ವಿವಾಹ
ಹದಿನಾರು ಸಂಸ್ಕಾರಗಳಲ್ಲಿನ ‘ವಿವಾಹ’ ಸಂಸ್ಕಾರದಲ್ಲಿನ ಮಹತ್ವದ ವಿಧಿಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿಯನ್ನು ಸ್ವಲ್ಪದರಲ್ಲಿ ಇಲ್ಲಿ ನೀಡಲಾಗಿದೆ.
ಅ. ಅರ್ಥ ಮತ್ತು ಸಮಾನಾರ್ಥಕ ಶಬ್ದ
ವಿವಾಹ ಅಥವಾ ಉದ್ವಾಹ ಎಂದರೆ ವಧುವನ್ನು ತಂದೆಯ ಮನೆಯಿಂದ ತನ್ನ ಮನೆಗೆ ಕರೆದೊಯ್ಯುವುದು.
೧. ಪಾಣಿಗ್ರಹಣ : ವಧುವನ್ನು ಪತ್ನಿಯನ್ನಾಗಿ ಮಾಡಿಕೊಳ್ಳಲು ವರನು ಆಕೆಯ ಕೈಯನ್ನು ಹಿಡಿಯುವುದು. ಪುರುಷನು ಸ್ತ್ರೀಯ ಕೈಯನ್ನು ಹಿಡಿಯುತ್ತಾನೆ. ಆದುದರಿಂದ ವಿವಾಹದ ನಂತರ ಸ್ತ್ರೀಯು ಪುರುಷನ ಕಡೆಗೆ ಹೋಗಬೇಕು. ಪುರುಷನು ಸ್ತ್ರೀಯ ಕಡೆಗೆ ಹೋಗುವುದು ಸರಿಯಲ್ಲ.
೨. ಉಪಯಮ : ವಧುವಿನ ಹತ್ತಿರ ಹೋಗುವುದು ಅಥವಾ ಅವಳನ್ನು ಸ್ವೀಕರಿಸುವುದು.
೩. ಪರಿಣಯ : ವಧುವಿನ ಕೈ ಹಿಡಿದು ಅಗ್ನಿಯ ಸುತ್ತಲೂ ಪ್ರದಕ್ಷಿಣೆ ಹಾಕಬೇಕು.
ಸಾಂಪ್ರತ ಬ್ರಾಹ್ಮವಿವಾಹ ಪದ್ಧತಿಯಲ್ಲಿ ಈ ಎಲ್ಲ ವಿಧಗಳೂ ಇರುತ್ತವೆ.
ಆ. ಉದ್ದೇಶ ಮತ್ತು ಮಹತ್ವ
ನಮ್ಮ ವಿವಾಹಸಂಸ್ಥೆಯಲ್ಲಿ ಗೋಚರ, ಅಗೋಚರ, ಇಹ ಮತ್ತು ಪರಗಳ ವಿಚಾರವನ್ನೂ ಮಾಡಲಾಗಿದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕೂ ಪುರುಷಾರ್ಥಗಳನ್ನೂ ಪಡೆದುಕೊಳ್ಳುವ ವ್ಯವಸ್ಥೆಯಿದೆ.
– ಗುರುದೇವ ಡಾ. ಕಾಟೇಸ್ವಾಮೀಜಿ
ಇ. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಎಷ್ಟನೆಯ ವರ್ಷದಲ್ಲಿ ವಿವಾಹ ಮಾಡ ಬೇಕು
ಎಂಟನೆಯ ವರ್ಷದಲ್ಲಿ ಉಪನಯನವಾದ ನಂತರ ಕನಿಷ್ಠಪಕ್ಷ ಹನ್ನೆರಡು ವರ್ಷಗಳ ಕಾಲ ಪುತ್ರನು ಗುರುಕುಲದಲ್ಲಿದ್ದು ಅಧ್ಯಯನ ಮಾಡುತ್ತಿದ್ದನು. ಅಂದರೆ ಸುಮಾರು ಇಪ್ಪತ್ತು ವರ್ಷದವನಾಗುವ ವರೆಗೂ ತಂದೆ-ತಾಯಿಯರು ಪುತ್ರನ ವಿವಾಹದ ಬಗ್ಗೆ ಆಲೋಚನೆ ಮಾಡುತ್ತಿರಲಿಲ್ಲ. ಅನಂತರದ ಸ್ನಾತಕ ಕಾಲದಲ್ಲಿ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡುವ ಮೊದಲು ಹಣ ಸಂಪಾದನೆ ಮಾಡುವ ಕ್ಷಮತೆ ನಿರ್ಮಾಣವಾಗುವ ದೃಷ್ಟಿಯಿಂದ ನಾಲ್ಕೆ ದು ವರ್ಷಗಳ ಕಾಲ ಪ್ರಯತ್ನ ಮಾಡಲಾಗುತ್ತಿತ್ತು. ಹೀಗೆ ಇಪ್ಪತ್ತೈದರಿಂದ ಮೂವತ್ತು ವರ್ಷದ ವ್ಯಕ್ತಿಯನ್ನು ವಿವಾಹ ಯೋಗ್ಯನೆಂದು ಪರಿಗಣಿಸಲಾಗುತ್ತಿತ್ತು. ಕನ್ಯೆಯರ ಸಂದರ್ಭದಲ್ಲಿ ಬಾಲ್ಯಾವಸ್ಥೆ ಮುಗಿದ ನಂತರ ಐದಾರು ವರ್ಷಗಳು ಸಂಸಾರದ ಜವಾಬ್ದಾರಿಗಳನ್ನು ಪಾಲಿಸುವ ಶಿಕ್ಷಣವನ್ನು ಪಡೆಯುತ್ತಿದ್ದ ಕಾರಣ ಇಪ್ಪತ್ತರಿಂದ ಇಪ್ಪತ್ತೈದರ ವಯಸ್ಸನ್ನು ವಿವಾಹಕ್ಕೆ ಯೋಗ್ಯವೆಂದು ಪರಿಗಣಿಸಲಾಗುತ್ತಿತ್ತು. ಇತ್ತೀಚೆಗೆ ಇದೇ ವಿಷಯವು ಸರ್ವಮಾನ್ಯವಾಗಿದೆ.
ಈ. ವಿವಾಹಪೂರ್ವ ವಿಧಿಗಳು
ಗಣಯಾಗ, ತೈಲಹರಿದ್ರಾರೋಪಣವಿಧಿ (ಅರಿಶಿನ-ಎಣ್ಣೆ ಹಚ್ಚುವುದು) ಮತ್ತು ಗಡಿಗೆಸ್ನಾನ ಎಂಬ ವಿಧಿಯನ್ನು ಮಾಡುತ್ತಾರೆ.
ವಿವಾಹಪೂರ್ವ ದಿನದ ಕಾರ್ಯಗಳು : ವಿವಾಹದ ಹಿಂದಿನ ದಿನ, ಯೋಗ್ಯ ಸಮಯದಲ್ಲಿ ಜಾತಕರ್ಮಾದಿ ಸಂಸ್ಕಾರಗಳನ್ನು ವಿಧಿವತ್ತಾಗಿ ಮಾಡದಿದ್ದರೆ ಸಂಸ್ಕಾರಲೋಪ- ಪ್ರಾಯಶ್ಚಿತ್ತ, ವಿವಾಹಸಂಕಲ್ಪ, ಶ್ರೀ ಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದೀಶ್ರಾದ್ಧ, ಗ್ರಹಯಜ್ಞ, ಮಂಟಪದೇವತಾಪ್ರತಿಷ್ಠಾಪನೆ, ಕುಲದೇವತೆಯ ಸ್ಥಾಪನೆ ಮತ್ತು ತೈಲಹರಿದ್ರಾದೇವತೆಯ ಪೂಜೆ, ಮಾಂಗಲಿಕ ಸ್ನಾನ, ವಸೋರ್ಧಾರಾಪೂಜೆ, ಆಯುಷ್ಯಮಂತ್ರ ಜಪ ಇತ್ಯಾದಿ ಕರ್ಮಗಳನ್ನು ಮಾಡಬೇಕಾಗುತ್ತದೆ. ಇವುಗಳಿಗೆ ‘ವಿವಾಹಪೂರ್ವ ದಿನದ ಕಾರ್ಯಗಳು’ ಎನ್ನುತ್ತಾರೆ.
ಉ. ವಿವಾಹದಿನ
೧. ವಿವಾಹಪೂರ್ವ ವಿಧಿಗಳು
ಮುಹೂರ್ತಘಟಿಕಾಸ್ಥಾಪನೆ, ಮುಂಡಾಸು (ಬಾಸಿಂಗ) ಕಟ್ಟುವುದು, ರೂಖವತ (ಮದುಮಗಳ ಮನೆಗೆ ಹೋಗುವ ಮೊದಲು ವರನಿಗೆ ಕೊಡುವ ಊಟ), ವರಪ್ರಸ್ಥಾನ (ವಧುಗೃಹಕ್ಕೆ ವರನ ಆಗಮನ), ಸೀಮಾಂತಪೂಜೆ (ವರನು ವಧುವಿನ ಊರಿನ ಸೀಮೆಗೆ ಬಂದಾಗ ಅವನ ಸತ್ಕಾರ ಮಾಡುವುದು), ಮಧುಪರ್ಕಪೂಜೆ (ಜೇನುತುಪ್ಪ ಮತ್ತು ಮೊಸರಿನ ಮಿಶ್ರಣದಿಂದ ವರನನ್ನು ಪೂಜಿಸುವುದು) ಮತ್ತು ಯಜ್ಞೋಪವೀತಧಾರಣೆ (ಈ ವಿಧಿಗಳ ಬಗೆಗಿನ ಸವಿಸ್ತಾರ ಮಾಹಿತಿಯನ್ನು ಸನಾತನದ ‘ವಿವಾಹ ಸಂಸ್ಕಾರ’ ಎಂಬ ಗ್ರಂಥದಲ್ಲಿ ನೀಡಲಾಗುತ್ತದೆ.)
೨. ಲಗ್ನ ಮುಹೂರ್ತದ ವೇಳೆಗೆ ಮಾಡುವ ವಿಧಿಗಳು
ಅ. ಅಂತಃಪಟಧಾರಣವಿಧಿ : ವಧು ಮತ್ತು ವರರ ನಡುವೆ ಶಲ್ಯದಿಂದ (ಶಾಲು) ದಕ್ಷಿಣದಿಂದ ಉತ್ತರದೆಡೆಗೆ ಅಡ್ಡವಾಗಿ ಹಿಡಿಯುವಂತಹ ಪರದೆಗೆ ‘ಅಂತಃಪಟ’ ಅಥವಾ ‘ಅಂತರ್ಪಾಟ’ ಎನ್ನುತ್ತಾರೆ. ಅಕ್ಕಿಯ ಎರಡು ರಾಶಿಗಳನ್ನು ಮಾಡಿ ಅದರಲ್ಲಿನ ಪೂರ್ವದ ಕಡೆಯಿರುವ ರಾಶಿಯ ಮೇಲೆ ವರನನ್ನು ಪಶ್ಚಿಮಕ್ಕೆ ಮುಖ ಮಾಡಿಸಿ ನಿಲ್ಲಿಸಬೇಕು ಮತ್ತು ಪಶ್ಚಿಮದ ಕಡೆಯಲ್ಲಿರುವ ರಾಶಿಯ ಮೇಲೆ ವಧುವನ್ನು ಪೂರ್ವಕ್ಕೆ ಮುಖ ಮಾಡಿಸಿ ನಿಲ್ಲಿಸಬೇಕು. ಅನಂತರ ಇಬ್ಬರ ಕೈಯಲ್ಲಿಯೂ ಸ್ವಲ್ಪ ಅಕ್ಕಿ, ಸ್ವಲ್ಪ ಬೆಲ್ಲ ಮತ್ತು ಸ್ವಲ್ಪ ಜೀರಿಗೆಯನ್ನು ಒಟ್ಟಿಗೆ ಸೇರಿಸಿ ಕೊಡಬೇಕು. ವಧುವರರ ವೈಯಕ್ತಿಕ ಸಂಸ್ಕಾರದಲ್ಲಿ ಇದು ಕೊನೆಯ ವಿಧಿಯಾಗಿದೆ.
ಆ. ಪರಸ್ಪರನಿರೀಕ್ಷಣವಿಧಿ ಮತ್ತು ಪುಷ್ಪಹಾರ ಹಾಕುವುದು : ಮಂಗಲವಾದ್ಯಗಳನ್ನು ಬಾರಿಸಿದ ನಂತರ ನಂತರ ‘ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷಿ ಪತೇ ತೇಂಘ್ರಿಯುಗಂ ಸ್ಮರಾಮಿ || (ಅರ್ಥ : ಹೇ ಲಕ್ಷಿ ಪತಿ ಭಗವಾನ ಶ್ರೀವಿಷ್ಣು, ನಿನ್ನ ಚರಣಗಳ ಸ್ಮರಣೆ ಎಂದರೇನೆ ಲಗ್ನ, ಶುಭಮುಹೂರ್ತ, ತಾರಾಬಲ, ಚಂದ್ರಬಲ, ವಿದ್ಯಾಬಲ ಮತ್ತು ದೈವಬಲವಾಗಿದೆ.)’ ಈ ಮಂತ್ರವನ್ನು ಹೇಳಿ ಅಂತರ್‌ಪಟವನ್ನು ಉತ್ತರ ದಿಕ್ಕಿನಿಂದ ತೆಗೆಯುತ್ತಾರೆ. ಅನಂತರ ಪುರೋಹಿತರು ವಧೂ-ವರರ ಕೈಯಲ್ಲಿರುವ ಅಕ್ಕಿ, ಬೆಲ್ಲ ಮತ್ತು ಜೀರಿಗೆಗಳನ್ನು ಪರಸ್ಪರರ ತಲೆಯ ಮೇಲೆ ಹಾಕಲು ಹೇಳುತ್ತಾರೆ. (ಇತ್ತೀಚೆಗೆ ಅಕ್ಕಿ, ಬೆಲ್ಲ, ಜೀರಿಗೆಗಳನ್ನು ಉಪಯೋಗಿಸುವುದಿಲ್ಲ.) ಇಬ್ಬರಿಗೂ ಪರಸ್ಪರರನ್ನು ಪ್ರೇಮಭಾವದಿಂದ ನೋಡಲು ಹೇಳುತ್ತಾರೆ ಮತ್ತು ಪರಸ್ಪರರಿಗೆ ಪುಷ್ಪಹಾರವನ್ನು ಹಾಕಲು ಹೇಳು ತ್ತಾರೆ. ಮೊದಲು ವಧೂವು ವರನಿಗೆ, ಅನಂತರ ವರನು ವಧುವಿಗೆ ಪುಷ್ಪಹಾರವನ್ನು ಹಾಕುತ್ತಾನೆ.
ಕೆಲವು ಕಡೆಗಳಲ್ಲಿ ವಿವಾಹದ ಸಮಯದಲ್ಲಿ ಹಾರ ಹಾಕುವಾಗ ವರನಿಗೆ ಸಹಜವಾಗಿ ಹಾರ ಹಾಕಲು ಆಗಬಾರದೆಂದು ಮತ್ತು ತಮಾಷೆಗೆಂದು ವಧುವನ್ನು ಮೇಲಕ್ಕೆ ಎತ್ತುತ್ತಾರೆ. ಕೆಲವೊಮ್ಮೆ ವರನನ್ನೂ ಮೇಲಕ್ಕೆ ಎತ್ತುತ್ತಾರೆ. ಈ ಅಯೋಗ್ಯ ಕೃತಿಯಿಂದ ಮುಹೂರ್ತದ ಸಮಯವು ಆಗಿ ಹೋಗಬಹುದು ಮತ್ತು ವಿವಾಹದ ಸ್ಥಳದಲ್ಲಿ ಆಕರ್ಷಿಸುವ ದೇವತೆಗಳ ಸ್ಪಂದನಗಳಿಗೆ ಅಡಚಣೆಯುಂಟಾಗುತ್ತದೆ. ಹಾಗೆಯೇ ಈ ಕೃತಿಯಿಂದ ವಾತಾವರಣದಲ್ಲಿ ತಮೋಗುಣಿ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಇದರ ಲಾಭವನ್ನು ಪಡೆದು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ವಿವಾಹದ ಸ್ಥಳದಲ್ಲಿ ತ್ರಾಸದಾಯಕ ಶಕ್ತಿಯ ಸ್ಪಂದನಗಳನ್ನು ಪ್ರಕ್ಷೇಪಿಸುತ್ತವೆ. ಇದರಿಂದ ವರ ಮತ್ತು ವಧುವಿನ ಮೇಲೂ ಪರಿಣಾಮವಾಗಬಹುದು.
ಇ. ಅಕ್ಷತಾರೋಪಣವಿಧಿ
ವಧೂ-ವರರು ಪರಸ್ಪರ ಪುಷ್ಪಹಾರವನ್ನು ಹಾಕಿದ ನಂತರ ವರನುಪೂರ್ವಕ್ಕೆ ಮತ್ತು ವಧೂವು ಪಶ್ಚಿಮಕ್ಕೆ ಮುಖ ಮಾಡಿಕೊಂಡು ಎದುರುಬದುರು ಆಸನದ ಮೇಲೆ ಕುಳಿತುಕೊಳ್ಳಬೇಕು. ಇಬ್ಬರೂ ಕೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು, ಮೊದಲು ವಧೂವು ವರನ ತಲೆಯ ಮೇಲೆ ಮತ್ತು ನಂತರ ವರನು ವಧುವಿನ ತಲೆಯಮೇಲೆ ಅಕ್ಷತೆಗಳನ್ನು ಹಾಕಬೇಕು. ಹೀಗೆ ಮೂರು ಅಥವಾ ಐದು ಸಲ ಮಾಡಬೇಕು. ಆಗ ಪುರೋಹಿತರು ‘ಋಕ್ಚವಾ ಇದಮಗ್ರೇ೦’ ಎಂಬ ಭಾಗವನ್ನು ಪಠಿಸಬೇಕು. ಪರಸ್ಪರರ ಧರ್ಮ, ಅರ್ಥ, ಕಾಮ, ಸಂತತಿ ಇತ್ಯಾದಿ ಇಚ್ಛೆಗಳು ಪೂರ್ಣವಾಗಲು ವಧೂ-ವರರು ಪರಸ್ಪರರ ಮೇಲೆ ಅಕ್ಷತೆಗಳನ್ನು ಹಾಕಬೇಕು. ಅಕ್ಷತೆಯ ಅಕ್ಕಿಯು ಸಮೃದ್ಧಿಯ ಪ್ರತೀಕವಾಗಿದೆ. ಹಾಗೆಯೇ ಅದರಲ್ಲಿ ಭೂತ, ಮಾಟ ಇತ್ಯಾದಿ ಕೆಟ್ಟ ಶಕ್ತಿಗಳನ್ನು ನಿವಾರಿಸುವ ಶಕ್ತಿಯೂ ಇರುವುದರಿಂದ ಅವುಗಳನ್ನು ಉಪಯೋಗಿಸುತ್ತಾರೆ.
ಅನಂತರ ವಧೂ-ವರರು ಆಸನದ ಮೇಲೆ ಪರಸ್ಪರರ ಸಮೀಪ ಕುಳಿತುಕೊಳ್ಳಬೇಕು. ಪತ್ನಿಯು ಪತಿಯ ಎಡಬದಿಯಲ್ಲಿ ಕುಳಿತುಕೊಳ್ಳಬೇಕು. ವಧೂ-ವರರ ಮಾತಾ-ಪಿತರು, ದಿಬ್ಬಣದವರು ಮತ್ತು ಉಪಸ್ಥಿತರು ಸಾಲಾಗಿ ಬಂದು ವಧೂ-ವರರ ಮೇಲೆ ಅಕ್ಷತೆಗಳನ್ನು ಹಾಕಿ ಸುಲಗ್ನವನ್ನು ಮಾಡಬೇಕು. ಆ ಸಮಯದಲ್ಲಿ ವಧೂ-ವರರು ಎದ್ದು ನಿಂತು ಎಲ್ಲರ ಆಶೀರ್ವಾದ ಪಡೆಯಬೇಕು.
ಈ. ಕನ್ಯಾದಾನ ವಿಧಿ
ವ್ಯಾಖ್ಯೆ : ವಧುವನ್ನು (ಕನ್ಯೆಯನ್ನು) ವರನಿಗೆ ದಾನವೆಂದು ಕೊಡುವುದನ್ನು ಕನ್ಯಾದಾನ ಎನ್ನುತ್ತಾರೆ. ವಿವಾಹಸಂದರ್ಭದಲ್ಲಿ ವಧು- ವರರು ಪರಸ್ಪರರಿಗೆ ಹಾರ ಹಾಕುತ್ತಾರೆ. ಇದು ಸಂಕಲ್ಪಕ್ಕನುಸಾರ ವಿಧಿಯಾಯಿತು. ಅನಂತರ ಸಂಕಲ್ಪಪೂರ್ತಿಯ ವಿಧಿಯೇ ಕನ್ಯಾದಾನ. ಆದುದರಿಂದ ಅದನ್ನು ವಧು-ವರರು ಪರಸ್ಪರರನ್ನು ವರಿಸಿದ ನಂತರ ಮಾಡುತ್ತಾರೆ.
ಸಂಕಲ್ಪ : ಬ್ರಾಹ್ಮವಿವಾಹದ ವಿಧಿಯಿಂದ ವಧುಪಿತನು ಕನ್ಯಾದಾನದ ಸಂಕಲ್ಪ ಮಾಡುತ್ತಾನೆ.
ವಿಧಿ : ಒಂದು ಹೊಸ ಕಂಚಿನ ಪಾತ್ರೆಯನ್ನಿಟ್ಟು ಅದರ ಮೇಲೆ ಕನ್ಯೆಯ ಬಲಗೈ, ಅದರ ಮೇಲೆ ವರನ ಬಲಗೈ ಮತ್ತು ಅದರ ಮೇಲೆ ವಧುಪಿತನು ತನ್ನ ಬಲಗೈ ಹಿಡಿಯಬೇಕು. ಬಳಿಕ ವಧುಪಿತನು ಕನ್ಯಾದಾನಕ್ಕೆಂದು ಮೊದಲೇ ಅಭಿಮಂತ್ರಿಸಿ ಸಿದ್ಧಪಡಿಸಿಟ್ಟಿರುವ ನೀರಿನ ಕಲಶವನ್ನು ತನ್ನ ಬಲಗಡೆಗೆ ಇರುವ ತನ್ನ ಪತ್ನಿಯ ಕೈಗೆ ಕೊಡಬೇಕು. ಅವಳು ಆ ನೀರನ್ನು ಸತತ ಧಾರೆಯಾಗಿ ಪತಿಯ ಕೈ ಮೇಲೆ ಬಿಡಬೇಕು. ಆ ನೀರು ವಧುಪಿತನ ಕೈಯಿಂದ ಇಳಿದು ವರನ ಕೈಮೇಲೆ ಬಿದ್ದು, ಅಲ್ಲಿಂದ ವಧುವಿನ ಕೈಯಿಂದ ಕಂಚಿನ ಪಾತ್ರೆಯೊಳಗೆ ಬೀಳುತ್ತದೆ.
ಈ ಸಮಯದಲ್ಲಿ ‘ಧರ್ಮ ಮತ್ತು ಪ್ರಜೆಗಳ ಸಿದ್ಧಿಗಾಗಿ ನಾನು ಈ ಕನ್ಯೆಯನ್ನು ಸ್ವೀಕರಿಸುತ್ತೇನೆ. ಧರ್ಮ, ಅರ್ಥ ಮತ್ತು ಕಾಮ ಇವುಗಳ ಆಚರಣೆಯಲ್ಲಿ ಇವಳನ್ನು ಮೀರಿ ಹೋಗುವುದಿಲ್ಲ. ಎಲ್ಲ ಆರ್ಥಿಕ ವ್ಯವಹಾರಗಳನ್ನು ಇವಳ ಅನುಮತಿಯಿಂದಲೇ ಮಾಡುವೆನು ಹಾಗೂ ಇವಳ ಹೊರತು ಬೇರೆ ಸ್ತ್ರೀಯ ಬಗ್ಗೆ ನನ್ನ ಮನಸ್ಸಿನಲ್ಲಿ ಕಾಮವಾಸನೆಯು ಬರಲು ಬಿಡುವುದಿಲ್ಲ’ ಎಂದು ವರನು ಹೇಳುತ್ತಾನೆ.
ಉ. ಸೂತ್ರಬಂಧನ (ದಾರವನ್ನು ಸುತ್ತುವುದು)
‘ವಧು ಮತ್ತು ವರ ಇವರು ಒಂದು ಜೀವವಾಗಿದ್ದಾರೆ’ ಎಂಬುದನ್ನು ತೋರಿಸಲು ವಿವಾಹವಿಧಿಯಲ್ಲಿ ‘ಸೂತ್ರಬಂಧನವಿಧಿ’ಯಿದೆ. ಈ ದಾರವನ್ನು ಈಶಾನ್ಯ (ಈಶ್ವರ) ದಿಕ್ಕಿನಿಂದ ಸುತ್ತಲು ಪ್ರಾರಂಭಿಸಿ ಅದರ ೫ ಸುತ್ತುಗಳನ್ನು ಸುತ್ತುತ್ತಾರೆ, ಏಕೆಂದರೆ ಶರೀರವು ಪಂಚಮಹಾಭೂತ ಗಳಿಂದಲೇ ತಯಾರಾಗಿದೆ.
ಊ. ಕಂಕಣಬಂಧನ
ಸೂತ್ರಬಂಧನದಲ್ಲಿ ವಧು ವರರ ಕುತ್ತಿಗೆಯ ಸುತ್ತಲೂ ಸುತ್ತಿದ ಸೂತ್ರಕ್ಕೆ ಕುಂಕುಮವನ್ನು ಹಚ್ಚಿ ಹುರಿಹಾಕಬೇಕು ಮತ್ತು ಈ ಸೂತ್ರದಲ್ಲಿ ಅರಿಸಿನಬೇರು, ಊರ್ಣಾಸ್ತುಕವನ್ನು (ಉಣ್ಣೆಯ ತುಂಡು) ಕಟ್ಟಬೇಕು. ವರನು ಈ ಸೂತ್ರವನ್ನು ವಧುವಿನ ಎಡ ಮಣಿಕಟ್ಟಿಗೆ ಕಟ್ಟಬೇಕು. ಅನಂತರ ಸೊಂಟದ ಸುತ್ತಲೂ ಸುತ್ತಿದ ಸೂತ್ರಕ್ಕೆ ಉಣ್ಣೆಯ ತುಂಡು ಮತ್ತು ಅರಿಸಿನದ ಬೇರನ್ನು ಕಟ್ಟಿ ವಧುವು ಆ ಸೂತ್ರವನ್ನು ವರನ ಬಲಗೈಯ ಮಣಿಕಟ್ಟಿಗೆ ಕಟ್ಟಬೇಕು.
ಎ. ಮಾಂಗಲ್ಯಧಾರಣೆ
ಮಂಗಳಸೂತ್ರಕ್ಕೆ ಸಂಸ್ಕ ತದಲ್ಲಿ ‘ಮಾಂಗಲ್ಯತಂತು’ ಎಂದೂ ಹೇಳುತ್ತಾರೆ. ಇದರಲ್ಲಿ ಎರಡು ಎಳೆಗಳುಳ್ಳ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರುತ್ತಾರೆ. ಮಧ್ಯಭಾಗದಲ್ಲಿ ೪ ಚಿಕ್ಕ ಮಣಿಗಳು ಮತ್ತು ೨ ಚಿಕ್ಕ ಬಟ್ಟಲುಗಳಿರುತ್ತವೆ. ಎರಡು ದಾರಗಳೆಂದರೆ ಪತಿ-ಪತ್ನಿಯ ಬಂಧನ, ೨ ಬಟ್ಟಲುಗಳೆಂದರೆ ಪತಿ-ಪತ್ನಿ ಮತ್ತು ೪ ಕಪ್ಪು ಮಣಿಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳು.
ಏ. ವಿವಾಹಹೋಮ
ವಿವಾಹವಿಧಿಯಿಂದ ಸ್ವೀಕರಿಸಿದ ಈ ವಧುವಿನಲ್ಲಿ ಪತ್ನಿತ್ವವು ನಿರ್ಮಾಣವಾಗಲು ಮತ್ತು ಗೃಹ್ಯಾಗ್ನಿಯನ್ನು ಸಿದ್ಧಗೊಳಿಸಲು ವಿವಾಹಹೋಮವನ್ನು ಮಾಡುತ್ತಾರೆ.
ಐ. ಪಾಣಿಗ್ರಹಣ
ಐದೂ ಬೆರಳುಗಳ ಸಹಿತ ವಧುವಿನ ಅಂಗೈಯನ್ನು ವರನು ತನ್ನ ಕೈಯಲ್ಲಿ ತೆಗೆದುಕೊಳ್ಳುವುದಕ್ಕೆ ‘ಪಾಣಿಗ್ರಹಣ’ ಎನ್ನುತ್ತಾರೆ.
ಒ. ಲಾಜಾಹೋಮ
ಲಾಜಾ ಎಂದರೆ ಅರಳು. ಅರಳು (ಹಾಗೆಯೇ ಅಕ್ಕಿ) ಇದು ಅರಳಿರುವ ಯೋನಿಯ ಅಂದರೆ ಬಹುಪ್ರಸವತೆಯ ಪ್ರತೀಕವಾಗಿದೆ.
ಓ. ಸಪ್ತಪದಿ
‘ಏಳು ಹೆಜ್ಜೆಗಳನ್ನು ಒಟ್ಟಿಗೆ ನಡೆಯುವುದರಿಂದ ಸ್ನೇಹವಾಗುತ್ತದೆ’ ಎಂಬ ಶಾಸ್ತ್ರವಚನವಿದೆ – ಆದುದರಿಂದಲೇ ವಿವಾಹಸಂಸ್ಕಾರದಲ್ಲಿ ಸಪ್ತಪದಿಗೆ ವಿಶೇಷ ಮಹತ್ವವಿದೆ. ವರನು ವಧುವಿನ ಕೈ ಹಿಡಿದು ಹೋಮದ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ ಅಕ್ಕಿಯ ಏಳೂ ರಾಶಿಗಳ ಮೇಲಿನಿಂದ ಅವಳನ್ನು ನಡೆಸಿಕೊಂಡು ಹೋಗಬೇಕು. ಇದಕ್ಕೆ ‘ಸಪ್ತಪದಿ’ ಎನ್ನುತ್ತಾರೆ. ವಧು-ವರರು ಒಂದೊಂದು ಹೆಜ್ಜೆಯನ್ನಿಟ್ಟಾಗ ಪುರೋಹಿತರು ಪ್ರತಿಯೊಂದು ಹೆಜ್ಜೆಗೂ ಒಂದೊಂದು ಮಂತ್ರಗಳನ್ನು ಹೇಳುತ್ತಾರೆ.
ಔ. ವಿವಾಹೋತ್ತರ ವಿಧಿ
ಇದರಲ್ಲಿ ಮುಂದಿನ ವಿಧಿಗಳಿರುತ್ತವೆ. ಗೃಹಪ್ರವೇಶ ಹೋಮ, ನಾಣ್ಯ, ಅಡಿಕೆ ಅಥವಾ ಅರಿಸಿನಬೇರನ್ನು ಬಿಡಿಸುವುದು, ವಧು-ವರ ವ್ರತ, ಸೂನಮುಖ, ಏರಿಣಿದಾನ (ಕನ್ಯಾಪಿತನು ಪೂಜೆಯ ಸಾಮಾನುಗಳಿರುವ ಬಿದರಿನ ಬುಟ್ಟಿಯನ್ನು ದಾನ ಕೊಡುವುದು) ಮತ್ತು ಅನ್ನಪೂರ್ಣಾ ಮೂರ್ತಿಯನ್ನು ತೆಗೆದುಕೊಳ್ಳುವುದು.
ಇಲ್ಲಿ ನೀಡಿರುವ ವಿಧಿಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಸನಾತನದ ‘ವಿವಾಹ ಸಂಸ್ಕಾರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.
***
| ಸಂಸ್ಕಾರಗಳು || || ಸಂಚಿಕೆ – ೧೭ || || ವಿವಾಹ || ಅಧ್ಯಾಯ – ೧: ಪೀಠಿಕೆ.
|| ಸಂಚಿಕೆ – ೧೭ || || ವಿವಾಹ || ಅಧ್ಯಾಯ – ೨:
******
“ವಿಶಿಷ್ಟಂ ವಹನಂ ಕ್ರಿಯತೇ ಅನೇನ ಇತಿ ವಿವಾಹಃ ||”
ವಧುವನ್ನು ತಂದೆಯ ಮನೆಯಿಂದ ಶಾಸ್ತ್ರೋಕ್ತವಾಗಿ ತನ್ನ ಮನೆಗೆ ಕರೆದೊಯ್ಯುವ ಕಾರ್ಯವೇ ವಿವಾಹ.
ವಿವಾಹವೆಂಬುದು ಭಾರತೀಯ ಸಂಸ್ಕೃತಿಯಲ್ಲಿ ಒಂದು ಸಂಸ್ಕಾರ. ಎಂದರೆ ಶರೀರ-ಮನಸ್ಸು-ಬುದ್ಧಿಗಳನ್ನು ಶುದ್ಧಿಗೊಳಿಸಿ, ಪವಿತ್ರಗೊಳಿಸಿ ಅವುಗಳಲ್ಲಿ ವಿಶೇಷ ಶಕ್ತಿಯನ್ನು ಉಂಟು ಮಾಡುವ ಶಾಸ್ತ್ರವಿಹಿತವಾದ ಧಾರ್ಮಿಕ ಕರ್ಮ.
ಭೌತಿಕ ಸುಖವು ವಿವಾಹದ ಉದ್ದೇಶವಲ್ಲ. ಸತ್ಸಂತಾನ ಪ್ರಾಪ್ತಿಯೇ ವಿವಾಹದ ಮೂಲೋದ್ದೇಶ. ಧರ್ಮಪಾಲನೆ ಗೃಹಸ್ಥರ ಕರ್ತವ್ಯ. ವೈವಾಹಿಕ ಜೀವನವು ಕೇವಲ ಇಹಲೋಕಕ್ಕೆ ಸೀಮಿತವಾಗಿರದೇ, ಪಾರಲೌಕಿಕಕ್ಕೂ ಅಂದರೆ ಆಧ್ಯಾತ್ಮಿಕಕ್ಕೂ ಸಂಬಂಧಿಸಿರಬೇಕು. ಮಾನಸಿಕ ಹಾಗೂ ಆಧ್ಯಾತ್ಮಿಕ ಸುಖವನ್ನು ದಂಪತಿಗಳು ಅನುಭವಿಸುವಂತಾಗಬೇಕು. ಇದು ವೇದಮಂತ್ರಗಳ ಸಂದೇಶ; ಋಷಿಮುನಿಗಳ ಆಶಯ.
ವಿ + ವಾಹ = ವಿವಾಹ.
ವಿಶಿಷ್ಟವಾದ ’ವಾಹ’ ಎಂದರ್ಥ.
ವಿಶಿಷ್ಟವಾದ ರೀತಿಯಲ್ಲಿ ಉನ್ನತ ತತ್ತ್ವದ ಕಡೆಗೆ, ಭಗವಂತನೆಡೆಗೆ, ನಿತ್ಯದೆಡೆಗೆ ಯಾವುದು ಒಯ್ಯುತ್ತದೆಯೋ ಅದು ವಿವಾಹ.
“ಧನ್ಯೋ ಗೃಹಸ್ಥಾಶ್ರಮಃ” ಎಂಬುದು ನಮ್ಮ ಸನಾತನ ವೈದಿಕ ಧರ್ಮದ ನಾಲ್ಕು ಆಶ್ರಮಗಳಲ್ಲಿ ಉಳಿದ ಎಲ್ಲಾ ಆಶ್ರಮಗಳನ್ನು ಪೋಷಿಸುವ, ಪರಿಪೂರ್ಣತೆಯನ್ನು ಪಡೆಯುವ ಗೃಹಸ್ಥಾಶ್ರಮದ ಶ್ರೇಷ್ಠತೆಯನ್ನು ತಿಳಿಸುವ ವಾಕ್ಯವಾಗಿದೆ. “ಗೃಹಸ್ಥಮಾಶ್ರಿತ್ಯ ಸರ್ವೇ ತಿಷ್ಠಂತಿ ಚಾಶ್ರಮಾಃ” ಎಂಬ ವಾಕ್ಯದಂತೆ ಎಲ್ಲಾ ಆಶ್ರಮದವರಿಗೂ ಪಶುಪಕ್ಷಿ ಮುಂತಾದ ಜೀವರಾಶಿಗಳಿಗೂ ಇದರಿಂದ ನೆರವು ಸಿಗುವುದು. ಗೃಹಸ್ಥಾಶ್ರಮವನ್ನು ಹೊಂದಲು ವಿಧಿಸಿರುವ “ವಿವಾಹ ಸಂಸ್ಕಾರ” ವು ಪವಿತ್ರವಾಗಿದ್ದು, ಅದರ ಮಂತ್ರಗಳು, ಆಚರಣೆ ಎಲ್ಲವೂ ಅರ್ಥಪೂರ್ಣವೂ, ಶ್ರೇಷ್ಠವೂ ಆಗಿರುತ್ತದೆ.
ಸ್ತ್ರೀಪುರುಷರ ಮಿಲನ, ಸಮಾಗಮ, ಸಂತಾನ ಇವೆಲ್ಲಾ ಪ್ರಕೃತಿ ನಿಯಮ. ಆದರೆ ವಿವೇಚನಾಶಕ್ತಿ ಮಾನವರಲ್ಲಿ ಇರುವುದರಿಂದ ಒಂದು ಕ್ರಮಬದ್ಧವಾದ ಸಾರ್ಥಕ ಬದುಕು ಮಾನವನದು. ಇಲ್ಲಿ ನಿಯಮಿತವಾದ ಕಟ್ಟಳೆಗಳಿವೆ. ಇದರಿಂದ ಸ್ತ್ರೀಪುರುಷರ ನಡುವಿನ ಸಂಬಂಧವು ನಿಯಂತ್ರಿತವಾಗುತ್ತದೆ.
ಸಮಾಜದಲ್ಲಿ ಸ್ಥಾನಮಾನ ಗೌರವ ಪ್ರಾಪ್ತಿ, ಅವರಿಗೆ ಹುಟ್ಟುವ ಸಂತತಿಯ ಸಂಬಂಧವು ನಿಶ್ಚಿತವಾಗುತ್ತದೆ. ಸ್ವಚ್ಛಂದತೆಯು ನಿಯಂತ್ರಿತವಾಗುತ್ತದೆ. ಸಮಾಜದೊಡನೆ ಸಾಮರಸ್ಯವು ಲಭಿಸುತ್ತದೆ. ನೆಂಟರಿಷ್ಟರೊಂದಿಗೆ ಸಂಬಂಧವು ಬೆಳೆಯುತ್ತದೆ.
ಪುರುಷರಿಗೆ ಉಪನಯನವು ಪುನರ್ಜನ್ಮವಿದ್ದಂತೆ, ಸ್ತ್ರೀಯರಿಗೆ ವಿವಾಹವು ಪುನರ್ಜನ್ಮವಾಗಿರುತ್ತದೆ. ಹೆತ್ತವರನ್ನು ತೊರೆದು, ಹುಟ್ಟೂರನ್ನು ಬಿಟ್ಟು ಕೈಹಿಡಿದವನೊಡನೆ ಅವನ ಸಂಬಂಧಿಕರೊಡನೆ ಸಂಸಾರವನ್ನು ಸಾಗಿಸುವಾಗ ಹೊಸ ಅನುಭವ ಉಂಟಾಗುವುದು. ಅವರೊಡನೆ ಬೆರೆಯಬೇಕಾಗುವುದು. ಈ ಸಂಸ್ಕಾರದಿಂದ ವಧೂ ಪಟ್ಟವೂ ಸಿಗುತ್ತದೆ. ಆಮೇಲೆ ಸುವಾಸಿನೀ, ಸುಮಂಗಲೀ, ಪತವೃತೆ, ಗೃಹಿಣೀ, ಸಾಧ್ವಿ ಎಂದೂ, ಪಾಣಿಗ್ರಹಣದಿಂದ ಪತ್ನೀ, ದಾರಾ ಶಬ್ದದಿಂದ ಸಹಧರ್ಮಿಣೀ, ಮಕ್ಕಳ ಜನನದಿಂದ ಜಾಯಾ, ಕುಟುಂಬಭರಣೆಯಿಂದ (ಪೋಷಣೆ) ಬಾರ್ಯೆ, ಸೌಭಾಗ್ಯದಿಂದ ಸುಭಗೆ ಎನಿಸಿಕೊಳ್ಳುತ್ತಾಳೆ. ಹೀಗೆ ಸಮಜದಲ್ಲಿ ಹಿರಿಮೆ, ಗರಿಮೆ, ಘನತೆ, ಗೌರವ ಪ್ರಾಪ್ತಿಯಾಗುವುದು.
ವಿವಾಹವು ಎಂಟು ವಿಧ:-
ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ., ಎಂಬುದಾಗಿ ಎಂಟು ವಿಧ.
"ಅಚ್ಛಾದ್ಯ ಚಾರ್ಚಯಿತ್ವಾ ಚ ಶ್ರುತಿಶೀಲವತೇ ಸ್ವಯಂ|
ಆಯೂಯ ದಾನಂ ಕನ್ಯಾಯ ಬ್ರಾಹ್ಮೋ ಧರ್ಮ: ಪ್ರಕೀರ್ತಿತ:||"
ಅಂದರೆ:-
ವಿದ್ಯೆ ಮತ್ತು ಶೀಲಗಳನ್ನು ಹೊಂದಿರುವ ವರನಿಗೆ ವಸ್ತ್ರವನ್ನು ಹೊದಿಸಿ, ಪೂಜೆಮಾಡಿ, ತಾನಾಗಿ ಅವನನ್ನು ಆಹ್ವಾನಿಸಿ ಕನ್ಯೆಯನ್ನು ಆತನಿಗೆ ದಾನಮಾಡುವುದು ಬ್ರಾಹ್ಮ ವಿವಾಹವಾಗಿದೆ.
ಬ್ರಹ್ಮ ಎಂದರೆ ತಿಳಿದು ಮಾಡುವ ವಿವಾಹ.
ಆದುದರಿಂದ ಯಾವ ವರ್ಣೀಯರೇ ಆಗಲಿ ಬ್ರಹ್ಮವಿವಾಹವೇ ಉತ್ತಮವಾಗಿದೆ.
ವೈದಿಕ ವಿಧಿಪ್ರಕಾರ ಹಲವು ವಿವಾಹ ಕಾರ್ಯಕ್ರಮಗಳು ಇವೆ:-
ವರಪೂಜಾ.
ವಾಗ್ದಾನ.
ಗಣಪತಿ ಪೂಜೆ.
ಸ್ವಸ್ತಿವಾಚನ.
ನಾಂದಿ ಸಮಾರಾಧನ.
ಅಂಕುರಾರೋಪಣ.
ಮಂಟಪದೇವತಾ ಪ್ರತಿಷ್ಠಾ.
ರಕ್ಷಾ ಬಂಧನ.
ಧಾರಾಕಲಶ ಸ್ಥಾಪನ.
ಕಾಶೀಯಾತ್ರಾ.
ಮಧುಪರ್ಕ.
ಸಭಾಭಿವಂದನ.
ನಿರೀಕ್ಷಣ.
ಕನ್ಯಾದಾನ.
ಮಾಂಗಲ್ಯಧಾರಣ.
ಅಕ್ಷತಾರೋಪಣ.
ಪಾಣಿಗ್ರಹಣ.
ಸಪ್ತಪದೀ.
ಲಾಜಹೋಮ.
ಫಲಪೂಜಾ.
ತೀರ್ಥಾಭಿಷೇಕ.
ಕಂಕಣಬಂಧನ.
ನಾಗಬಲಿ.
ಗೃಹಪ್ರವೇಶ.
ಇತ್ಯಾದಿ.,
ಇಲ್ಲಿನ ಮುಖ್ಯ ವಿಧಿಗಳ ವಿವರಣೆಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯುವ ಪ್ರಯತ್ನ ಮಾಡೋಣ.
ಹೀಗೆ ವಿವಾಹಸಂಸ್ಕಾರದಲ್ಲಿ ಬ್ರಹ್ಮಚಾರಿಯಾದ ವಟುವು ಗೃಹಸ್ಥನಾಗುವಲ್ಲಿ ಬೇಕಾಗುವ ಪೂರ್ವಸಿದ್ಧತೆಗಳನ್ನು ಒಳಗೊಂಡುದಲ್ಲದೇ, ಸಾಂಸಾರಿಕ ಜೀವನಕ್ಕೆ ಬೇಕಾಗುವ ಮಾರ್ಗದರ್ಶನಗಳನ್ನು ಒಳಗೊಂಡುದಾಗಿದೆ.
ಒಂದು ಶುದ್ಧ ನೈತಿಕ ನೆಲೆಗಟ್ಟನ್ನು ಅರ್ಥೈಸುವಲ್ಲಿ ವೈದಿಕದ ಪಾತ್ರವು ಪ್ರತಿ ಹೆಜ್ಜೆಯಲ್ಲಿಯೂ ಮಹತ್ವಪೂರ್ಣ ಸಂದೇಶಗಳನ್ನು ತಿಳಿಸುತ್ತವೆ.
*****
|| ಸಂಚಿಕೆ – ೧೭ || || ವಿವಾಹ || ಅಧ್ಯಾಯ – ೨:
ಮಾಂಗಲ್ಯಧಾರಣ. (ಮಂಗಳಸೂತ್ರ ಬಂಧನ).
ಮಾಂಗಲ್ಯವು ವಿವಾಹದ ಪರಮೋಚ್ಚ ಸಂಕೇತವಾಗಿ ಇಂದು ಸ್ವೀಕರಿಸಲ್ಪಟ್ಟಿದೆ. ದಂಪತಿಗಳು “ತಾವು ಪರಸ್ಪರ ಸರ್ವಸ್ವ” ಎಂಬ ಭಾವವನ್ನು ಅದು ಮೂಡಿಸುತ್ತದೆ. ಇಂದಿನ ವಿವಾಹಗಳಲ್ಲಿ ಮಾಂಗಲ್ಯಧಾರಣ ಅಥವಾ ತಾಳಿ ಕಟ್ಟುವುದೇ ಪ್ರಮುಖ ವಿಧಿ ಎಂದು ನಂಬಿಕೆ. ಇದು ಪರಸ್ಪರ ಮಮಕಾರವನ್ನು ಹುಟ್ಟಿಸುವುದರಿಂದ ಅತ್ಯುಚ್ಚ ಸ್ಥಾನವನ್ನು ಪಡೆದಿದೆ ಎನ್ನಬಹುದು.
ಮಾಂಗಲ್ಯಧಾರಣೆಯ ಸಮಯದಲ್ಲಿ, ವಧೂವರರನ್ನು ಮಂಟಪದಲ್ಲಿ ಪೂರ್ವಾಭಿಮುಖವಾಗಿ ಕುಳ್ಳಿರಿಸಿ, ಮಂಗಳಸೂತ್ರವನ್ನು ವರನಿಂದ ಪೂಜಿಸಿ, ಗುರುಹಿರಿಯರೇ ಆದಿಯಾಗಿ ಬಂದ ಸಭಿಕ ಸಜ್ಜನರಿಂದ ಆ ಮಂಗಳಸೂತ್ರಕ್ಕೆ ಆಶೀರ್ವದಿಸಿ, ಆ ಮಂಗಳಸೂತ್ರವನ್ನು ವರನ ಕೈಯಲ್ಲಿ ಕೊಟ್ಟು, ಅದನ್ನು ವರನು ವಧುವಿನ ಕೊರಳಿಗೆ ಕಟ್ಟುವುದೇ ಮಾಂಗಲ್ಯಧಾರಣ
(ಮಂಗಳಸೂತ್ರ ಬಂಧನ).
ವರನು ಮಾಂಗಲ್ಯವನ್ನು ಕಟ್ಟುವಾಗ ಈ ಕೆಳಗಿನ ಮಂತ್ರವನ್ನು ವರನಿಂದ ಹೇಳಿಸಬೇಕು:
“ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಾ |
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್ ||”
ಈ ಮಂತ್ರದ ಅರ್ಥ:-
“ಈ ಮಂಗಳ ಸೂತ್ರದಲ್ಲಿನ ಮಾಂಗಲ್ಯ ನಾನೇ. ನನ್ನ ಜೀವನದ ಕಾರಣವೇ ಇದಾಗಿದೆ. ಹೇ ಸುಂದರಿಯೇ! ನಿನ್ನ ಕಂಠದಲ್ಲಿ ಇದನ್ನು ಕಟ್ಟುತ್ತಿದ್ದೇನೆ. ನೀನು ನೂರು ಶರದೃತುಗಳು ಬಾಳು.”
ಇಲ್ಲಿ ಶರದೃತುವಿನ ಚಂದ್ರನು ಹುಣ್ಣಿಮೆಯ ದಿನ ಪರಿಪೂರ್ಣನಾಗಿರುತ್ತಾನೆ. ಚಂದ್ರನು ಮನಃ ತತ್ವದ ಕಾರಣನೂ ಆಗಿದ್ದಾನೆ. ಅಂದರೆ ಪೂರ್ಣಪರಿಶುದ್ಧ ಮನದವಳಾಗಿ ನನ್ನ ಜೀವನವನ್ನು ಭರಿಸು ಎಂಬರ್ಥದಲ್ಲಿ ವರನು ಕಟ್ಟುತ್ತಾನೆ.
ಈ ಸಂದರ್ಭದಲ್ಲಿ ಋತ್ವಿಜರು, ಆಶೀರ್ವಾದರೂಪ ವಾಕ್ಯಗಳನ್ನು/ಮಂತ್ರಗಳನ್ನು ಹೇಳುತ್ತಿರಬೇಕು:-
“ಅವಿಧವಾ ಭವ ವರ್ಷಾಣಿ ಶತಂ ಸಾರ್ಧಂ ತು ಸುವ್ರತಾಃ|
ತೇಜಸ್ವೀ ಚ ಯಶಸ್ವೀ ಚ ಧರ್ಮಪತ್ನೀ ಪತಿವ್ರತಾ ||”
ಅರ್ಥ:- ವಿಧವೆಯಾಗದಂತೆ ನೂರು ವರ್ಷ ತುಂಬುವವರೆಗೂ ವ್ರತನಿಷ್ಠಳಾಗಿ, ತೇಜಸ್ವಿಯೂ, ಯಶಸ್ವಿಯೂ ಆಗಿ ನಿನ್ನ ಪತಿಗೆ ಧರ್ಮಪತ್ನಿಯಾಗಿ ಪತಿವ್ರತೆಯಾಗಿ ಬಾಳು.
“ಜನಯದ್ ಬಹುಪುತ್ರಾಣಿ ಮಾಚ ದುಃಖಂ ಲಭೇತ್ ಕ್ವಚಿತ್ |
ಭರ್ತಾತೇ ಸೋಮಪಾ ನಿತ್ಯಂ ಭವೇದ್ಧರ್ಮ ಪರಾಯಣಃ ||”
ಅರ್ಥ:- ಸಜ್ಜನರು ಒಪ್ಪುವ ಹಿತಕಾರಿಯಾದ ಮಕ್ಕಳನ್ನು ಹೊಂದಿ ಗಂಡನಲ್ಲಿ ಸತ್ಯವನ್ನೇ ನುಡಿಯುತ್ತಾ ಧರ್ಮಪರಾಯಣಳಾಗಿ, ದುಃಖದಿಂದ ಮುಕ್ತಳಾಗಿ, ಯಾರಿಗೂ ದುಃಖ ಉಂಟುಮಾಡದೇ ಬಾಳು.
“ಅಷ್ಟಪುತ್ರಾ ಭವ ತ್ವಂಚ ಸುಭಗಾಚ ಪತಿವ್ರತಾ |”
ಭರ್ತುಶ್ಚೈವ ಪಿತು ಭ್ರಾತು ರ್ಹೃದಯಾನಂದಿನೀ ಸದಾ ||”
ಅರ್ಥ:- ಸುಭಗೆಯಾಗಿ, ಪತಿವ್ರತೆಯಾಗಿ, ಇಷ್ಟಪುತ್ರನನ್ನು ಪಡೆದು, ಗಂಡನಿಗೂ, ತಂದೆ ಮತ್ತು ಸೋದರಿಗೂ ಹೃದಯಕ್ಕೆ ಸದಾ ಆನಂದದಾಯಕಳಾಗು. (ಇಂದಿನ ಕಾಲದಲ್ಲಿ ’ಅಷ್ಟಪುತ್ರ’ ಎಂಬಲ್ಲಿ ’ಇಷ್ಟಪುತ್ರ’ ಅಥವಾ ’ಸುಪುತ್ರ’ ಎಂದು ಅರ್ಥೈಸುವುದು ಸೂಕ್ತವಾಗಿದೆ.)
“ಇಂದ್ರಸ್ಯತು ಯಥೇಂದ್ರಾಣೆ ಶ್ರೀಧರಸ್ಯ ಯಥಾ ಶ್ರಿಯಾ |
ಶಂಕರಸ್ಯ ಯಥಾ ಗೌರಿ ತಥಾ ತ್ವಮಪಿ ಭರ್ತರಿಃ ||”
ಅರ್ಥ:- ಇಂದ್ರನೊಡನೆ ಶಚೀದೇವಿ, ವಿಷ್ಣುವಿನೊಡನೆ ಲಕ್ಷ್ಮೀ ಹಾಗೂ ಶಿವನೊಡನೆ ಗೌರಿಯೂ ಇದ್ದಂತೆ ನಿನ್ನ ಗಂಡನೊಡನೆ ನೀನಿರು.
“ಅತ್ರೇರ್ಯಥಾನಸೂಯಾ ಸ್ಯಾದ್ವಸಿಷ್ಠಾಸ್ಯಾಪ್ಯರುಂಧತೀ |
ಕೌಶಿಕಸ್ಯ ಯಥಾ ಸತೀ ತಥಾ ತ್ವಮಪಿ ಭರ್ತರಿ ||”
ಅರ್ಥ:- ಅತ್ರಿಮುನಿಯ ಸಂಗಡ ಅನುಸೂಯ ಇದ್ದಂತೆ, ವಸಿಷ್ಠರೊಡನೆ ಅರುಂಧತಿಯಂತೆ, ಕೌಶಿಕರೊಡನೆ ಸತಿ ಇದ್ದಂತೆ, ನೀನು ನಿನ್ನ ಗಂಡನೊಡನೆ ಇರು.
ಹೀಗೆ ಅನೇಕ ಉದಾಹರಣೆಗಳೊಂದಿಗೆ ಶುಭವನ್ನು ಹಾರೈಸುತ್ತಾರೆ.
ಇದನ್ನು ಪರಾಂಬರಿಸಿ ನೋಡಿದಾಗ ಗಂಡನ ಗುಣಕರ್ಮಗಳಿಗೆ ಅನುಸಾರವಾಗಿಯೇ ಪತ್ನಿಯು ಕೂಡ ತನ್ನ ಗುಣಕರ್ಮಗಳನ್ನು ಹೊಂದಿಸಿಕೊಂಡು ಬಾಳುವುದು ಶ್ರೇಷ್ಠವೆಂಬುದೇ ಇದರರ್ಥ.
******
|
ಸಂಚಿಕೆ–೨೦ || ವಿವಾಹ || ಅಧ್ಯಾಯ–೪: ನಿರೀಕ್ಷಣ-ಅಂತಃಪಟಗಳ ಸಂಬಂಧನಿಶ್ಚಿತವಾದ ಮಂಗಲ ಮುಹೂರ್ತದಲ್ಲಿ ಮಂಗಲಾಷ್ಟಕ ಪಠನದೊಂದಿಗೆ ವಧೂವರರು ಪರಸ್ಪರ ಮುಖದರ್ಶನ ಮಾಡಿ ಪುಷ್ಪಮಾಲೆಯನ್ನು ಹಾಕಿಕೊಳ್ಳುವುದೇ ನಿರೀಕ್ಷಣ-ಅಂತಃಪಟಗಳ ಸಂಬಂಧ.
“|| ಶ್ರೀ || ಅಥಃ ಬ್ರಾಹ್ಮಣಾಃ ಸ್ವಲಂಕೃತೇ ವೇಶ್ಮನಿ ಸುಮಂಗಲಗೀತ ತೂರ್ಯಾದಿನಿರ್ಘೋಷೇ ಕ್ರಿಯಾಮಾಣೇ ಪೂರ್ವಾಪರಭಾಗಯೋರ್ಹಸ್ತಾಂತರಾಲಂ ವಿಹಾಯ ಪ್ರತ್ಯೇಕಂ ಪ್ರಸ್ಥಮಿತ ಸಿತತಂದುಲೈರ್ದೌರಶೀ ಕೃತ್ವಾ ಮಧ್ಯೇ ಕುಂಕುಮಾದಿಕೃತ ಸ್ವಸ್ತಿಕಾಂಕಿತಮಂತಃಪಟಮುದಗ್ದಶಂ ಧಾರಯಿತ್ವಾ ಪೂರ್ವರಾಶೌ ಪ್ರತ್ಯನ್ಮುಖಂ ವರಂ ಪಶ್ಚಿಮರಾಶೌ ಪ್ರಾನ್ಮುಖೀಂ ಕನ್ಯಾಂ ತಂಡುಲಗುಡಜೀರಯುತಾಂಜಲೀ ಉಭಾವವಸ್ಥಾಪ್ಯ ದ್ವಿಜಾಃ ಸತ್ಯೇನೋತ್ತಭಿತೇತಿ ಸೂಕ್ತಂ ಪಠೇಯುಃ ||
ಪುರಂಧ್ರ್ಯೋ ಮಂಗಲಗೀತಿಃ ಕುರ್ಯುಃ ||
ವಧುವರೌ ಚ ಮನಸೇಷ್ಟದೇವತಾಂ ಧ್ಯಾಯಂತೌ ಸ್ವಸ್ತಿಕಾಲೋಕನಪರೌಸಮಾಹಿತೌ ತಿಷ್ಠೇತಾಂ ||
ಅಥ ಜ್ಯೋತಿಷಿಕೇಣ ಮಂಗಲಪದ್ಯಪಾಠಪೂರ್ವಕಂ ಸ್ವೋಕ್ತಕಾಲೇ ತದೇವ ಲಗ್ನಮಿತಿ ಪಠಿತ್ವಾ ಸುಮುಹೂರ್ತಮಸ್ತು ಓಂ ಪ್ರತಿಷ್ಠೇತ್ಯುಕ್ತೇ ಸದ್ಯೋಂತಃಪಟಮುದಗಪಸಾರ್ಯ ಕನ್ಯಾವರಾಭ್ಯಾಂ ಪರಸ್ಪರಶಿರಸಿ ಅಂಜಲಿಸ್ಥಂದುಲಾದ್ಯವಕಿರಣಂ ಪರಸ್ಪರನಿರೀಕ್ಷಣಂ ಚ ಕಾರಣೀಯಂ ||”
ಚೆನ್ನಾಗಿ ಅಲಂಕರಿಸಿ ವಿವಾಹ ಮಂಟಪದಲ್ಲಿ ಬ್ರಾಹ್ಮಣರು, ಮಂಗಲಗೀತೆ/ವಾದ್ಯಘೋಷ ಮುಂತಾದವುಗಳು ನಡೆಯುತ್ತಿರುವಾಗ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಒಂದು ಮೊಳದಷ್ಟು ಅಂತರಬಿಟ್ಟು ಒಂದೊಂದು ಸೇರು ಅಕ್ಕಿಯನ್ನು ಸುರಿದು ಎರಡು ರಾಶಿ ಮಾಡಬೇಕು.
ಎರಡೂ ಬದಿಗಳಲ್ಲಿ ಕುಂಕುಮದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆದ ಅಂತಃಪಟವನ್ನು ದಕ್ಷಿಣೋತ್ತರವಾಗಿ ಆ ಅಕ್ಕಿರಾಶಿಗಳ ಮದ್ಯಭಾಗಕ್ಕೆ ಸರಿಯಾಗುವಂತೆ ಎತ್ತಿ ಹಿಡಿಯಬೇಕು.
ಪೂರ್ವದಕಡೆಯ ರಾಶಿಯ ಮೇಲೆ ಪಶ್ಚಿಮಕ್ಕೆ ಮುಖಮಾಡಿ ವರನನ್ನೂ, ಪಶ್ಚಿಮದರಾಶಿಯ ಮೇಲೆ ಪೂರ್ವಕ್ಕೆ ಮುಖಮಾಡಿ ವಧುವನ್ನೂ ಅವರ ಕೈಯಲ್ಲಿ ಅಕ್ಕಿ, ಬೆಲ್ಲ, ಮತ್ತು ಜೀರಿಗೆಯನ್ನು ಮಿಶ್ರಮಾಡಿಕೊಟ್ಟು ನಿಲ್ಲಿಸಬೇಕು.
ಬ್ರಾಹ್ಮಣರು “ಸತ್ಯೇನೋತ್ತಭಿತಾ” ಎಂಬ ಸೂಕ್ತವನ್ನೂ, ಮುತ್ತೈದೆಯರು ಮಂಗಲ ಗೀತೆ ಗಳನ್ನೂ ಹೇಳಬೇಕು.
ವಧೂವರರು ತಮ್ಮ ಇಷ್ಟದೇವತೆಯನ್ನು ಧ್ಯಾನಿಸುತ್ತಾ ಏಕಾಗ್ರಚಿತ್ತರಾಗಿರಬೇಕು. ಸ್ವಸ್ತಿಕ ಚಿಹ್ನೆಯನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿರಬೇಕು.
ನಂತರ ಜ್ಯೋತಿಷ್ಯರು ಮಂಗಲಾಷ್ಟಕ ಇತ್ಯಾದಿಗಳನ್ನು ಹೇಳಿ ತಾವು ಸೂಚಿಸಿದ ಸುಮುಹೂರ್ತಕಾಲವು ಬಂದಾಗ “ತದೇವ ಲಗ್ನ” ಎಂದು ಹೇಳಿ “ಸುಮುಹೂರ್ತಮಸ್ತು ಓಂ ಪ್ರತಿಷ್ಠಾ” ಎಂದು ಹೇಳಿದಾಗ ಅಂತಃಪಟವನ್ನು ಉತ್ತರದಿಕ್ಕಿಗೆ ಸರಿಸಬೇಕು.
ಆಗ ವಧೂವರರು ತಮ್ಮ ಕೈಯಲ್ಲಿ ಇರುವ ಅಕ್ಷತಾದಿಗಳನ್ನು ಪರಸ್ಪರ ಒಬ್ಬರಿಗೊಬ್ಬರು ತಲೆಯ ಮೇಲೆ ಹಾಕಬೇಕು. ಮತ್ತು ಇಬ್ಬರೂ ಪರಸ್ಪರ ಮುಖವನ್ನು ನೋಡಬೇಕು.
ಆಮೇಲೆ ವರನು “ಓಂ ಅಭ್ರಾತೃಘ್ನೀಂ ವರುಣಾಪತಿಘ್ನಿಂ ಬೃಹಸ್ಪತೇ | ಇಂದ್ರಾಪುತ್ರಘ್ನೀಂ ಲಕ್ಷ್ಯಂತಾಮಸ್ಯೈ ಸವಿತಸ್ಸುವ |” ಎಂದು ಜಪಿಸುತ್ತಾ ಕನ್ಯೆಯನ್ನು ನೋಡಬೇಕು.
(ಮಂತ್ರದ ಅರ್ಥ:- ಎಲೈ ವರುಣನೇ, ಈ ವಧುವು ಪತಿಯ ಸಹೋದರ ನಾಶಕ್ಕೆ ಕಾರಣಳಾಗದಂತೆ ಮಾಡು. ಎಲೈ ಇಂದ್ರನೇ, ಈಕೆಯ ಪುತ್ರರನ್ನು ನಾಶಪಡಿಸದಂತೆ ಮಾಡು. ಎಲೈ ಸವಿತೃವೇ, ಈ ವಧುವಿಗೆ ಎಲ್ಲಾ ಸಂಪತ್ತನ್ನೂ ಅನುಗ್ರಹಿಸು.)
ನಂತರ “ಅಘೋರಚಕ್ಷುರಪತಿಘ್ನ್ಯೇಧಿ ಶಿವಾ ಪಶುಭ್ಯಃ ಸುಮನಾಃ ಸುವರ್ಚಾಃ | ವೀರಸೂರ್ದೇವಕಾಮಾ ಸ್ಯೋನಾಶಂ ನೋ ಭವ ದ್ವಿಪದೇ ಶಂ ಚತುಷ್ಪದೇ ||” ಎಂಬ ಮಂತ್ರವನ್ನು ಹೇಳಿ ದರ್ಬೆಯ ತುದಿಯಿಂದ ಕನ್ನಿಕೆಯ ಹುಬ್ಬುಗಳ ಮಧ್ಯಭಾಗವನ್ನು “ಓಂ ಭೂರ್ಭುವಃ ಸ್ವಃ” ಎಂದು ಹೇಳುತ್ತಾ ಒರಸಿ ದರ್ಬೆಯನ್ನು ಬಿಸುಟು ಕೈತೊಳೆಯಬೇಕು.
(“ಅಘೋರ...” ಮಂತ್ರದ ಅರ್ಥ:- ಎಲೈ ವಧುವೇ! ನೀನು ಕ್ರೂರವಾದ ದೃಷ್ಟಿಯಿಲ್ಲದೆ ಶಾಂತದೃಷ್ಟಿ ಉಳ್ಳವಳಾಗು. ಗಂಡನಾದ ನನಗೂ ನನ್ನ ಕಾರ್ಯಗಳಿಗೂ ಬೇಸರ ಪಡದವಳಾಗು. ನಮ್ಮ ಸಾಕು ಪ್ರಾಣಿಗಳಿಗೂ ಹುಲ್ಲು ನೀರು ಕೊಡವುದರ ಮೂಲಕ ಸಂತೋಷ ನೀಡುವವಳಾಗು. ಸೌಮನಸ್ಯ ಉಳ್ಳವಳೂ ಬಲಕಾಂತಿ ಉಳ್ಳವಳೂ ಆಗು. ವೀರರಾದ ಮಕ್ಕಳನ್ನು ಪಡೆಯುವಳಾಗು. ದೇವತೆಗಳ ಆರಾಧನೆ ಮಾಡುವ ಬಯಕೆಯುಳ್ಳವಳೂ ಆಗು. ಎಲ್ಲರಿಗೂ ಸುಖಸಂತೋಷವನ್ನು ನೀಡುವವಳಾಗು.)
ಇಲ್ಲಿಗೆ ನಿರೀಕ್ಷಣ-ಅಂತಃಪಟ ಕಾರ್ಯವು ಮುಗಿಯುತ್ತದೆ.
ಇದು ವಧೂವರರು ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡುವಿಕೆ ಎಂದು ಹೇಳುವುದಾದರೂ ಅದು ಅದರ ಮುಖ್ಯ ಉದ್ದೇಶವಲ್ಲ. ದೃಷ್ಟಿಯ ಮೂಲಕ ಪರಸ್ಪರರ ಮೇಲೆ ಪ್ರಭಾವ ಬೀರುವುದೇ ಇಲ್ಲಿನ ಉದ್ದೇಶ.
ಮಂತ್ರವನ್ನು ಉಚ್ಚರಿಸುತ್ತಾ ವಧುವಿನ ಭ್ರೂಮಧ್ಯದ ಆಜ್ಞಾಚಕ್ರದ ಸ್ಥಾನವನ್ನು ದರ್ಬೆಯಿಂದ ಉತ್ತೇಜಿಸುತ್ತಾನೆ. ಹೀಗೆ ವರನು ತನ್ನ ದೈಹಿಕ ವಿದ್ಯುತ್ತಿನಿಂದ ವಧುವಿನ ಪ್ರಭಾವಲಯ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತಾನೆ. ಇದೇ ಅಂತಃಪಟದ ಅಂತರಾರ್ಥ.
******
|| ಸಂಚಿಕೆ – 21 || || ವಿವಾಹ || ಅಧ್ಯಾಯ – ೫: ಪಾಣಿಗ್ರಹಣ
ಆಜೀವನ ಸಂಬಂಧಕ್ಕಾಗಿ ವರನು ವಧುವಿನ ಕೈಹಿಡಿಯುವುದೇ ಪಾಣಿಗ್ರಹಣ. ವಿವಾಹ ಹೋಮವೇ ಪಾಣಿಗ್ರಹಣ ವಿಧಿ.
ಪಾಣಿಗ್ರಹಣ ಎನುವುದು ಒಂದು ಸಂಸ್ಕೃತ ಶಬ್ದ. “ಪಾಣಿಗ್ರಹಣ” ಶಬ್ದದ ಅರ್ಥ ವಿವಾಹ, ಮದುವೆ ಎಂದು.
ಈ ಶಬ್ದವನ್ನು ಪಾಣಿ + ಗ್ರಹಣ ಎಂದು ಎರಡು ಶಬ್ದಗಳಾಗಿ ಮಾಡಿಯೂ ಅರ್ಥೈಸಬಹುದು.
ಪಾಣಿ + ಗ್ರಹಣ = ಪಾಣಿಗ್ರಹಣ.
ಪಾಣಿ = ಕೈ, ಹಸ್ತ.
ಗ್ರಹಣ = ಸ್ವೀಕಾರ, ಅಂಗೀಕಾರ, ಒಪ್ಪಿಗೆ, ಕೈಗೊಳ್ಳುವುದು, ಆಕರ್ಷಣ, ತಾಳುವುದು, ಹಿಡಿದುಕೊಳ್ಳುವುದು, ಪಡೆಯುವುದು, ಹೊಂದುವುದು, ತೆಗೆದುಕೊಳ್ಳುವುದು, ಜ್ಞಾನ, ತಿಳಿವಳಿಕೆ, ಕಲಿಯುವುದು, ಶಿಕ್ಷಣಪಡೆಯುವುದು, ಇಂದ್ರಿಯ, ಇತ್ಯಾದಿ., (ಉಪರಾಗ/Eclipse ಎನ್ನುವ ಅರ್ಥವೂ ಇದೆ.)
ಆದುದರಿಂದ ಪಾಣಿಗ್ರಹಣ ಎಂದರೆ ವಧುವನ್ನು ಭಾರ್ಯೇಯಾಗಿ ಸ್ವೀಕರಿಸುವುದು ಎನ್ನಬಹುದು.
ಪಾಣಿಗ್ರಹಣವಿಧಿಯು ವಿವಾಹಹೋಮದ ಸಮಯದಲ್ಲಿ ವಿವಾಹಪ್ರಧಾನಾಜ್ಯಹೋಮ ಮಾಡಿದ ಮೇಲೆ ಮಾಡುವ ವಿಧಿ. ಇಲ್ಲಿ ಮೂಡುಮುಖವಾಗಿ ಕುಳಿತ ಪತ್ನಿಯ ಮುಂದೆ ಪಡುಮುಖವಾಗಿ ಪತಿಯು ನಿಂತು ಈ ಕೆಳಗಿನ ಮಂತ್ರದಿಂದ ಅವಳ ಬಲಗೈಯನ್ನು ಹೆಬ್ಬೆರಳು ಸಹಿತ ತನ್ನ ಕೈಯಿಂದ ಹಿಡಿಯಬೇಕು.
“ಓಂ ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾ ಸಃ | ಭಗೋ ಆರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಯ ದೇವಾಃ ||”
ಅರ್ಥ:- ಎಲೈ ವಧುವೇ! ನಾನು ನಿನ್ನ ಪಾಣಿಗ್ರಹಣವನ್ನು ಮಾಡುತ್ತೇನೆ. ಏಕೆಂದರೆ ಸುಪುತ್ರರಿಗಾಗಿ ಮತ್ತು ನನ್ನ ಜೊತೆಯಲ್ಲಿ ಮುದಿತನವನ್ನು ಹೊಂದುವುದಕ್ಕಾಗಿ, ಪ್ರಜ್ಞಾಶಾಲಿಗಳಾದ ಭಗದೇವತೆ, ಆರ್ಯಮಾ, ಸವಿತೃದೇವತೆ, ಇಂದ್ರನೇ ಮೊದಲಾದ ದೇವತೆಗಳು ನಿನ್ನನ್ನು ನನಗೆ ಗೃಹಸ್ತಾಶ್ರಮಸಿದ್ಧಿಗಾಗಿ ಕೊಟ್ಟರು.
“ತೇಹ ಪೂರ್ವೇ ಜನಾಸೋಯತ್ರ ಪೂರ್ವ ವಹೋಹಿತಾಃ | ಮೂರ್ಧನ್ವಾ ಯತ್ರ ಸೌಭ್ರವಃ ಪೂರ್ವೋ ದೇವೇಭ್ಯ ಆತಪತ್ ||”
ಅರ್ಥ:- ಆ ಭಗಾದಿದೇವತೆಗಳು ಮೊದಲಿನಿಂದಲೂ ವಿವಾಹದ ಕರ್ತೃಗಳು ಮತ್ತು ಗೃಹಸ್ಥಾಶ್ರಮದಲ್ಲಿ ಇರತಕ್ಕವರು. ಆ ಗೃಹಸ್ಥಾಶ್ರಮದಲ್ಲಿ ಆದಿತ್ಯನು ದೇವತೆಗಳಿಗೆ ಮೊದಲಿಗನಾಗಿ ಪ್ರಕಾಶಿಸುತ್ತಿದ್ದಾನೆ ಅಥವಾ ಅಗ್ನಿಯು ಪ್ರಕಾಶಿಸುತ್ತಿದ್ದಾನೆ. ಯಾವ ಭಗಾದಿ ದೇವತೆಗಳು ಗೃಹಸ್ಥಾಶ್ರಮದಲ್ಲಿದ್ದಾರೋ ಆ ಗೃಹಸ್ಥಾಶ್ರಮಕ್ಕೋಸ್ಕರ ನನಗೆ ನಿನ್ನನ್ನು ಕೊಟ್ಟಿದ್ದಾರೆ. ಆದ್ದರಿಂದ ನಿನ್ನ ಕೈಯನ್ನು ಹಿಡಿದುಕೊಳ್ಳುತ್ತೇನೆ.
“ಸರಸ್ವತಿ ಪ್ರೇದಮವ ಸುಭಗೇ ವಾಜಿನೀವತಿ| ತ್ವಾಂ ತ್ವಾ ವಿಶ್ವಸ್ಯ ಭೂತಸ್ಯ ಪ್ರಗಾಯಾ ಮಸ್ಯಗ್ರತಃ ||”
ಅಥ:- ಎಲೈ ಸರಸ್ವತಿಯೇ, ಈ ಪಾಣಿಗ್ರಹಣವನ್ನು ವಿಶೇಷವಾಗಿ ಕಾಪಾಡು. ಹವಿಸ್ಸು ಮತ್ತು ಸ್ತೋತ್ರ ರೂಪದ ದೇವತೆಗಳೇ, ನಿಮ್ಮನ್ನು ನಾವು ಪ್ರಪಂಚದಲ್ಲಿ ಇರುವ ಎಲ್ಲರ ಎದುರಿಗೆ ಸಂತೋಷದಿಂದ ಸ್ತೋತ್ರ ಮಾಡುತ್ತೇವೆ. ಈ ರೂಪವೇ ನೀನಾಗಿದ್ದೀ.
“ಯ ಏತಿ ಪ್ರದಿಶಸ್ಸರ್ವಾ ದಿಶೋನು ಪವಮಾನಃ | ಹಿರಣ್ಯ ಹಸ್ತ ಐರಂ ಮಸ್ಮನಸಂ ಕೃಣೋತು ||”
ಅರ್ಥ:- ಈ ವಾಯುವು ಎಲ್ಲಾ ದಿಕ್ಕುಗಳಲ್ಲಿಯೂ ಸಂಚರಿಸುತ್ತಾನೆ. ಭಕ್ತರುಗಳಿಗೆ ಧನವನ್ನು ಕೊಡುವವನಾಗಿಯೂ, ಅನ್ನವನ್ನು ಕೊಡುವವನಾಗಿಯೂ ಇರುವ ಅಗ್ನಿ ಸಖನಾದ ವಾಯುವು ನಿನ್ನನ್ನು ನನ್ನಲ್ಲಿಯೇ ಮನಸ್ಸುಳ್ಳವಳನ್ನಾಗಿ ಮಾಡಲಿ.
ಇಲ್ಲಿಗೆ ಪಾಣಿಗ್ರಹಣ ಮುಗಿಯುತ್ತದೆ. ನಂತರ ವಿವಾಹಲಾಜಹೋಮ, ಪರಿಣಯನ, ಅಶ್ಮಾರೋಹಣ, ಸಪ್ತಪದಿ, ಮುಂತಾದ ವಿಧಿಗಳು ಇರುತ್ತವೆ.
ಸಂತಾನಪ್ರಾಪ್ತಿಯೇ ಬ್ರಾಹ್ಮವಿವಾಹದ ಮುಖ್ಯ ಉದ್ದೇಶ. ಪಾಣಿಗ್ರಹಣದ ಸಮಯದಲ್ಲಿಯೂ ಇದರ ವಿವರಣೆ ಇದೆ.
"ಅಥ ವರಸ್ಯ ದಕ್ಷಿಣೇನ ನೀಚಾ ಹಸ್ತೇನ ಅಸ್ಯಾಃ ದಕ್ಷಿಣಂ ಉತ್ತಾನಂ ಹಸ್ತಂ ಸಾಂಗುಷ್ಟಂ ಗೃಭ್ಣಾಮಿತ ಇತಿ ಚತಸೃಭಿಃ ವರೋ ಗೃಹ್ಣೀಯಾತ್ | ಯದಿಕಾಮಯೇತ ಸ್ತ್ರೀರೇವ ಜನಯೇಯಮಿತಿ ಅಂಗಳೀರೇವ ಗೃಹ್ಣೀಯಾತ್ | ಯದಿಕಾಮಯೇತ ಪುಂಸ ಏವ ಜನಯೇಯಮಿತಿ ಅಂಗುಷ್ಟಮೇವ ಸೋಭಿವ ಅಂಗುಷ್ಟಂ ಅಭೀವ ಲೋಮಾನಿ ಗೃಹ್ಣಾತಿ ||"
ಅರ್ಥ:- ವರನ ಅಧೋಮುಖವಾಗಿರುವ ಬಲಗೈಯಿಂದ ವಧುವಿನ ಊರ್ಧ್ವಮುಖವಾಗಿರುವ ಬಲಗೈಯನ್ನು ವರನು ಗ್ರಹಣ ಮಾಡಬೇಕು.
ಬರೀ ಹೆಣ್ಣು ಮಕ್ಕಳೇ ಆಗಬೇಕೆಂದು ಇಚ್ಛಿಸುವವರು ಅಂಗುಷ್ಟರಹಿತವಾದ ನಾಲ್ಕು ಬೆರಳುಗಳನ್ನು ಮಾತ್ರ ಹಿಡಿದುಕೊಳ್ಳಬೇಕು.
ಬರೀ ಗಂಡು ಮಕ್ಕಳೇ ಆಗಬೇಕೆಂದು ಇಚ್ಛಿಸುವವರು ಅಂಗುಷ್ಟ (ಹೆಬ್ಬರಳು) ಮಾತ್ರ ಹಿಡಿದುಕೊಳ್ಳಬೇಕು.
ಗಂಡು ಹೆಣ್ಣು ಎರಡೂ ಬೇಕೆನ್ನುವವರು ಅಂಗುಷ್ಟಸಹಿತವಾಗಿ ಬೆರಳುಗಳನ್ನು ಹಿಡಿದುಕೊಳ್ಳಬೇಕು.
ಪಾಣಿಗ್ರಹಣ ವಿಧಿಯಲ್ಲಿ ವರನು ವಧುವಿನ ಕೈಹಿಡಿಯುತ್ತಾನೆ. ವಧು ಶಕ್ತಿಯ ಸಾಂಕೇತಿಕ, ಪುರುಷನು ಜೀವನದ ಮಹಾರಥವನ್ನು ಎಳೆಯುವಲ್ಲಿ ಶಕ್ತಿವಂತನಾದುದರಿಂದ ಸಾಂಕೇತಿಕವೇ ಶಕ್ತಿಯ ಕೈಹಿಡಿಯುವಿಕೆ. ಪತ್ನಿಯ ಕೈಹಿಡಿದಲ್ಲಿ ಧರ್ಮದ ಕೈಹಿಡಿದಂತೆಯೇ ಸರಿ. ಆದುದರಿಂದಲೇ ವಧು ಇಲ್ಲಿ ಧರ್ಮಪತ್ನಿಯಾಗುತ್ತಾಳೆ.
ಹೀಗೆ ಭಗವಂತನ/ಅಗ್ನಿಸಾಕ್ಷಿಯಾಗಿ, ಎಲ್ಲಾ ದೇವತೆಗಳ ಸಾಕ್ಷಿಯಾಗಿ, ಬ್ರಾಹ್ಮಣರ, ಬಂಧು-ಬಾಂಧವರ, ಸತ್ಪುರುಷರ, ಆಹ್ವಾನಿತರೆಲ್ಲರ ಸಮಕ್ಷಮದಲ್ಲಿ ವಧುವಿನ ಕೈಹಿಡಿಯುವುದೇ ಪಾಣಿಗ್ರಹಣ ವಿಧಿ. ಆದುದರಿಂದ ಪತಿ-ಪತ್ನಿ ಸಂಬಂಧವು ಶಾಶ್ವತವಾಗಿರುವುದು.
ಇದನ್ನೇ ಭಗವತ್ಪಾದ ಶಂಕರಾಚಾರ್ಯರೂ ಕೂಡ ದೇವಿಯನ್ನು ಸ್ತುತಿಸುವಲ್ಲಿ ಹೇಳಿದ್ದಾರೆ:-
"ಚಿತಾಭಸ್ಮಾಲೇಪೋಗರಲಮಶನಂ ದಿಕ್ಪಟಿಧರೋ|
ಜಟಾಧಾರೀ ಕಂಠೇಭುಜಗಪತಿಹಾರೀ ಪಶುಪತಿ:||
ಕಪಾಲೀ ಭೂತೇಶೋ ಭಜತಿ ಜಗದೀಶೈಕ ಪದವೀಂ|
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಂ||"
ಅಂದರೆ: ಶಿವನಿಗೂ ಕೂಡ, ಚಿತಾಭಸ್ಮವನ್ನು ಧರಿಸುವ ಸಾಮರ್ಥ್ಯತೆ, ಕಂಠದಲ್ಲಿ ಹಾಲಾಹಲವನ್ನು ಧರಿಸಿದ ಶಕ್ತಿ, ದಿಕ್ಕುಗಳನ್ನೇ ಹೊದಿಕೆಯಾಗಿ ಹೊದ್ದಿರುವ, ಮಹಾಜಟೆಯನ್ನು ಧರಿಸಿ, ಭುಜಗಪತಿಯಾದ ಆದಿಶೇಷನನ್ನೇ ಕಂಠದಲ್ಲಿ ಧರಿಸಿದ ಶಕ್ತಿ, ಬ್ರಹ್ಮಕಪಾಲಧಾರಣಾ ಶಕ್ತಿ, ಜಗತ್ತೆಲ್ಲಾ ಈಶನೆಂದು ಭಜಿಸುವ ಮಹದಾದ ಪದವಿಯೂ ಕೂಡಾ ಭವಾನಿಯ ಪಾಣಿಗ್ರಹಣ ಮಾಡಿದ ಫಲವೇ ಆಗಿರುತ್ತದೆ.
ಪುರುಷನು ಸಮಾಜದಲ್ಲಿ ಶ್ರೇಷ್ಠನೆಂದು ಪರಿಗಣಿತವಾಗುವುದೇ ಪಾಣಿಗ್ರಹಣದ ಫಲವೆನ್ನಬಹುದಾಗಿದೆ. ಅನೇಕ ಮಹನೀಯರ ಹಿಂದೆ, ಮಹತ್ತರ ಸಾಧನೆಗೆ ಹೆಣ್ಣೇ ಕಾರಣಳು ಎಂಬುದು ಗಮನಾರ್ಹ ಸಂಗತಿ.
*****
|| ಸಂಚಿಕೆ – ೨೨ || || ವಿವಾಹ || ಅಧ್ಯಾಯ – ೬: ಕನ್ಯಾದಾನ.
ವಧುವಿನ ಮಾತಾಪಿತರು ಪ್ರತಿಜ್ಞಾಪೂರ್ವಕ ವರನ ಕೈಮೇಲೆ ನೀರಿನ ಧಾರೆ ಎರೆದು ಕನ್ಯೆಯನ್ನು ದಾನಮಾಡುವುದು ಕನ್ಯಾದಾನ ವಿಧಿ ಆಗಿರುತ್ತದೆ. ಕನ್ಯಾದಾನದಿಂದ ಪೃಥ್ವಿಯನ್ನೇ ದಾನನಾಡಿದ ಪುಣ್ಯ ಲಭಿಸುತ್ತದೆ, ಕುಲದ ಉದ್ಧಾರವಾಗುತ್ತದೆ, ಮೋಕ್ಷಪ್ರಾಪ್ತಿಯಾಗುತ್ತದೆ.
ಕನ್ಯಾದಾನ ಪ್ರಶಂಸಾ:-
"ಅಲಂಕೃತ್ಯ ತು ಯಃ ಕನ್ಯಾಂ ಭೂಷಣಾಚ್ಛಾದನಾದಿಭಿಃ | ದತ್ವಾ ಸ್ವರ್ಗಮವಾಪ್ನೋತಿ ಪೂಜ್ಯತೇ ವಾಸವಾದಿಭಿಃ || ವೃಕುಂದಶ್ಚಾಶ್ವ ಮೇದೀ ಚ ರಾಣದಾನಾಭಯೇಷು ಚ | ಸಮಂ ಯಾತಿ ರಥಾ ಯೇಷಾಂ ತ್ರಯೋ ವೈ ನಾತ್ರ ಸಂಶಯಃ || ಸಾಲಂಕೃತ ಕನ್ಯಾದಾತಾ ವೈಕುದಃ ||”
ಅರ್ಥ:-
ವಸ್ತ್ರಾಲಂಕಾರಭೂಷಿತಳಾದ ಕನ್ಯೆಯನ್ನು ದಾನ ಮಾಡಿದವನು ಮರಣಾನಂತರ ಸ್ವರ್ಗವನ್ನು ಸೇರಿ ದೇವತೆಗಳಿಂದ ಸ್ತುತಿಸಲ್ಪಡುತ್ತಾನೆ.
ಕನ್ಯಾದಾನ, ಅಶ್ವಮೇಧ, ಪ್ರಾಣರಕ್ಷಣೆ ಈ ಮೂರರ ಪುಣ್ಯ ಸಮನಾದುದು.
ತಮ್ಮ ಕುಲದಲ್ಲಿ ಕನ್ಯಾದಾನ ಮಾಡಿದ ವಾರ್ತೆಯನ್ನು ಕೇಳಿದ ಪಿತೃಗಳು ಪಾಪಮುಕ್ತರಾಗಿ ಬ್ರಹ್ಮಲೋಕವನ್ನು ಸೇರುತ್ತಾರೆ.
ಕನ್ಯಾದಾನದ ಸಮಯದಲ್ಲಿ ಹೇಳುವ ಮಂತ್ರ:-
“ಕನ್ಯಾಂ ಕನಕಸಂಪನ್ನಾಂ ಕನಕಾಭರಣೈರ್ಯುತಾಮ್ |
ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕಜಿಗೀಷಯಾ ||
ವಿಶ್ವಂಭರಂ ಪಂಚಭೂತಾಃ ಸಾಕ್ಷಿಣ್ಯೋ ಯತ್ರ ದೇವತಾಃ |
ಇಮಾಂ ಕನ್ಯಾಂ ಪ್ರದಾಸ್ಯಾಮಿ ಪಿತೃಣಾಂ ತಾರಣಾಯ ಚ ||”
ಅರ್ಥ:-
ಸುವರ್ಣದಂತೆ ಪ್ರಕಾಶಮಾನಳೂ, ಸುವರ್ಣಆಭರಣಗಳಿಂದ ಕೂಡಿದವಳೂ ಆದ ಈ ಕನ್ಯೆಯನ್ನು ಬ್ರಹ್ಮಲೋಕವನ್ನು ಗೆಲ್ಲುವುದಕ್ಕೋಸ್ಕರ ವಿಷ್ಣುರೂಪಿಯಾದ ನಿನಗೆ ಕೊಡುತ್ತಿದ್ದೇನೆ.
ಈ ಕನ್ಯೆಯು ದೇಹದ ಮುಂಬಾಗದಲ್ಲೂ, ಉಭಯ ಪಾರ್ಶ್ವಗಳಲ್ಲೂ, ಹಿಂಭಾಗದಲ್ಲೂ ಮತ್ತು ಸುತ್ತಲೂ ಇರಲಿ.
ಪಿತೃಗಳ ಉದ್ಧಾರಕ್ಕೋಸ್ಕರ ಈ ಕನ್ಯೆಯನ್ನು ಸರ್ವೇಶ್ವರ, ಪಂಚಭೂತಗಳು ಮತ್ತು ಎಲ್ಲ ದೇವತೆಗಳ ಸಾಕ್ಷಿಯಾಗಿ ಇಟ್ಟುಕೊಂಡು ನಿನಗೆ ಕೊಡುತ್ತಿದ್ದೇನೆ.
“ಕನ್ಯಾಂ ಸಾಲಕೃತಾಂಸಾಧ್ವೀಂ ಸುಶೀಲಾಯ ಸುಧೀಮತೇ |
ಪ್ರಯತೋಹಂ ಪ್ರದಶ್ಯಾಮಿ ಧರ್ಮಕಾಮ್ಯಾರ್ಥಸಿದ್ಧಯೇ ||
ಶ್ರೀರೂಪಿಣೀ ಮಿಮಾಂಕನ್ಯಾಂತುಭ್ಯಂ ಶ್ರೀಧರರೂಪಿಣೇ |
ಇತ್ಯುಕ್ತ್ವೋದಕ ಪೂರ್ವಾಂತಾಂ ದದಾಮ್ಯಸ್ಮೈತ್ರಿವಾಚಕಮ್ ||”
ಅರ್ಥ:-
ಯಥಾಶಕ್ತಿ ಸಾಲಂಕೃತಳೂ ಒಳ್ಳೆಯ ನಡತೆಯುಳ್ಳವಳೂ ಸಾಧ್ವಿಯೂ ಆದ ಈ ಕನ್ಯೆಯನ್ನು, ಒಳ್ಳೆಯ ನಡತೆಯುಳ್ಳವನೂ ಮೇಧಾಶಾಲಿಯೂ ಆದ ನಿನಗೆ ಸ್ಥಿರಮನಸ್ಸಿನಿಂದ ಕೊಡುತ್ತಿದ್ದೇನೆ.
ಇದರಿಂದ ನಿನಗೆ ಧರ್ಮ-ಅರ್ಥ-ಕಾಮಗಳು ಸಿದ್ಧಿಯಾಗಲೆಂದು ಹಾರೈಸುತ್ತೇನೆ.
ಲಕ್ಷ್ಮೀಸ್ವರೂಪಳಾದ ಈ ಕನ್ಯೆಯನ್ನು ವಿಷ್ಣುಸ್ವರೂಪನಾದ ನಿನಗೆ ಕೊಡುತ್ತಿದ್ದೇನೆ.
ಈ ರೀತಿಯಾಗಿ ಹೇಳಿ ಉದಕಪುರಸ್ಸರವಾಗಿ ಕಾಯೇನ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ಈ ವರನಿಗೆ ಈ ಕನ್ಯೆಯನ್ನು ಕೊಡುತ್ತಿದ್ದೇನೆ.
ಸ್ತ್ರೀ ಪೂರ್ವಕವಾಗಿ ಮೂರು ಸಲ ಪ್ರವರೋಚ್ಚಾರಣ ಪೂರ್ವಕ ಇಂಥಹವರ ಮರಿಮಗಳೂ, ಇಂಥಹವರ ಮೊಮ್ಮಗಳೂ, ಇಂಥಹವರ ಮಗಳೂ, ಇಂಥಾ ಗೋತ್ರದವಳೂ, ಆದ ಈ ಕನ್ಯೆಯನ್ನು;
ಈ ಹೆಸರಿರುವವರ ಮರಿಮಗನೂ, ಈ ಹೆಸರಿರುವವರ ಮೊಮ್ಮಗನೂ, ಈ ಹೆಸರಿರುವವರ ಮಗನೂ, ಈ ಹೆಸರಿನಿಂದ ಕೂಡಿದ ಇಂಥಹ ಗೋತ್ರದಲ್ಲಿ ಹುಟ್ಟಿದ ಈ ವರನಿಗೆ, ಸಂತತಿ ಅಭಿವೃದ್ಧಿಗಾಗಿಯೂ ಯಜ್ಞಯಾಗಾದಿ ಕರ್ಮಗಳ ಅನಷ್ಠಾನಕ್ಕಾಗಿಯೂ ಈ ಕನ್ಯೆಯನ್ನು ನಿನಗೆ ಕೊಡುತ್ತೇನೆ ಎಂದು ಹೇಳುವುದು ಇದೆ.
ಹೀಗೆ ಕನ್ಯಾದಾನ ವು ಅತ್ಯಂತ ಪುಣ್ಯಪ್ರದವಾದ ಕಾರ್ಯವಾಗಿರುತ್ತದೆ.
ವಿವಾಹದಲ್ಲಿನ ಪರಸ್ಪರ ಬಂಧನದ ಬಲವರ್ಧನೆಗಾಗಿ ವರಪ್ರತಿಜ್ಞೆಯ ಕಾರ್ಯವೂ ಇರುತ್ತದೆ. ಇಲ್ಲಿ ವರನಿಂದ ಕನ್ಯೆಯ ಬಲಭುಜವನ್ನು ಮುಟ್ಟಿಸಿ, ಕನ್ಯೆಯ ತಂದೆಯು ವರನಿಗೆ ಈ ಕೆಳಗಿನಂತೆ ಹೇಳುತ್ತಾನೆ:-
“ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಿತವ್ಯಾ ತ್ವಯೇಯಮ್ ||”
ಅರ್ಥ:-
ಧರ್ಮದಿಂದಾಗಲೀ, ದ್ರವ್ಯದಿಂದಾಗಲೀ, ಕಾಮದಿಂದಾಗಲೀ ನನ್ನ ಮಗಳನ್ನು ವಂಚಿಸಬೇಡ.
ಅದಕ್ಕೆ ವರನು “ನಾತಿ ಚರಾಮಿ” ಎಂದು ಮೂರುಸಲ ಪ್ರತಿಜ್ಞೆ ಮಾಡಬೇಕು.
ಕನ್ಯಾದಾನ ಮಾಡಲು ಅಧಿಕಾರಿಗಳು ಯಾರು? ಎನ್ನುವುದಕ್ಕೆ ಶಾಸ್ತ್ರವು ಹೇಳುತ್ತದೆ:-
*"ಪಿತಾ ಪಿತಾಮಹೋ ಭ್ರಾತ್ರಾ ಪಿತ್ರವ್ಯೋ ಗೋತ್ರಿಣೋ ಗುರು:|
ಮತಾಮಹೋ ಮಾತುಲೋ ವಾ ಜನನೀ ಬಾಂಧವಾ: ಕ್ರಮಾತ್||
ಕನ್ಯಾಪ್ರದ: ಪೂರ್ವನಾಶೇ ಪ್ರಕೃತಿಸ್ಥ: ಪರ: ಪರ:|
ಪ್ರಕೃತಿಸ್ಥ ಉನ್ಮಾದಾದಿ ದೋಷಹೀನ:||"
ಅಂದರೆ:-
ತಂದೆ, ಅಜ್ಜ, ಅಣ್ಣ, ತಂದೆಯ ಸಹೋದರ, ಕೌಟುಂಬಿಕ ಆಚಾರ್ಯ, ತಾಯಿಯ ತಂದೆ, ತಾಯಿಯ ಇತರ ಬಂದುಗಳು - ಅನುಕ್ರಮವಾಗಿ ಒಬ್ಬನಿಲ್ಲದಿದ್ದಾಗ ಇನ್ನೊಬ್ಬನು ಅಧಿಕಾರಿಯಾಗುತ್ತಾನೆ.
*****
ಸಂಚಿಕೆ – ೨೩ ||
|| ವಿವಾಹ ||
ಅಧ್ಯಾಯ – ೭:
ಫಲ ಪೂಜಾ.
******
ಫಲ ಪೂಜಾ ವಿಧಿಯು ವಿವಾಹ ಸಂಪ್ರದಾಯದ ಕೊನೇಯ ಕಾರ್ಯವಾಗಿರುತ್ತದೆ. ಇಲ್ಲಿ ಅಕ್ಕಿಯ ರಾಶಿಯ ಮೇಲೆ ತೆಂಗಿನಕಾಯಿಗಳನ್ನಿಟ್ಟು ಪೂಜಿಸಿ ಪುರೋಹಿತರಿಗೆ ದಕ್ಷಿಣೆ ಸಹಿತ ದಾನ ಮಾಡುವ ವಿಧಿ. ವಧೂವರರಿಗೆ ಸಕಲ ಪೂಜಾಫಲಗಳೆಲ್ಲವೂ ದೊರೆಯಲಿ; ಮುಂದೆ ಉತ್ತಮ ಮನಸ್ಕರಾದ, ಉತ್ತಮ ಮಕ್ಕಳು ದೊರೆಯಲೆಂದೇ ಸಂಕಲ್ಪಿಸಿ, ದಾನ ಕೊಡುತ್ತಾರೆ.
ಫಲ ಎಂದರೆ ವಿವಾಹಿತ ದಂಪತಿಗಳಿಗೆ ಮಕ್ಕಳೇ ಫಲ. ಅಂತಹ ಫಲಾಪೇಕ್ಷೆಯಿಂದಲೇ ಫಲವನ್ನು ಪೂಜಿಸಿ ದಾನ ಮಾಡುತ್ತಾರೆ. ಋತ್ವಿಜರಿಗೆ ಕೊಡುವ ಸಂಭಾವನೆಯೇ ಇದಾಗಿರುತ್ತದೆ.
ಋತ್ವಿಜರು ಫಲ ಪಡೆದು ಆಶೀರ್ವದಿಸುತ್ತಾರೆ:-
“ಧನಂ ಧಾನ್ಯಂ ಬಹುಪುತ್ರಲಾಭಂ |
ಶತಸಂವತ್ಸರಂ ದೀರ್ಘಮಾಯುಃ |
ದಾಂಪತ್ಯೋ ದೀರ್ಘಮಾಯುರಸ್ತು ||”
ಅಂದರೆ:- ದಾನವಾಗಿ ನೀಡಿದ್ದು ವರ್ಧಿಸಿ ನಿಮಗೆ ಸಿಗುವಂತೆ ಆಗಲಿ ಎಂದು. ದಕ್ಷಿಣೆಗೆ ಬದಲಾಗಿ ಧನವನ್ನೂ, ಧಾನ್ಯಕ್ಕೆ ಪುನಃ ಧಾನ್ಯವನ್ನೂ, ಫಲಗಳಿಗೆ (ತೆಂಗಿನಕಾಯಿ) ಅನುಗುಣವಾಗಿ ಬಹುಪುತ್ರಲಾಭವನ್ನು ಹೊಂದಿ, ನೂರು ವರ್ಷ ದೀರ್ಘಾಯುಗಳಾಗಿ ದಂಪತಿಗಳು ಬಾಳಿರೆಂದು ಆಶೀರ್ವದಿಸುತ್ತಾರೆ ಪುರೋಹಿತರು.
ಹೀಗೆ ವಿವಾಹ ಸಂಸ್ಕಾರದಲ್ಲಿ ಪ್ರತಿ ಹಂತದಲ್ಲೂ ಅರ್ಥಗರ್ಭಿತವಾಗಿ, ಪೂಜಾದಿ ಕಾರ್ಯಗಳನ್ನು ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ವಿವಾಹ ವಿಧಿಗಳು ವಧೂವರರಲ್ಲಿ ಏಕತೆಯನ್ನೂ, ಪರಸ್ಪರ ಕೂಡಿ ಬಾಳುವ ಮನೋಧರ್ಮವನ್ನೂ ಮೂಡಿಸುತ್ತದೆ. ಎಲ್ಲೋ ಜನಿಸಿ, ಎಲ್ಲೋ ಬೆಳೆದು ಬಂದು, ಇದುವರೆಗೆ ಅಪರಿಚಿತರಾಗಿದ್ದ ಅವರಲ್ಲಿ ಉಳಿದಿರಬಹುದಾದ ಸಂಕೋಚವನ್ನು ತೆಗೆದು ಹಾಕುವ ಉದ್ದೇಶವೇ ನಾಕಬಲಿ, ಉರುಟಣ, ಕಂದುಕಖೇಲನ, ಓಕುಳಿ, ಭೂಮಭೋಜನ, ತಂತುವೇಷ್ಟನ, ಸೆರಗುಗಂಟು, ಗೃಹಪ್ರವೇಶ, ದ್ವಿರಾಗಮನ, ಇತ್ಯಾದಿ., ಪದ್ಧತಿಗಳು ವಿವಾಹಕ್ರಮಕ್ಕೆ ಸೇರಿಕೊಂಡಿವೆ.
ಸ್ನೇಹ-ಆತ್ಮೀಯತೆಯ ಭಾವ ಕಳೆದುಹೋಗದಂತೆ ನೋಡಿಕೊಳ್ಳುವುದು ನಮ್ಮ ಮನೋಭಾವದಲ್ಲಿಯೇ ಅಡಗಿದೆ. ಎನೇ ಆಗಲಿ, ಹೇಗೆ ಇರಲಿ, ದೈವಾನಗ್ರಹದಿಂದೊದಗಿದ ಈ ಮನುಷ್ಯ ಜೀವನವನ್ನು ಸಂಪೂರ್ಣವಾಗಿ ಅನುಭವಿಸಿ ಸಾರ್ಥಕ ಮಾಡಿಕೊಳ್ಳಬೇಕೆಂಬುದೇ ಹಿರಿಯವರ ಆಶಯ.
ಬದುಕು ಬಂಗಾರವಾಗಬೇಕೆಂದು ಪ್ರತಿಯೋರ್ವನ ಆಸೆ-ಆಕಾಂಕ್ಷೆ ಸಹಜ. ನಶ್ವರವಾಗುವ ಈ ಶರೀರದೊಂದಿಗೆ ಚಂಚಲವಾದ ಮನಸ್ಸನ್ನು ಬುದ್ಧಿಯಿಂದ ತಿದ್ದಿ, ಧಾರ್ಮಿಕ ಕರ್ಮಮಾರ್ಗದ ಚೌಕಟ್ಟಿನಲ್ಲಿ ಆಧ್ಯಾತ್ಮಿಕ ಜ್ಞಾನದಿಂದ ಆತ್ಮವು ಜೀವನದಲ್ಲಿ ತೃಪ್ತಿಪಡುವುದೇ ಬಂಗಾರಬದುಕು. ಲೌಕಿಕ ವ್ಯಾವಹಾರಿಕ ಬುದ್ಧಿವಂತಿಕೆಯಿಂದ ಸಂಪತ್ತು, ಸ್ತ್ರೀ, ಗೃಹಾದಿ ಸುಖಗಳನ್ನು ಪಡೆಯಬಹುದು. ಅವು ಕೇವಲ ತಾತ್ಕಾಲಿಕ ಸುಖಮಯವೆನಿಸಲೂಬಹುದು. ನೈಜ ಸುಖಾನುಭವವಾಗಲು ಧಾರ್ಮಿಕಬುದ್ಧಿಯ ಧರ್ಮಕರ್ಮಗಳ ಮಾರ್ಗವೇ ಮುಖ್ಯವಾಗಿವೆ. ಆತ್ಮ, ಅಂತಃಕರಣ, ಆಶ್ರಯಿಸಿದ ಶರೀರ ಇವುಗಳಿಗೆ ಮಂತ್ರಪೂರ್ವಕ ಸಂಸ್ಕಾರಗಳಿಂದ ಸದಾಚಾರಸಂಪನ್ನತೆ, ಮಾನಸಿಕ ಸಮಾಧಾನಗಳ ಶಕ್ತಿಗಳುಂಟಾಗಿ ಸುಸಂಸ್ಕೃತ ಮಾನವನೆಂದಾಗುವನು.
ವಿವಾಹ ಒಂದು ಮಂಗಳಕಾರ್ಯ. ಜಗತ್ತಿನ ಉಳಿವಿಗಾಗಿ ಒಂದು ಜೀವ ಇನ್ನೊಂದು ಜೀವದೊಂದಿಗೆ ಸಹಬಾಳ್ವೆ ನಡಸಲೇಬೇಕು. ಕೆಲವೊಂದು ಸ್ವಾರ್ಥ, ಸ್ವಹಿತಾಸಕ್ತಿಗಳನ್ನು ಸಮಾಜದ ಹಿತಕ್ಕಾಗಿ ತ್ಯಾಗ ಮಾಡಲೇಬೇಕು. ಮಂಗಳಮಯ ಈ ವಿವಾಕಾರ್ಯದಲ್ಲಿ ಅಮಂಗಳ ತಲೆದೋರಬಾರದು. “ವಾದೇ ವಾದೇ ಜಾಯತೇ ತತ್ತ್ವಬೋಧಃ” ವಾದ-ವಿವಾದಗಳು ನಡೆಯಲಿ. ಆದರೆ ಅವು ಸಂಬಂಧವನ್ನು ಗಟ್ಟಿಮಾಡುವಂತಾಗಲಿ. ವಿವಾದಗಳು ಉಂಟಾದರೂ ಅವು ಬೇರೆಯಾಗುವುದಕ್ಕೆ ಎಡೆಮಾಡದಿರಲಿ. ವ್ಯಕ್ತಿಗತ ಸ್ವಪ್ರತಿಷ್ಠೆ, ಅಹಂಕಾರಗಳು ಕಡಿಮೆಯಾದಷ್ಟೂ ವಾದ-ವಿವಾದಗಳು ಕಡಿಮೆಯಾಗುತ್ತವೆ.
ದಾಂಪತ್ಯ ಒಂದು ದೀಕ್ಷೆಯಾಗಬೇಕು. ಈ ದೀಕ್ಷಿತಯಜ್ಞ ಪರಿಪೂರ್ಣವಾಗಬೇಕು.
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು |
ಅಸಮಂಜಸದಿ ಸಮನ್ವಯ ಸೂತ್ರನಯನ ||
ವ್ಯಸನಮಯ ಸಂಸಾರದಲಿ ವಿನೋದವ ಕಾಣ್ಬ |
ರಸಿಕತೆಯ ಯೋಗವೆಲೊ – ಮಂಕುತಿಮ್ಮ ||241||
ಒಟ್ಟಿನಲ್ಲಿ ವಿವಾಹ ಸಂಸ್ಕಾರವು ಭಗವಂತನ ಸಾಕ್ಷಿಯಾಗಿ, ಅಗ್ನಿಸಾಕ್ಷಿಯಗಿ, ಎಲ್ಲಾ ದೇವತೆಗಳ ಸಾಕ್ಷಿಯಾಗಿ, ಪ್ರಮಾಣವಚನ ಸಹಿತ ನಡೆಯುವ ಕಾರ್ಯವಾಗಿರುತ್ತದೆ. ಇಲ್ಲಿ ಪತಿ-ಪತ್ನಿಯರ ಸಂಬಂಧ ಶಾಶ್ವತವಾಗಿರುವುದು. ಈ ಸಂಬಂಧವನ್ನು ತೆಗೆದುಹಾಕುವ ವಿಧಿ ಶಾಸ್ತ್ರದಲ್ಲಿ ಇಲ್ಲ.
****

ವಿವಾಹದಲ್ಲಿ ಸಿಂಧೋಪ ಶಾಸ್ತ್ರ
ಆಚಾರ್ಯರೆ ವಿವಾಹದಲ್ಲಿ ಸಿಂಧೋಪ ಶಾಸ್ತ್ರ ಮಾಡಿಸಲಾಗುತ್ತೆ ಅಲ್ವಾ? ಏಕೆ ಮಾಡಿಸ್ತಾರೆ? ಅದರ ಮಹತ್ವ ಏನು? ಹುಡುಗಿಯ ತಾಯಿಯ ತಲೆ ಮೇಲೆ ಪರಾತದ ಮೇಲೆ ದೀಪ ಇಟ್ಟು ಅಗ್ನಿಗೆ ಪ್ರದಕ್ಷಿಣೆ ಹಾಕುತ್ತಾರಲ್ಲಾ ಯಾಕೆ? ಈ ವಿಧಿಯ ಕುರಿತು ದಯವಿಟ್ಟು ತಿಳಿಸುವಿರಾ?🙏🙏
ವಿವಾಹದ ನಂತರ ನಾಲ್ಕನೆಯ ದಿವಸ ಮಾಡುವ ವಿಧಾನಕ್ಕೆ ನಾಗಬಲಿ ಅಥವಾ ನಾಗೋಲಿ ಅಥವಾ ಸಿಂಧೂಪ ಎನ್ನುವ ಹೆಸರುಗಳು ಪ್ರಚಲಿತದಲ್ಲಿವೆ .
ಮದುವೆಯಾದ ನವದಂಪತಿಗಳಿಗೆ ಈ ಹದಿನಾಲ್ಕು ಲೋಕಗಳ ಭಾರವನ್ನು ಹೊತ್ತಂಥ ಶೇಷದೇವರ ಅಂತರ್ಯಾಮಿಯಾದ ಜಯಾಪತಿ ಸಂಕರ್ಷಣನ ದಯದಿಂದ ಗೃಹಸ್ಥಾಶ್ರಮದಲ್ಲಿ ನಾಗದೋಷಾದಿಗಳು ಬಾಧಿಸಬಾರದು ಎನ್ನುವ ಉದ್ದೇಶದಿಂದ ಈ ವಿಧಿಯನ್ನು ಕನ್ಯೆಯ ತಾಯಿತಂದೆಗಳು ಮಾಡುತ್ತಾರೆ . ಹೀಗಾಗಿ ಇದಕ್ಕೆ ನಾಗಬಲಿ ಅಥವಾ ನಾಗೋಲಿ ಎನ್ನುವ ಹೆಸರು ಪ್ರಚಲಿತದಲ್ಲಿದೆ .
ಈ ಬ್ರಹ್ಮಾಂಡದ ಎಂಟು ದಿಕ್ಕಿಗೆ ಎಂಟು ಗಜಗಳು ನಿಂತು ಈ ಜಗತ್ತಿನ ಭಾರವನ್ನು ಹೊತ್ತಿವೆ . ಆ ದಿಗ್ಗಜಗಳಿಗೆ ನಾಗ ಎಂದು ಹೆಸರು . ಆ ಅಷ್ಟದಿಗ್ಗಜಗಳಿಗೆ ಎಂಟು ದಿಕ್ಕಿಗೆ ದೀಪಗಳಿಂದ ಬಲಿ ಕೊಡುವ ಈ ಪದ್ಧತಿಗೆ ನಾಗಬಲಿ ಎನ್ನುವ ಪದವು ಅಪಭ್ರಂಶವಾಗಿ ನಾಗೋಲಿ ಎನ್ನುವ ಪದವು ಆಡುಭಾಷೆಯಲ್ಲಿ ಬಂದಿದೆ .
ಈ ವಿಧಾನದಲ್ಲಿ ಕನ್ಯೆಯ ತಾಯಿ ತಂದೆಯರು ಎಂಟು ದಿಕ್ಕಿಗೆ ದೀಪಗಳನ್ನು ಹಚ್ಚಿ , ಮಧ್ಯದಲ್ಲಿ ವಂಶಪಾತ್ರೆ ಯನ್ನಿಟ್ಟು ತಮ್ಮ ಮಗಳ ವಂಶವು ವೃದ್ಧಿಯಾಗುವಂತೆ ಅಷ್ಟ ದಿಗ್ಗಜಗಳು , ಶೇಷದೇವರ ಅಂತರ್ಯಾಮಿಯಾದ ಜಯಾಪತಿ ಸಂಕರ್ಷಣನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿಕೊಂಡು ಓಂ ಸುಮಂಗಲೀರಿಯಂ ವಧೂರಿಮಾಂ ಸಮೇತ ಪಶ್ಯತ | ಸೌಭಾಗ್ಯಮಸ್ಯೈದತ್ವಾಯಾಥಾಸ್ತ್ವಂ ವಿಪರೇತನ|| ಎಂಬ ವೇದಮಂತ್ರವನ್ನು ಹೇಳುತ್ತಾ ಆ ಕನ್ಯೆಗೆ ಅಖಂಡ ಸೌಮಂಗಲ್ಯ ಸೌಭಾಗ್ಯ ವೃದ್ಧಿ ಹೊಂದುತ್ತಾ , ಅವರ ವಂಶದಲ್ಲಿ ಧರ್ಮಮಾರ್ಗದಲ್ಲಿ ಸಾಗುವ ಸತ್ಸಂತಾನ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾ ಆ ಸಿಂಧೂರದಿಂದ ಅಲಂಕೃತವಾದ ದೀಪ ಹಚ್ಚಲ್ಪಟ್ಟ ಪಾತ್ರೆಯನ್ನು ಕನ್ಯೆಯ ತಾಯಿಯಿ ತನ್ನ ತಲೆಯ ಮೇಲೆ ಮುತ್ತೈದೆಯರಿಂದ ಹೊರಿಸಿಕೊಂಡು ಅಷ್ಟದಿಗ್ಗಜಗಳಿಗೆ , ವಸಂತಮಾಧವನಿಗೆ , ಹಾಗೂ ಭದ್ರ & ಮಾತಂಗ( ಉಪ್ಪು ಹಾಗೂ ಅಕ್ಕಿಯಿಂದ ಚಿತ್ರಿಸಿದ ಐರಾವತಗಳು) ಎಂಬ ಇಂದ್ರಲೋಕದ ಎರಡು ಐರಾವತಗಳಿಗೆ ಪ್ರದಕ್ಷಿಣೆ ಹಾಕಿ ಆ ಸಿಂಧೂರವನ್ನು ಮಗಳಿಗೆ ಹಚ್ಚಿ , ಐರಿಣಿ ( ಐರಾವತ) ಪೂಜೆಯನ್ನು ಮಾಡಿ ಸಂಸಾರ ಎನ್ನುವದೇ ಒಂದು ಮಧುಚಂದ್ರ , ಆ ಮಧುಚಂದ್ರದಲ್ಲಿ ಇಂದ್ರನ ಐರಾವತಗಳ ಅನುಗ್ರಹದಿಂದ ಸಕಲ ವಿಧಗಳಿಂದ ಭದ್ರತೆ , ಮತ್ತು ಸಾಮರಸ್ಯ ದೊರಕಲಿ ಎಂದು ಪ್ರಾರ್ಥಿಸಿಕೊಳ್ಳುವ ಒಂದು ಹೃದಸ್ಪರ್ಶಿ ವಿಧಾನವಾಗಿದೆ . ಇಲ್ಲಿ ಅಷ್ಟ ದಿಗ್ಗಜಗಳು , ಸ್ವರ್ಗಲೋಕದ ಐರಾವತಗಳು , ಶೇಷದೇವರು , ಇವರೆಲ್ಲರಿಗೆ ಭಕ್ತಿಯಿಂದ ಸಿಂಧೂರ ತುಂಬಿದ ಪಾತ್ರೆಯಲ್ಲಿ ದೀಪಗಳನ್ನು ಪ್ರದಕ್ಷಿಣೆ ಹಾಕುವ ಕ್ರಮ ಇರೋದ್ರಿಂದ ಇದಕ್ಕೆ ಉತ್ತರ ಕನ್ನಡದ ಕಡೆ ಸಿಂಧೂಪ ಎನ್ನುವ ಹೆಸರು ಪ್ರಚಲಿತದಲ್ಲಿದೆ .
ತಾಯಿ ಹೊತ್ತುಕೊಂಡಿರುವ ಪಾತ್ರೆಯಲ್ಲಿರುವ ಆ ಎರಡು ದೀಪಗಳಲ್ಲಿ ಉಮಾ-ಮಹೇಶ್ವರರು ಸನ್ನಿಹಿತರಾಗಿರುತ್ತಾರೆ . ಮಗಳ ದಾಂಪತ್ಯ ಜೀವನ ಸುಖಮಯವಾಗಿರಲಿ , ವಂಶ ಅಭಿವೃದ್ಧಿ ಆಗಲಿ ಎನ್ನುವ ಪ್ರಾರ್ಥನೆಯೊಂದಿಗೆ , ವಂಶೋ ವಂಶಕರಃಶ್ರೇಷ್ಠೋ ವಂಶ ವಂಶಸಮುದ್ಭವಃ | ಅನೇನ ವಂಶದಾನೇನ ತುಷ್ಟಾ ಋದ್ಧಿಂ ಕರೋತು ಮೇ |ವಂಶಪಾತ್ರಮಿದಂ ಪುಣ್ಯಂ ವಂಶಜಾತಸಮುದ್ಭವಂ ||ವಂಶಾನಾಮುತ್ತಮಂ ದಾನಂ ಅತಃ ಶಾಂತಿಂ ಪ್ರಯಚ್ಛಮೇ || ವಂಶಪಾತ್ರಾಣಿ ಸರ್ವಾಣಿ ಮಯಾ ಸಂಪಾದಿತಾನಿ ವೈ | ಉಮಾಕಾಂತಾಯ ದತ್ತಾನಿ ಮಮ ಗೋತ್ರಾಭಿವೃದ್ಧಯೇ | ವಂಸವೃದ್ಧಿಕರಂ ದಾನಂ ಸೌಭಾಗ್ಯಾದಿ ಸಮನ್ವಿತಂ|| ಎಂದು ಸಿಂಧೂರದಿಂದ ಊಪವಾದ ಅಂದ್ರೆ ಭರಿತವಾದ ಪಾತ್ರಯಲ್ಲಿ ಉಮಾ-ಮಹೇಶ್ವರರ ಸನ್ನಿಧಾನವುಳ್ಳ ದೀಪಗಳನ್ನು ಹೊತ್ತು ಪ್ರದಕ್ಷಿಣೆ ಹಾಕಿದ ಆ ದಿಪಗಳನ್ನು ಒಂದು ಮೊರದಲ್ಲಿಟ್ಟು ಅತ್ತೆಯ ಮನೆಯವರಿಗೆ ದಾನಮಾಡುವ ಈ ವಿಧಿಗೆ ಸಿಂಧೂಪ ಎಂಬ ಹೆಸರು ಪ್ರಸಿದ್ಧಿಗೆ ಬಂದಿದೆ .
ಆ ವಂಶಪಾತ್ರವನ್ನು ಒಪ್ಪಿಸುವದರ ಜೊತೆಗೆ ಅಷ್ಟವರ್ಷಾತು ಇಯಂ ಕನ್ಯಾ ಪುತ್ರವತ್ಪಾಲಿತಾ ಮಯಾ | ಇದಾನೀಂ ತವ ಪುತ್ರಾಯ ದತ್ತಾ ಸ್ನೇಹೇನ ಪಾಲ್ಯತಾಂ|| ಎಂಬ ಮಂತ್ರದೊಂದಿಗೆ , ತಾವೆಲ್ಲರೂ ಎಲ್ಲಾ ತಿಳಿದವರಿದ್ದೀರೀ , ತಮ್ಮ ಮನೆಯಲ್ಲೂ ಕನ್ಯಾದಾನ ಮಾಡಿದವರಿದ್ದೀರಿ , ಸಕಲರೀತಿಯಿಂದ ಜವಾಬ್ದಾರಿಯನ್ನು ಅರಿತವರಿದ್ದೀರಿ ಹೆಚ್ಚಿಗೆ ಏನೂ ಹೇಳೋದಿಲ್ಲಾ , ಹೆತ್ತ ಕರುಳು ಈ ಕನ್ಯೆಯನ್ನು ಒಪ್ಪಿಸುವಾಗ ಹೃದಯದುಂಬಿ ಬರ್ತಾಯಿದೆ , ಒಂದೇ ಒಂದು ಮಾತನ್ನು ಹೇಳುತ್ತೇನೆ , ಈ ಕನ್ಯೆಯನ್ನು ನಾನು ಚೊಚ್ಚಿಲು ಮಗನ ತರಹ ಅತ್ಯಂತ ಪ್ರೀತಿ ಅಂತಃಕರಣದಿಂದ ಬೆಳೆಸಿದ್ದೀವಿ , ಇವತ್ತು ತಮ್ಮ ಮಡಿಲಿಗೆ ಒಪ್ಪಸ್ತಾಯಿದ್ದೀವಿ , ಈ ಕನ್ಯೆಗೆ ನಮ್ಮ ನೆನಪು ಬಹಳ ಕಾಡದಂತೆ , ಅಂದ್ರೆ ತಾವೇ ತಾಯಿ-ತಂದೆಯ ಪ್ರೀತಿ ಅಂತಃಕರಣವನ್ನು ಈ ನಮ್ಮ ಮಗಳಿಗೆ ಕರುಣಿಸಿ ನಿಜವಾದ ಅಂತಃಕರಣದಿಂದ ಪಾಲಿಸಿ" ಎಂದು ಉಕ್ಕಿಬರುವ ದುಃಖವನ್ನು ತಡೆದುಕೊಳ್ಳುತ್ತಾ ಆ ಕನ್ಯೆಯನ್ನು ಸಿಂಧೂಪವನ್ನು ಹೊತ್ತ ತಾಯಿಯು ಹಾಗು ಜೊತಗೆ ತಂದೆ ಇಬ್ಬರೂ ಸೇರಿ ತಮ್ಮ ಮಗಳನ್ನು ಒಪ್ಪಿಸುವ ವಿಧಾನವೇ ಕೂಸು ಒಪ್ಪಿಸುವ ಕಾರ್ಯ ಎಂದು ಹೆಸರಾಗಿದೆ .
ಹೀಗೆ ಸಿಂಧೂರ ಹಾಗೂ ಮಂಗಳ ದ್ರವ್ಯ ಸಹಿತವಾಗಿ ವಂಶಪಾತ್ರೆಯನ್ನು ಹೊತ್ತು ಮೇಲೆ ಹೇಳಿದ ದೇವತೆಗಳಿಗೆ ಭಕ್ತಿಯಿಂದ ಪ್ರದಕ್ಷಿಣೆ ಹಾಕುವ ಈ ವಿಧಾನಕ್ಕೆ ಸಿಂಧೂಪ ಎಂದು ಹೆಸರು .
***
=ವಿವಾಹದಲ್ಲಿ ಎಂಟು ವಿಧಗಳು.
ಅವುಗಳು ಯಾವುದೆಂದರೆ.
ಬ್ರಾಹ್ಮ . ದೈವ. ಅರ್ಷ.
ಪ್ರಾಜ ಪತ್ಯ. ರ
ಅಸುರ ಗಾಂಧರ್ವ
ರಾಕ್ಷಸ. ಪಿಶಾಚ.
ಬ್ರಾಹ್ಮ ವಿವಾಹ:
ವರನನ್ನು ಕರೆದು ಆತನನ್ನು ಮಧುಪರ್ಕಾದಿಗಳಿಂದ ಅರ್ಚಸಿ ವಸ್ತ್ರ ಮುಸುಕು ಹಾಕಿ
ಮಂಟಪಕೆ ಕರೆತಂದು
ಕನ್ಯಾ ದಾನ ಮಾಡುವುದು.
ಇದು ಬ್ರಾಹ್ಮಣರಿಗೆ ಶ್ರೇಷ್ಠ.
ದೈವ ವಿವಾಹ:
ಯಜ್ಞಗಳನ್ನು ಮಾಡುತ್ತಿರುವ ಶೋತ್ರಿಯ ನಾದವನಿಗೆ ಕನ್ಯೆಯನ್ನು ಅಲಂಕರಿಸಿ ದಾನ ಕೊಡುವುದು..
ಅರ್ಷ ವಿವಾಹ:
ಎರಡು ಗೋ ಮಿಥುನಗಳನ್ನು
ಶ್ರೋತ್ರಿಯವರನಿಂದ
ಪಡೆದು ಕನ್ಯೆಯನ್ನು ಧಾರೆ ಎರೆದು ಕೊಡುವುದು
ಅರ್ಷ ವಿವಾದ.
ಪ್ರಾಜಾಪತ್ಯ ವಿವಾಹ:
ವಧು-ವರರಿಬ್ಬರೂ ಸೇರಿ ದಾಂಪತ್ಯ ಧರ್ಮಾಚರಣೆಯಲ್ಲಿದ್ದು ಪ್ರಜಾ ಸಂಪದಭಿವೃದ್ಧಿ ಮಾಡಿರಿ ಎಂದು ವಾಗ್ದಾನ ಮಾಡಿ ಶಾಲಂಕೃತ ಕನ್ಯಾ ದಾನ ಮಾಡಿ ಕೊಡುವುದು.
ಅಸುರ ವಿವಾಹ:
ಬಂಧುಗಳಿಗೆ ವರದಕ್ಷಿಣೆ ಯಥಾ ಶಕ್ತಿ ವದುದಕ್ಷಣೆ
ಕೊಟ್ಟು ತಮ್ಮಿಷ್ಟದಂತೆ ವಿವಾಹವಾಗಲು ಕನ್ಯೆಯನ್ನು ಕೊಟ್ಟರೆ ಅದು ಅಸುರ ವಿವಾಹ
ಗಾಂಧರ್ವ ವಿವಾಹ:
ವಧು-ವರರು ಅನ್ಯೋನ್ಯಾನುರಾಗದಿಂದ ಪ್ರೇಮಿಸಿ ಆಲಿಂಗನಾದಿಗಳಿಂದ ಮೈತುನಾದಿಗಳನ್ನು ನಡೆಸಿ
ಸ್ವಇಚ್ಚೆಯಿಂದ
ಸೇರಿದ ವಿವಾಹ ಗಾಂಧರ್ವ ವಿವಾಹ.
ರಾಕ್ಷಸ ವಿವಾಹ:
ಕನ್ಯೆಯ ತಂದೆ ತಾಯಿಗಳನ್ನು ಕಡೆಗಣಿಸಿ ಬಲತ್ಕಾರದಿಂದ ಕನ್ಯೆಯು ಬೊಬ್ಬೆ ಹೊಡೆದರು ಅತ್ತರು ಹೊಡೆದು ಅಟ್ಟಿಸಿ ಅಪಹರಿಸಿಕೊಂಡು ಹೋಗಿ ವಿವಾಹವಾಗುವುದು ರಾಕ್ಷಸ ವಿವಾಹ.
ಪೈಶಾಚಕ ವಿವಾಹ:
ನಿದ್ರೆ ಮಾಡಿಕೊಂಡು ಮಧ್ಯಪಾನದಿಂದ ಮದ ವಿಹ್ವಲಳಾಗಿ
ಶೀಲ ಕಾಪಾಡಿಕೊಳ್ಳದಿರುವ ಕನ್ಯೆಯನ್ನು ರಹಸ್ಯವಾಗಿ ಭೋಗಿಸಿ ಕದ್ದೋಯ್ದ
ವಿವಾಹ ಮಹಾ ಪಾಪೀಷ್ಠನಾದವನ ಪೈಶಾಚಿಕ ವಿವಾಹ
ವಾಗಿದೆ ಇದು ಲೋಕ ನಿಂದ್ಯವಾಗಿದೆ.
ಬ್ರಾಹ್ಮ .ದೈವ ಅರ್ಷೇಯ .
ಪ್ರಜಾಪಾತ್ಯ ಎಂಬ ನಾಲ್ಕು ವಿಧದ ವಿವಾಹದಲ್ಲಿ ದಂಪತಿಗಳ ಸಂತಾನವು
ಶ್ರುತಾಧ್ಯಯನಾದಿ
ತೇಜೋ ಸಂಪತ್ಯುಕ್ತವಾಗಿ ಎಲ್ಲರೂ ಸಮ್ಮತಿಸುವ
ಸಂತಾನವೃದ್ಧಿ ಹೊಂದುವುದು ಸದಾಚಾರ ಸಂಪನ್ಯನಾಗಿ ಬಾಳುವುದು.
ಇದು ಮನುಸ್ಮೃತಿ
ಯಲ್ಲಿ ವಿವರಿಸಲ್ಪಟ್ಟಿದೆ.
**
Why do the bride and groom go round the fire 7 times in the marriage rituals?
Ans. Given by a Maths teacher:
Each circle consists of 360°⭕.
The only number from 1 to 9 which cannot divide 360 is 7.
So the Bride and Groom go round the Fire 7 Times Ensuring that Nothing Can Divide Their Relationship.
🙏MATHS🙏
****
In one of the rituals of a Hindu marriage, the couple are asked to go out in the open and gaze upon a particular pair of twin stars in the sky, which are called as the Arundhati- Vasishtha nakshatras.
These twin stars are supposed to epitomize the ideal couple, symbolic of marital fulfilment and loyalty.
The newly married couple are encouraged to draw inspiration from them.
But what is so unique about these particular twin stars ?
As per modern astronomical findings, the centre of gravity for these twin stars (named as Alcor and Mizar in the Ursa Major constellation) is placed such that they appear to revolve around each other constantly.
In other twin star systems, one star is observed to be stationary, while the other revolves around it.
But the Arundhati-Vasishtha pair is unique as they both revolve around each other; thereby illustrating how the perfect couple should behave.
Just imagine our ancestors looked up in the sky, thousands of years ago; & gained such profound insight about these pin-points of light.
Thus while Hindu rituals might appear meaningless to ignorant people, each one of them have deep scientific meaning and significance.
***
ಜೋತಿಷ್ಯದಲ್ಲಿ ಕೆಲವು ವಿಷಯ ಗಳು. ಸಂಗ್ರಹಿಸಿ ತಿಳಿಸಲಾಗಿದೆ:-🕉
1. ಮುಹೂರ್ತ ಲಗ್ನಕ್ಕೆ ದುಸ್ತಾನದಲ್ಲಿ ( 6-8-12 ) ರಲ್ಲಿ ಚಂದ್ರನಿದ್ದರೆ ಅಶುಭ, ಗುರು ಶುಕ್ರರ ಯುತಿಯಿದ್ದರು ಶುಭ ಕಾರ್ಯವನ್ನು ಮಾಡಬಾರದು.
2. ತಿಥಿ, ವಾರ, ನಕ್ಷತ್ರ, ಯೋಗ, ಶುಭವಾಗಿದ್ದರೆ, ಧನ, ಯಶಸ್ಸು, ಸಂತೋಷ, ಅಭಿವೃದ್ಧಿಯುಂಟಾಗುತ್ತದೆ.
3. ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಈ ನಾಲ್ಕು ಮಾಸದ ಕೃಷ್ಣಪಕ್ಷದಲ್ಲಿ ಸಪ್ತಮಿ, ಅಷ್ಟಮೀ, ನವಮಿ, ತಿಥಿಗಳು ತಿಸ್ರೋಷ್ಟಕಗಳು ಈ ದಿನಗಳು ಶ್ರಾದ್ಧ ದಿನಗಳು ಆಗಿರುವುದರಿಂದ ಶುಭಕಾರ್ಯ ಗಳಿಗೆ ಒಳ್ಳೆಯದಲ್ಲ.
4. ವಿವಾಹಸಮಯವನ್ನು ನಿರ್ಣಯಮಾಡುವಾಗ ಚಂದ್ರ, ಗುರುಬಲದಷ್ಟೆ ಪ್ರಾಮುಖ್ಯತೆಯನ್ನು ದಶಾ/ಭುಕ್ತಿನಾಥರಿಗೂ ಕೊಡಬೇಕು.
5. ವಿವಾಹವಾದ ಒಂದು ವರ್ಷದ ಒಳಗೆ ಗೃಹಾರಂಭ ಗೃಹಪ್ರವೇಶ ಮಾಡಬಾರದು. ಅನಿವಾರ್ಯವದ್ದರೆ 6 ತಿಂಗಳು ಬಿಡಬೇಕು.
6. ಹಣ್ಣು, ಕಾಯಿ, ಕಟ್ಟಿಗೆ, ತೃಣ, ಉಪ್ಪು, ಹಾಲು, ಧಾನ್ಯ ಈ ಪದಾರ್ಥಗಳಿಗೆ ಅಶುಚ್ಚಿಯಿಲ್ಲ.
7. ವಧು-ವರರ ಹೊಂದಾಣಿಕೆ ಮಾಡುವಾಗ ಗಣ ಕೂಟಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಜನ್ಮ ಕುಂಡಲಿಗೂ ಕೊಡುವುದು ಒಳ್ಳೆಯದು.
8. ತೀರದ ಸಾಲ:- ಸಂಕ್ರಮಣ ದಿನ ಮತ್ತು ಹಸ್ತ ನಕ್ಷತ್ರವಿರುವ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಶನಿವಾರಗಳಂದು ಎಷ್ಟೇ ಕಷ್ಟ ಬಂದರು ಸಾಲವನ್ನು ಮಾಡಬಾರದು. ಒಂದು ವೇಳೆ ಸಾಲ ಮಾಡಿದರೆ ಬೇಗ ಸಾಲ ತೀರುವುದಿಲ್ಲ.
9. ವಧು-ವರರಿಗೆ 3-6-10-11 ರಲ್ಲಿ ರವಿಯು ಸಂಚರಿಸುವಾಗ ವಿವಾಹಕ್ಕೆ ಶುಭಕರವಾಗಿರುತ್ತದೆ.
10. ಶುಕ್ರನು ವಿವಾಹ ಲಗ್ನಕ್ಕೆ 6ರಲ್ಲಿದ್ದರೆ ಭೃಗುಷಷ್ಟದೋಷವುಂಟಾಗುತ್ತದೆ ಕುಜನು 8ರಲ್ಲಿದ್ದರೆ ಕುಜಾಷ್ಟಮ ದೋಷವಾಗುತ್ತದೆ. ಇವೆರಡರಲ್ಲಿಯು ವಿವಾಹವನ್ನು ಮಾಡಬಾರದು.
11. ವಿವಾಹಲಗ್ನದಲ್ಲಿ ರವಿ ಇದ್ದರೆ ವೈಧವ್ಯವನ್ನು, ಚಂದ್ರನಿದ್ದರೆ ಮರಣವನ್ನು, ಕುಜನಿದ್ದರೆ ಸಾಂಸಾರಿಕ ಜೀವನಕ್ಕೆ ತೊಡಕನ್ನು, ಶನಿದೇವನಿದ್ದರೆ ದಾರಿದ್ರವನ್ನು ಮತ್ತು ರಾಹುವಿದ್ದರೆ ಸಂತಾನನಾಶವನ್ನುಂಟು ಮಾಡುತ್ತಾರೆ.
12. ಮುಹೂರ್ತವನ್ನು ಕೊಡುವಾಗ ಪಂಚಾಂಗಶುದ್ದಿ, ತಾರಬಲ, ಚಂದ್ರ ಬಲ, ಗುರುಬಲ ಮತ್ತು ಪಂಚಕವನ್ನು ನೋಡಿ ಕೊಡಬೇಕು. ಅನಿವಾರ್ಯ ವಾದಲ್ಲಿ ದೋಷಕ್ಕೆ ಪರಿಹಾರವನ್ನು ಮಾಡಿಸಬೇಕು.
13. ಕೊಳವೆ ಬಾವಿ ತೆಗೆಯುವಾಗ ಲಗ್ನಕೇಂದ್ರದಲ್ಲಿ ಪಾಪಗ್ರಹಗಳು ಇರಬಾರದು. ಒಂದು ವೇಳೆ ಇದ್ದರೆ ನೀರು ಸಿಗದೆ ಹೋಗಬಹುದು. ಚಂದ್ರ ಶುಕ್ರರು ಇದ್ದರೆ ಶುಭವಾಗುತ್ತದೆ.
14. ವಾಸ್ತುವಿಗೆ ಶುಭಾಯ:-
1. ದ್ವಜಾಯ-1; 2. ಸಿಂಹಾಯ-3; 3. ವೃಷಭಾಯ-5; 4.ಗಜಾಯ-7;.
ಮನೆಗೆ-ಒಳಾಯ ಉತ್ತಮ; ದೇವಸ್ಥಾನಕ್ಕೆ-ಹೊರಾಯ ಒಳ್ಳೆಯದು;
ಆಶ್ರಮ, ಮದುವೆ ಮಂಟಪ, ರಂಗಭೂಮಿ, ಚಿತ್ರಮಂದಿರ ಕ್ರೀಡಾಂಗಣ, ಹಾಸ್ಟೆಲ್ ಇವುಗಳಿಗೆ ಮಧ್ಯಾಯ ಉತ್ತಮವಾಗಿರುತ್ತದೆ.
15. ವಿವಾಹ ಲಗ್ನಕ್ಕೆ 2-12ರಲ್ಲಿ ವಕ್ರೀಗ್ರಹಗತಿಗಳು ಮತ್ತು ಪಾಪಗ್ರಹಗಳು ಇದ್ದರೆ ಅಶುಭ, ಶುಭ ಗ್ರಹಗಳು ವೀಕ್ಷಣೆಯಿದ್ದರು ತೊಂದರೆಯಾಗುತ್ತದೆ.
16.ನೂತನ ವಧುವಿನ ಗೃಹಪ್ರವೇಶವೂ ಹಗಲಿನಲ್ಲಿ ಮಾಡಬಾರದು. ರಾತ್ರಿ ಸಮಯದಲ್ಲಿ ಶುಭ, ಇಲ್ಲವೆ ಗೋಧೂಳೀ ಲಗ್ನದಲ್ಲಿ ಉತ್ತಮ. ಪುಷ್ಯ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಅಧಿಕ ಮಾಸದಲ್ಲಿ ವಧುವಿನ ಗೃಹಪ್ರವೇಶ ಉತ್ತಮವಲ್ಲ.
17. ವಿವಾಹದಿನದಿಂದ 16 ದಿನದಲ್ಲಿ/ಸಮದಿನಗಳಲ್ಲಿ ವಧುವು ಗೃಹಪ್ರವೇಶ ಮಾಡುವುದಕ್ಕೆ ದಿನ ಶುದ್ದಿ ಬೇಕಾಗಿಲ್ಲ.
18. ಉಪನಯನ ಮುಹೂರ್ತದಲ್ಲಿ ಗುರು ಮತ್ತು ಶುಕ್ರಗ್ರಹಗಳು ಲಗ್ನದಲ್ಲಿದ್ದರೆ ವಟುವು ಸಕಲ ವಿಧ್ಯಾವಂತನಾಗುತ್ತಾನೆ. ಈ ಲಗ್ನಕ್ಕೆ ಗುರು ಬಲ,ಚಂದ್ರಬಲ,ತಾರಬಲದ ಜೊತೆಗೆ ವರ್ಷಬಲವು ಬಹಳ ಪ್ರಾಮುಖ್ಯವಾಗಿದೆ.
19. ಮಾಘ, ಫಾಲ್ಗುಣ, ವೈಶಾಖ, ಜೇಷ್ಠಮಾಸಗಳು ವಿವಾಹಕ್ಕೆ ಶುಭಕರವಾಗಿದೆ. ಕಾರ್ತಿಕ, ಮಾರ್ಗಶಿರ ಮಾಸಗಳು ಮಧ್ಯಮವಾಗಿರುತ್ತದೆ. ಉಳಿದ ಮಾಸಗಳು ಶುಭಕರವಲ್ಲ.
20. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಆಕ್ಕ ತಂಗಿಯರಿಗೆ ಒಬ್ಬರಿಗೆ ವಿವಾಹವಾದ 6 ತಿಂಗಳೊಳಗಾಗಿ ಮತ್ತೋಬ್ಬರಿಗೆ ವಿವಾಹವನ್ನು ಮಾಡಬಾರದು.
21. ಅಮೃತ ಸಿದ್ಧಿಯೋಗ:-
1. ಭಾನುವಾರ-ಹಸ್ತ ನಕ್ಷತ್ರವಿದ್ದರೆ, 2. ಸೋಮವಾರ-ಮೃಗಶಿರ ನಕ್ಷತ್ರ.
3. ಮಂಗಳವಾರ-ಸ್ವಾತಿ ನಕ್ಷತ್ರ. 4. ಬುಧವಾರ-ಅನೂರಾಧ ನಕ್ಷತ್ರ.
5. ಗುರುವಾರ-ಪುಷ್ಯಮಿ ನಕ್ಷತ್ರ. 6. ಶುಕ್ರವಾರ-ರೇವತಿನಕ್ಷತ್ರವಿದ್ದರೆ.
7. ಶನಿವಾರ-ರೋಹಿಣಿ ನಕ್ಷತ್ರ.
ಇವು ಅಮೃತಸಿದ್ದಿಯೋಗವುಂಟಾಗುತ್ತದೆ. ಈ ವಾರ ನಕ್ಷತ್ರಗಳು ಒಂದೇ ದಿನ ಬಂದರೆ ಶುಭ ಕಾರ್ಯ ಮಾಡುವುದಕ್ಕೆ ಉತ್ತಮವಾಗಿರುತ್ತದೆ.
22. ವಿವಾಹವಾದ 6 ತಿಂಗಳು ಕಿವಿಚುಚ್ಚುವುದು, ಉಪನಯನ, ತೀರ್ಥ ಯಾತ್ರೆ, ಉದ್ಯಾಪನೆ, ಗೃಹಾರಂಭ, ಗೃಹಪ್ರವೇಶ ಮತ್ತು ಗೃಹಿಣಿಯು ಗರ್ಭ ಧರಿಸಿದನಂತರ ಗೃಹಾರಂಭ, ಗೃಹಪ್ರವೇಶ, ಬಾವಿ/ಬೋರ್ವೆಲ್ ಕೊರೆಯುವುದು, ಮನೆಯನ್ನು ಒಡೆದು ಹಾಕುವುದು. ಗರ್ಭಿಣಿ ಸ್ತ್ರೀಯರು
ದೂರ ಪ್ರಯಾಣ ಮಾಡಬಾರದು.
23. ದಗ್ದಯೋಗವಿರುವ ದಿನದಲ್ಲಿ, ಸಂಕ್ರಮಣ ಹಿಂದೆ ಮತ್ತು ಮುಂದೆ 16 ಘಳಿಗೆ ಕಾಲ ವಿವಾಹ ಮತ್ತು ಯಾವುದೇ ಶುಭಕಾರ್ಯವನ್ನು ಮಾಡಬಾರದು.
24. ಮೃತ್ಯುಯೋಗವಿರುವ ವಾರ ಮತ್ತು ತಿಥಿ:-
1.ಭಾನುವಾರ; 1-6-11ನೇ ತಿಥಿಗಳು.
2.ಸೋಮವಾರ; 2-7-12ನೇ ತಿಥಿಗಳು.
3.ಮಂಗಳವಾರ; 1-6-11ನೇ ತಿಥಿಗಳು
4.ಬುಧವಾರ; 3-8-13ನೇ ತಿಥಿಗಳು.
5.ಗುರುವಾರ; 4-9-14ನೇ ತಿಥಿಗಳು.
6.ಶುಕ್ರವಾರ; 2-7-12ನೇ ತಿಥಿಗಳು.
7.ಶನಿವಾರ; 5-10-30ನೇ ತಿಥಿಗಳು.
25.ಸೋದರ ಮಾವನ ಮಗಳನ್ನು ವಿವಾಹವಾಗಬೇಕಾದರೆ, ಗಣ-ಕೂಟಗಳು ಬರದಿದ್ದರೂ ಶುಭ ಸೂಚನೆಗಳು ಆದರೆ ವಿವಾಹವನ್ನು ಮಾಡಬಹುದೆಂಬ ಪದ್ಧತಿಯಿದೆ.
26.ಮಕ್ಕಳಿಗೆ ಹೆಸರನ್ನು ಇಡುವಾಗ ನಕ್ಷತ್ರದ ಹೆಸರು, ನದಿ, ಬೆಟ್ಟ, ಗಿರಿಧಾಮ, ಪಕ್ಷಿ, ಪ್ರಾಣಿ ಮತ್ತು ಗಿಡ, ಮರ ಸಸ್ಯಗಳ ಹೆಸರನ್ನು ಇಡಬಾರದು.
27. ವಿವಾಹ ಮುಹೂರ್ತಕ್ಕೆ ಗುರು ಮತ್ತು ಶುಕ್ರಗ್ರಹಗಳು ಬಲಿಷ್ಠವಾಗಿರಬೇಕು. ಒಂದು ಸಮಯ ದುರ್ಬಲರಾದರೆ ಶಾಂತಿ ಪೂಜೆ ಮಾಡುವುದರಿಂದ ಶುಭಫಲದೊರೆಯುತ್ತದೆ. ಗುರು, ಶುಕ್ರರು ಅಸ್ತಂಗತರಾದಾಗ ಯಾವುದೇ ಶುಭಕಾರ್ಯಗಳನ್ನು ಮಾಡುವುದು ಶುಭ ವಲ್ಲ.
( Sangraha maahiti )
***
marriage
“ಧರ್ಮಪ್ರಜಾಸಂಪತ್ತಿಃ ಪ್ರಯೋಜನಂ ವಿವಾಹಸ್ಯ||” ಧರ್ಮ ಶ್ರದ್ಧೆಯುಳ್ಳ ಉತ್ತಮ ಸಂತಾನಪ್ರಾಪ್ತಿಯೇ ಬ್ರಾಹ್ಮವಿವಾಹದ ಮುಖ್ಯ ಉದ್ದೇಶ. ವಿವಾಹ ಸಂಸ್ಕಾರವು ಸ್ತ್ರೀಪುರುಷರ ಪರಸ್ಪರ ಸಂಬಂಧ ನಿರ್ಣಾಯಕವಾದುದರಿಂದ ಇದಕ್ಕೆ ಧಾರ್ಮಿಕ ಮಹತ್ವವಿದ್ದಷ್ಟೇ ಸಾಮಾಜಿಕ ಮಹತ್ವವೂ ಇದೆ. ಈ ವಿವಾಹ ಸಂಸ್ಕಾರದಲ್ಲಿ ವಾಗ್ದಾನ (ನಿಶ್ಚಯತಾಂಬೂಲ) ದಿಂದ ಗೃಹಪ್ರವೇಶ ದ ವರೆಗೆ ಹಲವು ವಿಧಿಗಳು ಅಂತರ್ಗತವಾಗಿವೆ.
ವಧುವಿಗೆ ಭಾರ್ಯತ್ವಸಿದ್ಧಿಗಾಗಿ ವಿವಾಹಹೋಮವನ್ನು ಮಾಡಲಾಗುತ್ತದೆ. ಇದರಲ್ಲಿ ಲಾಜಹೋಮ, ಪಾಣಿಗ್ರಹಣ, ಪರಿಣಯನ (ಅಗ್ನಿಗೆ ಪ್ರದಕ್ಷಿಣೆ ಬರುವುದು), ಅಶ್ಮಾರೋಹಣ (ಸ್ಥಿರತೆಗಾಗಿ), ಸಪ್ತಪದಿ (ಸಖ್ಯಪ್ರಾಪ್ತಿಗಾಗಿ ಪ್ರತಿಜ್ಞೆ) ಮುಂತಾದ ಕರ್ಮಭಾಗಗಳಿವೆ.
ಸಪ್ತಪದಿಯು ದಾಂಪತ್ಯಜೀವನದ ಪ್ರಮಾಣವಚನ ಸ್ವೀಕಾರದ ವಿಧಿ ಎಂದ ಹೇಳಬಹುದು. ವರನು ವಧುವಿನ ಜೊತೆಯಲ್ಲಿ ಏಳು ಹೆಜ್ಜೆಗಳಿಂದ, ಪ್ರತಿಯೊಂದು ಹೆಜ್ಜೆಗೂ ಒಂದೊಂದು ಪ್ರಮಣವಚನವನ್ನು ಸ್ವೀಕರಿಸಬೇಕು.
“ಅಥಾಗ್ನೇರುದೀಚ್ಯಾಂ ಕೃತಸಪ್ತತಡುರಾಶೀನ್ ಪಶ್ಚಿಮತಃ ಆರಭ್ಯ ಈಶಾನಪರ್ಯಂತಮ್ ಏಕೈಕಂ ವಧೂಂ ದಕ್ಷಿಣೇನ ಪಾದೇನ ಸಮಂತ್ರಕಮ್ ಅಭ್ಯುತ್ಕ್ರಾಮಯೇತ್ ||”
ಅಗ್ನಿಯ ಉತ್ತರಭಾಗದಲ್ಲಿ ಅಕ್ಕಿಯ ಏಳು ರಾಶಿಗಳನ್ನು ಮಾಡಬೇಕು. ಅವುಗಳ ಪಡುಭಾಗದಲ್ಲಿ ಪೂರ್ವಕ್ಕೆ ಮುಖಮಾಡಿ ವಧುವನ್ನು ನಿಲ್ಲಿಸಿ, ವರನು ವಧುವಿನ ಮುಂದೆ ನಿಂತು, ಮೊದಲು ಬಲಗಾಲನ್ನು ಎತ್ತಿ ಇಡುವಂತೆ ಹೇಳಿ, ಏಳು ಮಂತ್ರಗಳನ್ನು ಹೇಳುತ್ತಾ ಕ್ರಮವಾಗಿ ಒಂದೊಂದೇ ರಾಶಿಯ ಮೇಲೆ ನಡೆಸಿಕೊಂಡು ಬರುವುದೇ ಸಪ್ತಪದಿ ವಿಧಿ.
ಈ ಏಳು ಹೆಜ್ಜೆಗಳು ಅವರ ಭಾವೀ ದಾಂಪತ್ಯ ಜೀವನವೆಂಬ ಸುದೀರ್ಘ ಪಥದ ಸಾಂಕೇತಿಕ ಹೆಜ್ಜೆಗಳು. ಈ ವಚನಗಳು ಬಹಳ ಅರ್ಥಪೂರ್ಣವಾಗಿವೆ. ಈ ವಿಧಿಯನ್ನು ಸಮಂತ್ರಕವಾಗಿ ಮಾಡಬೇಕು.
ಸಪ್ತಪದಿಯ ಏಳು ಮಂತ್ರಗಳು:-
ಓಂ ಇಷ ಏಕಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಪ್ರಥಮಂ ||
ಓಂ ಊರ್ಜೇ ದ್ವಿಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ದ್ವಿತೀಯಂ ||
ಓಂ ರಾಯಸ್ಪೋಷಾಯ ತ್ರಿಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ತೃತೀಯಂ ||
ಓಂ ಮಾಯೋಭವ್ಯಾಯ ಚತುಷ್ಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಚತುರ್ಥಂ ||
ಓಂ ಪ್ರಜಾಭ್ಯಃ ಪಂಚಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಪಂಚಮಂ ||
ಓಂ ಋತುಭ್ಯಃ ಷಟ್ಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಷಷ್ಠಂ ||
ಓಂ ಸಖಾ ಸಪ್ತಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಸಪ್ತಮಂ ||
(ಜೀವನದ ಅನ್ನಕ್ಕಾಗಿ ಮೊದಲನೆಯ ಹೆಜ್ಜೆ, ಬಲವರ್ಧನೆಗಾಗಿ ಎರಡನೇ ಹೆಜ್ಜೆ, ಆರ್ಥಿಕ ಸಬಲತೆಗಾಗಿ ಮೂರನೇ ಹೆಜ್ಜೆ, ದಾಂಪತ್ಯ ಸುಖಕ್ಕಾಗಿ ನಾಲ್ಕನೇ ಹೆಜ್ಜೆ, ಸತ್ಸಂತತಿಗಾಗಿ ಐದನೇ ಹೆಜ್ಜೆ, ಎಲ್ಲ ಋತುಗಳಲ್ಲೂ ಸಂತೋಷದಿಂದ ಬಾಳುವ ಶಕ್ತಿಗಾಗಿ ಆರನೇ ಹೆಜ್ಜೆ, ಮುಂದೆ ಸದಾ ಸ್ನೇಹಭಾವ ತುಂಬಿ ಸಖಿಯಾಗುವ ನಿಮಿತ್ತ ಏಳನೇ ಹೆಜ್ಜೆ.)
ಕೊನೇಯ ರಾಶಿ ತುಳಿದ ಅನಂತರ ಇಬ್ಬರೂ ಪರಸ್ಪರ ತಲೆಯನ್ನು ಜೋಡಿಸುವುದು. ವಧುವಿನ ತಂದೆಯು ವರನ ತಲೆಯ ಮೇಲೆ ಕನ್ನಡಿಯನ್ನು ಇಟ್ಟು, ವಧುವಿನ ತಾಯಿ ಪೂರ್ವ ಕಲಶದ ನೀರನ್ನು ಸ್ವಲ್ಪವೇ ಕನ್ನಡಿಯ ಮೇಲೆ (ಶಾಂತಿರಸ್ತು ..... ಇತ್ಯಾದಿ) ಸಮಂತ್ರಕವಾಗಿ ಸುರಿಯುವುದು. ಕನ್ನಡಿಯ ನೀರು ವರನ ತಲೆಗೆ ಬಿದ್ದು ವಧುವಿನ ತಲೆಗೆ ಬೀಳುವಂತಿರಬೇಕು. ಇದರಿಂದ ವಧುವಿಗೆ ವರನ ಗೋತ್ರವು ಪ್ರಾಪ್ತವಾಗುವುದು.
ಸಖ್ಯಪ್ರಾಪ್ತಿಗಾಗಿ ಸಪ್ತಪದಿಯನ್ನು ಆಚರಿಸುವ ಸಮಯದಲ್ಲಿ ವರನು ಹೇಳುತ್ತಾನೆ:-
“ಏಳು ರಾಶಿಯನ್ನು ದಾಟುವುದರಿಂದ ಸಪ್ತಪದಿಯಾದ ನೀನು ನನಗೆ ಸ್ನೇಹಿತಳಾಗು. ಈ ಸಪ್ತಪದಿಯಿಂದಲೇ ನಾವಿಬ್ಬರೂ ಸ್ನೇಹಿತರಾಗೋಣ. ನಾವಿಬ್ಬರೂ ಸ್ನೇಹವಾಗಿಯೇ ನಡೆಯೋಣ. ನನ್ನ ಸ್ನೇಹದಿಂದ ನೀನೂ ಬೇರೆಯಾಗಬೇಡ. ನಿನ್ನ ಸ್ನೇಹದಿಂದ ನಾನೂ ಬೇರೆಯಾಗುವುದಿಲ್ಲ. ಒಂದು ಕಾರ್ಯವನ್ನು ಮಾಡಲು ಇಬ್ಬರೂ ಸಹಕರಿಸಿ ನಿರ್ಧರಿಸೋಣ. ಪ್ರೀತಿಯುಕ್ತರಾಗೋಣ. . . . .
ನೀನು ಋಗ್ವೇದಸ್ವರೂಪಳು, ನಾನು ಸಾಮವೇದಸ್ವರೂಪನು. ನಾನು ಆಕಾಶಸ್ವರೂಪನು, ನೀನು ಪೃಥ್ವೀಸ್ವರೂಪಳು. ನಾನು ಮನಸ್ಸಿನ ಸ್ವರೂಪನಾಗಿದ್ದೇನೆ, ನೀನು ವಾಕ್ಕಿನ ಸ್ವರೂಪಳಾಗಿದ್ದೀ. . . . .
ಈ ರೀತಿಯಾಗಿರುವ ನೀನು ನನಗೆ ಅನುಕೂಲಳಾಗಿರು.”
ಇಲ್ಲಿ ಪತಿ-ಪತ್ನಿಯರಲ್ಲಿ ಮೇಲು-ಕೀಳು, ಉತ್ತಮ-ನೀಚ, ಹೆಚ್ಚು-ಕಡಿಮೆ ಎಂಬ ಭೇದಭಾವಕ್ಕೆ ಅವಕಾಶವಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಅಧಿಕಾರ ಚಲಾಯಿಸದೇ ಸ್ನೇಹಿತರಂತೆ ಸಮಾನತೆಯಿಂದ ಸ್ನೇಹಭಾವದಿಂದ ಬಾಳಬೇಕೆಂಬುದೇ ಸಂದೇಶ.
ಹೀಗೆ ಏಳು ಹೆಜ್ಜೆಗಳನ್ನು ಇಡುವಾಗ ವಧುವು ವರನ ಸಾಮಿಪ್ಯಕ್ಕೆ ಬಂದಿರುತ್ತಾಳೆ.
ಜೀವನದ ಕಷ್ಟಕೋಟಲೆಗಳನ್ನು ಸಪ್ತಸಾಗದಂತೆ ಸಪ್ತಪದಿಯಲ್ಲಿ ದಾಟಿ ಒಂದಾಗೋಣ ಎಂಬ ಮಧುರ ಅನುಭೂತಿಯನ್ನು ಪ್ರತಿಬಿಂಬಿಸುತ್ತದೆ ಈ ಸಪ್ತಪದಿ. ಈ ಸಪ್ತಪದಿ ವಿಧಾನವು ವಿವಾಹ ಸಂಸ್ಕಾರದ ಜೀವ – ಜೀವಾಳ-
-ಸಂಸ್ಕಾರಗಳು ಸಂಚಿಕೆ – ೧೮ || ವಿವಾಹ || ಅಧ್ಯಾಯ – ೩:ಸಂಗ್ರಹ:- ಪಂ. ವಿಜಯೇಂದ್ರ ರಾಮನಾಥ ಭಟ್.
*****
ಸಪ್ತಪದಿ - ನಮ್ಮ ಪೂರ್ವಜರು ಎಲ್ಲದಕ್ಕೂ ಒಂದು ವಿಧ ವಿಧಾನ ಮಾಡಿ ಎಲ್ಲದಕ್ಕೂ ಒಂದು ಅರ್ಥಗರ್ಭಿತ ಕಾರಣ ಕೊಟ್ಟರು ಅದರಲ್ಲಿ ಜೀವನ ತಿಳಿಸಿ ಕೊಟ್ಟರು.
*ವಿವಾಹದ ಅರ್ಥಪೂರ್ಣ ಹೆಜ್ಜೆಗಳೇ ಈ ಸಪ್ತಪದಿ. !!!*
*ಮೊದಲನೇ ಹೆಜ್ಜೆ.. 1*
ವರ -- ನನ್ನೊಂದಿಗೆ ಮೊದಲ ಹೆಜ್ಜೆಯಿಟ್ಟಿರುವೆ. ನಾವೀಗ ಗೆಳೆಯರಾಗಿದ್ದೇವೆ. ಸದಾ ನನಗೆ ಆಹಾರವನ್ನು ಒದಗಿಸು. ಧಾರ್ಮಿಕವ್ರತಾಚರಣೆಗಳಲ್ಲಿ ಸಹಭಾಗಿಯಾಗು,ಉತ್ತಮ ಸಂತಾನಗಳನ್ನು ಪಡೆದು ನಾವಿಬ್ಬರೂ ಬಹುಕಾಲ ಬದುಕೋಣ.
ವಧು --ನನ್ನನ್ನು ನಿಮಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ. ಮನೆಯ,ಆಹಾರದ,ಹಣಕಾಸಿನ ಜವಾಬ್ದಾರಿಯನ್ನು ನನಗೀಗ ನೀಡಿ.ನನಗೆ ಕೊಟ್ಟ ಜವಾಬ್ದಾರಿಗಳನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ.
*ಎರಡನೇ ಹೆಜ್ಜೆ*
ವರ - ನನ್ನೊಂದಿಗೆ ಎರಡನೇ ಹೆಜ್ಜೆಯಿಟ್ಟಿದ್ದೀಯಾ. ಸದಾ ನನ್ನೊಂದಿಗಿದ್ದು ಶಕ್ತಿಯನ್ನು ನೀಡು.
ವಧು - ನೀವು ದುಃಖದಲ್ಲಿರುವಾಗ ಮನಸ್ಫೂರ್ತಿಯನ್ನು ನೀಡುವೆ. ನಿಮ್ಮ ಒಳಿತಿಗಾಗಿ ಸದಾ ಚಿಂತಿಸುವೆ.ಸದಾ ನಿಮಗೆ ಹಿತಕರವಾದ ಮಾತನ್ನಾಡುವೆ.ಕುಟುಂಬ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತೇನೆ.ನಿಮ್ಮ ಪ್ರೀತಿ ಸದಾ ನನ್ನೊಬ್ಬಳಿಗೇ ಇರಲಿ.
*ಮೂರನೇ ಹೆಜ್ಜೆ..*
ವರ - ನನ್ನ ಸಂಪತ್ತನ್ನು ನೀನು ಇನ್ನೂ ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಡನೆ ಮೂರನೇ ಹೆಜ್ಜೆಯನ್ನಿಟ್ಟಿದ್ದೇನೆ.
ವಧು - ಒಂದೇ ಮನಸ್ಸಿನಿಂದ ನಿಮ್ಮನ್ನೇ ಆರಾಧಿಸುತ್ತೇನೆ.ನನ್ನ ಸಹೋದರರನ್ನು ಪ್ರೀತಿಸುವಂತೇ ನಿಮ್ಮನ್ನೂ ಪ್ರೀತಿಸುತ್ತೇನೆ. ನಿಮ್ಮಲ್ಲೇ ಭಕ್ತಿ ಹೊಂದಿರುತ್ತೇನೆ.ಇದು ನನ್ನ ಪ್ರತಿಜ್ಞೆ.
*ನಾಲ್ಕನೇ ಹೆಜ್ಜೆ..*
.ವರ --ನನ್ನ ಸಂತೋಷವನ್ನು ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಂದಿಗೆ ನಾಲ್ಕನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಯಾವಾಗಲೂ ನೀವು ಆನಂದದಲ್ಲಿರುವಂತೇ ನೋಡಿಕೊಳ್ಳುತ್ತೇನೆ. ನಿಮ್ಮ ಲಾಲನೆ-ಪೋಷಣೆಯ ಜವಾಬ್ದಾರಿ ನನ್ನದು.
*ಐದನೇ ಹೆಜ್ಜೆ..*
ವರ- ಉತ್ತಮ ಸಂತಾನವನ್ನು ಕರುಣಿಸುವೆಯೆಂಬ ನಂಬಿಕೆಯಿಂದ ಐದನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಸಂಪತ್ತಿನಲ್ಲಿ,ದುಃಖದಲ್ಲಿ ಸದಾ ನಿಮ್ಮೊಂದಿಗಿರುತ್ತೇನೆ. ವಿಶ್ವಾಸ ಹಾಗೂ ಪ್ರಾಮಾಣಿಕತೆಯಿಂದ ನಿಮ್ಮೊಂದಿಗೆ ಜೀವಿಸುತ್ತೇನೆ.ನಿಮ್ಮ ಆಸೆಗಳನ್ನು ಸದಾ ನೆರವೇರಿಸುತ್ತೇನೆ.
*ಆರನೇ ಹೆಜ್ಜೆ..*
ವರ - ಎಲ್ಲ ಋತುಗಳಲ್ಲೂ ಸಂತೋಷವನ್ನು ನೀಡುವೆಯೆಂಬ ಭರವಸೆಯಿಂದ ಆರನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು-- ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲೂ,ಎಲ್ಲ ವಿಧದ ಸಂತೋಷ,ದುಃಖಗಳಲ್ಲೂ ನಾನು ನಿಮ್ಮೊಂದಿಗಿರುತ್ತೇನೆ. ಯಾವಾಗಲೂ ನಿಮ್ಮ ಸಂತೋಷವನ್ನೇ ಬಯಸುತ್ತೇನೆ.
*ಏಳನೇ ಹೆಜ್ಜೆ..*
ವರ -- ಪರಸ್ಪರರು ಅರಿತು ಜೀವನದುದ್ದಕ್ಕೂ ಜೊತೆಯಾಗಿ ಬಾಳೋಣ ಎನ್ನುತ್ತಾ ನಿನ್ನೊಡನೆ ಎಳನೇ ಹೆಜ್ಜೆಯನ್ನಿಡುವೆ.
ವಧು --- ದೇವಾನುದೇವತೆಗಳ ಅನುಗ್ರಹದಿಂದ,ನಿಮ್ಮೊಡನೆ ಏಳು ಹೆಜ್ಜೆ ನಡೆದು ನಿಮ್ಮ ಪತ್ನಿಯಾಗಿರುವೆ. ಯಾವ ಪ್ರತಿಜ್ಞೆಗಳನ್ನು ಮಾಡಿದ್ದೇವೆಯೋ ಅದನ್ನು ಶಿರಸಾವಹಿಸಿ ಪಾಲಿಸೋಣ.ಪರಸ್ಪರರು ಎಂದಿಗೂ ವಿಶ್ವಾಸದಿಂದಿರೋಣ.ಯಾವಾಗಲೂ ಒಬ್ಬರನ್ನೊಬ್ಬರು ಪ್ರೀತಿಸೋಣ.
ಇದನ್ನು ಪ್ರತಿಯೊಬ್ಬರು ಮನಃ ಪೂರ್ವಕ ವಾಗಿ ಅರಿತು ಬಾಳಿದಾಗ ವಿಚ್ಛೇದನದ ಅನ್ನುವ ಪದ ಯಾವ ಪತಿಪತ್ನಿಯ ಜೀವನದಲ್ಲಿ ಬರುವದೇ ಇಲ್ಲ ಆದರೆ ಇವತ್ತಿನ ದಿನ ಎಲ್ಲರೂ ಸ್ವಾಭಿಮಾನ ಅನ್ನುವ ಅಹಂ ಬಲಿಯಾಗಿ ಜೀವನದ ಹಾದಿ ತಪ್ಪುತ್ತಿದ್ದಾರೆ.
*****
No comments:
Post a Comment