SEARCH HERE

Friday, 9 April 2021

ಏಲಕ್ಕಿ cardamom

ಏಲಕ್ಕಿಯಿಂದ ಯಾವೆಲ್ಲಾ ಪರಿಹಾರಗಳನ್ನು ಮಾಡಿಕೊಳ್ಳಬಹುದು.

1 ನಿಮ್ಮ ವಿವಾಹವು ತುಂಬಾ ತಡ ವಾಗುತ್ತಿದ್ದರೆ ಈ ಪ್ರಯೋಗವನ್ನು ನೀವು ಗುರುವಾರದ ದಿನ ಮಾಡಬೇಕು. ದೇವಿಯ ದೇವಾಲಯದಲ್ಲಿ ಗುರುವಾರದ ದಿನ ಸಂಜೆ 2 ಏಳಕ್ಕಿಯ ಜೊತೆಗೆ, ಐದು ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತೆಗೆದುಕೊಂಡು ಹೋಗಿ ಒಂದು ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚಿ ,ಶುದ್ಧ ಜಾಲವನ್ನು ಸಹ ಅರ್ಪಿಸಬೇಕು. ನೀವು ಸ್ತ್ರೀಯಾಗಿದ್ದರೆ ಗುರುವಾರದ ದಿನ ಸಂಜೆ ಮಾಡಬೇಕು. ನೀವು ಪುರುಷರಾಗಿದ್ದರೆ ಶುಕ್ರವಾರದ ಸಂಜೆಯ ಸಮಯದಲ್ಲಿ ಮಾಡಬೇಕು. ಹೀಗೆ ಮಾಡುವುದರಿಂದ ಬೇಗನೆ ನಿಮ್ಮ ವಿವಾಹ ನೆರವೇರುತ್ತದೆ.

2 ನೀವು ತುಂಬಾ ಶ್ರಮ ಪಟ್ಟರೂ ಸಹ ನಿಮಗೆ ಉತ್ತಮವಾದ ಕೆಲಸ ಮತ್ತು ಉದ್ಯೋಗದಲ್ಲಿ ಬಡ್ತಿ ಮತ್ತು ಧನ ಪ್ರಾಪ್ತಿಯಾಗುತ್ತಿಲ್ಲ ಎಂದರೆ….., ಇಂದಿನಿಂದ ಪ್ರತಿದಿನ ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಒಂದು ಏಲಕ್ಕಿಯನ್ನು ಕಟ್ಟಿ ಇಟ್ಟುಕೊಂಡು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಮತ್ತು ಬೆಳಗ್ಗೆ ಅದನ್ನು ಯಾವುದಾದರೂ ಬಡವರಿಗೆ ಅಥವಾ ಹೊರಗಡೆ ವ್ಯಕ್ತಿಗಳಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.

3 .ನಿಮ್ಮ ಜಾತಕದಲ್ಲಿ ಶುಕ್ರ ನೀಚ ಸ್ಥಾನದಲ್ಲಿದ್ದರೆ ಅದರ ಪರಿಣಾಮ ಕೆಟ್ಟದಾಗಿದ್ದರೆ, ನೀವು ಒಂದು ಲೋಟ ನೀರನ್ನು ತೆಗೆದುಕೊಂಡು 2 ಏಲಕ್ಕಿಯನ್ನು ಅದರೊಳಗೆ ಹಾಕಿ, ಅರ್ಧ ಲೋಟ ನೀರು ಆಗುವವರೆಗೆ ಅದನ್ನು ಚೆನ್ನಾಗಿ ಆ ನೀರನ್ನು ಕುದಿಸಿ, ನಂತರ ಆ ನೀರನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಹಾಕಿಕೊಂಡು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ವಾಹನಕ್ಕೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆಗಳಿದ್ದರೆ ನಿವಾರಣೆಯಾಗುತ್ತವೆ ಅಥವಾ ವಾಹನದ ವಿಷಯಗಳಲ್ಲಿ ಲಾಭವಾಗುತ್ತದೆ.

4. ನಿಮ್ಮ ಪತಿ ನಿಮ್ಮ ಕಡೆ ಕಡೆಗೆ ಗಮನ ಹರಿಸುತ್ತಿಲ್ಲ ಎಂದಾದರೆ…. ಶ್ರೀಕೃಷ್ಣನ ನಾಮಸ್ಮರಣೆ ಮಾಡಿ ಶುಕ್ರವಾರದ ದಿನ 3 ಏಲಕ್ಕಿಯನ್ನು ನಿಮ್ಮ ಶರೀರಕ್ಕೆ ಸ್ಪರ್ಶಿಸಿ ನಂತರ ನಿಮ್ಮ ಕರ್ಚಿಫ್ ಅಥವಾ ಕರ ವಸ್ತ್ರದಲ್ಲಿ ಏಲಕ್ಕಿಯನ್ನು ಕಟ್ಟಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಶನಿವಾರದ ದಿನ ಬೆಳಗ್ಗೆ ಅದೇ ಏಲಕ್ಕಿಯನ್ನು ಪುಡಿ ಮಾಡಿ ಯಾವುದಾದರೂ ಊಟದಲ್ಲಿ ಹಾಕಿ ನಿಮ್ಮ ಪತಿಗೆ ಸೇವನೆ ಮಾಡಲು ಕೊಡಿ. ಹೀಗೆ ಮಾಡುವುದರಿಂದ ನಿಮಗೆ ಲಾಭವಾಗುತ್ತದೆ. ಗಮನದಲ್ಲಿರಿಸಿಕೊಳ್ಳಿ ಈ ರೀತಿ ನೀವು ಮೂರು ಶುಕ್ರವಾರ ಮಾಡಬೇಕು ಅಥವಾ ನೀವು ರವಿವಾರದ ದಿನ ಬೇಕಾದರೂ ಈ ಉಪಾಯವನ್ನು ಮಾಡಬಹುದು

 ಸರಳ ಪರಿಹಾರ
*****


No comments:

Post a Comment