SEARCH HERE

Tuesday, 1 January 2019

ಸಂಧ್ಯಾವಂದನೆ ಪರಿಣಾಮ ವಿಜ್ಞಾನ ಉದ್ದೇಶ sandhyavandana parinama science importance





Learn Sandhyavandana
madhwa way

**********

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.

ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ, ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

ಮಾಡುವ ಕ್ರಮ

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.

*******

ಸಂದ್ಯಾವಂದನೆ ಹಿಂದಿರುವ ವೈಜ್ಞಾನಿಕ ಸತ್ಯಗಳು!!!

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.

ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ, ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

ಮಾಡುವ ಕ್ರಮ

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.

ಸಂಧ್ಯಾವಂದನೆಯ ಬೋಧಾಯನ ಪದ್ಧತಿಯ ಹದಿನಾಲ್ಕು ಕ್ರಿಯೆಗಳು :-

೧. ಆಚಮನ
೨. ಮಂತ್ರ ಸ್ನಾನ
೩. ಭಸ್ಮಧಾರಣ
೪. ಸಂಕಲ್ಪ
೫. ಮಾರ್ಜನ
೬. ಜಲ ಪ್ರಾಶನ ( ದುರಿತ ನಿವಾರಣ)
೭. ಪುನಃ ಮಾರ್ಜನ
೮. ಅರ್ಘ್ಯ ಪ್ರದಾನ
೯. ಗಾಯತ್ರೀ ಜಪ
೧೦. ಸೂರ್ಯ ಉಪಸ್ಥಾನ
(ಸೂರ್ಯನ ಬೀಳ್ಕೊಡಿಗೆ ವಂದನೆ)
೧೧. ಅಭಿವಾದನ
೧೨. ಅಷ್ಟಾಕ್ಷರೀ ಜಪ
೧೩. ಪಂಚಾಕ್ಷರೀ ಜಪ
೧೪. ಭಗವದರ್ಪಣ
******

ಸಂಧ್ಯಾವಂದನೆ ಕಿರುಪರಿಚಯ
ಊರ್ಧ್ವಪುಂಡ್ರ ವಿಧಿ

ಸಂಧ್ಯಾವಂದನೆ ಎರಡು ಬಗೆಯ ಪಾವಿತ್ರ್ಯವನ್ನು ಒದಗಿಸುತ್ತದೆ:-

1. ಆಚಮನ, ಆಪ:ಪ್ರಾಶನ ಮುಂತಾದುವುಗಳ ಮೂಲಕ ಅಂತ:ಕರಣವನ್ನು ಕಲುಷಿತಗೊಳಿಸಿದ ಪಾಪಗಳಿಂದ ಪರಿಹಾರ.

2. ಮನ ಮತ್ತು ದೇಹದ ಅಂಗಾಂಗಗಳಲ್ಲಿ ಭಗವಂತನ ಸನ್ನಿಧಾನ ಸಿದ್ಧಿ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಊರ್ಧ್ವಪುಂಡ್ರ ವಿಧಿಯು ಅಂತರಶುದ್ಧಿಯ ಸಾಧನವಾಗಿರುತ್ತದೆ.

ಊರ್ಧ್ವಪುಂಡ್ರಧಾರಣೆ ಮತ್ತು ಪ್ರಾಣಾಯಾಮದ  ಮಹತ್ವ ತಿಳಿಯಲು ಚಕ್ರಗಳು ಮತ್ತು ಕುಂಡಲಿನಿಯ ಪ್ರಾಸ್ತಾವಿಕ ವಿವೇಚನೆ ಆವಶ್ಯಕ.

ಮನುಷ್ಯನಿಗೆ ಮೂರು ಶರೀರಗಳು:-
ಸ್ಥೂಲ, ಸೂಕ್ಷ್ಮ, ಹಾಗೂ ಕಾರಣ ಶರೀರಗಳು.
ಕಣ್ಣಿಗೆ ಕಾಣಿಸುವ ದೇಹ ಸ್ಥೂಲ ಶರೀರ.
ಸ್ಥೂಲ ಶರೀರಕ್ಕೂ ಸೂಕ್ಷ್ಮ ಶರೀರಕ್ಕೂ ನಂಟು ಕಲ್ಪಿಸುವ  ಆರು ಶಕ್ತಿ ಕೇಂದ್ರಗಳು (Spinal Cord) ಆದ್ಯಂತ ಇವೆ.
ಇವನ್ನು ಚಕ್ರ ಎನ್ನುತ್ತಾರೆ.
ಮೂಲಾಧಾರ, ಮಣಿಪೂರ, ಅನಾಹತ, ವಿಶುದ್ಧಿ, ಆಜ್ಞಾ, ಸಹಸ್ರಾರ - ಆರು (6) ಚಕ್ರಗಳು.
(ಸ್ವಾಧಿಷ್ಟಾನ - ಹೊರಗೆ ಕಾಣಿಸುವ ಮೊದಲ ಬೆನ್ನು ಮೂಲೆಯ ಬಳಿ. ಇದನ್ನು ಯೋಗದಲ್ಲಿ ಹೇಳಿದೆ ಆದರೆ ಬ್ರಹದಾರಣ್ಯಕ ಮುಂತಾದ ಕಡೆ ಹೇಳಲಿಲ್ಲ.)

ಈ ಆರು ಚಕ್ರಗಳ ಸ್ಥಾನಗಳು:-

01. ಮೂಲಾಧಾರ - ಜನನೇಂದ್ರಿಯದ ಬಳಿ.
02. ಮಣಿಪೂರ - ನಾಭಿಯಿಂದ ನೇರ ಹಿಂದೆ ಬೆನ್ನುಮೂಳೆಯ ಬಳಿ.
03. ಅನಾಹತ - ಹೃದಯದಿಂದ ನೇರ ಹಿಂದೆ ಬೆನ್ನುಮೂಳೆಯ ಬಳಿ.
04. ವಿಶುದ್ಧಿ - ಕಂಠಕೂಪದಿಂದ ನೇರ ಹಿಂದೆ ಬೆನ್ನು ಮೂಳೆಯ ಬಳಿ.
05. ಆಜ್ಞಾ - ಹುಬ್ಬುಗಳ ಮಧ್ಯದಿಂದ ನೇರ ಒಳಗೆ ಸಾಧಾರಣ ಮೆದುಳಿನ ಮಧ್ಯ.
06. ಸಹಸ್ರಾರ - ತಲೆಯಿಂದ 12 ಇಂಚುಗಳಷ್ಟು ಮೇಲೆ.

ಸೂಕ್ಷ್ಮ ಶರೀರದಲ್ಲಿ 72,000 ನಾಡಿಗಳಿವೆ.
(ವೈದ್ಯಕೀಯ ನಾಡಿಗಳಿಗೂ ಇದಕ್ಕೂ ಸಂಬಂಧವಿಲ್ಲ.)
ಇವುಗಳಲ್ಲಿ ಮೂರು ನಾಡಿಗಳು ಅತಿಮುಖ್ಯ.
ಇಡಾ, ಪಿಂಗಳಾ ಮತ್ತು ಸುಷುಮ್ನಾ.
ಇಡಾ ಎಡಮೂಗಿನ ಹೊಳ್ಳೆಯಿಂದ ಆಜ್ಞಾಚಕ್ರದ ಮೂಲಕ ಕೆಳಗೆ ಮೂಲಾಧಾರದಿಂದ ಆಜ್ಞಾಚಕ್ರದವರೆಗೂ ಅಲ್ಲಿಂದ ಸಹಸ್ರಾರಕ್ಕೆ ಸಾಗುತ್ತದೆ.

ದೇಹದಲ್ಲಿ ಪಂಚಪ್ರಾಣಗಳು ಇರುತ್ತವೆ:-
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ.
ಇದರಲ್ಲಿ ಪ್ರಾಣ ಮತ್ತು ಅಪಾನ ಮುಖ್ಯ.
ಪ್ರಾಣದ ಗತಿ ಮೇಲ್ಮುಖವಾಗಿದ್ದು ದೇಹವನ್ನು ನಿಯಂತ್ರಿಸುತ್ತದೆ.
ಅಪಾನದ ಗತಿ ಕೆಳಮುಖವಾಗಿದ್ದು ಮಲಮೂತ್ರ ಋತುಸ್ರಾವ ಇತ್ಯಾದಿಗಳ ವಿಸರ್ಜನೆಗೆ ಆವಶ್ಯಕ.
ಆಧ್ಯಾತ್ಮಿಕ ಮುನ್ನಡೆಗೆ ಪ್ರಾಣ ಅಪಾನ ಎರಡೂ ಸುಷುಮ್ನಾದ ಒಳಹೊಕ್ಕು ಮೇಲಕ್ಕೆ ಸಾಗಬೇಕು.
ಭಕ್ತಿ, ಅಧಿಕ ಮಂತ್ರ, ಜಪ ಇತ್ಯಾದಿಗಳಿಂದ ಆಧ್ಯಾತ್ಮಿಕ ಪ್ರಗತಿಯಾದಾಗ ಇವೆರಡೂ ಮೇಲ್ಮುಖವಾಗಿ ದೇಹದ ಅನವಶ್ಯಕ ವಸ್ತುಗಳ ವಿಸರ್ಜನೆಗೆ ಬೇಕಾದ ಅಪಾನ ಶಕ್ತಿ ಕಡಿಮೆಯಾಗುತ್ತದೆ.

ಮನುಷ್ಯರು ಕೆಳಕ್ಕೆ ಇಳಿಯುವವರು.
ತಮ್ಮ ಶಕ್ತಿಯನ್ನು ದುರುಪಯೋಗ ಪಡಿಸಿ ಬದುಕಿನಲ್ಲಿ ಸೋಲನ್ನು ಪಡೆಯುವವರು.
ರಾಜಸ-ತಾಮಸ ಭಾವನೆಗಳಿಂದ ಕುಸಿಯುವವರು.

ಇವರ ಮೇಲ್ಮುಖವಾದ ಗತಿಗೆ ಊರ್ಧ್ವಪುಂಡ್ರ ಧಾರಣೆ ಸಹಾಯಕ.
ಹೊರಗೆ ಧರಿಸುವ ಊರ್ಧ್ವಪುಂಡ್ರ ಒಳಗಿನ ಶಕ್ತಿ ಸಂಚಾರದ ಸೂಚಕ.
ಮೂಲಾಧಾರ ಚಕ್ರದಿಂದ ಕುಂಡಲಿನೀ ಶಕ್ತಿ ಜಾಗೃತವಾಗಿ ಸಹಸ್ರಾರಕ್ಕೆ ಸಾಗುವ ಸಂಕೇತವೇ ಊರ್ಧ್ವಪುಂಡ್ರ.

01. ಕಶೇರುಕದ (ಬೆನ್ನುಮೂಳೆ) ಬುಡದ ಊರ್ಧ್ವಪುಂಡ್ರ ಜಾಗೃತಗೊಳ್ಳುವ ಕುಂಡಲಿನಿಯ ಸಂಕೇತ.
02. ನಾಬಿಯ ಬಳಿಯ ಮೂರು ನಾಮ ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಸಂಕೇತ.
03. ಎದೆಯಲ್ಲಿ ಕಮಲದ ನಾಮ ಅನಾಹತ ಚಕ್ರದ ವಿಕಾಸದ ಸಂಕೇತ.
04. ಕಂಠದ ನಾಲ್ಕು ದಿಕ್ಕುಗಳಲ್ಲಿಯ ಪುಂಡ್ರಗಳು ಅನಾಹತ ಚಕ್ರದಿಂದ ವಿಶುದ್ಧಿ ಚಕ್ರದತ್ತ ಪಯಣದ ಸಂಕೇತ.
05. ಅಂಗೈ ಮೂಲಕ ನಿರಂತರ ಹರಿಯುತ್ತಿರುವ ಪ್ರಾಣಶಕ್ತಿಯನ್ನು ಊರ್ಧ್ವಮುಖಗೊಳಿಸಲು ಎರಡು ತೋಳುಗಳಲ್ಲಿ ಪುಂಡ್ರಗಳು.
06. ಲಲಾಟದ ನಾಮ ಆಜ್ಞಾ ಚಕ್ರದಿಂದ ಸಹಸ್ರಾರದತ್ತ ಶಕ್ತಿ ಸಂಚಲನದ ಸಂಕೇತ.
07. ಸ್ತನಪಾಶ್ವದ ಎರಡು ನಾಮಗಳು ಶ್ರೀವತ್ಸ ಮತ್ತು ಕೌಸ್ತುಭದ ಸಂಕೇತ.

ಇವೆಲ್ಲವೂ ನಮ್ಮ ಗುರಿಯ ನಿರಂತರ ಜಾಗೃತಿಗೋಸ್ಕರ ಸಹಾಯಕವಾಗಿ ಇರುವವೇ ಹೊರತು ಬರೇ ಹಚ್ಚಿದ ಮಾತ್ರಕ್ಕೆ ಪವಾಡ ಆಗುವುದಿಲ್ಲ.

ಗೋಪೀಚಂದನ ತೇಯುವಾಗ ಗಾಯತ್ರಿ ಇತ್ಯಾದಿ ಚಿಂತನೆ ಸಹಾಯಕ. ಇದರಿಂದ ಭಗವನ್ನಾಮಸ್ಮರಣೆಯೂ ಆಗುವುದು.
******

ಪ್ರಾಣಾಯಾಮ

ಯೋಗಶಾಸ್ತ್ರದಲ್ಲಿ ಪ್ರಾಣಾಯಾಮಕ್ಕೆ ವಿಶೇಷ ಸ್ಥಾನವನ್ನು ನೀಡಿದೆ ಮತ್ತು ದಿನಕ್ಕೆ ನಾಲ್ಕುಸಲ ಮಾಡಬೇಕೆಂದು ಸಲಹೆ ನೀಡಿರುತ್ತದೆ.

"ಪ್ರಾತರ್ಮಧ್ಯಂದಿನೇ ಸಾಯಂ ಅರ್ಧರಾತ್ರೇ ಚ ಕುಂಭಕಾನ್|
ಶನೈರಶೀತಿ ಪರ್ಯಂತಂ ಚತುರ್ವಾರಂ ಸಮಭ್ಯಸೇತ್||"
ರೇಚಕ-ಪೂರಕ-ಕುಂಭಕಗಳಿಂದ ಕೂಡಿದ ಪ್ರಾಣಾಯಾಮ ಚಕ್ರಗಳನ್ನು ಪ್ರತಿದಿನವೂ ಅರುಣೋದಯ, ಮಧ್ಯಾಹ್ನ, ಸಾಯಂಕಾಲ ಮತ್ತು ಅರ್ಥರಾತ್ರಿ ವೇಳೆಗಳಲ್ಲಿ ಅಭ್ಯಸಿಸಬೇಕು ಎಂದಿದೆ.
ಆದರೆ ಸಂಧ್ಯಾವಂದನೆಯಲ್ಲಿ ಪ್ರಾಣಾಯಾಮವು ಮೂರು ಸಲ ಮಾಡುವುದಾಗಿರುತ್ತದೆ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಪ್ರಾಣಾಯಾಮವು ಅಂತರ ಶುದ್ಧಿಯೇ ಆಗಿರುತ್ತದೆ.
"ಪ್ರಾಣಾಯಾಮೈರೇವ ಸಕಲಂ ಪಶುಷ್ಯಂತಿ ಮಲಾ:||"
ಸ್ವರ್ಣಾದಿ ಧಾತುಗಳು ಅಗ್ನಿಯಲ್ಲಿ ಕಾಯಿಸಿದರಿಂದ ಹೇಗೆ ನಿರ್ಮಲವಾಗುತ್ತದೆಯೋ, ಅದರಂತೆಯೇ ನಾನಾರದ ಪಾಪಗಳಿಂದ ಮಲಿನವಾದ ಮನಸಾದಿ ಇಂದ್ರಿಯಗಳೆಲ್ಲ ಪ್ರಾಣಾಯಾಮ ಮಾಡುವುದರಿಂದ ನಿರ್ಮಲವಾಗುವುದಲ್ಲದೇ ಒಂದೇ ಕಡೆಯಲ್ಲಿ ಮನಸ್ಸನ್ನು ಇಡುವುದಕ್ಕೆ ಈ ಸಾದನೆಯಿಂದ ಪ್ರಯೋಜನವಾಗುವುದು.

ಪ್ರಾಣಾಯಾಮದ ಹೆಚ್ಚಿನ ವಿವರಣೆ ಅಷ್ಟಾಂಗಯೋಗದಲ್ಲಿಯೇ ಇದೆ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಪ್ರಾಣಾಯಾಮ ಮಾಡುವ ಕ್ರಮ

ಬ್ರಹ್ಮಚಾರಿಯು ಬಲಗೈಯ ಕನಿಷ್ಠ, ಅನಾಮಿಕ, ಅಂಗುಷ್ಟ ಈ ಮೂರು ಬೆರಳುಗಳಿಂದಲೂ, ಗ್ರಹಸ್ಥ-ವಾನಪ್ರಸ್ಥರು ಐದೂ ಬೆರಳುಗಳಿಂದಲೂ, ನಾಸಿಕಾಗ್ರವನ್ನು ಹಿಡಿದು ಪ್ರಾಣಾಯಾಮವನ್ನು ಮಾಡುವುದು.

1. ಬಲನಾಸಾರಂದ್ರದಿಂದ ಉದರವಾಯುವನ್ನು ಹೊರಗೆ ಬಿಡಬೇಕು. (ಇದು ರೇಚಕ).
2. ಎಡನಾಸಾರಂದ್ರದಿಂದ ಹೊರವಾಯುವನ್ನು ಉದರದಲ್ಲಿ ಆಕರ್ಷಿಸಿಕೊಳ್ಳಬೇಕು. (ಇದು ಪೂರಕ).
3. ನಂತರ ಎರಡೂ ನಾಸಾರಂದ್ರಗಳನ್ನು ಬೆರಳುಗಳಿಂದ ಮುಚ್ಚಿ ಬಿಗಿಹಿಡಿದು, (ಇದು ಕುಂಭಕ), ಈ ಕುಂಭಕ ಸ್ಥಿತಿಯಲ್ಲಿ ಸಪ್ತವ್ಯಾಹೃತಿ ಸಹಿತ ಗಾಯತ್ರೀ ಮಂತ್ರವನ್ನು ಶಿರೋಮಂತ್ರ ಸಹಿತ ಏಕಾಗ್ರ ಮನಸ್ಸಿನಿಂದ ಜಪಿಸುವುದೇ ಪ್ರಾಣಾಯಾಮವು.

ಹೀಗೆ ಮೂರು, ಹನ್ನೆರಡು ಅಥವಾ ಇಪ್ಪತ್ತ್ನಾಲ್ಕು ಬಾರಿ ಮಾಡಬೇಕು.

ಪ್ರಾಣಾಯಾಮದ ಪೂರಕ ಕುಂಭಕ ರೇಚಕ ದ ಅನುಪಾತ (Ratio) 16-64-32.

ಒಂದು ಹ್ರಸ್ವ ಅಕ್ಷರವನ್ನು ಒಂದು ಮಾತ್ರೆ ಎಂದುಕೊಂಡು ಓಂ ಅನ್ನು ದೀರ್ಘಾಕ್ಷರವನ್ನಾಗಿ ಜಪಿಸಿದರೆ, ದಶಪ್ರಣವ ಗಾಯತ್ರೀ ಸರಿಯಾಗಿ 64 ಮಾತ್ರೆಯಾಗುತ್ತದೆ. ಇದರಿಂದ ಪೂರಕ ರೇಚಕದ ಅವಧಿ ತಿಳಿಯುತ್ತದೆ.

ಸಪ್ತವ್ಯಾಹೃತಿ ಸಹಿತ ಗಾಯತ್ರೀ ಮಂತ್ರ

"ಓಂ|| ಭೂ: || ಓಂ ಭೂವ: || ಓಂ ಸ್ವ: || ಓಂ ಮಹ: || ಓಂ ಜನ: || ಓಂ ತಪ: || ಓಂ ಸತ್ಯಮ್ ||
(ಇದು ಸಪ್ತವ್ಯಾಹೃತಿ - ಓಂ ಏಳು ಸಲ).

ಓಂ ತತ್ಸವಿತುರ್ವರೇಣ್ಯಂ  ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನ: ಪ್ರಚೋದಯಾತ್ ||
(ಇದು ಗಾಯತ್ರೀ - ಓಂ ಒಂದು ಸಲ).

ಓಂ ಆಪೋ ಜ್ಯೋತೀ ರಸೋಮೃತಂ ಬ್ರಹ್ಮ ಭೂರ್ಭುವ: ಸ್ವರೋಮ್ ||" 
(ಇದು ಗಾಯತ್ರೀ ಶಿರಸ್ಸು - ಓಂ ಎರಡು ಸಲ).

ಇದನ್ನು ದಶಪ್ರಣವ ಗಾಯತ್ರೀ ಎಂದು ಹೇಳುವುದು.
ಅಂದರೆ ಇದರಲ್ಲಿ ಹತ್ತು 'ಓಂ' ಕಾರಗಳು ಇವೆ.

ಈ ಜಪದಿಂದ ಒಳಗೆ ಹಿಡಿಯಲ್ಪಟ್ಟ ಗಾಳಿಯು ಮಂತ್ರಮಯವಾಗಿ ದೇಹದಲ್ಲಿ ರಕ್ತದ ಮೂಲಕ ಪ್ರವಹಿಸಿ ದೇಹದೊಳಗಿನ ದೋಷಗಳನ್ನು ನಿವಾರಿಸುತ್ತದೆ.

ಪ್ರಾಣಾಯಾಮದಲ್ಲಿ ಮಾಡುವ ಈ ಜಪವನ್ನು ಮಂತ್ರಾರ್ಥ ಸಹಿತ ಮಾಡಬೇಕು.
ಪ್ರಾಣವಾಯುವನ್ನು ಸುಷುಮ್ನಾ ನಾಡಿಯಲ್ಲಿ ಧಾರಣೆ ಮಾಡಬೇಕು. ಇದು ಧಾರಣೆ ಮಾಡಬೇಕಾದರೆ ಕುಂಡಲಿನಿ ಜಾಗೃತಿಯಾಗಿರಬೇಕು.

ಇದರಿಂದ ಮಂತ್ರಮಯವಾದ ವಾಯುವು ದೇಹದ ಕಣಕಣದಲ್ಲಿ ವ್ಯಾಪಿಸಿ ಆತ ಮಂತ್ರದೇಹಿಯಾಗುವನು.

ಅವಿದ್ಯೆಯಿಂದ ಲೌಕಿಕದತ್ತ ಹರಿಯುವ ಮನವನ್ನು ಭಗವಂತನೆಡೆಗೆ ತಿರುಗಿಸುವುದು ಈ ಪ್ರಾಣಾಯಾಮದಿಂದ ಸಾಧ್ಯವಾಗುವುದು.

ಆದ್ದರಿಂದಲೇ ಭಾಗವತದಲ್ಲಿ ಶ್ರೀಕೃಷ್ಣನು ಹೇಳಿರುವನು:-
"ಪ್ರಾಣಾಯಾಮ: ಪರಂ ಬಲಂ"
(ಪ್ರಾಣಾಯಾಮವೇ ಪ್ರಮುಖ ಬಲ).

ಪತಂಜಲಿ ಮಹರ್ಷಿಯವರ ಅಬಿಪ್ರಾಯ:-

ಈ ಪ್ರಾಣಾಯಾಮದಲ್ಲಿ ಸ್ವಾಮ್ಯವನ್ನು ಪಡೆದುದೇ ಆದರೆ, ಆತನು ಈ ಬಾಹ್ಯ ಪ್ರಪಂಚದಿಂದ ಕ್ರಮ ಕ್ರಮವಾಗಿ ಬೇರ್ಪಟ್ಟು, ಕಾಲಕ್ರಮದಿಂದ ಸರ್ವವ್ಯಾಪಿಯಾದ ಪರಮಾರ್ಥ ತತ್ತ್ವದೆಡೆಗೆ ಸರಿಯುತ್ತಾನೆ.
ಸಾಧಕನ ಒಳಗಿರುವ 'ದಿವ್ಯಾಗ್ನಿ' ಇಲ್ಲವೇ 'ದಿವ್ಯಜ್ಯೋತಿ' ಯು ಸಾಧಕನ ಒಳಗೇ ಅತಿ ವೈಭವದಿಂದ ಹೊಳೆದು, ಅವನ ಮನಸ್ಸನ್ನು 'ಧಾರಣ' ಸ್ಥಿತಿಗೂ 'ಧ್ಯಾನ' ಸ್ಥಿತಿಗೂ ಒಯ್ಯುತ್ತದೆ.
ಆದರೆ ಈ ಹಂತವನ್ನು ತಲುಪಲೂ ಬಹುವರ್ಷಕಾಲ ಹಿಡಿಯುತ್ತದೆ.

******


ಮಂತ್ರಗಳು

ಒಂದು ಜಿಜ್ಞಾಸೆ

"ಸಂಧ್ಯಾವಂದನೆ/ಪೂಜೆಯ ಭಾಷೆಯು ಸಂಸ್ಕೃತವಾಗಿರುವ ಕಾರಣ ಕಲಿಯಲಿಕ್ಕೆ ಬಹು ಕಷ್ಟವಾದದ್ದು.
ತಿಳಿಯದೆ ಮಾಡುವುದಕ್ಕಿಂತ, ನಮಗೆ ತಿಳಿಯುವ ಯಾವುದಾದರೂ ಭಾಷೆಯಿಂದ ದೇವರನ್ನು ನಾವು ಯಾಕೆ ಪ್ರಾರ್ಥಿಸಬಾರದು?
ದೇವರು ಸರ್ವ ಭಾಷೆಗಳನ್ನು ತಿಳಿದವನೂ, ಸರ್ವಾಂತರ್ಯಾಮಿಯೂ ಆದ್ದರಿಂದ ಈ ವೇದಮಂತ್ರಗಳಿಂದಲೇ ಸಂಧ್ಯಾವಂದನೆ ಮಾಡಬೇಕೆಂದೇನು?
******

ಈ ಕೆಳಗಿನಂತೆ ನಾವು ಅರ್ಥ ಮಾಡಿಕೊಂಡರೆ, ಉತ್ತರ ನಮಗೇ ತಿಳಿಯುತ್ತದೆ.

1. ಸಂಧ್ಯಾವಂದನೆ ಎಂಬ ವೇದೋಕ್ತ ನಿತ್ಯಕರ್ಮವನ್ನು ಉಪನಯನ (ಜ್ಞಾನಚಕ್ಷು) ವಾದಂದಿನಿಂದ ಪ್ರಾಣ ಬಿಡುವ ತನಕ ಮಾಡಲೇ ಬೇಕು.

2. ಸಂಧ್ಯವಂದನೆ ಮಾಡದವನು ಕರ್ಮಭೃಷ್ಟ ಎಂದು ಕರೆಸಿಕೊಳ್ಳುತ್ತಾನೆ. 

3. ಸಂಧ್ಯಾವಂದನ ಮಾಡದವನು ವೇದೋಕ್ತ  ಸಮಸ್ತ ಕರ್ಮಗಳಲ್ಲಿಯೂ ಅನರ್ಹನಾಗುತ್ತಾನೆ. ಅಂದರೆ ಅವನಿಗೆ ವೇದೋಕ್ತ ಕರ್ಮಾಧಿಕಾರವಿಲ್ಲ. 

4. ಸಂಧಾಯವಂದನ ಲೋಪ ಮಾಡಿ ಬೇರೆ ಯಾವ ತರದ ಪುಣ್ಯ ಕಾರ್ಯ ಮಾಡಿದರೂ ಅದರ ಪುಣ್ಯಫಲ ಸಹಾ ಆತನಿಗೆ ಸಿಗುವುದಿಲ್ಲ. 
ದೇವತೆಗಳು ಆತನು ಮಾಡಿದ ಪೂಜೆಯನ್ನೂ, ಪಿತೃಗಳು ಆತನು ಕೊಟ್ಟ ಪಿಂಡ-ತರ್ಪಣಗಳನ್ನೂ ಸ್ವೀಕರಿಸುವುದಿಲ್ಲ. 

5. ಅನಂತ ಜ್ಞಾನರಾಶಿಯಾದ ವೇದಗಳು ಭಗವಂತನ ನಿ:ಶ್ವಾಸದಿಂದ ಪ್ರಾಪ್ತವಾಗಿವೆ. ಮತ್ತು ಇವು ಸಂಸ್ಕೃತದಲ್ಲಿಯೇ ಇವೆ ವಿನಹ ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ.

6 ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ, ಹಾಗೆ ಪ್ರತಿಯೊಂದು ವೇದದಲ್ಲಿ ಸಂಹಿತಾ, ಬ್ರಾಹ್ಮಣ, ಆರರ್ಣ್ಯಕ, ಉಪನಿಷತ್ ಮತ್ತು ವೇದಾಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಮತ್ತು ಕಲ್ಪ. ಇವೆಲ್ಲವೂ ಸೇರಿ "ವೇದ" ಎನ್ನುವುದಾಗಿದೆ. ಆದ್ದರಿಂದಲೇ ಇದನ್ನು ಅನಂತಜ್ಞಾನರಾಶಿ ಎಂದು ಹೇಳುವುದು. 

7. ಮಂತ್ರಗಳು ದೇವತೆಗಳ ಶರೀರ. 
"ಛಂದ: ಪಾದೌತು ವೇದಸ್ಯ ಹಸ್ತೌ ಕಲ್ಪೋ ಥ ಪಠ್ಯತೇ|
ಜ್ಯೋತಿಷಾಮಯನಂ ಚಕ್ಷು: ನಿರುಕ್ತಂ ಶ್ರೋತ್ರಮೇವ ಚ||
ಶಿಕ್ಷಾ ಘ್ರಾಣಂತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಂ|
ತಸ್ಮಾತ್ಸಾಂಗಮೇಧೀತ್ಯೈವ ಬ್ರಹ್ಮಲೋಕೇಮಹೀಯತೆ||" 

8. ಸಂಧ್ಯಾವಂದನೆ, ಪೂಜೆ, ಎಲ್ಲವೂ ವೇದೋಕ್ತ ಕರ್ಮಗಳಾದ್ದರಿಂದ, ಸಂಸ್ಕೃತದಲ್ಲಿಯೇ ಇದೆ, ಮತ್ತು ಅದೇ ರೀತಿ ಮಾಡಬೇಕಾಗಿರುವುದು. 

9. ಉಳಿದ ಎಲ್ಲಾ ಭಾಷೆಗಳು ಭಗವಂತನ ನಿ:ಶ್ವಾಸದಿಂದ ಪ್ರಾಪ್ತವಾದದ್ದಲ್ಲ. 
ಆದ್ದರಿಂದ ನಮಗೆ ತಿಳಿದ ಭಾಷೆಯಿಂದ ಸಂಧ್ಯಾವಂದನೆ, ಪೂಜೆ ಮುಂತಾದ ವೇದೋಕ್ತ ಕರ್ಮಗಳನ್ನು ಮಾಡಿದರೆ, ಕಣ್ಣಿನ ತಜ್ಞ ವೈಧ್ಯನು ಹೃದಯದ ಶಸ್ತ್ರಚಿಕಿತ್ಸೆ ಮಾಡಿದಂತೆ ಆಗಬಹುದು. 

10. ಆದ್ದರಿಂದ ಸಂಸ್ಕೃತವನ್ನು ಸಂಸ್ಕೃತ ಲಿಪಿಯಲ್ಲಿ ಅಲ್ಲದಿದ್ದರೂ, ನಮಗೆ ತಿಳಿದಿರುವ ಲಿಪಿಯಲ್ಲಿ ಇದ್ದುದನ್ನು ಓದಿ, ಕರ್ಮವನ್ನು ಆಚರಿಸಬೇಕು. 

11. ತಿಳಿದುಕೊಂಡು ಮಾಡುವುದು ಉಪನಯನ ಆದವನ ಕರ್ತವ್ಯವು. ಹೇಗೆಂದರೆ, ಅರಸನು ವಿಧಿಸಿರುವ ಕಾಯಿದೆಗಳು ನಮಗೆ ತಿಳಿಯುವುದಿಲ್ಲ ಎಂದು ನಾವು ತಪ್ಪು ಮಾಡಿದರೆ ಅರಸನು ಆ ತಪ್ಪಿನಿಂದ ಹೇಗೆ ಮುಕ್ತಪಡಿಸುವುದಿಲ್ಲವೋ ಹಾಗೆಯೇ ಸಂಧ್ಯಾವಂದನಾಧಿಕಾರಿ ಆದವನು ಸಂಧ್ಯಾವಂದನೆಯನ್ನು ಕಲಿತುಕೊಂಡು ಮಾಡದಿದ್ದರೆ, ಅದರ ಬದಲಿಗೆ ಬೇರೆ ಪುಣ್ಯ ಮಾಡಿದರೂ ಕರ್ಮಭ್ರಷ್ಟನಾಗಿ ಪಾಪದಿಂದ ಎಂದಿಗೂ ಮುಕ್ತನಾಗಲಾರನು ಎಂದು ಸ್ಮೃತಿಗಳಲ್ಲಿ ಇರುತ್ತದೆ. 

"ಸಂಧ್ಯೋಪಾಸ್ತಿಂ ವಿನಾ ವಿಪ್ರ: ಪುಣ್ಯಾನ್ಯನ್ಯಾನಿ ಚಾಚರೇತ್ |
ಯಸ್ಯಸ್ಯ ತಾನಿ ಪಾಪಾನಿ ಭವತ್ಯೇವ ನ ಸಂಶಯ:||
ಯೋನತ್ರ ಕುರುತ್ ಯತ್ನಂ ಧರ್ಮಕಾರ್ಯೇ ದ್ವಿಜೋತ್ತಮ:|
ವಿಹಾಯ ಸಂಧ್ಯಾಪ್ರಣತಿಂ ಸ ಯಾತಿ ನರಕಾಯುತಮ್||" 

||ಶ್ರಿಕೃಷ್ಣಾರ್ಪಣಮಸ್ತು||

**********

ಸಂಧ್ಯಾವಂದನೆಯಿಂದಾಗುವ ಪರಿಣಾಮಗಳು

ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.

ಭಗವಂತನಲ್ಲಿ ಶ್ರದ್ಧೆ,ನಂಬಿಕೆ,ಪ್ರೀತಿ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.

ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.

ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.

ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.

ಮಾತಿನಲ್ಲಿ ಮೃದುತ್ವ , ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.

ಮನಸ್ಸಿನಲ್ಲಿ ಸದ್ಭಾವನೆ,ಶ್ರೇಷ್ಟವಿಚಾರ ಹಾಗೂ ಸಾತ್ವಿಕಗುಣಗಳು ಸ್ಥಾನ ಪಡೆಯುತ್ತವೆ.

ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ.

ಶಾಂತಿ,ಸಂತೋಷ,ಕ್ಷಮೆ,ದಯೆ,ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.

ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ.ಅಹಂಕಾರದ ಮೂಲರೂಪ ನಾನು.ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮಸಾಧನೆ ಸಾಧ್ಯವಿಲ್ಲ.ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ,ವ್ಯಕ್ತಿ ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.

ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.

ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ

ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.

ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.

ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ. ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ..

ಹೇ ಸಗರರಾಜ,ಬುದ್ಧಿವಂತನಾದ ಮನುಷ್ಯ ಪ್ರಾತಃಸಂಧ್ಯೋಪಾಸನೆ ಹಾಗೂ ಸಾಯಂಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ ವಿಮುಕ್ತನಾಗುತ್ತಾನೆ.ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಾರೋ ಅಂತವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ.ಆದ್ದರಿಂದ ಹೇ ರಾಜ..ಪ್ರಾತಃಕಾಲೀನ ಹಾಗೂ ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು.ಇದರಿಂದ ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ.
(ವಿಷ್ಣುಪುರಾಣ,ತೃತೀಯ ಅಂಶ - ೧೧-೧೦೨,೧೦೩)
ಹಾಗಾಗಿ ಸಂಧ್ಯಾವಂದನೆ ನಿತ್ಯನೈಮಿತ್ತಿಕಕರ್ಮಗಳಲ್ಲೊಂದಾಗಿದೆ.ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ.
***

ಆಪೋ - water

ಓಂ ಆಪೋಹಿಷ್ಠಾ  ಮಯೋ ಭುವ:| ತಾನ ಊರ್ಜೇ ದಧಾತನ:| ಮಹೇರಣಾಯ ಚಕ್ಷಸೇ| ಯೋವ: ಶಿವತಮೋರಸ:| ತಸ್ಯ ಭಾಜಯತೇ ಹನ:| ಉಶತೀರಿವ ಮಾತರ:| ತಸ್ಮಾ ಅರಂಗಮಾಮವೋ| ಯಸ್ಯಕ್ಷಯಾಯ ಜಿನ್ವಥ| ಆಪೋ ಜನಯಥಾ ಚ ನ:||
- ಋಗ್ವೇದದ 10.129.3-5

ಸಂಧ್ಯಾವಂದನೆ ಈ ಮಂತ್ರವು ನೀರಿನ ಮಹತ್ವವನ್ನು ವಿವರಿಸುತ್ತದೆ.

ಮೊದಲ ವಾಕ್ಯ, "ಓಂ ಆಪೋಹಿಷ್ಠಾ ಮಯೋ ಭುವಃ," ಎಂದರೆ "ನೀರು  ಭೂಮಿಯನ್ನು ಆವರಿಸಿದೆ."  ನೀರು ಭೂಮಿಯನ್ನು ಉಷ್ಣತೆಯಿಂದ  ರಕ್ಷಿಸುತ್ತದೆ.

ಎರಡನೇ ವಾಕ್ಯ, "ತಾನ ಊರ್ಜೆ ದದಾತನ," ಎಂದರೆ ನೀರು ನಮ್ಮ ಜೀವನಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

ಮೂರನೇ ವಾಕ್ಯ, "ಮಹೇರಣಾಯ ಚಕ್ಷಸೇ," ಎಂದರೆ ನೀರು ಎಲ್ಲಾ ಜೀವಿಗಳಿಗೆ ಜೀವನದ ಮೂಲ.

ನಾಲ್ಕನೇ ವಾಕ್ಯ, "ಯೋವಃ ಶಿವತಮೋ ರಸಃ," ಎಂದರೆ ನೀರು ಎಲ್ಲಾ ಶುದ್ಧತೆಯ ಮೂಲ ಎಂಬುದನ್ನು ವಿವರಿಸುತ್ತದೆ.

ಐದನೇ ವಾಕ್ಯ, "ತಸ್ಯ ಭಾಜಯತೇ ಹನಃ," ಎಂದರೆ  ನೀರು ಜಗತ್ತಿನಲ್ಲಿ ಸುಗಂಧವನ್ನು ಹರಡುತ್ತದೆ.

ಆರನೇ ವಾಕ್ಯ, "ಉಶತೀರಿವ ಮಾತರಃ," ಎಂದರೆ ನೀರು ಎಲ್ಲಾ ಜೀವಿಗಳಿಗೆ ತಾಯಿಯಂತೆ.

ಏಳನೇ ವಾಕ್ಯ, "ತಸ್ಮಾ ಅರಂಗ ಮಾಮವಃ," ಎಂದರೆ ನೀರು ನಮ್ಮನ್ನು ಪಾಪಗಳಿಂದ ಪವಿತ್ರಗೊಳಿಸುತ್ತದೆ.

ಎಂಟನೇ ವಾಕ್ಯ, "ಯಸ್ಯ ಕ್ಷಯಾಯ ಜಿನ್ವಥಃ," ಎಂದರೆ "ಅದು ಅಳಿದರೆ ನಾವು ಬದುಕಲಾರೆ." ನೀರು ನಮ್ಮ ಜೀವನಕ್ಕೆ ಅತ್ಯಗತ್ಯ ಎಂಬುದನ್ನು ವಿವರಿಸುತ್ತದೆ.

ಒಂಬತ್ತನೇ ವಾಕ್ಯ, "ಆಪೋ ಜನಯ ಥಾ ಚ ನಃ," ಎಂದರೆ ಆದ್ದರಿಂದ ನೀರು ನಮ್ಮನ್ನು ಉಳಿಸಲಿ. ನೀರು ನಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತದೆ.

ಈ ಮಂತ್ರವನ್ನು ಪಠಿಸುವುದರಿಂದ ನಮ್ಮಲ್ಲಿ ನೀರಿನ ಮೇಲಿನ ಗೌರವ ಹೆಚ್ಚುತ್ತದೆ. ನಾವು ನೀರನ್ನು ಪವಿತ್ರವೆಂದು ಭಾವಿಸುತ್ತೇವೆ ಮತ್ತು ಅದನ್ನು ಜಾಗರೂಕತೆಯಿಂದ ಬಳಸುತ್ತೇವೆ. ನಮ್ಮ ಆರೋಗ್ಯ, ಸಂಪತ್ತು ವೃದ್ಧಿಯಾಗಿ ಗು ಶುಭವಾಗುತ್ತದೆ🙏

ಆಪೋ ರಕ್ಷತಿ ರಕ್ಷಿತಃ🪔🪔🪔
***




ಸಂಧ್ಯಾವಂದನೆ ಮಂತ್ರ
ಈ ಸಂಧ್ಯಾವಂದನೆ ಮಂತ್ರವನ್ನು ಪಠಿಸಿದವರು ಶೃಂಗೇರಿ ಶಿಷ್ಯ ಚಿರಂಜೀವಿ ಅತ್ರೇಯ 


ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಈ ಧ್ವನಿ ಮುದ್ರಿಕೆಯನ್ನು ಮುದ್ರಿಸಿದೆ.

( ಸ್ಪಷ್ಟನೆ :: ಆಡಿಯೋ ರೂಪದಲ್ಲಿ ಇದ್ದ ಕಾರಣ ಪೇಸ್ಬುಕ್ ನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ ಅದರಿಂದ ವಿಡಿಯೋ ರೂಪಕ್ಕೆ ಬದಲಾಯಿಸಲಾಗಿದೆ)
click
https://youtu.be/oJCS-pZ5ZrY   ಯೂಟ್ಯೂಬ್ ನಲ್ಲಿಯೂ ಲಭ್ಯ




ಯಸ್ಯ ಸ್ಮೃತ್ಯಾ ಚ :-
ಯಾರ ಸ್ಮರಣೆ ನಾಮೋಚ್ಚಾರಣೆಗಳಿಂದ ತಪಸ್ಸು,ಸಂಧ್ಯಾವಂದನೆ,ಜಪ ಮುಂತಾದ ಕರ್ಮಗಳಲ್ಲಿ ನ್ಯೂನತೆ ತಕ್ಷಣ ಪರಿಹಾರವಾಗುವುದೋ ಆ ಅಚ್ಯುತನನ್ನು ವಂದಿಸುತ್ತೇನೆ.
ಜನಾರ್ಧನ! ಮಂತ್ರ,ಕ್ರಿಯೆ,ಭಕ್ತಿಗಳಿಲ್ಲದೆಯೇ ಜಪತಪಾದಿಅನುಷ್ಠಾನ ನಾನು ಮಾಡಿದ್ದರೂ ನಿನ್ನ ಈ ಪೂಜೆ ಪರಿಪೂಣ೯ವೆನಿಸಲಿ.
ಹೀಗೆ ಕಾಯಿಕ, ವಾಕ್ಕು,ಮನಸ್ಸು,ಇಂದ್ರಿಯ,ಬುದ್ಧಿಗಳಿಂದ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ,ಸ್ವತಂತ್ರನಾದ ಹರಿಯ ಇಚ್ಛೆಯನ್ನು ಅನುಸರಿಸಿ ನಾನು ಯಾವ ಯಾವ ಕರ್ಮವನ್ನು ಮಾಡುವೆನೋ ಮಾಡಿರುವೆನೋ ,ಅದನ್ನು ಪರತತ್ವವೆನೆಸಿದ ನಾರಾಯಣನಿಗೇ ಅರ್ಪಿಸುತ್ತೇನೆ.
ಪೂರ್ವೋಕ್ತವಾದ ಇಂತಹ  ವಿಶೇಷಗಳಿಂದ ಕೂಡಿದ ಶುಭ ಪುಣ್ಯ ತಿಥಿಯಲ್ಲಿ ನಾನು ಮಾಡಿದ ಪ್ರಾತಃ ಸಂಧ್ಯಾವಂದನೆ,ಜಪ,ತರ್ಪಣಗಳಿಂದ  ಭಗವಾನ್ ಮಧ್ವಾಂತರ್ಗತ ಶ್ರೀ ಗೋಪಾಲಕೃಷ್ಣನು ಪ್ರೀತನಾಗಲಿ,ಅವನಿಗೆ ಇದು ಅರ್ಪಿತವಾಗಲಿ.
ತುಲಸೀ ದಲ ಸಹಿತ ನೀರು ಬಿಟ್ಟು ಎರಡು ಸಲ ಆಚಮನ ಮಾಡಿ,ಜಪಕಾಲದಲ್ಲಿ ಮಂತ್ರ, ತಂತ್ರ,ಸ್ವರ,ವರ್ಣಗಳಲ್ಲಿ ಸಂಭವಿಸಿರಬಹುದಾದ ಎಲ್ಲಾ। ಲೋಪದೋಷಗಳ ಪ್ರಾಯಶ್ಚಿತ್ತಕ್ಕಾಗಿ ಯಥಾಶಕ್ತಿ ನಾಮತ್ರಯವನ್ನು ಜಪಿಸುತ್ತೇನೆ  ಎಂದು ಸಂಕಲ್ಪಸಿ ಅಚ್ಯುತನಿಗೆ ನಮಸ್ಕಾರ ಅನಂತನಿಗೆ ನಮಸ್ಕಾರ,ಗೋವಿಂದನಿಗೆ ನಮಸ್ಕಾರ ಎಂದುಕನಿಷ್ಠ ಮೂರು ಬಾರಿಯಾದರೂ  ವಿಷ್ಣುಸ್ಮರಣೆ ಮಾಡಬೇಕು.ವಿ, ಸೂ:- ಪ್ರತಿಯೊಬ್ಬರೂ ತ್ರಿಸಂಧ್ಯೆಯಲ್ಲಿ ಸಂಧ್ಯಾಭಿಮಾನೀ ದೇವತೆಗಳನ್ನು ಗೌರವಿಸಲೇ ಬೇಕು ಕಾಲಗತಿಯಲ್ಲಿನ ಅಡೆತಡೆಗಳಿಂದ ಮೂರುಹೊತ್ತು ಸಂಧ್ಯೋಪಾಸನೆ ಮಾಡಲಾಗದಿರುವುದರಿಂದ ಮಧ್ಯಾಹ್ನದ ಪರವಾಗಿ ಬೆಳಗಿನ ಸಂಧ್ಯಾನಂತರ ಕನಿಷ್ಟ ಹತ್ತು ಗಾಯತ್ರೀ ಜಪ ಮಾಡಿರಿ. ಈ ಸಂಧ್ಯಾವಂದನೆ ಉಪನೀತರಾದವರಿಗೆ ವಿಧಿಸಲ್ಪಟ್ಟಿದೆ.


ಹಾಗಾಗಿ ಸಂಧ್ಯಾವಂದನೆ ನಿತ್ಯನೈಮಿತ್ತಿಕಕರ್ಮಗಳಲ್ಲೊಂದಾಗಿದೆ.ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ..

ಆಚಮನ ವಿಧಿ

ಪರಿಶುದ್ಧನಾಗಿ ಪವಿತ್ರ ಸ್ಥಾನದಲ್ಲಿ ಕುಳಿತು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖವಾಗಿ ಕುಳಿತು ಬಲಕೈಯನ್ನು ಮೊಣಕಾಲಿನ ಮಧ್ಯದಲ್ಲಿಟ್ಟು ಉಷ್ಣವಲ್ಲದ ನೊರೆಯಿಲ್ಲದ ಶೀತಲ ನಿರ್ಮಲ ಜಲದಲ್ಲಿ ಆಚಮನವನ್ನು ಮಾಡತಕ್ಕದ್ದು.
ಅತ್ತಿತ್ತ ತಿರುಗಿ ನೋಡುತ್ತಾ, ಮಾತನಾಡುತ್ತಾ ಆಚಮನ ಮಾಡಲಾಗದು.

ಬ್ರಾಹ್ಮಣನ ಬಲಗೈಯಲ್ಲಿ ಐದು ತೀರ್ಥಗಳಿವೆ.

1. ದೇವತೀರ್ಥ,
2. ಪಿತೃರ್ರ್ತೀ,
3. ಬ್ರಹ್ಮತೀರ್ಥ,
4. ಪ್ರಾಜಾಪತ್ಯ ತೀರ್ಥ,
5. ಸೌಮ್ಯ ತೀರ್ಥ.

ಈ ರೀತಿಯಲ್ಲಿ ಒಟ್ಟು 5 ತೀರ್ಥಗಳಿವೆ. ಅಂಗುಷ್ಟ ಮೂಲದಲ್ಲಿ ಬ್ರಾಹ್ಮತೀರ್ಥವೂ, ಕನಿಷ್ಠಿಕೆಯ ಮೂಲದಲ್ಲಿ ಪ್ರಾಜಾಪತ್ಯ ತೀರ್ಥವೂ, ಜೊತೆಯಾಗಿ ಕೂಡಿಸಿದ ನಾಲ್ಕು ಅಂಗುಲಿಗಳ ಮಧ್ಯಭಾಗದಲ್ಲಿ ದೇವತೀರ್ಥವೂ, ತರ್ಜನೀ ಮತ್ತು ಅಂಗುಷ್ಠಗಳ ಮಧ್ಯಭಾಗದಲ್ಲಿ ಪಿತೃತೀರ್ಥವೂ, ಅಂಗೈಯಲ್ಲಿ ಸೌಮ್ಯತೀರ್ಥವೂ ಇದೆ.

“ಅಂಗುಷ್ಠಮೂಲೋತ್ತರತೋ ಯೇಯಂ ರೇಖಾ ಮಹೀಪತೇ |
ಬ್ರಾಹ್ಮಂ ತೀರ್ಥಂ ವದಂತ್ಯೇತತ್ ವಸಿಷ್ಠಾದ್ಯಾ ದ್ವಿಜೋತ್ತಮ ||
ಕಾಯಂ ಕನಿಷ್ಠಿಕಾಮೂಲೇ ಅಂಗುಲ್ಯಗ್ರೇತು ದೈವತಂ
ಕರಮಧ್ಯೇ ಸ್ಥಿತಂ ಸೌಮ್ಯಂ ಪ್ರಶಸ್ತಂ ದೇವತಕರ್ಮಣಿ”||

• ದೇವತಾರ್ಚನೆ ದಕ್ಷಿಣೆ ಆದಿಗಳು ದೇವತಾತೀರ್ಥದಲ್ಲಿಯೂ,
• ತಪರ್ಣ ಪಿಂಡದಾನಾದಿ ಕರ್ಮಗಳು ಪೈತೃಕ ತೀರ್ಥದಲ್ಲಿಯೂ,
• ಆಚಮನ ಬ್ರಾಹ್ಮತೀರ್ಥದಲ್ಲಿಯೂ,
• ವಿವಾಹದ ಸಮಯದಲ್ಲಿ ಲಾಜಹೋಮದಲ್ಲಿ ಪ್ರಾಜಾಪತ್ಯ ತೀರ್ಥದಿಂದಲೂ,
• ಕಮಂಡಲು ಗ್ರಹಣ ದಧಿಪ್ರಾಶನಾದಿ ಕರ್ಮಗಳು ಸೌಮ್ಯತೀರ್ಥದಲ್ಲಿಯೂ ವಿಹಿತಗಳಾಗಿವೆ.

ಅಂಗುಲಿಗಳನ್ನು ಜೊತೆಗೂಡಿಸಿ ಏಕಾಗ್ರಚಿತ್ತದಿಂದ ಶಬ್ದ ಮಾಡದೆ ಮೂರು ಬಾರಿ ಪವಿತ್ರ ಜಲದಿಂದ ಮಾಡಿದ ಆಚಮನದಿಂದ ದೇವತೆಗಳು ತೃಪ್ತರಾಗುತ್ತಾರೆ.

• ಒಂದನೆಯ ಆಚಮನದಿಂದ ಋಗ್ವೇದವೂ,
• ಎರಡನೆಯದರಿಂದ ಯಜುರ್ವೇದವೂ,
• ಮೂರನೆಯ ಆಚಮನದಿಂದ ಸಾಮವೇದವೂ ತೃಪ್ತಿಗೊಳ್ಳುವುದು ಎನ್ನಲಾಗಿದೆ.

ಓಷ್ಠಗಳ ಮಾರ್ಜನದಿಂದ ಇತಿಹಾಸ ಪುರಾಣಗಳೂ, ಕಣ್ಣುಗಳ ಸ್ಪರ್ಶದಿಂದ ದಿಗ್ ದೇವತೆಗಳೂ, ಭುಜಸ್ಪರ್ಶದಿಂದ ಯಮ ಕುಬೇರ ಇಂದ್ರ ವರುಣ ದೇವತೆಗಳೂ, ತೃಪ್ತರಾಗುತ್ತಾರೆ. ಅಂಗುಷ್ಠ ತರ್ಜನಿಗಳಿಂದ ನೇತ್ರ, ಅಂಗುಷ್ಠ ಅನಾಮಿಕಗಳಿಂದ ನಾಸಿಕ, ಅಂಗುಷ್ಠ ಕನಿಷ್ಠಿಕೆಗಳಿಂದ ಕಿವಿ, ಅಂಗುಲಿಗಳಿಂದ ಭುಜವನ್ನೂ ಅಂಗುಷ್ಠದಿಂದ ನಾಭಿ ಮಂಡಲವನ್ನೂ ಎಲ್ಲಾ ಅಂಗುಲಿಗಳಿಂದ ತಲೆಯನ್ನೂ ಸ್ಪರ್ಶಿಸತಕ್ಕದ್ದು.ಆಚಮನ ಜಲವು ಹೃದಯಕ್ಕೆ ತಲಪುವ ಮಿತಿಗೆ ಮಾತ್ರ ಬ್ರಾಹ್ಮಣನು ಪ್ರಾಶನ ಮಾಡ ತಕ್ಕದು. ಕಂಠದವರೆಗೆ ಕ್ಷತ್ರಿಯನೂ, ವೈಶ್ಯನು ಕೇವಲ ಜಲಪ್ರಾಶನದಿಂದ ಮಾತ್ರ ಪುನೀತನಾಗುವನು.

ಕುತ್ತಿಗೆಯಿಂದ ಬಲಕೈಯ ಕೆಳಗಡೆ ಯಜ್ಞೋಪವೀತವಿರುವಾಗ (ಸವ್ಯ) ಉಪವೀತೀ ಎನಿಸುವನು. ಇದಕ್ಕೆ ವಿಪರೀತವಾಗಿ ಎಡದ ಕೈಯ ಕೆಳಗಡೆ ಯಜ್ಞೋಪವೀತವಿದ್ದರೆ ‘ಪ್ರಾಚೀನಾ ವೀತಿ’ ಯುಳ್ಳವನು. ಮಾಲಾಂಕಾರದಲ್ಲಿ ಕಂಠದಲ್ಲಿ ಯಜ್ಞೋಪವೀತವಿದ್ದಾಗ ‘ನೀವೀತಿ’ ಎನ್ನಲಾಗಿದೆ.

ಮೇಖಲಾದಂಡ ಯಜ್ಞೋಪವೀತಗಳು ಭಗ್ನಗಳಾದಾಗ ನೀರಿನಲ್ಲಿ ಬಿಡತಕ್ಕದ್ದು. ಬ್ರಾಹ್ಮಣನ ಹಸ್ತರೇಖಗಳು ನದಿಗಳಂತೆ ಪವಿತ್ರಗಳಾಗಿವೆ. ಅಂಗುಲಿಗಳ ಪರ್ವಗಳು ದೇವಪರ್ವಗಳೆಂದೂ ಗ್ರಹಿಸಬೇಕು. ಆದ್ದರಿಂದ ಬಲಗೈಯು ಸರ್ವದೇವಮಯವಾಗಿದೆ.

ಮೇಲೆ ವಿವರಿಸಿದಂತೆ ಆಯಾಯ ಸಂದರ್ಭಗಳಲ್ಲಿ ಆಚಮನ ಮಾಡುವುದರಿಂದ ಸ್ವರ್ಗಪ್ರಾಪ್ತಿ ಎನ್ನಲಾಗಿದೆ.

“ಯಾಸ್ತ್ವೇತಾ ಕರಮಧ್ಯೇ ತು ರೇಖಾವಿಪ್ರಸ್ಯ ಭಾರತ |
ಗಂಗಾದ್ಯಾಃ ಸರಿತಃ ಸರ್ವಾಃ ಜ್ಞೇಯಾ ಭಾರತಸತ್ತಮ |
ಯಾನ್ಯಂಗುಲೀಷುಪರ್ವಾಣಿ ಗಿರಯಸ್ತಾನಿ ವಿದ್ಧಿ ಮೇ |
ಸರ್ವದೇವಮಯೋ ರಾಜನ್ ಕರೋ ವಿಪ್ರಸ್ಯ ದಕ್ಷಿಣಃ ||”

ಗಾಯತ್ರಿ ಮಂತ್ರ 

ಬ್ರಾಹ್ಮಣ್ಯಕ್ಕೆ ಮೂಲ(foundation)  ಗಾಯತ್ರೀ. ಮೂಲ ಮೂಲಿಯಲ್ಲಿ ಸೇರಿದರೆ, ಮೂಲವನ್ನು ಆಶ್ರಯಿಸಿದ ಮಹಲ್ ಕೆಳಕ್ಕುರುಳುವದರಲ್ಲಿ ಸಂಶಯವೇ ಇಲ್ಲ. ಆ ಕಾರಣದಿಂದಾಗಿಯೇ ಇಂದಿನ ಬ್ರಾಹ್ಮಣ ಯುವಕರು ಕೆಳಕ್ಕುರಳಿದ್ದು. ಸಕಲಕ್ಕೆ ಮೂಲವಾದ "ಗಾಯತ್ರಿ"ಯನ್ನು  ಮೂಲೆಗುಂಪು ಮಾಡಿದ್ದೇ ಮೂಲಕಾರಣ. 

ಇಂದು ಪುನಹ ಗಾಯತ್ರಿಯನ್ನು ಮೂಲೆ ಇಂದ ಹೊರತರಬೇಕಾದ ಆವಷ್ಯಕತೆ ಇದೆ. ತರುವ ಮನವರಿಕೆ ಯುವಕರಿಗೆ ಆಗಬೇಕು. ಅನೇಕ ಜ್ಙಾನಿಗಳ ಹಿತೋಪದೇಶದಿಂದ ಆ ಕೆಲಸವೂ ಆಗ್ತಾ ಇದೆ. 

ಉಪನಿಷತ್ತು ಬಹಳ ಸುಂದರವಾಗಿ "ಗಾಯತ್ರಿ"ಯ ಮಹತಿಯನ್ನು ತಿಳಿಸುತ್ತದೆ. 

೧) ಗಾಯತ್ರೀ ಜಪ ದೇವರಿಗೆ ಭೋಜನದಂತೆ. ಅಂದರೆ ಗಾಯತ್ರೀ ದೇವರಿಗೆ ಅನ್ನವಿದ್ದಂತೆ. ಅನ್ನದಿಂದ  ನಮಗೆ ಹೇಗೆ ಪಪ್ರೀತಿಯೋ,  ಹಾಗೆ ದೇವರಿಗೆ ಗಾಯತ್ರೀಜಪದಿಂದಲೇ ಪ್ರೀತಿ. ಪ್ರೀತನಾದ ದೇವರು ಎಲ್ಲಿದ್ದರೂ ನಾವು ಮಹಾಬಲಿಷ್ಠರೇ. ಅಪ್ರೀತನಾದ ದೇವರು ಪಕ್ಕದಲ್ಲಿ ಇದ್ದರೂ ನಾವು ಮಹಾ ದುರ್ಬಲರೇ. 

೨) ಗಾಯಂತಂ ತ್ರಾಯತೇ ಯಸ್ಮಾತ್

ಗಾಯತ್ರೀ ತ್ವಂ ತತಸ್ಮೃತಃ" ಯಾರು ಗಾಯತ್ರಿಯನ್ನು ನಿರಂತರ ಕೊಂಡಾಡುತ್ತಾರೆಯೊ ಅವರನ್ನು ಯಾವಕಾಲಕ್ಕೂ ಕಾಪಾಡದೇ ಇರುವದಿಲ್ಲ. ಆದ್ದರಿಂದಲೇ ಈ ಮಂತ್ರಕ್ಕೆ ಗಾಯತ್ರೀ ಎಂದು ಹೆಸರು. 

ಇಂದಿನ ತಮ್ಮ ರಕ್ಷಣೆ ತಮ್ಮಿಂದ ಆಗಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾಗಿ, ಅನಾಥರಂತೆ ಅಲೆಮಾರಿಗಳ ತರಹ ಬಿದ್ದಿದ್ದರೂ, ಈಗಿನ ಯುವಕರಿಗೆ ಇರುವ  ಗಾಯತ್ರೀಯ ಬಗ್ಗೆ ತಾತ್ಸಾರವೇನಿದೆ ನಿಜವಾಗಲೂ ಹಾಸ್ಯಾಸ್ಪದ (shame) ಅನಿಸುವಂತಹದ್ದೇ .

೨) "ಅಲೇಪಂ ಸರ್ವಪಾಪಾಣಾಂ ವಿಶೇಷೇಣ ಪ್ರತಿಗ್ರಹಾತ್"

ಕಂಡದ್ದು ಬೇಡುವದು. ಕಂಡದ್ದು ತಿನ್ನುವದು.  ಕಂಡದ್ದು ಅನುಭವಿಸುವದು ಇದು ಯುವಕರ ಸಾಮಾನ್ಯ ಪ್ರವೃತ್ತಿ. ಇದು ಒಂದಾದರೆ "ಧರ್ಮದ ಫಲಬೇಕು, ಧರ್ಮ ಮಾಡಲಾರೆ" ಇದು ಮತ್ತೊಂದು. ಇವೆರಡೂ ಮಹಾ ಅನರ್ಥಾಕಾರಿ, ಮಹಾಮಾರಿ ಎಂದೂ ,  ಅದೂ ತಮಗೆ ಎಂಬ ಪರಿಜ್ಙಾನವೂ ಅಷ್ಟೇ ಅವರಿಗೆ ಮನವರಿಯಾಗಬೇಕು. 

ಕಂಡದ್ದು ಬೇಡುವದಿರಿಂದ ಪಾಪ. ಕಂಡದ್ದು ತಿನ್ನುವದರಿಂದ ಪಾಪ. ಕಂಡದ್ದು ಅನುಭವಿಸುವದರಿಂದ ಮಹಾಪಾಪ. ಪಾಪವಿರುವಾಗ ಬೇಡಿದ್ದು ಸಿಗುವದು ದುರ್ಲ್ಲಭ. ಸಿಕ್ಕಿದ್ದು ಅನುಭವಿಸುವದು ಕಷ್ಟದ ಮಾತೇ . ಪಾಪಕಳೆದು ಕೊಳ್ಳಲು ಸುಲಭ ಮಾರ್ಗ ಗಾಯತ್ರೀ. 

೩) ಸಂಹರ್ತಾ ಸರ್ವದೋಷಾಣಾಂ ಅಗ್ನಿಸ್ಥಃ ಸರ್ವದಾಹಕಃ"

ಯುವಕರ ಏಳಿಗೆಗೆ ಪ್ರತಿಬಂಧಕವಾದ ಪಿತೃದೋಷ, ಮಾತೃದೋಷ, ಗ್ರಹದೋಷ, ಪ್ರೇತದೋಷ, ಸ್ತ್ರೀದೋಷ, ಕುಲದೇವತಾ ದೋಷ, ಸರ್ಪದೋಷ, ಬ್ರಾಹ್ಮಣದೋಷ, ಸಜ್ಜನದೋಷ, ದೇವತಾ ದೋಷ, ಗುರುದೋಷ, ಬ್ರಹ್ಮಹತ್ಯಾದಿ ಪಾಪಗಳಿಂದ ಉಂಟಾದ ದೋಷ, ಎಲ್ಲ ದೊಇಷಗಳನ್ನೂ ಭಸ್ಮಮಾಡಿ ಹಾಕುವ ಏಕೈಕ ಬ್ರಹ್ಮಾಸ್ತ್ರ "ಗಾಯತ್ರೀ" ಮಾತ್ರ. ಇದು ಶ್ರೀಮದಚಾರ್ಯರ ಮಾತು. ಪಾಲಿಸುವದು ನಮಗೆ ಬಿಟ್ಟಿದ್ದು. ಪಾಲಿಸಿದವರು ಜಗತ್ತಿನಲ್ಲಿಯೇ ಮಾನ್ಯರು. ಸುಖಿಗಳು. ಸಮೃದ್ಧರು.
********

MUST READ AND WATCH

click

*****

ನ  ಗೃಹ್ಮಂತಿ  ಸುರ: ಪೂಜಂ ಪಿತರ: ಪಿಂಡ ತರ್ಪಣಂ |
ಸ್ವೆಚ್ಛ ಯಾ  ಚ  ದ್ವಿಜಾ ತೆಸ್ವ ತ್ರಿ ಸಂಧ್ಯ ರಹಿತಸ್ಯ ಚ ||
  
       ಸ್ವೇಚ್ಛೆ ಇಂದ  ಮೂರು ಸಂಧ್ಯಾ ಗಳಲ್ಲಿ  ಸಂಧ್ಯಾ ವಂದನೆ ಬಿಟ್ಟು ದ್ವಿಜ ಪೂಜೇ ಮಾಡಿದರೆ ದೇವತೆಗಳು ಸ್ವೀಕರಿಸುವ ದಿಲ್ಲಾ , ಪಿಂಡ ತರ್ಪಣ ನೀಡಿದರೆ ಪಿತೃಗಳು ಸ್ವೀಕರಿಸುವದಿಲ್ಲಾ .


ಬದುಕಿರುವಷ್ಟು ಕಾಲ ಮೂರೂ ಸಂಧ್ಯಗಳಲ್ಲಿ ಯು ಸಂಧ್ಯಾ ವಂದನೆ  ಮಾಡುವ ವಿಪ್ರನು , ಸೂರ್ಯ ನಂತೆ ತೇಜಸ್ವಿ ಯೂ ತಪಸ್ವಿ ಯು  ಆಗುವನು. ಅವನು  ಜೀವನ್ನುಕ್ತ  ನೇನಿಸುತ್ತಾನೆ.  ಅವನ ಪಾದ ಧೂಳಿ  ಬಿದ್ದ ನೆಲ ಪವಿತ್ರ ವಾಗುತ್ತದೆ. ಅವನ ಸ್ಪರ್ಶ ದಿಂದ ತೀರ್ಥ ಗಳು ಪವಿತ್ರ ವಾಗುವವೂ. ಗರುಡ ನನ್ನು ಕಂಡ ಹಾವು ಗಳಂತೆ ಪಾಪ ಗಳು ಭಯ ನಿಂದಾ ಓಡುವವು.

##############

ವಿಷ್ಣು ಮಂತ್ರ  ವಿಹಿನ ಶ್ಚ  ತ್ರಿ ಸಂಧ್ಯಾ  ರಹಿತೋ ದ್ವಿಜ:  ಏಕಾದಶಿ  ವಿಹಿನ ಶ್ಚ  ವಿಷ ಹಿನೋ ಯಾತೋ ರಗ:!

ವಿಷ್ಣು ಮಂತ್ರ  ಜಪಿಸದ , ಮೂರು ಹೊತ್ತು ಸಂಧ್ಯಾ ವಂದನೆ ಮಾಡದವ , ಏಕಾದಶಿ  ವ್ರತ ಮಾಡದವ  ಇವರೆಲ್ಲಾ ವಿಷ ವಿಲ್ಲದ ಹಾವಿ ನಂತೆ  ಏನೂ ಸಾಧಿಸಿ ಕೊಳ್ಳಲಾರರು

ಗಾಯತ್ರಿ ಯನ್ನು ಒಮ್ಮೆ ಜಪಿಸಿದರೆ ಹಗಲು ಮಾಡಿದ ಪಾಪ ಪರಿಹಾರ.
೧೦ ಬಾರಿ ಜಪಿಸಿದರೆ  ಹಗಲೂ ರಾತ್ರಿ ಗಳಲ್ಲಿ ಮಾಡಿದ ಪಾಪ ಪರಿಹಾರ.
೧೦೦ ಬಾರಿ ಜಪಿಸಿದರೆ  ೧ ತಿಂಗಳು ಪಾಪ ಪರಿಹಾರ.
೧೦೦೦  ಜಪಿಸಿದರೆ  ಒಂದು ವರ್ಷ ದ ಪಾಪ ಪರಿಹಾರ.
೧ ಲಕ್ಷ  ಜಪ ದಿಂದಾ  ಒಂದು  ಜನ್ಮದಲ್ಲಿ ಮಾಡಿದ ಪಾಪ ಪರಿಹಾರ.
೧೦ ಲಕ್ಷ ದ ಜಪ ದಿಂದಾ  ೩ ಜನ್ಮ ದ   paapa ಪರಿಹಾರ.
೧೦೦ ಲಕ್ಷ  ಜಪ ದಿಂದಾ  ಎಲ್ಲಾ ಜನ್ಮ ಗಳ ಪಾಪ ಪರಿಹಾರ.
ಅದರ ಕಿಂತಾ ಹತ್ತು ನೂ ಪಾಲು ಜಪಿಸಿದರೆ  ಮುಕ್ತಿ ಕರಗತ ವಾಗುತ್ತದೆ
*****

lucknow airport 2020

***
ನೀರು ಮತ್ತು ಸಂಧ್ಯಾವಂದನೆ.

ಸಂಧ್ಯಾವಂದನೆ ನಿತ್ಯವೂ ಮಾಡುತ್ತೇವೆ. ಆದರೆ ಸಂಧ್ಯಾವಂದನೆಯ ಮಂತ್ರಗಳ ಉಪಯೋಗ ತಿಳಿದಿರುವುದಿಲ್ಲ. ಅಥವಾ ಅದರ ಮಹತ್ವದ ಕಡೆಗೆ ಗಮನ ಹರಿಸುವುದಿಲ್ಲ. ನೀರಿನೊಂದಿಗಿನ ಆಟದಲ್ಲಿ ಮುಗಿಸಿ ಬಿಡುತ್ತೇವೆ. ಅದೊಂದು ಸಂಪ್ರದಾಯವೋ ಕರ್ತವ್ಯವೋ ಅನ್ನುವ ಮಟ್ಟಿಗೆ ಮಾಡಿ ಮುಗಿಸುತ್ತೇವೆ. ಇಲ್ಲಿ ನಾನು ಕೇವಲ ಪ್ರೋಕ್ಷ್ಷಣ್ಯಕ್ಕೆ ಮಾತ್ರ ಬರುವೆ. 

ಇದು ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡಿದಾಗ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಸಿಂಧುದ್ವೀಪ ಎನ್ನುವ ಋಷಿಯನ್ನು ಇಟ್ಟುಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧು ದ್ವೀಪ ಋಷಿಯು ಪಾಪ ಪರಿಹಾರಾರ್ಥವಾಗಿ ನೀರನ್ನು ಕುರಿತು ಜಪ ಮಾಡಿ ಪಾಪ ಪರಿಹಾರವನ್ನು ಮಾಡಿಕೊಳ್ಳುತ್ತಾನೆ. ಹಾಗಾದರೆ ಆ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಒಂದು ಅಧಿಕವಾದರೂ ಸಂಕಷ್ಟವೇ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಕಶ್ಯಪ ಮಹರ್ಷಿ ಮಳೆಗಾಗಿ ಸ್ತುತಿಸುವಾಗ ಕಪ್ಪೆಯು ನೀರಿಗಾಗಿ ಕೂಗುತ್ತದೆ. ಮೋಡವಾದ ತಕ್ಷಣ ಕೂಗುವುದು ಅದರ ಕರ್ತವ್ಯವೇನೋ ಅನ್ನಿಸಿ ಬಿಡುತ್ತದೆ. ಅಂದರೆ ಪ್ರಕೃತಿಯ ಜೊತೆ ಜೀವಿಯ ಸಂಬಂಧ ಅಗಾಧವಾದದ್ದು. ಹೌದು  ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದ್ರಷ್ಟಾರ ಸಿಂಧುದ್ವೀಪ ಎನ್ನುವ ಋಷಿ. ತ್ರಿಶಿರಾಸ್ತ್ವಾಷ್ಟ್ರ ಎನ್ನುವುದು ಈ ಋಷಿಗಿರುವ ಇನ್ನೊಂದು ಹೆಸರು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.

ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ 

ಗಂಗೇಚ ಯಮುನೇ ಚೈವ 

ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.

ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||

ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.

ಅದೇ ರೀತಿ ಸಾಯಂಕಾಲ ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಹಗಲಿನಲ್ಲಿ ಗೊತ್ತಾಗದೇ ಘಟಿಸಿದ ಪಾಪ ಕಾರ್ಯದ ಪರಿಮಾರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೋಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.

ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || 

ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ ಕೊಡುತ್ತದೆ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು, ಈ ನೀರು ಶುದ್ಧವಾಗಿದ್ದಾಗ ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ನೀರಿನಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೆ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.

ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || 

ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.

ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || 

ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಾಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||

ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ’ಶಂ ನೋ’. . . ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

ನೀರಿನ ಕುರಿತಾಗಿ ಇನ್ನೂ ಬರೆಯಲಿಕ್ಕಿದೆ ಆದರೆ ಒಂದಂತೂ ಸತ್ಯ, ಬಾಯಾರಿದಾಗ ಒಂದು ಹನಿ ನೀರು ಸಿಕ್ಕಿದರೆ ಸಾಕು ಅನ್ನಿಸುತ್ತದೆ. ನೀರಿನ ಮಹತ್ವ ವೇದಗಳಲ್ಲಿ ಬಹಳ ದೀರ್ಘವಾಗಿ ಹೇಳಲಾಗಿದೆ. ಅದನ್ನು ಸಾಧ್ಯವಾದರೆ ಬರೆಯುವೆ. ನೀರನ್ನು ಶೇಖರಿಸಿ ಮುಂದಿನ ಪೀಳಿಗೆಗೆ ಸಿಗುವಂತೆ ಈಗಲೇ ಜಾಗ್ರತೆ ವಹಿಸಿ ಕಾಪಾಡಿಕೊಳ್ಳಬೇಕಾಗಿದೆ.

#ಶಂ_ನೋ_ದೇವೀರಭೀಷ್ಟಯ
(received in whatsapp)
**




No comments:

Post a Comment