SEARCH HERE

Friday 1 March 2019

gayathri mantra recited as pada krama ghana forms


Wonderful - Listen, practice and chant Gayathri Mantra in Ghana form to get infinite results. 👇🏿👇🏿

By K Suresh in his Suresh Padhati, explains details 
K Suresh - 1st rank in M.Com, CA, ICWA, ACS and PhD in Veda, etc, etc
No one can beat him in his achievements and his intelligence level. Who is this K Suresh.Watch here below: (K Suresh expired on 20 Dec 2023)

year 2018

"O Lord, let me have the strength to purify my happiness using your powers"
Purification mantra 

year 2020 Purification mantra (short form)



year 2020 Purification mantra (full)


Asheervachanam mantra 
2020 Asheervachana mantra

veda parichaya
103. ಯಜುರ್ವೇದದ ಕೆಲವು ಸ್ವಾರಸ್ಯಗಳು - ವಿವಿಧ ಪಾಠ ಪದ್ಧತಿಗಳು
ವೇದಭಾಷೆಯು ಅರ್ಥವಾಗದ ದಿನಗಳೂ ಇದ್ದವು. ಅದರ ಪರಿಹಾರಕ್ಕೆಂದು ಸಂಹಿತಾಪಾಠ, ಪದಪಾಠ, ಕ್ರಮಪಾಠ, ಜಟಾಪಾಠ ಹಾಗೂ ಘನಪಾಠಗಳೆಂಬ ವ್ಯವಸ್ಥೆ ರೂಪುಗೊಂಡಿತು. ಈಗಲೂ ಘನಪಾಠಿಗಳೆಂಬ ಪದಪ್ರಯೋಗ ಚಾಲ್ತಿಯಲ್ಲಿದೆ. ಇವುಗಳ ಮುಖ್ಯ ಉದ್ದೇಶವೆಂದರೆ, ಪಠ್ಯವು ಲುಪ್ತವಾಗದಂತೆ, ಪದಗಳ ಆವೃತ್ತಿಯನ್ನು ಹೆಚ್ಚಿಸಿಕೊಂಡು ಹೋಗುವುದರ ಮೂಲಕ, ಸ್ವರ ಹಾಗೂ ಪಠ್ಯವನ್ನು ಕಾಯ್ದುಕೊಂಡು ಹೋಗುವುದೇ ಆಗಿರುತ್ತದೆ.
ಈ ಕಾರಣದಿಂದಲೇ, ಗ್ರಂಥಸ್ಥ ಪಠ್ಯವು ನಷ್ಟವಾದರೂ ಬಾಧಕವಿಲ್ಲವೆಂಬಷ್ಟು ದೃಢತೆಯು ಸಾಧ್ಯವಾಗಿದೆ. ಪದಪಾಠವನ್ನು ರೂಪಿಸಿದವರಲ್ಲಿ ಆತ್ರೇಯನೆಂಬ ಋಷಿಯ ಹೆಸರು ಪ್ರಸ್ತಾಪವಾಗಿದೆ.
ಋಗ್ವೇದದ ಮಂತ್ರಗಳನ್ನು ಉಚ್ಚರಿಸುವಾಗ, ಋಷಿ, ದೇವತೆ ಮತ್ತು ಛಂದಸ್ಸುಗಳನ್ನು ಉಲ್ಲೇಖಿಸಬೇಕೆಂಬ ನಿಯಮವನ್ನು ಈಗಾಗಲೇ ಹೇಳಲಾಗಿದೆ. ಯಜುರ್ವೇದಕ್ಕೆ ಈ ನಿಯಮ ಅನ್ವಯಿಸದು. ಏಕೆಂದರೆ ಇಲ್ಲಿ ಯಜುರ್ವೇದ ಮಂತ್ರದ್ರಷ್ಟಾರರನ್ನು ಕಾಂಡರ್ಷಿಗಳು ಎಂದು ಹೇಳಲಾಗಿದೆ. ಯಾವ ದೇವತೆಯು ಯಾವ ಕಾಂಡವನ್ನು ದರ್ಶಿಸಿದನೋ, ಅದೇ ಹೆಸರಿನ ಕಾಂಡರ್ಷಿಗಳಿದ್ದಾರೆ.
ಯಜುರ್ವೇದ ಸಂಹಿತೆಯ ಏಳು ಕಾಂಡಗಳು, ಬ್ರಾಹ್ಮಣಗಳ ಮೂರು ಕಾಂಡಗಳನ್ನು ಒಂಭತ್ತು ಋಷಿಗಳು ದರ್ಶಿಸಿದರು ಎಂಬ ಕಾರಣಕ್ಕಾಗಿ ಆಯಾ ದೇವತೆಗಳನ್ನೇ ಹೆಸರಿಸಲಾಗಿದೆ. ಆ 9 ದೇವತೆಗಳೆಂದರೆ – ಪ್ರಜಾಪತಿ-ಪ್ರಾಜಾಪತ್ಯ ಕಾಂಡ, ಸೋಮ-ಸೌಮ್ಯ ಕಾಂಡ, ಅಗ್ನಿ- ಆಗ್ನೇಯ ಕಾಂಡ, ವಿಶ್ವೇದೇವ-ವೈಶ್ವದೇವ ಕಾಂಡ, ಸ್ವಯಂಭೂ-ಸ್ವಾಯಂಭುವ ಕಾಂಡ, ಆರುಣೀ-ಅರುಣಕಾಂಡ, ಸಾಂಹಿತೀ, ವಾರುಣೀ, ಯಾಜ್ಞಕೀ ದೇವತಾ ಕಾಂಡಗಳು.
***



No comments:

Post a Comment