ಅಸ್ಯ ಶ್ರೀರುದ್ರಸ್ಯ ಪ್ರಶ್ನಸ್ಯ | ಅಘೋರ ಋಷಿಃ | ಅನುಷ್ಟುಪ್ ಛನ್ದಃ | ಶ್ರೀಸಙ್ಕರ್ಷಣಮೂರ್ತಿಸ್ವರೂಪೋ ಯೋऽಸಾವಾದಿತ್ಯಃ ಪರಮಪುರುಷಃ ಸ ಮೃತ್ಯುಞ್ಜಯರುದ್ರೋ ದೇವತಾ | ಅಗ್ನಿಕ್ರತುಚರಮಾಯಾಮಿಷ್ಟಿಕಾಯಾಮ್ | ಸಕೃದಾವರ್ತನ ( / ಏಕಾದಶಾವರ್ತನ) ರುದ್ರಾಭಿಷೇಕೇ ( / ಶತರುದ್ರೀಯಾಭಿಷೇಕೇ) ವಿನಿಯೋಗಃ ||
ಈ ರುದ್ರಪ್ರಶ್ನ / ರುದ್ರಾಧ್ಯಾಯ / ರುದ್ರಪರವಾದ ಪ್ರಪಾಠಕಕ್ಕೆ, ಅಘೋರನೇ ಋಷಿಯು. ಅನುಷ್ಟುಪ್ ಛನ್ದಸ್ಸು. (ಮಹಾವಿಷ್ಣುವಿನ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ತುರೀಯ, ಸುಷುಪ್ತಿ, ಸ್ವಪ್ನ, ಜಾಗ್ರದವಸ್ಥೆಗಳ ರಕ್ಷಕರಾದ ಚತುರ್ಮೂರ್ತಿಗಳ ಪೈಕಿ ಆದಿಶೇಷರೂಪಿಯಾದ) ಶ್ರೀ ಸಂಕರ್ಷಣಮೂರ್ತಿಸ್ವರೂಪನಾದ, ಯಾವ ಈ ಪ್ರತ್ಯಕ್ಷಗೋಚರನಾದ ಗಗನದಲ್ಲಿ ಬೆಳಗುವ ಆದಿತ್ಯಸ್ವರೂಪಿಯೂ ಆದ, ಪರಮಪುರುಷನಾದ ಆ ಮೃತ್ಯು / ಯಮನನ್ನು ಮೀರಬಲ್ಲ ಮೃತ್ಯುಂಜಯರುದ್ರನೇ ದೇವತೆಯು. ಶತರುದ್ರೀಯ ಹವನದ ಕೊನೆಯ / ಚರಮ ಭಾಗದಲ್ಲಿ ಅಥವಾ ಅದರ ಪ್ರತೀಕವಾಗಿ (ಮಾಯಾ), ಒಂದು ಬಾರಿ ( / ೧೧ ಬಾರಿ) ರುದ್ರಾಭಿಷೇಕದಲ್ಲಿ ( / ಶತರುದ್ರಾಭಿಷೇಕದಲ್ಲಿ) ವಿನಿಯೋಗವು / ಉಪಯೋಗವು ಈ ಮಂತ್ರಸಮೂಹವು.
*****
ಸಕಲಸ್ಯ ರುದ್ರಾಧ್ಯಾಯಸ್ಯ ಶ್ರೀರುದ್ರೋ ದೇವತಾ | ಏಕಾ ಗಾಯತ್ರೀಚ್ಛನ್ದಃ | ತಿಸ್ರೋऽನುಷ್ಟುಭಃ | ತಿಸ್ರಃ ಪಙ್ಕ್ತಯಃ | ಸಪ್ತಾನುಷ್ಟುಭೋ ದ್ವೇ ಜಗತ್ಯೌ | ಪರಮೇಷ್ಠಿ ಋಷಿಃ | ಜಗತೀಚ್ಛನ್ದಃ | ಮಮ ಸಕುಟುಮ್ಬಸ್ಯ (ಅಸ್ಯ ಯಜಮಾನಸ್ಯ) ಸಮಸ್ತಪಾಪಕ್ಷಯಾರ್ಥೇ ಶ್ರೀಸಾಮ್ಬಸದಾಶಿವರುದ್ರಪ್ರೀತ್ಯರ್ಥೇ ಶ್ರೀರುದ್ರಜಪಾಭಿಷೇಕೇ ( / ಏಕಾದಶವಾರ-ರುದ್ರಾಭಿಷೇಕೇ / ಶತರುದ್ರೀಯಾಭಿಷೇಕೇ) ವಿನಿಯೋಗಃ ||
ಸಮಗ್ರ ರುದ್ರಾಧ್ಯಾಯಕ್ಕೆ ಶ್ರೀರುದ್ರನೇ ದೇವತೆಯು. ಇದರಲ್ಲಿ ೧ ಗಾಯತ್ರೀಚ್ಛಂದಸ್ಸಿನ ಮಂತ್ರವೂ, ೩ ಅನುಷ್ಟುಪ್ ಛಂದೋಮಂತ್ರಗಳೂ, ೩ ಪಂಕ್ತಿಶ್ಛಂದಸ್ಸಿನ ಮಂತ್ರಗಳೂ, ಮತ್ತೆ ೭ ಅನುಷ್ಟುಪ್ ಮಂತ್ರಗಳೂ, ೨ ಜಗತೀಚ್ಛಂದೋನಿಬದ್ಧ ಮಂತ್ರಗಳೂ ಇವೆ. ಇವಿಷ್ಟು ಅಘೋರಋಷಿದೃಷ್ಟವಾದರೆ, ಮುಂದಿನ ಮಂತ್ರಗಳಿಗೆ ಪರಮೇಷ್ಠಿಯೇ / ಬ್ರಹ್ಮನೇ ಋಷಿಯು. ಜಗತೀಚ್ಛಂದಸ್ಸು. ಕುಟುಂಬ ಸಹಿತನಾದ ನನ್ನ (ಈ ಯಜಮಾನನ) ಎಲ್ಲ ಪಾಪಗಳ ನಾಶಕ್ಕಾಗಿ, ಅಂಬಾ / ಉಮಾ / ಪಾರ್ವತೀ ಸಮೇತ (ಅಮ್ಬಯಾ ಸಹಿತಃ ಸಾಮ್ಬಃ) ನಾದ ನಿತ್ಯಮಂಗಲಸ್ವರೂಪಿಯಾದ ಸದಾ-ಶಿವ-ರುದ್ರನ (ಸದಾ— ಸರ್ವದಾ, ಶಿವ— ಮಂಗಲ) ಪ್ರೀತಿಗಾಗಿ ಶ್ರೀರುದ್ರಜಪಾಭಿಷೇಕದಲ್ಲಿ (ಏಕಾದಶರುದ್ರಾಭಿಷೇಕದಲ್ಲಿ / ಶತರುದ್ರಾಭಿಷೇಕದಲ್ಲಿ) ತೊಡಗಿಸಿಕೊಳ್ಳುವಿಕೆ / ವಿನಿಯೋಗವು / ಪ್ರಯೋಜನವು.

No comments:
Post a Comment