SEARCH HERE

Tuesday, 1 January 2019

ದೇವಸ್ಠಾನದಲ್ಲಿ ಸ್ನಾನ ಆರತಿ ತೀರ್ಥ ಪ್ರದಕ್ಷಿಣೆ ಮಂತ್ರಗಳು reciting which mantras in temple


ದೇವಸ್ಠಾನಗಳಲ್ಲಿ ಪ್ರದಕ್ಷಿಣೆ ಹಾಕುವಾಗ, ಸ್ನಾನ ಮಾಡುವಾಗ, ಆರತಿ ಮತ್ತು ತೀರ್ಥ ತೆಗೆದುಕೊಳ್ಳುವಾಗ ಹೇಳಬೇಕಾದ ಮಂತ್ರಗಳು.

🔯ದೇವಸ್ಥಾನಗಳಲ್ಲಿ ಸ್ನಾನ ಮಾಡುವಾಗ ಹೇಳಬೇಕಾದ ಮಂತ್ರ🔯

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

ಗಂಗೇಚ ಯಮೂನೇ ಚೈವ।
ಗೋದಾವರೀ ಸರಸ್ವತಿ॥
ನರ್ಮದೇ ಸಿಂಧೂ ಕಾವೇರಿ।
ಜಲಸ್ಮಿನ್ ಸನ್ನಿಧಿಂಕುರೂ॥


🔯ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ🔯

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ


🔯ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ🔯

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll


🔯ಪ್ರದಕ್ಷಿಣೆ ಹಾಕುವಾಗ ಹೇಳುವ ಮಂತ್ರ🔯

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll
ಪಾಪೋಹಂ ಪಾಪಕರ್ಮಾಣಾಂ।
ಪಾಪಾತ್ಮಾಂ ಪಾಪಸಂಭವಂ॥
ತ್ರಾಹಿಮಾಂ ಕೃಪಯಾದೇವ ।
ಶರಣಾಗತ ವತ್ಸಲ॥
ಅನ್ಯತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮಾ ।
ತಸ್ಮಾತ್ ಕಾರಣ್ಯ ಭಾವೇನ ರಕ್ಷೊ ರಕ್ಷೋ ಜನಾರ್ಧನ॥

ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl
ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl
ತ್ವಮೇವ ಸರ್ವಂ ಮಮ ದೇವ ದೇವll
***
ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು..?

ನಾವು ದೇವಸ್ಥಾನಕ್ಕೆ ಹೋದಾಗ, ಪೂಜೆಯಲ್ಲಿ ಪಾಲ್ಗೊಂಡಾಗ ಆರತಿಯನ್ನು ತೆಗೆದುಕೊಳ್ಳುವ ರೂಢಿಯನ್ನು ಹೊಂದಿರುತ್ತೇವೆ. ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನು ಹಾಕಿ ಆರತಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಆರತಿ ತಟ್ಟೆಗೆ ನಾವು ಹಣವನ್ನೇಕೆ ಹಾಕಬೇಕೆಂಬುದು ನಿಮಗೆ ತಿಳಿದಿದೆಯೇ..? ಆರತಿ ತೆಗೆದುಕೊಳ್ಳುವಾಗ ಹಣ ನೀಡುವುದರ ಹಿಂದಿದೆ ಈ 3 ಪ್ರಮುಖ ಕಾರಣಗಳು..!

ಹಿಂದೂ ಧರ್ಮದಲ್ಲಿ ದೇವರ ಆರಾಧನೆಗ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ. ದೇವರ ಪೂಜೆಯಲ್ಲಿ ನಾವು ಅನೇಕ ನಿಯಮಗಳನ್ನು ಪಾಲಿಸುತ್ತೇವೆ. ಅವುಗಳಲ್ಲಿ ಆರತಿ ಮಾಡುವ ಪದ್ಧತಿಯು ಒಂದು. ಮನೆಯಲ್ಲಾಗಲಿ ಅಥವಾ ದೇವಸ್ಥಾನದಲ್ಲಾಗಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಅದಕ್ಕೆ ಕಡ್ಡಾಯವಾಗಿ ಆರತಿಯನ್ನು ಮಾಡಲಾಗುತ್ತದೆ.
ಸಾಮಾನ್ಯವಾಗಿ, ದೇವರಿಗೆ ಆರತಿಯನ್ನು ಮಾಡಿದ ನಂತರ ಆ ಆರತಿಯನ್ನು ಪೂಜೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನೀಡುವುದನ್ನು ನೀವು ಗಮನಿಸಿರಬಹುದು. ಇಲ್ಲಿ ನಾವು ಆರತಿ ತಟ್ಟೆಗೆ ನಾಣ್ಯಗಳನ್ನಾಗಿರಬಹುದು ಅಥವಾ ನೋಟುಗಳನ್ನಾಗಿರಬಹುದು ಹಾಕುವುದನ್ನು ನೋಡಿರುತ್ತೇವೆ. ಆರತಿಯನ್ನು ಖಾಲಿ ಕೈಯಲ್ಲಿ ತೆಗೆದುಕೊಳ್ಳಬಾರದು ಎಂದು ನಮ್ಮ ಹಿರಿಯರು ಆಗಾಗ್ಗೆ ಹೇಳುತ್ತಾರೆ. ಆರತಿಯನ್ನು ತೆಗೆದುಕೊಂಡ ನಂತರ ಆರತಿ ತಟ್ಟೆಯಲ್ಲಿ ಸ್ವಲ್ಪ ಹಣವನ್ನು ಇಡಬೇಕು. ನೀವು ಕೂಡ ದೇವಸ್ಥಾನಕ್ಕೆ ಹೋದಾಗ ಅಥವಾ ಆರತಿಯನ್ನು ತೆಗೆದುಕೊಂಡಾಗ ಈ ರೀತಿ ಮಾಡಿರಬಹುದು. ಇದಕ್ಕೆ ಮುಖ್ಯ ಕಾರಣವೇನು..? ಅಂದರೆ, ಆರತಿಯನ್ನು ತೆಗೆದುಕೊಂಡ ನಂತರ ಆರತಿ ತಟ್ಟೆಯಲ್ಲಿ ನಾವು ಹಣವನ್ನೇಕೆ ಇಡಬೇಕು..? ಇದಕ್ಕೆ ಇಂದಲ್ಲ, ಬರೋಬ್ಬರಿ 3 ಪ್ರಮುಖ ಕಾರಣಗಳಿವೆ.

1. ಮೊದಲ ಕಾರಣ:
ಶ್ರೀಮದ್‌ ಭಗವದ್ಗೀತೆಯಲ್ಲಿ ಒಂದು ಶ್ಲೋಕದ ಮೂಲಕ ಅದನ್ನು ವಿವರಿಸಲಾಗಿದೆ.
ದಾತವ್ಯಮಿತಿ ಯದ್ಧಾನಂ ದೀಯತೇನುಪಕಾರಿಣೇ|
ದೇಶೇ ಕಾಲೇ ಚ ಪಾತ್ರೇ ಚ ತದ್ಧಾನಂ ಸಾತ್ವಿಕಂ ಸ್ಮೃತಂ||
- ಅರ್ಥ:
ದಾನ ಮಾಡುವುದು ಕರ್ತವ್ಯ. ದಾನಕ್ಕೆ ಯೋಗ್ಯವಾದ ಸಮಯವನ್ನು ಮತ್ತು ವ್ಯಕ್ತಿಯನ್ನು ನೋಡಿಕೊಂಡು ದಾನ ಮಾಡಬೇಕು. ದಾನ ಮಾಡಿದ ನಂತರ ಯಾರಿಂದಲೂ ಪರಸ್ಪರ ಪ್ರತಿಫಲವನ್ನು ನಿರೀಕ್ಷಿಸಬಾರದು. ಅದೇ ದಾನವನ್ನು ಸಾತ್ವಿಕ ದಾನವೆಂದು ಪರಿಗಣಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ದಾನ ಮಾಡುವ ಪದ್ಧತಿ ಅಥವಾ ಸಂಪ್ರದಾಯವು ಶತಮಾನಗಳಿಂದಲೂ ಇದೆ. ಯಾವಾಗಲೂ ದಾನವನ್ನು ನಾವು ದಾನ ಪಡೆದುಕೊಳ್ಳಲು ಯೋಗ್ಯರಾದವರಿಗೆ ಮಾತ್ರ ಮಾಡಬೇಕು. ದೇವಸ್ಥಾನದಲ್ಲಿ ಅರ್ಚಕರು ತಮ್ಮ ಸಂಪೂರ್ಣ ಸಮಯವನ್ನು ದೇವರ ಆರಾಧನೆಯಲ್ಲಿ, ಮಂತ್ರಗಳ ಪಠಣೆಯಲ್ಲಿ, ದೇವರ ಸೇವೆಯಲ್ಲಿ, ಭಕ್ತಿಯಲ್ಲಿ ಕಳೆಯುತ್ತಾರೆ. ಅರ್ಚಕರು ನಮಗಾಗಿ ಪೂಜೆಯನ್ನು ಮಾಡುತ್ತಾರೆ. ಈ ಕಾರಣಕ್ಕಾಗಿ ನಾವು ದೇವಸ್ಥಾನಕ್ಕೆ ಹೋದಾಗ ಆರತಿ ತಟ್ಟೆಗೆ ಹಣವನ್ನು ಹಾಕಬೇಕೆನ್ನುವುದು ಮೊದಲ ಕಾರಣವಾಗಿದೆ.

2. ಎರಡನೇ ಕಾರಣ:
ಆರತಿ ತಟ್ಟೆಯಲ್ಲಿ ಹಣವನ್ನು ಹಾಕುವುದರ ಹಿಂದಿನ ಎರಡನೇ ಕಾರಣವೆಂದರೆ, ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡುವ ಅರ್ಚಕರು ಪೂಜೆಯನ್ನು ಬಿಟ್ಟು ಇನ್ನಾವುದೇ ಕೆಲಸವನ್ನು ಮಾಡುವುದಿಲ್ಲ. ಅವರಿಗೆ ಬೇರಾವುದೇ ಆದಾಯ ಮೂಲಗಳು ಇರುವುದಿಲ್ಲ. ದೇವಸ್ಥಾನದಿಂದ ಅಥವಾ ಭಕ್ತರಿಂದ ಸಿಗುವ ದೇಣಿಗೆಯೇ ಅವರಿಗೆ ಮತ್ತು ಅವರ ಕುಟುಂಬಕ್ಕೆ ಜೀವನಾಧಾರವಾಗಿರುತ್ತದೆ. ಈ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ಆರತಿ ತಟ್ಟೆಯಲ್ಲಿ ಹಣ ಇಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದರು ಎನ್ನಲಾಗುತ್ತದೆ.

3. ಮೂರನೇ ಕಾರಣ:
ಈ ಮೇಲಿನ ಎರಡೂ ಕಾರಣವನ್ನು ಹೊರತು ಪಡಿಸಿ, ಆರತಿ ತಟ್ಟೆಯಲ್ಲಿ ಹಣವನ್ನು ಇಡುವುದಕ್ಕೆ ಇನ್ನೂ ಒಂದು ಕಾರಣವಿದೆ. ಈ ಕಾರಣಕ್ಕೆ ಸಂಬಂಧಿಸಿದಂತೆ, ಆರತಿ ತಟ್ಟೆಯಲ್ಲಿ ಹಣ ಇಡುವ ಸಂಪ್ರದಾಯವನ್ನು ತಾಯಿ ಹಸುವಿನ ಸೇವೆಗಾಗಿ ಮಾಡಲಾಗಿದೆ ಎನ್ನುವ ಪ್ರತೀತಿಯೂ ಇದೆ. ಇದರ ಪ್ರಕಾರ, ಆರತಿ ತಟ್ಟೆಯಲ್ಲಿ ಸಂಗ್ರಹಿಸಿದ ಹಣವನ್ನು ಗೋಮಾತೆಯ ಸೇವೆಗೆ ಬಳಸಲಾಗುತ್ತದೆ. ಹಿಂದೆ ಅನೇಕ ದೇವಾಲಯಗಳಲ್ಲಿ ಗೋಶಾಲೆಯನ್ನು ನಡೆಸುವುದು, ಗೋವುಗಳಿಗೆ ಸೇವೆ ನೀಡಲಾಗುತ್ತಿತ್ತು. ಈ ಕಾರಣಕ್ಕಾಗಿ ಆರತಿ ತಟ್ಟೆಗೆ ಹಣವನ್ನು ಹಾಕುವ ಮೂಲಕ ಗೋ ಸೇವೆಗೆ ಸಹಾಯ ಮಾಡುತ್ತಿದ್ದರು.
ಇಂದಿಗೂ ಕೂಡ ಆರತಿ ತಟ್ಟೆಗೆ ನಾವು ಹಣವನ್ನು ಹಾಕುತ್ತೇವೆ. ಆದರೆ, ಕೆಲವರು ಇದರ ಹಿಂದಿನ ಕಾರಣವನ್ನು ತಿಳಿದು ಆರತಿ ತಟ್ಟೆಗೆ ಹಣವನ್ನು ಹಾಕಿದರೆ, ಇನ್ನು ಕೆಲವರು ಇದರ ಹಿಂದಿನ ಕಾರಣವನ್ನು ತಿಳಿಯದೆ ಆರತಿ ತಟ್ಟೆಗೆ ಹಣವನ್ನು ಹಾಕುತ್ತಿದ್ದರು.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
**

No comments:

Post a Comment