SEARCH HERE

Monday, 1 April 2019

gotra system gotram gothra ಗೋತ್ರ


Namaskaram. An interesting article on gothram:  

Genetics behind Hindu Gotra System

In Hindu society, the term gotra means clan. It broadly refers to people who are descendants in an unbroken male line from a common male ancestor.

However, all families having same gotra need not be cousins.

They can be descendants of sons or disciples or even adopted sons of the Rishi(Seer), who is the root and whose name is used as Gotra.

For example if a person says that he belongs to the Kutsa Gotra then it means that he traces back his male ancestry to the ancient Rishi (Saint or Seer) Kutsa.

Gotra means cowshed (Go=Cow, tra=shed) in Sanskrit. Pāṇini defines gotra for grammatical purposes as apatyam pautraprabhrti gotram (IV. 1. 162), which means “the word gotra denotes the progeny (of a sage) beginning with the son’s son.”

This system was started among Brahmins, with a purpose to classify and identify the families in the community.

Hindu Brahmins identify their male lineage by considering themselves to be the descendants of the 8 great Rishis i.e Saptarishis (The Seven Sacred Saints) + Bharadwaja Rishi. So the list of root Brahmin Gotras is as follows :

Angirasa
Atri
Gautam
Kashyapa
Bhrigu
Vasistha
Kutsa
Bharadwaja
The offspring (apatya) of these eight are gotras and others than these are called ‘ gotrâvayava ‘.

These eight sages are called gotrakarins from whom all the 49 gotras (especially of the Brahmins) have evolved. For instance, from Atri sprang the Atreya and Gavisthiras gotras.

In almost all Hindu families, marriage within the same gotra is prohibited, since people with same gotra are considered to be siblings.

But the hidden reason behind this practice is the ‘Y Chromosome‘ which is expected to be common among all male in same gotra. So, the woman too carries similar X Chromosome and if married, their offspring may be born with birth defects.

Few families even maintain their Pravara which is a list of all seers through which their Gotra was derived.

It connects to the root Seer.

Gotra is always passed on from father to children among most Hindus, just like lastname(surname) is passed on worldwide. However, among Malayalis and Tulu’s its passed on from mother to children.

Additional rule in the Gotra system is that, even if the Bride and Bridegroom belong to different Gotras, they still cannot get married even if just one of their Gotra Pravara matches.

Now, why only male carries fixed lastname and gotra and why female can change her lastname, gotra after marriage ?

Genes & Chromosomes among Humans

Humans have 23 pairs of Chromosomes and in each pair one Chromosome comes from the father and the other comes from the mother. So in all we have 46 Chromosomes in every cell, of which 23 come from the mother and 23 from the father.

Of these 23 pairs, there is one pair called the Sex Chromosomes which decide the gender of the person. During conception, if the resultant cell has XX sex chromosomes then the child will be a girl and if it is XY then the child will be a boy. X chromosome decides the female attributes of a person and Y Chromosome decides the male attributes of a person.

When the initial embryonic cell has XY chromosome, the female attributes get suppressed by the genes in the Y Chromosome and the embryo develops into a male child. Since only men have Y Chromosomes, son always gets his Y Chromosome from his father and the X Chromosome from his mother. On the other hand daughters always get their X Chromosomes, one each from both father and mother.

So the Y Chromosome is always preserved throughout a male lineage (Father – Son – Grandson etc) because a Son always gets it from his father, while the X Chromosome is not preserved in the female lineage (Mother, Daughter, Grand Daughter etc) because it comes from both father and mother.

A mother will pass either her mother’s X Chromosome to her Children or her father’s X Chromosome to her children or a combination of both because of both her X Chromosomes getting mixed (called as Crossover). On the other hand, a Son always gets his father’s Y Chromosome and that too almost intact without any changes because there is no corresponding another Y chromosome in his cells to do any mixing as his combination is XY, while that of females is XX which hence allows for mixing as both are X Chromosomes.

Women never get this Y Chromosome in their body. And hence Y Chromosome plays a crucial role in modern genetics in identifying the Genealogy ie male ancestry of a person. And the Gotra system was designed to track down the root Y Chromosome of a person quite easily. If a person belongs to Angirasa Gotra then it means that his Y Chromosome came all the way down over thousands of years of timespan from the Rishi Angirasa!

And if a person belongs to a Gotra (say Bharadwaja) with Pravaras (Angirasa, Bhaarhaspatya, Bharadwaja), then it means that the person’s Y Chromosome came all the way down from Angirasa to Bhaarhaspatya to Bharadwaja to the person.

This also makes it clear why females are said to belong to the Gotra of their husbands after marriage. That is because women do not carry Y Chromosome, and their Sons will carry the Y Chromosome of the Father and hence the Gotra of a woman is said to be that of her husband after marriage.

Shrinking size of Y Chromosome

Y is the only Chromosome which does not have a similar pair in the human body. The pair of the Y Chromosome in humans is X Chromosome which is significantly different from Y Chromosome. Even the size of the Y Chromosome is just about one third the size of the X Chromosome. In other words throughout evolution the size of the Y Chromosome has been decreasing and it has lost most of its genes and has been reduced to its current size. Scientists are debating whether Y Chromosome will be able to survive for more than a few million years into the future or whether it will gradually vanish, and if it does so whether it will cause males to become extinct! Obviously because Y Chromosome is the one which makes a person male or a man.

Y Chromosome has to depend on itself to repair any of its injuries and for that it has created duplicate copies of its genes within itself. However this does not stop DNA damages in Y Chromosome which escape its local repair process from being propagated into the offspring males. This causes Y Chromosomes to accumulate more and more defects over a prolonged period of evolution and scientists believe that this is what is causing the Y Chromosome to keep losing its weight continuously.

Y Chromosome which is crucial for the creation and evolution of males has a fundamental weakness which is denying it participation in the normal process of evolution via Chromosomal mix and match to create better versions in every successive generation, and this weakness MAY lead to the extinction of Y Chromosome altogether over the next few million years, and if that happens scientists are not sure whether that would cause males to become extinct or not. And that is because Scientists are not sure whether any other Chromosome in the 23 pairs will be able to take over the role of the Y Chromosome or not.

On the other hand, it is not necessary that humanity will not be able to survive if males become extinct. Note that females do not need the Y Chromosome, and since all females have X Chromosomes, it would be still possible to create a mechanism where X Chromosomes from different females are used to create offspring, say like injecting the nuclei from the egg of one female into the egg of another female to fertilize it and that would grow into a girl child. So yes, that would be a humanity where only females exist.

Gotra System helps to protect the Y Chromosome from becoming extinct

Even modern scientists have concluded that children born to parents having blood relation (like cousins) can have birth defects.

For example, there is a recessive dangerous gene in one person. What this means is that say a person is carrying a dangerous abnormality causing gene in one of his chromosome, but whose effect has been hidden in that person (or is not being expressed) because the corresponding gene in the pairing Chromosome is stronger and hence is preventing this abnormality causing gene from activating.

Now there are fair chances that his offsprings will be carriers of these genes throughout successive generations. As long as they keep marrying outside his genetic imprint, there is a fair chance that the defective gene will remain inactive since others outside this person’s lineage most probably do not have that defective gene. Now if after 5-10 generations down the line say one of his descendants marries some other descendant who may be really far away cousins. But then there is a possibility that both of them are still carrying the defective gene, and in that case their children will definitely have the defective gene express itself and cause the genetic abnormality in them as both the Chromosomes in the pair have the defective genes. Hence, the marriages between cousins always have a chance of causing an otherwise recessive, defective genes to express themselves resulting in children with genetic abnormalities.

So, Ancient Vedic Rishis created the Gotra system where they barred marriage between a boy and a girl belonging to the same Gotra no matter how deep the lineage tree was, in a bid to prevent inbreeding and completely eliminate all recessive defective genes from the human DNA.

*****

PDF -->  ಗೋತ್ರ-pravara 
ಗೋತ್ರಗಳ ಹಿಂದಿರುವ ವೈಜ್ಞಾನಿಕ ಮಹತ್ವ:
ಭಾರತದಲ್ಲಿ ಗೋತ್ರ ಪದ್ಧತಿ
ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. 

ಒಬ್ಬ ವ್ಯಕ್ತಿಯು ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಾಹೋಗುತ್ತಾನೆ.
ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.
ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.
ಇಲ್ಲಿ ಇನ್ನೊಂದು ಸೂಕ್ಷ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.
ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
* ಗೋತ್ರ ಎಂದರೇನು? 
* ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ? 
* ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ? 
* ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ?
* ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?

ಪ್ರಥಮತವಾಗಿ "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲ ಪುರುಷ ಯಾವುದೋ ಋಷಿ ಅಥವಾ ಅಷ್ಟ ಋಷಿಗಳಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. {ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ, +ಭಾರಧ್ವಾಜ}

ಸಪ್ತಧಾತು ಸಮಪಿಂಡಂl ಸಮಯೋನಿ ಸಮುದ್ಭವಂl ಆತ್ಮಜೀವ ಸಮಾಯುಕ್ತಂl ಸೃಷ್ಟಿಕಾರ್ಯ ನಿರಂತರಂll

ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ 
ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತ ಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು. ತಂದೆಯ ಇಪ್ಪತ್ತ ಮೂರು 'XY' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು.


ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ. ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ. ಇಂತಹಾ ಉದಾತ್ತ ಋಷಿ ಪರಂಪರೆಯಲ್ಲಿ ಹುಟ್ಟಿದ ಹಾಗೂ ಪ್ರಪಂಚದ ಇತರೆ ನಾಗರಿಕತೆಯು ಕಣ್ಬಿಡುವ ಮುನ್ನ ವೈಜ್ಞಾನಿಕ ಕ್ರಾಂತಿಯನ್ನೇ ಮಾಡಿದ ನನ್ನ ಭಾರತಾಂಬೆಯ ಮಡಿಲಿಗೆ ಕೋಟಿ ಕೋಟಿ ನಮನಗಳು.
****
by varadaraya bhagavat
ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.
ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.
ಸೂತ್ರ ಎಂದರೆ
ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: 
ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. 
ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. 
ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯಸೂತ್ರದ ಪ್ರಕಾರ ಷೋಡಶಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.

ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . . ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು? ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.
ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರುಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆಯ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ, ಸೂತ್ರ ಎನ್ನುವುದು.

ಈ ಗೋತ್ರ,ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. "ಗೋತ್ರ, ಪ್ರವರ,ನಿರ್ಣಯ" ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ, ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶಾತ್ಮಕವಾಗಿ ಬರೆಯಬೇಕು.

ಗೋತ್ರ,ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. 
ಭೃಗು
ಆಂಗೀರಸ
ಮರೀಚಿ
ಅತ್ರಿ
ಪುಲಹ
ಪೌಲಸ್ತ್ಯ
ವಸಿಷ್ಠ
ಎಂಬುದಾಗಿ ಏಳುಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ 
ಭೃಗು
ಆಂಗೀರಸ
ಮರೀಚಿ
ಅತ್ರಿ 
ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.

ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:

೧. ಜಮದಗ್ನಿ - ಭೃಗು ವಂಶಸ್ಥರು (೧)
೨. ಭರದ್ವಾಜ - ಆಂಗೀರಸ ವಂಶಸ್ಥರು (೨)
೩. ಗೌತಮ - ಮೇಲಿನಂತೆ
೪. ಕಾಶ್ಯಪ - ಮರೀಚಿ ವಂಶಸ್ಥರು (೩)
೫. ವಸಿಷ್ಠ - ಮೇಲಿನಂತೆ
೬. ಅಗಸ್ತ್ಯ - ಮೇಲಿನಂತೆ
೭. ಅತ್ರಿ - ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (೪)
೮. ವಿಶ್ವಾಮಿತ್ರ - ಅತ್ರಿ ಋಷಿಯ ವಂಶಸ್ಥರು

ಈ ರೀತಿ ನಾಲ್ಕುಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.

ಮೇಲೆ ತಿಳಿಸಿದ ಎಂಟುಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತುಋಷಿವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣಕುಲಕ್ಕೆ ಸೇರಿದವರಾದರು. ಎಂದರೆ ಭೃಗುವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-

೧. ವೀತಹವ್ಯ - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ - ಮೇಲಿನಂತೆ
೩, ಶುನಕ - ಮೇಲಿನಂತೆ
೪, ವೇನ - ಮೇಲಿನಂತೆ
೫. ರಥೀತರ - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ - ಮೇಲಿನಂತೆ
೭. ವಿಷ್ಣುವೃದ್ಧ - ಮೇಲಿನಂತೆ
೮. ಹಾರೀತ - ಮೇಲಿನಂತೆ
೯. ಕಣ್ವ - ಮೇಲಿನಂತೆ
೧೦.ಸಂಕೃತಿ -ಮೇಲಿನಂತೆ

ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು.

🙏🙏🙏🙏🙏
ಶ್ರೀ ವರದರಾಯ ಭಾಗವತ್
*****

#ಗೋತ್ರಮತ್ತುಪ್ರವರ
ಸಗೋತ್ರರಾದ ಅಥವಾ ಸಪ್ರವರರಾದ ಗಂಡು ಹೆಣ್ಣುಗಳ ಮದುವೆ ಮದುವೆಯೇ ಅಲ್ಲ: ಅಂಥ ಮದುವೆ ನಡೆದರೂ ಆ ಸ್ತ್ರೀ ಆ ಪುರುಷನ ಪತ್ನಿಯಾಗಲಾರಳು. ಒಬ್ಬ ಪುರುಷ ಸಗೋತ್ರ ಸ್ತ್ರೀಯೊಡನೆ ಸಂಪರ್ಕ ಮಾಡಿದರೆ ಅವನು ಪಾಪವಿಮೋಚನೆಗಾಗಿ ಚಾಂದ್ರಾಯಣ ವ್ರತ ನಡೆಸಬೇಕೆಂದೂ ಅನಂತರ ಆ ಸ್ತ್ರೀಯನ್ನು ಕೈ ಬಿಡದೆ ಅವಳನ್ನು ತನ್ನ ತಾಯಿಯೊಂತೆಯೋ ತಂಗಿಯಂತೆಯೋ ನೋಡಿಕೊಳ್ಳಬೇಕೆಂದೂ ಬೌಧಾಯನ ವಿಧಿಸುತ್ತಾನೆ. ಅವರಿಗೆ ಒಂದು ಮಗು ಹುಟ್ಟಿದರೆ ಅದಕ್ಕೆ ಪಾಪ ಅಂಟುವುದಿಲ್ಲ; ಅದು ಕಶ್ಯಪ ಗೋತ್ರವನ್ನೇ ಅಂಗೀಕರಿಸಬೇಕು....ಇದು ಶಾಸ್ತ್ರ ಸಮ್ಮತವಾದದ್ದು

#ಗೋತ್ರಅಂದರೆಏನು 
ಋಗ್ವೇದದ ಕೆಲವು ಶ್ಲೋಕಗಳಲ್ಲಿ ಗೋತ್ರ ಎಂದರೆ ಗೋ ಸಮೂಹ ಎಂಬ ಅರ್ಥ ಬರುವಂತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅದು ಗುಂಪು ಎಂಬರ್ಥದಲ್ಲಿ ಬಳಕೆಯಾಗಿದೆ. ಕಾಲಕ್ರಮೇಣ ಅದು (ರಕ್ತ ಸಂಬಂಧವುಳ್ಳ) ವ್ಯಕ್ತಿಗಳ ಸಮೂಹ ಎಂಬರ್ಥವನ್ನು ಪಡೆಯಿತು. ಒಂದೊಂದು ಕುಟುಂಬವೂ ತನ್ನ ಮೂಲಪುರುಷ ಒಬ್ಬ ಋಷಿ ಎಂದು ಹೇಳಿಕೊಳ್ಳುತ್ತಿದೆ. ಅವನೇ ಆ ಕುಟುಂಬದ ಜನಕ. ಹೀಗೆ ಒಬ್ಬ ಪುರುಷನಿಂದ ಆರಂಭವಾಗಿ ಮುಂದೆ ನಿರಂತರವಾಗಿ ಬಂದ ಪುರುಷ ಸಂತಾನಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳೂ ಒಂದು ಗೋತ್ರಕ್ಕೆ ಸೇರಿದವರು. ಇದೇ ಗೋತ್ರದ ವಿಷಯವಾಗಿರುವ ಸಾಮಾನ್ಯ ಭಾವನೆ. ಒಬ್ಬ ತಾನು ಜಮದಗ್ನಿ ಗೋತ್ರದವನು ಎಂದು ಹೇಳಿಕೊಂಡರೆ ಅವನ ಅಭಿಪ್ರಾಯವಿಷ್ಟೇ: ತನ್ನ ಹಿಂದಿನ ಪುರುಷಸಂತಾನಗಳ ಮೂಲಪುರುಷ ಜಮದಗ್ನಿ ಎಂಬ ಪ್ರಾಚೀನ ಮಹರ್ಷಿ.
ಗೋತ್ರ ಪದ್ಧತಿ ತನ್ನ ಉಪಶಾಖೆಗಳೊಡನೆ ಬ್ರಾಹ್ಮಣಗಳ ಮತ್ತು ಪ್ರಾಚೀನ ಉಪನಿಷತ್ತುಗಳ ಕಾಲಕ್ಕೆ ರೂಢಮೂಲವಾಗಿತ್ತು. ಉದಾಹರಣೆಗೆ ಬ್ರಾಹ್ಮಣಗಳಲ್ಲಿ ನಾವು ನೋಡುವಂತೆ ಅನೇಕ ವೈದಿಕ ಕುಟುಂಬಗಳು ತಮ್ಮ ನಿಜವಾಗಿರಬಹುದಾದ ಅಥವಾ ಕಾಲ್ಪನಿಕವಾಗಿರಬಹುದಾದ ಮೂಲಪುರುಷರಿಗನುಗುಣವಾಗಿ ಅನೇಕ ಗುಂಪುಗಳಾಗಿ ವ್ಯವಸ್ಥೆಗೊಂಡಿದ್ದುವು. ಅಂತೆಯೆ ತಾವು ಸೇರಿದ ಆಯಾ ಗುಂಪಿಗನುಗುಣವಾದ ಪೂಜಾವಿಧಾನಗಳನ್ನು ಅನುಸರಿಸುತ್ತಿದ್ದರು. ಭೃಗುಗಳು ಇಲ್ಲವೆ ಆಂಗೀರಸರು ತಮತಮಗೆ ನಿರ್ಧಿಷ್ಟವಾದ ಮಂತ್ರಗಳೊಂದಿಗೆ ಹೋಮಾದಿಗಳನ್ನು ನಡೆಯಿಸಬೇಕೆಂದು ತೈತ್ತೀರಿಯ ಬ್ರಾಹ್ಮಣಗಳು ವಿಧಿಸುತ್ತವೆ. ಉಪನಿಷತ್ತುಗಳಲ್ಲಿ ಋಷಿಗಳ ಆತ್ಮವಿದ್ಯೆಯನ್ನುಪದೇಶಿಸಿದಾಗ ತಮ್ಮ ಶಿಷ್ಯರನ್ನು ಅವರವರ ಗೋತ್ರ ಹೆಸರುಗಳ ಮೂಲಕ ಸಂಬೋಧಿಸುತ್ತಿದ್ದರು. ಎಂದರೆ ಮೇಲಿನ ಕೃತಿಗಳಲ್ಲಿ ಹೋಮ ಅಥವಾ ಅಧ್ಯಯನಗಳಿಗೆ ಸಂಬಂಧಿಸಿದ ಸನ್ನಿವೇಶಗಳಲ್ಲಿ ಗೋತ್ರ ಅಥವಾ ಸಗೋತ್ರಗಳ ಉಲ್ಲೇಖ ಬಂದಿಲ್ಲವೆಂದೇ ಹೇಳಬಹುದು.

#ಗೋತ್ರಮತ್ತುಅದರ_ಶಾಖೆಗಳು

ಆರಂಭದಲ್ಲಿ ಎಂಟು ಜನ ಮೂಲಪುರುಷರಿದ್ದರೆಂದೂ ಅವರಿಗೆ ಸಂಬಂಧಿಸಿದ ಎಂಟು ಗೋತ್ರಗಳು ಮಾತ್ರ ಇದ್ದುವೆಂದೂ ಹೇಳಲಾಗಿದೆ. ಈ ಎಂಟು ಜನ ಮೂಲಪುರುಷರು ಕುಲವೃದ್ಧರಾದ ಋಷಿಗಳಾದ್ದರಿಂದ ಇವರು ಬ್ರಹ್ಮನ ಎಂಟು ಜನ ಪುತ್ರರೆಂದು ಸಂಪ್ರದಾಯ ಹೇಳುತ್ತದೆ. ಇವರು ಮೊದಲು ಕಶ್ಯಪ, ವಸಿಷ್ಠ, ಅಗಸ್ತ್ಯ, ಭೃಗು, ಗೌತಮ, ಭಾರದ್ವಾಜ, ಅತ್ರಿ ಮತ್ತು ವಿಶ್ವಾಮಿತ್ರ ಎಂಬ ಎಂಟು ಗೋತ್ರಗಳನ್ನು ಸ್ಥಾಪಿಸಿದರು. ಇದೇ ಪ್ರಾತಿನಿಧಿಕವಾದ ಬ್ರಾಹ್ಮಣ ಗೋತ್ರಗಳು. ಕ್ಷತ್ರಿಯರಿಂದ ಸ್ಥಾಪಿತವಾದ ಇನ್ನೂ ಹತ್ತು ಗೋತ್ರಗಳಿವೆ. ಕಾಲಕಳೆದಂತೆ ಈ ಮೂಲಪುರುಷರಾದ ಋಷಿಗಳ ಸಂತತಿಯವರು ನೂರಾರು ಗೋತ್ರಗಳನ್ನು ಸ್ಥಾಪಿಸಿದರು. ಅನೇಕ ಕುಟುಂಬಗಳು ಇವುಗಳ ಹೆಸರುಗಳನ್ನು ಧರಿಸಿದುವು. ಬೇರೆ ಜಾತಿಗಳಲ್ಲೂ ಬ್ರಾಹ್ಮಣ ಗೋತ್ರಗಳನ್ನು ಕಾಣಬಹುದು. ಬ್ರಾಹ್ಮಣರಲ್ಲಿ ಗೋತ್ರವು ಸಂತತಿಯ ಮೂಲಪುರುಷನನ್ನು ಸೂಚಿಸಿದರೆ ಬೇರೆ ಜಾತಿಗಳಲ್ಲಿ ಅದು ಅವರ ಸಂತತಿಯ ಒಬ್ಬ ವ್ಯಕ್ತಿಗೆ ಕುಲಪುರೋಹಿತನಾಗಿದ್ದ ಋಷಿಯನ್ನು ಸೂಚಿಸುತ್ತದೆ.

#ಗೋತ್ರದ_ಪ್ರಾಮುಖ್ಯ

ಗೋತ್ರಕ್ಕೆ ಅನೇಕ ಮೂಲಭೂತ ವಿಷಯಗಳಲ್ಲಿ ಅಪಾರ ಪ್ರಾಮುಖ್ಯವಿದೆ. ಗೋತ್ರ ಹಿಂದೂಗಳ ಅಸಂಖ್ಯಾತ ಆಚಾರ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಸಗೋತ್ರ ವಿವಾಹಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಿವಾಹದ ಲಾಜಹೋಮದಲ್ಲಿ ಎಲ್ಲರೂ ಎರಡು ಆಹುತಿಗಳನ್ನು ಕೊಡಬೇಕು. ಜಾಮದಗ್ನ್ಯರು ಮಾತ್ರ ಮೂರು ಆಹುತಿಗಳನ್ನು ಕೊಡಬೇಕು. ಒಬ್ಬ ಹಿಂದೂ ಅಪುತ್ರಕನಾಗಿ ಮಡಿದರೆ ಅವನ ಗೋತ್ರಕ್ಕೆ ಸೇರಿದವರು ಅವನ ಆಸ್ತಿಗೆ ವಾರಸುದಾರರಾಗಬಹುದು. ಶ್ರಾದ್ಧಕ್ಕೆ ಆಹ್ವಾನಿತರಾಗಿ ಬಂದಿರುವವರು ಆಹ್ವಾನಿಸಿರುವವನ ಗೋತ್ರಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಸೇರಿರಬಾರದು. ಸ್ವಲ್ಪ ಹಿಂದೆ ಮಡಿದ ವ್ಯಕ್ತಿಯ ಪ್ರೇತಕ್ಕೆ ತರ್ಪಣ ಕೊಡುವಾಗ ಅವನ ಹೆಸರನ್ನೂ ಅವನ ಗೋತ್ರದ ಹೆಸರನ್ನು ಕೂಡಿಸಿ ಉಚ್ಚರಿಸಬೇಕು.  ಚೌಲ ಕರ್ಮದಲ್ಲಿ ವಟುವಿನ ಕುಟುಂಬದ ಗೋತ್ರ ಮತ್ತು ಸಂಪ್ರದಾಯದ ಪ್ರಕಾರ ಅವನ ತಲೆಯ ಮೇಲೆ ಸ್ವಲ್ಪ ಕೂದಲನ್ನು ಉಳಿಸುತ್ತಾರೆ. ಪ್ರಾತಃಕಾಲ ಮತ್ತು ಸಂಧ್ಯಾ ಕಾಲದ ಪ್ರಾರ್ಥನೆಗಳಲ್ಲಿ ಪ್ರತಿಯೊಬ್ಬನೂ ತನ್ನ ಗೋತ್ರ ಪ್ರವರಗಳನ್ನು ಉಚ್ಚರಿಸಬೇಕು.

#ಪ್ರವರದ_ಅರ್ಥ

ಗೋತ್ರಕ್ಕೆ ಬಹು ನಿಕಟವಾಗಿ ಹೆಣೆದುಕೊಂಡಿರುವ ಮತ್ತೊಂದು ತತ್ತ್ವ ಪ್ರವರ. ಈ ಶಬ್ದ ಋಗ್ವೇದದಲ್ಲಿ ಬಳಕೆಯಾಗಲಿಲ್ಲ. ಆದರೆ ಅದಕ್ಕೆ ಸಮಾನಾರ್ಥಕವಾದ ಆರ್ಷೇಯ ಎಂಬುದು ಅಲ್ಲಿದೆ. ಪ್ರವರ ಎಂಬುದಕ್ಕೆ ವಾಚ್ಯಾರ್ಥ ಪ್ರಾರ್ಥನೆ ಎಂದು. ಯಜ್ಞ ಮಾಡುವವನ ಹವಿಸ್ಸನ್ನು ಹಿಂದೆ ಅಗ್ನಿಯನ್ನು ಆಹ್ವಾನಿಸಿದ್ದ ಋಷಿಗಳ ಹೆಸರುಗಳೊಡನೆ ದೇವತೆಗಳಿಗೆ ಕೊಂಡೊಯ್ಯುವಂತೆ ಅಗ್ನಿಯನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದುದರಿಂದ ಪ್ರವರ ಎಂಬ ಪದ ಯಜ್ಞ ಮಾಡುವವನ ಪೂರ್ವಜರಾದ ಒಬ್ಬ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಋಷಿಗಳನ್ನು ಸೂಚಿಸತೊಡಗಿದರು.
ಪ್ರವರ ಗೃಹಸಂಬಂಧದ ಅನೇಕ ಅಚಾರ ವ್ಯವಹಾರಗಳೊಂದಿಗೆ ನಿಕಟ ಸಂಪರ್ಕ ಪಡೆದಿದೆ. ಅವುಗಳಲ್ಲಿ ವಿವಾಹ ಅತಿ ಮುಖ್ಯವಾದುದು. ಹೆಣ್ಣಿನ ತಂದೆಯ ಪ್ರವರವೂ ಗಂಡಿನ ತಂದೆಯ ಪ್ರವರವೂ ಒಂದೇ ಆಗಿರಬಾರದು. ಉಪನಯನದ ಸಂದರ್ಭದಲ್ಲಿ ಕಟ್ಟುವ ಕಟಿಸೂತ್ರದಲ್ಲಿ ವಟುವಿನ ಪ್ರವರದಲ್ಲಿರುವ ಋಷಿಗಳ ಸಂಖ್ಯೆ ಅನುಗುಣವಾಗಿ ಒಂದು, ಮೂರು ಅಥವಾ ಐದು ಎಳೆಗಳು ಇರಬೇಕು. ಚೌಲ್ಯ ಸಮಯದಲ್ಲಿ ತಲೆಯ ಮೇಲೆ ಬಿಡುವ ಜುಟ್ಟು ಹುಡುಗನ ಕುಟುಂಬದ ಪ್ರವರಕ್ಕೆ ಸಂಬಂಧಿಸಿದ ಋಷಿಗಳ ಸಂಖ್ಯೆಯನ್ನು ಅನುಸರಿಸಿರುತ್ತದೆ.
ವಿವಾಹದ ವಿಧಿ ನಿಷೇಧಗಳಿಗೆ ಸಂಬಂಧಿಸಿದಂತೆ ಗೋತ್ರ ಮತ್ತು ಪ್ರವರಗಳನ್ನು ಬಳಸುತ್ತಾರೆ. ಒಂದೇ ಜಾತಿಯಲ್ಲಿ ಸಗೋತ್ರರು, ಸಪ್ರವರರು ಪರಸ್ಪರ ವಿವಾಹ ಮಾಡಿಕೊಳ್ಳುವಂತಿಲ್ಲ. ಒಬ್ಬ ಹುಡುಗಿ ಸಪ್ರವರಳಾಗಿರದಿದ್ದರೂ ಸಗೋತ್ರಳಾಗಿದ್ದರೆ ಸಾಕು ಅವಳನ್ನು ಮದುವೆ ಮಾಡಿಕೊಳ್ಳುವಂತಿಲ್ಲ. ಹಾಗೆಯೇ ಅವಳು ಸಗೋತ್ರಳಾಗಿರದಿದ್ದರೂ ಸಪ್ರವರಳಾಗಿದ್ದರೆ ಸಾಕು, ಅವಳನ್ನು ಮದುವೆ ಮಾಡಿಕೊಳ್ಳುವಂತಿಲ್ಲ. ಒಬ್ಬನಿಗೆ ತನ್ನ ಗೋತ್ರ ಪ್ರವರಗಳು ಗೊತ್ತಿರದಿದ್ದರೆ ಅವನು ತನ್ನ ಕುಲ ಪುರೋಹಿತನ ಗೋತ್ರಗಳನ್ನು ಅಂಗೀಕರಿಸಬೇಕು. ತನ್ನ ಕುಲಪುರೋಹಿತನ ಗೋತ್ರವನ್ನು ಬಳಸುತ್ತಿದ್ದರೂ ಅವನು ಆತನ ಮಗಳೊಬ್ಬಳನ್ನು ಬಿಟ್ಟು ಅದೇ ಗೋತ್ರಕ್ಕೆ ಸೇರಿದ ಇತರ ಹುಡುಗಿಯರನ್ನು ಬೇಕಾದರೆ ಮದುವೆ ಮಾಡಿಕೊಳ್ಳಬಹುದು.

(ಸಂಗ್ರಹ)
****

ನಮ್ಮ ಪರಿಚಯ

ಗೋತ್ರ-ವೇದ-ಶಾಖೆ-ಸೂತ್ರ
******
ಬ್ರಾಹ್ಮಣರಲ್ಲಿ ನೂರಾರು ಒಳಪಂಗಡಗಳಿವೆ. 

 ಈ ಪಂಗಡಗಳ ವಿಭಾಗೀಕರಣಕ್ಕೆ ಆಧಾರವೇನು? 
ಸಂಪ್ರದಾಯ ಎಂದರೇನು? ಶಾಖೆ ಎಂದರೇನು? 
ಮತ ಎಂದರೇನು? 
ಇಂತಹ ಮೂಲಭೂತವಾದ ಆದರೆ ಎಲ್ಲರೂ ತಿಳಿದರಲೇಬೇಕಾದ ಕೆಲವು ಪರಿಕಲ್ಪನೆಗಳನ್ನು ಕುರಿತು ವಿಶ್ಲೇಷಿಸುವುದೇ ಈ ಲೇಖನದ ವಿಷಯ. 

ಈ ವಿಷಯವನ್ನು ಸ್ಪಷ್ಟವಾಗಿ ಅರಿತು ಸ್ಮಾರ್ತ, ವೈಷ್ಣವ, ತ್ರಿಮತಸ್ಥ, ಇತ್ಯಾದಿ ಪದಗಳನ್ನು ಅವುಗಳು ಸೂಚಿಸುವ ಅರ್ಥದಲ್ಲಿಯೇ ಬಳಸುವಂತಾಗಬೇಕು

ಬ್ರಾಹ್ಮಣನೊಬ್ಬನು ತನ್ನ ಪರಿಚಯ ಮಾಡಿಕೊಳುವಾಗ ತನ್ನ ಗೋತ್ರ-ಪ್ರವರಗಳನ್ನು ಹೇಳಿ ಆಮೇಲೆ ಅಭಿವಾದಿಸುತ್ತಾನೆ. 
ಅರ್ಥಾತ್ ಈ ಗೋತ್ರ-ಪ್ರವರಗಳು ಅವನ ಐಡೆಂಟಿಟಿ; ಅಸ್ತಿತ್ವದ ಗುರುತುಪತ್ರ. 
ಅದನ್ನು ಹೇಳುವ ಕ್ರಮ ಹೀಗಿರುತ್ತದೆ.

“೧.ಚತುಃಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂಭವತು | ೨. .....................ಪ್ರವರಾನ್ವಿತ 
೩. ...............ಗೋತ್ರೋತ್ಪನ್ನಃ 
೪. ಋಗ್ವೇದಾಂತರ್ಗತ
೫.ಆಶ್ವಲಾಯನ ಸೂತ್ರ 
೬. ಶಾಖಲ ಶಾಖಾಧ್ಯಾಯೀ ___ಶರ್ಮಾ ಅಹಮ್| ಭೋಃ ಅಭಿವಾದಯೇ|”

ಈ ಎರಡೂವರೆ ಸಾಲುಗಳು ಬಹಳಷ್ಟು ಅರ್ಥವನ್ನು ವಿವರಣೆಗಳನ್ನು ಒದಗಿಸುತ್ತವೆ. ಒಂದೊಂದಾಗಿ ವಿಶ್ಲೇಷಿಸೋಣ.

೧. ಮೊದಲನೇಯ ವಾಕ್ಯವು ಭೌಗೋಳಿಕವಾಗಿ ನಮ್ಮ ಮೂಲವನ್ನು ಹೇಳುತ್ತದೆ. 
ಅಂದರೆ ನಮ್ಮ ಮೂಲಸ್ಥಾನ, ನೇಟಿವ್.
 
ಚತುಃಸಾಗರಪರ್ಯಂತದ ಭೂಭಾಗ ನಮ್ಮ ಮೂಲಸ್ಥಾನ. ಆಧುನಿಕ ವಿಜ್ಞಾನಿಗಳ ಪ್ರಕಾರ ಭೂಮಂಡಲ ಮೊದಲು ಒಂದೇ ಆಗಿದ್ದು ನಂತರ ಕಾಲಕ್ರಮೇಣ ಭೂಭಾಗಗಳು ದೂರ ಸರಿಯುತ್ತ ಇವತ್ತಿನ ಏಳು ಖಂಡಗಳಾದವು. 
ಭೂಭಾಗ ಒಂದೇ ಆಗಿದ್ದಾಗ ಈ ಮೇಲಿನ ಮಾತು ಹೇಳಿದ್ದು. 
ಅದನ್ನು ನಾವಿಂದಿಗೂ ಮರೆತಿಲ್ಲ. 
ಇದರ ಆಧಾರದ ಮೇಲೆ ’ಮೂಲನಿವಾಸಿಗಳು ದ್ರಾವಿಡರು, ಆರ್ಯರು ಹೊರಗಿನಿಂದ ಬಂದವರು” ಎಂಬ ವಾದ ಬಿದ್ದು ಹೋಗುತ್ತದೆ.  
’ವಸುಧೈವ ಕುಟುಂಬಕಮ್’ ಎಂಬ ಆರ್ಷವಾಣಿಯನ್ನು ಎತ್ತಿಹಿಡಿಯುತ್ತದೆ.

೨. ಗೋತ್ರ:
ಗೋತ್ರವು ನಮ್ಮಡಿಎನ್ಎ ಯನ್ನು ಸೂಚಿಸುತ್ತದೆ. 
ಕಲ್ಪದ ಆದಿಯಲ್ಲಿ ಬ್ರಹ್ಮ ಮಾನಸ ಪುತ್ರರಾದ ಸಪ್ತರ್ಷಿಗಳ ಸಂತಾನ ನಾವುಗಳು. 
ಅರ್ಥಾತ್ ನಮ್ಮ ದೇಹದಲ್ಲಿ ವಸಿಷ್ಠ , ಭರದ್ವಾಜ, ಕಶ್ಯಪ ಇತ್ಯಾದಿಗಳ ರಕ್ತವೇ ಹರಿಯುತ್ತಿದೆ. 
ನಾವುಗಳು ಮನಸ್ಸುಮಾಡಿದರೆ ಆ ಋಷಿಗಳ ಎತ್ತರಕ್ಕೆ ಬೇಳೆಯಬಹುದು. 
ಏಕೆಂದರೇ ಅವರ ಡಿಎನ್ಎ ನೇ ನಮ್ಮ ರಕ್ತಕಣದಲ್ಲಿರುವುದು. 
ಬೇಕಾಗಿರುವುದು ಅದರ ಶುದ್ಧೀಕರಣ ಮತ್ತು ಸಶಕ್ತೀಕರಣ.

೩. ಪ್ರವರ:
ಸಪ್ತರ್ಷಿಗಳ ನಂತರದ ಕಾಲದಲ್ಲಿ ಯಾರು ಯಾರನ್ನು ಮದುವೆಯಾಗಬಹುದು ಎಂಬುದನ್ನಿಟ್ಟುಕೊಂಡು ಒಂದು ವ್ಯವಸ್ಥೆಮಾಡಿಕೊಂಡರು. 
ಈ ಒಂದು/ಮೂರು/ಐದು/ಏಳು ಋಷಿಗಳಾದ ನಾವುಗಳು ಮೂಲತಃ ಒಂದೇ ಋಷಿಯ ಸಂತಾನ ಪರಂಪರೆಯಾದ್ದರಿಂದ ಈ ಗುಂಪನಿಂದ ಹೊರಗಿನ ಋಷಿ ಸಂತಾನವನ್ನು ಮದುವೆಯಾಗುವುದು. ಈ ವ್ಯವಸ್ಥೆಯೇ ಪ್ರವರ ವ್ಯವಸ್ಥೆ. 
ಇದು ಪ್ರಧಾನವಾಗಿ ಮದುವೆಯ ಉದ್ದೇಶದಿಂದಲೇ ನಿರ್ಮಾಣವಾದ ವ್ಯವಸ್ಥೆ. 

೪.ವೇದ:
ಗೋತ್ರ-ಪ್ರವರಗಳ ಜನನ, ರಕ್ತಮೂಲದ ಆಧಾರಮೇಲೆ ವಿಭಾಗಗಳಾದರೇ ವೇದ ಅಧ್ಯಯನ ಪರಂಪರೆಯ ಆಧಾರದ ಮೇಲೆ ನಿರ್ಮಿಸಲಾದ ವರ್ಗೀಕರಣ. 
ಭಗವಾನ್ ಬಾದರಾಯಣರು ತಮ್ಮ ನಂತರದ ಶಿಷ್ಯರಲ್ಲಿ ಸಮಗ್ರವೇದವನ್ನು ಅಭ್ಯಸಿಸಿ ಅರ್ಥಮಾಡಿಕೊಂಡು ಆಚರಣೆಯಲ್ಲಿ ತರುವುದರ ಮುಖಾಂತರ ವೇದದ ರಕ್ಷಣೆಯಲ್ಲಿ ಅಸಮರ್ಥರಾಗಿರುವುದನ್ನು ಕಂಡಿರಬಹುದು. 
ಅದಕ್ಕಾಗಿ ಒಂದೇ ಆಗಿರುವ ವೇದರಾಶಿಯಿಂದ ಛಂದೋಬದ್ಧವಾಗಿರುವ ಮಂತ್ರಗಳನ್ನೆಲ್ಲಾ ಒಂದುಕಡೆ ಸೇರಿಸಿ ತಮ್ಮ ಶಿಷ್ಯನಾದ ಪೈಲ ಎಂಬ ಋಷಿಗೆ ಒಪ್ಪಿಸಿದರು. 
ಅದು ’ಋಗ್ವೇದ’ ಎನಿಸಿಕೊಂಡಿತು. 
ಋಕ್ ಎಂದರೇ ಛಂದೂಬದ್ಧವಾಗಿರುವುದು ಅಂದರ್ಥ. 
ಅಂತೆಯೇ ಗೇಯಾನುಕೂಲವಾದ ಮಂತ್ರಗಳನ್ನು ಒಂದುಕಡೆ ತಂದು ಅವನ್ನು ತಮ್ಮ ಇನ್ನೊಬ್ಬ ಶಿಷ್ಯನಾದ ಜೈಮಿನಿ ಎಂಬ ಋಷಿಗೆ ಒಪ್ಪಿಸಿದರು. 
ಅದು ’ಸಾಮವೇದ’ವಾಯಿತು. ಸಾಮ ಎಂದರೆ ಧ್ವನಿಯ ಏರು-ಪೇರುಗಳು. 
ಹಾಗೆಯೇ ಲೌಕಿಕ ಪ್ರಯೋಜನಗಳುಳ್ಳ ಮಂತ್ರಗಳನ್ನೆಲ್ಲಾ ಒಂದುಗೂಡಿಸಿ ’ಸುಮಂತು’ ಎಂಬ ಶಿಷ್ಯನಿಗೊಪ್ಪಿಸಿದರು. ಆಶ್ಚರ್ಯವೆಂದರೇ ಈ ಎಲ್ಲ ಮಂತ್ರಗಳು ಅಥರ್ವ ಮತ್ತು ಅಂಗಿರಸ ಗೋತ್ರದ ಋಷಿಗಳಿಂದಲೇ ದೃಷ್ಟವಾಗಿದ್ದವು. 
ಆದ್ದರಿಂದ ಇದು ’ಅಥರ್ವವೇದ’ ಪ್ರಸಿದ್ಧಿ ಪಡೆಯಿತು. 
ಇನ್ನು ಉಳಿದ ಭಾಗವನ್ನು ’ವೈಶಂಪಾಯನ’ ಎಂಬ ಶಿಷ್ಯನಿಗೆ ಒಪ್ಪಿಸಿದರು. 
ಇದು ’ಯಜುರ್ವೇದ’ವೆನಿಸಿತು. 
ವೇದಗಳ ಆವಿರ್ಭಾವವೇ ಯಜ್ಞಕ್ಕೋಸ್ಕರ ಎಂದು ಯಾಸ್ಕರು ಹೇಳುತ್ತಾರೆ. ಮುಂದೆ ಸಾಯಣರೂ ಇದನ್ನೇ ಪ್ರತಿಪಾದಿಸಿದರು. 
ಆದ್ದರಿಂದ ಉಳಿದ ಭಾಗ ’ಯಜುರ್ವೇದ’ ಎಂದು ಹೆಸರು ಪಡೆದಿದ್ದು ಸರಿಯಾಗಿಯೇ ಇದೆ. 
  
ಈ ಈತಿ ವೇದಗಳನ್ನು ವಿಂಗಡಿಸಿದ್ದರಿಂದ ಬಾದರಾಯಣರು ’ವೇದವ್ಯಾಸ’ರೆನಿಸಿಕೊಂಡರು.
ಮುಂದೆ ಈ ವೈಶಂಪಾಯನ ಋಷಿಗೆ ’ಯಾಜ್ಞವಲ್ಕ್ಯ’ ಎಂಬ ಋಷಿ ಶಿಷ್ಯರಾದರು. 
ಇವರು ಮಹಾನ್ ಮೇಧಾವಿಗಳು ಮತ್ತು ಸೂರ್ಯೋಪಾಸರು. 
ತಾವು ಗುರುಗಳಿಂದ ಅಭ್ಯಸಿಸಿದ ವೇದ ಭಾಗವಲ್ಲದೇ ಸೂರ್ಯನ ಉಪಾಸನೆಯಿಂದ ಹೆಚ್ಚಿನದನ್ನೂ ಸಂಪಾದಿಸಿಕೊಂಡರು. ಗುರುಗಳಿಂದ ಕಲಿತ ವೇದಭಾಗವನ್ನು ತಮ್ಮ ಸಹಾಧ್ಯಾಯಿಗೆ ಒಪ್ಪಿಸಿ ತಾವು ಸಂಪಾದಿಸಿದ ಭಾಗವನ್ನು ತಾವೇ ಮುಂದುವರಿಸಿದರು. ತಮ್ಮ ಅಧ್ಯಯನ-ಅಧ್ಯಾಪನ ಪರಂಪರೆಯಲ್ಲಿ ಮಂತ್ರ ಮತ್ತು ಬ್ರಾಹ್ಮಣವಾಕ್ಯಗಳನ್ನು ಬೇರೆ ಬೇರೆಯಾಗಿ ಹೇಳುವ ಕ್ರಮ ರೂಢಿಸಿಕೊಂಡರು. 
ಆದ್ದರಿಂದ ಇದು ’ಶುಕ್ಲ-ಯಜುರ್ವೇದ’ ವೆಂದು ಪ್ರಸಿದ್ಧಿಯನ್ನು ಪಡೆಯಿತು. 
ಇವರ ಸಹಾಧ್ಯಾಯಿಗಳಾದರೋ ಮಂತ್ರ-ಬ್ರಾಹ್ಮಣವಾಕ್ಯಗಳನ್ನು ಬೆರಕೆ ಮಾಡಿಕೊಂಡೇ ಹೇಳತೊಡಗಿದರು. 
ಅದು ಬೆರಕೆಯಾಗಿದ್ದರಿಂದ ’ಕೃಷ್ಣ-ಯಜುರ್ವೇದ’ವೆಂದು ಪ್ರಸಿದ್ಧವಾಯಿತು. 

ವ್ಯಾಸರ ಶಿಷ್ಯರಾದ ಪೈಲಋಷಿಯ ಶಿಷ್ಯ ಪರಂಪರೆಯಲ್ಲಿ ಬಂದವರೆಲ್ಲಾ ’ಋಗ್ವೇದಿ’ಗಳಾದರು. 
ಹೀಗೆಯೇ ಯಾಜ್ಞವಲ್ಕ್ಯರ ಶಿಷ್ಯಪರಂಪರೆಯಲ್ಲಿ ಬಂದವರು ಶುಕ್ಲ-ಯಜುರ್ವೇದಿಗಳು; ವೈಶಂಪಾಯನ ಋಷಿಗಳ ಶಿಷ್ಯಪರಂಪರೆಯಲ್ಲಿ ಬಂದವರು ಕೃಷ್ಣ-ಯಜುರ್ವೇದಿಗಳು; ಜೈಮಿನಿಋಷಿಗಳ ಶಿಷ್ಯಪರಂಪರೆಯವರು ಸಾಮವೇದಿಗಳು; ಸುಮಂತು ಋಷಿಗಳ ಶಿಷ್ಯ ಪರಂಪರೆಯವರು ಅಥರ್ವವೇದಿಗಳಾದರು.

೫. ಶಾಖೆ:
ಈ ಮೇಲೆ ಹೇಳಿದ ಐದು ಋಷಿಗಳ ಶಿಷ್ಯಂದಿರು ತಮ್ಮ ತಮ್ಮ ಶಿಷ್ಯರುಗಳಿಗೆ ತಾವು ಕಲಿತ ವೇದಗಳನ್ನು ಹೇಳಿಕೊಡುತ್ತ ಅವುಗಳನ್ನು ಸಂರಕ್ಷಿಸುತ್ತ ನಡೆದರು. 
ಕಾಲಕ್ರಮದಲ್ಲಿ ಅವರ ಶಿಷ್ಯರೂ ಸಹ ತಮ್ಮಗುರುಗಳಿಂದ ಕಲಿತ ಪಾಠದಲ್ಲಿ ತಮಗೆ ದಕ್ಕಿದಷ್ಟು ಅಥವಾ ತಾವು ಕಲಿತ ಕ್ರಮದಲ್ಲಿ ತಮ್ಮ ಶಿಷ್ಯರುಗಳಿಗೆ ಹೇಳಿಕೊಟ್ಟರು. 
ಈ ಪ್ರಕಾರ ಒಂದೇ ವೇದಭಾಗದಲ್ಲಿ ಶಿಷ್ಯರ ಹೆಸರಿನಲ್ಲಿ ಅವರವರ ಪಾಠಗಳನ್ನಾಧರಿಸಿ ’ಶಾಖೆ’ಗಳು ಹುಟ್ಟಿಕೊಂಡವು. 

ಪ್ರಸ್ತುತ ಋಗ್ವೇದದಲ್ಲಿ ೧.ಶಾಕಲ, ೨.ಬಾಷ್ಕಲ, ೩.ಆಶ್ವಲಾಯನ, ೪.ಶಾಂಖಾಯನ ಮತ್ತು ಮಾಂಡೂಕಾಯನ ಎಂಬ ಐದು ಶಾಖೆಗಳು ಉಳಿದುಕೊಂಡಿವೆ.
ಶುಕ್ಲ-ಯಜುರ್ವೇದದಲ್ಲಿ ಮಾಧ್ಯಂದಿನ(ವಾಜಸನೇಯ) ಮತ್ತು ಕಾಣ್ವ ಎಂಬ ಎರಡು ಶಾಖೆಗಳು; 
 ಕೃಷ್ಣಯಜುರ್ವೇದದಲ್ಲಿ  ೧.ತತ್ತಿರೀಯ, ೨. ಮೈತ್ರಾಯಣಿ, ೩.ಕಠ ಮತ್ತು ೪.ಕಪಿಷ್ಠಲ ಎಂಬ ನಾಲ್ಕು ಶಾಖೆಗಳು; 
ಸಾಮವೇದದಲ್ಲಿ ೧.ಕೌಥುಮೀಯ, ೨. ರಾಣಾಯನೀಯ ಮತ್ತು ೩.ಜೈಮಿನೀಯ ಎಂಬ ಮೂರು ಶಾಖೆಗಳು; 
ಹಾಗೂ ಅಥರ್ವವೇದದಲ್ಲಿ ೧.ಪಿಪ್ಪಲಾದ, ೨.ಶೌನಕ, ೩.ಮೌದಮಹಾಭಾಷ್ಯ, ೪.ಸ್ತೌದ, ೫. ಜಾಜಲ, ೬.ಜಲದ, ೭.ಬ್ರಹ್ಮವೇದ, ೮.ದೇವದರ್ಶ ಮತ್ತು ೯.ಚಾರಣವೈದ್ಯ ಎಂಬ ಒಂಬತ್ತು ಶಾಖೆಗಳು ಉಳಿದುಕೊಂಡಿವೆ.    

೬.ಸೂತ್ರ:
ವೇದಾಧ್ಯಯನದ ಶಿಷ್ಯ ಪ್ರಶಿಷ್ಯ ಪರಂಪರೆಯ ಜೊತೆಗೆ ಈ ವೇದಮಂತ್ರಗಳನ್ನು ಯಜ್ಞಗಳಲ್ಲಿ ವಿನಿಯೋಗ ಗೊತ್ತುಮಾಡುವ ಮತ್ತು ಯಜ್ಞಸಂಸ್ಥೆಯ ಕುರಿತು ನಿಯಮಗಳು, ವಿಧಿ-ಪ್ರಯೋಗಗಳು ರಚಿಸಲ್ಪಟ್ಟವು. 
ಇವುಗಳು ಸೂತ್ರರೂಪದಲ್ಲಿದ್ದುದರಿಂದ ಇವುಗಳ ರಚನಾಕಾರರು ಸೂತ್ರಕಾರರೆಂದೆನಿಸಿಕೊಂಡರು. ಈ ಸೂತ್ರಕಾರರೂ ಸಹ ವೇದಗಳ ವರ್ಗೀಕರಣಕ್ಕೆ ಒಳಪಟ್ಟವರೇ. 
ಅಂದರೆ ಆಯಾ ವೇದಕ್ಕನುಗುಣವಾಗಿ ಆ ಯಾ ಸೂತ್ರಕಾರರಿರುವರು. 
ಋಗ್ವೇದದಲ್ಲಿ ’ಆಶ್ವಲಾಯನ’ ಮತ್ತು ’ಶಾಂಖಯನ(ಕೌಷೀತಕಿ)’ ಎಂಬ ಎರಡು ಸೂತ್ರಕಾರರಿರುವರು. 
ಶುಕ್ಲ-ಯಜುರ್ವೇದದಲ್ಲಿ ’ಕಾತ್ಯಾಯನ’ ಎಂಬ ಒಬ್ಬ ಸೂತ್ರಕಾರರು; 
ಹಾಗೂ ಕೃಷ್ಣ-ಯಜುರ್ವೇದದಲ್ಲಿ ’ಆಪಸ್ತಂಬ’, ’ಬೌಧಾಯನ’, ’ವೈಖಾನಸ’ , ಹಿರಣ್ಯಕೇಶೀ’, ಮತ್ತು ’ಸತ್ಯಾಷಾಢೀ’ ಎಂಬ ಐದು ಸೂತ್ರಕಾರರು ಕಾಣಿಸಿಕೊಳ್ಳುತ್ತಾರೆ.
 
ಸಾಮವೇದದಲ್ಲಿ ’ಗೋಭಿಲ’, ’ಗೌತಮ’ ಮತ್ತು ’ಜೈಮಿನೀಯ’ ಎಂಬ ಮೂರು ಸೂತ್ರಕಾರರು ಸಿಗುತ್ತಾರೆ. 
ಕೊನೆಯದಾಗಿ ಅಥರ್ವವೇದದಲ್ಲಿ ’ವೈತಾನ’ ಮತ್ತು ’ಕೌಶಿಕ’ ಎಂಬ ಎರಡು ಸೂತ್ರಕಾರರಿರುವರು.

ನಾವು ಯಾರನ್ನು ಮರೆತರೂ ಈ ಸೂತ್ರಕಾರರನ್ನು ಮರೆಯಕೂಡದು. ಏಕೆಂದರೇ ಇಂದು ನಾವು ಧರ್ಮಾಚರಣೆಯ ಹೆಸರಿನಲ್ಲಿ ಸಂಧ್ಯಾವಂದನೆಯಿಂದ ಹಿಡಿದು ಅಂತ್ಯೇಷ್ಟಿ(ದಹನಸಂಸ್ಕಾರ)-ಶ್ರಾಧಾದಿಗಳೆಲ್ಲ ಆಚರಣೆಗಳು ಇವರು ಹೇಳಿಕೊಟ್ಟಿದ್ದೇ. 

ದುರ್ದೈವದಿಂದ ಉಪಾಕರ್ಮದ ದಿನದಂದು ಮಾತ್ರ ಇವರು ಹೆಸರುಗಳು ಕೇಳುವಂತಾಗಿದೆ. 
ಆದ್ದರಿಂದ ನಾವು ಯಾವ ಗೋತ್ರದವರು? ಪ್ರವರ ಏನು?ಯಾವ ಶಾಖೆ? ಯಾವ ಸೂತ್ರ? ಎಂಬಿತ್ಯಾದಿ ವಿಷಯಗಳನ್ನು ಪ್ರಯತ್ನ ಪೂರ್ವಕವಾಗಿ ನೆನಪಿಟ್ಟುಕೊಳ್ಳಬೇಕು. 
ಇದು ನಮ್ಮ ಆದ್ಯ ಕರ್ತವ್ಯ ಮತ್ತು ಆ ಋಷಿಗಳಿಗೆ ನಾವು ಸಲ್ಲಿಸಬೇಕಾದ ಕನಿಷ್ಠ ಗೌರವ. 

ಹೀಗೆ ಒಂದು ಗೋತ್ರೋಚ್ಚಾರಣೆಯಿಂದ ಇಷ್ಟೆಲ್ಲ ನಮ್ಮ ಪರಿಚಯ ಸಿಗುತ್ತದೆ. 
ಆದ್ದರಿಂದಲೇ ನಮ್ಮ ಹಿರಿಯರು ಸಂಧ್ಯವಂದನೆ, ಹಿರಿಯರಿಗೆ ನಮಸ್ಕಾರ, ಅತಿಥಿಗಳಿಗೆ ಅಭಿವಾದನೆ ಮಾಡುವಾಗ ಸಂಪೂರ್ಣ ಗೋತ್ರ-ಪ್ರವರ-ಶಾಖೆ-ಸೂತ್ರಗಳನ್ನು ಹೇಳುವುದು ಸಂಸ್ಕೃತಿಯ ಮತ್ತು ಸಂಸ್ಕಾರದ ಒಂದು ಭಾಗವಾಗಿಸಿದ್ದಾರೆ.     
***********







P\c

ಬ್ರಾಹ್ಮಣರ ಇತಿಹಾಸ brahmin history
ಬ್ರಾಹ್ಮಣರು ಮೂಲನಿವಾಸಿಗಳಲ್ಲ ಹೊರಗಿನಿಂದ ಬಂದವರು ಅಂತ ಬುದ್ಧಿಜೀವಿಗಳು ಹೇಳ್ತಾ ಇರ್ತಾರೆ. ಇದನ್ನು ಪೂರ್ತಿ ಓದಿದರೆ ಬ್ರಾಹ್ಮಣರ ಪೂರ್ತಿ ವಿವರ ತಿಳಿಯುತ್ತದೆ.                                

           ನಮ್ಮ ಪರಿಚಯ

ಗೋತ್ರ-ವೇದ-ಶಾಖೆ-ಸೂತ್ರ
ಬ್ರಾಹ್ಮಣರಲ್ಲಿ ನೂರಾರು ಒಳಪಂಗಡಗಳಿವೆ. ಅವುಗಳಲ್ಲಿ ’ಸ್ಮಾರ್ತ’ ಇದೂ ಒಂದು ಎಂಬುದು ಜನಜನಿತವಾದ ಮಾತು. ಆದರೇ ಇದು ಶುದ್ಧವಾದ ನಿರ್ಣಯವಲ್ಲ. ಏಕೆಂದರೆ ಈ ನಿಲುವು ತಪ್ಪುಗ್ರಹಿಕೆಯ ಆಧಾರದ ಮೇಲೆ ನಿಂತಿದೆ. ಆ ತಪ್ಪು ಗ್ರಹಿಕೆಯೇನು? ಅಷ್ಟಕ್ಕೂ ಈ ಪಂಗಡಗಳ ವಿಭಾಗೀಕರಣಕ್ಕೆ ಆಧಾರವೇನು? ಸಂಪ್ರದಾಯ ಎಂದರೇನು? ಶಾಖೆ ಎಂದರೇನು? ಮತ ಎಂದರೇನು? ಇಂತಹ ಮೂಲಭೂತವಾದ ಆದರೆ ಎಲ್ಲರೂ ತಿಳಿದರಲೇಬೇಕಾದ ಕೆಲವು ಪರಿಕಲ್ಪನೆಗಳನ್ನು ಕುರಿತು ವಿಶ್ಲೇಷಿಸುವುದೇ ಈ ಲೇಖನದ ವಿಷಯ. ಈ ವಿಷಯವನ್ನು ಸ್ಪಷ್ಟವಾಗಿ ಅರಿತು ಸ್ಮಾರ್ತ, ವೈಷ್ಣವ, ತ್ರಿಮತಸ್ಥ, ಇತ್ಯಾದಿ ಪದಗಳನ್ನು ಅವುಗಳು ಸೂಚಿಸುವ ಅರ್ಥದಲ್ಲಿಯೇ ಬಳಸುವಂತಾಗಬೇಕೆಂಬುದು ಈ ಲೇಖನದ ಉದ್ದೇಶ.
ಬ್ರಾಹ್ಮಣನೊಬ್ಬನು ತನ್ನ ಪರಿಚಯ ಮಾಡಿಕೊಳುವಾಗ ತನ್ನ ಗೋತ್ರ-ಪ್ರವರಗಳನ್ನು ಹೇಳಿ ಆಮೇಲೆ ಅಭಿವಾದಿಸುತ್ತಾನೆ. ಅರ್ಥಾತ್ ಈ ಗೋತ್ರ-ಪ್ರವರಗಳು ಅವನ ಐಡೆಂಟಿಟಿ; ಅಸ್ತಿತ್ವದ ಗುರುತುಪತ್ರ. ಅದನ್ನು ಹೇಳುವ ಕ್ರಮ ಹೀಗಿರುತ್ತದೆ.
“೧.ಚತುಃಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂಭವತು | ೩.ವಸಿಷ್ಠ-ಮೈತ್ರಾವರುಣ-ಕೌಂಡಿನ್ಯ ಇತಿ ತ್ರಯಾಋಷಿಃ ತ್ರಿಃಪ್ರವರಾನ್ವಿತ ೨.ವಸಿಷ್ಠ ಗೋತ್ರೋತ್ಪನ್ನಃ ೪.ಋಗ್ವೇದಾಂತರ್ಗತ ೫.ಆಶ್ವಲಾಯನ ಸೂತ್ರ ೬.ಶಾಖಲ ಶಾಖಾಧ್ಯಾಯೀ _ಶರ್ಮಾ ಅಹಮ್| ಭೋಃ ಅಭಿವಾದಯೇ|” 
ಈ ಎರಡೂವರೆ ಸಾಲುಗಳು ಬಹಳಷ್ಟು ಅರ್ಥವನ್ನು ವಿವರಣೆಗಳನ್ನು ಒದಗಿಸುತ್ತವೆ. ಒಂದೊಂದಾಗಿ ವಿಶ್ಲೇಷಿಸೋಣ.
೧. ಮೊದಲನೇಯ ವಾಕ್ಯವು ಭೌಗೋಳಿಕವಾಗಿ ನಮ್ಮ ಮೂಲವನ್ನು ಹೇಳುತ್ತದೆ. ಅಂದರೇ ನಮ್ಮ ಮೂಲಸ್ಥಾನ, ನೇಟಿವ್. ಚತುಃಸಾಗರಪರ್ಯಂತದ ಭೂಭಾಗ ನಮ್ಮ ಮೂಲಸ್ಥಾನ. ಆಧುನಿಕ ವಿಜ್ಞಾನಿಗಳ ಪ್ರಕಾರ ಭೂಮಂಡಲ ಮೊದಲು ಒಂದೇ ಆಗಿದ್ದು ನಂತರ ಕಾಲಕ್ರಮೇಣ ಭೂಭಾಗಗಳು ದೂರ ಸರಿಯುತ್ತ ಇವತ್ತಿನ ಏಳು ಖಂಡಗಳಾದವು. ಭೂಭಾಗ ಒಂದೇ ಆಗಿದ್ದಾಗ ಈ ಮೇಲಿನ ಮಾತು ಹೇಳಿದ್ದು. ಅದನ್ನು ನಾವಿಂದಿಗೂ ಮರೆತಿಲ್ಲ. ಇದರ ಆಧಾರದ ಮೇಲೆ ’ಮೂಲನಿವಾಸಿಗಳು ದ್ರಾವಿಡರು, ಆರ್ಯರು ಹೊರಗಿನಿಂದ ಬಂದವರು” ಎಂಬ ವಾದ ಬಿದ್ದು ಹೋಗುತ್ತದೆ.  ’ವಸುಧೈವ ಕುಟುಂಬಕಮ್’ ಎಂಬ ಆರ್ಷವಾಣಿಯನ್ನು ಎತ್ತಿಹಿಡಿಯುತ್ತದೆ.
೨. ಗೋತ್ರ:
ಗೋತ್ರವು ನಮ್ಮಡಿಎನ್ಎ ಯನ್ನು ಸೂಚಿಸುತ್ತದೆ. ಕಲ್ಪದ ಆದಿಯಲ್ಲಿ ಬ್ರಹ್ಮ ಮಾನಸ ಪುತ್ರರಾದ ಸಪ್ತರ್ಷಿಗಳ ಸಂತಾನ ನಾವುಗಳು. ಅರ್ಥಾತ್ ನಮ್ಮ ದೇಹದಲ್ಲಿ ವಸಿಷ್ಠ , ಭರದ್ವಾಜ, ಕಶ್ಯಪ ಇತ್ಯಾದಿಗಳ ರಕ್ತವೇ ಹರಿಯುತ್ತಿದೆ. ನಾವುಗಳು ಮನಸ್ಸುಮಾಡಿದರೆ ಆ ಋಷಿಗಳ ಎತ್ತರಕ್ಕೆ ಬೇಳೆಯಬಹುದು. ಏಕೆಂದರೇ ಅವರ ಡಿಎನ್ಎ ನೇ ನಮ್ಮ ರಕ್ತಕಣದಲ್ಲಿರುವುದು. ಬೇಕಾಗಿರುವುದು ಅದರ ಶುದ್ಧೀಕರಣ ಮತ್ತು ಸಶಕ್ತೀಕರಣ.
೩. ಪ್ರವರ:
ಸಪ್ತರ್ಷಿಗಳ ನಂತರದ ಕಾಲದಲ್ಲಿ ಯಾರು ಯಾರನ್ನು ಮದುವೆಯಾಗಬಹುದು ಎಂಬುದನ್ನಿಟ್ಟುಕೊಂಡು ಒಂದು ವ್ಯವಸ್ಥೆಮಾಡಿಕೊಂಡರು. ಈ ಒಂದು/ಮೂರು/ಐದು/ಏಳು ಋಷಿಗಳಾದ ನಾವುಗಳು ಮೂಲತಃ ಒಂದೇ ಋಷಿಯ ಸಂತಾನ ಪರಂಪರೆಯಾದ್ದರಿಂದ ಈ ಗುಂಪನಿಂದ ಹೊರಗಿನ ಋಷಿ ಸಂತಾನವನ್ನು ಮದುವೆಯಾಗುವುದು. ಈ ವ್ಯವಸ್ಥೆಯೇ ಪ್ರವರ ವ್ಯವಸ್ಥೆ. ಇದು ಪ್ರಧಾನವಾಗಿ ಮದುವೆಯ ಉದ್ದೇಶದಿಂದಲೇ ನಿರ್ಮಾಣವಾದ ವ್ಯವಸ್ಥೆ. 
೪.ವೇದ:
ಗೋತ್ರ-ಪ್ರವರಗಳ ಜನನ, ರಕ್ತಮೂಲದ ಆಧಾರಮೇಲೆ ವಿಭಾಗಗಳಾದರೇ ವೇದ ಅಧ್ಯಯನ ಪರಂಪರೆಯ ಆಧಾರದ ಮೇಲೆ ನಿರ್ಮಿಸಲಾದ ವರ್ಗೀಕರಣ. ಭಗವಾನ್ ಬಾದರಾಯಣರು ತಮ್ಮ ನಂತರದ ಶಿಷ್ಯರಲ್ಲಿ ಸಮಗ್ರವೇದವನ್ನು ಅಭ್ಯಸಿಸಿ ಅರ್ಥಮಾಡಿಕೊಂಡು ಆಚರಣೆಯಲ್ಲಿ ತರುವುದರ ಮುಖಾಂತರ ವೇದದ ರಕ್ಷಣೆಯಲ್ಲಿ ಅಸಮರ್ಥರಾಗಿರುವುದನ್ನು ಕಂಡಿರಬಹುದು. ಅದಕ್ಕಾಗಿ ಒಂದೇ ಆಗಿರುವ ವೇದರಾಶಿಯಿಂದ ಛಂದೋಬದ್ಧವಾಗಿರುವ ಮತ್ರಗಳನ್ನೆಲ್ಲಾ ಒಂದುಕಡೆ ಸೇರಿಸಿ ತಮ್ಮ ಶಿಷ್ಯನಾದ ಪೈಲ ಎಂಬ ಋಷಿಗೆ ಒಪ್ಪಿಸಿದರು. ಅದು ’ಋಗ್ವೇದ’ವೆನಿಸಿಕೊಂಡಿತು. ಋಕ್ ಎಂದರೇ ಛಂದೂಬದ್ಧವಾಗಿರುವುದು ಅಂದರ್ಥ. ಅಂತೆಯೇ ಗೇಯಾನುಕೂಲವಾದ ಮಂತ್ರಗಳನ್ನು ಒಂದುಕಡೆ ತಂದು ಅವನ್ನು ತಮ್ಮ ಇನ್ನೊಬ್ಬ ಶಿಷ್ಯನಾದ ಜೈಮಿನಿ ಎಂಬ ಋಷಿಗೆ ಒಪ್ಪಿಸಿದರು. ಅದು ’ಸಾಮವೇದ’ವಾಯಿತು. ಸಾಮ ಎಂದರೆ ಧ್ವನಿಯ ಏರು-ಪೇರುಗಳು. ಹಾಗೆಯೇ ಲೌಕಿಕ ಪ್ರಯೋಜನಗಳುಳ್ಳ ಮಂತ್ರಗಳನ್ನೆಲ್ಲಾ ಒಂದುಗೂಡಿಸಿ ’ಸುಮಂತು’ ಎಂಬ ಶಿಷ್ಯನಿಗೊಪ್ಪಿಸಿದರು. ಆಶ್ಚರ್ಯವೆಂದರೇ ಈ ಎಲ್ಲ ಮಂತ್ರಗಳು ಅಥರ್ವ ಮತ್ತು ಅಂಗಿರಸ ಗೋತ್ರದ ಋಷಿಗಳಿಂದಲೇ ದೃಷ್ಟವಾಗಿದ್ದವು. ಆದ್ದರಿಂದ ಇದು ’ಅಥರ್ವವೇದ’ ಪ್ರಸಿದ್ಧಿ ಪಡೆಯಿತು. ಇನ್ನು ಉಳಿದ ಭಾಗವನ್ನು ’ವೈಶಂಪಾಯನ’ ಎಂಬ ಶಿಷ್ಯನಿಗೆ ಒಪ್ಪಿಸಿದರು. ಇದು ’ಯಜುರ್ವೇದ’ವೆನಿಸಿತು. ವೇದಗಳ ಆವಿರ್ಭಾವವೇ ಯಜ್ಞಕ್ಕೋಸ್ಕರ ಎಂದು ಯಾಸ್ಕರು ಹೇಳುತ್ತಾರೆ. ಮುಂದೆ ಸಾಯಣರೂ ಇದನ್ನೇ ಪ್ರತಿಪಾದಿಸಿದರು. ಆದ್ದರಿಂದ ಉಳಿದ ಭಾಗ ’ಯಜುರ್ವೇದ’ ಎಂದು ಹೆಸರು ಪಡೆದಿದ್ದು ಸರಿಯಾಗಿಯೇ ಇದೆ.  ಈ ಈತಿ ವೇದಗಳನ್ನು ವಿಂಗಡಿಸಿದ್ದರಿಂದ ಬಾದರಾಯಣರು ’ವೇದವ್ಯಾಸ’ರೆನಿಸಿಕೊಂಡರು.
ಮುಂದೆ ಈ ವೈಶಂಪಾಯನ ಋಷಿಗೆ ’ಯಾಜ್ಞವಲ್ಕ್ಯ’ ಎಂಬ ಋಷಿ ಶಿಷ್ಯರಾದರು. ಇವರು ಮಹಾನ್ ಮೇಧಾವಿಗಳು ಮತ್ತು ಸೂರ್ಯೋಪಾಸರು. ತಾವು ಗುರುಗಳಿಂದ ಅಭ್ಯಸಿಸಿದ ವೇದ ಭಾಗವಲ್ಲದೇ ಸೂರ್ಯನ ಉಪಾಸನೆಯಿಂದ ಹೆಚ್ಚಿನದನ್ನೂ ಸಂಪಾದಿಸಿಕೊಂಡರು. ಗುರುಗಳಿಂದ ಕಲಿತ ವೇದಭಾಗವನ್ನು ತಮ್ಮ ಸಹಾಧ್ಯಾಯಿಗೆ ಒಪ್ಪಿಸಿ ತಾವು ಸಂಪಾದಿಸಿದ ಭಾಗವನ್ನು ತಾವೇ ಮುಂದುವರಿಸಿದರು. ತಮ್ಮ ಅಧ್ಯಯನ-ಅಧ್ಯಾಪನ ಪರಂಪರೆಯಲ್ಲಿ ಮಂತ್ರ ಮತ್ತು ಬ್ರಾಹ್ಮಣವಾಕ್ಯಗಳನ್ನು ಬೇರೆ ಬೇರೆಯಾಗಿ ಹೇಳುವ ಕ್ರಮ ರೂಢಿಸಿಕೊಂಡರು. ಆದ್ದರಿಂದ ಇದು ’ಶುಕ್ಲ-ಯಜುರ್ವೇದ’ ವೆಂದು ಪ್ರಸಿದ್ಧಿಯನ್ನು ಪಡೆಯಿತು. ಇವರ ಸಹಾಧ್ಯಾಯಿಗಳಾದರೋ ಮೂಲ  ಮಂತ್ರ-ಬ್ರಾಹ್ಮಣವಾಕ್ಯಗಳನ್ನು   ಹೇಳತೊಡಗಿದರು. ಅದು  ’ಕೃಷ್ಣ-ಯಜುರ್ವೇದ’ವೆಂದು ಪ್ರಸಿದ್ಧವಾಯಿತು. 
ವ್ಯಾಸರ ಶಿಷ್ಯರಾದ ಪೈಲಋಷಿಯ ಶಿಷ್ಯ ಪರಂಪರೆಯಲ್ಲಿ ಬಂದವರೆಲ್ಲಾ ’ಋಗ್ವೇದಿ’ಗಳಾದರು. ಹೀಗೆಯೇ ಯಾಜ್ಞವಲ್ಕ್ಯರ ಶಿಷ್ಯಪರಂಪರೆಯಲ್ಲಿ ಬಂದವರು ಶುಕ್ಲ-ಯಜುರ್ವೇದಿಗಳು; ವೈಶಂಪಾಯನ ಋಷಿಗಳ ಶಿಷ್ಯಪರಂಪರೆಯಲ್ಲಿ ಬಂದವರು ಕೃಷ್ಣ-ಯಜುರ್ವೇದಿಗಳು; ಜೈಮಿನಿಋಷಿಗಳ ಶಿಷ್ಯಪರಂಪರೆಯವರು ಸಾಮವೇದಿಗಳು; ಸುಮಂತು ಋಷಿಗಳ ಶಿಷ್ಯ ಪರಂಪರೆಯವರು ಅಥರ್ವವೇದಿಗಳಾದರು.
೫. ಶಾಖೆ:
ಈ ಮೇಲೆ ಹೇಳಿದ ಐದು ಋಷಿಗಳ ಶಿಷ್ಯಂದಿರು ತಮ್ಮ ತಮ್ಮ ಶಿಷ್ಯರುಗಳಿಗೆ ತಾವು ಕಲಿತ ವೇದಗಳನ್ನು ಹೇಳಿಕೊಡುತ್ತ ಅವುಗಳನ್ನು ಸಂರಕ್ಷಿಸುತ್ತ ನಡೆದರು. ಕಾಲಕ್ರಮದಲ್ಲಿ ಅವರ ಶಿಷ್ಯರೂ ಸಹ ತಮ್ಮಗುರುಗಳಿಂದ ಕಲಿತ ಪಾಠದಲ್ಲಿ ತಮಗೆ ದಕ್ಕಿದಷ್ಟು ಅಥವಾ ತಾವು ಕಲಿತ ಕ್ರಮದಲ್ಲಿ ತಮ್ಮ ಶಿಷ್ಯರುಗಳಿಗೆ ಹೇಳಿಕೊಟ್ಟರು. ಈ ಪ್ರಕಾರ ಒಂದೇ ವೇದಭಾಗದಲ್ಲಿ ಶಿಷ್ಯರ ಹೆಸರಿನಲ್ಲಿ ಅವರವರ ಪಾಠಗಳನ್ನಾಧರಿಸಿ ’ಶಾಖೆ’ಗಳು ಹುಟ್ಟಿಕೊಂಡವು. 
ಪ್ರಸ್ತುತ ಋಗ್ವೇದದಲ್ಲಿ ೧.ಶಾಕಲ, ೨.ಬಾಷ್ಕಲ, ೩.ಆಶ್ವಲಾಯನ, ೪.ಶಾಂಖಾಯನ ಮತ್ತು ಮಾಂಡೂಕಾಯನ ಎಂಬ್ ಐದು ಶಾಖೆಗಳು ಉಳಿದುಕೊಂಡಿವೆ.ಶುಕ್ಲ-ಯಜುರ್ವೇದದಲ್ಲಿ ಮಾಧ್ಯಂದಿನ(ವಾಜಸನೇಯ) ಮತ್ತು ಕಾಣ್ವ ಎಂಬ ಎರಡು ಶಾಖೆಗಳು;  ಕೃಷ್ಣಯಜುರ್ವೇದದಲ್ಲಿ  ೧.ತತ್ತಿರೀಯ, ೨. ಮೈತ್ರಾಯಣಿ, ೩.ಕಠ ಮತ್ತು ೪.ಕಪಿಷ್ಠಲ ಎಂಬ ನಾಲ್ಕು ಶಾಖೆಗಳು; ಸಾಮವೇದದಲ್ಲಿ ೧.ಕೌಥುಮೀಯ, ೨. ರಾಣಾಯನೀಯ ಮತ್ತು ೩.ಜೈಮಿನೀಯ ಎಂಬ ಮೂರು ಶಾಖೆಗಳು; ಹಾಗೂ ಅಥರ್ವವೇದದಲ್ಲಿ ೧.ಪಿಪ್ಪಲಾದ, ೨.ಶೌನಕ, ೩.ಮೌದಮಹಾಭಾಷ್ಯ, ೪.ಸ್ತೌದ, ೫. ಜಾಜಲ, ೬.ಜಲದ, ೭.ಬ್ರಹ್ಮವೇದ, ೮.ದೇವದರ್ಶ ಮತ್ತು ೯.ಚಾರಣವೈದ್ಯ ಎಂಬ ಒಂಬತ್ತು ಶಾಖೆಗಳು ಉಳಿದುಕೊಂಡಿವೆ.    
೬.ಸೂತ್ರ:
ವೇದಾಧ್ಯಯನದ ಶಿಷ್ಯ ಪ್ರಶಿಷ್ಯ ಪರಂಪರೆಯ ಜೊತೆಗೆ ಈ ವೇದಮಂತ್ರಗಳನ್ನು ಯಜ್ಞಗಳಲ್ಲಿ ವಿನಿಯೋಗ ಗೊತ್ತುಮಾಡುವ ಮತ್ತು ಯಜ್ಞಸಂಸ್ಥೆಯ ಕುರಿತು ನಿಯಮಗಳು, ವಿಧಿ-ಪ್ರಯೋಗಗಳು ರಚಿಸಲ್ಪಟ್ಟವು. ಇವುಗಳು ಸೂತ್ರರೂಪದಲ್ಲಿದ್ದುದರಿಂದ ಇವುಗಳ ರಚನಾಕಾರರು ಸೂತ್ರಕಾರರೆಂದೆನಿಸಿಕೊಂಡರು. ಈ ಸೂತ್ರಕಾರರೂ ಸಹ ವೇದಗಳ ವರ್ಗೀಕರಣಕ್ಕೆ ಒಳಪಟ್ಟವರೇ. ಅಂದರೆ ಆಯಾ ವೇದಕ್ಕನುಗುಣವಾಗಿ ಆಯಾ ಸೂತ್ರಕಾರರಿರುವರು. 
ಋಗ್ವೇದದಲ್ಲಿ ’ಆಶ್ವಲಾಯನ’ ಮತ್ತು ’ಶಾಂಖಯನ(ಕೌಷೀತಕಿ)’ ಎಂಬ ಎರಡು ಸೂತ್ರಕಾರರಿರುವರು. ಶುಕ್ಲ-ಯಜುರ್ವೇದದಲ್ಲಿ ’ಕಾತ್ಯಾಯನ’ ಎಂಬ ಒಬ್ಬ ಸೂತ್ರಕಾರರು; ಹಗೂ ಕೃಷ್ಣ-ಯಜುರ್ವೇದದಲ್ಲಿ ’ಆಪಸ್ತಂಬ’, ’ಬೌಧಾಯನ’, ’ವೈಖಾನಸ’ , ಹಿರಣ್ಯಕೇಶೀ’, ಮತ್ತು ’ಸತ್ಯಾಷಾಢೀ’ ಎಂಬ ಐದು ಸೂತ್ರಕಾರರು ಕಾಣಿಸಿಕೊಳ್ಳುತ್ತಾರೆ. ಸಾಮವೇದದಲ್ಲಿ ’ಗೋಭಿಲ’, ’ಗೌತಮ’ ಮತ್ತು ’ಜೈಮಿನೀಯ’ ಎಂಬ ಮೂರು ಸೂತ್ರಕಾರರು ಸಿಗುತ್ತಾರೆ. ಕೊನೆಯದಾಗಿ ಅಥರ್ವವೇದದಲ್ಲಿ ’ವೈತಾನ’ ಮತ್ತು ’ಕೌಶಿಕ’ ಎಂಬ ಎರಡು ಸೂತ್ರಕಾರರಿರುವರು.
ನಾವು ಯಾರನ್ನು ಮರೆತರೂ ಈ ಸೂತ್ರಕಾರರನ್ನು ಮರೆಯಕೂಡದು. ಏಕೆಂದರೇ ಇಂದು ನಾವು ಧರ್ಮಾಚರಣೆಯ ಹೆಸರಿನಲ್ಲಿ ಸಂಧ್ಯಾವಂದನೆಯಿಂದ ಹಿಡಿದು ಅಂತ್ಯೇಷ್ಟಿ(ದಹನಸಂಸ್ಕಾರ)-ಶ್ರಾದ್ಧಾದಿಗಳೆಲ್ಲ ಆಚರಣೆಗಳು ಇವರು ಹೇಳಿಕೊಟ್ಟಿದ್ದೇ. ದುರ್ದೈವದಿಂದ ಉಪಾಕರ್ಮದ ದಿನದಂದು ಮಾತ್ರ ಇವರು ಹೆಸರುಗಳು ಕೇಳುವಂತಾಗಿದೆ. 

ಆದ್ದರಿಂದ ನಾವು ಯಾವ ಗೋತ್ರದವರು? ಪ್ರವರ ಏನು?ಯಾವ ಶಾಖೆ? ಯಾವ ಸೂತ್ರ? ಎಂಬಿತ್ಯಾದಿ ವಿಷಯಗಳನ್ನು ಪ್ರಯತ್ನ ಪೂರ್ವಕವಾಗಿ ನೆನಪಿಟ್ಟುಕೊಳ್ಳಬೇಕು. ಇದು ನಮ್ಮ ಆದ್ಯ ಕರ್ತವ್ಯ ಮತ್ತು ಆ ಋಷಿಗಳಿಗೆ ನವು ಸಲ್ಲಿಸಬೇಕಾದ ಕನಿಷ್ಠ ಗೌರವ. ಹೀಗೆ ಒಂದು ಗೋತ್ರೋಚ್ಚಾರಣೆಯಿಂದ ಇಷ್ಟೆಲ್ಲ ನಮ್ಮ ಪರಿಚಯ ಸಿಗುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಸಂಧ್ಯಾವಂದನೆ  ಹಿರಿಯರಿಗೆ ನಮಸ್ಕಾರ, ಅತಿಥಿಗಳಿಗೆ ಅಭಿವಾದನೆ ಮಾಡುವಾಗ ಸಂಪೂರ್ಣ ಗೋತ್ರ-ಪ್ರವರ-ಶಾಖೆ-ಸೂತ್ರಗಳನ್ನು ಹೇಳುವುದು ಸಂಸ್ಕೃತಿಯ ಮತ್ತು ಸಂಸ್ಕಾರದ ಒಂದು ಭಾಗವಾಗಿಸಿದ್ದಾರೆ.
ವಾಟ್ಸಪ್ಪ್ ಕೃಪೆ
******

No comments:

Post a Comment