bidar rayara mutt
ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ.
ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ.
ಇವುಗಳು ನಿಮಗೆ ಮಾತ್ರ ಆನಂದ ಉಂಟುಮಾಡದೆ ನಿಮ್ಮ ಸುತ್ತ ಕುಳಿತವರಿಗೂ ಹರಡುತ್ತವೆ. ಅವರಿಗೂ ಆನಂದದ ಅರಿವಾಗುತ್ತದೆ. ಪ್ರತಿಯೊಬ್ಬರಿಂದಲೂ ಈ ರೀತಿಯ ಶಕ್ತಿ ಅಲೆಗಳು ಹೊರಹೊಮ್ಮಿ ಆ ಭಜನೆಯ ಸ್ಥಳವೇ ಒಂದು ಶಕ್ತಿಯ ಕೇಂದ್ರ ಬಿಂದುವಾಗುತ್ತದೆ.
ಅದಕ್ಕೆ ಹಿಂದಿನವರು ಹೇಳುತ್ತಿದ್ದರು- ಎಲ್ಲೆಲ್ಲಿ ಸತ್ಸಂಗ,ಭಜನೆ ನಡೆಯುವುದೊ ಅಲ್ಲಿ ಆಂಜನೇಯ ಇರುವನೆಂದು. ಅಂದರೆ ನಿಮ್ಮ ಭಜನೆಯಿಂದ ದೇವರು ಪ್ರತ್ಯಕ್ಷವಾಗದಿದ್ದರೂ ನಿಮ್ಮಲ್ಲೇ ದೇವರ ಅವತಾರವಾಗುತ್ತದೆ.ನೀವೇ ಸಾಕ್ಷಾತ್ ದೇವರಾಗುತ್ತೀರಿ.
ಭಜನೆ ಮಾಡುವ ಸಮಯದಲ್ಲಿ ಭಜನೆಯ ಪ್ರತಿಯೊಂದು ಶಬ್ದವನ್ನೂ ಅನುಭವಿಸಿ ಆನಂದಿಸಿ.ಆದರೆ ಭಜನೆ ಚೆನ್ನಾಗಿತ್ತು,ಅದು ಚೆನ್ನಾಗಿಲ್ಲ,ಅವರು ಸರಿಯಾಗಿ ಹಾಡಲಿಲ್ಲ,ಎಂದೆಲ್ಲಾ ಯೋಚಿಸಲು ಹೋಗಬಾರದು.ಯಾವಾಗ ಬೇಕು-ಬೇಡಗಳ ಬಗ್ಗೆ ಚಿಂತಿಸುತ್ತೀರೋ ಕೂಡಲೆ ನಿಮ್ಮ ಶಕ್ತಿ ಇಳಿದುಹೋಗುತ್ತದೆ. ಭಜನೆ ಹೇಗಿದೆಯೋ ಹಾಗೆ ಸ್ವೀಕರಿಸಿ ಅದರೊಂದಿಗೆ ಆನಂದದಿಂದಿರಿ. ರಾಗ ತಾಳ ಹೇಗೇ ಇರಲಿ ದೇವರನಾಮ ಬಾಯಿಗೆ ಬರಲಿ ಎಂದು ಕೇಳಿದ್ದೀರಲ್ಲ ಹಾಗೆ ಭಜನೆಯನ್ನು ಕಣ್ಣು ಮುಚ್ಚಿ ಮಾಡಿರಿ.
ಜೈ ಶ್ರೀ ಕೃಷ್ಣ ಮುಖ್ಯಪ್ರಾಣ
***
ಭಜನೆ ( ನಾಮ ಸ್ಮರಣೆ ) ಮಾಡುವುದರಿಂದ ಒಂದು ನೂರು ಲಾಭಗಳು
ದಯಮಾಡಿ ಓದಿ ಹಾಗೂ ನಿತ್ಯ ಭಜನೆಯನ್ನು ಪ್ರಾರಂಭಿಸಿ
ಭಜನೆಯಿಂದ ದೈವ ಸಾನಿಧ್ಯ ಹೆಚ್ಚುವುದು
ಭಜನೆಯಿಂದ ಜೀವನ ದೃಷ್ಟಿ ಬದಲಾಗುವುದು
ಭಜನೆಯಿಂದ ಹೃದಯ ಬಲಗೊಳ್ಳುವುದು
ಭಜನೆಯಿಂದ ಚೈತನ್ಯ ಜಾಗೃತವಾಗುವುದು
ಭಜನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು
ಭಜನೆಯಿಂದ ದೈಹಿಕ ಬೇನೆಗಳು ದೂರವಾಗುವುದು
ಭಜನೆಯಿಂದ ಮೆದುಳಿಗೆ ಉತ್ತೇಜನವಾಗುವುದು
ಭಜನೆಯಿಂದ ಮನಸ್ಸು ಶಾಂತವಾಗುವುದು
ಭಜನೆಯಿಂದ ಕಷ್ಟ ಪರಿಸ್ಥಿತಿಗಳು ಬದಲಾಗುವುದು
ಭಜನೆಯಿಂದ ಒತ್ತಡ ಮಾಯವಾಗುವುದು
ಭಜನೆಯಿಂದ ಕೋಪ ಕಡಿಮೆಗೊಳ್ಳುವುದು
ಭಜನೆಯಿಂದ ಆತ್ಮಸ್ಥೈರ್ಯ ಹೆಚ್ಚುವುದು
ಭಜನೆಯಿಂದ ಸಮಸ್ಯೆಗಳು ಇಲ್ಲವಾಗುವುದು
ಭಜನೆಯಿಂದ ಸ್ವೀಕಾರ ಮನೋಭಾವ ಪ್ರಾಪ್ತಿಯಾಗುವುದು
ಭಜನೆಯಿಂದ ಮನಃ ಶಾಂತಿ ದೊರೆಯುವುದು
ಭಜನೆಯಿಂದ ತಾಳ್ಮೆ ಉಂಟಾಗುವುದು
ಭಜನೆಯಿಂದ ಬಾಂಧವ್ಯ ವೃದ್ಧಿಸುವುದು
ಭಜನೆಯಿಂದ ನಾಯಕತ್ವ ಬೆಳೆಯುವುದು
ಭಜನೆಯಿಂದ ಉತ್ತಮ ನಿದ್ರೆ ಬರುವುದು
ಭಜನೆಯಿಂದ ಸಂಸ್ಕಾರ ಸಿಗುವುದು
ಭಜನೆಯಿಂದ ಸಂತೋಷ ಸಾಧ್ಯವಾಗುವುದು
ಭಜನೆಯಿಂದ ಕರ್ಮ ಕಳೆಯುವುದು
ಭಜನೆಯಿಂದ ಪಾಪ ಮರೆಯಾಗುವುದು
ಭಜನೆಯಿಂದ ಸಾಮರ್ಥ್ಯ ಹೆಚ್ಚುವುದು
ಭಜನೆಯಿಂದ ದುಷ್ಚಟಗಳು ದೂರವಾಗುವುದು
ಭಜನೆಯಿಂದ ಚಂಚಲ ಮನಸ್ಸು ದೂರವಾಗುವುದು
ಭಜನೆಯಿಂದ ಬುದ್ಧಿ ತೀಕ್ಷ್ಣ ವಾಗುವುದು
ಭಜನೆಯಿಂದ ಅಹಂ ಕರಗುವುದು
ಭಜನೆಯಿಂದ ಸೃಜನಶೀಲತೆ ವೃದ್ಧಿಸುವುದು
ಭಜನೆಯಿಂದ ಮೌಲ್ಯಗಳು ಹೆಚ್ಚುವುದು
ಭಜನೆಯಿಂದ ಆಧ್ಯಾತ್ಮಿಕ ಶಕ್ತಿ ಜಾಗೃತವಾಗುವುದು
ಭಜನೆಯಿಂದ ಭಯ ದೂರವಾಗುವುದು
ಭಜನೆಯಿಂದ ಬಂಧುತ್ವ ಬೆಳೆಯುವುದು
ಭಜನೆಯಿಂದ ಆರೋಗ್ಯ ವೃದ್ಧಿಸುವುದು
ಭಜನೆಯಿಂದ ತೃಪ್ತಿ ಸಿಗುವುದು
ಭಜನೆಯಿಂದ ನಿರ್ಧಾರ ಸ್ಪಷ್ಟವಾಗುವುದು
ಭಜನೆಯಿಂದ ಧನಾತ್ಮಕ ಶಕ್ತಿ ಉಂಟಾಗುವುದು
ಭಜನೆಯಿಂದ ವಾತಾವರಣ ಶುದ್ಧಿಯಾಗುವುದು
ಭಜನೆಯಿಂದ ನಕಾರಾತ್ಮಕ ಗುಣಗಳು ದೂರವಾಗುವುದು
ಭಜನೆಯಿಂದ ದೈವಿಕ ತರಂಗ ಉಂಟಾಗುವುದು
ಭಜನೆಯಿಂದ ಉಪಟಳಗಳು ದೂರವಾಗುವುದು
ಭಜನೆಯಿಂದ ಜಗಳ ಇಲ್ಲವಾಗುವುದು
ಭಜನೆಯಿಂದ ವಿಭಜನೆ ಇಲ್ಲವಾಗುವುದು
ಭಜನೆಯಿಂದ ಪ್ರಶಾಂತತೆ ಪ್ರಾಪ್ತಿಯಾಗುವುದು
ಭಜನೆಯಿಂದ ಖಿನ್ನತೆ ಶಮನವಾಗುವುದು
ಭಜನೆಯಿಂದ ಆಲೋಚನೆಗಳು ಪರಿವರ್ತನೆಯಾಗುವುದು
ಭಜನೆಯಿಂದ ವಿಶ್ರಾಂತಿ ದೊರೆಯುವುದು
ಭಜನೆಯಿಂದ ಪರಮಾತ್ಮನ ಸ್ವಾಮೀಪ್ಯ ಸಾಧ್ಯವಾಗುವುದು
ಭಜನೆಯಿಂದ ಸುಖ ಶಾಂತಿ ನೆಮ್ಮದಿ ಆನಂದ ದೊರೆಯುವುದು
ಭಜನೆಯಿಂದ ಪ್ರಾಣಶಕ್ತಿ ಹೆಚ್ಚುವುದು
ಭಜನೆಯಿಂದ ದೇಹದ ಕೋಶ ಗಳು ಬಲಗೊಳ್ಳುವುದು
ಭಜನೆಯಿಂದ ಅರಿವು ಹೆಚ್ಚುವುದು
ಭಜನೆಯಿಂದ ಮಾನವ ಸದ್ಗುಣಗಳು ಹೆಚ್ಚುವುದು
ಭಜನೆಯಿಂದ ಆಸೆಗಳು ದೂರ ಆಗುವುದು
ಭಜನೆಯಿಂದ ಜ್ಞಾನ ವೃದ್ಧಿಸುವುದು
ಭಜನೆಯಿಂದ ಸೃಷ್ಟಿಯ ರಹಸ್ಯ ತಿಳಿಯುವುದು
ಭಜನೆಯಿಂದ ಲೌಕಿಕ ಕಾಮನೆಗಳು ನಾಶವಾಗುವುದು
ಭಜನೆಯಿಂದ ಶರಣಾಗತಿ ಭಾವ ಉಂಟಾಗುವುದು
ಭಜನೆಯಿಂದ ಜೀವನ ಶೈಲಿ ಬದಲಾಗುವುದು
ಭಜನೆಯಿಂದ ದುರ್ಬಲತೆ ದೂರವಾಗುವುದು
ಭಜನೆಯಿಂದ ನಡವಳಿಕೆ ಉತ್ತಮವಾಗುವುದು
ಭಜನೆಯಿಂದ ಸತ್ವ ವೃದ್ಧಿಯಾಗುವುದು
ಭಜನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುವುದು
ಭಜನೆಯಿಂದ ಸಂಪ್ರದಾಯ ಪ್ರಾಪ್ತಿಯಾಗುವುದು
ಭಜನೆಯಿಂದ ಭಕ್ತಿ ಭಾವ ಮೂಡುವುದು
ಭಜನೆಯಿಂದ ಸನ್ಮಾರ್ಗ ದೊರೆಯುವುದು
ಭಜನೆಯಿಂದ ಸಾಂಸ್ಕೃತಿಕ ಉನ್ನತಿ ಸಿಗುವುದು
ಭಜನೆಯಿಂದ ಭವ ಬಂಧನ ಕಳೆಯುವುದು
ಭಜನೆಯಿಂದ ದೈವ ಸ್ವರೂಪ ಕಾಣುವುದು
ಭಜನೆಯಿಂದ ಜೀವನ ಸಾರ ಅರಿಯುವುದು
ಭಜನೆಯಿಂದ ಗುರು ಕಾರುಣ್ಯ ಸಾಧ್ಯವಾಗುವುದು
ಭಜನೆಯಿಂದ ಭೂತ ಬಾಧೆ ಇಲ್ಲ ವಾಗುವುದು
ಭಜನೆಯಿಂದ ಕಾಮ ಕ್ರೋಧಾದಿಗಳು ದೂರವಾಗುವುದು
ಭಜನೆಯಿಂದ ಕೃತಜ್ಞತೆ ಭಾವ ಮೂಡುವುದು
ಭಜನೆಯಿಂದ ಭವರೋಗ ನಾಶವಾಗುವುದು
ಭಜನೆಯಿಂದ ಅಂತಃಕರಣ ಶುದ್ಧಿಯಾಗುವುದು
ಭಜನೆಯಿಂದ ವಿವೇಕ ಜಾಗೃತವಾಗುವುದು
ಭಜನೆಯಿಂದ ದುಃಸ್ವಪ್ನ ದೂರವಾಗುವುದು
ಭಜನೆಯಿಂದ ಇಷ್ಟಾರ್ಥ ಸಿದ್ದಿ ಯಾಗುವುದು
ಭಜನೆಯಿಂದ ವೈರಾಗ್ಯ ಪ್ರಾಪ್ತಿಯಾಗುವುದು
ಭಜನೆಯಿಂದ ಅಪೇಕ್ಷೆಗಳು ಇಲ್ಲವಾಗುವುದು
ಭಜನೆಯಿಂದ ಬ್ರಹ್ಮ ಜ್ಞಾನ ಉಂಟಾಗುವುದು
ಭಜನೆಯಿಂದ ಸಂಸಾರ ಮೋಹ ದೂರವಾಗುವುದು
ಭಜನೆಯಿಂದ ವಿರಕ್ತಿ ಭಾವ ಮೂಡುವುದು
ಭಜನೆಯಿಂದ ಮನಸ್ಸಿನ ಪ್ರವಾಹ ಕಡಿಮೆಯಾಗುವುದು
ಭಜನೆಯಿಂದ ಸತ್ಕರ್ಮ ಉಂಟಾಗುವುದು
ಭಜನೆಯಿಂದ ಭಗವತ್ ಪ್ರೇಮ ಹೆಚ್ಚುವುದು
ಭಜನೆಯಿಂದ ಏಕಾಂತ ಮೌನ ಸಿದ್ಧಿಸುವುದು
ಭಜನೆಯಿಂದ ಅಸೂಯೆ ಇಲ್ಲ ವಾಗುವುದು
ಭಜನೆಯಿಂದ ನಿರ್ವಿಕಾರ ಸ್ಥಿತಿ ಸಿಗುವುದು
ಭಜನೆಯಿಂದ ಜನನ ಮರಣ ಚಕ್ರದ ಬಿಡುಗಡೆ ಸಿಗುವುದು
ಭಜನೆಯಿಂದ ಆಯುಷ್ಯ ವೃದ್ಧಿಸುವುದು
ಭಜನೆಯಿಂದ ಶ್ರೇಯಸ್ಸು ಉಂಟಾಗುವುದು
ಭಜನೆಯಿಂದ ಮನೋ ವಿಕಾಸ ವಾಗುವುದು
ಭಜನೆಯಿಂದ ಸಮೃದ್ಧಿ ಉಂಟಾಗುವುದು
ಭಜನೆಯಿಂದ ಸಕಲ ಸುಕೃತ ಪ್ರಾಪ್ತಿಯಾಗುವುದು
ಭಜನೆಯಿಂದ ಕತ್ತಲೆ ಮಾಯವಾಗುವುದು
ಭಜನೆಯಿಂದ ಸಕಲ ದುಸ್ಕೃತ ದೂರವಾಗುವುದು
ಭಜನೆಯಿಂದ ಸೇವಾ ಮನೋಭಾವ ಬೆಳೆಯುವುದು
100. ಭಜನೆಯಿಂದ ಸಾಕ್ಷಾತ್ ಭಗವದ್ ಸಾಕ್ಷಾತ್ಕಾರ ಉಂಟಾಗುವುದು
ಭಜನೆಯಿಂದ ಭಗವಂತನಡೆಗೆ
***
chennai- margashira masa December month
margashira masa in Chennai
***
No comments:
Post a Comment