SEARCH HERE

Tuesday 1 January 2019

ರಂಗವಲ್ಲಿ ರಂಗೋಲಿ ನಮಸ್ಕಾರ ಪ್ರದಕ್ಷಿಣೆ ಕ್ರಮ rangoli rangavalli namaskara krama procedure





ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ? ‌                    ‌             
ರಂಗೋಲಿಯ ಪ್ರಾಮುಖ್ಯತೆ ಏನು, ಅದರಿಂದ ಉಂಟಾಗುವ ಉಪಯೋಗಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
 
ಮುಂಜಾನೆ ಮನೆಯ ಹೆಂಗಳೆಯರು ಎದ್ದು ಹೊಸಿಲಿಗೆ ನೀರು ಹಾಕಿ ರಂಗೋಲಿ ಹಾಕಿದರೆ ಮನೆಗೊಂದು ಲಕ್ಷಣವೆನ್ನುತ್ತಾರೆ. ಈ ರಂಗೋಲಿ ಹಾಕುವ ಸಂಪ್ರದಾಯವನ್ನು ಹಿಂದಿನ ಕಾಲದಿಂದ ಇಂದಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಈಗೀಗ ಆಧುನಿಕತೆಗೆ ಒಗ್ಗಿಕೊಂಡ ಜನ, ರಂಗೋಲಿ ಹಾಕಲು ಸಮಯವಿಲ್ಲದೇ ರಂಗೋಲಿ ಚಿತ್ರವಿರುವ ಪ್ಲಾಸ್ಟಿಕ್‌ ಹಾಳೆಯ ಮನೆಯ ಬಾಗಿಲಿನ ಮುಂದೆ ಅಂಟಿಸಿಬಿಡುತ್ತಾರೆ. ಆದರೆ ಇದರಿಂದ ಯಾವುದೇ ಪರಿಣಾಮಗಳು ಉಂಟಾಗದು. ನಿಜವಾಗಿಯೂ ರಂಗೋಲಿಯ ಪ್ರಾಮುಖ್ಯತೆ ಏನು, ಅದರಿಂದ ಉಂಟಾಗುವ ಉಪಯೋಗಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
ಧಾರ್ಮಿಕ ಮಹತ್ವ

ರಂಗೋಲಿಯು ಬಣ್ಣಗಳ ಆಚರಣೆಯನ್ನು ಸಂಕೇತಿಸುವ ಸಂಸ್ಕೃತ ಪದ 'ರಂಗವಲ್ಲಿ'ಯಿಂದ ಬಂದಿದೆ. ಇದು ಪ್ರಾಚೀನ ಭಾರತೀಯ ಕಲೆ, ಶಿಲ್ಪಕಲೆ ಹಾಗೂ ವರ್ಣಚಿತ್ರಗಳಿಗಿಂತಲೂ ಹಿಂದಿನದಾಗಿದೆ. ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿದಿನಗಳು ಇರಲಿ ರಂಗೋಲಿಯನ್ನು ಶುಭ ಸೂಚಕವಾಗಿ ಹಾಗೂ ಪ್ರಾಥಮಿಕ ಅವಶ್ಯಕತೆಯಾಗಿ ಬಳಸಲಾಗುತ್ತದೆ. ಹಬ್ಬ, ಆಚರಣೆ, ವಿವಾಹ, ಧಾರ್ಮಿಕ ಪೂಜೆ ಮುಂತಾದ ಶುಭ ಕಾರ್ಯಗಳಲ್ಲಿ ಹಾಕುವಂತಹ ರಂಗೋಲಿಯು ಆ ಸ್ಥಳಕ್ಕೆ ಧಾರ್ಮಿಕ ಸ್ಪರ್ಶವನ್ನು ನೀಡುತ್ತದೆ.

ರಂಗೋಲಿಯ ಉದ್ದೇಶ

ರಂಗೋಲಿಯನ್ನು ಎರಡು ಉದ್ದೇಶಕ್ಕಾಗಿ ಬಳಸಲಾಗುತ್ತದೆ ಒಂದು ಸೌಂದರ್ಯಕ್ಕಾಗಿ ಇನ್ನೊಂದು ಶುಭವನ್ನು ಪಡೆಯಲು. ರಂಗೋಲಿಯಲ್ಲಿ ಬಿಡಿಸಿದಂತಹ ಚಿತ್ರಗಳು ಕೂಡಾ ಸಾಂಕೇತಿಕವಾಗಿರುತ್ತದೆ. ನೇರವಾದ ರಂಗೋಲಿ ರೇಖೆಗಳಿಗಿಂತ ಬಾಗಿದ ರೇಖೆಗಳು ಹೆಚ್ಚು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರೇ ರಂಗೋಲಿ ಹಾಕುವುದು ಹೆಚ್ಚು. ರಂಗೋಲಿ ಹಾಕಲು ಅವರಿಗೆ ಯಾವುದೇ ಅಚ್ಚು, ದಾರ, ಕುಂಚಗಳು ಬೇಕಾಗಿಲ್ಲ. ಬೆರಳಿನ ಮೂಲಕವೇ ವಿವಿಧ ವಿಧವಾದ ರಂಗೋಲಿಗಳು ಮಹಿಳೆಯರ ಬೆರಳಿನ ಮೂಡುತ್ತವೆ. ‌                 ‌    ‌                                                                   
ಆಧ್ಯಾತ್ಮಿಕ ಮಹತ್ವ

ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬ, ಶುಭ ಸಂದರ್ಭ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳು ದೇವತಾ ತತ್ವಕ್ಕೆ ಸಂಬಂಧಿಸಿರುವುದರಿಂದ ರಂಗೋಲಿ ಹಾಕಿದರೆ ಶುಭವೆಂದು ಹೇಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಆಯಾ ಆಚರಣೆಗೆ ಸಂಬಂಧಿಸಿದ ದೈವಿಕ ತತ್ವವು ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಆ ದೇವತೆಯನ್ನು ಧಾರ್ಮಿಕ ಆಚರಣೆಯನ್ನು ಮಾಡುವ ಸ್ಥಳಕ್ಕೆ ಆಕರ್ಷಿಸಲು ರಂಗೋಲಿಯನ್ನು ಹಾಕಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ದೇವತಾ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನು ಹೆಚ್ಚು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿದರೆ, ಪ್ರತಿಯೊಬ್ಬರೂ ಕೂಡಾ ಹೆಚ್ಚಿನ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯುತ್ತಾರೆಂದು ಹೇಳಲಾಗುತ್ತದೆ.
 ‌                                                                                                       ಆಧ್ಯಾತ್ಮಿಕ ಪರಿಣಾಮ

ಆಧ್ಯಾತ್ಮಿಕ ತತ್ವದ ಪ್ರಕಾರ ನಿಮ್ಮ ಸುತ್ತಲಿನ ಶಬ್ದ,ಸ್ಪರ್ಶ, ರುಚಿ, ರೂಪ, ವಾಸನೆಯ ಶಕ್ತಿಯು ನಿಮ್ಮ ದೇಹ ಹಾಗೂ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಹಿಳೆಯು ರಂಗೋಲಿ ಹಾಕುವಾಗ ಅದು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ರಂಗೋಲಿಯ ರೂಪ ಹಾಗೂ ಬಣ್ಣದಲ್ಲಿ ಸಣ್ಣ ವ್ಯತ್ಯಾಸವನ್ನು ಮಾಡಿದರೂ, ಅದರ ಕಂಪನಗಳು ಬದಲಾಗುತ್ತವೆ.

ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವವರ ಮನಸ್ಸಿನ ಮೇಲೆಯೂ ರಂಗೋಲಿಯು ಪ್ರಭಾವ ಬೀರುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುವುದರ ಜೊತೆಗೆ ಮನೆಯ ಆಂತರಿಕ ಶಾಂತಿಯನ್ನೂ ಕಾಪಾಡುತ್ತದೆ. ನಿಮ್ಮ ಮನೋಸ್ಥಿತಿ ಬದಲಾಯಿಸಲು, ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ರಂಗೋಲಿ ಸಹಾಯಕ.
 ‌                                                                     ಸಾತ್ವಿಕ ರಂಗೋಲಿ

ಸಾತ್ವಿಕ ರಂಗೋಲಿ ರಂಗವಲ್ಲಿಯ ಒಂದು ವಿಧ. ಇದರ ಮುಖ್ಯ ಲಕ್ಷಣವೆಂದರೆ ಈ ರಂಗೋಲಿಯ ದೇವತಾತತ್ವದ ಪ್ರಸರಣದಿಂದಾಗಿ ಭಕ್ತರು ದೈವಿಕ ಶಕ್ತಿ, ಭಾವ(ಆಧ್ಯಾತ್ಮಿಕ ಭಾವನೆ), ಚೈತನ್ಯ(ದೈವಿಕ ಪ್ರಜ್ಞೆ), ಆನಂದ, ಶಾಂತಿ, ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುತ್ತಾರೆ. ಹಸ್ತಮುದ್ರಿಕಾ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವುದು. ಈ ಶಕ್ತಿಯು ಆತ್ಮವನ್ನು ಶುದ್ಧೀಕರಿಸುವುದಲ್ಲದೇ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ.
 ‌                                                            ರಂಗೋಲಿಯನ್ನು ಎಲ್ಲಿ ಹಾಕಬೇಕು

ರಂಗೋಲಿಯನ್ನು ಸಾಮಾನ್ಯವಾಗಿ ಮಣ್ಣಿನ ನೆಲ, ಸೆಗಣಿ ಸಾರಿಸಿದ ನೆಲ, ಟೈಲ್ಸ್ ನೆಲದ ಮೇಲೆಯೂ ಹಾಕಬಹುದು. ಯಾರಿಗಾದರೂ ಆರತಿ ಮಾಡುವಾಗ, ಕುಳ್ಳಿರಿಸುವ ಮರದ ಮಣೆಯ ಸುತ್ತಲೂ ರಂಗೋಲಿಯನ್ನು ಹಾಕಬಹುದು. ಜೊತೆಗೆ ಮಣೆಯ ಮುಂದೆಯೂ ರಂಗೋಲಿ ಹಾಕಬಹುದು.
ರಂಗೋಲಿ ಯಾಕೆ ಹಾಕಬೇಕು?

ನೆಲವನ್ನು ಗುಣಿಸುವಾಗ ಅಥವಾ ಸೆಗಣಿ ಸಾರಿಸುವಾಗ ಅದು ನೆಲದ ಮೇಲೆ ಸೂಕ್ಷ್ಮರೇಖೆಗಳನ್ನು ಸೃಷ್ಟಿಸುತ್ತದೆ. ಇದು ಕೆಲವೊಂದು ಕಂಪನಗಳನ್ನು ಉಂಟುಮಾಡುತ್ತದೆ. ಈ ರೇಖೆಗಳು ಅನಿಯಮಿತವಾದುದರಿಂದ ಅವುಗಳ ಕಂಪನಗಳೂ ಕೂಡಾ ಅನಿಯಮಿತವಾಗಿರುತ್ತದೆ. ಇದು ದೇಹ, ಕಣ್ಣು ಹಾಗೂ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ನೆಲದ ಮೇಲೆ ಶಂಖದ ರಂಗೋಲಿ, ಶುಭ ಚಿಹ್ನೆಗಳನ್ನೊಳಗೊಂಡ ರಂಗೋಲಿಯನ್ನು ವ್ಯವಸ್ಥಿತವಾಗಿ ಬಿಡಿಸಿದರೆ ಇವು ಪ್ರತಿಕೂಲ ಕಂಪನಗಳನ್ನು ನಿವಾರಿಸುವುದು ಹಾಗೂ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
*****

ಪ್ರತಿದಿನ ರಂಗವಲ್ಲಿ ಹಾಕೋಕೆ ಮುಂಚೆ , ರಂಗೋಲಿಯನ್ನು ದೇವರ ಮನೆಯ ಬಾಗಿಲಲ್ಲಿ ಇಟ್ಟು, ಗಣೇಶನ ಪ್ರಾರ್ಥಿಸಿ, ವಿಷ್ಣುವಿಗೆ ನಮಸ್ಕರಿಸಿ ರಂಗವಲ್ಲಿ ಇಡಬೇಕು..

ದೇವರನಾಮಸ್ಮರಣೆ ಮಾಡುತ್ತಾ ಇಡಬೇಕು...
PAINT ರಂಗವಲ್ಲಿ ಇಡಬಾರದು, ಇಟ್ಟಿದ್ದರು ಅದರ ಮೇಲೆ ಈ ರಂಗವಲ್ಲಿ ಇಡಿ..

ಗಣಪತಿ ಸ್ತೋತ್ರ...
"ಕಡು ಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ ಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು ||
ನಡುನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮ ಕೀರ್ತನೆ ನುಡಿದು ನುಡಿಸೆನ್ನಿಂದ ಪ್ರತಿದಿವಸದಲಿ ಮರೆಯದಲೆ ||

#ದೇವರಿಗೆನಮಸ್ಕಾರಹಾಕುವಾಗ

"ಬ್ರಹ್ಮಾಂಡ, ಬ್ರಹ್ಮಾಂಡದೊಳಗೆ ವೇದಸ್ಮರಣೆ, ಮಧ್ಯೆ ಸಹಸ್ರದಳ ಕಮಲ,  ಸಹಸ್ರ ಕಮಲದೊಳಗೆ ಶ್ರೀ ಲಕ್ಷ್ಮೀನಾರಾಯಣರು ಕುಳಿತಿರುವರು.
ಎಡದಲ್ಲಿ "ಧರಾದೇವಿ , ಬಲದಲ್ಲಿ ರಮಾದೇವಿ, ವಕ್ಷಸ್ಥಳದಲ್ಲಿ ಲಕ್ಷ್ಮೀದೇವಿ,  ಶ್ರೀದೇವಿ, ಭೂದೇವಿ ಶ್ರೀ ಹರಿಯ ಪಾದ ಒತ್ತುತ್ತಿಹರು.  ಅಪ್ಸರಾ ಸ್ತ್ರೀಯರು ನರ್ತನಾ ಮಾಡುತಿಹರು, ಗಂಧರ್ವರು ಗಾಯನ ಮಾಡುತಿಹರು, ತುಂಬುರರು ನಾರದರು ಸಂಗೀತ ಹಾಡುತಿಹರು , ಇಂಥಾ ವಿಶ್ವಮೂರ್ತಿ ಕಾಲಮೂರ್ತಿ ಅಂತಾ ತಿಳಿದುಕೊಂಡು ಸಕಲರೂ ನಮಸ್ಕಾರ ಮಾಡುತಿಹರು..

ಇಂಥಾ ವಿಶ್ವಮೂರ್ತಿಗೆ
ಒಂದು ಪ್ರದಕ್ಷಿಣೆ ಹಾಕಿದರೆ ಕೋಟಿ ಪುಣ್ಯ ಬರುವುದು.
ಎರಡು ಪ್ರದಕ್ಷಣೆ ಹಾಕಿದರೆ ಅಯೋಧ್ಯಾರಾಮನ ಸೇವೆಯಾಗುವುದು,
ಮೂರು ಪ್ರದಕ್ಷಿಣೆ ಹಾಕಿದರೆ ಮುಕ್ತಿ ಪಥ ಕಾಣುವುದು ..
ನಾಲ್ಕು ಪ್ರದಕ್ಷಿಣೆ ಹಾಕಿದರೆ "ನಾರಾಯಣ ಲೋಕ ಕಾಣುವರು..
ಐದು ಪ್ರದಕ್ಷಿಣೆ ಹಾಕಿದರೆ ಸಾಕ್ಷಾತ್ ವೈಕುಂಠ ಕಾಣುವರು ...

#ಅಡುಗಮಾಡುವಾಗನಾರಾಯಣ_ಧ್ಯಾನ..

"ಸೂರ್ಯನಾರಾಯಣ ಸಾರಥಿಯಾಗಲಿ, ಅಟ್ಟ ಅಡಿಗೆ ಅಕ್ಷಯವಾಗಲಿ, ಭಗವಂತನ ನೈವೇದ್ಯವಾಗಲಿ, ಲಕ್ಷಜನರ ಭೋಜನವಾಗಲಿ, ಲಕ್ಷ್ಮೀನಾರಾಯಣ ತೃಪ್ತನಾಗಲಿ, ಲಕ್ಷ್ಮೀನಾರಾಯಣ ಲಕ್ಷ್ಯ ನಮ್ಮ ಕಡೆ ಇರಲಿ, ಆಶೀರ್ವಧಿಸಲಿ....

ಎಂದು ಹೇಳಿ ನಾರಾಯಣನ ಧ್ಯಾನ ಮಾಡಬೇಕು...
*******

ಕಥೆ ಹೇಳುವ ರಂಗೋಲಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ  ರಂಗೋಲಿ ಹಾಕುವುದು ಒಂದು ಶಾಸ್ತ್ರವಾಗಿ ಬೆಳೆದು ಬಂದಿದೆ . ಆದರೆ ಅದರ ಹಿಂದೆ ಹಲವಾರು ಕಾರಣಗಳು ಅಡಗಿದೆ. ಮೊದಲೆಲ್ಲ ಸರಿಸ್ತೃಪಗಳು ಮನೆಯ ಅಕ್ಕ-ಪಕ್ಕದಲ್ಲಿ ಓಡಾಡುತ್ತಿದ್ದವು. ಹಾಗಾಗಿ ಬೆಳಗ್ಗೆ ಎದ್ದೊಡನೆಯೇ ಮನೆಯ ಒಡತಿಗೆ ತಿಳಿಯುತ್ತಿತ್ತು ಮನೆಯ ಮುಂದೆ ಯಾವುದಾದರೂ ಜೀವ ಜಂತುಗಳು ಓಡಾಡಿದೆಯೇ ಎಂದು. ಅಷ್ಟೇ ಅಲ್ಲದೆ ಸಗಣಿಯ ನೀರಿನಲ್ಲಿ ಮನೆಯ ಅಂಗಳವನ್ನು ಶುದ್ಧ ಮಾಡಿ ಶುದ್ಧ ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬರೆಯುತ್ತಿದ್ದರು. ಇದರಿಂದ ಚಿಕ್ಕ ಚಿಕ್ಕ ಜೀವಿಗಳಿಗೆ ಆಹಾರವಾಗುತ್ತಿತ್ತು ಉದಾಹರಣೆಗೆ ಪುಟ್ಟ ಇರುವೆಗೆ ಅದೇ ಆಹಾರ ಹಾಗೂ ಆ ಆಹಾರವನ್ನು ತಿಂದು ಅವು ಮನೆಯ ಒಳಗೆ ಬಾರದೆ ಇರುವುದನ್ನು ತಡೆಯುವುದು ಉದ್ದೇಶವಾಗಿತ್ತು .
           ರಂಗೋಲಿ ಆ ಮನೆ ಒಡತಿಯ ಮನಸ್ಥಿತಿಯನ್ನ ಸೂಚಿಸುವುದರ ಜೊತೆಗೆ ಆಕೆಯ ಕೌಶಲ್ಯವನ್ನು ಸಹ ಸೂಚಿಸುತ್ತಿತ್ತು. ಎಷ್ಟೋ ಬಾರಿ ಮನೆಗೆ ಬಂದ ಅತಿಥಿಗಳಿಗೆ ಕೆಲವು ಸೂಚನೆಗಳನ್ನು ಅದು ಕೊಡುತ್ತಿತ್ತು.  ಉದಾಹರಣೆಗೆ ಮನೆಯಲ್ಲಿ ಸಾವಾಗಿದ್ದರೆ ವರ್ಷದ ವರೆಗೆ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ.
              ಇದರಿಂದ ಮನೆಗೆ ಬರುವ ಅತಿಥಿಗಳಿಗೆ ಮನೆಯವರ ಮನಸ್ಥಿತಿ ತಿಳಿಯುತ್ತಿತ್ತು. ಹಬ್ಬ ಹರಿದಿನ ವ್ರತಾಚರಣೆಯಲ್ಲಿ ಮನೆಯ ಮುಂದೆ ರಂಗೋಲಿ ನೋಡುವುದೇ ಕಣ್ಣಿಗೆ ಹಬ್ಬ. ಆ ಬಣ್ಣ ಬಣ್ಣದ ರಂಗೋಲಿಯನ್ನು ನೋಡಿದಾಗ ಮನಸ್ಸು ಆನಂದದಿಂದ ತುಂಬುತ್ತಿತ್ತು.ಅಷ್ಟೇ ಅಲ್ಲದೆ ರಂಗೋಲಿಯನ್ನು ತೋರು ಬೆರಳು ಮತ್ತು ಹೆಬ್ಬೆರಳನ್ನ ಬಳಸಿ ಹಾಕುವುದರಿಂದ ಏಕಾಗ್ರತೆ ಹೆಚ್ಚುತ್ತಿತ್ತು. ಅದರಲ್ಲೂ ಮುಂಜಾನೆಯ ಸೂರ್ಯ ಕಿರಣ ಮನೆಯ ಒಡತಿಗೆ ಸಿಗಲಿ ಎಂಬುದೇ ನಮ್ಮ ಹಿರಿಯರ ಉದ್ದೇಶವಾಗಿತ್ತು ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಮನೆಯ ಅಂಗಳವನ್ನು ಸಾರಿಸಿ ಗೂಡಿಸಿ ರಂಗೋಲಿಯನ್ನು ಹಾಕುವ ಪದ್ಧತಿ ಬಂದಿತೆಂದರೆ ತಪ್ಪಾಗುವುದಿಲ್ಲ.
       ಆದರೆ ಈಗ ಆ ಎಲ್ಲ ಸುಂದರ ಪದ್ದತಿಗಳು ಅದರ ಹಿಂದಿನ ಸತ್ಯವನ್ನ ಅರಿಯದೆ ರಾತ್ರಿಯೆ ರಂಗೋಲಿ ಹಾಕಿ ನನ್ನ ಕೆಲಸ ಮುಗಿಯಿತು ಎನ್ನುವ ಹೆಂಗಸರುಗಳೇ ಹೆಚ್ಚು.  ರಂಗೋಲಿ ಮನೆ ಮುಂದೆ ಇರಬೇಕು ಅನ್ನುವ ಉದ್ದೇಶದಿಂದ ಪ್ಲಾಸ್ಟಿಕ್ ರಂಗೋಲಿಗಳನ್ನು ಅಂಟಿಸಿ ಕೆಲಸವನ್ನು ಮುಗಿಸುತ್ತಾರೆ.  ಕೆಲಸದ ಒತ್ತಡ ಎಷ್ಟೇ ಇದ್ದರೂ ಅದರ ಹಿಂದಿನ ತಿಳುವಳಿಕೆಯನ್ನ ತಿಳಿದು ನಾವು ಅದನ್ನು ಆಚರಿಸಿದಾಗ ನಾವು ಎಷ್ಟು ತಪ್ಪು ಮಾಡುತ್ತಿದ್ದೇವೆ ಎಂದು ನಮಗೆ ತಿಳಿಯುತ್ತದೆ.
          ನಮ್ಮ ಹಿರಿಯರು ಹೇಳುತ್ತಿದ್ದ ಮಾತು ರಂಗೋಲಿ ಹಾಕಿ ರಂಗನನ್ನು ಕರೆ ಎಂದು . ಶುದ್ಧ ಮನಸ್ಸಿನಿಂದ ನಾವು ಮಾಡುವ ಕೆಲಸವನ್ನು ದೇವರಿಗೆ ಸಮರ್ಪಿಸಬೇಕು ಎನ್ನುವುದು ಇದರ ಹಿಂದಿನ ಭಾವ  . ಸಗಣಿಯಲ್ಲಿ ಲಕ್ಷ್ಮಿ ಇರುತ್ತಾಳೆ ಹಾಗಾಗಿ ಸಗಣಿ ನೀರನ್ನು ಹಾಕಿ ರಂಗೋಲಿಯನ್ನು ಬಿಟ್ಟು ರಂಗನನ್ನು ಕರೆದಾಗ ರಂಗನ ಜೊತೆ ಲಕ್ಷ್ಮಿಯು ಬಂದು ನೆಲೆಸುತ್ತಾಳೆ ಎಂಬುದು ನಮ್ಮ ಹಿರಿಯರ ಅನುಭವವಾಗಿತ್ತು.
            ಅದರ ಜೊತೆ ಮನೆಯ ಎಲ್ಲಾ ಸದಸ್ಯರು ಸಹ ಸೂರ್ಯೋದಯಕ್ಕೆ ಮುಂಚೆ ಎದ್ದು ತಮ್ಮ ಕೆಲಸವನ್ನು ಆರಂಭಿಸಬೇಕು ಎಂಬುದು ಇದರ ಹಿಂದಿನ ರಹಸ್ಯ. ಮನೆಯ ಮುಂದೆ ರಂಗೋಲಿಯನ್ನು ನೋಡಿ ಇವರ ಮನೆಯ ಕೆಲಸ ಕಾರ್ಯಗಳು ಶುರುವಾಗಿದೆ ಎಂದು ಎಲ್ಲರಿಗೂ ತಿಳಿಯುತ್ತಿತ್ತು . ಅಷ್ಟೇ ಅಲ್ಲ ಇನ್ನೂ ಮನೆಯ ಮುಂದೆ ನೀರು ಹಾಕಿಲ್ಲ ಅಂದರೆ ಅಕ್ಕಪಕ್ಕದವರಿಗೆ ಮನೆ ಒಡೆತಿಗೆ ಹುಷಾರಿಲ್ಲವೇನೋ ಎಂಬ ಸೂಚನೆ ತೋರಿಸುತ್ತಿತ್ತು.  ಆಗ ಅವರು ಬಂದು ಯಾಕ್ರೀ ಹುಷಾರ್ ಇಲ್ವಾ ಅಂತ ವಿಚಾರಿಸುವ ಪರಿಯೇ ಚೆಂದ . ಆದರೆ ಈಗಿನ ಕಾಲದಲ್ಲಿ ಅದಾವ ಸುಳುಸೂಕ್ಷ್ಮ ಇಲ್ಲದೆ ಯಂತ್ರದ ಹಾಗೆ ಮುನ್ನುಗ್ಗುತ್ತಿದ್ದೇವೆ ಎಂಬುದೇ ಶೋಚನೀಯ ಸಂಗತಿ.
          ಇಂತಹ ಸುಂದರ ವಿಚಾರಗಳನ್ನ ಹೊತ್ತಿರುವ ನಮ್ಮ ಈ ರಂಗೋಲಿ ಪದ್ಧತಿಯನ್ನು ನಮ್ಮ ಮುಂದಿನ ಪೀಳಿಗೆಯು ಸಹ ಕರೆದುಕೊಂಡು ಹೋಗಲಿ ಎಂಬುದೇ ಆಶಯ .  ವಂದನೆಗಳೊಂದಿಗೆ
 ಸೌಮ್ಯಕೋಠಿ   ಮೈಸೂರು
***
chaturmasa rangoli

*********

info from sanatana samste website

ರಂಗೋಲಿ ಹಾಕುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ

ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಅಥವಾ ಸೆಗಣಿಯಿಂದ ಸಾರಿಸುವಾಗ ನೆಲದಲ್ಲಿ ಸೂಕ್ಷ್ಮರೇಖೆಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರ, ಕಣ್ಣು ಮತ್ತು ಮನಸ್ಸಿಗೆ ಹಾನಿಕರವಾಗಿರುತ್ತವೆ. ಈ ಸ್ಪಂದನಗಳನ್ನು ದೂರಗೊಳಿಸಲು ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಶುಭಚಿಹ್ನೆಗಳನ್ನು ಬಿಡಿಸುತ್ತಾರೆ. ಇದರಿಂದ ನೆಲದ ಮೇಲೆ ಅಶುಭ ಸ್ಪಂದನಗಳು ದೂರವಾಗಿ ಶುಭ ಪರಿಣಾಮಗಳಾಗುತ್ತವೆ.

ರಂಗೋಲಿಯನ್ನು ಆದಷ್ಟು ಸ್ತ್ರೀಯರೇ ಏಕೆ ಬಿಡಿಸಬೇಕು?

ಪೂಜಾವಿಧಿಗಳ ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು. ಏಕೆಂದರೆ ಸ್ತ್ರೀಯರು ದೇವತೆಯ ಸೂಕ್ಷ್ಮತತ್ತ್ವಗಳನ್ನು ಸಹಜವಾಗಿ ಗ್ರಹಿಸಬಹುದು. ಅವರು ಆಯಾಯ ತತ್ತ್ವಕ್ಕೆ ಸಂಬಂಧಿಸಿದ ಸೂಕ್ಷ್ಮ ಸ್ಪಂದನಗಳ ರಚನೆಯ ಆಕೃತಿಗಳನ್ನು ನಿರ್ಮಿಸಲು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಆದು ದರಿಂದ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಈಶ್ವರೀ ತತ್ತ್ವವು ಶೀಘ್ರವಾಗಿ ರಂಗೋಲಿಯಲ್ಲಿ ಆಕರ್ಷಿತವಾಗಿ ಕಾರ್ಯನಿರತವಾಗುತ್ತದೆ. ಇದಕ್ಕಾಗಿ ಪ್ರಾಥಮಿಕ ಸ್ತರದಲ್ಲಿನ ಜೀವಗಳಿಗಾಗಿ ರಂಗೋಲಿಯನ್ನು ಸ್ತ್ರೀಯರಿಂದ ಬಿಡಿಸಿಕೊಳ್ಳುವುದು ಯೋಗ್ಯವಾಗಿದೆ. ಅದೇ ರೀತಿ ಇದರಿಂದ ಈಶ್ವರೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿ ವಾಯುಮಂಡಲ ಹಾಗೂ ಪೂಜೆಗೆ ಕುಳಿತುಕೊಳ್ಳುವ ಜೀವಕ್ಕೆ ಲಾಭವಾಗುತ್ತದೆ. ರಂಗೋಲಿಯಲ್ಲಿನ ಕಲಾತರಂಗದಿಂದ ಸ್ತ್ರೀಯರ ಅನಾಹತ ಚಕ್ರವು ಸ್ವಲ್ಪ ಪ್ರಮಾಣದಲ್ಲಿ ಜಾಗೃತವಾಗಿ ಚೈತನ್ಯ ಗ್ರಹಿಸುವ ಕ್ಷಮತೆಯು ಹೆಚ್ಚಾಗುತ್ತದೆ.

ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಏಕೆ ಬಿಡಿಸಬೇಕು?

ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ದೇವತೆಯ ತತ್ತ್ವ ವಾಯುಮಂಡಲದಲ್ಲಿ ಮತ್ತು ಜೀವಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತದೆ.

ರಂಗೋಲಿಯನ್ನು ಹಾಕಿದ ನಂತರ ಅದಕ್ಕೆ ಅರಿಶಿನ-ಕುಂಕುಮವನ್ನು ಏಕೆ ಅರ್ಪಿಸಬೇಕು?

ರಂಗೋಲಿಯಲ್ಲಿರುವ ಬಿಳಿ ಕಣಗಳಲ್ಲಿ ಈಶ್ವರೀ ತತ್ತ್ವದ ಲಹರಿಗಳನ್ನು ಆಕರ್ಷಿಸುವ ಕ್ಷಮತೆ ಇರುತ್ತದೆ, ಆದರೆ ಬಿಳಿ ಬಣ್ಣವು ನಿಷ್ಕ್ರಿಯತೆಗೆ ಸಂಬಂಧಿಸಿರುವುದರಿಂದ ರಂಗೋಲಿಗೆ ವೇಗವು ಪ್ರಾಪ್ತವಾಗುವುದಿಲ್ಲ. ಕುಂಕುಮದಿಂದ ಬ್ರಹ್ಮಾಂಡದಲ್ಲಿನ ಶ್ರೀದುರ್ಗಾದೇವಿಯ ಪ್ರಕಟಶಕ್ತಿ ಮತ್ತು ಅರಶಿನದಿಂದ ಗಣೇಶತತ್ತ್ವವು ಕಾರ್ಯನಿರತವಾಗುತ್ತದೆ. ಇದರಿಂದ ರಂಗೋಲಿಯಲ್ಲಿ ಆಕರ್ಷಿತವಾದ ಈಶ್ವರೀತತ್ತ್ವಕ್ಕೆ ಚಲನೆಯು ಪ್ರಾಪ್ತವಾಗಿ ವಾಯುಮಂಡಲದಲ್ಲಿನ ದೂಷಿತ ಸ್ಪಂದನಗಳು ಮತ್ತು ಕಣಗಳು ವಿಘಟನೆಯಾಗುತ್ತವೆ.

ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ


ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ.

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದೇವರ ಪೂಜೆಯ ಪೂರ್ವತಯಾರಿ’)
*********
Easy rangoli video

**********

No comments:

Post a Comment