prepare kumkum easily at home
Tilak-(Kumkum) - Marked As Auspicious
Tilak is an ornamental or religious mark on the forehead, also called Tika. According to Hindu religious texts, applying Tilak or Tika is necessary at all religious ceremonies, without which no Hindu ceremony is complete. From birth till death tilak is a part of life. It is customary to apply tilak at the beginning of the religious ceremony.
Tilaka is a mark of auspiciousness. It is put on the forehead with sandal paste, sacred ashes or Kumkuma. The devotees of Lord Shiva apply sacred ashes Bhasma on the forehead, the devotees of Lord Vishnu apply sandal paste Chandana, and the worshippers of Devi or Shakti apply Kumkuma, a red turmeric powder.
The scriptures say:
“A forehead without a Tilaka,
a woman without a husband,
a Mantra the meaning of which is not known while doing Japa,
the head that does not bend before holy personages,
a heart without mercy,
a house without a well,
a village without a temple,
a country without a river,
a society without a leader,
wealth that is not given away in charity,
a preceptor without a disciple,
a country without justice,
a king without an able minister,
a woman not obedient to her husband,
a well without water,
a flower without smell,
a soul devoid of holiness,
a field without rains,
an intellect without clearness,
a disciple who does not consider his preceptor as a form of God,
a body devoid of health,
a custom (Achara) without purity,
austerity devoid of fellow-feeling,
speech in which truth is not the basis,
a country without good people,
work without wages,
Sanyasa without renunciation,
legs which have not performed pilgrimages,
a determination unaided by Viveka or discrimination,
a knife which is blunt,
a cow which does not give milk,
a spear without a point
—all these are worthy of condemnation. They exist for name’s sake only.”
From this you can imagine the importance of Tilaka or the sacred mark. Tilaka is applied at the Ajna Chakra, the space between the two eyebrows. It has a very cooling effect. Application of sandal paste has great medicinal value, apart from the spiritual influence. Application of sandal paste will nullify the heating effect when you concentrate and meditate at the Bhrumadhya. Tilaka indicates the point at which the spiritual eye opens. Lord Siva has a third eye at the Bhrumadhya. When He opens the third eye, the three worlds are destroyed. So also, when the third eve of the Jiva is opened, the three kinds of afflictions—Adhyatmika, Adhidaivika and Adhibhautika—are burnt to ashes. The three Karmas—Sanchita, Prarabdha and Agami—and also all the sins committed in the countless previous births, are burnt.
When you apply the Tilaka, you mentally imagine: “I am the one non-dual Brahman free from all duality. May my eye of intuition open soon.” You should remember this every time you apply a Tilaka.
The SkandaPurana explains with what fingers Tilaka must be applied for best results:
“When tilak is applied with the ring finger it brings peace, with the middle finger it prolongs age, with the thumb it promotes health and with the forefinger one attains salvation.”
There are various methods of applying Tilaka. Saivas apply three horizontal lines with the sacred ashes. The Vaishnavas apply three vertical lines (Tripundra) on the forehead. When they apply Tilaka, they say: “O Lord, protect me from the evil effects of the Trigunatmika Maya which has Sattva, Rajas and Tamas as its binding cords.” Some Vaishnavas apply only one vertical line. Only the method of application differs, but the significance is the same in both the Vaishnavas and the Shaivas.
******
*********
ಕುಂಕುಮವನ್ನು* ಯಾವಾಗ ಮತ್ತು ಹೇಗೆ ಹಚ್ಚಿಕೊಳ್ಳಬೇಕು ?
ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು : ಸ್ನಾನವಾದ ನಂತರ ಬಲಗೈಯ ಅನಾಮಿಕ ದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಕುಂಕುಮವು ಹಣೆಗೆ ಸರಿಯಾಗಿ ಹಿಡಿದುಕೊಳ್ಳಲು ಮೇಣವನ್ನು ಉಪಯೋಗಿಸಬೇಕು. ಹಣೆಗೆ ಮೊದಲು ಮೇಣವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ: ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗು ವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.
ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ : ----
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.
1.‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದುಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.
2. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.
3. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’
4. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ !
‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯುಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’
*******
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ. ಹಣೆಗೆ ಕುಂಕುಮ ಹಚ್ಚುವುದು, ಗಂಡಸರು ತಿಲಕ ಇಡುವುದು ಸಂಪ್ರದಾಯ ಮಾತ್ರವಲ್ಲ ಕೆಲವು ಲಾಭಗಳನ್ನು ಹೊಂದಿದೆ. ಅದೊಂದು ನಮ್ಮ ಪೂರ್ವಿಕರ ವಿಜ್ಞಾನವು ಕೂಡ.
1. ಹಣೆ ಮೇಲೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದು ನಮ್ಮ ಪೂರ್ವಿಕರ ವಿಜ್ಞಾನವು ಕೂಡ. ಕುಂಕುಮವನ್ನು ಹಚ್ಚಿಕೊಳ್ಳಲು ಹುಬ್ಬುಗಳ ನಡುವಿನ ಜಾಗವನ್ನು ಒತ್ತಿಕೊಳ್ಳುವುದರಿಂದ ದೇಹದಲ್ಲಿ ಉಂಟಾಗುವ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಪೂರ್ವಿಕರು ಕಂಡುಕೊಂಡಿದ್ದರು. ಈಗ ಇದನ್ನೇ ಮಸಾಜ್ ಪಾರ್ಲರ್ ಗಳಲ್ಲಿ ಮಾಡಲಾಗುತ್ತಿದೆ.
2. ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.
3. ನೆನಪಿರಲಿ ನಮ್ಮ ಪೂರ್ವಿಕರು ಯಾವುದೇ ಅಭ್ಯಾಸವನ್ನು ಅರ್ಥವಿರದೇ ರೂಢಿಸಿಕೊಂಡಿಲ್ಲ. ಅದರಲ್ಲೊಂದು ಸೈನ್ಸ್ ಇದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಬಹಳ ವಯಸ್ಸಾದರೂ ಮುಖ ಸುಕ್ಕು ಬಾರದಂತೆ ಕಾಪಾಡಿಕೊಂಡು, ಕಾಂತಿಯುತವಾಗಿ ಕಂಗೊಳಿಸುತ್ತಿದ್ದರು. ಉದಾಹರಣೆಗೆ ಮನೆಯ ಹಿರಿಯ ಅಜ್ಜಿಯರನ್ನು ನೋಡಿ ಈಗಲೂ ಅವರ ಮುಖ ಎಷ್ಟು ಕಾಂತಿಯುತವಾಗಿರುತ್ತದೆ ಎಂದು.
4. ಮೆದುಳಿನಲ್ಲಿರುವ ಲಿಂಫಾಟಿಕ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಅಮಿಗ್ದಲ ಅನ್ನುವ ಭಾಗಕ್ಕೆ ಈ ಅಭ್ಯಾಸದಿಂದ ಚೇತನ ಶಕ್ತಿ ಬರುತ್ತೆ. ಅದ್ದರಿಂದ ನರಮಂಡಲದಲ್ಲಿ ಆಗುವ ಒತ್ತಡದ ಏರುಪೇರುಗಳು ಕಡಿಮೆಯಾಗುತ್ತದೆ.
5. ಕುಂಕುಮವನ್ನು ಒಣಗಿದ ಅರಿಶಿನದಿಂದ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಕೆಂಪು ಬಣ್ಣ ನೀಡುವುದು ನಿಂಬೆ ಹಣ್ಣು. (ಸಿಟ್ರಿಕ್ ಆಸಿಡ್ ಹಳದಿ ಬಣ್ಣದ ಮೇಲೆ ಬಿದ್ದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ)
7. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
8. ಕುಂಕುಮ ಹಚ್ಚುವುದರಿಂದ ಗ್ರಹಿಕೆಯು ಕೂಡ ಹೆಚ್ಚಾಗುತ್ತದೆ.
9. ಹಣೆಗೆ ಕುಂಕುಮ ಇಡುವುದರಿಂದ ಮುಖದ ಸ್ನಾಯುಗಳಿಗೆ ರಕ್ತದ ಪೂರೈಕೆಯು ಹೆಚ್ಚುತ್ತದೆ, ಇದರಿಂದ ಮುಖದ ಕಾಂತಿಯು ಹೆಚ್ಚಿ ವ್ಯಕ್ತಿಯು ಸುಂದರವಾಗಿ ಕಾಣುತ್ತಾನೆ.
10. ಕುಂಕುಮ ಹಚ್ಚುವುದರಿಂದ ಫೇಶಿಯಲ್ ಮಸಲ್ಸ್ ಸ್ಟ್ರಾಂಗ್ ಆಗುತ್ತದೆ. ಹಾಗೂ ಬೇಗನೆ ವ್ರಿಂಕಲ್ (ಸುಕ್ಕು) ಉಂಟಾಗುವುದನ್ನು ತಡೆಯುತ್ತದೆ.
11. ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.
12. ಹಣೆಯ ಮೇಲೆ ಕುಂಕುಮ ಇಡುವುದರಿಂದ ಅನ್ಯ ಚಕ್ರವು ಸಕ್ರಿಯಗೊಳ್ಳುತ್ತದೆ, ನಮ್ಮ ಅಂತಃ ಪ್ರಜ್ಞೆಯು ಹೆಚ್ಚುತ್ತದೆ. ಇದರಿಂದ ಏಕಾಗ್ರತೆ ವೃದ್ದಿಸುತ್ತದೆ. ಮನಸ್ಸು ಕೂಡ ಶಾಂತಗೊಳ್ಳುತ್ತದೆ.
13. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ.
14. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಬಳಸಿ ಕುಂಕುಮ.
****
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
#ಶಾಸ್ತ್ರ :
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ.
ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.
ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.
ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.
#ಹಣೆಗೆಕುಂಕುಮಧಾರಣೆಮಾಡಿಕೊಳ್ಳುವಾಗ
ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ | ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.
ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್ ದೇವಿ ಗೌರಿಯಂತೆ ಎನ್ನುವುದುಂಟು!
ಮಹಿಳೆಯರು ಮಾತ್ರವಲ್ಲ, ಪುರುಷರೂ ವಿವಿಧ ರೀತಿಯಲ್ಲಿ ಕುಂಕುಮ ಧಾರಣೆ ಮಾಡುತ್ತಾರೆ.
ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು. ಉಂಗುರದ ಬೆರಳಿನಿಂದ ಭ್ರೂಮಧ್ಯೆ ಪುರುಷರೂ, ಸ್ತ್ರೀಯರೂ ಮಕ್ಕಳೂ ಕುಂಕುಮಧಾರಣೆ ಮಾಡುತ್ತಾರೆ.
ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್ ಮೇ ಸಿಂಧೂರ್ ಲಗಾನಾ' ಎನ್ನಲಾಗುತ್ತದೆ.
ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ.
ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯ.
ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ.
ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.
ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.
ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ.
ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಸ್ರಾವ (ಹಾರ್ಮೋನ್) ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
ಮಾತ್ರವಲ್ಲ ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಇತರ ನಿರ್ನಾಳ ಗ್ರಂಥಿಯಿಂದ ಹಾರ್ಮೋನ್‌ಗಳೂ ಕ್ರಮಬದ್ದವಾಗಿ ಸ್ರವಿಸಲು ಸಾಧ್ಯವಾಗುವಂತೆ ಮಾಡುತ್ತದೆ.
ಕುಂಕುಮವನ್ನು ಅರಸಿನ ಅಥವಾ ಕೇಸರಿಯಿಂದ ತಯಾರಿಸಲಾಗುತ್ತದೆ. ಅರಸಿನ ಪುಡಿಯೊಂದಿಗೆ ಸುಣ್ಣವನ್ನು ಸೇರಿಸಿದರೆ ಅದು ಅದ್ಭುತ ಕೆಂಪು ಬಣ್ಣದ ಕುಂಕುಮವಾಗಿ ಮಾರ್ಪಡುತ್ತದೆ.
ಹಾಂ! ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.
ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ.
ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ.
ಆದರೂ ನಾವು ಅನುಕೂಲಕ್ಕೆಂದೋ, ಫ್ಯಾಷನ್ ಎಂದೋ ಕುಂಕುಮದ ಬಿಂದಿ, ಸ್ಟಿಕರ್‌ಗಳನ್ನು , ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.
ಹಾಂ, ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ.
ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ.
ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು.
ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ. "ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ'.
ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ.
ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ.
ಶಕ್ತಿ ಮತ್ತು ಲಕ್ಷ್ಮೀದೇವಿಯರ ಪೂಜೆಯಲ್ಲಿ ಕುಂಕುಮಾರ್ಚನೆಗೆ ಹೆಚ್ಚು ಮಹತ್ವವಿದೆ. ಹಾಂ! ಕುಂಕುಮ ಔಷಧೀಯವೂ ಹೌದು ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆ ಮಾಯುತ್ತದೆ.
ಕುಂಕುಮದೊಂದಿಗೆ ಇತರ ಅಂಶಗಳನ್ನು ಹೊಂದಿರುವ ತೈಲವನ್ನು (ಕುಂಕುಮಾದಿ ತೈಲ)ನಿತ್ಯ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲ ಮೊಗದ ಚರ್ಮವೂ ಸ್ನಿಗ್ಧ ಮತ್ತು ಕೋಮಲವಾಗಿ ಹೊಳೆಯುತ್ತದೆ.
ಉತ್ತರ ಭಾರತದ ದೇವಾಲಯಗಳಲ್ಲಿ "ಟೀಕಾಲಗಾನ' ಎಂದು ಹೆಬ್ಬೆಟ್ಟಿನಿಂದ ದೇವರಿಗೆ ಅರ್ಚಿಸಿದ ಕುಂಕುಮದಿಂದ ಹಣೆಯ ಮೇಲೆ ತಿಲಕ ಲೇಪನ ಮಾಡುತ್ತಾರೆ.
ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
ನಿತ್ಯ ಕುಂಕುಮದ ತಿಲಕಧಾರಣೆ ಸೌಭಾಗ್ಯ, ದೇವದೇವತೆಗಳ ಆಶೀರ್ವಾದ ಉಂಟುಮಾಡುತ್ತದೆ. ದೀರ್ಘ ಜೀವನಕ್ಕೆ ಸಹಕಾರಿ.
ಯೌವ್ವನಕಾರಕವೂ ಹೌದು ಎನ್ನಲಾಗಿದೆ. ಅನಾಮಿಕಾ (ಉಂಗುರದ) ಬೆರಳಿನಿಂದ ಸರಿಯಾದ ರೀತಿಯಲ್ಲಿ ಧಾರಣೆ ಮಾಡಿದ ಕುಂಕುಮಾದಿಗಳ ತಿಲಕವು ಮೋಕ್ಷಕಾರಕವೆಂದು ಅದರ ಮಹತ್ವವನ್ನು ಶಾಸ್ತ್ರಗಳಲ್ಲಿ ಸಾರಲಾಗಿದೆ.
ಶಿಕ್ಷಪತ್ರಿ ಶ್ಲೋಕಗಳಲ್ಲಿ ಇವುಗಳನ್ನು ವಿವರಿಸಲಾಗಿದೆ. ಉಪನಿಷದ್, ಬ್ರಹ್ಮಾನಂದ ಪುರಾಣ, ಪದ್ಮ ಪುರಾಣಗಳಲ್ಲೂ ತಿಲಕದ ಉಲ್ಲೇಖವಿದೆ.
ಹೋಳಿ ಹಬ್ಬದ ಸಮಯದಲ್ಲೂ ಕುಂಕುಮದ ಜೊತೆಗೆ ವಿವಿಧ ರಂಗುಗಳನ್ನು ಎರಚಿ ಸಂತಸ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಹೀಗೆ ಕುಂಕುಮಧಾರಣೆಗೆ ವಿವಿಧ ಬಗೆಯ ಮಹತ್ವ, ಅರ್ಥಗಳಿವೆ.
ಸರ್ವರಿಗೂ ಶುಭವಾಗಲಿ ಸುಮಂಗಲಿಯರಿಗೆ
ಸುರಕ್ಷಾ ಕವಚ ಈ ಕುಂಕುಮ
ನಿಮ್ಮ ಸುರಕ್ಷೆ ನಿಮ್ಮ ಬೆರಳಿನಲ್ಲಿದೆ.
ಅನುಸರಿಸುವುದು ನಿಮಗೆ ಕಷ್ಟಕರ ಅನ್ನಿಸಬಹುದು
ಅದನ್ನು ರೂಢಿಸಿಕೊಂಡು ಬಂದಾಗ ಕಷ್ಟ ಅನ್ನೊದೆ ಇರೊದಿಲ್ಲ ಅಲ್ವ.
*******
#ಕುಂಕುಮಾರ್ಚನೆ
ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.
ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.
ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.
ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
********
ಶುದ್ಧ ಕುಂಕುಮ ತಯಾರಿಸುವ ವಿಧಾನ -
ತುಂಬಾ ಜನ ಅಕ್ಕ - ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ..
ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು : ಸ್ನಾನವಾದ ನಂತರ ಬಲಗೈಯ ಅನಾಮಿಕ ದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಕುಂಕುಮವು ಹಣೆಗೆ ಸರಿಯಾಗಿ ಹಿಡಿದುಕೊಳ್ಳಲು ಮೇಣವನ್ನು ಉಪಯೋಗಿಸಬೇಕು. ಹಣೆಗೆ ಮೊದಲು ಮೇಣವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ: ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗು ವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.
ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ : ----
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.
1.‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದುಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.
2. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.
3. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’
4. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ !
‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯುಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’
*******
#ಕುಂಕುಮ : ಹೆಣ್ಣಿಗೊಂದು ಸಂಭ್ರಮ!
ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. #‘ಸಿಂಧೂರಮ್ ಸೌಂದರ್ಯ ಸಾಧನಂ’ ಎಂಬ ಉಕ್ತಿಯಾಂದಿದೆ.# ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.
ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.
ಆಶ್ವಯುಜ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳು ದಸರಾ ಹಬ್ಬ. ಆಗಿನ ದಿನಗಳಲ್ಲಿ ಬೆಳಗ್ಗೆ ಪೂಜೆ ಮಾಡುವಾಗ #ಲಲಿತಾ ಪರಮೇಶ್ವರಿ ಮೂರ್ತಿಗೆ ಅಥವಾ ಭಾವಚಿತ್ರಕ್ಕೆ ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ ಮಾಡಿದರೆ ಒಳ್ಳೆಯದು ಆಗುವುದು ಎಂಬ ಪ್ರತೀತಿ ಇದೆ.# ಆಗ ಮನೆಗಳಲ್ಲಿ (ಹೆಚ್ಚಿನದಾಗಿ ದಕ್ಷಿಣ ಕರ್ನಾಟಕದಲ್ಲಿ) ಗೊಂಬೆಗಳನ್ನು ಕೂರಿಸಿ ಅವುಗಳೊಡನೆ ಮುಖ್ಯವಾಗಿ ರಾಜ ರಾಣಿ ಗೊಂಬೆಗಳನ್ನಿಟ್ಟು ಜೊತೆಗೆ ಕಲಶವನ್ನಿಟ್ಟು ಪೂಜಿಸುವರು. ಅಲ್ಲೇ ಲಲಿತಾಮಾತೆ ಅಥವಾ ದೇವಿಗೆ ಕುಂಕುಮಾರ್ಚನೆ ಮಾಡುವರು.
ಪತ್ರಗಳನ್ನು ಬರೆಯುವಾಗ #ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ। ಸೌ। ಹ। ಕುಂ। ಶೋ ಎಂದು ಬರೆಯುತ್ತಾರೆ.# ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಮ್ದೂ ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.
ಈ ಕುಂಕುಮ ಅನ್ನುವುದು ಏನು?
# ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.
ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕ ಇರುವ ತಲೆಯ ಮುಂಭಾಗ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು. ತುಂಬಾ ಯೋಚಿಸುವವರು ತಲೆ ಬಿಸಿ ಆಗಿದೆ ಎನ್ನುವರು.
#ಕೆಲವರು ಭ್ರೂಮಧ್ಯ ಭಾಗದಲ್ಲಿ ಇಟ್ಟುಕೊಳ್ಳುವರು. ಏಕಾಗ್ರತೆಗೆ ಇದು ತುಂಬಾ ಸಹಾಯಕಾರಿ. ಇನ್ನೂ ಒಂದು ವಿಷಯವೆಂದರೆ, ಯೋಗಿಗಳು ಧ್ಯಾನದ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿ ಸುಪ್ತವಾದ ಕುಂಡಲಿನೀ ಶಕ್ತಿಯ ಪ್ರಚೋದನೆ ಮಾಡುವರು. ಆ ಶಕ್ತಿ ಮೇಲೆ ಮಿದುಳಿಗೆ ಏರುವುದು. ಆಗ ಭ್ರೂ ಮಧ್ಯ ಭಾಗದಿಂದ ಹೊರ ಹೋಗುವ ಸಾಧ್ಯತೆಗಳಿರುವುದು. ಅದನ್ನು ತಡೆಯಲು ಆ ಭಾಗದಲ್ಲಿರುವ ಚಕ್ರವನ್ನು ಪ್ರಚೋದಿಸುವರು. ಇದನ್ನು ಪ್ರಚೋದಿಸಲನ್ವಯ ಉಂಗುರದ ಬೆರಳಿನಿಂದ ಕುಂಕುಮವನ್ನು ಆ ಭಾಗದಲ್ಲಿ ಇಡುವರು. ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.
ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ. ನಮ್ಮ ಪೂರ್ವಜರು ಕುಂಕುಮವಿಡಲು ಹೇಳಲು ಇದೂ ಒಂದು ಕಾರಣ.
ಹಿಂದೂ ಹೆಂಗಸಿನ ಜೀವನದಲ್ಲಿ ಅರಿಶಿನ ಕುಂಕುಮದ ಮಹತ್ವ ಪತಿ ಜೀವತ್ಯಾಗದ ನಂತರ ಇದನ್ನು ಯಾಕೆ ಧರಿಸಬಾರದು ಎಂಬ ಪ್ರಶ್ನೆ ಹುಟ್ಟುವುದು. ಕುಂಕುಮ ಪತಿಯ ಇರುವಿಕೆಯನ್ನು ಸೂಚಿಸುವ ಒಂದು ದ್ಯೋತಕವಷ್ಟೇ ಅಲ್ಲ. ಅದಕ್ಕೆ ಇನ್ನೂ ವಿಶೇಷ ಮಹತ್ವವಿದೆ.
ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು. ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ. ರಾಮಾಯಣದ ಕಥೆಯಲ್ಲಿ ಹೇಳಿರುವಂತೆ, ಸೀತಾದೇವಿ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿರುವಾಗ ಆಂಜನೇಯ ರಾಮನ ಮುದ್ರಿಕೆಯನ್ನು ತೆಗೆದುಕೊಂಡು ಹೋದ. ಅಲ್ಲಿ ಸೀತೆ ಯಾರೆಂದು ಗುರುತಿಸಲಾಗಲಿಲ್ಲ. ಆದರೆ ಅವನಿಗೆ ದಿವ್ಯ ದೃಷ್ಟಿ ಇದ್ದದ್ದರಿಂದ ಸೀತೆಯ ತಾಳಿ ಗೋಚರವಾಯಿತು. ಈಗ ಕಣ್ಣಿದ್ದೇ ನಮಗೆ ಕಾಣಿಸುವುದಿಲ್ಲ, ಇನ್ನು ದಿವ್ಯದೃಷ್ಟಿ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಸೂಚ್ಯವಾಗಿ ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯ. ಆದರೂ ಆಗೋದು ಆಗೇ ಆಗತ್ತೆ, ತಡೆಯಲಾಗತ್ಯೇ?
ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ. ಇದರ ಬಣ್ಣ ಹಲವಾರು. ಈಗೀಗಂತೂ ಬಿಂದಿಗಳು ಬಂದು ತರಹಾವರಿ ಚಿತ್ರ ವಿಚಿತ್ರವಾದ ಕುಂಕುಮಗಳನ್ನು ನೋಡಬಹುದು. ಆದರೆ ಇಂದಿನ ಹೆಣ್ಣುಮಕ್ಕಳಲ್ಲಿ ಇದನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಅಲ್ಲದೇ ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ. ಹಾಗೂ ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.
ವಿದೇಶೀಯರು ಇದನ್ನು ನೋಡಿ ಅಯ್ಯೋ ಇದೇನು ನಿನ್ನ ಹಣೆಯಲ್ಲಿ ರಕ್ತ ಎಂದು ಕೇಳಿದ ಸಂದರ್ಭವೂ ಇದೆ. ಈಗೀಗ ಅವರುಗಳೂ ಇದೊಂದು ಫ್ಯಾಷನ್ ಎಂದು ಉಪಯೋಗಿಸುತ್ತಿದ್ದಾರೆ. #ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆಯಾಂದಿಗೆ ಕುಂಕುಮವನ್ನು ಹಚ್ಚುವರು. ಇದನ್ನು ಅವರು ಸಿಂಧೂರ ಎನ್ನುವರು.#
ಮೊದಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಕುಂಕುಮ ಬಿದ್ದು ಹೋಗುತ್ತಿರಲಿಲ್ಲ ಅಥವಾ ಅಳಿಸಿ ಹೋಗುತ್ತಿರಲಿಲ್ಲ. ಈಗೀಗ ಕುಂಕುಮವಿಡುವುದ ಕಡಿಮೆಯಾಗಿ ಬಿಂದಿ ಸಂಸ್ಕೃತಿ ಬಂದಿದೆ. ಹಾಗೇ ಹಿಂದೂಗಳಲ್ಲಿ ಇದೂ ಮಾಯವಾಗುತ್ತಿದೆ, ಆದರೆ ಕಿರಿಸ್ತಾನೀಯರಲ್ಲಿ ಮತ್ತು ಮುಸ್ಲಿಮರಲ್ಲಿ ಇದನ್ನು ಉಪಯೋಗಿಸುತ್ತಿರುವರು. ಕಿರಿಸ್ತಾನೀಯರಿಗೆ ವ್ಯಾಟಿಕನ್ ನಿಂದ ಬಂದಿರುವ ಆದೇಶ - ನೀವು ಎಲ್ಲಿರುವಿರೋ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರಲ್ಲಿ ಒಂದಾಗಿ. ಆದ್ದರಿಂದ ಭಾರತೀಯರ ಸಂಸ್ಕೃತಿಯಾದ ಕುಂಕುಮ ಇಡು ವುದು
*********
1. ಹಣೆ ಮೇಲೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದು ನಮ್ಮ ಪೂರ್ವಿಕರ ವಿಜ್ಞಾನವು ಕೂಡ. ಕುಂಕುಮವನ್ನು ಹಚ್ಚಿಕೊಳ್ಳಲು ಹುಬ್ಬುಗಳ ನಡುವಿನ ಜಾಗವನ್ನು ಒತ್ತಿಕೊಳ್ಳುವುದರಿಂದ ದೇಹದಲ್ಲಿ ಉಂಟಾಗುವ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಪೂರ್ವಿಕರು ಕಂಡುಕೊಂಡಿದ್ದರು. ಈಗ ಇದನ್ನೇ ಮಸಾಜ್ ಪಾರ್ಲರ್ ಗಳಲ್ಲಿ ಮಾಡಲಾಗುತ್ತಿದೆ.
2. ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.
3. ನೆನಪಿರಲಿ ನಮ್ಮ ಪೂರ್ವಿಕರು ಯಾವುದೇ ಅಭ್ಯಾಸವನ್ನು ಅರ್ಥವಿರದೇ ರೂಢಿಸಿಕೊಂಡಿಲ್ಲ. ಅದರಲ್ಲೊಂದು ಸೈನ್ಸ್ ಇದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಬಹಳ ವಯಸ್ಸಾದರೂ ಮುಖ ಸುಕ್ಕು ಬಾರದಂತೆ ಕಾಪಾಡಿಕೊಂಡು, ಕಾಂತಿಯುತವಾಗಿ ಕಂಗೊಳಿಸುತ್ತಿದ್ದರು. ಉದಾಹರಣೆಗೆ ಮನೆಯ ಹಿರಿಯ ಅಜ್ಜಿಯರನ್ನು ನೋಡಿ ಈಗಲೂ ಅವರ ಮುಖ ಎಷ್ಟು ಕಾಂತಿಯುತವಾಗಿರುತ್ತದೆ ಎಂದು.
4. ಮೆದುಳಿನಲ್ಲಿರುವ ಲಿಂಫಾಟಿಕ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಅಮಿಗ್ದಲ ಅನ್ನುವ ಭಾಗಕ್ಕೆ ಈ ಅಭ್ಯಾಸದಿಂದ ಚೇತನ ಶಕ್ತಿ ಬರುತ್ತೆ. ಅದ್ದರಿಂದ ನರಮಂಡಲದಲ್ಲಿ ಆಗುವ ಒತ್ತಡದ ಏರುಪೇರುಗಳು ಕಡಿಮೆಯಾಗುತ್ತದೆ.
5. ಕುಂಕುಮವನ್ನು ಒಣಗಿದ ಅರಿಶಿನದಿಂದ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಕೆಂಪು ಬಣ್ಣ ನೀಡುವುದು ನಿಂಬೆ ಹಣ್ಣು. (ಸಿಟ್ರಿಕ್ ಆಸಿಡ್ ಹಳದಿ ಬಣ್ಣದ ಮೇಲೆ ಬಿದ್ದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ)
7. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
8. ಕುಂಕುಮ ಹಚ್ಚುವುದರಿಂದ ಗ್ರಹಿಕೆಯು ಕೂಡ ಹೆಚ್ಚಾಗುತ್ತದೆ.
9. ಹಣೆಗೆ ಕುಂಕುಮ ಇಡುವುದರಿಂದ ಮುಖದ ಸ್ನಾಯುಗಳಿಗೆ ರಕ್ತದ ಪೂರೈಕೆಯು ಹೆಚ್ಚುತ್ತದೆ, ಇದರಿಂದ ಮುಖದ ಕಾಂತಿಯು ಹೆಚ್ಚಿ ವ್ಯಕ್ತಿಯು ಸುಂದರವಾಗಿ ಕಾಣುತ್ತಾನೆ.
10. ಕುಂಕುಮ ಹಚ್ಚುವುದರಿಂದ ಫೇಶಿಯಲ್ ಮಸಲ್ಸ್ ಸ್ಟ್ರಾಂಗ್ ಆಗುತ್ತದೆ. ಹಾಗೂ ಬೇಗನೆ ವ್ರಿಂಕಲ್ (ಸುಕ್ಕು) ಉಂಟಾಗುವುದನ್ನು ತಡೆಯುತ್ತದೆ.
11. ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.
12. ಹಣೆಯ ಮೇಲೆ ಕುಂಕುಮ ಇಡುವುದರಿಂದ ಅನ್ಯ ಚಕ್ರವು ಸಕ್ರಿಯಗೊಳ್ಳುತ್ತದೆ, ನಮ್ಮ ಅಂತಃ ಪ್ರಜ್ಞೆಯು ಹೆಚ್ಚುತ್ತದೆ. ಇದರಿಂದ ಏಕಾಗ್ರತೆ ವೃದ್ದಿಸುತ್ತದೆ. ಮನಸ್ಸು ಕೂಡ ಶಾಂತಗೊಳ್ಳುತ್ತದೆ.
13. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ.
14. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಬಳಸಿ ಕುಂಕುಮ.
****
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
#ಶಾಸ್ತ್ರ :
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ.
ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.
ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.
ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.
#ಹಣೆಗೆಕುಂಕುಮಧಾರಣೆಮಾಡಿಕೊಳ್ಳುವಾಗ
ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ | ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.
ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್ ದೇವಿ ಗೌರಿಯಂತೆ ಎನ್ನುವುದುಂಟು!
ಮಹಿಳೆಯರು ಮಾತ್ರವಲ್ಲ, ಪುರುಷರೂ ವಿವಿಧ ರೀತಿಯಲ್ಲಿ ಕುಂಕುಮ ಧಾರಣೆ ಮಾಡುತ್ತಾರೆ.
ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು. ಉಂಗುರದ ಬೆರಳಿನಿಂದ ಭ್ರೂಮಧ್ಯೆ ಪುರುಷರೂ, ಸ್ತ್ರೀಯರೂ ಮಕ್ಕಳೂ ಕುಂಕುಮಧಾರಣೆ ಮಾಡುತ್ತಾರೆ.
ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್ ಮೇ ಸಿಂಧೂರ್ ಲಗಾನಾ' ಎನ್ನಲಾಗುತ್ತದೆ.
ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ.
ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯ.
ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ.
ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.
ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.
ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ.
ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಸ್ರಾವ (ಹಾರ್ಮೋನ್) ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
ಮಾತ್ರವಲ್ಲ ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಇತರ ನಿರ್ನಾಳ ಗ್ರಂಥಿಯಿಂದ ಹಾರ್ಮೋನ್‌ಗಳೂ ಕ್ರಮಬದ್ದವಾಗಿ ಸ್ರವಿಸಲು ಸಾಧ್ಯವಾಗುವಂತೆ ಮಾಡುತ್ತದೆ.
ಕುಂಕುಮವನ್ನು ಅರಸಿನ ಅಥವಾ ಕೇಸರಿಯಿಂದ ತಯಾರಿಸಲಾಗುತ್ತದೆ. ಅರಸಿನ ಪುಡಿಯೊಂದಿಗೆ ಸುಣ್ಣವನ್ನು ಸೇರಿಸಿದರೆ ಅದು ಅದ್ಭುತ ಕೆಂಪು ಬಣ್ಣದ ಕುಂಕುಮವಾಗಿ ಮಾರ್ಪಡುತ್ತದೆ.
ಹಾಂ! ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.
ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ.
ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ.
ಆದರೂ ನಾವು ಅನುಕೂಲಕ್ಕೆಂದೋ, ಫ್ಯಾಷನ್ ಎಂದೋ ಕುಂಕುಮದ ಬಿಂದಿ, ಸ್ಟಿಕರ್‌ಗಳನ್ನು , ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.
ಹಾಂ, ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ.
ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ.
ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು.
ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ. "ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ'.
ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ.
ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ.
ಶಕ್ತಿ ಮತ್ತು ಲಕ್ಷ್ಮೀದೇವಿಯರ ಪೂಜೆಯಲ್ಲಿ ಕುಂಕುಮಾರ್ಚನೆಗೆ ಹೆಚ್ಚು ಮಹತ್ವವಿದೆ. ಹಾಂ! ಕುಂಕುಮ ಔಷಧೀಯವೂ ಹೌದು ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆ ಮಾಯುತ್ತದೆ.
ಕುಂಕುಮದೊಂದಿಗೆ ಇತರ ಅಂಶಗಳನ್ನು ಹೊಂದಿರುವ ತೈಲವನ್ನು (ಕುಂಕುಮಾದಿ ತೈಲ)ನಿತ್ಯ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲ ಮೊಗದ ಚರ್ಮವೂ ಸ್ನಿಗ್ಧ ಮತ್ತು ಕೋಮಲವಾಗಿ ಹೊಳೆಯುತ್ತದೆ.
ಉತ್ತರ ಭಾರತದ ದೇವಾಲಯಗಳಲ್ಲಿ "ಟೀಕಾಲಗಾನ' ಎಂದು ಹೆಬ್ಬೆಟ್ಟಿನಿಂದ ದೇವರಿಗೆ ಅರ್ಚಿಸಿದ ಕುಂಕುಮದಿಂದ ಹಣೆಯ ಮೇಲೆ ತಿಲಕ ಲೇಪನ ಮಾಡುತ್ತಾರೆ.
ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
ನಿತ್ಯ ಕುಂಕುಮದ ತಿಲಕಧಾರಣೆ ಸೌಭಾಗ್ಯ, ದೇವದೇವತೆಗಳ ಆಶೀರ್ವಾದ ಉಂಟುಮಾಡುತ್ತದೆ. ದೀರ್ಘ ಜೀವನಕ್ಕೆ ಸಹಕಾರಿ.
ಯೌವ್ವನಕಾರಕವೂ ಹೌದು ಎನ್ನಲಾಗಿದೆ. ಅನಾಮಿಕಾ (ಉಂಗುರದ) ಬೆರಳಿನಿಂದ ಸರಿಯಾದ ರೀತಿಯಲ್ಲಿ ಧಾರಣೆ ಮಾಡಿದ ಕುಂಕುಮಾದಿಗಳ ತಿಲಕವು ಮೋಕ್ಷಕಾರಕವೆಂದು ಅದರ ಮಹತ್ವವನ್ನು ಶಾಸ್ತ್ರಗಳಲ್ಲಿ ಸಾರಲಾಗಿದೆ.
ಶಿಕ್ಷಪತ್ರಿ ಶ್ಲೋಕಗಳಲ್ಲಿ ಇವುಗಳನ್ನು ವಿವರಿಸಲಾಗಿದೆ. ಉಪನಿಷದ್, ಬ್ರಹ್ಮಾನಂದ ಪುರಾಣ, ಪದ್ಮ ಪುರಾಣಗಳಲ್ಲೂ ತಿಲಕದ ಉಲ್ಲೇಖವಿದೆ.
ಹೋಳಿ ಹಬ್ಬದ ಸಮಯದಲ್ಲೂ ಕುಂಕುಮದ ಜೊತೆಗೆ ವಿವಿಧ ರಂಗುಗಳನ್ನು ಎರಚಿ ಸಂತಸ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಹೀಗೆ ಕುಂಕುಮಧಾರಣೆಗೆ ವಿವಿಧ ಬಗೆಯ ಮಹತ್ವ, ಅರ್ಥಗಳಿವೆ.
ಸರ್ವರಿಗೂ ಶುಭವಾಗಲಿ ಸುಮಂಗಲಿಯರಿಗೆ
ಸುರಕ್ಷಾ ಕವಚ ಈ ಕುಂಕುಮ
ನಿಮ್ಮ ಸುರಕ್ಷೆ ನಿಮ್ಮ ಬೆರಳಿನಲ್ಲಿದೆ.
ಅನುಸರಿಸುವುದು ನಿಮಗೆ ಕಷ್ಟಕರ ಅನ್ನಿಸಬಹುದು
ಅದನ್ನು ರೂಢಿಸಿಕೊಂಡು ಬಂದಾಗ ಕಷ್ಟ ಅನ್ನೊದೆ ಇರೊದಿಲ್ಲ ಅಲ್ವ.
*******
#ಕುಂಕುಮಾರ್ಚನೆ
ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.
ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.
ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.
ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
********
ಶುದ್ಧ ಕುಂಕುಮ ತಯಾರಿಸುವ ವಿಧಾನ -
ಬೇಕಾಗುವ ಸಾಮಗ್ರಿಗಳು:
ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ
ಬಿಳಿಗಾರ * 150ಗ್ರಾಂ
ಸ್ಪಟಿಕ* ಹತ್ತುಗ್ರಾಂ
ನಿಂಬೆಹುಳಿಯ ರಸ 750 ಮಿಲಿಲೀಟರು {ಮುಕ್ಕಾಲು ಲೀ, ಬೀಜ ತೆಗೆದು ಸೋಸಿದ್ದು}
ಊರ ದನದ ತುಪ್ಪ100ಗ್ರಾಂ
ಒಂದು ಪ್ಲಾಸ್ಟಿಕ್ ಶೀಟ್ { ಚಾಪೆಯೂ ಆಗಬಹುದು}
ಇಷ್ಟು ಸಾಮಾನುಗಳನ್ನು ತುಂಬಬಹುದಾದ ಒಂದು ಪಾತ್ರೆ. {ಪಿಂಗಾಣಿಯದ್ದೋ, ಮಣ್ಣಿನದ್ದೋ ಆದರೆ ಒಳ್ಳೆದು.ಅದು ಸಿಕ್ಕದೆ ಇದ್ದರೆ ಸ್ಟೀಲ್ ಪಾತ್ರೆ. ಅಗಲ ಬಾಯಿದಾದರೆ ಪಾಕವನ್ನು ಗೋಟಾಯಿಸಲು ಸುಲಭ.}
ಕುಂಕುಮ ತಯಾರಿಕೆಯ ವಿಧಾನ
ಶುದ್ಧವಾದ ಅರಿಶಿನ ಕೋಡನ್ನು ತೊಳೆದು ಸಣ್ಣ-ಸಣ್ಣ ತುಂಡುಮಾಡಿಗೊಳ್ಳಬೇಕು. ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನುಣ್ಣಗೆ ಪುಡಿ ಮಾಡಿಕೊಂಡು, ನಿಂಬೆಹುಳಿಯ ರಸದಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳನ್ನ ಹಾಕಿ ಸರಿಯಾಗಿ ಮಿಶ್ರಮಾಡಬೇಕು.
ಈ ಮಿಶ್ರಣವನ್ನು, ಪಾತ್ರೆಯಲ್ಲಿ ಎರಡು ದಿನ {ಅರಿಶಿನ ತುಂಡು ನಿಂಬೆಹುಳಿ ರಸ ಹೀರುವುದಕ್ಕೆ ಇಡಬೇಕು. ದಿನಕ್ಕೆ ಏಳೆಂಟು ಸರ್ತಿ ಅದನ್ನು ಸೌಟುಹಾಕಿ ಗೋಟಾಯಿಸಬೇಕು.)
ಎರಡು ದಿನ ಬಿಟ್ಟು ಪ್ಲಾಸ್ಟಿಕ್ ಶೀಟಿನಲ್ಲಿ ಹರವಿ ಮನೆ ಒಳಗೆ ಒಣಗಿಸಬೇಕು. ಇದು ಸಾದಾರಣ ಹದಿನೈದು ದಿನ ಒಣಗಿದ ಮೇಲೆ ನುಣ್ಣಗೆ ಪುಡಿ ಮಾಡಿ, ಜರಡಿಯಾಡಿಸಬೇಕು. ಕೊನೆಗೆ ತುಪ್ಪ ಹಾಕಿ ಚೆನ್ನಾಗಿ ಕೈಯಲ್ಲಿ ತಿಕ್ಕಿ,ತಿಕ್ಕಿ ಹದ ಮಾಡಬೇಕು. ಇದೀಗ ಶುದ್ಧ ಕುಂಕುಮ ರೆಡಿ.
ಇದು ಸರಿಯಾದ ಕುಂಕುಮ. ಒಳ್ಳೆ ಬಣ್ಣ ಹೊಂದಿದ್ದು, ತುಂಬಾ ಸಮಯಕ್ಕೆ ಬಾಳಿಕೆ ಬರುತ್ತದೆ. ಮಾತ್ರ ಅಲ್ಲ, ಮನುಷ್ಯನ ಭ್ರೂಮಧ್ಯಕ್ಕೆ ಹಾಕಿದರೆ ಆರೋಗ್ಯದಾಯಕ. ಶೀತ ಆದ ಪುಟ್ಟ ಮಕ್ಕಳಿಗೂ ನೆತ್ತಿಗೆ ಹಾಕಿ ತಿಕ್ಕಿದರೆ ಒಂದೇ ದಿನದಲ್ಲಿ ಮೂಗಿನಲ್ಲಿ ಹರಿವ ಸಿಂಬಳವೂ ನಿಲ್ಲುತ್ತದೆ.
* ಸ್ಪಟಿಕ ಹಾಗೂ ಬಿಳಿಗಾರ (ಬಿಳಿಯಾಗಿ ಇಂಗಿನ ಗಟ್ಟಿಯಂತಿದೆ). ಇವುಗಳು ಆಯುರ್ವೇದ ಔಷಧಿ ಮಾರುವ ಅಂಗಡಿಯಲ್ಲಿ ಸಿಗುತ್ತದೆ. ಬಿಳಿಗಾರ (ಬೋರಾಕ್ಸ್) – ಪಟಿಕ (ಆಲಮ್) ಎಂದರೆ ದ್ವಿಲವಣಗಳ ಒಂದು ನಿರ್ದಿಷ್ಟ ಗುಂಪು.
***
1. ನಮ್ಮ ಹಣೆಯ ಮೇಲೆ ಕುಂಕುಮ ಇದೆ. ಅಲ್ಲಿ ಲಕ್ಷ್ಮೀ ನಾರಾಯಣರ ಸನ್ನಿಧಾನ ಬಂತು.
2. ಕೆನ್ನೆಗೆ ಅರಿಶಿಣದ ಲೇಪನ ಇದೆ ಅಲ್ಲಿ ಹಳದಿ ಹರಿದ್ರಾ ದೇವಿ ಮುಖಕಾಮಿನಿ ಸೌಭಾಗ್ಯದ ಪ್ರತೀಕ ಅಲ್ಲಿ ಪಾರ್ವತಿಯ ಸನ್ನಿಧಾನ ಬಂತು.
3. ಕಣ್ಣಿಗೆ ಕಾಡಿಗೆ ಇದೆ ಅಲ್ಲಿ ಭಾರತೀ ದೇವಿಯ ಸನ್ನಿಧಾನ.
4. ಮುಡಿದಿರುವ ಹೂವಿನಲ್ಲಿ ಉಮಾಮಹೇಶ್ವರ ಸನ್ನಿಧಾನ.
5. ಭಾರತೀಯರ ಪ್ರತೀಕವಾದ ಸೀರೆ ಇದೆ, ಸೆರಗಿನಲ್ಲಿ ಸೀತಾ ದೇವಿ ಸನ್ನಿಧಾನ.
6. ನೆರಗೆಯಲ್ಲಿ ತಾರಾದೇವಿಯ ಸನ್ನಿಧಾನ.
7. ಸೀರೆಯ ಅಂಚಿನಲ್ಲಿ ದ್ರೌಪದಿಯ ಸನ್ನಿಧಾನ.
8. ಕುಪ್ಪಸದಲ್ಲಿ ಅಹಲ್ಯೆಯ ಸನ್ನಿಧಾನ.
9. ಕುಪ್ಪಸದ ಅಂಚಿನಲ್ಲಿ ಮಂಡೋದರಿ ವಾಸ.
10. ಕೊರಳಲ್ಲಿ ಮುತ್ತೈದೆ ಪ್ರತೀಕ ಮಾಂಗಲ್ಯ , ಮೂಗಿನಲ್ಲಿ ಮೂಗುತಿ ಕಿವಿಯಲ್ಲಿ ಓಲೆ, ಕಾಲ್ಬೆರಳುಗಳಲ್ಲಿ ಕಾಲುಂಗುರಗಳು, ಕೈಗಳಲ್ಲಿ ಗಾಜಿನ ಬಳೆಗಳು.... ಇವು ಐದು ಮುತ್ತುಗಳು.. ಇವುಗಳೇ ಮುತ್ತೈದೆ ಭಾಗ್ಯ..
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಹೆಣ್ಣು ಸುಂದರಿನೆ, ಆದರೆ ಆ ಸೌಂದರ್ಯವನ್ನು ಕೆಡಿಸಿಕೊಂಡು ಓಡಾಡುತ್ತಿದ್ದಾರೆ. ಬಹುಶಃ ಬಹಳ ಜನರಿಗೆ ಹರಿದ ಪ್ಯಾಂಟ್ ನಲ್ಲಿ ಕೆದರಿದ ಕುದಲಿನಲಿ ಸುಂದರ ಕಾಣುತ್ತೇವೆ ಎನ್ನುವ ಭ್ರಮೆ. ಒಂದು ಸಲ ನೀವು ಹಣೆತುಂಬ ಕುಂಕುಮ ತಲೆಯಲ್ಲಿ ಮಾಲೆ ಮುಡಿದು ನೋಡಿ ಸೌಂದರ್ಯ ಎಲ್ಲಿದೆ ಅಂತ ಹೇಳುತ್ತದೆ.....
ಸೌಂದರ್ಯ ಇರುವುದು ನಮ್ಮ ಮುಖದಲ್ಲಿ ಅಲ್ಲ, ಅಚ್ಚುಕಟ್ಟಾಗಿ ಪಾಲಿಸಿದ ನಮ್ಮ ಸಂಪ್ರದಾಯದಲ್ಲಿ. ನಾವು ಪಾಲಿಸುವ ಸಂಸ್ಕಾರ ನಾಲ್ಕು ಜನ ನಮಗೆ ಕೈಯೆತ್ತಿ ನಮಸ್ಕರಿಸುವಂತೆ ಮಾಡುತ್ತದೆ. ಇದು ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ..
***
ಕುಂಕುಮದಿಂದ ಏನೆಲ್ಲಾ ಸಮಸ್ಯೆ ನಿವಾರಿಸಬಹುದು ಗೊತ್ತಾ ?
🌹 ಹಿಂದೂ ದೇವರ ಪೂಜೆಯಲ್ಲಿ ಕುಂಕುಮವಿಲ್ಲದಿದ್ದರೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಕುಂಕುಮವು ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೇ ನಿಮ್ಮ ಯಶಸ್ಸಿಗೂ ಕಾರಣವಾಗುತ್ತವೆ. ಹಿಂದೂ ಧರ್ಮದಲ್ಲಿ ಸಿಂಧೂರಕ್ಕೆ ವಿಶೇಷ ಸ್ಥಾನಮಾನವಿದೆ. ಇದು ವಿವಾಹಿತ ಸ್ತ್ರೀಯರಿಗೆ ಮುತ್ತೈದೆತನದ ಸಂಕೇತವಾಗಿ ಹಾಗೂ ಹನುಮಂತನಿಗೆ ಅಲಂಕಾರವಾಗಿ ಸಿಂಧೂರ ಅಂದರೆ ಕುಂಕುಮ ವಿಶೇಷ ಸ್ಥಾನ ಪಡೆದಿದೆ. ನಮ್ಮ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲೂ ಕುಂಕುಮವನ್ನು ಬಳಸಲಾಗುತ್ತದೆ. ಕುಂಕುಮವು ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೇ ನಿಮ್ಮ ಯಶಸ್ಸಿಗೂ ಕಾರಣವಾಗುತ್ತವೆ.
ತೊಂದರೆಗಳನ್ನು ನಿವಾರಿಸಲು
🌹 ನಿಮ್ಮ ಮನೆಯಲ್ಲಿ ಒಂದಲ್ಲಾ ಒಂದು ತೊಂದರೆಗಳು ಉದ್ಭವವಾಗುತ್ತಿದ್ದರೆ ನೀವು ಆಂಜನೇಯನಿಗೆ ಸಿಂಧೂರವನ್ನು ಅರ್ಪಿಸಬೇಕು. ಸಿಂಧೂರವನ್ನು ಮಲ್ಲಿಗೆಯ ಎಣ್ಣೆಯಲ್ಲಿ ಬೆರೆಸಿ ಆಂಜನೇಯನಿಗೆ ಅರ್ಪಿಸಿದರೆ ಒಳ್ಳೆಯದು. ಈ ಕ್ರಮವನ್ನು ಐದು ಮಂಗಳವಾರ ಹಾಗೂ ಐದು ಶನಿವಾರ ಸಿಂಧೂರವನ್ನು ಬೆರೆಸಿದ ತೈಲವನ್ನು ಅರ್ಪಿಸಿದರೆ, ಸಮಸ್ಯೆಗಳು ಕಡಿಮೆಯಾಗುವುದು.
ಗೌರವ ಪಡೆಯಲು
🌹 ನಿಮಗೆ ಯಾರೂ ಗೌರವವನ್ನು ನೀಡದಿದ್ದರೆ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ನಿಮ್ಮನ್ನು ನಿರ್ಲಕ್ಷಿಸಲಾಗುತ್ತಿದ್ದರೆ, ನೀವು ಸಿಂಧೂರದಿಂದ ಈ ಪರಿಹಾರವನ್ನು ಮಾಡಬಹುದು. ಅದೇನೆಂದರೆ ಒಂದು ವೀಳ್ಯದೆಲೆಯಲ್ಲಿ ಪಟಿಕ ಹಾಗೂ ಸಿಂಧೂರವನ್ನು ಕಟ್ಟಿ, ಅದನ್ನು ಬುಧವಾರ ಬೆಳಿಗ್ಗೆ ಅಥವಾ ಸಂಜೆ ಅಶ್ವತ್ಥ ಮರದಡಿಯಲ್ಲಿ ನೆಲದೊಳಗೆ ಕಲ್ಲಿನ ಸಹಾಯದಿಂದ ನೆಲದೊಳಗೆ ಒತ್ತಬೇಕು. ಹೀಗೆ ಮಾಡಿದ ನಂತರ ಹಿಂದಿರುಗಿ ನೋಡಬಾರದು. ಇದೇ ರೀತಿ ಮೂರು ಬುಧವಾರಗಳಂದು ಹೀಗೆ ಮಾಡುವುದರಿಂದ ಎಲ್ಲರಿಗೂ ನಿಮ್ಮ ಮೇಲಿರುವ ಗೌರವ ಹೆಚ್ಚಾಗುವುದು.
ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು
🌹 ಸಿಂಧೂರ ಅಥವಾ ಕುಂಕುಮವನ್ನು ವಾಸ್ತುಶಾಸ್ತ್ರದಲ್ಲಿ ಬಹಳ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಎಣ್ಣೆಯಲ್ಲಿ ಬೆರೆಸಿದ ಸಿಂಧೂರವನ್ನು ಹಚ್ಚುವುದರಿಂದ ಋಣಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ ಮನೆಯಲ್ಲಿನ ವಾಸ್ತು ದೋಷಗಳೂ ನಿವಾರಣೆಯಾಗುತ್ತವೆ.
ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು
🌹 ಸಿಂಧೂರದಿಂದ ಪರಿಹಾರವನ್ನು ಮಾಡುವ ಮೂಲಕ ಲಕ್ಷ್ಮೀ ಹಾಗೂ ದುರ್ಗಾಮಾತೆಯನ್ನು ಮೆಚ್ಚಿಸಿ, ಅವರ ಆಶೀರ್ವಾದವನ್ನು ಪಡೆಯಬಹುದು. ದೈನಂದಿನ ಪೂಜೆಯ ನಂತರ ಮನೆಯ ಮುಖ್ಯ ದ್ವಾರಕ್ಕೆ ಸಣ್ಣ ಕುಂಕುಮದ ಬೊಟ್ಟನ್ನು ಹಚ್ಚಿ. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮೀ ದೇವಿ ನಿಮ್ಮ ಕುಟುಂಬದವರನ್ನು ಸದಾ ಆಶೀರ್ವದಿಸುತ್ತಾಳೆ ಹಾಗೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಮನೆಯ ಪ್ರವೇಶದ್ವಾರದಲ್ಲಿ ಸಿಂಧೂರ ಹಚ್ಚಿರುವ ಗಣೇಶನ ವಿಗ್ರಹವನ್ನು ಮನೆಯ ಪ್ರವೇಶ ಬಾಗಿಲಿನ ಬಳಿ ಇಡುವುದರಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ, ಸಮೃದ್ಧಿ ನೆಲೆಸುವುದು.
ಹಣಕಾಸಿನ ಅಡಚಣೆಯನ್ನು ನಿವಾರಿಸಲು ಹಾಗೂ ಸಾಲವನ್ನು ತೀರಿಸಲು
🌹 ನೀವು ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಮತ್ತು ಎಷ್ಟೇ ಪ್ರಯತ್ನ ಪಟ್ಟರೂ ಹಣದ ಉಳಿತಾಯ ಮಾಡಲು ಸಾಧ್ಯವಾಗದಿದ್ದರೆ, ಅಥವಾ ದೀರ್ಘಕಾಲದಿಂದ ಸಾಲವು ಏರುತ್ತಲೇ ಇದ್ದರೆ, ನಿಮಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಈ ಪರಿಹಾರ ಮಾಡಿ. ಸಿಂಧೂರವನ್ನು ತೆಂಗಿನ ಕಾಯಿಗೆ ಹಚ್ಚಿ ಅದನ್ನು ಕೆಂಪುಬಟ್ಟೆಯಲ್ಲಿ ಕಟ್ಟಿ ಪೂಜಿಸಿ. ಪೂಜೆ ಮಾಡಿದ ನಂತರ ಈ ತೆಂಗಿನಕಾಯನ್ನು ನಿಮ್ಮ ತಿಜೋರಿಯಲ್ಲಿರಿಸಿ, ಲಕ್ಷ್ಮೀದೇವಿಯನ್ನು ಹಣಕ್ಕಾಗಿ ಪ್ರಾರ್ಥಿಸಿ. ಇದರಿಂದ ಹಣದ ಸಮಸ್ಯೆ ಕ್ರಮೇಣವಾಗಿ ಪರಿಹಾರವಾಗುವುದು.
ಗ್ರಹ ಶಾಂತಿಗೆ ಪರಿಹಾರ
🌹 ಗ್ರಹದೋಷಗಳಿಂದಾಗಿ ಅನೇಕ ಕೆಲಸ ಕಾರ್ಯಗಳಲ್ಲಿ ವಿಘ್ನವುಂಟಾಗಬಹುದು ಮತ್ತು ಪ್ರತಿಯೊಂದು ಕೆಲಸದಲ್ಲೂ ಏನಾದರೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರಬಹುದು. ಇದರ ಪರಿಹಾರಕ್ಕಾಗಿ ಕುಂಕುಮವನ್ನು ಬಳಸಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ಹಾಗೂ ಮಂಗಳನು ಮಾರಕವಾಗಿದ್ದರೆ ಅವರ ಮಹಾದೆಸೆ ಅಥವಾ ಅಂತರ್ದೆಸೆಗಳು ನಡೆಯುತ್ತಿದ್ದರೆ ಈ ಪ್ರಯೋಗವನ್ನು ಮಾಡಬಹುದು. ಇಂತಹ ಗ್ರಹದೋಷವಿರುವವರು ಹರಿಯು ನೀರಿನಲ್ಲಿ ಸಿಂಧೂರವನ್ನು ಹರಿಯಬಿಡಬೇಕು. ಇದನ್ನು ಮಾಡುವುದರಿಂದ ಸಂಬಂಧಿತ ಗ್ರಹದೋಷಗಳು ನಿವಾರಣೆಯಾಗಿ, ಗ್ರಹದ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಸೂರ್ಯ ಮತ್ತು ಮಂಗಳನು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾರೆ.
ಉದ್ಯೋಗದಲ್ಲಿ ಯಶಸ್ಸಿಗೆ
🌹 ನೀವು ದೀರ್ಘಕಾಲದಿಂದ ಉದ್ಯೋಗವನ್ನು ಹುಡುಕಿಯೂ ನಿಮಗೆ ಯಶಸ್ಸು ಸಿಗದಿದ್ದರೆ, ಶುಕ್ಲ ಪಕ್ಷದ ಗುರುವಾರದಂದು ಹಳದಿ ಬಣ್ಣದ ಬಟ್ಟೆಯ ಮೇಲೆ ಕುಂಕುಮದಿಂದ '63' ಸಂಖ್ಯೆಯನ್ನು ನಿಮ್ಮ ಉಂಗುರ ಬೆರಳಿನಿಂದ ಬರೆಯಿರಿ. ನಂತರ ಅದನ್ನು ತೆಗದುಕೊಂಡು ಲಕ್ಷ್ಮೀ ದೇವಿಯ ಪಾದಗಳಿಗೆ ಅರ್ಪಿಸಿ, ಸತತವಾಗಿ ಮೂರು ಗುರುವಾರ ಇದೇ ಕ್ರಮವನ್ನು ಮಾಡಿ. ಇದರಿಂದ ಖಂಡಿತಾ ಲಾಭವನ್ನು ಪಡೆಯುವಿರಿ.
***
"ಹಿಂದೂ ಧರ್ಮದಲ್ಲಿ ಅರಿಶಿನ ಹಾಗೂ ಕುಂಕುಮದ ಮಹತ್ವ"
ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದ್ದು ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.
ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅರಿಶಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ. ಮನೆಮದ್ದಾಗಿ ಎಲ್ಲರ ಮನೆಯಲ್ಲೂ ಸ್ಥಾನವನ್ನು ಪಡೆದುಕೊಂಡಿರುವ ಅರಶಿನ ಒಂದು ರೀತಿಯಲ್ಲಿ ಸಂಜೀವಿನಿಯಾಗಿದೆ....
ಕುಂಕುಮ ವಿವಾಹಿತ ಮಹಿಳೆಯರ ಗುರುತು: ಅನಾದಿ ಕಾಲದಿಂದಲೂ, ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರುಗಳು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ.
ಅರಿಶಿನ ಶುದ್ಧೀಕರಣದ ಸಂಕೇತ ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ.
ಕುಂಕುಮದ ಮಹತ್ವ ಹಿಂದೂ ಶಾಸ್ತ್ರಗಳು ಹೇಳುವಂತೆ, ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಕಾಣಲಾಗುತ್ತದೆ. ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದ್ದು ಮೇಷ ರಾಶಿಯ ದೇವನು ಮಂಗಳನಾಗಿದ್ದಾನೆ. ಆದ್ದರಿಂದಲೇ ಅದೃಷ್ಟವನ್ನು ತರುತ್ತದೆ ಎಂಬ ಕಾರಣಕ್ಕಾಗಿ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ.
ಕುಂಕುಮ ಮಹಿಳೆಯರ ಶಕ್ತಿಯ ಸಂಕೇತ ವಿದ್ವಾನರ ಪ್ರಕಾರ, ಕೆಂಪು ಶಕ್ತಿ ಮತ್ತು ಬಲದ ಸಂಕೇತವಾಗಿದೆ. ಪಾರ್ವತಿ ಮತ್ತು ಸತಿ ದೇವಿಯ ಶಕ್ತಿಗೆ ಸಮನಾಗಿ ಇದನ್ನು ಹೋಲಿಸಲಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಸತಿಯು ತನ್ನ ಪತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾಳೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಪತ್ನಿ ಕೂಡ ತನ್ನ ಪತಿಗಾಗಿ ನಿಷ್ಟತೆಯನ್ನು ತೋರ್ಪಡಿಸಿ ಮತ್ತು ತನ್ನ ಭಕ್ತಿಯನ್ನು ಆತನ ಪ್ರತಿಯಾಗಿ ತೋರುತ್ತಾರೆ.
ಅರಿಶಿನದ ಬಣ್ಣದ ಮಹತ್ವ ಅರಿಶಿನವು ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಲಭ್ಯವಿದೆ. ಹಳದಿ ಬಣ್ಣವು ಕನ್ಯತ್ವ ಹಾಗೂ ಇಂದ್ರಿಯ ನಿಗ್ರಹದ ದ್ಯೋತಕವಾಗಿದ್ದರೆ ಕಿತ್ತಳೆ ಬಣ್ಣವು ಸೂರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ.
ಆರೋಗ್ಯದ ದೃಷ್ಟಿಯಲ್ಲಿ ಅರಿಶಿನದ ಪಾತ್ರ ಬೆಚ್ಚನೆಯ ಹಾಲಿನಲ್ಲಿ ಅರಿಶಿನವನ್ನು ಮಿಶ್ರಮಾಡಿ ಸೇವಿಸುವುದು ನಮ್ಮನ್ನು ಹಿತವಾಗಿರಿಸುತ್ತದೆ. ಇಷ್ಟಲ್ಲದೆ ಅರಿಶಿನ ಹಾಲು ನಮ್ಮ ದೇಹದಲ್ಲಿರುವ ಆಮ್ಲ ಹಿಮ್ಮುಖ ಹರಿವು ಮತ್ತು ಯಾವುದೇ ನೋವನ್ನೂ ನಿವಾರಿಸುತ್ತದೆ. ಅರಿಶಿನವನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
**
No comments:
Post a Comment