SEARCH HERE

Monday 12 April 2021

ಆಯು ವೃದ್ಧಿ how to increase life span philosophy

ಆಚಾರ ಮತ್ತು ಉಪವಾಸ "  ಸರಳ ಪರಿಹಾರ -3

[ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಿಂದ ಉಧೃತವಾದದ್ದು ]

ಶ್ರೀ ಭೀಷ್ಮಾಚಾರ್ಯರ ಹಿತ ವಚನವನ್ನು ಕೇಳಿ, ಧರ್ಮರಾಜನು ಇನ್ನೂ ತಿಳಿಯಲೆಣಿಸಿ....

ತಾತ! " ಶತಾಯುರ್ವೈ ಪುರುಷಃ " ಎಂದು ವೇದ ವಚನವಿದೆ. ಆದರೆ ಲೋಕದಲ್ಲಿ ಬಾಲರೂ ಕೂಡಾ ಮೃತರಾಗುವುದನ್ನು ನೋಡುತ್ತಿರುವೆವು. ಅದೆಂತು?

ಆಯುವು ವೃದ್ಧಿಯಾಗುವುದೆಂತು?
ಕ್ಷೀಣವಾಗುವುದೇತಕ್ಕೆ??

ಎಂದು ಪ್ರಶ್ನಿಸಿದನು. ಆ ಮಾತಿಗೆ ಅಖಿಲ ಧರ್ಮವೇದಿಯಾದ ಶ್ರೀ ಭೀಷ್ಮಾಚಾರ್ಯರು....

ಆಚಾರವು ಪ್ರಥಮ ಧರ್ಮವಾಗಿದೆ. ಆಚಾರದಿಂದ ಆಯುವು ಹೆಚ್ಚುವುದಲ್ಲದೆ, ಶ್ರೀ ಕೀರ್ತಿಗಳು ಸಿದ್ಧಿಸುವವು.

ದುರಾಚಾರದಿಂದ ಆಯುವು ಕಡಿಮೆಯಾಗುವುದು. ದುರಾಚಾರಿಯನ್ನು ಸರ್ವ ಭೂತಗಳೂ ಪರಿಭವಿಸುವೆವು.

ಸಾಧಿ ಜನರು ಸದಾಚಾರವನ್ನೆಂದಿಗೂ ಬಿಡರು. ವರ್ಣಾಶ್ರಮಗಳಿಗೆ ತಕ್ಕಂತೆ ಆಚಾರವನ್ನು ಭಾವಿಸುವ ನರನು ದೀರ್ಘಾಯುರಾರೋಗ್ಯವಂತನಾಗುವನು.

" ಆಯುವೃದ್ಧಿಗೆ ಕಾರಣಗಳು "

೧. ಪುಣ್ಯ ಕಾರ್ಯಗಳನ್ನು ತಿಳಿದು ಮಾಡುವವರಿಗೆ ಆಯು: ವೃದ್ಧಿಯಾಗುವುದು.

೨. ತಂಗಿ, ಗುರು, ಮಿತ್ರ, ಬಡವ, ಸದ್ವಂಶಜ, ಪಂಡಿತ, ವಿಪ್ರ ಮುಂತಾದವರಿಗೆ ಸಹಾಯ ಮಾಡುವುದರಿಂದ ಆಯುಸ್ಸು ಹೆಚ್ಚುವುದು.

೩. ಪಾರವಾಳಗಳು, ಗಿಳಿಗಳು, ಶಾರಿಕಾಪಕ್ಷೀ, ಹೂಬಳ್ಳಿಗಳು, ಜರೀ ವಸ್ತ್ರಗಳು ಇವು ಗೃಹ ಮಂಗಲವೆನಿಸಿವೆ. ಕನ್ನಡಿಯೂ ಶೋಭಾಕರವೆನಿಸಿದೆ.

" ಶೀಘ್ರಾ:ಕ್ಷಯಕ್ಕೆ ಕಾರಣಗಳು "

೧. ಗುರು ವಚನವನ್ನು ಮೀರುವುದು.
೨. ದುಶ್ಶೀಲನಾಗಿರುವುದು.
೩. ಉದಯಾಸ್ತಮಯ ಕಾಲಗಳಲ್ಲಿ ಸೂರ್ಯನನ್ನು ನೋಡುವುದು.
೪. ಕ್ರೋಧ, ಹಿಂಸೆ, ಅಸತ್ಯ ಮತ್ತು ಪರದಾರೆ ಗಮನ ಇವು ಆಯು: ಕ್ಷೀಣಕ್ಕೆ ಕಾರಣಗಳು.

ಪರದಾರೆ ಗಮನ ಅಂದರೆ...

ಗುರು - ವೃದ್ಧ - ರಾಜ - ಬಾಲ, ಬಾಂಧವ, ಭೂಸುರ, ವೈದ್ಯ, ಭೃತ್ಯ ಮುಂತಾದವರ ಸತಿಯರನ್ನು ಕಳೆಯುವುದು!

ಪಾಪ ಕಾರ್ಯಗಳಿಂದ ಆಯು: ಕ್ಷೀಣವಾಗುವುದೆಂದು ತಿಳಿಯತಕ್ಕದ್ದು.

೫. ದೇವಗೃಹ, ವೀಥಿ, ಗೋಶಾಲೆ, ಸಭೆ, ಸಸ್ಯಕ್ಷೇತ್ರ, ಉದ್ಯಾನ ವನಗಳಲ್ಲಿ ಮಲ ಮೂತ್ರ ವಿಸರ್ಜನೆ ಮಾಡಬಾರದು. ನಿಂತು ಮೂತ್ರ ವಿಸರ್ಜನೆ ಮಾಡುವುದು ನಿಂದನೀಯವಾಗಿದೆ.

೬. ಕೂತು ಉಣಬೇಕಾಗಲಿ ನಿಂತಲ್ಲೆ. ಪೂರ್ವಾಭಿಮುಖವಾಗಿ ಕೂತು ಉಣ್ಣುವುದು ಉತ್ತಮ.

೭. ಅಗ್ನಿ - ಗೋವು - ವಿಪ್ರ ಇವರನ್ನು ಎಂಜಲು ಕೈಯಿಂದ ಮುಟ್ಟಬಾರದು.

೮. ಕಂಚಿನ ಆಸನದಲ್ಲಿ, ಒಡೆದ ಮನೆಯಲ್ಲಿ ಕೂಡಬಾರದು.

೯. ವೃದ್ಧರು ಬಂದಾಗ ಯುವಕನ ಪ್ರಾಣ ಶಕ್ತಿಗಳು ಮೇಲಕ್ಕೇಳುವವು. ಅವನು ಎದ್ದು ನಿಂತರೆ ಅವು ಸಮ ಸ್ಥಾನದಲ್ಲಿಬಂದು ಮೊದಲಿನಂತೆ ಸುಸ್ಥಿರವಾಗುವವು.

" ಆಚಾರಗಳು "

೧. ಗುರು - ಹಿರಿಯರಿಗೆ, ಜ್ಞಾನಿಗಳಿಗೆ ನಮಸ್ಕರಿಸುವದು ಕರ್ತವ್ಯವಾಗಿದೆ.

೨. ಅಧ್ಯಯನ ಕಾಲದಲ್ಲಿ ತಲೆ ಮುಟ್ಟುಕೋಬಾರದು. ತಲೆಯನ್ನು ಕೆರೆದುಕೊಳ್ಳಬಾರದು. ಅಶುಚಿಯಾಗಿರಬಾರದು.

೩. ಗುರುವಿನಿಂದ ವೈರವು ಮಹಾ ಪಾಪವು. ಒಂದುವೇಳೆ ಆತನು ಕೋಪಿಸಿದರೆ, ಸಮಾಧಾನ ಪಡಿಸಬೇಕಾಗಲಿ ನಿಂದಿಸಬಾರದು. ಗುರು ನಿಂದೆ, ಅಸತ್ಯಗಳಿಂದ ಆಯು: ಕ್ಷೀಣವಾಗುವದು.

೪. ವಿಪ್ರ - ಗೋ - ರಾಜ - ವೃದ್ಧ, ದುರ್ಬಲ - ಭಾರವಹ, ಗರ್ಭಿಣಿ, ಗುರುಗಳಿಗೆ ಹಾದಿ ಬಿಟ್ಟು ನಿಲ್ಲಬೇಕು.

೫. ವಿಪ್ರ - ಪುಷ್ಪ - ಸುಮಂಗಲಿಯರನ್ನು - ಗೋವುಗಳನ್ನು ಬಲಕ್ಕೆ ಹಾಕಿ ಹೋಗಬೇಕು.

೬. ಒಂದು ಕಾಲಿನಿಂದ ಇನ್ನೊಂದನ್ನು ತಿಕ್ಕಬಾರದು. ಒದ್ದೆ ಕಾಲನ್ನು ಒರೆಸದಿರಬಾರದು.

೭. ಪೂರ್ಣಿಮಾ, ಅಮಾವಾಸ್ಯೆ, ದ್ವಾದಶೀ, ಏಕಾದಶೀ,ದಶಮೀ, ಭಾನುವಾರಗಳಲ್ಲಿ ಬ್ರಹ್ಮಚರ್ಯವನ್ನು ಪಾಲಿಸಬೇಕು.

೭. ಚಾಡಿ ಮಾತು - ಕಠಿಣ ವಚನಗಳು ಕೂಡದು. 

೮. ಅಂಗಹೀನ, ರೂಪಹೀನ, ದರಿದ್ರ, ವಿದ್ಯಾಹೀನ, ದೀನರನ್ನು ನೋಡಿ ನಗಬಾರದು.

೯. ದೇವನಿಂದೆ, ವೇದನಿಂದೆ, ಸಂಬಳಕ್ಕಾಗಿ ದೇವಾ ಪೂಜೆ, ದುಡ್ಡಿಗೆ ಜ್ಯೋತಿಷ್ಯ ಇವೆಲ್ಲವೂ ನಿಂದ್ಯ ಕರ್ಮಗಳು.

೧೦. ಸಂಧ್ಯಾ ಕಾಲದಲ್ಲಿ ಮಲಗಬಾರದು.

೧೧. ಮಲಾದಿ ವಿಸರ್ಜನ ಕಾಲದಲ್ಲಿ ಮಾತಾಡಬಾರದು.

೧೨. ಬೆಳಗಾಗಿ ಎದ್ದು  ತಾಯಿಗಳಿಗೆ ನಮಸ್ಕರಿಸಬೇಕು. ದೇವತಾರ್ಚನಕ್ಕೆ ಮುಂಚೆ ಇವರಿಗೆ ಬಿಟ್ಟು ಅನ್ಯರಿಗೆ ವಂದಿಸಬಾರದು.

೧೩. ಗರ್ಭಿಣೀ ಸಂಯೋಗವು ಆಯುಕ್ಷೀಣವಾಗಿದೆ.

೧೪. ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ಉತ್ತರಾಭಿಮುಖವಾಗಿ ಉಣ್ಣಬಾರದು.

೧೫. ಬಿಳಿ - ಹಸಿರು - ಪಾಟಲ ವರ್ಣದ ಪುಷ್ಪಗಳು ಧರಿಸಬಾರದು ಮತ್ತು ಅತಿರಿಕ್ತಗಳಲ್ಲಿ ಇಬ್ಬೊಬ್ಬರು ಉಟ್ಟು ಬಿಟ್ಟ ಬಟ್ಟೆಗಳನ್ನು ಧರಿಸಬಾರದು.

೧೬. ವಟಫಲ, ಅಶ್ವತ್ಥಫಲ, ಅತ್ತಿ ಹಣ್ಣುಗಳನ್ನು ತಿನ್ನಬಾರದು.

೧೭. ಇನ್ನೊಬ್ಬರು ಮೂಸಿದ ರುಚಿ ನೋಡದ ಅನ್ನವನ್ನು ತಿನ್ನಬಾರದು. ಒಂದೇ ಪಾತ್ರಯಲ್ಲಿ ಇಬ್ಬರು - ಮೂವರು ಕಲೆತು ಉಣ್ಣಬಾರದು. ತಿನ್ನುತ್ತಿರುವ ಅನ್ನಾದಿಗಳನ್ನು ಉಪ್ಪು - ಕಾರ - ಹುಳಿ - ಕಹಿ ಎಂದು ನಿಂದಿಸಬಾರದು. ರಾತ್ರಿಯಲ್ಲಿ ಮೊಸರು - ಜೇನು ಸೇವಿಸಬಾರದು. ರಾತ್ರಿ ಹಿಟ್ಟಿ ಕೂಡಾ ನಿಷಿದ್ಧವಾಗಿದೆ. ಪಂಕ್ತಿಯಲ್ಲಿ ಭೇದ ಮಾಡಿ ಬಡಿಸುವುದು ವಿಷ ಭೋಜನ ಸಮವೆನಿಸುವುದು. ತಾನುಂಡು ಮಿಕ್ಕ ತುಪ್ಪ, ಜೇನು, ಮೊಸರು, ಹಿಟ್ಟು, ಪಾಯಸ, ನೀರುಗಳನ್ನು ಇತರರಿಗೆ ಕೊಡಬಾರದು.

೧೮. ಅಂಗುಳ್ಯಗ್ರಗಳು ದೇವತೀರ್ಥವು, ಕಿರುಬೆರಳ ಸಂಧಿಯು ಋಷಿತೀರ್ಥವು, ಬಲಕೈಯ ಬಲ ಭಾಗಕ್ಕೆ ಪಿತೃತೀರ್ಥವು ಆಯಾ ಭಾಗಗಳಿಂದ ಅವರಿಗೆ ತರ್ಪಣಾದಿಗಳನ್ನು ಕೊಡಬೇಕು.

೧೯. ಆಚಮನದಿಂದ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಬೇಕು. ದೇವಪೂಜಾ - ಪಾಠ - ಜಪ - ತರ್ಪಣಾದಿಗಳಲ್ಲಿ ಸಿಟ್ಟಾಗುವುದು ಕೂಡದು. ಕಠಿಣ ಭಾಷಣವು ಸರ್ವದಾ ವರ್ಜ್ಯವಾಗಿದೆ.

೨೦. ಕೆಟ್ಟು ಹೋದ ಕನ್ಯೆಯನ್ನು ಸ್ವೀಕರಿಸಬಾರದು. ಪತಿತೆ, ಮುಟ್ಟಾದವಳನ್ನು, ನಗ್ನಾಂಗಿಯರನ್ನು ದಿಟ್ಟಿಸಿ ನೋಡಬಾರದು.

೨೧. ಆಚಮನದಿಂದ ಶುದ್ಧನಾಗುವನೆಂಬ ವಿಧಿಯೂ ಇದೆ. ಆಚಮನಕ್ಕೆ ಜಲವಿರದಿರೆ, ಸೂರ್ಯನನ್ನೋ, ಅಗ್ನಿಯನ್ನೋ ನೋಡಿ ಬಲ ಕಿವಿಯನ್ನು ಮುಟ್ಟಿ ಆಚಮಿಸುವಾಗ ಭಗವನ್ನಾಮಗಳನ್ನು ಉಚ್ಚರಿಸಬೇಕು. ಇದಕ್ಕೆ ವಿರುದ್ಧವಾಗಿ ನಡೆಯಬಾರದು.

೨೨. ಗೂಬೆ, ಹದ್ದು, ಕಾಗೆ ಮೊದಲಾದವು ಮನೆ ಹೊಕ್ಕರೆ ಶಾಂತಿಯನ್ನು ಮಾಡಿಸಬೇಕು.

೨೩. ಸಾಯಂಕಾಲದಲ್ಲಿ ಊಟ, ನಿದ್ದೆ, ಭೋಗ, ಪಿತೃ ಕಾರ್ಯಗಳು ಮಾಡಬಾರದು.

೨೪. ನಕ್ಷತ್ರ - ಯೋಗ - ವಾರ -  ತಿಥಿ - ಕರಣಗಳನ್ನು ತಿಳಿದ ಜ್ಯೋತಿಷಿಯಿಂದ  ಅರಿತು ಹಬ್ಬ - ವ್ರತ - ಉಪನಯನ - ವಿವಾಹ - ಕ್ಷೌರ ಮುಂತಾದವುಗಳನ್ನು ಆಚರಿಸಬೇಕು.

೨೫. ಸಂಪಿಂಡಿ ಕರಣದಲ್ಲಿಯೂ, ಏಕೋದಿಷ್ಟದಲ್ಲಿಯೂ ಊಟವನ್ನು ಮಾಡಬಾರದು. ಮಾಡಿದವನು ಮನೆಗೆ ಬಾರದೆ, ಒಂದು ವರ್ಷದ ತೀರ್ಥ ಯಾತ್ರೆಯನ್ನು ಮಾಡಿ ಬರಬೇಕು. ಅಥವಾ ೧೦೦೦೦ ಗಾಯತ್ರೀ ಜಪವನ್ನು ಮಾಡಬೇಕು.

೨೬. ಚಪ್ಪಲಿಯನ್ನು ಧರಿಸಿ ತೀರ್ಥ ಯಾತ್ರೆ ಮಾಡಬಾರದು.

೨೭. ಕರೆಯದೆ ಊಟಕ್ಕೆ ಹೋಗಬಾರದು.

೨೮. ತಂದೆತಾಯಂದಿರು ಮಕ್ಕಳಿಗೆ ಹಿತವನ್ನು ಉಪದೇಶಿಸದೆ ಬಿಡಬಾರದು.

ಎಲ್ಲಾ ಆಚಾರಗಳಲ್ಲಿಯೂ ಭೂತದಯೆಯು - ವಿಷ್ಣು ಭಕ್ತಿಯೂ ದೊಡ್ಡದಾಗಿದೆ. ಎಲ್ಲ ವರ್ಣದವರಿಗೂ ತಕ್ಕ ಜ್ಞಾನವನ್ನು ಕೊಡುವುದರಿಂದ ಸದಯರೂ, ಶ್ರೀ ಹರಿಯನ್ನು ಭಜಿಸಿ ಸಭಕ್ತಿಕರು ಆಗಿ ಮುನಿಗಳು ತಾವು ಉಧೃತರಾಗುವುದಲ್ಲದೆ ಇತರರನ್ನೂ ಉದ್ಧರಿಸುವರು!

" ಉಪವಾಸ "

ಧರ್ಮರಾಜ ತಾತ! ಉಪವಾಸವೆಂದರೇನು? ಅದು ಯಾರಿಂದ ಎಂತು ಅನುಷ್ಠಾನಿಸಲ್ಪಡಲಹುದು?? ಎಂದು ಕೇಳಿದನು.  ಆಗ ಶ್ರೀ ಆಚಾರ್ಯ ಭೀಷ್ಮರು....

ಶ್ರೀ ಆಂಗೀರಸ ಮುನಿಯು ನನಗುಪದೇಶಿಸಿದ ಉಪವಾಸ ವಿಧಿಯನ್ನು ಹೇಳುವೆನು ಕೇಳು...

ಬ್ರಹ್ಮ - ಕ್ಷತ್ರೀಯರು ೩ ದಿನಗಳು ಉಪವಸೀಸಲಹುದು.

ವೈಶ್ಯ -  ಶೂದ್ರರು ಒಂದು ದಿನ ಅಥವಾ ಎರಡೊಪ್ಪತ್ತು ಉಪವಸಿಸಬಹುದು.

ಪೂರ್ಣಿಮಾ, ಶುಕ್ಲ ಪಕ್ಷದ ಅಷ್ಟಮೀ, ಚತುರ್ದಶೀ, ಎರಡೂ ಪಕ್ಷಗಳ ಪಂಚಮೀ, ಷಷ್ಟೀ, ಏಕಾದಶೀ ದಿನತ್ರಯಗಳು ಉಪವಾಸ ಮಾಡಬೇಕು.

ದಶಮೀ - ಏಕಾದಶೀ - ದ್ವಾದಶೀ ದಿನತ್ರಯಗಳು ಎಲ್ಲಾ ವರ್ಣದವರೂ ಉಪವಾಸ ಮಾಡಲೇಬೇಕು.

ಒಂದು ತಿಂಗಳು ಏಕ ಭುಕ್ತವನ್ನಾಚರಿಸಿದವರು ಸುಂದರವಾದ ಪತ್ನಿಯನ್ನೂ, ಸತ್ಸುತರನ್ನೂ, ಧನ ಧಾನ್ಯಗಳನ್ನು, ಕೀರ್ತಿಯನ್ನು ಪೊಂದುವರು.

ಧಾರಣ, ಪಾರಣವನ್ನು ಮಾಡುತ್ತಾ ಒಂದು ತಿಂಗಳೂ, ಚಾತುರ್ಮಾಸ್ಯ ಕಳೆದರೆ ಅವರು ಶ್ರೀ ಹರಿ ಲೋಕವನ್ನು ಹೊಂದುವರು.

ಪಕ್ಷೋಪವಾಸ - ಮಾಸೋಪವಾಸ ಮಾಡಿದವರು ಬ್ರಹ್ಮ ಲೋಕವನ್ನು ಹೊಂದುವರು.

ಮಾತಿಗೆ ಮೀರಿದ ನಿಧಿಯಿಲ್ಲ.
ವೇದಗಳಿಗೆ ಹೆಚ್ಚಾದ ಶಾಸ್ತ್ರವಿಲ್ಲ.
ಗುರುವಿಗೆ ಮಿಗಿಲಾದ ಬಂಧುವಿಲ್ಲ.
ಶ್ರೀ ಹರಿಗೆ ಮೀರಿದ ದೈವವಿಲ್ಲ.
ಇದು ತ್ರಿಧಾ ಸತ್ಯವು!

ಪಾವನಗಳಲ್ಲಿ ವಿಪ್ರನು ಪಾವನತರನು.
ಪಾವನ ತರಗಳಲ್ಲಿ ವೇದಗಳು ಪಾವನತಮಗಳು.
ಅಲ್ಲಿ ಪ್ರತಿಪಾದಿತನಾಗಿರುವ ಶ್ರೀ ಹರಿಯು ಅತ್ಯಂತ ಪಾವನನಾಗಿರುವನು.

ಒಂದು ಯುಗದ ಉಪವಾಸ ಮತ್ತು ಸಂತತ ಶ್ರೀ ಹರಿಯ ಸ್ಮರಣೆಯಿಂದ ದೇವತೆಗಳು ತಂತಮ್ಮ ಪದವಿಗಳನ್ನೂ,

ಒಂದು ಸಾವಿರ ವರ್ಷಗಳ ಉಪವಾಸದಿಂದ ಸನಕಾದಿ ಮುನಿಗಳು ಬ್ರಹ್ಮಾಪರೋಕ್ಷವನ್ನೂ;

ಒಂದು ಸಾವಿರ ವರ್ಷದ ಏಕ ಭುಕ್ತ ನಿಯಮದಿಂದ ವಿಶ್ವಾಮಿತ್ರರು ಬ್ರಾಹ್ಮಣ್ಯವನ್ನು ಹೊಂದಿದರು.

ಮಹೋಪವಾಸ ವಿಧಿಯಿಂದ ಹೊಂದಲಾಗದ ಪುಣ್ಯಫಲವಿಲ್ಲ.

ಉಪವಾಸದಿಂದ ಚಿತ್ತಶುದ್ಧಿಯೂ, ಇಂದ್ರಿಯ ಜಯವೂ ಲಭಿಸುವುದು. ಅವೇ ಮುಂದೆ ಶ್ರವಣಾದಿ ಜನಿತ ಜ್ಞಾನಕ್ಕೆ ಅವಶ್ಯ ಸಾಧನಗಳೆಣಿಸಿವೆ ಎಂದು ಆಚಾರ್ಯ ಭೀಷ್ಮರು ನುಡಿದರು!! {ಪ್ರವೀಣ್ }  ಶ್ರೀ ವಿದ್ಯಾ
*****

No comments:

Post a Comment