಾರಣೆಯಿಂದ ಯಾವುದೇ ಗ್ರಹಗಳ ಕಾಟವೂ ಇರುವುದಿಲ್ಲ ..

೮. ಶ್ರೀ ಮಹಾಮೃತ್ಯುಂಜಯ ಹೋಮದ ಭಸ್ಮಧಾರಣೆಯಿಂದ ಸಕಲ ವಿಧವಾದ ಅಪಮೃತ್ಯುಗಳು ನಿವಾರಣೆಯಾಗುತ್ತದೆ ..

೯. ಶ್ರೀ ಲಲಿತಾ ತ್ರಿಪುರಸುಂದರೀ , ಶ್ರೀ ರಾಜರಾಜೇಶ್ವರೀ, ಶ್ರೀ ಗಾಯತ್ರೀ ದೇವಿ ಹೋಮದ ಭಸ್ಮಧಾರಣೆಯಿಂದ ಸಕಲ ಕಾರ್ಯಗಳು ದಿಗ್ವಿಜಯ ಹೊಂದಿ, ಆಜೀವಮಾನ ಪೂರ್ತಿ ಸುಖವಂತರಾಗಿರುತ್ತಾರೆ..

೧೦. ಶ್ರೀ ಸುದರ್ಶನ ಹೋಮದ ಭಸ್ಮದಿಂದ ಸಕಲ ಶತೃ ನಿವಾರಣೆಯಾಗುತ್ತದೆ. , ಮಾಟ ಮಂತ್ರ ದೋಷ ನಿವಾರಣೆಯಾಗುತ್ತದೆ ..

೧೧. ಶ್ರೀ ಲಕ್ಷ್ಮೀನಾರಾಯಣ ಹೋಮದ ಭಸ್ಮ ಧಾರಣೆಯಿಂದ ಗಂಡ ಹೆಂಡತಿ ಜಗಳ ನಿವಾರಣೆಯಾಗಿ, ಅನ್ಯೋನ್ಯವಾಗಿರುತ್ತಾರೆ..

೧೨. ಹೋಮದ ಭಸ್ಮಧಾರಣೆಯಿಂದ ಯಾವುದೇ ಮಾಂತ್ರಿಕ ಭಾದೆ , ಶಾಪಗಳು , ದೃಷ್ಟಿಗಳು , ಗ್ರಹಭಾದೆಗಳು ಆಗುವುದಿಲ್ಲ..
*********

ವಿಭೂತಿ ಮಹಿಮೆ


ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ, ಜ್ಞಾನ ಶಕ್ತಿಗಳ ಸಂಕೇತ. ಹಾಗೆಯೇ ಪರಬ್ರಹ್ಮನ ಪ್ರತೀಕವಾಗಿರುವ ‘ಓಂ’ ನ ಸಂಕೇತ ಕೂಡ. ಈ ಲಾಂಛನ ಮೂರು ವೇದಗಳಾದ ಋಗ್, ಯಜುರ್, ಸಾಮವೇದಗಳನ್ನು ಪ್ರತಿನಿಧಿಸುತ್ತದೆ. ಆದರಿಂದ ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ ಶಿವನು ಸಂಪ್ರೀತನಾಗುತ್ತಾನೆ, ಮತ್ತು ಮಹಾ ಪಾಪಗಳಿಂದ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎಂದು ಪುರಾಣದಲ್ಲಿದೆ.
********

ಪರಶಿವನ ವಿಭೂತಿಯ ಮಹಿಮೆಯ ಕಥೆ - ಓಂ ನಮ: ಶಿವಾಯ

ಹಣೆ, ಎದೆ, ತೋಳುಗಳ ಮೇಲೆ ಅಡ್ಡಲಾಗಿ ಎಳೆದಿರುವ ಭಸ್ಮದ ಮೂರು ಪಟ್ಟೆಗಳು ಪ್ರಮುಖ ಲಾಂಛನ.
ಈ ಮೂರು ಪಟ್ಟಿಗಳು
ಇಚ್ಛಾ,
ಕ್ರಿಯಾ,
ಜ್ಞಾನ ಶಕ್ತಿಗಳ ಸಂಕೇತ.
ಹಾಗೆಯೇ ಪರಬ್ರಹ್ಮನ ಪ್ರತೀಕವಾಗಿರುವ
'ಓಂ' ನ ಸಂಕೇತ ಕೂಡ.
ಈ ಲಾಂಛನ ಮೂರು ವೇದಗಳಾದ ಋಗ್,
ಯಜುರ್,
ಸಾಮವೇದಗಳನ್ನು ಪ್ರತಿನಿಧಿಸುತ್ತದೆ.
ಹಣೆ,
ಎದೆ,
ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ
ಶಿವನು ಸಂಪ್ರೀತನಾಗುತ್ತಾನೆ, ಮಹಾ ಪಾಪಗಳಿಂದ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎನ್ನುತ್ತದೆ ಪುರಾಣ...
ಹಾಗೆಯೇ ಪುರಾಣದಲ್ಲಿ ಪರಶಿವನ ವಿಭೂತಿ ಮಹಿಮೆ ಕುರಿತಾಗಿ ಒಂದು ಕಥೆ ಬರುತ್ತದೆ...

ಸರಸ್ವತಿ ಲಕ್ಷ್ಮಿ ಎಲ್ಲರೂ ಬಂಗಾರ ಹಾಕಿಕೊಂಡಿದ್ದಾರೆ.
ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಶಿವನನ್ನು ಕೇಳಿದಳು.
"ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ,
ನನಗೆ ಅನುಗ್ರಹಿಸು ಎಂದು"

ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ,

"ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ...!!"

'ನನ್ನಲ್ಲಿರುವುದು ಇದೇ,'
'ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ
ಕೇಳು,
ಇದರ ತೂಕದ ಬಂಗಾರ ಕೊಡುತ್ತಾನೆ'
ಎಂದ ಶಿವ..,

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ಕೊಂಡು ಹೋಗಿ,
ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು.

ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ...!!??
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ.
ಇಲ್ಲ ನನಗೆ ಇದರ ತೂಕವೇ ಬೇಕು ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ
ಅಣತಿಯಂತೆ,
ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ.
ಮತ್ತೊಂದೆಡೆಗೆ
ಬಂಗಾರ ಹಾಕಿದ.
ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ...!!

ಕುಬೇರ ಎಷ್ಟು ಬಂಗಾರ ಹಾಕಿದರೂ ತೂಕವದು ಮೇಲೇಳಲೇ ಇಲ್ಲ,
ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.
"ಕುಬೇರನಿಗೂ ನಾನೆಂಬ
ಆಹಂಭಾವವಿತ್ತು"
ಅದಕ್ಕೆ ಹೀಗಾಯಿತು.
ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ
ಹಾಕಿದ
ಆಗ ತಕ್ಕಡಿ ಸ್ವಲ್ಪ ಮೇಲೇರಿತು.

ಆಗ ಕುಬೇರನು,
ತಾಯಿ ನಾನು ಆಹಂಕಾರದಿಂದ ನುಡಿದೆ ಕ್ಷಮಿಸಿ,
ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ ಹಾಕಿದರೂ ಸರಿದೂಗಲಾರದು ಎಂದು
ಕೈ ಮುಗಿದ.
ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ,
ನನಗೆ ಬಂಗಾರ ಬೇಡ
"ಶಿವ ಕೊಟ್ಟ ಭಸ್ಮವೇ ಬಂಗಾರ"
ಎಂದು ಧರಿಸಿಕೊಂಡಳು...
 ಓಂ ನಮಃ ಶಿವಾಯ
***

ವಿಭೂತಿ ಮತ್ತು ನಾಮಗಳನ್ನು 'ಮೂರು'ರೇಖೆಗಳಂತೆ ಯಾಕಿಡುತ್ತಾರೆ..⁉

ಮೂರರ ಸಂಖ್ಯೆ ಧರ್ಮ ಸೂಚಕವಾಗಿದೆ. ವೇದಯುಗದಲ್ಲಿ ಈ ಅಡ್ಡ ಉದ್ದದ ನಾಮಗಳಿಲ್ಲವೆನಿಸುತ್ತದೆ. ದ್ವಾಪರದ ಕೊನೆಯಲ್ಲಿ-ಕಲಿಯುಗ ಆರಂಭದಲ್ಲಿ ಈ ಧಾರಣಗಳು ಪ್ರಾರಂಭವಾಗಿವೆ ಎನ್ನಬಹುದು.

ಆದರೆ ಹಣೆಯ ಮೇಲೆ ಕೆಂಪು ತಿಲಕವನ್ನು ಸೂರ್ಯನ ದ್ಯೋತಕವಾಗಿ ಧಾರಣ ಮಾಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ನಮಗೆ ಸೂರ್ಯನೆ ಪ್ರತ್ಯಕ್ಷ ಪ್ರಥಮ ದೇವನಾಗಿದ್ದನು. ವೇದಯುಗದಲ್ಲಿಯೂ ಸೂರ್ಯ ಮತ್ತು ಅಗ್ನಿಗಳನ್ನು ಮಾತ್ರ ನಮ್ಮವರು ಪೂಜಿಸುತ್ತಿದ್ದರು. ಕುಂಕುಮವನ್ನು ಹಿಂದೂ ಸಂಪ್ರದಾಯಧರ್ಮವಾಗಿ ಎಲ್ಲರೂ ಧರಿಸುತ್ತಿದ್ದರು.

ವ್ಯಾಸ ಮಹರ್ಷಿಗಳು ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮಹಾಭಾರತ, ಭಾಗವತ ಮತ್ತಿತರ ಪುರಾಣಗಳನ್ನು ಬರೆದರು. ಇದಕ್ಕೆ ಮುನ್ನವೇ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯವನ್ನು ಬರೆದಿದ್ದರು. ಏಕವಾಗಿದ್ದ ಪರಬ್ರಹ್ಮ ಚೈತನ್ಯ ಶಕ್ತಿಯನ್ನು (ಸೃಷ್ಟಿ, ಸ್ಥಿತಿ, ಲಯ - ಹೀಗೆ) ತ್ರಿಶಕ್ತಿಗಳಾಗಿ ವ್ಯಾಸರು ಕಂಡು ಪುರಾಣಗಳಲ್ಲಿ ಪೌರಾಣಿಕ ಶಕ್ತಿಗಳಾಗಿ ಬ್ರಹ್ಮ-ವಿಷ್ಣು-ಮಹೇಶ್ವರರಾಗಿ ತೋರಿದರು. ಇವರಲ್ಲಿ ವಿಷ್ಣು, ಶಿವರು ಪ್ರಧಾನ ದೇವರಾದರು. ಕ್ರಮೇಣ ಅವರಿಗೆ ಆಲಯಗಳಾದವು. ಬ್ರಹ್ಮ ಏಕೆ ಪೂಜನೀಯನಾಗಲಿಲ್ಲ, ಅವನಿಗೇಕೆ ಆಲಯಗಳಿಲ್ಲ ಎಂಬುದು ಪುರಾಣೇತಿಹಾಸಗಳಿಂದ ನಿಮಗೆಲ್ಲಾ ಗೊತ್ತೇ ಇದೆ. ಜನರು ವಿಷ್ಣುಭಕ್ತರೂ, ಇನ್ನೂ ಹಲವರು ಶಿವಭಕ್ತರೂ ಆದರು. ವಿಷ್ಣು ಭಕ್ತರು ವಿಷ್ಣುಮಹಿಮೆಗಳನ್ನು ಜನಾನುರಾಗವಾಗಿ ಹೇಳುತ್ತಾ ಜನಪ್ರಿಯತೆಗಳನ್ನು ಸಾಧಿಸುತ್ತಿದ್ದರು. ಶಿವಭಕ್ತರು ಶಿವನ ಮಹಿಮೆಗಳನ್ನು ಸಾರುತ್ತಾ ಹಾಡುತ್ತಾ ಸಾಗುತ್ತಿದ್ದರು. ಬರುಬರುತ್ತ ಇವು ಪಂಥಗಳಾಗಿ ಬೆಳೆದು ಶೈವ ವೈಷ್ಣವ ವೈಷಮ್ಯಗಳು ಪ್ರಾರಂಭವಾದವು.

ಶಿವನೇ ದೊಡ್ಡವನೆಂದು ಶೈವರು ಹರಿಯೇ ದೊಡ್ಡವನೆಂದು ವೈಷ್ಣವರು ಕಾದಾಡುತ್ತಿದ್ದರು. ಈ ಮತೋದ್ರೇಕದಿಂದ ಅನೇಕ ದಾರುಣ ಪರಿಸ್ಥಿತಿಗಳು ನಿರ್ಮಾಣವಾಗಿ ಮಾನವ ಹತ್ಯೆಗಳು ನಡೆದು ಹೋದವು. ಇದಕ್ಕೆ ರಾಜಮಹಾರಾಜರ ಬೆಂಬಲವೂ ಇತ್ತು. ಇಂತಹ ಸಮಯದಲ್ಲಿ ಶೈವ ವೈಷ್ಣವರನ್ನು ಸುಲಭವಾಗಿ ಗುರುತಿಸಲು ಈ ಅಡ್ಡ ವಿಭೂತಿಧಾರಣೆ, ಉದ್ದ ನಾಮಧಾರಣೆ ಪ್ರಾರಂಭವಾಗಿರಬೇಕು. ಅಂದರೆ ಮತಸೂಚಕವಾಗಿಯೇ ಈ ಅಡ್ಡ ವಿಭೂತಿಧಾರಣೆ ಮತ್ತು ಉದ್ದ ನಾಮಧಾರಣೆಗಳು ಸೃಷ್ಟಿಯಾಗಿವೆ ಎಂದಾಯಿತು. (ಆದಾಗ್ಯೂ ಇದನ್ನು ಎಲ್ಲರೂ ಒಪ್ಪಬೇಕೆಂದಿಲ್ಲ)

ಶ್ರೀರಾಮಾನುಜಾಚಾರ್ಯರು ವಿಶಿಷ್ಟ ಅದೈತಧರ್ಮವನ್ನು ಸ್ಥಾಪಿಸಿದ ನಂತರ ಜೀವಾತ್ಮ-ಪ್ರಕೃತಿ-ಪರಮಾತ್ಮಗಳ ಸಂಕೇತವಾಗಿ ಮೂರು ರೇಖೆಗಳನ್ನು ನಿರೂಪಿಸಿದ್ದಾರೆ. ಸೃಷ್ಟಿ ಸ್ಥಿತಿ, ಲಯ ಸಂಕೇತವಾಗಿಯೂ ಮೂರು ರೇಖೆಗಳನ್ನು ಸ್ಥಿರೀಕರಿಸಿದ್ದಾರೆ.

ಮೂರರ ಸಂಖ್ಯೆಯನ್ನು ವೈದಿಕಧರ್ಮವು ಪವಿತ್ರವಾಗಿ ಭಾವಿಸುತ್ತಿದೆ.

ಪವಿತ್ರ ಗಾಯತ್ರಿಯನ್ನು (ಯಜ್ಯೋಪವೀತ) ಮೂರು ಗಂಟುಗಳಾಗಿ ಧಾರಣ ಮಾಡುತ್ತಾರೆ. ಶಿವನಿಗೂ ಸಹ 'ತ್ರಿಶೂಲವನ್ನು ಆಯುಧವನ್ನು ಕೊಟ್ಟಿದ್ದಲ್ಲದೆ 'ತ್ರಿ' ನೇತ್ರನಾಗಿಯೂ ವೈದಿಕಧರ್ಮವು ಹೇಳುತ್ತಿದೆ. ತ್ರಿಕರಣ (ಮನೋ-ವಾಕ್-ಕಾಯ) ತ್ರಿಕಾಲ (ಭೂತ, ಭವಿಷ್ಯ, ವರ್ತಮಾನ) ತ್ರಿಸಮಯ (ಉದಯ-ಮಧ್ಯಾಹ್ನ ಸಂಜೆ) ತ್ರಿನಾಡಿ (ಇಡ-ಪಿಂಗಳ-ಸುಷುಮ್ನ) ಹೀಗೆ ತ್ರಿಸಂಖ್ಯಾಪದಗಳು ನೂರಾರಿವೆ. ಪ್ರಕೃತಿಯೇ ತ್ರಿಗುಣಾತ್ಮಕವಾಗಿದೆ. ಚಳಿ,ಮಳೆ,ಬಿಸಿಲು ಈ ಮೂರರಿಂದಲೇ ಸೃಷ್ಟಿನಿಯಮ ನಡೆಯುತ್ತಿದೆ.

ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್‌ ಮೃತ್ಯೋರ್ಮೋಕ್ಷೀಯ ಮಾಮೃತಾತ್ ||

ಈ ಮಂತ್ರವು ಋದ್ವೇದದ ಏಳನೆಯ ಮಂಡಲದಲ್ಲಿದೆ. ಈ ಮಂತ್ರಕರ್ತ ವಶಿಷ್ಠ ಮಹರ್ಷಿಗಳು. ವಿಭೂತಿಯ ಮೂರು ರೇಖೆಗಳ ಪರಮಾರ್ಥವೇನೆಂದರೆ ; ಪರಮಾತ್ಮಸತ್ಯವೆಂದು ಒಂದು ರೇಖೆ! ಜೀವಾತ್ಮಸತ್ಯವೆಂದು ಒಂದು ರೇಖೆ! ಜಗತ್ತುಸತ್ಯವೆಂದು ಒಂದು ರೇಖೆ!

ಮೂರು ರೇಖೆಗಳ ಮೂಲಸತ್ಯವಿದು.

#ತ್ರಿಕಅಥವಾತ್ರಯಮೂರರಕೂಟಗಳು.
೧.ಅಕ್ಷರ ತ್ರಯಗಳು - ಅ ಕಾರ ,ಉ ಕಾರ , ಮ ಕಾರ ( ಓಂಕಾರ )
೨.ತ್ರಿಕಾಲ- ಮುಂಜಾನೆ ,ಮಧ್ಯಾಹ್ನ, ಸಂಜೆ
೩.ತ್ರಿಜಗ- ಸ್ವರ್ಗ, ಮರ್ತ್ಯ ,ಪಾತಾಳ
೪.ತ್ರಿಕರಣ- ಕಾಯಾ,ವಾಚಾ ,ಮನಸಾ
೫. ತ್ರಿಕಾಲ- ಭೂತ,ವರ್ತಮಾನ ,ಭವಿಷ್ಯತ್
೬.ತ್ರಿಲೋಕ- ಭೂಃ , ಭುವಃ , ಸುವಃ
೭.ತ್ರಿಭಂಗಿ - ಮೊಣಕಾಲು, ಸೊಂಟ, ಕತ್ತು
೮.ತ್ರಿದೋಷ - ವಾತ , ಪಿತ್ತ, ಕಫ
೯.ಅವಸ್ಥಾನ ತ್ರಯಗಳು - ಜಾಗೃತ್, ಸ್ವಪ್ನ , ಸುಷುಪ್ತಿ
೧೦. ತ್ರಿಲಿಂಗ -ಪುಲ್ಲಿಂಗ, ಸ್ತ್ರೀ ಲಿಂಗ, ನಪುಂಸಕ ಲಿಂಗ
೧೧.ತ್ರಿಕರ್ಮ- ಆಗಮಿ, ಸಂಚಿತ ,ಪ್ರಾರಬ್ಧ
೧೨.ತ್ರಿವಿಧ ಭಕ್ತಿ- ಗುರು, ಲಿಂಗ , ಜಂಗಮ
೧೩.ತಾಪ ತ್ರಯಗಳು- ಆದಿ ಭೌತಿಕ, ಆದಿ ದೈವಿಕ, ಆಧ್ಯಾತ್ಮಿಕ
೧೪. ತ್ರಿವಿಧ ಶಕ್ತಿ- ಜ್ಞಾನ ಶಕ್ತಿ, ಕ್ರಿಯಾಶಕ್ತಿ,  ಇಚ್ಛಾಶಕ್ತಿ
೧೫. ತ್ರಿವಿಧಾಂಗ- ತ್ಯಾಗ, ಭೋಗ, ಯೋಗ
೧೬. ತ್ರಿಗುಣಕ್ಕೆ ಆಹಾರ- ಸಾತ್ವಿಕ, ರಾಜಸ,ತಾಮಸಿಕ
೧೭.ತ್ರಿಪದಿ- ಮೂರು ಸಾಲುಗಳುಳ್ಳ ಒಂದು ಬಗೆಯ ಪದ್ಯ
೧೮. ತ್ರಿಮತ - ದ್ವೈತ ,ಅದ್ವೈತ ವಿಶಿಷ್ಟಾದ್ವೈತ
೧೯.ತ್ರಿವೇಣಿ- ಗಂಗೆ, ಯಮುನೆ , ಸರಸ್ವತಿ
೨೦.ತ್ರಿಶೂಲ- ಮೂರು ಮೊನೆಯುಳ್ಳ ಶಿವನ ಆಯುಧ.
೨೧.ತ್ರಯೀ- ಋಗ್ವೇದ, ಯಜುರ್ವೇದ, ಸಾಮವೇದ
೨೨. ತ್ರಿಪಿಟಕಗಳು- ಸೂತ್ರ, ವಿನಯ, ಅಭಿಧರ್ಮ
೨೩.ತ್ರಿಪುಟ- ಜ್ಞಾತೃ, ಜ್ಞಾನ,
 ಜ್ಞೇಯ
೨೪.ತ್ರಿವರ್ಗ - ಧರ್ಮ,ಅರ್ಥ, ಕಾಮ
೨೫.ಪ್ರಸ್ಥಾನ ತ್ರಯಗಳು- ಉಪನಿಷತ್ತು, ಬ್ರಹ್ಮ ಸೂತ್ರ ,ಭಗವದ್ಗೀತೆ
೨೬.ತ್ರಿ ರಾಮರು- ಶ್ರೀರಾಮ, ಪರಶುರಾಮ, ಬಲರಾಮ
೨೭.ಶಕ್ತಿ ತ್ರಯಗಳು- ಪ್ರಭು ಶಕ್ತಿ, ಮಂತ್ರ ಶಕ್ತಿ, ಉತ್ಸಾಹ ಶಕ್ತಿ
೨೮.ತೇಜ ತ್ರಯಗಳು- ಸೂರ್ಯ,‌ಚಂದ್ರ , ಅಗ್ನಿ
೨೯.ಋಣತ್ರಯ-ದೇವ ಋಣ, ಋಷಿ ಋಣ, ಪಿತೃ ಋಣ
೩೦.ಸ್ಥಾನ ತ್ರಯಗಳು- ನೇತ್ರ, ಕಂಠ,ಹೃದಯ
೩೧.ಗುರು ತ್ರಯ- ಮಾತಾ, ಪಿತೃ, ಆಚಾರ್ಯ
೩೨.ಮೂರು ಅವಸ್ಥೆಗಳು- ಬಾಲ್ಯ,ಯೌವನ, ವೃದ್ಧಾಪ್ಯ
೩೩.ತ್ರಿವಿಧ ಶೋತೃಗಳು- ಮುಕ್ತಿ, ಮುಮುಕ್ಷು, ವಿಷಯ
೩೪.ಜಗತ್ತಿನ ತ್ರಿವಿಧ ಅವಸ್ಥೆಗಳು- ಸೃಷ್ಟಿ, ಸ್ಥಿತಿ, ಲಯ
೩೫.ತ್ರಿ ಲೋಹ- ಚಿನ್ನ,ಬೆಳ್ಳಿ, ತಾಮ್ರ
೩೬.ತ್ರಿಫಲ- ತಾರಿ, ಅಣಿಲೆ, ನೆಲ್ಲಿ
೩೭.ಸೂತ್ರತ್ರಯ- ಸಾಂಖ್ಯ, ಯೋಗ, ಬ್ರಹ್ಮ
೩೮.ಗುಣತ್ರಯ - ಸತ್ವಗುಣ ರಜೋಗುಣ ,ತಮೋಗುಣ
೩೯.ತ್ರಿವಿಧ ಅರ್ಥ- ಶಬ್ದಾರ್ಥ, ವಾಚ್ಯಾರ್ಥ, ಭಾವಾರ್ಥ
೪೦.ಆತ್ಮ ತ್ರಯ-ಪರಮಾತ್ಮ, ಅಂತರಾತ್ಮ, ಜೀವಾತ್ಮ
೪೧.ಮತತ್ರಯಗಳು- ಪಾಪ,ಪುಣ್ಯ, ಮಿಶ್ರ
೪೨.ಅಗ್ನಿ ತ್ರಯಗಳು- ದಕ್ಷಿಣಾಗ್ನಿ,ಗಾರ್ಹಪತ್ಯ,ಆಹವನಿಯ
೪೩.ಮತತ್ರಯಗಳು- ಸ್ಮಾರ್ತ, ವೈಷ್ಣವ, ಶ್ರೀವೈಷ್ಣವಿ
೪೪.ತ್ರಿ ಕರ್ಮಗಳು- ಯಜನ, ವೇದಾಧ್ಯಯನ, ದಾನ
೪೫. ಈಷಣತ್ರಯ- ಲೋಕಪ್ರಶಂಸೆ, ಧನರಾಜ್ಯದಿ, ಸ್ತ್ರೀಪುತ್ರ
೪೬.ತ್ರಿವಿಧಾಂಗ- ತನು ,ಮನ ,ಭಾವ
೪೭.ತ್ರಿವಿಧ ಪ್ರಸಾದ- ಶುದ್ಧ, ಸಿದ್ಧ, ಪ್ರಸಿದ್ಧ
೪೮.ತ್ರಿವಿಧ ಪ್ರಜ್ಞೆ- ಶುದ್ಧ ,ದೇವ ,ಪ್ರಸಾದ
೪೯.ತ್ರಿಕಲ- ನಿಃಕಲ, ಸಕಲಾಸಕಲ, ಸಕಲ
೫೦.ತ್ರಿಕರಣ ಶುದ್ಧಿ- ತನು ಶುದ್ಧಿ, ಮನ ಶುದ್ಧಿ, ಭಾವ ಶುದ್ಧಿ.
೫೧.ತ್ರಿವಿಧ ದಾಸೋಹ- ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
೫೨.ಆಚಾರ್ಯತ್ರಯರು- ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು.
೫೩.ರತ್ನ ತ್ರಯರು - ರನ್ನ ,ಪೊನ್ನ , ಪಂಪ
೫೪.ತ್ರಿವಿಧ ತಪಸ್ಸು- ಶಾರೀರಿಕ ತಪಸ್ಸು, ವಾಙ್ಮಯ ತಪಸ್ಸು, ಮಾನಸಿಕ ತಪಸ್ಸು
**

***

ಹೋಮದ ಭಸ್ಮಧಾರಣೆ ಮತ್ತು ಮಹತ್ವ...

ಇದು ಎಲ್ಲಾ ರೀತಿಯ ಭಸ್ಮಗಳಿಗಿಂತಲೂ ತುಂಬಾ ಶ್ರೇಷ್ಟವಾದದ್ದು ಮತ್ತು ಶಕ್ತಿಶಾಲಿಯಾದದ್ದು..

೧. ಹೋಮದ ಭಸ್ಮದ ಧಾರಣೆಯಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
ದೇವರ ಅನುಗ್ರಹ ಇದ್ದು, ಸಕಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ..

೩.ಭಸ್ಮಧಾರಣೆಯಿಂದ ಸಕಲ ವಿಧವಾದ ಗೋಚರ ಅಗೋಚರ ದೃಶ್ಯ ಅದೃಶ್ಯ ರೋಗಗಳು ನಿವಾರಣೆಯಾಗುತ್ತದೆ ..

೪. ಶ್ರೀ ಮಹಾಗಣಪತಿ ಹೋಮದ ಭಸ್ಮ ಧರಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ..

೫. ಶ್ರೀ ಸುಬ್ರಹ್ಮಣ್ಯ ಹೋಮದ ಭಸ್ಮ ಉಪಯೋಗಿಸಿದರೆ ಮನೆಯಲ್ಲಿ ಗೃಹಕಲಹ ನಿಂತು ಎಲ್ಲರಿಗೂ ಶಾಂತಿ ಸಿಕ್ಕುತ್ತದೆ..

೬. ಶ್ರೀ ದುರ್ಗಾ ಹೋಮದ ಭಸ್ಮಧಾರಣೆಯಿಂದ ಸಕಲ ಶತೃಗಳೂ ನಾಶವಾಗಿ ನೆಮ್ಮದಿಯ ಸಂಸಾರವನ್ನು ಮಾಡುತ್ತಾರೆ..

೭. ಶ್ರೀ ನವಗ್ರಹ ಹೋಮದ ಭಸ್ಮಧಾರಣೆಯಿಂದ ಯಾವುದೇ ಗ್ರಹಗಳ ಕಾಟವೂ ಇರುವುದಿಲ್ಲ ..

೮. ಶ್ರೀ ಮಹಾಮೃತ್ಯುಂಜಯ ಹೋಮದ ಭಸ್ಮಧಾರಣೆಯಿಂದ ಸಕಲ ವಿಧವಾದ ಅಪಮೃತ್ಯುಗಳು ನಿವಾರಣೆಯಾಗುತ್ತದೆ ..

೯. ಶ್ರೀ ಲಲಿತಾ ತ್ರಿಪುರಸುಂದರೀ , ಶ್ರೀ ರಾಜರಾಜೇಶ್ವರೀ, ಶ್ರೀ ಗಾಯತ್ರೀ ದೇವಿ ಹೋಮದ ಭಸ್ಮಧಾರಣೆಯಿಂದ ಸಕಲ ಕಾರ್ಯಗಳು ದಿಗ್ವಿಜಯ ಹೊಂದಿ, ಆಜೀವಮಾನ ಪೂರ್ತಿ ಸುಖವಂತರಾಗಿರುತ್ತಾರೆ..

೧೦. ಶ್ರೀ ಸುದರ್ಶನ ಹೋಮದ ಭಸ್ಮದಿಂದ ಸಕಲ ಶತೃ ನಿವಾರಣೆಯಾಗುತ್ತದೆ. , ಮಾಟ ಮಂತ್ರ ದೋಷ ನಿವಾರಣೆಯಾಗುತ್ತದೆ ..

೧೧. ಶ್ರೀ ಲಕ್ಷ್ಮೀನಾರಾಯಣ ಹೋಮದ ಭಸ್ಮ ಧಾರಣೆಯಿಂದ ಗಂಡ ಹೆಂಡತಿ ಜಗಳ ನಿವಾರಣೆಯಾಗಿ, ಅನ್ಯೋನ್ಯವಾಗಿರುತ್ತಾರೆ..

೧೨. ಹೋಮದ ಭಸ್ಮಧಾರಣೆಯಿಂದ ಯಾವುದೇ ಮಾಂತ್ರಿಕ ಭಾದೆ , ಶಾಪಗಳು , ದೃಷ್ಟಿಗಳು , ಗ್ರಹಭಾದೆಗಳು ಆಗುವುದಿಲ್ಲ...

ಶುಭವಾಗಲಿ...
***

ವಿಭೂತಿಯ ಮಹತ್ವ 🕉

ವಿಭೂತಿಗೂ ಶಿವನಿಗೂ ಅನನ್ಯ ಸಂಬಂಧ ಪರಮೇಶ್ವರನಿಗೆ 'ಭಸ್ಮೋದ್ಧೂಳಿತ', 'ಭಸ್ಮಾನುಲೇಪಿತ' ಮೊದಲಾದ ವಿಶೇಷಣಗಳು. ವಿಭೂತಿಯ ಧಾರಣೆ ಮಾಡುವುದರಿಂದ ಮೇಧಾಶಕ್ತಿ ವರ್ಧಿಸುತ್ತದೆ. ಮಿದುಳಿನ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಅದರ ಪರಿಣಾಮವಾಗಿ ಮಾನಸಿಕ ಪ್ರಸನ್ನತೆ ಲಭಿಸುತ್ತದೆ.

ಗರುಡಚಯನ, ಸೋಮಯಾಗ ಮತ್ತು ಅತಿರುದ್ರಾದಿ ಮಹಾಯಾಗಗಳಲ್ಲಿ ಗಣಪತಿ ಹವನ, ಗ್ರಹ ಶಾಂತಿ ಮುಂತಾದ ಹೋಮದಲ್ಲಿ ಹವಿಸ್ಸಿನ ದಹನದಿಂದ ಒದಗಿದ ಭಸ್ಮವು ಉತ್ಕೃಷ್ಟ ವಿಭೂತಿಯೆನಿಸುವುದು.

ಶಿವ ಪರಿವಾರ -:

ನಂದಿಯಿಲ್ಲದ ಶಿವಾಲಯವಿಲ್ಲ. ಇವನು ಶಿವಗಣಗಳ ನಾಯಕ. ವೃಷಭವು ಕಾಮದ-ವೀರತ್ವದ ದ್ಯೋತಕ. ಶಿವನು ಇದನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾನೆಂದರೆ ಕಾಮವನ್ನು ಜಯಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಾನೆಂದು ಅರ್ಥ.

ನಂದಿಯ ನಂತರ ಬರುವ ಪ್ರಮುಖ ಭಂಗಿ. ಈತನು ಶಿವನಲ್ಲಿ ಏಕನಿಷ್ಠೆಯ ಭಕ್ತ. ಪಾರ್ವತಿಯು ಶಿವನಲ್ಲಿ ಐಕ್ಯವಾಗಿ, ಶಿವ ಅರ್ಧನಾರೀಶ್ವರ ರೂಪ ಪಡೆದಾಗಲೂ ಭಂಗಿ (ದುಂಬಿ) ಭಂಗದ ರೂಪ ಧರಿಸಿ ಶಿವನಿಗೆ ಪ್ರದಕ್ಷಿಣೆ ಬರುತ್ತ ಅರ್ಧನಾರೀಶ್ವರನನ್ನೇ ಮಧ್ಯದಲ್ಲಿ ಕೊರೆದನಂತೆ. ಆದ್ದರಿಂದಲೇ ಇವನಿಗೆ 'ಭೃಂಗ' ಎಂದು ಹೆಸರು ಬಂತೆಂದು ಪ್ರತೀತಿ.

ಶಿವನೊಂದಿಗೆ ನಿಕಟ ಸಂಬಂಧ ಹೊಂದಿದ ಇನ್ನೊಬ್ಬ ದೇವತೆಯೆಂದರೆ ವೀರಭದ್ರ. ದಕ್ಷ, ಸಂಹಾರಕ್ಕಾಗಿ ನಿಯುಕ್ತನಾದ ಶಿವನ ಶಕ್ತಿಯ ಸ್ವರೂಪ. ವೀರಭದ್ರನ ಅನಂತರ ಬರುವ ದೇವತೆ ಚಂಡೇಶ್ವರ. ಇವನು ಮನುಷ್ಯವರ್ಗದ ಮಹಾಭಕ್ತ. ಶಿವನ ಇತರ ಅನುಚರರೆಂದರೆ ಅವನ ಗಣಗಳು. ಇವು ಹೆಚ್ಚಾಗಿ ಪ್ರಮಥ ಅಥವಾ ಭೂತಗಣಗಳೆಂದು ಪ್ರಸಿದ್ಧ.

ರುದ್ರಾಕ್ಷಿಯ ಮಹತ್ವ

ರುದ್ರಾಕ್ಷಿಯಲ್ಲಿ ಶಿವನ ಸಾನ್ನಿಧ್ಯ ಇದೆ ಎಂಬುದು ರೂಢಿಗತ ನಂಬಿಕೆ. ಸಾಲಿಗ್ರಾಮ, ಶಿವಲಿಂಗ, ಬಿಲ್ವಪತ್ರೆ, ತುಳಸಿ, ವಿಭೂತಿಗಳಂತೆ ಅದು ವಿಶಿಷ್ಟ. ರುದ್ರಾಕ್ಷವು ಶಿವಾರಾಧಕರಿಗೆ ಅತ್ಯಂತ ಪವಿತ್ರ.
ಶಿವ ರಹಸ್ಯದಲ್ಲಿ ತಿಳಿಸಿರುವಂತೆ ಶಿವನ ನೇತ್ರಗಳಿಂದ ಹುಟ್ಟಿ ರುದ್ರನ ಅಕ್ಷಿಗಳೆಂದು ಹೇಳಲ್ಪಟ್ಟು 'ರುದ್ರಾಕ್ಷಿ' ಎಂದಾಯಿತು.
ರುದ್ರಾಕ್ಷಿ ಮಣಿಗೆ ಒಂದರಿಂದ ಹದಿನಾಲ್ಕು ಮುಖಗಳಿರುತ್ತವೆ. ಇವುಗಳ ಮಾಲೆಯನ್ನು ಧರಿಸುವುದರಂದ ರೋಗಗಳ ನಿವಾರಣೆಯಾಗಿ ಮಂತ್ರಸಿದ್ಧಿಯಾಗತ್ತದೆಯೆಂದು ನಂಬಿಕೆ.
ಒಂದು ಮುಖವುಳ್ಳ ರುದ್ರಾಕ್ಷಿ ಪರಬ್ರಹ್ಮ ಸ್ವರೂಪವಾಗಿದ್ದು, ಅದನ್ನು ಧರಿಸಿದವರು ಜಿತೇಂದ್ರಿಯರಾಗುತ್ತಾರೆ. ಎರಡು ಮುಖವುಳ್ಳ ರುದ್ರಾಕ್ಷಿಯು ಅರ್ಧನಾರೀಶ್ವರ ರೂಪಿ. ಅದರ ಧಾರಣೆಯಿಂದ ಶಿವನಿಗೆ ಪರಮಪ್ರಿಯರಾಗುವರೆಂದು ನಂಬಿಕೆ. ಮೂರು ಮುಖಗಳ ರುದ್ರಾಕ್ಷಿಯು ಅಗ್ನಿತ್ರಯ ಸ್ವರೂಪ. ನಾಲ್ಕು ಮುಖದ ರುದ್ರಾಕ್ಷಿ ಪರಬ್ರಹ್ಮದ ಪ್ರತೀಕ. ಐದು ಮುಖದ್ದು ಸಾಕ್ಷಾತ್ ಪರಶಿವ ಸ್ವರೂಪ ಎಂಬ ಭಾವನೆ. ಅದಕ್ಕೆ ಕಾಲಾಗ್ನಿ ಎಂಬ ಹೆಸರು. ಆರು ಮುಖದ ರುದ್ರಾಕ್ಷಿಯು ಷಣ್ಮುಖ ಮತ್ತು ಗಣಪತಿ ದೇವತಾ ಸ್ವರೂಪಿ. ಏಳು ಮುಖಗಳ ರುದ್ರಾಕ್ಷಿ ಸಪ್ತನಿಧಿ, ಸಪ್ತಾಶ್ವ, ಸಪ್ತ ಮಾತೃಕೆಯ ಸಾನ್ನಿಧ್ಯ ಹೊಂದಿದೆ. ಎಂಟು ಮೊಗದ ರುದ್ರಾಕ್ಷಿಯು ಅಷ್ಟಮೂರ್ತಿ ಮತ್ತು ಅಷ್ಟವಸು ಸ್ವರೂಪಿ. ಒಂಭತ್ತು ಮುಖದ ರುದ್ರಾಕ್ಷಿ ಶಕ್ತಿಯ ಪ್ರತೀಕ. ಹತ್ತು ಮೊಗದ ರುದ್ರಾಕ್ಷಿಯು ಯಮದೇವಾತ್ಮಕವಾದುದು. ಹನ್ನೊಂದು ಮುಖಗಳ ರುದ್ರಾಕ್ಷಿ ಏಕಾದಶರುದ್ರ. ಹನ್ನೆರಡು ಮುಖಗಳ ರುದ್ರಾಕ್ಷಿಯು ದ್ವಾದಶಾದಿತ್ಯ ಸ್ವರೂಪಿ. ಹದಿಮೂರು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ಕಣ್ಣುಗಳ ರುದ್ರಾಕ್ಷಿಯು ರುದ್ರನೇತ್ರ ಸ್ವರೂಪಿ. ಇದನ್ನು ಧರಿಸುವುದರಿಂದ ಸಮಸ್ತ ವ್ಯಾಧಿ ನಿವಾರಣೆ.

ಶಿವನು ಯೋಗಾಚಾರ್ಯ, ಸಂಗೀತ, ನೃತ್ಯ, ಕಲೆಯ ಮಹಾಗುರು, ದಕ್ಷಿಣಾಮೂರ್ತಿ, ಪರಿಪೂರ್ಣ, ಲೋಕ ಗುರುವಿನ ಆದರ್ಶರೂಪವೇ ದಕ್ಷಿಣಾಮೂರ್ತಿ.

ಬಿಲ್ವ ವೃಕ್ಷ -:
ಎಲ್ಲಿ ಶಿವಾಲಯವೋ ಅಲ್ಲಿ ಬಿಲ್ವವೃಕ್ಷ, ಎಲ್ಲಿ ಶಿವಪೂಜೆ ನಡೆಯುತ್ತದೋ ಅಲ್ಲಿ ಬಿಲ್ವಪತ್ರೆ. ಶಿವಾರ್ಚನೆಗೆ ಬಿಲ್ವಪತ್ರೆ ಎಲ್ಲಕ್ಕಿಂತ ಪವಿತ್ರವಾದದ್ದು. 'ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಮಂತ್ರವೊಂದೇ ಸಾಕು ಬಿಲ್ವದ ಮಹತ್ವವನ್ನು ಹೇಳಲು.
ಬಿಲ್ವವು ಅಶ್ವತ್ಥ, ಔದುಂಬರಾದಿಗಳಂತೆ ದೇವವೃಕ್ಷ. ಅದು ಭೌತಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಪ್ರಖ್ಯಾತ. ಇದರ ಮಹಿಮೆಯನ್ನು ಶ್ರೀಸೂಕ್ತ, ಸೌಭಾಗ್ಯ ಸಂಜೀವಿನಿ, ಸನತ್ಕುಮಾರ ಸಂಹಿತೆ, ಸಾರಸ್ವತ ಸಿದ್ಧಿ, ವಾಮನ ಪುರಾಣ, ಶಿವಪುರಾಣ ಮುಂತಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.
ಬಿಲ್ವಪತ್ರೆ ಒಣಗಿದ್ದರೂ ಒಂದು ಸಲ ಅರ್ಚಿಸಿದರೂ ನೀರಿನಿಂದ ತೊಳೆದು ಪುನಃ ಅರ್ಚಿಸಬಹುದೆಂದು ಶಾಸ್ತ್ರಮತ. ಸ್ಕಂದ ಪುರಾಣದಲ್ಲಿ ರೋಚಕವಾದ ಕಥೆಯೊಂದುಂಟು. ಲಕ್ಷ್ಮೀನಾರಾಯಣರು ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಆಗ ಲಕ್ಷ್ಮಿಯ ಬಲಗೈಯಿಂದ ಬಿಲ್ವದ ಮರಹುಟ್ಟಿತಂತೆ. ಅದಕ್ಕೆಂದೇ ಶ್ರೀವೃಕ್ಷ ಎಂದು ಹೆಸರು ಪಡೆಯಿತು. ತ್ರಿಗುಣಗಳನ್ನು ಸಂಕೇತಿಸುವ ಅದರ ಎಲೆಯ ಮೂರು ಎಸಳುಗಳನ್ನು ತ್ರಿಮೂರ್ತಿಗಳ ಮೂರು ವೇದಗಳ ಪ್ರತೀಕ.
ಬಿಲ್ವವೃಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಪುನರುಚ್ಚರಣೆ ಮಾಡಿದರೆ ಸಿದ್ಧಿಯಾಗುವುದೆಂದು ನಂಬಿಕೆ. ತುಳಸಿ, ನೆಲ್ಲಿ, ಬಿಲ್ವ ಇವು ಮೂರು ಪಾರ್ವತಿ, ಸರಸ್ವತಿ, ಲಕ್ಷ್ಮಿ ಸ್ವರೂಪದಿಂದ ದೇವತೆಗಳ ಅಂಶವೆಂದು ಪುರಾಣಗಳು ಸಾರುತ್ತವೆ. ಬಿಲ್ವ, ಚರು, ಆಜ್ಯಗಳಿಂದ ಹೋಮ ಮಾಡುವುದರಿಂದ ದಾರಿದ್ರ್ಯವು ನಿರ್ನಾಮವಾಗಿ ಲಕ್ಷ್ಮಿಯು ಗೃಹದಲ್ಲಿ ಸ್ಥಿರವಾಗಿರುವಳೆಂದು ಧರ್ಮಗ್ರಂಥಗಳಲ್ಲಿ ನಿರೂಪಣೆ ಇದೆ.
ಶಿವಪುರಾಣಗಳಲ್ಲಿ ಶಿವರಾತ್ರಿಯ ಮಹಿಮೆಯನ್ನು ತಿಳಿಸುತ್ತಾ ಓರ್ವ ಬೇಡನೂ, ಚಂಡಾಲನೂ ಎಸೆದ ಬಿಲ್ವಪತ್ರೆಯು ಶಿವಲಿಂಗದ ಮೇಲೆ ಬಿದ್ದುದರಿಂದ ಅವರು ನರಕ ಬಾಧೆಯಿಂದ ಪಾರಾಗಿ ಕೈಲಾಸವನ್ನು ಸೇರಿದರೆಂದು ಬಣ್ಣನೆ ಇದೆ

(ಸಂಗ್ರಹ).
**






No comments:

Post a Comment