SEARCH HERE

Tuesday 1 January 2019

ವೀಳ್ಯೆದೆಲೆ betel leaf ವಿಳ್ಳೆ ಎಲೆ


ವೀಳ್ಯೆದೆಲೆಯ ವೈಶಿಷ್ಟ್ಯತೆಯೇನು ?  
ಶುಭಕರವಾದ ಅಷ್ಟವಸ್ತುಗಳಲ್ಲಿ ವೀಳ್ಯೆದೆಲೆಯೂ ಸಹ ಒಂದು ಎಂದು ನಮ್ಮ ಸಂಪ್ರದಾಯ ತಿಳಿಸುತ್ತದೆ. ವೀಳ್ಯೆದೆಲೆ ಇಂತಹ ಶುಭ ಲಕ್ಷಣವನ್ನು ಹೊಂದಿರುವುದರಲ್ಲಿ ಅನೇಕ ದೇವತೆಗಳ ಗುಣವನ್ನು ಅಡಗಿಸಿಕೊಂಡಿದೆ. ವಿಳ್ಳೆಯದೆಲೆ ಮೊದಲಲ್ಲಿ ಲಕ್ಷ್ಮಿದೇವಿ, ಮಧ್ಯ ಭಾಗದಲ್ಲಿ ಸರಸ್ವತಿ ಹಾಗೂ ಕೊನೆಯ ಭಾಗದಲ್ಲಿ ಜ್ಯೇಷ್ಠ ಭಗವತಿ ನೆಲೆಸಿರುವ ರೆಂಬ ಒಂದು ನಂಬಿಕೆ. ಈ ಎಲೆಯ ಎಡಭಾಗದಲ್ಲಿ ಪಾರ್ವತಿ ಮಾತೆ, ಬಲಭಾಗದಲ್ಲಿ ಭೂದೇವಿ, ಮುಂದಿನ ಭಾಗದಲ್ಲಿ ಶಿವನು ಎಲೆಯ ಪೂರ್ತಿಯಾಗಿ ಮೇಲ್ಭಾಗದಲ್ಲಿ ವಿಷ್ಣು ದೇವರು ತಮ್ಮ ತಮ್ಮ ಸ್ಥಾನಗಳನ್ನು ಹೊಂದಿರುವರೆಂಬ ನಂಬಿಕೆ. ಈ ದೇವತೆಗಳೇ ಅಲ್ಲದೆ ಶುಕ್ರನು, ಇಂದ್ರನು, ಸೂರ್ಯನು ಹಾಗೂ ಕಾಮದೇವನೂ ಸಹ ವೀಳ್ಯದೆಲೆಯ ಮೇಲೆ ವಿವಿಧ ಭಾಗಗಳಲ್ಲಿ ಅವರವರ ಸ್ಥಾನಗಳಲ್ಲಿ ಇರುವರೆಂದು ನಮ್ಮ ಶಾಸ್ತ್ರಗಳು ಹೇಳುತ್ತಿವೆ.ವಾಸ್ತವವಾಗಿ ಈ ವಿವಿಧ ದೇವತೆಗಳು ವೀಳ್ಯದೆಲೆಯ ಅನೇಕ ಶುಭ ಗುಣಗಳ ತತ್ವಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಈ ಕಾರಣದಿಂದಲೇ ವೀಳ್ಯದೆಲೆಯ ವಿನಿಯೋಗವನ್ನು ವಿವಿಧ ವಿಧಗಳಾಗಿ ಉಪಯೋಗಿಸುವ ಹಾಗೆ ನಮ್ಮ ಹಿರಿಯರು ಶಾಸ್ತ್ರಗಳನ್ನು ರಚಿಸಿರುವರು. ಎಲೆ ಒಣಗಿ ಹೋದರೂ, ರಂಧ್ರ ಬಿದ್ದಿದ್ದರೂ, ಹರಿದು ಹೋಗಿದ್ದರೂ ಸುಕ್ಕಾಗಿದ್ದರೂ ಸಹ ಈ ಎಲೆಗಳನ್ನು ಉಪಯೋಗಿಸಬಾರದೆಂದು ತಿಳಿಸಿರುವರು. ವೀಳ್ಯದೆಲೆಯನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಸೇವಿಸುವುದು ಒಳ್ಳೆಯದೆಂದು ತಿಳಿಸಲಾಗಿದೆ. ಆದರೆ ಉಪವಾಸ ದೀಕ್ಷೆಯಲ್ಲಿ ಇರುವ ದಿನಗಳಲ್ಲಿ ಮಾತ್ರ ವೀಳ್ಯದೆಲೆಯನ್ನು ಸೇವಿಸುವುದನ್ನು ನಿಲ್ಲಿಸಬೇಕು.
ವೈಜ್ಞಾನಿಕವಾಗಿ ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಅದು ನಮ್ಮ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ ಹಾಗೂ ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಹಲವಾರು ಜನ ವೈದ್ಯರು ನಮಗೆ ತಿಳಿಸಿದ್ದಾರೆ.
" ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ವೈಜ್ಞಾನಿಕ ಅರ್ಥವಿದೆ ಪ್ರೀತಿಸಿ ಗೌರವಿಸಿ ಆರಾಧಿಸಿ "
ಶ್ರೀ ಸು.ಕು.ಮಹದೇವಸ್ವಾಮಿ, ಸುತ್ತೂರು
ಸನ್ಮಾರ್ಗ ಜ್ಯೋತಿಷ್ಯ ಕೇಂದ್ರ, ಮೈಸೂರು

9844884300

9900839876
****
ಊಟದ ಬಳಿಕ ವೀಳ್ಯದೆಲೆ ಅಡಿಕೆ (ತಂಬಾಕು ರಹಿತ ಬೀಡಾ)ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು....


🍃ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸುಲು, ಹೊಟ್ಟೆ ಮತ್ತು ಕರುಳಿನಲ್ಲಿನ pH ಅಸಮತೋಲನವನ್ನು ತಟಸ್ಥಗೊಳಿಸುವಲ್ಲಿ ಸಹಾಯ ಮಾಡುತ್ತದೆ.

🍃ವೀಳ್ಯದೆಲೆಯು ಅತ್ಯುತ್ತಮ ನೋವು ನಿವಾರಕವಾಗಿದೆ. ಅದು ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.

🍃ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದ್ದು ಅದು ದೇಹದಿಂದ ರಾಡಿಕಲ್ಗಳನ್ನು ತೆರವುಗೊಳಿಸುತ್ತದೆ. ಇದು ದೇಹದಲ್ಲಿ ಸಾಮಾನ್ಯ PH ಮಟ್ಟವನ್ನು ಮರುಸ್ಥಾಪಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗೆ ಸಹಾಯ ಮಾಡುತ್ತದೆ.

🍃ಮಲಬದ್ಧತೆ ನಿವಾರಣೆಗೆ ವೀಳ್ಯದೆಲೆಯನ್ನು ತಿನ್ನುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎನ್ನಲಾಗಿದೆ.
ವೀಳ್ಯದೆಲೆಗಳ ಕಾರ್ಮಿನೇಟಿವ್, ಕರುಳುವಾಳ, ವಾಯುವಿರೋಧಿ ಮತ್ತು ಕರುಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

🍃ವೀಳ್ಯದೆಲೆಗಳು ಚಯಾಪಚಯವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಪ್ರಚೋದಿಸುತ್ತದೆ ಮತ್ತು ಪ್ರಮುಖ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಕರುಳನ್ನು ಉತ್ತೇಜಿಸುತ್ತದೆ.

🍃ವೀಳ್ಯದೆಲೆಯು ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಸಹಾಯ ಮಾಡುತ್ತದೆ.

🍃ಎದೆ, ಶ್ವಾಸಕೋಶದ ದಟ್ಟಣೆ ಮತ್ತು ಅಸ್ತಮಾದಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಚಿಕಿತ್ಸೆಯಾಗಿದೆ. ಎಲೆಯ ಮೇಲೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಚ್ಚಿ, ಅದನ್ನು ಬೆಚ್ಚಗಾಗಿಸಿ ಮತ್ತು ಎದೆಯ ಮೇಲೆ ಇರಿಸಿ ದಟ್ಟಣೆಯನ್ನು ನಿವಾರಿಸಬಹುದು.

🍃ವೀಳ್ಯದೆಲೆಗಳಲ್ಲಿ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿವೆ ಹೀಗಾಗಿ ಇದು ಅದ್ಭುತವಾದ ನಂಜುನಿರೋಧಕ ಗುಣಗಳನ್ನು ಹೊಂದಿವೆ. ವಿಶೇಷವಾಗಿ ಚಾವಿಕೋಲ್ ಸೂಕ್ಷ್ಮಾಣುಗಳಿಂದ ಡ್ಯುಯಲ್ ರಕ್ಷಣೆ ನೀಡುತ್ತದೆ.

🍃ಹೊಸದಾಗಿ ರೋಗನಿರ್ಣಯ ಮಾಡಿದ ಟೈಪ್ 2 ಡಯಾಬಿಟಿಕ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ವೀಳ್ಯದೆಲೆಯ ಪುಡಿ ಹೊಂದಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ.

🍃ವೀಳ್ಯದೆಲೆಯು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಅನಿಯಂತ್ರಿತ ರಕ್ತದಲ್ಲಿನ ಗ್ಲೂಕೋಸ್‌ನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ.

🍃ವೀಳ್ಯದೆಲೆಯಲ್ಲಿ ಆರೊಮ್ಯಾಟಿಕ್ ಫೀನಾಲಿಕ್ ಸಂಯುಕ್ತಗಳ ಉಪಸ್ಥಿತಿಯು ಕ್ಯಾಟೆಕೊಲಮೈನ್‌ಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಇದು ಯೋಗಕ್ಷೇಮದ ಪ್ರಜ್ಞೆಯನ್ನು ಹೆಚ್ಚಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆದ್ದರಿಂದ ವೀಳ್ಯದೆಲೆಯನ್ನು ಜಗಿಯುವುದು ಖಿನ್ನತೆಯನ್ನು ಹೋಗಲಾಡಿಸಲು ಸರಳವಾದ ಮಾರ್ಗವಾಗಿದೆ.
**********

ವೀಳ್ಯದೆಲೆಯ ಮಹತ್ವ"🌱🌱🌱🌱🌱🌱

೧. ವೀಳ್ಯದೆಲೆ ತುದಿಯಲ್ಲಿ - ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ..
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,

ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..
ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..

ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..
***
ತಾಂಬೂಲ ಹೇಗೆ ನೀಡಬೇಕು ? ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ಕೀಳುವುದೇಕೆ ?
    
ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನಿಶ್ಚಿತಾರ್ಥ, ಮದುವೆ, ಪೂಜೆ, ವ್ರತ, ಶುಭ ಸಮಾರಂಭಗಳಲ್ಲಿ ತಾಂಬೂಲ ಇರಲೇಬೇಕು. ಹಿಂದೆ ಯುದ್ಧದ ಸಂದರ್ಭದಲ್ಲಿ ರಣ ವೀಳ್ಯ ನೀಡುವಲ್ಲಿ ವೀಳ್ಯದೆಲೆ ಬಳಕೆಯಾಗುತ್ತಿತ್ತು ಎಂದು ಉಲ್ಲೇಖವಿದೆ. ಊಟವಾದ ಬಳಿಕ ಎಲೆ-ಅಡಿಕೆ ತಿನ್ನಬೇಕೆಂಬ ಸಂಪ್ರದಾಯವಿದೆ. ಹೀಗಾಗೇ ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಡಿಯಲು ನೀರು ಕೊಟ್ಟು, ಊಟ ಬಡಿಸಿ ನಂತರ ತಾಂಬೂಲ ನೀಡುವ ಪದ್ಧತಿ ಇಂದಿಗೂ ಕೆಲವೊಂದು ಕಡೆ ಆಚರಣೆಯಲ್ಲಿದೆ.

ನಮ್ಮ ಪೂರ್ವಜರು ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿರಲಿಲ್ಲ. ಬದಲಾಗಿ ತಾಂಬೂಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗುತ್ತಿತ್ತು. ಹೀಗೆ ಆಮಂತ್ರಿಸುವ ಪದ್ಧತಿ ಇಂದಿಗೂ ನಮ್ಮ ಸಂಪ್ರದಾಯದಲ್ಲಿ ಕಾಣಬಹುದು. ವೀಳ್ಯದೆಲೆ ಅಡಿಕೆ ಜಗಿಯುವುದನ್ನೇ ಒಂದು ಪ್ರಮುಖ ಹವ್ಯಾಸವನ್ನಾಗಿಸಿಕೊಂಡವರು ಸಾಕಷ್ಟು ಜನರಿದ್ದಾರೆ. ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವೀಳ್ಯದೆಲೆಯು ಬಳಕೆಯಾಗುತ್ತದೆ.

ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ತರವಾದುದು. ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ, ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ, ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ, ವೀಳ್ಯದೆಲೆಯ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ, ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ವಾಸ, ವೀಳ್ಯದೆಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ, ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸವಿರುತ್ತದೆ.

ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳಲಾಗುತ್ತದೆ. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ. ಆದುದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ. ಈ ಎಲ್ಲಾ ದೇವರುಗಳು ಇರುವುದರಿಂದಲೇ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟೊಂದು ಮಹತ್ವವಿದೆ.

ತಾಂಬೂಲ ನೀಡುವ ಬಗೆ ಹೇಗೆ :

ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಲ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತುದಿ ಹಾಗೂ ಬಾಳೆಹಣ್ಣಿನ ತುದಿ ನಮ್ಮ ಕಡೆಯಲ್ಲಿರಬೇಕು.

ವೀಳ್ಯೆದೆಲೆಯನ್ನು ಎರಡು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು.

ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು. ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು.

೧. ವೀಳ್ಯದೆಲೆ ತಾಂಬೂಲ ಕೊಡುವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ, ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.

೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.

೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.

೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಡಿಮೆಯಾಗುತ್ತದೆ.

೬. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.

೭. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

ವಿವಿಧ ರೀತಿಯ ತಾಂಬೂಲಗಳು.. !

ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ..
೧. ಫಲ ತಾಂಬೂಲ..
೨. ಪೂರ್ಣಫಲ ತಾಂಬೂಲ..
೩. ಸಾಮೂಹಿಕ ತಾಂಬೂಲ..

" ಫಲ ತಾಂಬೂಲ" : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ..

ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ.
೧. ಫಲ ತಾಂಬೂಲ..
೨. ಪಂಚಫಲ ತಾಂಬೂಲ ..

೧. ಫಲ ತಾಂಬೂಲ :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದೇ ಜಾತಿಯ ಹಣ್ಣು(ಎರಡು)
**
೨. ಪಂಚಫಲ ತಾಂಬೂಲ ::
ಐದು ವೀಳ್ಯದೆಲೆ
ಐದು ಅಡಿಕೆ
ಯಥಾ ಶಕ್ತಿ ದಕ್ಷಿಣೆ
ಐದು ಜಾತಿಯ ಹಣ್ಣುಗಳು..
(5-5 ಬೇಕಾದರೂ ಕೊಡಬಹುದು)

***
" ಪೂರ್ಣಫಲ ತಾಂಬೂಲ "..
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದು ಪೂರ್ಣಫಲ..
**

" ಸಾಮೂಹಿಕ ತಾಂಬೂಲ " :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ತೆಂಗಿನಕಾಯಿ ಅಥವಾ ಹಣ್ಣು..!
***

ವೀಳ್ಯದೆಲೆ  ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಮೊದಲು ಎಲೆ ಅಡಿಕೆ ಮತ್ತು ಸುಣ್ಣದ ಜೊತೆ ಮಾತ್ರವೇ ಸೇವಿಸುತ್ತಿದ್ರು. ಆದ್ರೆ ಬರೀ ವೀಳ್ಯದೆಲೆ ಸೇವಿಸೋದ್ರಿಂದ ಸಹ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಹೃದ್ರೋಗ ಸಮಸ್ಯೆಗಳಿಗೆ ರಾಮಬಾಣವಾಗಿದೆ.
1. ಒಂದು ವೇಳೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ವೀಳ್ಯದೆಲೆಗಳನ್ನು ಸೇವಿಸಿ. ಇದೊಂದು ನೈಸರ್ಗಿಕ ಮೂತ್ರವರ್ಧಕವಾಗಿದೆ.
2. ಸಮಪ್ರಮಾಣದಲ್ಲಿ ನೀರು ಬೆರೆಸಿದ ಒಂದು ಲೋಟ ಹಾಲಿಗೆ ಒಂದು ವೀಳ್ಯದೆಲೆ ಎಂಬ ಪ್ರಮಾಣದಲ್ಲಿ ಎಲೆಯನ್ನು ಅಗಿದು ನೀರುಹಾಲನ್ನು ಕುಡಿದರೆ ದೇಹದ ನಿರ್ಜಲೀಕರಣದ ತೊಂದರೆ ಇಲ್ಲವಾಗುತ್ತದೆ.
3.ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಗಳನ್ನು ದೇಹದಿಂದ ನಿವಾರಿಸುವ ಮೂಲಕ ಹಲವು ಬಗೆಯ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.
4.ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪಿಸಿ
5. ವೀಳ್ಯದೆಲೆಯಲ್ಲಿರುವ ಮೂತ್ರವರ್ಧಕ ಗುಣ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುವ ಮೂಲಕ ಅತ್ಯುತ್ತಮ ಮನೆ ಮದ್ದಾಗಿದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ
6.ವೀಳ್ಯದೆಲೆಯನ್ನು ಅರೆದು ಹಣೆಯ ಮೇಲೆ ಮತ್ತು ಪಕ್ಕದ ಭಾಗದಲ್ಲಿ ಹಚ್ಚಿಕೊಂಡಾಗ ಇದರ ತಂಪುಗೊಳಿಸುವ ಗುಣ ತಲೆನೋವನ್ನು ತಕ್ಷಣವೇ ಕಡಿಮೆಯಾಗಿಸುತ್ತದೆ. ಹೊಟ್ಟೆ ಉಬ್ಬರಕ್ಕೆ ಒಂದು ವೀಳ್ಯದೆಲೆ ತಿನ್ನಿ
7. ಒಂದು ವೇಳೆ ನರಗಳ ಸೆಳೆತ ಹಾಗೂ ನರಗಳು ದುರ್ಬಲವಾಗಿದ್ದರೆ ಹಾಗೂ ಸಂವೇದನೆ ಕಡಿಮೆಯಾಗಿದ್ದರೆ ವೀಳ್ಯದೆಲೆಯನ್ನು ಅರೆದು ಹಿಂಡಿ ಸಂಗ್ರಹಿಸಿದ ರಸ ಮತ್ತು ಸಮಪ್ರಮಾಣದ ಜೇನನ್ನು ಬೆರೆಸಿ ಕುಡಿಯುವ ಮೂಲಕ ಈ ದೌರ್ಬಲ್ಯವನ್ನು ಇಲ್ಲವಾಗಿಸುವ ಮೂಲಕ ಇದೊಂದು ಅತ್ಯುತ್ತಮ ಟಾನಿಕ್ ಆಗಿದೆ.
********

 


Betel leaf uses



FIRE PAAN



*****


No comments:

Post a Comment