SEARCH HERE

Thursday, 8 April 2021

ಮಧುವಿದ್ಯಾ madhu vidya xxxx


ಸೂರ್ಯನಿಗೆ ಸಹಸ್ರ ಕಿರಣಗಳು. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಮತ್ತು ಮಧ್ಯಭಾಗ ಎಂದು ಐದು ಭಾಗಗಳು. ಒಂದೊಂದು ಕಡೆ 200 ಕಿರಣೋಪಾದೆಯಲ್ಲಿ ಸಹಸ್ರ (1000} ಕಿರಣಗಳಿವೆ. 1) ರಕ್ತಾ೦ಶಾವುಳ್ಳಂತ ಕಾಂತಿ ಕಿರಣಗಳಿಂದ ಪ್ರಾಚೀದೇಶದಲ್ಲಿ 200 ಕಿರಣಗಲ್ಲಿ ವಾಸುದೇವ ನಾಮಕ ಪರಮಾತ್ಮ ಮಧುನಾಮಕ ನಾಗಿದ್ದಾನೆ. ಪರಮಾತ್ಮನು ಅಗ್ನಿಯೋಪಾದೆಯಲ್ಲಿದ್ದು ಅಗ್ನಿ ಮೊದಲಾದ ಅಷ್ಟವಸುಗಳಿಂದ ಋಗ್ವೇದ ಪ್ರತಿಪಾದ್ಯನಾಗಿ, ಆರಾಧನೆಗೊಳ್ಳುತ್ತಾನೆ. 2) ದಕ್ಷಿಣದಿಕ್ಕಿನಲ್ಲಿ ಗೌರಾಂಶ ಉಳ್ಳಂತ 200 ಕಿರಣವುಳ್ಳವನಾಗಿ ಸಂಕರ್ಷಣನಾಮಕ ಪರಮಾತ್ಮನು ಮಧುನಾಮಕನಾಗಿ ಶುಕ್ಲವರ್ಣವುಳ್ಳವನಾಗಿ ಯಜುರ್ವೇದದಿಂದ ಪ್ರತಿಪಾದ್ಯನಾಗಿ ಮಧುವಿದ್ಯಾವುಳ್ಳಂತ ವಾಯುರುದ್ರಾದಿ ದೇವತೆಗಳಿಂದ ಪ್ರತಿಪಾದ್ಯನಾಗಿದ್ದಾನೆ. 3) ಪ್ರತೀಚಿ ದೇಶದಲ್ಲಿ ಶ್ಯಾಮ ರಷ್ಮಿಗಳಿಂದ 200 ಕಿರಣಗಳಲ್ಲಿ ಪ್ರದ್ಯುಮ್ನನಾಮಕ ಪರಮಾತ್ಮ ಶ್ಯಾಮಲವರ್ಣ ವುಳ್ಳವನಾಗಿ ಸಾಮವೇದಾದಿಮಾನಿಗಳಾದಂತ ಸೂರ್ಯದೇವರಿಂದ ಆರಾಧನೆ ಮಾಡಿಸಿಕೊಳ್ಳುತ್ತಾನೆ. 4) ಉತ್ತರ ದಿಕ್ಕಿಗೆ ದ್ವಿಶತ ನೀಲಾಂಶ ರಶ್ಮಿಗಳಲ್ಲಿ ಅನಿರುದ್ಧ ನಾಮಕ ಪರಮಾತ್ಮ ನೀಲವರ್ಣವುಳ್ಳವನಾಗಿ ಮಧುವೆಂಬ ಹೆಸರಿಂದ, ಅಥರ್ವಣ, ಇತಿಹಾಸ, ಪುರಾಣಗಳಿಂದ ಪ್ರತಿಪಾದ್ಯನಾಗಿ, ಚಂದ್ರ ಮೊದಲಾದ ಮರುತುಗಳಿಂದ ಉಪಾಸ್ಯನಾಗಿ ಜಗತ್ತನ್ನು ಪ್ರಕಾಶಿಸುತ್ತಾನೆ. 5) ಊರ್ಧ್ವ ಭಾಗದಲ್ಲಿ ಪೀತಾಂಶವಾದಂಥ 200 ಕಿರಣಗಳಲ್ಲಿ ನಾರಾಯಣ ನಾಮಕ ಪರಮಾತ್ಮ ಮಧುನಾಮಕನಾಗಿ ಉತ್ಕೃಷ್ಟ ಸೂರ್ಯಕಾಂತಿಯಿಂದ ಯುಕ್ತನಾಗಿ ಕೇವಲ ವೇದಾಭಿಮಾನಿಗಳಾದಂಥ ಬ್ರಹ್ಮ, ಸರಸ್ವತಿ, ಶೇಷ, ಗರುಡ, ವಾರುಣಿ, ಸೌಪರ್ಣ್ಯಾದಿಗಳಿಂದ ಆರಾಧಿತನಾಗಿದ್ದಾನೆ. ಪಂಚಮೂರ್ತಿಗಳು ಸೂರ್ಯನಲ್ಲಿ ಈ ವಿಧದಿಂದ ಇದ್ದ ಪ್ರಯುಕ್ತ ಸೂರ್ಯನಿಗಿಂತ ಸೋತ್ತಮರಿಂದ ಪೂಜ್ಯನೂಪಾದೆಯಲ್ಲಿ ಕಾಣಿಸುತ್ತಾನೆ. ಹನುಮಂತ ದೇವರು ಓದಿಕೊಂಡು ದ್ರೌಪದಿಗೆ, ಕೀಚಕಾದಿ ಮೊದಲಾದವರು ಉಪದ್ರ ಕೊಡುವಾಗ ಸೂರ್ಯನ ಪ್ರಾರ್ಥನೆ ಮಾಡಿದಳು ಎಂಬುವಹಾಗೆ ಕಾಣಿಸುತ್ತದೆ. ಹಾಗೆ ಪರಮಾತ್ಮನು ವಿಶೇಷಾಕಾರದಿಂದ ಇದ್ದ ಪ್ರಯುಕ್ತ, ಸೂರ್ಯನಿಗಿಂತ ಉತ್ತಮರು ಆರಾಧಿಸಿದರೆಂದು ತಿಳಿಯಬೇಕು.
(ಇದು ಮಧುವಿಧ್ಯಾ ಉಪಾಸನೆ ಇದನ್ನು ದೇವತೆಗಳು ಮಾಡುತ್ತಾರೆ ಮನುಜರಿಗೆ ಯೋಗ್ಯವಲ್ಲ ಆದರೆ ಇದರ ಜ್ಞಾನ ಮಾತ್ರ ಇರಬೇಕು).
*****


No comments:

Post a Comment