SEARCH HERE

Tuesday 1 January 2019

ಅರುಂಧತಿ arundhati


ಅರುಂಧತಿ ಸಪ್ತರ್ಷಿಗಳಲ್ಲಿ ಒಬ್ಬರಾದ ವಸಿಷ್ಠರ ಹೆಂಡತಿ. ಹೆಂಡತಿಯನ್ನು ಅರ್ಧಾಂಗಿನಿ ಎನ್ನುತ್ತಾರೆ. ಆ ಅರ್ಧಾಂಗಿನಿ ಎಂಬ ಹೆಸರನ್ನು ಸಾರ್ಥಕಗೊಳಿಸಿದವಳು ಅರುಂಧತಿ. ಇವಳು ಕರ್ದಮ ಹಾಗೂ ದೇವಹುತಿ ದಂಪತಿಗಳ ಮಗಳು. ಕರ್ದಮ ಮುನಿ ವೇದ ವೇದಾಂಗ ಪಾರಂಗತ. ಅವನ ಆಶ್ರಮದಲ್ಲಿ ಸಾರಾರು ಮಕ್ಕಳು ವಿದ್ಯೆ ಕಲಿಯುತ್ತಿದ್ದರು. ಅರುಂಧತಿಗೂ ವೇದ ವಿದ್ಯೆ ಕಲಿಯಲು ಆಸೆ. ಅವಳು ತಾಯಿ ಹೇಳಿದ ಮನೆಯ ಕೆಲಸಗಳನ್ನೆಲ್ಲಾ ಬೇಗ ಮುಗಿಸಿ ತಂದೆ ಕಲಿಸುತ್ತಿದ್ದ ಕಡೆ ಹೋಗಿ ಕೂಡುತ್ತಿದ್ದಳು. ವೇದಗಳೆಲ್ಲ ಅವಳಿಗೆ ಕರತಲಾಮಲಕ. ತಂದೆ ಹೇಳುವ ಪುರಾಣ ಪ್ರವಚನಗಳನ್ನು ಶ್ರದ್ಧೆ ಇಟ್ಟು ಕೇಳುತ್ತಿದ್ದಳು. ಅರ್ಥವಾಗದಿದ್ದುದನ್ನು ಪ್ರಶ್ನೆ ಮಾಡಿ ತಿಳಿದುಕೊಳ್ಳುತ್ತಿದ್ದಳು. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳೂ ವೇದ ವಿದ್ಯೆಯನ್ನು ಕಲಿಯುವುದು ನಿಷಿದ್ಧವಾಗಿತ್ತು. ಆದರೂ ಅರುಂಧತಿ ವಿದ್ಯೆ ಕಲಿಯಲು ಗಂಡು ಹೆಣ್ಣೆಂಬ ಭೇದ ಬೇಡ ಎಂದು ಹೇಳಿ ಕಲಿಯುತ್ತಿದ್ದಳು. ಆ ಕಾಲಕ್ಕೆ ಅದೊಂದು ಕ್ರಾಂತಿಯಾಗಿತ್ತು. ಪರಶಿವನೇ ಪಾರ್ವತಿಗೆ ತನ್ನ ಶರೀರದಲ್ಲಿ ಅರ್ಧಭಾಗವನ್ನು ಕೊಟ್ಟು ಅರ್ಧಾಂಗಿಯಾಗಿಸಿದ್ದಾನೆ. ಇನ್ನು ನಾವು ಏಕೆ ಹೆಣ್ಣು ಗಂಡೆಂದು ಭೇದ‌ವೆಣಿಸಬೇಕು ಎನ್ನುತ್ತಿದ್ದಳು. ಅರುಂಧತಿಗೆ ವಿದ್ಯಾವಂತರು, ಜಾnನಿಗಳು ಎಂದರೆ ಅಪಾರ ಭಕ್ತಿ ಗೌರವ. ಅರುಂಧತಿ ಯುಕ್ತ ವಯಸ್ಸಿಗೆ ಬಂದಾಗ ಅವಳನ್ನು ವಸಿಷ್ಠರಿಗೆ ಮದುವೆ ಮಾಡಲಾಯಿತು.

ಸ್ವಭಾವತಃ ಜಾnನ ದಾಹಿದ ಅರುಂಧತಿ ವಸಿಷ್ಠರು ತಮ್ಮ ಶಿಷ್ಯರಿಗೆ ಭೋದಿಸುವ ಪ್ರವಚನವನ್ನೆಲ್ಲಾ ಕೇಳುವಳು. ಒಮ್ಮೆ ಅವರು ಪ್ರವಚನ ಮಾಡುವಾಗ ಮನೆಗೆಲಸ ಮುಗಿಸಿ ಪ್ರವಚನ ಮಂದಿರಕ್ಕೆ ಬಂದ ಅರುಂಧತಿ "ನೀವು ಮಾಡುತ್ತಿರುವ ಪ್ರವಚನವನ್ನು ನಾನು ಮುಂದುವರೆಸಲೇ?' ಎಂದಳು. ವಸಿಷ್ಠರು ಒಪ್ಪಿಕೊಂಡರು. ಲೀಲಾಜಾಲವಾಗಿ ಪ್ರವಚನ ಮುಗಿಸಿದ ಅರುಂಧತಿ ಶಿಷ್ಯರು ಕೇಳಿದ ಸಂದೇಹಗಳಿಗೆ ಸಮರ್ಪಕವಾಗಿ ಉತ್ತರಿಸಿದ್ದಳು. ವಸಿಷ್ಠರಿಗೆ ಪತ್ನಿಯ ಜಾnನವನ್ನು ನೋಡಿ ಸಂತಸವಾಯಿತು. ಅವರು ಅರುಂಧತಿಗೆ "ನಿನ್ನನ್ನು ನನ್ನ ಅರ್ಧಾಂಗಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅರ್ಧಾಂಗಿ ಹೆಸರನ್ನು ಸಾರ್ಥಕ ಗೊಳಿಸಿರುವೆ' ಎಂದು ಹೇಳಿದರು. ಅಂದಿನಿಂದ ವಸಿಷ್ಟರು ಹೊರಗೆ ಎಲ್ಲಿಯೇ ಹೋದರೂ ನಿಶ್ಚಿಂತರಾಗಿರುತ್ತಿದ್ದರು. ಏಕೆಂದರೆ ಆಶ್ರಮದ ಶಿಷ್ಯರ ಜವಾಬ್ದಾರಿಯನ್ನು ಅರುಂಧತಿ ಹೊತ್ತುಕೊಳ್ಳುತ್ತಿದ್ದಳು. ತನ್ನ ಪತಿಯ ಯೋಗಕ್ಷೇಮಕ್ಕಾಗಿ ಅರುಂಧತಿ ಪಾರ್ವತಿಯನ್ನು ಪ್ರಾರ್ಥಿಸಿದರೆ ವಸಿಷ್ಟರು ತಾವು ಆಶ್ರಮದಲ್ಲಿ ಇಲ್ಲದಿರುವಾಗ ಬರುವವರೆಗೂ ಅರುಂಧತಿಯ ಜವಾಬ್ದಾರಿಯನ್ನು ಶಿವನಿಗೆ ವಹಿಸಿ ಹೋಗುತ್ತಿದ್ದರು. ಒಮ್ಮೆ ವಸಿಷ್ಠರು ದೇಶ ಪರ್ಯಟನೆಗೆ ಹೋದಾಗ ಚಿಕ್ಕ ಬಾಲಕನೊಬ್ಬ ಅವರ ಶಿಷ್ಯ ವೃತ್ತಿಯನ್ನು ಯಾಚಿಸಿ ಆಶ್ರಮಕ್ಕೆ ಬಂದಿದ್ದ.

ಅರುಂಧತಿ "ವಸಿಷ್ಠರು ಆಶ್ರಮದಲ್ಲಿಲ.É ಅವರು ಬರುವವರೆಗೂ ನಾನೇ ಪಾಠ ಹೇಳಿಕೊಡುತ್ತೇನೆ' ಎಂದಿದ್ದಳು ಬಾಲಕ ಒಪ್ಪಿಕೊಂಡ. ಅದರಂತೆ ಅರುಂಧತಿ ತನಗೆ ಗೊತ್ತಿರುವ  ವಿದ್ಯೆಯೆಲ್ಲವನ್ನೂ ನಿರ್ವಂಚನೆಯಿಂದ ಆ ಬಾಲಕನಿಗೆ ಧಾರೆ ಎರೆದಳು. ಆ ಬಾಲಕ ಸಹಾ ಆಶ್ರಮದ ಕಟ್ಟಳೆಯಂತೆ ಶಿಷ್ಯರು ಮಾಡುವ ಕೆಲಸಗಳನ್ನೆಲ್ಲ ಮಾಡುತ್ತಿದ್ದ. ಅರುಂಧತಿಯ ಸೇವೆಯನ್ನೂ ಮಾಡುತ್ತಿದ್ದ. ವಸಿಷ್ಠರು ವಾಪಸ್ಸು ಬಂದಾಗ ಅರುಂಧತಿ ಆ ಬಾಲಕನನ್ನು ತೋರಿಸಿ ಅವನ ವಿಷಯ ಹೇಳಿದಳು. ವಸಿಷ್ಠರು ಆ ಬಾಲಕನ್ನು ನೋಡಿ ಚಕಿತರಾದರು. ಏಕೆಂದರೆ ಆ ಬಾಲಕ ಮಾರುವೇಷದಲ್ಲಿದ್ದ ಪರಮೇಶ್ವರನಾಗಿದ್ದ. ವಸಿಷ್ಠರಿಲ್ಲದಾಗ ಅರುಂಧತಿ ಹಾಗೂ ಆಶ್ರಮದ ರಕ್ಷಣೆ ಮಾಡಲು ಬಾಲಕನ ವೇಷ ಧರಿಸಿ ಬಂದಿದ್ದ. ಇವರಿಬ್ಬರ ಪರಸ್ಪರ ಕಾಳಜಿಯನ್ನು ನೋಡಿದ ಈಶ್ವರ ಸುಪ್ರೀತನಾಗಿ ನೀವಿಬ್ಬರೂ ಬಹುಕಾಲ ಜೊತೆಯಾಗಿರಿ ಹಾಗೂ ಎಲ್ಲಾ ದಂಪತಿಗಳಿಗೂ ಆದರ್ಶವಾಗಿರಿ ಎಂದು ಹರಸಿ ಮಾಯವಾದ.

ಹೀಗಾಗಿ ನವವಧೂವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸಿ ವಿವಾಹಿತರು  ವಸಿಷ್ಠ ಅರುಂಧತಿಯರಂತೆ ಪರಸ್ಪರ ಒಗ್ಗಟ್ಟಿನಿಂದ ಪ್ರೀತಿಯಿಂದ ಇರಬೇಕು ಎಂದು ಹೇಳುತ್ತಾರೆ.
*****

No comments:

Post a Comment