SEARCH HERE

Tuesday, 1 January 2019

ದತ್ತಾತ್ರೇಯ ಜಯಂತಿ dattatreya jayanti margashira pournima



ದತ್ತಾತ್ರೇಯ ಜಯಂತಿ dattatreya jayanti 

Full moon (Poornima) of shukla Paksha in Margashira masa which is the birth anniversary of Lord Dattatreya an auspicious day among Hindus, who is said to be the incarnation of Trinity Gods Brahma, Vishnu and Maheswara.This Jayanthi is followed mainly in the state of Maharastra and parts of Karnataka.It is believed that, worshiping this God is beneficial to mankind in all aspects in one’s life.On this day devotees observe a fast for the whole day and offer prayers to the Lord Dattatreya, seeking His blessings. Datta is also known by other names like Avadhut and Digambar. Lord Dattatreya is known to help people and guide them in the right way. So worshipping the Lord on the day of his incarnation as Trimurthi is considered extremely important.

Lord Datta is endowed with spiritual experience since He has attained God-realisation.He helps in developing creation and devotion in people and teaches how to lead an ideal life and gives momentum to our ancestors after their death. 

On this day it is believed that, the devotees will receive maximum benefits if worshiped compared to any other day. So if one worship the Lord Datta on this day, they will receive maximum benefits.On this day devotees will recite verses from the Guru Charitre which is considered as Holy Scripture about Lord Dattatreya.Some people involve them selves in Meditation and Japa of the Lord.These activities on this day is said to solve bigger problems being faced in their lives..

The preparation for observing the ritual commences one week before the Jayanthi. In the temples dedicated to the Lord.Devotees as usual will get up early in the morning, take their bath before sun rise before starting Fast.They have to apply sandal paste and turmeric paste upon their fore head using their right finger to get the spiritual emotions in them.The deity is to be worshiped with flowers and sandal paste ,Kumkum and turmeric powder and have to take 7 rounds around the deity after the performance of Pooja.

Legends state that, He is the son of Sage Arthri whose wife Anasuya was observing Pathivrathya strictly. After coming to know about her Pathivrathya and beauty, they were, Jealous of her beauty and Pathivrathya.To test her sanctity about her, Lord Vishnu, Brahma and Shiva descend to the earth in the guise of Sanyasi and visit the Asram where the couple were residing seeking alms.They sought food to be served to them with naked body in the absence of her husband. When Anasuya disrobed herself before serving, the sayasis had been converted to babies which astonished her and she offers milk from her breast to the babies who were crying, thinking that the sanyasis who came for alms were divinely Gods.Sage Arthri after returning from his tapas got astonished to see the babies and came to know from his inner consciousness that they were Brahma Vishnu and shiva and the babies were retained with them as per the wishes of the Anasuya.So all the powers of three Good were vested in Sri Datta whom we are worshipping today.
*********

ಗಾಣಗಾಪುರ ABOUT GANAGAPUR

Shree kshetra Ganagapur is a holy place of Lord Dattatreya and the place is very important "Darshaneeya kshetra". The place is connected to "Sri Nrusimha Saraswathy Swamy" who is the second incarnation of Lord Dattatreya. Importance of this kshetra was explained by ShreeGuru which can be seen in “Shree Gurucharitra”. This Nirguna Mutt is adorned with the Nirguna Padukas.

It stands on the bank of the river Bhima in Afzalpur taluka in Gulbarga district of Karnataka. The confluence of Bhima and Amaraja rivers are considered extremely holy. Who ever takes bath in Sangam, will be free from their sins and their wishes will be fulfilled. There is a temple in Sangam in which the Shree Nrusimha Saraswathy Swamy performed the Anushtaan. The 'Shella Padukas' of Swamy are here.

***********

What is Datta Jayanthi?.
It is the day on which Datta namaka paramathma made his incarnation.

This is the sixth incarnation of Srihari.

Who are his parents?
Sage Brahmaputra Atri and Kardramaputri Anusuya are his parents.

It is said that Dattatreya is one God only with Trimurthi sannidhana. Is it true?
No, Dattatreya roopa is not one god. They are three Gods – Vishnu, Brahma (Chandra) and Maheshwara separately. Anasuya gave birth to three male children. They are Datta-Vishnu; Doorvasa–Shiva; and Soma-Chandra (With Brahma’s avesha). As Brahma is not having any avatara, and as there is avesha of Brahma in Chandra, Chandra was born with Brahma Sannidhana.
But we find that there is only one roopa – i.e., Trimoorthi roopa with three heads, six hands and with four dogs to his side.

Ans :This is entire different from Bhaghavatha Shastra as in the Bhagavatha Grantha it is clearly said that they are three different gods’ incarnations in the form of Datta, Chandra and Doorvasa. We have the concept that Datta is Bhagavan Vishnu only as per Madhwa Shastra.

What is the definition of “Datta”? What are his teachings?
Ans: “Datta” means not only “that which is given”, but also as the ideal of “giving” without desire for reward, i.e. selfless giving. This roopa is Yogapravarthaka roopa.

As he was pleased by the tapassu of Atri Rushi and born to them – and he gave himself to them, he is called as “Datta”, he is called as “Atreya” as he is the putra of Atri Rushigalu, he is called as “Dattatreya” as he is Datta | Atreya = Dattatreya.
The whole life of Dattatreya shows us that this “giving” selflessly is the true renunciation/sacrifice. The significance of this sacrifice is stated in the Dattatreya Upanishad where the Lord says, “Not by action, not by self, but by tyaaga alone is immortality attained. The true sacrifice is the giving up of “I” and “me”, not the mere abandoning of duties. Living a selfless life require giving up one’s ego. That is what Lord Dattatreya describes as true sacrifice.

Que : How Datta roopi Paramathma’s incarnation was available to us?
Ans : Once Sage Atri did Tapascharya on the Ruksha Parvatha (Kula Mountain). He was doing pranayama standing on a single foot, with Vaywahara (i.e., eating only air as his food). He did the tapas for 100 years. His great tapas disturbed the entire world. The prayanayaabhyasa agni which came out of his shiras (head) was so strong that the entire world was burning. Pleased with the tapas of Atri Rushigalu, the three lokapalakaas Parabrahma-Brahma and Maheshwara, came before the sage, alongwith the apsaraas, sages, gandharvaas, siddhaas, vidyadharaas, etc.

Que : What is Srimadacharyaru’s opinion on Dattatreya?
Ans : Sri Madhwacharyaru in his Bhagavatha Tatparya Nirnaya Grantha has given an illustration of “DattatrEya Yoga”. Srimadacharyaru has clarified clearly that the Dattatreya roopa is sakshaat Vishnu roopa.
There are some versions about Dattatreya which tells that “Dattatreya is only one son, born with tri-roopa, 6 heads, 6 hands and with 4 dogs next to Datta” is not available anywhere in Bhagavatha. It is clearly mentioned in Bhagavatha that they are three different roopaas clearly with Chandra(Brahma’s avesha), Doorvasa(Rudradevaru) and Datta (Sakshat Parabrahma Srihari).
He gave us “anvikshikI” named sattarka and preached Alarka Rushi and Prahlaadarajaru.

Que : Any follower of Datta roopa?
Ans : There are many followers of Datta roopa paramathma. Chakravarthi Kartaveeryarjuna is one of the famous shishya of Dattreya and he was a Dattopaasaka and because of Dattopasana itself he had got 1000 hands power. Alarka Rushi and Prahlada Raja (Bhagavatha prathama skandha adhyaaya 3.11), Yaduraaja & Karthaveeryarjuna are his disciples (bhagavatha 2.7.04)
Bhagavatha Shloka which tells about the Avatara of Datta roopa.
अत्रे: पत्न्यनसूय त्रीन् जज्ञे सुयशस: सुतान् ।
दत्तं दूर्वाससं सोममात्मेशब्रह्मसंभवान् ॥
(चतुर्धस्कंध अध्याय १.१५)
atrE: patnyanasUya trIn jaj~JnE suyashasa: sutaan |
dattam dUrvaasasam sOmamaatmEshabrahmasambhavaan|
(Bhagavatha chaturdhaskandha adhyaaya 1.15)
— Atri Rushi’s patni Anasuya gave birth to three male children. They are Datta – Sakshaat Vishnu, Doorvasaru – Shiva’s incarnation and Soma (Chandra) with Brahma’s Avesha.

When Sage Atri opened his eye he saw Trishooladari Shiva, Hamsarooda Kamandaladhari Brahma, and Shanka Chakra Gadha padmadhari Garuda Vahana Srihari, he was very happy, did the sastanga namaskara, did Arghyapadyaachamana.

विश्वीद्भवस्थितिलयेषु विभज्यमानै:
मायागुणैरनुगुणं प्रगृहीतदेहा: ।
हे ब्रह्मविष्णुगिरिशा: प्रणतोस्म्रुहं व:
तेभ्य: क एव भवतां म इहोपहूत: ।

vishvIdbhavasthitilayEShu vibhajyamaanai:|
maayaaguNairanuguNam pragRuhItadEhaa: |
hE brahmaviShNugirishaa: praNatOsmruham va:|
tEbhya: ka Eva bhavataam ma ihOpahUta: |
(chaturdhaskaMdha adhyaaya 1.27)

Then Atri Rushigalu told :My sastaanga namaskaaraas to Trimurthees. You three are doing the Srusti, Stithi, and Samhaara, and are the pravartakaas for Satva, Rajas and Tamo Guna. Whom among you have been called by my Penance?

एको मयेह भगवान् विबुधप्रधान: |
चित्तीकृत: प्रजननाय कथं नु यूयम् ।
अत्रागतास्तनुभृतां मनसोपि दूरा:
बॄत प्रसीदत महानतिविस्मयो मे ।
(भागवत चतुर्थ स्कंध १.२८)

EkO mayEha bhagavaan vibudhapradhaanaK|
chittIkRuta: prajananaaya katham nu yUyam |
atraagataastanubhRutaam manasOpi dUraa:|
bRUta prasIdata mahaanativismayO mE |
(bhaagavata chaturtha skandha 1.28)

I did the penance for getting a son, but you three have come here which I am surprised, please solve my suspense as to why you all three have come together when I was expecting only one among to come?


Then Trimoorthees told smilingly – You have done the penance with the sankalpa of getting all three of us your sons. That is why in order no prove your satsankalpa we have come here and that you will have three children who are equal to us in Swaroopa and bhinnaamsha.
As such Chandra was born with the amsha of Brahma (Brahma does not avatara, so Chandra in whom his Brahma’s avesha is there was born), Vishnu born as Yogeshwara DattatrEya & Shankara was born as Doorvasa.


ShaShThamatrErapatyatvaM vRuta: praaptOnasUyayaa |
anvIkShIkImalarkaaya prahlaadibhya Uchivaan |
(bhaagavata prathamaskaMdha adhyaaya 3.11)

ಷಷ್ಠಮತ್ರೇರಪತ್ಯತ್ವಂ ವೃತ: ಪ್ರಾಪ್ತೋನಸೂಯಯಾ |
ಅನ್ವೀಕ್ಷೀಕೀಮಲರ್ಕಾಯ ಪ್ರಹ್ಲಾದಿಭ್ಯ ಊಚಿವಾನ್ |
(ಭಾಗವತ ಪ್ರಥಮಸ್ಕಂಧ ಅಧ್ಯಾಯ ೩.೧೧)

षष्ठमत्रेरपत्यत्वं वृत: प्राप्तोनसूयया ।
अन्वीक्षीकीमलर्काय प्रह्लादिभ्य ऊचिवान् ।
(भागवत प्रथमस्कंध अध्याय ३.११)

He is the sixth incarnation of Srihari. Born to please Atri Rushi and Anasuya. As he gave himself he is called as “Datta” and as he was born as the son of Atri Rushi he is Atreya, and Datta + Atreya = Dattatreya, and he plreached AnvikShikI named sattarka to alarka Rushi and prahlaadigalu.

Atri Means – One he is free from Trividhanaraka viz., Kama-krodha-lobha.
Anasuya Means – one who is without any Asooya. When pathi is atri and patni is anasuya, we need not be surprised with the avatara of Srihari in them as Datta. We must also be without the three – kama-krodha-lobha. Then our wife will be Buddhi. Then with we will be free from asooya – Definitely Datta will be pleased on us and he will come to us also. – Quotes from Bhagavatha anuvadha of Chaturvedi Vedavyasachar.

अत्रेरपत्य मभिकांक्षत आह तुष्टो
दत्तो मयाहमिति यद्भगवान् स दत्त: ।
यत्पादपंकजपरागपवित्रदेहा
योगर्धिमापुरमयों यदु हैहयद्या:।

dattO mayaahamiti yadbhagavaan sa datta: |
yatpaadapaMkajaparaagapavitradEhaa
yOgardhimaapuramayOM yadu haihayadyaa:|

ಅತ್ರೇರಪತ್ಯ ಮಭಿಕಾಂಕ್ಷತ ಆಹ ತುಷ್ಟೋ
ದತ್ತೋ ಮಯಾಹಮಿತಿ ಯದ್ಭಗವಾನ್ ಸ ದತ್ತ: |
ಯತ್ಪಾದಪಂಕಜಪರಾಗಪವಿತ್ರದೇಹಾ
ಯೋಗರ್ಧಿಮಾಪುರಮಯೋಂ ಯದು ಹೈಹಯದ್ಯಾ:|

(Bhagavatha dwiteeya skandha adhyaya 7.04)

Pleased with the tapas of Atri Rushigalu, Sri hari born in AnasUyadevi as Datta. With the paramathma’s paadadooli, yaduraaja and kaartaveeryurjanadi kings got yoga siddhi from Dattavataara.
**********

ದತ್ತಾವತಾರದ ಹುಟ್ಟು Dattatreya


ಅತಿಥಿ ಸತ್ಕಾರದ ಫಲವನ್ನು ಅನುಸೂಯೆಯ ಮಗನಾಗಿ ಜನಿಸಿದ ವಿಷ್ಣುವಿನ ದತ್ತಾವತಾರದಿಂದ ನಾವು ಅರಿಯಬಹುದು.
ಅತ್ರಿಮುನಿಯ ಪತ್ನಿ ಅನುಸೂಯೆಯ ಪತಿವ್ರತಾಶಕ್ತಿಗೆ ದೇವಾನುದೇವತೆಗಳೇ ತಲೆಬಾಗಿದ್ದರು. ಈ ವಿಷಯವನ್ನು ನಾರದರು ವಿಷ್ಣುವಿನಲ್ಲಿ ತಿಳಿಸಿದಾಗ ಲಕ್ಷ್ಮೀದೇವಿಯು ಅನುಸೂಯೆಯ ಪತಿವ್ರತಾಶಕ್ತಿಯನ್ನು ಪರೀಕ್ಷಿಸಿ ಪ್ರಪಂಚಮುಖಕ್ಕೆ ತೋರಬೇಕೆಂದು ಕೇಳಿಕೊಳ್ಳುತ್ತಾಳೆ. ಇದಕ್ಕೊಪ್ಪಿದ ವಿಷ್ಣುವು ಶಿವ ಮತ್ತು ಬ್ರಹ್ಮನನ್ನು ಒಡಗೂಡಿಕೊಂಡು ವಟುಗಳ ವೇಷದಲ್ಲಿ ಅನಸೂಯೆಯ ಮನೆಗೆ ಬರುತ್ತಾರೆ. ನಾವು ಹಸಿದಿರುತ್ತೇವೆ ಭೋಜನವನ್ನು ನೀಡುವಂತೆ ಕೇಳಿದಾಗ ಅನುಸೂಯೆ ಅತಿಯಾದ ಆನಂದದಿಂದ ಭೋಜನವನ್ನು ಸಿದ್ಧಪಡಿಸಿ ಬಡಿಸುತ್ತಾಳೆ. ಆದರೆ ಈ ಮೂವರೂ “ನೀನು ವಿವಸ್ತ್ರೆಯಾಗಿ ಬಡಿಸಿದರೆ ಮಾತ್ರ ಊಟವನ್ನು ಸ್ವೀಕರಿಸುತ್ತೇವೆ” ಎಂದು ಹೇಳಿದಾಗ ಅನುಸೂಯೆಗೆ ಇವರು ಸಾಮಾನ್ಯ ವಟುಗಳಲ್ಲ ಅವತಾರಪುರುಷರು ಎಂಬುದು ಮನದಟ್ಟಾಗಿ, ಅಲ್ಲದೆ ಅತಿಥಿಗಳನ್ನು ನೋಯಿಸುವುದು ಉಚಿತವಲ್ಲ ಎಂದು ಬಗೆದು, ಅವರನ್ನು ಮಕ್ಕಳೆಂಬ ಭಾವದಲ್ಲಿ ಪತಿಯ ಪಾದೋದಕವನ್ನು ಅವರಿಗೆ ಪ್ರೋಕ್ಷಿಸಿ, ಅವರ ಇಷ್ಟದಂತೆ ಬಡಿಸಲು ಅಣಿಯಾಗುತ್ತಿದ್ದಂತೆ ಆ ಮೂವರೂ ಅಲ್ಲಿಯೇ ಪುಟ್ಟ ಶಿಶುಗಳಾಗಿ ಬಿಟ್ಟರು. ಅನುಸೂಯೆ ಪಾತಿವ್ರತದ ಶಕ್ತಿಯೇ ಇದಕ್ಕೆ ಕಾರಣ. ಆ ಮೂರೂ ಮಕ್ಕಳನ್ನು ಹಾಲುಣಿಸಿ, ತೊಟ್ಟಿಲಲ್ಲಿ ತೂಗಿ ಮುದ್ದಿಸಿದಳು. ಅತ್ರಿಮುನಿಯು ಮನೆಗೆ ಬಂದಾಗ ಆತನಿಗೆ ನಡೆದುದೆಲ್ಲವನ್ನೂ ವಿವರಿಸಿದಳು. ತ್ರಿಮೂರ್ತಿಗಳ ಮಡದಿಯರು ತಮ್ಮ ಗಂಡಂದಿರನ್ನು ಹುಡುಕಿಕೊಂಡು ಅನಸೂಯೆಯ ಮನೆಗೆ ಬಂದರು. ಮಗುವಾಗಿದ್ದ ತಮ್ಮ ಪತಿಯರನ್ನು ಮತ್ತೆ ಹಿಂದಿನ ರೂಪಕೊಡುವಂತೆ ಅನುಸೂಯೆಯಲ್ಲಿ ಕೇಳಿಕೊಂಡರು. ಮತ್ತೆ ಅನುಸೂಯೆಯ ಪತಿಯ ಪಾದೋದಕವನ್ನು ಪ್ರೋಕ್ಷಿಸಿದಾಗ ತ್ರಿಮೂರ್ತಿಗಳು ಮೊದಲಿನ ರೂಪಕ್ಕೆ ಬಂದರು. ಅನುಸೂಯೆಯ ಆತಿಥ್ಯದಿಂದ ಸಂಪ್ರೀತರಾದ ತ್ರಿಮೂರ್ತಿಗಳು ಅನುಸೂಯೆ ಅಪೇಕ್ಷೆಯಂತೆ ಅವಳ ಮಕ್ಕಳಾಗಿ ಜನಿಸಿದರು. ಅವರಿಗೆ ಚಂದ್ರ, ದತ್ತ ಮತ್ತು ದೂರ್ವಾಸ ಎಂಬ ಹೆಸರನ್ನಿಟ್ಟಳು. ಬ್ರಹ್ಮ ರೂಪವಾದ ಚಂದ್ರ ಮತ್ತ ಶಿವರೂಪನಾದ ದೂರ್ವಾಸ ತಮ್ಮ ದಿವ್ಯಾಂಶವನ್ನು ವಿಷ್ಣುರೂಪಿಯಾದ ದತ್ತನಲ್ಲಿ ಇಟ್ಟು, ಚಂದ್ರನು ಚಂದ್ರಮಂಡಲಕ್ಕೂ ದುರ್ವಾಸನು ತಪಸ್ಸಿಗೂ ಹೋದರು. ಸ್ವಯಂ ಪರಾಶಕ್ತಿಯಾದ ಭಗವಂತನು ಪೂರ್ಣಾಂಶದಿಂದ ತನ್ನನ್ನು ತಾನೇ ಅತ್ರಿ ಅನುಸೂಯೆಯರಿಗೆ ಕೊಡಲ್ಪಟ್ಟುದರಿಂದ ದತ್ತ ಎಂಬ ಹೆಸರು ಪ್ರಚುರವಾಯಿತು. ಅತ್ರಿಯ ಮಗನಾದ ಕಾರಣ ಆತ್ರೇಯನಾಗಿ ಮುಂದೆ ದತ್ತಾತ್ರೇಯ ಎಂದು ಪ್ರಸಿದ್ಧಿ ಪಡೆದ ಭಗವದ್ರೂಪ. ಹೀಗೆ ಭಗವಂತನ ತ್ರಿಮೂರ್ತಿಗಳಿಂದಾದ ದತ್ತಾವತಾರಕ್ಕೆ ಮೂಲವಾದುದು ಅತಿಥಿ ಸತ್ಕಾರ.
ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂತಹ ಕಷ್ಟವೆದರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ ದತ್ತಾತ್ರೆಯನ ಉದಯವಾಯಿತು. ಹಾಗಾಗಿಯೇ ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿಬರುವುದೆಂದು ವೇದ, ಪುರಾಣಗಳು ಹೇಳುತ್ತವೆ. ಹಾಗಾಗಿ ಇಂತಹ ಸುಸಂಸ್ಕಾರ ಎಲ್ಲಾ ಕಾಲಗಳಲ್ಲೂ ಚಿರಾಯುವಾಗಿರಲಿ.

ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಇಂದಿಗೂ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. “ಅತಿಥಿ ದೇವೋಭವ” ಎಂಬ ಅತಿಥಿಯೇ ದೇವರು ಅಥವಾ ದೇವರಿಗೆ ಸಮನಾದವನು ಎಂಬ ಮಧುರವಾದ ಸಿದ್ಧಾಂತವನ್ನು ಅನುಸರಿಸುವ ಸಂಸ್ಕಾರ ಹಿಂದಿನಿಂದಲೂ ಬಂದುದಾಗಿದೆ. ಅತಿಥಿಯೊಬ್ಬನ ಸಂತೃಪ್ತಿಯೇ ನಮ್ಮ ಸಂತೋಷ ಎಂದುಕೊಂಡವರು ನಾವು. ಈ ಅತಿಥಿ ಸತ್ಕಾರದಿಂದಾಗಿ ದೇವರ ಸಾಕ್ಷಾತ್ಕಾರ ಹೇಗೆ ಆಗಿದೆ ಎಂಬುದನ್ನು ದತ್ತಾವತಾರದ ಹುಟ್ಟು ತಿಳಿಸಿಕೊಡುತ್ತದೆ.
ವೇದದಲ್ಲೊಂದು ಉಕ್ತಿಯಿದೆ.
ಯತ್ರಾತಿಥೀನಾಂ ಸೇವನಂ ಯಥಾವತ್ ಕ್ರಿಯತೇ |
ತತ್ರ ಸರ್ವಾಣಿ ಸುಖಾನಿ ಭವಂತೀತಿ ||
ಅಂದರೆ ಯಾವ ಕ್ರಿಯೆ ಅಥವಾ ಕರ್ಮದಲ್ಲಿ ಅತಿಥಿಗಳ ಸೇವನೆಯು ಯಥಾವತ್ತಾಗಿ ಮಾಡಲಾಗುತ್ತದೆಯೋ ಅಲ್ಲಿ ಸಮಸ್ತ ಸುಖಗಳೂ ಉಂಟಾಗುತ್ತದೆ ಎಂದರ್ಥ. ಅತಿಥಿ ಸೇವೆಗೆ ಅಷ್ಟೊಂದು ಶಕ್ತಿಯಿದೆ. ಇದರಿಂದಾಗುವ ಫಲವೆಂದರೆ ಸುಖಪ್ರಾಪ್ತಿ. ಸುಖಪ್ರಾಪ್ತಿಯಾದವನಿಗೆ ಶತಾಯುಷ್ಯವೂ ಕ್ಷಣಾರ್ಧದಲ್ಲಿ ಕಳೆದುಹೋಗುತ್ತದೆ.
****

ದತ್ತಾತ್ರೇಯ ಜಯಂತಿಯನ್ನು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಮಾರ್ಗಶೀರ್ಷ ಅಥವಾ ಮಾರ್ಗಶಿರ ಮಾಸದ ಪೂರ್ಣಿಮಾ ತಿಥಿಯಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಭಗವಾನ್ ದತ್ತಾತ್ರೇಯರು ಜನಿಸಿದರು ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ದತ್ತ ಜಯಂತಿ ಎಂದು ಕರೆಯುತ್ತಾರೆ.  
                                                                                                                                    ​
ದತ್ತಾತ್ರೇಯ ಜಯಂತಿ ಮಹತ್ವ:

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ದತ್ತಾತ್ರೇಯ ಮೂರು ಪ್ರಮುಖ ಹಿಂದೂ ಪುರುಷ ದೇವರುಗಳ ಸಮ್ಮಿಲನವನ್ನು ಸಂಕೇತಿಸುತ್ತಾರೆ. ಅವುಗಳೆಂದರೆ, ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಪೋಷಕ) ಮತ್ತು ಮಹೇಶ್ವರ (ಭಗವಾನ್ ಶಿವ, ವಿನಾಶಕ). ಕೆಲವು ಸ್ಥಳಗಳಲ್ಲಿ ಭಗವಾನ್ ದತ್ತಾತ್ರೇಯನನ್ನು ವಿಷ್ಣುವಿನ ಅವತಾರವೆಂದೂ ಪರಿಗಣಿಸಲಾಗಿದೆ.

​ದತ್ತಾತ್ರೇಯ ಜಯಂತಿ ಆಚರಣೆ:

ದಕ್ಷಿಣ ಭಾರತದಲ್ಲಿ ದತ್ತಾತ್ರೇಯರಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಮಹಾರಾಷ್ಟ್ರದಲ್ಲಿ ಅವರನ್ನು ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಗವಾನ್ ದತ್ತಾತ್ರೇಯರಿಗೆ ಮೂರು ತಲೆಗಳು ಮತ್ತು ಆರು ತೋಳುಗಳಿವೆ. ದತ್ತಾತ್ರೇಯ ಜಯಂತಿಯ ದಿನದಂದು ಅವರ ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ನೆಲೆಗೊಂಡಿರುವ ಭಗವಾನ್ ದತ್ತಾತ್ರೇಯ ದೇವಾಲಯಗಳಲ್ಲಿ ಈ ದಿನವನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ನಿರ್ದಿಷ್ಟ ದಿನದಂದು ಉಪವಾಸವನ್ನು ಆಚರಿಸುವ ಮತ್ತು ದತ್ತಾತ್ರೇಯನನ್ನು ಸಂಪೂರ್ಣ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪೂಜಿಸುವವರಿಗೆ ದತ್ತಾತ್ರೇಯರು ಸಂತೋಷ, ಆಸ್ತಿ ಮತ್ತು ಬಯಸಿದ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾಗಿದೆ.

ದತ್ತಾತ್ರೇಯ ಜಯಂತಿ ಕಥೆ:
ಹಿಂದೂ ಪುರಾಣಗಳ ಪ್ರಕಾರ, ದತ್ತಾತ್ರೇಯನು ಅತ್ರಿ ಮತ್ತು ಅನಸೂಯ ಋಷಿ ದಂಪತಿಗಳ ಮಗ. ಸತಿ ಅನಸೂಯಾ ಬಹಳ ಸದ್ಗುಣಿಯಾಗಿದ್ದಳು. ಒಮ್ಮೆ ಪುರುಷ ತ್ರಿಮೂರ್ತಿಗಳ ಪತ್ನಿಯರು, ತ್ರಿಮೂರ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ದೇವಿಯು ಅನುಸೂಯಳ ಪತಿನಿಷ್ಠೆಯ ಬಗ್ಗೆ ಅಸೂಯೆಪಟ್ಟರು ಮತ್ತು ಅವಳ ಸದ್ಗುಣವನ್ನು ಪರೀಕ್ಷಿಸಲು ತಮ್ಮ ಗಂಡಂದಿರನ್ನು ಕೇಳಿದರು.

ಅದರಂತೆ, ಮೂರು ದೇವರುಗಳು ಸಾಧುಗಳ (ತಪಸ್ವಿಗಳು) ರೂಪದಲ್ಲಿ ಕಾಣಿಸಿಕೊಂಡರು ಮತ್ತು ಅವಳ ಪುಣ್ಯವನ್ನು ಪರೀಕ್ಷಿಸಲು ಭಿಕ್ಷೆಯನ್ನು ಕೇಳಿದರು. ಭಿಕ್ಷೆಯಲ್ಲಿ ಅವರು ಬಟ್ಟೆಯಿಲ್ಲದೆ ಬೆತ್ತಲೆ ಸ್ಥಿತಿಯಲ್ಲಿ ಆಹಾರವನ್ನು ನೀಡಿದರೆ ಮಾತ್ರ ಭಿಕ್ಷೆಯನ್ನು ಸ್ವೀಕರಿಸುವುದಾಗಿ ಷರತ್ತನ್ನು ಹಾಕಿದರು. ತಾಯಿ ಅನಸೂಯಾ ಸಾಧ್ವಿಗಳ ಈ ಮಾತುಗಳನ್ನು ಕೇಳಿ ಆತಂಕಗೊಂಡಳು ಮತ್ತು ಉದ್ವಿಗ್ನಳಾದಳು. ಆಗ ಅನಸೂಯಳು ತನ್ನ ಕೈಯಲ್ಲಿ ಪವಿತ್ರ ನೀರನ್ನು ತೆಗೆದುಕೊಂಡು ಆ ಮೂವರು ಸಾಧುಗಳ ಮೇಲೆ ಪ್ರೋಕ್ಷಿಸಿದಳು. ನಂತರ ಆ ಮೂವರು ಸಾಧ್ವಿಗಳು ಶಿಶುಗಳಾಗಿ ಪರಿವರ್ತನೆ ಮಾಡಿ ಶಿಶುಗಳಿಗೆ ನಗ್ನಳಾಗೇ ಹಾಲುಣಿಸುತ್ತಾಳೆ.

ಸತಿ ಅನಸೂಯಾಳ ಪತಿ ಅತ್ರಿ ಮಹರ್ಷಿಯು ತನ್ನ ಆಶ್ರಮಕ್ಕೆ ಹಿಂತಿರುಗಿದಾಗ, ತಾಯಿ ಅನಸೂಯಾ ಅವನಿಗೆ ನಡೆದ ವಿಚಾರವನ್ನೆಲ್ಲಾ ಹೇಳಿದಳು, ಅವನು ಈಗಾಗಲೇ ತನ್ನ ಅತೀಂದ್ರಿಯ ಶಕ್ತಿಗಳ ಮೂಲಕ ನಡೆದ ಘಟನೆಗಳನ್ನೆಲ್ಲಾ ತಿಳಿದುಕೊಂಡನು. ಅವರು ಮೂರು ಶಿಶುಗಳನ್ನು ತಬ್ಬಿಕೊಂಡರು. ಸಮಯ ಮೀರಿದರೂ ತ್ರಿಮೂರ್ತಿ ದೇವರುಗಳು ಹಿಂತಿರುಗದ ಕಾರಣ ಅವರ ಹೆಂಡತಿಯರು ಆತಂಕಕ್ಕೊಳಗಾದರು ಮತ್ತು ಅವರು ಅನಸೂಯೆಯ ಬಳಿಗೆ ಹೋದರು. ಮೂರು ದೇವತೆಗಳು ಅವಳ ಕ್ಷಮೆಗಾಗಿ ಬೇಡಿಕೊಂಡರು ಮತ್ತು ತಮ್ಮ ಗಂಡಂದಿರನ್ನು ಮರಳಿ ಕಳುಹಿಸುವಂತೆ ಮನವಿ ಮಾಡಿದರು. ಅನಸೂಯಾ ಮನವಿಯನ್ನು ಸ್ವೀಕರಿಸಿ ನಂತರ ತ್ರಿಮೂರ್ತಿಗಳು ಅತ್ರಿ ಮತ್ತು ಅನಸೂಯರ ಮುಂದೆ ತಮ್ಮ ನೈಸರ್ಗಿಕ ರೂಪದಲ್ಲಿ ಕಾಣಿಸಿಕೊಂಡರು ಮತ್ತು ಅವರಿಗೆ ದತ್ತಾತ್ರೇಯ ಎಂಬ ಮಗನನ್ನು ವರವಾಗಿ ನೀಡಿದರು.

ದತ್ತಾತ್ರೇಯ ಮಂತ್ರ:
ಆದೌ ಬ್ರಹ್ಮ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ |

ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||

ಬ್ರಹ್ಮಜ್ಞಾನಮಯೀ ಮುದ್ರ ವಸ್ತ್ರೇ ಚಾಕಾಶಭೂತಲೇ |

ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ||

ದತ್ತಾತ್ರೇಯ ಜಯಂತಿ ಪೂಜೆ ವಿಧಾನ:
ಈ ದಿನ ಭಕ್ತರು ಮುಂಜಾನೆಯೇ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು.

ದೇವಸ್ಥಾನಕ್ಕೆ ಭೇಟಿ ನೀಡಬೇಕು ಮತ್ತು ವಿಶೇಷ ಭಗವಾನ್ ದತ್ತಾತ್ರೇಯ ಪೂಜೆಯನ್ನು ಧೂಪದ್ರವ್ಯ, ದೀಪಗಳು, ಹೂವುಗಳು, ಕರ್ಪೂರ ಮತ್ತು ಸಿಹಿತಿಂಡಿಗಳೊಂದಿಗೆ ಮಾಡಬೇಕು.

ಪೂರ್ಣಿಮಾದ ಈ ಮಂಗಳಕರ ದಿನದಂದು ಜನರು ಭಗವಾನ್ ವಿಷ್ಣುವನ್ನು ಪೂಜಿಸಬೇಕು.

ಧರ್ಮಮಾರ್ಗವನ್ನು ಪಡೆಯಲು ದತ್ತಾತ್ರೇಯ ದೇವರ ವಿಗ್ರಹಗಳನ್ನು ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಪೂಜಿಸಬೇಕು.

ದೇವಾಲಯಗಳನ್ನು ಅಲಂಕಾರಗೊಳಿಸಿ, ಎಲ್ಲಾ ದೇವಾಲಯಗಳಲ್ಲಿ ಭಜನೆ - ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ.

ಕೆಲವು ಸ್ಥಳಗಳಲ್ಲಿ, ಜನರು ಅವಧೂತ ಗೀತೆ ಮತ್ತು ಜೀವನ್ಮುಕ್ತ ಗೀತೆಗಳನ್ನು ಪಠಿಸುತ್ತಾರೆ.smk
***

ದತ್ತ ಜಯಂತಿ – ಮಾರ್ಗಶಿರ ಹುಣ್ಣಿಮೆ by Narahari Sumadhwa

ದತ್ತ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

ಕೆಲವರು ದತ್ತಾತ್ರೇಯ ಮತ್ತು ಕೆಲವರು ದತ್ತಾತ್ರಯ ಎನ್ನುತ್ತಾರೆ. ದತ್ತನು ಅತ್ರಿ ಋಷಿಗಳ ಪುತ್ರ, ಆದ್ದರಿಂದಲೇ ಅವನನ್ನು ದತ್ತಾತ್ರೇಯ ಎನ್ನುತ್ತಾರೇ ಹೊರತು ಮೂರು ರೂಪಗಳು ಒಂದಾದ ದತ್ತಾತ್ರಯವಲ್ಲ.

ದತ್ತಾತ್ರೇಯನ ವರ್ಣನೆ ಮುಖ್ಯವಾಗಿ ಶ್ರೀಮಧ್ಭಾಗವತ ನಾಲ್ಕನೇ ಸ್ಕಂಧದಲ್ಲಿ ಲಭ್ಯವಿದೆ.

ಅತ್ರಿ ಮುನಿಗಳು ಕರ್ದಮ ಪ್ರಜಾಪತಿಯ ಪುತ್ರಿಯಾದ ಅನುಸೂಯಳನ್ನು ವರಿಸಿದರು. ಬ್ರಹ್ಮನ ಆದೇಶದಂತೆ ಸಂತತಿ ಬೆಳೆಸಲು ಪತಿಪತ್ನಿಯರೂ ಋಕ್ಷ ಪರ್ವತದಲ್ಲಿ ನಿರ್ವಿಂಧ್ಯ ಎಂಬ ನದೀ ತೀರ ತಲುಪಿದರು. ಅತ್ರಿ ಋಷಿಗಳು ಒಂದೇ ಪಾದದಲ್ಲಿ ನಿಂತು ವಾಯ್ವಾಹಾರರಾಗಿ ನೂರು ವರ್ಷಗಳ ಕಾಲ ತಪಗೈಯುತ್ತಿದ್ದಾಗ, ಅನುಸೂಯ ಸಹಾಯ ಮಾಡುತ್ತಿದ್ದಳು. ಆಗ ಅವರ ಶಿರದಿಂದ ಉತ್ಪನ್ನವಾದ ಅಗ್ನಿ ಪ್ರಖರವಾಗಿತ್ತು. ಅವರ ತಪಸ್ಸಿಗೆ ಮೆಚ್ಚಿದ ಲೋಕಪಾಲಕರಾದ ಬ್ರಹ್ಮ ವಿಷ್ಣು ಮಹೇಶ್ವರರು ಹಂಸ, ಗರುಡ ಮತ್ತು ವೃಷಭ ವಾಹನರಾಗಿ ಮೂವರೂ ಒಟ್ಟಿಗೆ ಪ್ರತ್ಯಕ್ಷರಾದರು. ಅತ್ರಿ ಋಷಿಗಳಿಗೆ ಆಶ್ಚರ್ಯ. ತಾವು ತಪಗೈದಿದ್ದು ಒಬ್ಬರನ್ನು ಕುರಿತಾದರೂ ಬಂದವರು ಮೂವರು. ಮಹದಾನಂದ ವಾಯಿತು. ಆಗ ವಿಷ್ಣು ಬ್ರಹ್ಮ ರುದ್ರರು ಅನುಗ್ರಹಿಸುತ್ತಾನೆ. ನಿಮಗೆ ನಮ್ಮ ಸ್ವರೂಪಾಂಶರಾದ ಜಗತ್ಪ್ರಸಿದ್ದರಾಗುವ ಮೂವರು ಗಂಡು ಮಕ್ಕಳು ಜನಿಸುವರು. ಅವರಿಂದ ನಿಮಗೆ ಯಶಸ್ಸಾಗುವುದು ಎಂದರು.
 

ಅದರಂತೆ ಅತ್ರಿ ಅನುಸೂಯರಲ್ಲಿ ಅವತರಿಸಿದ ಮಹಾವಿಷ್ಣುವು “ದತ್ತ” ಎಂಬ ರೂಪದಿಂದಲೂ, ಚತುರ್ಮುಖನಿಗೆ ಅವತಾರವಿಲ್ಲದ್ದರಿಂದ “ಚಂದ್ರ”ನಲ್ಲಿ “ಸೋಮ” ಎಂಬ ಆವೇಶದಿಂದಲೂ, ಇನ್ನು ರುದ್ರನೇ ಸ್ವಯಂ “ದುರ್ವಾಸ” ನಾಗಿ ಅವತರಿಸಿದ್ದಾರೆ. 

ಅತ್ರಿ ಋಷಿಗಳು ತಪಸ್ಸು ಮಾಡಿದಾಗ ಬಂದವರು ಮೂರು ದೇವತೆಗಳು. ಅವರು ನಮಸ್ಕಾರ ಮಾಡಿ ಸ್ತೋತ್ರ ಮಾಡಿದ್ದು ಕೂಡ ಮೂವರು ದೇವತೆಗಳನ್ನು.

ಅವರಿಗೆ ವರ ಕೊಟ್ಟಿದ್ದು ಕೂಡ ಮೂರು ದೇವತೆಗಳು.

ಅತ್ರಿ ಅನುಸೂಯರಿಗೆ ಜನಿಸಿದ ಮಕ್ಕಳು ಕೂಡ ಮೂರು ದೇವತೆಗಳೇ. ಇದ್ದದ್ದು ಮೂವರೂ ಪ್ರತ್ಯೇಕ ಪ್ರತ್ಯೇಕವಾಗಿಯೇ.
 
ದತ್ತತ್ರೇಯರು ಅವತರಿಸಿದ್ದು “ಅತ್ರಿ” ಋಷಿಗಳಲ್ಲಿ

ಅಂದರೆ ನಾವು ಕಾಮ, ಕ್ರೀಧ, ಲೋಭವೆಂಬ ಮೂರನ್ನು “ತ್ರಿ” ಬಿಡಬೇಕು. ಈ ಮೂರನ್ನೂ ಬಿಟ್ಟವರು ಅತ್ರಿ ಋಷಿಗಳು ಮತ್ತು ಜೊತೆಗೆ “ಅಸೂಯೆ” ಬಿಡಬೇಕು, ಆವಾಗ “ಅನುಸೂಯ” ಆಗುತ್ತೀರಿ.

ದತ್ತಾತ್ರೇಯನಿಗೆ ಯದುರಾಜ, ಅಲರ್ಕ ಋಷಿ, ಪ್ಲಹ್ಲಾದರಾಜ ಮತ್ತು ಕಾರ್ತವೀರ್ಯಾರ್ಜುನ ಎಂಬ ಶಿಷ್ಯರಿದ್ದರು. ಕಾರ್ತವೀರ್ಯಾರ್ಜುನನು ದತ್ತಾತ್ರೇಯನ ಅನುಗ್ರಹದಿಂದ ಸಹಸ್ರಬಾಹುಗಳ ಪಡೆದಿದ್ದು, ಬೇಕೆಂದಾಗ ಮಾತ್ರ ಸಹಸ್ರಬಾಹು ಉಪಯೋಗಿಸುತ್ತಿದ್ದ.

ದತ್ತಾತ್ರೇಯನು ಸಮಸ್ತ ಭಾರತ ಭೂಮಿಗೆ ಸನ್ಮಂಗಳವನ್ನುಂಟು ಮಾಡಲಿ

Datta Jayanti

Q 1    “ದತ್ತಾತ್ರಯ” ಅಥವಾ “ದತ್ತಾತ್ರೇಯ” ಯಾವುದು ಸರಿ ?
ದತ್ತಾತ್ರೇಯ ಸರಿ. ಏಕೆಂದರೆ ದತ್ತನು ಅತ್ರಿ ರುಷಿಗಳ ಪುತ್ರ, ಅತ್ರಿ ರುಷಿಗಳ ಪುತ್ರನಾದ್ದರಿಂದ ದತ್ತತ್ರೇಯನೇ ಹೊರತು, ಮೂರು ರೂಪಗಳು ಒಂದರಲ್ಲಿಲ್ಲ.

Q. Dattaatreya or Dattatraya.  Which is correct,   

Answer :   It is Dattatreya.    Datta + Atreya.    As he is the son of Sage Atri, he is called as Dattatreya.   But some have quoted him as Dattatraya  with three roopaas.
His name is Datta.


Q. What is Datta Jayanthi?.    “ದತ್ತ” ರೂಪದಿಂದ ಪರಮಾತ್ಮ ಅವತಾರ ಮಾಡಿದ ದಿನವನ್ನು ದತ್ತ ಜಯಂತಿ ಎನ್ನುತ್ತಾರೆ

Answer –   It is the day on which Datta namaka paramathma made his incarnation.

Q. ”ದತ್ತ” ಜಯಂತಿ ಎಂದು ಆಚರಿಸಲಾಗುವುದು ?
ದತ್ತ ಜಯಂತಿ ಮಾರ್ಗಶಿರ ಹುಣ್ಣಿಮೆಯಂದು ಆಚರಿಸಲಾಗುವುದು

When is Datta Jayanthi Celebrated?

Answer –  On Margashira Shudda Hunnime, Wednesday in Mrugashira nakshatra.  

Q.  “ದತ್ತ” ನ ಅವತಾರ ಕಾಲದಲ್ಲಿ ತಂದೆ ತಾಯಿಗಳಾರು ?

ಬ್ರಹ್ಮನ ಪುತ್ರರಾದ ಅತ್ರಿ ರುಷಿಗಳು ಮತ್ತು ಕರ್ದಮ ಪ್ರಜಾಪತಿಯ ಪುತ್ರಿಯಾದ ಅನುಸೂಯ

Who are his parents? 

Answer –  Sage Brahmaputra Atri and Kardramaputri Anusuya are his parents. 

Q. “ದತ್ತಾತ್ರಯ” ಎಂದರೆ ಒಂದೇ ದೇಹದಲ್ಲಿ ಮೂರು ರೂಪಗಳು ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರರ ಸಂಗಮ ಎನ್ನುತ್ತಾರೆ. ಇದು ಸರಿಯೇ?
 ಉತ್ತರ :  ತಪ್ಪು.
ಅತ್ರಿ ಅನುಸೂಯರಲ್ಲಿ ಅವತರಿಸಿದ ಮಹಾವಿಷ್ಣುವು “ದತ್ತ” ಎಂಬ ರೂಪದಿಂದಲೂ, ಚತುರ್ಮುಖನಿಗೆ ಅವತಾರವಿಲ್ಲದ್ದರಿಂದ “ಚಂದ್ರ”ನಲ್ಲಿ “ಸೋಮ” ಎಂಬ ಆವೇಶದಿಂದಲೂ, ಇನ್ನು ರುದ್ರನೇ “ದುರ್ವಾಸ” ನಾಗಿ ಅವತರಿಸಿದ್ದಾರೆ.

Q. It is said that Dattatreya is one God only with Trimurthi sannidhana.  Is it true?

Answer – No,  Dattatreya roopa is not one god.   They are three Gods –  Vishnu, Brahma (Chandra) and Maheshwara separately. Anasuya gave birth to three male children.  They are Datta-Vishnu;  Doorvasa–Shiva; and Soma-Chandra (With Brahma’s avesha).  As Brahma is not having any avatara, and as there is avesha of Brahma in Chandra, Chandra was born with Brahma Sannidhana.

Q. But we find that there is only one roopa – i.e., Trimoorthi roopa with three heads, six hands and with four dogs to his side.

Answer – This is entirely different from Bhaghavatha Shastra, as in the Bhagavatha Grantha it is clearly said that they are three different gods’ incarnations in the form of Datta, Chandra and Doorvasa.    We have the concept that Datta is Bhagavan Vishnu only as per Madhwa Shastra.

Q. What is the definition of “Datta”? What are his teachings?

Ans:  “Datta” means not only “that which is given”, but also as the ideal of “giving” without desire for reward, i.e. selfless giving.  This roopa is Yogapravarthaka roopa.

As he was pleased by the tapassu of Atri Rushi and born  to them – and he gave himself to them, he is called as “Datta”, he is called as “Atreya” as he is the putra of Atri Rushigalu, he is called as “Dattatreya” as he is Datta | Atreya = Dattatreya.

The whole life of Dattatreya shows us that this “giving” selflessly is the true renunciation/sacrifice. The significance of this sacrifice is stated in the Dattatreya Upanishad where the Lord says, “Not by action,  not by self, but by tyaaga alone is immortality attained. The true  sacrifice is the giving up of “I” and “me”, not the mere abandoning of duties. Living a selfless life require giving up one’s ego. That is what Lord Dattatreya describes as true sacrifice.
 

Sri Mahipati daasara krutees on Dattaatreya

ದತ್ತಾತ್ರೇಯ ನಮೋ ದತ್ತಾತ್ರೇಯಾ |
ಅತ್ರಿ ವರದಾಯಕನೇ ದತ್ತಾತ್ರೇಯ |
ಭಕುತಿ ಮಾಡಲು ಮೆಚ್ಚಿ ಅನುಸೂಯಾ ಕರದೊಳಗ |
ಸುಕುಮಾರ ವೇಷದವತಾರ ತಾಳಿ |
ಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆ |
ಅಕಳಂಕ ಯೋಗ ರೂಪವ ಭರಿಸಿದೆ | 1 1
ಉದಯದೊಳು ವಾರ್ಣಾಸಿಸುರನದಿಯಲಿ ಸ್ನಾನ |
ಒದಗಿ ಕೊಲ್ಹಾಪುರಕ ಮಧ್ಯಾಹ್ನದಿ |
ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು |
ರದಿ ಶಯನ ನಿತ್ಯ ವಿಧಿಯಲಿ ಚರಿಸುವೇ | 2 1
ದತ್ತ ಹರಿ ಸಾಕ್ಷಾತ ಉನ್ನದೋನಂದದಾಯಕ|
ದತ್ತವ ಮುನಿ ದಿಗಂಬರ ಬಾಲಕಾ |
ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ |
ಹತ್ತು ಪೆಸರಂಗೊಳು ದುರಿತ ಭಯವಾರಿಸುವೆ | 3 1
ಅವನಾಗಲಿ ಮರೆದು ನಿಮ್ಮ ನಾಮವ ನೆನೆವ |
ಠವಿನಲಿಸುಳಿವ ಪ್ರತ್ಯಕ್ಷದಿಂದಾ |
ಭಾವದೆಇಂದಲಿ ಸ್ಮರಿಸಿದವಗೆ ಇಹಪರ ಸುಖವ |
ನೀವ ಕರುಣಾಳು ದೀನೋದ್ಧಾರಕಾ | 4 1
ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ |
ಮುಪ್ಪು ಬಿಡಿಸಿದೆ ಯದುರಾಯಗಂದು |
ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯನಿಸಿ |
ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ | 5 |
 
=============
ದತ್ತಾತ್ರೇಯ ಸ್ವಾಮಿ
ಕೃಪೆ ಮಾಡೈ ನೀಯೆನ್ನ ಮ್ಯಾಲ |
ಅನಿಮಿಷ ಮಾನಸ ಸಂಚಾರಾ |
ಅನಾಥ ಜನ ಸಂಕಟ ಪರಿಹಾರಾ |
ದೀನ ದಯಾಲ ರಮಾವರಾ ನೆನೆವರ ಸಹಕಾರಾ |
ಅನಸೂಯಾಕರ ಸಂಪುಟರನ್ನಾ |
ಘನತರ ಚರಿತ ಪರಮ ಪಾವನ್ನಾ |
ಅನುಪಮ ತ್ರೈಜಗ ಜೀವನ್ನಾ ವನರುಹವದನಾ |
ಸರಸಿಜೋದ್ಭವ ನುತ ಮನ್ನಾಥಾ |
ವನ ನಿಗಮಾಗೋಚರ ಅನಂತಾ |
ಕರುಣಾಂಬುಧಿಯೇ ಸರ್ವಾತೀತಾ
ಗುರು ಮಹಿಪತಿ ದಾತಾ |
————————————————–
 
ದತ್ತದತ್ತೆನ್ನಲು ಹತ್ತಿ ತಾಂ ಬಾಹನು |
ಚಿತ್ತದೊಳಾಗುವಾ ಮತ್ತ ಶಾಶ್ವತನು |
ದತ್ತ ಉಳ್ಳವನ ಹತ್ತಿಲೇ ಈಹನು |
ವೃತ್ತಿ ಒಂದಾದರೆ ಹಸಗುಡುವನು | ೧ |
ಎತ್ತ ನೋಡಿದರೆ ಮೊತ್ತವಾಗಿಹ ತಾಂ |
ಉತ್ತಮೊತ್ತಮತಾನೆತ್ತುತಾ ಈತಾ |
ಅತ್ತಲಿತ್ತಾಗದೆ ಹತ್ತಿಲೆ ಸೂಸುತ |
ಮುತ್ತಿನಂತಿಹ್ವನು ನೆಲಿಲೆ ಭಾಸುತಾ | ೨ |
ದತ್ತನಿಂದೆನ್ನಲು ಕತ್ತಲೆಣ್ಯೋಗುದು |
ಮೃತ್ಯು ಅಂಜುತಲಿ ಭೃತ್ಯನಾಗಿಹುದು |
ದತ್ತನಿಂದಧಿಕ ಮತ್ತು ತಾಂ ಒಂದು |
ಉತ್ತಮರಿಗೆ ತಾ ಸತ್ಯ ಭಾಸುದು | ೩ |
ಒತ್ತಿ ಉನ್ಮನಿಯಾವಸ್ಥಿಯೋಳಾಡುವದು |
ಸ್ವಸ್ತಮನಾದರೆ ವಸ್ತು ಕೈಗೂಡುದು |
ಬಿತ್ತಿ ಮನ ಗುರುಭಕ್ತಿ ಮಾಡುವದು |
ದತ್ತ ತನ್ನೊಳು ತಾನೆವೆ ಭಾಸುವದು | ೪ |
ದತ್ತ ದತ್ತೆಂದು ತಾ ಆರ್ತ ಮಹಿಪತಿಯು |
ಬೆರ್ತ ನೋಡಿದ ಮನವು ಸುಮೂರ್ತಿಯು |
ಮರ್ತದೊಳಿದುವೆ ಸುಖ ವಿಶ್ರಾಂತಿಯು |
ಮರ್ತುಹೋಗುವದು ಮಾಯದ ಭ್ರಾಂತಿಯು | ೫ |

☘️☘️☘️☘️☘️☘️☘️☘️
Narahari Sumadhwa
******

ದತ್ತಾತ್ರೇಯ – ಶ್ರೀ ಗುರುದೇವ ದತ್ತ

ಅರ್ಥ
ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.
**********


ಇತರ ಕೆಲವು ಹೆಸರುಗಳು

ಅವಧೂತ
೧. ‘ಅವಧೂತ ಚಿಂತನ ಶ್ರೀ ಗುರುದೇವ ದತ್ತ|’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ – ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

೨. ಎಲ್ಲ ಸಂಕಲ್ಪ-ವಿಕಲ್ಪರಹಿತದ ವಿಭೂತಿಯನ್ನು ಅವನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡಿದ್ದನು. ಆದುದರಿಂದಲೇ ಅವನಿಗೆ ‘ಅವಧೂತ’ ಎಂದು ಕರೆಯಲಾಗುತ್ತಿತ್ತು; ಅನ್ಯಥಾ ಅವನು ಬ್ರಾಹ್ಮಣನೇ ಆಗಿದ್ದನು. ಸುತ್ತಲಿನ ಪ್ರಪಂಚವನ್ನು ಅವನು ಆತ್ಮಜ್ಞಾನದಿಂದ ತೊಳೆದಿದ್ದನು; ಆದುದರಿಂದಲೂ ಅವನಿಗೆ ‘ಅವಧೂತ’ ಎನ್ನಬೇಕು. ಅನ್ಯಥಾ ಅವನು ಓರ್ವ ವಿಖ್ಯಾತ ಬ್ರಾಹ್ಮಣನಾಗಿದ್ದನು. ಯಾವನು ‘ಅಹಂ’ ವನ್ನು ತೊಳೆಯುತ್ತಾನೆಯೋ ಅವನೇ ಅವಧೂತ, ಅವನೇ ಯೋಗಿ ಮತ್ತು ಅವನೇ ಪುನೀತನಾಗಿದ್ದಾನೆ. ಯಾವನು ಅಹಂಕಾರಪೀಡಿತನಾಗಿರು ತ್ತಾನೆಯೋ ಅವನೇ ಜನ್ಮಕರ್ಮಗಳಲ್ಲಿ ಪಾಪಿಯಾಗಿರುತ್ತಾನೆ ಎಂದು ತಿಳಿಯಬೇಕು.

– ಏಕನಾಥೀ ಭಾಗವತ ಅಧ್ಯಾಯ ೭, ದ್ವಿಪದಿ ೨೭೦-೨೭೨

ದಿಗಂಬರ
‘ದಿಕ್ ಏವ ಅಂಬರಃ|’ ದಿಕ್ ಅಂದರೆ ದಿಕ್ಕುಗಳೇ ಯಾವನ ಅಂಬರವಾಗಿವೆಯೋ, ಅಂದರೆ ವಸ್ತ್ರವಾಗಿವೆಯೋ, ಅವನೇ ದಿಗಂಬರ; ಅಂದರೆ ಅವನು ಇಷ್ಟು ದೊಡ್ಡವನಾಗಿದ್ದಾನೆ, ಸರ್ವವ್ಯಾಪಿಯಾಗಿದ್ದಾನೆ.
ದತ್ತಾತ್ರೇಯ
ಈ ಶಬ್ದವು ದತ್ತ + ಆತ್ರೇಯ ಹೀಗೆ ರೂಪುಗೊಂಡಿದೆ. ದತ್ತನ ಅರ್ಥವನ್ನು ವಿಷಯ ಪ್ರಾರಂಭದಲ್ಲಿ ನೀಡಲಾಗಿದೆ. ಆತ್ರೇಯ ಎಂದರೆ ಅತ್ರಿಋಷಿಗಳ ಮಗ.
ಜನ್ಮದ ಇತಿಹಾಸ
ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ.
ಪುರಾಣಗಳಿಗನುಸಾರ ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.
ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ – ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.
ದತ್ತನ ಗುರುಗಳು ಮತ್ತು ಉಪಗುರುಗಳು
ಗುರು: ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂದದಲ್ಲಿ ಯದು ಮತ್ತು ಅವಧೂತರ ಸಂವಾದವಿದೆ. ಇದರಲ್ಲಿ ಅವಧೂತರು ‘ತಾವು ಯಾವ ಗುರುಗಳನ್ನು ಮಾಡಿಕೊಂಡರು ಮತ್ತು ಅವರಿಂದ ಏನು ಕಲಿತರು’, ಎನ್ನುವುದನ್ನು ಹೇಳಿದ್ದಾರೆ. (ಇಲ್ಲಿ ‘ಗುರು’ ಎಂಬ ಶಬ್ದವನ್ನು ಉಪಯೋಗಿಸಿದ್ದರೂ, ಅದನ್ನು ‘ಶಿಕ್ಷಕ’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ನಿಜವಾದ ಗುರುಗಳು ಹೇಗಿರುತ್ತಾರೆ ಎನ್ನುವುದನ್ನು ಸನಾತನದ ಗ್ರಂಥ ‘ಗುರುಕೃಪಾಯೋಗ’ದಲ್ಲಿ ಕೊಡಲಾಗಿದೆ.)
ಅವಧೂತ ಹೇಳುತ್ತಾನೆ, ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವೂ ಗುರುವಾಗಿದೆ; ಏಕೆಂದರೆ ಪ್ರತಿಯೊಂದು ವಿಷಯದಿಂದಲೂ ಏನಾದರೊಂದು ಕಲಿಯಲು ಸಿಗುತ್ತದೆ. ಕೆಟ್ಟ ವಿಷಯಗಳಿಂದ ಯಾವ ದುರ್ಗುಣಗಳನ್ನು ಬಿಡಬೇಕು ಮತ್ತು ಒಳ್ಳೆಯ ವಿಷಯಗಳಿಂದ ಯಾವ ಸದ್ಗುಣಗಳನ್ನು ತೆಗೆದುಕೊಳ್ಳಬೇಕು ಎಂಬುದು ಕಲಿಯಲು ಸಿಗುತ್ತದೆ. ಉದಾಹರಣೆಗಾಗಿ ನಾನು ಮುಂದೆ ಕೊಟ್ಟಿರುವ ಇಪ್ಪತ್ನಾಲ್ಕು ಗುರುಗಳಿಂದ ಸ್ವಲ್ಪ-ಸ್ವಲ್ಪ ಜ್ಞಾನವನ್ನು ಪಡೆದು ಅವುಗಳಿಂದ ಸಮುದ್ರವನ್ನು ಮಾಡಿದೆ ಮತ್ತು ಅದರಲ್ಲಿ ಸ್ನಾನ ಮಾಡಿ ಎಲ್ಲ ಪಾಪಗಳ ಪರಿಮಾರ್ಜನೆಯನ್ನು ಮಾಡಿಕೊಂಡೆ.
*****

GURU DATTATREYA
*ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ - "ದತ್ತ"* 

೧. ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಕಾರಣಗಳು ಮತ್ತು ತೊಂದರೆಯ ಸ್ವರೂಪ ಇತ್ತೀಚಿನ ಕಾಲದಲ್ಲಿ *ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ.*

ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ *ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.*
*ಆದುದರಿಂದ ಬಹುತೇಕ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ.*
ಇಂತಹ *ಅತೃಪ್ತ ಲಿಂಗದೇಹಗಳು* ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳುತ್ತವೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕದ ಮಧ್ಯದಲ್ಲಿದೆ) *ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ.*
ಮುಂದೆ ಅವರು ಅವರ ಕರ್ಮಗಳಿಗನುಸಾರ *ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.*
ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಸಾಧ್ಯತೆ ಇದೆ ಅಥವಾ ತೊಂದರೆ ಆಗುತ್ತಿದೆ, ಎಂಬುದನ್ನು *ಅಧ್ಯಾತ್ಮದಲ್ಲಿನ ಉನ್ನತರೇ ಹೇಳಬಲ್ಲರು.*
ಹಾಗೆ ಹೇಳುವ ಉನ್ನತರು ಸಿಗದೇ ಇದ್ದಾಗ ಮತ್ತು *ಮುಂದೆ ನೀಡಿದ ತೊಂದರೆಗಳು ಆಗುತ್ತಿದ್ದಲ್ಲಿ ಅವು ಅತೃಪ್ತ ಪೂರ್ವಜರಿಂದ ಆಗುತ್ತಿವೆ ಎಂದು ತಿಳಿದು ಸಾಧನೆಯನ್ನು ಮಾಡಬೇಕು -*
*ವಿವಾಹವಾಗದಿರುವುದು, ಪತಿ-ಪತ್ನಿಯರಲ್ಲಿ ಹೊಂದಾಣಿಕೆಯಾಗದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಧಾರಣೆಯಾದರೂ ಗರ್ಭಪಾತವಾಗುವುದು, ಮಕ್ಕಳು ಸಮಯಕ್ಕೆ ಮೊದಲೇ ಹುಟ್ಟುವುದು, ಬುದ್ಧಿಮಾಂದ್ಯ ಅಥವಾ ಅಂಗವಿಕಲ ಮಕ್ಕಳು ಹುಟ್ಟುವುದು, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಸಾಯುವುದು ಇತ್ಯಾದಿ.*
*ವ್ಯಸನ, ದಾರಿದ್ರ್ಯ, ಶಾರೀರಿಕ ರೋಗ ಮುಂತಾದ ಲಕ್ಷಣಗಳಿರುವ ಸಾಧ್ಯತೆಯೂ ಇರುತ್ತದೆ.*
ಮೃತವ್ಯಕ್ತಿಯ ಮೇಲಿನ ಪ್ರೇಮ ಮತ್ತು ಅವರ ನೆನಪಿಗಾಗಿ ಮನೆಯಲ್ಲಿ ಅವರ ಛಾಯಾಚಿತ್ರಗಳನ್ನು ಇಡುವುದು, *ದೇವರ ಕೋಣೆಯಲ್ಲಿ ನಾಣ್ಯವನ್ನಿರಿಸುವುದು ಅಥವಾ ಮನೆಯ ಮುಂದೆ ಸಮಾಧಿಯನ್ನು ಕಟ್ಟುವುದು ಮುಂತಾದ ಕೃತಿಗಳಿಂದ ಆ ವ್ಯಕ್ತಿಯ ಲಿಂಗದೇಹವು ಅಲ್ಲಿ ಸಿಲುಕಿಕೊಳ್ಳುತ್ತದೆ.*
ಇದರಿಂದ ಅವರಿಗೆ ಮುಂದಿನ ಗತಿ ಸಿಗುವುದಿಲ್ಲ, *ಹಾಗೆಯೇ ಅವರಿಗೆ ಯಾತನೆಯನ್ನೂ ಸಹಿಸಬೇಕಾಗುತ್ತದೆ.*
*ಭಗೀರಥನು ಪೂರ್ವಜರ ಮುಕ್ತಿಗಾಗಿ ತಪಸ್ಸನ್ನು ಮಾಡಿ ಗಂಗೆಯನ್ನು ಪೃಥ್ವಿಯಲ್ಲಿ ಅವತರಿಸುವಂತೆ ಮಾಡಿದ ಉದಾಹರಣೆಯು ಪಿತೃಋಣ ತೀರಿಸಿದುದರ ಉತ್ತಮ ಆದರ್ಶವಾಗಿದೆ.*
ನಾವು ಪೂರ್ವಜರನ್ನು ಮೇಲೆ ಹೇಳಿದ *ಸ್ಥೂಲ ವಿಷಯಗಳಲ್ಲಿ ಸಿಲುಕಿಸಿದರೆ ಮತ್ತು ಅವರಿಗೆ ಗತಿ ಸಿಗಲು ನಾಮಜಪ ಮುಂತಾದ ಸಾಧನೆಯನ್ನು ಮಾಡದೇ ಇದ್ದಲ್ಲಿ ನಮ್ಮಿಂದ ಪಿತೃ ಋಣ ತೀರುವುದಿಲ್ಲ.*
ಹಾಗೆಯೇ ಪೂರ್ವಜರಿಗೆ ತೊಂದರೆಯಾಗಿ ಅವರು *ನಮ್ಮ ಸಾಧನೆಯಲ್ಲಿ ಅಡಚಣೆಗಳನ್ನು ತರುತ್ತಾರೆ.*
ಪಿತೃ ಋಣವನ್ನು ತೀರಿಸಲು ಮತ್ತು ಪೂರ್ವಜರ ಮುಕ್ತಿಯನ್ನು ತಡೆಗಟ್ಟದೇ ಅವರಿಗೆ *ಗತಿ ಸಿಗಬೇಕೆಂದು ‘ಶ್ರೀ ಗುರುದೇವ ದತ್ತ |’ ನಾಮಜಪ* ಮತ್ತು ಶ್ರಾದ್ಧವಿಧಿಗಳನ್ನೂ ಮಾಡಬೇಕು.
೨. *ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು* ತೊಂದರೆಗಳ ತೀವ್ರತೆಗನುಸಾರ ಮಾಡಬೇಕಾದ ಉಪಾಸನೆ 
ಅ. ಈಗ ಯಾವುದೇ ರೀತಿಯ ತೊಂದರೆ ಇಲ್ಲದಿದ್ದಲ್ಲಿ ಮುಂದೆ ತೊಂದರೆಗಳು ಆಗಬಾರದೆಂದು, ಹಾಗೆಯೇ ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ *1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ|’* ನಾಮಜಪವನ್ನು ಮಾಡಬೇಕು. 
ಉಳಿದ ಸಮಯದಲ್ಲಿ *ಪ್ರಾರಬ್ಧದಿಂದ ತೊಂದರೆಯಾಗಬಾರದು ಮತ್ತು ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು* ಸಾಮಾನ್ಯ ಮನುಷ್ಯನು ಅಥವಾ ಪ್ರಾಥಮಿಕ ಅವಸ್ಥೆಯಲ್ಲಿನ ಸಾಧಕನು ತನ್ನ *ಕುಲದೇವತೆಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.* 
(ಕುಲದೇವತೆಯ ನಾಮದ ಮಹತ್ವ ಸಾಧನೆಯ ಬಗೆಗಿನ ವಿವೇಚನೆಯನ್ನು ಸನಾತನದ ಗ್ರಂಥ *‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ಯಲ್ಲಿ ಮಾಡಲಾಗಿದೆ.*)
ಆ. ಮಧ್ಯಮ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ *‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಪ್ರತಿದಿನ 2 ರಿಂದ 4 ಗಂಟೆಗಳಷ್ಟು ಮಾಡಬೇಕು.*
ಹಾಗೆಯೇ ಪ್ರತೀ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು ಮತ್ತು *ಕುಳಿತುಕೊಂಡು 1-2 ಮಾಲೆ ನಾಮಜಪವನ್ನು ಒಂದು ವರ್ಷವಾದರೂ ಮಾಡಬೇಕು.*
ಅನಂತರ ಮೂರು ಮಾಲೆಗಳಷ್ಟು ನಾಮಜಪವನ್ನು ಮಾಡುತ್ತಿರಬೇಕು.
ಇ. ತೀವ್ರ ತೊಂದರೆಯಿದ್ದರೆ *ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಪ್ರತಿದಿನ 4 ರಿಂದ 6 ಗಂಟೆ ಮಾಡಬೇಕು.* ಯಾವುದಾದರೂ ಜ್ಯೋತಿರ್ಲಿಂಗವಿರುವ ಸ್ಥಳಕ್ಕೆ ಹೋಗಿ ನಾರಾಯಣಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ, ಕಾಲಸರ್ಪಶಾಂತಿ ಇವುಗಳಂತಹ ವಿಧಿಗಳನ್ನು ಮಾಡಬೇಕು.
ಅದರ ಜೊತೆಗೆ ಯಾವುದಾದರೂ ದತ್ತಕ್ಷೇತ್ರದಲ್ಲಿ ಉಳಿದುಕೊಂಡು ಸಾಧನೆ ಮಾಡಬೇಕು ಅಥವಾ *ಸಂತರ ಸೇವೆಯನ್ನು ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು.*
೩. *ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ?*
೩ಅ. *ಸಂರಕ್ಷಣಾ ಕವಚ ನಿರ್ಮಾಣವಾಗುವುದು:*ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಗುತ್ತದೆ.
೩ಆ. *ಅತೃಪ್ತ ಪೂರ್ವಜರಿಗೆ ಗತಿ ಸಿಗುವುದು:* ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿಯೇ ಸಿಲುಕಿಕೊಂಡಿರುತ್ತಾರೆ. ಇದರಿಂದ ಮೃತ್ಯುವಿನ ನಂತರ *ಇಂತಹವರ ಲಿಂಗದೇಹಗಳು ಅತೃಪ್ತವಾಗಿರುತ್ತವೆ.*
ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಕ್ಕಿಕೊಳ್ಳುತ್ತವೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕಗಳ ಮಧ್ಯದಲ್ಲಿದೆ.) 
ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡ ಅತೃಪ್ತ ಪೂರ್ವಜರಿಗೆ ಗತಿ ಸಿಗುತ್ತದೆ. 
ಇದರಿಂದ ಮುಂದೆ *ಅವರು ತಮ್ಮ ಕರ್ಮಗಳಿನುಸಾರ ಮುಂದು ಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.
*************

ದತ್ತಾತ್ರೇಯ ಸ್ತೋತ್ರ 

ಮಾಲಕಮಂಡಲು  ಧರಃ ಕರಪದ್ಮಯುಗ್ಮೆ 
ಮಧ್ಯಸ್ಥಪಾಣಿಯುಗಲೇ  ಡಮರುತ್ರಿಶೂಲೇ ।
ಯಸ್ಯಸ್ತ ಊರ್ಧ್ವಕರಯೋಃ ಶುಭಶಂಖಚಕ್ರೆ 
ವಂದೇ ತಮತ್ರಿವರದಂ  ಭುಜಷಟ್ಕಯುಕ್ತಂ ।।

ಅರ್ಥ - ಕೆಳಗಿನವೆರಡು  ಕೈಗಳೆಂಬ  ಕಮಲಗಳಲ್ಲಿ ರುದ್ರಾಕ್ಷ ಮಾಲೆ , ಕಮಂಡಲಗಳೂ  ನಡುವಿನವೆರಡು  ಕೈಗಳಲ್ಲಿ ಡಮರು ತ್ರಿಶೂಲಗಳೂ  ಮತ್ತು ಯಾವಾತನ  ಮೇಲಿನವೆರಡು  ಕೈಗಳಲ್ಲಿ ಶುಭಪ್ರದವಾದ  ಶಂಖ - ಚಕ್ರಗಳೂ  ಉಂಟೋ  ಅಂತಹ ಆರು ಭುಜಗಳುಳ್ಳ  ಅತ್ರಿಋಷಿಗೆ  ವರಪ್ರದನಾದವ  (ದತ್ತ ) ನನ್ನು  ವಂದಿಸುವೆ .

                  ಪರಮಭಾಗವತರಾದ ನಾರದ ಮಹರ್ಷಿಗಳು  ಬ್ರಹ್ಮನ  ಮಾನಸ ಪುತ್ರರು . ಯಾವಾಗಲೂ ಭಗವಂತನ ಪರಮ ಪವಿತ್ರವಾದ ನಾಮವನ್ನುಚ್ಚರಿಸುವಂತಹ  ಪುಣ್ಯ ಪುರುಷರು . ಆದರೆ ಅವರು " ಕಲಹಪ್ರಿಯೋನಾರದಃ " ಕಲಹಪ್ರಿಯರು ಎಂಬ ಹೆಸರನ್ನು ಪಡೆದರು . ಈ ಹೆಸರು ಅವರಿಗೆ ನಿಂದಾವ್ಯಂಜಕವಾಗಿರಲಿಲ್ಲ . ಯಾಕೆಂದರೆ ಅವರಿಂದ ಉಂಟಾಗುವ ಕಲಹಗಳು ಮೋಜಿಗಾಗಿರದೆ , ಪರಿಣಾಮದಲ್ಲಿ ಎರಡೂ  ಪಕ್ಷಗಳಿಗೆ  ಕಲ್ಯಾಣಕರವೂ  ಜಗತ್ತಿಗೆ ಹಿತಪ್ರದವೂ ಆಗಿರುತ್ತಿದ್ದವು . ಆದ್ದರಿಂದ  ಈ ಹೆಸರು ಒಂದು ಬಗೆಯಿಂದ ವಂದ್ಯವೇ  ಆಗಿತ್ತು . ಜಗತ್ತಿನ ಕಲ್ಯಾಣಕ್ಕಾಗಿ  ಅವತರಿಸಿದ ಸಂತರಿಂದ - ಮಹಂತರಿಂದ  ಒದಗುವ ಕರ್ಮವು  ಹೇಯವೆಂತಾದೀತು ? 'ಪರಿಣಾಮೆ ಅಮೃತೋಪಮಂ ' ಎಂಬಂತೆ  ಕೊನೆಗೆ ಹಿತಪ್ರದವಾದ  ಕರ್ಮವು ಸತ್ಕರ್ಮವೆನಿಸುವುದಷ್ಟೇ !

                 ನಾರದರು ತ್ರಿಲೋಕ  ಸಂಚಾರಿಗಳು . ವಾಡಿಕೆಯಂತೆ  ಭೂಲೋಕವನ್ನು  ನೋಡಿಕೊಂಡು  ದೇವಲೋಕಕ್ಕೆ  ಹೋದರು . ಅಲ್ಲಿ   ಬ್ರಹ್ಮ , ವಿಷ್ಣು , ಮಹೇಶ್ವರರ  ಪತ್ನಿಯರಾದ  ಸರಸ್ವತಿ ,ಲಕ್ಷ್ಮಿ , ಪಾರ್ವತಿಯರಿಗೆ  ತಾವೇ ಅತ್ಯುಚ್ಚ  ಪತಿವ್ರತೆಯರೆಂಬ  ಅಹಂಕಾರವುಂಟಾಗಿತ್ತು . ಭೂಲೋಕದಲ್ಲಿ  ಅತ್ರಿಮಹರ್ಷಿಯು  ಹೆಂಡತಿ  ಅನಸೂಯೆಯು  ದೊಡ್ಡ ಪತಿವ್ರತೆಯಾಗಿದ್ದಳು . ಸರಸ್ವತಿ ಮೊದಲಾದವರ ಅಹಂಕಾರವನ್ನು ನಾಶಪಡಿಸ ಬೇಕೆಂದೂ  ಅನಸೂಯೆಯ  ಪಾತಿವ್ರತ್ಯದ ಮಹಿಮೆಯನ್ನು ಬೆಳಗಬೇಕೆಂದೂ ಮತ್ತು ಸದ್ಯಕ್ಕೆ ದತ್ತನೆಂದು  ಪೂಜಿಸಲ್ಪಡುವ   ತ್ರಿಮೂರ್ತಿಗೆ  ಜಗತ್ತಿನ ಕಲ್ಯಾಣಕ್ಕಾಗಿ  ಅವತರಿಸಲು  ಸಮಯವುಂಟಾಗಲೆಂದೂ  ನಾರದರು  ಕಲಹದ ಬೀಜವನ್ನು ಬಿತ್ತಿದರು . 'ಅನಸೂಯೆಯ  ಪತಿವ್ರತಾ ಧರ್ಮದ  ಮುಂದೆ , ನಿಮ್ಮದು  ಸೂರ್ಯನ  ಮುಂದೆ  ಹೊನ್ನಿ  ಹುಳುವು ಬೆಳಗಿದಂತೆ ' ಎಂದು ಸರಸ್ವತಿ  ಮೊದಲಾದವರಲ್ಲಿ  ಮತ್ಸರವುಂಟಾಗುವಂತೆ  ಹೇಳಿದರು . ಅದರಿಂದಾಗಿ  ಅವರು ಅನಸೂಯೆಯ ಸತ್ವಭಂಗ  ಮಾಡಲು , ತಂತಮ್ಮ ಪತಿಗಳನ್ನು ಆಗ್ರಹಪಡಿಸಿದರು .

                  ಬ್ರಹ್ಮ , ವಿಷ್ಣು , ಮಹೇಶರು  ಅದಕ್ಕಾಗಿ  ವೃದ್ಧ  ಬ್ರಾಹ್ಮಣ ವೇಷವನ್ನು  ಧರಿಸಿದರು . ಪತಿಧರ್ಮಪರಾಯಣಳಾದ
ಅತ್ರಿಮಹರ್ಷಿಯ  ಹೆಂಡತಿ  ಅನಸೂಯೆಯು  ಆಶ್ರಮದಲ್ಲಿ  ಒಬ್ಬಳೇ ಇರುವ ಸಮಯವನ್ನು ಸಾಧಿಸಿ ,ಅಲ್ಲಿಗೆ ಬಂದರು  ಮತ್ತು
ವಸ್ತ್ರಹೀನಳಾಗಿ  ತಮಗೆ  ಉಣಬಡಿಸಬೇಕೆಂದು  ಕೇಳಿದರು . ಹಾಗೆ ಮಾಡದಿದ್ದರೆ ಹಾಗೆ ಮರಳಿ ಹೋಗುವುದಾಗಿಯೂ  ಹೇಳಿದರು . ಈ ಮಾತು ಕೇಳಿ ಅನಸೂಯೆಯು  ಜಗದ್ಜನನಿಯನ್ನು ಪ್ರಾರ್ಥಿಸಿ ಹಾಗು ಪತಿಯನ್ನು ನೆನೆದು ಊಟದ ಪದಾರ್ಥಗಳನ್ನು ತೆಗೆದುಕೊಂಡು ಬಡಿಸಲು   ಹೊರಗೆ ಬಂದಾಗ ತ್ರಿಮೂರ್ತಿಗಳು ಬಾಲರೂಪವನ್ನು ಹೊಂದಿ
ಅಳತೊಡಗಿದರು .ಬಾಲ ರೂಪದ  ಶಿಶುಗಳಿಗೆ ತಾಯಿಯಂತೆ ಉಣಬಡಿಸಿದಳು . ಹೀಗೆ ತ್ರಿಮೂರ್ತಿಗಳಿಗೆ  ತಾಯಿಯಾದಳು ಅನಸೂಯೆ .

                      ಅನಸೂಯೆಯ ಪಾತಿವ್ರತ್ಯ ಪ್ರಭಾವದಿಂದ ಸಂತುಷ್ಟರಾಗಿ , ತಮ್ಮ  ನಿಜಸ್ವರೂಪದಲ್ಲಿ ಪ್ರಕಟರಾದರು.  ಅವರು ಆ ಮೂರು  ಕೂಸುಗಳನ್ನು ಸಂತೋಷದಿಂದ ಅವಳಿಗೆ ಅರ್ಪಿಸಿದರು . ಆ ಕೂಸುಗಳಿಗೆ ಅನುಕ್ರಮವಾಗಿ  ಸೋಮ , ದತ್ತ  ಮತ್ತು ದುರ್ವಾಸ  ಎಂದು  ಹೆಸರಿಸಲಾಯಿತು .  ಈ ಬಾಲಕರು  ದೊಡ್ಡವರಾದ ಮೇಲೆ ದುರ್ವಾಸನು  ತಪಾಚರಣೆಗಾಗಿ  ಹೊರಟು  ಹೋದನು . ಸೋಮನು  ತನ್ನ  ಚಂದ್ರಮಂಡಲವನ್ನು   ಸೇರಿದನು . ಆದರೆ ಮಹಾತ್ಮ  ದತ್ತನು ಮಾತ್ರ ತಾಯಿ -ತಂದೆಯನ್ನು  ಸುಖಪಡಿಸುತ್ತ  ಆಶ್ರಮದಲ್ಲಿ ಉಳಿದನು . ಅತ್ರಿಪುತ್ರನಾದ್ದರಿಂದ  ಆತ್ರೇಯನು ,ಅತ್ರಿಗೆ  ದೇವತೆಗಳಿಂದ ಕೊಡಲ್ಪಟ್ಟ  ಮೂಲಕ ದತ್ತನು . ಅದಕ್ಕಾಗಿ ದತ್ತಾತ್ರೇಯನೆಂಬ  ಅಭಿದಾನವುಂಟಾಯಿತು .

                      ದತ್ತನು  ನಡೆದ ಮನ್ವಂತರದ  ಆರಂಭದಲ್ಲಿ ಮೊದಲನೆಯ ಪರ್ಯಯದೊಳಗಿನ ತ್ರೇತಾಯುಗದಲ್ಲಿ ಜನಿಸಿದನು . ಇವನು ಪರಮ ಬ್ರಹ್ಮ ನಿಷ್ಟನಾಗಿದ್ದನು . ಅಲರ್ಕ , ಪ್ರಹ್ಲಾದ , ಯದು ಮತ್ತು ಸಹಸ್ರಾರ್ಜುನರು  ಈತನ ಶಿಷ್ಯರಾಗಿ  ಬ್ರಹ್ಮವಿದ್ಯೆಯನ್ನು  ಪಡೆದರು . ಸೃಷ್ಟಿ ಕ್ರಮದಂತೆ ಒಂಬತ್ತು ತಿಂಗಳು ಗರ್ಭವಾಸವನ್ನು ಭೋಗಿಸಿ , ಮಾರ್ಗಶೀರ್ಷ  ಮಾಸದ  ಪೌರ್ಣಿಮೆ (ಹುಣ್ಣಿಮೆ )ಗೆ  ಅನಸೂಯೆಯ ಉದರದಿಂದ ದತ್ತನು ಜನಸಿದಂತೆ  ಸ್ಕಂದ ಪುರಾಣದಲ್ಲಿ  ಉಲ್ಲೇಖವುಂಟು . ಅಥರ್ವಣವೇದೋಪನಿಷತ್ತಿಗೆ  ದತ್ತಾತ್ರೇಯ  ಎಂದು ಹೆಸರಿದೆ .
                     
ದತ್ತನ  ಸ್ವರೂಪ -

                       ತ್ರಿಮೂರ್ತಿದರ್ಶಕವಾಗಿ  ಮೂರು  ಮೋರೆ , ಆರು ಕೈಗಳು , ಎರಡು ಕಾಲುಗಳು  ಉಂಟು . ಚತುರ್ವೇದ ದರ್ಶಕ  ನಾಲ್ಕು ನಾಯಿಗಳು  ಮತ್ತು ಸಮೀಪದಲ್ಲಿಯೇ  ಒಂದು ಕಾಮಧೇನು ಈ ಬಗೆಯಾಗಿದೆ .

                       ಕಲಿಯುಗದಲ್ಲಿ  ತಾತ್ಕಾಲಿಕ  ಫಲವನ್ನು ಕೊಡುವ ದೈವತ್ವವು  ದತ್ತನ  ಹೊರತು ಬೇರೊಂದಿಲ್ಲ ; ಜಾಗೃತಿ  ಇಲ್ಲವೇ ಸ್ವಪ್ನ ಸೃಷ್ಟಿಯಲ್ಲಿ ಸಾಕ್ಷಾತ್ಕಾರವನ್ನು ತೋರುವ ದೈವತ್ವವು ಇದೇ ! ಗುರು ಚರಿತ್ರೆಯಲ್ಲಿ ಬಣ್ಣಿಸಲಾದ  ಕಥೆಗಳಿಂದ ಈ ಮಾತು ಸತ್ಯವೆಂದೆನಿಸುವುದು .


ಕಾಷಾಯ ವಸ್ತ್ರಮ್ ಕರದಂಡ  ಧಾರಿಣಂ  ಕಮಂಡಲುಂ  ಪದ್ಮ ಕರೇಣ  ಶಂಖಂ ।
ಚಕ್ರಂ  ಗಧಾಭೂಷಿತ  ಭೂಷಣಾಢಯ್ಮ್   ಶ್ರೀಪಾದ ರಾಜಂ  ಶರಣಂ ಪ್ರಪದ್ಯೇ। ।೧।।

ಔದುಂಬರಃ  ಕಲ್ಪವೃಕ್ಷಃ  ಸಂಗಮಃ  ಕಾಮದೇವನವಃ ।
ಚಿಂತಾಮಣಿಗುರೋಹ್  ಪಾದಂ ದುರ್ಲಭಂ  ಭುವನತ್ರಯೇ ।।೨।।

ಕೃತೇ ಜನಾರ್ದನೋ ದೇವಃ ತ್ರೇತಾಯಾಂ  ರಘುನಂದನಃ ।
ದ್ವಾಪರೇ  ರಾಮಕೃಷ್ನೌ  ಚ ಕಲೌ ಶ್ರೀಪಾದ ವಲ್ಲಭಃ ।।೩।।


ಅರ್ಥ - ಕಾವಿ  ಬಟ್ಟೆಯನುಟ್ಟುವ , ದಂಡ ಕಮಂಡಲು  ಧರಿಸಿದವ , ಶಂಖ , ಚಕ್ರ  ಮತ್ತು ಗದೆಗಳಿಂದ  ಭೂಷಿತವಾದ  ಕರಕಮಲಗಳಿಂದ  ಭೂಷಣಗೊಂಡವ  ಇಂತಹ  ಶ್ರೀಪಾದರಾಜನಿಗೆ  ಶರಣಾಗತನಾಗುವೆ . (೧) ದತ್ತನು ವಾಸಿಸುವ ಔದುಂಬರ ( ಅತ್ತಿ ಗಿಡ ) ಕಲ್ಪವೃಕ್ಷವು, ಸಂಗಮವೆ  ಕಾಮಧೇನುವು  ಮತ್ತು ಗುರುವಿನ ಪಾದವೇ ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯು . (ಈ ಯೋಗವು )ಮೂರು ಲೋಕಗಳಲ್ಲಿಯೂ  ದುರ್ಲಭವು . (೨) ಕೃತಯುಗದಲ್ಲಿ ದೇವನು  ಜನಾರ್ದನನು. ತ್ರೇತಾಯುಗದಲ್ಲಿ ರಘುನಂದನನು , ಅಂದರೆ ರಾಮಚಂದ್ರನು . ದ್ವಾಪರ ಯುಗದಲ್ಲಿ ಬಲರಾಮ ಶ್ರೀ ಕೃಷ್ಣರು  ಮತ್ತು ಕಲಿಯುಗದಲ್ಲಿ ಶ್ರೀಪಾದ ವಲ್ಲಭ (ದತ್ತ )ನು .ಆಯಾ ಯುಗಗಳಲ್ಲಿ  ಆಯಾ ದೇವತೆಗಳ ಭಕ್ತಿಯು ತೀವ್ರವೇ ಫಲಿಸುತಿತ್ತು, ಫಲಿಸುವುದು .
**********
*******
#ಔದುಂಬರ_ವೃಕ್ಷ
ಹಿರಣ್ಯಕಶಿಪುವನ್ನು ಸಂಹರಿಸಲು ನೃಸಿಂಹಸ್ವಾಮಿ ಈ ಔದುಂಬರದಲ್ಲಿಯೇ ಅವತರಿಸಿದನು.
ಹಾಗೆ ಕ್ರುದ್ಧನಾಗಿ ಅವತರಿಸಿದ ವಿಷ್ಣು ಹಿರಣ್ಯಕಶಿಪುವಿನ ಉದರವನ್ನು ತನ್ನ ಉಗುರುಗಳಿಂದ ಬಗೆದು,
ಅವನ ಕರುಳು ತೆಗೆದು ಮಾಲೆಯಂತೆ ಕೊರಳಲ್ಲಿ ಧರಿಸಿ, ನಾರದ ಕಶ್ಯಪ ಪ್ರಹ್ಲಾದಾದಿ ಭಕ್ತರ ಮಾತುಗಳನ್ನು ಸತ್ಯಗೊಳಿಸಿದನು.
ಆ ರಾಕ್ಷಸನ ಹೊಟ್ಟೆ ಅಗೆದು ಕರುಳು ಈಚೆ ತೆಗೆದಾಗ, ಅವನ ಹೊಟ್ಟೆಯಲ್ಲಿದ್ದ ಕಾಲಕೂಟದಂತಹ ವಿಷವು,
ನೃಸಿಂಹ ಸ್ವಾಮಿಯ ಉಗುರುಗಳಿಗೆ ಅಂಟಿಕೊಂಡು, ಸಹಿಸಲಸಾಧ್ಯವಾದಂತಹ ಉರಿ ಉಂಟಾಯಿತು.
ಆ ವೇದನೆಯನ್ನು ತಡೆಯಲಾರದ ನೃಸಿಂಹಸ್ವಾಮಿಯ ತಾಪವನ್ನು ಶಾಂತಗೊಳಿಸಲು,
ಶ್ರೀ ಮಹಾಲಕ್ಷ್ಮಿ, ಔದುಂಬರದ ಹಣ್ಣುಗಳನ್ನು ತಂದು ಅವನ ಉಗುರುಗಳಿಗೆ ಹಚ್ಚಿದಳು.
ತಕ್ಷಣವೇ ವಿಷದಿಂದುಂಟಾದ ಉರಿಯು ಶಮನವಾಗಿ, ನೃಸಿಂಹಸ್ವಾಮಿಗೆ ಶಾಂತಿಯುಂಟಾಯಿತು.
ಶಾಂತನಾದ ಆ ಉಗ್ರನೃಸಿಂಹನು, ಶ್ರೀಲಕ್ಷ್ಮಿಯನ್ನು ಆಲಂಗಿಸಿ, ಸಂತುಷ್ಟನಾದನು.
ಆಗ ಆ ದೇವದಂಪತಿಗಳು, ವಿಷದ ಉಗ್ರತೆಯನ್ನು ಶಾಂತಗೊಳಿಸಿದ ಔದುಂಬರಕ್ಕೆ,
"ಎಲೈ ಔದುಂಬರವೇ, ಕಲ್ಪವೃಕ್ಷದಂತೆ ಸದಾ ಫಲಭರಿತವಾಗಿರು.
ನಿನ್ನನ್ನು ಶ್ರದ್ಧಾ ಭಕ್ತಿಗಳಿಂದ ಸೇವಿಸುವವರ ಇಷ್ಟಾರ್ಥ ಸಿದ್ಧಿಯಾಗಲಿ, ಅವರ ಪಾಪಗಳೂ ಕ್ಷಯವಾಗಲಿ.
ನಿನ್ನ ದರ್ಶನದಿಂದಲೇ ವಿಷದ ತೀವ್ರತೆ ಶಮನವಾಗುತ್ತದೆ.
ನಿನ್ನ ನಿಜವಾದ ಭಕ್ತರು ಸದಾ ಶಾಂತಿ ಸಂತೋಷಗಳಿಂದ ಆರೋಗ್ಯವಂತರಾಗಿ ಜೀವಿಸುತ್ತಾರೆ.
ನಿಷ್ಠೆಯಿಂದ ನಿನ್ನನ್ನು ಸೇವಿಸುವವರು ಪುತ್ರವಂತರಾಗುತ್ತಾರೆ. ದೀನರು ಶ್ರೀಮಂತರಾಗುತ್ತಾರೆ.
ನಿನ್ನ ಛಾಯೆಯಲ್ಲಿ ಸ್ನಾನವನ್ನಾಚರಿಸಿದವರು ಭಾಗೀರಥಿಯಲ್ಲಿ ಸ್ನಾನ ಮಾಡಿದ ಫಲವನ್ನುಪಡೆಯುತ್ತಾರೆ.
ನಿನ್ನ ನೆರಳಿನಲ್ಲಿ ಜಪತಪಗಳನ್ನಾಚರಿಸಿದವರು ಅನಂತವಾದ ಫಲಗಳನ್ನು ಪಡೆಯುತ್ತಾರೆ.
ಶ್ರದ್ಧಾ ಭಕ್ತಿಗಳಿಂದ ನಿನ್ನನ್ನು ಪೂಜಿಸಿದವರು ಬ್ರಹ್ಮಹತ್ಯಾದಿ ಪಾಪಗಳಿಂದಲೂ ಮುಕ್ತರಾಗುತ್ತಾರೆ.
ಸುಸಂಕಲ್ಪರಾಗಿ ನಿನ್ನನ್ನು ನಂಬಿ ಪೂಜಿಸಿ ಭಜಿಸುವವರ ಇಷ್ಟಕಾಮ್ಯಗಳು ಪೂರ್ಣವಾಗುತ್ತವೆ.
ಲಕ್ಷ್ಮಿದೇವಿ ಸಹಿತನಾದ ನಾನು ಮಿಕ್ಕ ದೇವತೆಗಳೊಡನೆ ನಿನ್ನಲ್ಲಿ ನೆಲಸಿರುತ್ತೇನೆ" ಎಂದು ಅನೇಕ ವರಗಳನ್ನಿತ್ತರು.
ಆದ್ದರಿಂದಲೇ ಕಲಿಯುಗದಲ್ಲಿ ಔದುಂಬರ ವೃಕ್ಷವು ಕಲ್ಪವೃಕ್ಷಕ್ಕೆ ಸಮಾನವಾದದ್ದು.
ಅದೇ ಕಾರಣದಿಂದಲೇ ಶ್ರೀಗುರುವು ಕೂಡಾ ಔದುಂಬರದ ನೆರಳಿನಲ್ಲಿ ನೆಲಸಿರುವರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ .
ಶ್ರೀಗುರುವು ನೆಲೆಸಿದ್ದುದರಿಂದ ಅದು ಸರ್ವ ಕಾಮಫಲ ಪ್ರದವಾಯಿತು ಎಂದು ಧಾರ್ಮಿಕ ನಂಬಿಕೆ.

ಓಂ ನೃಸಿಂಹಾಯ, ಓಂ ನೃಸಿಂಹಾಯ, ಓಂ ನೃಸಿಂಹಾಯ
ಓಂ ನೃಸಿಂಹಾಯ ವಿದ್ಮಹೇ ವಜ್ರನಖಾಯ ಧೀಮಹಿ | ತನ್ನೋ ನಾರಸಿಂಹ: ಪ್ರಚೋದಯಾತ್ ||
ಶ್ರೀ ವಿಷ್ಣುವಿನ ಅವತಾರದಲ್ಲಿ ನರಸಿಂಹ ಅವತಾರ
*******





ಗಾಣಗಾಪುರದಲ್ಲಿ....ನಡೆಯುತ್ತೀರುವ....ಗುರು ಚರಿತ್ರೆ ಪಾರಯಣ.......ಇಂದಿನಿಂದ.......

ಗಾಣಗಾಪುರದಲ್ಲಿ ಗುರುಚರಿತ್ರೆ ಮಹಾಪಾರಾಯಣ ಸಪ್ತಾಹ ಮಹೋತ್ಸವ

Jagadguru SriSri VIDHUSEKHARA BHARATI SWAMYJI visited Sri Nrusimha Saraswati Swamy temple , Nirguna Mutt , Sree Kshetra Ganagapur , Karnataka ( 21/11/18 )
ABOUT GANAGAPUR :-



Shree kshetra Ganagapur is a holy place of Lord Dattatreya and the place is very important "Darshaneeya kshetra". The place is connected to "Sri Nrusimha Saraswathy Swamy" who is the second incarnation of Lord Dattatreya. Importance of this kshetra was explained by ShreeGuru which can be seen in “Shree Gurucharitra”. This Nirguna Mutt is adorned with the Nirguna Padukas.

It stands on the bank of the river Bhima in Afzalpur taluka in Gulbarga district of Karnataka. The confluence of Bhima and Amaraja rivers are considered extremely holy. Who ever takes bath in Sangam, will be free from their sins and their wishes will be fulfilled. There is a temple in Sangam in which the Shree Nrusimha Saraswathy Swamy performed the Anushtaan. The 'Shella Padukas' of Swamy are here.

*****

SIGNIFICANCE OF SIDDHA MANGALA STOTRA OF GURU DATTATREYA  🕉
( extracts of Sreepada sreevallabha charitamrutam) pg 160,162 🕉

🕉There  are  no  restrictions  and  regulations  to  read  this  ‘Siddha  Mangala  Stotra🕉

  🕉“My  dear ones!  If  this  very  sacred  ‘Siddha  Mangala  Stotra’  is  recited  a  consequent  result  on a  par  with  performing  Anaghaasthami  vrata  and  offering  food  afterwards  to  one thousand  pious  brahmins  is  derived.  🕉

🕉A  result  equivalent  to  the  one  derived  by observing  mandala  deeksha,  taking  food  once  a  day,  and  arranging  feast  with  the money  earned  through  hard  physical  labour  to  one  thousand  pious  brahmins,  will be  obtained.  This  stotra  will  be  read  by  worthy  people.  By  reading  this  siddha purushas  are  seen  and  their  touch  also  can  be  experienced.  All  desires  of  the  mind are  fulfilled. 🕉

🕉 Devotees  who  worship  Datta  with  pure  mind,  speech  and  action;  will be  blessed  by  the  grace  of  Sreepada  as  soon  as  they  recite  this  stotra.  🕉

🕉Siddhas  in the  ethereal  region  would  move  about  incognito  wherever  this  stotra  is  recited.”

****
year 2018
೨೦೧೮ ಬರುವ ನವೆಂಬರ್ 13 ರಿಂದ ನವೆಂಬರ್ 20 ರವರೆಗೆ ಶ್ರೀ ನಾರಯಣ ಯೋಗೀಂದ್ರ ಸರಸ್ವತಿ ಪರಮಹಂಸ ಅಧಿಷ್ಠಾನ ಟ್ರಸ್ಟ್, ಬಾಣಾವರ ವತಿಯಿಂದ ಶ್ರೀ ಸ್ವಾಮಿಸಮರ್ಥ ಸೇವಾಕೇಂದ್ರ ಸಂಗಮ ರಸ್ತೆ, ಗಾಣಗಾಪುರದಲ್ಲಿ ಸಮಸ್ತ ಗುರುಚರಿತ್ರೆ ಮಹಾಪಾರಾಯಣ ಸಪ್ತಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ

ಹೆಚ್ಚಿನ ವಿವರಗಳಿಗಾಗಿ ಇವರುಗಳನ್ನು ಸಂಪರ್ಕಿಸಬಹುದು

ಶ್ರೀ ನಾರಾಯಣಶರ್ಮ: 94480 64012

ಶ್ರೀ ಹರ್ಷ: 89711 25996

ಶ್ರೀ ಅಂಬಿಕಾಪ್ರಸಾದ್: 91645 81593

ಶ್ರೀ ವೆಂಕಟೇಶ್:94490 81179

ಈ ವಿಶೇಷ ಮಾಹಿತಿ ನಿಡಿದವರು : ರಾಮಚಂದ್ರ ಬಾಳಗಂಚಿ

ಶ್ರೀ ಗುರು ದತ್ತಾತ್ರೆಯ ಅವತಾರಕ್ಕೆ ಕಾರಣವಾದ ಅತಿಥಿ ಸತ್ಕಾರ💠🕉️💠
👉ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಇಂದಿಗೂ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. “ಅತಿಥಿ ದೇವೋಭವ” ಎಂಬ ಅತಿಥಿಯೇ ದೇವರು ಅಥವಾ ದೇವರಿಗೆ ಸಮನಾದವನು ಎಂಬ ಮಧುರವಾದ ಸಿದ್ಧಾಂತವನ್ನು ಅನುಸರಿಸುವ ಸಂಸ್ಕಾರ ಹಿಂದಿನಿಂದಲೂ ಬಂದುದಾಗಿದೆ.

👉ಅತಿಥಿಯೊಬ್ಬನ ಸಂತೃಪ್ತಿಯೇ ನಮ್ಮ ಸಂತೋಷ ಎಂದುಕೊಂಡವರು ನಾವು. ಈ ಅತಿಥಿ ಸತ್ಕಾರದಿಂದಾಗಿ ದೇವರ ಸಾಕ್ಷಾತ್ಕಾರ ಹೇಗೆ ಆಗಿದೆ ಎಂಬುದನ್ನು ದತ್ತಾವತಾರದ ಹುಟ್ಟು ತಿಳಿಸಿಕೊಡುತ್ತದೆ.

⏹️ವೇದದಲ್ಲೊಂದು ಉಕ್ತಿಯಿದೆ.
🔸ಯತ್ರಾತಿಥೀನಾಂ ಸೇವನಂ ಯಥಾವತ್ ಕ್ರಿಯತೇ |
ತತ್ರ ಸರ್ವಾಣಿ ಸುಖಾನಿ ಭವಂತೀತಿ ||
✍️ಅಂದರೆ ಯಾವ ಕ್ರಿಯೆ ಅಥವಾ ಕರ್ಮದಲ್ಲಿ ಅತಿಥಿಗಳ ಸೇವನೆಯು ಯಥಾವತ್ತಾಗಿ ಮಾಡಲಾಗುತ್ತದೆಯೋ ಅಲ್ಲಿ ಸಮಸ್ತ ಸುಖಗಳೂ ಉಂಟಾಗುತ್ತದೆ ಎಂದರ್ಥ. ಅತಿಥಿ ಸೇವೆಗೆ ಅಷ್ಟೊಂದು ಶಕ್ತಿಯಿದೆ. ಇದರಿಂದಾಗುವ ಫಲವೆಂದರೆ ಸುಖಪ್ರಾಪ್ತಿ. ಸುಖಪ್ರಾಪ್ತಿಯಾದವನಿಗೆ ಶತಾಯುಷ್ಯವೂ ಕ್ಷಣಾರ್ಧದಲ್ಲಿ ಕಳೆದುಹೋಗುತ್ತದೆ. ಅತಿಥಿ ಸತ್ಕಾರದ ಫಲವನ್ನು ಅನುಸೂಯೆಯ ಮಗನಾಗಿ ಜನಿಸಿದ ವಿಷ್ಣುವಿನ ದತ್ತಾವತಾರದಿಂದ ನಾವು ಅರಿಯಬಹುದು.
👉ಅತ್ರಿಮುನಿಯ ಪತ್ನಿ ಅನುಸೂಯೆಯ ಪತಿವ್ರತಾಶಕ್ತಿಗೆ ದೇವಾನುದೇವತೆಗಳೇ ತಲೆಬಾಗಿದ್ದರು. ಈ ವಿಷಯವನ್ನು ನಾರದರು ವಿಷ್ಣುವಿನಲ್ಲಿ ತಿಳಿಸಿದಾಗ ಲಕ್ಷ್ಮೀದೇವಿಯು ಅನುಸೂಯೆಯ ಪತಿವ್ರತಾಶಕ್ತಿಯನ್ನು ಪರೀಕ್ಷಿಸಿ ಪ್ರಪಂಚಮುಖಕ್ಕೆ ತೋರಬೇಕೆಂದು ಕೇಳಿಕೊಳ್ಳುತ್ತಾಳೆ. ಇದಕ್ಕೊಪ್ಪಿದ ವಿಷ್ಣುವು ಶಿವ ಮತ್ತು ಬ್ರಹ್ಮನನ್ನು ಒಡಗೂಡಿಕೊಂಡು ವಟುಗಳ ವೇಷದಲ್ಲಿ ಅನಸೂಯೆಯ ಮನೆಗೆ ಬರುತ್ತಾರೆ.
👉ನಾವು ಹಸಿದಿರುತ್ತೇವೆ ಭೋಜನವನ್ನು ನೀಡುವಂತೆ ಕೇಳಿದಾಗ ಅನುಸೂಯೆ ಅತಿಯಾದ ಆನಂದದಿಂದ ಭೋಜನವನ್ನು ಸಿದ್ಧಪಡಿಸಿ ಬಡಿಸುತ್ತಾಳೆ. ಆದರೆ ಈ ಮೂವರೂ “ನೀನು ವಿವಸ್ತ್ರೆಯಾಗಿ ಬಡಿಸಿದರೆ ಮಾತ್ರ ಊಟವನ್ನು ಸ್ವೀಕರಿಸುತ್ತೇವೆ” ಎಂದು ಹೇಳಿದಾಗ ಅನುಸೂಯೆಗೆ ಇವರು ಸಾಮಾನ್ಯ ವಟುಗಳಲ್ಲ ಅವತಾರಪುರುಷರು ಎಂಬುದು ಮನದಟ್ಟಾಗಿ, ಅಲ್ಲದೆ ಅತಿಥಿಗಳನ್ನು ನೋಯಿಸುವುದು ಉಚಿತವಲ್ಲ ಎಂದು ಬಗೆದು, ಅವರನ್ನು ಮಕ್ಕಳೆಂಬ ಭಾವದಲ್ಲಿ ಪತಿಯ ಪಾದೋದಕವನ್ನು ಅವರಿಗೆ ಪ್ರೋಕ್ಷಿಸಿ, ಅವರ ಇಷ್ಟದಂತೆ ಬಡಿಸಲು ಅಣಿಯಾಗುತ್ತಿದ್ದಂತೆ ಆ ಮೂವರೂ ಅಲ್ಲಿಯೇ ಪುಟ್ಟ ಶಿಶುಗಳಾಗಿ ಬಿಟ್ಟರು.
👉ಅನುಸೂಯೆ ಪಾತಿವ್ರತದ ಶಕ್ತಿಯೇ ಇದಕ್ಕೆ ಕಾರಣ. ಆ ಮೂರೂ ಮಕ್ಕಳನ್ನು ಹಾಲುಣಿಸಿ, ತೊಟ್ಟಿಲಲ್ಲಿ ತೂಗಿ ಮುದ್ದಿಸಿದಳು. ಅತ್ರಿಮುನಿಯು ಮನೆಗೆ ಬಂದಾಗ ಆತನಿಗೆ ನಡೆದುದೆಲ್ಲವನ್ನೂ ವಿವರಿಸಿದಳು. ತ್ರಿಮೂರ್ತಿಗಳ ಮಡದಿಯರು ತಮ್ಮ ಗಂಡಂದಿರನ್ನು ಹುಡುಕಿಕೊಂಡು ಅನಸೂಯೆಯ ಮನೆಗೆ ಬಂದರು. ಮಗುವಾಗಿದ್ದ ತಮ್ಮ ಪತಿಯರನ್ನು ಮತ್ತೆ ಹಿಂದಿನ ರೂಪಕೊಡುವಂತೆ ಅನುಸೂಯೆಯಲ್ಲಿ ಕೇಳಿಕೊಂಡರು. ಮತ್ತೆ ಅನುಸೂಯೆಯ ಪತಿಯ ಪಾದೋದಕವನ್ನು ಪ್ರೋಕ್ಷಿಸಿದಾಗ ತ್ರಿಮೂರ್ತಿಗಳು ಮೊದಲಿನ ರೂಪಕ್ಕೆ ಬಂದರು.
👉ಅನುಸೂಯೆಯ ಆತಿಥ್ಯದಿಂದ ಸಂಪ್ರೀತರಾದ ತ್ರಿಮೂರ್ತಿಗಳು ಅನುಸೂಯೆ ಅಪೇಕ್ಷೆಯಂತೆ ಅವಳ ಮಕ್ಕಳಾಗಿ ಜನಿಸಿದರು. ಅವರಿಗೆ ಚಂದ್ರ, ದತ್ತ ಮತ್ತು ದೂರ್ವಾಸ ಎಂಬ ಹೆಸರನ್ನಿಟ್ಟಳು. ಬ್ರಹ್ಮ ರೂಪವಾದ ಚಂದ್ರ ಮತ್ತ ಶಿವರೂಪನಾದ ದೂರ್ವಾಸ ತಮ್ಮ ದಿವ್ಯಾಂಶವನ್ನು ವಿಷ್ಣುರೂಪಿಯಾದ ದತ್ತನಲ್ಲಿ ಇಟ್ಟು, ಚಂದ್ರನು ಚಂದ್ರಮಂಡಲಕ್ಕೂ ದುರ್ವಾಸನು ತಪಸ್ಸಿಗೂ ಹೋದರು.
👉ಸ್ವಯಂ ಪರಾಶಕ್ತಿಯಾದ ಭಗವಂತನು ಪೂರ್ಣಾಂಶದಿಂದ ತನ್ನನ್ನು ತಾನೇ ಅತ್ರಿ ಅನುಸೂಯೆಯರಿಗೆ ಕೊಡಲ್ಪಟ್ಟುದರಿಂದ ದತ್ತ ಎಂಬ ಹೆಸರು ಪ್ರಚುರವಾಯಿತು. ಅತ್ರಿಯ ಮಗನಾದ ಕಾರಣ ಆತ್ರೇಯನಾಗಿ ಮುಂದೆ ದತ್ತಾತ್ರೇಯ ಎಂದು ಪ್ರಸಿದ್ಧಿ ಪಡೆದ ಭಗವದ್ರೂಪ. ಹೀಗೆ ಭಗವಂತನ ತ್ರಿಮೂರ್ತಿಗಳಿಂದಾದ ದತ್ತಾವತಾರಕ್ಕೆ ಮೂಲವಾದುದು ಅತಿಥಿ ಸತ್ಕಾರ.
👉ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂತಹ ಕಷ್ಟವೆದರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ ದತ್ತಾತ್ರೆಯನ ಉದಯವಾಯಿತು. ಹಾಗಾಗಿಯೇ ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿಬರುವುದೆಂದು ವೇದ, ಪುರಾಣಗಳು ಹೇಳುತ್ತವೆ. ಹಾಗಾಗಿ ಇಂತಹ ಸುಸಂಸ್ಕಾರ ಎಲ್ಲಾ ಕಾಲಗಳಲ್ಲೂ ಚಿರಾಯುವಾಗಿರಲಿ.
🌺🌼ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ🌼🌺
(ಕಥೆಯ ಕೃಪೆ: ಶ್ರೀ ವಿಷ್ಣು ಭಟ್)
🙏🕉️ನಮೋ ಶ್ರೀ ಗುರುದತ್ತಾತ್ರೇಯ ನಮಃ🕉️🙏
🌹🍁ಆತ್ಮೀಯ ಸದಸ್ಯ ಸನ್ಮಿತ್ರರಿಗೆ ಸಂಜೆಯ ಶುಭ ವಂದನೆಗಳು, ಶುಭವಾಗಲಿ


3 nov 2018

ಶ್ರೀ ಗುರುಭ್ಯೋ ನಮಃ

ನವೆಂಬರ್ 12ರಿಂದ 20ರ ವರೆಗೂ ಶ್ರೀಕ್ಷೇತ್ರ ಗಾಣಗಾಪುರದಲ್ಲಿ ಆಯೋಜಿಸಿರುವ ಶ್ರೀಗುರುಚರಿತ್ರೆ ಮಹಾಸಪ್ತಾಹ ಮಹೋತ್ಸವದ ಮಹಾಪ್ರಸಾದದ ವ್ಯವಸ್ಥೆಗೆ ಅವಶ್ಯವಿರುವ ದಿನಸಿ ಪದಾರ್ಥಗಳನ್ನು  ವಾಹನದಲ್ಲಿ ನವೆಂಬರ್ 1ರಿಂದ 5ನೇ ತಾರೀಖಿನವರೆಗೂ ಬೆಂಗಳೂರು ನಗರದಲ್ಲಿ  ಸಂಗ್ರಹಿಸಲಾಗುತ್ತದೆ.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಬಹುದು.

ಬೆಂಗಳೂರು ದಕ್ಷಿಣ

ಶ್ರೀ ಬಾಲಗಂಚಿ ರಾಮಚಂದ್ರ: 9108689183
ರಾಜಾಜಿನಗರ

ಶ್ರೀ ಇಂದ್ರೇಶ್: 9964846252
ಎಮ್.ಎಸ್.ಪಾಳ್ಯ

ಶ್ರೀ ಗೋವಿಂದರಾಜು: 8970424837
ಬೆಂಗಳೂರು ಉತ್ತರ

ಶ್ರೀ ರಮೇಶ್ ಘಟದಳ್ಳಿ:8050610090
ಮೈಸೂರು
ಶ್ರೀ ಜಯತೀರ್ಥ
9742096712
*********

" ದಿನಾಂಕ : 29.12.2020 ಮಂಗಳವಾರ - ಮಾರ್ಗಶಿರ ಶುದ್ಧ ಚತುರ್ದಶೀ - ಶ್ರೀ ದತ್ತಾವತಾರದ ಶುಭದಿನ "
" ಶ್ರೀ ಕಪಿಲ - ಶ್ರೀ ದತ್ತಾತ್ರೇಯ ಮಂತ್ರ "
ಶ್ರೀಮದಾಚಾರ್ಯರು " ತಂತ್ರಸಾರ ಸಂಗ್ರಹ " ದಲ್ಲಿ.... 
ಸ್ವಯಮುದ್ಧೇಶವಾನ್ ಪೂರ್ವ 
ವರ್ಣ ಪೂರ್ವೋ ನಮೋ ಯುತಃ |
ಸ ತಾರೋsಷ್ಟಾಕ್ಷರಶ್ಚೈವ 
ನವಾರ್ಣಶ್ಚ ಮನೂ ಸ್ಮೃತೌ ||
ಓಂಕಾರ ಮತ್ತು ಮೊದಲನೇ ಅಕ್ಷರಗಳಿಂದ ಕೂಡಿದ - ಚರ್ತುರ್ಥ್ಯಂತಗಳಾದ " ಕಪಿಲ " - " ದತ್ತಾತ್ರೇಯ " ಶಬ್ದಗಳು - ಕೊನೆಯಲ್ಲಿ ನಮಃ ಶಬ್ದ - ಇವು ಕಪಿಲಾಷ್ಟಾಕ್ಷರ ಮತ್ತು ದತ್ತಾತ್ರೇಯ ನವಾಕ್ಷರ ಮಂತ್ರಗಳು. 
" ಮಂತ್ರಾಕಾರ "
" ಓಂ ಕಾಮ್ ಕಪಿಲಾಯ ನಮಃ "
" ಓಂ ದಂ ದತ್ತಾತ್ರೇಯಾಯ ನಮಃ "
ಅಧೃಷ್ಠತಾ ಜ್ಞಾನ ಮೋಕ್ಷಪ್ರದೌ ಸದಾ |
ಈ ಎರಡೂ ಮಂತ್ರಗಳೂ ಪರಾಭವವಿಲ್ಲದ ಜೀವನವನ್ನೂ - ಜ್ಞಾನವನ್ನೂ ಮತ್ತೂ ಸಂಸಾರದಿಂದ ಬಿಡುಗಡೆಯನ್ನು ಕೊಡುವಂತಹವು. 
" ಋಷ್ಯಾದಿಗಳು "
ಅಸ್ಯಶ್ರೀ ಕಪಿಲ 
ಮಂತ್ರಸ್ಯ ಬ್ರಹ್ಮಾ ಋಷಿ: | 
ಪ್ರಜಾಪತ್ಯಾ ಗಾಯತ್ರೀ 
ಯಾಜಷೀ ಅನುಷ್ಟಪ್ ಛಂಧಃ |
ಶ್ರೀ ಕಪಿಲೋ ದೇವತಾ ||   
ಅಸ್ಯಶ್ರೀ ದತ್ತಾತ್ರೇಯ 
ಮಂತ್ರಸ್ಯ ಬ್ರಹ್ಮಾ ಋಷಿ: | 
ಯಾಜಷೀ ಬೃಹತೀ ಛಂಧಃ |
ಶ್ರೀ ದತ್ತಾತ್ರೆಯೋ ದೇವತಾ ||
" ಅಂಗನ್ಯಾಸ "
ಎರಡೂ ಮಂತ್ರಗಳಿಗೂ " ಪೂರ್ಣ ಜ್ಞಾನಾತ್ಮನೇ " ಇತ್ಯಾದಿ ಮಂತ್ರಗಳಿಂದಲೇ ಅಂಗನ್ಯಾಸವು. 
" ಧ್ಯಾನ ಮಂತ್ರ "
ಪ್ರೋದ್ಯದ್ದಿವಾಕರ ಸಮಾನ ತನುಂ 
ಸಹಸ್ರ ಸೂರ್ಯೋರು ದೀಧಿತಿಭಿರಾಪ್ತ 
ಸಮಸ್ತ ಲೊಕಾನ್ |
ಜ್ಞಾನಾಭಯಾಂಕಿತ ಕರಂ ಕಪಿಲಂ ಚ 
ದತ್ತಂ ಧ್ಯಾಯೇದಜಾದಿ ಸಮಿತಿಂ
ಪ್ರತಿಬೋಧಯಂತಮ್ ||
" ಶ್ರೀ ದತ್ತಾವತಾರ ಸುಳಾದಿ "
ರಚನೆ : ಶ್ರೀ ದಾಸಪ್ಪ ದಾಸರು [ ಶ್ರೀ ವಿಜಯ ದಾಸರು ]
ಅಂಕಿತ : ಶ್ರೀ ವಿಜಯ ವಿಠ್ಠಲ 
" ಧ್ರುವ ತಾಳ "
ದತ್ತಾಯೋಗೀಶ ಯೋಗಿ ಯೋಗ ಶಕ್ತಿಪ್ರದ । ದತ್ತ ಪ್ರಣತರಿಗೆ ಪ್ರಣವ ಪ್ರತಿಪಾದ್ಯ । ದತ್ತ ಸ್ವಾತಂತ್ರದಿಂದ ಜಗಕೆ ಸತ್ಕರ್ಮ । ಪ್ರ । ದತ್ತ ಮಾಡಿ ಕೊಡುವ ದೀಪ್ತಾ ಚೂಡಾ । ದತ್ತಾಚೀರಾಂಬರಗೇಯಾ ವಲ್ಕಲ ವಾಸ । ದತ್ತಾ ದುರ್ವಾಸ ಚಂದ್ರ ಸಹ ಭವ ಭವ್ಯ ಹಂಸಾ । ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ । ಅತ್ರಿ ನಂದನ ಕೃಷ್ಣಾ೦ಜನ ಬ್ರಹ್ಮಸೂತ್ರ । ಪ । ವಿತ್ರ ಧಾರಣ ದೇವಾ ದೇವ ವಂದ್ಯಾ । ಸತ್ಯ ಕ್ರಿಯಾ ಸತತ ಸಾವಿರ ಹಸ್ತ ವರದ । ದೈತ್ಯ ಮೋಹಕ ರೂಪಾ ಘನ ಪ್ರತಾಪಾ । ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ । ಸ । ರ್ವೋತ್ತಮ ಮಹಾ ಪ್ರಭುವೇ ಸ್ವಪ್ರಭಾವಾ । ಕೀರ್ತಿ ಪಾವನ ವಪುಷ ವೈಕುಂಠ ವಾಸ । ತಪೋ । ವಿತ್ತ ಸುಚಿತ್ತ ಸಚ್ಚಿದಾನಂದಾತ್ಮ ಉತ್ತುಂಗ । ವ್ಯಾಪ್ತಾ ಗೋಪ್ತಾ ಪ್ರಾಪ್ತಾ ಸಂತೃಪ್ತಾ । ತಪ್ತಕಾಂಚನ ಗಾತ್ರಾ ನಿರ್ಜರಾಪ್ತಾ । ಚಿತ್ರ ವಿಚಿತ್ರ ಕರ್ಮ ವಿಜಯವಿಠ್ಠಲರೇಯಾ । ದತ್ತಾವತಾರ ಭಗದತ್ತಾಯುಧ ಧಾರಿ ।।
" ಮಠ್ಯ ತಾಳ "
ದತ್ತ ಜ್ಞಾನ ದತ್ತಾ ಭಕುತಿ ದತ್ತಾ । ದತ್ತ ಶ್ರಾವಣ ದತ್ತಾ ದತ್ತ ಮನನ ದತ್ತಾ । ದತ್ತ ದಾನ ದತ್ತಾ ದತ್ತ ಸಾಧನ ದತ್ತಾ । ದತ್ತ ಚಿತ್ತ ದತ್ತಾ ದತ್ತ ವಿರಕ್ತಿ ದತ್ತಾ । ದತ್ತ ಮಾರ್ಗ ದತ್ತಾ ದತ್ತ ದತ್ತಾ ಇಷ್ಟ ದತ್ತಾ । ದತ್ತ ಸರ್ವ ದತ್ತಾ ದತ್ತ ಭೋಗ ದತ್ತಾ । ದತ್ತಾನಂದ ದತ್ತಾ ದತ್ತ ತನ್ನನೆ ದತ್ತಾ । ದತ್ತಾತ್ರೇಯ । ದತ್ತ ಮೂರುತಿ ನಮ್ಮ ವಿಜಯವಿಠ್ಠಲರೇಯಾ । ದತ್ತನೆಂದವನಿಗೆ ದತ್ತಮಗನಾಹ ।।
" ತ್ರಿವಿಡಿ ತಾಳ "
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ । ಅನಸೂಯ ವರಸೂನು ಕರ್ದಮ ದೌಹಿತ್ರ ।  ಗುಣಿಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ । ಆನಿಸುವ ಬಗೆಯಿಲ್ಲ ಇಳಿಯೊಳಗೆ । ನೆನೆಸಿದವರ ಮಸ್ತಕದಲ್ಲಿ ಪೊಳೆವ । ಮನಸಿಜ ಜನಕ ಜಗನ್ಮೋಹನಾ । ಕನಸಿನೊಳಗಾದರೂ ಕಳವಳಿಕಿಯಿಂದಾಡೆ । ಮನ ಸೂರೆಗೊಡುವಾನು ಮಂದಹಾಸಾ । ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ । ಘನ ಶುದ್ಧಾತ್ಮನು ಕಾಣೋ ಗೌರವರ್ಣಾ । ಉಣಿಸುವ ತನ್ನಯ ನಾಮಾಮೃತವ । ವ । ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ । ಜನ ಸುಮ್ಮನಿರದಲೆ ಜಪಿಸಿ ಈತನಾ ನಾಮಾ । ವಣಿ ಸಾರಿಸಾರಗೆಲಿ ಎಣಿಕೆ ಗೈಯ್ಯೊ । ಗುಣಸಾರತರ ನಮ್ಮ ವಿಜಯವಿಠ್ಠಲರೇಯಾ । ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ।।
" ಅಟ್ಟ ತಾಳ "
ಯೋಗಾಸನಾ ಅಕ್ಷಮಾಲಾ ಜ್ಞಾನಮುದ್ರಾ । ಯೋಗಶಾಸ್ತ್ರ ಕರ್ತಾ ವರ್ತಮಾನ ಕಾಲ । ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ । ಶ್ರೀ ಗುರು ಅಜಗುರು ಸರ್ವ ಜದ್ಗುರು । ಭಾಗೀರಥಿ ತೀರ ಬದರಿ ನಿವಾಸ । ಅ । ಯೋಗ ಕರ್ಮಹಾರಿ ದತ್ತ ದಾನವರಿಗೆ । ಭೋಗಾಶಾಯಿ ಮುಕ್ತಾಭೋಗ ಭಾಗಾಧೇಯಾ । ಭಾಗ ತ್ರಯ ಗುಣ ನಾಶ ಗುಣಾಂಬುಧಿ । ರಾಗ ವಿದೂರ ಸರಾಗಮಣಿ ನಖಾ । ಪೂಗರ್ಭ ನೆನಿಸುವ ಈತನ್ನ ತಾತನ್ನ । ಆಗಸದಲ್ಲಿ ನೋಡಿ ತಾತನ್ನ ಐಶ್ವರ್ಯ । ಯಾಗಾ ತೀರ್ಥ ಯಾತ್ರಿ ನಾನಾ ಪುಣ್ಯ । ಸಂ । ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ । ಜಗ್ಗು ಮಾಡದೆ ಮಾಡೆ ಮುದದಿ ಬಂದೊದಗೋದು । ಜಾಗರತನದಿಂದ ಮಹಾಪುಣ್ಯ ಪ್ರತಿದಿನ । ಸಾಗರ ಮಂದಿರ ವಿಜಯವಿಠ್ಠಲ । ಭವ । ರೋಗದ ವೈದ್ಯ ವೈಲಕ್ಷಣ್ಯ ।।
"" ಆದಿ ತಾಳ "
ಜಯ ಜಯವೆಂದು ದತ್ತ ಮಂತ್ರವ । ನಯ ಮತಿಯಿಂದ ಜಪಿಸಲು । ತ್ರಯ ಪರಿಚ್ಛೇದಕ ಛೇದನಾ । ಭಯ ಪರ್ವತ ವಿಭೇದನಾ । ಆಯುತ ದುರಿತ ರೋದನಾ ।ಕ್ಷಯ ರಹಿತ ಸನ್ಮೋದನಾ | ಜಯ ಜಯವೆಂದು ದತ್ತ ಮಂತ್ರಾ ।  ಪ್ರಿಯವಾಗಿಪ್ಪದು ಗತಿಲಬ್ಧಾ ।ಲಯವಾಗುವುದು ಪ್ರಾರಬ್ಧಾ ।ಜಯ ಜಯವೆನ್ನೆನೊ ಬಲು ಲಬ್ಧಾ ।ತ್ರಯ ಲೋಕದೊಳವನೆ ತಬ್ಧಾ ।ಸುಯತಿಗಳು ನುಡಿದ ಶಬ್ಧಾ ।ಪಯಳಾಯಂತಿದೆ ನೋಡಬ್ಧಾ ।  ದಯಪೂರ್ಣ ನಮಗೆ ವಿಜಯವಿಠ್ಠಲದತ್ತ । ಬಯಕೆ ಕೊಡುವುದು ವೊಲಿದು ಬಿಡಬ್ಧ ಅಬ್ಧಾ ।।
" ಜತೆ "
ದತ್ತ ಪ್ರಧಾನ ವಿದ್ಯಾ ಸುಪ್ರದಾತಾಪಾರ । ತಂತ್ರ ರಹಿತ ವಿಜಯವಿಠ್ಠಲ ಪ್ರಜ್ಞಾ ।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಗುರುದೇವ ದತ್ತ

೧. ಶ್ರೀಗುರುಚರಿತ್ರೆ ಅಂದರೆ ಏನು ?
೨. ಶ್ರೀಗುರುಗಳು ಅಂದರೆ ಯಾರು ?
೩. ಶ್ರೀಗುರುಚರಿತ್ರೆ ಮಹತ್ವ ಏನು ? 
ಪಾರಾಯಣ ಮಾಡುವ ವಿಧಾನ ಮತ್ತು ಅದರ ಫಲಗಳು ಏನು?

ಬ್ರಹ್ಮನ ಮಾನಸ ಪುತ್ರರಲ್ಲಿ ಅತ್ರಿ‍‍‍ ಎಂಬ ಮಹಾಮುನಿಗಳು ತಮ್ಮ ತಪಸ್ಸು ಮತ್ತು ಅನುಷ್ಠಾನದಲ್ಲಿ ಲೋಕದಲ್ಲಿ ಪ್ರಸಿದ್ಧರಾಗಿದ್ದರು. ಅವರ ಪತ್ನಿಯಾದ ಅನಸೂಯಾ
ದೇವಿಯ ಪತಿವ್ರತಧರ್ಮ ದೇವತೆಗಳಿಂದಲೂ ಮಾನ್ಯತೆ ಪಡೆದಿತ್ತು. ಇವರ ತಪಸ್ಸು, ಧರ್ಮ, ನಿಷ್ಠೆ, ಅತಿಥಿ ಸತ್ಕಾರಕ್ಕೆ ಮೆಚ್ಚಿ,  ಬ್ರಹ್ಮ, ವಿಷ್ಣು, ಮಹೇಶ್ವರರು, ಮೂವರು ಮಕ್ಕಳಾಗಿ ಅವತರಿಸಿದರು. ಕ್ರಮಶಃ - ಚಂದ್ರ, ದತ್ತ, ದೂರ್ವಾಸ, ಎಂಬ ಹೆಸರಿನಿಂದ ಕರೆಯಲಾಗುತ್ತದೆ. ತ್ರಿಮೂರ್ತಿಗಳು ಆಶ್ರಮ ದಲ್ಲಿ ಮಾತಾ ಪಿತೃಗಳ ವಾತ್ಸಲ್ಯದಲ್ಲಿ ಬ್ರಹ್ಮಾನಂದ ಹೊಂದಿದರು. ಆಶ್ರಮವು ಪರಮಾತ್ಮನ ಸಾನಿಧ್ಯದಲ್ಲಿ ದಿವ್ಯತೆ ಹೊಂದಿತು. ಬಹಳ ಸಮಯ ಕಳೆದಂತೆ ಲೋಕ ಕಲ್ಯಾಣಕ್ಕಾಗಿ ಚಂದ್ರನು ತನ್ನ ಲೋಕಕ್ಕೆ ಮತ್ತು ದೂರ್ವಾಸನು ತಪಸ್ಸಿಗೆ ಹೋಗಬೇಕೆಂದು, ತಮ್ಮ ಅಂಶ ಗಳನ್ನು ದತ್ತನಲ್ಲಿ ಐಕ್ಯತೆ ಮಾಡುತ್ತಾರೆ. ಮೂರ್ತಿ ತ್ರಯ ಸ್ವರೂಪನಾದ ದತ್ತನು ಶ್ರೀದತ್ತಾತ್ರೇಯನೆಂದು ಜಗತ್ತಿನಲ್ಲಿ ಪ್ರಸಿದ್ಧನಾಗಿ ಮಾತಪಿತೃಗಳ ಸೇವೆ ಮಾಡುತ್ತಾನೆ.

ಶ್ರೀದತ್ತಾತ್ರೇಯನ ಗುಣ, ಸ್ವರೂಪ, ಮಹಿಮೆಗಳು ಅಪಾರವಾಗಿದ್ದು ದೇವಾದಿದೇವತೆಗಳಿಂದಲೂ ಸಂಪೂರ್ಣವಾಗಿ ವರ್ಣಿಸಲಾಗದಾಗಿದೆ. ವೇದಗಳು ಸಹ ನೇತಿ ನೇತಿ ಎಂದು ೪ ಶ್ವಾನಗಳ ರೂಪದಲ್ಲಿ ಆತನ ಪಾದಗಳನ್ನು ಆಶ್ರಯಿಸಿವೆ. ಆತನ ಸಂಕಲ್ಪ ಮಾತ್ರದಿಂದ ಸೃಷ್ಟಿ, ಸ್ಥಿತಿ ಮತ್ತು ಲಯ ಸಂಭವಿಸುತ್ತದೆ. ಆತನ ವಾಕ್ಯಗಳು ಶಾಸನಗಳಿದ್ದಂತೆ ಅನುಲಂಘನೀಯ. ಆತನಿಗೆ ಉಪಮೇಯವೇ ಇಲ್ಲದಂತಹ ಅನುಪಮನು, ಅಚಿಂತ್ಯ, ಅನಾದಿ, ನಿರಾಧಾರ. ಆತನಿಲ್ಲದ ಸ್ಥಳವಿಲ್ಲ. ಆತನಿಗೆ ತಿಳಿಯದ ವಿಷಯವಿಲ್ಲ. ಎಲ್ಲರ ಆಧಾರನಾದ ಆತನನ್ನು ಯಾರು ಧರಿಸಲು ಸಾಧ್ಯವಿಲ್ಲ. ದಿಕ್ಕುಗಳೆ ಆತನ ವಸ್ತ್ರಗಳು
ಆಗಿದ್ದರಿಂದ ದಿಗಂಬರ. ಜ್ಞಾನ ಸೂರ್ಯನಾದರೂ ನಿಮಿತ್ತ ಮಾತ್ರ, ೨೪ ರೂಪಗಳಲ್ಲಿ(ತತ್ವಗಳಲ್ಲಿ) ಶಿಕ್ಷಣ ಪಡೆದು. ಲೋಕದಲ್ಲಿ ಜಗದ್ಗುರು ಎಂದು ಪ್ರಸಿದ್ಧಿ ಹೊಂದುತ್ತಾರೆ.
ಶ್ರೀದತ್ತನ ನಾಮಸ್ಮರಣೆ ಮಾತ್ರದಿಂದಲೇ ಪಾಪ,ತಾಪ, ಶಾಪ, ದೈನ್ಯ, ಮೂಲತಃ ನಾಶವಾಗಿ, ಸುಖದ ಸಾಧನ ವಾಗಿದೆ.

ಪೂರ್ಣಕಾಮನಾದ ಶ್ರೀದತ್ತನು ಎಲ್ಲದರಲ್ಲೂ ಉದಾಸೀನ ಭಾವದಿಂದ ಇದ್ದು, ನಿಜ ಭಕ್ತರಿಗೆ ಅತಿ ಸುಲಭನಾಗಿದ್ದಾನೆ. ಶುದ್ಧ ಅಂತಃಕರಣವುಳ್ಳರಿಗೆ ಇಷ್ಟಾರ್ಥ ಕೊಡಲು ಸದಾ ತತ್ಪರನಾಗಿರುವ ಕರುಣಾಸಾಗರ. ಚತುರ್ ವರ್ಣದ ಅಸಂಖ್ಯಾತ ಭಕ್ತರು ಆತನ ಕೃಪೆಯಿಂದ  ನೈಜ ಜ್ಞಾನವನ್ನು ಪಡೆದು ಉತ್ತಮಗತಿ ಹೊಂದಿದರು. ಮಂಗಳಗಳಿಗೆ ಮಂಗಳ ಪ್ರದನು, ಪವಿತ್ರಕ್ಕೆ ಪವಿತ್ರತೆ ನಿಡುವವನಾದ ಶ್ರೀದತ್ತನು ಲೋಕ ಕಲ್ಯಾಣಕ್ಕಾಗಿ ನಾನಾ ರೂಪದಲ್ಲಿ ಅವತರಿಸಿದನು.

೧. ಶ್ರೀಪಾದ ಶ್ರೀವಲ್ಲಭ (ಪೀತಾಪುರ ಮತ್ತು ಕುರುವಪುರ)
೨. ನರಸಿಂಹ ಸರಸ್ವತಿ (ಗಾಣಗಾಪುರ)
೩. ಶ್ರೀ ಸ್ವಾಮಿಸಮರ್ಥ (ಅಕ್ಕಲಕೋಟೆ)
 ೪. ಮಾಣಿಕ್ಯ ಪ್ರಭು (ಬೀದರ್)

ಶ್ರೀದತ್ತನ ಹಲವಾರು ಅಂಶ ಅವತಾರಗಳು ಅಸಂಖ್ಯಾತ ಭಕ್ತರನ್ನು ಅನುಗ್ರಹಿಸಿ ಜಗತ್ತಿನ ಕಲ್ಯಾಣದ ಧ್ಯೇಯ ಸಾಧನೆ ಮಾಡಿದವು.

ಗಾಣಗಾಪುರದಲ್ಲಿ ದತ್ತ ಪ್ರಭುಗಳು ನರಸಿಂಹ ಸರಸ್ವತಿ ರೂಪದಲ್ಲಿ ಭಕ್ತರ ಮೇಲೆ ಅನುಗ್ರಹಮಾಡಲು ಅಸಂಖ್ಯಾತ ಮಹಿಮೆಯನ್ನು, ಲೀಲೆ ಗಳನ್ನು ನಡೆಸಿದರು.ಗುರುಗಳ ಅನುಗ್ರಹದಿಂದ ಸಿದ್ದರು ಭಕ್ತ ನಾಮಧಾರಕನಿಗೆ ಶ್ರೀ ಗುರು ಗಳ ಮಹಿಮೆಯನ್ನು ಲೀಲೆಗಳನ್ನು ಬೋಧಿಸುತ್ತಾರೆ. ಇದನ್ನು ಸರಸ್ವತಿ ಗಂಗಾಧರರು ಗುರುಗಳ ಆಶೀರ್ವಾದ ಪಡೆದು ಶ್ರೀ ಗುರುಚರಿತ್ರೆಯನ್ನು ರಚಿಸುತ್ತಾರೆ. ಶ್ರೀಗುರುಚರಿತ್ರೆ ಪರಮ ಪವಿತ್ರವಾದ ಗ್ರಂಥವಾಗಿದ್ದು ಇದರಲ್ಲಿ ಶ್ರೀಗುರುಗಳ ಸಾನಿದ್ಯವಿದೆ.ಶ್ರದ್ಧೆ, ಭಕ್ತಿಯಿಂದ ಶ್ರೀಗುರುಚರಿತ್ರೆಯ ಪಾರಾಯಣದಿಂದ ಸಕಲ ಇಷ್ಟಾರ್ಥ ಗಳು ಸಿದ್ದಿಸುತ್ತದೆ. ಪಾಪಕರ್ಮಗಳು ನಾಶಹೊಂದುತ್ತವೆ. ಅಜ್ಞಾನ ನಾಶಗೊಳಿಸುತ್ತದೆ. ನಿಯಮ ನಿಷ್ಠೆಯಿಂದ ಸಪ್ತಾಹ ಪಾರಾಯಣ ಮಾಡುವುದರಿಂದ ಇಚ್ಛಿತ ಫಲ ದೊರಕುತ್ತದೆ.
ಶ್ರೀಗುರುಚರಿತ್ರೆ ಗ್ರಂಥವೂ ಅತ್ಯಂತ ಮಹತ್ವ ಹೊಂದಿದ್ದು ಪರಮ ಪವಿತ್ರಗ್ರಂಥವಾಗಿದೆ. ಇದರ ಪಾರಾಯಣದಿಂದ ಕಷ್ಟಗಳು ದೂರವಾಗಿ, ಜೀವನದಲ್ಲಿ ಶಾಂತಿ, ನೆಮ್ಮದಿ, ಲಭಿಸುತ್ತದೆ. ಇದು ಸದ್ಭಕ್ತರ ಅನುಭವದ ಮಾತಾಗಿದೆ.
ಕಪಟ, ಮೋಸ, ಡಾಂಭಿಕತೆ, ತೊರೆದು. ಭಕ್ತಿ, ಪ್ರೇಮ, ಸದಾಚಾರ, ಪರಿಶುದ್ಧ ಮನಸ್ಸಿನಿಂದ ನಾಮಸ್ಮರಣೆ, ಶ್ರೀದತ್ತನ ಅನುಗ್ರಹ ಪಡೆಯಲು ಸಾಧನಗಳಾಗಿವೆ. ಸಮಸ್ತ ಜೀವರಾಶಿಗಳನ್ನು ಶ್ರೀದತ್ತಾತ್ರೇಯರು ಸಮಭಾವದಿಂದ (ಸಮ ದೃಷ್ಟಿಯಿಂದ) ಕಾಣುತ್ತಾರೆ. ಅವರ ಅನುಗ್ರಹ ಪಡೆಯಲು ವರ್ಣಆಶ್ರಮಗಳಿಗಿಂತ ಪರಿಶುದ್ಧಭಕ್ತಿಯಿಂದ ಅವನ ಸ್ಮರಣೆ ಒಂದೇ ಸಾಕಾಗಿದೆ. ಶ್ರೀಗುರುಚರಿತ್ರೆ ಪಾರಾಯಣ ಮಾಡುವ ವಿಧಾನ ಗ್ರಂಥದಲ್ಲಿ ನೀಡಲಾಗಿದೆ ಭಕ್ತರು ಅವರ ಶಕ್ತಿಯ ಅನುಸಾರ ಅದನ್ನು ಪಾಲಿಸಬೇಕು. ಜನ್ಮ ಸಾಫಲ್ಯ ಮಾಡುವ ಶ್ರೀಗುರುಗಳ ಆಶೀರ್ವಾದ ಪಡೆಯಲು ಅವರ ಮಹಿಮೆಯನ್ನು ಸಾರುವ "ಶ್ರೀಗುರುಚರಿತ್ರೆ" ಪವಿತ್ರಗ್ರಂಥ ರಾಜಮಾರ್ಗವಾಗಿದೆ.
॥ಶ್ರೀ ಕೃಷ್ಣಾರ್ಪಣಮಸ್ತು॥
***
gangapur

**





No comments:

Post a Comment