SEARCH HERE

Tuesday, 1 January 2019

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಮಹತ್ವ makara sankranti january 15






raviya payana innaaru tingalu uttarada dikkinedege






Read what to do on 14 January 2021


The day of Sankranti is dedicated to Lord Surya (i.e. Sun God) and this day is considered significant to worship Surya Deva. Although there are twelve Sankranti in Hindu calendar but Makar Sankranti is the most significant among all Sankrantis due to its religious significance. Due to the popularity of Makara Sankranti, most of the time people call it just Sankranti.


Makara Sankranti Origin | Significance

Makara Sankranti is a significant day as the Sun enters Makara Rashi (i.e. Capricorn zodiac) as per Vedic astrology. In Hinduism the Sun is worshipped and known as Surya Deva who nourishes all living beings on the Earth. Although all twelve days in Hindu calendar when Surya Deva transits a Rashi are considered significant for worshipping Surya Deva, taking religious bath in holy water bodies and performing charity activities but the day when Surya Deva starts moving into Makara Rashi is considered the most auspicious day of the year to worship Lord Surya.

Many people wrongly assume and observe Makara Sankranti as the day of Uttarayana. Makara Sankranti and Uttarayana are two separate astronomical as well as religious events. However thousands years before (precisely in year 285 C.E. as per Lahiri Ayanamsha) the day of Makar Sankranti was coinciding with the day of Uttarayana. The Uttarayana is combination of Uttara and Ayana which mean north and six months duration respectively. Hence, by the definition of Uttarayana, it occurs on the day of Winter Solstice.

Makara Sankranti is significant due to the transit of Surya in Makara Rashi and Uttarayana is significant due to Surya beginning Northern journey (i.e. start moving into Northern hemisphere) after completing His six months Southern journey. In modern India, people have stopped observing Winter Solstice for any religious activities however Bhishma Pitamah chose Uttarayana i.e. Winter Solstice to leave his body even the day of Uttarayana was not coinciding with Makara Sankranti during Mahabharata era. Hence the day of Winter Solstice is also religiously significant to worship Surya Deva as per Vedic astrology.


History of Makara Sankranti

Sankranti is considered a Deity. According to a legend Sankranti killed a
demon named Sankarasur. The day followed by Makara Sankranti is called
Kinkrant or Karidin. On this day, the female deity (devi) slayed the demon
Kinkarasur.

Methods of celebration of Makara Sankranti

1. Benefit of highest merit acquired by a Holy dip on the day of Makara Sankranti

The time from sunrise to sunset on Makara-Sankrantiis auspicious. A Holy dip
 during this period carries special significance. Those who take a Holy dip
 in the rivers Ganga, Yamuna, Godavari, Krushna and Kaveri at the Holy places
 situated on the banks of these rivers acquire the highest merit.

2. Makara Sankranti Offering


Importance of making an offering during an auspicious period: The period from
 Makara Sankranti to Rathsaptami is an auspicious period. Any donation and
 meritorious deeds in this period prove more fruitful.

Substances offered on Makara Sankranti

An offering of new vessels, clothing, food, sesame seeds, pot of sesame seeds,
 jaggery, a cow, a horse, gold or land should be made depending on the capability.

On this day, married women also make some offering. They take things from
unmarried girls and give them sesame seeds and jaggery in return. Married
women organise a ceremony of haldi-kumkum (applying vermilion and turmeric to the forehead) and gift articles to other married women.

Importance of haldi-kumkum ceremony performed by married women on
 Makara Sankranti :Performing haldi-kumkum (Turmeric powder and vermilion)
ceremony is in a way invoking the waves of dormant Adi-shakti in the
 Universe to get activated. This helps in creating impression of Sagun
(Materialised) devotion on the mind of an individual and enhances his bhav (Spiritual emotion) unto God.

Steps in haldi-kumkum ceremony

1. Applying haldi-kumkum : Applying haldi-kumkum to a suvasini (A married
woman whose husband is alive) activates the dormant Principle of Sri Durgadevi
 in her and bestows well-being to the appliersuvasini.
2. Applying perfume : Fragrant particles emitting from the perfume please the
Principle of the Deity and bestow well-being to the applier suvasini within a
shorter period.
3. Sprinkling rose-water : The fragrant waves emitted by the rose-water
activate the waves of the Deity and purifies the environment, and the suvasini who  sprinkles it gets greater benefit of the activated Sagun Principle of the Deity.

4.Offering a gift : A gift offered is always supported by the end of the
pallu of the sari. Offering a gift to another suvasini amounts to surrendering to the divinity in her, through sacrifice of body, mind and wealth. Giving support of the end of pallu of the sari means leaving attachment to even the clothes worn on the body and thus learning to overcome body awareness. Since the period of
sankranti is favourable for sadhana, a gift given during this period pleases the
Deities quickly and they bestow the donor suvasini with the desired  fruit.

Small mud pots

The festival of Sankranti requires small mud pots called sugad (in the Marathi
language). Vermilion and turmeric powder is applied to the pots and a thread is
tied to them. They are filled with carrots, jujube fruits, sugarcane pieces, pods,
cotton, chickpeas, sesame seeds with jaggery, vermilion, turmeric etc. Five
 pots are placed on a wooden seat, rangoli is drawn around the seat and
worshipped. Of these, three are gifted to married women, one is offered to the
tulsi plant and one is retained.

Importance of sesame seeds

 Using sesame seeds eliminates sins : As per Hindu scriptures, on this
day those who  apply sesame seed oil and  utane to the body, bathe
in water mixed with sesame seeds, drink water mixed with sesame
seeds, perform a sacrificial fire, make an offering of sesame seeds and
make similar use of  sesame seeds, are liberated of all sins.

 Importance according to Ayurveda: Since Sankranti falls in winter,
consuming sesame seeds  is beneficial.

 Importance according to Spirituality:
1. Since sesame seeds have a greater ability to absorb and emit sattva
frequencies, consuming  tilgul helps improve spiritual practice.
Distributing tilgul to one another results in an exchange of  the sattva
component.
2. Using sesame seeds in shraddha prevents demons from bringing
obstacles during the rite.

Festival Celebrated  In Karnataka

In Karnataka, the festival is marked by visiting one’s friends and relatives to
exchange greetings, and by the preparation of a dish called Ellu(made with
sesame seeds, coconuts, sugar blocks, etc). A common custom found
across Karnataka is the exchange of sugarcane pieces and Ellu with one’s
neighbors,friends and relatives. In Karnataka, Pongal is known as ‘Sankranti’,
 and cows and bullocks are gaily decorated and fed ‘Pongal’- a sweet
preparation of rice. Special prayers are offered. In the evening, the cattle are
led out in procession to the beat of drums and music.In the night a bonfire is lit
and the animals are made to jump over the fire.

                     Makara Sankranti is marked by men, women and children
wearing colorful clothing; visiting near and dear ones; and exchanging pieces of
 sugarcane, a mixture of fried til, molasses, pieces of dry coconut, peanuts and
fried gram. On this auspicious day, people in Karnataka distribute Yellu and bella (Sesame seeds and Jaggery) and greet with the words ” “Ellu bella thindu, Olle Maathu Aadu” (Eat sesame seeds and speak only good). The significance of
 this exchange is that sweetness should  prevail in all the dealings.


Sankranti in Tamil Nadu
In Tamil Nadu, Sankranti is known as Pongal and it is celebrated for four days.
Sankranti in Gujarat
In Gujarat, Sankranti is celebrated as Uttarayana.
Andhra Pradesh
In Andhra Pradesh Sankranti is known as Pedda Panduga and similar to Tamil Nadu it is celebrated for four days.
Sankranti in Assam
In Assam, Sankranti is known as Magh Bihu.
Sankranti in Punjab
In Punjab, Sankranti is celebrated as Lohri and is observed one day before of Makara Sankranti.

However, in all regions Sankranti is observed as the day of thanksgiving to Surya Deva, the Lord of the light and energy who nourishes all living beings on the Earth.
************

Sri gurubhyo namah

Our Zodiac is made up of 12 constellations or in other words the 12 raashis (Mesha, Vrushabha, Mithuna, Karkataka, Simha, Kanya, Tula, Vruschika, Dhanassu, Makara, Kumbha and Meena). Over the year the sun transits each of these constellations once every month, or to be in geometrical terms 30 deg per month and hence the year being accounted for the complete 360 revolution. Each such transit to a different constellation is called Sankramana and generally happens around the 15th of every month. We can also see this division in every day where we see the every 30 deg split of the day for getting the lagna of the day.

The lord who woke up from Yoga nidra a few months back is getting ready for business, and hence the transit happening tomorrow to the Makara/Capricorn constellation gains a lot of importance and gets attributed as Uttarayana as the sun has started his journey towards north. This transit is the first monthly transit after he starts heading north. Heading north is also considered as sign of progress and also gets attributed as the Day time for the lord as each year for us, is just a day for him. Tomorrows transit also gets its tag called "punyakaala" which means there is more special rewards to the sadhane done tomorrow. This day is also accounted under the Parva kaala category. 

The Sankramana is from 7.40AM onwards, which is very important for japa/tapa and offer the tarpana to the lord to multiply the fruits of sadhane done.

We consider this next phase of 6 solar months as the Uttarayana and most of the auspicious functions in the family/matha are done in this time. People also wait for this phase to perform rituals like Bramhopadesha, Marriage, Gruhapravesha etc more towards significance of the ascent. At Mathas the sanyasa deekshe is accorded in this phase to aid the growth of Jnana. Bheeshma also waited for this phase (being iccha mrutyu person) and left this world on Bheeshma-ashtami whose anniversary is coming up in a few days.

Sriman Madhwacharyaru also selected this auspicious day when he installed the moorthi of Sri Krishna at Udupi Sri Krishna Matha (the moorthi which was worshipped by Sri Rukmini devi in Dwaraka). During this time Sapthotsava is held in Udupi celebrating this anniversary and it culminates with the Avabrutha snana at Madhwa Sarovara to the utsava moorthi. 

Wishing you and your family a very happy, prosperous and very healthy Sankranthi festival and the period of Uttarayana ahead. Across India we celebrate this as Sankranthi, Lohri, Bihu, Pongal and Uttarayana Punyakaala (or Uttarayan).


Enjoy the time with family and friends, eat Yellu (til) and bella and talk good :)
*****

*Why of late, Pongal falls on 15th of January every year, as against the usual 14th of January in the earlier years? *


Know a small Time calculation process.


Normally, Makar Sankrant or Pongal Festival should fall on 14th of January every year. Most of us, since childhood, were observing it on 14th of January every year. Isn't it? In fact, from the year 1935 onwards, till 2007, Pongal was falling on 14th January only every year. (Prior to that, know that, from 1862 to 1934, it was falling on 13th of January every year.) But from 2008 onwards, Pongal has been falling on 15th of January every year. Till the Year 2080, it will fall on 15th of January only every year. From the year 2081 onwards, it will fall on 16th of January every year for the next 72 years, that is, till 2153. 


Why this happens?


As per the Indian Almanac Time calculation, Sun enters the Zodiac sign of Makara Raasi (from Dhanur Raasi), 20 Minutes late every year, as compared to the English time or the World Time. Thus, once in 3 years, Sun enters the Makar Raasi late by one hour. That means, in every cycle of 72 years, Sun enters Makar Raasi late by one day. Got it?


(Also know that Indian Almanac Time is so accurate that our Pandits can accurately tell you today when exactly Solar or Lunar eclipse will take place after 5000 years. That also means that Universe works strictly as per precision timings which is why we can confidently calculate today when exactly will eclipse occur after 5000 years.)

****

Read what to do on 14 January 2021

read more

click
     ಮಕರ ಸಂಕ್ರಾಂತಿ   

***

72 ವರ್ಷಗಳಿಗೊಮ್ಮೆ ಆಚರಣೆಯ ದಿನಾಂಕ ಬದಲಾಗುವ ಸಂಕ್ರಾಂತಿ
2007 ಕ್ಕು ಮುಂಚೆ ನಾವೆಲ್ಲಾ ಜನವರಿ
14ನೇ ತಾರೀಖು ಸಂಕ್ರಾತಿ ಆಚರಿಸುತ್ತಿದ್ದೆವು,ಇಸ್ವಿ 2008 ರಿಂದ ಜನವರಿ 15 ರಂದು
ಸಂಕ್ರಾಂತಿ ಹಬ್ಬ ಆಚರಣೆ ಮಾಡಲು ಶುರು
ಮಾಡಿದ್ದೇವೆ. ಏಕೆ ಗೊತ್ತಾ? ಏಕೆಂದರೆ,
ಸಾಮಾನ್ಯವಾಗಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ 'ಮಕರ ಸಂಕ್ರಾಂತಿಯನ್ನು ಆಚರಿಸುವುದು ವಾಡಿಕೆ. ಇಂದಿನಿಂದ ಮಿಥುನ ರಾಶಿಯ ಪ್ರವೇಶದವರೆಗೆ' ಉತ್ತರಾಯಣ ಪುಣ್ಯಕಾಲ' ಎಂದು ಕರೆಯಲಾಗುತ್ತದೆ. ಮತ್ತೆ ಪ್ರತಿ ವರ್ಷ ಸೂರ್ಯನು
ಮಕರ ರಾಶಿಗೆ ಪ್ರವೇಶಿಸಲು ತೆಗೆದು ಕೊಳ್ಳುವ ಕಾಲ 20 ನಿಮಿಷವಾಗುತ್ತದೆ. ಇದರ ಸ್ಕೂಲಗಣನೆ ಆಧಾರದ ಮೇಲೆ, ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಗಂಟೆ ಮತ್ತು ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಬದಲಾಗುತ್ತದೆ. ಮುಂದಿನ 2080 ನಂತರ ಸ೦ಕ್ರಾತಿ ಹಬ್ಬವು ಜನವರಿ 16 ರಂದು ಆಚರಿಸಲ್ಪಡುವುದು. 1935 ರಿಂದ 2007 ರವರೆಗೆ ಹಬ್ಬವು ಜನವರಿ 14 ರಂದು ಆಚರಿಸುತ್ತಿದ್ದೆವು. 2008 ರಿಂದ 2080 ರವರೆಗೆ ಜನವರಿ 15ರಂದು ಸಂಕ್ರಾಂತಿ ಹಬ್ಬ ಆರಂಭವಾಯಿತು. ಪ್ರತಿ 72 ವರ್ಷಗಳಿಗೊಮ್ಮೆ ಹಬ್ಬವು ಒಂದು ದಿನದ ನಂತರ ಬದಲಾಗುತ್ತದೆ. 1935 ರಿಂದ 2007 ಜನವರಿ 14, ಜನವರಿ 15, 2008 ರಿಂದ 2080. 
***

by narahari sumadhwa 

ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ? :-

ಮಕರ ಸಂಕ್ರಾಂತಿ ದಿನ  : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು.  ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.  
ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು. 
ಅ) ತಿಲ ಸ್ನಾನ, 
ಆ) ತಿಲ ದೀಪ, 
ಇ) ತಿಲ ತರ್ಪಣ, 
ಈ) ತಿಲ ಹೋಮ, 
ಉ) ತಿಲ ದಾನ, 
ಊ) ತಿಲ ಭಕ್ಷಣ. 

ಸ್ನಾನ ಸಮಯದಲ್ಲಿ ತಿಲವನ್ನು ಅಥವಾ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಮಾಡಬೇಕು.

ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.

ಎಳ್ಳು ಸ್ವೀಕಾರಕ್ಕೆ ವೈಜ್ಞಾನಿಕ ಕಾರಣ –
ಧನುರ್ಮಾಸದಲ್ಲಿ ದೇಹಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಹುಗ್ಗಿಯನ್ನು ಸೇವಿಸುತ್ತೇವೆ. ಏಕೆಂದರೆ ಛಳಿಗಾಲವು ಧನುರ್ಮಾಸದಲ್ಲಿ ಉಲ್ಭಣವಾಗಿರುತ್ತೆ. ಈ ಕಾಲದಲ್ಲಿ ಮಲಬದ್ಧತೆಯಾಗಿ ತೊಂದರೆಯಾಗಿರುತ್ತೆ. ಏಕೆಂದರೆ ಛಳಿಗಾಲದಲ್ಲಿ ಶರೀರದಲ್ಲಿರುವ ಉಷ್ಣಾಂಶವು ಹೆಚ್ಚು ವ್ಯಯವಾಗಿ, ಅದನ್ನು ಸರಿದೂಗಿಸಲು ವಾತಾವರಣವು ಸರಿಯಾಗಿರದೆ ಚರ್ಮ ಸುಕ್ಕು ಕಟ್ಟುತ್ತದೆ. ಎರಡನೆಯದಾಗಿ ಯಾವಾಗ ಚರ್ಮದ ಉಷ್ಣಾಂಶವು ಕಮ್ಮಿಯಾಗತ್ತೋ ಆಗ ಚರ್ಮ ಬಿರಿಯತ್ತೆ.  ಶಾಸ್ತ್ರದ ಪ್ರಕಾರ ಹುಗ್ಗಿಯನ್ನು ಪ್ರಾತ: ಕಾಲ ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯೆಲ್ಲ ಸರಿದೂಗುತ್ತೆ.  ಧನುರ್ಮಾಸ ಕಳೆದು ಮಕರ ಮಾಸ ಆರಂಭ ವಾಗುವವರೆಗೆ ಮನುಷ್ಯನ ದೇಹದಲ್ಲಿನ ಕೊಬ್ಬಿನ ಅಂಶ ಅವಶ್ಯಕತೆಯಷ್ಟು ಇರುವುದಿಲ್ಲ. ಕಮ್ಮಿ ಇರುತ್ತದೆ.  ಉತ್ತರಾಯಣಕಾಲದಿಂದ  ಶೆಖೆ ಪ್ರಾರಂಭವಾಗುವುದರಿಂದ ಈ ದೇಹಕ್ಕೆ ಅತ್ಯವಶ್ಯಕವಾದ ಕೊಬ್ಬಿನ ಅಂಶ ಸರಿದೂಗದಿದ್ದರೆ ಮುಂದೆ ಬಿಸಿಲಿನ ತಾಪದಿಂದ ಅನೇಕ ತೊಂದರೆಯಾಗುತ್ತೆ. ಇದನ್ನು ತಪ್ಪಿಸಲು ಮುಂಜಾಗರೂಕತೆಗಾಗಿ ಎಳ್ಳನ್ನು ಉಪಯೋಗ ಮಾಡಬೇಕು. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಚರ್ಮ, ನೇತ್ರ, ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಬೇಕಾದ ಎ ಮತ್ತು ಬಿ ವಿಟಮಿನ್ಸ್ ಕೊಬ್ಬಿನಲ್ಲಿವೆ. ತೈಲಧಾನ್ಯವಾದ ಎಳ್ಳಿನಲ್ಲಿ ಈ ವಿಟಮಿನ್ಸ್ ಹೇರಳವಾಗಿರುವುದರಿಂದ ಎಳ್ಳು ಒಳ್ಳೆಯದು.

ಎಳ್ಳು ಬೆಲ್ಲ ತಿಂದು  ಒಳ್ಳೆ ಮಾತಾಡು :- 
ನವಗ್ರಹಗಳಿಗೆ ನವಧಾನ್ಯ ಹೇಳುತ್ತಾರೆ. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲಧಾನ್ಯ. ಉಳಿದವು ಯಾವುದೂ ತೈಲಧಾನ್ಯವಲ್ಲ. ಆದ್ದರಿಂದ ಎಳ್ಳನ್ನು ತಿನ್ನಬೇಕೆಂದಿದ್ದಾರೆ, ಬರೀ ಎಳ್ಳು ತಿಂದರೆ ಪಿತ್ತ ಜಾಸ್ತಿಯಾಗತ್ತೆ. ಅದಕ್ಕೇ ಪಿತ್ತಹರವಾದ ಬೆಲ್ಲವನ್ನೂ ಸೇರಿಸಿ ತೆಗೆದುಕೊಂಡರೆ ಕೊಬ್ಬಿನ ಅಂಶ ಸರಿದೂಗುತ್ತೆ. ಸ್ವಭಾವತ: ಬೆಲ್ಲವೂ ಪಿತ್ತದ ಗುಣವುಳ್ಳದಾದ್ದರಿಂದ ಎಳ್ಳಿನ ಜೊತೆ ತೆಗೆದುಕೊಂಡರೆ ಪಿತ್ತವನ್ನು ಸ್ಥಿಮಿತದಲ್ಲಿಡುತ್ತೆ. ಉಷ್ಣೇನ ಉಷ್ಣಂ ಶೀತಲಂ ಎನ್ನುವ ಹಾಗೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳುಬೆಲ್ಲ.  ಹಸಿ ಎಳ್ಳಿನ ದೋಷ ನಿವಾರಣೆಗಾಗಿ ಹುರಿದು ಉಪಯೋಗಿಸಬೇಕು. ಇದರ ಜೊತೆಗೆ ರುಚಿಗೋಸ್ಕರ, ಕೊಬ್ಬಿನ ಅಂಶವಿರುವ ಕಡ್ಲೇಕಾಯಿ ಬೀಜವನ್ನು ಬೆರೆಸಿ ತಿನ್ನಬೇಕೆಂದಿದ್ದಾರೆ. ಎಳ್ಳಿಗೆ ವಾತ, ವ್ರಣ, ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ರಕ್ತವೃದ್ಧಿ ಮಾಡುತ್ತೆ.

(ಆಧಾರ - ಹಲವಾರು ಲೇಖನಗಳು)

by ನರಹರಿ ಸುಮಧ್ವ  ಸುಮಧ್ವ ಸೇವಾ
****

BY NARAHARI SUMADHWA
ಎಳ್ಳು ಸ್ವೀಕಾರಕ್ಕೆ ವೈಜ್ಞಾನಿಕ ಕಾರಣ –
ಧನುರ್ಮಾಸದಲ್ಲಿ ದೇಹಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಹುಗ್ಗಿಯನ್ನು ಸೇವಿಸುತ್ತೇವೆ. ಏಕೆಂದರೆ ಛಳಿಗಾಲವು ಧನುರ್ಮಾಸದಲ್ಲಿ ಉಲ್ಭಣವಾಗಿರುತ್ತೆ. ಈ ಕಾಲದಲ್ಲಿ ಮಲಬದ್ಧತೆಯಾಗಿ ತೊಂದರೆಯಾಗಿರುತ್ತೆ. ಏಕೆಂದರೆ ಛಳಿಗಾಲದಲ್ಲಿ ಶರೀರದಲ್ಲಿರುವ ಉಷ್ಣಾಂಶವು ಹೆಚ್ಚು ವ್ಯಯವಾಗಿ, ಅದನ್ನು ಸರಿದೂಗಿಸಲು ವಾತಾವರಣವು ಸರಿಯಾಗಿರದೆ ಚರ್ಮ ಸುಕ್ಕು ಕಟ್ಟುತ್ತದೆ. ಎರಡನೆಯದಾಗಿ ಯಾವಾಗ ಚರ್ಮದ ಉಷ್ಣಾಂಶವು ಕಮ್ಮಿಯಾಗತ್ತೋ ಆಗ ಚರ್ಮ ಬಿರಿಯತ್ತೆ.  ಶಾಸ್ತ್ರದ ಪ್ರಕಾರ ಹುಗ್ಗಿಯನ್ನು ಪ್ರಾತ: ಕಾಲ ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯೆಲ್ಲ ಸರಿದೂಗುತ್ತೆ.  ಧನುರ್ಮಾಸ ಕಳೆದು ಮಕರ ಮಾಸ ಆರಂಭ ವಾಗುವವರೆಗೆ ಮನುಷ್ಯನ ದೇಹದಲ್ಲಿನ ಕೊಬ್ಬಿನ ಅಂಶ ಅವಶ್ಯಕತೆಯಷ್ಟು ಇರುವುದಿಲ್ಲ. ಕಮ್ಮಿ ಇರುತ್ತದೆ.  ಉತ್ತರಾಯಣಕಾಲದಿಂದ  ಶೆಖೆ ಪ್ರಾರಂಭವಾಗುವುದರಿಂದ ಈ ದೇಹಕ್ಕೆ ಅತ್ಯವಶ್ಯಕವಾದ ಕೊಬ್ಬಿನ ಅಂಶ ಸರಿದೂಗದಿದ್ದರೆ ಮುಂದೆ ಬಿಸಿಲಿನ ತಾಪದಿಂದ ಅನೇಕ ತೊಂದರೆಯಾಗುತ್ತೆ. ಇದನ್ನು ತಪ್ಪಿಸಲು ಮುಂಜಾಗರೂಕತೆಗಾಗಿ ಎಳ್ಳನ್ನು ಉಪಯೋಗ ಮಾಡಬೇಕು. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಚರ್ಮ, ನೇತ್ರ, ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಬೇಕಾದ ’ಎ’ ಮತ್ತು ’ಬಿ’ ವಿಟಮಿನ್ಸ್ ಕೊಬ್ಬಿನಲ್ಲಿವೆ. ತೈಲಧಾನ್ಯವಾದ ಎಳ್ಳಿನಲ್ಲಿ ಈ ವಿಟಮಿನ್ಸ್ ಹೇರಳವಾಗಿರುವುದ ರಿಂದ ಎಳ್ಳು ಒಳ್ಳೆಯದು.

“ಎಳ್ಳು ಬೆಲ್ಲ ತಿಂದು  ಒಳ್ಳೆ ಮಾತಾಡು”. 
ನವಗ್ರಹಗಳಿಗೆ ನವಧಾನ್ಯ ಹೇಳುತ್ತಾರೆ. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲಧಾನ್ಯ. ಉಳಿದವು ಯಾವುದೂ ತೈಲಧಾನ್ಯವಲ್ಲ. ಆದ್ದರಿಂದ ಎಳ್ಳನ್ನು ತಿನ್ನಬೇಕೆಂದಿದ್ದಾರೆ, ಬರೀ ಎಳ್ಳು ತಿಂದರೆ ಪಿತ್ತ ಜಾಸ್ತಿಯಾಗತ್ತೆ. ಅದಕ್ಕೇ ಪಿತ್ತಹರವಾದ ಬೆಲ್ಲವನ್ನೂ ಸೇರಿಸಿ ತೆಗೆದುಕೊಂಡರೆ ಕೊಬ್ಬಿನ ಅಂಶ ಸರಿದೂಗುತ್ತೆ. ಸ್ವಭಾವತ: ಬೆಲ್ಲವೂ ಪಿತ್ತದ ಗುಣವುಳ್ಳದಾದ್ದರಿಂದ ಎಳ್ಳಿನ ಜೊತೆ ತೆಗೆದುಕೊಂಡರೆ ಪಿತ್ತವನ್ನು ಸ್ಥಿಮಿತದಲ್ಲಿಡುತ್ತೆ. “ಉಷ್ಣೇನ ಉಷ್ಣಂ ಶೀತಲಂ” ಎನ್ನುವ ಹಾಗೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳುಬೆಲ್ಲ.  ಹಸಿ ಎಳ್ಳಿನ ದೋಷ ನಿವಾರಣೆಗಾಗಿ ಹುರಿದು ಉಪಯೋಗಿಸಬೇಕು. ಇದರ ಜೊತೆಗೆ ರುಚಿಗೋಸ್ಕರ, ಕೊಬ್ಬಿನ ಅಂಶವಿರುವ ಕಡ್ಲೇಕಾಯಿ ಬೀಜವನ್ನು ಬೆರೆಸಿ ತಿನ್ನಬೇಕೆಂದಿದ್ದಾರೆ. ಎಳ್ಳಿಗೆ ವಾತ, ವ್ರಣ, ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ರಕ್ತವೃದ್ಧಿ ಮಾಡುತ್ತೆ. 

ಸಂಕ್ರಾಂತಿ ದಿನ ಸಂಜೆ ಮಕ್ಕಳನ್ನು ಕೂಡಿಸಿ ಆರತಿ ಮಾಡಿ ಬೋರೇ ಹಣ್ಣು (ಎಳಚಿ ಹಣ್ಣು), ಕಬ್ಬಿನ ಚೂರು, ನಾಣ್ಯಗಳನ್ನು ಹಾಕುತ್ತಾರೆ. ಏಕೆಂದರೆ –

ಮಕರ ಸಂಕ್ರಾಂತಿಯ ಸಂಜೆ ಐದು ವರ್ಷದ ಒಳಗಿನ ಮಕ್ಕಳನ್ನು ಕೂಡಿಸಿ, ಆರತಿ ಮಾಡಿ ಅವರಿಗೆ ಬೋರೇ ಹಣ್ಣು (ಎಲಚೇ ಹಣ್ಣು) ಕಬ್ಬಿನ ಜಲ್ಲೆಯ ಚೂರು ಮತ್ತು ನಾಣ್ಯಗಳನ್ನು ಕೂಡಿಸಿ ಅವರ ತಲೆಯ ಮೇಲೆ ಎರೆಯುವುದು ಮಾಡುತ್ತೇವೆ. ಏಕೆ ? ಇದಕ್ಕೂ ವೈಜ್ಞಾನಿಕ ಕಾರಣವಿದೆ. ಆಯುರ್ವೇದ ರೀತ್ಯ ನೆಗಡಿ, ಕೆಮ್ಮು, ಮೂಲವ್ಯಾಧಿ, ಸುಟ್ಟಗಾಯ, ಬೆವರುವುದು, ಬಿಕ್ಕಳಿಕೆ ಮೊದಲಾದ್ದಕ್ಕೆ ಎಲಚಿಹಣ್ಣಿನಿಂದ ಮಾಡಿದ ಔಷಧಿಗಳು ಬಹಳ ಪರಿಣಾಮಕಾರಿ. ಇಷ್ಟೇ ಅಲ್ಲ, ಅವು ಮಕ್ಕಳಲ್ಲಿನ ತುಂಟತನ, ಹಠಮಾರಿತನ ಹೋಗಲಾಡಿಸಲೂ ಸಹಕಾರಿ. ಎಲಚೆ ಹಣ್ಣಿನ ಕಷಾಯವನ್ನು ಇಂತಹ ಮಕ್ಕಳಿಗೆ ಕೊಡುವ ವಾಡಿಕೆಯಿದೆ. ಆದ್ದರಿಂದ ಅದರ ಸ್ಪರ್ಷದಿಂದ ಕೂಡ ಅದರ ಗುಣ ಬರುತ್ತದೆ.

ಸುಮ್ಮನೆ ತಲೆಯ ಮೇಲೆ ಈ ಹಣ್ಣು ಬಿದ್ದರೆ ತುಂಟತನ ಹೇಗೆ ಹೋಗುತ್ತೆ? ಮನುಷ್ಯನ ದೇಹವೂ ಕೂಡ ಒಂದು ವಿದ್ಯುತ್ ಕೇಂದ್ರ.  ಸದಾ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿಸರ್ಜನೆ ಆಗುತ್ತಿರುತ್ತದೆ. ಈ ಉತ್ಪಾನೆಯ ಮುಖ್ಯ ಕೇಂದ್ರ ಬ್ರಹ್ಮಾಂಡವೂ (ನೆತ್ತಿ) ಒಂದು. ಎಲಚಿ ಹಣ್ಣನ್ನು ತಲೆಯ ಮೇಲೆ ಹಾಕಿದಾಗ ಇದರ ಸ್ಪರ್ಶ ಮಾತ್ರದಿಂದ ದೇಹದಲ್ಲಿರುವ ವಿದ್ಯುತ್ ಈ ಗುಣವನ್ನು ಸ್ವಲ್ಪ ಆಕರ್ಷಿಸುತ್ತದೆ. ಇದಕ್ಕೆ ಎಲೆಕ್ಟ್ರೋ ಮಾಗ್ನೆಟಿಸಂ ಎನ್ನುತ್ತಾರೆ. ಹೀಗೆ ಆಕರ್ಷಿಸಲ್ಪಟ್ಟ ಎಲಚಿ ಹಣ್ಣಿನ ಗುಣವು ನೆತ್ತಿಯಲ್ಲಿರುವ ಸಂಬಂಧಿಸಿದ ನರಗಳ ಮೇಲೆ ಪ್ರಭಾವ ಬೀರಿ ಈ ಹಠಮಾರಿತನಕ್ಕೆ ಸಂಬಂಧಿಸಿದ ನರಗಳು ಸುಧಾರಿಸುತ್ತವೆ. ತುಂಟತನ ಕಡಿಮೆಯಾಗುತ್ತದೆ. ಎಳಚಿಹಣ್ಣಿನಲ್ಲಿ ಅನುದ್ವೇಗಪಡಿಸುವ ಗುಣ ಇದೆ ಎಂದಾಯಿತು. ಇದು ಮುಂಜಾಗರೂಕತೆ ದೃಷ್ಟಿಯಿಂದ ಹಿಂದಿನವರು ಮಾಡಿದ್ದು ನಮಗೆ ಸಂಪ್ರದಾಯವಾಗಿ ಕಂಡುಬಂದರೂ ವೈಜ್ಞಾನಿಕವೂ ಹೌದು.

ಬೋರೇ ಹಣ್ಣಿನ ಜೊತೆ ಕಬ್ಬಿನ ಚೂರು ಮತ್ತು ನಾಣ್ಯಗಳನ್ನೂ ಹಾಕುತ್ತಾರೆ. ಮಕ್ಕಳಿಗೆ ಸಿಹಿ ಅಂದರೆ ಇಷ್ಟ. ಕಬ್ಬಿನ ಹಣ್ಣಿನ ಚೂರು ಗಳನ್ನು ತಿನ್ನಲು ಆಸಕ್ತರಾಗು ಹಸೆಮಣೆ ಮೇಲೆ ಕೂಡುತ್ತಾರೆ. ಅಲ್ಲದೆ ಕಬ್ಬಿನ ರಸ ಪಿತ್ತಹರ. ಉತ್ತರಾಯಣ ಕಾಲದಲ್ಲಿ ಉಷ್ಣವು ಜಾಸ್ತಿ ಯಾಗುವುದರ ಮೂಲಕ ಪಿತ್ತ ಸಂಬಂಧಿ ದೋಷಗಳು ಬಾರದಿರಲಿ ಎಂದು ಕಬ್ಬಿನ ಉಪಯೋಗ ಮಾಡಿದ್ದಾರೆ.

ಮಕರ ಸಂಕ್ರಮಣವು ಪುಷ್ಯ ಮಾಸದಲ್ಲೇ ಸಾಮಾನ್ಯವಾಗಿ ಬರುತ್ತದೆ. ಶನಿಯ ನಕ್ಷತ್ರ ಪುಷ್ಯ. ಪುಷ್ಯಕ್ಕೆ ಬೃಹಸ್ಪತಿ ಅಧಿದೇವತೆ. ಶನಿಗೆ ಯಮ ಅಧಿದೇವತೆ. ಯಮ ಅಂದರೆ ಸಂಯಮ ಎಂದೂ ಅರ್ಥ. ಶನಿ ಜೀವ ನಾಡಿಗೆ ಕಾರಕ. ಉತ್ತರಾಯಣದಲ್ಲಿ ರವಿಯು ಮಕರ ರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಹವಾ ಬದಲಾವಣೆಯಾಗಲು ಆರಂಭವಾಗುತ್ತದೆ. ಇದು ಎಳೆ ಮಕ್ಕಳ ಮೇಲೆ ಪ್ರಭಾವಕಾರಿ. ಮಕ್ಕಳ ಮೇಲೆ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲೂ ಎಲಚಿ ಹಣ್ಣು ಸಹಾಯಕಾರಿ.
-narahari sumadhwa
(Source article – Late Sri HKS Rao’s article on Sankranthi, Shivaratri, Ugaadi)
ಸಂಗ್ರಹ : ನರಹರಿ ಸುಮಧ್ವ
***


ಸಂ - ಭ್ರಮದ ಸಡಗರದಲ್ಲಿ ಸತ್ಯದ
ಕ್ರಾಂ - ತಿ ಮರೆಯಾಗದಿರಲಿ. ಅಧರ್ಮಿಗಳ
ತಿ - ದ್ದುವ ಕಾರ್ಯ ಮುಂದುವರೆಯಲಿ.
ಹ - ರಿ ಸ್ಮರಣೆ ತಪ್ಪದಿರಲಿ. ಇ
ಬ್ಬ - ನಿಯ ಸೊಬಗು ಬಾಳನಾವರಿಸಲಿ
ದ - ನ್ಯತೆಯ ಭಾವ ಜಗವನಾವರಿಸಲಿ 
ಶು - ಭದ ಸೂಚನೆ ಸಿಗಲಿ.
ಭಾ - ವಗಳು ನಲಿದು ಬರಲಿ ಆಮಿಷಗಳು
ಶ - ಮನವಾಗಲಿ.

ಯ - ಶಸ್ಸು ಹಿಂಬಾಲಿಸಲಿ.

ಉತ್ತರಾಯಣ ಪುಣ್ಯಕಾಲದ ಆರಂಭವೇ ಮಕರ ಸಂಕ್ರಾಂತಿಯ ಸಂಭ್ರಮ.


🌱ಸುಗ್ಗಿಯ ಜತೆಗೆ ಹಿಗ್ಗನ್ನು ತರುವ ಮತ್ತ ಎಳ್ಳು-ಬೆಲ್ಲ ಮುದ ನೀಡುವ ಈ ಹಬ್ಬವು ಸರ್ವರಿಗೂ ಸಂತೋಷವನ್ನು ತರಲಿ.

ಸಂಕ್ರಮಣ.

ಸಂ ಅಂದರೆ ಸಮೀಚೀನವಾದ,ಮೋಕ್ಷ ಮಾರ್ಗದಲ್ಲಿ
ಕ್ರಮಣ ಅಂದರೆ ಹೋಗುವಿಕೆ ಎಂಬ ಜ್ಞಾನ ವು ದೊರಕುವುದು...
ಯಾವ ಭಗವಂತನ ಹಾಗು ಅವನ ಭಕುತರ ಸಂದರುಶನ ದಿಂದ ,ಅವನ ಭಕ್ತರ ಮಾತಿನಿಂದ 
ಅಂದರೆ 
ಎಲ್ಲಾ ಹರಿದಾಸರು ಭಗವಂತನ ಕುರಿತಾಗಿ ರಚಿಸಿದ ಕೀರ್ತನೆಗಳು,ಕೃತಿಗಳು ನಮ್ಮ ಮನಸ್ಸು ಭಗವಂತನ ಕಡೆ ಕ್ರಮಣ ಅಂದರೆ ಹೋಗುವದೋ ಅವತ್ತು ನಮಗೆ ಸಂಕ್ರಮಣ ಹಬ್ಬವು....
ಯಾವತ್ತು ನಮ್ಮ ಮನಸ್ಸಿನಲ್ಲಿ ಎಳ್ಳು ಇನಿತು ದುರ್ವಿಷಯಗಳು ಪ್ರವೇಶ ಮಾಡುವದಿಲ್ಲವೋ ಅವತ್ತೇ ನಮಗೆ ಈ ಹಬ್ಬವು....
 ಇಲ್ಲ ವಾದರೆ ಭಕ್ಷ್ಯ ಭೋಜನಗಳನ್ನು ಮಾಡಿಕೊಂಡು ತಿನ್ನಲು ಒಂದು ವಿಶೇಷ ದಿನ.
ಹಾಗಾಗದಿರಲಿ.
ನಾವೆಲ್ಲರು ನಿತ್ಯವು ಭಗವಂತನ ನಾಮಸ್ಮರಣೆಯನ್ನು ಮಾಡೋಣ...
ನಮ್ಮ ಮನದೊಳಗೆ ಎಳ್ಳು ಇನಿತು ದುಷ್ಟ ವಿಷಯಗಳ ಚಿಂತನೆ ಬಾರದಿರಲಿ.ಅಂತ ಭಗವಂತನ ಹತ್ತಿರ ಪ್ರಾರ್ಥನೆ ಮಾಡೋಣ....🙏
ಇದೇ  ನಿಜವಾದ ಸಂಕ್ರಮಣ...
ಹಾಗಾದರೆ
ಹಬ್ಬವೆಂದರೆ ಏನು??
ಹಬ್ಬವೆಂದರೆ ಮನೆಯಲ್ಲಿ ದೇವ ಪೂಜೆ, ಗೋ ಪೂಜೆಗಳನ್ನು ಮಾಡಿ,ಹೊಸ ವಸ್ತ್ರಗಳನ್ನು ಧರಿಸಿ, ಗುರು, ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ತೆಗೆದುಕೊಂಡು, ದೇವಸ್ಥಾನಕ್ಕೆ ಹೋಗಿ ನಂತರ ಬಂಧುಗಳ ಜೊತೆಯಲ್ಲಿ ಒಟ್ಟಿಗೆ ಕುಳಿತು ಸಿಹಿ ಪದಾರ್ಥಗಳನ್ನು ತಯಾರಿಸಿ ಭೋಜನ ಮಾಡುವದು. ಇದೆಲ್ಲವು ಸರಿ.
ಮತ್ತೆ  ಶ್ರೀ ವಿಜಯದಾಸರು ನಿತ್ಯ ಹಬ್ಬ ಮಾಡಬೇಕು ಅಂತ ಹೇಳುತ್ತಾರೆ.
ಹಾಗಾದರೆ ಯಾವುದು ನಿತ್ಯ ಹಬ್ಬ??
ಇದಕ್ಕೆ ಉತ್ತರ ಸರಳವಾಗಿ ನಮ್ಮ ವಿಜಯಪ್ರಭುಗಳು ತಮ್ಮ ಹಬ್ಬ ಸುಳಾದಿ ಯಲ್ಲಿಉತ್ತರ ಕೊಡುತ್ತಾರೆ.
👇
ಕಾಮಕ್ರೋಧಂಗಳ ಬಿಡುವದೇ ಹಬ್ಬ|
ತಾಮಸ ಜನರುಗಳ ಬಿಡುವದೇ ಹಬ್ಬ|
ವಂದಿಸಿ ಗುರುಗಳಿಗೆ ಎರಗುವದೇ ಹಬ್ಬ|
ತಂದೆ ತಾಯಿಗಳಿಗೆ ಅನೂಕೂಲವೇ ಹಬ್ಬ|
ಬಂದ ಅತಿಥಿ ಗಳ ಪೂಜಿಸುವದೇ ಹಬ್ಬ|
ಮನೆ ನೆರೆಹೊರೆ ನೋಡಿ ಬಳಲದಿಪ್ಪುದೇ ಹಬ್ಬ|
ಯಾಮ ಯಾಮಕೆ ಹರಿಯ ನಾಮ ನೆನೆವದೇ ಹಬ್ಬ|
ವನಜನಾಭನ ನೋಡಿ ಪಾಡುವದೇ ಹಬ್ಬ|

ಈ ಮೇಲಿನ ಸಾಲುಗಳನ್ನು ನೋಡಿದಾಗ ಇವುಗಳಲ್ಲಿ ಆಚರಿಸಲು ಕಷ್ಟ ಸಾಧ್ಯ ಯಾವುದು ಇಲ್ಲ.
ಇವೆಲ್ಲವೂ basic things.
ನಮ್ಮ ಒಳಗೆ ಇರಬೇಕಾದ ಸಹಜ ಗುಣಗಳನ್ನು ಶ್ರೀ ವಿಜಯದಾಸರು ತಮ್ಮ ಸುಳಾದಿ ಒಳಗೆ ಹೇಳಿದ್ದಾರೆ.
ಚಿನ್ಮಯ ಮೂರುತಿ ನಮ್ಮ ವಿಜಯವಿಠ್ಠಲ ರೇಯನ|
ಮನಸಿನೊಳು ಅನುದಿನ‌ ಈಕ್ಷಿಸುವದೇ ಹಬ್ಬ||
🌞🎋

ಶುಭ ಸಂಕ್ರಮಣವು , ಕಹಿಯಿಂದ ಸಿಹಿ ಬಾಂಧವ್ಯದೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ಸೋಲಿನಿಂದ ಗೆಲುವಿನ ಪಥದೆಡೆಗೆ ಸಾಗಲಿ.
*****
ಉತ್ತರಾಯಣ  ಪುಣ್ಯಕಾಲ
ಈ  ಸಮಯದಲ್ಲಿ  ಮಾಡುವ,  ನದೀ/ಸಮುದ್ರ ಸ್ನಾನ  -  ಜಪ  - ಧ್ಯಾನ  - ಸ್ತೋತ್ರ  - ಭಜನೆ  - ಪಾರಾಯಣ  - ತ್ಯಾಗ  - ಸೇವೆ - ಪೂಜೆ  - ಹೋಮ  - ಮಂತ್ರೋಪದೇಶ ತೆಗೆದುಕೊಳ್ಳುವಿಕೆ - ಸರಳ ವಸ್ತ್ರಗಳ ತೊಡುವಿಕೆ....,, ಇವುಗಳಿಗೆ  ಅತ್ಯಂತ  ವಿಶೇಷ ಫಲ ಪ್ರಾಪ್ತಿಯ ಸಮಯ. 
ಮಾರಾಟ  - ಹಿಂಸೆ  - ನಿದ್ದೆ  - ಇಂದ್ರಿಯ  ಉತ್ತೇಜಕ ಲೌಕಿಕ/ವ್ಯಾವಹಾರಿಕ  ಕೆಲಸಗಳು, ಆಡಂಬರ,, ಇವು  ಅರ್ಹವಲ್ಲ. 
ಮಕರಸಂಕ್ರಮಣ ಪುಣ್ಯಕಾಲ + ಉತ್ತರಾಯಣ. 
****
by narahari sumadhwa
ಉತ್ತರಾಯಣ –   ಸೂರ್ಯನು ಭೂಮಧ್ಯೆಯ ರೇಖೆಗೆ ಉತ್ತರಾಭಿಮುಖ ವಾಗಿ ಸಂಚರಿಸುವ ಕಾಲ.  ಸಾಮಾನ್ಯವಾಗಿ ಜನವರಿ 15ಕ್ಕೆ ಪ್ರಾರಂಭವಾಗುತ್ತದೆ.  ಮಕರಕ್ಕೆ ಸೂರ್ಯನು ಪ್ರವೇಶಿಸಿದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ. ಅದಕ್ಕೇ ಪಂಚಾಂಗದಲ್ಲಿ ಉತ್ತರಾಯಣ ಪುಣ್ಯಕಾಲದ ಸಮಯವನ್ನು ತಿಳಿಸಿರುತ್ತಾರೆ.   ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಮೈಗೆ ಹಚ್ಚಿಕೊಂಡು ಎಲ್ಲರೂ ಸ್ನಾನ ಮಾಡಬೇಕು. ಇದರಿಂದ ರೋಗದಿಂದ ದೂರ.  ಉತ್ತರಾಯಣ ಪರ್ವಕಾಲದಲ್ಲಿ ಹೆಂಗಸರು ತಲೆಯ ಮೇಲೆ ಸ್ನಾನ ಮಾಡಬಾರದು.  ಆದರೆ ಎಳ್ಳು ಮೈಗೆ ತಿಕ್ಕಿ ಸ್ನಾನ ಮಾಡಬೇಕು.

ಮಕರ ಸಂಕ್ರಾಂತಿ ದಿನ  : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು.   ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.  
೧) ಎಳ್ಳು ಹಚ್ಚಿ ಸ್ನಾನ,  
೨) ಎಳ್ಳುದಾನ, 
೩) ಎಳ್ಳು ಹೋಮ  
೪) ಎಳ್ಳು ಭಕ್ಷಣ,  
೫) ಎಳ್ಳಿನಿಂದ ತರ್ಪಣ,   
೬) ಎಳ್ಳೆಣ್ಣೆಯ ದೀಪ 
ಇವು ಬಹಳ ವಿಶೇಷ.

ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ.   ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.  

ಪ್ರಶ್ನೆ : ಸಂಕ್ರಾಂತಿ ಎಂದರೇನು ?
ಉತ್ತರ : ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು “ ಸಂಕ್ರಮಣ ” ಎನ್ನುತ್ತಾರೆ.

ಪ್ರಶ್ನೆ : ಒಟ್ಟು ಎಷ್ಟು ಸಂಕ್ರಮಣಗಳಿವೆ?
ಉತ್ತರ : ಒಟ್ಟು ಹನ್ನೆರಡು ಸಂಕ್ರಮಣಗಳಿವೆ.

ಮಕರ ಸಂಕ್ರಮಣ ಎಂದರೇನು ?
ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.

ಸಂಕ್ರಮಣದ ಪರ್ವಕಾಲವೆಂದರೇನು?
ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.
ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆ ಪ್ರಶಸ್ತ. ಉತ್ತರಾಯಣ ಪುಣ್ಯಕಾಲ ದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.

 ಪ್ರಶ್ನೆ  : ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯ ವಿರುತ್ತದೆ ?
 ಉತ್ತರ : ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ).  ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.

ಪ್ರಶ್ನೆ : ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಉತ್ತರ : check every year

ಪ್ರಶ್ನೆ :  ಸಂಕ್ರಮಣ ಕಾಲದಲ್ಲಿ ಸಮುದ್ರದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು ಅನುಕೂಲ ಇಲ್ಲದವರು ಏನು ಮಾಡಬೇಕು?

ಉತ್ತರ: ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.

ಪ್ರಶ್ನೆ : ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ನೈವೇದ್ಯವನ್ನೂ ಮಾಡಬಹುದು.

ಪ್ರಶ್ನೆ :ತರ್ಪಣಾಧಿಕಾರಿಗಳು ತರ್ಪಣ ಕೊಡುವ ಸಮಯ ಯಾವುದು ?
ಉತ್ತರ : ಮಕರ ಸಂಕ್ರಮಣ ಪರ್ವಕಾಲ ಸಮಯದಲ್ಲಿ. check time every year

 ಪ್ರಶ್ನೆ : ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

 ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣ ಕಾಲದಲ್ಲಿ ಮಾಡುವುದು ಶ್ರೇಷ್ಠ.  ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ನೈವೇದ್ಯವನ್ನೂ ಮಾಡಬಹುದು.  check time every year

ದಾನವನ್ನು ಯಾವಾಗ ಕೊಡಬೇಕು ?
ಉತ್ತರ : ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಇಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.  ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿ ಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಪ್ರಶ್ನೆ : ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ?
ಉತ್ತರ : ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.

ಪ್ರಶ್ನೆ : ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?
ಉತ್ತರ:  ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು. 
ಅ) ತಿಲ ಸ್ನಾನ, ಆ) ತಿಲ ದೀಪ, 
ಇ) ತಿಲ ತರ್ಪಣ, ಈ) ತಿಲ ಹೋಮ, ಉ) ತಿಲ ದಾನ, ಊ) ತಿಲ ಭಕ್ಷಣ. 
ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.

ಗೋಪೂಜೆ :
ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.

ಲೇಖನ : ನರಹರಿ ಸುಮಧ್ವ
***


ಭೋಗಿ, ಸಂಕ್ರಾಂತಿ ಹಬ್ಬದ ದಿನ ಮಕ್ಕಳಿಗೆ ಕರಿ ಎರೆಯುವುದು ಯಾಕೆ ಎನ್ನುವ ಪ್ರಶ್ನೆಗೆ ಶ್ರೀ *ಹಂಪಿಹೊಳಿ ಆಚಾರ್ಯರು ನೀಡಿದ ಉತ್ತರ .. ಹಳೆಯ ಲೇಖನ

👇🏽👇🏽👇🏽👇🏽👇🏽👇🏽👇🏽

ಸಂಕ್ರಾಂತಿ ಅಂದ್ರೆ ಗ್ರಹಗಳು ಆ ಆ ರಾಶಿಯಲ್ಲಿ ಪ್ರವೇಶ ಮಾಡುವ ಅವಧಿ , ಈಗ ಮಕರ ಸಂಕ್ರಾಂತಿ ಅಂದ್ರೆ ರವಿಯು ಮಕರ ರಾಶಿಯಲ್ಲಿ ಪ್ರವೇಶ ಮಾಡುವ ಅವಧಿ , ಅದಕ್ಕೆ ಪರ್ವಕಾಲ ಅಂತ ಕರೀತಾರೆ , ಅದರ ಮರುದಿವಸ ಆ ಅವಧಿಯ ಕರಿ ಇರ್ತದ , ಅಂದ್ರೆ ಆ ಸಂಕ್ರಮಣದಿಂದ ಮನುಷ್ಯನ ಮೇಲೆ  ಉಂಟಾಗುವ ಕೆಲವು ಬಾಧೆಗಳು , ಅದರಲ್ಲೂ ಐದು ವರ್ಷದ ಮಕ್ಕಳ ಮೇಲೆ ವಿಶಶಷವಾದ ಬಾಧೆಗಳು ಪರಿಣಾಮ ಬೀರ್ತಿರ್ತಾವು , ಹೀಗಾಗಿ ಅವತ್ತಿನ ದಿವಸ ಮುತ್ತು ರತ್ನ ಹವಳ ವಜ್ರ ಬಂಗಾರ ಬೆಳ್ಳಿ , ಹೊಸದಾಗಿ ಬೆಳೆ ಬಂದ ಕಬ್ಬು ಮುಂತಾದವುಗಳಲ್ಲಿರುವ ವಿಶೇಷ ಭಗವದ್ರೂಪಗಳು ತಮ್ಮ ಮಗುವನ್ನು ಸಂಕ್ರಮಣದಿಂದ ಉಂಟಾದ ದೋಷಗಳಿಂದ ಸಂರಕ್ಷಣೆ ಮಾಡಿ ಭವಿಷ್ಯತ್ತಿನಲ್ಲಿ ಆ ಮಗುವಿಗೆ ಒಳ್ಳೆಯ ಆಯುರಾರೋಗ್ಯ ದಯಪಾಲಿಸಿ ಧರ್ಮಮಾರ್ಗದಲ್ಲಿ ಆ ಮಗುವಿನ ಜೀವನ ಸಾಗಲಿ ಎನ್ನುವ ಉದ್ದೇಶದಿಂದ ಆ ಪದಾರ್ಥಗಳಿಂದ ಮಗುವಿಗೆ ಎರೆಯುವ ಕ್ರಮಕ್ಕೆ ಕರಿ ಎರೆಯುವದು ಅಂತ ಕರೀತಾರ . ಕರಿ ಅಂದ್ರೆ ಕಪ್ಪು , ಕಪ್ಪು ಅಂದ್ರೆ ಅಜ್ಞಾನ , ಸಂಕ್ರಮಣದಿಂದ ಉಂಟಾಗುವ ಅಜ್ಞಾನಾದಿ ದೋಷಗಳನ್ನು ಸೂರ್ಯಮಂಡಲ ಮಧ್ಯವರ್ತಿಯಾದ ಸರಸಿಜಾಸನನಾದ ಕೇಯೂರ ಮಕರಕುಂಡಲ , ಕಿರೀಟ , ಹಾರ , ಬಂಗಾರವರ್ಣದ , ಶಂಖಚಕ್ರಗಳನ್ನು ಧರಿಸಿರುವ ಸವಿತೃನಾಮಕ ಸೂರ್ಯನಾರಾಯಣನ ಪರಮಾನುಗ್ರಹದಿಂದ ಮಗುವಿನ ತೇಜಸ್ಸು ವೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ಕರಿ ಎರೆಯುತ್ತಾರೆ . 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*******

ಸಂಕ್ರಮಣ  ಎಂದರೇನು ?

ಸೂರ್ಯನ ಪಥ ಬದಲಾವಣೆಯೇ ಸಂಕ್ರಮಣ ..ಸೂರ್ಯನ ಮಕರ ರಾಶಿಗೆ ಪ್ರವೇಶವೇ  ಮಕರ ಸಂಕ್ರಮಣ ..

ಸೂರ್ಯನ ಗತಿಗೆ ಅನುಗುಣವಾಗಿ, ಅಂದರೆ ಸಂಕ್ರಮಣ  ಕಾಲದಲ್ಲಿ, ಚಳಿಗಾಲ ಹೋಗುವ ಸಮಯ ಮತ್ತು ಬೇಸಿಗೆ ಕಾಲ ಸಮೀಪೀಸುವ ಸಮಯ  ..

ಮುದ್ಗಾನ್ನ, ಎಳ್ಳು ಸೇಜ್ಜೇ ಬೆಣ್ಣೆಯ  ಉಪಯೋಗ ಏಕೆ ?

ಧನುರ್ಮಾಸದ ಕೊನೆಯ ದಿನಗಳು ..ಧನುರ್ಮಾಸದಲ್ಲಿ ಚಳಿ ಜಾಸ್ತಿ .ನಮ್ಮ ದೇಹ ಬೆಚ್ಚಗಿರಲು  ಶಾಖ ಉತ್ಪತ್ತಿ ಮಾಡುವ ಆಹಾರ ಪದಾರ್ಥ ಗಳು ಬೇಕು ..ಅದಕ್ಕಾಗಿಯೇ ಎಳ್ಳು  ಮತ್ತು ಸೇಜ್ಜೇ  ಬೆಣ್ಣೆಯಲ್ಲಿ  ಶಾಖ ಉಂಟುಮಾಡುವ ಗುಣವಿರುವುದರಿಂದ ಅವುಗಳನ್ನು ಉಪಯೋಗಿಸಿ ಆಹಾರ ತಯಾರಿಸುತ್ತಾರೆ .
ಚಳಿಗಾಲದಲ್ಲಿ ದೇಹದ ಬೆಳವಣಿಗೆ ಚೆನ್ನಾಗಿರುತ್ತೆ ..ಅದಕ್ಕೆ  ಪೌಷ್ಟಿಕತೆ ಒದಗಿಸುವ ಮತ್ತು ಶಾಖ ಒದಗಿಸುವ  ಮುದ್ಗಾನ್ನ  ಉಪಯೋಗಿಸುತ್ತಾರೆ .

ಚಳಿಗೆ ದೇಹದ ಕಾಂತಿಯೂ ಕುಂದುತ್ತೇ ..ಅದನ್ನು ತಡೇಯಲು ಎಳ್ಳೆಣ್ಣೆ,, ಎಳ್ಳಿನ ಪಡಾರ್ಥ ತಿಂದಾಗ ನಮ್ಮ ದೇಹಕ್ಕೆ ಲಭೀಸುತ್ತದೇ . ಮತ್ತು ಬೆಣ್ಣೆಯಿಂದಲೂ  ಎಣ್ಣೆ  ಒದಗುತ್ತದೆ ,

ನಮ್ಮ ಹಿರಿಯರು  ಸುಲಭವಾಗಿ ದೊರೆಯುವ ವಸ್ತುಗಳಿಂದ ದೇಹಾರೋಗ್ಯ ಕಾಪಾಡಿಕೊಳ್ಳುವ ಮಾರ್ಗ ಅನುಸರೀಸುತ್ತಿದ್ದರು ..ದೈವ ಪೂಜೆಯ ಜೊತೆ ಜೊತೆಗೆ ಆರೋಗ್ಯ ಕಾಪಾಡುವ ಸುಲಭ ಉಪಾಯ ಕಂಡುಹಿಡಿದಿದ್ದರು ...


ನಮ್ಮ ಸಂಪ್ರದಾಯಗಳನ್ನು ತಪ್ಪದೇ ಆಚರಿಸೋಣ . ಹಿರಿಯರು ತೋರಿದ ಮಾರ್ಗದಲ್ಲಿ ನಡೆದು ನಮ್ಮತನ ಉಳಿಸೋಣ ..
*******

ಸಂಕ್ರಾಂತಿ ಎಂದರೆ ಚಲನೆ,ಜೀವಂತಿಕೆ, ಚೈತನ್ಯ ಎಂಬುದಾಗಿದೆ. ಚಲನೆಯಿದ್ದಾಗ ಮಾತ್ರ ಜೀವಂತಿಕೆ,ಚೈತನ್ಯ ಎಲ್ಲವೂ ಸಾದ್ಯ.
"ಸಂಕ್ರಾತಿ" ಎಂಬ ಪದ "ಸತ್ ಬದಲಾವಣೆ" ಯ ಸೂಚಕವಾಗಿದೆ. ಈ ಸಮಯದಲ್ಲಿ ಸೂರ್ಯನು ಸಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಿತ್ಯಂತರಗೊಂಡು ತನ್ನ ಪಥವನ್ನೇ ಬದಲಾಯಿಸುತ್ತಾನೆ. ಇದರಿಂದಾಗಿ ಪ್ರಕೃತಿಯಲ್ಲಿ ಹಸಿರು ಆವರಿಸಿ ಸಮೃದ್ಧಿ ಪಸರಿಸುತ್ತದೆ.ಈ ಹಿನ್ನೆಲೆಯಲ್ಲಿ  ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಕ್ಷಣಿಕ ಎಂಬುದೇ ಸತ್ಯ.
ಅದ್ದರಿಂದ ಮನುಷ್ಯರಾದ ನಾವುಗಳು ಅಪ್ರೀತಿ,ಅಸಹಿಷ್ಣತೆ,ಅಸಹಕಾರ,ಅಸಹನೆ, ಅಹಂಕಾರ, ಅಜ್ಞಾನ ಹಾಗೂ ಅಂಧಕಾರ ಗಳನ್ನು ತೊರೆದು ಬದುಕಿರುವಷ್ಟು ದಿನಗಳಲ್ಲಿ ಎಲ್ಲರೊಂದಿಗೆ ಬೆರೆತು ಒಂದಾಗಿ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ.
*****

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ.  ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ,  ಅಂದರೆ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಎಂದರ್ಥ. ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು.

💠ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು.

💠ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.

💠ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುತ್ತದೆ.

💠ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ  ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಲಾಗುವುದು.

💠ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯವಿದೆ.

💠ಈ ಹಬ್ಬದ ಒಂದು ವಿಶೇಷವೆಂದರೆ ದನಕರುಗಳಿಗೆ ಮೈ ತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.

 🔯🕉ಉತ್ತರಾಯಣ ಪುಣ್ಯ ಕಾಲ🕉🔯

💠ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 14ಅಥವಾ 15ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ.

💠ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು.

💠ಉತ್ತರಾಯಣ, ದೇವತೆಗಳ ಕಾಲವಾದರೆ ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

 💠ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡುವುದಲ್ಲದೆ ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಸೂರ್ಯನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.
*****

ಮಕರಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದಮಹತ್ವ

              🌹ಸಂಚಿಕೆ-1🌹
                       
ಮಕರಸಂಕ್ರಮಣ ಉತ್ತರಾಯಣದ ಪರ್ವಕಾಲ . ( ಈ ದಿನ ಅಧಿಕಾರಿಗಳು ದೇವಪೂಜೆಯಾದ ಬಳಿಕ ಪಿತೃತರ್ಪಣಾದಿಗಳನ್ನು ಕೊಡಬೇಕು ) ಎಳ್ಳು, ಕಬ್ಬು ,ಸಕ್ಕರೆ ಅಚ್ಚುಗಳನ್ನು ದೇವರಿಗೆ ಸಮರ್ಪಣೆ ಮಾಡಿ ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯುವುದು ರೂಢಿ.
ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಹಚ್ಚಿಕೊಂಡು ಎಲ್ಲರೂ ಸ್ನಾನಮಾಡಲೇಬೇಕು.ಹೆoಗಸರು, ಮಕ್ಕಳು ಕೂಡ.ಆದರಿoದ ಮನುಷ್ಯ ನಿರೋಗಿಯಾಗುವನೆಂದು
ಧರ್ಮಶಾಸ್ತ್ರ  ಹೇಳುತ್ತದೆ.

ರವಿ ಸಂಕ್ರಮಣೆ ಪ್ರಾಪ್ತೇನ ಸ್ನಾಯದ್ಯಸ್ತು ಮಾನವಃ
ಸಪ್ತಜನ್ಮಸು ರೋಗಿ ಸ್ಯಾತ್ ನಿರ್ಧನಶ್ಚೈವ ಜಾಯತೇ  ||
ಸಂಕ್ರಮಣದಂತಹ ಪರ್ವಕಾಲದಲ್ಲಿ ಸ್ನಾನ ಮಾಡದವನು ಏಳು ಜನ್ಮಗಳಲ್ಲಿ ರೋಗಿಯಾಗಿಯೂಁ ದರಿದ್ರನಾಗಿಯೂ ಹುಟ್ಟುವನು.

ಹೆಂಗಸರು ಭೋಗಿಹಬ್ಬದ ದಿನ ಪ್ರಾತಃಕಾಲದಲ್ಲಿ ಅಭ್ಯಂಗ ಮಾಡಿಕೊಂಡು ಸಿಹಿಕುಂಬಳಕಾಯಿಯನ್ನು.ದಾನಕೊಡಬೇಕು . ಉತ್ತರಾಯಣ ಪರ್ವದಿನದಂದು ಹೆಂಗಸರು ತಲೆಯಮೇಲೆ ಸ್ನಾನ ಮಾಡಬಾರದು.ಆದರೆ ಎಳ್ಳು ಮೈಗೆ ತಿಕ್ಕಿಕೊಂಡು ಸ್ನಾನ ಮಾಡಬೇಕು. ದೇವರಿಗೆ ಸಮರ್ಪಿತವಾದ ಎಳ್ಳು ಬೆಲ್ಲವನ್ನು ತಿನ್ನಬೇಕು ಅದನ್ನು ಹಿರಿಯರಿಗೆ ದಾನ ಮಾಡಬೇಕು .

ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತಿಲೋದಕೀ |
ತಿಲಬುಕ್ ತಿಲದಾತ ಚ ಷಟ್ತಿಲ.  ಪಾಪನಾಶನಃ  ||

ಮಕರ ಸಂಕ್ರಮಣ ದಂದು ಯಾರು ಎಳ್ಳು ಹಚ್ಚಿ  ಸ್ನಾನ,ಎಳ್ಳು ದಾನ ಎಳ್ಳು ಭಕ್ಷಣ,ಎಳ್ಳಿನಿಂದ ತರ್ಪಣ  ಎಳ್ಳೆಣ್ಣೆಯ ದೀಪಹಚ್ಚುವರೋ ಅವರ ಪಾಪಗಳು ನಾಶವಾಗುವುದು.
*********

ಮಕರಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದಮಹತ್ವ

               🌺ಸಂಚಿಕೆ-2🌺

ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದು.
ಅಯಣ ಸಂಕ್ರಮಣಗಳು ಎರಡು
1)ಉತ್ತರಾಯಣ -ರವಿ(ಸೂರ್ಯನು)ಯು.ಭೂ ಮಧ್ಯೆಯ ರೇಖೆಗೆ ಉತ್ತರಾಭಿಮುಖವಾಗಿ ಚಲಿಸುವ  ಕಾಲವಾಗಿದೆ
2)ದಕ್ಷಿಣಾಯಣ -ರವಿಯು ಭೂ ಮಧ್ಯೆ  ರೇಖೆಗೆ ದಕ್ಷಿಣಾಭಿಮುಖವಾಗಿ ಚಲಿಸುವ ಕಾಲವಾಗಿದೆ

ಉತ್ತರಾಯಣ ಮಪ್ಯುಕ್ತಂ ಮಕರಸ್ತೇದಿವಾಕರೇ  |
ಕರ್ಕಾಟಾದಿಸ್ತೀತೇ ಭಾನೌ ದಕ್ಷೀಣಾಯಣ ಮುಚ್ಯತೇ ||
ಉತ್ತರಾಯಣದಲ್ಲಿ ಸೂರ್ಯನು ಬಲಿಷ್ಠ ನಾಗಿರುವನು ದಕ್ಷಿಣಾಯಣದಲ್ಲಿ ಬಲಹೀನನಾಗಿರುವನು.
ಮಕರರಾಶಿಗೆ ಸೂರ್ಯನು ಪ್ರವೇಶಿ ಸಿದ ಕಾಲದ ನಂತರ ಮುವತ್ತು ಘಳಿಗೆಗಳು ಪುಣ್ಯಕಾಲವಾಗಿದೆ

ರವಿಸಂಕ್ರಮಣೆ ಪುಣ್ಯೇ ನ ಸ್ನಾಯಾದ ಯದಿ ಮಾನವಃ |
ಸಪ್ತಜನ್ಮ ಭವೇದ್ ರೋಗಿ ದುಃಖಭಾಗಿ ಚ ಜಾಯತೇ ||
ಯಾವುದೇ ಸಂಕ್ರಮಣದಲ್ಲಿ ಪ್ರತಿಯೊಬ್ಬರು ಸ್ನಾನವನ್ನು ಮಾಡಲೇಬೇಕು.ಸ್ನಾನವನ್ನು ಮಾಡದಿದ್ದರೇ ಏಳು ಜನ್ಮಗಳಲ್ಲಿ ರೋಗಿಯಾಗುವನು ದುಃಖಿಯಾಗುವನು.

ಮಕರ ತಿಲದಾನದ ಮಹತ್ವ

ಸಂಕ್ರಮಣದಲ್ಲಿ ಆದರಲ್ಲೂ ಮಕರಸಂಕ್ರಮಣದಲ್ಲಿ ತಿಲ (ಎಳ್ಳು)ದಾನವು ಬಹಳ ಶ್ರೇಷ್ಠವಾದದ್ದು .

ಉತ್ತರಾಯಣದಲ್ಲಿ ತಿಲಸ್ನಾನ ತಿಲಯುಕ್ತ ವಾದ ಪಂಚಗವ್ಯ ಪ್ರಾಶನ  ತಿಲಭಕ್ಷಣ ತಿಲೋದ್ವರ್ತನ ಪಿತೃಗಳಿಗೆ ತಿಲತರ್ಪಣ ತಿಲ ಹೋಮ ಹೀಗೆ ಆರು ಕರ್ಮಗಳು ಕಡ್ಡಾಯ.ಮತ್ತು ತಾಮ್ರ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ದಕ್ಷಿಣೆ ಸಮೇತದಾನ ಮಾಡಬೇಕು .

ಮಕರ ಸಂಕ್ರಮಣದಲ್ಲಿ ಎಳ್ಳೆಣ್ಣೆ ಯಿoದ ದೀಪಗಳನ್ನು  ಹಚ್ಚಬೇಕು.
ಮಕರಮಾಸದಲ್ಲಿ ತಿಲವನ್ನು ಭಕ್ಷಿಸುವುದರಿಂದ  ದೇಹವು ಕಾಂತಿಯುಕ್ತವಾಗುವುದು .

ಸೂರ್ಯನ ಪ್ರೀತಿಗಾಗಿ ಮಾಣಿಕ್ಯ ,ಗೋಧಿ ,ಕೆಂಪುವಸ್ತ್ರ ಬೆಲ್ಲ ,ತಾಮ್ರ ಇವುಗಳನ್ನು ದಾನ ಮಾಡಬೇಕು.

ಆಯುರಭಿವೃದ್ಧಿಗಾಗಿ
ಬೆಲ್ಲವನ್ನು ದಾನವಾಗಿ ನೀಡುವ ಪದ್ದತಿಯಿದೆ. ಈ ಎಳ್ಳಿನ  ಜೊತೆಗೆ ಬೆಲ್ಲವನ್ನು ಸೇರಿಸಿ ನೀಡುವುದು ಆಯುರಭಿವೃದ್ಧಿಗಾಗಿ ಮತ್ತು ಸಂಕ್ರಾಂತಿ ಪುರುಷನಿಗೆ ಇಷ್ಟವಾದದ್ದು ಸಕ್ಕರೆ ,ಬೆಲ್ಲ ಬವಾದಿ ಹನ್ನೊoದು ಕರಣಗಳಲ್ಲಿ ಉಂಟಾಗುವ ಸಂಕ್ರಾಂತಿ ಪುರುಷನು ಕ್ರಮವಾಗಿ ಅನ್ನ ,ಪಾಯಸ,ಹಾಲು ,ಮೊಸರು ,ಮೃಷ್ಟಾನ್ನ ,ಬೆಲ್ಲ ,ಸಕ್ಕರೆ  ಹವಿಸ್ಸು ಇವುಗಳನ್ನು  ಭಕ್ಷೀಸುವನು .
ಇವುಗಳನ್ನು  ಸಂಕ್ರಮಣ ದಿವಸದಂದು ಬ್ರಾಹ್ಮಣಭೋಜನ ಮಾಡಿಸಿದರೆ ಮೃಷ್ಟಾನ್ನ ಇವುಗಳನ್ನು  ದಾನ ಮಾಡಿದಂತಗುವುದು.ಇದರಿಂದ ಅಶುಭ ಪರಿಹಾರವಾಗುತ್ತದೆ .ಎಳ್ಳಿನ ಜೊತೆಯಲ್ಲಿ ಬೆಲ್ಲ ಹಾಗೂ ಸಕ್ಕರೆಅಚ್ಚುಗಳನ್ನು ನೀಡುವುದರಿಂದ ಸಂಕ್ರಾಂತಿ ಪುರುಷನು ತೃಪ್ತನಾಗುವನು.

ಉತ್ತರಾಯಣ ಪುಣ್ಯಕಾಲದಲ್ಲಿ
ಕಬ್ಬು ದಾನ ವಸ್ತ್ರದಾನ
ಸಕ್ಕರೆಅಚ್ಚು  ಕುಂಬುಳಕಾಯಿ ದಾನ ತಿಲದಾನ ಸುವರ್ಣದಾನ ಬೆಲ್ಲದಾನ  ಇವುಗಳನ್ನು ಯೋಗ್ಯ ಬ್ರ್ರಾಹ್ಮಣರಿಗೆ  ದಾನಮಾಡಬೇಕು

ಎಳ್ಳು ಬೀರುವ ಕ್ರಮ -

ಎಳ್ಳು ಬೆಲ್ಲ , ಸಕ್ಕರೆ ಅಚ್ಚು ,ಬೋರೆಹಣ್ಣು ಸಿಹಿಕುಂಬಳಕಾಯಿ ,ಕಬ್ಬು ದಕ್ಷಿಣೆ ,ತಾoಬೂಲ ಇವುಗಳನ್ನು ದಾನ ಕೊಡಬೇಕು ಬೋರೆಹಣ್ಣು ಸಂಕ್ರಾಂತಿ ಪುರುಷನ ಆಹಾರವಾಗಿದೆ. ಆದ್ದರಿಂದ ಅದನ್ನು ದಾನ ಕೊಡಬೇಕು

ಇಂದು ಅಧಿಕಾರಿಗಳು ತಿಲದಿಂದ ತರ್ಪಣವನ್ನು ಕೊಡಬೇಕು ರಾತ್ರಿಯಲ್ಲಿ ಉಪಾವಾಸವಿರಬೇಕು

ಸಂಕ್ರಾಂತಿ ಪುರುಷನಿಗೆ ಪ್ರಿಯವಾದ ದ್ದು  ಹಾಲು ,ಪಾಯಸ ,ಅನ್ನ ,ಬೆಲ್ಲ ,ಮಧು ,ಸಕ್ಕರೆ ,ಆಜ್ಯ(ತುಪ್ಪ) ಇವುಗಳನ್ನು ಸೇರಿಸಿ ಗುಡೋದನ (ಪೊಂಗಲ್)ತಯಾರಿಸಿ ಭಗವಂತ ನಿಗೆ ನಿವೇದಿಸಿದರೆ ಕಾಲನಿಯಾಮಕನಾದ ಶಿಂಶುಮಾರರೂಪೀ ಪರಮಾತ್ಮನು ಪ್ರೀತನಾಗುವನು ಇದರಿಂದ ಸಂಕ್ರಾಂತಿ ಪುರುಷನು ತುಷ್ಟನಾಗುವನು ಸಂಕ್ರಮಣ ದೋಷವು ಪರಿಹಾರವಾಗುತ್ತದೆ

ಉತ್ತರಾಯಣ ಪರ್ವಪುಣ್ಯಕಾಲದಲ್ಲಿ ವಸ್ತ್ರದಾನ ಸುವರ್ಣದಾನ , ಎಳ್ಳುದಾನ ಈ ಮೂರು ಅತ್ಯಂತ ಶ್ರೇಷ್ಠ ದಾನವಾಗಿದ್ದು ಎಲ್ಲರೂ ಈ ಮೂರು ದಾನಮಾಡಬೇಕು
                || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾಅನುಷ್ಠಾನ ಚಿಂತನ ಗ್ರೂಪ್
*****

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳನ್ನು ಪಂಚಾಂಗದ ಪ್ರಕಾರ ಮಾಡುತ್ತೀವಿ. ಪಂಚಾಂಗವು ಚಂದ್ರಮಾನ ಅಥವಾ ನಿರಯನ ಅಂದರೆ ಚಂದ್ರನ ಚಲನೆಯನ್ನು ಆಧರಿಸಿ ತಿಥಿ, ನಕ್ಷತ್ರ ಎಲ್ಲ ನಿರ್ಧರಿಸುತ್ತಾರೆ. ಸಂಕ್ರಾಂತಿ ಹಬ್ಬವು ಇದಕ್ಕೆ ಹೊರತು. ಸಂಕ್ರಾತಿ ಹಬ್ಬವು ಸಾಯನ ಅಥವಾ ಸೂರ್ಯನ ಚಲನೆಯನ್ನು ಆಧರಿಸಿದೆ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸುವ ಹಬ್ಬ ಈ ಸಂಕ್ರಾಂತಿ ಹಬ್ಬ. (ಮಕರ - ಮಕರ ರಾಶಿ, ಸಂಕ್ರಮಣ - ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟುವ ಸಮಯ) ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೀವಿ. ಸೂರ್ಯನು ಉತ್ತರಾಭಿ ಮುಖವಾಗಿ ಪರಿಭ್ರಮಣೆ ಶುರು ಮಾಡುತ್ತಾನೆ.ಆದ್ದರಿಂದ ಉತ್ತರಾಯಣ ಕಾಲ ಎಂದೂ ಕರೆಯುತ್ತಾರೆ. ಹೀಗಾಗಿ ದಿನದ ಅವಧಿ ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಸೂರ್ಯನು ಮೇಲೇರಿ ಪ್ರಕಾಶ ಬೀರುಬಂತೆ, ನಮ್ಮ ಬಾಳಲ್ಲೂ ಕತ್ತಲೆ ಹೋಗಿ, ಹೊಸ ಬೆಳಕು ಬರುತ್ತದೆ ಎಂಬ ಸಂಕೇತವಾಗಿ ಈ ಹಬ್ಬವನ್ನುಆಚರಿಸುತ್ತಾರೆ.

ಸಂಕ್ರಾತಿ ಹಬ್ಬ ನಾಡ ಹಬ್ಬವೂ ಹೌದು. ಭಾರತ ದೇಶದೆಲ್ಲೆಡೆ ಈ ಹಬ್ಬವನ್ನು ಮಾಡುತ್ತಾರೆ. ದಕ್ಷಿಣದಲ್ಲಿ ಸಂಕ್ರಾಂತಿ, ಪೊಂಗಲ್ ಎನ್ನುತ್ತಾರೆ, ಉತ್ತರದಲ್ಲಿ ಲೋಹರಿ, ಕಿಚಿರಿ ಎಂದು ಆಚರಿಸುತ್ತಾರೆ. ಇದು ಸುಗ್ಗಿಯ ಹಬ್ಬ. ರೈತರು ತಾವು ಬೆಳೆದ ಬೆಳೆಯನ್ನು ಕೊಯ್ಲು ಮಾಡಿ ಫಸಲು ಸಂಗ್ರಹಿಸಿ ಅದಕ್ಕೆ ಪೂಜೆ ಮಾಡುತ್ತಾರೆ. ದವಸಧಾನ್ಯಗಳ ಸಮೃದ್ಧಿ ಇಂದ ನಮ್ಮ ಜೀವನವೂ ಸಮೃದ್ಧಿಯಾಯಿತು ಎಂದು ಖುಷಿಪಡುವ ಸಮಯ.

ಕನ್ನಡಿಗರೂ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತೀವಿ ಅಲ್ಲವೇ .ಎಲ್ಲ ಹಬ್ಬಗಳಂತೆ ಈ ದಿನವೂ ಮನೆಯನ್ನು ಸ್ವಚ್ಛ ಮಾಡಿ ಅಲಂಕರಿಸುತ್ತೀವಿ. ಮನೆಯ ಮುಂದೆ ವಿಶೇಷ ರಂಗೋಲಿ ಬರೆಯುತ್ತಾರೆ. ಈ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾ ವಿಧಾನ / ವ್ರತ ಇಲ್ಲ. ಮಂಗಳ ಸ್ನಾನ ಮಾಡಿ ಮನೆಯ ದೇವರಿಗೆ ಪೂಜೆ ಮಾಡುತ್ತಾರೆ.ಈ ಹಬ್ಬದ ವಿಶೇಷತೆ ಎಳ್ಳು ಮತ್ತು ಸಕ್ಕರೆ ಅಚ್ಚು. ಬೆಲ್ಲ , ಕೊಬ್ಬರಿ, ಕಡಲೇಕಾಯಿ ಬೀಜ, ಹುರಿಗಡಲೆ, ಎಳ್ಳು - ಈ ಐದು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿ ತಯಾರಿಸುತ್ತಾರೆ.ಎಳ್ಳ ಸಕ್ಕರೆ ಅಚ್ಚನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಪೂಜೆಯ ನಂತರ ಮನೆಯವರೆಲ್ಲ ತಿನ್ನುವುದು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬ ನುಡಿಯಂತೆ ಎಲ್ಲರೂ ಸಿಹಿಯಾದ, ಒಳ್ಳೆಯ ಮಾತಾಡಿ, ಒಳ್ಳೆ ವಿಷಯಗಳನ್ನು ಯೋಚಿಸಿ, ಒಳ್ಳೆ ಕಾರ್ಯಗಳನ್ನು ಮಾಡಿರಿ.

ಎಳ್ಳು, ಸಕ್ಕರೆ ಅಚ್ಚು , ಕಬ್ಬು, ಹಣ್ಣುಗಳನ್ನು ಬಂಧು - ಬಾಂಧವರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಮದುವೆಯ ನಂತರ ಹೆಣ್ಣು ಮಗಳು ಸುಮಂಗಲಿಯರಿಗೆ ಎಳ್ಳು ಬೀರಿ ಆಶಿರ್ವಾದ ಪಡೆಯುತ್ತಾರೆ . ಮಗು ಹುಟ್ಟಿದ ವರ್ಷ ಎಳ್ಳು ಜೊತೆಗೆ ಬೆಳ್ಳಿ ಕೃಷ್ಣ / ಬೆಳ್ಳಿ ಬಟ್ಟಲು ಬೀರುವ ಪದ್ಧತಿ ಕೆಲವು ಮನೆಗಳಲ್ಲಿವೆ. ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಂಕ್ರಾಂತಿ ದಿನ ಸಂಜೆ ಆರತಿ ಮಾಡುತ್ತಾರೆ. ಊಟಕ್ಕೆ ಸಾಮಾನ್ಯವಾಗಿ ಸಿಹಿ ಮತ್ತು ಖಾರ ಪೊಂಗಲ್ /ಹುಗ್ಗಿ ಮಾಡುತ್ತಾರೆ. ಒಟ್ಟಿನಲ್ಲಿ ಸಂಕ್ರಾತಿಹಬ್ಬ ಅಂದರೆ ಸಡಗರದ ಹಬ್ಬ.

ಈ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರಿಗೂ ಸಂತಸ ಸಮ್ರುಧ್ಧಿ ತರಲಿ, ಅಮ್ಮನವರ ಆಶಿ೯ವಾದ ಸದಾ ತಮಗೆ ದೊರಕಲಿ
ಸರಳ ಪರಿಹಾರ
********

ಮಕರ ಸಂಕ್ರಾಂತಿ ಎಂಬ ಸುಗ್ಗಿಯ ಹಿಗ್ಗಿನ ಹಬ್ಬ...
ಎಳ್ಳು ಬೀರುವುದು ಮೈಸೂರು ಕಡೆಯ ಸಂಪ್ರದಾಯ
*ಲೇಖಕರು- ಟಿ.ಎಂ.ಸತೀಶ್
ಮಾಗಿಯ ಚಳಿಗೆ ಮುದುಡಿದ ಮನಕ್ಕೆ ಮುದ ನೀಡುವ ಮಂಗಳಕರವಾದ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬಕ್ಕೆ ಹಲವಾರು ಹೆಸರುಗಳಿವೆ. ಕೆಲವರು ಹಿಗ್ಗಿನಿಂದ ಸುಗ್ಗಿ ಎಂದರೆ, ಮತ್ತೆ ಕೆಲವರು ಪೊಂಗಲ್ ಎನ್ನುತ್ತಾರೆ. ಶ್ರೀಸಾಮಾನ್ಯರು ಸಂಕ್ರಾಂತಿ ಎಂದು ಕರೆದರೆ, ಪಂಡಿತರು ಮಕರ ಸಂಕ್ರಮಣ ಎಂದು ಹೇಳುತ್ತಾರೆ. 
ವಾಸ್ತವವಾಗಿ ಸೂರ್ಯುದೇವನು ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುವ ದಿನವೇ ಸಂಕ್ರಾಂತಿ. ಇದು ಸಂಕ್ರಮಣ ಕಾಲವಾದ್ದರಿಂದ ಇದಕ್ಕೆ ಮಕರ ಸಂಕ್ರಮಣ ಎಂಬ ಹೆಸರು. ಈ ದಿನವನ್ನು ಉತ್ತರಾಯಣ ಪುಣ್ಯಕಾಲವೆಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಜನವರಿ ೧೪ರಂದೇ ಬರುವ ಈ ಹಬ್ಬ ಕೆಲವೊಮ್ಮೆ ಜ.೧೫ರಂದು ಬರುವುದೂ ಉಂಟು.
ಜನವರಿ ತಿಂಗಳ ಮಧ್ಯಭಾಗ ಸುಗ್ಗಿಯ ಕಾಲ. ಹಿಂಗಾರು ಬೆಳೆ ಬರುವ ಕಾಲ. ಹೊಸ ಭತ್ತದ ಪಸಲು ಬರುವ ಕಾಲ. ಹೀಗಾಗಿ ಸಮೃದ್ಧವಾಗಿ ಬೆಳೆದ ಭತ್ತ ಕುಟ್ಟಿ (ಈಗ ಮಿಲ್ ಮಾಡಿಸಿ)ದ ಹೊಸ ಅಕ್ಕಿಯಲ್ಲಿ ಸಿಹಿ ಮಾಡಿ ಅನ್ನ ನೀಡಿದ ದೇವರಿಗೆ ಕೃತಜ್ಞತೆ ಅರ್ಪಿಸುವುದೇ ಈ ಹಬ್ಬದ ಸಂಕೇತ.
ಹೊಸ ಮಡಕೆಯಲ್ಲಿ, ಹೊಸ ಅಕ್ಕಿಯಲ್ಲಿ ಮಾಡುವ ಸಿಹಿ ಪೊಂಗಲ್ ಬಲು ರುಚಿ. ಅದಕ್ಕಾಗಿಯೇ ವಿಶೇಷವಾಗಿ ಎಲ್ಲರ ಮನೆಯಲ್ಲೂ ಅಂದು ಸಿಹಿ ಪೊಂಗಲ್ ಮಾಡುತ್ತಾರೆ. ಹೀಗಾಗೇ ಈ ಹಬ್ಬಕ್ಕೆ ಪೊಂಗಲ್ ಎಂದೂ ಹೆಸರು ಬಂದಿದೆ. ಮೈಸೂರು ಸೀಮೆಯಲ್ಲಿ ಪೊಂಗಲ್‌ಗೆ ಹುಗ್ಗಿ ಎನ್ನುತ್ತಾರೆ.
ಸಂಕ್ರಾಂತಿ ಸುಗ್ಗಿಯ ಕಾಲವಾದ್ದರಿಂದ ಈ ಹಬ್ಬಕ್ಕೆ ಸುಗ್ಗಿ ಎಂಬ ಹೆಸರೂ ಬಂದಿದೆ. ಈ ದಿನದ ಮತ್ತೊಂದು ವಿಶೇಷ ಬಿಳಿ ಎಳ್ಳು, ಕೊಬ್ಬರಿ,ಹುರಿಗಡಲೆ ಹಾಗೂ ಬೆಲ್ಲ ಮಿಶ್ರಿತ ಖಾದ್ಯ. ಇದು ಹಳೆ ಮೈಸೂರು ಭಾಗದಲ್ಲಿ ಎಳ್ಳು ಎಂದೇ ಖ್ಯಾತವಾಗಿದೆ.
ಅಂದು ಬೆಳಗ್ಗೆ ಬೇಗನೆ ಎದ್ದು, ತೈಲಾಭ್ಯಂಜನ ಮಾಡಿ, ಕುಲದೇವರ ಮುಂದೆ ಮಡಿಯಲ್ಲಿ ಮಾಡಿದ ಎಳ್ಳು -ಬೆಲ್ಲ, ಸಕ್ಕರೆ ಅಚ್ಚನ್ನಿಟ್ಟು ನೇವೇದ್ಯ ಮಾಡಿ, ಮನೆಗೆ ಬಂದವರಿಗೆಲ್ಲಾ ಎಳ್ಳು ನೀಡಿ - ಒಳ್ಳೆಯ ಮಾತನಾಡಿ ಎನ್ನುವುದು ವಾಡಿಕೆ.
ಸಂಜೆ 5 ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ (ಮಣಿ) ಹಾರ ಹಾಕಿ ಮನೆಯಲ್ಲಿ ಎಲಚಿ ಹಣ್ಣು ಹಾಗೂ ಹಣವನ್ನು ಮೇಲಕ್ಕೆ ಎರಚಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹೇಳುತ್ತಾ ಮಕ್ಕಳಿಗೆ ಆರತಿ ಮಾಡುತ್ತಾರೆ. ಹೆಣ್ಣು ಮಕ್ಕಳು, ಹೊಸವಸ್ತ್ರ ತೊಟ್ಟು, ಅಲಂಕಾರ ಮಾಡಿಕೊಂಡು, ಮನೆ ಮನೆಗೆ ಹೋಗಿ ಎಳ್ಳು ಬೀರುತ್ತಾರೆ.
ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಸಂಕ್ರಾಂತಿ ಬಲು ಸಡಗರದ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ಜಲ್ಲಿಕಟ್ಟು ಎಂಬ ದನ ಓಡಿಸುವ ಕ್ರೀಡೆ ಅಲ್ಲಿ ಪೊಂಗಲ್ ಭಾಗವಾಗಿದೆ. ಮೈಸೂರು ಭಾಗದಲ್ಲಿ ಸಂಕ್ರಾಂತಿಯ ಎಳ್ಳು ಬೀರುವ ಸೊಬಗು, ಸೊಗಸು ಬಲು ಚಂದ. ಆ ದಿನ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮಗ್ಗಿನ ಜಡೆ ಹಾಕಿಕೊಂಡು, ಹೊಸ ಸೀರೆಯುಟ್ಟು ಬಂಧು ಮಿತ್ರರ ಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು-ಬೆಲ್ಲ,ಕರ್ನಾಟಕದಲ್ಲಿದೆ. ಗಂಡು ಮಕ್ಕಳಾದವರು ಬೆಳ್ಳಿಯ ಕೃಷ್ಣನ ವಿಗ್ರಹವನ್ನೂ, ಹೆಣ್ಣು ಮಕ್ಕಳಾದವರು ಲಕ್ಷ್ಮೀ ವಿಗ್ರಹವನ್ನೂ ಎಳ್ಳಿನ ಜೊತೆ ಕೊಡುತ್ತಾರೆ. ಇನ್ನು ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಉದ್ದನೆಯ ರೇಷ್ಮೆಲಂಗ, ದಾವಣಿ ಧರಿಸಿ ಎಳ್ಳು ಬೀರಿ ಸಂಭ್ರಮಿಸುತ್ತಾರೆ. ಸಂಕ್ರಾಂತಿ ಮುನ್ನಾ ದಿನವನ್ನು ಬೋಗಿಹಬ್ಬ ಎಂದೂ6;, ಮಾರನೆ ದಿನ ಕನೂ ಹಬ್ಬ ಎಂದೂ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಈ ಹಬ್ಬವನ್ನು ಕೃತಜ್ಞತೆಯ ಸಂಕೇತವಾಗಿ ಆಚರಿಸಲಾಗುತ್ತದೆ. ದವಸ ಧಾನ್ಯ ನೀಡುವ ಭೂತಾಯಿಗೆ, ಧಾನ್ಯದ ರಾಶಿಗೆ,ಕೃಷಿ ಕಾರ್ಯಕ್ಕೆ ಪೂರಕವಾದ ಎತ್ತಿನ ಬಂಡಿಗೆ, ದನಗಳಿಗೆ ಅಲಂಕಾರ ಮಾಡಿ ಪೂಜಿಸುತ್ತಾರೆ. ಜಾನುವಾರುಗಳು ಬೆಚ್ಚದಿರಲಿ, ಬೆದರದಿರಲೆಂದು ಬೆಂಕಿಯ ಮೇಲೆ ಹಾರಿಸುತ್ತಾರೆ. ಸುಗ್ಗಿ ಸಮೃದ್ಧಿಯ ಸಂಕೇತವಾಗಿ ಆಚರಿಸುವ ಹಿಗ್ಗಿನ ಹಬ್ಬ.
********

ಮಕರ ಸಂಕ್ರಾಂತಿ ಮತ್ತು ಮಂಕು ರೋಮನ್ನರು

ನಾವು ಆಚರಿಸುವ ಬಹುತೇಕ ಎಲ್ಲಾ ಹಬ್ಬಗಳು ಚಾಂದ್ರಮಾನ ಪಂಚಾಂಗದ ಆಧಾರಿತ. ಅಮವಾಸ್ಯೆಯಂದು ಶಿವರಾತ್ರಿ, ಪಾಡ್ಯಮಿಯಂದು ಬಲಿಪಾಡ್ಯಮಿ, ಚತುರ್ಥಿ ಯಂದು ಗಣೇಶ ಚತುರ್ಥಿ ನವರಾತ್ರಿ ಹೀಗೆ..

ಮಕರ ಸಂಕ್ರಾಂತಿಯ ವಿಷೇಶತೆ ಏನೆಂದರೆ ಇದು ಸೂರ್ಯನ ಕೇಂದ್ರಿತ ಹಬ್ಬ. ಸಂಕ್ರಮಣ ಎಂಬುದರ ಅರ್ಥ ಚಲಿಸುವಿಕೆ ಅಂತಾ. ವರ್ಷದಲ್ಲಿ ಹನ್ನೆರಡು ರಾಶಿಗಳಿವೆ ಪ್ರತಿ ಮಾಸ ಸೂರ್ಯ ಮತ್ತು ಆ ರಾಶಿಯ ನಡುವೆ ಭೂಮಿ ಪ್ರವೇಶಿಸುತ್ತದೆ ಈ ದಿನ ಮಕರರಾಶಿಗೆ ಪ್ರವೇಶಿಸಿರುತ್ತದೆ, ಮಕರಕ್ಕೆ ಸಂಕ್ರಮಣವಾಗುತ್ತದೆ.

ಮಹಭಾರತದ ಕಾಲದಲ್ಲಿಂದಲೂ ಈ ಹಬ್ಬವನ್ನು ಆಚರಿಸುತ್ತಿದ್ದರಂತೆ. ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮ ಪಿತಾಮಹರು ಈ ಮಕರ ಸಂಕ್ರಾಂತಿಯಂದು ದೇಹತ್ಯಾಗ ಮಾಡಿದರು ಎನ್ನುವ ಉಲ್ಲೇಖವಿದೆ. ಏಕೆಂದರೆ ಈ ದಿನದಂದು ದೇಹವನ್ನು ತ್ಯಜಿಸಿದರೆ ಸಂಸಾರದ ಭವಬಂಧನದಿಂದ ಮುಕ್ತವಾಗುತ್ತಾರಂತೆ.

ಒಂದು ಅಂದಾಜಿನ ಪ್ರಕಾರ ಮಹಾಭಾರತದ ಕುರುಕ್ಷೇತ್ರ ಯುಧ್ಧ ನಡೆದಿದ್ದು C E 3067 ವರ್ಷಗಳ ಹಿಂದೆ, ಅಂದರೆ ಸುಮಾರು 5092 ವರ್ಷಗಳ ಹಿಂದೆ. ಆಗಿಲೂ ನಮ್ಮ ಜನಗಳಿಗೆ ಈ ಸೂರ್ಯನ ಚಲನೆಯ ಸಂಪೂರ್ಣ ಜ್ಞಾನವಿತ್ತು ಹ ಅದೆಂತಹ ಅಧ್ಭುತ ಖಗೋಳ ಶಾಸ್ತ್ರದ ಜ್ಞಾನಿಗಳಿದ್ದರು ಆಗ.

ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಯಾನ ಎಕ್ ಎನ್ನುವ ಸಂಶೋಧಕಿಯೊಬ್ಬರು ಸುಮಾರು ಇಪ್ಪತ್ತು ವರ್ಷಗಳ ಕಾಲ ಭಾರತದ ಮೂಲೆ ಮೂಲೆಗೂ ಸಂಚರಿಸಿ ಒಂದು ಅಧ್ಭುತ ಸಂಶೋಧನಾ ಕೃತಿಯನ್ನು ರಚಿಸಿದ್ದಾರೆ. INDIA , a sacred geography ಎಂಬುದೇ ಈ ಕೃತಿಯ ಹೆಸರು.

ಇವರ ಪುಸ್ತಕದಲ್ಲಿ ಮಹಾಭಾರತದ ಸಮಯದಲ್ಲಿ ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸುತ್ತಿದ್ದರು ಎಂಬುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ.

'ಮಾಘ ಮೇಳ' ಎಂದು ಕರೆಯುತ್ತಿದ್ದರಂತೆ ಈ ಹಬ್ಬಕ್ಕೆ. ಆ ದಿನದಂದು ನದಿಗಳಲ್ಲಿ ಸ್ನಾನ ಮಾಡುವುದು ಒಂದು ಮಹತ್ವದ ಆಚರಣೆಯಂತೆ. ಗಂಗಾ, ನರ್ಮದಾ, ಕೃಷ್ಣಾ, ಗೋದಾವರಿ ಮತ್ತು ಕಾವೇರಿ ನದಿಗಳ ಹಾಗೂ ತಲಕಾವೇರಿಯ ಉಲ್ಲೇಖವೂ ಇದೆ ಅವರ ಕೃತಿಗಳಲ್ಲಿ. ಸೂರ್ಯನ ಉತ್ತರಾಭಿಮುಖದ ಈ ಪ್ರಯಾಣದಿಂದ ಆಯಾ ಪ್ರಾಂತ್ಯಗಳ ಹವಾಮಾನ, ವ್ಯವಸಾಯ, ಬೆಳೆಗಳ ಮೇಲೆ ಆಗುತ್ತಿದ್ದ ಪರಿಣಾಮದಲ್ಲಿ ವಿಭಿನ್ನತೆ ಕಂಡುಬಂದಿದ್ದರೂ ಇದೊಂದು ಸಮೃದ್ಧ ಸುಗ್ಗಿಯ ಹಬ್ಬವಾಗಿ ಆಚರಿಸುತ್ತಿದ್ದರಂತೆ.

ಈಗಲೂ ಸೂರ್ಯನ ಸುತ್ತಾ ಭೂಮಿಯ ಸಂಚಲನವನ್ನೇ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ದೇಶದ ಉದ್ದಗಲಕ್ಕೂ ಹಲವಾರು ಹೆಸರಿನಲ್ಲಿ ಆಚರಿಸುತ್ತಿರು ವೈಶಿಷ್ಟ್ಯ ಈ ಹಬ್ಬಕ್ಕಿದೆ.

ನಮ್ಮಲ್ಲಿ ಸೂರ್ಯ ಹುಟ್ಟಿದ ಸೂರ್ಯ ಮುಳುಗಿದ ಎಂದು ಸಾಮಾನ್ಯವಾಗಿ ಹೇಳುವ ವಾಡಿಕೆ. ಅದು ಹಾಗಲ್ಲಾ ಭೂಮಿಯ ಸುತ್ತುವಿಕೆಯಿಂದ ಈ ಹಗಲೂ ರಾತ್ರಿಗಳು ಉಂಟಾಗುತ್ತದೆ ಎಂದು ಹೇಳಿದರೆ... ಹಾಂ, ಹೌದು ಎಂದು ಅದೇ ನಿಜ ಎಂದು ಒಪ್ಪಿಕೊಳ್ಳುತ್ತೇವೆ.

ಆದರೆ ಹದಿನೇಳರ ಶತಮಾನದಲ್ಲಿ ಈ ರೋಮನ್ನರು..ಅದರಲ್ಲೂ ಕ್ಯಾಥೋಲಿಕ್ ಚರ್ಚಿನ ಮಂದಿ, ಗೆಲಿಲಿಯೋ ಎನ್ನುವ ಮೇಧಾವಿ ಖಗೋಳ ಶಾಸ್ತ್ರಜ್ಞ ಭೂಮಿ ಸೂರ್ಯನ ಸುತ್ತಾ ಸುತ್ತುತ್ತದೆ ಎಂದಿದ್ದಕ್ಕೆ ಅವನು ಬೈಬಲ್ಲನ್ನು, ಚರ್ಚನ್ನು ವಿರೋಧಿಸುತ್ತಾನೆ ಎಂದು ಬಹಿಷ್ಕಾರ ಹಾಕಿಬಿಟ್ಟರು. ಅದೆಂತಹ ಅಸಹಿಷ್ಣುತೆ ನೋಡಿ.

ಅದಾದ 350 ವರ್ಷಗಳ ನಂತರ 1992 ರಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚು ಅವರು ಮಾಡಿದ ಪ್ರಮಾದಕ್ಕೆ ಕ್ಷಮೆಯಾಚಿಸಿತು.
--ವಿಂಗ್ ಕಮಾಂಡರ್ ಸುದರ್ಶನ
********


 ಮಕರ ಸಂಕ್ರಾಂತಿ: 
ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.
ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.
ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.
ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.
ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.
ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

*********

[3:51 PM, 1/13/2021] Prasad Karpara Group: ಸಂಕ್ರಾಂತಿ ವೇಳೆಯಲ್ಣಿ  ಮಕ್ಜಳಿಗೆ ಕರಿ ಎರಿಯುವದು ಯಾವ ಕಾರಣಕ್ಕೆ ಎನ್ನುವದನ್ನು ತಿಳಿಸಿದರೆ ಉತ್ತಮ.

 ಸಂಕ್ರಾಂತಿ ಅಂದ್ರೆ ಗ್ರಹಗಳು ಆ ಆ ರಾಶಿಯಲ್ಲಿ ಪ್ರವೇಶ ಮಾಡುವ ಅವಧಿ , ಈಗ ಮಕರ ಸಂಕ್ರಾಂತಿ ಅಂದ್ರೆ ರವಿಯು ಮಕರ ರಾಶಿಯಲ್ಲಿ ಪ್ರವೇಶ ಮಾಡುವ ಅವಧಿ , ಅದಕ್ಕೆ ಪರ್ವಕಾಲ ಅಂತ ಕರೀತಾರೆ , ಅದರ ಮರುದಿವಸ ಆ ಅವಧಿಯ ಕರಿ ಇರ್ತದ , ಅಂದ್ರೆ ಆ ಸಂಕ್ರಮಣದಿಂದ ಮನುಷ್ಯನ ಮೇಲೆ  ಉಂಟಾಗುವ ಕೆಲವು ಬಾಧೆಗಳು , ಅದರಲ್ಲೂ ಐದು ವರ್ಷದ ಮಕ್ಕಳ ಮೇಲೆ ವಿಶಶಷವಾದ ಬಾಧೆಗಳು ಪರಿಣಾಮ ಬೀರ್ತಿರ್ತಾವು , ಹೀಗಾಗಿ ಅವತ್ತಿನ ದಿವಸ ಮುತ್ತು ರತ್ನ ಹವಳ ವಜ್ರ ಬಂಗಾರ ಬೆಳ್ಳಿ , ಹೊಸದಾಗಿ ಬೆಳೆ ಬಂದ ಕಬ್ಬು ಮುಂತಾದವುಗಳಲ್ಲಿರುವ ವಿಶೇಷ ಭಗವದ್ರೂಪಗಳು ತಮ್ಮ ಮಗುವನ್ನು ಸಂಕ್ರಮಣದಿಂದ ಉಂಟಾದ ದೋಷಗಳಿಂದ ಸಂರಕ್ಷಣೆ ಮಾಡಿ ಭವಿಷ್ಯತ್ತಿನಲ್ಲಿ ಆ ಮಗುವಿಗೆ ಒಳ್ಳೆಯ ಆಯುರಾರೋಗ್ಯ ದಯಪಾಲಿಸಿ ಧರ್ಮಮಾರ್ಗದಲ್ಲಿ ಆ ಮಗುವಿನ ಜೀವನ ಸಾಗಲಿ ಎನ್ನುವ ಉದ್ದೇಶದಿಂದ ಆ ಪದಾರ್ಥಗಳಿಂದ ಮಗುವಿಗೆ ಎರೆಯುವ ಕ್ರಮಕ್ಕೆ ಕರಿ ಎರೆಯುವದು ಅಂತ ಕರೀತಾರ . ಕರಿ ಅಂದ್ರೆ ಕಪ್ಪು , ಕಪ್ಪು ಅಂದ್ರೆ ಅಜ್ಞಾನ , ಸಂಕ್ರಮಣದಿಂದ ಉಂಟಾಗುವ ಅಜ್ಞಾನಾದಿ ದೋಷಗಳನ್ನು ಸೂರ್ಯಮಂಡಲ ಮಧ್ಯವರ್ತಿಯಾದ ಸರಸಿಜಾಸನನಾದ ಕೇಯೂರ ಮಕರಕುಂಡಲ , ಕಿರೀಟ , ಹಾರ , ಬಂಗಾರವರ್ಣದ , ಶಂಖಚಕ್ರಗಳನ್ನು ಧರಿಸಿರುವ ಸವಿತೃನಾಮಕ ಸೂರ್ಯನಾರಾಯಣನ ಪರಮಾನುಗ್ರಹದಿಂದ ಮಗುವಿನ ತೇಜಸ್ಸು ವೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ಕರಿ ಎರೆಯುತ್ತಾರೆ . 🙏🏼🙇 ಹರೇ ಶ್ರೀನಿವಾಸಾ 🙇🙏🏼

ಆದರೇ ಸೂರ್ಯ ಬೇರೆ ಬೇರೆ ರಾಶಿ ಪ್ರವೇಶ ಮಾಡಿದಾಗ ಏಕೆ ಹಬ್ಬ ಆಚರಣೆ ಮಾಡುವದಿಲ್ಲ ಕೇವಲ ಮಕರ ರಾಶಿ ಪ್ರವೇಶ ಮಾಡಿದಾಗ ಮಾತ್ರ ಏಕೆ ಸಂಕ್ರಮಣ ಆಚರಣೆ ದಯವಿಟ್ಟು ತಿಳಿಸಿ

 ಮಾಡ್ಬೇಕು ಮಾಡಲ್ಲಾ , ಇದಕ್ಕೇ ಏಕೆ ಅಷ್ಟು ಮಹತ್ವ ಇದೆ ಅಂದ್ರೆ ಎಲ್ಲ ಗ್ರಹಗಳಿಗೂ ಸೂರ್ಯ ಪ್ರಧಾನ ಗ್ರಹ , ಸೂರ್ಯಮಂಡಲ ಮಧ್ಯವರ್ತಿಯಾಗಿ ಸ್ವತಃ ಸವಿತೃನಾಮಕ ಪರಮಾತ್ಮನೇ ಇದ್ದಾನಾ , ಗ್ರಹಗಳಲ್ಲಿ ಸೂರ್ಯನಲ್ಲಿ ನನ್ನ ವಿಶೇಷ ವಿಭೂತಿರೂಪ ಇದೆ ಅಂತ ಭಗವದ್ಗೀತೆಯಲ್ಲಿ ಸ್ವತಃ ಶ್ರೀಕೃಷ್ಣನೇ ಹೇಳಿದ್ದಾನೆ , ಹೀಗಾಗಿ ಸೂರ್ಯನು ಮಕರ ರಾಶಿಯಲ್ಲಿ ಪ್ರವೇಶ ಮಾಡುವ ಈ ಸಂಕ್ರಮಣದ ವಿಶೇಷ ಆಚರಣೆ ಹೆಚ್ಚು ರೂಢಿಯಲ್ಲಿದೆ. 😊
****

ಉತ್ತರಾಯಣ ಕಾಲದ ಪರ್ವ. ನಿಯಮೇನ ಪಿತೃ ತರ್ಪಣ ಕೂಡಲೇ ಬೇಕು. ಯಾರು ಮರೆಯಬೇಡಿ.

ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ " ಎರಡು ವಿಧ ".
೧. ಜಲ ತರ್ಪಣ  ೨. ತಿಲ ತರ್ಪಣ

ಜಲ ತರ್ಪಣವನ್ನು ಪ್ರತಿನಿತ್ಯ " ಬ್ರಹ್ಮಯಜ್ಞ " ದಲ್ಲಿ ಕೊಡಬೇಕು.

ದರ್ಶ ( ಅಮಾವಾಸ್ಯೆ ) ಪರ್ವಕಾಲ, ಸೂರ್ಯ - ಚಂದ್ರ ಗ್ರಹಣ, ಉತ್ತರ - ದಕ್ಷಿಣಾಯನ - ಮಾತಾ ಪಿತೃಗಳ ಶ್ರಾದ್ಧಗಳಲ್ಲಿ - ಮಹಾಲಯ ಇತ್ಯಾದಿ " ಷಣ್ಣವತಿ " ಅಂದರೆ ೯೬ ಪರ್ವ ಕಾಲಗಳಲ್ಲಿ ಪಿತೃಗಳಿಗೆ " ತಿಲ ತರ್ಪಣ " ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದ ರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತ ರಾಗಿ ಆಶೀರ್ವದಿ ಸುವರು. ಅದರಿಂದ ಸಮಸ್ತ ಮಂಗಲ ವಾಗುವುದು!

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವ ನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.

೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.

೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ;  " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.

೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.

೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟು ಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ  ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.

೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.

ಪ್ರತಿ ತಿಂಗಳು ಅಮಾವಾಸ್ಯೆಯ ದಿನ ದ್ವಾದಶ ಪಿತೃಗಳಿಗೆ ( ೧೨ ಜನಕ್ಕೆ ) ತಿಲ ತರ್ಪಣ ಕೊಡಬೇಕು. ದ್ವಾದಶ ಪಿತೃಗಳು ಯಾರೆಂದರೆ...

೧. ಪಿತೃ ವರ್ಗ ( ೩ ) =
 ಪಿತೃ .. ತಂದೆಯ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ
 
ಪಿತಾಮಹ .. ತಾತನ ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ 
ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಪ್ರಪಿತಾಮಹ.. ಮುತ್ತಾತನ ಹೆಸರು, ಗೋತ್ರ ಹೇಳಿ  ಆದಿತ್ಯಾ ಅಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೨. ಮಾತೃ ವರ್ಗ ( ೩ ) = 
ಮಾತೃ .. ಕರ್ತೃವಿನ ತಾಯಿ ಹೆಸರು,ಗೋತ್ರ  ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿತರ್ಪಯಾಮಿ ತರ್ಪಯಾಮಿ
 
ಪಿತಾಮಹಿಮ್ .. ತಂದೆಯ ತಾಯಿ..ಆಕೆಯ ಹೆಸರು, ಗೋತ್ರ,ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಪ್ರಪಿತಾಮಹಿ.. ತಂದೆಯ ಅಜ್ಜಿ . ಆಕೆಯ ಹೆಸರು , ಗೋತ್ರ, ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೩. ಮಾತಾಮಹ ವರ್ಗ ( ೩ ) = 
ಮಾತಾ ಮಹ .. ತಾಯಿಯ ತಂದೆ , ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪಿತಾಮಹ .. ತಾಯಿಯ ಅಜ್ಜ, ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪ್ರಪಿತಾಮಹ... ತಾಯಿಯ ಮುತ್ತಜ್ಜ .. ಹೆಸರು, ಗೋತ್ರ ಹೇಳಿ  ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೪. ಮಾತಾಮಹಿ ವರ್ಗ ( ೩ ) = ಮಾತಾಮಹಿ.. ತಾಯಿಯ ತಾಯಿ, ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪಿತಾಮಹಿ.. ತಾಯಿಯ ಅಜ್ಜಿ, ಅವರ ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪ್ರಪಿತಾಮಹಿ.. ತಾಯಿಯ ಮುತ್ತಜ್ಜಿ .. ಅವಳ ಹೆಸರು, ಗೋತ್ರ ಹೇಳಿ 
ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಪತ್ನಿಂ .. ಹೆಂಡತಿ, ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್  ಸುತಮ್.  ಮಗನ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಭ್ರಾತರಂ.. ಅಣ್ಣ ತಮ್ಮ , ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಪಿತೃವ್ಯಂ .. ದೊಡ್ಡಪ್ಪ,  ಚಿಕ್ಕಪ್ಪ ಅವರ ಹೆಸರು, ಗೋತ್ರ ಹೇಳಿ  ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಮಾತೃಶ್ವಸಾರಂ .. ದೊಡ್ಡಮ್ಮ, ಚಿಕ್ಕಮ್ಮ ಅವರ ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ಚ್ವ ಶುರಂ .. ಹೆಣ್ಣು ಕೊಟ್ಟ ಮಾವ ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮದ್ ಗುರುಂ ..ಶಾಸ್ತ್ರವನ್ನು ಮಂತ್ರವನ್ನು ಹೇಳಿಕೊಟ್ಟ ಗುರುಗಳು . ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಆಚಾರ್ಯಮ್ .. ಪುರೋಹಿತರು ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು । ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ।
ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।।ಎಂದು ಹೇಳಿ.. ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!
***

ಸಂಕ್ರಾಂತಿ ಹಬ್ಬ ವನ್ನು ಜ.15 ರಂದು ಆಚರಿಸಬೇಕು. ಎಳ್ಳಿನಿಂದ ಹಾಗೂ ಅದರ ಉತ್ಪನ್ನಗಳಿಂದ ಆರು ಕ್ರಿಯೆ ನಡೆಸಬೇಕು. ತಿಲಸ್ನಾನ( ತಿಲದೀಪ, ತಿಲಹೋಮ, ತಿಲತರ್ಪಣ, ತಿಲಭಕ್ಷಣ ಹಾಗೂ ತಿಲದಾನಗಳೇ ಷಟ್ತಿಲ ಕರ್ಮಗಳು.

   ಸಂಕ್ರಾಂತಿಯ ದಿನ ಕಪ್ಪು ಎಳ್ಳ ನ್ನು ಅರೆದು ಪುರುಷರು ತಲೆ ಹಾಗೂ ದೇಹದ ಎಲ್ಲ ಅಂಗಗಳಿಗೆ ಲೇಪಿಸಿಕೊಂಡು ನಂತರ ಸ್ನಾನ ಮಾಡಬೇಕು.  ಆದರೆ ಈ ಪರ್ವಕಾಲದಲ್ಲಿ ಸ್ತ್ರೀಯರು ಎಳ್ಳನ್ನು ತಲೆಗೆ ಹಚ್ಚದೆ, ಉಳಿದ ಅಂಗಗಳಿಗೆ ಹಚ್ಚಿ ಸ್ನಾನ ಮಾಡಬೇಕು. ಮಂಗಳಾರತಿ ಬತ್ತಿಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ದೇವರಿಗೆ ಆರತಿ ಮಾಡುವುದು, ಎಳ್ಳೆಣ್ಣೆಯ ದೀಪ ಹಚ್ಚುವುದು ಶ್ರೇಯಸ್ಕರ. ಅರ್ಹರು ಎಳ್ಳಿನಿಂದ ಹೋಮ ಮಾಡಬಹುದು, ತಂದೆಯಿಲ್ಲದವರು ಗತಿಸಿದ ಪಿತೃಗಳಿಗೆ ತಿಲ(ಎಳ್ಳು ನೀರು) ತರ್ಪಣ ಬಿಡಬಹುದು. ನಂತರ ದೇವರಿಗೆ ಸಮರ್ಪಿಸಿದ ಎಳ್ಳಿಗೆ ಬೆಲ್ಲವನ್ನು ಸೇರಿಸಿ, ಹಿರಿಯರಿಗೆ ಕೊಟ್ಟು ನಂತರ ತಿನ್ನಬೇಕು. ಅರ್ಹರಿಗೆ ಎಳ್ಳು ದಾನ ನೀಡಬಹುದು. ಇವೇ ಈ ಸಂಕ್ರಮಣದ ಷಟ್ತಿಲ ಕರ್ಮದ ವಿಶೇಷ.

  ಎಳ್ಳಿನೊಂದಿಗೆ ಸ್ನಾನ ಮಾಡಿ, ದೇವರ ಪೂಜೆ ಮಾಡಬೇಕು. ಸಂಕ್ರಮಣದ ವೇಳೆ ನದಿಸ್ನಾನ ಶ್ರೇಷ್ಠ.  ಅವಕಾಶ ಹಾಗೂ ಅನುಕೂಲವಂಚಿತರು ಮನೆ ಬಳಿಯ ಬಾವಿ ಅಥವಾ ಮನೆಯಲ್ಲಿ ನೀರು ತುಂಬಿದ ಹಂಡೆಯಲ್ಲಿ ಗಂಗಾ ನದಿ ಆದಿಯಾಗಿ ಎಲ್ಲ ನದಿಗಳ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ ಸ್ನಾನ ಮಾಡಬಹುದು.

ಎಳ್ಳು ತಿನ್ನಲು ವೈಜ್ಞಾನಿಕ ಕಾರಣ

   ಧನುರ್ಮಾಸದಲ್ಲಿ ದೇಹಕ್ಕೆ ಚಳಿ ಮತ್ತಿತರ ಕಾರಣಗಳಿಂದ  ಮಲಬದ್ಧತೆಯಂತಹ ತೊಂದರೆ ಉಂಟಾಗುತ್ತದೆ. ಜತೆಗೆ  ಚಳಿ ನಿಯಂತ್ರಿಸಲು ಪರದಾಡುವಾಗ ಶರೀರದಲ್ಲಿನ ಉಷ್ಣಾಂಶವು ಹೆಚ್ಚು ವ್ಯಯವಾಗುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟುವುದರ ಜತೆ ಬಿರಿಯಲಾರಂಭಿಸುತ್ತದೆ. ಜತೆಗೆ ಉತ್ತರಾಯಣದ ನಂತರ ಬಿಸಿಲಿನ ತಾಪ ಹೆಚ್ಚುವುದಲ್ಲದೆ, ಹೇಮಂತ ಋತುವಿನ ನಂತರ ಬರುವ ಶಿಶಿರ ಋತು(ಮರ ಗಿಡ ಎಲೆ ಉದುರುವ ಕಾಲ) ವಿನಲ್ಲಿ ಕೊರೆ(ಗೊಡ್ಡುಕೊರೆ) ಬೀಳುವುದರಿಂದ ಚರ್ಮದ ಬಿರಿತ ಸಮಸ್ಯೆ ಎದುರಾಗುತ್ತದೆ. 

 ಬಿಸಿಲಿನ ತಾಪ ತಡೆದು ಚರ್ಮಭಾಧೆ ನಿವಾರಿಸಿಕೊಳ್ಳಲು ದೇಹದಲ್ಲಿ ಕೊಬ್ಬಿನ ಅಂಶ ಅಗತ್ಯ. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಹಲವಾರು ಅಂಗಗಳ ಪೋಷಣೆಗೆ ಬೇಕಾದ 'ಎ’ ಮತ್ತು ’ಬಿ’ ವಿಟಮಿನ್ ತೈಲಧಾನ್ಯವಾದ ಎಳ್ಳಿನಲ್ಲಿ ಹೇರಳವಾಗಿವೆ. ಹಾಗಾಗಿ ಮುಂಜಾಗರೂಕತೆಗಾಗಿ ದೇಹದಲ್ಲಿ ಕೊಬ್ಬು ಸಂಗ್ರಹಿಸಲು ಎಳ್ಳನ್ನು ಉಪಯೋಗಿಸಲಾಗುತ್ತದೆ.

  ಎಳ್ಳು ಪಿತ್ತಕಾರಕವಾಗಿದ್ದು, ಬರೀ ಎಳ್ಳು ತಿಂದರೆ ಪಿತ್ತ ಹೆಚ್ಚಾಗುತ್ತದೆ. ಇದರ ಜತೆ ಪಿತ್ತಹರವಾದ ಬೆಲ್ಲವನ್ನು ಸೇರಿಸಿ ತಿಂದರೆ ಪಿತ್ತ ನಿವಾರಣೆಯ ಜತೆ ಕೊಬ್ಬಿನ ಅಂಶ ಸರಿದೂಗಿಸುತ್ತದೆ.

ಎಳ್ಳು ತಿಂದು ಎಳ್ಳಿನಂತೆ (ಅರಳು ಹುರಿದಂತೆ)ಮಾತಾಡಿ, ಬೆಲ್ಲ ತಿಂದು ಬೆಲ್ಲದಂತೆ (ಮಧುರವಾಗಿ) ಮಾತಾಡಿ.
ಎಳ್ಳು ಬೆಲ್ಲದ ಸಮ್ಮಿಶ್ರಣದಂತೆ ನಮ್ಮ ನಿಮ್ಮ ಬಾಂಧವ್ಯವಿರಲಿ.

ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ, ಇನಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀಲಕ್ಷ್ಮೀನಾರಾಯಣದೇವರು ಎಲ್ಲರನ್ನು ಕಾಯಲಿ.

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ|
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ||

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, 
ಆನೇಕಲ್.
***











*****
M akara raashiyatta
A adityanu 
K aalada
R athavannu tirugisuva ee
A dbutha sandarbhadalli
S akkare
A chchanu tindu
N akku nalidaadi
K abbina
R asavanu heeruta
A kka pakkada maneyavarige
N entaristarige
T ila gudava (ellu bellava)
H anchuta, olleya maatanaaduta
I ndina habbavannu aacharisoNa

HAPPY MAKARA SANKRANTHI
***

No comments:

Post a Comment