ನವಗ್ರಹ ಮಂತ್ರವನ್ನು ಅದರ ಭಾವಾರ್ಥ ಸಹಿತ ವಿವರಿಸಲಾಗಿದೆ ಸನ್ಮಾನ್ಯಆಸ್ತಿಕ ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಫಲ ಕಂಡುಕೊಳ್ಳಬಹುದಾಗಿದೆ
🌟🌷ನವಗ್ರಹ ಸ್ತೋತ್ರ🌷🌟
ನವಗ್ರಹ ಧ್ಯಾನ ಶ್ಲೋಕಮ್ ವ್ಯಾಸ ಮಹರ್ಷಿ ವಿರಚಿತಮ್ navagraha dhyan shlokam
🌷ಸೂರ್ಯ ಗ್ರಹ ಮಂತ್ರ
ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ
ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.
🌷ಚಂದ್ರ ಗ್ರಹ ಮಂತ್ರ
ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವಸಂಭವಮ್।
ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।
ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.
🌷ಕುಜ ಗ್ರಹ ಮಂತ್ರ
ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।
ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।
ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.
🌷ಬುಧ ಗ್ರಹ ಮಂತ್ರ
ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।
ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।
ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.
🌷ಗುರು ಗ್ರಹ ಮಂತ್ರ
ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।
ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।
ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.
🌷ಶುಕ್ರ ಗ್ರಹ ಮಂತ್ರ
ಓಂ ಹಿಮಕುಂದ ಮೃಣಾಲಾಭಂ
। ದೈತ್ಯಾನಾಮ್ ಪರಮಮ್ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।
ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.
🌷ಶನಿ ಗ್ರಹ ಮಂತ್ರ
ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।
ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।
ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.
🌷ರಾಹು ಗ್ರಹ ಮಂತ್ರ
ಓಂ ಅರ್ಧಕಾಯಂ ಮಹಾವೀರ್ಯಮ್ । ಚಂದ್ರಾದಿತ್ಯ ವಿಮರ್ದನಂ ।
ಸಿಂಹಿಕಾಗರ್ಭಸಂಭೂತಂ । ತಮ್ ರಾಹುಮ್ ಪ್ರಣಮಾಮ್ಯಹಮ್ ।।
ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.
🌷ಕೇತು ಗ್ರಹ ಮಂತ್ರ
ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।
ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।
ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು
🌷ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||
ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||
ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆ ಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವುವು🙏🏻
🌻🥀ಶ್ರೀ ಕೃಷ್ಣಾರ್ಪಣಮಸ್ತು🥀🌻
***
Navagraha Stotra Common
ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||
ಅರ್ಧಕಾಯಂ ಮಹಾವೀರ್ಯಂ ಚನ್ದ್ರ-ಭಾಸ್ಕರ-ಮರ್ದನಮ್ ।
ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ॥ 8॥
******
Shami Banni Saturn Shani Saturday
ನೀಲಾಂಜನ ಸಮಾಕಾರಂ ರವಿಪುತ್ರಂ ಮಹಾಗ್ರಹಮ್ ।
ಛಾಯಾ-ಮಾರ್ತಾಂಡ-ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 7॥
**********
Audumbur Atti Venus shukra Friday
ಶುದ್ಧ-ಸ್ಪಟಿಕ-ಸಂಕಾಶಂ ದೈತ್ಯಾನಾಂ ಪ್ರಣತಂ ಗುರುಮ್ ।
ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ॥ 6॥
*****
Ashwatha Arali Peepal Guru Brihaspati Jupiter Thursday
ದೇವಾನಾಂ ಚ ಋಷೀಣಾಂ ಚ ಗುರುಂ ಕನಕಸನ್ನಿಭಮ್ ।
ಬುದ್ಧಿಪೂರ್ಣಂ ತ್ರಿಲೋಕೇಶಂ ತಂ ಗುರುಂ ಪ್ರಣಮಾಮ್ಯಹಮ್ ॥ 5॥
*****
Apamarga Uttarani Budha Mercury Wednesday
****
Khadira Khaire Kuja Mars Mangal Tuesday Angaraka
ಧರಣೀ-ಗರ್ಭ-ಸಂಭೂತಂ ವಿದ್ಯುತ್ಪುಂಜಂ ಜಗತ್ಪತಿಮ್ ।
ಕುಮಾರಂ ಶಕ್ತಿ-ಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ॥ 3॥
*****
Palasha Muttuga Chandra Moon Monday
ಕ್ಷೀರೋದಾರ್ಣವ-ಸಂಭೂತಂ ಅತ್ರಿನೇತ್ರ-ಸಮುದ್ಭವಮ್ ।
ನಮಾಮಿ ಶಶಿನಂ ದೇವಂ ಶಂಭೋರ್ಮಕುಟ ಭೂಷಣಮ್ ॥ 2॥
*****
Shwetarka Ekke Soorya Sun Sunday
ಪದ್ಮ ಕಿಂಜಲ್ಕ- ಸಂಕಾಶಮ್ ಲೋಕಸಾಕ್ಷಿಂ ಜಗತ್ಗುರುಮ್ ।
ಸರ್ವರೋಗಹರಂ ದೇವಂ ಆದಿತ್ಯಂ ಪ್ರಣಮಾಮ್ಯಹಮ್ ॥ 1॥
*****
Navagraha gods
******
ಅಕ್ಷರಗಳಲ್ಲಿ ಗ್ರಹಗಳು
ಕ,ಖ,ಗ,ಘ,ಙ = ಕುಜಗ್ರಹ
ಚ,ಛ,ಜ,ಝ,ಞ,= ಶುಕ್ರಗ್ರಹ
ಟ,ಠ,ಡ,ಢ,ಣ = ಬುಧಗ್ರಹ
ತ,ಥ,ದ,ಧ,ನ = ಗುರುಗ್ರಹ .
ಪ,ಫ,ಬ,ಭ,ಮ = ಶನಿಗ್ರಹ .
ಯ,ರ,ಲ,ವ,ಶ,ಷ,ಸ,ಹ = ಚಂದ್ರಗ್ರಹ .
ಅ,ಆ,ಇ,ಈ,ಉ,ಊ,ಋ,ಎ,ಏಐ,ಒ,ಓ,ಔ,ಅಂ,ಆಃ = ರವಿಗ್ರಹ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||
Darbhe ketu
ಪಲಾಲ ಧೂಮಸಂಕಶಂ ತಾರಕ-ಗ್ರಹ-ಮಸ್ತಕಮ್ ।
ರೌದ್ರಂ ರೌದ್ರತರಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ॥ 9॥
******
Doorva garike rahu
ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ॥ 8॥
******
Shami Banni Saturn Shani Saturday
ಛಾಯಾ-ಮಾರ್ತಾಂಡ-ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 7॥
**********
Audumbur Atti Venus shukra Friday
ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ॥ 6॥
*****
Ashwatha Arali Peepal Guru Brihaspati Jupiter Thursday
ಬುದ್ಧಿಪೂರ್ಣಂ ತ್ರಿಲೋಕೇಶಂ ತಂ ಗುರುಂ ಪ್ರಣಮಾಮ್ಯಹಮ್ ॥ 5॥
*****
Apamarga Uttarani Budha Mercury Wednesday
ಪ್ರಿಯಂಗು ಕನಕಾ-ಭಾಸಂ ರೂಪೇಣಾಪ್ರತಿಮಂ ಶುಭಮ್ ।
ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ॥ 4 ॥****
Khadira Khaire Kuja Mars Mangal Tuesday Angaraka
ಕುಮಾರಂ ಶಕ್ತಿ-ಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ॥ 3॥
*****
Palasha Muttuga Chandra Moon Monday
ನಮಾಮಿ ಶಶಿನಂ ದೇವಂ ಶಂಭೋರ್ಮಕುಟ ಭೂಷಣಮ್ ॥ 2॥
*****
Shwetarka Ekke Soorya Sun Sunday
ಸರ್ವರೋಗಹರಂ ದೇವಂ ಆದಿತ್ಯಂ ಪ್ರಣಮಾಮ್ಯಹಮ್ ॥ 1॥
*****
Navagraha gods
******
ಅಕ್ಷರಗಳಲ್ಲಿ ಗ್ರಹಗಳು
ಕ,ಖ,ಗ,ಘ,ಙ = ಕುಜಗ್ರಹ
ಚ,ಛ,ಜ,ಝ,ಞ,= ಶುಕ್ರಗ್ರಹ
ಟ,ಠ,ಡ,ಢ,ಣ = ಬುಧಗ್ರಹ
ತ,ಥ,ದ,ಧ,ನ = ಗುರುಗ್ರಹ .
ಪ,ಫ,ಬ,ಭ,ಮ = ಶನಿಗ್ರಹ .
ಯ,ರ,ಲ,ವ,ಶ,ಷ,ಸ,ಹ = ಚಂದ್ರಗ್ರಹ .
ಅ,ಆ,ಇ,ಈ,ಉ,ಊ,ಋ,ಎ,ಏಐ,ಒ,ಓ,ಔ,ಅಂ,ಆಃ = ರವಿಗ್ರಹ
**********
ನವಗ್ರಹಗಳ ಆರಾಧನೆ ಅಂದರೆ ಕೇವಲ ಪೂಜಾ ಹೋಮ ಮಾಡುವದಲ್ಲ. ನಿಜವಾದ ಆರಾಧನಾ ಕ್ರಮ....
1. ತಂದೆಯನ್ನು ಆಧರಿಸಿ ಗೌರವಿಸಿದರೆ ರವಿಯು ತೃಪ್ತಿ ಪಡುವನು....
2. ತಾಯಿಯನ್ನು ಪೋಷಿಸಿ ಪ್ರೀತಿಯಿಂದ ನೋಡಿಕೊಂಡರೆ ಚಂದ್ರನು ಅನುಗ್ರಹಿಸುವನು....
3. ಆಪತ್ಕಾಲದಲ್ಲಿ ಇರುವ ಭ್ರಾತೃಗಳನ್ನು ಪೋಷಿಸಿ ಸಹಾಯ ಮಾಡಿದರೆ ಕುಜನಿಗೆ ಪ್ರೀತಿಯಾಗುವುದು...
4. ವಿದ್ಯಾವಂತರನ್ನು ಬುದ್ಧಿವಂತರನ್ನು ಗೌರವಿಸಿ ಸನ್ಮಾನಿಸಿದರೆ ಬುಧನು ಪ್ರೀತಿಯಾಗುವನು.....
5. ಮಕ್ಕಳಿಗೆ ಸಿಹಿ ಹಂಚಿ ಮಕ್ಕಳನ್ನು ಪ್ರೀತಿಸಿ ಪೋಷಿಸಿದರೆ ಗುರುವು ಪ್ರೀತಿಯಾಗುವನು .....
6. ಪರಸ್ತ್ರೀಯರನ್ನು ತಾಯಿಯಂತೆ ಕಂಡು ಶೋಷಣೆಗೆ ಒಳಗಾಗಿರುವ ಸ್ತ್ರೀಯರಿಗೆ ಸಹಾಯ ಮಾಡಿದರೆ ಶುಕ್ರನು ಪ್ರೀತಿಯಾಗುವನು....
7. ತೀರ್ಥಯಾತ್ರೆಗೆ ಗಂಗಾ ಸ್ನಾನಕ್ಕೆ ಹೋಗುವವರಿಗೆ, ವೃದ್ಧರಿಗೆ ಅನ್ನ ನೀರು ಬಟ್ಟೆ ಕೊಟ್ಟು ಕಾಪಾಡಿದರೆ ಶನಿ ಭಗವಂತನು ಪ್ರೀತಿಯಾಗುವರು....
8. ಹುತ್ತಗಳನ್ನು ಕಾಪಾಡಿದರೆ ರಾಹು ಭಗವಂತನು ಪ್ರೀತಿ ಕೊಳ್ಳುವರು....
9. ಸಾಧು ಸಂತರು ಯತಿವರ್ಯರನ್ನು ಜಂಗಮರನ್ನು ನಮಸ್ಕರಿಸಿ. ಸಹಾಯ ಮಾಡಿ ಪೋಷಿಸಿದರೆ, ಆಧರಿಸಿದರೆ ಕೇತು ಭಗವಾನರು ತೃಪ್ತಿ ಪಡುವರು.....
ಹೀಗೆ ಗ್ರಹಗಳಿಗೆ ಅಧಿಪತ್ಯ ಕಾರಕತ್ವವನ್ನು ಭಗವಂತನು ಕೊಟ್ಟಿರುವನು. ಯಾವುದೇ ಕಾಲಕ್ಕೂ ಇದು ತಪ್ಪುವುದಿಲ್ಲ....
ಕಾಲಚಕ್ರವು ಹೀಗೆ ಉರುಳುತ್ತದೆ....ನಾವು ಕಾಲಕ್ಕೆ ಅಧೀನರು....ಕಾಲವೇ ಎಲ್ಲರಿಗೂ ಪಾಠ ಕಲಿಸುತ್ತದೆ.... .
ಕಾಲವೇ ಎಲ್ಲರಿಗೂ ಉತ್ತರಿಸುತ್ತದೆ.... ಒಂದು ದಿನ ನಾವೆಲ್ಲರೂ ಕಾಲಗರ್ಭದಲ್ಲಿ ಸೇರಿ ಹೋಗುತ್ತೇವೆ.... ಕಾಲ ನಮಗಿಂತ ವೇಗ ಉಳ್ಳದ್ದು.... 🙏🙏
************
No comments:
Post a Comment