SEARCH HERE

Tuesday 1 January 2019

ನವ ವಿಧ ಭಕ್ತಿಗಳು nine types of bhakti


ನವ (ಒಂಭತ್ತು) ವಿಧ ಭಕ್ತಿಗಳು

🔸ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಆರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ
(ಭಾಗವತ-7.5.23)

🔹1. ಶ್ರವಣಂ : ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು.

🔹2. ಕೀರ್ತನಂ : ದೇವರ ಕೀರ್ತನೆ, ಭಜನೆ, ಗುಣಗಾನ, ಮಹಿಮೆಗಳನ್ನು ಕೊಂಡಾಡುವುದು.

🔹3. ಸ್ಮರಣಂ : ಕಲಿಯುಗದ ಮುಖ್ಯಧರ್ಮವಾದ ಶ್ರೀಹರಿಯ ನಾಮಸ್ಮರಣೆಯನ್ನು ನಿರಂತರ ಮಾಡುವುದು.

🔹4. ಪಾದ ಸೇವನಂ : ಶ್ರೀ ಹರಿಯ ಚರಣ ಸೇವೆ ಮಾಡುವುದು ಅಥವಾ ಮಾಡುವ ಎಲ್ಲ ಒಳ್ಳೆಯ ಕಾರ್ಯಗಳು ಶ್ರೀಹರಿಯ ಚರಣ ಸೇವೆ ಎಂದು ತಿಳಿಯುವುದು.

🔹5. ಅರ್ಚನಂ : ಶಾಸ್ತ್ರ ವಿಹಿತ ಫಲ-ಪುಷ್ಪಗಳಿಂದ ದೇವರ ಅರ್ಚನೆ, ಪೂಜೆಯನ್ನು ಮಾಡುವುದು.

🔹6. ವಂದನಂ : ದೇವರಿಗೆ ಪ್ರಣಾಮ, ದಂಡ ಪ್ರಣಾಮಗಳ ಸಮರ್ಪಣೆ ಮಾಡುವುದು.

🔹7. ದಾಸ್ಯಂ : ಮಾಡುವ ಎಲ್ಲ ಕಾರ್ಯಗಳು ತಾನು ದೇವರ ದಾಸನೆಂದು ತಿಳಿದು ಮಾಡುವುದು.

🔹8. ಸಖ್ಯಂ : ದೇವರ ಮೇಲೆ ವಿಶೇಷವಾದ ಪ್ರೀತಿ ಹಾಗೂ ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು.

🔹9. ಆತ್ಮ ನಿವೇದನಂ : ಮಾಡುವ ಎಲ್ಲ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.
*******

ಭಕ್ತಿ ಎನ್ನುವುದು ಒಂದು ಸಂಸ್ಕೃತ ಶಬ್ದ. 

ಭಕ್ತಿ ಎನ್ನುವ ಶಬ್ದಕ್ಕೆ ಶಬ್ದಕೋಶದಲ್ಲಿರುವ ಅರ್ಥಗಳು:-

1. ದೇವರು, ಗುರು ಮತ್ತು ಹಿರಿಯವರಲ್ಲಿ ಇರುವ ಗೌರವಬುದ್ಧಿ;
2. ಭಾಗವಹಿಸಿವುದು;
3. ರಚನೆ, ಜೋಡನೆ;
4. ಸೇವೆ, ಆರಾಧನೆ, ಉಪಾಸನೆ, ಪೂಜೆ; 
5. ಶ್ರದ್ಧೆ, ವಿಶ್ವಾಸ, ನಿಷ್ಠೆ; 

ಮುಕ್ತಿಗೆ ಭಕ್ತಿಯೇ ಮೂಲ. 
ಪುರಾಣಗಳಲ್ಲಿ ಮೇರು ಕೃತಿಯೆನಿಸಿದ ಶ್ರೀಮದ್ಭಾಗವತವು ನವವಿಧ ಭಕ್ತಿಯನ್ನು ಉಲ್ಲೇಖಿಸುತ್ತದೆ. 

"ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್|
ಇತಿ ಪುಂಸಾರ್ಪಿತಾ ವಿಷ್ಣೋ ಭಕ್ತಿಶ್ಚೇನ್ನವಲಕ್ಷಣಾ||"

ಜಗದೊಡೆಯ ಜಗದ್ರಕ್ಷಕ ವಿಷ್ಣುವಿನ ನಾಮಗುಣಲೀಲಾ ಕಥನಗಳ ಶ್ರವಣ, ಕೀರ್ತನ, ಹಾಗೂ ಭಗವಂತನ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ, ಇವುಗಳೇ ಆ ನವವಿಧ ಭಕ್ತಿ. 

ಭಕ್ತಿಯಲ್ಲಿಯೂ ಎರಡು ವಿಧ:-

1. ಯಥಾರ್ಥ/ಸತ್ಯ ಭಕ್ತಿ. 
2. ದರ್ಶನ/ತೋರಿಕೆಯ ಭಕ್ತಿ. 

ಭಗವಂತನಿಗೆ ಮಾಡಬೇಕಾಗಿರುವುದು ಯಥಾರ್ಥ/ಸತ್ಯ ಭಕ್ತಿಯೇ ಹೊರತು ದರ್ಶನ/ತೋರಿಕೆಯ ಭಕ್ತಿ ಅಲ್ಲ. 

ಹಿರಿಯವರಲ್ಲಿಯೂ ಎರಡು ವಿಧ:-

1. ವಯೋವೃದ್ಧ.
2. ಜ್ಞಾನವೃದ್ಧ. 

ಇಲ್ಲಿ ಜ್ಞಾನ ಎಂದರೆ ಆಧ್ಯಾತ್ಮಿಕ ಜ್ಞಾನ (ವೇದಜ್ಞಾನ, ಭಗವಂತನ ಅರಿವು) ಹೊರತು ಸಾಮಾನ್ಯ ಜ್ಞಾನವಲ್ಲ. 
(ಈಗಿನ ವಿದ್ಯಾಲಯದಿಂದ ಪಡೆಯುವುದು ಸಾಮಾನ್ಯ ಜ್ಞಾನ.)

ತೋರಿಕೆಯ ಭಕ್ತಿಯನ್ನು ದೇವರು, ಗುರುಗಳು, ಹಿರಿಯವರನ್ನು ಬಿಟ್ಟು ಬೇರೆಯವರಿಗೆ ಅಂದರೆ ಧನವಂತನಿಗೆ, ಗೌರವಕ್ಕೆ ಅರ್ಹನಲ್ಲವನಿಗೆ, .... ಮಾಡುವುದರಲ್ಲಿ ತಪ್ಪಿಲ್ಲ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
***

ನವವಿಧ ಭಕ್ತಿಯ ಚಿಂತನೆ : ( ಪಾದ ಸೇವನಂ)
ಪಾದ ಸೇವ :
ಪರಮಾತ್ಮನ ಅವಯವಗಳಲ್ಲಿ ಭೇದ ಇಲ್ಲ. ಆದರೆ ಪರಮಾತ್ಮನ ಪಾದದಿಂದ ನಡಿದುರುವ ಕ್ರಿಯೆಗಳು ಸ್ಮರಿಸಿ ಅವನ ಪಾದಸೇವೆ ಮಾಡಬೇಕು. ನಾವು ವಿಷ್ಣು ಮೂರ್ತಿಯ ಪಾದಗಳನ್ನು ನೋಡುವಾಗ ಮಾನಸಿಕ ಅನುಸಂಧಾನ ಹೀಗೆ ಮಾಡಬೇಕು.
1 . ರಾಮನ ಪಾದುಕೆಗಳನ್ನ ಭಕ್ತಿಯಿಂದ ಸೇವೆ ಮಾಡಿ ರಾಜ್ಯವನ್ನು ಆಳಿದ ತಮ್ಮ ಭರತ.
2 . ರಾಮನ ಪಾದ ಸೋಕಿ ಶಿಲೇಯಾಗಿ ಇರುವ ಅಹಲ್ಯೆ ತನ್ನ ರೂಪವನ್ನು ಪಡೆದಳು.
3 . ರಾಮನ ಪಾದವನ್ನು ತೊಳೆದು ಧನ್ಯನಾದ  ಗುಹ(ನಾವಿಕೆ ನಡಿಸುವ).
4   ಕೃಷ್ಣನ ಪಾದ ಚಿಹ್ನೆ ಕಾಳಿಂಗನ ರಕ್ಷಿಸಿತು.
5 . ಕೃಷ್ಣನ ಪುಟ್ಟ ಪಾದ ಚಿಹ್ನೆ ನೋಡಿ, ಅಕ್ರೂರ ತನ್ನ ರಥದಿಂದ ಇಳಿದು ಮಣ್ಣಲ್ಲಿ ಹೊರಳಿ ಸೇವೆಮಾಡಿದ.    
6 . ಅರ್ಜುನ ಶ್ರೀಕೃಷ್ಣನ ಪಾದ ಹತ್ತಿರ ಕೂತು ಕೃಷ್ಣನ್ನೇ ಪಡೆದ.
7 . ವಿಷ್ಣುಪಾದ ದಿಂದ ಗಯಾಸುರನ ಉದ್ದಾರವಾಯ್ತು.
8 . ವಿಷ್ಣು ಪಾದನಖದಿಂದ ಹುಟ್ಟಿರುವಳು ಗಂಗೆ (ವಿಷ್ಣುಪದಿ).ಆದಕಾರಣ ಗಂಗೆ ನದಿಗಳಲ್ಲಿ ಶ್ರೇಷ್ಠ. 
9 . ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ನಿಗ್ರಹಮಾಡಿದ. ಅವನಿಗೆ ಮುಂದಿನ ಇಂದ್ರ ಪದವಿಕೊಟ್ಟ.
10 ಬ್ರಹ್ಮಾದಿ ದೇವತೆಗಳು ತಮ್ಮ ಕಿರೀಟವನ್ನು ಪರಮಾತ್ಮನ ಚರಣಕ್ಕೆ ಮುಟ್ಟಿಸಿ ಕೃತಾರ್ಥರಾಗುತ್ತಾರೆ.     
12 ಪರಮಾತ್ಮನ ಎಡಪಾದ ಜ್ಞಾನವನ್ನು, ಬಲಪಾದ ಆನಂದವನ್ನು ಕೊಡುತ್ತವೆ.
13 ಮೂಲೇಶನ ಪಾದವನ್ನು ಆಶ್ರಯಿಸಿ ಮುಖ್ಯಪ್ರಾಣ ನಮ್ಮ ಹೃದಯದಲ್ಲಿ ಇರುತ್ತಾನೆ. ಮುಖ್ಯಪ್ರಾಣ ಪಾದವನ್ನು ಆಶ್ರಯಿಸಿ ಜೀವ ಸದಾ ಇರುತ್ತಾನೆ.
14 . ಪುರುಷಸೂಕ್ತದಂತೆ "ಪದ್ಭ್ಯಾಮ್ ಶೂದ್ರೋ ಅಜಾಯತ". ಮೂಲ ವಿರಾಟ್ ಪುರುಷ ಪಾದದಿಂದ ಶೂದ್ರ ವರ್ಣಕ್ಕೆ ಅಭಿಮಾನಿ ದೇವತೆಗಳಾದ ನಿಋತಿ ಹುಟ್ಟಿದನು. 
ಭರತ ಚಿತ್ರಕೂಟಕ್ಕೆ ಬಂದಾಗ ಅಲ್ಲಿ ಶ್ರೀ ರಾಮಚಂದ್ರನ ಚರಣ ಚಿಹ್ನೆಗಳನ್ನು ನೋಡಿ ಅಲ್ಲಿಯೇ ಶತೃಜ್ಞನ ಕೂಡಿಕೊಂಡು ಆ ಚರಣ ಸೋಕಿದ ಧೂಳಿನಲ್ಲಿ ಹೊರಳಾಡುತ್ತಾ ಹೀಗೆಂದು ಒಮ್ಮೆ ಮನಿಸ್ಸಿನಲ್ಲಿ ಅಂದುಕೊಂಡ.
ಅಹೋ ಸುಧನ್ಯೋSಹಮಮೂನೀ ರಾಮ ಪಾದಾರವಿದಾಂಕಿತ ಭೂತಲಾನಿ |
ಪಶ್ಯಾಮಿ ಯತ್ಪಾದರಜೊ ವಿಮೃಗ್ಯಮ್ ಬ್ರಹ್ಮಾದಿದೇವೈ ಶ್ರುತಿಭಿಶ್ಚ ನಿತ್ಯಂ ||  ಅ.ರಾ
"ಆಹಾ ! ನಾನು ಪರಮ ಧನ್ಯನಾಗಿದ್ದೇನೆ. ಇಂದು ಭಗವಾನ್ ಶ್ರೀ ರಾಮನ ಚರಣಾರವಿಂದ ಭೂಷಿತವಾದ ಈ ನೆಲವನ್ನು ನೋಡುತ್ತಿದ್ದೇನೆ. ಈ ಚರಣ ರಜವನ್ನು ಬ್ರಹ್ಮಾದಿ ದೇವತೆಗಳು, ಶ್ರುತಿ (ಶ್ರೀ ಲಕ್ಷ್ಮೀದೇವಿ) ಸದಾಕಾಲ ಹುಡುಕುತ್ತಿದ್ದಾರೆ. " ಎಂದು ಮನದಲ್ಲಿ ಅಂದುಕೊಂಡ. ಇಲ್ಲಿ ರಾಮನ ಬ್ರಾತೃ ಪ್ರೇಮಕ್ಕಿಂತ ಶುದ್ಧವಾದ ಪ್ರಭು ಪ್ರೇಮ ಕಂಡು ಬರುತ್ತದೆ.
ನಾಗಪತ್ನಿಯರು ಹೇಳುತ್ತಾರೆ. ಭಗವಂತನ ಪಾದರಜ ಸೇವೆ ಮುಂದೆ ಮೋಕ್ಷವನ್ನೇ ತಿರಸ್ಕರಿಸುತ್ತಾರೆ. 
ನ ನಾಕ ಪೃಷ್ಠಮ್ ನ ಚ ಸಾರ್ವಭೌಮಮ್ ನ ಪಾರಮೇಷ್ಟ್ಯಮ್ ನ ರಸಾಧಿಪತ್ಯಂ |
ನ ಯೋಗಸಿದ್ದೀರಪುನರ್ಭವಂ ವಾ ವಾoಚ್ಛಂತಿ ಯತ್ಪಾದರಜ: ಪ್ರಪನ್ನಾ: || - ಭಾಗವತ ೧೦-೧೬-೩೭ 
ನಿನ್ನ ಚರಣ ಧೂಳಿನ ಶರಣಾಗತಿಯನ್ನು ಸ್ವೀಕರಿಸುವ ಭಕ್ತ ಜನರು, ಸ್ವರ್ಗವನ್ನು ಬಯಸುವುದಿಲ್ಲ, ಚಕ್ರವರ್ತಿತನ, ಬ್ರಹ್ಮಪದ , ಅಖಂಡಪೃಥ್ವಿಯ ವೊಡೆತನ ಮತ್ತು ಯೋಗ ಸಿದ್ದಿಗಳನ್ನೂ ಕೂಡ ಬಯಸುವುದಿಲ್ಲ. ಅವರು ಮೋಕ್ಷವನ್ನು ಕೂಡ ಇಚ್ಛಿಸುವುದಿಲ್ಲ.
ಮತ್ತು ಎಲ್ಲ ವ್ರತಕಥೆಗಳಲ್ಲಿ ನಾವು ದೇವರಿಗೆ ಅರ್ಗ್ಯ ಪಾದ್ಯಾದಿಗಳನ್ನು ಕೊಡುತ್ತೇವೆ. ಅವನು ನಿರಾಕಾರ ಎಂದು   ಮೂರ್ಖರು ಹೇಳುತ್ತಾರೆ. ಪರಮಾತ್ಮನಿಗೂ ಆನಂದಮಯವಾದ ಶರೀರ ಇದೆ. ಆದರೆ ನಮ್ಮಂತ ಭೌತಿಕ ನಾಶಹೊಂದುವ ಶರೀರ ಇಲ್ಲ ಎನ್ನುವುದೇ ನಿರಾಕಾರದ ಅರ್ಥ.
"ನಿನ್ನ ಪಾದವ ತೋರೋ ಶ್ರೀರಾಮ", "ತಿಮ್ಮಯ್ಯಾ ನಿನ್ನ ಪಾದವ","ನಂಬಿದೆ ನಿನ್ನ ಪಾದವ, ವೆಂಕಟರಮಣ","ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ", "ಇಕೋ ನೋಡೆ ರಂಗನಾಥನ ಪುಟ್ಟ ಪಾದವ"  ಹೀಗೆ ಬಗೆ ಬಗೆ ಯಾಗಿ  ದಾಸರು ಪರಮಾತ್ಮನ ಪಾದ ಬಣ್ಣಿಸಿದ್ದಾರೆ.
ಗುರ್ವoತರ್ಗತ ಕೃಷ್ಣಾರ್ಪಣಮಸ್ತು
***

ನವವಿಧ ಭಕ್ತಿಯ ಚಿಂತನೆ : (ಆತ್ಮನಿವೇದನಂ)
ಆತ್ಮನಿವೇದನಂ ಉತ್ಕೃಷ್ಟವಾದ ಹಂತ ಎಂದು ಹೇಳಬಹುದು.
ಭಾಗವತದಲ್ಲಿ 9 ಸ್ಕಂದಗಳ ನವವಿಧ ಭಕ್ತಿಯ ತೋರಿದ ತನ್ನ ಭಕ್ತರ ಕಥೆ ಆದಮೇಲೆ ಶ್ರೀಕೃಷ್ಣನ ದಶಮ ಸ್ಕಂದ ಬರುತ್ತದೆ. ಮೊದಲು ತನ್ನ ಭಕ್ತರ ಮಹಿಮೆ ಆದಮೇಲೆ ಕೃಷ್ಣನ  ಮಹಿಮೆ. "ಭಕುತಜನ ಮುಂದೆ ನೀನವರ ಹಿಂದೆ" ಎನ್ನುವಂತೆ ಭಕ್ತಿಯ ಪರಾಕಾಷ್ಠೆ ಏನು ಅಂದರೆ ಅದು ಕೃಷ್ಣನ ಆಗಮನ. 
ಗೋಪಿಗಿತೇ ಆತ್ಮನಿವೇದನಂ ಎಂದು ಹೇಳಬಹುದು. ಗೋಪಿಯರು ಎಂದಿಗೂ ಇಂದಿಗೂ ಮಾಡುವಂತದ್ದು ಉಪಕಾರಸ್ಮರಣೆ. ಅವರು ಹೇಳುತ್ತಾರೆ : 
विषजलाप्ययाद्व्यालराक्षसा-
     द्वर्षमारुताद्वैद्युतानलात् ।
वृषमयात्मजाद्विश्वतोभया-
     दृषभ ते वयं रक्षिता मुहुः ॥ ३॥
ಹೇ ಸರ್ವೋತ್ತಮನೇ, ನೀನು ನಮ್ಮನ್ನು ಕಷ್ಟಗಳಿಂದ, ಭಯಾನಕ ರಾಕ್ಷಸರಿಂದ ರಕ್ಷಿಸಿದಲ್ಲವೇ. ಒಂದು ಬಾರಿ ಅಲ್ಲ ಅನೇಕ ಬಾರಿ. ಕಾಳಿಂಗ ತಂಗಿದ್ದ ವಿಷದ ಮಡುವಿನಿಂದ,ಭಯಾನಕ ಮಳೆಗಳಿಂದ, ಮನುಷ್ಯರನ್ನು ತಿನ್ನುವ ಭಯಾನಕ ರಾಕ್ಷಸರಿಂದ, ಇಂದ್ರನ ಆರ್ಭಾಟದಿಂದ ಹೊಂದಿದ ಪ್ರಕೃತಿಯ ಕ್ಷೋಭದಿಂದ,ವೃಷಭ,ವ್ಯೋಮಾಸುರ (ಮಯಾಸುರನ ಮಗ), ಅಘಾಸುರ ಮುಂತಾದ ಅತಿ ಅಪಾಯಕಾರಿ ಅಸುರರಿಂದ ನಮ್ಮನ್ನು ನೀನು ರಕ್ಷಿಸಿರುವೆ.
ಹೀಗೆ ಕೃಷ್ಣನ ಹೋಗುಳುತ್ತಾ, ಕೊನೆಯಲ್ಲಿ ಅವರು ಬಂದ ರೀತಿಯನ್ನು ಹೇಳುತ್ತಾರೆ.
पतिसुतान्वयभ्रातृबान्धवा-
     नतिविलङ्घ्य तेऽन्त्यच्युतागताः ।
गतिविदस्तवोद्गीतमोहिताः
     कितव योषितः कस्त्यजेन्निशि ॥ १६॥
ಹೇ ಅಚ್ಯುತ, ನಾವು ಇಲ್ಲಿ ನಡು ರಾತ್ರಿಯಲ್ಲಿ ನಿನ್ನ ಕೊಳಲ ಧ್ವನಿ ಕೇಳಿ ಬಂದದ್ದು ನಿನ್ನನ್ನು ದರ್ಶನ ಪಡೆಯಲು ಮಾತ್ರ. ನೀನು ನಮ್ಮನ್ನು ಮೋಸಮಾಡಿ ಒಂಟೆ ಯಾಗಿ ಬಿಟ್ಟುಹೊಗಿದಿಯ.ನಾವು ನಮ್ಮ ಗಂಡಂದರನ್ನ, ಬಂಧು ಬಾಂಧವರನ್ನ , ಮಕ್ಕಳನ್ನ. ದೊಡ್ಡವರನ್ನ , ಅಣ್ಣಂದರಿನ್ನ ತೊರೆದು ಇಲ್ಲಿ ನಿನ್ನನ್ನು ನೋಡಲು ಬಂದೆವು.
ಇದು ಆತ್ಮನಿವೇದನ. ಇದನ್ನೇ ಕನಕ ದಾಸರು ನುಡಿದರು "ತೊರೆದು ಜೀವಿಸ ಬಹುದೇ ಹರಿ ನಿನ್ನ ಚರಣಗಳ.."  ಇಲ್ಲಿ ದ್ವಂದ್ವ ಇಲ್ಲ. ಲೋಕದ ಮೋಹದ ಕೈ-ಚಳಕ ಇವರ ಮೇಲೆ ನಡೆಯುದಿಲ್ಲ. ಹರಿ ಸರ್ವೋತ್ತಮ ಪ್ರಕೃಷ್ಟವಾದ ಜ್ಞಾನ ಮತ್ತು ಅವನು ಕೊಟ್ಟ ಅನುಗ್ರಹವೇ ನಮ್ಮ ಜೀವನ ಎನ್ನುವುದು ಜೀವನದ ಉಸಿರು.
ಕೃಷ್ಣ ಹೇಳಿದ " ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕ ಶರಣಂ ವ್ರಜ |.." ಅವೈಷ್ಣವ ಧರ್ಮಗಳನ್ನ ಬಿಟ್ಟು ನನಿಗೆ ಯಾರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೋ ಅವರಿಗೆ ಮೋಕ್ಷ ಕೊಡುತ್ತೇನೆ" ಎನ್ನುವುದು ಕೃಷ್ಣನ ಪ್ರತಿಜ್ಞೆ.
ಯಾವ ಭಕ್ತರು ಆತ್ಮನಿವೇದನಕ್ಕೆ ನಿದರ್ಶನ ? ಗೋಪಿಯರು, ಬಲಿ ಮಹಾರಾಜ, ರಾಮ ಆನುಜ ಲಕ್ಷ್ಮಣ ಮತ್ತು ಭರತ  ಮುಂತಾದವರು ಪರಮ ಭಕ್ತರೆನಿಸಿದ್ದಾರೆ.
ತಸ್ಮೈ ತದ್ ಭರತೋ  ರಾಜ್ಯಮಾಗತಾಯಾತಿಸತ್ಕೃತಂ |
ನ್ಯಾಸಂ ನಿರ್ಯಾತಯಾಮಾಸ ಯುಕ್ತ: ಪರಮಯಾ ಮುದಾ || 
ವನಪರ್ವ ಮಹಾಭಾರತ
ಮಹಾಭಾರತದಲ್ಲಿಯೂ ಭರತನ ಆತ್ಮನಿವೇದನ ತೋರಿಸಿದ್ದಾರೆ ವ್ಯಾಸರು. "ಭರತನು ಕಾಡಿನಿಂದ ಮರಳಿ ಬಂದಿರುವ ಶ್ರೀರಾಮಚಂದ್ರನಿಗೆ ತುಂಬಾ ಹರ್ಷದಿಂದ ಅತ್ಯಂತ ಸತ್ಕಾರಪೂರ್ವಕ ಒಪ್ಪಿಸಿದನು." 
ಇಲ್ಲಿ ನಾವು ಗಮನಿಸಿದ ಬೇಕಾದ ಅಂಶವೆಂದರೆ, ಲಕ್ಷ್ಮಣನು ತನ್ನ ಪತ್ನಿಯನ್ನ ತೊರೆದು ಶ್ರೀರಾಮನ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿದ. ಇದು ಆತ್ಮನಿವೇದನೆ ಅಲ್ಲದೆ ಇನ್ನೇನು.
***

No comments:

Post a Comment