ಹಿಂದೂ ಧರ್ಮದಲ್ಲಿ ವಿವಿಧ ಅವತಾರಗಳನ್ನು ನೋಡಬಹುದು. ಈ ವಿವಿಧ ದೇವತೆಗಳಿಗೂ ವಿಭಿನ್ನವಾದ ಹೂವುಗಳು ಹಾಗೂ ದಳಗಳು ಅತ್ಯಂತ ಪ್ರಿಯವಾದ ವಸ್ತುಗಳಾಗಿವೆ. ವಿಶೇಷ ಹೂವುಗಳ ಅಲಂಕಾರ ಹಾಗೂ ಪ್ರಿಯವಾದ ಸಂಗತಿಗಳ ಬಗ್ಗೆ ಪುರಾಣ ಇತಿಹಾಸಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಉಲ್ಲೇಖ ವಾಗಿರುವುದನ್ನು ನಾವು ನೋಡಬಹುದು.
ದತ್ತೂರ/ಉಮ್ಮತ್ತಿ ಹೂವು
ಹಿಂದೂ ಧರ್ಮದ ಪ್ರಕಾರ ಶ್ರೇಷ್ಠ ಪುರಾಣಗಳಲ್ಲಿ ಒಂದಾದ ದತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಅತ್ಯಂತ ಶ್ರೇಷ್ಠವಾದ ಹೂವು ಎಂದು ಪರಿಗಣಿಸಲಾಗಿದೆ. ರಾಕ್ಷಸರು ಹಾಗೂ ದೇವತೆಗಳು ಸಮುದ್ರ ಮಂಥನ ನಡೆಸುವಾಗ ಹಾಲಾಹಲ/ವಿಷವು ಹೊರ ಹೊಮ್ಮಿತು. ಆಗ ಸೃಷ್ಟಿಯ ರಕ್ಷಣೆಗಾಗಿ ಅದನ್ನು ಶಿವನೇ ಕುಡಿದನು ಎನ್ನಲಾಗುತ್ತದೆ. ನಂತರ ಆ ವಿಷವು ಶಿವನ ಕಂಠದಲ್ಲಿ ಇರಿಸಿ ಕೊಂಡನು. ಶಿವನ ರಕ್ಷಣೆಗಾಗಿ ದತ್ತೂರ ಹೂವು ಶಿವನ ಹೃದಯ ದಿಂದ ಹುಟ್ಟಿಕೊಂಡಿತು. ಹಾಗಾಗಿಯೇ ದತ್ತೂರ ಹೂವು ಅತ್ಯಂತ ವಿಷಕಾರಿಯಾದ ಗಿಡವೆಂದು ಪರಿಗಣಿಸಲಾಗುತ್ತದೆ. ಈ ಘಟನೆಯ ನಂತರದಿಂದ ದತ್ತೂರ/ಉಮ್ಮತ್ತಿ ಹೂವು ಶಿವನಿಗೆ ಇಷ್ಟವಾದ ಹೂವಾಯಿತು ಎನ್ನಲಾಗುತ್ತದೆ. ಈ ಹೂವನ್ನು ಅರ್ಪಿಸುವು ದರಿಂದ ವ್ಯಕ್ತಿ ತನ್ನಲ್ಲಿದ್ದ ಕೆಟ್ಟ ಅಹಂ ಹಾಗೂ ಕೆಟ್ಟ ಭಾವನೆಯಿಂದ ದೂರವಾಗುತ್ತಾನೆ ಎನ್ನಲಾಗುವುದು ಈ ಹೂವಿನೊಂದಿಗೆ ಶಿವನನಿಗೆ ಇಷ್ಟವಾಗುವ ಇನ್ನಿತರ ಹೂವುಗಳು ಎಂದರೆ ಎಕ್ಕದ ಹೂವು, ಬಿಲ್ವ ಪತ್ರೆ ಹಾಗೂ ಕೇತಕಿಯ ಹೂವು. ಶಿವನ ಪೂಜೆಯನ್ನು ಮಾಡುವಾಗ ಈ ಹೂವುಗಳ ಬಳಕೆ ಮಾಡುವುದನ್ನು ಮರೆಯಬಾರದು.
ಕೆಂಪು ದಾಸವಾಳ
ಹೂವು ಕೆಂಪು ದಾಸವಾಳ ಹೂವನ್ನು ದೇವರ ಪೂಜೆಗೆ ವಿಶೇಷವಾಗಿ ಬಳಸಲಾಗುವುದು. ಈ ಹೂವು ವಿಶೇಷವಾಗಿ ಕಾಳಿ ದೇವರಿಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರಿಯವಾದ ಹೂವು. ಈ ಹೂವಿನ ಬಣ್ಣ ಹಾಗೂ ಎಸಳಿನ ಆಕಾರವು ಕಾಳಿ ದೇವಿಯ ನಾಲಿಗೆಯನ್ನು ಹೋಲುತ್ತದೆ. ಕಾಳಿ ದೇವರಿಗೆ ಇಷ್ಟವಾಗುವ ಈ ಹೂವನ್ನು ಅರ್ಪಿಸುವುದರ ಮೂಲಕ ದೇವಿಯ ಆಶೀರ್ವಾದ ಪಡೆಯ ಬಹುದು. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಕಾಳಿ ದೇವರ ಪೂಜೆಯನ್ನು ಮಾಡುವಾಗ 108 ದಾಸವಾಳದ ಹೂವನ್ನು ಜೋಡಿಸುವುದರ ಮೂಲಕ ಹಾರವನ್ನು ತಯಾರಿಸುತ್ತಾರೆ. ಅದನ್ನು ದೇವಿಗೆ ಅರ್ಪಿಸಿ, ತಾಯಿಯ ಕೃಪೆಗೆ ಒಳಗಾಗುತ್ತಾರೆ ಎನ್ನಲಾಗುವುದು.
ಪಾರಿಜಾತ ಹೂವು
ಅತ್ಯಂತ ಸುಗಂಧದಿಂದ ಕೂಡಿರುವ ಪಾರಿಜಾತ ಹೂವು ದೇವರ ಆರಾಧನೆಗೆ ಶ್ರೇಷ್ಠವಾದದ್ದು. ಈ ಹೂವು ರಾತ್ರಿ ಸಮಯದಲ್ಲಿ ಅರಳುತ್ತದೆ ಎಂದು ಹೇಳಲಾಗುವುದು. ಈ ಹೂವಿನ ಗಿಡದ ಬೇರು ಸ್ವರ್ಗದಿಂದ ಬಂದಿರುತ್ತದೆ ಎಂದು ಹೇಳಲಾಗುವುದು. ಸುಗಂಧ ಭರಿತವಾದ ಈ ಹೂವು ವಿಷ್ಣು ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಹೂವು ಎನ್ನಲಾಗುವುದು. ಹಿಂದೂ ಕಥೆ ಪುರಾಣಗಳ ಪ್ರಕಾರ, ದೇವರು ಹಾಗೂ ರಾಕ್ಷಸರು ಸಮುದ್ರ ಮಂಥನ ಮಾಡುವಾಗ ಪಾರಿಜಾತದ ಮರವು ಉದ್ಭವ ಆಯಿತು. ಆಗ ಅದನ್ನು ಇಂದ್ರ ದೇವನು ಸ್ವರ್ಗಕ್ಕೆ ತಂದು ಇಟ್ಟನು. ಇದರ ಹೂವು ಅತ್ಯಂತ ಸುಂದರ ಹಾಗೂ ಪರಿಮಳ ಭರಿತವಾಗಿದ್ದರಿಂದ ದೇವತೆಗಳಿಗೆ ಅತ್ಯಂತ ಪ್ರಿಯವಾದ ಹೂವಾಯಿತು ಎನ್ನಲಾ ಗುವುದು.
ಕಮಲದ ಹೂವು
ಕಮಲದ ಹೂವು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುವ ಲಕ್ಷ್ಮಿ ದೇವಿಯ ಪ್ರಿಯವಾದ ಹೂವು. ದೀಪಾವಳಿ, ಲಕ್ಷ್ಮಿ ಪೂಜೆ ಹಾಗೂ ದೇವಾಲಯಕ್ಕೆ ತೆರಳುವಾಗ ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ದೇವಿಗೆ ಭಕ್ತಿ ಹಾಗೂ ಪರಿ ಶುದ್ಧ ಭಾವನೆ ಯಿಂದ ಕಮಲದ ಹೂವನ್ನು ಅರ್ಪಿಸಿದರೆ ಅತ್ಯಂತ ತೃಪ್ತ ಳಾಗುತ್ತಾಳೆ. ಜೊತೆಗೆ ಅದಕ್ಕೆ ಪ್ರತಿಯಾಗಿ ನಿಮ್ಮ ಜೀವನದಲ್ಲಿ ಸಮೃದ್ಧಿ ಹಾಗೂ ಸಂಪತ್ತು ದೊರೆಯುವುದು. ಭವಿಷ್ಯದಲ್ಲಿ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ.
ಚೆಂಡು ಹೂವು
ಕೆಂಪು ಬಣ್ಣದ ಚೆಂಡು ಹೂವು ಮತ್ತು ಕೇಸರಿ ಬಣ್ಣದ ಚೆಂದು ಹೂವು ಗಣೇಶನಿಗೆ ಅತ್ಯಂತ ಶ್ರೇಷ್ಠವಾದ ಹೂವು ಎಂದು ಹೇಳಲಾಗುವುದು. ಈ ಹೂವು ಮಾತ್ರ ಅನೇಕ ದಳದಿಂದ ಕೂಡಿದ್ದು, ಅದನ್ನು ಬಿಡಿಬಿಡಿಯಾಗಿ ಮಾಡಿದಾಗಲೂ ಸಾಕಷ್ಟು ದಳವನ್ನು ನೀಡುವುದು ಎಂದು ಹೇಳಲಾಗುವುದು. ಈ ಹೂವನ್ನು ಗಣೇಶನ ಪೂಜೆಗೆ ಬಳಸುವುದರಿಂದ ಗಣೇಶನು ತೃಪ್ತನಾಗುವನು. ಜೊತೆಗೆ ತನ್ನ ಭಕ್ತರ ಜೀವನದಲ್ಲಿ ಇರುವ ವಿಘ್ನಗಳನ್ನು ನಿವಾರಿ ಸುವನು ಎನ್ನಲಾಗುವುದು. ಈ ಹೂವಿನ ಜೊತೆಗೆ ಎಕ್ಕದ ಹೂವು, ಗರಿಕೆ ಹುಲ್ಲು ಸಹ ಗಣೇಶನಿಗೆ ಅತ್ಯಂತ ಪ್ರಿಯವಾದ ಹೂವುಗಳು.
ಪಲಾಶ ಹೂವು
ಬಿಳಿ ಸೀರೆಯನ್ನು ತೊಟ್ಟು, ಬಿಳಿ ಬಣ್ಣದ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುವ ದೇವತೆ ಸರಸ್ವತಿ. ಬಿಳಿ ಬಣ್ಣದಲ್ಲಿರುವ ಎಲ್ಲಾ ಹೂವುಗಳು ಸಹ ದೇವಿ ಸರಸ್ವತಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಇವುಗಳೊಂದಿಗೆ ದೇವಿ ಶಾರದೆಗೆ ಇಷ್ಟವಾಗುವ ಇನ್ನೊಂದು ಹೂವು ಎಂದರೆ ಪಲಾಶ ಹೂವು. ಈ ಹೂವು ಇಲ್ಲದೆಯೇ ಶಾರದಾ ದೇವಿಯನ್ನು ಪೂಜಿಸಿದರೆ ಪೂಜೆಯು ಅಪೂರ್ಣವಾಗುತ್ತದೆ ಎಂದು ಹೇಳಲಾಗುವುದು. ಈ ಹೂವಿನೊಂದಿಗೆ ಶಾರದಾ ದೇವಿಯ ಆರಾಧನೆ ಮಾಡಿದರೆ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗುವುದು.
ತುಳಸಿ ಹೂವು
ತುಳಸಿಯ ಹೂವು ಹಾಗೂ ಎಲೆಯನ್ನು ದೇವರ ಪೂಜೆಗೆ ಬಳಸಲಾಗುವುದು. ತುಳಸಿಯ ದಳವು ಅಥವಾ ತುಳಸಿ ಎಲೆಯು ಶ್ರೀಕೃಷ್ಣ ಹಾಗೂ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ಹೂವು. ಇದರಲ್ಲಿ ಕೃಷ್ಣ ತುಳಸಿ ಹಾಗೂ ರಾಮ ತುಳಸಿ ಎನ್ನುವ ಎರಡು ವಿಧಗಳಿರುವುದನ್ನು ಪರಿಗಣಿಸಬಹುದು. ಎರಡು ತುಳಸಿಯ ಎಲೆಗಳು ದೇವರಿಗೆ ಅರ್ಪಿಸಬಹುದು. ಅತ್ಯಂತ ಪವಿತ್ರ ಹಾಗೂ ಶುದ್ಧತೆಯನ್ನು ಬಿಂಬಿಸುವ ತುಳಸಿಯನ್ನು ದೇವರಿಗೆ ಅರ್ಪಿಸಿದರೆ ಜೀವನದಲ್ಲಿ ಅದ್ಭುತದ ದಿನಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಮಲ್ಲಿಗೆ ಹೂವು
ಮಲ್ಲಿಗೆ ಹೂವು ಸೌಂದರ್ಯ ಹಾಗೂ ಸುಗಂಧಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದನ್ನು ಎಲ್ಲಾ ದೇವಾನು ದೇವತೆಗಳ ಪೂಜೆಗೆ ಬಳಸಲಾಗುತ್ತದೆ. ಅತ್ಯಂತ ಸುಗಂಧದಿಂದ ಕೂಡಿರುವ ಹೂವು ಎಂದು ಪರಿಗಣಿಸಲಾಗುತ್ತದೆ. ಇದನ್ನು ಔಷಧ ಸಸ್ಯ ಎಂದು ಸಹ ಪರಿಗಣಿಸಲಾಗುತ್ತದೆ. ಈ ಹೂವು ಹನುಮಂತ ದೇವರಿಗೆ ಅತ್ಯಂತ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಈ ಹೂವಿನಿಂದ ತಯಾರಿಸಲಾಗುವ ಎಣ್ಣೆಯನ್ನು ಬಳಸಿ, ಸಿಂಧೂರವನ್ನು ಮಿಶ್ರಗೊಳಿಸುತ್ತಾರೆ. ಅದನ್ನು ಹನುಮಂತ ದೇವರಿಗೆ ಅರ್ಪಿಸುತ್ತಾರೆ. ಈ ಹೂವನ್ನು ಹನುಮಂತ ದೇವರಿಗೆ ಅರ್ಪಿಸುವುದರಿಂದ ದೇವನು ನಮ್ಮ ಜೀವನದಲ್ಲಿ ಇರುವ ಕಷ್ಟಗಳನ್ನು ದೂರಗೊಳಿಸುತ್ತಾನೆ ಎನ್ನುವ ನಂಬಿಕೆಯಿದೆ.
No comments:
Post a Comment