SEARCH HERE

Tuesday 1 January 2019

ಹರಿವಾಸರ hariwasara meaning harivasara ಏಕಾದಶೀ ekadashi


ಹರಿವಾಸರ ಎಂದರೇನು?        

ಗುರುಗಳಿಗೆ ನಮಸ್ಕಾರಗಳು.. ದಯವಿಟ್ಟು ಹರಿವಾಸರದ ಬಗ್ಗೆ ತಿಳಿಸಿಕೊಡಿ.
— ಹರಿಪ್ರಸಾದ್

ಹರಿವಾಸರವನ್ನು ತಿಳಿಯಲು ದಶಮೀವೇಧದ ಕುರಿತು ಮೊದಲು ತಿಳಿಯಬೇಕು. 

ದಶಮೀವೇಧ ಎಂದರೇನು. 

ಸೂರ್ಯೋದಯಕ್ಕಿಂತ ಮುಂಚಿನ 96 ನಿಮಿಷಗಳನ್ನು ಅರುಣೋದಯ ಎನ್ನುತ್ತಾರೆ. ಈ ಅರುಣೋದಯಕ್ಕಿಂತ ಮುಂಚಿನ  32 ನಿಮಿಷಗಳಲ್ಲಿ, ಅಂದರೆ ಸೂರ್ಯೋದಕ್ಕಿಂತ ಮುಂಚೆ 2 ಗಂಟೆ 8 ನಿಮಿಷಗಳಲ್ಲಿ ದಶಮೀ ಇರಬಾರದು. ಅದಕ್ಕಿಂತ ಮುಂಚೆಯೇ ದಶಮೀ ಮುಗಿದು ಬಿಟ್ಟಿರಬೇಕು. 

ತಿಥಿಯನ್ನು ಲೆಕ್ಕ ಹಾಕಲು ‘ಸದ್ಯಕ್ಕೆ’ ಮೂರು ಗಣಿತಗಳಿವೆ. ದೃಗ್ಗಣಿತ, ಸೂರ್ಯಸಿದ್ಧಾಂತ ಮತ್ತು ಆರ್ಯಭಟ ಎಂದು. ಇದರಲ್ಲಿ ಏಕಾದಶಿಗಾಗಿ ಆರ್ಯಭಟದ ಪ್ರಕಾರವೇ ದಶಮಿಯನ್ನು ಲೆಕ್ಕ ಹಾಕಬೇಕು. ದೃಗ್ಗಣಿತವೂ ಅಲ್ಲ. ಸೂರ್ಯಸಿದ್ಧಾಂತವೂ ಅಲ್ಲ. 


ವಿದ್ಧೈಕಾದಶಿಯಂದು ಹರಿವಾಸರ ಬಂದೇ ಬರುತ್ತದೆ. ಹರಿವಾಸರ ಆರಂಭವಾಗುವಷ್ಟರಲ್ಲಿ ಆ ದಿವಸ ಪಲಾಹಾರವನ್ನು ಮುಗಿಸಬೇಕು. ಹರಿವಾಸರದ ಸಂದರ್ಭದಲ್ಲಿ ಏನನ್ನೂ ಉಣ್ಣಬಾರದು, ಕುಡಿಯಬಾರದು. ಏಕಾದಶಿಗಿಂತಲೂ ಮಿಗಿಲಾದ ಕಾಲ, ಹರಿವಾಸರದ ಕಾಲ ಎಂದು ಶ್ರೀಮದಾಚಾರ್ಯರು ತಿಳಿಸಿದ್ದಾರೆ. 


ಹರಿವಾಸರ ಎಂದರೇನು

ಏಕಾದಶೀ ಆರಂಭವಾಗುವ ಘಳಿಗೆಯಿಂದ, ಮುಗಿಯುವ ಘಳಿಗೆಯವರಿಗೆ  ಎಷ್ಟು ಸಮಯ ಇದೆ ಎಂದು ತಿಳಿದು ಕೊಳ್ಳಬೇಕು. ಇದನ್ನು ಆದ್ಯಂತಘಳಿಗೆಗಳು ಎನ್ನುತ್ತಾರೆ. ಇದನ್ನು ನಾಲ್ಕು ಭಾಗ ಮಾಡಬೇಕು. ಏಕಾದಶಿಯ ಆದ್ಯಂತ 60 ಗಳಿಗೆ ಇದೆ ಎಂದುಕೊಳ್ಳೋಣ. ಅದರಲ್ಲಿ 15 ಘಳಿಗೆಗಳ ನಾಲ್ಕು ಭಾಗಗಳಾದವು. ಈ ನಾಲ್ಕರಲ್ಲಿ ಕಡೆಯ 15 ಗಳಿಗೆಗಳು ಹರಿವಾಸರ ಎಂದು ಕರೆಸಿಕೊಳ್ಳುತ್ತದೆ. 


(ಹಾಗೆಯೇ ದ್ವಾದಶಿಯ ಹರಿವಾಸರವನ್ನು ತೆಗೆಯಲು.  ದ್ವಾದಶೀ ತಿಥಿಯ ಆದ್ಯಂತ ಘಳಿಗೆಗಳನ್ನು ತೆಗೆಯಬೇಕು. ಇದನ್ನೂ ನಾಲ್ಕು ಭಾಗ ಮಾಡಬೇಕು. ದ್ವಾದಶಿಯ ಆದ್ಯಂತ 56 ಘಳಿಗೆ ಎಂದಿಟ್ಟುಕೊಳ್ಳೋಣ. ಆಗಲ 14 ಗಳಿಗೆಗಳ ನಾಲ್ಕು ಭಾಗಗಳಾದವು. ದ್ವಾದಶಿಯ ಮೊದಲ ಪಾದ ಹರಿವಾಸರ ಎಂದು ಕರೆಸಿಕೊಳ್ಳುತ್ತದೆ. ) 


ಈ ಏಕಾದಶಿಯ ಹರಿವಾಸರದ ಗಳಿಗೆ ಪಳಗಳು ಎಷ್ಟಿರುತ್ತವೆಯೋ ಅಷ್ಟನ್ನು, ಆ ದಿಪಸ ಸೂರ್ಯೋದಯದಿಂದ ಇರುವ ಏಕಾದಶಿಯ ಗಳಿಗೆ ಪಳಗಳಲ್ಲಿ ಕಳೆಯಬೇಕು. ಉಳಿದ ಗಳಿಗೆ ಪಳಗಳು ಯಾವಾಗ ಮುಗಿಯುತ್ತದೆಯೋ ಅಲ್ಲಿಂದ ಹರಿವಾಸರ ಆರಂಭ. 


ಹರಿವಾಸರ ಪ್ರತೀ ಏಕಾದಶಿಯಲ್ಲಿಯೂ ಬರುತ್ತದೆ. ಆದರೆ ಸಾಮಾನ್ಯವಾಗಿ ಏಕಾದಶಿಯ ರಾತ್ರಿಯಲ್ಲಿ ಮುಗಿದು ಹೋಗುತ್ತದೆ. 


ವಿದ್ಧೈಕಾದಶಿಯಿದ್ದಾಗ ದಶಮಿಯ ರಾತ್ರಿಯಂದೇ ಹರಿವಾಸರ ಬರುತ್ತದೆ. ಕಾರಣ ಏಕಾದಶಿಯಂದು ನಾವು ಊಟ ಮಾಡಿರುತ್ತೇವೆ. ಏಕಾದಶಿಯ ಕಡೆಯ ಪಾದ ರಾತ್ರಿಯ ವೇಳೆಗೆ ಆರಂಭವಾಗಿಯೇ ಆಗುತ್ತದೆ. ಏಕಾದಶಿಯ ಕಡೆಯ ಪಾದ ಆರಂಭವಾಗುವದರ ಒಳಗೆ ನಾವು ದಶಮಿ ರಾತ್ರಿಯ ಫಲಾಹಾರವನ್ನು ಮುಗಿಸಬೇಕು. 


ಕೆಲವು ಸಂದರ್ಭದಲ್ಲಿ ದ್ವಾದಶಿಯ ಮೊದಲ ಪಾದವು ದ್ವಾದಶಿ ಸೂರ್ಯೋದಯದ ನಂತರವೂ ಇರುತ್ತದೆ. ಆಗ ಅದು ಮುಗಿಯುವವರೆಗೆ ದೇವರಿಗೂ ಪಂಚಾಮೃತ ಅಭಿಷೇಕ, ನೈವೇದ್ಯವನ್ನು ಮಾಡುವಂತಿಲ್ಲ. ಆ ಹರಿವಾಸರದ ಕಾಲ ಮುಗಿದ ಬಳಿಕ, ಪಂಚಾಮೃತ ಅಭಿಷೇಕ ನೈವೇದ್ಯ, ಹಸ್ತೋದಕಗಳನ್ನು ಮಾಡಬೇಕು. 


ದ್ವಾದಶಿಯ ಮೊದಲ ಪಾದದವರೆಗೆ ನಮ್ಮ ಉಪವಾಸದ ನಿಯಮವಿರುವದರಿಂದ ಸೂರ್ಯೋದಯದ ವೇಳೆಗೆ ಪಾರಣೆ ಮಾಡದಿದ್ದರೂ ದೋಷವಿಲ್ಲ. ದ್ವಾದಶಿಯ ಮೊದಲ ಪಾದ, ಅರ್ಥಾತ್ ಹರಿವಾಸರ ಮುಗಿದ ಬಳಿಕವೇ ನೈವೇದ್ಯ, ಹಸ್ತೋದಕ, ಪಾರಣೆಗಳು. 


ಸಂಶಯವಿದ್ದರೆ ಕೇಳಿ. 

— ವಿಷ್ಣುದಾಸ ನಾಗೇಂದ್ರಾಚಾರ್ಯ vishwanandini.com
*********

||ಹರಿದಿನದ ನಮಸ್ಕಾರ ಗಳು||
 ✍ಮಲತಾಯಿಯಾದ ಸುರುಚಿ ಇಂದ ತನಗಾದ  ಅವಮಾನ, ಅದಕ್ಕೆ ಅವನ ತಾಯಿಯಾದ ಸುನೀತಿ ಹೇಳಿದಂತೆ ಐದು ವರುಷದ ಬಾಲಕ ಧ್ರುವ ತಪಸ್ಸಿಗೆ ಹೊರಡುವನು.
ಶುಕಮುನಿಗಳು ಪರಿಕ್ಷೀತನಿಗೆ ಹೇಳುತ್ತಾರೆ.
ಪರಿಕ್ಷೀತ! ಕೇಳು.ತಾಯಿಯ ಅಪ್ಪಣೆಯಂತೆ ಧ್ರುವ ಕಾಡಿಗೆ ಪಯಣ ಬೆಳೆಸಿದ್ದಾನೆ.ದಾರಿಯಲ್ಲಿ ನಾರದರ ಭೇಟಿ ಯಾಗಿದೆ.ಕಾಡಿಗೆ ಬರುವ ಕಾರಣವೇನು?? ಎಂದು ಧ್ರುವ ನಿಂದ ತಿಳಿದು
ವತ್ಸ !ಧ್ರುವ ಆಟವಾಡುವ ಈ ವಯಸ್ಸಿನಲ್ಲಿ ನಿನಗೆ ಮಾನ, ಅಪಮಾನದ ಬಗ್ಗೆ ಚಿಂತೆಯೆ?
ಯಾರಿಗೆ ಯಾರು ಶತ್ರು ,ಮಿತ್ರರು??ಅಭಿಮಾನ ಗ್ರಸ್ತ ಈ ಮನದಿಂದ ಶತೃ ಮಿತ್ರ, ಭಾವನೆ ಹುಟ್ಟು ತ್ತದೆ.ಅಂತಹ ಮೋಹವನ್ನು ಬಿಟ್ಟವರಿಗೆ ಯಾವುದೇ ದುಃಖ ಇಲ್ಲ.
ಉತ್ತಮ, ಮಧ್ಯಮ, ನೀಚ ರೆಂದು ಮೂರು ವಿಧ ಬಗೆಯ ಜೀವರು.ಅವರವರ ಯೋಗ್ಯತೆ ಅನುಸಾರವಾಗಿ ಕರ್ಮಗಳನ್ನು ಅವರು ಮಾಡುವರು. ಇದನ್ನು ಅರಿತುಕೊಂಡ ಜ್ಞಾನಿಗಳು ಅವರಾರು ಸ್ವತಂತ್ರ ರಲ್ಲ.ಭಗವಂತ ನೊಬ್ಬನೇ ಸ್ವತಂತ್ರ. ಈ ಜೀವರು ನಮಗೆ ಸುಖವನ್ನು ಅಥವಾ ದುಃಖ ವನ್ನು ಕೊಡಲು ಕಾರಣರಲ್ಲ.ದೈವ ವಶದಿಂದ,ನಮ್ಮ ಕರ್ಮನುಸಾರವಾಗಿ ನಮಗೆ ಸುಖ, ದುಃಖ ಬರುತ್ತದೆ ಅಂತ ತಿಳಿದುಕೊಂಡ ವನೇ ಜ್ಞಾನಿ.
ತಾಯಿಯಾದ ಸುರುಚಿಯ ಮಾತನ್ನು ಕೇಳಿ ಕಾನನಕ್ಕೆ ತಪಸ್ಸಿಗೆ ಬಂದು ಹರಿಯ ಅನುಗ್ರಹದಿಂದ ಉನ್ನತ ಪದವಿಯನ್ನು ಏರಿ ಅವಳ ಮೇಲೆ ಸೇಡನ್ನು ತೀರಿಸಿಕೊಳ್ಳಲು ಎಣಿಸಿದ್ದೀಯಾ??
ಆ ಶ್ರೀ ಹರಿಯು ಮನುಜರಿಗೆ ಬಹು ದುರ್ಲಭನೆಂದು ನನ್ನ ಅಭಿಪ್ರಾಯ. ಬಹುಜನ್ಮಗಳಲ್ಲಿ ,ಬಹು ವಿಧವಾಗಿ ಕಠಿಣ ತಪವನ್ನು ಮಾಡಿದ ಮುನಿಗಳಿಗೆ ಅವನು ಗೋಚರನಾಗಲಾರ.ಇನ್ನೂ ನೀನು ಹಸುಗೂಸು.ಐದು ವರುಷದ ಬಾಲಕ.ಆ ಕಂತುಪಿತನ ದರುಶನ ನಿನಗೆ ಹೇಗೆ ಸಿಗುವದು??ನಡೆ ಅರಮನೆಗೆ.
ಯಾರೇ ಆಗಲಿ ದೇವರು ಏನು ಕೊಡುತ್ತಾನೆ ಅದು ಸುಖ, ದುಃಖ ಯಾವುದೇ ಇರಲಿ ಸಂತೋಷ ದಿಂದ ಸ್ವೀಕರಿಸಿದವರು ಅವರೇ ಸುಖಿಗಳು.
ನೀನು ಮನೆಗೆ ಹೋಗಿ ಆಟವಾಡಲು ಹೇಳುತ್ತಾರೆ.
ಅದಕ್ಕೆ ಧ್ರುವ ಹೇಳುವ.
"ಮಹಾತ್ಮರೇ! ಮಲತಾಯಿಯಾದ ಸುರುಚಿಯ ಬಿರುನುಡಿಗಳನ್ನು ಕೇಳಿದ ನನ್ನ ಮನ ಘಾಸಿಗೊಂಡಿದೆ.ಬ್ರಹ್ಮ ಪುತ್ರರಾದ ತಾವು ಭಗವಂತನ ಕಾಣುವಿಕೆ ಬಗ್ಗೆ ದಯವಿಟ್ಟು ತಿಳಿಸಿ.ಅವನನ್ನು ಕಾಣದೇ ನಾನು ಹಿಂತಿರುಗಲಾರೆ" ಎಂದು ಹೇಳಿದ್ದಾರೆ.
ನಾರದರು ಧೃವನ ಧೃಡ ವಿಶ್ವಾಸ ವನ್ನು ಮೆಚ್ಚಿ ಅವನಿಗೆ ಉಪದೇಶ ಮಾಡುತ್ತಾರೆ.
(ಮೊದಲು ಯಾಕೆ ಹಾಗೇ ಹೇಳಿದ್ದು ಅಂದರೆ ಧ್ರುವನನ್ನು ಪರೀಕ್ಷೆ ಮಾಡಲು ಹಾಗೇ ಹೇಳಿದ್ದು ಹೊರತಾಗಿ ಬೇರೆ ಕಾರಣವಲ್ಲ.)
"ವತ್ಸ !ಧ್ರುವ! ನಿನ್ನ ತಾಯಿಯ ಮಾತಿನಂತೆ ಭಗವಂತನ ಕಾಣುವ ನಿನ್ನ ಧೃಡ ವಿಶ್ವಾಸಕ್ಕೆ ನನಗೆ ಮೆಚ್ಚುಗೆ ಆಗಿದೆ.
ಭಗವಂತನಾದ ಆ ಶ್ರೀ ವಾಸುದೇವನನ್ನು ಭಜಿಸು.ಧರ್ಮ, ಅರ್ಥ, ಕಾಮ,ಮೋಕ್ಷ ,ಯಾವುದೇ ಆಗಲಿ,ಬೇಡುವ ಮನುಜನಿಗೆ ಶ್ರೀಹರಿಯ ಚರಣವೇ ಗತಿಯು.ಅವನನ್ನು ಬಿಟ್ಟರೆ ಮತ್ತೆ ಯಾರು ಅದನ್ನು ಕೊಡುವುದು ಇಲ್ಲ.
ನೀನು ಈ ಕ್ಷಣದಲ್ಲಿ ಯಮುನಾ ನದಿ ತಟದಲ್ಲಿ ಇರುವ ಮಧುವನವನ್ನು ಸೇರು.ಅಲ್ಲಿ ಶ್ರೀ ಹರಿಯ ಸಾನಿಧ್ಯವು ನಿತ್ಯ ವಾಗಿದೆ.ಕಾಳಿಂದಿಯ ಆ ಪವಿತ್ರ ಜಲದಿ ತ್ರಿಕಾಲ ಸ್ನಾನ ಮಾಡುತ್ತಾ ಉಚಿತ ಕರ್ಮಗಳನ್ನುಆಚರಿಸು.
ಉತ್ತಮ ಆಸನರೂಢಾನಾಗಿ ಸಕಲ ಗುಣ ಪೂರ್ಣನಾದ ಆ ಲಕ್ಷ್ಮೀ ಪತಿಯಾದ ನಾರಾಯಣ ನನ್ನ ಧ್ಯಾನಿಸು.ಮನವನ್ನು ನಿಗ್ರಹಿಸು.ಇಂದ್ರಿಯಂಗಳನ್ನು ಜಯಿಸು.ಮಾಧವನಲ್ಲಿ ಮಾತ್ರ ನಿನ್ನ ಮನವಿರಲಿ.
ಆ ಹರಿಯ ರೂಪವನ್ನು ಚಿಂತನೆ ಮಾಡು.
ಪ್ರಸನ್ನವದನನು, ದಯಾವೀಕ್ಷಣನು, ಅಪ್ರತಿಮಸುಂದರನು,ಚಂಪಕ ನಾಶಿಕನು,ಚಾರು ಕಪೋಲನು,ರಮಣೀಯ ವಾದಅಂಗವುಳ್ಳವನು,ತರುಣನು,ಶರಣಾಗತ ರಕ್ಷಕನು,ಶ್ರೀವತ್ಸ ಕೌಸ್ತುಭ ಧಾರಿಯು,ವನಮಾಲನು,ಶಂಖ ಚಕ್ರ ,ಗದಾ, ಪದ್ಮಧಾರಿಯು,ಚತುರ್ಭುಜನು,ಹಾರ, ಕಿರೀಟ , ಪದಕ,ಕುಂಡಲ, ಕೇಯೂರ ,ಸಕಲ ಸ್ವರ್ಣ,ವಜ್ರ,ರತ್ನ ಬಗೆಬಗೆಯ ಆಭರಣಗಳನ್ನು ಧರಿಸಿದವನು.
ಕೈಯಲ್ಲಿ ಬಂಗಾರದ ಕಂಕಣವನ್ನು,ಬಂಗಾರದ ಕಡಗಗಳನ್ನು ಕಾಲಿನಲ್ಲಿ ಧರಿಸಿದವನು,ಪೀತಾಂಬರ ಧಾರಿಯು,ಪರಮಶಾಂತನು,ಮಂದಸ್ಮಿತನು,ತರುಣಿಯಾದ ಲಕ್ಷ್ಮೀ ದೇವಿಯಿಂದ ಸದಾ ಸೇವೆಗೊಳ್ಳುವವನು,ಅಂತಹ ವಾಸುದೇವನನ್ನು,ಶ್ರೀನಿವಾಸ ನನ್ನು,ಜಗನ್ನಾಥ ನನ್ನು ನಿಯಮದಿಂದ ಧ್ಯಾನಿಸು.
ಪರಮ ಮಂಗಳಕರವಾದ ಆ ರೂಪವನ್ನು ಧ್ಯಾನಿಸುತ್ತಾ ಅವನನ್ನು ಚಿಂತಿಸು.
ಪರಮಾನಂದಮಯನಾದ ಸ್ವಾಮಿಯ ದರುಶನ ನಿನಗಾಗಲಿ.
ಪರಮ ರಹಸ್ಯ ವಾದ ಮಂತ್ರವನ್ನು ನಿನಗೆ ಉಪದೇಶ ಮಾಡುವೆನು.ಇದನ್ನು ಚೆನ್ನಾಗಿ ಶ್ರದ್ಧೆ ಯಿಂದಜಪಿಸು ಎಂದು ಹೇಳಿ "ವಾಸುದೇವ ಮಂತ್ರವನ್ನು "ಉಪದೇಶ ಮಾಡಿದ್ದಾರೆ.
"ಕಾಯೇನ, ವಾಚಾ, ಮನಸಾ ಭಗವಂತನ ಪೂಜೆ ಮಾಡು.ತನ್ನನ್ನು ಯಾರು ಭಕ್ತಿ ಯಿಂದ ಸೇವಿಸುವರೋ ಅವರಿಗೆ ತನ್ನ ಅರಮನೆಯಲ್ಲಿ ಸರಿಭಾಗ ಕೊಡುವ ಪರಮ ಕರುಣಾನಿಧಿ ಆ ಶ್ರೀ ಹರಿ.ಭಕ್ತಿ ಇಂದ ಭಜಿಪರಿಗೆ ದುರ್ಲಭವಾದ ಮೋಕ್ಷ ವನ್ನು ಕೊಡುವ".
ಹೀಗೆಂದು ಉಪದೇಶವನ್ನು ಮಾಡಿ,ಬಾಲಕನಿಗೆ ಆಶೀರ್ವಾದ ಮಾಡಿ ನಾರದರು ಅಲ್ಲಿಂದ ಹೊರಟಿದ್ದಾರೆ.
ಅವರ ಮಾತಿನಂತೆ ಧ್ರುವನು ಮಧುವನಕ್ಕೆ ಹೊರಟು
ತ್ರಿಕಾಲ ಸ್ನಾನ ಮಾಡುತ್ತಾ ಕುಶಾಸನದ ಮೇಲೆ ಕುಳಿತು ಪ್ರಾಣಾಯಾಮ ದಿಂದ ಧ್ಯಾನ ವನ್ನು ಮಾಡುತ್ತಾ,ಇಂದ್ರಿಯಗಳ ನ್ನು ನಿಗ್ರಹಿಸಿ,ಮನಸ್ಸನ್ನು ಧೃಡಮಾಡಿ,ಶ್ರೀ ಹರಿಯ ಪಾದ ಪದ್ಮಗಳನ್ನು ಚಿಂತಿಸುತ್ತಾ 
ಹಾರ,ಪದಕ, ಕಿರೀಟ, ಕೇಯೂರ, ಮುಂತಾದ ಆಭರಣಗಳಿಂದ ಅಲಂಕೃತ ನಾಗಿರುವ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ತನಗೆ ನಾರದರು ಉಪದೇಶವನ್ನು ಮಾಡಿದ ವಾಸುದೇವ ಮಂತ್ರವನ್ನು ಜಪಿಸುತ್ತಾ,ಅವನ ಮಹಿಮೆಯನ್ನು ರೂಪವನ್ನು ಚಿಂತಿಸುತ್ತಾ ತಪಸ್ಸು ಆಚರಣೆ ಮಾಡಲು ಆರಂಭಿಸಿದನು.
ನಾರದರ ಮಾತಿನಂತೆ ಶ್ರೀ ಹರಿಯ ಅರ್ಚನೆ  ಪೂಜೆ ಯನ್ನು ಮಾಡುತ್ತಾ

 ಮೊದಲನೆಯ ತಿಂಗಳಲ್ಲಿ ಮೂರು ದಿನಗಳಿಗೆ ಒಮ್ಮೆ ಕಪಿತ್ಥ ಬದರೀ ಫಲವನ್ನು ಭಕ್ಷಣೆ ಮಾಡುತ್ತಾ ಇದ್ದಾರೆ.
ಆದರು ಭಗವಂತನ ದರುಶನ ವಾಗಲಿಲ್ಲ.ಅಂದರೆ ತಿಂಗಳಲ್ಲಿ ಬರಿಯ ಹತ್ತು ದಿನ  ಮಾತ್ರ ಫಲ ಸೇವನೆ.

ಎರಡನೇಯ ತಿಂಗಳಲ್ಲಿ ಆರು ದಿನಕ್ಕೆ ಒಂದು ಬಾರಿ ಕೆಳಗಡೆ ಬಿದ್ದ ಹುಲ್ಲು, ಸೊಪ್ಪು ತಿಂದು ತಪಸ್ಸು ಆಚರಣೆ ಮಾಡಿದ್ದಾನೆ.
ಈ ಸಾರಿ ಫಲ ಭಕ್ಷಣೆ ಇಲ್ಲ.
(ಬರಿಯ ಏಳು ದಿನ ಮಾತ್ರ)
ಆದರು ಭಗವಂತನ ಸಾಕ್ಷಾತ್ಕಾರ ಆಗಲಿಲ್ಲ.

ಮೂರನೆಯ ತಿಂಗಳಲ್ಲಿ ಒಂಭತ್ತು ದಿನಕ್ಕೆ ಒಂದು ಬಾರಿ
ಬರಿಯ ಜಲವನ್ನು ಕುಡಿದು ತಪಸ್ಸು ಆಚರಣೆ ಮಾಡಿದ್ದಾನೆ.
ಈ ಸಾರಿ ಫಲ,ಹುಲ್ಲು, ಸೊಪ್ಪು  ಯಾವುದು ಇಲ್ಲ.
ಆದರು ಭಗವಂತನ ದರುಶನ ವಾಗಲಿಲ್ಲ.

ನಾಲ್ಕನೇ ತಿಂಗಳಲ್ಲಿ ಹನ್ನೆರಡು ದಿನಕ್ಕೆ ಒಂದು ವಾಯು ಭಕ್ಷಕನಾಗಿ ಅಂದರೆ ಬರಿಯ ಗಾಳಿ ಯನ್ನು ಕುಡಿದು ತಪಸ್ಸು ಆಚರಿಸಿ ಇದ್ದಾನೆ. ಆದರು ಶ್ರೀ ಹರಿಯ ದರುಶನ ವಾಗಲಿಲ್ಲ.

ಐದನೆಯ ತಿಂಗಳಲ್ಲಿ ಸಂಪೂರ್ಣ ಪ್ರಾಣಾಯಾಮ ಮಾಡಿ ಸ್ವಲ್ಪವು ಸಹ ಉಸಿರಾಡದಂತೆ ಒಂದು ಪಾದದ ಮೇಲೆ ನಿಂತು ಅಚಲನಾಗಿ ಸಂಪೂರ್ಣ ಗುಣಪೂರ್ಣನಾದ ಭಗವಂತನ ಧ್ಯಾನ ಮಾಡುತ್ತಾ ನಿಂತಿದ್ದಾರೆ.
ಈ ರೀತಿಯಲ್ಲಿ ಐದನೆಯ ತಿಂಗಳಿನಲ್ಲಿ 
ಎಲ್ಲಾ ಸಮಸ್ತ ಲೋಕಗಳನ್ನು ತನ್ನ ಉದರದಲ್ಲಿ ಇಟ್ಟುಕೊಂಡಂತಹ,ಸರ್ವ ಲೋಕಗಳಿಗೆ ಆಧಾರನಾಗಿರತಕ್ಕಂತಹ ಭಗವಂತ ನನ್ನು ತನ್ನ ಹೃದಯ ದಲ್ಲಿ ಇಟ್ಟು ಕೊಂಡು,ಆ ಪರಮಾತ್ಮನ ವಿಶೇಷ ಸನ್ನಿಧಾನ ಇವರಲ್ಲಿ ಇರಲಾಗಿ ಧೃವರಾಯರು ತಪಸ್ಸು ಮಾಡುವಾಗ,ಭೂದೇವಿಯು ಇವರ ಭಾರವನ್ನು ಹೊರಲಿಲ್ಲವಂತೆ.

ಒಂದು ಪಾದದಿಂದ ತಪವನ್ನು ಮಾಡುತ್ತಾ ಇರುವಾಗ ಬಲಗಾಲನ್ನು ಊರಿ ಮಾಡಿದಾಗ ಭೂಮಿ ಆ ಕಡೆ ವಾಲುತ್ತಾ ಇತ್ತು.ಎಡಗಾಲನ್ನು ಊರಿ ತಪಸ್ಸು ಮಾಡುವಾಗ ಸಂಪೂರ್ಣ ಭೂಮಿ ಎಡಗಡೆ ವಾಲುತ್ತಾ ಇತ್ತಂತೆ.
ಎಲ್ಲಾ ದೇವತೆಗಳು ಇವರಿಗೆ ಪರೀಕ್ಷೆ ಮಾಡಲೋಸುಗ ಕ್ರೂರ ಪ್ರಾಣಿಗಳ, ಪ್ರೇತ ಪಿಶಾದಿಗಳ ರೂಪದಲ್ಲಿ ಬಂದು ಹೆದರಿಸುತ್ತಾ ಇದ್ದಾರೆ.ಆದರು ಇವರಿಗೆ ಅದರ ಪರಿವೆಯೇ ಇಲ್ಲ.ಯಾವುದಕ್ಕೂ ಇವರು ಹೆದರಲಿಲ್ಲ.ತಪಸ್ಸು ಮಾತ್ರ ಬಿಡಲಿಲ್ಲ.
 ಭಗವಂತನ ಕುರಿತಾಗಿ ಧ್ರುವ ತಪಸ್ಸು ಮಾಡುವಾಗ ದೇವತೆಗಳು  ಈ ರೀತಿಯಲ್ಲಿ ಮಾಡಿದ್ದು ಸರಿಯೇ ಅಂತ ಯೋಚನೆ ಬರಬಹುದು.
ಅದಕ್ಕೆ ಉತ್ತರ ಇಷ್ಟೇ.
ತಾವು ವಿಘ್ನವನ್ನು ಉಂಟು ಮಾಡಿದರು ಸಹ ಧ್ರುವನು ತಪಸ್ಸು ಬಿಡಲಿಲ್ಲ ಎಂದರೆ ಅವರಿಗೆ ಕೀರ್ತಿ ಬರಲೋಸುಗವಾಗಿ ಅವರು ಮಾಡಿದ ಪರೀಕ್ಷೆ ಹೊರತಾಗಿ ಬೇರೆ ಯಾವ ಅರ್ಥ ಇಲ್ಲ.
ಈ ರೀತಿಯಲ್ಲಿ ಧ್ರುವ ರಾಯರು ಕೊನೆಯಲ್ಲಿ ಉಸಿರು ಬಿಗಿಯಾಗಿ ಹಿಡಿದು ತಪಸ್ಸು ಆಚರಣೆ ಮಾಡುವ ಸಮಯದಲ್ಲಿ ಸಕಲರಿಗು ಶ್ವಾಸೋಚ್ಚ್ವಾಸ ನಿಂತು ಹೋಗಿದೆಯಂತೆ.
ಎಲ್ಲಾ ದೇವತೆಗಳು ಪರಮಾತ್ಮನ ಬಳಿ ಹೋಗಿ ಪ್ರಾರ್ಥನೆ ಮಾಡಿದ್ದಾರೆ.  "ಸ್ವಾಮಿ!ಚರಾಚರ ಪ್ರಾಣಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.ನೀನು ತಕ್ಷಣ ಹೋಗಿ ಎಲ್ಲರನ್ನೂ ಈ ಉಸಿರಾಟದ ಸಮಸ್ಯೆ ಯಿಂದ ಕಾಪಾಡು.ಧ್ರುವನಿಗೆ ಅನುಗ್ರಹ ಮಾಡು ಎಂದು ಕೇಳಿಕೊಂಡಾಗ
ಅದಕ್ಕೆ ಭಗವಂತ ಹೇಳುತ್ತಾನೆ.
"ದೇವತೆಗಳೇ! ಭಯಪಡಬೇಡಿ.ಉತ್ತಾನಪಾದನ ಪುತ್ರನು ನನ್ನಲ್ಲಿ ವಿಶೇಷವಾಗಿ ಆಸಕ್ತಿಯನ್ನು ಇಟ್ಟು,ಭಕ್ತಿ ಯನ್ನು ಇಟ್ಟು ತಪಸ್ಸನ್ನು ಮಾಡುತ್ತಾ ಇರುವದರಿಂದ ಪ್ರಾಣ ನಿರೋಧ ಮಾಡಿದದುರಿಂದ ಎಲ್ಲರಿಗು ಶ್ವಾಸೋಶ್ವಾಸ ನಿಂತು ಹೋಗಿದೆ.ನಾನೇ ಹೋಗಿ ಆ ಐದು ವರುಷದ ಬಾಲಕನಾದ ಧ್ರುವನಿಗೆ ಅನುಗ್ರಹ ಮಾಡಿ ಈ ಘೋರವಾದ ತಪಸ್ಸುನಿಂದ ನಿವೃತ್ತಿ ಯಾಗುವಂತೆ ಪ್ರತ್ಯಕ್ಷವಾಗಿ ಅವನಿಗೆ ಏನು ವರಬೇಕು ಆ ವರವನ್ನು ಕೊಡುತ್ತೇನೆ ಅವನ ತಪಸ್ಸು ನಿಲ್ಲಿಸುತ್ತೇನೆ ಎಂದು ಹೇಳಿ ಅವರನ್ನು ಕಳುಹಿಸುವನು.
ಐದು ತಿಂಗಳ ಕಠಿಣ ತಪಸ್ಸು ಮುಗಿದಿದೆ.
ತಕ್ಷಣ  ಭಗವಂತನು ತನ್ನ ಭಕ್ತನಾದ ಧ್ರುವನ ರಕ್ಷಣಾ ಮತ್ತು ಅನುಗ್ರಹ ಮಾಡಲೋಸ್ಕರವಾಗಿ ಆತುರದಿಂದ ಗರುಡಾರೂಢನಾಗಿ,ಶಂಖ,ಚಕ್ರ ಗದಾ,ಪದ್ಮಧಾರಿಯಾಗಿ ಮಧುವನದ ಕಡೆ ಪಯಣ ಬೆಳೆಸಿದ್ದಾನೆ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಒಂದು ಏಕಾದಶಿ ಮಾಡಲು ಕಷ್ಟ ಪಡುವ ನಾವು ಧ್ರುವ ರಾಯರನ್ನು ನೋಡಿ ಕಲಿಯಬೇಕು.

🙏🙏🙏

ಏಕಾದಶಿಯಾದ  ಏಕದಶೀ ವ್ರತವನ್ನು ಆಚರಿಸಲಾಗುತ್ತದೆ, ಅದನ್ನು ಪಾಪಾಂಕುಶ ಏಕಾದಶಿ ಎಂದು ಕರೆಯಲಾಗಿದೆ. ಈ ಪವಿತ್ರ ದಿನದಂದು ಉಪವಾಸದಿಂದಿದ್ದು ಮಹಾವಿಷ್ಣುವನ್ನು ಆರಾಧಿಸುವುದು ಶ್ರೇಯಸ್ಕರ.  

ಏಕಾದಶೇಂದ್ರಿಯೈಃ ಪಾಪಂ ಯತ್ಕೃತಂ ಭವತಿ ಪ್ರಭೋ |
ಏಕಾದಶ್ಯುಪವಾಸೇನ ತತ್ಸರ್ವಂ ವಿಲಯಂ ವ್ರಜೇತ್ ||
ಈ ವ್ರತವನ್ನು ಕೈಗೊಳ್ಳುವುದರಿಂದ ಮನುಷ್ಯನು ತಮ್ಮ ಏಕಾದಶ ಇಂದ್ರಿಯಗಳಿಂದ ಮಾಡಿದ ಎಲ್ಲ ಪಾಪಗಳಿಂದ ಮುಕ್ತರಾಗಿ ಸರ್ವಯಜ್ಞಗಳ ಫಲವನ್ನು ಪಡೆದು ವಿಷ್ಣುಸಾಯುಜ್ಯವನ್ನು ಹೊಂದುವರು.

ಸಂಸ್ಕೃತದ ಜೋಡುಪದವಾಗಿರುವ ಪಾಪಾಂಕುಶದ ಅರ್ಥವೇನೆಂದರೆ ಪಾಪಗಳಿಗೆ ಅಂಕುಶವನ್ನು ಹಾಕುವುದೆಂದಾಗುತ್ತದೆ. ಆದ್ದರಿಂದ ಪಾಪಾಂಕುಶ ಏಕಾದಶಿಯಂದು ಉಪವಾಸ ವ್ರತವನ್ನು ಸಂಕಲ್ಪದ ಮೂಲಕ ಕೈಗೊಂಡು ಅಹೋರಾತ್ರಿ ಮಹಾವಿಷ್ಣುವನ್ನು ಅರ್ಚಿಸಿ ಆರಾಧಿಸುವುದು ಅತ್ಯಂತ ಪುಣ್ಯತಮವಾದುದು. ಈ ವಿಷಯವನ್ನು ಶ್ರೀ ಕೃಷ್ಣನು ಅರ್ಜುನನಿಗೆ ವಿವರಿಸಿರುತ್ತಾನೆ. 

ಹಿಂದೊಮ್ಮೆ ಕ್ರೋಧನವೆಂಬ ಹೆಸರಿನ ವ್ಯಾಧನೊಬ್ಬನು ವಿಂಧ್ಯಾಟವಿಯಲ್ಲಿ ವಾಸಿಸುತ್ತಿದ್ದನು. ಆತನ ಜೀವನ ನಿರ್ವಹಣೆಗೆ ಪ್ರಾಣಿಗಳನ್ನು ಕೊಲ್ಲುವುದು ಅನಿವಾರ್ಯವಾಗಿತ್ತಾದ್ದರಿಂದ ಆತನು ದಿನನಿತ್ಯವೂ ಪಾಪಗಳನ್ನೇ ಮಾಡುತ್ತಿದ್ದನು. 

ಆಯುಸ್ಸು ಮುಗಿದುಹೋಗಲು ಯಮಕಿಂಕರರು ಆತನನ್ನು ಯಮಧರ್ಮನೆದುರಿಗೆ ನಿಲ್ಲಿಸಲು ಆತನನ್ನು ಎಳೆದೊಯ್ಯುತ್ತಿದ್ದರು. ಅತ್ಯಂತ ಭಯಗೊಂಡಿದ್ದ ಕ್ರೋಧನನು ಮಾರ್ಗಮಧ್ಯದಲ್ಲಿ ಅಂಗೀರ ಮಹರ್ಷಿಗಳನ್ನು ಬೇಟಿ ಮಾಡಿ ತನ್ನ ಮನದ ಅಳಲನ್ನು ತೋಡಿಕೊಂಡು ರಕ್ಷಿಸಬೇಕೆಂದು ಪ್ರಾರ್ಥಿಸಿದನು. 

ಅಂಗಿರರು ಆತನಿಗೆ ಅಶ್ವಯುಜ ಮಾಸ ಶುಕ್ಲಪಕ್ಷದ ಏಕಾದಶಿಯಂದು ಉಪವಾಸ ಮಾಡುತ್ತ ಪರಮಾತ್ಮನನ್ನು ಅರ್ಚಿಸಿ, ಆರಾಧಿಸಿದರೆ ಸರ್ವಪಾಪಗಳೂ ವಿನಾಶ ಹೊಂದಿ, ಸ್ವರ್ಗವನ್ನು ಸೇರಬಹುದೆಂದು ಸಲಹೆ ನೀಡುತ್ತಾರೆ. 

ಅಂತೆಯೇ, ಕ್ರೋಧನನು ಅಶ್ವಯುಜ ಶುಕ್ಲ ಏಕಾದಶಿಯಂದು ಉಪವಾಸವನ್ನು ಮಾಡಿ ಶ್ರೀ ವಿಷ್ಣುವನ್ನು ಭಕ್ತಿಭಾವದಿಂದ ಸಂಪೂಜಿಸಿದನು. ಸುಪ್ರೀತನಾದ ಮಹಾವಿಷ್ಣುವು ಕ್ರೋಧನನ ಸಕಲ ಪಾಪಗಳನ್ನು ನಿವಾರಿಸಿ ಮೋಕ್ಷವನ್ನು ಕರುಣಿಸಿದನು. 

ಏಕಾದಶಿಯಂದು ಉಪವಾಸವನ್ನು ಮಾಡಿ ಮಹಾವಿಷ್ಣುವನ್ನು ಅರ್ಚಿಸಿ, ಆರಾಧಿಸುವುದು ಅತ್ಯಂತ ಪುಣ್ಯಪ್ರದವಾಗಿರುತ್ತದೆ. 

ಪಾಪಾಂಕುಶ ಏಕಾದಶಿಯನ್ನು 9 ಹೆಡೆಯ ಹಾವು, ಆದಿಶೇಷನ ಮೇಲೆ ಅನಂತಶಯನ ಸ್ವರೂಪದಲ್ಲಿ ಮಲಗಿರುವಂತಿರುವ ವಿಷ್ಣುವಿನ ಅವತಾರವಾದ‌ ಪದ್ಮನಾಭಸ್ವಾಮಿಯ ಸ್ಮರಣೆಯಲ್ಲಿ ಆಚರಿಸಲಾಗುತ್ತದೆ.

ವಿಷ್ಣುವಿನ ಈ ನಿರ್ದಿಷ್ಟ ರೂಪವು ಈ ವಿಷಯಗಳನ್ನು ಸೂಚಿಸುತ್ತದೆ-
ಇದು ಪ್ರಪಂಚದ ಸೃಷ್ಟಿಯ ಹಿಂದಿನ ರಹಸ್ಯವನ್ನು ಪ್ರತಿನಿಧಿಸುತ್ತದೆ.
ನೀರು ರಕ್ತವನ್ನು ಚಿತ್ರಿಸುತ್ತದೆ, ಆದಿಶೇಷ (ಹಾವು) ಅನಂತತೆಯನ್ನು ಮತ್ತು ಸಮಯದ ಚಲನೆಯನ್ನು ಮತ್ತು ಮಲಗಿರುವ ರೂಪವು ವಾತ ಅಥವಾ ಮನುಷ್ಯನ ದೇಹದಲ್ಲಿನ ಗಾಳಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ, ಭಗವಾನ್ ವಿಷ್ಣುವು ಭವಿಷ್ಯದಲ್ಲಿ ಜನ್ಮ ನೀಡುವ ರೀತಿ ವಾತವನ್ನು ಪ್ರತಿನಿಧಿಸುತ್ತಾನೆ.


ಭೂಮಿಯಲ್ಲಿ ಧಾನ್ಯವನ್ನು ಹುಗಿದಾಗ, ಅದು ಬೆಳೆಯಲು ಪ್ರಮುಖವಾದ ವಸ್ತು ಎಂದರೆ ತೇವಾಂಶ. ವಿಷ್ಣುವಿನ ದೇಹದಲ್ಲಿನ ತೇವಾಂಶವು ಅವನ‌ ಹೊಕ್ಕಳಿಂದ ಬ್ರಹ್ಮನಿಗೆ ಜನ್ಮ ನೀಡುತ್ತದೆ. ಬ್ರಹ್ಮನ ಜನನವು ನಾಭಿ ಕಮಲವೆಂಬ ಪರಿಕಲ್ಪನೆಗೆ ಜನನ ನೀಡುತ್ತದೆ. ಇದು ನಾಡಿ ಗ್ರಂಥಮ್ ಅಥವಾ ದೇಹದಲ್ಲಿನ‌ ನರಗಳ ಕೇಂದ್ರವನ್ನು ಸಕ್ರಿಯಗೊಳಿಸುವ ವಲಯವಾಗಿದೆ.
**************





ಶ್ರೀ ಮದ್ ಭಾಗವತ ದಲ್ಲಿ ೧೮,೦೦೦ ಗ್ರಂಥಗಳಿವೆ..

ಶ್ರೀ ಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.

ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳನಡುವಿನ ಸಂವಾದ ರೂಪವಾಗಿದೆ.

ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.

ಈ ರೀತಿಯಲ್ಲಿ ೧೮,೦೦೦ ಗ್ರಂಥ ಗಳಿಗೆ ೧೮ ಭಗವದ್ ರೂಪ ಗಳಿವೆ.

ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ.

ಕೇಶವ, ನಾರಾಯಣ,ಮಾಧವ,
ಗೋವಿಂದ,ವಿಷ್ಣು, ಮಧುಸೂಧನ,ತ್ರಿವಿಕ್ರಮ, ವಾಮನ,ಶ್ರೀಧರ, ಹೃಷಿಕೇಶ, ಪದ್ಮನಾಭ, ಮತ್ತು ದಾಮೋದರ,ಇವೇ ಭಗವಂತನ ಆ ಹನ್ನೆರಡು ರೂಪಗಳು..

ಈ ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು.

ಗಂಗಾನದಿಯ ಸ್ನಾನ ಮಿಂದವರ ಪಾಪವನ್ನು ತೊಳೆದರೆ,
ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು..

ಗಂಗಾನದಿಯನ್ನು  ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು.
ಆದರೆ 
ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು.

ಗಂಗಾ ನದಿಯಲ್ಲಿ  ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ.
ಆದರೆ 
ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ,ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ,ಕೊನೆಗೆ ಒಂದು ಶ್ಲೋಕವಾದರು ಹೇಳುವದು.ಅದು ಸಹ ಆಗದಿದ್ದರೆ
ಕೊನೆಯಲ್ಲಿ 
ಶ್ಲೋಕದ ಕಾಲುಭಾಗ ವಾದರು ಸರಿ,ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ,ಸಾವಿರ ಗೋದಾನದ ಫಲ ಬರುತ್ತದೆ.

ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ..

ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ,ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ??..

ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ.
ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ..

ಆದರೆ ಭಾಗವತ ಹಾಗಲ್ಲ ನಮಗೆ ಮೋಕ್ಷವನ್ನು ಸಹ ಕೊಡುತ್ತದೆ..

ಗಂಗೆ ಭಗವಂತನ ಉಗುರು ನಿಂದ ಬಂದವಳು.ಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಧರಿಸುತ್ತಾರೆ. 

ಆಮೇಲೆ ಭೂಲೋಕಕ್ಕೆ ಬರುವಾಗ ಗಂಗಾದೇವಿ ಯನ್ನು ರುದ್ರ ದೇವರು ಧರಿಸುತ್ತಾರೆ.

ಶ್ರೀ ಮದ್ ಭಾಗವತ ವನ್ನು ರಚಿಸಿದವರು ಗಂಗಾ ಜನಕನಾದ ಆ ವೇದವ್ಯಾಸ ರೂಪಿ ಪರಮಾತ್ಮ.

ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ.
(ಸರಸ್ವತಿ  ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.)

ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು...

ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ.

ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ..

ಇದನ್ನು ಯಾರು ಹೇಳುವರೊ, ಮತ್ತು 
ಯಾರು ಕೇಳುವರೊ,
ಮತ್ತು 
ಯಾರು ಹೇಳಿಸುವರೊ, ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ.

ಉತ್ತರೆಯ ಗರ್ಭದಲ್ಲಿ ಇದ್ದ ಶಿಶುವಿನ ಮೇಲೆ  ಅಶ್ವತ್ಥಾಮರು ಬ್ರಹ್ಮಾಸ್ತ್ರ ಪ್ರಯೋಗ ಮಾಡುವರು. 

ಉತ್ತರೆಯ ಪ್ರಾರ್ಥನೆ ಯಂತೆ ಭಗವಂತ ಆ ಗರ್ಭವನ್ನು ರಕ್ಷಣೆ ಮಾಡುತ್ತಾನೆ. ತನ್ನ ಯೋಗ ಬಲದಿಂದ ಒಂಭತ್ತು ತಿಂಗಳ ಕಾಲ ಅಲ್ಲಿ ಗದಾಪಾಣಿಯಾಗಿ ಆ ಗರ್ಭವನ್ನು ರಕ್ಷಣೆ ಮಾಡಿದ. 

ಗರ್ಭದಲ್ಲಿ ಇದ್ದಾಗ ಭಗವಂತನ ರೂಪವನ್ನು ಸದಾ ವೀಕ್ಷಣೆ ಮಾಡಿದುದರಿಂದ  ಅವನಿಗೆ ಪರೀಕ್ಷಿತ ಅಂತ ಹೆಸರು ಬಂದಿತು..

ಉತ್ತರೆಯ ಪ್ರಸವ ಸಮಯದಲ್ಲಿ ಭಗವಂತ ಅಲ್ಲಿ ತನ್ನ  ರೂಪವನ್ನು ಹಿಂತೆಗೆದುಕೊಂಡ.
ತಕ್ಷಣ ಬ್ರಹ್ಮಾಸ್ತ್ರ ಶಿಶುವನ್ನು ಸಂಹಾರ ಮಾಡಿತು.

ಮತ್ತೆ ಉತ್ತರೆಯ ಪ್ರಾರ್ಥನೆ ಆ ಶ್ರೀ ಕೃಷ್ಣ ಪರಮಾತ್ಮನಿಗೆ..

ಭಗವಂತನ ಅನುಗ್ರಹದಿಂದ ಮಗು ಮತ್ತೆ ಬದುಕುತ್ತದೆ.

ಹೀಗೆ ಹುಟ್ಟು, ಸಾವು ಪ್ರತಿಯೊಂದು ಜೀವಿಯ ಜೀವನ, ನನ್ನ ಅಧೀನ ಅಂತ ಭಗವಂತ ಇಲ್ಲಿ ತೋರಿಸುವನು.

ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ಇಂದು ಹರಿದಿನದ (ಏಕಾದಶಿಯ) ಪ್ರಯುಕ್ತವಾಗಿ ವಿಶೇಷವಾಗಿ ಪಾರಾಯಣ  ಮತ್ತು ಶ್ರವಣವನ್ನು ಮಾಡೋಣ.
******
ಆಹಾರ ಬಿಡೋದು ಹೆಚ್ಚಾ ನಿದ್ರೆ ಬಿಡೋದಾ ಹೆಚ್ಚಾ ...ಅನ್ನೋ ‌ಪ್ರಶ್ನೆ ಗೆ ಪುರಾಣ ಕೊಡುವ ಉತ್ತರ:

ಅಶ್ವಮೇಧ ಸಹಸ್ರಾಣಿ ವಾಜಪೇಯ ಶತಾನಿಚ, ಏಕಾದಶ್ಯುಪವಾಸೇನ ಕಲಾಂ ನಾರ್ಹಂತಿ ಷೋಡಶೀಮ್ ಏಕಾದಶಿ ಉಪವಾಸಕ್ಕೆ ಹೇಳಿರೋ ಫಲ ಯಾವುದಕ್ಕಿಂತಧಿಕ ಅಂದ್ರೆ ಸಾವಿರಾರು ಅಶ್ವಮೇಧ ನೂರಾರು ವಾಜಪೇಯ ಏಕಾದಶಿಯಂದು ಜಾಗರಣೆಗೆ ಹೇಳಿದ ಮಾತು ನೋಡಿ: ಅಶ್ವಮೇಧ ಸಹಸ್ರಸ್ಯ ವಾಜಪೇಯ ಶತಸ್ಯಚ, ಪುಣ್ಯಂ ಕೋಟಿಗುಣಂ‌ ಗೌರಿ ವಿಷ್ಣೋರ್ಜಾಗರಣೆ ಕೃತೇ ಸಾವಿರಾರು ಅಶ್ವಮೇಧ,‌ ನೂರಾರು ವಾಜಪೇಯಕ್ಕಿಂತ ಕೋಟಿಪಟ್ಟು ಅಧಿಕ ಪುಣ್ಯ ಜಾಗರಣೆಗೆ ಹೇಳಿರೋದು. ಹಾಗಂಥ, ‌ಉಪವಾಸ ಬಿಟ್ಟು ಜಾಗರಣೆ ಮಾಡೋದಲ್ಲ ಎರಡನ್ನೂ ಸೇರಿ ಮಾಡಬೇಕು. ತಪಸ್ಸು ಮಾಡು ಅನ್ಲಿಲ್ಲ, ಕಾಡಿಗೆ ಹೋಗು ಅನ್ಲಿಲ್ಲ, ಇದ್ದಲ್ಲೇ ಉಪವಾಸ ಜಾಗರಣೆ, ಅದೂ ಎರಡು ವಾರದಲ್ಲಿ ಒಂದು ದಿನ ಮಾಡಲಿಲ್ಲವೆಂದರೆ... ಭಕ್ತೋಸಿ ಮೇ ಸಖಾ ಚೇತಿ ಅಂಥ ದೇವರಿಂದ ಇವ ನನ್ನ ಭಕ್ತ ಕರೆಸಿಕೊಳ್ಳುವ ಬಗೆ ಹೇಗೆ ??? ಈಗ ಮೈಯ್ಯಲ್ಲಿ ಶಕ್ತಿ ಇದೆ, ತಲೆಯಲ್ಲಿ ಬುದ್ಧಿ ಇದೆ.....ಇಷ್ಟೆಲ್ಲ ಇದೆ ಅಂದ್ರೆ ಪುಣ್ಯವಿದೆ ಎಂದರ್ಥ. ಅದು ಇದ್ದಾಗಲೇ ಸಾಧನೆ ಆಗಬೇಕಲ್ಲವೇ..... ಕನಕದಾಸರ ಮಾತು ಸ್ಮರಣೆಗೆ ತಂದುಕೊಳ್ಳುವ ಒಮ್ಮೆ ಪುಣ್ಯ ತೀರಿದ ಪರಲೋಕ ಸಾಧನವೇ ????‌🙏 ನಮ್ಮ ವರಾಹ ದೇವರು ಹೇಳ್ತಾರೆ.... ನಿನ್ನ ಸಾವಿರ ಅಪರಾಧ ಕ್ಷಮಿಸಬೇಕಾ, ವಿಷ್ಣುಸಹಸ್ರನಾಮ ಹೇಳು ಜಾಗರಣೆ ಮಾಡಿಕೊಂಡು ಅಂತಾರೆ
ಏಕಾದಶ್ಯಾಂ ಜಾಗರೇ ಯಃ ಪಠೇನ್ನಾಮಸಹಸ್ರಕಮ್, ಅಪರಾಧ ಸಹಸ್ರಾಣಿ ಕ್ಷಮತೇ ತಸ್ಯ ಕೇಶವಃ
****

ಏಕಾದಶಿ ಎಂದರೇನು?

ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ, ಪೂರ್ಣಿಮಾ (ಹುಣ್ಣಿಮೆ) ಮತ್ತು ಅಮಾವಾಸ್ಯ (ಅಮಾವಾಸ್ಯೆ) ದಿಂದ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ.

ಏಕಾದಶಿ ವ್ರತವನ್ನು ಯಾರು ಆಚರಿಸಬೇಕು?

ಏಕಾದಶಿಯನ್ನು ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಆಚರಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಎಂಟನೆಯ ವಯಸ್ಸಿನಿಂದ ಎಂಭತ್ತು ವರ್ಷದವರೆಗೆ ಒಬ್ಬ ವ್ಯಕ್ತಿಯು ಏಕಾದಶಿ ದಿನಗಳಲ್ಲಿ ಉಪವಾಸ ಮಾಡಬೇಕು.

ಏಕಾದಶಿಯಲ್ಲಿ ನಿಷೇಧಿಸಲಾದ ಆಹಾರಗಳು ಯಾವುವು?

ಏಕಾದಶಿಯಂದು ಅಕ್ಕಿ, ಗೋಧಿ, ರಾಗಿ, ಮೆಕ್ಕೆಜೋಳ,  ಜೋಳ, ರವೆ, ಅವಲಕ್ಕಿ, ಆಹಾರ ಧಾನ್ಯಗಳು, ಧಾನ್ಯಗಳು ಮತ್ತು ಬೀನ್ಸ್ (ದ್ವಿದಳ ಧಾನ್ಯಗಳು) ತಿನ್ನಲೇಬಾರದು.

ಮಸಾಲೆಗಳನ್ನು ಅಡುಗೆಗೆ ಬಳಸಬಹುದಾದರೂ, ಸಾಸಿವೆ, ಎಳ್ಳು ಬೀಜಗಳನ್ನು ತಪ್ಪಿಸಬೇಕು.

ನೀವು ಸಾಮಾನ್ಯವಾಗಿ ಧಾನ್ಯಗಳನ್ನು ಹೊಂದಿರುವ ಪುಡಿ ಮಾಡಿದ ಅಫೊಫೈಟಿಡಾ (ಹಿಂಗ್) ಅನ್ನು ನೀವು ಬಳಸಲಾಗುವುದಿಲ್ಲ.

ಧಾನ್ಯಗಳೊಂದಿಗೆ ಬೆರೆಸಬಹುದಾದ ಯಾವುದೇ ಅಡುಗೆ ಪದಾರ್ಥಗಳನ್ನು ಬಳಸದಂತೆ ನೋಡಿಕೊಳ್ಳಿ. ಉದಾಹರಣೆಗೆ, ನೀವು ಪ್ಯೂರಿಸ್ ಫ್ರೈ ಮಾಡಲು ಬಳಸಿದ ತುಪ್ಪ ಮತ್ತು ಚಪಾತಿ ಹಿಟ್ಟಿನಿಂದ ಧೂಳಿನಿಂದ ಕೈಯಿಂದ ಸ್ಪರ್ಶಿಸಿದ ಮಸಾಲೆಗಳನ್ನು ತಪ್ಪಿಸಿ.

ಮೇಲಿನ ನಿಷೇಧಿತ ಆಹಾರಗಳನ್ನು ಹೊಂದಿರುವ ವಿಷ್ಣು-ಪ್ರಸಾದವನ್ನು ಸಹ ನೀವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಅಂತಹ ಪ್ರಸಾದವನ್ನು ಮರುದಿನ ಗೌರವಿಸಲು ಇಡಬಹುದು.

ಏಕಾದಶಿಯನ್ನು ಆಚರಿಸುವ ವಿವಿಧ ಹಂತಗಳು

ಈ ಕೆಳಗಿನಂತೆ ಏಕಾದಶಿಯನ್ನು ವಿವಿಧ ಹಂತಗಳಲ್ಲಿ ಆಚರಿಸಬಹುದು ಮತ್ತು ಒಬ್ಬರ ವಯಸ್ಸು, ಆರೋಗ್ಯ ಮತ್ತು ಒಬ್ಬರ ಜೀವನಶೈಲಿಗೆ ಸಂಬಂಧಿಸಿದ ಹಲವಾರು ಇತರ ಅಂಶಗಳನ್ನು ಅವಲಂಬಿಸಿ ನಿರ್ದಿಷ್ಟ ಮಟ್ಟದ ಉಪವಾಸವನ್ನು ಆಯ್ಕೆ ಮಾಡಬಹುದು.

1 ನಿರ್ಜಲ ಉಪವಾಸ - ನೀರಿಲ್ಲದೆ ಉಪವಾಸ ಮಾಡುವುದು.

2.ಸಜಲ-  ನೀವು ನಿರ್ಜಲ ಉಪವಾಸವನ್ನು ಆಚರಿಸಲು ಸಾಧ್ಯವಾಗದಿದ್ದರೆ, ನೀವು ಕೇವಲ ನೀರನ್ನು ತೆಗೆದುಕೊಳ್ಳಬಹುದು.

3 ಸಫಲ :- ನಿಮಗೆ ಸಜಲ ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ವಲ್ಪ ಹಣ್ಣು ಮತ್ತು ಹಾಲನ್ನು ಸಹ ತೆಗೆದುಕೊಳ್ಳಬಹುದು.

4. ಮುಂದಿನ ಆಯ್ಕೆಯು ನೀವು ಧಾನ್ಯೇತರ ಆಹಾರಗಳಾದ ತರಕಾರಿಗಳು (ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊರತುಪಡಿಸಿ), ಬೇರುಗಳು, ಬೀಜಗಳು ಇತ್ಯಾದಿಗಳನ್ನು ಕಡಲೆ ಬೀಜ ಅಂದರೆ ನೆಲಕಡಲೆ, ಗೆಣಸು, ಮರ ಗೆಣಸು, ಸಬಕ್ಕಿ( ಸಾಬುದಾನ) ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬೇಯಿಸಿ ಉಪವಾಸದ ಸಮಯದಲ್ಲಿ ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು.  (ಬೀನ್ಸ್ ಅವರೆಕಾಳು, ಹಲಸಂದೆ ಮುಂತಾದುವನ್ನು ತಿನ್ನಬಾರಾದು)

5. ಕೊನೆಯ ಆಯ್ಕೆಯು ಮೇಲಿನ ವಸ್ತುಗಳನ್ನು ನಿಯಮಿತ ದಿನದಂತೆ ಮೂರು ಬಾರಿ ತೆಗೆದುಕೊಳ್ಳುವುದು.

ಏಕಾದಶಿ ವ್ರತವನ್ನು ನಾವು ಹೇಗೆ ಆಚರಿಸುತ್ತೇವೆ?

ನಾವು  ಏಕಾದಶಿ ಸೂರ್ಯೋದಯದಿಂದ ದ್ವಾದಶಿ ಸೂರ್ಯೋದಯದವರೆಗೆ ಏಕಾದಶಿ ವ್ರತವನ್ನು ಆಚರಿಸುತ್ತೇವೆ.

ಏಕಾದಶಿ ಸಮಯದಲ್ಲಿ, ನಿಮ್ಮ ಸಮಯವನ್ನು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ -

ಹರೇ ಕೃಷ್ಣ ಮಹಾ-ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸುವುದು.

ಭಗವದ್ಗೀತೆ ಮತ್ತು ಶ್ರೀಮದ್-ಭಾಗವತದಂತಹ ಗ್ರಂಥಗಳನ್ನು ಓದುವುದು.

ವಿಷ್ಣು / ಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡುವುದು.

ಏಕಾದಶಿಯ ಉದ್ದೇಶ ಮತ್ತು ಪ್ರಯೋಜನಗಳು

ಏಕಾದಶಿಯಂತಹ ದಿನಗಳಲ್ಲಿ ಉಪವಾಸ ಮಾಡುವುದು ದೇಹದೊಳಗಿನ ಕೊಬ್ಬನ್ನು ಕಡಿಮೆ ಮಾಡಲು ಉದ್ದೇಶಿಸಿರುತ್ತದೆ, ಇಲ್ಲದಿದ್ದರೆ ಹೆಚ್ಚು ನಿದ್ರೆ, ನಿಷ್ಕ್ರಿಯತೆ ಮತ್ತು ಸೋಮಾರಿತನವನ್ನು ಉಂಟುಮಾಡುತ್ತದೆ.

ಏಕಾದಶಿಯಂದು, ಹೆಚ್ಚಿನ ಸಮಯವನ್ನು ಆಧ್ಯಾತ್ಮಿಕ ಚಟುವಟಿಕೆಗೆ ಬಳಸಿಕೊಳ್ಳಬಹುದು. ಈ ರೀತಿಯಾಗಿ, ಒಬ್ಬರು ಬಾಹ್ಯ ಮತ್ತು ಆಂತರಿಕ ಶುದ್ಧತೆಯನ್ನು ಸಾಧಿಸಬಹುದು.

ಏಕಾದಶಿಯ ಉಪವಾಸದ ನಿಜವಾದ ಉದ್ದೇಶವೆಂದರೆ ಭಗವಂತನ ಬಗ್ಗೆ ಒಬ್ಬರ ನಂಬಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುವುದು. ಏಕಾದಶಿಯ ಉಪವಾಸವನ್ನು ಆಚರಿಸುವ ಮೂಲಕ, ನಾವು ದೈಹಿಕ ಬೇಡಿಕೆಗಳನ್ನು ಕಡಿಮೆ ಮಾಡಬಹುದು ಮತ್ತು ಹರೇ ಕೃಷ್ಣ ಮಂತ್ರವನ್ನು ಪಠಿಸುವ ಮೂಲಕ ಅಥವಾ ಅದೇ ರೀತಿಯ ಸೇವೆಯನ್ನು ಮಾಡುವ ಮೂಲಕ ಭಗವಂತನ ಸೇವೆಯಲ್ಲಿ ನಮ್ಮ ಸಮಯವನ್ನು ತೊಡಗಿಸಿಕೊಳ್ಳಬಹುದು.

ಏಕಾದಶಿ ವ್ರತವನ್ನು ಪಾಲಿಸುವುದು ಸರ್ವೋತ್ತಮ ಭಗವಂತನನ್ಬು ಸಂತೋಷಪಡಿಸುತ್ತದೆ ಮತ್ತು ಅದನ್ನು ನಿಯಮಿತವಾಗಿ ಆಚರಿಸುವುದರಿಂದ ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿ ಸಾಧಿಸುತ್ತದೆ.

ಏಕಾದಶಿ ದಿನದಂದು ಉಪವಾಸವನ್ನು ಆಚರಿಸುವವನು ಪಾಪಕಾರ್ಯಗಳು ಮತ್ತು ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಂದ ಮುಕ್ತನಾಗುತ್ತಾನೆ ಮತ್ತು ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಎಂದು ಬ್ರಹ್ಮ-ವೈವರ್ತ ಪುರಾಣದಲ್ಲಿ ಹೇಳಲಾಗಿದೆ.

ಪದ್ಮ ಪುರಾಣವು ಒಬ್ಬನು ಏಕಾದಶಿಯನ್ನು ಅನುಸರಿಸಲೇಬೇಕು ಎಂದು ಹೇಳುತ್ತದೆ, ಏಕೆಂದರೆ ಒಬ್ಬರು ಗೊತ್ತಿಲ್ಲದೇ ಏಕಾದಶಿಯನ್ನು ಅನುಸರಿಸುತ್ತಿದ್ದರೂ, ಅವನ ಎಲ್ಲಾ ಪಾಪಗಳು ಪರಿಪೂರ್ಣವಾಗುತ್ತವೆ ಮತ್ತು ಅವನು ವೈಕುಂಠದ ವಾಸಸ್ಥಾನವಾದ ಸರ್ವೋಚ್ಚ ಗುರಿಯನ್ನು ಬಹಳ ಸುಲಭವಾಗಿ ಸಾಧಿಸುತ್ತಾನೆ‌ ಎಂದು ಹೇಳಿದೆ.

ಏಕಾದಶಿ ವೃತವನ್ನು ಮುರಿಯುವುದು :-
ಮರುದಿನ ದ್ವಾದಶಿಯಂದು ಸೂರ್ಯೋದಯದ ನಂತರ  ಏಕಾದಶಿ ಉಪವಾಸವನ್ನು ಮುರಿಯಬೇಕು.

ಅನ್ನ ಹಾಗೂ ದವಸ ಧಾನ್ಯಗಳನ್ನು ತೆಗೆದುಕೊಳ್ಳುವ (normal food) ಮೂಲಕ ಅದನ್ನು ಮುರಿಯಬೇಕು.

ಉಪವಾಸಕ್ಕೆ ವೈಜ್ಞಾನಿಕ ಕಾರಣ ಬಹಳಷ್ಟು ಇವೆ. ಮಾನವ ದೇಹದ ಮೇಲೆ ಉಪವಾಸದ ಜೈವಿಕ ಪರಿಣಾಮಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ.

ಏಕಾದಶಿ ದಿನದಂದು ಉಪವಾಸ ಮಾಡುವುದು ಯಾವುದೇ  ಪವಿತ್ರ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವುದಕ್ಕೆ ಸಮ. ಈ ಉಪವಾಸದ ಮಾಡುವುದು ಪ್ರಸಿದ್ಧ ಅಶ್ವಮೇಧ ಯಜ್ಞ ಕ್ಕೆ ಸಮವೆಂದು ಪರಿಗಣಿಸಲಾಗಿದೆ.

ಮಾನಸಿಕ ಶಾಂತಿ ಮತ್ತು ಸ್ಥಿರತೆಯನ್ನು ಬಯಸುವವರಿಗೆ ತಿಂಗಳಲ್ಲಿ 2 ಏಕಾದಶಿ ಆಚರಿಸುವುದು ಅವಶ್ಯವಾಗಿದೆ. ನಿಮ್ಮ ಎಲ್ಲಾ ಪಾಪಗಳನ್ನು ತೊಡೆದುಹಾಕಲು ಮತ್ತು ನಿಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ನೀವು ಬಯಸಿದರೆ, ಈ ಏಕಾದಶಿ ಉಪವಾಸ  ನೀವು ಮಾಡಬೇಕು.

ಏಕಾದಶಿ ಉಪವಾಸವು ನಿಮ್ಮ ಆತ್ಮವನ್ನು ಶುದ್ಧೀಕರಿಸುವುದಲ್ಲದೆ ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ದೇಹದ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ವಿಷ್ಣುವಿನ ಆರಾಧಕರಿಗೆ ಏಕಾದಶಿ ಉಪವಾಸದ ಬಗ್ಗೆ ತಿಳಿದಿದೆ. ಅಂತಿಮ ಮೋಕ್ಷ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಉನ್ನತಿ ಏಕಾದಶಿಯ ಪ್ರಯೋಜನಗಳಾಗಿವೆ.
******

2 comments:

  1. If dwadashi tithi starts at 6-05 AM on some day, then when is the Harivasara starts?

    ReplyDelete
  2. Sir, I have sent a mail to your email id.

    ReplyDelete