SEARCH HERE

Tuesday, 1 January 2019

kurma jayanti ಕೂರ್ಮ ಜಯಂತಿ vaishakha pournima

Kurma Jayanti marks the birth anniversary of Lord Vishnu in his incarnated form of a tortoise. Kurma was the second incarnation of Lord Vishnu during the Satya Yuga. It is believed that on this very day, Lord Vishnu in His avatar of 'kurma' lifted the gigantic Mandaranchal Parvat on His back during the 'Ksheera Sagara Manthan'. From then onwards, Kurma Jayanti is celebrated as the birth anniversary of Lord Kurma (Tortoise).

As per the Hindu calendar, Kurma Jayanti is observed in the Vaisakh month during the Shukla Paksha on the full moon day (Purnima). According to the Gregorian calendar, the day is observed either in the month of May or June.

Kurma Jayanti Rituals
Similar to other Hindu festivals, on this day also, devotees observe a fast and worship Lord Visnu by offering Chandan, tulsi leaves, kumkum, incense sticks, flowers, and sweets to the deity. Once all the rituals are finished, devotees perform aarti and distribute bhog among the families and friends. However, observers are not allowed to sleep during the night. Reciting 'Vishnu Sahasranama' is considered highly auspicious.
****

About Kurma Jayanti

Kurma Jayanti or Shri Koorma Jayanti is celebrated to commemorate the birth of Lord Vishnu in his incarnated form of a tortoise. In a literal sense, the word Kurma means a Tortoise in Sanskrit. As per the Hindu scriptures, it is believed that Lord Vishnu appeared in the form of a tortoise to lift the Mandarachal mountain during the Samudra Manthan.

When is Kurma Jayanti ?

As per the Hindu calendarKurma Jayanti takes place in the Vaisakh month during the Shukla Paksha and on the full moon day (Purnima). According to the Gregorian calendar, the day is observed either in the month of June or May.

Visit choghadiya for Kurma Jayanti puja muhurta.

What are The Rituals of Kurma Jayanti?

Similar to other Hindu festivals, taking a holy bath before sunrise on this day is regarded as sacred.
After taking the bath, the devotees wear fresh and tidy puja vastra (worship clothing).
Devotees worship and offer prayers to Lord Visnu by offering Chandan, tulsi leaves, kumkum, incense sticks, flowers and sweets to the deity.
Observing a fast of Shri Koorma Jayanti is considered highly significant. So, the devotees observe a silent vow or a strict Kurma Jayanti fast on this particular day.
The devotees who observe fast abstain themselves from consuming pulses or cereals and are only allowed to consume milk products and fruits.
During the observance of Kurma Jayanti Vrat, the observers are restricted to perform any kind of sinful or evil deed and are also restricted to speak lies.
The observers are not allowed to sleep during the night. They must spend their entire time reciting Mantras in order to please Lord Vishnu.
Reciting of ‘Vishnu Sahasranama’ is considered as highly auspicious.
Once all the rituals are finished, devotees perform aarti.
Performing charity on the eve of Kurma Jayanti is regarded as highly rewarding. The observer should donate food, clothes, and money to the Brahmins.
What is The Significance of Kurma Jayanti?
Kurma Jayanti is one of the most auspicious and significant festivals for Hindu people. It is believed that without the assistance of Lord Vishnu by taking the form of Kurma, Ksheersagara would not have been completed. Lord Vishnu emerged as a giant Kurma (tortoise) and held the Mandrachal mountain on his back. Thus, the day of Kurma Jayanti possesses great religious significance. The day is believed to be auspicious for commencement of any sort of construction works..

How to Celebrate Kurma Jayanti?
Devotees celebrate the day of Kurma Jayanti with utmost dedication and fervor. On this particular day, special ceremonies and pujas are organized in various Lord Vishnu temples or at the place of worship. Grand celebrations can be witnessed in Andhra Pradesh in ‘Sri Kurman Sri Kurmanadha Swami Temple dedicated to Lord Kurma.
****
Kurma Avatar 
Kurma Avatar of Vishnu
Kurma is the second avatar of Vishnu in a half tortoise half-man form. During the churning of the ocean (Samudra Manthan), he balances Mount Mandara on his shell to assist the gods and the asuras in the churning process.

During Samudra Manthan, Vishnu also took a female avatar, Mohini, to distribute the amrita, the nectar of immortality. As Mohini and Kurma avatars, Lord Vishnu plays a very important role in ending the hundreds of years of conflict between gods and asuras.

According to Kurma Purana, the Kurma avatar of Vishnu supports the weight of the cosmos on his back. Whole consciousness rest on all-pervading Vishnu.
***
𝑲𝑼𝑹𝑴𝑨   𝑱𝑨𝒀𝑨𝑵𝑻𝑰

🚩Kurma Jayanti celebrates the second Avatar of Bhagwan Vishnu, the Kurma Avatar. It is observed on Purnima or the full moon day in the month of Vaishakha. Kurman means Tortoise and the aim of this particular Avatar was to help the Devas and asuras in  Samudra Manthan (Churning of the ocean). 

🚩Once due to a curse from Sage Durvasa, the Devas lost all their power and the demons gained the upper hand in the battle between the good and the evil and soon the evil flourished.

🚩The Devas took refuge in Vaikuntha and asked Bhagwan Vishnu to help them. He suggested the churning of the ocean which would derive Amrit. By drinking Amrit the Devas will gain immortality and thereby they can defeat the demons. Mountain Mandara was used as the churning rod and Snake Vasuki was used as the rope.

🚩But when the churning started, Mount Mandara started to sink as there was no firm foundation. Bhagwan Vishnu took the form of Kurma, 
a tortoise to keep the mountain afloat.

🚩Kurma Avatar symbolically represents stability. We need to remain stable when the world around us is being moved like the Mandara mountain. We can get this stability only through unwavering devotion. This day also celebrates the timely intervention of Bhagwan Vishnu in the battle between the good and the evil.

𝐒𝐀𝐍𝐀𝐀𝐓𝐀𝐍𝐓𝐀𝐋𝐄𝐒
***

ಮತ್ಸ್ಯಾವತಾರದ ಅನಂತರ ಕೂರ್ಮಾವತಾರ. `ಕೂರ್ಮ’ ಎಂದರೆ `ಆಮೆ’. ಆಮೆಯ ಬೆನ್ನು ಬಹಳ ಬಿರುಸಾಗಿ, ಚಪ್ಪಟೆಯಾಗಿ ಇರುತ್ತದೆ. ಅತ್ಯಂತ ಭಾರವುಳ್ಳ ಮಂದರ ಪರ್ವತವನ್ನು ಧರಿಸಲು ಭಗವಂತ ಕೂರ್ಮಾವತಾರವನ್ನು ಧರಿಸಿದನು. ಕಾರ್ಯಕ್ಕೆ ತಕ್ಕ ರೂಪವೆಂಬ ಸಂದೇಶ ನೀಡಿದನು.

 ಮಂದರಪರ್ವತವು ಸಾಮಾನ್ಯವಲ್ಲ. ಅದರ ಅಳತೆ ನೂರು ಯೋಜನ ಅಗಲ, ನೂರು ಯೋಜನ ಎತ್ತರ. ಮಥನ ಮಾಡುತ್ತಿರುವ ಈ ಪರ್ವತವನ್ನು ಧಾರಣೆ ಮಾಡಲು ಬೇರೆ ಯಾರಿಗೂ ಸಾಮರ್ಥ್ಯವಿಲ್ಲ.

ಹಿಂದೆ ದೇವತೆಗಳು ಅಮೃತ ಪ್ರಾಪ್ತಿಗಾಗಿ ಕ್ಷೀರಸಾಗರವನ್ನು ಮಥನ ಮಾಡಿದರು. ಮಂದರ ಪರ್ವತವನ್ನು ಕಡಗೋಲು ಮಾಡಿಕೊಂಡು ದೈತ್ಯರು ಹಾಗೂ ದಾನವರ ಜೊತೆ ಮಥನ ಮಾಡಲು ಪ್ರಾರಂಭಿಸಿದಾಗ ಅತ್ಯಂತ ಭಾರವಾದ ಮಂದರ ಪರ್ವತವು ಸಮುದ್ರದಲ್ಲಿ ಜಾರುತ್ತಿತ್ತು. ಆವಾಗ ಬೇರೆ ಉಪಾಯ ಕಾಣದೇ ಬ್ರಹ್ಮಾದಿ ದೇವತೆಗಳು ಪರಮಾತ್ಮನನ್ನು ಶರಣು ಹೊಂದಿದರು. ಅವರ ಪ್ರಾರ್ಥನೆಗೆ ಅನುಗ್ರಹ ಮಾಡಿದ ಭಗವಂತನು `ಕೂರ್ಮ’ ಎಂಬ ರೂಪವನ್ನು ಧರಿಸಿದನು. ಸಮುದ್ರದ ಆಳದಲ್ಲಿ ಮಂದರ ಪರ್ವತವನ್ನು ಮುಳುಗದಂತೆ ಎತ್ತಿ ಹಿಡಿದನು.

 ಕೂರ್ಮ ರೂಪಿಯು ಮಂದರ ಪರ್ವತವನ್ನು ಧಾರಣೆ ಮಾಡಿದ್ದಷ್ಟೇ ಅಲ್ಲದೇ, ನಾರದಾದಿ ಮಹರ್ಷಿಗಳಿಗೆ, ಬ್ರಹ್ಮಾದಿದೇವತೆಗಳಿಗೆ ತತ್ವೋಪದೇಶವನ್ನೂ ಕೂಡ ಮಾಡಿರುವನು. ಸಕಲ ದೇವತೆಗಳು ಕೂರ್ಮರೂಪಿಯಾದ ಭಗವಂತನನ್ನು ಅನೇಕ ಸ್ತೋತ್ರಗಳಿಂದ ಪ್ರಶಂಸೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಭಗವಂತನು ಮಾಡಿದ ಉಪದೇಶವೇ `ಕೂರ್ಮ ಮಹಾಪುರಾಣ’ ಎಂದು ಪ್ರಸಿದ್ಧವಾಗಿವೆ.

ದೇವರ ಪೂಜೆಗಿಂತ ಮೊದಲು ಪೀಠ ಪೂಜೆಯನ್ನು ಮಾಡಬೇಕು. ಆ ಸಂದರ್ಭದಲ್ಲಿ ಬ್ರಹ್ಮಾಂಡಧಾರಿಯಾದ ಬ್ರಹ್ಮಾಂಡದ ಹೊರಗಿರುವ ಒಂದು ರೂಪ. ಬ್ರಹ್ಮಾಂಡದ ಒಳಗಿರುವ ಒಂದು ರೂಪ- ಹೀಗೆ ವಿಷ್ಣುವಿನ 2 ಕೂರ್ಮರೂಪವನ್ನು ಅವಶ್ಯವಾಗಿ ಧ್ಯಾನ ಮಾಡಲೇಬೇಕು. ಕ್ಷೀರಸಾಗರ ಮಥನದ ಸಂದರ್ಭದಲ್ಲಿ ಮಂದರ ಪರ್ವತವನ್ನು ಹೊತ್ತಿರುವ ಕೂರ್ಮರೂಪವನ್ನು ಕಷ್ಟಕಾಲದಲ್ಲಿ ಚಿಂತನೆ ಮಾಡಬೇಕು.

ಭಾಗವತದ ಅಷ್ಟಮಸ್ಕಂಧದ ಏಳನೆಯ ಅಧ್ಯಾಯದಲ್ಲಿ ಮಹಾಭಾರತತಾತ್ಪರ್ಯ ನಿರ್ಣಯದ ಹತ್ತನೆಯ ಅಧ್ಯಾಯದಲ್ಲಿ ಮತ್ತು ಕೂರ್ಮಮಹಾಪುರಾಣದಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. ಇಷ್ಟೇ ಅಲ್ಲದೇ ದಶಾವತಾರಗಳ ಬಗ್ಗೆ ನಿರೂಪಣೆ ಮಾಡುವ ಪ್ರತಿಯೊಂದು ಸಂದರ್ಭಗಳಲ್ಲಿಯೂ ಭಾಗವತಪುರಾಣವಷ್ಟೇ ಅಲ್ಲದೇ ಉಳಿದ ಪುರಾಣಗಳೆಲ್ಲವೂ ಕೂರ್ಮಾವತಾರವನ್ನು ವರ್ಣಿಸುತ್ತವೆ. ಕೂರ್ಮಾವತಾರದ ಅನುಸಂಧಾನ ಚಿಂತನೆ, ಪೂಜೆಗಳ ಕ್ರಮವನ್ನು ತಿಳಿಯಬೇಕೆಂದರೆ ವಿಜಯದಾಸರ ಸುಳಾದಿಗಳನ್ನೇ ಶರಣಾಗಬೇಕು. ಅಷ್ಟೇ ಅಲ್ಲದೇ ಇತರ ಹಲವು ದಾಸವರೇಣ್ಯರೂ ಕೂಡ ದಶಾವತಾರದ ಬಗ್ಗೆ ಚಿಂತನೆಯನ್ನು ನೀಡುವಾಗ ಪಿಂಡಾಂಡದಲ್ಲಿ ಮಾಡುವ ಕೂರ್ಮಾವತಾರದ ಚಿಂತನೆಯನ್ನು ತಿಳಿಸಿಕೊಟ್ಟಿದ್ದಾರೆ.

ಭಗವಂತನ ರಾಮ, ಕೃಷ್ಣ ಮೊದಲಾದ ರೂಪಗಳನ್ನು ಮೂರ್ತಿಯಲ್ಲಿ ನಾವು ಪೂಜಿಸುತ್ತೇವೆ. ಆ ಕ್ರಮದಲ್ಲಿ ಕೂರ್ಮ ಮೂರ್ತಿಯನ್ನು ಪೂಜಿಸುವ ಕ್ರಮ ಹೆಚ್ಚು ಕಾಣಿಸುವುದಿಲ್ಲ. ಆದರೆ ದಶಾವತಾರಗಳ ಪೂಜಾಕ್ರಮದಲ್ಲಿ ಮಾತ್ರ ಇದು ಸೇರಿರುತ್ತದೆ. ಆಶ್ಚರ್ಯವೆಂದರೆ ಕೂರ್ಮಶಾಲಗ್ರಾಮಕ್ಕೆ ಎಲ್ಲಿಲ್ಲದ ಮಹತ್ವವಿದೆ. ತುಂಬಾ ಅಪರೂಪದ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಚಿಂತಿಸಿದ ಅಭೀಷ್ಟಗಳು ನೆರವೇರುತ್ತದೆಂಬ ಅನುಭವ ಅನೇಕರಲ್ಲಿ ಜಾಗೃತವಾಗಿದೆ. ನಿಮ್ಮ ಬಳಿ ಕೂರ್ಮಶಾಲಗ್ರಾಮ ಇಲ್ಲದಿದ್ದರೂ ಎಲ್ಲಿ ಇರುತ್ತದೋ ಅಲ್ಲಿ ಕ್ಷೀರಾಭಿಷೇಕವನ್ನು ಮಾಡಿಸಿ, ಆ ಕ್ಷೀರವನ್ನು ಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗರುಜಿನಗಳು ಪರಿಹಾರವಾಗುವುದರಲ್ಲಿ ಸಂಶಯವೇ ಇಲ್ಲ.
-ಡಾ.ಗುರುರಾಜ ಪೋಶೆಟ್ಟಿಹಳ್ಳಿ,
ಸಂಸ್ಕೃತಿ ಚಿಂತಕರು, 9739369621
***

🌷ಕೂರ್ಮಾವತಾರ ಚಿಂತನ 🌷
  
ಚಾಕ್ಷುಷ ಮನ್ವಂತರದಲ್ಲಿ ಪರಮಾತ್ಮನು ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಅಜಿತನಾಮಕನಾಗಿ ಅವತರಿಸಿದನು ಅವನೇ ಸಮುದ್ರಮಥನ ಕಾರ್ಯ ಮಾಡಿ ದೇವತೆಗಳಿಗೆ ಅಮೃತವನ್ನು ಕೊಟ್ಟನು .

ಆಗ ಪರಿಕ್ಷಿದ್ರಾಜನು ಈ ಸಮುದ್ರಮಥನ ಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಪ್ರಾರ್ಥಿಸಲು ಶ್ರೀಶುಕಾಚಾರ್ಯರು ಹೇಳಲು ಪ್ರಾರಂಭಿಸಿದರು .

ದುರ್ವಾಸ ಋಷಿಗಳ ಶಾಪದಿಂಧ ಇಂದ್ರದೇವರು ಸಂಪತ್ತಿನಿಂದ ರಹಿತರಾಗಿ  ಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಲು ಬ್ರಹ್ಮದೇವರು ಭಗವಂತನಿಗೆ ಶರಣು ಹೋಗಲು ತಿಳಿಸಿದರು .ಆಪ್ರಕಾರ ಎಲ್ಲ ದೇವತೆಗಳು ಭಗವಂತನ ವ್ಯಕ್ತಸ್ಥಾನವಾದ ಶ್ವೇತದ್ವೀಪಕ್ಕೆ ಹೋಗಿ ಸ್ತೋತ್ರಮಾಡಿದರು  ದೇವತೆಗಳ ಸ್ತೋತ್ರದಿಂದ  ಪ್ರಸನ್ನನಾದ ಭಗವಂತನು ಅವರಿಗೆ ಅಭಯ ನೀಡಿ (ಅರಯೋsಪಿ ಹಿ ಸಂಧೇಯಾ ಸತಿ ಕಾರ್ಯಾರ್ಥಗೌರವೇ) ದೈತ್ಯರ ಜೋತೆ ಸಂಧಾನ ಮಾಡಿಕೊಂಡು ಸಮುದ್ರಮಥನಮಾಡಲು ತಿಳಿಸಿದನು .
ಮಂದರ ಪರ್ವತವನ್ನು ಕಡೆಗೋಲನ್ನಾಗಿ ವಾಸುಕಿಯನ್ನು ‌ಹಗ್ಗವನ್ನಾಗಿಮಾಡಿಕೊಂಡರು 

ವರಾದ್ ಗೀರಿಶಸ್ಯ ಪರೈರಚಾಲ್ಯಮ್ |

ರುದ್ರದೇವರ ವರ ಮಂದರ ಪರ್ವತಕಿತ್ತು ಅದನ್ನು ಯಾರು ಅಲುಗಾಡಿಸಲು ಸಾಧ್ಯವಿರಲಿಲ್ಲ  ಎಂಬ ವಿಶೇಷಾಂಶವನ್ನುಮಹಾಭಾರತ ತಾತ್ಪರ್ಯನಿರ್ಣಯದಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ

 ಮೊದಲಿಗೆ ದೇವತೆಗಳು ಸನ್ನದ್ಧರಾಗಿ ಅಮೃತಕಾಗಿ  ಅಮೃತಕ್ಕಾಗಿ ಮಥನಕ್ಕೆ ಹೊರಟರು ಶ್ರೀಹರಿ ವಾಸುಕಿಯ ಹೆಡೆಯನ್ನು ಹಿಡಿದುಕೊಂಡ ಅದರಿಂದ ದೇವತೆಗಳೆಲ್ಲರು ಹೆಡೆಯ ಭಾಗವನ್ನು ಹಿಡಿದು ನಿಂತರು ಆಗ ದೈತ್ಯರು ನಾವು ಅಮಂಗಲಕರವಾದ ಹಾವಿನ ಬಾಲದ ಭಾಗವನ್ನು ನಾವು ಹಿಡಿಯಲಾರೆವು ನಾವು ವೇದಾಧ್ಯಯನ ಶಾಸ್ತ್ರ ಸಂಪನ್ನರು ಒಳ್ಳೆಯಕುಲದಲ್ಲಿ ಹುಟ್ಟಿದವರು ಎನ್ನುತ್ತ ಶ್ರೀಹರಿಯು ಹೆಡೆಯಭಾಗವನ್ನು ಹಿಡಿದುದನ್ನು ಒಪ್ಪಲಿಲ್ಲ ಅವರು ಸುಮ್ಮನೆ ನಿಂತು ದನ್ನು ನೋಡಿ ಶ್ರೀಹರಿ ನಸುನಗುತ್ತ ಹೆಡೆಯ ಭಾಗವನ್ನು ಬಿಟ್ಟು ದೇವತೆಗಳೊಂದಿಗೆ  ಬಾಲದ ಭಾಗವನ್ನು ಹಿಡಿದ . ಹೀಗೆ ಕಶ್ಯಪರ ಸಂತತಿಗಳಾದ ದೇವದಾನವರು ಹಾವಿನ ಬಾಲ , ಹೆಡೆಭಾಗ ಸ್ಥಾನಗಳನ್ನು ವಿಭಾಗ ಮಾಡಿಕೊಂಡರು.  ಸಮುದ್ರವನ್ನು ಕಡೆಯುತ್ತಿರಲು ಬೆಟ್ಟ ಆಧಾರವಿಲ್ಲದೆ ನೀರಲ್ಲಿ ಮುಳುಗಲು ತೊಡಗಿತು . ಬಲಿಷ್ಠರಾದ ದೇವ ದಾನವರು ಬೆಟ್ಟವನ್ನು ಮುಳುಗದಂತೆ ಹಿಡಿದಿದ್ದರೂ ಭಾರ ಹೆಚ್ಚಿದ್ದರಿಂದ ಅದು ಮುಳುಗತೊಡಗಿತು ಅತಿ ಬಲಿಷ್ಠವಾದ  ದೈವದಿಂದ ತಮ್ಮ ಪೌರುಷ ಕೆಲಸಕ್ಕೆ ಭಾರದಂತಾಗಲೂ ಅವರು ಮನಸ್ಸಿನಲ್ಲಿ ತುಂಬಾ ಹತಾಶರಾದರು .

ಕೃತ್ವಾ ವಪುಃ ಕಾಚ್ಛಪಮದ್ಭುತಂ ಮಹತ್
ಪ್ರವಿಶ್ಯತೋಯಂ ಗಿರಿಮುಜ್ಜಹಾರ ||

 ಆಗ ಪರಮಾತ್ಮನು ಅದ್ಭುತವಾದ ಕೂರ್ಮರೂಪವನ್ನು ಧರಿಸಿ ಮಹಾಜಲವನ್ನು ಹೊಕ್ಕು ಬೆಟ್ಟವನ್ನು ಬೆನ್ನಮೇಲೆ ಎತ್ತಿ ನಿಲ್ಲಿಸಿದ .

ಕೂರ್ಮಸ್ವರೂಪಕ ಮಂಧರದಾರೀನ್  ಲೋಕವಿಧಾರಕ ದೇವವರೇಣ್ಯ ||
-ದ್ವಾದಶಸ್ತೋತ್ರ

 ಮಂದರ ಪರ್ವತ ಮೇಲೆ ಎದ್ದು ಬಂದುದನ್ನು ನೋಡಿ ದೇವದಾನವರು ಪುನಃ ಮಥನಮಾಡಲು ಎದ್ದುಬಂದರು ಇನ್ನೊಂದು ದೊಡ್ಡ ದ್ವೀಪದಂತಿರುವ ಕೂರ್ಮ ಲಕ್ಷಯೋಜನ ವಿಸ್ತಾರವಾದ ಬೆನ್ನಿನಿಂದ ಬೆಟ್ಟವನ್ನು ಹೊತ್ತುಕೊಂಡ  
ಮಹಾ ಸುರಾಸುರರ ಭುಜಬಲದಿಂದ ಚಲಿಸುತ್ತ ತನ್ನ ಬೆನ್ನ ಮೇಲೆ ತಿರುಗುತಿದ್ದ ಆ ಬೆಟ್ಟವನ್ನು ಹೊತ್ತಾಗ ಆದಿಕೂರ್ಮ ರೂಪಿಯಾದ ಅಚಿಂತ್ಯ ಶಕ್ತಿ ಉಳ್ಳ ಶ್ರೀಹರಿ ಬೆಟ್ಟದಚಲನೆಯನ್ನು ಬೆನ್ನಿನ ನವೆಹೋಗಲಾಡಿಸುವ ಕೆರೆತದಂತೆ ಅನುಭವಿಸಿದ .

ಶ್ರೀಹರಿ ಅಸುರರಲ್ಲಿ ಅದರ ಬಲವೀರ್ಯಗಳನ್ನು ಫ್ರೇರಿಸಲು ಅಸುರರೂಪದಿಂದ ಅವಿಷ್ಟನಾದ 
.ದೇವ ಸಮೂಹಗಳಲ್ಲಿ ದೇವರೂಪದಿಂದ ಅವಿಷ್ಟನಾದ .
ವಾಸುಕಿಯಲ್ಲೂ ಸರ್ಪರೂಪದಿಂದ ಅವಿಷ್ಟನಾದ . ಬೆಟ್ಟ ಮೇಲಕ್ಕೆ ಹಾರದಂತೆ ಸಹಸ್ರಬಾಹುವಾಗಿ ಇನ್ನೊಂದು ಬೆಟ್ಟದಂತೆ  ನಿಂತು ಕೈಯಿಂದ ಬೆಟ್ಟವನ್ನು ಒತ್ತಿಹಿಡಿದುಕೋಂಡ ಬ್ರಹ್ಮರುದ್ರಇಂದ್ರ ಮುಂತಾದವರು ಅವನನ್ನು ಕೊಂಡಾಡಿದರು ಹೂಮಳೆಗರೆದರು .
ಶ್ರೀಮದ್ ಭಾಗವತ ಪುರಾಣದ ಅಷ್ಟಮ ಸ್ಕಂಧದಲ್ಲಿ  ಕೂರ್ಮಾವತಾರದ ಮತ್ತು ಸಮುದ್ರ ಮಥನದ ವರ್ಣನೆ ವಿಸ್ತಾರವಾಗಿ ನಿರೂಪಿತವಾಗಿದೆ .

ಕ್ಷೀರೋದಧಾವಮರದಾನವಯೂಥಪಾನಾ
ಮುನ್ಮಘ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪ ರವಿದದಾರ ಗೋತ್ರಂ
ನಿದ್ರೇಕ್ಷಣೋದ್ರಿಪರಿವರ್ತಕಷಾಣಕಂಡೂಃ

ದೇವಾಸುರರು ಸೇರಿ ಅಮೃತಪ್ರಾಪ್ತಿಗಾಗಿ ಕ್ಷೀರಸಮುದ್ರಮಥನ ನಡೆಸುತ್ತಿದ್ದಾಗ ಮಃಳುಗುತ್ತಿದ್ದ ಮಂಧರ ಪರ್ವತವನ್ನು ಹರಿ ಕೂರ್ಮರೂಪದಿಂದ ಬೆನ್ನ ಮೇಲೆ ಹೊತ್ತು ಬೆಟ್ಟ ಬೆನ್ನ ಮೇಲೆ ತಿರುಗಿದಾಗ. ಬೆನ್ನ ನವೆ ಕೆರೆದಂತಾಗಿ ನಿದ್ಧೆಯಿಂದ ಅವನ ಅರ್ಧ ಮುಚ್ಚಿಕೊಂಡವು ಹೊರತು ಅವನಿಗೆನೂ ಶ್ರಮವಾಗಲಿಲ್ಲ .
-ಶ್ರೀಮದ್ಭಾಗವತ ಪುರಾಣ 2-7-13

ಆದಿತ್ಯಪುರಾಣೋಕ್ತ ವೇಂಕಟೇಶಮಹಾತ್ಮೆಯಲ್ಲಿ ಕೂರ್ಮಾವತಾರ ವರ್ಣನೆ

ಮಹಾಗಾಧ ಜಲಾಧಾರಂ
ಕಚ್ಛಪಂ ಮಂದರೋದ್ಧರಮ್ |
ಸುಂದರಾಂಗಂ ಚ ಗೋವಿಂದ
ಶ್ರೀನಿವಾಸಂ ಭಜೇsನಿಶಮ್ ||

ಕೂರ್ಮರೂಪದಿಂದ ಬ್ರಹ್ಮಾಂಡದ ಜಲಾವರಣದ ಆಧಾರನು ಅಮೃತ ಮಥನಕ್ಕಾಗಿ ಕೂರ್ಮರೂಪನಾದರೂ ಸುಂದರಾಂಗನು ಮಂದರ ಹೊತ್ತರು ನಿರ್ವೀಕಾರನಾಗಿ ಕಾಂತಿಯುಕ್ತನಾದವನು ವೇದವೇದ್ಯನು ಆದ ಶ್ರೀನಿವಾಸನನ್ನು ಸರ್ವದಾ ಸೇವಿಸುವೆನು .
-ಆದಿತ್ಯಪುರಾಣೋಕ್ತ ವೇಂಕಟೇಶಮಹಾತ್ಮೆ 3-19

 ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಕೂರ್ಮಾವತಾರ ವರ್ಣನೆ

 ಅಥಾತಿಭಾರದವಿಶತ್ ಸುಕಂಚನೋ ಗಿರಿಃ ಸ ಪಾತಲಮಥ ತ್ವಮೇವ |
ತಂ ಕಚ್ಛಾಪಾತ್ಮ ತ್ವಭರಃ ಸ್ವಪೃಷ್ಠೇ ಹ್ಯನನ್ಯಧಾರ್ಯಂ ಪುರುಲೀಲಯೈವ ||    

ಸಮುದ್ರ ಮಥನ ನಡೆಯುವಾಗ ಅತಿಯಾದ ಭಾರದಿಂದ ಆ ಬಂಗಾರದ ಬೆಟ್ಟ ಕೆಳಗಿಳಿದು  ಪಾತಾಲವನ್ನು ಪ್ರವೇಶಿಸಿತು  ಆಗ ನೀನು  ಬೇರೆಯವರಿಗೆ ಹೊರಲು  ಅಶಕ್ಯವಾದ ಆ ಬೆಟ್ಟವನ್ನು  ಅನಾಯಾಸದಿಂದ ಕೂರ್ಮರೂಪನಾಗಿ ಮಹಾಲೀಲೆಯಿಂದಲೇ ಹೊತ್ತುಕೊಂಡೆ .

ಮಹಾಭಾರತತಾತ್ಪರ್ಯನಿರ್ಣಯ 10 -11

ಸುರಾಸುರಾಣಂಮದಧೀಂ ವಿಮಥ್ನತಾಂ
ದಧಾರ ಪೃಷ್ಠೇನ ಗಿರಿಂ ಸ ಮಂದರಮ್  |
ವರಪ್ರದಾನಾದಪರೈರಧಾರ್ಯಂ
ಹರಸ್ಯ ಕೂರ್ಮೋ ಬೃಹದಂಡವೋಢಾ ||

ದೇವತೆಗಳೂ ಅಸುರರೂ ಸೇರಿ ಸಮುದ್ರವವನ್ನು ಮಥಿಸುವಾಗ ಶ್ರೀಹರಿ ಕೂರ್ಮನಾಗಿ ಮಂದರಪರ್ವತವನ್ನು ಬೆನ್ನಿನಿಂದ ಧರಿಸಿದ .

ಆಪರ್ವತ ಶಿವವರದಿಂದ ಬೇರಾರಿಗೂ ಧರಿಸಲು ಅಶಕ್ಯವಾಗಿತ್ತು .ಆದರೆ ಕೂರ್ಮ ಧರಿಸಿದ .ಆ ಪರ್ವತ ರುದ್ರದೇವರ ವರದಿಂದ  ಬೇರಾರಿಗೂ ಧರಿಸಲೂ ಅಶಕ್ಯವಾಗಿತ್ತು ಆದರೆ ಕೂರ್ಮರೂಪಿ ಪರಮಾತ್ಮ ಮಹಾ ಬ್ರಹ್ಮಾಂಡವನ್ನೇ ಹೊರುವವನು .  ಅಂತಹ ಪರಮಾತ್ಮನು ಅನಾಯಾಸವಾಗಿ ಲೀಲೆಯಿಂದ ಮಂದರ ಪರ್ವತವನ್ನು ಧರಿಸಿದ .
 ಮಹಾಭಾರತತಾತ್ಪರ್ಯನಿರ್ಣಯ 3-44

ರುಕ್ಮೀಣೀಶವಿಜಯಮಹಾಕಾವ್ಯದಲ್ಲಿ ಕೂರ್ಮರೂಪ ವರ್ಣನೆ

ಭುಜಗದಿಕ್ಕರಿಭಾರಜಶೋಕಹೃತ್ |
ಸುರಮನೋರಥಪೂರಣಕಾರಣಃ ||
ಸ್ವಮತವಾರಿನಿಧೇರ್ಮಥನೇ ಪಟುಃ |
ಗಿರಿಧರೋಽರಿಧರೋಽಯಮಿಹಾಗತಃ ||
     
ಆದಿಶೇಷನಿಗೂ ದಿಗ್ಗಜಗಳಿಗೂ ಭೂಮಿ ಬೆಟ್ಟ ಮೊದಲಾದವುಗಳ ಭಾರದಿಂದ ಉಂಟಾದ ಶೋಕವನ್ನು ಪರಿಹರಿಸುವ, ದೇವತೆಗಳ ಅಮೃತಪಾನದ ಬಯಕೆಯನ್ನು ಪೂರೈಸಲು ಕಾರಣನಾದ, ತನಗೆ ಸಮ್ಮತವಾದ ಕ್ಷೀರಸಮುದ್ರಮಥನದಲ್ಲಿ ಸಮರ್ಥನಾದ, ಮಂದರ ಪರ್ವತವನ್ನು ಧರಿಸಿದ, ಚಕ್ರಪಾಣಿಯಾದ ಈ ಕೂರ್ಮರೂಪಿಯಾದ ಶ್ರೀಹರಿಯು ಈ ಕ್ಷೀರಸಮುದ್ರಪ್ರದೇಶಕ್ಕೆ ಬಂದವನಾದನು *

   ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ಕೂರ್ಮವತಾರ ವರ್ಣನೆ

ಬಿಭರ್ತ್ಯಂಡಂ ಹರಿಃ ಕೂರ್ಮಸ್ತ್ವಂಡೇ ಚಾಪ್ಯುದಕಂ ಮಹತ್ |
ಉದಕೇ ಕೂರ್ಮರೂಪಸ್ಯ ವಾಯುಃ ಪುಚ್ಛಂ ಸಮಾಶ್ರಿತಃ ||
ವಾಯೋಃ ಪುಚ್ಛಂ ಸಮಾಶ್ರಿತ್ಯ ಶೇಷಸ್ತು ಪೃಥ್ವೀಮಿಮಾಂ |

ಕೂರ್ಮರೂಪಿಯಾದ ಹರಿಯು ಬ್ರಹ್ಮಾಂಡವನ್ನು ಧರಿಸಿದ್ದಾನೆ ಬ್ರಹ್ಮಾಂಡದಲ್ಲಿ ಬಹಳ ಆಗಾಧವಾದ ನೀರಿದೆ . ಈ ಅಂಡೋದಕದಲ್ಲಿ ಕೂರ್ಮರೂಪಿಯಾಗಿ ಹರಿ ಇರುತ್ತಾನೆ . ಈ ಕೂರ್ಮರೂಪಿ ಹರಿಯ ಪುಚ್ಛವನ್ನು ವಾಯುಕೂರ್ಮನು ಆಶ್ರಯಿಸಿದ್ದಾನೆ .ವಾಯುಕೂರ್ಮದ ಪುಚ್ಛವನ್ನು ಧರಿಸಿ ಶೇಷನು ಬ್ರಹ್ಮಾಂಡದಲ್ಲಿ ಧರಿಸಿದ್ದಾನೆ ಬ್ರಹ್ಮಾಂಡದಲ್ಲಿ ಎಲ್ಲ ಜಗತ್ತನ್ನು ಧರಿಸಿದ್ದಾನೆ ಎಂದು ಜಗದ್ಗುರು ಶ್ರೀಮಧ್ವಾಚಾರ್ಯರು ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ಕೂರ್ಮಜಯಂತಿಯ ಶುಭಾಶಯಗಳು

            || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ... 

 ‌(received in WhatsApp

**********

.[6:48 PM, 5/7/2020] Prasad Karpara Group: ಶ್ರೀ ವಿಠ್ಠಲ ಪ್ರಸೀದ 
ಇಂದು ವೈಶಾಖ ಪೌರ್ಣಿಮೆ .  ಎರಡು ರೀತಿಯಿಂದ ಪವಿತ್ರವಾದ ದಿನ .
ಶ್ರೀಹರಿ ದಶಾವತಾರದ ಎರಡನೇ ಅವತಾರ ಕೂರ್ಮ ರೂಪನಾಗಿದ್ದು .
ದೇವದಾನವರು  ಕ್ಷೀರ ಸಾಗರ ಕಡೆಯುವಾಗ 
ಮಂದರಪರ್ವತವನ್ನು ಶ್ರೀಹರಿ ತನ್ನ ಬೆನ್ನಮೇಲೆ ಧರಿಸಿದ . ಹರನ ವರದಿಂದ ಯಾರು ಅದನ್ನು ಅಲ್ಲಾಡಿಸಲು ಅಸಾಧ್ಯವಾಗಿದ್ದು ಕಾರಣ ಅದು  ಬಂಗಾರದ ಪರ್ವತ . ಯಾರೂ ದುರಾಸೆಯಿಂದ 
ತೆಗೆಯಬಾರದೆಂದು ರುದ್ರವರ ಅದಕ್ಕೆ .
ಆದರೆ ಶ್ರೀ ಮದಾಚಾರ್ಯರು  ಬ್ರಹ್ಮಾಂಡವನ್ನೇ ಪೊತ್ತ ಶ್ರೀಹರಿಗೆ ಅದ್ಯಾವಲೆಕ್ಕ ಎನ್ನುತ್ತಾರೆ .
ಹರನ ಆಧಾರ್ಯತ್ವವನ್ನು ಮೀರುವುದು ಭಗವಂತನಿಂದ ಮಾತ್ರಸಾಧ್ಯ. ಅಂತ         ಸಪ್ತಕುಲ ಪರ್ವತದಲ್ಲಿ  ಒಂದಾದ ಮೇರು ಪರ್ವತವನ್ನು ಹೊತ್ತ ಶ್ರೀಹರಿ ಕೂರ್ಮಾವತಾರಮಾಡಿದ   ಮಹಾದಿನ ಇಂದು.
ಶ್ರೀಮನ್ನಾರಾಯಣಾಭಿನ್ನ ಕೂರ್ಮಾವತಾರಿಯ ಜಯಂತಿ ಇಂದು  ಇಂತ ಸರ್ವೋತ್ತಮಗೆ ನಮೋ ನಮಃ 
ಮತ್ತೊಂದು  ಶ್ರೀಮಧ್ಜಯತೀರ್ಥರ  ಪ್ರಶಿಷ್ಯರಾದ
ಶ್ರೀ ರಾಜೇಂದ್ರ ತೀರ್ಥರ ಪುಣ್ಯದಿನ ಇಂದು.
ಶ್ರೀಮದಾಚಾರ್ಯರು ದ್ವೈತಮತ ವಿಸ್ತರಿಸುವಾಗ 
ನಾಲ್ಕು ಜನ ಶಿಷ್ಯರಿಗೆ ಆಶ್ರಮನೀಡಿದರು .
ಅವರು ಶ್ರೀಪದ್ಮನಾಭತೀರ್ಥರು ,ಶ್ರೀ ನರಹರಿ ತೀರ್ಥರು , ಶ್ರೀ ಮಾಧವತೀರ್ಥರು , ಹಾಗು ಶ್ರೀಅಕ್ಷೋಭ್ಯ ತೀರ್ಥರು .
ಅಕ್ಷೋಭ್ಯ ತೀರ್ಥರ ಶಿಷ್ಯರು ಶ್ರೀ ಜಯತೀರ್ಥರು 
ಶ್ರೀ ಜಯತೀರ್ಥರು ಶ್ರೀ ವಿದ್ಯಾಧಿರಾಜರಿಗೆ 
ಆಶ್ರಮ ನೀಡಿದರು . ತಮ್ಮ ನಂತರ ಸರ್ವಜ್ಞ ಪೀಠಕ್ಕೆ ಶ್ರೀವಿದ್ಯಾಧಿರಾಜರು ಇಬ್ಬರು ಯುವಕರನ್ನು ಆರಿಸಿದರು . ಅವರೇ  ರಾಜದೇವ 
ಹಾಗು ವಾಸುದೇವಶಾಸ್ತ್ರಿ . ಇಬ್ಬರೂ ಮೇಧಾವಿಗಳು ಶ್ರೀವಿದ್ಯಾಧಿರಾಜರು ರಾಜದೇವನಿಗೆ  ೧೩೮೫ ರಲ್ಲಿ ಆಶ್ರಮಕೊಟ್ಟು ಶ್ರೀರಾಜೇಂದ್ರ ತೀರ್ಥರೆಂದು ಆಶ್ರಮನಾಮ ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿಸಿದ್ದರು .
ಶ್ರೀ ರಾಜೇಂದ್ರ ತೀರ್ಥರು  ಉತ್ತರ ಭಾರತ ಯಾತ್ರೆ ಕೈಕೊಂಡು ಮಧ್ವಮತದ ರಾಯಭಾರಿಯಾಗಿ  ಪ್ರಚಾರಕ್ಕೆ ತೆರಳಿದ್ದರು .
ತೀರಾ ವೃದ್ಧರಾಗಿದ್ದ ಶ್ರೀ ವಿದ್ಯಾಧಿರಾಜರು ತೀವ್ರ ಅಸ್ವಸ್ಥರಾದರೆಂದು ತಿಳಿದು ಯರಗೋಳದ ಶ್ರೀಮಠಕ್ಕೆ ಹಿಂದಿರುಗಿದರು .  ಅವರು ಬರುವಷ್ಟರಲ್ಲೇ  ವಾಸು ದೇವಶಾಸ್ತ್ರಿಗಳಿಗೆ  ಕವೀಂದ್ರರೆಂದು ಆಶ್ರಮನಾಮ ನೀಡಿ ಸರ್ವಜ್ಞಪೀಠ ಅಲಂಕರಿಸಿದ್ದರು . ಗುರುಗಳು ಯರಗೋಳದಲ್ಲಿ ಬೃಂದಾವನಸ್ಥರಾಗಿದ್ದರು.
ಶ್ರೀ ರಾಜೇಂದ್ರರು ಗುರುಗಳು ತಮಗೆ ನೀಡಿದ್ದ 
ಆಚಾರ್ಯಕರಾರ್ಚಿತ ಪ್ರತಿಮೆಗೊಳೊಂದಿಗೆ ತಮ್ಮ ಉತ್ತರಭಾರತ ಯಾತ್ರೆಯನ್ನು ಮುಂದುವರೆಸಿದರು . ಶ್ರೀಮಠ ಕವಲೊಡೆದು ರಾಜೇಂದ್ರರ ಮಠ ಕವೀಂದ್ರರಮಠ ಎಂದಾಯಿತು .    
ಶ್ರೀ ರಾಜೇಂದ್ರ ತೀರ್ಥರ ಮಧ್ವಮತ ಪ್ರಚಾರವನ್ನು ಪಂಡಿತವರ್ಗ ಮುಕ್ತಕಂಠದಿಂದ  ಹೊಗಳುತ್ತದೆ . “ವಿಶ್ಣೊ: ಸರ್ವೋತ್ತಮತ್ವ೦
ಸರ್ವದಾ ಪ್ರತಿಪಾದಯಾ “ ಎಂಬ ಆಚಾರ್ಯವಾಖ್ಯ ಪರಿಪಾಲಿಸಿದವರು .
ಮಧ್ವಮತದ ಧಿವ್ಯ ಪತಾಕೆ ಗಗನದೆತ್ತರಕ್ಕೆ ಹಾರಿಸಿದವರು ಎನ್ನುತ್ತಾರೆ ಜ್ಞಾನಿಗಳು .
ಅಂದಿನಕಾಲಸಂಚಾರಕ್ಕೆಅನುಕೂಲಗಳಿರಲಿಲ್ಲ 
ರಾಜಕೀಯ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ .  ಅಂತ ಸಮಯದಲ್ಲಿ 
ಆಂಧ್ರ ಮಹಾರಾಷ್ಟ್ರ ಗುಜರಾತ್ ಬಂಗಾಳ ದೇಶದಲ್ಲಿ ಅದ್ವೈತ ಖಂಡನೆ ಮಾಡೇ ಮಧ್ವಮತ
ದ್ವಜಪತಾಕೆ ಹಾರಿಸಿದವರು.
ಅವರ ಮುಖ್ಯ ಮಧ್ವ ಮತಪ್ರಚಾರ ಎಂದರೆ ಬಂಗಾಳದಲ್ಲಿ ವಿಷ್ಣು ಭಕ್ತಿಯನ್ನು ಹರಡಿ  ಚೈತನ್ಯ ಪಂಥಕ್ಕೆ ನಾಂದಿಹಾಡಿದ್ದು .
ಅವರ ಪ್ರಮುಖ ವಿದ್ಯಾಶಿಷ್ಯರು , ಶ್ರೀಶ್ರೀಪಾದರಾಜರ  ವಿದ್ಯಾಗುರುಗಳಾದ ಶ್ರೀವಿಭುದೇಂದ್ರ ತೀರ್ಥರು,ಹಾಗುವಾದರತ್ನವಳಿ. ಕಾರರಾದ ಶ್ರೀವಿಷ್ಣುದಾಸಾಚಾರ್ಯರು. 
ಈ ಶಿಷ್ಯದ್ವಯರನ್ನು ನೋಡಿದರೆ ಶ್ರೀರಾಜೇಂದ್ರ ತೀರ್ಥರ ವ್ಯಕ್ತಿತ್ವದ ಪರಿಚಯವಾಗುತ್ತದೆ ಎನ್ನುತ್ತಾರೆ ಪಂಡಿತವರ್ಗ. ಅಷ್ಟೇಅಲ್ಲ ಮಧ್ವ ಮತ ಪ್ರಚಾರದ ಹೊರತು ಪೀಠಾಧಿಕಾರದಲ್ಲಿ ಅನಾಸಕ್ತರಾಗಿದ್ದರು .  ಉತ್ತರಭಾರತದಲ್ಲಿ ಬಹಳಕಾಲ ಇದ್ದು ಮತಪ್ರಚಾರದಲ್ಲಿ ನಿರತರಾದವರು . ಇವರ ಆಶ್ರಮ ಶಿಷ್ಯರು ಶ್ರೀಜಯದ್ವಜತೀರ್ಥರು .
ಮುಂದೆ ಈ ಪರಂಪರೆಯಲ್ಲಿ ಶ್ರೀ ವ್ಯಾಸರಾಜರು ಬಂದು ರಾಜೇಂದ್ರತೀರ್ಥರ ಮಠ ವ್ಯಾಸರಾಜರ ಮಠ ಎಂದಾಯಿತು.
ಶ್ರೀಗಳು ಯರಗೋಳದಲ್ಲಿ ಬೃಂದಾವನಸ್ಥರಾದರು .
ಅವರ ಚರಮ ಶ್ಲೋಕ ಹೀಗಿದೆ 
“ ವಿಭುದೇಂದ್ರ ಮುಖಾನ್ ಶಿಷ್ಯಾದಿನ್
ನವಕೃತ್ವಾ : ಸುಧಾo  ಸುಧಿ:
ಯೋsಪಾಠಯತ್ ಸರಾಜೇಂದ್ರ ತೀರ್ಥೋ 
ಭೂಯಾದಭಿಷ್ಠದಃ 
ಮೂಲ ಗೋಪಾಲಕೃಷ್ಣ  ಪಾದಪದ್ಮಾರಾಧಕರಾದ  ಶ್ರೀ ರಾಜೇಂದ್ರ ತೀರ್ಥರು ನಮಗೆಲ್ಲ  ಜ್ಞಾನ ಭಕ್ತಿ ನೀಡಲಿ .
ನಾಹಂ ಕರ್ತಾ ಹರಿಃ ಕರ್ತಾ
   ||ಶ್ರೀಕೃಷ್ಣಾರ್ಪಣಮಸ್ತು ||

 ‌(received in WhatsApp)

***

[6:48 PM, 5/7/2020] Prasad Karpara Group: ಇಂದು ವೈಶಾಖ ಮಾಸದ ಶುದ್ದ ಹುಣ್ಣಿಮೆ

ಶ್ರೀ ಕೂರ್ಮ ಅವತಾರ ಜಯಂತಿ

ಕೂರ್ಮಾವತಾರದಲ್ಲಿ

ಶ್ರೀ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿದನು.
ಅವತಾರವು ಸತ್ಯ ಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ.

ದೇವತೆಗಳು ಹಾಗು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವ ಸಂದರ್ಭದಲ್ಲಿ ಮಂದಾರ ಪರ್ವತವನ್ನು ಕಡುಗೋಲಾಗಿ ಉಪಯೋಗಿಸುತ್ತಾರೆ. ಆದರೆ, ಮಂದಾರ ಪರ್ವತವು ಬಹಳ ಭಾರವಿದುದ್ದರಿಂದ ಸಮುದ್ರದಲ್ಲಿ ಕುಸಿಯಲು ಆರಂಭಿಸುತ್ತದೆ. ಆಗ ಶ್ರೀಮಾನ್ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದಾರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿಕೊಳ್ಳುತ್ತಾನೆ.

ಕೂರ್ಮಾವತಾರದಲ್ಲಿ ಆವಿರ್ಭವಗೊಂಡ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಶಿಸಿದ ಮಹಾಮಂತ್ರಗಳೇ 'ಕೂರ್ಮ ಪುರಾಣ'. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದರು.

ಕೂರ್ಮ ಪುರಾಣದಲ್ಲೇನಿದೆ?

ಕೂರ್ಮ ಪುರಾಣ ನಾಲ್ಕು ಕಾಂಡಗಳನ್ನು ಹೊಂದಿದೆ. ಅವು ಕ್ರಮವಾಗಿ ಬ್ರಹ್ಮಸಂಹಿತ, ಭಗತ್ಸಂಹಿತ, ಗೌರಿ ಸಂಹಿತ ಮತ್ತು ವೈಷ್ಣವಿ ಸಂಹಿತಗಳೆಂಬುದು.

ಬ್ರಹ್ಮಸಂಹಿತದಲ್ಲಿ ಕೂರ್ಮಾವತಾರದ ಉದ್ದೇಶ ಹಾಗೂ ಧರ್ಮವೆಂದರೆ ಏನು ಎಂಬ ಬಗ್ಗೆ ಸುದೀರ್ಘ ವಿವರಣೆ ಇದೆ.

ಧರ್ಮ ಎಂದರೇನು?

ಮನುಷ್ಯನಾಗಿ ಹುಟ್ಟಿದವನು ಅದನ್ನು ಹೇಗೆ ಆಚರಿಸಬೇಕು ಎಂಬ ಸವಿಸ್ತಾರವಾದ ವಿವರಣೆ ಇದೆ. ಇದರಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಯುಗಧರ್ಮಗಳೇನು, ಅವುಗಳ ಅತಿಶಯಗಳು ಏನು ಎಂಬ ಬಗ್ಗೆಯೂ, ಈ ಯುಗಗಳ ಮಹತ್ವದ ಬಗ್ಗೆಯೂ ಉಲ್ಲೇಖವಿದೆ.

ಯಾಗ, ಯಜ್ಞ ಆಚರಿಸಲು ಯಾರು ಅರ್ಹರು, ಹೇಗೆ ಆಚರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಮನುಷ್ಯ ಮಾತ್ರನಾದವನು ತ್ರಿಗುಣಗಳಲ್ಲಿ ಶ್ರೇಷ್ಠವಾದ ಸಾತ್ವಿಕ ಮಾರ್ಗದಲ್ಲಿ ಜೀವಿಸಿ, ಸನ್ಮಾರ್ಗ, ಧರ್ಮ ಮಾರ್ಗಗಳಲ್ಲಿ ಸಾಗಿ ಅಧ್ಯಾತ್ಮಿಕ ಉನ್ನತಿ ಪಡೆದು ಭಗವಂತನ ಸಾಕ್ಷಾತ್ಕಾರವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಸುದೀರ್ಘ ವಿವರಣೆ .
 ‌(received in WhatsApp)
****

" ದಿನಾಂಕ : 07.05.2020 ಗುರುವಾರ ಶ್ರೀ ಕೂರ್ಮ ಜಯಂತೀ "
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು....
ಆತ್ಮಾನೈವ ಕಮಠೇನ ವಿತನ್ವನ್
ಮಂದರೇಣ ಚ ಭವಾನರಣೀ ದ್ವೇ ।
ಮಂಥತೋsಕೃತ ಹಲಾಹಲವಹ್ನಿಂ
ಹೋತುಮಿಂದ್ರರಿಪುವೃಂದಹವೀಂಷಿ ।। 3 ।।
ಸ್ವರೂಪಭೂತ ಕೂರ್ಮ ರೂಪ ಮತ್ತು ಮಂದರ ಪರ್ವತವೆಂಬ ಎರಡು ಅಗ್ನಿ ಸಾಧನ ದ್ರವ್ಯಗಳನ್ನುಂಟು ಮಾಡಿ ಇಂದ್ರ ಶತ್ರು ಸಮೂಹವೆಂಬ ಹವಿಸ್ಸುಗಳನ್ನು ಹೋಮ ಮಾಡಲು ಸಮುದ್ರ ಮಥನದ ಮೂಲಕ ಕಾಲಕೂಟವೆಂಬ ಅಗ್ನಿಯನ್ನು ಸೃಜಿಸಿದ ಕೂರ್ಮ ರೂಪಿಯಾದ ಶ್ರೀ ಮೂಲರಾಮಚಂದ್ರಾ! 
ನಿನ್ನ ಲೀಲಾ ವಿನೋದವನ್ನು ಯಾರು ತಾನೆ ಕೊಂಡಾಡದಿರುವರು!!
" ಶ್ರೀ ರಾಯರ ವಿದ್ಯಾ ಶಿಷ್ಯರೂ ಆದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಾತಲ್ಲಿ.... 
"ಯಃ ಕೂರ್ಮಾತ್ಮಾವತೀರ್ಣಃ
ಶಿವವರವಚಸಾssಧಾರ್ಯಮನ್ನೈರ್ಗಿರೀಂದ್ರಂ
ಪೃಷ್ಟೇನೋದ್ದ್ಹೃತ್ಯಸಮ್ಯಗ್
ಮಥನಸಮಯತಃ ಕ್ಷೀರಧೌ ಮಂದರಾಖ್ಯಮ್ ।
ತತ್ರೋಪನ್ನಾಮೃತಾದೀನ್ ಸುರರಿಪುವಧತಃ
ಪ್ರಾಪಯನ್ ಸರ್ವದೇವಾನ್
ದೇವೋ ದದ್ಯಾದಭೀಷ್ಟಂ ಮಮ
ಮಹಿತಗುಣೈಃ ಪೂರ್ಣ ಕಾಮಃ ಸ ಈಶಃ ।।
" ಶ್ರೀ ನಾರದಾಂಶ ಶ್ರೀ ಪುರಂದರದಾಸರ ವಾಣಿಯಲ್ಲಿ.... "
ಗಿರಿಯ ಕೆಳಗೆ ಹೊಕ್ಕು ನೀನು ।
ಅರಿಯರೆಂದು ಅಡಗಿದ್ದೆಲ್ಲೊ ।
ಹಿರಿಯ ಕೂರ್ಮನಾಗಿದ್ಯೋ ।
ಯೇ ರಂಗಧಾಮಾ ।।
ಸುರರಿಗಾಗಿ । ಮಂದರ ।
ಗಿರಿಯ ಬೆನ್ನಲಿ ಪೊತ್ತೆ ।
ಅರಿಯರೇನೇ ಜಗವೆಲ್ಲ 
ಯಲೆ ಸತ್ಯಭಾಮೆ ।।
BY ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
***

kurma jayanti
vaishakha hunnime
🌷ಕೂರ್ಮಾವತಾರ ಚಿಂತನ 🌷
  ( ಕೂರ್ಮ ಜಯಂತಿ ವಿಶೇಸ ಸಂಚಿಕೆ )

ಚಾಕ್ಷುಷ ಮನ್ವಂತರದಲ್ಲಿ ಪರಮಾತ್ಮನು ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಅಜಿತನಾಮಕನಾಗಿ ಅವತರಿಸಿದನು ಅವನೇ ಸಮುದ್ರಮಥನ ಕಾರ್ಯ ಮಾಡಿ ದೇವತೆಗಳಿಗೆ ಅಮೃತವನ್ನು ಕೊಟ್ಟನು .

ಆಗ ಪರಿಕ್ಷಿದ್ರಾಜನು ಈ ಸಮುದ್ರಮಥನ ಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಪ್ರಾರ್ಥಿಸಲು ಶ್ರೀಶುಕಾಚಾರ್ಯರು ಹೇಳಲು ಪ್ರಾರಂಭಿಸಿದರು .

ದುರ್ವಾಸ ಋಷಿಗಳ ಶಾಪದಿಂಧ ಇಂದ್ರದೇವರು ಸಂಪತ್ತಿನಿಂದ ರಹಿತರಾಗಿ  ಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಲು ಬ್ರಹ್ಮದೇವರು ಭಗವಂತನಿಗೆ ಶರಣು ಹೋಗಲು ತಿಳಿಸಿದರು .ಆಪ್ರಕಾರ ಎಲ್ಲ ದೇವತೆಗಳು ಭಗವಂತನ ವ್ಯಕ್ತಸ್ಥಾನವಾದ ಶ್ವೇತದ್ವೀಪಕ್ಕೆ ಹೋಗಿ ಸ್ತೋತ್ರಮಾಡಿದರು  ದೇವತೆಗಳ ಸ್ತೋತ್ರದಿಂದ  ಪ್ರಸನ್ನನಾದ ಭಗವಂತನು ಅವರಿಗೆ ಅಭಯ ನೀಡಿ (ಅರಯೋsಪಿ ಹಿ ಸಂಧೇಯಾ ಸತಿ ಕಾರ್ಯಾರ್ಥಗೌರವೇ) ದೈತ್ಯರ ಜೋತೆ ಸಂಧಾನ ಮಾಡಿಕೊಂಡು ಸಮುದ್ರಮಥನಮಾಡಲು ತಿಳಿಸಿದನು .
ಮಂದರ ಪರ್ವತವನ್ನು ಕಡೆಗೋಲನ್ನಾಗಿ ವಾಸುಕಿಯನ್ನು ‌ಹಗ್ಗವನ್ನಾಗಿಮಾಡಿಕೊಂಡರು 

ವರಾದ್ ಗೀರಿಶಸ್ಯ ಪರೈರಚಾಲ್ಯಮ್ |

ರುದ್ರದೇವರ ವರ ಮಂದರ ಪರ್ವತಕಿತ್ತು ಅದನ್ನು ಯಾರು ಅಲುಗಾಡಿಸಲು ಸಾಧ್ಯವಿರಲಿಲ್ಲ  ಎಂಬ ವಿಶೇಷಾಂಶವನ್ನುಮಹಾಭಾರತ ತಾತ್ಪರ್ಯನಿರ್ಣಯದಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ

 ಮೊದಲಿಗೆ ದೇವತೆಗಳು ಸನ್ನದ್ಧರಾಗಿ ಅಮೃತಕಾಗಿ  ಅಮೃತಕ್ಕಾಗಿ ಮಥನಕ್ಕೆ ಹೊರಟರು ಶ್ರೀಹರಿ ವಾಸುಕಿಯ ಹೆಡೆಯನ್ನು ಹಿಡಿದುಕೊಂಡ ಅದರಿಂದ ದೇವತೆಗಳೆಲ್ಲರು ಹೆಡೆಯ ಭಾಗವನ್ನು ಹಿಡಿದು ನಿಂತರು ಆಗ ದೈತ್ಯರು ನಾವು ಅಮಂಗಲಕರವಾದ ಹಾವಿನ ಬಾಲದ ಭಾಗವನ್ನು ನಾವು ಹಿಡಿಯಲಾರೆವು ನಾವು ವೇದಾಧ್ಯಯನ ಶಾಸ್ತ್ರ ಸಂಪನ್ನರು ಒಳ್ಳೆಯಕುಲದಲ್ಲಿ ಹುಟ್ಟಿದವರು ಎನ್ನುತ್ತ ಶ್ರೀಹರಿಯು ಹೆಡೆಯಭಾಗವನ್ನು ಹಿಡಿದುದನ್ನು ಒಪ್ಪಲಿಲ್ಲ ಅವರು ಸುಮ್ಮನೆ ನಿಂತು ದನ್ನು ನೋಡಿ ಶ್ರೀಹರಿ ನಸುನಗುತ್ತ ಹೆಡೆಯ ಭಾಗವನ್ನು ಬಿಟ್ಟು ದೇವತೆಗಳೊಂದಿಗೆ  ಬಾಲದ ಭಾಗವನ್ನು ಹಿಡಿದ . ಹೀಗೆ ಕಶ್ಯಪರ ಸಂತತಿಗಳಾದ ದೇವದಾನವರು ಹಾವಿನ ಬಾಲ , ಹೆಡೆಭಾಗ ಸ್ಥಾನಗಳನ್ನು ವಿಭಾಗ ಮಾಡಿಕೊಂಡರು.  ಸಮುದ್ರವನ್ನು ಕಡೆಯುತ್ತಿರಲು ಬೆಟ್ಟ ಆಧಾರವಿಲ್ಲದೆ ನೀರಲ್ಲಿ ಮುಳುಗಲು ತೊಡಗಿತು . ಬಲಿಷ್ಠರಾದ ದೇವ ದಾನವರು ಬೆಟ್ಟವನ್ನು ಮುಳುಗದಂತೆ ಹಿಡಿದಿದ್ದರೂ ಭಾರ ಹೆಚ್ಚಿದ್ದರಿಂದ ಅದು ಮುಳುಗತೊಡಗಿತು ಅತಿ ಬಲಿಷ್ಠವಾದ  ದೈವದಿಂದ ತಮ್ಮ ಪೌರುಷ ಕೆಲಸಕ್ಕೆ ಭಾರದಂತಾಗಲೂ ಅವರು ಮನಸ್ಸಿನಲ್ಲಿ ತುಂಬಾ ಹತಾಶರಾದರು .

ಕೃತ್ವಾ ವಪುಃ ಕಾಚ್ಛಪಮದ್ಭುತಂ ಮಹತ್
ಪ್ರವಿಶ್ಯತೋಯಂ ಗಿರಿಮುಜ್ಜಹಾರ ||

 ಆಗ ಪರಮಾತ್ಮನು ಅದ್ಭುತವಾದ ಕೂರ್ಮರೂಪವನ್ನು ಧರಿಸಿ ಮಹಾಜಲವನ್ನು ಹೊಕ್ಕು ಬೆಟ್ಟವನ್ನು ಬೆನ್ನಮೇಲೆ ಎತ್ತಿ ನಿಲ್ಲಿಸಿದ .

ಕೂರ್ಮಸ್ವರೂಪಕ ಮಂಧರದಾರೀನ್  ಲೋಕವಿಧಾರಕ ದೇವವರೇಣ್ಯ ||
-ದ್ವಾದಶಸ್ತೋತ್ರ

 ಮಂದರ ಪರ್ವತ ಮೇಲೆ ಎದ್ದು ಬಂದುದನ್ನು ನೋಡಿ ದೇವದಾನವರು ಪುನಃ ಮಥನಮಾಡಲು ಎದ್ದುಬಂದರು ಇನ್ನೊಂದು ದೊಡ್ಡ ದ್ವೀಪದಂತಿರುವ ಕೂರ್ಮ ಲಕ್ಷಯೋಜನ ವಿಸ್ತಾರವಾದ ಬೆನ್ನಿನಿಂದ ಬೆಟ್ಟವನ್ನು ಹೊತ್ತುಕೊಂಡ  
ಮಹಾ ಸುರಾಸುರರ ಭುಜಬಲದಿಂದ ಚಲಿಸುತ್ತ ತನ್ನ ಬೆನ್ನ ಮೇಲೆ ತಿರುಗುತಿದ್ದ ಆ ಬೆಟ್ಟವನ್ನು ಹೊತ್ತಾಗ ಆದಿಕೂರ್ಮ ರೂಪಿಯಾದ ಅಚಿಂತ್ಯ ಶಕ್ತಿ ಉಳ್ಳ ಶ್ರೀಹರಿ ಬೆಟ್ಟದಚಲನೆಯನ್ನು ಬೆನ್ನಿನ ನವೆಹೋಗಲಾಡಿಸುವ ಕೆರೆತದಂತೆ ಅನುಭವಿಸಿದ .

ಶ್ರೀಹರಿ ಅಸುರರಲ್ಲಿ ಅದರ ಬಲವೀರ್ಯಗಳನ್ನು ಫ್ರೇರಿಸಲು ಅಸುರರೂಪದಿಂದ ಅವಿಷ್ಟನಾದ 
.ದೇವ ಸಮೂಹಗಳಲ್ಲಿ ದೇವರೂಪದಿಂದ ಅವಿಷ್ಟನಾದ .
ವಾಸುಕಿಯಲ್ಲೂ ಸರ್ಪರೂಪದಿಂದ ಅವಿಷ್ಟನಾದ . ಬೆಟ್ಟ ಮೇಲಕ್ಕೆ ಹಾರದಂತೆ ಸಹಸ್ರಬಾಹುವಾಗಿ ಇನ್ನೊಂದು ಬೆಟ್ಟದಂತೆ  ನಿಂತು ಕೈಯಿಂದ ಬೆಟ್ಟವನ್ನು ಒತ್ತಿಹಿಡಿದುಕೋಂಡ ಬ್ರಹ್ಮರುದ್ರಇಂದ್ರ ಮುಂತಾದವರು ಅವನನ್ನು ಕೊಂಡಾಡಿದರು ಹೂಮಳೆಗರೆದರು .
ಶ್ರೀಮದ್ ಭಾಗವತ ಪುರಾಣದ ಅಷ್ಟಮ ಸ್ಕಂಧದಲ್ಲಿ  ಕೂರ್ಮಾವತಾರದ ಮತ್ತು ಸಮುದ್ರ ಮಥನದ ವರ್ಣನೆ ವಿಸ್ತಾರವಾಗಿ ನಿರೂಪಿತವಾಗಿದೆ .

ಕ್ಷೀರೋದಧಾವಮರದಾನವಯೂಥಪಾನಾ
ಮುನ್ಮಘ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪ ರವಿದದಾರ ಗೋತ್ರಂ
ನಿದ್ರೇಕ್ಷಣೋದ್ರಿಪರಿವರ್ತಕಷಾಣಕಂಡೂಃ

ದೇವಾಸುರರು ಸೇರಿ ಅಮೃತಪ್ರಾಪ್ತಿಗಾಗಿ ಕ್ಷೀರಸಮುದ್ರಮಥನ ನಡೆಸುತ್ತಿದ್ದಾಗ ಮಃಳುಗುತ್ತಿದ್ದ ಮಂಧರ ಪರ್ವತವನ್ನು ಹರಿ ಕೂರ್ಮರೂಪದಿಂದ ಬೆನ್ನ ಮೇಲೆ ಹೊತ್ತು ಬೆಟ್ಟ ಬೆನ್ನ ಮೇಲೆ ತಿರುಗಿದಾಗ. ಬೆನ್ನ ನವೆ ಕೆರೆದಂತಾಗಿ ನಿದ್ಧೆಯಿಂದ ಅವನ ಅರ್ಧ ಮುಚ್ಚಿಕೊಂಡವು ಹೊರತು ಅವನಿಗೆನೂ ಶ್ರಮವಾಗಲಿಲ್ಲ .
-ಶ್ರೀಮದ್ಭಾಗವತ ಪುರಾಣ 2-7-13

ಆದಿತ್ಯಪುರಾಣೋಕ್ತ ವೇಂಕಟೇಶಮಹಾತ್ಮೆಯಲ್ಲಿ ಕೂರ್ಮಾವತಾರ ವರ್ಣನೆ

ಮಹಾಗಾಧ ಜಲಾಧಾರಂ
ಕಚ್ಛಪಂ ಮಂದರೋದ್ಧರಮ್ |
ಸುಂದರಾಂಗಂ ಚ ಗೋವಿಂದ
ಶ್ರೀನಿವಾಸಂ ಭಜೇsನಿಶಮ್ ||

ಕೂರ್ಮರೂಪದಿಂದ ಬ್ರಹ್ಮಾಂಡದ ಜಲಾವರಣದ ಆಧಾರನು ಅಮೃತ ಮಥನಕ್ಕಾಗಿ ಕೂರ್ಮರೂಪನಾದರೂ ಸುಂದರಾಂಗನು ಮಂದರ ಹೊತ್ತರು ನಿರ್ವೀಕಾರನಾಗಿ ಕಾಂತಿಯುಕ್ತನಾದವನು ವೇದವೇದ್ಯನು ಆದ ಶ್ರೀನಿವಾಸನನ್ನು ಸರ್ವದಾ ಸೇವಿಸುವೆನು .
-ಆದಿತ್ಯಪುರಾಣೋಕ್ತ ವೇಂಕಟೇಶಮಹಾತ್ಮೆ 3-19

 ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಕೂರ್ಮಾವತಾರ ವರ್ಣನೆ

 ಅಥಾತಿಭಾರದವಿಶತ್ ಸುಕಂಚನೋ ಗಿರಿಃ ಸ ಪಾತಲಮಥ ತ್ವಮೇವ |
ತಂ ಕಚ್ಛಾಪಾತ್ಮ ತ್ವಭರಃ ಸ್ವಪೃಷ್ಠೇ ಹ್ಯನನ್ಯಧಾರ್ಯಂ ಪುರುಲೀಲಯೈವ ||    

ಸಮುದ್ರ ಮಥನ ನಡೆಯುವಾಗ ಅತಿಯಾದ ಭಾರದಿಂದ ಆ ಬಂಗಾರದ ಬೆಟ್ಟ ಕೆಳಗಿಳಿದು  ಪಾತಾಲವನ್ನು ಪ್ರವೇಶಿಸಿತು  ಆಗ ನೀನು  ಬೇರೆಯವರಿಗೆ ಹೊರಲು  ಅಶಕ್ಯವಾದ ಆ ಬೆಟ್ಟವನ್ನು  ಅನಾಯಾಸದಿಂದ ಕೂರ್ಮರೂಪನಾಗಿ ಮಹಾಲೀಲೆಯಿಂದಲೇ ಹೊತ್ತುಕೊಂಡೆ .

ಮಹಾಭಾರತತಾತ್ಪರ್ಯನಿರ್ಣಯ 10 -11

ಸುರಾಸುರಾಣಂಮದಧೀಂ ವಿಮಥ್ನತಾಂ
ದಧಾರ ಪೃಷ್ಠೇನ ಗಿರಿಂ ಸ ಮಂದರಮ್  |
ವರಪ್ರದಾನಾದಪರೈರಧಾರ್ಯಂ
ಹರಸ್ಯ ಕೂರ್ಮೋ ಬೃಹದಂಡವೋಢಾ ||

ದೇವತೆಗಳೂ ಅಸುರರೂ ಸೇರಿ ಸಮುದ್ರವವನ್ನು ಮಥಿಸುವಾಗ ಶ್ರೀಹರಿ ಕೂರ್ಮನಾಗಿ ಮಂದರಪರ್ವತವನ್ನು ಬೆನ್ನಿನಿಂದ ಧರಿಸಿದ .

ಆಪರ್ವತ ಶಿವವರದಿಂದ ಬೇರಾರಿಗೂ ಧರಿಸಲು ಅಶಕ್ಯವಾಗಿತ್ತು .ಆದರೆ ಕೂರ್ಮ ಧರಿಸಿದ .ಆ ಪರ್ವತ ರುದ್ರದೇವರ ವರದಿಂದ  ಬೇರಾರಿಗೂ ಧರಿಸಲೂ ಅಶಕ್ಯವಾಗಿತ್ತು ಆದರೆ ಕೂರ್ಮರೂಪಿ ಪರಮಾತ್ಮ ಮಹಾ ಬ್ರಹ್ಮಾಂಡವನ್ನೇ ಹೊರುವವನು .  ಅಂತಹ ಪರಮಾತ್ಮನು ಅನಾಯಾಸವಾಗಿ ಲೀಲೆಯಿಂದ ಮಂದರ ಪರ್ವತವನ್ನು ಧರಿಸಿದ .
 ಮಹಾಭಾರತತಾತ್ಪರ್ಯನಿರ್ಣಯ 3-44

ರುಕ್ಮೀಣೀಶವಿಜಯಮಹಾಕಾವ್ಯದಲ್ಲಿ ಕೂರ್ಮರೂಪ ವರ್ಣನೆ

ಭುಜಗದಿಕ್ಕರಿಭಾರಜಶೋಕಹೃತ್ |
ಸುರಮನೋರಥಪೂರಣಕಾರಣಃ ||
ಸ್ವಮತವಾರಿನಿಧೇರ್ಮಥನೇ ಪಟುಃ |
ಗಿರಿಧರೋಽರಿಧರೋಽಯಮಿಹಾಗತಃ ||
     
ಆದಿಶೇಷನಿಗೂ ದಿಗ್ಗಜಗಳಿಗೂ ಭೂಮಿ ಬೆಟ್ಟ ಮೊದಲಾದವುಗಳ ಭಾರದಿಂದ ಉಂಟಾದ ಶೋಕವನ್ನು ಪರಿಹರಿಸುವ, ದೇವತೆಗಳ ಅಮೃತಪಾನದ ಬಯಕೆಯನ್ನು ಪೂರೈಸಲು ಕಾರಣನಾದ, ತನಗೆ ಸಮ್ಮತವಾದ ಕ್ಷೀರಸಮುದ್ರಮಥನದಲ್ಲಿ ಸಮರ್ಥನಾದ, ಮಂದರ ಪರ್ವತವನ್ನು ಧರಿಸಿದ, ಚಕ್ರಪಾಣಿಯಾದ ಈ ಕೂರ್ಮರೂಪಿಯಾದ ಶ್ರೀಹರಿಯು ಈ ಕ್ಷೀರಸಮುದ್ರಪ್ರದೇಶಕ್ಕೆ ಬಂದವನಾದನು *

   ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ಕೂರ್ಮವತಾರ ವರ್ಣನೆ

ಬಿಭರ್ತ್ಯಂಡಂ ಹರಿಃ ಕೂರ್ಮಸ್ತ್ವಂಡೇ ಚಾಪ್ಯುದಕಂ ಮಹತ್ |
ಉದಕೇ ಕೂರ್ಮರೂಪಸ್ಯ ವಾಯುಃ ಪುಚ್ಛಂ ಸಮಾಶ್ರಿತಃ ||
ವಾಯೋಃ ಪುಚ್ಛಂ ಸಮಾಶ್ರಿತ್ಯ ಶೇಷಸ್ತು ಪೃಥ್ವೀಮಿಮಾಂ |

ಕೂರ್ಮರೂಪಿಯಾದ ಹರಿಯು ಬ್ರಹ್ಮಾಂಡವನ್ನು ಧರಿಸಿದ್ದಾನೆ ಬ್ರಹ್ಮಾಂಡದಲ್ಲಿ ಬಹಳ ಆಗಾಧವಾದ ನೀರಿದೆ . ಈ ಅಂಡೋದಕದಲ್ಲಿ ಕೂರ್ಮರೂಪಿಯಾಗಿ ಹರಿ ಇರುತ್ತಾನೆ . ಈ ಕೂರ್ಮರೂಪಿ ಹರಿಯ ಪುಚ್ಛವನ್ನು ವಾಯುಕೂರ್ಮನು ಆಶ್ರಯಿಸಿದ್ದಾನೆ .ವಾಯುಕೂರ್ಮದ ಪುಚ್ಛವನ್ನು ಧರಿಸಿ ಶೇಷನು ಬ್ರಹ್ಮಾಂಡದಲ್ಲಿ ಧರಿಸಿದ್ದಾನೆ ಬ್ರಹ್ಮಾಂಡದಲ್ಲಿ ಎಲ್ಲ ಜಗತ್ತನ್ನು ಧರಿಸಿದ್ದಾನೆ ಎಂದು ಜಗದ್ಗುರು ಶ್ರೀಮಧ್ವಾಚಾರ್ಯರು ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ಕೂರ್ಮಜಯಂತಿಯ ಶುಭಾಶಯಗಳು

            || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....
****
ಕೂರ್ಮಾವತಾರ :. 
by narahari sumadhwa
ಪರಮಾತ್ಮನ ಎರಡನೇ ಅವತಾರ.  ಲೋಕೋದ್ಧಾರಕ್ಕಾದ ಅವತಾರ.  

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ
ಕೂರ್ಮಾವತಾರವನ್ನು ಕುರಿತು ಹೇಳಿದ್ದು ಹೀಗೆ : 

ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ ||

 - ದೇವದಾನವರು ಮಂದರಪರ್ವತವನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಮುದ್ರ ಮಥನವನ್ನು ಮಾಡಿ, ವೃಂದಾರಕರಿಗೆ ಅಂದರೆ ದೇವತೆಗಳಿಗೆ ಅಮೃತವನ್ನು ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ.  ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನೂ ಸ್ಮರಿಸಿದ್ದಾರೆ.  

ಆಚಾರ್ಯ ಮಧ್ವರು ತಮ್ಮ ದ್ವಾದಶ ಸ್ತೋತ್ರದಲ್ಲಿ ಭಗವಂತನ ಕೂರ್ಮಾವತಾರವನ್ನು  "ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ" ಎಂದಿದ್ದಾರೆ. - ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ಮತ್ತು  ನವಮೋಧ್ಯಾಯದಲ್ಲಿ: 

ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಂ |
ಶುಭತಮ ಕಥಾಶಯ ಪರಮಸದೋದಿತ 
ಜಗದೇಕ ಕಾರಣ ರಾಮರಮಾರಮಣ || - ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದ ಮತ್ತು ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

"ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ" - ಹರಿಕಥಾಮೃತಸಾರ 
(ಕರುಣಾಸಂಧಿ ೨೮)
- ಸಮುದ್ರಮಥನ ಕಾಲದಲ್ಲಿ ಇಡೀ ಮಂಧರಪರ್ವತವನ್ನೇ ತನ್ನ ಮೇಲೆ ಹೊರಿಸಿದರೂ ಶ್ರೀಹರಿ ಸಿಟ್ಟಿಗಲಿಲ್ಲ.  ಕೂರ್ಮದ ಬೆನ್ನು ಬಹಳ ಕಠಿಣ. ಇಡೀ ಭೂಮಂಡಲವನ್ನೇ ಹೊತ್ತಿರುವ ಕೂರ್ಮ ರೂಪಕ್ಕೆ ಮಂಧರಪರ್ವತ ಭಾರವೇ.

ವಾದಿರಾಜರ ದಶಾವತಾರ ಸ್ತೋತ್ರದ ಕೂರ್ಮ ಸ್ತುತಿ  :

ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠದೃತ
ಭರ್ಮಾತ್ಮ ಮಂದರ ಗಿರೇ |
ಧರ್ಮಾವಲಂಬನ ಸುಧರ್ಮಾ ಸದಾಕಲಿತ
ಶರ್ಮಾ ಸುಧಾವಿತರಣಾತ್|
ದುರ್ಮಾನ ರಾಹುಮುಖ ದುರ್ಮಾಯಿ
ದಾನವಸುಮರ್ಮಾ ಭಿಭೇದನ ಪಟೋ|
ಧರ್ಮಾರ್ಕ ಕಾಂತಿ ವರ ವರ್ಮಾ ಭವಾನ್
ಭುವನ ನಿರ್ಮಾಣ ಧೂತ ವಿಕೃತಿಃ || ೩ ||

ನರಸಿಂಹಾವತಾರದಂತೆ ಇಲ್ಲೂ ಕೂಡ ಪರಮಾತ್ಮನು ತಂದೆತಾಯಿ ರಹಿತವಾಗಿ ಪ್ರಾಧುರ್ಭಾವಿತ ರೂಪ.     ಜಲಚರವಾದ ಆಮೆಯ ರೂಪದಲ್ಲಿ ಅವತರಿಸಿದ ಶ್ರೀಹರಿ.    ಈ ಅವತಾರವಾಗಿದ್ದು ದೇವದಾನವರು ಅಮೃತಕ್ಕಾಗಿ ಸಮುದ್ರಮಥನ ಸಂದರ್ಭದಲ್ಲಿ.

ವಾಸುಕಿಯನ್ನು ಹಗ್ಗಮಾಡಿ ಮಂಧರಪರ್ವತವನ್ನು ಕಡುಗೋಲಾಗಿಸಿ ದೈತ್ಯ ಚಕ್ರವರ್ತಿ ಬಲಿಯ ನೇತೃತ್ವದಲ್ಲಿ ದಾನವರೂ ಮತ್ತು ಇಂದ್ರನ ನೇತೃತ್ವದಲ್ಲಿ ದೇವತೆಗಳೂ ಸಮುದ್ರ ಕಡೆಯುತ್ತಾರೆ.  ಆದರೆ, ಮಂದರ ಪರ್ವತವು ಬಹಳ ಭಾರವಿದುದ್ದರಿಂದ ಸಮುದ್ರದಲ್ಲಿ ಕುಸಿಯಲು ಆರಂಭಿಸುತ್ತದೆ. ಆಗ ಶ್ರೀಮಾನ್ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದಾರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿ ಕೊಳ್ಳುತ್ತಾನೆ. ಈ ರೀತಿಯಾಗಿ ಪರಮಾತ್ಮನು ಕೂರ್ಮಾವತಾರದಲ್ಲಿ ದೇವತೆಗಳಿಗೆ ಹಾಗೂ ರಾಕ್ಷಸರಿಗೆ ಸಹಾಯ ಮಾಡುತ್ತಾನೆ.

ಯುಗ ಧರ್ಮ ಕೂರ್ಮ ಪುರಾಣ

ಸಮುದ್ರ ಮಥನದ ಕಥೆ ಗೊತ್ತೇ ಇದೆ. ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ದೇವದಾನವರು ಕ್ಷೀರ ಸಾಗರವನ್ನು ಕಡೆಯುವ ಸಂದರ್ಭದಲ್ಲಿ ಮಂದರ ಪರ್ವತವು ಸಾಗರದ ತಳಕ್ಕೆ ಕುಸಿಯಲಾರಂಭಿಸುತ್ತದೆ.

ಆಗ ಮಹಾವಿಷ್ಣುವು ಬೃಹತ್ ಕೂರ್ಮದ (ಆಮೆ) ರೂಪ ತಳೆದು ಮುಳುಗುತ್ತಿದ್ದ ಪರ್ವತವನ್ನು ಬೆನ್ನ ಮೇಲೆ ಹೊರುತ್ತಾನೆ.

ಕೂರ್ಮಾವತಾರದಲ್ಲಿ ಆವಿರ್ಭವಿಸಿದ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಶಿಸಿದ ಮಹಾಮಂತ್ರಗಳೇ ‘ಕೂರ್ಮ ಪುರಾಣ’. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದರು.

ಕೂರ್ಮ ಪುರಾಣದಲ್ಲೇನಿದೆ ?

ಕೂರ್ಮ ಪುರಾಣ ನಾಲ್ಕು ಕಾಂಡಗಳನ್ನು ಹೊಂದಿದೆ. ಅವು ಕ್ರಮವಾಗಿ ಬ್ರಹ್ಮಸಂಹಿತ, ಭಗತ್ಸಂಹಿತ, ಗೌರಿ ಸಂಹಿತ ಮತ್ತು ವೈಷ್ಣವಿ ಸಂಹಿತಗಳೆಂಬುದು. ಪ್ರಸ್ತುತ ಬ್ರಹ್ಮಸೂತ್ರ ಒಂದೇ ಲಭ್ಯವಿದ್ದು, ಇತರೆ ಸಂಹಿತೆಗಳು ನಷ್ಟವಾಗಿ ಹೋಗಿದೆ.

ಧರ್ಮ ಎಂದರೇನು ?

ಮನುಷ್ಯನಾಗಿ ಹುಟ್ಟಿದವನು ಅದನ್ನು ಹೇಗೆ ಆಚರಿಸಬೇಕು ಎಂಬ ಸವಿಸ್ತಾರವಾದ ವಿವರಣೆ ಇದೆ. ಇದರಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಯುಗಧರ್ಮಗಳೇನು, ಅವುಗಳ ಅತಿಶಯಗಳು ಏನು ಎಂಬ ಬಗ್ಗೆಯೂ, ಈ ಯುಗಗಳ ಮಹತ್ವದ ಬಗ್ಗೆಯೂ ಉಲ್ಲೇಖವಿದೆ.

ಯಾಗ, ಯಜ್ಞ ಆಚರಿಸಲು ಯಾರು ಅರ್ಹರು, ಹೇಗೆ ಆಚರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಮನುಷ್ಯ ಮಾತ್ರನಾದವನು ತ್ರಿಗುಣಗಳಲ್ಲಿ ಶ್ರೇಷ್ಠವಾದ ಸಾತ್ವಿಕ ಮಾರ್ಗದಲ್ಲಿ ಜೀವಿಸಿ, ಸನ್ಮಾರ್ಗ, ಧರ್ಮ ಮಾರ್ಗ ಗಳಲ್ಲಿ ಸಾಗಿ ಅಧ್ಯಾತ್ಮಿಕ ಉನ್ನತಿ ಪಡೆದು ಭಗವಂತನ ಸಾಕ್ಷಾತ್ಕಾರವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಸುದೀರ್ಘ ವಿವರಣೆ ಇದೆ.

ಕೂರ್ಮಾವತಾರ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕೂರ್ಮಾಯಿ ಮತ್ತು ಶ್ರೀಕೂರ್ಮಂನಲ್ಲಿದೆ ಹಾಗೂ ಕರ್ನಾಟಕದ ಗವಿರಂಗಾಪುರದಲ್ಲಿದೆ ( ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು)

ನರಹರಿ ಸುಮಧ್ವಸೇವಾ
***
ಕೂರ್ಮ ಜಯಂತಿ.ವೈಶಾಖ ಶುದ್ಧ ಪೂರ್ಣಿಮೆ 
ಲೇಖನ.ಮಧುಸೂದನ ಕಲಿಭಟ್. ಧಾರವಾಡ

ದೇವತೆಗಳು ಮತ್ತು ರಾಕ್ಷಸರು  ಅಮರರಾಗಲೆಂದು ಮೈತ್ರಿ ಬೆಳೆಸಿ ಅಮೃತಕ್ಕೋಸ್ಕರವಾಗಿ ಕ್ಷೀರಸಾಗರ ವನ್ನು ಕಡೆಯಲು ಸಿದ್ದರಾದರು.  ಇದಕ್ಕೆ ಕಡಗೋಲು ಹಗ್ಗ ಬೇಕು.  ಶ್ರೀ ಹರಿಯು ಮಂದರ ಪರ್ವತ ವನ್ನು ಕಡಗೋಲು ಮಾಡಿಕೊಂಡು, ಆದಿಶೇಷನನ್ನು ಹಗ್ಗವಾಗಿ ಮಾಡಿಕೊಂಡು ಮಥನ ಮಾಡಿರೆಂದು ಸಲಹೆ ಮಾಡಿದನು. ಶೇಷನ ಬಾಲಹಿಡಿದರೆ ತಮ್ಮ ಮರ್ಯಾದೆಗೆ ಕುಂದು ಎಂದು ದೇವತೆಗಳಿಗೆ ಬಾಲವನ್ನು ಹಿಡಿದುಕೊಳ್ಳಲು ಹೇಳಿದರು.  ದೇವತೆಗಳು ಒಪ್ಪಿದರು.  ಸಮುದ್ರ ಮಥನ ಪ್ರಾರಂಭವಾಯಿತು.  ಮಂದರ ಪರ್ವತ ಸಮುದ್ರದಲ್ಲಿ ಮುಳುಗತೊಡಗಿತು. ಆಗ ಶ್ರೀ ಹರಿಯು ""ಕೂರ್ಮನ ಅವತಾರ ""
ಮಾಡಿ ಮಂದರ ಪರ್ವತವನ್ನು ತನ್ನ ಬೆನ್ನಮೇಲೆ ಇಟ್ಟುಕೊಂಡನು.  ಇದರಿಂದ ಲೌಕಿಕವಾಗಿ ಶ್ರೀ ಹರಿಗೆ ಭಾರ ಹೊತ್ತು ಶ್ರಮವಾಯಿತು ಎಂದೂ  ಹೇಳುವರು.  ಇಲ್ಲ ಬೆನ್ನ ಮೇಲಿನ ಪರ್ವತವು ಕೂರ್ಮ ರೂಪಿಗೆ ಬೆನ್ನು ತುರಿಸಿದಂತಾಯಿತೆಂದು ಪುರಾಣದಲ್ಲಿ ಹೇಳಿದೆ.  ಕೂರ್ಮನು ಬ್ರಹ್ಮ, ನಾರದ ಮುಂತಾದವರಿಗೆ ಧರ್ಮದ ಬಗ್ಗೆ ಉಪದೇಶ ಮಾಡಿರುವದೇ ಕೂರ್ಮ ಪುರಾಣ ವೆಂದು ಪ್ರಸಿದ್ಧವಾಗಿದೆ.  ಅಮೃತ ಮಥನಕ್ಕೆ ಸಹಾಯ ಮಾಡಿದ ಕೂರ್ಮನಿಗೆ ಅನಂತಾನಂತ ನಮಸ್ಕಾರಗಳು.  ಸಕಲ ಸದ್ಭಕ್ತರಿಗೆ ಕೂರ್ಮನು ಕ್ಷೀರಸಾಗರದಲ್ಲಿ ಮುಳುಗುತ್ತಿದ್ದ ಮಂದರ ಪರ್ವತವನ್ನು ಎತ್ತಿ ಬೆನ್ನಮೇಲೆ ಇಟ್ಟುಕೊಂಡಂತೆ, ಭವಸಾಗರದಲ್ಲಿ ಮುಳುಗುತ್ತಿರುವ ಮಾನವರನ್ನು ಎತ್ತಿ ಮೋಕ್ಷಕ್ಕೆ ದಾರಿ ತೋರಿಸುವನು.ಆತನ ನಾಮಸ್ಮರಣೆ ಎಂಬ ಆಸರೆ ಎಂಬ ಕೂರ್ಮ ನಮ್ಮೆಲ್ಲರನ್ನೂ ಕಾಪಾಡಲಿ ಎಂದು.ಬೇಡುವೆ.
***

No comments:

Post a Comment